Narendra Modi: ವಯನಾಡಿನಲ್ಲಿ ಭೂಕುಸಿತದ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಮೋದಿ; ದುರಂತದ ಭೀಕರತೆ ಕೇಳಿ ಭಾವುಕ - Vistara News

ಪ್ರಮುಖ ಸುದ್ದಿ

Narendra Modi: ವಯನಾಡಿನಲ್ಲಿ ಭೂಕುಸಿತದ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಮೋದಿ; ದುರಂತದ ಭೀಕರತೆ ಕೇಳಿ ಭಾವುಕ

Narendra Modi: ಭೂಕುಸಿತದಿಂದ ತತ್ತರಿಸಿರುವ ಕೇರಳದ ವಯನಾಡಿಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ವೈಮಾನಿಕ ಸಮೀಕ್ಷೆ ನಡೆಸಿದರು. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಭೂಕುಸಿತದಿಂದ ಹಾನಿಗೊಳಗಾದ ಚುರಲ್‌ಮಲ, ಮುಂಡಕೈ ಮತ್ತು ಪುಂಚಿರಿಮಟ್ಟಂ ಗ್ರಾಮಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ದುರಂತದ ತೀವ್ರತೆ ಬಗ್ಗೆ ಮನವರಿಕೆ ಮಾಡಿದ್ದಾರೆ.

VISTARANEWS.COM


on

Narendra Modi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತಿರುವನಂತಪುರಂ: ಕೇರಳದ ವಯನಾಡು ಭೂಕುಸಿತವು (Wayand Landslide) ದೇಶಾದ್ಯಂತ ಬೆಚ್ಚಿಬೀಳಿಸಿದೆ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಯನಾಡಿನಲ್ಲಿ ಭೂಕುಸಿತದ ತೀವ್ರತೆ ಕುರಿತು ವೈಮಾನಿಕ ಸಮೀಕ್ಷೆ ನಡೆಸಿದರು. ಅಷ್ಟೇ ಅಲ್ಲ, ನಿರಾಶ್ರಿತರ ಕೇಂದ್ರಗಳಿಗೆ ಭೇಟಿ ನೀಡಿದ ಅವರು ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ನಿರಾಶ್ರಿತರ ಕೇಂದ್ರದಲ್ಲಿರುವ ಮಹಿಳೆಯರು, ಮಕ್ಕಳು ಸೇರಿ ಎಲ್ಲರೊಂದಿಗೂ ಮಾತನಾಡಿದ ಅವರು ಸಾಂತ್ವನ ಹೇಳಿದರು.

ಇದಕ್ಕೂ ಮೊದಲು ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನರೇಂದ್ರ ಮೋದಿ ಅವರನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಬಳಿಕ ಮೋದಿ ಹೆಲಿಕಾಪ್ಟರ್ ಮೂಲಕ ವಯನಾಡಿಗೆ ಪ್ರಯಾಣ ಬೆಳೆಸಿದರು.‌ ಮೋದಿ ಅವರೊಂದಿಗೆ ಆರಿಫ್ ಮೊಹಮ್ಮದ್ ಖಾನ್, ಪಿಣರಾಯಿ ವಿಜಯನ್ ಮತು ಕೇಂದ್ರ ಸಚಿವ ಸುರೇಶ್‌ ಗೋಪಿ ಕೂಡ ತೆರಳಿದರು. ಭೂಕುಸಿತದಿಂದ ನೂರಾರು ಜನರು ಸಾವನ್ನಪ್ಪಿದ ವಯನಾಡಿನಲ್ಲಿ ವೈಮಾನಿಕ ಸಮೀಕ್ಷೆಯನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ ದುರಂತದ ಬಗ್ಗೆ ಮಾಹಿತಿ ಪಡೆದುಕೊಂಡರು.

ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಭೂಕುಸಿತದಿಂದ ಹಾನಿಗೊಳಗಾದ ಚುರಲ್‌ಮಲ, ಮುಂಡಕೈ ಮತ್ತು ಪುಂಚಿರಿಮಟ್ಟಂ ಗ್ರಾಮಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ದುರಂತದ ತೀವ್ರತೆ ಬಗ್ಗೆ ಮನವರಿಕೆ ಮಾಡಿದರು. ದುರಂತ ಪೀಡಿತ ಸ್ಥಳದಲ್ಲಿ ಬೀಡು ಬಿಟ್ಟಿರುವ ರಕ್ಷಣಾ ತಂಡಗಳಿಂದ ಮಾಹಿತಿ ಪಡೆದ ಮೋದಿ ನಿರಾಶ್ರಿತರ ಶಿಬಿರ, ಗಾಯಗೊಂಡರವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೂ ಭೇಟಿ ನೀಡಿದರು. ಈ ಪ್ರದೇಶದಲ್ಲಿನ ಪುನರ್ವಸತಿ ಪ್ರಯತ್ನಗಳ ಮೇಲ್ವಿಚಾರಣೆ ನಡೆಸುವ ನಿರೀಕ್ಷೆಯಿದೆ.

ಜುಲೈ 30ರಂದು ವಯನಾಡಿನ ಮೆಪ್ಪಾಡಿ ಪ್ರದೇಶದ ಮುಂಡಕೈಯಲ್ಲಿ ಭೂಕುಸಿತ ಸಂಭವಿಸಿ ಅಪಾರ ಜೀವ ಹಾನಿ ಮತ್ತು ವ್ಯಾಪಕ ನಾಶನಷ್ಟಕ್ಕೆ ಉಂಟಾಗಿದೆ. ದುರಂತದಲ್ಲಿ ಮೃತರ ಸಂಖ್ಯೆ 400 ದಾಟಿದೆ. ಕೇರಳದಲ್ಲಿ ನಡೆದ ಅತೀ ಭೀಕರ ದುರಂತಗಳಲ್ಲಿ ಇದೂ ಒಂದು ಎನಿಸಿಕೊಂಡಿದೆ. ಸತತ 10 ದಿನಗಳವರೆಗೆ ನಡೆದ ರಕ್ಷಣಾ ಕಾರ್ಯಾಚರಣೆಯು ಅಂತ್ಯವಾಗಿದೆ.

ಇದನ್ನೂ ಓದಿ: Narendra Modi: ಮೋದಿ ಪ್ರೊಫೈಲ್‌ ಫೋಟೊ ಈಗ ತಿರಂಗಾ; ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಜನರಿಗೆ ಕರೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Narendra Modi: ಮಕ್ಕಳು, ಸ್ತ್ರೀಯರು ಸೇರಿ ವಯನಾಡು ಸಂತ್ರಸ್ತರನ್ನು ಸಂತೈಸಿದ ಮೋದಿ; Photos ಇಲ್ಲಿವೆ

Narendra Modi: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕೇರಳದ ವಯನಾಡಿಗೆ ಭೇಟಿ ನೀಡಿದ್ದು, ಭೂಕುಸಿತದ ಸ್ಥಳಗಳ ಪರಿಶೀಲನೆ ಜತೆಗೆ ಕಾಳಜಿ ಕೇಂದ್ರಗಳಿಗೆ ತೆರಳಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ. ಮೋದಿ ಅವರು ವಯನಾಡಿಗೆ ಭೇಟಿ ನೀಡಿದ ಫೋಟೊಗಳು ಇಲ್ಲಿವೆ.

VISTARANEWS.COM


on

Narendra Modi
Koo

ವಯನಾಡು: ಕೆಲ ದಿನಗಳ ಹಿಂದಷ್ಟೇ ಕೇರಳದ ವಯನಾಡಿನಲ್ಲಿ ಭಾರಿ ಮಳೆಯಿಂದ ಭೂಕುಸಿತ ಉಂಟಾಗಿ 400ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಊರಿಗೂರೇ ಕೊಚ್ಚಿಕೊಂಡು ಹೋಗಿವೆ. ಈಗಲೂ ಸಾವಿರಾರು ನಿರಾಶ್ರಿತರು ಕಾಳಜಿ ಕೇಂದ್ರಗಳಲ್ಲಿಯೇ ಆಶ್ರಯ ಪಡೆದಿದ್ದಾರೆ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ (ಆಗಸ್ಟ್‌ 10) ವಯನಾಡಿಗೆ ಭೇಟಿ ನೀಡಿದ್ದು, ವೈಮಾನಿಕ ಸಮೀಕ್ಷೆ, ಭೂಕುಸಿತದ (Wayanad Landslide) ಸ್ಥಳಗಳನ್ನು ಪರಿಶೀಲನೆ ಮಾಡುವ ಜತೆಗೆ ಕಾಳಜಿ ಕೇಂದ್ರಗಳಿಗೆ ತೆರಳಿ ಮಹಿಳೆಯರು, ಮಕ್ಕಳು ಸೇರಿ ಎಲ್ಲರಿಗೂ ಸಾಂತ್ವನ ಹೇಳಿದ್ದಾರೆ. ಮೋದಿ ಕೇರಳ ಭೇಟಿಯ ಫೋಟೊಗಳು ಇಲ್ಲಿವೆ.

ಇದನ್ನೂ ಓದಿ: Narendra Modi: ವಯನಾಡಿನಲ್ಲಿ ಭೂಕುಸಿತದ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಮೋದಿ; ದುರಂತದ ಭೀಕರತೆ ಕೇಳಿ ಭಾವುಕ

Continue Reading

ಪ್ರಮುಖ ಸುದ್ದಿ

Smriti Mandhana : ವಿರಾಟ್​ ಕೊಹ್ಲಿ ಜತೆ ನನ್ನನ್ನು ಹೋಲಿಕೆ ಮಾಡಬೇಡಿ; ಸ್ಮೃತಿ ಮಂದಾನ ಮನವಿ

Smriti Mandhana : ಮಂದಾನ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಕ್ರಮವಾಗಿ ಮಹಿಳಾ ಪ್ರೀಮಿಯರ್ ಲೀಗ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಾರೆ. ಅವರಿಬ್ಬರ ಅದೇ ಜರ್ಸಿ ಸಂಖ್ಯೆ 18 . ಅನೇಕ ಅಭಿಮಾನಿಗಳು ಮತ್ತು ತಜ್ಞರು ಸ್ಮೃತಿಯನ್ನು ಕೊಹ್ಲಿಗೆ ಹೋಲಿಕೆ ಮಾಡುತ್ತಲೇ ಇದ್ದಾರೆ. ಅವರಿಬ್ಬರೂ ಒಂದೇ ರೀತಿಯ ವರ್ತನೆ ಮತ್ತು ಶೈಲಿಯನ್ನೂ ಹೊಂದಿದ್ದಾರೆ. ಆಟದ ಬಗ್ಗೆ ಭಾವೋದ್ರಿಕ್ತರಾಗುತ್ತಾರೆ.

VISTARANEWS.COM


on

Smriti Mandhana
Koo

ನವದೆಹಲಿ: ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಜತೆ ತನ್ನನ್ನು ಹೋಲಿಕೆ ಮಾಡಬಾರದಾಗಿ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂದಾನ (Smriti Mandhana) ಮನವಿ ಮಾಡಿದ್ದಾರೆ. ತಾವು ಧರಿಸುವ ನಂ.18 ಜರ್ಸಿಯ ಆಧಾರದ ಮೇಲೆ ಜನರು ಅವಳನ್ನು ಅವನೊಂದಿಗೆ ಹೋಲಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಮೃತಿ ಮಂದಾನ ಅವರನ್ನು ಭಾರತೀಯ ಕ್ರಿಕೆಟ್​ನ ರಾಣಿ ಎಂದು ಕರೆಯಲಾಗುತ್ತದೆ. ಏಕೆಂದರೆ ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ಅತ್ಯುತ್ತಮ ಬ್ಯಾಟರ್​ಗಳಲ್ಲಿ ಒಬ್ಬರು.

ವಿರಾಟ್ ಕೊಹ್ಲಿ ಅವರು ಕ್ರಿಕೆಟ್​ನ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರಾಗಿರುವುದರಿಂದ ಅವರಿಗೆ ಯಾವುದೇ ಹೋಲಿಕೆ ಇಲ್ಲ. ಸಚಿನ್ ತೆಂಡೂಲ್ಕರ್ ಮತ್ತು ವಿವಿಯನ್ ರಿಚರ್ಡ್ಸ್ ಅವರಂತೆಯೇ ಅವರು ಪ್ರತ್ಯೇಕ ಕ್ರಿಕೆಟ್ ಅಧ್ಯಾಯ ಹೊಂದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ್ದಾರೆ.

ಮಂದಾನ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಕ್ರಮವಾಗಿ ಮಹಿಳಾ ಪ್ರೀಮಿಯರ್ ಲೀಗ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಾರೆ. ಅವರಿಬ್ಬರ ಅದೇ ಜರ್ಸಿ ಸಂಖ್ಯೆ 18 . ಅನೇಕ ಅಭಿಮಾನಿಗಳು ಮತ್ತು ತಜ್ಞರು ಸ್ಮೃತಿಯನ್ನು ಕೊಹ್ಲಿಗೆ ಹೋಲಿಕೆ ಮಾಡುತ್ತಲೇ ಇದ್ದಾರೆ. ಅವರಿಬ್ಬರೂ ಒಂದೇ ರೀತಿಯ ವರ್ತನೆ ಮತ್ತು ಶೈಲಿಯನ್ನೂ ಹೊಂದಿದ್ದಾರೆ. ಆಟದ ಬಗ್ಗೆ ಭಾವೋದ್ರಿಕ್ತರಾಗುತ್ತಾರೆ.

ಸ್ಮೃತಿ ಮಂದಾನ ಅವರು ಹೋಲಿಕೆಗಳನ್ನು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿಯನ್ನು ಶ್ರೇಷ್ಠ ಆಟಗಾರ ಎಂದು ಕರೆದ ಅವರು, ಅವರು ಸಾಕಷ್ಟು ಸಾಧನೆ ಮಾಡಿರುವುದರಿಂದ ಜನರು ನನ್ನನ್ನು ಕೊಹ್ಲಿ ಎಂದು ಕರೆಯುವುದು ಆಧಾರರಹಿತ ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಒಬ್ಬ ಶ್ರೇಷ್ಠ ಆಟಗಾರ. ಅವರು ತಮ್ಮ ವೃತ್ತಿಜೀವನದಲ್ಲಿ ಭಾರತೀಯ ಕ್ರಿಕೆಟ್​ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿದ್ದಾರೆ. ನಾನು ಹೋಲಿಕೆಗಳನ್ನು ಇಷ್ಟಪಡುವುದಿಲ್ಲ, ನಾನು ನಂ.18 ಜರ್ಸಿ ಧರಿಸಿದ್ದೇನೆ ಎಂಬ ಕಾರಣಕ್ಕೆ ಅವನನ್ನು ನನ್ನೊಂದಿಗೆ ಹೋಲಿಸಬೇಡಿ ಎಂದು ಮಂದಾನ ತಮ್ಮ ಹೇಳಿಕೆಯನ್ನು ಪುನರಾವರ್ತಿಸಿದ್ದಾರೆ.

2024ರ ಟಿ20 ವಿಶ್ವಕಪ್​ಲ್ಲಿ ಕಣಕ್ಕಿಳಿಯಲಿದ್ದಾರೆ ಸ್ಮೃತಿ

ಕಳೆದ ಕೆಲವು ತಿಂಗಳುಗಳಿಂದ ಸ್ಮೃತಿ ಮಂದಾನ ಉತ್ತಮ ಫಾರ್ಮ್​ನಲ್ಲಿದ್ದಾರೆ. ಬ್ಯಾಟರ್​ ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ತಂಡಕ್ಕಾಗಿ ನಿರಂತರ ರನ್​ಗಳನ್ನು ಗಳಿಸುತ್ತಿದ್ದಾರೆ. ವೈಟ್-ಬಾಲ್ ಮತ್ತು ರೆಡ್-ಬಾಲ್ ಕ್ರಿಕೆಟ್​​ನಲ್ಲಿ ತಂಡದ ಪ್ರಾಬಲ್ಯಕ್ಕೆ ಅವರೂ ಕಾರಣ.

ಸ್ಮೃತಿ ಮಂದಾನ 2024ರ ಟಿ20 ವಿಶ್ವಕಪ್​​ನಲ್ಲಿ ಆಡಲಿದ್ದಾರೆ. ಬ್ಯಾಟ್ಸ್ಮನ್ ಪಂದ್ಯಾವಳಿಯಲ್ಲಿ ಬ್ಯಾಟಿಂಗ್​ ಫಾರ್ಮ್ ಮುಂದುವರಿಸಲು ಉತ್ಸುಕರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅವರು ಮಾಡುತ್ತಿರುವ ಪ್ರದರ್ಶನವನ್ನು ಮುಂದುವರಿಸಿದರೆ, ಭಾರತವು ಪ್ರಶಸ್ತಿ ಗೆಲ್ಲಬಹುದು.

ಇದನ್ನೂ ಓದಿ: Saina Nehwal : ನನ್ನ ಸ್ಮ್ಯಾಶ್​ ತಡೆಯಲು ಬುಮ್ರಾಗೆ ಸಾಧ್ಯವಿಲ್ಲ; ಕ್ರಿಕೆಟ್​ಗೆ ಹೆಚ್ಚು ಆದ್ಯತೆ ಬಗ್ಗೆ ತಕರಾರು ಎತ್ತಿದ ಸೈನಾ ನೆಹ್ವಾಲ್​

ಅಕ್ಟೋಬರ್ 3 ರಿಂದ 20 ರವರೆಗೆ ಏಷ್ಯನ್ ಕೌಂಟಿಯಲ್ಲಿ ಪಂದ್ಯಾವಳಿ ನಡೆಯಲಿದೆ. 2024ರ ಟಿ20 ವಿಶ್ವಕಪ್ ಟೂರ್ನಿಯು 18 ದಿನಗಳ ಕಾಲ ನಡೆಯಲಿದ್ದು, 10 ತಂಡಗಳು ಬಾಂಗ್ಲಾದೇಶದ ಎರಡು ಸ್ಥಳಗಳಲ್ಲಿ 23 ಪಂದ್ಯಗಳನ್ನು ಆಡಲಿವೆ.

Continue Reading

ಸಿನಿಮಾ

Tharun Sudhir: ತರುಣ್ ಸುಧೀರ್-ಸೋನಲ್ ಮದುವೆ ಸಂಭ್ರಮ; ರಿಸೆಪ್ಶನ್‌ ಲೈವ್‌ ವಿಡಿಯೊ ಇಲ್ಲಿದೆ ನೋಡಿ

Tharun Sudhir: ಸೋನಲ್ ಅವರು ಮಂಗಳೂರಿನವರು. ಅವರು ಮೊದಲು ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಆನ್​ಲೈನ್​ನಲ್ಲಿ ಇರುವ ಮಾಹಿತಿ ಪ್ರಕಾರ ಅವರು ಜನಿಸಿದ್ದು 1995ರ ಆಗಸ್ಟ್ 11ರಂದು. ಕೆಲವೇ ದಿನಗಳಲ್ಲಿ 29 ವರ್ಷ ತುಂಬಲಿದೆ. ತರುಣ್ ಸುಧೀರ್ ಅವರಿಗೆ 41 ವರ್ಷ ಎನ್ನಲಾಗಿದೆ. ಈಗ ಅವರು ಜನಿಸಿದ್ದು 1983ರಲ್ಲಿ. ಅಂದರೆ, ಇಬ್ಬರ ಮಧ್ಯೆ ಸುಮರು 12 ವರ್ಷಗಳ ಅಂತರ ಇದೆ.

VISTARANEWS.COM


on

Tharun Sudhir
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ನಿರ್ದೇಶಕ ತರುಣ್‌ ಸುಧೀರ್‌ (Tharun Sudhir) ಹಾಗೂ ಸೋನಲ್‌ ಮೊಂಥೆರೋ (Sonal Monteiro) ಅವರ ಮೆಹಂದಿ ಶಾಸ್ತ್ರವು ಅದ್ಧೂರಿಯಾಗಿ ನೆರವೇರಿದ್ದು, ಶನಿವಾರ (ಆಗಸ್ಟ್‌ 10) ಸಂಜೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ರಿಸೆಪ್ಶನ್‌ ನಡೆಯುತ್ತಿದೆ. ಶನಿವಾರ ಆರತಕ್ಷತೆ ನಡೆದರೆ, ಭಾನುವಾರ ಅದ್ಧೂರಿಯಾಗಿ ತಾರಾ ಜೋಡಿಯು ದಾಂಪತ್ಯ ಜೀವನಕ್ಕೆ ಕಾಲಿಡಲಿದೆ. ಇನ್ನು ತರುಣ್‌ ಸುಧೀರ್‌ ಅವರ ರಿಸೆಪ್ಶನ್‌ಗೆ ಸ್ಯಾಂಡಲ್‌ವುಡ್‌ನ ಹಲವು ಗಣ್ಯರು ಆಗಮಿಸುತ್ತಿದ್ದಾರೆ. ಅವರ ರಿಸೆಪ್ಶನ್‌ ಲೈವ್‌ ವಿಡಿಯೊವನ್ನು ಇಲ್ಲಿ ವೀಕ್ಷಿಸಿ.

ಗಣ್ಯರಿಗೆ ಆಹ್ವಾನ

ಕಿಚ್ಚ ಸುದೀಪ್ ಸೇರಿ ಹಲವು ನಟ, ನಟಿಯರು, ನಿರ್ದೆಶಕರನ್ನು ಭೇಟಿಯಾಗಿ ತರುಣ್ ಸುಧೀರ್​ ಅವರು ಮದುವೆಯ ಆಮಂತ್ರಣ ನೀಡಿದ್ದಾರೆ. ರಚಿತಾ ರಾಮ್​, ಉಪೇಂದ್ರ, ರಾಘವೇಂದ್ರ ರಾಜ್​ಕುಮಾರ್​ ಅವರಿಗೂ ತರುಣ್​ ಸುಧೀರ್​ ಆಹ್ವಾನ ನೀಡಿದ್ದಾರೆ. ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರನ್ನು ತರುಣ್​ ಸುಧೀರ್​ ಅವರು ಮದುವೆಗೆ ಆಹ್ವಾನಿಸಿದರು.

ಶಿವರಾಜ್​ಕುಮಾರ್​, ಗೀತಾ ದಂಪತಿಯನ್ನು ಭೇಟಿಯಾಗಿ ತರುಣ್​ ಆಹ್ವಾನ ಪತ್ರಿಕೆ ನೀಡಿದ್ದಾರೆ.ರಾಜಕೀಯ ಕ್ಷೇತ್ರದಲ್ಲೂ ಅನೇಕರ ಜೊತೆ ತರುಣ್​ ಸುಧೀರ್​ ಅವರು ಆತ್ಮೀಯತೆ ಹೊಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಸೇರಿದಂತೆ ಅನೇಕರು ಈ ಮದುವೆಗೆ ಬರುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರುಣ್​ ಸುಧೀರ್​ ಅವರು ಆಹ್ವಾನಿಸಿ ಬಂದಿದ್ದಾರೆ.

ತರುಣ್ ನೀಡುತ್ತಿರುವ ಈ ಇನ್ವಿಟೇಷನ್ ನಲ್ಲಿ ಮದುವೆ ಪತ್ರಿಕೆ, ಒಂದು ಖಾಲಿ ಪುಸ್ತಕ ಅದರಲ್ಲಿ ಬರೆಯೋದಕ್ಕೆ ಎರಡು ಪೆನ್ಸಿಲ್ ಹಾಗೂ ಎರಡು ಪೆನ್ ಮತ್ತು ಒಂದು ಸೀಡ್ ಬಾಲ್ ಇವೆ. ವಿಶೇಷ ಅಂದರೆ ಮದುವೆ ಮುಗಿದ ನಂತರ ಪತ್ರಿಕೆ ಏನ್ ಮಾಡೋದು ಅಂತ ಯೋಚನೆ ಮಾಡೋ ಹಾಗಿಲ್ಲ, ಯಾಕಂದ್ರೆ ಸೋನಾಲ್ ಮತ್ತು ತರುಣ್ ಮದ್ವೆ ನಂತರ ಪತ್ರಿಕಯನ್ನ ಒಂದು ಮಣ್ಣಿನ ಪಾಟ್‌ನಲ್ಲಿ ಹಾಕಿದ್ದರೆ ಅದು ಮಣ್ಣಿನಲ್ಲಿ ಬೆರೆದು ಗಿಡ ಬೆಳೆಯುತ್ತೆ. ಅದಷ್ಟೇ ಅಲ್ಲ ಖಾಲಿ ಪುಸ್ತಕದಲ್ಲಿ ಬರೆದು ಹಾಳೆ ಖಾಲಿ ಆದ ನಂತರ ಅದು ಮಣ್ಣು ಸೇರಿದ್ದರೆ ಅದ್ರಿಂದಲೂ ಹೂವಿನ ಗಿಡ ಬೆಳೆಯುತ್ತೆ. ಇನ್ನು ಪೆನ್ ಮತ್ತು ಪೆನ್ಸಿಲ್ ಬೆರೆದು ಖಾಲಿ ಆದ್ರೆ ಅದನ್ನು ಮಣ್ಣಿಗೆ ಹಾಕಿದ್ರೆ ಚಂದದ ಹೂವಿನ ಹಾಗೂ ತರಕಾರಿ ಗಿಡ ಬೆಳೆಯುತ್ತೆ. ಹೀಗೆ ತಮ್ಮ ವಿವಾಹದ ಆಹ್ವಾನ ಪತ್ರಿಕೆ ಸಖತ್ ಸ್ಪೆಷಲ್ ಮತ್ತು ಪರಿಸರ ಸ್ನೇಹಿ ಆಗಿರಲಿ ಎಂದು ತರುಣ್ ಈ ರೀತಿ ಪ್ಲಾನ್ ಮಾಡಿದ್ದಾರೆ.

ಇದನ್ನೂ ಓದಿ: Tharun Sudhir: ಸೋನಾಲ್‌  ಬ್ಯಾಚುಲರ್ ಪಾರ್ಟಿ ಬಲು ಜೋರು!  ಕೈ ಹಿಡಿಯೋ ಸುಂದರಿಯನ್ನು ಮುದ್ದಾಗಿ ತರುಣ್ ಹೇಗೆ ಕರೆಯುತ್ತಾರೆ?

Continue Reading

ಪ್ರಮುಖ ಸುದ್ದಿ

BJP-JDS Padayatra: ನಿಮ್ಮನ್ನು ಮನೆಗೆ ಕಳುಹಿಸುವವರೆಗೂ ಹೋರಾಟ ನಿಲ್ಲಲ್ಲ: ಸಿಎಂ, ಡಿಸಿಎಂ ವಿರುದ್ಧ ಬಿಎಸ್‌ವೈ ಗುಡುಗು

BJP-JDS Padayatra: ಭ್ರಷ್ಟ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯನ್ನು ಕ್ಷಮಿಸಲು ಸಾಧ್ಯವಿಲ್ಲ. ಐತಿಹಾಸಿಕ ಪಾದಯಾತ್ರೆ ನಡೆದಿದೆ, ನನಗೆ ಕೈಕಾಲು ಗಟ್ಟಿ ಇದೆ. ನಿಮ್ಮನ್ನು ಮನೆಗೆ ಕಳುಹಿಸುವವರೆಗೂ ಹೋರಾಟ ಮಾಡ್ತೀನಿ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಮೈಸೂರು ಚಲೋ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ್ದಾರೆ.

VISTARANEWS.COM


on

Koo

ಮೈಸೂರು: ನನ್ನನ್ನು ರಾಜಕೀಯದಿಂದ ನಿವೃತ್ತಿ ಆಗಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ, ನಾನು ಬದುಕಿರುವವರೆಗೂ ಸಕ್ರಿಯವಾಗಿರುತ್ತೇನೆ. ನಿಮ್ಮ ಆಡಳಿತದಿಂದ ಜನ ಬೇಸರ ಗೊಂಡಿದ್ದಾರೆ. ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ನಿಮ್ಮ ಸರ್ಕಾರ ದಿವಾಳಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ (BJP-JDS Padayatra) ಕಿಡಿಕಾರಿದರು.

ನಗರದಲ್ಲಿ ಆಯೋಜಿಸಿದ್ದ ಬಿಜೆಪಿ-ಜೆಡಿಎಸ್‌ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಕಲ್ಲುಬಂಡೆ ಅಂತ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಏಯ್ ವಿಜಯೇಂದ್ರ ಅಂತ ಮಾತನಾಡುತ್ತೀರಾ? ಒಬ್ಬ ರಾಜ್ಯಾಧ್ಯಕ್ಷನಿಗೆ ಕೊಡುವ ಮರ್ಯಾದೆ ಇದೇನಾ? ನಿಮ್ಮ ಯೋಗ್ಯತೆಗೆ ಒಂದು ಅಭಿವೃದ್ಧಿ ಕೆಲಸ ತೋರಿಸಿ ಎಂದು ಸವಾಲು ಹಾಕಿದರು.

ಮುಡಾದಿಂದ 14 ನಿವೇಶನ ಹೇಗೆ ತೆಗೆದುಕೊಂಡಿದ್ದೀರಿ? ಪರಿಹಾರ ಕೊಟ್ಟರೆ ವಾಪಸು ಕೊಡುತ್ತೀನಿ ಎಂದು ಹೇಳುತ್ತಾರೆ. ಅದು ಹೇಗೆ ತಗೊಂಡಿದ್ದಿರಿ, ಯಾರಪ್ಪನ ದುಡ್ಡು ಪರಿಹಾರ ಕೊಡಕ್ಕೆ. ನಿಮ್ಮ ಮೈಯೆಲ್ಲಾ ಕಪ್ಪು ಚುಕ್ಕೆ ಇವೆ. ನಿಮ್ಮ ಪಾಪದ ಕೊಡ ತುಂಬಿದೆ, ತಾಕತ್ ಇದ್ದರೆ ವಿಧಾನ ಸಭೆ ವಿಸರ್ಜನೆ ಮಾಡಿ ಬನ್ನಿ. ಸೂರ್ಯಚಂದ್ರರಷ್ಟೇ ಸತ್ಯ ಮೈತ್ರಿ ಪಕ್ಷಗಳು 140-150 ಗೆಲ್ಲೋದು ನಿಶ್ಚಿತ ಎಂದು ಹೇಳಿದರು.

ಭ್ರಷ್ಟ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯನ್ನು ಕ್ಷಮಿಸಲು ಸಾಧ್ಯವಿಲ್ಲ. ಐತಿಹಾಸಿಕ ಪಾದಯಾತ್ರೆ ನಡೆದಿದೆ, ನನಗೆ ಕೈಕಾಲು ಗಟ್ಟಿ ಇದೆ. ನಿಮ್ಮನ್ನು ಮನೆಗೆ ಕಳುಹಿಸುವವರೆಗೂ ಹೋರಾಟ ಮಾಡ್ತೀನಿ ಎಂದ ಅವರು, ನನಗೆ ಈಗ 82 ವರ್ಷ, ಆದರೂ ಚಿಂತೆ ಇಲ್ಲ. ಬಿಜೆಪಿ, ಜೆಡಿಎಸ್ ಒಂದಾಗಿ ನಿಮ್ಮನ್ನು ಮನೆಗೆ ಕಳುಹಿಸುವುದು ನಿಶ್ಚಿತ. ಮೋದಿ ಅವರನ್ನು ಪ್ರಪಂಚವೇ ಸ್ವೀಕರಿಸಿದೆ, ಅವರ ಬಗ್ಗೆ ಒಳ್ಳೆಯ ಮಾತನಾಡುತ್ತಿದ್ದಾರೆ. ನೀವು ಅವರನ್ನು ಟೀಕೆ ಮಾಡ್ತೀರಾ ಎಂದು ಪ್ರಶ್ನಿಸಿದರು.

ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡ್ತೀರಾ? ಕರ್ನಾಟಕ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.

ಇದನ್ನೂ ಓದಿ | Bangladesh Unrest: ಬಾಂಗ್ಲಾದೇಶದ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ; ಹಿಂದು ಕಾರ್ಯಕರ್ತರು ವಶಕ್ಕೆ

ಆರೋಪಗಳ ವಿರುದ್ಧ ರಾಜಕೀಯ, ಕಾನೂನು ಹೋರಾಟಕ್ಕೆ ಸಿದ್ಧ: ಸಿಎಂ ಸಿದ್ದರಾಮಯ್ಯ

CM Siddaramaiah
ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ರಾಜಕೀಯ ಲಾಭಕ್ಕಾಗಿ ಬಿಜೆಪಿ- ಜೆಡಿಎಸ್ ನವರು ಮಾಡುತ್ತಿರುವ ಸುಳ್ಳು ಆರೋಪಗಳಿಗೆ ನಾನು ಹೆದರುವುದಿಲ್ಲ ಹಾಗೂ ಈ ಆರೋಪಗಳ ವಿರುದ್ಧ ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಡಲು ಸಿದ್ದವಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ಬಿಜೆಪಿ ಹಾಗೂ ಜೆಡಿಎಸ್‌ ಆರೋಪಗಳ ಬಗ್ಗೆ ಸರ್ಕಾರದ ಮುಂದಿನ ನಡೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್ ಹಾಗೂ ಬಿಜೆಪಿಯ ಪಾದಯಾತ್ರೆಗೆ ಪ್ರತ್ಯುತ್ತರವಾಗಿ ಕಾಂಗ್ರೆಸ್ ಬೃಹತ್ ಜನಾಂದೋಲನವನ್ನು ಮಾಡಿದೆ. ಬಿಜೆಪಿ ಹಾಗೂ ಜೆಡಿಎಸ್ ನವರು ಸುಳ್ಳು ಆರೋಪಗಳನ್ನು ಆಧರಿಸಿ ಮಾಡುತ್ತಿರುವ ಪಾದಯಾತ್ರೆ ಮಾಡುತ್ತಿದ್ದು, ನನಗೆ ಕಪ್ಪು ಬಳಿಯಲು ಪ್ರಯತ್ನಿಸುತ್ತಿದ್ದಾರೆ. ಅವರ ಆರೋಪಗಳು ಸುಳ್ಳು ಎಂದು ಜನರಿಗೆ ಮನವರಿಕೆ ಮಾಡಲು ಜನಾಂದೋಲನ ಮಾಡಲಾಗಿದೆ ಎಂದರು.

ರಾಜಕೀಯವಾಗಿ ಮಣಿಸಲು ಬಿಜೆಪಿ ಜೆಡಿಎಸ್ ತಂತ್ರ

ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರವನ್ನು ಅಸ್ಥಿರಗೊಳಿಸಲು ಸಂಚು ಹೂಡಿದ್ದಾರೆ. ಸುಳ್ಳು ಆರೋಪಗಳಿಂದ ನನ್ನ ಮೇಲೆ ಕಪ್ಪು ಬಳಿದರೆ, ರಾಜಕೀಯವಾಗಿ ನನ್ನನ್ನು ಮಣಿಸಿ ಲಾಭ ಪಡೆಯಬಹುದು ಎಂಬ ಭ್ರಮೆಯಲ್ಲಿದ್ದಾರೆ. ಬಿಜೆಪಿ ಜೆಡಿಎಸ್‌ನವರ ಹಗರಣಗಳು ಬೇಕಾದಷ್ಟಿದ್ದು, ಅವುಗಳನ್ನು ಬಯಲಿಗೆಳೆಯುತ್ತೇವೆ. ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಯಡಿಯೂರಪ್ಪ ಸೇರಿದಂತೆ ಹಲವರ ಮೇಲೆ ಇರುವ ಹಗರಣಗಳ ವಿರುದ್ಧ ತನಿಖೆ ಕೈಗೊಳ್ಳಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ | Hindenburg: ಶೀಘ್ರದಲ್ಲೇ ಭಾರತದಲ್ಲಿ ಬಹುದೊಡ್ಡ ಸಂಚಲನ ಸೃಷ್ಟಿಯಾಗಲಿದೆ; ಹೊಸದೊಂದು ಬಾಂಬ್‌ ಸಿಡಿಸಿದ ಹಿಂಡನ್‌ಬರ್ಗ್‌

ಸುಳ್ಳು ಆರೋಪಗಳ ವಿರುದ್ಧ ಹೋರಾಟ

ಮುಖ್ಯಮಂತ್ರಿಗಳು ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರಿಸುವುದಾಗಿ ಬಿಜೆಪಿ ಜೆಡಿಎಸ್ ನಾಯಕರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸುಳ್ಳು ಆರೋಪಗಳನ್ನಾಧರಿಸಿದ ಹೋರಾಟಗಳಿಗೆ ನಾನು ಹೆದರುವುದಿಲ್ಲ. ಬಿಜೆಪಿ-ಜೆಡಿಎಸ್‌ ಹೋರಾಟದ ಸತ್ಯಾಸತ್ಯತೆಗಳು ಜನರಿಗೆ ತಿಳಿದಾಗ , ಅವರೇ ಈ ಹೋರಾಟನ್ನು ಹತ್ತಿಕ್ಕುತ್ತಾರೆ. ಸರ್ಕಾರ ಹಾಗೂ ನನ್ನ ಮೇಲೆ ಬಂದಿರುವ ಆರೋಪಗಳನ್ನು ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಡುತ್ತೇವೆ ಎಂದು ತಿಳಿಸಿದರು.

Continue Reading
Advertisement
KCET Mock Allotment 2024 Engineering mock seat allotment announced
ಬೆಂಗಳೂರು15 mins ago

KCET Mock Allotment 2024: ಎಂಜಿನಿಯರಿಂಗ್ ಅಣಕು ಸೀಟು ಹಂಚಿಕೆ ಪ್ರಕಟ

Viral News
ವೈರಲ್ ನ್ಯೂಸ್21 mins ago

Viral News: 5 ಕೆಜಿ ಆಲೂಗಡ್ಡೆ ಲಂಚ ಕೇಳಿ ಅಮಾನತುಗೊಂಡ ಸಬ್‌ ಇನ್ಸ್‌ಪೆಕ್ಟರ್ !

CM Siddaramaiah
ಚಾಮರಾಜನಗರ39 mins ago

CM Siddaramaiah: ನಮಗೆ ಮನೇಲಿ ತಂಗಳು ಇರ್ತಿತ್ತು, ಇಡ್ಲಿ-ದೋಸೆ ಇರ್ತಿಲಿಲ್ಲ ಎಂದ ಸಿಎಂ

High Calcium Foods
ಆರೋಗ್ಯ44 mins ago

High Calcium Foods: ದೇಹಕ್ಕೆ ಮುಖ್ಯವಾದ ಅಧಿಕ ಕ್ಯಾಲ್ಶಿಯಂ ಆಹಾರಗಳನ್ನು ಪಡೆಯುವುದು ಹೇಗೆ?

Narendra Modi
ದೇಶ44 mins ago

Narendra Modi: ಮಕ್ಕಳು, ಸ್ತ್ರೀಯರು ಸೇರಿ ವಯನಾಡು ಸಂತ್ರಸ್ತರನ್ನು ಸಂತೈಸಿದ ಮೋದಿ; Photos ಇಲ್ಲಿವೆ

Smriti Mandhana
ಪ್ರಮುಖ ಸುದ್ದಿ45 mins ago

Smriti Mandhana : ವಿರಾಟ್​ ಕೊಹ್ಲಿ ಜತೆ ನನ್ನನ್ನು ಹೋಲಿಕೆ ಮಾಡಬೇಡಿ; ಸ್ಮೃತಿ ಮಂದಾನ ಮನವಿ

Tharun Sudhir
ಸಿನಿಮಾ50 mins ago

Tharun Sudhir: ತರುಣ್ ಸುಧೀರ್-ಸೋನಲ್ ಮದುವೆ ಸಂಭ್ರಮ; ರಿಸೆಪ್ಶನ್‌ ಲೈವ್‌ ವಿಡಿಯೊ ಇಲ್ಲಿದೆ ನೋಡಿ

ಪ್ರಮುಖ ಸುದ್ದಿ1 hour ago

BJP-JDS Padayatra: ನಿಮ್ಮನ್ನು ಮನೆಗೆ ಕಳುಹಿಸುವವರೆಗೂ ಹೋರಾಟ ನಿಲ್ಲಲ್ಲ: ಸಿಎಂ, ಡಿಸಿಎಂ ವಿರುದ್ಧ ಬಿಎಸ್‌ವೈ ಗುಡುಗು

Bengaluru Power Cut
ಕರ್ನಾಟಕ1 hour ago

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಆ.13ರಂದು ಕರೆಂಟ್‌ ಇರಲ್ಲ

Saina Nehwal
ಪ್ರಮುಖ ಸುದ್ದಿ1 hour ago

Saina Nehwal : ನನ್ನ ಸ್ಮ್ಯಾಶ್​ ತಡೆಯಲು ಬುಮ್ರಾಗೆ ಸಾಧ್ಯವಿಲ್ಲ; ಕ್ರಿಕೆಟ್​ಗೆ ಹೆಚ್ಚು ಆದ್ಯತೆ ಬಗ್ಗೆ ತಕರಾರು ಎತ್ತಿದ ಸೈನಾ ನೆಹ್ವಾಲ್​

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ6 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌