ವಿಸ್ತಾರ ಸಂಪಾದಕೀಯ | ಆರೆಸ್ಸೆಸ್‌ನ ಸಮಕಾಲೀನ ಸ್ಪಂದನ ಬಿಂಬಿಸಿದ ಮೋಹನ್‌ ಭಾಗವತ್‌ Vistara News

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ | ಆರೆಸ್ಸೆಸ್‌ನ ಸಮಕಾಲೀನ ಸ್ಪಂದನ ಬಿಂಬಿಸಿದ ಮೋಹನ್‌ ಭಾಗವತ್‌

ಹಿಂದೂ- ಮುಸ್ಲಿಮರ ಸಹಬಾಳ್ವೆ, ಹಿಂದುತ್ವ, ಎಲ್‌ಜಿಬಿಟಿಕ್ಯು ಸಮುದಾಯದ ಖಾಸಗಿತನದ ಗೌರವಿಸುವಿಕೆ ಮುಂತಾದ ವಿಚಾರಗಳ ಬಗ್ಗೆ ಮೊಹನ ಭಾಗವತ್ ಅವರು ಮುಕ್ತವಾಗಿ ಮಾತನಾಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಕೆಲ ವರ್ಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಋಣಾತ್ಮಕ ಪ್ರಚಾರದ ಹಿನ್ನೆಲೆಯಲ್ಲಿ ಅವರ ಮಾತುಗಳು ಗಮನಾರ್ಹವಾಗಿವೆ.

VISTARANEWS.COM


on

Mohan Bhagwat
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತದಲ್ಲಿ ಮುಸ್ಲಿಮರಿಗೆ ಯಾವುದೇ ಅಪಾಯ ಅಥವಾ ಬೆದರಿಕೆ ಇಲ್ಲ. ಅವರು ತುಂಬ ಸುರಕ್ಷಿತವಾಗಿದ್ದಾರೆ. ಅವರು ತಮ್ಮ ನಂಬಿಕೆಗಳನ್ನು, ಆಚಾರ-ವಿಚಾರಗಳನ್ನು ಪಾಲಿಸಲು ಸ್ವತಂತ್ರರಾಗಿದ್ದಾರೆ. ಅವರು ಈಗಿನ ಸಂಪ್ರದಾಯಗಳನ್ನು ಪಾಲಿಸಬಹುದು ಅಥವಾ ಅವರ ಪೂರ್ವಜರ ಆಚರಣೆಗಳ ಮೊರೆ ಹೋಗಬಹುದು. ಆದರೆ, ಮುಸ್ಲಿಮರು ತಮ್ಮದೇ ಸರಿ, ತಾವೇ ಶ್ರೇಷ್ಠ ಎಂಬ ಪ್ರತಿಪಾದನೆಯನ್ನು ಬಿಡಬೇಕು. ಇಂತಹ ಅಬ್ಬರಗಳನ್ನು, ಅಬ್ಬರದ ವಾಕ್ಚಾತುರ್ಯವನ್ನು ನಿಲ್ಲಿಸಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಡಾ. ಮೋಹನ್‌ ಭಾಗವತ್‌ ಹೇಳಿದ್ದಾರೆ. ಜತೆಗೆ ಅವರು, ಭಾರತದಲ್ಲಿರುವ ಹಿಂದುಗಳು, ಕಮ್ಯುನಿಸ್ಟರು ಸೇರಿ ಎಲ್ಲರೂ ಇದೇ ಮಾದರಿಯನ್ನು ಅನುಸರಿಸಬೇಕು, ಹಿಂದುಸ್ತಾನವು ಹಿಂದುಸ್ತಾನವಾಗಿಯೇ ಉಳಿಯಬೇಕು ಎಂದೂ ಹೇಳಿದ್ದಾರೆ.

ಇದಲ್ಲದೇ ಹಿಂದೂ- ಮುಸ್ಲಿಮರ ಸಹಬಾಳ್ವೆ, ಹಿಂದುತ್ವ, ಎಲ್‌ಜಿಬಿಟಿಕ್ಯು ಸಮುದಾಯದ ಖಾಸಗಿತನದ ಗೌರವಿಸುವಿಕೆ ಮುಂತಾದ ವಿಚಾರಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಕೆಲ ವರ್ಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಋಣಾತ್ಮಕ ಪ್ರಚಾರದ ಹಿನ್ನೆಲೆಯಲ್ಲಿ ಅವರ ಸಂದರ್ಶನದ ಮಾತುಗಳು ಗಮನಾರ್ಹವಾಗಿವೆ. ದೇಶದ ಒಗ್ಗಟ್ಟು ಹಾಗೂ ಮುಸ್ಲಿಮರ ಮನಸ್ಥಿತಿ ಬಗ್ಗೆ ಪ್ರತಿಪಾದಿಸಿರುವ ಅವರು ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು. ಎಲ್ಲರಲ್ಲೂ ಇದೇ ಭಾವನೆ ಒಡಮೂಡಬೇಕು. ಈ ನೆಲವನ್ನು ತಾವು ಹಿಂದೆ ಆಳಿದ್ದೇವೆ, ಮುಂದೆಯೂ ಆಳುತ್ತೇವೆ ಎಂಬ ಮನಸ್ಥಿತಿ ಮುಸ್ಲಿಮರಲ್ಲಿ ಇರಕೂಡದು ಎಂದು ಎಚ್ಚರಿಸಿರುವುದು ಮನನೀಯ. ಹಿಂದುತ್ವವು ಎಲ್ಲರೂ ನಮ್ಮವರು ಎಂಬುದನ್ನು ಸಾರುತ್ತದೆ. ನಮ್ಮದು ಮಾತ್ರ ಪರಮ ಸತ್ಯ, ಬೇರೆಯವರದ್ದು ಸರಿಯಲ್ಲ ಎಂಬುದಾಗಿ ಎಂದೂ ಹೇಳುವುದಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಆರೆಸ್ಸೆಸ್‌ ಈ ನೆಲದ ಸಹಬಾಳ್ವೆಯನ್ನು ಎಷ್ಟು ಗೌರವಿಸುತ್ತದೆ ಎಂಬುದಕ್ಕೆ ಇದು ಸಾಕ್ಷಿ.

ಭಾರತದಲ್ಲಿ ಮುಸ್ಲಿಮರ ಸುರಕ್ಷತೆಯ ಬಗ್ಗೆ ಭಾಗವತ್‌ ಹೇಳಿದ ಮಾತನ್ನು ಬೇಕಿದ್ದರೆ ಪರೀಕ್ಷಿಸಬಹುದು. ಭಾರತದ ಜನಸಂಖ್ಯೆಯ ಸುಮಾರು 14%ದಷ್ಟು, ಅಂದರೆ 20 ಕೋಟಿ ಮಂದಿ ಮುಸ್ಲಿಮರು ಇಲ್ಲಿ ಇದ್ದಾರೆ. ಇದು ದೇಶದ ಎರಡನೇ ಅತಿ ದೊಡ್ಡ ಧಾರ್ಮಿಕ ಸಮುದಾಯ. ಇಂಡೋನೇಷ್ಯಾ ಹಾಗೂ ಪಾಕಿಸ್ತಾನದ ಬಳಿಕ ಅತಿ ಹೆಚ್ಚು ಮುಸ್ಲಿಮರು ಇರುವ ದೇಶ ಎಂದರೆ ಭಾರತ. ಇನ್ನುಳಿದ ಇಸ್ಲಾಮಿಕ್‌ ದೇಶಗಳೆನಿಸಿಕೊಂಡವು ಕೂಡ ಭಾರತದಷ್ಟು ಸಂಖ್ಯೆಯ ಮುಸ್ಲಿಮರನ್ನು ಹೊಂದಿಲ್ಲ. ಭಾರತದಲ್ಲಿ ಎರಡೂ ಧರ್ಮಗಳೂ ಸಾಕಷ್ಟು ಕೊಡುಕೊಳ್ಳುವಿಕೆ ಮಾಡಿಕೊಂಡು ಸಾಮರಸ್ಯದಿಂದ ಬಾಳುತ್ತಿವೆ. ಪಾಕಿಸ್ತಾನ, ಇರಾನ್ ಮುಂತಾದ ಅಪ್ಪಟ ಮುಸ್ಲಿಂ ದೇಶಗಳಿಗಿಂತ ಭಾರತೀಯ ಮುಸ್ಲಿಮರು ಹೆಚ್ಚು ಸ್ವಾತಂತ್ರ್ಯ ಮತ್ತು ಸೌಕರ್ಯ ಹೊಂದಿದ್ದಾರೆ. ಸೌದಿ ಅರೇಬಿಯಾ ಸೇರಿದಂತೆ ಹಲವಾರು ಮುಸ್ಲಿಂ ದೇಶಗಳು, ಬಾಂಗ್ಲಾ, ಇಂಡೋನೇಷ್ಯಾ, ಮಲೇಷ್ಯಾ ಮುಂತಾದ ಆಗ್ನೇಯ ಏಷ್ಯಾ ದೇಶಗಳು ಕೂಡ ಭಾರತದ ಜತೆ ಹೆಚ್ಚಿನ ಸ್ನೇಹದಿಂದಿವೆ. ಇದು ಹಿಂದೂ- ಮುಸ್ಲಿಂ ಸಹಬಾಳ್ವೆಗೆ ಸಾಕ್ಷಿ. ಭಾರತದಲ್ಲಿ ಮುಸ್ಲಿಮರಿಗೆ ಯಾವುದೇ ಅಪಾಯ ಇಲ್ಲ ಎಂದು ಭಾಗವತ್ ಹೇಳಿದ್ದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.

ಮಾನವೀಯ ಹಾಗೂ ಹಿಂದುಸ್ತಾನದ ಪಾರಂಪರಿಕ ಮೌಲ್ಯಗಳನ್ನು ಕಾಪಾಡುವ ದೃಷ್ಟಿಯಿಂದ ಆರೆಸ್ಸೆಸ್‌ ನಡೆಸುತ್ತಿರುವ ಮಹತ್ಕಾರ್ಯ ಎಲ್ಲರಿಗೂ ತಿಳಿದಿರುವುದೇ ಆಗಿದೆ. ತನ್ನ ಮೂಲ ಆಶಯವಾದ ʼಭಾರತೀಯ ಪರಂಪರೆಯ ರಕ್ಷಣೆʼಯ ನೆಲೆಯಿಂದ ಅದು ಹಿಂದೆ ಸರಿದಿಲ್ಲ. ಆದರೆ ಕಾಲಕ್ಕೆ ತಕ್ಕಂತೆ ನೀತಿ ನಡಾವಳಿಗಳಲ್ಲಿ ಬದಲಾಗುತ್ತ ಬಂದಿದೆ. ಮೊದಲು ಚಡ್ಡಿ ಧರಿಸುತ್ತಿದ್ದ ಸ್ವಯಂಸೇವಕರು ಈಗ ಪ್ಯಾಂಟ್ ಧರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ RSS ಇತ್ತೀಚಿನ ವರ್ಷಗಳಲ್ಲಿ ಹಲವಾರು ಸುಧಾರಣಾವಾದಿ ಹೆಜ್ಜೆಗಳನ್ನು ಇರಿಸಿದೆ. ಆಧುನಿಕ ತಾಂತ್ರಿಕತೆಯನ್ನು ಜನತೆಯ ಒಳಿತಿಗಾಗಿ ಬಳಸುವುದು ಹೇಗೆ ಎಂಬುದನ್ನು ಕಂಡುಕೊಳ್ಳುತ್ತಿದೆ. ಸಂಘದ ಸ್ವಯಂಸೇವಕರು ಜನರ ಬಳಿಗೆ ಹೋಗಿ ಸೇವಾಕಾರ್ಯಗಳನ್ನು ಮಾಡುತ್ತಿದ್ದಾರೆ. ಆರೆಸ್ಸೆಸ್‌ನ ಅಂಗಸಂಸ್ಥೆಯಾದ, ʼರಾಷ್ಟ್ರ ಸೇವಿಕಾ ಸಮಿತಿʼಯು ಇದರ ಮಹಿಳಾ ವಿಭಾಗವಾಗಿದ್ದು, ಉನ್ನತ ಔದ್ಯೋಗಿಕ ವಲಯಗಳಲ್ಲಿ ʼಪ್ರಬುದ್ಧʼ ಹೆಸರಿನ ಚಿಂತನಶಿಬಿರಗಳನ್ನು ನಡೆಸುತ್ತ ಉದ್ಯೋಗಿ ಮಹಿಳೆಯರ ಸುಖಸಂಕಷ್ಟಗಳತ್ತ ಸ್ಪಂದಿಸುತ್ತಿದೆ. ಇನ್ನು ದುರಂತ- ವಿಕೋಪಗಳು ಸಂಭವಿಸಿದ ಹೊತ್ತಿನಲ್ಲಿ ಸ್ಥಳಕ್ಕೆ ಧಾವಿಸಿ ಶಿಸ್ತುಬದ್ಧ ಸೇನಾಪಡೆಯಂತೆ ತುರ್ತು ಕಾರ್ಯಾಚರಣೆ ಹಾಗೂ ಸೇವೆ ಒದಗಿಸುವ ಅದರ ಕ್ರಮ ಮಾದರಿಯಾಗಿದೆ. ಇಂಥ ಆರೆಸ್ಸೆಸ್‌ ಆಧುನಿಕ ಜೀವನಕ್ರಮಕ್ಕೂ ಸ್ಪಂದಿಸುತ್ತಿರುವದಕ್ಕೆ ಸಾಕ್ಷಿ, ಈಗ ಎಲ್‌ಜಿಬಿಟಿಕ್ಯು ಸಮುದಾಯದ ಬಗ್ಗೆ ಮೋಹನ್‌ ಭಾಗವತ್‌ ಅವರು ಹೇಳಿರುವ ಮಾತು. ಅವರ ಖಾಸಗಿತನ ಗೌರವಿಸಿ, ಇದು ನಿಸರ್ಗಸಹಜ ಎಂದು ಅವರು ಹೇಳಿರುವ ಮಾತು ಸಮಕಾಲೀನ ವಿಚಾರಗಳ ಕುರಿತ ಸಂಘದ ಸ್ಪಂದನಕ್ಕೆ ಸಾಕ್ಷಿ.

ಈ ಎಲ್ಲ ಕಾರಣಗಳಿಂದ ಆರೆಸ್ಸೆಸ್‌ ಮುಖ್ಯಸ್ಥರ ಮಾತುಗಳು ಮಹತ್ವದ್ದಾಗಿವೆ. ಅಂತಿಮವಾಗಿ, ಭಾರತದಲ್ಲಿ ವಾಸಿಸುವ ಎಲ್ಲರೂ ತಮ್ಮ ತಮ್ಮ ಸಂಸ್ಕೃತಿ ಪ್ರತಿಪಾದಿಸುತ್ತಲೇ, ಬೇರೆಯವರ ಸಂಸ್ಕೃತಿಯನ್ನೂ ಗೌರವಿಸಬೇಕು ಎಂದು ಭಾಗವತ್ ಹೇಳಿದ್ದು ಭವಿಷ್ಯದ ಸೌಹಾರ್ದ ಮತ್ತು ಸಹಬಾಳ್ವೆಯ ಭಾರತದ ದೃಷ್ಟಿಯಿಂದ ಸಮಂಜಸವಾಗಿದೆ.

ಇದನ್ನೂ ಓದಿ | Mohan Bhagwat | ಮುಸ್ಲಿಮರಿಗೆ ಭಾರತದಲ್ಲಿ ಅಪಾಯ ಇಲ್ಲ, ಆದರೆ ಅವರು ತಮ್ಮದೇ ಸರಿ ಎಂದು ಅಬ್ಬರಿಸುವುದನ್ನು ಬಿಡಬೇಕು: ಭಾಗವತ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮಣಿಪುರದ ಹಳೆ ಬಂಡುಕೋರ ಗುಂಪು ಯುಎನ್ಎಲ್ಎಫ್!

peace accord: 1964ರಲ್ಲಿ ಆರಂಭವಾದ ಯುಎನ್ಎಲ್ಎಫ್ ಸಶಸ್ತ್ರ ಬಂಡಾಯದಲ್ಲಿ ತೊಡಿಕೊಂಡಿತ್ತು. ಕೇಂದ್ರ ಸರ್ಕಾರವನ್ನು ಈ ಸಂಘಟನೆಯನ್ನು ನಿಷೇಧಿಸಿತ್ತು.

VISTARANEWS.COM


on

peace accord between Manipur oldest armed group UNLF and Government
Koo

ನವದೆಹಲಿ: ಈಶಾನ್ಯ ರಾಜ್ಯ ಮಣಿಪುರದಲ್ಲಿ ಶಾಂತಿ ಸ್ಥಾಪನೆ ಸಂಬಂಧ ಕೇಂದ್ರ ಸರ್ಕಾರವು ಮಹತ್ವದ ಯಶಸ್ಸನ್ನು ಸಾಧಿಸಿದೆ. ಮಣಿಪುರದ ಅತ್ಯಂತ ಹಳೆಯ ಉಗ್ರಗಾಮಿ ಸಂಘಟನೆಯಾದ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (United National Liberation Front – UNLF) ಕೇಂದ್ರ ಸರ್ಕಾರದೊಂದಿಗೆ (Central Government) ಶಾಂತಿ ಒಪ್ಪಂದಕ್ಕೆ (peace accord) ಸಹಿ ಹಾಕಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ(Union Home Minister Amit Shah).

ಕೇಂದ್ರ ಸರ್ಕಾರವು ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ಈಶಾನ್ಯದಲ್ಲಿ ಶಾಶ್ವತ ಶಾಂತಿ ಸ್ಥಾಪಿಸಲು ಮೋದಿ ಸರ್ಕಾರದ ಅವಿರತ ಪ್ರಯತ್ನಗಳು ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ (ಯುಎನ್‌ಎಲ್‌ಎಫ್) ಇಂದು ನವದೆಹಲಿಯಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರಿಂದ ಹೊಸ ಅಧ್ಯಾಯವನ್ನು ಆರಂಭಿಸಲಾಗಿದೆ ಎಂದು ಎಕ್ಸ್ ವೇದಿಕೆಯಲ್ಲಿ ಕೇಂದ್ರ ಗೃಹ ಸಚಿವ ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಮಣಿಪುರದ ಅತ್ಯಂತ ಹಳೆಯ ಮತ್ತು ಕಣಿವೆ ಮೂಲದ ಸಶಸ್ತ್ರ ಗುಂಪು ಯುಎನ್‌ಎಲ್‌ಎಫ್ ಹಿಂಸಾಚಾರವನ್ನು ತ್ಯಜಿಸಲು ಮತ್ತು ಮುಖ್ಯವಾಹಿನಿಗೆ ಸೇರಲು ಒಪ್ಪಿಕೊಂಡಿದೆ. ನಾನು ಅವರನ್ನು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಿಗೆ ಸ್ವಾಗತಿಸುತ್ತೇನೆ ಮತ್ತು ಶಾಂತಿ ಮತ್ತು ಪ್ರಗತಿಯ ಹಾದಿಯಲ್ಲಿ ಅವರ ಪ್ರಯಾಣದಲ್ಲಿ ಅವರಿಗೆ ಶುಭ ಹಾರೈಸುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಯುಎನ್‌ಎಲ್‌ಎಫ್ ಜೊತೆಗೆ ಹಲವಾರು ಇತರ ಉಗ್ರಗಾಮಿ ಸಂಘಟನೆಗಳನ್ನು ಗೃಹ ಸಚಿವಾಲಯ ನಿಷೇಧಿಸಿದ ದಿನಗಳ ನಂತರ ಈ ಶಾಂತಿ ಒಪ್ಪಂದವು ಏರ್ಪಟ್ಟಿದೆ. ಈ ಸಂಘಟನೆಗಳು ಮಣಿಪುರದಲ್ಲಿ ಭದ್ರತಾ ಪಡೆಗಳು, ಪೊಲೀಸರು ಮತ್ತು ನಾಗರಿಕರ ಮೇಲೆ ದಾಳಿಗಳು ಮತ್ತು ಹತ್ಯೆಗಳು ಮತ್ತು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಹಾನಿಯುಂಟುಮಾಡುವ ಚಟುವಟಿಕೆಗಳಲ್ಲಿ ತೊಡಗಿವೆ ಎಂದು ಕೇಂದ್ರ ಸರ್ಕಾರ ನಿಷೇಧ ಅಸ್ತ್ರವನ್ನು ಪ್ರಯೋಗಿಸಿತ್ತು.

1964ರ ನವೆಂಬರ್ 24ರಂದು ಅರೆಂಬಮ್ ಸಮ್ರೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ಯುಎನ್‌ಎಲ್‌ಎಫ್ ಜನ್ಮ ತಳೆಯಿತು. ಇದು ಮಣಿಪುರದ ಅತ್ಯಂತ ಹಳೆಯ ಬಂಡಾಯ ಗುಂಪು ಎನಿಸಿಕೊಂಡಿದೆ. 70 ಮತ್ತು 80 ರ ದಶಕಗಳಲ್ಲಿ ಈ ಗುಂಪು ಮುಖ್ಯವಾಗಿ ಸಿದ್ಧತೆ ಮತ್ತು ನೇಮಕಾತಿಯ ಮೇಲೆ ಹೆಚ್ಚು ಕೇಂದ್ರೀಕೃತವಾಗಿತ್ತು. 1990ರಲ್ಲಿ ಭಾರತದಿಂದ ಮಣಿಪುರದ ‘ವಿಮೋಚನೆ’ಗಾಗಿ ಸಶಸ್ತ್ರ ಹೋರಾಟವನ್ನು ಪ್ರಾರಂಭಿಸಲು ನಿರ್ಧರಿಸಿತು. ಅದೇ ವರ್ಷದಲ್ಲಿ, ಇದು ಮಣಿಪುರ ಪೀಪಲ್ಸ್ ಆರ್ಮಿ ಎಂಬ ಸಶಸ್ತ್ರ ವಿಭಾಗವನ್ನು ಕೂಡ ಆರಂಭಿಸಿತ್ತು. ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಕೇಂದ್ರ ಸರ್ಕಾರವು ಈ ಸಂಘಟನೆಯನ್ನೂ ನಿಷೇಧಿಸಿತ್ತು.

ಈ ಸುದ್ದಿಯನ್ನೂ ಓದಿ: Manipur Violence: ಮಣಿಪುರದಲ್ಲಿ ಪೊಲೀಸ್‌ ಅಧಿಕಾರಿಯ ಹತ್ಯೆ; ‘ಕುಕಿ’ ಜನರಿಂದ ದಾಳಿ

Continue Reading

ದೇಶ

Indian Railways : ಭಾರತ ಗೌರವ ಯಾತ್ರಾ ರೈಲಿನಲ್ಲಿ ಕಲುಷಿತ ಆಹಾರ ಸೇವಿಸಿ 90 ಮಂದಿ ಅಸ್ವಸ್ಥ

ಚೆನ್ನೈನಿಂದ ಗುಜರಾತ್​ನ ಪಾಲಿಟಾನಾಗೆ ತೆರಳುತ್ತಿದ್ದ ಭಾರತ್ ಗೌರವ್ ಯಾತ್ರಾ ವಿಶೇಷ ಪ್ಯಾಕೇಜ್ ರೈಲಿನಲ್ಲಿ (Indian Railways ) ಪ್ರಯಾಣಿಸುತ್ತಿದ್ದ ಸುಮಾರು 90 ಪ್ರಯಾಣಿಕರು ಮಂಗಳವಾರ ರಾತ್ರಿ ಖಾಸಗಿಯಾಗಿ ಖರೀದಿಸಿದ ಊಟ ಸೇವಿಸಿದ ನಂತರ ಅಸ್ವಸ್ಥಗೊಂಡಿದ್ದಾರೆ.

VISTARANEWS.COM


on

Gauvarav Yatra
Koo

ನವದೆಹಲಿ: ಚೆನ್ನೈನಿಂದ ಗುಜರಾತ್​ನ ಪಾಲಿಟಾನಾಗೆ ತೆರಳುತ್ತಿದ್ದ ಭಾರತ್ ಗೌರವ್ ಯಾತ್ರಾ ವಿಶೇಷ ಪ್ಯಾಕೇಜ್ ರೈಲಿನಲ್ಲಿ (Indian Railways) ಪ್ರಯಾಣಿಸುತ್ತಿದ್ದ ಸುಮಾರು 90 ಪ್ರಯಾಣಿಕರು ಮಂಗಳವಾರ ರಾತ್ರಿ ಖಾಸಗಿಯಾಗಿ ಪೂರೈಕೆಯಾದ ಊಟವನ್ನು ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ಇದಕ್ಕೆ ರೈಲ್ವೆ ಇಲಾಖೆಯ ಹೊಣೆಯಲ್ಲ ಎಂಬುದಾಗಿ ಇಲಾಖೆಯ ಸಾರ್ವಜನಿಕ ಸಂಪರ್ಕ ಇಲಾಖೆ ಹೇಳಿದೆ. ಇದೇ ವೇಳೆ ಪ್ರಯಾಣಿಕ ಹಿತರಕ್ಷಣೆಗಾಗಿ ಮಾಡಿದ್ದೇವೆ ಎಂಬುದಾಗಿಯೂ ಹೇಳಿದೆ.

ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗುಜರಾತ್​ನ ಪಾಲಿಟಾನಾಗೆ ಖಾಸಗಿಯಾಗಿ ಕಾಯ್ದಿರಿಸಲಾಗಿದ್ದ ಭಾರತ್ ಗೌರವ್ ಯಾತ್ರಾ ವಿಶೇಷ ರೈಲಿನಲ್ಲಿ ಈ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.ಊಟ ಮಾಡಿದ ಬಳಿಕ ಪ್ರಯಾಣಿಕರು ಹೊಟ್ಟೆ ನೋವು, ವಾಂತಿ, ತಲೆತಿರುಗುವಿಕೆ ಮತ್ತು ಅತಿಸಾರದಿಂದ ಬಳಲಿದ್ದಾರೆ. ನಂತರ ಪುಣೆ ರೈಲ್ವೆ ನಿಲ್ದಾಣದಲ್ಲಿ ರೈಲಿನ ತುರ್ತು ನಿಲುಗಡೆ ಮಾಡಿದ್ದಾರೆ ಎಂದು ಕೇಂದ್ರ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಶಿವರಾಜ್ ಮನಸ್ಪುರೆ ತಿಳಿಸಿದ್ದಾರೆ.

ಸೋಲಾಪುರ ಮತ್ತು ಪುಣೆ ನಡುವೆ ಘಟನೆ ನಡೆದಿದೆ. ಬೋಗಿಯಲ್ಲಿದ್ದ ಸುಮಾರು 80 ರಿಂದ 90 ಪ್ರಯಾಣಿಕರು ಸೇವಿಸಿದ ಆಹಾರ ಕಲುಷಿತಗೊಂಡಿತ್ತ ಎಂದು ಅವರು ಹೇಳಿದ್ದಾರೆ. ಅವರು ಹೊಟ್ಟೆ ನೋವು, ವಾಕರಿಕೆ, ಭೇದಿ ಮತ್ತು ತಲೆನೋವಿನ ಬಗ್ಗೆ ಮಾಹಿತಿ ನೀಡಿದರು ಎಂದು ಅಧಿಕಾರಿ ತಿಳಿಸಿದ್ದಾರೆ.

ವೈದ್ಯರಿಂದ ತುರ್ತು ನೆರವು

“ಪುಣೆ ನಿಲ್ದಾಣದಲ್ಲಿ, ಮೂರು ವೈದ್ಯಕೀಯ ತಂಡಗಳು, 15 ರೈಲ್ವೆ ವೈದ್ಯರು ಮತ್ತು ಸಿಬ್ಬಂದಿಯ, 13 ಖಾಸಗಿ ವೈದ್ಯರು ಮತ್ತು ಸಿಬ್ಬಂದಿ ಮತ್ತು ಎಂಟು ಎನ್​ಜಿಒ ಕಾರ್ಯಕರ್ತರು ನೆರವು ಕಾರ್ಯದಲ್ಲಿ ತೊಡಗಿದ್ದಾರೆ. ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ನಾಲ್ಕು ಮುಖ್ಯ ಆರೋಗ್ಯ ನಿರೀಕ್ಷಕರು ಸಹ ಕೆಲಸ ಮಾಡುತ್ತಿದ್ದಾರೆ” ಎಂದು ರೈಲ್ವೆ ಪಿಆರ್​ಒ ಮಾಹಿತಿ ನೀಡಿದ್ದಾರೆ.

ರೈಲು ಮಂಗಳವಾರ ರಾತ್ರಿ 11.27 ಕ್ಕೆ ಪುಣೆ ಪ್ಲಾಟ್ ಫಾರ್ಮ್ ಸಂಖ್ಯೆ 2 ಕ್ಕೆ ಬಂದು 12.29 ಕ್ಕೆ ಹೊರಟಿತ್ತು. ಕೋಚ್ ನಂ. ಬಿ 11ರಲ್ಲಿ ವಾಂತಿ, ಹೊಟ್ಟೆ ನೋವು, ಭೇದಿ ಹೊಂದಿರುವ ಕೆಲವು ಪ್ರಯಾಣಿಕರನ್ನು ವೈದ್ಯರ ತಂಡವು ಗಮನಿಸಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಗಂಡ ಹೆಂಡತಿ ಜಗಳದಿಂದಾಗಿ ರೇಮಂಡ್ ಕಂಪನಿಗೆ 1500 ಕೋಟಿ ರೂ. ನಷ್ಟ!

ರೈಲ್ವೆ ಪಿಆರ್​ಒ ಪ್ರಕಾರ, ಆಹಾರವನ್ನು ರೈಲ್ವೆ ಅಥವಾ ಐಆರ್​ಸಿಟಿಸಿ ಸಿಬ್ಬಂದಿ ಪೂರೈಸಿಲ್ಲ/ ಆದರೆ ಖಾಸಗಿಯಾಗಿ ಸಂಗ್ರಹಿಸಲಾಗಿದೆ ಎಂದು ಮನಸ್ಪುರೆ ಹೇಳಿದರು. ರೈಲ್ವೆ ಸಚಿವಾಲಯದ ಪ್ರಕಾರ, ಖಾಸಗಿ ಪೂರೈಕೆದಾರರೊಬ್ಬರು ಈ ಸೇವೆಯನ್ನು ನಿರ್ವಹಿಸುತ್ತಿದ್ದಾರೆ. ಸಚಿವಾಲಯವು ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಎಲ್ಲಾ 90 ಪ್ರಯಾಣಿಕರಿಗೆ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆಯ ನಂತರ ಸಾಮಾನ್ಯ ಸುಧಾರಿಸಿಕೊಂಡಿದ್ದಾರೆ ಎಂದು ಮನಸ್ಪುರೆ ಭರವಸೆ ನೀಡಿದ್ದಾರೆ. ಯಾವುದೇ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ, ಅವರೆಲ್ಲರೂ ಅದೇ ರೈಲಿನಲ್ಲಿ ತಮ್ಮ ಪ್ರಯಾಣವನ್ನು ಮುಂದುವರೆಸಿದ್ದಾರೆ ಎಂದು ಹೇಳಿದ್ದಾರೆ. “ರೈಲು 50 ನಿಮಿಷಗಳ ನಂತರ ಹೊರಟಿತು. ಎಲ್ಲಾ ಪ್ರಯಾಣಿಕರ ಸ್ಥಿತಿ ಸ್ಥಿರವಾಗಿದೆ” ಎಂದು ಅವರು ಹೇಳಿದರು.

Continue Reading

ದೇಶ

ಗಂಡ-ಹೆಂಡತಿ ಜಗಳ ವಿಮಾನ ಹತ್ತಿದ್ರೂ ಮುಗಿಲಿಲ್ಲ! ಆ ಮೇಲೆ ಏನಾಯ್ತು?

Lufthansa flight: ವಿಮಾನದಲ್ಲೇ ದಂಪತಿ ಕಿತ್ತಾಡಿಕೊಂಡಿದ್ದಕ್ಕೆ ಜರ್ಮನಿಯಿಂದ ಥಾಯ್ಲೆಂಡ್‌ಗೆ ಹೊರಟಿದ್ದ ವಿಮಾನವನ್ನು ದಿಲ್ಲಿಯಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ.

VISTARANEWS.COM


on

fight between Couple in air and Lufthansa flight was diverted to Delhi and Viral News
Koo

ನವದೆಹಲಿ: ಜರ್ಮಿನಿಯ ಮ್ಯೂನಿಚ್ ನಗರದಿಂದ ಥಾಯ್ಲೆಂಡ್‌ನ ಬ್ಯಾಂಕಾಕ್‌ ನಗರಕ್ಕೆ ಹೊರಟಿದ್ದ ಲುಫ್ಥಾನ್ಸ ವಿಮಾನವು (Munich-Bangkok Lufthansa flight) ‘ವಿಚಿತ್ರ ಕಾರಣ’ಕ್ಕಾಗಿ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Indira Gandhi International Airport) ಲ್ಯಾಂಡಿಂಗ್ ಮಾಡಿದೆ. ಈ ವಿಮಾನದಲ್ಲಿದಲ್ಲಿ ಪ್ರಯಾಣಿಸುತ್ತಿರುವ ಗಂಡ-ಹೆಂಡತಿ (Fight Between couple) ಜಗಳಕ್ಕೆ ಬೇಸತ್ತ ಪೈಲಟ್, ಅಂತಿಮವಾಗಿ ವಿಮಾನವನ್ನು ದಿಲ್ಲಿಯಲ್ಲಿ ಲ್ಯಾಂಡ್ ಮಾಡಿ, ಅವರನ್ನು ವಿಮಾನದಿಂದ ಹೊರಹಾಕಿದ್ದಾರೆ.

ನವೆಂಬರ್ 27, ಬುಧವಾರ ಮ್ಯೂನಿಚ್‌ನಿಂದ ಬ್ಯಾಂಕಾಕ್‌ಗೆ ಹೊರಟಿದ್ದ LH772 ವಿಮಾನವನ್ನು ಅಶಿಸ್ತಿನ ಪ್ರಯಾಣಿಕರ ಕಾರಣ ದೆಹಲಿಯತ್ತು ತರಲಾಯಿತು. ಜಗಳ ಮಾಡುತ್ತಿದ್ದ ದಂಪತಿಯ ಪೈಕಿ ಗಂಡನನ್ನು ದಿಲ್ಲಿಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಬ್ಯಾಂಕಾಕ್‌ಗೆ ವಿಮಾನವು ಸಣ್ಣ ವಿಳಂಬಗಳೊಂದಿಗೆ ನಂತರ ಮುಂದುವರಿಯುವ ನಿರೀಕ್ಷೆಯಿದೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ವಿಮಾನದಲ್ಲಿ ಸುರಕ್ಷತೆ ಮತ್ತು ಭದ್ರತೆ ನಮ್ಮ ಪ್ರಮುಖ ಆದ್ಯತೆಯಾಗಿದೆ ವಿಮಾನಯಾನ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವಿಮಾನದಲ್ಲಿ ನಡೆದಿದ್ದೇನು?

ಗಂಡ-ಹೆಂಡತಿ ಜಗಳ ಉಂಡು ಮಲಗೋತನಕ ಎಂಬುದು ಗಾದೆ ಮಾತು. ಆದರೆ, ಈ ದಂಪತಿಯ ಜಗಳ ವಿಮಾನ ಹತ್ತಿದ್ರೂ ಮುಗಿದಿಲ್ಲ. ಜರ್ಮನಿಯ ಗಂಡ ಮತ್ತು ಥಾಯ್ ಹೆಂಡತಿಯ ಮಧ್ಯೆ, ವಿಮಾನದಲ್ಲಿ ಜಗಳ ಶುರುವಾಗಿದೆ. ಈ ಜಗಳವನ್ನು ಸಿಬ್ಬಂದಿಯ ಸರಿಪಡಿಸಲು ಮುಂದಾಗಿದ್ದಾರೆ. ಜಗಳ ಮತ್ತಷ್ಟು ಉಲ್ಬಣಗೊಂಡ ಹಿನ್ನೆಲೆಯಲ್ಲಿ ಪೈಲಟ್ ಅಂತಿಮವಾಗಿ ದಿಲ್ಲಿಯಲ್ಲಿ ವಿಮಾನ ಇಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ತನ್ನ ಗಂಡ ಜಗಳ ಮಾಡುತ್ತಿರುವ ಬಗ್ಗೆ ಹೆಂಡತಿಯ ಮೊದಲಿಗೆ ಪೈಲಟ್‌ಗೆ ದೂರು ನೀಡಿದ್ದಾಳೆ. ಗಂಡ ತನಗೆ ಬೆದರಿಕೆ ಹಾಕುತ್ತಿದ್ದಾನೆ. ದಯವಿಟ್ಟು ಮಧ್ಯ ಪ್ರವೇಶಿಸಿ ಎಂದು ಆಕೆ, ಪೈಲಟ್‌ಗೆ ಮನವಿ ಮಾಡಿಕೊಂಡಿದ್ದಾಳೆ. ಇಷ್ಟಾದರೂ 53 ವರ್ಷದ ಜರ್ಮನಿಯ ಗಂಡನ ಜಗಳದ ವರ್ತನೆ ನಿಂತಿಲ್ಲ. ಹೆಂಡತಿಯತ್ತ ಆಹಾರ ಎಸೆದಿದ್ದಾನೆ. ಅಲ್ಲದೇ, ಲೈಟರ್‌ ಮೂಲ ಬ್ಲಾಂಕೆಟ್‌ಗೆ ಬೆಂಕಿ ಹಚ್ಚಲು ಮುಂದಾಗಿದ್ದಾನೆ. ನಿರಂತರವಾಗಿ ಹೆಂಡತಿ ಮೇಲೆ ರೇಗಾಡಿದ್ದಾನೆ. ವಿಮಾನ ಸಿಬ್ಬಂದಿ ಜಗಳ ಬಿಡಿಸಲು ಎಷ್ಟೇ ಪ್ರಯತ್ನ ಮಾಡಿದರು, ಫಲಿ ಕೊಡಲಿಲ್ಲ.

ಈ ಕಾರಣಕ್ಕಾಗಿ, ಬ್ಯಾಂಕಾಕ್‌ಗೆ ಹೊರಟಿದ್ದ ವಿಮಾನವನ್ನು ಪೈಲಟ್‌ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಿದ್ದಾರೆ. ಹೆಂಡತಿಯು ಪ್ರತ್ಯೇಕ ಪಿಎನ್ಆರ್ ಟಿಕೆಟ್ ಹೊಂದಿದ್ದು, ಅದೇ ವಿಮಾನದಲ್ಲಿ ಪ್ರಯಾಣ ಮುಂದುವರಿಸುವುದಾಗಿ ಹೇಳಿದ್ದಾಳೆ. ಆದರೆ, ಆಕೆಯ ಗಂಡನನ್ನು ದಿಲ್ಲಿಯ ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ ಒಪ್ಪಿಸಲಾಗಿದೆ. ಆದರೆ, ತನ್ನ ವರ್ತನೆಗೆ ಆತ ಕ್ಷಮೆ ಕೇಳಿದ್ದಾನೆ ಎನ್ನಲಾಗಿದೆ. ಆದರೂ, ಆತನನ್ನು ವಾಪಸ್ ಜರ್ಮನಿಗೆ ಕಳುಹಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ ಎನ್ನಲಾಗಿದೆ. ಈ ಮಧ್ಯೆ, ಪೈಲಟ್ ಅವರು ಮೊದಲಿಗೆ ವಿಮಾನವನ್ನು ಪಾಕಿಸ್ತಾನದ ಹತ್ತಿರದ ಏರ್‌ಪೋರ್ಟ್‌ನತ್ತ ತಿರುಗಿಸಲು ಅನುಮತಿ ಕೇಳಿದ್ದರು. ಆದರೆ, ಕಾರಣ ನೀಡದೇ ಅನುಮತಿ ಸಿಗದಿದ್ದರಿಂದ ಅಂತಿಮವಾಗಿ ವಿಮಾನವನ್ನು ದಿಲ್ಲಿ ಏರ್‌ಪೋರ್ಟ್‌ಗೆ ತರಲಾಯಿತು ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ: Death in Flight : ಮಾರ್ಗ ಮಧ್ಯೆ ಪ್ರಯಾಣಿಕ ನಿಧನ; ದಿಲ್ಲಿಯಿಂದ ದೋಹಾಕ್ಕೆ ಹೊರಟಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

Continue Reading

ಕರ್ನಾಟಕ

ಬಾಯ್‌ಫ್ರೆಂಡ್‌ ಮೊಬೈಲ್‌ ತೆರೆದಾಗ ಅವಳಿಗೆ ಕಂಡಿದ್ದು 13000 ಹುಡುಗಿಯರ ನಗ್ನಲೋಕ!

ಬೆಂಗಳೂರಿನ ಬಿಪಿಒ ಉದ್ಯೋಗಿಯೊಬ್ಬ ತನ್ನ ಕಚೇರಿಯ ಹುಡುಗಿಯರೂ ಸೇರಿದಂತೆ ನೂರಾರು ಹುಡುಗಿಯರ 13000 ಫೋಟೊಗಳನ್ನು ಮೊಬೈಲ್‌ನಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದಾನೆ. ಯಾಕಿದು?

VISTARANEWS.COM


on

BPO Employee Bangalore Nude Photos
Koo

ಬೆಂಗಳೂರು: ಅವಳು ಬೆಂಗಳೂರಿನ ಬಿಪಿಒ ಕಂಪನಿಯಲ್ಲಿ (BPO Company in Bangalore) ಉದ್ಯೋಗಿ. ವಯಸ್ಸು 22 ವರ್ಷ. ಅವಳಿಗೊಬ್ಬ ಬಾಯ್‌ಫ್ರೆಂಡ್ (Boy friend). ಇನ್ನೂ 25 ವರ್ಷ. ಕೇವಲ ನಾಲ್ಕು ತಿಂಗಳ ಹಿಂದಷ್ಟೇ ಪರಿಚಯವಾಗಿದ್ದ ಅವರು ಆಗಲೇ ಪ್ರೀತಿ-ಪ್ರೇಮ-ಪ್ರಣಯ (Love and sex relationship) ಅಂತ ಸ್ವಲ್ಪ ಸ್ವಲ್ಪ ಎಲ್ಲೆ ಮೀರಿದ್ದರು. ಅವರಿಬ್ಬರ ನಡುವಿನ ಆತ್ಮೀಯ ಕ್ಷಣಗಳನ್ನು ಆ ಹುಡುಗ ಸೆರೆ ಹಿಡಿದಿದ್ದ. ಅದೊಂದು ದಿನ ಅವನು ಕಣ್ಣಂಚಿನಲ್ಲಿ ಇಲ್ಲದಾಗ ಅವನ ಮೊಬೈಲ್‌ ತೆಗೆದು ತಮ್ಮ ಇಂಟಿಮೇಟ್‌ ಕ್ಷಣಗಳ (Intemate moments) ಚಿತ್ರ ವಿಡಿಯೊಗಳನ್ನು ಡಿಲೀಟ್‌ ಮಾಡಲು ಮುಂದಾದಳು. ಅದು ಹೇಗೋ ಸಂಪಾದಿಸಿಕೊಂಡಿದ್ದ ಲಾಕಿಂಗ್‌ ಪಾಸ್‌ವರ್ಡ್‌ ಬಳಸಿ ಅವನು ಮೊಬೈಲ್‌ನ ಗ್ಯಾಲರಿ (Mobile Photo Gallery) ಓಪನ್‌ ಮಾಡಿದರೆ.. ಬೆಚ್ಚಿ ಬೀಳುವ ಸರದಿ ಅವಳದಾಗಿತ್ತು. ಯಾಕೆಂದರೆ, ಅಲ್ಲಿ ಅವಳೊಬ್ಬಳ ಫೋಟೊ, ವಿಡಿಯೊ ಮಾತ್ರ ಇದ್ದಿದ್ದಲ್ಲ. ಸುಮಾರು 13000 ಹುಡುಗಿಯರ ಸೆಕ್ಸೀ, ರೊಮ್ಯಾಂಟಿಕ್‌ ಫೋಟೊಗಳು ಅಲ್ಲಿದ್ದವು. ಮಾತ್ರವಲ್ಲ, ಅವರಿಬ್ಬರು ಕೆಲಸ ಮಾಡುವ ಅದೇ ಬಿಪಿಒ ಕಂಪನಿಯ ಹಲವು ಹುಡುಗಿಯರ ಮಾದಕ ಚಿತ್ರಗಳ ಸಂಪುಟವೂ ಅಲ್ಲಿ ತೆರೆದುಕೊಂಡಿತ್ತು!

ಹೀಗೆ ಬೆಚ್ಚಿ ಬಿದ್ದ ಹುಡುಗಿಯ ಹೆಸರು ಸಾನ್ವಿ (ಹೆಸರು ಬದಲಿಸಲಾಗಿದೆ). ವರ್ಷದ ಹಿಂದೆ ಬಿಪಿಒ ಕಂಪನಿಗೆ ಸೇರಿದ್ದಳು. ಆಕೆ ಕೆಲಸ ಮಾಡುತ್ತಿದ್ದ ಕಂಪನಿಗೆ ಐದು ತಿಂಗಳ ಹಿಂದೆ ಬಂದು ಸೇರಿಕೊಂಡವನು ಸಂತೋಷ್‌ ಆದಿತ್ಯ (ಹೆಸರು ಬದಲಿಸಲಾಗಿದೆ). ನೋಡಲು ಚೆನ್ನಾಗಿದ್ದ ಅವನಿಗೂ, ಚೆಲುವಿನ ಖನಿಯಾಗಿದ್ದ ಅವಳಿಗೂ ಆಗಲೇ ಪರಿಚಯವಾಗಿತ್ತು. ಒಂದೇ ತಿಂಗಳಲ್ಲಿ ಅದು ಸಂಬಂಧವಾಗಿ ಪರಿವರ್ತನೆಯಾಯಿತು. ಮನಸು ಮಾತ್ರವಲ್ಲ ದೇಹಗಳೂ ಹತ್ತಿರವಾಗಿ ಆತ್ಮೀಯ ರಸಕ್ಷಣಗಳು ನಡೆದುಹೋದವು. ಈ ರಸಕ್ಷಣಗಳ ನೆನಪು ಶಾಶ್ವತವಾಗಿರಲಿ ಎಂದು ಸಂತೋಷ್‌ ಆದಿತ್ಯ ಕೆಲವೊಮ್ಮೆ ಫೋಟೊ ತೆಗೆದಿದ್ದ, ಕೆಲವೊಮ್ಮೆ ವಿಡಿಯೊ ಮಾಡಿದ್ದ.

BPO Employee representational photo
ಪ್ರಾತಿನಿಧಿಕ ಚಿತ್ರ

ಎಲ್ಲ ಮುಗಿದ ಮೇಲೆ ಸಾನ್ವಿಗೆ ಒಬ್ಬ ಹುಡುಗನ ಮೊಬೈಲ್‌ನಲ್ಲಿ ತನ್ನ ಈ ರೀತಿಯ ಫೋಟೊ/ವಿಡಿಯೊಗಳು ಇರುವುದು ಸರಿಯಲ್ಲ ಎಂಬುದರ ಅರಿವಾಗಿದೆ. ಹಾಗಾಗಿ ಆಕೆ ಆತನಿಗೆ ಅರಿವಿಲ್ಲದೆಯೇ ಆತನ ಮೊಬೈಲ್‌ ತೆರೆದು ಗ್ಯಾಲರಿ ಓಪನ್‌ ಮಾಡಿದ್ದಾಳೆ. ಆಗ ಅವಳಿಗೆ ಕಂಡಿದ್ದು 13 ಸಾವಿರ ಫೋಟೊಗಳು! ಅದರಲ್ಲಿ ಹೆಚ್ಚಿನವರು ಹೆಣ್ಮಕ್ಕಳ ಫೋಟೊಗಳು! ಅದರಲ್ಲೂ ತನ್ನದೇ ಆಫೀಸಿನ ಹೆಣ್ಮಕ್ಕಳ ಫೋಟೊಗಳು ಹೆಚ್ಚಾಗಿದ್ದವು. ಅವರ ಜತೆಗೆ ಇದ್ದದ್ದು ಕೂಡಾ ಅದೇ ಇಂಟಿಮೇಟ್‌ ಕ್ಷಣಗಳು.

ಇದನ್ನು ನೋಡಿದ ಸಾನ್ವಿ ಬೆಚ್ಚಿ ಬಿದ್ದಿದ್ದಾಳೆ. ಅಷ್ಟೂ ಹುಡುಗಿಯರ ಫೋಟೊ/ವಿಡಿಯೊಗಳ ನಡುವೆ ಆಕೆಯದ್ದು ಕಾಣಿಸಲೇ ಇಲ್ಲ! ಇದೆಲ್ಲ ನಡೆದದ್ದು ಸುಮಾರು 10 ದಿನಗಳ ಹಿಂದೆ. ಇದನ್ನು ನೋಡಿದ ಸಾನ್ವಿ ಸುಮ್ಮನಿರಲಿಲ್ಲ.

ಮೊದಲು ಸಂತೋಷ್‌ ಜತೆಗೆ ಬ್ರೇಕಪ್‌ ಮಾಡಿಕೊಂಡಿದ್ದಾಳೆ. ನಂತರ ನವೆಂಬರ್‌ 20ರಂದು ಆಕೆ ತನ್ನ ಕಚೇರಿಯ ಸೀನಿಯರ್‌ಗಳಿಗೆ ಈ ವಿಚಾರ ತಿಳಿಸಿದ್ದಾಳೆ. ಸಂತೋಷ್‌ನ ಫೋನ್‌ನಲ್ಲಿ 13000ಕ್ಕೂ ಹೆಚ್ಚು ನಗ್ನ ಫೋಟೊಗಳಿವೆ. ಇವುಗಳಲ್ಲಿ ಕೆಲವು ನಮ್ಮ ಕಚೇರಿಯಲ್ಲೇ ಕೆಲಸ ಮಾಡುವ ಹುಡುಗಿಯರು, ಹೆಂಗಸರದ್ದೂ ಇದೆ. ಹೀಗಾಗಿ ಅವರಿಗೆ ಯಾರಿಗೂ ಮುಂದೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ವಿಚಾರವನ್ನು ಗಮನಕ್ಕೆ ತರುತ್ತಿರುವುದಾಗಿ ಹೇಳಿದ್ದಾಳೆ.

ವರದಿಗಳ ಪ್ರಕಾರ ಈ ಚಿತ್ರಗಳಲ್ಲಿ ಕೆಲವು ಒರಿಜಿನಲ್‌ ಆಗಿವೆ. ಅದರ ಜತೆಗೆ ಕೆಲವು ಚಿತ್ರಗಳು ನಕಲಿಯಾಗಿರಬಹುದು ಎನ್ನಲಾಗಿದೆ. ಅಂದರೆ ಕಚೇರಿಯ ಕೆಲವು ಮಹಿಳೆಯರ ಯುವತಿಯರ ಫೋಟೊಗಳನ್ನು ಆತ ನಗ್ನ ಚಿತ್ರಗಳಿಗೆ ಜೋಡಿಸಿ ಆನಂದಿಸಿರಬಹುದು ಎಂದು ಕೂಡಾ ಹೇಳಲಾಗುತ್ತಿದೆ.

BPO sex case

ಮತ್ತೊಬ್ಬ ಸಿಬ್ಬಂದಿಯಿಂದ ಪೊಲೀಸರಿಗೆ ದೂರು

ಸಂತೋಷ್‌ನ ಈ ವಿಕೃತಿಯನ್ನು ಅರ್ಥ ಮಾಡಿಕೊಂಡ ಬೆಳ್ಳಂದೂರು ಮೂಲದ ಬಿಪಿಒ ಕಂಪನಿಯ ಉದ್ಯೋಗಿಯಾಗಿರುವ ಸುಚಿತ್ರಾ (ಹೆಸರು ಬದಲಿಸಲಾಗಿದೆ) ಅವರು ಸಂತೋಷ್‌ ವಿರುದ್ಧ ನವೆಂಬರ್‌ 23ರಂದು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಅವನು ಇದುವರೆಗೆ ಈ ಕಚೇರಿಯಲ್ಲಿ ಯಾವ ಮಹಿಳೆಯರಿಗೂ ತೊಂದರೆ ಮಾಡಿಲ್ಲ. ಆದರೆ, ಈ ರೀತಿ ಫೋಟೊಗಳು ಇವೆ ಎಂದಾಗ ಅದು ಹೆಣ್ಮಕ್ಕಳಿಗೆ ಆತಂಕ ಆಗಿಯೇ ಆಗುತ್ತದೆ. ಆತ ಯಾಕೆ ಈ ರೀತಿಯಾಗಿ ಫೋಟೊಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾನೆ? ಅವನ ಉದ್ದೇಶವೇನು ಎನ್ನುವುದು ಗೊತ್ತಿಲ್ಲ. ಒಂದು ವೇಳೆ ಇಂಥ ಫೋಟೊಗಳು ಒಂದು ವೇಳೆ ಸೋರಿಕೆಯಾದರೆ ಹೆಣ್ಮಕ್ಕಳು ತುಂಬ ಖಿನ್ನತೆಗೆ ಒಳಗಾಗಬಹುದು. ಹೀಗಾಗಿ ಪ್ರಕರಣದ ಗಂಭೀರತೆಯನ್ನು ಆಧರಿಸಿ ಪೊಲೀಸರಿಗೆ ವಿವರಿಸಿದ್ದೇವೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ ಎನ್ನಲಾಗಿದೆ.

ಈ ನಡುವೆ ಕಂಪನಿ ಇನ್ನೊಂದು ಸ್ಪಷ್ಟೀಕರಣವನ್ನು ನೀಡಿದೆ. ಅದೇನೆಂದರೆ, ಸಂತೋಷ್‌ ಫೋಟೊಗಳನ್ನು ಮಾರ್ಫ್‌ ಮಾಡಲು ಕಂಪನಿಯ ಯಾವುದೇ ಸಾಧನಗಳನ್ನು ಬಳಸಿಕೊಂಡಿಲ್ಲ ಎಂಬುದು. ಈ ಮೂಲಕ ಆತನ ಇಂಥ ಕುಕೃತ್ಯಗಳಿಗೂ ಕಂಪನಿಗೂ ಸಂಬಂಧವಿಲ್ಲ ಎಂದು ಹೇಳಿಕೊಂಡಿದೆ.

ಇದೇವೇಳೆ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡು ಸಂತೋಷ್‌ನನ್ನು ಆತನ ಕಚೇರಿಯಿಂದಲೇ ಬಂಧಿಸಿ ಕರೆದೊಯ್ದಿದ್ದಾರೆ. ಆತನ ಮೊಬೈಲ್‌ ಮತ್ತು ಅದರಲ್ಲಿರುವ ಚಿತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಇಷ್ಟೊಂದು ಸಂಖ್ಯೆಯ ನಗ್ನ ಚಿತ್ರಗಳನ್ನು ಸಂಗ್ರಹಿಸುವ ಆತನ ಉದ್ದೇಶವೇನು ಎನ್ನುವ ಬಗ್ಗೆ ಅವರು ತನಿಖೆ ನಡೆಸಲಿದ್ದಾರೆ.

ಮೊಬೈಲ್‌ನಲ್ಲಿರುವ ಚಿತ್ರಗಳ ಪೈಕಿ ಕೆಲವು ಮಾರ್ಫ್‌ ಮಾಡಿದ ನಕಲಿ ಫೋಟಗಳು, ಕೆಲವು ನಿಜವಾಗಿಯೂ ಮಹಿಳೆಯರದ್ದೇ ಫೋಟೊಗಳು. ಅವನು ಈ ಫೋಟೊಗಳನ್ನು ಹೇಗೆ ತೆಗೆದುಕೊಂಡ, ಕೇವಲ ಐದೇ ತಿಂಗಳಲ್ಲಿ ಇಂಥ ಫೋಟೊಗಳನ್ನು ತೆಗೆಸಿಕೊಳ್ಳುವಷ್ಟು ಆತ್ಮೀಯತೆ ಹೇಗೆ ಬೆಳೆಯಿತು? ಆತ ಯಾರಿಗಾದರೂ ಈ ಫೋಟೋ ಬಳಸಿ ಬ್ಲ್ಯಾಕ್‌ ಮೇಲ್‌ ಮಾಡಿದ್ದಾನಾ? ಯಾರಿಗಾದರೂ ಕಳುಹಿಸಿದ್ದಾನಾ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಜತೆಗೆ ಆತನ ಸಂಪರ್ಕಗಳ ಮೇಲೂ ಕಣ್ಣಿಡಲಿದ್ದಾರೆ.

Continue Reading
Advertisement
peace accord between Manipur oldest armed group UNLF and Government
ದೇಶ9 mins ago

ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮಣಿಪುರದ ಹಳೆ ಬಂಡುಕೋರ ಗುಂಪು ಯುಎನ್ಎಲ್ಎಫ್!

Gauvarav Yatra
ದೇಶ24 mins ago

Indian Railways : ಭಾರತ ಗೌರವ ಯಾತ್ರಾ ರೈಲಿನಲ್ಲಿ ಕಲುಷಿತ ಆಹಾರ ಸೇವಿಸಿ 90 ಮಂದಿ ಅಸ್ವಸ್ಥ

Actress Ramya
ಕರ್ನಾಟಕ26 mins ago

Actress Ramya: ಹುಟ್ಟುಹಬ್ಬದಂದು ನಾಯಿಮರಿಗಳೊಂದಿಗೆ ಕಾಲಕಳೆದ ಮೋಹಕ ತಾರೆ ರಮ್ಯಾ

fight between Couple in air and Lufthansa flight was diverted to Delhi and Viral News
ದೇಶ37 mins ago

ಗಂಡ-ಹೆಂಡತಿ ಜಗಳ ವಿಮಾನ ಹತ್ತಿದ್ರೂ ಮುಗಿಲಿಲ್ಲ! ಆ ಮೇಲೆ ಏನಾಯ್ತು?

life certificate
ಉದ್ಯೋಗ50 mins ago

ಜೀವನ ಪ್ರಮಾಣ ಪತ್ರ ಇನ್ನೂ ಸಲ್ಲಿಸಿಲ್ಲವೇ? ನಾಳೆಯೇ ಕೊನೇ ದಿನ! ಇಲ್ದಿದ್ರೆ ಸಿಗಲ್ಲ ಪೆನ್ಶನ್

pain
ಆರೋಗ್ಯ1 hour ago

Home Remedies: ಚಳಿಗಾಲದಲ್ಲಿ ಪಾದ ನೋವೇ? ಇಲ್ಲಿದೆ ಮನೆಮದ್ದು

BPO Employee Bangalore Nude Photos
ಕರ್ನಾಟಕ1 hour ago

ಬಾಯ್‌ಫ್ರೆಂಡ್‌ ಮೊಬೈಲ್‌ ತೆರೆದಾಗ ಅವಳಿಗೆ ಕಂಡಿದ್ದು 13000 ಹುಡುಗಿಯರ ನಗ್ನಲೋಕ!

Finger Ring
ಫ್ಯಾಷನ್1 hour ago

Cocktail finger ring : ಬ್ರೈಡಲ್‌ ಜ್ಯುವೆಲರಿ ಫ್ಯಾಷನ್‌ನಲ್ಲಿ ಎಥ್ನಿಕ್‌ ಕಾಕ್‌ಟೈಲ್‌ ಉಂಗುರಗಳ ಕಲರವ

siri bbk
ಕಿರುತೆರೆ2 hours ago

BBK SEASON 10: ಸ್ಪರ್ಧಿಗಳ ಕಾಲಿಗೆ ಹಗ್ಗ; ಕಣ್ಣೀರಿಟ್ಟ ಸಿರಿ

Mandya Ramesh
ಕಿರುತೆರೆ2 hours ago

Mandya Ramesh: ಶೂಟಿಂಗ್ ವೇಳೆ ಮಂಡ್ಯ ರಮೇಶ್‌ಗೆ ಗಾಯ; ಆಸ್ಪತ್ರೆಗೆ ದಾಖಲು

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ15 hours ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ2 days ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ2 days ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ3 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ3 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

ಟ್ರೆಂಡಿಂಗ್‌