Navaratri 2022 | ಶರನ್ನವರಾತ್ರಿ, ಶ್ರೀನಿವಾಸದೇವರ ನವರಾತ್ರಿ; ಏನಿದು ಆಚರಣೆ? - Vistara News

ದಸರಾ ಸಂಭ್ರಮ

Navaratri 2022 | ಶರನ್ನವರಾತ್ರಿ, ಶ್ರೀನಿವಾಸದೇವರ ನವರಾತ್ರಿ; ಏನಿದು ಆಚರಣೆ?

ಇಂದಿನಿಂದ ನವರಾತ್ರಿ ಹಬ್ಬ( Navaratri 2022 ) ಆರಂಭಗೊಂಡಿದೆ. ಈ ಹಬ್ಬವನ್ನು ಶರನ್ನವರಾತ್ರಿ ಎಂದೂ ಕರೆಯುತ್ತಾರೆ. ಈ ಸಂದರ್ಭದಲ್ಲಿಯೇ ಶ್ರೀನಿವಾಸದೇವರ ನವರಾತ್ರಿಯನ್ನೂ ಆಚರಿಸಲಾಗುತ್ತದೆ. ಈ ಕುರಿತ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

Navaratri 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Navaratri 2022

ಮೇಧಾ ಪ್ರಹ್ಲಾದಾಚಾರ್ಯ ಜೋಶಿ
ಆಶ್ವಯುಜ ಮಾಸದ ನಿಯಾಮಕನು ಯಜ್ಞಾ-ಪದ್ಮನಾಭ. ಆಶ್ವಯುಜ ಅಥವಾ ಆಶ್ವಿಜಮಾಸದ ಶುಕ್ಲಪ್ರತಿಪತ್ ನಿಂದ ನವಮೀಯ ವರೆಗೂ ನವರಾತ್ರಿ (Navaratri 2022) ಉತ್ಸವವಿರುತ್ತದೆ. ಈ ನವರಾತ್ರಿಯ ಒಂದೋಂದು ದಿನವು ಒಂದೋಂದು ವಿಶೇಷ ಆಚರಣೆಗಳಿಂದ ಕೂಡಿದೆ. ಈ ಒಂಬತ್ತು ದಿನಗಳಲ್ಲಿ ವಿಶೇಷ ದೀಪಾರಾಧನೆ, ಘಟ್ಟಸ್ಥಾಪನೆ, ಶ್ರೀಶ್ರೀನಿವಾಸನ ಪೂಜೆ, ಶ್ರೀವೇದವ್ಯಾಸ ಹಾಗು ಸರಸ್ವತಿಪೂಜೆ, ದುರ್ಗಾಪೂಜೆ, ವೆಂಕಟೇಶಮಾಹಾತ್ಮ್ಯೆ ಪಾರಾಯಣ ಹಾಗೂ ಶ್ರವಣ, ನಿತ್ಯದಲ್ಲಿಯೂ ಸಚ್ಛಾಸ್ತ್ರದ ಪಾರಾಯಣ, ಬ್ರಾಹ್ಮಣಸುವಾಸಿನಿಯರಿಗೆ ಭೋಜನಾದಿಗಳನ್ನು ಮಾಡಿಸುವುದು ಹೀಗೆ ನವರಾತ್ರೋತ್ಸವದಲ್ಲಿ ಅನೇಕ ಪೂಜೆ ಆಚೆರಣೆಗಳನ್ನು ವಿಧಿಸಿದ್ದಾರೆ.

ನವದಿನಗಳು ಎಂದು ಕರೆಯುವ ಬದಲು “ನವರಾತ್ರಿ” (Navaratri 2022) ಎಂದೇ ಕರೆಯುವದಕ್ಕೆ ವಿಶೇಷಕಾರಣವಿದೆ. ಆಶ್ವಯುಜಮಾಸದ ಶರತ್ ಋತುವಿನ ಈ ವಿಶೇಷದಿನಗಳಲ್ಲಿ ರಾತ್ರಿಯ ಸ್ವಚ್ಛವಾತಾವರಣ ಹಾಗೂ ಚಂದ್ರಮನ ಚಂದ್ರಿಕೆಯು ವಿಶೇಷತೆಯನ್ನು ಪಡೆದಿದೆ.

ಈ ದಿನಗಳಲ್ಲಿ ದುಷ್ಟರ ನಾಶವನ್ನು ಮಾಡುವ ದುರ್ಗೆಯಪೂಜೆ ಇರುತ್ತದೆ. ಹಗಲಿಗಿಂತಲೂ ರಾತ್ರಿಯಲ್ಲಿ ದುಷ್ಟರಬಾಧೆ ಬಹಳ. ಅನ್ಯಾಯ ಅನಾಚಾರಗಳು ರಾತ್ರಿಯಲ್ಲಿಯೇ ಅಧಿಕವಾಗಿರುತ್ತವೆ. ಆದ್ದರಿಂದ ಇಂತಹ ಅನಾಚಾರಿಗಳಾದ ರಾಕ್ಷಸರಿಗೆ ನಕ್ತಂಚರರೆಂದೇ ಹೆಸರು. ರಾಕ್ಷಸರಿಗೆ ಬಲವು ರಾತ್ರಿಯಲ್ಲಿಯೇ ಅಧಿಕವಾಗುತ್ತದೆ. ಆದ್ದರಿಂದಲೇ ಇಂತಹ ನಕ್ತಂಚರರಾದ ರಾಕ್ಷಸರ ಸಂಹರಿಸುವ ದುರ್ಗೆಯ ಆರಾಧನೆ. ಆದ್ದರಿಂದ ಇದು ನವರಾತ್ರಿ.

ಶ್ರೀನಿವಾಸದೇವರ ನವರಾತ್ರಿ

ಯಾವ ಸಂಪ್ರದಾಯಗಳಲ್ಲಿ ಶ್ರೀನಿವಾಸದೇವರು ಕುಲದೈವರಾಗಿರುವರೋ ಅವರ ಮನೆಗಳಲ್ಲಿ ವೇಂಕಟೇಶದೇವರ ನವರಾತ್ರಿ ಇರುತ್ತದೆ. ನಿತ್ಯದಲ್ಲಿಯೂ ಶ್ರೀದೇವಿ ಭೂದೇವಿಸಹಿತ ಶ್ರೀವೇಂಕಟೇಶದೇವರ ಪೂಜೆ ನಡೆಯುತ್ತದೆ. ನಿತ್ಯದಲ್ಲಿಯೂ ಬೇಳೆ ಹೂರಣದಿಂದ ವೇಂಕಟೇಶದೇವರಿಗೆ ಆರತಿ ನೈವೇದ್ಯಗಳು ನಿರಂತರ ಒಂಬತ್ತು ದಿನಗಳ ವರೆಗೂ ನಡೆಯುತ್ತದೆ. ಸಾಯಂಕಾಲದಲ್ಲಿಯೂ ಸಹ ಹಣ್ಣು ತೆಂಗಿನಕಾಯಿ ಇತ್ಯಾದಿಗಳನ್ನು ನಿವೇದಿಸಿ ಮಂಗಳಾರತಿ ನೀರಾಜನಾದಿಗಳನ್ನು ಮಾಡಬೇಕು.

Navaratri 2022

ಶ್ರೀನಿವಾಸನ ನವರಾತ್ರಿ ಇದ್ದವರ ಸಂಪ್ರದಾಯಗಳಲ್ಲಿ ಮನೆಯ ಹಿರಿಯ ಪುರುಷರು ಅಥವಾ ಉಪನೀತ ಬಾಲಕರು ಒಂಬತ್ತುದಿನವೂ ಬಿಡದೇ ಬ್ರಾಹ್ಮಣರ ಮನೆಗಳಿಗೆ ಗೋಪಾಳಕ್ಕೆ ಹೋಗುತ್ತಾರೆ. ಹೀಗೆ ಗೋಪಾಳದಿಂದ ಬಂದ ಅಕ್ಕಿ ಬೇಳೆ ಬೆಲ್ಲ ಮುಂತಾದವುಗಳನ್ನು ಬಳಸಿ ದೇವರಿಗೆ ನಿವೇದಿಸುವುದು ವಿಶೇಷ ಪದ್ಧತಿ. ಪ್ರತಿಪತ್ ತಿಥಿಯಿಂದ ದಶಮೀವರೆಗೂ ಪ್ರತಿನಿತ್ಯ ಸಾಯಂಕಾಲ ಶ್ರೀವೆಂಕಟೇಶಕಲ್ಯಾಣ ಶ್ರವಣ ಹಾಗೂ ಪಾರಾಯಣವನ್ನು ಮಾಡಬೇಕು. ಈ ಸಮಯದಲ್ಲಿ ಶ್ರೀಲಕ್ಷ್ಮೀಹೃದಯ ಮತ್ತು ಶ್ರೀನಾರಾಯಣಹೃದಯದ ಸಂಪುಟೀಕರಣವಾಗಿ ಪಾರಾಯಣ ಮಾಡುವುದು ಬಹಳ ವಿಶೇಷ.

ಶ್ರೀವೆಂಕಟೇಶಕಲ್ಯಾಣ ಶ್ರವಣ

ಆಶ್ವಯುಜ ಮಾಸದ ಪಾಡ್ಯದಿಂದ ಆರಂಭಿಸಿ ದಶಮಿತಿಥಿಯ ವರೆಗೂ ಶ್ರೀವೆಂಕಟೇಶಕಲ್ಯಾಣದ ವಿಶೇಷ ಶ್ರವಣವನ್ನು ಮಾಡಬೇಕು. ವೈಶಾಖಶುದ್ಧ ಪ್ರತಿಪತ್ ನಿಂದ ದಶಮೀವರೆಗೂ ಸಹ ವೆಂಕಟೇಶಕಲ್ಯಾಣ ಪಾರಾಯಣ ಹಾಗೂ ಪ್ರವಚನಗಳು ನಡೆಯುತ್ತವೆ. ಏಕೆಂದರೆ, ವೈಶಾಖಶುದ್ಧ ದಶಮೀದಿನದಂದೇ ಶ್ರೀನಿವಾಸನು ಶ್ರೀಪದ್ಮಾವತಿಯನ್ನು ವಿವಾಹವಾದನು. ವಿವಾಹದ ನಂತರದಲ್ಲಿ ನೂತನ ದಂಪತಿಗಳು ಆರು ತಿಂಗಳ ವರೆಗೂ ಬೆಟ್ಟವನ್ನು ಹತ್ತಲಿಲ್ಲ. ವೈಶಾಖದಿಂದ ಆಶ್ವಯುಜ ಮಾಸದ ವರೆಗೂ ಅಲ್ಲಲ್ಲಿ ವಿಹರಿಸಿ ನಂತರ ಆಶ್ವಯುಜದಲ್ಲಿ ಬೆಟ್ಟವನ್ನು ಹತ್ತುತ್ತಾರೆ.

ಹೀಗೆ ವಿವಾಹದ ಆರುತಿಂಗಳ ನಂತರ ಬೆಟ್ಟಕ್ಕೆ ಆಗಮಿಸಿದ ಶ್ರೀನಿವಾಸ ಪದ್ಮಾವತಿಯರನ್ನು ಬ್ರಹ್ಮದೇವರು ರಥದಲ್ಲಿ ಕುಳ್ಳಿರಿಸಿ ಮೆರವಣಿಗೆಯಿಂದ ಸ್ವಾಗತಿಸಿದರು. ಇದೇ ”ಬ್ರಹ್ಮೋತ್ಸವ” ಅಥವಾ ”ಬ್ರಹ್ಮರಥೋತ್ಸವ” ಎಂದು ಪ್ರಸಿದ್ಧವಾಗಿದೆ. ಆದ್ದರಿಂದ ಈ ಆಶ್ವಿಜ ಶುದ್ಧ ಪ್ರತಿಪತ್ ತಿಥಿಯಿಂದ ದಶಮೀತಿಥಿಯವರೆಗೆ ಶ್ರೀನಿವಾಸ ಕಲ್ಯಾಣ ಪಾರಾಯಣ ಹಾಗು ಪ್ರವಚನಗಳನ್ನು ಮಾಡುವುದು ವಿಶೇಷವಾಗಿ ಕಲ್ಯಾಣಪ್ರದವಾಗಿದೆ. ಹೀಗೆ ವೈಶಾಖಮಾಸ ಹಾಗೂ ಆಶ್ವಿಜಮಾಸಗಳಲ್ಲಿ ಪ್ರತಿವರುಷವು ಎರಡು ಬಾರಿ ಶ್ರೀವೇಂಕಟೇಶಕಲ್ಯಾಣದ ಶ್ರವಣ ಮಾಡಬೇಕು.

ಶರನ್ನವರಾತ್ರಿ

ಆಶ್ವಿಜಮಾಸದ ಈ ನವರಾತ್ರೋತ್ಸವ ಶರದ್ ಋತುವಿನಲ್ಲಿಯೇ ಆಚರಿಸುವದರಿಂದ ಶರನ್ನವರಾತ್ರಿ ಎಂದು ಕರೆಯುತ್ತಾರೆ. ಈ ಒಂಬತ್ತು ದಿನಗಳಲ್ಲಿ ದೇವಿಯ ಪೂಜೆ ಬಹಳ ಮಹತ್ತ್ವವನ್ನು ಪಡೆದಿದೆ. ಶರತ್ ಋತುವು ಸ್ವಚ್ಛವಾದ ಆಕಾಶದಲ್ಲಿ ಬೆಳಗುವ ಚಂದ್ರ-ನಕ್ಷತ್ರಗಳಿಂದ ಕೂಡಿರುತ್ತದೆ. ಆಹ್ಲಾದಕರವಾದ ಆಕಾಶವು ಹೇಗೆ ಪ್ರಸನ್ನತೆಯಿಂದ ಕೂಡಿರುತ್ತದೆಯೋ, ಮನಸ್ಸೂ ಸಹ ಪ್ರಸನ್ನತೆಯಿಂದ ಕೂಡಿರುತ್ತದೆ. ಆದ್ದರಿಂದ ಪೂಜೆ ಉಪಾಸನೆ ಪಾರಾಯಣಾದಿಗಳಿಗೆ ಈ ಕಾಲವು ಅತ್ಯಂತ ಪ್ರಶಸ್ತವಾಗಿದೆ.

ಕೆಲವು ಬಾರಿ ತಿಥಿಯು ವೃದ್ಧಿಯಾದಾಗ ಅಥವಾ ಹ್ರಾಸವಾದಾಗ ಒಂಬತ್ತುರಾತ್ರಿಗಳು ಲಭಿಸುವುದಿಲ್ಲ. ಆದರೂ ಸಹ ಅದು ”ನವರಾತ್ರಿ” ಎಂದೇ ಪರಿಗಣಿತವಾಗಿದೆ. ಹೀಗೆ ಈ ಶರದೃತುವಿನಲ್ಲಿ ದೇವಿಯ ಪೂಜೆಯನ್ನು ಮಾಡಿದವನಿಗೆ ಎಲ್ಲ ಶೋಕಗಳು ಕಷ್ಟಗಳು ಪರಿಹಾರವಾಗುತ್ತವೆ. ದೇವಿಯು ಶತೃವಿನ ಬಾಧೆಯನ್ನು ನಿವಾರಿಸಿ ಅಭಯವನ್ನು ನೀಡುತ್ತಾಳೆ.

ನವರಾತ್ರಿಯ ನವದುರ್ಗಾ ಪೂಜೆ

ನವರಾತ್ರಿಯಲ್ಲಿ ಭಗವಂತನ ವಿಶೇಷಸನ್ನಿಧಾನವನ್ನು ಹೊಂದಿದ ದುರ್ಗಾದೇವಿಯ ಪೂಜೆಯನ್ನು ಮಾಡಲಾಗುತ್ತದೆ. ದುರ್ಗಾದೇವಿಯನ್ನು ಮೊದಲ ಮೂರು ದಿನಗಳಲ್ಲಿ ”ಮಹಾಕಾಳಿ” ಎಂದು ದೇವಿಯನ್ನು ಪೂಜಿಸುವುದು. ಮಧ್ಯದ ಮೂರುದಿನಗಳಲ್ಲಿ ಮಹಿಷಾಸುರನನ್ನು ಸಂಹರಿಸಿದ ದುರ್ಗೆಯನ್ನು ”ಮಹಾಲಕ್ಷ್ಮೀ” ಎಂಬ ಅನುಸಂಧಾನದಿಂದ ಪೂಜಿಸಬೇಕು. ಕೊನೆಯ ಮೂರುದಿನಗಳಲ್ಲಿ ಬ್ರಹ್ಮಜ್ಞಾನಪ್ರಚೋದಕಳಾದ, ಜ್ಞಾನಪ್ರಚಾರದ ಕಾರ್ಯವನ್ನು ಮಾಡುವ ಮತ್ತು ಮಾಡಿಸುವ ”ಸರಸ್ವತೀದೇವಿ”ಯನ್ನು ಪೂಜಿಸುವುದು.

ದುರ್ಗಾದೇವಿಯು ಮಧು-ಕೈಟಭರನ್ನು, ಮಹಿಷಾಸುರ, ಶುಂಭ-ನಿಶುಂಭ, ಚಂಡ-ಮುಂಡ, ರಕ್ತಬೀಜಾಸುರ ಇವರನ್ನೆಲ್ಲ ಅನೇಕ ರೂಪಗಳಿಂದ ಸಂಹರಿಸಿದ್ದಾಳೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಮಧು-ಕೈಟಭರು ಭಗವಂತನ ಕಿವಿಯ ಕಿಟ್ಟದಿಂದ ಜನಿಸಿದರೆಂದು ಪುರಾಣಗಳು ತಿಳಿಸಿವೆ. ಭಗವಂತನ ಸಚ್ಚಿದಾನಂದಾತ್ಮಕ ದೇಹದಲ್ಲಿ ಬೇಡದ ಪದಾರ್ಥ ಅಥವಾ ಅಶುದ್ಧವಸ್ತುವಿಗೆ ಸ್ಥಾನವೇ ಇಲ್ಲ.

ಆದರೂ ಇದೆಲ್ಲ ಭಗವಂತನ ಲೀಲೆಯ ಭಾಗವಷ್ಟೇ. ಭಗವಂತನ ಸಂಕಲ್ಪದಂತೆ ದುರ್ಗಾದೇವಿಯು ಮಧು-ಕೈಟಭರನ್ನು ಸಂಹರಿಸಿದಳು. ಅಜ್ಞಾನವೆಂಬ ಕಲ್ಮಷದಿಂದ ಸಂಶಯ ಮತ್ತು ವಿಪರೀತಜ್ಞಾನವು ಹುಟ್ಟಿದಂತೆ ಈ ಮಧು-ಕೈಟಭರ ಜನನದ ಸಂಕೇತ. ದುರ್ಗಾದೇವಿಯು ಮಧು-ಕೈಟಭರನ್ನು ಸಂಹರಿಸಿದಂತೆ ಎಲ್ಲರ ಅಜ್ಞಾನಗಳ ನಾಶವನ್ನು ಮಾಡಲಿ ಎಂದು ಪ್ರಾರ್ಥಿಸಿ ದುರ್ಗೆಯ ಈ ರೂಪದ ಪೂಜೆ.

ಸಂಹಾರದ ಸಂಕೇತ

ಶುಂಭ-ನಿಶುಂಭರು ಕಾಮ-ಕ್ರೋಧಗಳ ಸಂಕೇತರು. ದುರ್ಗಾದೇವಿಯು ಶುಂಭ-ನಿಶುಂಭರನ್ನು ಸಂಹರಿಸಿದಂತೆ ನಮ್ಮ ದೇಹದಲ್ಲಿರುವ ಕಾಮ-ಕ್ರೋಧಗಳನ್ನು ನಾಶಗೊಳಿಸಲಿ ಎಂದು ಪ್ರಾರ್ಥಿಸಿ ದುರ್ಗೆಯ ಈ ಪೂಜೆಯನ್ನು ಮಾಡಬೇಕು.

ಈ ಶುಂಭ-ನಿಶುಂಭರ ಶಿಷ್ಯರೇ ಚಂಡ-ಮುಂಡರು. ಕಾಮ-ಕ್ರೋಧಗಳನ್ನು ಅನುಸರಿಸಿ ಮದ-ಮಾತ್ಸ್ಯರ್ಯಗಳಿದ್ದಂತೆ ಈ ಚಂಡ-ಮುಂಡರು. ಇಂತಹ ಅಸುರರನ್ನು ಸಂಹರಿಸಿದ ದೇವಿಯು ನಮ್ಮಲ್ಲಿರುವ ಮದ-ಮಾತ್ಸ್ಯರ್ಯಗಳನ್ನು ನಾಶಗೊಳಿಸಲಿ ಎಂದು ಪ್ರಾರ್ಥಿಸಿ ದೇವಿಯ ಈ ಪೂಜೆಯನ್ನು ಮಾಡಬೇಕು.

ಶುಂಭ-ನಿಶುಂಭರ ಮತ್ತೊಬ್ಬ ಅಸುರ ಶಿಷ್ಯ ರಕ್ತಬೀಜಾಸುರ. ಅವನಿಗೆ ಬ್ರಹ್ಮದೇವರು ಕೊಟ್ಟ ಒಂದು ವರವಿತ್ತು. ಒಂದು ಹನಿ ರಕ್ತವೂ ಅವನ ದೇಹದಿಂದ ಭೂಮಿಯ ಮೇಲೆ ಬಿದ್ದರೆ ಮತ್ತೊಬ್ಬ ರಕ್ತಬೀಜಾಸುರನ ಜನ್ಮವಾಗುತ್ತದೆ ಎಂದು. ಆದ್ದರಿಂದಲೇ ಅವನು ರಕ್ತಬೀಜಾಸುರ. ಕಾಮ-ಕ್ರೋಧಗಳು ಹೇಗೆ ಲೋಭಕ್ಕೆ ಜನ್ಮನೀಡುತ್ತವೋ, ಅಂತಹ ಲೋಭವು ಮತ್ತೆ ಮತ್ತೆ ಹುಟ್ಟತ್ತಲೇ ಹೋಗುತ್ತದೆಯೇ ಹೊರತು ಕೊನೆಕೊಳ್ಳುವುದೇ ಇಲ್ಲ. ಇಂತಹ ಲೋಭಸ್ವರೂಪಿಯಾದ ರಕ್ತಬೀಜಾಸುರನನ್ನು ದುರ್ಗಾದೇವಿಯು ಕಾಳಿಯ ರೂಪದಿಂದ ಸಂಹರಿಸಿದಳು. ಮನುಷ್ಯನ ಸಾಂಸಾರಿಕಲೋಭವನ್ನು ದೇವಿಯು ನಿತ್ಯದಲ್ಲಿ ಸಂಹರಸಲಿ ಎಂದು ಪ್ರಾರ್ಥಿಸಿ ದೇವಿಯ ಈ ಪೂಜೆಯನ್ನು ಮಾಡಬೇಕು.

Navaratri 2022

ಮಹಿಷಾಸುರನೆಂಬ ಒಬ್ಬ ಅಸುರ. ಮಹಿಷಾಸುರ ಎಂದರೆ ಎಮ್ಮೆಯ ರೂಪದಲ್ಲಿರುವ ರಾಕ್ಷಸ. ಮಹಿಷಾಸುರನು ಇಂದ್ರಾದಿಗಳಿಗೆ ಅತಿಯಾದ ತೊಂದರೆ ಕೋಟ್ಟಾಗ ಭಗವಂತನ ಆಜ್ಞೆಯಂತೆ ದುರ್ಗಾದೇವಿಯು ಸಿಂಹವಾಹಿನಿಯಾಗಿ ತ್ರಿಶೂಲದಿಂದ ಮಹಿಷಾಸುರನ ವಧೆಯನ್ನು ಮಾಡುತ್ತಾಳೆ. ಆಗ ದುರ್ಗಾದೇವಿಯು ”ಮಹಿಷಾಸುರಮರ್ದಿನಿ” ”ಸಿಂಹವಾಹಿನೀ” ಎಂದು ಪ್ರಸಿದ್ಧಳಾದಳು. ಎಮ್ಮೆ ಎಂಬುದು ಅಹಂಕಾರದ ಪ್ರತೀಕ. ಎಲ್ಲಿಯ ವರೆಗೂ ಅಹಂಕಾರವಿರುವುದೋ ಅಲ್ಲಿಯ ವರೆಗೂ ಬುದ್ಧಿ-ಮನಸ್ಸುಗಳು ದೇವರೆಡೆಗೆ ಸಾಗುವದೇ ಇಲ್ಲ. ನಮ್ಮಲ್ಲಿರುವ ಅಂತಹ ಮಹಿಷರೂಪದ ಅಹಂಕಾರವನ್ನು ಈ ಸಿಂಹವಾಹಿನಿ ದುರ್ಗೆಯು ನಾಶಗೊಳಿಸಲಿ ಎಂದು ಪ್ರಾರ್ಥಿಸಿ ಈ ಪೂಜೆಯನ್ನು ಮಾಡಬೇಕು.

ಹೀಗೆ ಭಗವಂತನ ವಿಶೇಷ ಸನ್ನಿಧಾನವನ್ನು ಹೊಂದಿ ದುರ್ಗಾದೇವಿಯು ಅನೇಕ ರೂಪಗಳನ್ನು ಧರಿಸಿ ಎಲ್ಲ ದುಷ್ಟ ಅಸುರರ ಸಂಹಾರವನ್ನು ಮಾಡುತ್ತಾಳೆ. ಚಕ್ರವನ್ನು ಕೈಯಲ್ಲಿ ಹಿಡಿದಿರುವ ದುರ್ಗಾದೇವಿಯು ಸಂಸಾರವನ್ನು ಭೇದಿಸಿ ಮೋಕ್ಷಪ್ರದವಾದ ಜ್ಞಾನವನ್ನು ಕೊಡುವುದರ ಸಂಕೇತ. ದುರ್ಗೆಯು ಶಂಖವನ್ನು ಧರಿಸಿರುವುದು ವಿಜಯದ ಸಂಕೇತ. ಶಂಖನಾದ ವಿಜಯದ ಪ್ರತೀಕ. ಸತ್ಕಾರ್ಯಗಳಲ್ಲಿ ಸಜ್ಜನರಿಗೆ ಸದಾ ವಿಜಯವನ್ನು ದಯಪಾಲಿಸುವುಳು. ಅಜ್ಞಾನ ಮತ್ತು ಅಧರ್ಮಗಳನ್ನು ಕತ್ತರಿಸಿ ಸುಜ್ಞಾನವನ್ನು ನೀಡುವದರ ಮೂಲಕ ಧರ್ಮವನ್ನು ಸ್ಥಾಪಿಸುವಳು ಎಂಬುದು ಪರಶುಧಾರಿಯಾದ ದುರ್ಗೆಯ ಸಂಕೇತ. ವಿಪರೀತ ಜ್ಞಾನ ಮತ್ತು ಸಂಶಯಗಳನ್ನು ಹೋಗಲಾಡಿಸುವುದೇ ದುರ್ಗೆ ಧರಿಸಿರುವ ಬಿಲ್ಲು ಬಾಣಗಳ ಸಂಕೇತ. ದುರ್ಗಾದೇವಿಯು ಅಷ್ಟಭುಜಗಳನ್ನು ಹೊಂದಿರುವಳು. ಎಂಟು ಭುಜಗಳೆಂದೆರೆ ಪಂಚಭೂತಗಳು, ಮನಸ್ಸು, ಅಹಂಕಾರ, ಮಹತ್ತತ್ವ ಇವುಗಳ ಸಂಕೇತ. ಭಗವಂತನ ವಿಶೇಷ ಅನುಗ್ರಹದಿಂದ ದುರ್ಗಾದೇವಿಯು ಈ ಎಂಟೂ ತತ್ವಗಳಿಗೆ ನಿಯಾಮಕಳಾಗಿರುವಳು.

ಸ್ತ್ರೀದೇವತೆಗಳಾದ ದುರ್ಗಾ, ಅಂಬಾಭವಾನಿಯ ನವರಾತ್ರಿಯನ್ನು ಆಚರಿಸುವವರು ನವರಾತ್ರಿಯಲ್ಲಿ ದೇವಿಯ ಅನುಗ್ರಹಕ್ಕಾಗಿ ಉಪವಾಸವನ್ನು ಮಾಡುತ್ತಾರೆ. ಪ್ರತಿಪತ್ ತಿಥಿಯಿಂದ ಅಷ್ಟಮೀ ವರೆಗು ಉಪವಾಸವನ್ನು ಮಾಡಿ ಮಹಾನವಮಿಯದಿನ ಪಾರಣೆಯನ್ನು ಮಾಡುವ ಸಂಪ್ರದಾಯವೂ ಕೆಲವರಲ್ಲಿ ಇದೆ. ಇಲ್ಲಿ ಉಪವಾಸವೆಂದರೆ ಏಕಾದಶಿಯಂತೆ ನಿರ್ಜಲ ಉಪವಾಸವಲ್ಲ. ಕಿಂತು ಫಲಾಹಾರವನ್ನು ಸ್ವೀಕರಿಸಿ ಮಾಡುವುದು.

ಲೇಖಕರು ಹವ್ಯಾಸಿ ಬರಹಗಾರರು

ಇದನ್ನೂ ಓದಿ | Navratri 2022 | ಮೊದಲನೇ ದಿನ ಯಾವ ದೇವಿಯನ್ನು ಪೂಜಿಸಬೇಕು? ಬಿಳಿಯ ವಸ್ತ್ರಧಾರಣೆ ಏಕೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Mysore Dasara: ಚೆಕ್‌ ಬೌನ್ಸ್‌; ದಸರಾ ಕಲಾವಿದರಿಗೆ ಅವಮಾನ ಎಂದು ಯತ್ನಾಳ್‌ ಕಿಡಿ

Mysore Dasara: ಮೈಸೂರು ಉಸ್ತುವಾರಿ ಸಚಿವರು ಹಾಗೂ ಮುಖ್ಯ ಮಂತ್ರಿಗಳು ಕಲಾವಿದರಿಗೆ ಬೇಷರತ್ ಕ್ಷಮೆ ಕೇಳಿ ಲಲಿತಕಲೆ ಹಾಗೂ ಕರಕುಶಲ ಉಪಸಮಿತಿಯ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಗ್ರಹಿಸಿದ್ದಾರೆ.

VISTARANEWS.COM


on

Basanagouda Patil Yatnal
Koo

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysore Dasara) ಮುಕ್ತಾಯವಾದರೂ ಕಲಾವಿದರ ಅಸಮಾಧಾನ ನಿಂತಿಲ್ಲ. ಅಧಿಕಾರಿಗಳ ಎಡವಟ್ಟಿನಿಂದ ಬಹುಮಾನದ ಚೆಕ್‌ ಬೌನ್ಸ್‌ ಆಗಿರುವುದರಿಂದ ಬಹುಮಾನ ವಿಜೇತರು ಅಲೆದಾಡುವಂತಾಗಿದೆ. ಚೆಕ್‌ ವಾಪಸ್‌ ಬಂದರೂ ಬ್ಯಾಂಕ್‌ ಖಾತೆಯಲ್ಲಿ ಹಣ ಕಡಿತವಾಗಿರುವುದಕ್ಕೆ ಕಲಾವಿದರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಂದೆಡೆ ರಾಜ್ಯ ಸರ್ಕಾರದಿಂದ ಕಲಾವಿದರಿಗೆ ಅವಮಾನವಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕಿಡಿ ಕಾರಿದ್ದಾರೆ.

ಅ.26 ರಂದು ಮೈಸೂರಿನ ಹವ್ಯಾಸಿ ಛಾಯಾಚಿತ್ರಗಾರ ಎನ್.ಜಿ. ಸುಧೀರ್‌ಗೆ 7 ಸಾವಿರ ರೂ. ಬಹುಮಾನದ ಚೆಕ್ ನೀಡಲಾಗಿತ್ತು‌. ಅ.27 ರಂದು ಸುದೀರ್ ಬ್ಯಾಂಕ್‌ಗೆ ಸಲ್ಲಿಸಿದ್ದರು. ಆದರೆ ಅ.30ರಂದು ಚೆಕ್ ವಾಪಸ್ ಆಗಿದೆ. ಈ ವೇಳೆ ಅಕೌಂಟ್‌ನಿಂದ 118 ರೂ. ಕಟ್ ಮಾಡಲಾಗಿದೆ.

ಇದನ್ನೂ ಓದಿ | Karnataka Politics : ನಾನು ಮುಖ್ಯಮಂತ್ರಿ ಆಗಲು ಸಿದ್ಧ ಎಂದ ಪ್ರಿಯಾಂಕ್ ಖರ್ಗೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್.ಜಿ. ಸುಧೀರ್, ಸ್ಪರ್ಧೆಯಲ್ಲಿ ಭಾಗಿಯಾಗಿ ಬಹುಮಾನ ಪಡೆದ ನನಗೆ 118 ರೂ. ದಂಡ ಬಿದ್ದಿದೆ. ಇಂತಹ ಬೇಜಾವ್ದಾರಿತನ ಏಕೆ? ತಮ್ಮಂತೆ ಸಾಕಷ್ಟು ಕಲಾವಿದರಿಗೆ ಅನ್ಯಾಯ ಆಗಿದೆ ಎಂದು ಅಧಿಕಾರಿಗಳ ವಿರುದ್ಧ ಬೇಸರ ಹೊರಹಾಕಿದ್ದಾರೆ.

ದಸರಾ ಲಲಿತ ಕಲೆ ಮತ್ತು ಕರಕುಶಲ ಉಪಸಮಿತಿಯಿಂದ ಕಲಾವಿದರಿಗೆ ನೀಡಿದ್ದ ಬಹುಮಾನದ ಚೆಕ್‌ಗಳು ನಗದಾಗಿ ಪರಿವರ್ತನೆ ಆಗದೆ ವಾಪಸ್‌ ಆಗುತ್ತಿವೆ. ಅಧಿಕಾರಿಗಳ ಸಹಿಯಲ್ಲಿನ ವ್ಯತ್ಯಾಸ ಇದಕ್ಕೆ ಕಾರಣವಾಗಿದೆ. ಉಪಸಮಿತಿಯ ಈ ಹಿಂದಿನ ಕಾರ್ಯಾಧ್ಯಕ್ಷ, ಕಾರ್ಯದರ್ಶಿಗಳ ಸಹಿಗಳೇ ಚೆಕ್‌ ಮೇಲೆ ಇದ್ದಿದ್ದರಿಂದ ಚೆಕ್‌ ಬೌನ್ಸ್‌ ಆಗಿವೆ ಎನ್ನಲಾಗಿದೆ. ಚೆಕ್ ವಾಪಸ್‌ ಆಗಿರುವುದು ತಿಳಿದುಬರುತ್ತಿದ್ದಂತೆ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ | Karnataka Politics : ಪರಮೇಶ್ವರ್‌ ಮುಖ್ಯಮಂತ್ರಿ ಆಗಬೇಕು; ನಾನು ಎಐಸಿಸಿಗೂ ಹೆದರಲ್ಲವೆಂದ ಕೆ.ಎನ್.‌ ರಾಜಣ್ಣ

ರಾಜ್ಯ ಸರ್ಕಾರದ ವಿರುದ್ಧ ಯತ್ನಾಳ್‌ ಆಕ್ರೋಶ

ಕಲಾವಿದರಿಗೆ ನೀಡಿದ್ದ ಚೆಕ್‌ ಬೌನ್ಸ್‌ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ದಸರಾ ಹಬ್ಬದಲ್ಲಿ ಭಾಗವಹಿಸಿದ ಕಲಾವಿದರಿಗೆ ನೀಡಿದ ಚೆಕ್ ಬೌನ್ಸ್ ಆಗಿರುವುದು ಕಲಾವಿದರಿಗೆ ಮಾಡಿದ ಅವಮಾನ. ಗಾಯದ ಮೇಲೆ ಬರೆ ಇಟ್ಟಂತೆ ಬೌನ್ಸ್ ಆದ ಚೆಕ್ ಬ್ಯಾಂಕ್‌ಗೆ ನೀಡಿದ್ದಕ್ಕೆ ಕಲಾವಿದರಿಗೆ ಬ್ಯಾಂಕ್ ದಂಡ ಹಾಕಿದೆ. ದಸರಾ ಹಾಗೂ ಮೈಸೂರು ಉಸ್ತುವಾರಿ ಸಚಿವರು ಹಾಗೂ ಮುಖ್ಯ ಮಂತ್ರಿಗಳು ಕಲಾವಿದರಿಗೆ ಬೇಷರತ್ ಕ್ಷಮೆ ಕೇಳಿ ಲಲಿತಕಲೆ ಹಾಗೂ ಕರಕುಶಲ ಉಪಸಮಿತಿಯ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಉತ್ತರದಾಯಿತ್ವವಿಲ್ಲದೆ, ಬೇಜವಾಬ್ದಾರಿ ವರ್ತನೆಯಿಂದ ಕೆಲಸ ಮಾಡುವವರಿಗೆ ಸರ್ಕಾರ ಶಿಸ್ತು ಕ್ರಮ ಜರುಗಿಸಲಿ. ಉಸ್ತುವಾರಿ ಸಚಿವರ ದುರಾಡಳಿತದಿಂದ ದಸರಾ ಸಂಭ್ರಮದಲ್ಲಿ ವಿದ್ಯುತ್ ಬೇಲಿ ಹಾರಿ ಬಂದು ಭದ್ರತಾ ವೈಫಲ್ಯವೆಸಗಿದ್ದು, ಈಗ ಕಲಾವಿದರಿಗೆ ನೀಡಿದ ಚೆಕ್ ಬೌನ್ಸ್ ನೀಡಿ ಸರಣಿ ವೈಫಲ್ಯಗಳು ಆಗಿವೆ ಎಂದು ಅಕ್ರೋಶ ಹೊರಹಾಕಿದ್ದಾರೆ.

Continue Reading

ಕರ್ನಾಟಕ

Mysore Dasara: ಮೈಸೂರು ದಸರಾ ಸಂಭ್ರಮದ ಸ್ಮರಣೀಯ ಚಿತ್ರಗಳಿವು

Mysore Dasara: ವಿಶ್ವ ವಿಖ್ಯಾತ ಮೈಸೂರು ದಸರಾ ಮಂಗಳವಾರ ಜಂಬೂ ಸವಾರಿಯೊಂದಿಗೆ ಮುಕ್ತಾಯವಾಯಿತು. ದಸರಾ ಸಂಭ್ರಮದ ಸ್ಮರಣೀಯ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ

VISTARANEWS.COM


on

Dasara sambhrama
Koo

ಮೈಸೂರು: ಅ.15ರಂದು ಆರಂಭವಾದ ವಿಶ್ವ ವಿಖ್ಯಾತ ಮೈಸೂರು ದಸರಾ (Mysore Dasara) ಮಹೋತ್ಸವ, ವಿಜಯದಶಮಿ ದಿನವಾದ ಮಂಗಳವಾರ ಜಂಬೂ ಸವಾರಿಯೊಂದಿಗೆ ಮುಕ್ತಾಯವಾಯಿತು. ಕೊನೆಯ ದಿನ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು, ಸ್ತಬ್ಧಚಿತ್ರಗಳ ಮೆರವಣಿಗೆ, ಜಂಬೂ ಸವಾರಿ, ಪಂಜಿನ ಕವಾಯತು ಅದ್ಧೂರಿಯಾಗಿ ನೆರವೇರಿದ್ದು, ಜಂಬೂ ಸವಾರಿ ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸಿದ್ದರು. ದಸರಾ ಸಂಭ್ರಮದ ಸ್ಮರಣೀಯ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ | Mysore Dasara : ಕಣ್ಮನ ಸೆಳೆದ ಪಂಜಿನ ಕವಾಯತು; ಮೈಸೂರು ದಸರಾ ಅದ್ಧೂರಿಯಾಗಿ ಮುಗಿಯಿತು!

Continue Reading

ಕರ್ನಾಟಕ

Mysore Dasara : ಕಣ್ಮನ ಸೆಳೆದ ಪಂಜಿನ ಕವಾಯತು; ಮೈಸೂರು ದಸರಾ ಅದ್ಧೂರಿಯಾಗಿ ಮುಗಿಯಿತು!

Mysore Dasara : ಯೋಧರು ಮತ್ತು ಪೊಲೀಸರ ಬೈಕ್‌ ಸಾಹಸಗಳ ಪ್ರದರ್ಶನಗಳು ಸೇರಿದ್ದವರ ಮೈನವಿರೇಳುವಂತೆ ಮಾಡಿತು. ಕೆಲ ಕಾಲ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಗಮನ ಸೆಳೆದವು. ಅಂತಿಮವಾಗಿ ಸುಮಾರು 25 ನಿಮಿಷಗಳ ಕಾಲ ಪಂಜಿನ ಕವಾಯತು ನಡೆಯಿತು. ಈ ಕವಾಯತು ಪ್ರದರ್ಶನದ ಅಷ್ಟೂ ಸಮಯವು ನೋಡುಗರು ಉಸಿರು ಬಿಗಿಹಿಡಿದು ವೀಕ್ಷಣೆ ಮಾಡಿದ್ದು ಕಂಡು ಬಂತು.

VISTARANEWS.COM


on

Torch Light Parade 2023
Koo

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ (Mysore Dasara) ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಇಡೀ ದಸರಾದ ಆಕರ್ಷಣೆಯಲ್ಲಿ ಜಂಬೂ ಸವಾರಿ (Jumboo Savari) ನಂತರ ಪ್ರಮುಖವಾಗಿ ಎದ್ದು ಕಾಣುವ ಪಂಜಿನ ಕವಾಯತಿಗೆ (Torch Light Parade 2023) ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Governor Thaawar Chand Gehlot) ಚಾಲನೆ ನೀಡಿದರು. ಪೊಲೀಸ್‌ ಪಡೆಯಿಂದ ಗೌರವ ವಂದನೆ ಸ್ವೀಕರಿಸುವ ಮೂಲಕ ಅವರು ವರ್ಣರಂಜಿತ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.

ಮೊದಲು ರಾಷ್ಟ್ರಗೀತೆಯನ್ನು (National Anthem) ನುಡಿಸುವ ಮೂಲಕ ಕವಾಯತು ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆಯಿತು. ರಾಷ್ಟ್ರಗೀತೆ ಮುಕ್ತಾಯವಾಗುತ್ತಿದ್ದಂತೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ಬಳಿ ಬಂದ ಕಿಂಗ್‌ ಪವರ್‌ ಅಶ್ವರೂಢ ಖಡ್ಗಧಾರಿ ಪ್ರಧಾನ ದಳಪತಿ ಕವಾಯತು ವರದಿಯನ್ನು ಅತಿಥಿಗಳಿಗೆ ಸಮರ್ಪಿಸಿದರು. ತರುವಾಯ ನಿಶ್ಚಳ ದಳಗಳ ಪರಿವೀಕ್ಷಣೆಗಾಗಿ ರಾಜ್ಯಪಾಲರನ್ನು ಆಹ್ವಾನಿಸಿದರು.

ಆಹ್ವಾನವನ್ನು ಒಪ್ಪಿ ಅಲಂಕೃತ ತೆರೆದ ವಾಹನವನ್ನು ಹತ್ತಿದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ವಿವಿಧ ಸೇವಾದಳಗಳ ನಿಶ್ಚಳದಳಗಳ ಪರಿವೀಕ್ಷಣೆಯನ್ನು ನಡೆಸಿದರು. ಮೈಸೂರು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಿ. ಅವರು ರಾಜ್ಯಪಾಲರಿಗೆ ವ್ಯಕ್ತಿಪರಿವೀಕ್ಷಕರಾಗಿದ್ದರು.

ಇದಾದ ಬಳಿಕ 21 ಕುಶಾಲತೋಪುಗಳನ್ನು ಮೂರು ಹಂತಗಳಲ್ಲಿ ಸಿಡಿಸಲಾಯಿತು. ನಿಶ್ಚಳದ ದಳ ಅಶ್ವಪಡೆಗಳ ಒಂದೊಂದಾಗಿ ಮೂರು ಕುದುರೆಗಳು ಒಂದು ಸುತ್ತು ಸುತ್ತಿ ಬಂದ ಬಳಿಕ ಗಾಳಿಯಲ್ಲಿ ಗುಂಡುಹಾರಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಈ ವೇಳೆ ಮತ್ತೊಮ್ಮೆ ರಾಷ್ಟ್ರಗೀತೆಯನ್ನು ಮೊಳಗಿಸಲಾಯಿತು.

18 ತುಕಡಿಗಳಿಂದ ಪ್ರದರ್ಶನ

ಒಟ್ಟು 18 ತುಕಡಿಗಳು ಪ್ರದರ್ಶನ ತೋರಿದವು. ಈ ತುಕಡಿಗಳು ಹಲವು ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೂಲಕ ಕೆಲವು ದಿನಗಳಿಂದ ತಾಲೀಮು ನಡೆಸಿವೆ. ಲಯಬದ್ಧ ಸಂಗೀತಕ್ಕೆ ಶಿಸ್ತುಬದ್ಧ ಹೆಜ್ಜೆಯನ್ನು ಹಾಕುತ್ತಾ ಸಾಗುತ್ತಿರುವುದನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬದಂತೆ ಇತ್ತು. ಎದೆ ಸೆಟೆದು ಕೈಬೀಸಿ ಕಾಲನ್ನು ಜೋರಾಗಿ ನೆಲಕ್ಕೆ ಗುದ್ದಿ ಧೂಳೆಬ್ಬಿಸುತ್ತಾ ಆರಕ್ಷಕ ದಳದವರು ವೀರ ನಡಿಗೆ ಸಾಗುತ್ತಿದ್ದರೆ ಸೇರಿದ್ದ ಜನಸ್ತೋಮ ಚಪ್ಪಾಳೆಯ ಸುರಿಮಳೆಯನ್ನೇ ಸುರಿಸಿತು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ಸಚಿವರಾದ ವೆಂಕಟೇಶ್‌, ಶಿವರಾಜ್‌ ತಂಗಡಗಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಕಣ್ತುಂಬಿದ ಲೈಟಿಂಗ್‌

ಧ್ವನಿ ಬೆಳಕಿನ ಸಂಭ್ರಮ ಇದೇ ವೇಳೆ ಅನಾವರಣಗೊಳಿಸಲಾಯಿತು. ಧ್ವನಿ ಮೊದಲೋ ಬೆಳಕೋ ಎಂಬ ಪ್ರಶ್ನೆಗೆ ಉತ್ತರ ಸಿಗದಿದ್ದರೂ ಡಿಎನ್‌ಎ ಸಹಯೋಗದಲ್ಲಿ ಧ್ವನಿ – ಬೆಳಕಿನ ಪ್ರದರ್ಶನವು ನೋಡುಗರನ್ನು ರೋಮಾಂಚನಗೊಳಿಸಿತು.

ಮನ ಮುಟ್ಟಿದ ನೃತ್ಯ ರೂಪಕ

ಡಿಎನ್‌ಎ ಸಮೂಹದ ಮೂಲಕ ನೃತ್ಯ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಇದಕ್ಕೆ ಭಜರಂಗಿ ಮೋಹನ್‌ ಅವರು ನೃತ್ಯ ಸಂಯೋಜನೆಯನ್ನು ಮಾಡಿದ್ದಾರೆ. ಈ ವೇಳೆ ಐಗಿರಿ ನಂದಿನಿ ಹಾಡಿಗೆ ನೃತ್ಯ ಮಾಡಲಾಯಿತು. ಜತೆಗೆ ಶಂಕರ್‌ ನಾಗ್‌ ಅಭಿನಯದ ಗೀತಾ ಸಿನಿಮಾದ “ಸಂತೋಷಕ್ಕೆ ಹಾಡು ಸಂತೋಷಕ್ಕೆ”, ರವಿಚಂದ್ರನ್‌ ಅಭಿನಯದ ಮಲ್ಲ ಸಿನಿಮಾದ “ಕರುನಾಡೇ ಕೈ ಚಾಚಿದೆ ನೋಡೇ..” ಹಾಡುಗಳಿಗೆ ಹೆಜ್ಜೆ ಹಾಕಲಾಯಿತು. ಬಳಿಕ ಕಿಚ್ಚ ಸುದೀಪ್‌ ಅಭಿನಯದ ಪೈಲ್ವಾನ್‌ ಸಿನಿಮಾದ “ಪೈಲ್ವಾನ್‌” ಹಾಡಿನಗೆ ಮಲ್ಲಕಂಭ ಸಾಹಸ ಪ್ರದರ್ಶನವನ್ನು ಮಾಡುವ ಮೂಲಕ ಡ್ಯಾನ್ಸ್‌ ಮಾಡಲಾಯಿತು. ಇದಲ್ಲದೆ, ಶಿವರಾಜ್‌ಕುಮಾರ್‌ ಅಭಿನಯದ ಶ್ರೀ ಆಂಜನೇಯಂ, ಪ್ರಸನ್ನಾಂಜನೇಯಂ ಹಾಗೂ ಪುನೀತ್‌ ರಾಜಕುಮಾರ್‌ ಅಭಿನಯದ ಯುವರತ್ನ ಸಿನಿಮಾದ “ಡಾನ್ಸ್‌ ವಿಥ್‌ ಅಪ್ಪು” ಹಾಡಿಗೂ ಹೆಜ್ಜೆ ಹಾಕಲಾಯಿತು. ಕೊನೆಯಲ್ಲಿ ಡಾ. ರಾಜಕುಮಾರ್‌ ಅಭಿನಯದ “ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು” ಹಾಡು ನೋಡುಗರ ಮನ ಗೆಲ್ಲುವಲ್ಲಿ ಯಶ ಕಂಡಿತು.

ಗಮನ ಸೆಳೆದ ಸಾಹಸ ಪ್ರದರ್ಶನ

ಕೊನೆಯಲ್ಲಿ ಯೋಧರು ಮತ್ತು ಪೊಲೀಸರ ಬೈಕ್‌ ಸಾಹಸಗಳ ಪ್ರದರ್ಶನಗಳು ಸೇರಿದ್ದವರ ಮೈನವಿರೇಳುವಂತೆ ಮಾಡಿತು. ಕೆಲ ಕಾಲ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಗಮನ ಸೆಳೆದವು. ಅಂತಿಮವಾಗಿ ಸುಮಾರು 25 ನಿಮಿಷಗಳ ಕಾಲ ಪಂಜಿನ ಕವಾಯತು ನಡೆಯಿತು. ಈ ಕವಾಯತು ಪ್ರದರ್ಶನದ ಅಷ್ಟೂ ಸಮಯವು ನೋಡುಗರು ಉಸಿರು ಬಿಗಿಹಿಡಿದು ವೀಕ್ಷಣೆ ಮಾಡಿದ್ದು ಕಂಡು ಬಂತು. ಒಂದೊಂದು ರೀತಿಯ ವಿಶಿಷ್ಟ ಸಾಹಸ ಪ್ರದರ್ಶನಗಳಿಗೂ ಜೋರಾದ ಚಪ್ಪಾಳೆ, ಶಿಳ್ಳೆಗಳು ಕೇಳಿಬಂದವು.

ನೂರಾರು ಜನ ಪೊಲೀಸರಿಂದ ಸಾಹಸ ಪ್ರದರ್ಶನ ನಡೆಯಿತು. ಇದೇ ವೇಳೆ ವೆಲ್‌ ಕಮ್‌ ಟು ಮೈಸೂರು ದಸರಾ, ಫೇರ್‌ ವೆಲ್‌ ಟು ದಸರಾ, ಸಿ ಯು ದಸರಾ ಇನ್ 2024 ಎಂಬಿತ್ಯಾದಿ ಸಂದೇಶಗಳು ಕಂಡು ಬಂದವು.

ಇದನ್ನೂ ಓದಿ: Mysore Dasara : ವೈಭವದ ಜಂಬೂ ಸವಾರಿಗೆ ಸಿಎಂ ಚಾಲನೆ; ರಾಜ ಬೀದಿಯಲ್ಲಿ ಚಾಮುಂಡಿ ವಿಲಾಸ

ಜೋಶ್‌ ಹೆಚ್ಚಿಸಿದ ಪೊಲೀಸ್‌ ಬ್ಯಾಂಡ್‌

ಈ ಮಧ್ಯೆ ಪೊಲೀಸ್‌ ಬ್ಯಾಂಡ್‌ನವರು ಪೊಲೀಸ್‌ ಹಾಗೂ ಸೈನಿಕ ಗೀತೆಗಳನ್ನು ಪ್ರಸ್ತುತಿಪಡಿಸಿದರು. “ಸಾರೇ ಜಹಾಸೇ ಅಚ್ಚಾ” ಸೇರಿದಂತೆ ಇನ್ನೂ ಹಲವು ಗೀತೆಯನ್ನು ಪೊಲೀಸ್‌ ಬ್ಯಾಂಡ್‌ನವರು ನುಡಿಸಿ ಗಮನ ಸೆಳೆದರು. ಸೇರಿದ್ದವರಿಗೆಲ್ಲರಿಗೂ ಒಮ್ಮೆ ದೇಶಭಕ್ತಿ ಗೀತೆಯ ಬೀಟ್‌ಗಳು ಜೋಶ್‌ ಅನ್ನು ಹೆಚ್ಚಿಸುತ್ತಿದ್ದವು.

Continue Reading

ಕರ್ನಾಟಕ

Anekal Dasara : ಆನೇಕಲ್‌ನಲ್ಲಿ ಜಂಬೂ ಸವಾರಿಗೆ ಮೆರುಗು ನೀಡಿದ ಕೇರಳದ ಸಾಧು ಆನೆ

Anekal Dasara : ಬೆಂಗಳೂರು ಹೊರವಲಯದ ಆನೇಕಲ್ ಹಾಗೂ ಬನ್ನೇರುಘಟ್ಟದಲ್ಲಿ ವಿಜೃಂಭಣೆಯಿಂದ ಜಂಬೂ ಸವಾರಿ ಜರುಗಿತು. ಮಿನಿ ಮೈಸೂರು ಖ್ಯಾತಿಯ ಆನೇಕಲ್‌ನಲ್ಲಿ ಚೌಡೇಶ್ವರಿ ಜಂಬೂಸವಾರಿಗೆ ಕೇರಳದ ಸಾಧು ಆನೆ ಮೆರಗು ನೀಡಿತು.

VISTARANEWS.COM


on

By

Anekal Dasara 2023
Koo

ಆನೇಕಲ್‌: ನಾಡಹಬ್ಬ ಮೈಸೂರು ದಸರಾ ಮಾದರಿಯಲ್ಲೇ ಆನೇಕಲ್‌ನಲ್ಲೂ (Anekal Dasara) ವಿಜಯದಶಮಿ ದಸರಾ ಉತ್ಸವ ಮತ್ತು ಜಂಬೂ ಸವಾರಿ (Jambu savari) ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಕೇರಳ ಮೂಲದ ಸಾಧು ಆನೆ ಚೌಡೇಶ್ವರಿ ದೇವಿ ಉತ್ಸವ ಮೂರ್ತಿ ಅಂಬಾರಿ ಹೊತ್ತು ಜಂಬೂಸವಾರಿ ಮೂಲಕ ಆನೇಕಲ್ ದಸರಾ ಉತ್ಸವಕ್ಕೆ ಮೆರಗು ನೀಡಿತು. ರಾಜಗಾಂಭೀರ್ಯದಲ್ಲಿ ಗಜರಾಜ ಹೆಜ್ಜೆ ಹಾಕಿದ್ದು ಭಕ್ತ ಸಾಗರ ಅದ್ಧೂರಿ ದಸರಾ ಜಂಬು ಸವಾರಿಯನ್ನು ಕಂಡು ಪುನೀತರಾಗಿದ್ದಾರೆ.

Anekal And bannerughatta  Dasara 2023

ಮೈಸೂರಿನಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿ ಜಂಬೂಸವಾರಿ ನಡೆಸಿದಂತೆ ಆನೇಕಲ್‌ನಲ್ಲೂ ನಾಡಹಬ್ಬ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ್ದಾರೆ. ನಗರದ ಆದಿ ದೇವತೆ ಚೌಡೇಶ್ವರಿ ದೇವಿ ಅಂಬಾರಿಯನ್ನು ಹೊತ್ತ ಕೇರಳದ ಸಾಧು ಆನೆ ಸವಾರಿ ಪಟ್ಟಣದ ತಾಲೂಕು ಕಚೇರಿಯಿಂದ ತಿಲಕ್ ವೃತ್ತದ ಚೌಡೇಶ್ವರಿ ದೇವಾಲಯದ ಬಳಿ ಬರುತ್ತಿದ್ದಂತೆ ಜನಸಾಗರ ತುಂಬಿತ್ತು.

Anekal And bannerughatta  Dasara 2023

ದಿವ್ಯ ಜ್ಞಾನನಂದ ಸ್ವಾಮಿ ಹಾಗೂ ಶಾಸಕ ಬಿ.ಶಿವಣ್ಣ ಸೇರಿದಂತೆ ಗಣ್ಯರು ಜಂಬೂಸವಾರಿ ಹೊರಟಿದ್ದ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಆನೇಕಲ್ ‌ನಗರದ ಪ್ರಮುಖ ಬೀದಿಗಳಲ್ಲಿ ಜಂಬೂಸವಾರಿ ಗಜಗಾಂಭೀರ್ಯವಾಗಿ ಸಾಗಿತು. ಚೌಡೇಶ್ವರಿ ದೇವಿ ಅಂಬಾರಿ ಹೊತ್ತು ಸಾಗಿದ ಸಾಧು ಆನೆಯನ್ನು ಕಂಡು ಭಕ್ತರು ರೋಮಾಂಚನಗೊಂಡರು.

ಇದನ್ನೂ ಓದಿ: Karnataka Weather : ಮಳೆಯಾಟ ಬಂದ್‌; ಇನ್ನೆರಡು ದಿನ ಕರ್ನಾಟಕ ಸಿಕ್ಕಾಪಟ್ಟೆ Hot

Anekal And bannerughatta  Dasara 2023

ತಮಿಳುನಾಡು, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಅಪಾರ ಸಂಖ್ಯೆಯ ಭಕ್ತರು ತಿಲಕ್ ವೃತ್ತದ ಬಳಿ ಚೌಡೇಶ್ವರಿ ದೇವಿ ಅಂಬಾರಿ ದೃಶ್ಯವನ್ನು ಕಣ್ತುಂಬಿಕೊಂಡರು. ಎಂದಿನಂತೆ ತೋಗಟವೀರ ಜನಾಂಗದ ಸದಸ್ಯರು ವಿಜಯದಶಮಿ ಉತ್ಸವ ವಿಜೃಂಭಣೆಯಿಂದ ನೆರವೇರಿಸಿದ್ದರು. ತಾಯಿ ಚೌಡೇಶ್ವರಿ ಸರ್ವರಿಗೂ ಒಳಿತು ಮಾಡಲಿ ಎಂದು ಶಾಸಕ ಬಿ ಶಿವಣ್ಣ ಪ್ರಾರ್ಥಿಸಿದರು.

Anekal And bannerughatta  Dasara 2023

ವಿಶ್ವ ವಿಖ್ಯಾತ ಮೈಸೂರು ದಸರಾ ಮಾದರಿಯಲ್ಲಿಯೇ ಆನೇಕಲ್ ದಸರಾ ನಡೆಯುತ್ತಿದ್ದು, ಮಿನಿ ದಸರಾ ಎಂದೇ ಪ್ರಖ್ಯಾತಿಗಳಿಸುತ್ತಿದೆ. ಕಲಾತಂಡಗಳ ಜತೆಗೆ ಅಂಬಾರಿ ಸಾಗುವ ದೃಶ್ಯ ನೋಡುವುದೇ ಒಂದು ಹಬ್ಬವಾಗಿತ್ತು. ಕಲಾತಂಡಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ನೆರೆದಿದ್ದ ಜನರನ್ನು ರಂಜಿಸಿದ್ದರು.

Anekal And bannerughatta  Dasara 2023

ಚಂಪಕಧಾಮಸ್ವಾಮಿ ಜಂಬೂ ಸವಾರಿ

ಬನ್ನೇರುಘಟ್ಟದಲ್ಲೂ ಶ್ರೀ ಚಂಪಕಧಾಮಸ್ವಾಮಿ ಜಂಬೂ ಸವಾರಿ ನಡೆದಿದೆ. ದೇವರ ಉತ್ಸವ ಮೂರ್ತಿ ಹೊತ್ತಿದ ಅಂಬಾರಿಗೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿ ಜಂಬೂ ಸವಾರಿಗೆ ಚಾಲನೆ ನೀಡಿದರು. ಉತ್ಸವ ಮೂರ್ತಿಯನ್ನು ಹೊತ್ತ ಗಜರಾಜ ಬನ್ನೇರುಘಟ್ಟದ ರಾಜಬೀದಿಗಳಲ್ಲಿ ರಾಜಗಾಂಭೀರ್ಯದಿಂದ ಜಾನಪದ ಕಲಾತಂಡಗಳ ಜತೆ ಹೆಜ್ಜೆ ಹಾಕಿತು. ಬೆಂಗಳೂರು, ತಮಿಳುನಾಡು ಸೇರಿದಂತೆ ನಾನಾ ಕಡೆಗಳಿಂದ ಆಗಮಿಸಿರುವ ಭಕ್ತ ಸಾಗರ ಕಣ್ತುಂಬಿಕೊಂಡರು.

Anekal And bannerughatta  Dasara 2023

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading
Advertisement
prajwal revanna case puttaraj shreyas patel karthik
ಪ್ರಮುಖ ಸುದ್ದಿ24 mins ago

Prajwal Revanna Case: ವಿಡಿಯೋ ಕಿಂಗ್‌ಪಿನ್‌ ಕಾರ್ತಿಕ್‌ ಕಾಂಗ್ರೆಸ್‌ ಅಭ್ಯರ್ಥಿ ಜೊತೆ ಕ್ಲೋಸ್;‌ ʼಕೈʼವಾಡಕ್ಕೆ ಸಾಕ್ಷಿ ಫೋಟೋಗಳು ಇಲ್ಲಿವೆ!

Actor Sathyaraj throwback picture of with veteran actor
ಮಾಲಿವುಡ್32 mins ago

Actor Sathyaraj: `ಬಾಹುಬಲಿ’ ಕಟ್ಟಪ್ಪನ ತೊಡೆ ಮೇಲೆ ಕುಳಿತ ಈ ಕ್ಯೂಟ್‌ ನಟ ಯಾರು? ಹೇಳಿ ನೋಡೋಣ!

Alia Bhatt Deep Fake Wamiqa Gabbi face replaced
ಬಾಲಿವುಡ್33 mins ago

Alia Bhatt Deep Fake: ಆಲಿಯಾ ಭಟ್‌ ಡೀಪ್‌ಫೇಕ್‌ ವಿಡಿಯೊ ವೈರಲ್‌! ಅಸಲಿ ಮುಖ ಯಾರದ್ದು?

Sindhuri Vs Roopa
ಕರ್ನಾಟಕ36 mins ago

Sindhuri Vs Roopa: ಆರೋಪ-ಪ್ರತ್ಯಾರೋಪ ಬಿಟ್ಟು ಸಂಧಾನದತ್ತ ಗಮನ ಹರಿಸಿ; ರೂಪ-ರೋಹಿಣಿಗೆ ಸುಪ್ರೀಂ ಕೋರ್ಟ್‌ ಸಲಹೆ

Puttakkana Makkalu umashree acting praised
ಕಿರುತೆರೆ37 mins ago

Puttakkana Makkalu: ʻಪುಟ್ಟಕ್ಕʼನ ನಟನೆಗೆ ಕೋಟಿ ಕೋಟಿ ನಮನ ಅಂತಿದ್ದಾರೆ ಫ್ಯಾನ್ಸ್‌!

hanuman flag keragodu mandya
ಕ್ರೈಂ1 hour ago

Hanuman Flag: ಕೆರಗೋಡು ಹನುಮಧ್ವಜ ಪ್ರಕರಣದ 3 ಹೋರಾಟಗಾರರ ಮೇಲೆ ರೌಡಿಶೀಟ್

Human trafficking
ದೇಶ1 hour ago

Human trafficking: ಕೆಲಸ ಕೊಡಿಸೋದಾಗಿ ನಂಬಿಸಿ ರಷ್ಯಾ-ಉಕ್ರೇನ್‌ ಯುದ್ಧ ಪೀಡಿತ ಪ್ರದೇಶಕ್ಕೆ ರವಾನೆ-ಇಬ್ಬರು ಅರೆಸ್ಟ್‌

Kanakalatha Passes Away Film serial actor Mollywood
ಮಾಲಿವುಡ್2 hours ago

Kanakalatha Passes Away: 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟಿ ಇನ್ನಿಲ್ಲ

Prajwal Revanna Case
ಕ್ರೈಂ2 hours ago

Prajwal Revanna Case: ಗಡುವು ಮುಗೀತು, ಬೆಂಗಳೂರಿಗೆ ಹೊರಟರಾ ಪ್ರಜ್ವಲ್‌ ರೇವಣ್ಣ?

Laapataa Ladies Phool At Met Gala At Photoshop
ಬಾಲಿವುಡ್2 hours ago

Laapataa Ladies: ಮೆಟ್ ಗಾಲಾ ರೆಡ್ ಕಾರ್ಪೆಟ್​ನಲ್ಲಿ ‘ಲಾಪತಾ ಲೇಡೀಸ್’ನಟಿ! ಅಸಲಿ ಸಂಗತಿ ಏನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ15 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ18 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ20 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌