Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಯಾವ ಸ್ಪರ್ಧಿಗಳು ಕಣಕ್ಕೆ ಇಳಿಯಲಿದ್ದಾರೆ? ಎಲ್ಲ ಮಾಹಿತಿ ಇಲ್ಲಿದೆ - Vistara News

ಪ್ರಮುಖ ಸುದ್ದಿ

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಯಾವ ಸ್ಪರ್ಧಿಗಳು ಕಣಕ್ಕೆ ಇಳಿಯಲಿದ್ದಾರೆ? ಎಲ್ಲ ಮಾಹಿತಿ ಇಲ್ಲಿದೆ

Paris Olympics 2024 : ಎರಡು ಬಾರಿ ಪ್ಯಾರಿಸ್ ಒಲಿಂಪಿಕ್ ಪದಕ ವಿಜೇತ ಮನು ಭಾಕರ್ ತಮ್ಮ ಮೂರನೇ ಸ್ಪರ್ಧೆಯಾದ 25 ಮೀಟರ್ ಪಿಸ್ತೂಲ್ ನ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ. ಶೂಟಿಂಗ್​ನಲ್ಲಿ ಭಾರತಕ್ಕೆ ಎರಡು ಕಂಚಿನ ಪದಕ ಗೆದ್ದ ಅವರು ಮತ್ತೊಂದು ಪದಕಕ್ಕೆ ಗುರಿಯಿಟ್ಟಿದ್ದಾರೆ. ಆರ್ಚರಿಯಲ್ಲಿ ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಅವರು ಇಂಡೋನೇಷ್ಯಾ ಮತ್ತು ಸ್ಪೇನ್ ಜೋಡಿಯನ್ನು ಸೋಲಿಸಿ ಮಿಶ್ರ ತಂಡ ಸ್ಪರ್ಧೆಯ ಸೆಮಿಫೈನಲ್ ಗೆ ಪ್ರವೇಶಿಸಿದ್ದರು. ಆದರೆ, ಚಾಂಪಿಯನ್ ಕೊರಿಯಾ ಹಾಗೂ ಕಂಚಿನ ಪದಕದ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೋತಿತು.

VISTARANEWS.COM


on

Paris Olympics 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ನ (Paris Olympics 2024 ) ಏಳನೇ ದಿನವಾದ ಶುಕ್ರವಾರ ಭಾರತಕ್ಕೆ ಯಾವುದೇ ಪದಕಗಳು ಲಭಿಸಿಲ್ಲ. ಆರ್ಚರಿಯ ಮಿಶ್ರ ತಂಡ ವಿಭಾಗದಲ್ಲಿ ಅಂಕಿತಾ ಹಾಗೂ ಧೀರಜ್ ಬೊಮ್ಮದೇವರ ಕಂಚಿನ ಪದಕ ಮಿಸ್​ ಮಾಡಿಕೊಳ್ಳುವ ಮೂಲಕ ಹಿನ್ನಡೆಯಾಯಿತು. ಇದೇ ವೇಳೆ ಪೂಲ್ ಹಂತದ ಪಂದ್ಯದಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಆಸ್ಟ್ರೇಲಿಯಾವನ್ನು 3-2 ಅಂತರದಿಂದ ಸೋಲಿಸಿತು. 1972ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಪುರುಷರ ತಂಡ ಒಲಿಂಪಿಕ್ಸ್​ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದೆ.

ಎರಡು ಬಾರಿ ಪ್ಯಾರಿಸ್ ಒಲಿಂಪಿಕ್ ಪದಕ ವಿಜೇತ ಮನು ಭಾಕರ್ ತಮ್ಮ ಮೂರನೇ ಸ್ಪರ್ಧೆಯಾದ 25 ಮೀಟರ್ ಪಿಸ್ತೂಲ್ ನ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ. ಶೂಟಿಂಗ್​ನಲ್ಲಿ ಭಾರತಕ್ಕೆ ಎರಡು ಕಂಚಿನ ಪದಕ ಗೆದ್ದ ಅವರು ಮತ್ತೊಂದು ಪದಕಕ್ಕೆ ಗುರಿಯಿಟ್ಟಿದ್ದಾರೆ. ಆರ್ಚರಿಯಲ್ಲಿ ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಅವರು ಇಂಡೋನೇಷ್ಯಾ ಮತ್ತು ಸ್ಪೇನ್ ಜೋಡಿಯನ್ನು ಸೋಲಿಸಿ ಮಿಶ್ರ ತಂಡ ಸ್ಪರ್ಧೆಯ ಸೆಮಿಫೈನಲ್ ಗೆ ಪ್ರವೇಶಿಸಿದ್ದರು. ಆದರೆ, ಚಾಂಪಿಯನ್ ಕೊರಿಯಾ ಹಾಗೂ ಕಂಚಿನ ಪದಕದ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೋತಿತು.

ಮೂರನೇ ದಿನ ಮನು ಭಾಕರ್ಗೆ ಚಿನ್ನ ಸೇರಿದಂತೆ ಯಾವುದೇ ಪದಕ ಗೆಲ್ಲುವ ಅವಕಾಶವಿದೆ. ಅದು ಅವರ ಮೂರನೇ ಪದಕವಾಗಲಿದೆ. ಬಾಕ್ಸರ್ ನಿಶಾಂತ್ ದೇವ್ ಕೂಡ ಶನಿವಾರ ಪದಕವನ್ನು ಖಚಿತಪಡಿಸುವ ಅವಕಾಶವಿದೆ. ಮೆಕ್ಸಿಕೊದ ಮಾರ್ಕೊ ವರ್ಡೆ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಯ ಗಳಿಸಿದರೆ ಸೆಮಿಫೈನಲ್ ಪ್ರವೇಶಿಸಲಿದ್ದು. ಪದಕ ಖಚಿತವಾಗಲಿದೆ. ಆರ್ಚರಿಯಲ್ಲಿ ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ತಮ್ಮ ಮಹಿಳಾ ಸಿಂಗಲ್ಸ್ ಸುತ್ತುಗಳಲ್ಲಿ ಸ್ಪರ್ಧಿಸಲಿದ್ದಾರೆ.

ಆಗಸ್ಟ್ 3ರ ಭಾರತದ ವೇಳಾಪಟ್ಟಿಯ ನೋಟ ಇಲ್ಲಿದೆ

ಮಧ್ಯಾಹ್ನ 12:30: ಶೂಟಿಂಗ್ – ಮಹಿಳಾ ಸ್ಕೀಟ್ ಅರ್ಹತಾ ಸುತ್ತಿನ ದಿನ ಮೊದಲ ದಿನ, ರೈಜಾ ಧಿಲ್ಲಾನ್ ಮತ್ತು ಮಹೇಶ್ವರಿ ಚೌಹಾಣ್.

ಮಧ್ಯಾಹ್ನ 1 ಗಂಟೆ: ಶೂಟಿಂಗ್; ಮಹಿಳೆಯರ 25 ಮೀಟರ್ ಪಿಸ್ತೂಲ್ ಫೈನಲ್​​ನಲ್ಲಿ ಮನು ಭಾಕರ್ (ಪದಕದ ಸ್ಪರ್ಧೆ)

ಮಧ್ಯಾಹ್ನ 1:52: ಆರ್ಚರಿ – ಮಹಿಳೆಯರ ವೈಯಕ್ತಿಕ 16ನೇ ಸುತ್ತಿನ ಪಂದ್ಯದಲ್ಲಿ ದೀಪಿಕಾ ಕುಮಾರಿ ಮತ್ತು ಜರ್ಮನಿಯ ಮಿಚೆಲ್ ಕ್ರೊಪೆನ್ ನಡುವೆ ಹಣಾಹಣಿ

ಇದನ್ನೂ ಓದಿ: IND vs SL ODI : ನಾಟಕೀಯ ತಿರುವು; ಲಂಕಾ ವಿರುದ್ಧದ ಮೊದಲ ಏಕ ದಿನ ಪಂದ್ಯ ಟೈ

ಮಧ್ಯಾಹ್ನ 2:05: ಆರ್ಚರಿ – ಮಹಿಳೆಯರ ವೈಯಕ್ತಿಕ 16ನೇ ಸುತ್ತಿನ ಪಂದ್ಯದಲ್ಲಿ ಭಜನ್ ಕೌರ್ ಮತ್ತು ಡಯಾನಂದಾ ಕೊಯಿರುನ್ನಿಸಾ.

ಮಧ್ಯಾಹ್ನ 3:45 ಸೇಯ್ಲಿಂಗ್​​- ಪುರುಷರ ಡಿಂಗ್ಲೇ ರೇಸ್ 5 ಮತ್ತು 6ರಲ್ಲಿ ವಿಷ್ಣು ಸರವಣನ್ ಸ್ಪರ್ಧಿಸಲಿದ್ದಾರೆ.

ಸಂಜೆ 5:55: ಸೇಯ್ಲಿಂಗ್; ಮಹಿಳೆಯರ ಡಿಂಗ್ಲೇ ರೇಸ್ 5 ಮತ್ತು 6 ರಲ್ಲಿ ನೇತ್ರಾ ಕುಮನನ್ ಭಾಗಿಯಾಗಲಿದ್ದಾರೆ.

ರಾತ್ರಿ 11:05: ಶಾಟ್ ಪುಟ್ ಫೈನಲ್ ; ತಜಿಂದರ್ಪಾಲ್ ಸಿಂಗ್ ತೂರ್ (ಅರ್ಹತೆ ಪಡೆದರೆ).

ರಾತ್ರಿ 12:02 : ಪುರುಷರ 71 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್​​ನಲ್ಲಿ ನಿಶಾಂತ್ ದೇವ್ ಮತ್ತು ಮೆಕ್ಸಿಕೊದ ಮಾರ್ಕೊ ವರ್ಡೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

PSI Death: ನಿನ್ನೆ ಬೀಳ್ಕೊಡುಗೆ ಪಡೆದ ಪಿಎಸ್‌ಐ ಇಂದು ಹೃದಯಾಘಾತದಿಂದ ಸಾವು; 30 ಲಕ್ಷ ರೂ. ಲಂಚಕ್ಕೆ ಶಾಸಕ ಒತ್ತಡ ಹಾಕಿದ್ದರಿಂದ ಖಿನ್ನತೆ?

PSI Death: ಸ್ಥಳೀಯ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಲಂಚದ ಹಣಕ್ಕಾಗಿ ಹೇರುತ್ತಿದ್ದ ಒತ್ತಡದಿಂದಲೇ ಪತಿಗೆ ಹೃದಯಾಘಾತ ಉಂಟಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸ್ಥಳೀಯ ದಲಿತ ಸಂಘಟನೆಗಳು ಶಾಸಕರ ವಿರುದ್ಧ ಪ್ರತಿಭಟನೆಗೆ ಮುಂದಾಗಿವೆ.

VISTARANEWS.COM


on

psi death yadgir
Koo

ಯಾದಗಿರಿ: ಯಾದಗಿರಿ (Yadgir news) ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ (34) ಅವರು ಹೃದಯಾಘಾತದಿಂದ (Heart Attack) ನಿನ್ನೆ (PSI Death) ಸಾವಿಗೀಡಾಗಿದ್ದಾರೆ. ಇತ್ತೀಚೆಗೆ ಸೈಬರ್ ಕ್ರೈಮ್ (Cyber Crime) ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದ ಪರಶುರಾಮ, ಮೊನ್ನೆಯಷ್ಟೇ ನಗರ ಠಾಣೆಯಲ್ಲಿ ಅಭಿಮಾನದ ಬೀಳ್ಕೊಡುಗೆ ಪಡೆದಿದ್ದರು. ನಿನ್ನೆ ಪೊಲೀಸ್ ಕ್ವಾರ್ಟರ್ಸ್‌ ನಿವಾಸದಲ್ಲಿ ಹಠಾತ್ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ಈ ಸಾವು ಅನುಮಾನ ಮೂಡಿಸಿದ್ದು, ಕುಟುಂಬಸ್ಥರನ್ನು ಶಾಕ್‌ಗೆ ದೂಡಿದೆ. ಪರಶುರಾಮ್‌ ಅವರ ಪತ್ನಿ ಗರ್ಭಿಣಿಯಾಗಿದ್ದು ತವರಿಗೆ ತೆರಳಿದ್ದವರು ಮರಳಿದ್ದಾರೆ. ಸ್ಥಳೀಯ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಲಂಚದ ಹಣಕ್ಕಾಗಿ ಹೇರುತ್ತಿದ್ದ ಒತ್ತಡದಿಂದಲೇ ಪತಿಗೆ ಹೃದಯಾಘಾತ ಉಂಟಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸ್ಥಳೀಯ ದಲಿತ ಸಂಘಟನೆಗಳು ಶಾಸಕರ ವಿರುದ್ಧ ಪ್ರತಿಭಟನೆಗೆ ಮುಂದಾಗಿವೆ.

ಈ ಕುರಿತು ಪರಶುರಾಮ್‌ ಅವರ ಪತ್ನಿ ಶ್ವೇತಾ ದೂರು ನೀಡಿದ್ದಾರೆ. ಯಾದಗಿರಿ ನಗರ ಠಾಣೆಯಲ್ಲಿ ಉಳಿದುಕೊಳ್ಳಲು ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ಅವರು 30 ಲಕ್ಷ ರೂ. ಹಣ ಲಂಚ ನೀಡುವಂತೆ ಒತ್ತಾಯಿಸಿದ್ದರು. ಕಳೆದ ಏಳು ತಿಂಗಳ ಹಿಂದಷ್ಟೇ 30 ಲಕ್ಷ ರೂ. ಹಣ ನೀಡಿ ನಗರ ಠಾಣೆಗೆ ಪೋಸ್ಟಿಂಗ್ ಪಡೆದುಕೊಂಡಿದ್ದರು. ಇದರಿಂದ ಸಾಲದ ಸುಳಿಗೆ ಸಿಲುಕಿದ್ದರು. ಇದೀಗ ‌ಮತ್ತೆ ನಿಯಮಬಾಹಿರವಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಒಂದು ವರ್ಷ ಪೂರೈಸುವ ಮೊದಲೇ ವರ್ಗಾವಣೆ ಮಾಡಿದ್ದರಿಂದ ಒತ್ತಡಕ್ಕೆ ಒಳಗಾಗಿದ್ದರು ಎಂದು ಶ್ವೇತಾ ಆರೋಪಿಸಿದ್ದಾರೆ.

ನಿನ್ನೆಯಷ್ಟೇ ಸಚಿವ ಪ್ರಿಯಾಂಕ ಖರ್ಗೆ ಅವರೊಂದಿಗೂ ಪಿಎಸ್ಐ ಪರಶುರಾಮ್‌ ಫೋನ್‌ನಲ್ಲಿ ಮಾತಾಡಿದ್ದರು ಎಂದು ಪತ್ನಿ ಹೇಳಿದ್ದಾರೆ. ಸ್ಥಳಕ್ಕೆ ಶಾಸಕ ಬರುವಂತೆ ಪಿಎಸ್ಐ ಪತ್ನಿ ಪಟ್ಟು ಹಿಡಿದಿದ್ದು, ಅವರ ಗೋಳಾಟ ಕರುಳು ಚುರ್ ಎನ್ನುವಂತಿದೆ. ನನ್ನ ಗಂಡನ ಸಾವಿಗೆ‌ ನ್ಯಾಯ ಸಿಗಬೇಕು, ಶಾಸಕ ಎಲ್ಲಿ ಕರಿರಿ ಎಂದು ಪತ್ನಿ ಗೋಳಾಡಿದ್ದಾರೆ. ಮಧ್ಯರಾತ್ರಿಯೂ ನನ್ನ ಗಂಡ ಎಸ್ಪಿ‌ ಮೇಡಂ ಪೋನ್ ಹಚ್ಚಿದರು ಅಂತ ಓಡುತ್ತಿದ್ದರು. ಈ ಸಾವಿಗೆ ನನ್ನ ಗಂಡ ಏನು ಅನ್ಯಾಯ ಮಾಡಿದ್ದರು. ಎಂಎಲ್ಎ ಬರುವವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಯಾದಗಿರಿ ಎಸ್ಪಿ ಜಿ.‌ಸಂಗೀತಾ ಎದುರು ಪತ್ನಿ ಶ್ವೇತಾ ಕಣ್ಣೀರಿಟ್ಟಿದ್ದಾರೆ.

ಯಾದಗಿರಿ ಶಾಸಕ ಹಾಗೂ ಪುತ್ರನ ವಿರುದ್ಧ ದೂರು

ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಅವರ ಪುತ್ರ ಪಂಪನಗೌಡ (ಸನ್ನಿಗೌಡ) ವಿರುದ್ಧ ದೂರು ಪಿಎಸ್ಐ ಪತ್ನಿ ಶ್ವೇತಾ ಯಾದಗಿರಿ ಎಸ್ಪಿ ಸಂಗೀತಾ ಅವರಿಗೆ ದೂರು ನೀಡಿದ್ದಾರೆ. ಪೋಸ್ಟಿಂಗ್‌ಗಾಗಿ ಪದೇ ಪದೆ ಹಣಕ್ಕೆ ಕಿರುಕುಳ ನೀಡುತ್ತಿದ್ದ ಆರೋಪ ದಾಖಲಿಸಲಾಗಿದೆ. ಶಾಸಕ, ಅವರ ಪುತ್ರ ಹಣಕ್ಕಾಗಿ ನಿರಂತರ ಕಿರುಕುಳ ನೀಡುತ್ತಿದ್ದ ಬಗ್ಗೆ ಪತ್ನಿಗೆ ಪರಶುರಾಮ ಹೇಳಿದ್ದರು. 30 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಜಾತಿ ನಿಂದನೆಯನ್ನೂ ಮಾಡಿದ್ದರು. ಶಾಸಕರ ಕಿರುಕುಳದಿಂದ ಪರಶುರಾಮ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಪತ್ನಿ ದೂರಿದ್ದಾರೆ.

ಶಾಸಕ, ಆತನ ಪುತ್ರನ‌ ಮೇಲೆ ಕೇಸ್ ದಾಖಲಿಸಿದ ಬಳಿಕ‌ ಮರಣೋತ್ತರ ಪರೀಕ್ಷೆಗೆ ಪತ್ನಿ ಒಪ್ಪಿಗೆ ಸೂಚಿಸಿದ್ದು, ಯಾದಗಿರಿ ಯಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಪರಶುರಾಮ ಶವ ರವಾನೆಯಾಗಿದೆ.

ಪರಶುರಾಮ ಮಾವ ವೆಂಕಟಸ್ವಾಮಿ ಕೂಡ ಶಾಸಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಯಾದಗಿರಿ ಎಂಎಲ್‌ಗೆ ದುಡ್ಡಿನ ಆಸೆ ವಿಪರೀತವಾಗಿದೆ. ಅವಧಿ ಪೂರ್ವ ವರ್ಗಾವಣೆಯಿಂದ ಪರಶುರಾಮ ನೊಂದಿದ್ದರು. 7 ತಿಂಗಳ ಅವಧಿಯಲ್ಲಿ ಎಂಎಲ್‌ಎ ಬೇರೆಯವರನ್ನು ಪಿಎಸ್‌ಐ ಆಗಿ ಹಾಕಿಸಿದ್ದಾರೆ. ವರ್ಗಾವಣೆ ಆಗುತ್ತಿರುವುದು ಹೋಂ ಮಿನಿಸ್ಟರ್ ಹಾಗೂ ಸಿಎಂ ಗಮನಕ್ಕೆ ಬರುತ್ತಿಲ್ಲವೇ? ದಕ್ಷ ಅಧಿಕಾರಿಗಳು ಸಾಯುವುದಕ್ಕೆ ಇರುವುದೇ ಎಂದು ಅವರು ಪ್ರಶ್ನಿಸಿದ್ದಾರೆ.

ಸಂಘಟನೆಗಳಿಂದ ಪ್ರತಿಭಟನೆ

ಪಿಎಸ್ಐ ಪರಶುರಾಮ ಸಾವಿನ ಸುತ್ತ ಅನುಮಾನಗಳು ಮೂಡುತ್ತಿದ್ದು, ಯಾದಗಿರಿಯ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆದಿದೆ. ನಗರದ ಖಾಸಗಿ ಆಸ್ಪತ್ರೆ ಬಳಿ ಜಮಾಯಿಸಿದ ವಿವಿಧ ಸಂಘಟನೆಗಳ ಕಾರ್ಯಕರ್ತರು, ಆಂಬ್ಯುಲೆನ್ಸ್ ತಡೆದು ಪ್ರತಿಭಟಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವ ರವಾನೆ ಮಾಡುತ್ತಿದ್ದಾಗ ಆಂಬ್ಯುಲೆನ್ಸ್‌ ಅಡ್ಡಗಟ್ಟಿ ಕುಳಿತ ಸಂಘಟನೆಗಳ ಕಾರ್ಯಕರ್ತರು, ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Road Accident: ಆಡಿ ಕಾರ್‌ ಮರಕ್ಕೆ ಡಿಕ್ಕಿಯಾಗಿ 3 ವಿದ್ಯಾರ್ಥಿಗಳು ದುರ್ಮರಣ; ಐಷಾರಾಮಿ ಕಾರಿನಲ್ಲಿ ಏರ್‌ಬ್ಯಾಗ್‌ ಇರಲೇ ಇಲ್ಲ!

Continue Reading

ಭವಿಷ್ಯ

Dina bhavishya : ನಿಮ್ಮ ಅನುಮಾನಗಳು ಮನೆಯ ವಾತಾವರಣವನ್ನು ಹದಗೆಡಿಸುತ್ತೆ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷದ ಚತುರ್ದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಚಂದ್ರನು ಕಟಕ ರಾಶಿಯಿಂದ ಶನಿವಾರ ಬೆಳಗ್ಗೆ 07:09ಕ್ಕೆ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ವೃಶ್ಚಿಕ, ಕಟಕ, ಕನ್ಯಾ, ತುಲಾ, ಮಕರ, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ವೃಷಭ ರಾಶಿಯವರು ಭರವಸೆಯಿಂದ ಮಾಡಿದ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಇಂದು ಮಾಡಿದ ಹೂಡಿಕೆ ನಿಮ್ಮ ಅಭ್ಯುದಯ ಮತ್ತು ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಇದಕ್ಕೆ ಪೂರಕವೆಂಬಂತೆ ಆರೋಗ್ಯ ಪರಿಪೂರ್ಣವಾಗಿರಲಿದೆ. ಕಟಕ ರಾಶಿಯವರು ನಿಮ್ಮ ಆಕರ್ಷಕ ವ್ಯಕ್ತಿತ್ವ ಇತರರನ್ನು ಆಕರ್ಷಿಸಲಿದೆ. ಮನೆಯಲ್ಲಿ ಸಮಸ್ಯೆಗಳು ಉದ್ಭವವಾಗುವಂತೆ ತೋರುತ್ತಿರುವುದರಿಂದ ನಿಮ್ಮ ಮಾತುಗಳ ಬಗ್ಗೆ ಎಚ್ಚರ ವಹಿಸಿ. ಉದ್ಯೋಗಕ್ಕಾಗಿ ಕೈಗೊಂಡ ಪ್ರಯಾಣ ಫಲಪ್ರದವಾಗಬಹುದು. ದೈಹಿಕವಾಗಿ ಆಯಾಸವಾಗುವ ಸಾಧ್ಯತೆ ಇದೆ. ಆದಷ್ಟು ಸೃಜನಾತ್ಮಕವಾಗಿ ಕಾರ್ಯವನ್ನು ಮಾಡುವುದು ಒಳಿತು. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (03-08-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ.
ತಿಥಿ: ಚತುರ್ದಶಿ 15:50 ವಾರ: ಶನಿವಾರ
ನಕ್ಷತ್ರ: ಪುನರ್ವಸು 11:57 ಯೋಗ: ವಜ್ರ 10:59
ಕರಣ: ಶಕುನಿ 15:50 ಅಮೃತಕಾಲ: ಬೆಳಗ್ಗೆ 09:29 ರಿಂದ 11:09
ದಿನದ ವಿಶೇಷ: ಚಡಚಣ ಸಂಗಮೇಶ್ವರ ಉತ್ಸವ

ಸೂರ್ಯೋದಯ : 06:06   ಸೂರ್ಯಾಸ್ತ : 06:46

ರಾಹುಕಾಲ: ಬೆಳಗ್ಗೆ 9.00 ರಿಂದ 10.30
ಗುಳಿಕಕಾಲ: ಬೆಳಗ್ಗೆ 6.00 ರಿಂದ 7.30
ಯಮಗಂಡಕಾಲ: ಮಧ್ಯಾಹ್ನ 1.30 ರಿಂದ 3.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಮಾನಸಿಕವಾಗಿ ಇಂದು ಬಳಲುವ ಸಾಧ್ಯತೆ ಇದೆ. ಅನಿವಾರ್ಯ ಕಾರಣಗಳಿಂದ ಪ್ರಯಾಣ ಮಾಡುವ ಸಂಭವವಿದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಸಂಗಾತಿಯಿಂದ ಸಲಹೆ ಸಹಕಾರ ಸಿಗಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 2

Horoscope Today

ವೃಷಭ: ಭರವಸೆಯಿಂದ ಮಾಡಿದ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಇಂದು ಮಾಡಿದ ಹೂಡಿಕೆ ನಿಮ್ಮ ಅಭ್ಯುದಯ ಮತ್ತು ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಇದಕ್ಕೆ ಪೂರಕವೆಂಬಂತೆ ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ಉದ್ಯೋಗದ ಸ್ಥಳದಲ್ಲಿ ಒತ್ತಡವಿದ್ದರೂ ಸಮರ್ಥವಾಗಿ ನಿಭಾಯಿಸುವಿರಿ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 1

Horoscope Today

ಮಿಥುನ: ಭರವಸೆಯ ಹೊಸ ಬೆಳಕು ನಿಮ್ಮ ಬಾಳಿನಲ್ಲಿ ಮೂಡಲಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯ ಪರಿಪೂರ್ಣವಾಗಿರಲಿದೆ. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ಆರ್ಥಿಕವಾಗಿ ಪ್ರಗತಿ ಸಾಧಾರಣವಾಗಿರಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭ ಇರಲಿದೆ. ಉದ್ಯೋಗಗಳಿಗೆ ಒತ್ತಡ ಇರಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 8

Horoscope Today

ಕಟಕ: ನಿಮ್ಮ ಆಕರ್ಷಕ ವ್ಯಕ್ತಿತ್ವ ಇತರರನ್ನು ಆಕರ್ಷಿಸಲಿದೆ. ಮನೆಯಲ್ಲಿ ಸಮಸ್ಯೆಗಳು ಉದ್ಭವವಾಗುವಂತೆ ತೋರುತ್ತಿರುವುದರಿಂದ ನಿಮ್ಮ ಮಾತುಗಳ ಬಗ್ಗೆ ಎಚ್ಚರ ವಹಿಸಿ. ಉದ್ಯೋಗಕ್ಕಾಗಿ ಕೈಗೊಂಡ ಪ್ರಯಾಣ ಫಲಪ್ರದವಾಗಬಹುದು. ದೈಹಿಕವಾಗಿ ಆಯಾಸವಾಗುವ ಸಾಧ್ಯತೆ ಇದೆ. ಆದಷ್ಟು ಸೃಜನಾತ್ಮಕವಾಗಿ ಕಾರ್ಯವನ್ನು ಮಾಡುವುದು ಒಳಿತು. ಅನಿವಾರ್ಯ ಕಾರಣಗಳಿಂದ ಖರ್ಚು ಇರಲಿದೆ. ಉದ್ಯೋಗಿಗಳಿಗೆ ಒತ್ತಡ ಇರಲಿದೆ. ಕೌಟುಂಬಿಕವಾಗಿ ಮಿಶ್ರಫಲ. ಅದೃಷ್ಟ ಸಂಖ್ಯೆ: 3

Horoscope Today

ಸಿಂಹ:ಚಾಲನೆ ಮಾಡುವಾಗ ಆದಷ್ಟು ಎಚ್ಚರ ವಹಿಸಿ. ಕಳೆದ ದಿನಗಳನ್ನು ಹೋಲಿಸಿದರೆ ಇಂದು ಆರ್ಥಿಕ ಉತ್ತಮವಾಗಲಿದೆ. ನೀವು ಹೆಚ್ಚಿನ ಹಣವನ್ನು ಪಡೆಯುತ್ತೀರಿ . ಒಂದು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಅಥವಾ ಆಧ್ಯಾತ್ಮಿಕ ವ್ಯಕ್ತಿಗಳ ಸಂಪರ್ಕದಿಂದಾಗಿ ಮನಸ್ಸಿಗೆ ಸಮಾಧಾನ ಸಿಗಲಿದೆ. ನಿಮ್ಮಲ್ಲಿ ಸಕಾರಾತ್ಮಕ ಬದಲಾವಣೆ ಆಗಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಎಲ್ಲಿಲ್ಲದ ಪ್ರೋತ್ಸಾಹ ,ಪ್ರಶಂಸೆ ಸಿಗಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 1

Horoscope Today

ಕನ್ಯಾ: ಕೆಲವು ಘಟನೆಗಳಿಂದಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲುವ ಸಾಧ್ಯತೆ ಇದೆ. ನಕಾರಾತ್ಮಕ ಆಲೋಚನೆಗಳನ್ನು ಮಾಡದಿರಿ. ಹಣಕಾಸು ಆಡಚಣೆಗಳು ನಿವಾರಣೆ ಆಗಲಿವೆ. ಉದ್ಯೋಗಿಗಳಿಗೆ ಸಹೋದ್ಯೋಗಿಗಳಿಂದ ಕಿರಿಕಿರಿ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 8

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಕೆಲವು ಅನುಮಾನಗಳು ಮನೆಯ ವಾತಾವರಣವನ್ನು ವಿಷಮ ಸ್ಥಿತಿಗೆ ತಳ್ಳುವ ಸಾಧ್ಯತೆ, ಆದಷ್ಟು ಸಮಾಧಾನ ಚಿತ್ತರಾಗಿ ಆಲೋಚಿಸಿ. ಆರೋಗ್ಯ ಪರಿಪೂರ್ಣವಾಗಿರವಿದೆ. ಅನಾವಶ್ಯಕ ಖರ್ಚುಗಳಿಂದಾಗಿ ಮನಸ್ಸಿನ ಹತೋಟಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಒತ್ತಡ ಇರಲಿದೆ. ವ್ಯಾಪಾರ ವ್ಯವಹಾರದಲ್ಲಿ ತಕ್ಕಮಟ್ಟಿಗೆ ಲಾಭ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 2

Horoscope Today

ವೃಶ್ಚಿಕ: ಅನಿವಾರ್ಯ ಕಾರಣಗಳಿಂದ ಒತ್ತಡ ಹೆಚ್ಚಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕವಾಗಿ ಸಾಧಾರಣ ಪ್ರಗತಿ ಇರಲಿದೆ. ಕುಟುಂಬದ ಸದಸ್ಯರ ವರ್ತನೆ ನಿಮಗೆ ಮುಜುಗರ ಉಂಟುಮಾಡುವ ಸಾಧ್ಯತೆ ಇದೆ. ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ಬಹಳ ದಿನಗಳಿಂದ ದ್ವೇಷಿಸುತ್ತಿರುವ ವ್ಯಕ್ತಿಗಳು ಇಂದು ನಿಮ್ಮ ಸಂಪರ್ಕಕ್ಕೆ ಬರಬಹುದು. ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ಆರ್ಥಿಕ ಭಾಗವು ಬಲಗೊಳ್ಳುವ ಪೂರ್ಣ ಸಾಧ್ಯತೆ ಇದೆ.ನೀವು ಯಾವುದೇ ವ್ಯಕ್ತಿಗೆ ಸಾಲ ನೀಡಿದ್ದರೆ, ಇಂದು ನೀವು ಆ ಹಣವನ್ನು ಮರಳಿ ಪಡೆಯುವ ನಿರೀಕ್ಷೆಯಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ.ಉದ್ಯೋಗಿಗಳಿಗೆ ಇಂದು ಭರವಸೆಯ ಹೊಸ ಅವಕಾಶಗಳು ಸಿಗಲಿವೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ಮಕರ: ತುಂಬಾ ಚಿಂತೆ ಮತ್ತು ಒತ್ತಡ ನಿಮ್ಮ ಆರೋಗ್ಯವನ್ನು ನಾಶಮಾಡಬಹುದು. ನೀವು ಮಾನಸಿಕ ಸ್ಪಷ್ಟತೆಯನ್ನು ಕಾಯ್ದುಕೊಳ್ಳಲು ಗೊಂದಲ ಮತ್ತು ಹತಾಶೆಯನ್ನು ತಡೆಗಟ್ಟಬೇಕು. ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಒತ್ತಡ ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 9

Horoscope Today

ಕುಂಭ: ಸಾಧ್ಯವಾದರೆ ದೀರ್ಘ ಪ್ರಯಾಣವನ್ನು ತಪ್ಪಿಸಿ. ದೈಹಿಕವಾಗಿ ಮತ್ತು ಆರ್ಥಿಕವಾಗಿ ಬಳಲುವ ಸಾಧ್ಯತೆ ಇದೆ. ವಿಶೇಷವಾಗಿ ಕೆಲಸದ ಸ್ಥಳದಲ್ಲಿ ಉದ್ಭವಿಸುವ ವಿರೋಧಕ್ಕೆ ವಿವೇಚನಾಯುಕ್ತರೂ ಮತ್ತು ಧೈರ್ಯಶಾಲಿಗಳೂ ಆಗಿರಿ, ನಿಮ್ಮ ವಿರುದ್ಧ ಪಿತೂರಿ ನಡೆಯುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ. ಅದೃಷ್ಟ ಸಂಖ್ಯೆ: 7

Horoscope Today

ಮೀನ: ಇಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಸಕ್ತಿಗಳನ್ನು ಅನುಸರಿಸಲೂ ಒಂದು ಒಳ್ಳೆಯ ದಿನವಾಗಲಿದೆ. ದೀರ್ಘ ಕಾಲ ಬಾಕಿಯಿದ್ದ ಕೆಲಸಗಳು ಪೂರ್ಣವಾಗಲಿವೆ. ಸಂಬಂಧಿಕರು ಮತ್ತು ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಗಳು ದೊರೆಯುವ ಸಾಧ್ಯತೆ ಇದೆ. ಇತರರ ಹಸ್ತಕ್ಷೇಪ ವ್ಯಾಜ್ಯವುಂಟು ಮಾಡುತ್ತದೆ. ಯಾವುದೇ ಪಾಲುದಾರಿಕೆಗೆ ಒಪ್ಪುವ ಮೊದಲು ಆಲೋಚಿಸಿ ಹೆಜ್ಜೆ ಹಾಕಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಅನಿರೀಕ್ಷಿತ ಲಾಭ ದೊರೆಯಲಿದೆ. ಉದ್ಯೋಗಿಗಳಿಗೆ ಮಿಶ್ರ ಫಲ, ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಪ್ರಮುಖ ಸುದ್ದಿ

Bigg Boss OTT 3 : ಸನಾ ಮಕ್ಬುಲ್​ ಬಿಗ್​ಬಾಸ್​ ಒಟಿಟಿ 3 ವಿನ್ನರ್​, ನೈಜಿ ರನ್ನರ್​​ಅಪ್​​

Bigg Boss OTT 3 : ಬಿಗ್ ಬಾಸ್ ಮನೆಯಲ್ಲಿ ಸನಾ ಅವರ ಅಭಿಯಾನದ ವಿಷಯಕ್ಕೆ ಬಂದಾಗ ಗೆಲುವಿನ ಅಭಿಯಾನದ ವಿಷಯಕ್ಕೆ ಬಂದರೆ ಸಾಕಷ್ಟು ಏರಿಳಿತಗಳನ್ನು ಕಂಡಿದ್ದರು. ರಣವೀರ್ ಶೋರೆ ಅವರನ್ನು ‘ನಾಗಿನ್ ಮತ್ತು ಖಳನಾಯಕ’ ಎಂದು ಕರೆದು ವಿವಾದಕ್ಕೆ ಈಡಾಗಿರುವುದು, ನಿರೂಪಕ ಅನಿಲ್ ಕಪೂರ್ ಅವರನ್ನೇ ಪ್ರಶ್ನಿಸಿದ್ದು ಗಮನ ಸೆಳೆಯುವ ವಿಚಾರಗಳು.

VISTARANEWS.COM


on

Bigg Boss OTT 3
Koo

ಬೆಂಗಳೂರು: ಹಲವಾರು ನಿದರ್ಶನಗಳ ಬಳಿಕ ಬಿಗ್ ಬಾಸ್ ಒಟಿಟಿಯ ಮೂರನೇ ಸೀಸನ್ (Bigg Boss OTT 3)​ ಕೊನೆಗೊಂಡಿದ್ದು, ಸನಾ ಮಕ್ಬುಲ್ ವಿಜೇತರಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ಪ್ರಸಾರಗೊಂಡ ಗ್ರ್ಯಾಂಡ್ ಫಿನಾಲೆಯಲ್ಲಿ ನಿರೂಪಕ ಅನಿಲ್ ಕಪೂರ್ ವಿಜೇತರ ಹೆಸರನ್ನು ಘೋಷಿಸಿದರು. ಈ ಬಾರಿಯ ಬಿಗ್​ ಬಾಸ್ ಹಲವಾರು ಏರಿಳಿತಗಳು ಹಾಗೂ ನಾಟಕೀಯ ತಿರುವುಗಳನ್ನು ಕಂಡಿತ್ತು. ಸನಾ ಮಕ್ಬುಲ್ ಮತ್ತು ನೈಜಿ ನಡುವೆ ಅಂತಿಮ ಸ್ಪರ್ಧೆ ಏರ್ಪಟ್ಟಿತು. ಅಲ್ಲಿ ಸನಾ ವಿಜೇತರಾದರಲ್ಲದೆ ಟ್ರೋಫಿಯ ಜತೆಗೆ 25 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸನಾ ಅವರ ಅಭಿಯಾನದ ವಿಷಯಕ್ಕೆ ಬಂದಾಗ ಗೆಲುವಿನ ಅಭಿಯಾನದ ವಿಷಯಕ್ಕೆ ಬಂದರೆ ಸಾಕಷ್ಟು ಏರಿಳಿತಗಳನ್ನು ಕಂಡಿದ್ದರು. ರಣವೀರ್ ಶೋರೆ ಅವರನ್ನು ‘ನಾಗಿನ್ ಮತ್ತು ಖಳನಾಯಕ’ ಎಂದು ಕರೆದು ವಿವಾದಕ್ಕೆ ಈಡಾಗಿರುವುದು, ನಿರೂಪಕ ಅನಿಲ್ ಕಪೂರ್ ಅವರನ್ನೇ ಪ್ರಶ್ನಿಸಿದ್ದು ಗಮನ ಸೆಳೆಯುವ ವಿಚಾರಗಳು.ಆದರೆ ತಮ್ಮ ಅಭಿಪ್ರಾಯಕ್ಕೆ ಬದ್ಧರಾಗಿದ್ದರು ಎಂಬುದೇ ಅವರಿಗಿದ್ದ ದೊಡ್ಡ ಪ್ಲಸ್ ಪಾಯಿಂಟ್​. ಅಲ್ಲದೆ ಗೆಲುವೆಂಬು ನನಗೆ ಗೀಳು ಎಂಬುದಾಗಿಯೂ ಅವರು ಅಭಿಪ್ರಾಯಪಟ್ಟಿದ್ದರು.

ಫಿನಾಲೆ ಎಪಿಸೋಡ್ ಕಾರ್ಯಕ್ರಮದ ಐದು ಅಂತಿಮ ಸ್ಪರ್ಧಿಗಳೊಂದಿಗೆ ಪ್ರಾರಂಭವಾಯಿತು. ರಣವೀರ್ ಶೋರೆ, ಸನಾ ಮಕ್ಬುಲ್, ಸಾಯಿ ಕೇತನ್ ರಾವ್, ನೈಜಿ ಮತ್ತು ಕೃತಿಕಾ ಮಲಿಕ್. ಆದಾಗ್ಯೂ, ರಣವೀರ್, ಸಾಯಿ ಮತ್ತು ಕೃತಿಕಾ ಗುರಿ ತಲುಪಲು ವಿಫಲರಾದರು.

ಗ್ರ್ಯಾಂಡ್ ಫಿನಾಲೆ ಬಗ್ಗೆ

ಒಟಿಟಿಯ ಅಂತಿಮ ಕಾರ್ಯಕ್ರಮವು ಸಂಗೀತ, ನೃತ್ಯ, ಹಳಹಳಿಕೆ ಮತ್ತು ಸಾಕಷ್ಟು ಭಾವನೆಗಳೊಂದಿಗೆ ಕೂಡಿತ್ತು. ಅನಿಲ್ ಕಪೂರ್ ನಾಚ್ ಪಂಜಾಬನ್ ಹಾಡಿಗೆ ನೃತ್ಯ ಮಾಡುವ ಮೂಲಕ ವೇದಿಕೆ ಪ್ರವೇಶಿಸಿದರು. ಎಲ್ಲಾ ಮಾಜಿ ಸ್ಪರ್ಧಿಗಳು ವೇದಿಕೆಯಲ್ಲಿ ಸೇರಿಕೊಂಡರು. ಸೀಸನ್ ಫಿನಾಲೆ ಆಗಸ್ಟ್ 2 ರಂದು ರಾತ್ರಿ 9 ರಿಂದ ಜಿಯೋ ಸಿನೆಮಾದಲ್ಲಿ ಪ್ರಸಾರವಾಯಿತು.

ಇದನ್ನೂ ಓದಿ: Kriti Sanon: ನಟಿ ಕೃತಿ ಸನೋನ್‌ ಡೇಟಿಂಗ್‌ ಮಾಡುತ್ತಿರುವ ಈ ಕಬೀರ್ ಬಹಿಯಾ ಯಾರು?

ಗ್ರ್ಯಾಂಡ್ ಫಿನಾಲೆಯ ಪ್ರಮುಖ ಅಂಶವೆಂದರೆ ರಣವೀರ್ ಶೋರೆ ಗಡ್ಡವಿಲ್ಲದೆ ಹೊಸ ಲುಕ್ ನಲ್ಲಿ ಆಗಮಿಸಿದ್ದರು. ಯಾಕೆಂದು ಕೇಳಿದಾಗ, ಫೈನಲ್ ತಲುಪಿದರೆ, ಗಡ್ಡವನ್ನು ತೆಗೆಯುವ ಬೆಟ್ ಕಟ್ಟಿದ್ದೆ ಎಂದರು.

ಬಿಗ್ ಬಾಸ್ ಒಟಿಟಿ 3 ರ ಫಿನಾಲೆಯಲ್ಲಿ ಇಬ್ಬರು ಆಶ್ಚರ್ಯಕರ ಅತಿಥಿಗಳು ಎಲಿಮಿನೇಷನ್ ಪ್ರಕ್ರಿಯೆಯ ಭಾಗವಾಗಿದ್ದರು. ಅವರೇ ರಾಜ್ ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್.

ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅನಿಲ್, “ಬಿಗ್ ಬಾಸ್ ಒಟಿಟಿ 3 ನಂಬಲಾಗದ ಪ್ರಯಾಣವಾಗಿದೆ. ಇದು ನನ್ನಲ್ಲಿರುವ ಭಾವನೆಗಳನ್ನು ಹೊರತಂದಿದೆ ಎಂದರು.

ಬಿಗ್​​ಬಾಸ್ ಒಟಿಟಿ 3 ಬಗ್ಗೆ

ಸೆಲೆಬ್ರಿಟಿ ಸ್ಪರ್ಧಿಗಳು ಒಂದು ತಿಂಗಳಿಗೂ ಹೆಚ್ಚು ಕಾಲ ಮನೆಯೊಳಗೆ ಇರಬೇಕಾಗಿದ್ದ ಈ ಶೋ ಜೂನ್ 21 ರಂದು ರಾತ್ರಿ 9 ಗಂಟೆಗೆ ಪ್ರಥಮ ಪ್ರದರ್ಶನ ಕಂಡಿತು. ಪೌಲೋಮಿ ಪೊಲೊ ದಾಸ್, ಸನಾ ಸುಲ್ತಾನ್, ವಿಶಾಲ್ ಪಾಂಡೆ, ಚಂದ್ರಿಕಾ ಗೆರಾ ದೀಕ್ಷಿತ್, ನೀರಜ್ ಗೋಯತ್ ಮತ್ತು ಅರ್ಮಾನ್ ಮಲಿಕ್ ಮತ್ತು ಅವರ ಇಬ್ಬರು ಹೆಂಡತಿಯರಾದ ಪಾಯಲ್ ಮತ್ತು ಕೃತಿಕಾ ಸ್ಪರ್ಧಿಗಳಾಗಿದ್ದರು. ಅದ್ನಾನ್ ಶೇಖ್ ಕೆಲವು ವಾರಗಳ ನಂತರ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದರು.

ಮೂರನೇ ಸೀಸನ್​ಗೆ ಅನಿಲ್ ಕಪೂರ್ ನಿರೂಪಕರಾಗಿ ಪಾದಾರ್ಪಣೆ ಮಾಡಿದ್ದರು. ಕರಣ್ ಜೋಹರ್ ಕಾರ್ಯಕ್ರಮದ ಮೊದಲ ಸೀಸನ್ ಅನ್ನು ಹೋಸ್ಟ್ ಮಾಡಿದ್ದರು.

Continue Reading

ಪ್ರಮುಖ ಸುದ್ದಿ

Paris Oylmpics 2024 : ಹಳದಿ ಬಣ್ಣದ ಜೆರ್ಸಿಯವರನ್ನು ಸೋಲಿಸುವುದೆಂದರೆ ಖುಷಿ; ಹಾಕಿ ತಂಡದ ಗೆಲುವನ್ನು ಮುಂದಿಟ್ಟುಕೊಂಡು ಸಿಎಸ್​​ಕೆಯನ್ನು ಲೇವಡಿ ಮಾಡಿದ ಆರ್​ಸಿಬಿ

Paris Olympics 2024 : ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯವನ್ನು ಸದರ್ನ್ ಡರ್ಬಿ ಎಂದು ಕರೆಯಲಾಗುತ್ತದೆ ಹಾಗೂ ಜಿದ್ದಾಜಿದ್ದಿನ ಪೈಪೋಟಿ ಗ್ಯಾರಂಟಿ. ಆಟಗಾರರ ವಿಷಯ ಬಿಡಿ. ಈ ಎರಡೂ ತಂಡಗಳ ಅಭಿಮಾನಿಗಳು ಪರಸ್ಪರ ಕಚ್ಚಾಡುವುದರಲ್ಲಿ ಫೇಮಸ್​. ಆರ್​ಸಿಬಿಯನ್ನು ಸಿಎಸ್​ಕೆ ಅಭಿಮಾನಿಗಳು ಒಂದೇ ಒಂದು ಕಪ್ ಗೆಲ್ಲದ ಗೊಡ್ಡು ತಂಡ ಎಂದು ಕರೆದರೆ, ಸಿಎಸ್​ಕೆ ಬೆಟ್ಟಿಂಗ್​ನಲ್ಲಿ ನಿಷೇಧವಾಗಿರುವ ತಂಡ ಎಂದು ಆರ್​​ಸಿಬಿ ಅಭಿಮಾನಿಗಳು ಸದಾ ಕಿಚಾಯಿಸುತ್ತಾರೆ.

VISTARANEWS.COM


on

Paris Olympics 2024
Koo

ಬೆಂಗಳೂರು: ಭಾರತ ಹಾಕಿ ತಂಡ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ (Paris Oylmpics 2024 ) ವಿಶೇಷವಾದ ಸಾಧನೆಯೊಂದನ್ನು ಮಾಡಿದೆ. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ 3-2 ಗೋಲ್​ಗಳ ಗೆಲುವು ದಾಖಲಿಸಿದೆ. ಇದು ಭಾರತಕ್ಕೆ ಒಲಿಂಪಿಕ್ಸ್​​ನಲ್ಲಿ ಆಸೀಸ್ ತಂಡದ ವಿರುದ್ಧ 52 ವರ್ಷಗಳ ಬಳಿಕ ದೊರೆತ ಜಯವಾಗಿದೆ. ಅಲ್ಲದೆ ಕಳೆದ ಒಂದು ವರ್ಷದ 8ನೇ ಮುಖಾಮುಖಿಯಲ್ಲಿ ಮೊದಲ ವಿಜಯವೂ ಹೌದು. ಆದರೆ, ಈ ಸಂದರ್ಭವನ್ನೇ ಮುಂದಿಟ್ಟುಕೊಂಡು ಐಪಿಎಲ್​ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲೇವಡಿ ಮಾಡಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಕಿಡಿ ಹಚ್ಚಲು ಕಾರಣವಾಗಿದೆ. ಎರಡೂ ತಂಡಗಳ ಅಭಿಮಾನಿಗಳು ಈ ವಿಚಾರವಾಗಿ ಪರಸ್ಪರ ದೂಷಣೆಗಳನ್ನು ಶುರು ಮಾಡಿದ್ದಾರೆ.

ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯವನ್ನು ಸದರ್ನ್ ಡರ್ಬಿ ಎಂದು ಕರೆಯಲಾಗುತ್ತದೆ ಹಾಗೂ ಜಿದ್ದಾಜಿದ್ದಿನ ಪೈಪೋಟಿ ಗ್ಯಾರಂಟಿ. ಆಟಗಾರರ ವಿಷಯ ಬಿಡಿ. ಈ ಎರಡೂ ತಂಡಗಳ ಅಭಿಮಾನಿಗಳು ಪರಸ್ಪರ ಕಚ್ಚಾಡುವುದರಲ್ಲಿ ಫೇಮಸ್​. ಆರ್​ಸಿಬಿಯನ್ನು ಸಿಎಸ್​ಕೆ ಅಭಿಮಾನಿಗಳು ಒಂದೇ ಒಂದು ಕಪ್ ಗೆಲ್ಲದ ಗೊಡ್ಡು ತಂಡ ಎಂದು ಕರೆದರೆ, ಸಿಎಸ್​ಕೆ ಬೆಟ್ಟಿಂಗ್​ನಲ್ಲಿ ನಿಷೇಧವಾಗಿರುವ ತಂಡ ಎಂದು ಆರ್​​ಸಿಬಿ ಅಭಿಮಾನಿಗಳು ಸದಾ ಕಿಚಾಯಿಸುತ್ತಾರೆ. 2024ರ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಆರ್​ಸಿಬಿ ತಂಡ ಸಿಎಸ್​ಕೆಯನ್ನು ಸೋಲಿಸಿದ ಬಳಿಕ ಎರಡೂ ತಂಡಗಳ ಅಭಿಮಾನಿಗಳ ನಡುವೆ ನಡೆದಿರುವ ಮಾತಿನ ಸಮರ ದೊಡ್ಡ ಮಟ್ಟದ್ದರು. ಇಂಥ ಸೂಕ್ಷ್ಮವನ್ನು ಮುಂದಿಟ್ಟುಕೊಂಡ ಆರ್​ಸಿಬಿ ಸೋಶಿಯಲ್ ಮೀಡಿಯಾದ ಅಡ್ಮಿನ್​ ಆ ತಂಡದ ಕಾಲೆಳೆದಿದೆ.

ಐಪಿಎಲ್​ನಲ್ಲಿ ಆರ್​ಸಿಬಿ ಕೆಂಪು ದಿರಸನ್ನು ಹಾಕಿಕೊಂಡರೆ, ಸಿಎಸ್​ಕೆ ಹಳದಿ ಬಣ್ಣವನ್ನು ಧರಿಸುತ್ತದೆ. ಆರ್​ಸಿಬಿ ಆರಂಭದಿಂದ ಇಲ್ಲಿಯವರೆಗೆ ಹಲವು ಭಾರಿ ತಮ್ಮ ಜೆರ್ಸಿಯನ್ನು ಬದಲಾಯಿಸಿದೆ. ಆದರೆ ಸಿಎಸ್​ಕೆ ಎಂದಿದೂ ತಮ್ಮ ಯೆಲ್ಲೋ ಬಣ್ಣವನ್ನು ಬದಲಾಯಿಸಿಲ್ಲ. ಅದೇ ಬಣ್ಣದಲ್ಲಿ ಆಡಿ ಐದು ಕಪ್​ಗಳನ್ನು ಗೆದ್ದಿದೆ.

ಆರ್​​ಸಿಬಿಯ ಸೋಶಿಯಲ್​ ಮೀಡಿಯಾ ಮೆಸೇಜ್ ನೋಡಿದ ಸಿಎಸ್​ಕೆ ಅಭಿಮಾನಿಗಳು ಕೆರಳಿದ್ದಾರೆ. ಟ್ವೀಟ್​ನ ಪ್ರತಿಕ್ರಿಯೆಯೂ ಆಸಕ್ತಿಕಾರವಾಗಿದೆ. ಯೆಲ್ಲೊ ಜೆರ್ಸಿಯಿಂದ ಹೊಡೆಸಿಕೊಳ್ಳುವುದು ಕೂಡ ಖುಷಿಯ ವಿಚಾರ ಅಲ್ವೇ ಎಂದು ಒಬ್ಬರು ಕೇಳಿದರೆ, ವಿಷಲ್​ಪೋಡು ಸಿಎಸ್​​ಕೆ ಫ್ಯಾನ್​ ಪೇಜ್​, ನಾವು ಹಳದಿ ಬಣ್ಣ ಧರಿಸುವುದಕ್ಕೆ ಖುಷಿಯಿದೆ. ಆ ಕೆಂಪು ಮತ್ತು ಬಂಗಾರದ ಬಣ್ಣ ಧರಿಸಿದ್ದರೆ ನಮ್ಮ ಕತೆ ಕೇಳುವುದೇ ಬೇಡ ಎಂದು ತಿರುಗೇಟು ಕೊಟ್ಟಿದೆ.

ಹಾಖಿ ಪಂದ್ಯದಲ್ಲಿ ಏನಾಯಿತು?

ಒಲಿಂಪಿಕ್ಸ್​ನ ಡಿ ಗುಂಪಿನ ಈ ಪಂದ್ಯದಲ್ಲಿ ಭಾರತವು ಆಕ್ರಮಣಕಾರಿ ಆಟವಾಡಿತು. ಭಾರತದ ದಾಳಿಯ ಬೆದರಿಕೆಯನ್ನು ಎದುರಿಸಲು ಆಸ್ಟ್ರೇಲಿಯಾದ ಆಟಗಾರ ನಿಧಾನವಾಗಿ ಆಟ ಪ್ರಾರಂಭಿಸಿತು.

ಮೊದಲ ಕ್ವಾರ್ಟರ್ನಲ್ಲಿ ಹರ್ಮನ್ಪ್ರೀತ್ ಸಿಂಗ್ ನೇತೃತ್ವದ ತಂಡ ಎರಡು ಗೋಲುಗಳ ಮುನ್ನಡೆ ಸಾಧಿಸಿತು. ಫಾರ್ವರ್ಡ್ ಆಟಗಾರ ಅಭಿಷೇಕ್ 12ನೇ ನಿಮಿಷದಲ್ಲಿ ಭಾರತದ ಪರ ಮೊದಲ ಗೋಲು ಗಳಿಸಿದರು. ಒಂದು ನಿಮಿಷದ ನಂತರ ಹರ್ಮನ್ ಪ್ರೀತ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟರು.

ಇದನ್ನೂ ಓದಿ: Lakshya Sen : ಒಲಿಂಪಿಕ್ಸ್​ನ ಸೆಮಿ ಫೈನಲ್​ಗೇರಿ ಇತಿಹಾಸ ನಿರ್ಮಿಸಿದ ಷಟ್ಲರ್ ಲಕ್ಷ್ಯ ಸೇನ್​

25ನೇ ನಿಮಿಷದಲ್ಲಿ ಕ್ರೇಗ್ ಥಾಮಸ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿ ಅಂತರವನ್ನು ಒಂದು ಗೋಲಿಗೆ ಇಳಿಸಿದರು. 32ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಮತ್ತೊಂದು ಪೆನಾಲ್ಟಿ ಕಾರ್ನರ್ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. 55ನೇ ನಿಮಿಷದಲ್ಲಿ ಬ್ಲೇಕ್ ಗ್ರೋವರ್ ಗಳಿಸಿದ ಪೆನಾಲ್ಟಿ ಸ್ಟ್ರೋಕ್ ಮೂಲಕ ಆಸ್ಟ್ರೇಲಿಯಾ ನಾಲ್ಕನೇ ಕ್ವಾರ್ಟರ್​ನಲ್ಲಿ ಭಾರತಕ್ಕೆ ಬೆದರಿಕೆ ಒಡ್ಡಿತು. ಕೊನೆಯ ನಿಮಿಷಗಳಲ್ಲಿ ಸಮಬಲದ ಹೋರಾಟ ತೋರಿದ ಆಸೀಸ್ ಕಠಿಣ ಪ್ರಯತ್ನ ನಡೆಸಿದರೂ ಗೋಲು ಗಳಿಸಲು ವಿಫಲವಾಯಿತು.

Continue Reading
Advertisement
psi death yadgir
ಪ್ರಮುಖ ಸುದ್ದಿ43 seconds ago

PSI Death: ನಿನ್ನೆ ಬೀಳ್ಕೊಡುಗೆ ಪಡೆದ ಪಿಎಸ್‌ಐ ಇಂದು ಹೃದಯಾಘಾತದಿಂದ ಸಾವು; 30 ಲಕ್ಷ ರೂ. ಲಂಚಕ್ಕೆ ಶಾಸಕ ಒತ್ತಡ ಹಾಕಿದ್ದರಿಂದ ಖಿನ್ನತೆ?

FASTag new rule
ದೇಶ13 mins ago

FASTag new rule: ಫಾಸ್ಟ್ ಟ್ಯಾಗ್ ಹೊಸ ನಿಯಮ; ನವೀಕರಣ ಹೇಗೆ? ಕೊನೆಯ ದಿನ ಯಾವಾಗ?

Red Spinach Benefits
ಆರೋಗ್ಯ13 mins ago

Red Spinach Benefits: ಕೆಂಪು ಹರಿವೆ; ಇದು ಕೇವಲ ಸೊಪ್ಪಲ್ಲ, ಪೋಷಕಾಂಶಗಳ ಪವರ್‌ಹೌಸ್‌!

audi car road accident kolar
ಕೋಲಾರ38 mins ago

Road Accident: ಆಡಿ ಕಾರ್‌ ಮರಕ್ಕೆ ಡಿಕ್ಕಿಯಾಗಿ 3 ವಿದ್ಯಾರ್ಥಿಗಳು ದುರ್ಮರಣ; ಐಷಾರಾಮಿ ಕಾರಿನಲ್ಲಿ ಏರ್‌ಬ್ಯಾಗ್‌ ಇರಲೇ ಇಲ್ಲ!

Mushroom Benefits
ಆರೋಗ್ಯ1 hour ago

Mushroom Benefits: ಅಣಬೆ ಎಂಬ ವಿಟಮಿನ್‌ ಡಿ! ಇದರ ಆರೋಗ್ಯ ಲಾಭ ತಿಳಿದರೆ ನೀವು ತಿನ್ನದೆ ಇರಲಾರಿರಿ!

Paris Olympics 2024
ಪ್ರಮುಖ ಸುದ್ದಿ2 hours ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಯಾವ ಸ್ಪರ್ಧಿಗಳು ಕಣಕ್ಕೆ ಇಳಿಯಲಿದ್ದಾರೆ? ಎಲ್ಲ ಮಾಹಿತಿ ಇಲ್ಲಿದೆ

karnataka weather forecast
ಮಳೆ2 hours ago

Karnataka Weather : 7 ಜಿಲ್ಲೆಗಳಲ್ಲಿ ವ್ಯಾಪಿಸಲಿದೆ ಭರ್ಜರಿ ಮಳೆ

Dina Bhavishya
ಭವಿಷ್ಯ3 hours ago

Dina bhavishya : ನಿಮ್ಮ ಅನುಮಾನಗಳು ಮನೆಯ ವಾತಾವರಣವನ್ನು ಹದಗೆಡಿಸುತ್ತೆ

Bigg Boss OTT 3
ಪ್ರಮುಖ ಸುದ್ದಿ6 hours ago

Bigg Boss OTT 3 : ಸನಾ ಮಕ್ಬುಲ್​ ಬಿಗ್​ಬಾಸ್​ ಒಟಿಟಿ 3 ವಿನ್ನರ್​, ನೈಜಿ ರನ್ನರ್​​ಅಪ್​​

Paris Olympics 2024
ಪ್ರಮುಖ ಸುದ್ದಿ8 hours ago

Paris Oylmpics 2024 : ಹಳದಿ ಬಣ್ಣದ ಜೆರ್ಸಿಯವರನ್ನು ಸೋಲಿಸುವುದೆಂದರೆ ಖುಷಿ; ಹಾಕಿ ತಂಡದ ಗೆಲುವನ್ನು ಮುಂದಿಟ್ಟುಕೊಂಡು ಸಿಎಸ್​​ಕೆಯನ್ನು ಲೇವಡಿ ಮಾಡಿದ ಆರ್​ಸಿಬಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Rain
ಮಳೆ2 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ4 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ5 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ6 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌