Modi in Karnataka: ಪ್ರಧಾನಿ ಮೋದಿ ತೆರಳುವಾಗ ಚೆಂಬು ಪ್ರದರ್ಶನ; ನಲಪಾಡ್‌ ಸೇರಿ ಹಲವರು ವಶಕ್ಕೆ - Vistara News

ಪ್ರಮುಖ ಸುದ್ದಿ

Modi in Karnataka: ಪ್ರಧಾನಿ ಮೋದಿ ತೆರಳುವಾಗ ಚೆಂಬು ಪ್ರದರ್ಶನ; ನಲಪಾಡ್‌ ಸೇರಿ ಹಲವರು ವಶಕ್ಕೆ

Modi in Karnataka: ಬೆಂಗಳೂರಿನ ಅರಮನೆ ಮೈದಾನದಿಂದ ಎಚ್‌ಕ್ಯುಟಿಸಿ ಹೆಲಿಪ್ಯಾಡ್‌ಗೆ ತೆರಳಲು ಮೋದಿ ಅವರು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ರಾಜ್ಯ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್‌ ಮೊಹಮ್ಮದ್‌ ನಲಪಾಡ್‌ ಹಾಗೂ ಹಲವು ಕಾಂಗ್ರೆಸ್‌ ಕಾರ್ಯಕರ್ತರು ರಸ್ತೆಗೆ ನುಗ್ಗಿ ಚೆಂಬು ಪ್ರದರ್ಶನ ಮಾಡಿದ್ದಾರೆ. ಹೀಗಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

VISTARANEWS.COM


on

Modi in Karnataka
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು (Modi in Karnataka) ಬಿಜೆಪಿ ವಿಜಯ ಸಂಕಲ್ಪ ಸಮಾವೇಶ ಮುಗಿಸಿ ತೆರಳುವಾಗ ಭದ್ರತಾ ಲೋಪ ಉಂಟಾಗಿದೆ. ಅರಮನೆ ಮೈದಾನದಿಂದ ಎಚ್‌ಕ್ಯುಟಿಸಿ ಹೆಲಿಪ್ಯಾಡ್‌ಗೆ ತೆರಳುವಾಗ ಮೇಕ್ರಿ ಸರ್ಕಲ್‌ನಲ್ಲಿ ರಾಜ್ಯ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ ಹಾಗೂ ಬೆಂಬಲಿಗರು ರಸ್ತೆಗೆ ನುಗ್ಗಿ ಪ್ರಧಾನಿ ಮೋದಿ ಅವರಿಗೆ ಚೆಂಬು ಪ್ರದರ್ಶಿಸಿದ್ದಾರೆ. ಹೀಗಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶನಿವಾರ ಸಂಜೆ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡ ನಂತರ ಎಚ್‌ಕ್ಯುಟಿಸಿ ಹೆಲಿಪ್ಯಾಡ್‌ಗೆ ತೆರಳಲು ಮೋದಿ ಅವರು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ರಾಜ್ಯ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್‌ ಮೊಹಮ್ಮದ್‌ ನಲಪಾಡ್‌ ಹಾಗೂ ಹಲವು ಕಾಂಗ್ರೆಸ್‌ ಕಾರ್ಯಕರ್ತರು ರಸ್ತೆಗೆ ನುಗ್ಗಿ ಚೆಂಬು ಪ್ರದರ್ಶನ ಮಾಡಿದ್ದಾರೆ. ತಕ್ಷಣ ಅವರನ್ನು ಪೊಲೀಸರು ವಶಕ್ಕೆ ಪಡೆದು ಕಾರಿನಲ್ಲಿ ಕರೆದೊಯ್ದರು.

ಇದನ್ನೂ ಓದಿ | Trust Of The Nation 2024 : ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುವುದು ಖಚಿತ; ಡೈಲಿಹಂಟ್ ಸಮೀಕ್ಷೆ

ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನಲಪಾಡ್ ಮೇಲೆ ಕೇಸ್ ದಾಖಲಿಸಲು ತಯಾರಿ ನಡೆಸಲಾಗಿದೆ. ಹೀಗಾಗಿ ಅವರನ್ನು ಸದಾಶಿವನಗರ ಠಾಣೆಗೆ ಕರೆದೊಯ್ಯಲಾಗಿದೆ.

ಇನ್ನು ಎಚ್‌ಕ್ಯುಟಿಸಿ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಮುಖಾಂತರ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ ಮೋದಿ ಅವರು, ಅಲ್ಲಿಂದ ದೆಹಲಿಗೆ ಪ್ರಯಾಣ ಬೆಳಸಿದರು.

“ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೆಂಬು” ಎಂದು ಕಾಂಗ್ರೆಸ್‌ ಜಾಹೀರಾತು ನೀಡಿತ್ತು, ಇದಕ್ಕೆ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದರು. ಬಿಜೆಪಿ ಎಂದರೆ ಕನ್ನಡಿಗರಿಗೆ ಅನ್ಯಾಯ, ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯವರಿಗೆ ವಾಪಸ್ ನೀಡೋಣ ಚೆಂಬು ಎಂದು‌ ಕಾಂಗ್ರೆಸ್‌ ನಾಯಕರು ಟ್ವೀಟ್‌ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ತಮಿಳುನಾಡಿಗೆ ನೀರು ಬಿಟ್ಟು ಕಾವೇರಿಯ ಮಡಿಲು ಖಾಲಿ ಮಾಡಿ, ನೀವು ಜನರಿಗೆ ಚೆಂಬು ಕೊಟ್ಟಿದ್ದೀರಾ ಎಂದು ತಿರುಗೇಟು ನೀಡಿದ್ದರು. ಅಲ್ಲದೇ ಶನಿವಾರ ಚಿಕ್ಕಬಳ್ಳಾಪುರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ. ಚೆಂಬು ಜಾಹೀರಾತು ನೀಡಿರುವ ಕಾಂಗ್ರೆಸ್‌, 2004ರಿಂದ 2014ರವರೆಗೆ ಹಲವು ಹಗರಣ ನಡೆಸಿ, ಜನರ ಕೈಗೆ ಖಾಲಿ ಚೆಂಬು ನೀಡಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.

ಟ್ಯಾಕ್ಸ್ ಸಿಟಿ ಬೆಂಗಳೂರನ್ನು ಟ್ಯಾಂಕರ್ ಸಿಟಿ ಮಾಡಿದ ಸರ್ಕಾರ, ಹೆಣ್ಣು ಮಕ್ಕಳ ಮೇಲೂ ಹಲ್ಲೆ: ಮೋದಿ ವಾಗ್ದಾಳಿ

Modi in Karnataka Govt turns tax city Bengaluru into tanker city and attacks girls too PM Narendra Modi

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ (Karnataka Congress Government) ಅಧಿಕಾರಕ್ಕೆ ಬಂದು ಕೆಲವೇ ತಿಂಗಳಲ್ಲಿ ಬೆಂಗಳೂರಿನ ಪರಿಸ್ಥಿತಿಯನ್ನು ಹಾಳು ಮಾಡಿದೆ. ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಆಕ್ರೋಶವನ್ನು ಹೊರಹಾಕಿದರು. ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡ ಮೋದಿ (Modi in Karnataka) ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲ ಕಡೆ ಬಜೆಟ್ ಕಡಿತ ಮಾಡಲಾಗುತ್ತಿದೆ. ಅಭಿವೃದ್ಧಿ ಗೌಣವಾಗಿದೆ. ಎಲ್ಲೆಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಜನರ ಸಮಸ್ಯೆ ಬಗ್ಗೆ ಈ ಸರ್ಕಾರ ಗಮನ ಕೊಡುತ್ತಿಲ್ಲ. ಕರ್ನಾಟಕದಲ್ಲಿ ಹೆಣ್ಣು ಮಕ್ಕಳ ಮೇಲೆ ಹಲ್ಲೆ ಆಗುತ್ತಿದೆ. ಭಜನೆ ಮಾಡಿದರೂ ಹಲ್ಲೆ ಮಾಡಲಾಗುತ್ತಿದೆ. ಬೀದಿಗಳಲ್ಲಿ ಬಾಂಬ್‌ ಸ್ಫೋಟಗೊಳ್ಳುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ನಾವು ಅಧಿಕಾರಕ್ಕೆ ಬರುವಾಗ ಭಾರತವು ಆರ್ಥಿಕವಾಗಿ ಭಾರಿ ಹಿಂದಿತ್ತು. ಈಗ ಜಾಗತಿಕವಾಗಿ ಆರ್ಥಿಕ ಪ್ರಗತಿಯಲ್ಲಿ 5ನೇ ಸ್ಥಾನದಲ್ಲಿದ್ದೇವೆ. ಇದಕ್ಕೆ ಕಾರಣವಾಗಿದ್ದು, ನಿಮ್ಮ ಮತ. ಕಳೆದ 10 ವರ್ಷದಲ್ಲಿ ಭಾರತವು ಸಾಕಷ್ಟು ಸುಧಾರಣೆಯನ್ನು ಕಂಡಿದ್ದಲ್ಲದೆ, ಆರ್ಥಿಕ ಕ್ರಾಂತಿಯಾಗಿದೆ. ಈಗ ಭಾರತವು ಹಿಂಬಾಲಿಸುವ ದೇಶವಾಗಿ ಉಳಿದಿಲ್ಲ. 2014 ಹಾಗೂ 2019ರಲ್ಲಿ ಪೂರ್ಣ ಬಹುಮತಗಳೊಂದಿಗೆ ಭರ್ಜರಿ ಗೆಲುವನ್ನು ನಮಗೆ ಕೊಟ್ಟಿದ್ದೀರಿ. ಈ ಬಾರಿಯೂ ಅಂಥದ್ದೇ ಗೆಲುವನ್ನು ನೀವು ಕೊಡುತ್ತೀರಿ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನೀವೀಗ ಎನ್‌ಡಿಎ ಹಾಗೂ ಇಂಡಿಯಾ ಅಲೆಯನ್ಸ್‌ ಪ್ರಚಾರಗಳನ್ನು ನೋಡಿದ್ದೀರಿ. ಆದರೆ, ಇಂಡಿ ಅಲೆಯನ್ಸ್‌ನವರು ಸುಳ್ಳು ಆರೋಪವನ್ನು ಮಾಡುತ್ತಲೇ ಬರುತ್ತಿದ್ದಾರೆ. ಆದರೆ, ನಿಮ್ಮ ಮೋದಿ ಉದ್ದೇಶ ಏನು? ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದೇ ನನ್ನ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಡಿಮೆ ವೆಚ್ಚದಲ್ಲಿ ಸಿಗುತ್ತಿದೆ 1 GB ಡೇಟಾ

ನಾವು ನಮ್ಮ ಕೆಲಸ ಹಾಗೂ ಟ್ರ್ಯಾಕ್‌ ರೆಕಾರ್ಡ್‌ ಇಟ್ಟುಕೊಂಡು ಮತ ಕೇಳುತ್ತಿದ್ದೇವೆ. ನಮ್ಮ ಸರ್ಕಾರ ರೇರಾ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ಇದರಿಂದ ಸಾಮಾನ್ಯರಿಗೆ ಆಗುತ್ತಿದ್ದ ಅನ್ಯಾಯವನ್ನು ತಡೆದಿದ್ದೇವೆ. 2014ಕ್ಕಿಂತ ಮೊದಲು ನಿಮಗೆ 2.5 ಲಕ್ಷ ರೂಪಾಯಿ ಇದ್ದರೂ ನೀವು ತೆರಿಗೆ ಕಟ್ಟಬೇಕಿತ್ತು. ಆದರೆ, ಇಂದು ನೀವು 7 ಲಕ್ಷದ ವರೆಗೆ ಆದಾಯ ಹೊಂದಿದರೂ ಒಂದು ರೂಪಾಯಿ ಟ್ಯಾಕ್ಸ್‌ ಕಟ್ಟುತ್ತಿಲ್ಲ. ಇನ್ನು ಜಿಎಸ್‌ಟಿ ಜಾರಿಯಿಂದ ಪರೋಕ್ಷ ತೆರಿಗೆ ಕಟ್ಟುವುದು ತಪ್ಪಿದೆ. ಇದೆಲ್ಲವೂ ಸಾಧ್ಯವಾಗಿದ್ದು ನಮ್ಮ ಸರ್ಕಾರದಿಂದ ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

ಪ್ರಮುಖ ಸುದ್ದಿ

ವಿಜಯ್‌ ಸಿಎಂ ಆಗಿದ್ದಕ್ಕೆ ನನಗೆ ಅಸೂಯೆ ಇಲ್ಲ – ರಜನೀಕಾಂತ್‌

VISTARANEWS.COM


on

ಚೆನ್ನೈ: ತಮಿಳು ನಟ ವಿಜಯ್‌ ಮುಖ್ಯಮಂತ್ರಿ ಆಗಿರುವುದಕ್ಕೆ ನನಗೆ ಯಾವುದೇ ಅಸೂಯೆ ಇಲ್ಲ ಎಂದು ತಮಿಳು ನಟ, ಸೂಪರ್‌ ಸ್ಟಾರ್‌ ರಜನೀಕಾಂತ್‌ ಸ್ಪಷ್ಟಪಡಿಸಿದ್ದಾರೆ.

ಚೆನ್ನೈನಲ್ಲಿ ಮಾತನಾಡಿದ ಅವರು, ಪ್ರಬಲ ಮೈತ್ರಿಕೂಟಗಳನ್ನು ಸೋಲಿಸಿ ವಿಜಯ್‌ ಸಿಎಂ ಆಗಿದ್ದಾರೆ. ಇದರಿಂದ ನನಗೆ ಯಾವುದೇ ಅಸೂಯೆ ಇಲ್ಲ. ನನಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.

ನಾನು ರಾಜಕೀಯ ಪ್ರವೇಶಿಸಿದ್ದರೆ ಶೇ.100 ರಷ್ಟು ಯಶಸ್ಸು ಸಾಧಿಸುತ್ತಿದ್ದೆ. ಆದರೆ ನಾನು ರಾಜಕೀಯದಿಂದ ದೂರ ಸರಿದು ಬಹಳ ದಿನಗಳಾಗಿವೆ ಎಂದು ಹೇಳಿದ್ದಾರೆ.

ವಿಜಯ್‌ ಮತ್ತು ನನ್ನ ನಡುವೆ ಒಂದು ಜನರೇಶನ್‌ ಗ್ಯಾಪ್‌ ಇದೆ. ನಮ್ಮಿಬ್ಬರ ನಡುವೆ ಸುಮಾರು 25 ವರ್ಷದ ಅಂತರವಿದೆ. ಅವರ ಬಗ್ಗೆಯಾಗಲಿ, ಅವರ ಸಿಎಂ ಆಗಿರುವುದಕ್ಕಾಗಲಿ ನನಗೆ ಯಾವುದೇ ಅಸೂಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. ವಿಜಯ್‌ ಸಿಎಂ ಆದ ತಕ್ಷಣವೇ ನಾನು ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ ಎಂದು ರಜನೀಕಾಂತ್‌ ತಿಳಿಸಿದರು.

ಚುನಾವಣೆ ಬಳಿಕ ತಮ್ಮ ವಿರುದ್ಧ ಕೇಳಿಬರುತ್ತಿರುವ ಟೀಕೆಗಳ ಕುರಿತೂ ರಜನೀಕಾಂತ್‌ ಪ್ರತಿಕ್ರಿಯೆ ನೀಡಿದರು. ಚುನಾವಣೆ ನಂತರ ನನ್ನ ವಿರುದ್ಧ ಅನೇಕ ಟೀಕೆಗಳು ಬರುತ್ತಿವೆ. ನಾನು ಅವಕ್ಕೆ ಪ್ರತಿಕ್ರಿಯಿಸದಿದ್ದರೆ ಅವು ಸತ್ಯ ಎಂದು ಭಾವಿಸುವ ಸಾಧ್ಯತೆ ಇದೆ ಎಂದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರನ್ನು ಭೇಟಿ ಮಾಡಿದ ವಿಚಾರಕ್ಕೂ ಸ್ಪಷ್ಟನೆ ನೀಡಿದ ರಜನೀಕಾಂತ್‌, ಸ್ಟಾಲಿನ್‌ ಮತ್ತು ನನ್ನ ಸ್ನೇಹ ರಾಜಕೀಯವನ್ನೂ ಮೀರಿದ್ದು, ನಮ್ಮ ಸ್ನೇಹಕ್ಕೆ ಸುಮಾರು 35 ವರ್ಷಗಳ ಇತಿಹಾಸ ಇದೆ ಎಂದು ಹೇಳಿದರು.

“ಕೊಳತ್ತೂರಿನಲ್ಲಿ ಸ್ಟಾಲಿನ್‌ ಸೋತಿದ್ದಕ್ಕೆ ನನಗೆ ಬೇಸರವಾಯಿತು. ಸ್ನೇಹಿತನಾಗಿ ಅವರನ್ನು ಭೇಟಿಯಾಗಿ ಸಮಾಧಾನ ಮಾಡಿದ್ದೇನೆ. ಆದರೆ ಆ ವಿಚಾರದಲ್ಲೂ ಕೆಲವರು ನನ್ನನ್ನು ಟೀಕಿಸುತ್ತಿದ್ದಾರೆ, ಅದಕ್ಕೆ ಈ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ರಜನೀಕಾಂತ್‌ ಹೇಳಿದ್ದಾರೆ.

Continue Reading

Latest

ಅಬುಧಾಬಿಯಲ್ಲಿ ಮೋದಿ: ಯುಎಇ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ

VISTARANEWS.COM


on

ಅಬುಧಾಬಿ: ಆರು ದಿನಗಳ ವಿದೇಶ ಪ್ರವಾಸದಲ್ಲಿ ಪ್ರಧಾನಿ ಮೊದಲು ಯುಎಇಗೆ ಭೇಟಿ ನೀಡಿದ್ದಾರೆ. ಯುರೋಪ್ ಭೇಟಿಗೂ ಮುನ್ನ ಅಬುಧಾಬಿಗೆ ಭೇಟಿ ನೀಡಿದ್ದು, ಭಾರತ-ಯುಎಇ ನಡುವಿನ ನಿಕಟ ಸಂಬಂಧಕ್ಕೆ ಸಾಕ್ಷಿ ಎನ್ನಲಾಗುತ್ತಿದೆ.
ಅಬುಧಾಬಿಯಲ್ಲಿ ಪ್ರಧಾನಿ ಮೋದಿ ಮತ್ತು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ರಕ್ಷಣೆ, ವ್ಯಾಪಾರ, ಹೂಡಿಕೆ, ಇಂಧನ ಭದ್ರತೆ ಕುರಿತು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮೋದಿ ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸಲು ಎಲ್ಲಾ ಅಗತ್ಯ ನೆರವು ನೀಡುವ ಭರವಸೆ ನೀಡಿದರು. ಇದೇ ವೇಳೆ ಅವರು, ಯುಎಇ ಮೇಲಿನ ಇರಾನ್ ದಾಳಿಯನ್ನು ಖಂಡಿಸಿದರು.
ಪ್ರಧಾನಿ ಮೋದಿಯವರ ಭೇಟಿಯನ್ನು ಯುಎಇ ಮುಕ್ತಕಂಠದಿಂದ ಹೊಗಳಿದೆ. ‘ಭಾರತದ ಪ್ರಧಾನಿ ನಮ್ಮ ನಿಜವಾದ ಆಸ್ತಿ’ ಎಂದು ಯುಎಇ ಅಂತಾರಾಷ್ಟ್ರೀಯ ಸಹಕಾರ ಸಚಿವೆ ರೀಮ್ ಅಲ್ ಹಶಿಮಿ ಬಣ್ಣಿಸಿದ್ದಾರೆ.
ಪ್ರಧಾನಿ ಮೋದಿ ಯುಎಇಗೆ ಆಗಮಿಸುತ್ತಿದ್ದಂತೆಯೇ ಭವ್ಯ ಸ್ವಾಗತ ನೀಡಲಾಯಿತು. ಮೋದಿ ಅವರಿದ್ದ ವಿಶೇಷ ವಿಮಾನಕ್ಕೆ ಗಗನಮಾರ್ಗದಲ್ಲೇ ಯುಎಇಯ ಎಫ್‌-16 ಯುದ್ಧ ವಿಮಾನಗಳು ಗೌರವ ರಕ್ಷೆ ನೀಡಿದ್ದವು.
ಯುಎಇ ಬಳಿಕ ಮೋದಿ ನೆದರ್‌ಲ್ಯಾಂಡ್‌, ಸ್ವೀಡನ್, ನಾರ್ವೆ ಮತ್ತು ಇಟಲಿ ದೇಶಗಳಿಗೆ ತೆರಳಲಿದ್ದಾರೆ.

Continue Reading

Latest

ಪಶ್ಚಿಮ ಬಂಗಾಳದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿ; ನಿಯಮ ಉಲ್ಲಂಘಿಸಿದ್ರೆ ಜೈಲು ಶಿಕ್ಷೆ, ದಂಡ

VISTARANEWS.COM


on

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ದೀದಿ ಭದ್ರಕೋಟೆಯನ್ನು ಧೂಳೀಪಟಗೈದು ಅಧಿಕಾರಕ್ಕೇರಿದ ಸುವೇಂದು ಅಧಿಕಾರಿ ಮುಖ್ಯಮಂತ್ರಿ ಪಟ್ಟಕ್ಕೇರುತ್ತಿದ್ದಂತೆ ಮಹತ್ವದ ಆದೇಶ ಹೊರಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಆರೋಗ್ಯವಂತ ಜಾನುವಾರುಗಳ ಹತ್ಯೆ ಮಾಡಿದರೆ ಶಿಕ್ಷೆ ನೀಡಲಾಗುವುದು ಎಂದು ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಪಶುವೈದ್ಯರು ನೀಡುವ ಫಿಟ್‌ನೆಸ್‌‍ ಪ್ರಮಾಣಪತ್ರವಿಲ್ಲದೆ ಹಸು, ಹೋರಿ, ಎಮ್ಮೆ ಮತ್ತು ಕರು ಸೇರಿ ಯಾವುದೇ ಪ್ರಾಣಿಯನ್ನು ಹತ್ಯೆ ಮಾಡುವಂತಿಲ್ಲ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರವು ಅಧಿಸೂಚನೆ ಹೊರಡಿಸಿದೆ.
ಹಸು 14 ವರ್ಷ ಮೇಲ್ಪಟ್ಟಿದ್ದು, ಕೆಲಸ ಮಾಡಲು ಅಥವಾ ಸಂತಾನೋತ್ಪತ್ತಿ ಮಾಡಲು ಯೋಗ್ಯವಿಲ್ಲದಿದ್ದರೆ ಅಥವಾ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿದ್ದು, ಶಾಶ್ವತವಾಗಿ ಗುಣಪಡಿಸಲು ಸಾಧ್ಯವಾಗದಿದ್ದರೆ ಮಾತ್ರ ಸ್ಥಳೀಯ ನಾಗರಿಕ ಅಧಿಕಾರಿಗಳು ಅಥವಾ ಪಶುವೈದ್ಯರು ಜಂಟಿಯಾಗಿ ಪ್ರಮಾಣ ಪತ್ರವನ್ನು ನೀಡಬಹುದಾಗಿದೆ.
ನಿಯಮಗಳನ್ನು ಜಾರಿಗೊಳಿಸಲು ಅಧಿಕಾರಿಗಳು ನಡೆಸುವ ಯಾವುದೇ ಪರಿಶೀಲನೆಯನ್ನು ವ್ಯಕ್ತಿಗಳು ತಡೆಯುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಯಾವುದೇ ರೀತಿಯ ಕಾನೂನು ಉಲ್ಲಂಘನೆಗಳಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 1 ಸಾವಿರ ರೂಪಾಯಿವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

Continue Reading

ಪ್ರಮುಖ ಸುದ್ದಿ

ಕರ್ನಾಟಕ ಸೇರಿ 16 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌

VISTARANEWS.COM


on


ಕೇಂದ್ರ ಚುನಾವಣಾ ಆಯೋಗ 3 ನೇ ಹಂತದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ( ಎಸ್‌ಐಆರ್‌) ಘೋಷಣೆ ಮಾಡಿದೆ. ಇದರಲ್ಲಿ ಕರ್ನಾಟಕ ಸೇರಿದಂತೆ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಸೇರಿದ್ದು, ಮೇ 30ರಿಂದ ಎಸ್‌ಐಆರ್‌ ನಡೆಯಲಿದೆ.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ದೆಹಲಿ, ಹರಿಯಾಣ, ಪಂಜಾಬ್‌, ಚಂಡೀಗಢ, ಒಡಿಶಾ, ಮಿಜೋರಾಂ, ಸಿಕ್ಕಿಂ, ಮಣಿಪುರ, ಉತ್ತರಾಖಂಡ, ಅರುಣಾಚಲ ಪ್ರದೇಶ, ಮೇಘಾಲಯ, ಜಾರ್ಜಂಡ್‌, ನಾಗಾಲ್ಯಾಂಡ್‌, ತ್ರಿಪುರ, ದಾದರ್‌ ಮತ್ತು ನಗರ ಹವೇಲಿ, ದಮನ್‌ ಮತ್ತು ದಿಯುಗಳಲ್ಲಿ 3 ನೇ ಹಂತದಲ್ಲಿ ಎಸ್‌ಐಆರ್‌ ನಡೆಯಲಿದೆ.
3ನೇ ಹಂತದ ಎಸ್‌ಐಆರ್‌ನಲ್ಲಿ 3.94 ಲಕ್ಷಕ್ಕೂ ಅಧಿಕ ಬೂತ್‌ ಮಟ್ಟದ ಅಧಿಕಾರಿಗಳು 36.73ಕೋಟಿ ಮತದಾರರ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ.
ಈಗಾಗಲೇ ದೇಶದ 10 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌ ನಡೆಸಲಾಗಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ರಾಜಸ್ಥಾನ, ಛತ್ತೀಸಗಢ, ಕೇರಳಂ, ಪುದುಚೇರಿ, ಅಂಡಮಾನ್‌ ಮತ್ತು ನಿಕೋಬಾರ್‌, ಲಕ್ಷದ್ವೀಪ, ಗುಜರಾತ್‌, ಮಧ್ಯಪ್ರದೇಶ, ಗೋವಾ ಮತ್ತು ಬಿಹಾರದಲ್ಲಿ ಈಗಾಗಲೇ ಎಸ್‌ಐಆರ್‌ ಕಾರ್ಯ ಮುಗಿದಿದೆ.
ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಎಸ್‌ಐಆರ್‌ ಬಾಕಿ ಇದ್ದು, ಸ್ಥಳೀಯ ಹವಾಮಾನ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿ ಘೋಷಿಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

Continue Reading
Advertisement
ಪ್ರಮುಖ ಸುದ್ದಿ13 hours ago

ವಿಜಯ್‌ ಸಿಎಂ ಆಗಿದ್ದಕ್ಕೆ ನನಗೆ ಅಸೂಯೆ ಇಲ್ಲ – ರಜನೀಕಾಂತ್‌

Latest14 hours ago

ಕೇರಳಂ ಮುಖ್ಯಮಂತ್ರಿಯಾಗಿ ನಾಳೆ ವಿ.ಡಿ. ಸತೀಶನ್ ಪ್ರಮಾಣವಚನ

Latest2 days ago

ಅಬುಧಾಬಿಯಲ್ಲಿ ಮೋದಿ: ಯುಎಇ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ

Latest3 days ago

ವಾಹನ ಸವಾರರಿಗೆ ಶಾಕ್! ಪೆಟ್ರೋಲ್, ಡೀಸೆಲ್ ತಲಾ ₹3 ಏರಿಕೆ.

Latest3 days ago

ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಶಾಕ್‌, ಜಾಮೀನು ಅರ್ಜಿ ವಜಾ

Latest3 days ago

ಚೀನಾದಲ್ಲಿ ಟ್ರಂಪ್‌, ಶಿ ಜಿನ್‌‌ಪಿಂಗ್‌ ಹೈವೋಲ್ಟೇಜ್‌ ಮೀಟಿಂಗ್‌‌

Latest3 days ago

ಪಶ್ಚಿಮ ಬಂಗಾಳದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿ; ನಿಯಮ ಉಲ್ಲಂಘಿಸಿದ್ರೆ ಜೈಲು ಶಿಕ್ಷೆ, ದಂಡ

ಪ್ರಮುಖ ಸುದ್ದಿ3 days ago

ಕರ್ನಾಟಕ ಸೇರಿ 16 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌

Latest3 days ago

ಹಿಜಾಬ್‌ ಓಕೆ, ಕೇಸರಿ ಶಾಲುಗೆ ನೋ: ಪರ- ವಿರೋಧ ಚರ್ಚೆ ಶುರು

Latest3 days ago

ವಿ.ಡಿ. ಸತೀಶನ್‌ ಸಿಎಂ ಆಗಿ ಆಯ್ಕೆ ಹಿಂದಿನ ರಿಯಲ್ ಸ್ಟೋರಿ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌