Olympics 2024 : ನೀರಜ್ ಚೋಪ್ರಾ ಜಾವೆಲಿನ್ ಎಸೆತ ಸೇರಿದಂತೆ ಇಂದು ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಭಾರತೀಯ ಸ್ಪರ್ಧಿಗಳು ಇವರು… - Vistara News

ಪ್ರಮುಖ ಸುದ್ದಿ

Olympics 2024 : ನೀರಜ್ ಚೋಪ್ರಾ ಜಾವೆಲಿನ್ ಎಸೆತ ಸೇರಿದಂತೆ ಇಂದು ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಭಾರತೀಯ ಸ್ಪರ್ಧಿಗಳು ಇವರು…

Olympics 2024: ಮಂಗಳವಾರ ಕುಸ್ತಿಪಟು ವಿನೇಶ್ ಫೋಗಟ್ ಕೂಡ ಕಣಕ್ಕಿಳಿಯಲಿದ್ದು, ಸತತ ಮೂರು ಒಲಿಂಪಿಕ್ ಅಭಿಯಾನಗಳಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು 16ರ ಸುತ್ತಿನಲ್ಲಿ ತಮ್ಮ ಅಭಿಯಾನ ಪ್ರಾರಂಭಿಸುತ್ತಾರೆ.

VISTARANEWS.COM


on

Olympics 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹಾಲಿ ಒಲಿಂಪಿಕ್ (Olympics 2024) ಚಾಂಪಿಯನ್ ಜಾವೆಲಿನ್​ ಎಸೆತಗಾಗ ನೀರಜ್ ಚೋಪ್ರಾ ಮಂಗಳವಾರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ತಮ್ಮ ಪ್ರಶಸ್ತಿ ಉಳಿಸಿಕೊಳ್ಳುವುದಕ್ಕೆ ಸ್ಪರ್ಧೆ ಪ್ರಾರಂಭಿಸಲಿದ್ದಾರೆ. ಚೋಪ್ರಾ ಮತ್ತು ಕಿಶೋರ್ ಕುಮಾರ್ ಜೆನಾ ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ ಕಣಕ್ಕಿಳಿಯಲಿದ್ದಾರೆ. ಇದೇ ವೇಳೆ ಹಾಕಿಯಲ್ಲಿ ದೊಡ್ಡ ಪಂದ್ಯವೂ ಇದೆ. ಭಾರತೀಯ ಪುರುಷರ ತಂಡವು ಫೈನಲ್​ಗೆ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಲು ಎದುರು ನೋಡುತ್ತಿದೆ. ಹರ್ಮನ್ ಪ್ರೀತ್ ಸಿಂಗ್ ಪಡೆ ಸೆಮಿಫೈನಲ್​ನಲ್ಲಿ ವಿಶ್ವ ಚಾಂಪಿಯನ್ ಜರ್ಮನಿಯನ್ನು ಎದುರಿಸಲಿದೆ. ಈ ಟಾಸ್ಕ್ ಸುಲಭವಲ್ಲ. ಆದರೆ ಪುರುಷರ ತಂಡವು ಆಸ್ಟ್ರೇಲಿಯಾ ಮತ್ತು ಗ್ರೇಟ್ ಬ್ರಿಟನ್ ವಿರುದ್ಧ ಎರಡು ಅದ್ಭುತ ಪ್ರದರ್ಶನಗಳನ್ನು ನೀಡಿ ಸೆಮಿಫೈನಲ್ ಗೆ ಪ್ರವೇಶಿಸಿದೆ.

ಮಂಗಳವಾರ ಕುಸ್ತಿಪಟು ವಿನೇಶ್ ಫೋಗಟ್ ಕೂಡ ಕಣಕ್ಕಿಳಿಯಲಿದ್ದು, ಸತತ ಮೂರು ಒಲಿಂಪಿಕ್ ಅಭಿಯಾನಗಳಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು 16ರ ಸುತ್ತಿನಲ್ಲಿ ತಮ್ಮ ಅಭಿಯಾನ ಪ್ರಾರಂಭಿಸುತ್ತಾರೆ.

ಆಗಸ್ಟ್ 6, ಭಾರತದ ವೇಳಾಪಟ್ಟಿಯ ನೋಟ ಇಲ್ಲಿದೆ

ಮಧ್ಯಾಹ್ನ 1:30: ಟೇಬಲ್ ಟೆನಿಸ್ – ಪುರುಷರ ತಂಡ ಸುತ್ತಿನ 16 ಪಂದ್ಯದಲ್ಲಿ ಭಾರತ ಮತ್ತು ಚೀನಾ.

ಭಾರತದ ಶರತ್ ಕಮಲ್, ಹರ್ಮೀತ್ ದೇಸಾಯಿ ಮತ್ತು ಮಾನವ್ ಠಕ್ಕರ್ ಕ್ವಾರ್ಟರ್ ಫೈನಲ್​​ನಲ್ಲಿ ಅಗ್ರ ಶ್ರೇಯಾಂಕಿತ ಮತ್ತು ಚಿನ್ನದ ಪದಕ ನೆಚ್ಚಿನ ತಂಡವಾಗಿರುವ ಚೀನಾವನ್ನು ಎದುರಿಸಲಿದ್ದಾರೆ. ಚೀನಾದ ತಂಡವನ್ನು ಫ್ಯಾನ್ ಝೆಂಡಾಂಗ್, ಮಾ ಲಾಂಗ್ ಮತ್ತು ವಾನ್ಫ್ಗ್ ಚುಕಿನ್ ಮುನ್ನಡೆಸಲಿದ್ದಾರೆ.

ಇದನ್ನೂ ಓದಿ: A R Rahman : ಒಲಿಂಪಿಕ್ಸ್ ನಡುವೆಯೇ ವೈರಲ್ ಆಯ್ತು ಎಆರ್​ ರೆಹಮಾನ್ ಸಂಗೀತದ’ ತಾಲ್​ ಸೆ ತಾಲ್​’ ಹಾಡು; ಪ್ರತಿಕ್ರಿಯೆ ನೀಡಿದ ಚಿತ್ರ ನಿರ್ದೇಶಕ

ಮಧ್ಯಾಹ್ನ 1:50: ಅಥ್ಲೆಟಿಕ್ಸ್ – ಪುರುಷರ ಜಾವೆಲಿನ್ ಥ್ರೋ ಅರ್ಹತೆ ಸುತ್ತಿನಲ್ಲಿ ನೀರಜ್ ಚೋಪ್ರಾ ಮತ್ತು ಕಿಶೋರ್ ಜೆನಾ. ಜೆನಾ ಎ ಗುಂಪಿನಲ್ಲಿದ್ದಾರೆ, ಅಂದರೆ ಅವರ ಅರ್ಹತೆ 1:50 ಕ್ಕೆ ಪ್ರಾರಂಭವಾಗುತ್ತದೆ. ನೀರಜ್ ‘ಬಿ’ ಗುಂಪಿನಲ್ಲಿದ್ದು, ಅರ್ಹತಾ ಸುತ್ತು ಮಧ್ಯಾಹ್ನ 3.20ಕ್ಕೆ ಆರಂಭವಾಗಲಿದೆ. 84 ಮೀಟರ್ ಅರ್ಹತಾ ಮಾನದಂಡವನ್ನು ಪೂರೈಸುವ ಕ್ರೀಡಾಪಟುಗಳು ಅಥವಾ ಅಗ್ರ 12 ಎಸೆತಗಾರರು ಫೈನಲ್​​ಗೆ ಪ್ರವೇಶಿಸುತ್ತಾರೆ.

ಮಧ್ಯಾಹ್ನ 2:50 : ಅಥ್ಲೆಟಿಕ್ಸ್ – ಕಿರಣ್ ಪಹಲ್ ಮಹಿಳೆಯರ 400 ಮೀಟರ್ ರೆಪೆಚೇಜ್ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ. ಇಲ್ಲಿ, ಪ್ರತಿ ರಿಪೆಚೇಜ್ ಸುತ್ತಿನ ವಿಜೇತರು ಮತ್ತು ಮುಂದಿನ ಇಬ್ಬರು ವೇಗವಾಗಿ ಸೆಮಿಫೈನಲ್ ಗೆ ಅರ್ಹತೆ ಪಡೆಯುತ್ತಾರೆ.

ಮಧ್ಯಾಹ್ನ 3 ಗಂಟೆಯಿಂದ: ಕುಸ್ತಿ – ಮಹಿಳೆಯರ 50 ಕೆ.ಜಿ ಫ್ರೀಸ್ಟೈಲ್ ಪ್ರಿ ಕ್ವಾರ್ಟರ್ ಫೈನಲ್ಸ್​ನಲ್ಲಿ ವಿನೇಶ್ ಫೋಗಟ್ ಸ್ಪರ್ಧಿಸಲಿದ್ದಾರೆ. ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳು ಒಂದೇ ದಿನ ನಡೆಯಲಿದ್ದು, ವಿನೇಶ್ ಪದಕ ಸುತ್ತಿಗೆ ಅರ್ಹತೆ ಪಡೆಯಬಹುದು.

ಸಂಜೆ 6:30: ಟೇಬಲ್ ಟೆನಿಸ್: ಮಹಿಳಾ ತಂಡ ಕ್ವಾರ್ಟರ್ ಫೈನಲ್​​ ಪಂದ್ಯ; ಭಾರತ ಮತ್ತು ಯುಎಸ್ಎ ಅಥವಾ ಜರ್ಮನಿ.

ರಾತ್ರಿ 10:30: ಪುರುಷರ ಹಾಕಿ ಸೆಮಿಫೈನಲ್​ನಲ್ಲಿ ಭಾರತ ಮತ್ತು ಜರ್ಮನಿ ಸ್ಪರ್ಧಿಸಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Dinesh Karthik : ಆರ್​ಸಿಬಿ ಮೆಂಟರ್​ ​ ದಿನೇಶ್​ ಕಾರ್ತಿಕ್​​ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್​ನಿಂದ ವಿಶೇಷ ಗೌರವ

Dinesh Karthik : ಎಸ್ಎ 20 ರಾಯಭಾರಿಯಾಗಿ ಸೇರಲು ನಾನು ಉತ್ಸುಕನಾಗಿದ್ದೇನೆ” ಎಂದು ಕಾರ್ತಿಕ್ ಹೇಳಿದರು. ಮೊದಲ ಎರಡು ಋತುಗಳಲ್ಲಿ ಲೀಗ್ ಅದ್ಭುತವಾಗಿ ನಡೆದಿದ್ದು ವಿಶ್ವದ ಕೆಲವು ಅತ್ಯುತ್ತಮ ಆಟಗಾರರು ಪ್ರದರ್ಶನ ನೀಡಿದ್ದಾರೆ. ಎಸ್ಎ 20 ಯೊಂದಿಗೆ ಸಂಬಂಧ ಹೊಂದಿರುವುದು ಒಂದು ಗೌರವ. ಗ್ರೇಮ್ ಸ್ಮಿತ್​ ಮತ್ತು ಅವರ ತಂಡದೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಕಾರ್ತಿಕ್​ ಹೇಳಿದ್ದಾರೆ.

VISTARANEWS.COM


on

Dinesh Karthik
Koo

ಜೋಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾದ ಪ್ರಮುಖ ಟಿ 20 ಟೂರ್ನಿಯಾದ ಎಸ್ಎ 20 ಲೀಗ್ ರಾಯಭಾರಿಯಾಗಿ ದಿನೇಶ್ ಕಾರ್ತಿಕ್ (Dinesh Karthik ) ಅವರನ್ನು ನೇಮಕ ಮಾಡಲಾಗಿದೆ. ವಿಶ್ವಕಪ್ ವಿಜೇತ ಮತ್ತು ಮಾಜಿ ಭಾರತೀಯ ರಾಷ್ಟ್ರೀಯ ಆಟಗಾರನಾಗಿ ಕಾರ್ತಿಕ್ ಅವರ ಅಪಾರ ಕ್ರಿಕೆಟ್ ಪರಿಣತಿಯನ್ನು ಪರಿಗಣಿಸಿ ಅವರನ್ನು ಬ್ರಾಂಡ್​ ಅಂಬಾಸಿಡರ್​ ಆಗಿ ಆಯ್ಕೆ ಮಾಡಲಾಗಿದೆ. ಇದು ವಿಶ್ವದ ಉನ್ನತ ಶ್ರೇಣಿಯ ಫ್ರ್ಯಾಂಚೈಸ್ ಲೀಗ್​​ಗಳಲ್ಲಿ ಒಂದಾಗಿ ಬೆಳೆಯುತ್ತಿದೆ.

ಎಸ್ಎ 20 ರಾಯಭಾರಿಯಾಗಿ ಸೇರಲು ನಾನು ಉತ್ಸುಕನಾಗಿದ್ದೇನೆ” ಎಂದು ಕಾರ್ತಿಕ್ ಹೇಳಿದರು. ಮೊದಲ ಎರಡು ಋತುಗಳಲ್ಲಿ ಲೀಗ್ ಅದ್ಭುತವಾಗಿ ನಡೆದಿದ್ದು ವಿಶ್ವದ ಕೆಲವು ಅತ್ಯುತ್ತಮ ಆಟಗಾರರು ಪ್ರದರ್ಶನ ನೀಡಿದ್ದಾರೆ. ಎಸ್ಎ 20 ಯೊಂದಿಗೆ ಸಂಬಂಧ ಹೊಂದಿರುವುದು ಒಂದು ಗೌರವ. ಗ್ರೇಮ್ ಸ್ಮಿತ್​ ಮತ್ತು ಅವರ ತಂಡದೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಕಾರ್ತಿಕ್​ ಹೇಳಿದ್ದಾರೆ.

39 ವರ್ಷದ ಭಾರತದ ಮಾಜಿ ಅಂತರರಾಷ್ಟ್ರೀಯ ಆಟಗಾರ ಫ್ರ್ಯಾಂಚೈಸ್ ಟಿ 20 ಕ್ರಿಕೆಟ್ ಬಗ್ಗೆ ನಿಕಟ ಜ್ಞಾನ ಹೊಂದಿದ್ದಾರೆ. 2008 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾದಾಗಿನಿಂದ ಲೀಗ್​​ನ ಭಾಗವಾಗಿದ್ದಾರೆ.

ಅವರು ತಮ್ಮ 16 ವರ್ಷಗಳ ಐಪಿಎಲ್ ವೃತ್ತಿಜೀವನದಲ್ಲಿ ಆರು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಈ ಅವಧಿಯಲ್ಲಿ, ಕಾರ್ತಿಕ್ 26.32 ಸರಾಸರಿಯಲ್ಲಿ 4842 ರನ್ ಗಳಿಸಿದ್ದಾರೆ ಮತ್ತು 135.66 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅವರು ವಿಕೆಟ್ ಹಿಂದೆ 145 ಕ್ಯಾಚ್ ಗಳನ್ನು ಪಡೆದಿದ್ದಾರೆ ಮತ್ತು 37 ಸ್ಟಂಪಿಂಗ್ ಗಳನ್ನು ಪೂರ್ಣಗೊಳಿಸಿದ್ದಾರೆ.

ತಮ್ಮ ವೃತ್ತಿಜೀವನದ ಕೊನೆಯ ಹಂತಗಳಲ್ಲಿ, ಕಾರ್ತಿಕ್ ತಮ್ಮ ಆಟಕ್ಕೆ ಸ್ಫೋಟಕ ಅಂಶವನ್ನು ಸೇರಿಸುವ ಮೂಲಕ ಕಿರು ಸ್ವರೂಪದ ಅತ್ಯುತ್ತಮ ಫಿನಿಶರ್ಗಳಲ್ಲಿ ಒಬ್ಬರಾಗಿ ಮಾರ್ಪಟ್ಟಿದ್ದಾರೆ.

ಪ್ರೀತಿಯಿಂದ ‘ಡಿಕೆ’ ಎಂದು ಕರೆಯುವ ಅವರು ವಿಶ್ವದ ಅತ್ಯಂತ ಇಷ್ಟಪಡುವ ದೂರದರ್ಶನ ವೀಕ್ಷಕ ವಿವರಣೆಗಾರರಲ್ಲಿ ಒಬ್ಬರಾಗಿ ಬೆಳೆದಿದ್ದಾರೆ. ಆಟದ ಬಗ್ಗೆ ಅವರ ಜ್ಞಾನವು ಮುನ್ನೆಲೆಗೆ ಬರುವುದಲ್ಲದೆ, ಅವರ ವಿಶಿಷ್ಟ ಹಾಸ್ಯ ಪ್ರಜ್ಞೆಯೂ ವಿಶೇಷ.

ಇದನ್ನೂ ಓದಿ: Women’s T20 World Cup : ಬಾಂಗ್ಲಾದಲ್ಲಿ ಕ್ಷೋಭೆ; ಮಹಿಳೆಯ ಟಿ20 ವಿಶ್ವ ಕಪ್ ಮುಂದೂಡಿಕೆ?

ಲೀಗ್ ರಾಯಭಾರಿಯಾಗಿ ದಿನೇಶ್ ಕಾರ್ತಿಕ್ ಅವರ ನೇಮಕದ ಬಗ್ಗೆ ಮಾತನಾಡಿದ ಎಸ್ಎ 20 ಲೀಗ್ ಆಯುಕ್ತ ಗ್ರೇಮ್ ಸ್ಮಿತ್, “ಎಸ್ಎ 20 ಸೀಸನ್ 3 ರ ರಾಯಭಾರಿಯಾಗಿ ಡಿಕೆ ಅವರನ್ನು ಸ್ವಾಗತಿಸಲು ನಾವು ರೋಮಾಂಚನಗೊಂಡಿದ್ದೇವೆ. ಅವರ ಅಸಾಧಾರಣ ಕ್ರಿಕೆಟ್ ಪ್ರತಿಭೆ ಮತ್ತು ವ್ಯಕ್ತಿತ್ವವು ಅವರನ್ನು ನಮ್ಮ ಲೀಗ್​​ಗೆ ಸೂಕ್ತವಾಗಿದೆ. ಅವರ ಪಾಲ್ಗೊಳ್ಳುವಿಕೆಯು ನಿಸ್ಸಂದೇಹವಾಗಿ ಜಾಗತಿಕವಾಗಿ ಮತ್ತು ಭಾರತದಲ್ಲಿ ಲೀಗ್​​ನ ಸ್ಥಾನಮಾನ ಹೆಚ್ಚಿಸುತ್ತದೆ. ಮುಂಬರುವ ಅದ್ಭುತ ಋತುವನ್ನು ನಾವು ಎದುರು ನೋಡುತ್ತಿದ್ದೇವೆ, ಇದನ್ನು ಅದ್ಭುತ ಯಶಸ್ಸನ್ನು ಮಾಡುವಲ್ಲಿ ಡಿಕೆ ಪ್ರಮುಖ ಪಾತ್ರ ವಹಿಸಿದ್ದಾರೆ.

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಜಿಹಾದಿ, ಮಿಷನರಿಗಳ ಸಾವಿರ ಹಿರೋಷಿಮಾಗಳು ಕಾಯುತ್ತಿವೆ

ನನ್ನ ದೇಶ ನನ್ನ ದನಿ ಅಂಕಣ: ಇಂದು ಭಾರತದ ಮೇಲೆ, ನೂರೆಂಟು ಹಿರೋಷಿಮಾಗಳನ್ನು ಸುರಿದುಬಿಡಲು ಜಿಹಾದೀ – ಮಿಷನರಿ – ಕಮ್ಯೂನಿಸ್ಟ್ ದುಃಶಕ್ತಿಗಳು ಹವಣಿಸುತ್ತಿವೆ. ಆಕ್ರಮಣಕಾರಿ ದುಃಶಕ್ತಿಗಳನ್ನು ಅರ್ಥ ಮಾಡಿಕೊಳ್ಳದ ಮತ್ತು ಅನಗತ್ಯ ಔದಾರ್ಯದಿಂದ ಸ್ವತಃ ನಾಶವಾಗಿಹೋದ ನಾವು ಇನ್ನಾದರೂ ಜಾಗೃತರಾಗೋಣ, ನಿಜ-ಭಾರತವನ್ನು ಉಳಿಸಿಕೊಳ್ಳೋಣ.

VISTARANEWS.COM


on

chamanlal book ನನ್ನ ದೇಶ ನನ್ನ ದನಿ ಅಂಕಣ
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

:: ಮಂಜುನಾಥ ಅಜ್ಜಂಪುರ

ನನ್ನ ದೇಶ ನನ್ನ ದನಿ ಅಂಕಣ: ನಮ್ಮದು ಅತಿ-ವಿಶಿಷ್ಟ ಸಾಂಸ್ಕೃತಿಕ (Cultural) ಪರಂಪರೆ. ಭಾರತವನ್ನು – ಭಾರತದ ಆತ್ಮವನ್ನು (soul of India) ಅರ್ಥ ಮಾಡಿಕೊಳ್ಳಲು, ಪಾಶ್ಚಾತ್ಯ ಮಾನಸಿಕತೆಯನ್ನು ಮತ್ತು ಆ ವಾಹಿನಿಯಿಂದ ಬಂದ ಸಾಮ್ರಾಜ್ಯಶಾಹಿ ಪರಿಕಲ್ಪನೆಗಳನ್ನು ಪಕ್ಕಕ್ಕಿರಿಸಿ, ಸಾಂಸ್ಕೃತಿಕ ಭಾರತವನ್ನು ಕಣ್ಮುಂದೆ ತಂದುಕೊಳ್ಳಲು ನಾವು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ, ನಮ್ಮ ಅಸ್ಮಿತೆ – ನಮ್ಮ ವೈಶಿಷ್ಟ್ಯಗಳು ಆತ್ಮಗತವಾಗುತ್ತವೆ.

ಆಕ್ರಮಣಕಾರಿ ಅಬ್ರಹಾಮಿಕ್ ಮತಗಳಿಂದ ನಮಗೆ ಬಹಳ ದೊಡ್ಡ ಆಘಾತವೇ ಮುಗಿಬಿದ್ದಿದೆ. ಲಕ್ಷ ಲಕ್ಷ ಗ್ರಂಥಗಳು ಜಿಹಾದಿಗಳಿಂದ ನಾಶವಾಗಿಹೋಗಿವೆ. ನಮ್ಮ ಪರಂಪರೆಯ ಸರಿಯಾದ ಚಿತ್ರವೇ ಇನ್ನೂ ಸಿಕ್ಕಿಲ್ಲ. ನಮ್ಮ ಇತಿಹಾಸದ, ನಮ್ಮ ಪರಂಪರೆಯ ತುಂಬ ತುಂಬ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಸಂಶೋಧಿಸುವ ಮಹತ್ಕಾರ್ಯ ಇನ್ನೂ ಆರಂಭವಾಗಿಯೇ ಇಲ್ಲ.

ನಮಗೆ ಗ್ರಂಥನಾಶಕ್ಕಿಂತ ದೊಡ್ಡ ಪೆಟ್ಟು ಬಿದ್ದದ್ದು ಮೆಕಾಲೆವಾದಿ – ಜಿಹಾದೀ – ಕಮ್ಯೂನಿಸ್ಟ್ ದೇಶದ್ರೋಹಿ ಇತಿಹಾಸಕಾರರಿಂದ. ಇವರೆಲ್ಲಾ ನಮ್ಮ ಇತಿಹಾಸ ಪಠ್ಯಪುಸ್ತಕಗಳಲ್ಲಿ ಬರೀ ಅನೃತವನ್ನೇ ತುಂಬಿದುದರಿಂದ, ಸತ್ಯಕಥನಗಳಿಗಾಗಿ ಬೇರೆ ಬೇರೆ ಸಾಕ್ಷ್ಯಾಧಾರಗಳನ್ನು ನಾವೀಗ ಆಶ್ರಯಿಸಬೇಕಾಗಿದೆ. ಜಗತ್ತಿನ ಶ್ರೇಷ್ಠ ಇತಿಹಾಸಕಾರರಾದ ವಿಲ್ ಡ್ಯೂರಾಂಟ್ ಭಾರತವನ್ನು ಅರ್ಥ ಮಾಡಿಕೊಂಡವರಲ್ಲಿ ಒಬ್ಬರು. ಇಸ್ಲಾಮೀ ದುರಾಕ್ರಮಣಗಳಿಂದ ರಕ್ತಸಿಕ್ತವಾಗಿಹೋಗಿದ್ದ ಭಾರತಕ್ಕಾಗಿ ಅವರು ಮಿಡಿದಿದ್ದರು.

“ಭಾರತವು ನಮ್ಮ ಜನಾಂಗದ ಮಾತೃಭೂಮಿ. ಸಂಸ್ಕೃತ ಭಾಷೆಯು ಯೂರೋಪಿನ ಭಾಷೆಗಳ ತಾಯಿ. ನಮ್ಮ ತತ್ತ್ವಶಾಸ್ತ್ರ, ಗಣಿತ, ಸ್ವಯಮಾಡಳಿತ ಮತ್ತು ಜನತಂತ್ರಗಳ ಪರಿಕಲ್ಪನೆಯ ಮೂಲವು ಭಾರತವೇ. ಅನೇಕ ರೀತಿಯಲ್ಲಿ ಭಾರತವೇ ನಮ್ಮೆಲ್ಲರ ತಾಯಿ” ಎಂದಿದ್ದರು ವಿಲ್ ಡ್ಯೂರಾಂಟ್.

ಈ ಮಾತುಗಳಿಂದ ಪ್ರೇರಣೆ ಪಡೆದ ಭಿಕ್ಷು ಚಮನ್ ಲಾಲ್ ಅವರು “India Mother of us all” (ಪ್ರಕಟಣೆ 1968) ಎಂಬ ಮಹತ್ತ್ವದ ಕೃತಿಯನ್ನು ನೀಡಿದ್ದಾರೆ. ಎಲ್.ವಿ. ಶಾಂತಕುಮಾರಿ ಅವರು “ನಮ್ಮೆಲ್ಲರ ತಾಯಿ ಭಾರತ” ಎಂಬ ತುಂಬ ಚಂದದ ಕನ್ನಡಾನುವಾದವನ್ನು ನೀಡಿದ್ದಾರೆ. ಬೇರೆಬೇರೆ ದೇಶಗಳ ಅನೇಕ ವಿದ್ವಾಂಸರ ಅಭಿಮತ ಮತ್ತು ಸತ್ಯನಿಷ್ಠ ಮೆಚ್ಚುಗೆಗಳನ್ನು ಇಲ್ಲಿ ದಾಖಲಿಸಲಾಗಿದೆ.

“ಭಾರತದ ಜನರು ಧಾರ್ಮಿಕರು, ವಾತ್ಸಲ್ಯಮಯ ವ್ಯಕ್ತಿತ್ವದವರು, ಅತಿಥಿ ಸತ್ಕಾರ ಮಾಡುವವರು, ಸ್ನೇಹಪರರು, ಮುಚ್ಚುಮರೆಯಿರದ ಸರಳಜೀವಿಗಳು. ಭಾರತೀಯರು ಪ್ರಾಂಜಲ ಸ್ವಭಾವದವರು, ವೈಜ್ಞಾನಿಕ ಸಂಶೋಧನೆಗಳಲ್ಲಿ ನಿರತರಾಗಿರುವವರು, ಜೀವನದಲ್ಲಿ ಕಠಿಣ ನಿಯಮಗಳನ್ನು ಅನುಸರಿಸುವವರು, ನ್ಯಾಯಾನ್ವೇಷಿಗಳು, ತೃಪ್ತರು, ಉದ್ಯಮಶೀಲರು, ವ್ಯವಹಾರ ಸಮರ್ಥರು, ನಿಷ್ಠರು, ಸತ್ಯಸಂಧರು ಮತ್ತು ಸ್ಥಿರವಾಗಿ ನಿಲ್ಲುವವರು. ಈ ಜನಗಳ ನಿಜವಾದ ಜೀವನಮೌಲ್ಯವು ವಿಪತ್ಕಾಲದಲ್ಲಿ ಎದ್ದುತೋರುತ್ತದೆ. ಇಲ್ಲಿನ ಯೋಧರಿಗೆ ರಣರಂಗದಿಂದ ಹಿಮ್ಮೆಟ್ಟುವುದು ಗೊತ್ತೇ ಇಲ್ಲ. ಯುದ್ಧರಂಗದಲ್ಲಿ ಗಟ್ಟಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದಾಗ ಅವರು ಕುದುರೆಗಳಿಂದ ಕೆಳಗಿಳಿದು ತಮ್ಮ ಜೀವಗಳನ್ನೇ ಅಪಾಯಕ್ಕೆ ಒಡ್ಡಿಕೊಂಡು ದೃಢನಿರ್ಧಾರ ತೆಗೆದುಕೊಳ್ಳುತ್ತಾರೆ. ಯುದ್ಧಭೂಮಿಯಿಂದ ಓಡಿಹೋಗುವುದು ಸಾವಿಗಿಂತಲೂ ಹೆಚ್ಚು ಭಯಂಕರವಾದುದು, ಎಂದು ಭಾರತೀಯರು ಪರಿಗಣಿಸುತ್ತಾರೆ” ಎಂದು ತನ್ನ “ಐನ್ ಈ ಅಕ್ಬರಿ” ಕೃತಿಯಲ್ಲಿ, ಸಾಮಾನ್ಯ ಯುಗದ 16ನೆಯ ಶತಮಾನದ ಮುಸ್ಲಿಂ ಇತಿಹಾಸಕಾರ ಅಬು ಫಝಲ್ ಅಲ್ಲಮಿ ದಾಖಲಿಸಿದ್ದಾನೆ.

ಅನೀತಿಯುತವಾದ ಭಾರತ-ವಿರೋಧೀ ಪರಿಕಲ್ಪನೆಗಳ ವಿಕೃತ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿತ ನಮಗೆಲ್ಲಾ ಈ ದಾಖಲೆಗಳು “ನಿಜವೇ?” ಎಂಬ ವಿಸ್ಮಯವನ್ನು ಹುಟ್ಟಿಸುತ್ತವೆ. ಕಳೆದ ಎರಡು ಶತಮಾನಗಳ ಕಾಲಾವಧಿಯ, ಬ್ರಿಟಿಷರ ಮತ್ತು ಅವರ “ಪ್ರೀತಿಪಾತ್ರರ” ದುರಾಡಳಿತದಲ್ಲಿ ನಮ್ಮ ಸಮಾಜವು ಹೇಗಿದೆಯೆಂದರೆ, ಈ ಜೀವನಮೌಲ್ಯಗಳು ಹಿಂದೆ ನಮ್ಮಲ್ಲಿ ಇದ್ದವೇ, ಎಂಬ ಅನುಮಾನವು ನಮ್ಮಲ್ಲಿಯೇ ಮೂಡುತ್ತದೆ.

ಸಾಮಾನ್ಯಯುಗಪೂರ್ವ 4ನೆಯ ಶತಮಾನದ ಗ್ರೀಕ್ ಇತಿಹಾಸಕಾರ ಮತ್ತು ಜನಾಂಗಶಾಸ್ತ್ರಜ್ಞ ಮೆಗಾಸ್ತನೀಸ್ ಭಾರತೀಯ ಪುರುಷರ ಧೈರ್ಯವನ್ನು, ಸ್ತ್ರೀಯರ ಪರಿಶುದ್ಧತೆಯನ್ನು ಮತ್ತು ಮುಖ್ಯವಾಗಿ ಗುಲಾಮಗಿರಿಯ ಅನುಪಸ್ಥಿತಿಯನ್ನು ಗುರುತಿಸಿದ್ದಾನೆ. “ಪರಾಕ್ರಮದಲ್ಲಿ ಏಷಿಯಾದ ಉಳಿದೆಲ್ಲರನ್ನೂ ಮೀರಿಸಿದ ಭಾರತೀಯರು ಶಾಂತಚಿತ್ತರು, ಉದ್ಯಮಶೀಲರು, ಉತ್ತಮ ರೈತರು ಮತ್ತು ಕುಶಲ ಕಸಬುದಾರರು. ಅವರು ಎಂದೂ ದಾವೆ, ಖಟ್ಲೆಗಳನ್ನು ಅವಲಂಬಿಸಿದವರಲ್ಲ ಮತ್ತು ತಮ್ಮ ಸ್ಥಳೀಯ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ಶಾಂತಿಯಿಂದ ಜೀವಿಸುತ್ತಿದ್ದರು” ಎಂದು ಸಹ ಗಮನಿಸಿದ್ದಾನೆ, ಮೆಚ್ಚಿದ್ದಾನೆ.

ಇನ್ನೋರ್ವ ಗ್ರೀಕ್ ತತ್ತ್ವಶಾಸ್ತ್ರಜ್ಞ ಎಪಿಕ್ಟೆಟಸ್ ಶಿಷ್ಯ ಅರ್ರೇನ್ (ಸಾಮಾನ್ಯ ಯುಗದ 2ನೆಯ ಶತಮಾನ) “ಪ್ರಾಚೀನ ಭಾರತದಲ್ಲಿ ಕಳ್ಳತನವೆಂಬುದು ಇರಲೇ ಇಲ್ಲ. ಜನರು ಪರಿಪೂರ್ಣ ಸುರಕ್ಷತೆಯಿಂದ ಜೀವಿಸುತ್ತಿದ್ದರು. ಹಿಂದೂಗಳು ಎಷ್ಟು ಪ್ರಾಮಾಣಿಕರೆಂದರೆ, ಅವರ ಮನೆಯ ಬಾಗಿಲುಗಳಿಗೆ ಬೀಗದ ಆವಶ್ಯಕತೆಯಿರಲಿಲ್ಲ. ಪರಸ್ಪರರಲ್ಲಿ ಅವರು ಮಾಡಿಕೊಳ್ಳುತ್ತಿದ್ದ ಒಪ್ಪಂದಗಳನ್ನು ಖಾತ್ರಿಪಡಿಸಲು ಲಿಖಿತ ಪುರಾವೆಗಳ ಆವಶ್ಯಕತೆಯೂ ಅವರಿಗಿರಲಿಲ್ಲ. ಯಾವೊಬ್ಬ ಭಾರತೀಯನೂ ಅಸತ್ಯವಾಡಿದ್ದನ್ನು ಎಂದೂ ಕಂಡಿಲ್ಲ, ಕೇಳಿಲ್ಲ” ಎಂದು ಮೆಚ್ಚಿ ದಾಖಲಿಸಿದ್ದಾನೆ.

ಚೀನಾದ ಯಾತ್ರಿಕರಲ್ಲಿ ಅತ್ಯಂತ ಪ್ರಸಿದ್ಧನಾದವನು, ಸಾಮಾನ್ಯ ಯುಗದ 7ನೆಯ ಶತಮಾನಕ್ಕೆ ಸೇರಿದ ಯುವಾನ್ ಚ್ವಾಂಗ್ (ಇದು ಸರಿಯಾದ ಉಚ್ಚಾರಣೆ, ಹಿಂದೆ ಹ್ಯೂಎನ್ ತ್ಸಾಂಗ್ ಎನ್ನಲಾಗುತ್ತಿತ್ತು). ಅವನು “ಭಾರತೀಯರು ತಮ್ಮ ನಿಷ್ಕಪಟ ನೇರ ನಡೆನುಡಿ ಮತ್ತು ಪ್ರಾಮಾಣಿಕ ಚಾರಿತ್ರ್ಯದಿಂದಾಗಿ ಪ್ರಸಿದ್ಧರಾಗಿದ್ದಾರೆ. ಸಂಪತ್ತಿಗೆ ಸಂಬಂಧಿಸಿದಂತೆ ಅವರು ಏನನ್ನೂ ಅನ್ಯಾಯವಾಗಿ ತೆಗೆದುಕೊಳ್ಳುವುದಿಲ್ಲ. ನ್ಯಾಯವನ್ನು ಅವರು ಗೌರವಿಸುತ್ತಾರೆ. ನೇರ ನಡವಳಿಕೆ ಅವರ ಆಡಳಿತದ ಮುಖ್ಯ ಲಕ್ಷಣವಾಗಿದೆ” ಎಂದು ಮೆಚ್ಚಿದ್ದಾನೆ.

gurukula Shikshana
gurukula Shikshana

ಡಿಸೆಂಬರ್ 1861ರ “ದಿ ಕೊಲ್ಕತ್ತಾ ರಿವ್ಯೂ” ಹೀಗೆ ಹೇಳುತ್ತದೆ: ” ಹಿಂದಿನ ಕಾಲದಲ್ಲಿ ಹಿಂದೂಗಳು ವ್ಯವಹಾರನಿಪುಣರಾಗಿದ್ದರು. ಭಾರತದ ಮಗ್ಗಗಳಲ್ಲಿನ ಪರಿಶ್ರಮವನ್ನು ಜಗತ್ತಿನೆಲ್ಲೆಡೆ ಗೌರವಿಸಲಾಗುತ್ತಿತ್ತು ಮೆಚ್ಚಲಾಗುತ್ತಿತ್ತು, ಎನ್ನುವುದಕ್ಕೆ ಹೇರಳವಾದ ಸಾಕ್ಷ್ಯಾಧಾರಗಳಿವೆ. ಪ್ರಾಚೀನ ಕಾಲದಿಂದಲೇ ಹಿಂದೂಗಳು ರೇಷ್ಮೆಯನ್ನು ತಯಾರಿಸುತ್ತಿದ್ದಾರೆ. ಭಾರತೀಯರು ಅತ್ಯಂತ ಪ್ರಾಜ್ಞರು, ಅಧ್ಯಾತ್ಮಜ್ಞಾನದಲ್ಲಿ ಅತ್ಯಂತ ಶ್ರೇಷ್ಠರು. ಖಗೋಳ ಶಾಸ್ತ್ರ ಹಾಗೂ ಅಂಕಗಣಿತದಲ್ಲಿಯೂ ಅಷ್ಟೇ ಪರಿಣತರು, ಎಂದು ಗ್ರೀಕ್ ಲೇಖಕರು ಹೇಳಿದ್ದಾರೆ”.

ಭಾರತೀಯರ ಬಗೆಗೆ ಡಯೋನಿಸಿಯಸ್ ಹೀಗೆ ಹೇಳಿದ್ದಾನೆ: “ಅವರು ಮೊದಲು ಸಾಗರವನ್ನು ಪರಿಶೋಧಿಸಿದರು. ಗೊತ್ತಿರದ ತೀರಗಳಿಗೂ ಸರಕುಗಳನ್ನು ಸಾಗಿಸಿದರು. ಭಾರತೀಯರು ಮೊದಲು ತಾರಾಮಂಡಲವನ್ನು ಅರಿತು ಅರಗಿಸಿಕೊಂಡರು. ಅವುಗಳ ಚಲನೆಯನ್ನು ಗುರುತಿಸಿದರು ಮತ್ತು ಬೇರೆ ಬೇರೆ ಹೆಸರುಗಳಲ್ಲಿ ಅವುಗಳನ್ನು ಕರೆದರು. ಪುರಾತನ ಕಾಲದಿಂದಲೂ, ಹಿಂದೂಸ್ತಾನವು ವಿಶ್ವದಲ್ಲಿ ಅತ್ಯಂತ ಹೆಚ್ಚು ಮೆಚ್ಚುಗೆಗೆ ಪಾತ್ರವಾದ ದೇಶಗಳಲ್ಲಿ ಒಂದು, ಎಂದು ಪ್ರಖ್ಯಾತಿ ಹೊಂದಿದೆ.

ಎಲ್ಲ ಜ್ಞಾನಶಾಖೆಗಳಲ್ಲಿಯೂ ಪಾಶ್ಚಾತ್ಯರ ಹಳಸಲನ್ನೇ ತಿಂದು ಅದನ್ನೇ ವಿದ್ಯಾರ್ಥಿಗಳ ಮೇಲೆ ವಾಂತಿ ಮಾಡಿಕೊಳ್ಳುವ ನಮ್ಮ ಅಕೆಡೆಮಿಕ್ ಪ್ರಭೃತಿಗಳಿಗೆ, ಪ್ರಾಚೀನ ಹಿಂದೂ ಭಾರತದ ಯಾವ ಸಾಧನೆಗಳೂ – ಯಾವ ಚಿತ್ರಗಳೂ ಪಥ್ಯವಾಗುವುದಿಲ್ಲ. ಹಿಂದೆ ನಮ್ಮಲ್ಲಿದ್ದುದು ಬರೀ ಅಸ್ಪೃಶ್ಯತೆ, ಜಾತೀಯತೆ, ಸ್ತ್ರೀ ಅಸಮಾನತೆ, ಸತಿ ಸಹಗಮನ, ಮೂಢನಂಬಿಕೆಗಳು ಅಷ್ಟೇ, ಎನ್ನುತ್ತಾರೆ. ಮೇಲೆ ಹೇಳಿದ ಯಾವ ಸಂಗತಿಗಳನ್ನು ಪ್ರಸ್ತಾಪಿಸಿದರೂ ಅದೊಂದು ಜೋಕೆಂಬಂತೆ ಗಹಗಹಿಸಿ ನಗುತ್ತಾರೆ.

ಹಿರೋಷಿಮಾ ಮೇಲೆ ಅಣುಬಾಂಬ್ ಆಸ್ಫೋಟವಾದ ದುರ್ದಿನ ಆಗಸ್ಟ್ 6. ಮನುಕುಲದ ಮಹಾದುರಂತದ ದಿನವಿದು.

ವಿವೇಕಾನಂದರ, ಮಹರ್ಷಿ ಅರವಿಂದರ, ರವೀಂದ್ರರ, ಬಂಕಿಮ ಚಂದ್ರರ, ಸುಭಾಷರ, ಸತ್ಯಜಿತ್ ರಾಯ್ ಅಂತಹವರ ಅತ್ಯದ್ಭುತ ಪರಂಪರೆ – ಸಂಸ್ಕೃತಿ – ಸಂಗೀತ – ಸಾಹಿತ್ಯ – ಚಲನಚಿತ್ರ – ನೃತ್ಯಗಳ ಬಂಗಾಳ ಬಾಂಗ್ಲಾಗಳು ಕಳೆದ ನೂರು ವರ್ಷಗಳಲ್ಲಿ ನಮ್ಮ ಕಣ್ಮುಂದೆಯೇ ನಾಶವಾಗಿಬಿಟ್ಟಿವೆ. ಈಗ ಅಲ್ಲಿ ಕೇವಲ ಕಲ್ಲೆಸೆಯುವವರೇ ತುಂಬಿಕೊಂಡುಬಿಟ್ಟಿದ್ದಾರೆ.

ಇಂದು ಭಾರತದ ಮೇಲೆ, ನೂರೆಂಟು ಹಿರೋಷಿಮಾಗಳನ್ನು ಸುರಿದುಬಿಡಲು ಜಿಹಾದೀ – ಮಿಷನರಿ – ಕಮ್ಯೂನಿಸ್ಟ್ ದುಃಶಕ್ತಿಗಳು ಹವಣಿಸುತ್ತಿವೆ. ಆಕ್ರಮಣಕಾರಿ ದುಃಶಕ್ತಿಗಳನ್ನು ಅರ್ಥ ಮಾಡಿಕೊಳ್ಳದ ಮತ್ತು ಅನಗತ್ಯ ಔದಾರ್ಯದಿಂದ ಸ್ವತಃ ನಾಶವಾಗಿಹೋದ ನಾವು ಇನ್ನಾದರೂ ಜಾಗೃತರಾಗೋಣ, ನಿಜ-ಭಾರತವನ್ನು ಉಳಿಸಿಕೊಳ್ಳೋಣ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಗೋವಾದಲ್ಲಿ ಹಿಂದೂಗಳ ಮೇಲಿತ್ತು ಜುಟ್ಟಿನ ತೆರಿಗೆ!

Continue Reading

ಭವಿಷ್ಯ

Dina Bhavishya : ಈ ರಾಶಿಯವರು ಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ ಬಿದಿಗೆ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಮಂಗಳವಾರ ಕನ್ಯಾ ರಾಶಿಗೆ ನೆಲಸಲಿದ್ದಾನೆ. ಇದರಿಂದಾಗಿ ಮಿಥುನ, ಸಿಂಹ, ತುಲಾ, ವೃಶ್ಚಿಕ, ಕುಂಭ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ. ಆಪ್ತ ವ್ಯಕ್ತಿಗಳಿಗೆ ಸಹಾಯ ಮಾಡುವಿರಿ. ಮನೆಯಲ್ಲಿ ಕಲಹಗಳಿಗೆ ಆಸ್ಪದ ಕೊಡಬೇಡಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ವೃಶ್ಚಿಕ ರಾಶಿಯವರು ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಪ್ರತಿಫಲ ಸಿಗುವುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ಈ ಹಿಂದೆ ನಿಮ್ಮನ್ನು ದ್ವೇಷಿಸುತ್ತಿದ್ದ ಜನರು ನಿಮ್ಮೊಂದಿಗೆ ಪ್ರೀತಿಯಿಂದ ವರ್ತಿಸುವ ಸಾಧ್ಯತೆ ಇದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (06-08-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ.
ತಿಥಿ: ಬಿದಿಗೆ 19:51 ವಾರ: ಮಂಗಳವಾರ
ನಕ್ಷತ್ರ: ಮಘಾ 17:42 ಯೋಗ: ವರಿಯಾನ 10:58
ಕರಣ: ಬಾಲವ 06:53 ಅಮೃತಕಾಲ: ಮಧ್ಯಾಹ್ನ 03:06 ರಿಂದ 04:51
ದಿನದ ವಿಶೇಷ: ಮಂಗಳ ಗೌರಿ ವ್ರತ, ಹಿರೋಷಿಮಾ ದಿನ

ಸೂರ್ಯೋದಯ : 06:06   ಸೂರ್ಯಾಸ್ತ : 06:45

ರಾಹುಕಾಲ: ಮಧ್ಯಾಹ್ನ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30
ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಮಾನಸಿಕ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ. ಆಪ್ತ ವ್ಯಕ್ತಿಗಳಿಗೆ ಸಹಾಯ ಮಾಡುವಿರಿ. ಮನೆಯಲ್ಲಿ ಕಲಹಗಳಿಗೆ ಆಸ್ಪದ ಕೊಡಬೇಡಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಕಿರಿಕಿರಿಯಾಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 4

Horoscope Today

ವೃಷಭ: ಅತಿರೇಕದಲ್ಲಿ ಮಾತನಾಡುವ ಮುನ್ನ ಯೋಚಿಸಿ. ತಿಳಿಯದೆ ನಿಮ್ಮ ಅಭಿಪ್ರಾಯಗಳು ಬೇರೊಬ್ಬರ ಭಾವನೆಗಳಿಗೆ ಧಕ್ಕೆಯುಂಟು ಮಾಡಬಹುದು. ದಿನದ ಮಟ್ಟಿಗೆ ಖರ್ಚು ಇರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಅದೃಷ್ಟ ಸಂಖ್ಯೆ: 3

Horoscope Today

ಮಿಥುನ: ಆರೋಗ್ಯ ಪರಿಪೂರ್ಣವಾಗಿರಲಿದೆ. ಸ್ನೇಹಿತರಿಗೆ ಸಹಾಯ ಮಾಡುವ ಸಾಧ್ಯತೆ ಇದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಸಕರಾತ್ಮಕ ಆಲೋಚನೆಗಳು ಪುಷ್ಟಿ ನೀಡುತ್ತದೆ. ಉದ್ಯೋಗಿಗಳಿಗೆ ಸ್ವಲ್ಪ ಕಿರಿಕಿರಿಯಾಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 1

Horoscope Today

ಕಟಕ: ಕೆಲಸ ಕಾರ್ಯಗಳಲ್ಲಿ ಒತ್ತಡ ಉಂಟು ಮಾಡುವ ವಿಚಾರಗಳಿಂದ ದೂರ ಇರಿ. ತಾಳ್ಮೆ ಇರಲಿ. ಅಗತ್ಯಕ್ಕಾಗಿ ಯಾರದಾದರೂ ಹಣದ ಸಹಾಯ ಬೇಡುವ ಸಾಧ್ಯತೆ ಇದೆ, ಆಲೋಚಿಸಿ ಮುಂದುವರಿಯಿರಿ. ಆರೋಗ್ಯದ ಬಗೆಗೆ ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 5

Horoscope Today

ಸಿಂಹ: ಇತರರು ನಿಮ್ಮ ಕಾರ್ಯಗಳಿಗೆ ಪ್ರಶಂಸೆ ವ್ಯಕ್ತಪಡಿಸುವರು. ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗ, ಆರೋಗ್ಯ, ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ಕನ್ಯಾ:ನಿಮ್ಮ ಒತ್ತಡವನ್ನು ಇತರರ ಮೇಲೆ ಹಾಕಿ ಕೋಪಗೊಳ್ಳುವುದು ಬೇಡ. ಸಮಾಧಾನದಿಂದ ವರ್ತಿಸಿ. ಆರ್ಥಿಕವಾಗಿ ಸಾಧಾರಣವಾಗಿರಲಿದೆ. ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ:ಆಪ್ತರೊಂದಿಗೆ ಬಾಲ್ಯದ ನೆನಪು ಹಂಚಿಕೊಳ್ಳುವಿರಿ. ಮನಸ್ಸಿನ ಒತ್ತಡ ಈ ಮೂಲಕ ಹೊರಹಾಕುವಿರಿ. ಆರೋಗ್ಯ ಮಧ್ಯಮವಾಗಿರಲಿದೆ. ಹೂಡಿಕೆ, ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶ ಇರಲಿದೆ. ಕಾರ್ಯದಲ್ಲಿ ನಿಧಾನಗತಿ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಪ್ರತಿಫಲ ಸಿಗುವುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ಈ ಹಿಂದೆ ನಿಮ್ಮನ್ನು ದ್ವೇಷಿಸುತ್ತಿದ್ದ ಜನರು ನಿಮ್ಮೊಂದಿಗೆ ಪ್ರೀತಿಯಿಂದ ವರ್ತಿಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 6

Horoscope Today

ಧನಸ್ಸು: ಚುರುಕುತನದಿಂದ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಹಣಕಾಸು ಹೂಡಿಕೆ ವ್ಯವಹಾರದಲ್ಲಿ ಲಾಭ ಇರಲಿದೆ. ಹೊಸ ಸ್ನೇಹಿತರ ಪರಿಚಯ ಆಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ಮಕರ: ಸಮಯ ವ್ಯರ್ಥಮಾಡಿ ಕೊರಗುವುದು ಬೇಡ. ಅನಗತ್ಯವಾಗಿ ಖರ್ಚು ಮಾಡುವ ಸಾಧ್ಯತೆ ಇದೆ. ಉತ್ತಮ ಆಲೋಚನೆಗಳು ಇರಲಿ. ಹಳೆಯ ನೆನಪುಗಳು ಮಾನಸಿಕ ಒತ್ತಡ ಉಂಟುಮಾಡುವ ಸಾಧ್ಯತೆ ಇದೆ. ದೈಹಿಕ ಆರೋಗ್ಯ ಉತ್ತಮವಾಗಿರಲಿದೆ. ವಿನಾಕಾರಣ ಕುಟುಂಬದ ಸದಸ್ಯರೊಂದಿಗೆ ಕಲಹಗಳು ಸೃಷ್ಟಿ ಆಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 3

Horoscope Today

ಕುಂಭ: ಅಧಿಕ ಶ್ರಮದಿಂದ ಆರೋಗ್ಯ ಕೊಂಚ ಹದಗೆಡುವ ಸಾಧ್ಯತೆ ಇದೆ, ಕಾಳಜಿ ಇರಲಿ. ಸಾಂಕ್ರಾಮಿಕ ರೋಗದ ಭಾದ್ಯತೆ, ಆದಷ್ಟು ಮುಂಜಾಗ್ರತೆ ವಹಿಸುವುದು ಒಳ್ಳೆಯದು. ಸ್ನೇಹಿತರ ಸಹಕಾರ ಸಿಗಲಿದೆ. ಸಂಗಾತಿಯೊಂದಿಗೆ ಮಾತು ಬೆಳೆಸುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 9

Horoscope Today

ಮೀನ: ಅಗತ್ಯ ವಸ್ತುಗಳ ಖರೀದಿಯಿಂದ ಖರ್ಚು ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕುಟುಂಬದಲ್ಲಿ ಕಲಹಗಳಿಗೆ ಅವಕಾಶ ಮಾಡಿಕೊಡಬೇಡಿ. ಉದ್ಯೋಗದಲ್ಲಿ ಹೊಸ ಭರವಸೆ ಇರಲಿದೆ. ಮನಸ್ಸಿನ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ಸಾಧನೆಯಿಂದ ತಂದುಕೊಳ್ಳಿ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 7

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಪ್ರಮುಖ ಸುದ್ದಿ

Mashrafe Mortaza : ಕ್ರಿಕೆಟರ್ ಮುಶ್ರಫೆ ಮೊರ್ತಾಜಾ ಮನೆಗೆ ಬೆಂಕಿ ಹಚ್ಚಿದ ಬಾಂಗ್ಲಾದೇಶದ ಪ್ರತಿಭಟನಾಕಾರರು

Mashrafe Mortaza :

VISTARANEWS.COM


on

Mashrafe Mortaza
Koo

ಬೆಂಗಳೂರು: ಬಾಂಗ್ಲಾದೇಶದ ಮಾಜಿ ಕ್ರಿಕೆಟ್ ನಾಯಕ ಮಶ್ರಫೆ ಬಿನ್ ಮೊರ್ತಾಜಾ ಅವರ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಸೋಮವಾರ ದೇಶವನ್ನು ತೊರೆದ ನಂತರ ದೇಶದಲ್ಲಿ ಹಿಂಸಾಚಾರ ಮತ್ತು ಗೊಂದಲ ಮುಂದುವರೆದಿದೆ. ಖುಲ್ನಾ ವಿಭಾಗದ ನರೈಲ್ -2 ಸಂಸತ್​ ಕ್ಷೇತ್ರದಿಂದ ಸದಸ್ಯರಾಗಿರುವ ಮೊರ್ತಾಜಾ, ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವಾಮಿ ಲೀಗ್ ಅಭ್ಯರ್ಥಿಯಾಗಿ ಸತತ ಎರಡನೇ ಬಾರಿಗೆ ಈ ಸ್ಥಾನವನ್ನು ಗೆದ್ದಿದ್ದರು.

ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯ ನಂತರ ಶೇಖ್ ಹಸೀನಾ ದೇಶದಿಂದ ಪಲಾಯನ ಮಾಡಿದ ನಂತರ ದುಷ್ಕರ್ಮಿಗಳು ಮೊರ್ತಾಜಾ ಅವರ ಮನೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮೊರ್ತಾಜಾ 117 ಪಂದ್ಯಗಳಲ್ಲಿ ಬಾಂಗ್ಲಾದೇಶವನ್ನು ಮುನ್ನಡೆಸಿದ್ದಾರೆ. 36 ಟೆಸ್ಟ್, 220 ಏಕದಿನ ಮತ್ತು 54 ಟಿ 20 ಪಂದ್ಯಗಳಲ್ಲಿ 390 ಅಂತರರಾಷ್ಟ್ರೀಯ ವಿಕೆಟ್ಗಳನ್ನು ಪಡೆದಿದ್ದಾರೆ ಮತ್ತು 2,955 ರನ್ ಗಳಿಸಿದ್ದಾರೆ. ಆಟವನ್ನು ತೊರೆದ ನಂತರ, ಅವರು 2018 ರಲ್ಲಿ ಹಸೀನಾ ನೇತೃತ್ವದ ಅವಾಮಿ ಲೀಗ್​ಗೆ ಸೇರುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದರು. ನರೈಲ್ -2 ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

ಇದನ್ನೂ ಓದಿ: Women’s T20 World Cup : ಬಾಂಗ್ಲಾದಲ್ಲಿ ಕ್ಷೋಭೆ; ಮಹಿಳೆಯ ಟಿ20 ವಿಶ್ವ ಕಪ್ ಮುಂದೂಡಿಕೆ?

ಪ್ರತಿಭಟನಾಕಾರರು ಜಿಲ್ಲಾ ಅವಾಮಿ ಲೀಗ್ ಕಚೇರಿಗೆ ಬೆಂಕಿ ಹಚ್ಚಿದ್ದಾರೆ. ಅಧ್ಯಕ್ಷ ಸುಭಾಷ್ ಚಂದ್ರ ಬೋಸ್ ಅವರ ಮನೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಬಾಂಗ್ಲಾದೇಶದ ಪ್ರಮುಖ ದಿನಪತ್ರಿಕೆ ‘ಢಾಕಾ ಟ್ರಿಬ್ಯೂನ್’ ವರದಿ ಮಾಡಿದೆ.

ಹಸೀನಾ ಸೋಮವಾರ ಸಂಜೆ ದೆಹಲಿ ಬಳಿಯ ಗಾಜಿಯಾಬಾದ್​​ನ ಹಿಂಡನ್ ವಾಯುನೆಲೆಗೆ ಬಂದಿಳಿದರು, ಬಾಂಗ್ಲಾದೇಶ ವಾಯುಪಡೆಯ ಮಿಲಿಟರಿ ಸಾರಿಗೆ ವಿಮಾನದಲ್ಲಿ ಆಗಮಿಸಿದರು, ಸಾವಿರಾರು ಪ್ರತಿಭಟನಾಕಾರರು ಢಾಕಾದಲ್ಲಿನ ಪ್ರಧಾನಿಯ ಅಧಿಕೃತ ನಿವಾಸವಾದ ಗಣಭಬನ್ಗೆ ನುಗ್ಗಿ ಧ್ವಂಸಗೊಳಿಸಿದರು.

Continue Reading
Advertisement
physical abuse chikkaballapur
ಕ್ರೈಂ16 mins ago

Physical Abuse: ತಾಯಿಯ ಮೇಲೆಯೇ ಅತ್ಯಾಚಾರ ಎಸಗಿ ಕೊಲೆಗೆ ಯತ್ನಿಸಿದ ಪಾಪಿ ಮಗ; ಇವನ ವಿಕೃತಿಗೆ ಪತ್ನಿಯೂ ದೂರ

Dinesh Karthik
ಪ್ರಮುಖ ಸುದ್ದಿ20 mins ago

Dinesh Karthik : ಆರ್​ಸಿಬಿ ಮೆಂಟರ್​ ​ ದಿನೇಶ್​ ಕಾರ್ತಿಕ್​​ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್​ನಿಂದ ವಿಶೇಷ ಗೌರವ

electric bus fire
ಬೆಂಗಳೂರು30 mins ago

Electric Bus Fire: ಧಾರಾಕಾರ ಮಳೆಯ ನಡುವೆಯೇ ಧಗಧಗ ಉರಿದು ಬೂದಿಯಾದ ಎಲೆಕ್ಟ್ರಿಕ್‌ ಬಸ್ಸು

chamanlal book ನನ್ನ ದೇಶ ನನ್ನ ದನಿ ಅಂಕಣ
ಅಂಕಣ55 mins ago

ನನ್ನ ದೇಶ ನನ್ನ ದನಿ ಅಂಕಣ: ಜಿಹಾದಿ, ಮಿಷನರಿಗಳ ಸಾವಿರ ಹಿರೋಷಿಮಾಗಳು ಕಾಯುತ್ತಿವೆ

Vastu Tips
ಧಾರ್ಮಿಕ2 hours ago

Vastu Tips: ಅಪ್ಪಿತಪ್ಪಿಯೂ ಮನೆಯಲ್ಲಿ ಈ ವಸ್ತುಗಳನ್ನು ಖಾಲಿ ಇಡಬೇಡಿ!

Olympics 2024
ಪ್ರಮುಖ ಸುದ್ದಿ2 hours ago

Olympics 2024 : ನೀರಜ್ ಚೋಪ್ರಾ ಜಾವೆಲಿನ್ ಎಸೆತ ಸೇರಿದಂತೆ ಇಂದು ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಭಾರತೀಯ ಸ್ಪರ್ಧಿಗಳು ಇವರು…

karnataka weather Forecast
ಮಳೆ2 hours ago

Karnataka Weather : ಬೆಂಗಳೂರು ಜತೆಗೆ ಉತ್ತರ ಕನ್ನಡ ಜಿಲ್ಲೆಗೆ ಇಂದು ಭಾರಿ ಮಳೆ ಮುನ್ಸೂಚನೆ

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರು ಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Mashrafe Mortaza
ಪ್ರಮುಖ ಸುದ್ದಿ8 hours ago

Mashrafe Mortaza : ಕ್ರಿಕೆಟರ್ ಮುಶ್ರಫೆ ಮೊರ್ತಾಜಾ ಮನೆಗೆ ಬೆಂಕಿ ಹಚ್ಚಿದ ಬಾಂಗ್ಲಾದೇಶದ ಪ್ರತಿಭಟನಾಕಾರರು

Bangladesh Protest
ವಿದೇಶ8 hours ago

Bangladesh Protest: ಶೇಖ್‌ ಹಸೀನಾ ರಾಜೀನಾಮೆ ಬೆನ್ನಲ್ಲೇ ರಾಜಕೀಯ ಶತ್ರು ಖಲೇದಾ ಜಿಯಾ ರಿಲೀಸ್‌ಗೆ ಆದೇಶ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ2 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ5 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ5 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ5 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ7 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ7 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 week ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 week ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌