ವಿಸ್ತಾರ ಸಂಪಾದಕೀಯ | ತೈಲ ದರ ಇಳಿಕೆಯ ಲಾಭವನ್ನು ಜನಸಾಮಾನ್ಯರಿಗೂ ದಾಟಿಸಿ - Vistara News

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ | ತೈಲ ದರ ಇಳಿಕೆಯ ಲಾಭವನ್ನು ಜನಸಾಮಾನ್ಯರಿಗೂ ದಾಟಿಸಿ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಆರು ತಿಂಗಳಿಂದ ಕಚ್ಚಾ ತೈಲ ದರ ಇಳಿಕೆ ಕಾಣುತ್ತಿದೆ. ಜತೆಗೆ, ರಷ್ಯಾ ಸೇರಿದಂತೆ ಯಾವುದೇ ರಾಷ್ಟ್ರದಿಂದ ಭಾರತದ ತೈಲ ಖರೀದಿಗೆ ಅಡ್ಡಿ ಆತಂಕಗಳಿಲ್ಲ. ಆದರೂ ಪೆಟ್ರೋಲ್, ಡೀಸೆಲ್ ದರ ಇಳಿಕೆ ಆಗುತ್ತಿಲ್ಲ ಏಕೆ?

VISTARANEWS.COM


on

ವಿಸ್ತಾರ ಸಂಪಾದಕೀಯ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಳೆದ ಆರು ತಿಂಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಸತತವಾಗಿ ಇಳಿಕೆಯ ಹಾದಿಯಲ್ಲಿದೆ. ಭಾರತದ ಮಟ್ಟಿಗೆ ಇದೊಂದು ಶುಭ ಸುದ್ದಿಯೇ. ಯಾಕೆಂದರೆ, ನಮ್ಮ ದೇಶವು ಗರಿಷ್ಠ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಹೆಚ್ಚಿನ ಹಣವನ್ನು ಇದಕ್ಕಾಗಿಯೇ ವಿನಿಯೋಗಿಸುತ್ತದೆ. ಅದರಿಂದಾಗಿ, ನಮ್ಮ ಇತರ ಅಭಿವೃದ್ಧಿ ಚಟುವಟಿಕೆಗಳಿಗೆ ತೊಡಕಾಗುತ್ತಿರುವುದು ಸುಳ್ಳೇನಲ್ಲ. ಈ ಹಿನ್ನೆಲೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾದಷ್ಟು ಭಾರತಕ್ಕೆ ಲಾಭದಾಯಕವೇ ಸರಿ. ಆದರೆ, ಹೀಗೆ ಇಳಿಕೆಯಾದ ಲಾಭವನ್ನು ಸರ್ಕಾರವು ಜನಸಾಮಾನ್ಯರಿಗೆ ದಾಟಿಸುವ ಪ್ರಯತ್ನ ಮಾಡುತ್ತಿದೆಯೇ ಎಂಬುದು ನಾವಿಲ್ಲಿ ಕೇಳಿಕೊಳ್ಳಬೇಕಾದ ಬಹುಮುಖ್ಯ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಉತ್ತರ ದೊರೆತರೆ, ತೈಲ ದರ ಇಳಿಕೆಯ ಲಾಭ ಮತ್ತು ನಷ್ಟ ಸ್ಪಷ್ಟವಾಗಿ ತಿಳಿಯಲಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕಳೆದ ಜನವರಿಯಿಂದ ಇಲ್ಲಿಯವರೆಗಿನ ಅವಧಿಯ ಕನಿಷ್ಠ ಮಟ್ಟದಲ್ಲಿದೆ. ಕಳೆದ ಹದಿನೈದು ದಿನಗಳಿಂದ ಪ್ರತಿ ಬ್ಯಾರೆಲ್‌ಗೆ 80.87 ಡಾಲರ್‌ನಿಂದ 85.55 ಡಾಲರ್ ನಡುವೆಯೇ ಇದೆ. ಇದಲ್ಲದೇ ಒಪೆಕ್‌ ಮತ್ತು ರಷ್ಯಾದಿಂದ ಮತ್ತೊಂದು ಸುತ್ತಿನ ತೈಲೋತ್ಪಾದನೆ ಹೆಚ್ಚಳ ವರದಿಗಳು ದರವನ್ನು ಮತ್ತಷ್ಟು ಇಳಿಸಿದೆ. ಕಳೆದ ಮಾರ್ಚ್‌ನಲ್ಲಿ ಪ್ರತಿ ಬ್ಯಾರೆಲ್‌ ಕಚ್ಚಾ ತೈಲ ದರ 112 ಡಾಲರ್‌ಗಳ ಉನ್ನತ ಮಟ್ಟದಲ್ಲಿ ಇತ್ತು. ಮಾರ್ಚ್ ತಿಂಗಳಿಗೆ ಹೋಲಿಸಿದರೆ ಈಗ ಗಣನೀಯವಾಗಿ ಕಡಿಮೆಯಾಗಿದೆ. ಏತನ್ಮಧ್ಯೆ, ಭಾರತವು ತನ್ನ ಅಗತ್ಯಕ್ಕೆ ಬೇಕಾದಷ್ಟು ತೈಲ ಖರೀದಿಯನ್ನು ರಷ್ಯಾ ಸೇರಿದಂತೆ ಜಗತ್ತಿನ 30 ರಾಷ್ಟ್ರಗಳಿಂದ ಮುಂದುವರಿಸಲಿದೆ. ಇದಕ್ಕೆ ಯಾವುದೇ ಅಂತಾರಾಷ್ಟ್ರೀಯ ಒತ್ತಡಗಳಿಲ್ಲ(ಉಕ್ರೇನ್-ರಷ್ಯಾ ಸಮರ ಹಿನ್ನೆಲೆಯಲ್ಲಿ). ಭಾರತವು ನಿತ್ಯ 50 ಲಕ್ಷ ಬ್ಯಾರೆಲ್ ಪೆಟ್ರೋಲಿಯಂ ವಿನಿಯೋಗಿಸುತ್ತದೆ. ಇದು, ಜಾಗತಿಕ ಸರಾಸರಿ ಬಳಕೆಗಿಂತಲೂ ಶೇ.2ರಷ್ಟು ಹೆಚ್ಚಾಗಿದೆ. ಅಂದರೆ, ನಾವು ಪ್ರಪಂಚದ ಇತರ ಎಲ್ಲ ರಾಷ್ಟ್ರಗಳಿಗಿಂತಲೂ ಗರಿಷ್ಠ ಪ್ರಮಾಣದಲ್ಲಿ ತೈಲ ಆಮದಿನ ಮೇಲೆ ಅವಲಂಬಿತವಾಗಿರುವುದನ್ನು ಇದು ತೋರಿಸುತ್ತಿದೆ. ಹಾಗಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸಣ್ಣ ಕದಲಿಕೆಯು ನಮ್ಮ ದೇಶದ ಒಟ್ಟು ಆರ್ಥಿಕ ವ್ಯವಹಾರದ ಮೇಲೆ ಭಾರೀ ಪರಿಣಾಮ ಬೀರುತ್ತದೆ.

ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಹೆಚ್ಚಾದಂತೆ ಚಿಲ್ಲರೆ ಮಾರುಕಟ್ಟೆಯಲ್ಲಿ ದರವನ್ನು ಹೆಚ್ಚಿಸಲಾಗುತ್ತದೆ. ಆದರೆ, ಅದೇ ವೇಳೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಕುಸಿದರೆ ಅಥವಾ ಇಳಿಕೆಯಾದರೆ, ಆ ಲಾಭವನ್ನು ಸಾಮಾನ್ಯ ಜನರಿಗೆ ವರ್ಗಾಯಿಸಲು ಹೋಗುವುದಿಲ್ಲ. ಇದಕ್ಕೆ ಸರ್ಕಾರಗಳು ಮತ್ತು ತೈಲ ಕಂಪನಿಗಳು ತಮ್ಮದೇ ಆದ ಸಮರ್ಥನೆಯನ್ನು ನೀಡುತ್ತವೆ. ಅದರಾಚೆಗೂ ಜನಸಾಮಾನ್ಯರ ಹಿತವನ್ನು ಗಮನದಲ್ಲಿಟ್ಟುಕೊಂಡು ಸ್ವಲ್ಪ ಪ್ರಮಾಣದಲ್ಲಾದರೂ ತೈಲ ಇಳಿಕೆಯ ನೇರ ಲಾಭ ಜನಸಾಮಾನ್ಯರಿಗೆ ವರ್ಗಾಯಿಸಬೇಕು.

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗುತ್ತಿದ್ದಂತೆ ಅದರ ಪರಿಣಾಮವು ಸಾರಿಗೆ, ಹೋಟೆಲ್‌, ತರಕಾರಿ, ದಿನಸಿ, ಅಡುಗೆ ಅನಿಲ ಇತ್ಯಾದಿ ವಹಿವಾಟಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಂತಿಮವಾಗಿ ಇದಕ್ಕೆ ಬೆಲೆ ತೆರಬೇಕಾಗುವುದು ಜನಸಾಮಾನ್ಯರು. ಅದೇ ರೀತಿ, ಬೆಲೆ ಇಳಿಕೆಯಾದರೆ, ಇದೇ ರೀತಿ ಸಕಾರಾತ್ಮಕ ಪರಿಣಾಮ ಬೀರಬಹುದು. ಆದರೆ, ಇದುವರೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಯಾದ ತಕ್ಷಣ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಕಡಿಮೆ ಮಾಡಿದ ಉದಾಹರಣೆಗಳು ಕಡಿಮೆ.

ಬೆಲೆ ಏರಿಕೆ ಎನ್ನುವುದು ವರ್ಷದ 365 ದಿನಗಳ ಕಾಲವೂ ಜನ ಸಾಮಾನ್ಯರಿಗೆ ಬಾಧಿಸುವ ಸಂಗತಿಯೇ ಆಗಿದೆ. ಹಾಗಾಗಿ, ಅವರ ಸಂಕಷ್ಟಗಳನ್ನು ಅರಿತುಕೊಂಡ ಸರ್ಕಾರವು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಾದ ಇಳಿಕೆಯ ಲಾಭವನ್ನು ನೇರವಾಗಿ ಜನರಿಗೆ ಆಗುವಂತೆ ವರ್ಗಾಯಿಸಬೇಕು. ಸದ್ಯಕ್ಕೆ, ದಿನ ನಿತ್ಯ ತೈಲ ದರ ಏರಿಕೆ ಆಗುತ್ತಿಲ್ಲ ಎಂಬುದೊಂದೇ ಸಮಾಧಾನದ ಸಂಗತಿಯಾಗಿದೆ. ಚುನಾವಣೆ ಸೇರಿದಂತೆ ಇನ್ನಿತರ ರಾಜಕೀಯ ಕಾರಣಗಳನ್ನು ಇದಕ್ಕೆ ನೀಡಬಹುದು. ಆದರೆ, ನಿತ್ಯ ಪರಿಷ್ಕರಣೆ ಯಾವುದೇ ಹಂತದಲ್ಲಿ ಮತ್ತೆ ಶುರುವಾಗಬಹುದು. ತಾನು ಜನಪರ ಎಂಬುದನ್ನು ತೋರಿಸಿಕೊಳ್ಳಲು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯ ಅವಕಾಶವನ್ನು ಸರ್ಕಾರಕ್ಕೆ ಒದಗಿಸಿದೆ. ಈ ಅವಕಾಶವನ್ನು ಸರ್ಕಾರವು ಬಳಸಿಕೊಳ್ಳಬೇಕು. ಅದು ಬಿಟ್ಟು, ವಿಪರೀತ ಬೆಲೆ ಏರಿಕೆಯಾದಾಗ ಸಾರ್ವಜನಿಕರಿಂದ ತೀವ್ರ ಒತ್ತಡವನ್ನು ಎದುರಿಸಿ, ಸುಂಕವನ್ನು ಕಡಿಮೆ ಮಾಡಿ, ಬೆಲೆ ಇಳಿಕೆ ಮಾಡುವುದರಲ್ಲಿ ಯಾವುದೇ ಅರ್ಥವಿರುವುದಿಲ್ಲ ಎಂಬ ಸಂಗತಿಯನ್ನು ಸರ್ಕಾರ ಮನಗಾಣಬೇಕು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಮಕ್ಕಳನ್ನು ಖಾಸಗಿ ವಾಹನದಲ್ಲಿ ಶಾಲೆಗೆ ಕಳುಹಿಸುವ ಪೋಷಕರಲ್ಲಿ ಆತಂಕ ಮೂಡಿಸುವ ವಿಡಿಯೊ ಇದು!

Viral Video: ಮೊದಲೆಲ್ಲಾ ಮಳೆ ಇರಲಿ, ಬಿಸಿ ಇರಲಿ ಕಾಲಿಗೊಂದು ಚಪ್ಪಲಿ ಇಲ್ಲದೇ ಶಾಲೆಗೆ ಹೋಗುತ್ತಿದ್ದರು. ಆದರೆ ಈಗ ಹಾಗಲ್ಲ, ನಮ್ಮ ಮಗು ನಡೆದರೆ ಎಲ್ಲಿ ಕಾಲು ಸವೆಯುತ್ತೋ ಎಂದು ಎರಡು ಹೆಜ್ಜೆ ನಡೆಯುವುದಕ್ಕೆ ಬಿಡುವುದಿಲ್ಲ ಪೋಷಕರು. ಇನ್ನು ಬೆಳಗ್ಗೆ ಬಂದು ಮನೆ ಬಾಗಿಲ ಬಳಿ ಮಕ್ಕಳನ್ನು ಕರೆದುಕೊಂಡು ಹೋಗಲು ವಾಹನಗಳ ಚಾಲಕರ ಬೇಜವಾಬ್ದಾರಿಯಿಂದ ಹಲವು ಅಹಿತಕರ ಘಟನೆಗಳು ನಡೆಯುತ್ತವೆ. ಗುಜರಾತ್‌ನ ವಡೋಡರದಲ್ಲಿ ಇಂಥದ್ದೇ ಮತ್ತೊಂದು ದುರ್ಘಟನೆ ನಡೆದಿದೆ.

VISTARANEWS.COM


on

Viral Video
Koo

ಆಗಿನ ಕಾಲದಲ್ಲಿ ಮಕ್ಕಳು ನಡೆದುಕೊಂಡೇ ಶಾಲೆಗೆ ತೆರಳುತ್ತಿದ್ದರು. ಆದರೆ ಇಂದಿನ ಆಧುನಿಕ ಕಾಲದಲ್ಲಿ ಪೋಷಕರು ಮಕ್ಕಳನ್ನು ವಾಹನಗಳ ಮೂಲಕ ಶಾಲೆಗೆ ಕಳುಹಿಸುವುದು ಸಹಜ. ಕೆಲವರು ಶಾಲೆಯ ಅಧಿಕೃತ ವಾಹನಗಳಲ್ಲಿ ಮಕ್ಕಳನ್ನು ಕಳುಹಿಸಿದರೆ, ಕೆಲವು ಪೋಷಕರು ಕಡಿಮೆ ಹಣ ನೀಡುವ ಉದ್ದೇಶದಿಂದ ಖಾಸಗಿ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಆದರೆ ಕೆಲವು ವಾಹನ ಚಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅವರು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಅನೇಕ ಮಕ್ಕಳು ಅಪಾಯಕ್ಕೊಳಗಾಗಿದ್ದಾರೆ. ಮಕ್ಕಳು ಪ್ರಾಣ ಕಳೆದುಕೊಂಡ ಇಂತಹ ಘಟನೆಗಳು ಹಲವಾರು ನಡೆದಿವೆ. ಇದೀಗ ಗುಜರಾತ್‌ನಲ್ಲಿಯೂ ಕೂಡ ಇಂತಹದೊಂದು ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್(Viral Video) ಪೋಷಕರಲ್ಲಿ ಆತಂಕ ಹುಟ್ಟಿಸಿದೆ.

ವಾಹನ ಚಾಲಕನ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ವಾಹನದ ಬಾಗಿಲು ತೆರೆದುಕೊಂಡು ಇಬ್ಬರು ವಿದ್ಯಾರ್ಥಿನಿಯರು ವಾಹನದಿಂದ ಹೊರಬಿದ್ದು ಗಾಯಗೊಂಡ ಘಟನೆ ಗುಜರಾತ್‌ನ ವಡೋದರದಲ್ಲಿ ನಡೆದಿದೆ. ಮಾರುತಿ ಇಕೋ ವಾಹನದಲ್ಲಿ ಮಕ್ಕಳನ್ನು ತುಂಬಿಸಿಕೊಂಡು ಚಾಲಕ ಶಾಲೆಯತ್ತ ವೇಗವಾಗಿ ವಾಹನವನ್ನು ಚಲಾಯಿಸಿದ್ದಾನೆ. ಆ ವೇಳೆ ಕಾರಿನ ಹಿಂಬದಿಯ ಬಾಗಿಲು ಸರಿಯಾಗಿ ಹಾಕದ ಕಾರಣ ಅದು ತೆರೆದುಕೊಂಡು ಹಿಂದೆ ಕುಳಿತಿದ್ದ ಇಬ್ಬರು ವಿದ್ಯಾರ್ಥಿನಿಯರು ರಸ್ತೆಯ ಮೇಲೆ ಬಿದ್ದಿದ್ದಾರೆ. ಈ ಘಟನೆಯಿಂದ ಆ ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯವಾಗಿದೆ.

ಹಿಂಬದಿಯಿಂದ ಯಾವುದೇ ವಾಹನ ಬಾರದ ಕಾರಣ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆಗೆ ಬಿದ್ದ ವಿದ್ಯಾರ್ಥಿನಿಯರನ್ನು ಸ್ಥಳೀಯರು ಮೇಲಕ್ಕೆತ್ತಿ ಚಿಕಿತ್ಸೆ ಮಾಡಿದ್ದಾರೆ. ಆದರೆ ಚಾಲಕ ಮಾತ್ರ ಮಕ್ಕಳು ಬಿದ್ದಿರುವುದು ತಿಳಿದರೂ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಸ್ಥಳೀಯರು ವಿದ್ಯಾರ್ಥಿನಿಯ ಮನೆಯವರಿಗೆ ಮಾಹಿತಿ ನೀಡಿದ್ದ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: Viral video: ವಧುವಿಗೆ ಸಿಹಿ ತಿನ್ನಿಸಲು ಹೋಗಿ ಕಪಾಳಮೋಕ್ಷ ಮಾಡಿಸಿಕೊಂಡ ವರ! ಅಯ್ಯೋ ಪಾಪ!!

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳದಲ್ಲಿದ್ದ ಸಿಸಿಟಿವಿಯನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಚಾಲಕನನ್ನು ಬಂಧಿಸಿದ್ದಾರೆ. ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಘಟನೆ ಅನೇಕ ಪೋಷಕರ ಆತಂಕಕ್ಕೆ ಕಾರಣವಾಗಿರುವುದಂತು ನಿಜ. ಹಾಗಾಗಿ ತಮ್ಮ ಮಕ್ಕಳನ್ನು ಶಾಲೆಯ ಅಧಿಕೃತ ಹಾಗೂ ನೊಂದಾಯಿತ ವಾಹನಗಳಲ್ಲೇ ಶಾಲೆಗೆ ಕಳುಹಿಸಿ. ಕಡಿಮೆ ಹಣದ ಆಸೆಗೆ ಇಂತಹ ವಾಹನದಲ್ಲಿ ಮಕ್ಕಳನ್ನು ಕಳುಹಿಸಿ ಅವರ ಜೀವಕ್ಕೆ ಕುತ್ತು ತರಬೇಡಿ. ಯಾಕೆಂದರೆ ಇಂತಹ ವಾಹನ ಚಾಲಕರಿಗೆ ಮಕ್ಕಳ ಬಗ್ಗೆ ಯಾವುದೇ ಕಾಳಜಿ ಇರುವುದಿಲ್ಲ.

Continue Reading

ಕರ್ನಾಟಕ

Suraj Revanna Case: ಸೂರಜ್ ರೇವಣ್ಣ ವಿರುದ್ಧ ನಮಗೆ ಇನ್ನೂ ಅಧಿಕೃತ ದೂರು ಬಂದಿಲ್ಲ: ಗೃಹ ಸಚಿವ ಪರಮೇಶ್ವರ್‌

Suraj Revanna Case: ಸೂರಜ್‌ ರೇವಣ್ಣ ವಿರುದ್ಧ ಕೇಳಿಬಂದಿರುವ ಸಲಿಂಗ ಕಾಮ ಆರೋಪದ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಪ್ರತಿಕ್ರಿಯಿಸಿದ್ದು, ಪ್ರಕರಣ ಸಿಐಡಿಗೆ ಕೊಡುವ ಮುನ್ನ ಪ್ರಕರಣದ ನೈಜತೆ ತಿಳಿದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

VISTARANEWS.COM


on

Suraj Revanna Case
Koo

ಬೆಂಗಳೂರು: ಸೂರಜ್ ರೇವಣ್ಣ ಪ್ರಕರಣ ವಿಚಾರ ನಮಗೆ ಇನ್ನೂ ದೂರು ಬಂದಿಲ್ಲ. ಸುದ್ದಿ ವಾಹಿನಿಗಳಲ್ಲಿ ಈ ಬಗ್ಗೆ ನೋಡಿದ್ದೇವೆ. ಆದರೆ, ನಮಗೆ ಅಧಿಕೃತ ದೂರು ನೀಡಿಲ್ಲ. ದೂರು ಬಂದ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಸೂರಜ್‌ ರೇವಣ್ಣ ವಿರುದ್ಧ ಕೇಳಿಬಂದಿರುವ ಸಲಿಂಗ ಕಾಮ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ ಅಂತ ಹೇಳಿದ್ದಾರೆ. ನನಗೆ ಯಾವುದೇ ಪತ್ರ ಬಂದಿಲ್ಲ, ಈಗ ತನಿಖೆ ಮಾಡುತ್ತೇವೆ. ಏನು ಅಂತ ತಿಳಿದುಕೊಂಡು ತನಿಖೆ ಮಾಡುತ್ತೇವೆ. ಸಿಐಡಿಗೆ ಕೊಡುವ ಮುನ್ನ ಪ್ರಕರಣದ ನೈಜತೆ ತಿಳಿದುಕೊಳ್ಳುತ್ತೇವೆ. ಪತ್ರ ಬರೆಯುವುದಕ್ಕೂ, ದೂರು ಕೊಡುವುದಕ್ಕೂ ವ್ಯತ್ಯಾಸ ಇದೆ. ಅಧಿಕೃತ ದೂರು ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಖಾಸಗಿ ಸುದ್ದಿ ವಾಹಿನಿಯವರನ್ನು ‌ಕರೆದು ಮಾತನಾಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Suraj Revanna Case: ಸೂರಜ್‌ ರೇವಣ್ಣ ವಿರುದ್ಧ ಸಲಿಂಗ ಕಾಮ ಆರೋಪ; ಇಂದು ಮತ್ತೊಂದು ದೂರು ದಾಖಲು?

ಏನಿದು ಪ್ರಕರಣ?

ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ದೌರ್ಜನ್ಯ ಎಸಗಿದ್ದು, ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಸೂರಜ್‌ ರೇವಣ್ಣ ವಿರುದ್ಧ ಅರಕಲಗೂಡಿನ ಜೆಡಿಎಸ್ ಕಾರ್ಯಕರ್ತರೊಬ್ಬರು ಆರೋಪ ಮಾಡಿದ್ದರು. ಈ ಬಗ್ಗೆ ಡಿಜಿಪಿ, ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ.

ಖಾಸಗಿ ಫೈನಾನ್ಸ್‌ ಕಂಪನಿಯಲ್ಲಿ ಉದ್ಯೋಗಿಯಾದ ಜೆಡಿಎಸ್ ಕಾರ್ಯಕರ್ತ, ಜೂನ್ 16ರಂದು ಸೂರಜ್ ತನಗೆ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿ, ಗನ್ನಿಕಡ ತೋಟದ ಮನೆಗೆ ಆಹ್ವಾನಿಸಿದ್ದರು. ಉದ್ಯೋಗ ನೀಡುವ ಭರವಸೆ ನೀಡಿ ತನ್ನನ್ನು ಕರೆಸಿಕೊಂಡು, ಸಲಿಂಗ ಕಾಮಕ್ಕೆ ಒತ್ತಾಯಿಸಿ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದರಿಂದ ನನ್ನ ದೇಹದ ಮೇಲೆ ಗಾಯಗಳಾಗಿದ್ದು, ಈ ಬಗ್ಗೆ ಎಲ್ಲಾದರೂ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ. ಅಸಹಜ ಲೈಂಗಿಕ ದೌರ್ಜನ್ಯದಿಂದ ದೇಹದ ಹಲವು ಭಾಗಗಳಲ್ಲಿ ಕಚ್ಚಿದ ಗುರುತುಗಳಿವೆ, ಮರ್ಮಾಂಗದ ಮೇಲೂ ಗಾಯವಾಗಿದೆ ಎಂದು ದೂರುದಾರ ಆರೋಪಿಸಿದ್ದಾರೆ.

ಇದನ್ನೂ ಓದಿ | Suraj Revanna Case: ಸೂರಜ್‌ ರೇವಣ್ಣ ವಿರುದ್ಧ ಸಲಿಂಗ ಕಾಮ ಆರೋಪ; ದೂರು ಸಲ್ಲಿಸಿದ ವ್ಯಕ್ತಿ ವಿರುದ್ಧ ಎಫ್‌ಐಆರ್!

ಮತ್ತೊಂದೆಡೆ ದೂರು ನೀಡಿದ್ದ ವ್ಯಕ್ತಿ ವಿರುದ್ಧವೇ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿದ್ದಾರೆ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಜೆಡಿಎಸ್‌ ಕಾರ್ಯಕರ್ತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Continue Reading

Latest

Viral video: ವಧುವಿಗೆ ಸಿಹಿ ತಿನ್ನಿಸಲು ಹೋಗಿ ಕಪಾಳಮೋಕ್ಷ ಮಾಡಿಸಿಕೊಂಡ ವರ! ಅಯ್ಯೋ ಪಾಪ!!

Viral video ಈಗಂತೂ ಮದುವೆಗೆ ತಿಂಗಳಿದೆ ಎನ್ನುವಾಗಲೇ ವಧು-ವರರು ಫೋಟೊಶೂಟ್ ಎಂದು ಊರೂರು ತಿರುಗುವುದನ್ನು ನಾವು ನೋಡಿರುತ್ತೇವೆ.ವೇದಿಕೆ ಮೇಲೆ ನವಜೋಡಿಗಳ ಕಣ್ಣುಗಳ ಸಲುಗೆ, ಆಗಾಗ ಪಿಸುಮಾತು, ರಂಗೇರಿದ ಮುಖ ಇವೆಲ್ಲವನ್ನೂ ನೋಡುವುದೇ ಚೆಂದ . ಆದರೆ ಇಲ್ಲೊಬ್ಬ ವರ ಮಹಾಶಯ ತನ್ನ ಮದುವೆ ದಿನ ವಧುವಿಗೆ ಸಿಹಿತಿನ್ನಿಸಿ ಕೆನ್ನೆ ಊದಿಸಿಕೊಂಡ ಘಟನೆ ನಡೆದಿದೆ. ಈ ವಿಡಿಯೊದಲ್ಲಿ ವರನೊಬ್ಬ ವಧುವಿನ ಮೇಲೆ ಯಾವುದೋ ವಿಚಾರಕ್ಕೆ ಕೋಪಗೊಂಡಿರುವ ಕಾರಣ ಸಿಹಿ ತಿನ್ನಿಸುವಾಗ ಬಲವಂತವಾಗಿ ಆಕೆಯ ಬಾಯಿಗೆ ತುಂಬಿದ್ದಾನೆ. ವೇಳೆ ವರನ ಈ ನಡವಳಿಕೆಯನ್ನು ಸಹಿಸದ ವಧು ಆತನ ಕಪಾಳಕ್ಕೆ ಮೂರು ಬಾರಿ ಹೊಡೆದಿದ್ದಾಳೆ. ಮತ್ತು ಆತ ತಿನ್ನಿಸಿದ ಸಿಹಿತಿಂಡಿಯನ್ನು ಉಗಿದಿದ್ದಾಳೆ.

VISTARANEWS.COM


on

Viral Video
Koo

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಯಾವುದ್ಯಾವುದೋ ವಿಡಿಯೊಗಳು ಪೋಸ್ಟ್ ಆಗುತ್ತಿದ್ದು, ಒಂದೊಂದು ವಿಡಿಯೊ ವೀಕ್ಷಕರಿಗೆ ಬಹಳಷ್ಟು ಮನೋರಂಜನೆಯನ್ನು ನೀಡುತ್ತದೆ. ಇದೀಗ ವಧು ವರರ ವಿಡಿಯೊವೊಂದು ಇನ್ ಸ್ಟಾಗ್ರಾಂನಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್(Viral video) ಆಗಿದೆ. ಮದುವೆ ಎನ್ನುವುದು ಒಂದು ಸಿಹಿ ಗಳಿಗೆ ಆದರೆ ಇಲ್ಲೊಬ್ಬ ವರನಿಗೆ ಮಾತ್ರ ಮದುಮೆ ದಿನವೇ ಕಪಾಳಮೋಕ್ಷವಾಗಿದೆ.

ಮದುವೆ ಎನ್ನುವುದು ಒಂದು ಶುಭ ದಿನ. ಈ ದಿನ ವಧು ವರರಿಗೆ ಮರೆಯಲಾಗದ ಸುದಿನ. ಹಾಗಾಗಿ ಈ ದಿನವನ್ನು ಸಂಭ್ರಮಿಸಲು ವಧುವರರಿಂದ ಹಲವಾರು ಆಚರಣೆಗಳನ್ನು ಮಾಡಲಾಗುತ್ತದೆ. ಅದರಲ್ಲಿ ವಧು-ವರರು ಒಬ್ಬರಿಗೊಬ್ಬರು ಸಿಹಿ ತಿನ್ನಿಸುವ ಆಚರಣೆ ಕೂಡ ಇದೆ. ಇದೀಗ ಈ ಸಿಹಿ ತಿನ್ನಿಸುವ ವೇಳೆ ವಧು ವರರ ನಡುವೆ ಜಗಳವೊಂದು ನಡೆದಿದೆ..

ಸಿಹಿ ತಿನ್ನಿಸುವಾಗ ವಧು ವರನಿಗೆ ಕಪಾಳ ಮೋಕ್ಷ ಮಾಡಿರುವ ವಿಡಿಯೊ ಇನ್ ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಈ ವಿಡಿಯೊದಲ್ಲಿ ವರನೊಬ್ಬ ವಧುವಿನ ಮೇಲೆ ಯಾವುದೋ ವಿಚಾರಕ್ಕೆ ಕೋಪಗೊಂಡಿರುವ ಕಾರಣ ಸಿಹಿ ತಿನ್ನಿಸುವಾಗ ಬಲವಂತವಾಗಿ ಆಕೆಯ ಬಾಯಿಗೆ ತುಂಬಿದ್ದಾನೆ. ಆ ವೇಳೆ ವರನ ಈ ನಡವಳಿಕೆಯನ್ನು ಸಹಿಸದ ವಧು ಆತನ ಕಪಾಳಕ್ಕೆ ಮೂರು ಬಾರಿ ಹೊಡೆದಿದ್ದಾಳೆ. ಮತ್ತು ಆತ ತಿನ್ನಿಸಿದ ಸಿಹಿತಿಂಡಿಯನ್ನು ಉಗಿದಿದ್ದಾಳೆ.

ಮದುವೆಯ ಸಂಭ್ರಮದ ನಡುವೆ ವಧು ವರರ ಈ ಗಲಾಟೆ ಕಂಡು ಅಕ್ಕಪಕ್ಕ ನಿಂತಿದ್ದ ಬಂಧುಗಳು ಗಾಬರಿಯಾಗಿದ್ದಾರೆ. ಹಾಗೂ ವರ ತನ್ನ ಪತ್ನಿಯ ಮುಖ ನೋಡುತ್ತಾ ನಿಂತಿರುವಾಗ ಈ ವಿಡಿಯೊ ಮುಗಿದಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಹಾಗೇ ವಧು ವರರ ಹೆಸರು ಕೂಡ ತಿಳಿದುಬಂದಿಲ್ಲ. ಆದರೆ ಈ ಘಟನೆಯಿಂದ ವೀಕ್ಷಕರಿಗೆ ಮನೋರಂಜನೆ ಸಿಕ್ಕಿದ್ದರೂ ಕೂಡ ವಧು ವರನ ವೈವಾಹಿಕ ಜೀವನದಲ್ಲಿ ಸಮಸ್ಯೆಯಾಗುವುದಂತು ಖಂಡಿತ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ. ವರನ ಮುಖ ನೋಡಿದರೆ, ಅಯ್ಯೋ ಪಾಪ ಅನಿಸುತ್ತದೆ!

Continue Reading

Latest

Viral News: ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡುತ್ತಾ ರೀಲ್ಸ್ ಮಾಡಿದ ಯುವತಿ ಅರೆಸ್ಟ್!

Viral News: ಈಗಂತೂ ಎಲ್ಲರಿಗೂ ರೀಲ್ಸ್ ಕ್ರೇಜ್. ತಲೆ ಕೆಳಗೆ ಹಾಕಿಕೊಂಡು ಮೊಬೈಲ್ ನೋಡುತ್ತಾ ಕುಳಿತುಕೊಂಡರೆ ಇಹದ ಪರಿವೆ ಇಲ್ಲದ ಹಾಗೇ ಇರುತ್ತಾರೆ. ಪಾಳುಬಿದ್ದ ಕಟ್ಟಡದ ಮೇಲಿಂದ ಸ್ನೇಹಿತನ ಕೈಹಿಡಿದು ನೇತಾಡುತ್ತಾ ಯುವತಿ ರೀಲ್ಸ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral News) ಆಗಿತ್ತು. ಇದನ್ನು ನೋಡಿದ ವ್ಯಕ್ತಿಯೊಬ್ಬರು ಈ ವಿಡಿಯೊವನ್ನು ಪುಣೆ ಪೊಲೀಸರಿಗೆ ಟ್ಯಾಗ್ ಮಾಡಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ಇದೀಗ ಆ ಯುವತಿ ಹಾಗೂ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

Viral News
Koo

ಪುಣೆ: ಸೋಷಿಯಲ್‌ ಮೀಡಿಯಾದ ಕ್ರೇಜ್‌ ಈಗಿನ ಯುವಜನರಿಗೆ ಜಾಸ್ತಿ. ಅದರಲ್ಲೂ ಈ ರೀಲ್ಸ್‌ ಎಂದರೆ ಸಿಕ್ಕಾಪಟ್ಟೆ ಇಷ್ಟ. ಈ ರೀಲ್ಸ್‌ಗಾಗಿ ಯಾವುದ್ಯಾವುದೋ ಸರ್ಕಸ್‌ ಮಾಡಿ ಜೀವಕ್ಕೆ ಕುತ್ತು ತಂದಕೊಳ್ಳುವವರೂ ಇದ್ದಾರೆ. ಪಾಳುಬಿದ್ದ ಕಟ್ಟಡದ ಮೇಲಿಂದ ಸ್ನೇಹಿತನ ಕೈಹಿಡಿದು ನೇತಾಡುತ್ತಾ ಯುವತಿ ರೀಲ್ಸ್ (Reels) ಮಾಡಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿತ್ತು. ಇದೀಗ ಆ ಯುವತಿ ಹಾಗೂ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಮೀನಾಕ್ಷಿ ಸಾಲುಂಕೆ (23) ಹಾಗೂ ಆಕೆಯ ಸ್ನೇಹಿತ ಮಿಹಿರ್ ಗಾಂಧಿ (27) ರೀಲ್ಸ್ ಮಾಡಿ ಪೊಲೀಸರ ಬಳಿ ಬಂಧಿಯಾದವರು. ಮೂರನೇ ವ್ಯಕ್ತಿ ತಲೆಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ. ಇವರು ಪುಣೆಯ ಜಂಬುಲ್ವಾಡಿ ಸ್ವಾಮಿನಾರಾಯಣ ಮಂದಿರದ ಬಳಿಯ ಪಾಳುಬಿದ್ದ ಕಟ್ಟಡದಲ್ಲಿ ಯುವತಿ ಸ್ನೇಹಿತನ ಕೈಯನ್ನು ಹಿಡಿದುಕೊಂಡು ಕಟ್ಟದಿಂದ ಇಳಿದು ನೇತಾಡುತ್ತಿದ್ದಾಗ ಆಕೆಯ ಸ್ನೇಹಿತರು ವಿವಿಧ ಆ್ಯಂಗಲ್ ನಲ್ಲಿ ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಕ್ತಿಯೊಬ್ಬರು ಈ ವಿಡಿಯೊವನ್ನು ಪುಣೆ ಪೊಲೀಸರಿಗೆ ಟ್ಯಾಗ್ ಮಾಡಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಹಾಗಾಗಿ ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯ ಪೊಲೀಸರು ಈ ಬಗ್ಗೆ ಮಾಹಿತಿ ತಿಳಿದು ತನಿಖೆ ಪ್ರಾರಂಭಿಸಿದ್ದಾರೆ. ಜೂನ್ 21ರಂದು ತಡರಾತ್ರಿ ಯುವತಿ ಹಾಗೂ ಆಕೆಯ ಸ್ನೇಹಿತನನ್ನು ಠಾಣೆಗೆ ಕರೆಸಿ ಬಂಧಿಸಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 336 ಮತ್ತು ಇತರ ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಿಸಿದ್ದಾರೆ. ಹಾಗೇ ತಲೆಮರೆಸಿಕೊಂಡಿರುವ ಮೂರನೇ ವ್ಯಕ್ತಿಯನ್ನು ಶೀಘ್ರದಲ್ಲಿಯೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Blackmail: ನಗ್ನ ಫೋಟೊ ತೋರಿಸಿ ಬ್ಯಾಂಕ್‌ ಅಧಿಕಾರಿಯಿಂದ 4 ಕೋಟಿ ರೂ. ಸುಲಿಗೆ ಮಾಡಿದ ಮಹಿಳೆ!

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಯುವಕ ಯುವತಿಯರು ತಮ್ಮ ಜೀವದ ಹಂಗಲು ತೊರೆದು ಅಪಾಯಕಾರಿ ರೀಲ್ಸ್ ಗಳನ್ನು ಮಾಡುತ್ತಿದ್ದಾರೆ. ಇಂತಹ ಘಟನೆಯಿಂದ ಈಗಾಗಲೇ ಹಲವರು ಪ್ರಾಣಕಳೆದುಕೊಂಡಿದ್ದರೆ, ಕೆಲವರು ಗಾಯಗೊಂಡಿದ್ದರು. ಇಷ್ಟಾದರೂ ಜನರಿಗೆ ರೀಲ್ಸ್ ಹುಚ್ಚು ಬಿಟ್ಟಿಲ್ಲ. ಹಾಗಾಗಿ ಪುಣೆಯ ಈ ಪ್ರಕರಣದಿಂದ ಇನ್ನಾದರೂ ಯುವಕ ಯುವತಿಯರಿಗೆ ಈ ಬಗ್ಗೆ ಭಯ ಹುಟ್ಟಲಿದೆ. ಇದರಿಂದ ಇನ್ನು ಮುಂದೆ ಇಂತಹ ಘಟನೆ ನಡೆಯುವುದನ್ನು ತಪ್ಪಿಸಬಹುದು.

Continue Reading
Advertisement
Accident Case
ವಿಜಯಪುರ6 mins ago

Accident News : ಕಂಟಕವಾದ ಕಾರ ಹುಣ್ಣಿಮೆ ಕರಿ ದಿನ; ಎತ್ತು ಬೆದರಿಸಲು ಹೋಗಿ ಮುಗ್ಗರಿಸಿ ಬಿದ್ದ ಜನ್ರು

Horse Racing
ಕರ್ನಾಟಕ19 mins ago

Horse Racing: ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಕುದುರೆ ರೇಸ್‌ಗೆ ತಡೆ ನೀಡಿದ ಹೈಕೋರ್ಟ್

Atal Setu
ದೇಶ19 mins ago

Atal Setu: “ಅಟಲ್‌ ಸೇತು ಸುಭದ್ರವಾಗಿದೆ..ಯಾವುದೇ ಬಿರುಕಿಲ್ಲ”- ಕಾಂಗ್ರೆಸ್‌ ಆರೋಪಕ್ಕೆ MMRDA ಸ್ಪಷ್ಟನೆ

Viral Video
Latest21 mins ago

Viral Video: ಮಕ್ಕಳನ್ನು ಖಾಸಗಿ ವಾಹನದಲ್ಲಿ ಶಾಲೆಗೆ ಕಳುಹಿಸುವ ಪೋಷಕರಲ್ಲಿ ಆತಂಕ ಮೂಡಿಸುವ ವಿಡಿಯೊ ಇದು!

Actor Darshan Ram Gopal Varma says ELEPHANT attacking a DOG
ಸ್ಯಾಂಡಲ್ ವುಡ್33 mins ago

Actor Darshan: ರೇಣುಕಾಸ್ವಾಮಿ ಹತ್ಯೆ ಶ್ವಾನದ ಮೇಲೆ ʻಆನೆʼ ದಾಳಿ ಮಾಡಿದಂತೆ ಎಂದ ರಾಮ್​ ಗೋಪಾಲ್ ವರ್ಮಾ!

Bengaluru News Accident Case Dj Halli
ಬೆಂಗಳೂರು46 mins ago

Bengaluru news : ಸೋಪಿನ ಮೇಲೆ ಕಾಲಿಟ್ಟು ಆಯತಪ್ಪಿ ಕಟ್ಟಡದ ಮೇಲಿಂದ ಹಾರಿ ಬಿದ್ದಳು; ಎದೆ ಝಲ್​ ಎನಿಸುವ ದೃಶ್ಯ ಸೆರೆ

Actor Darshan fans turn against D boss
ಸ್ಯಾಂಡಲ್ ವುಡ್58 mins ago

Actor Darshan: ಕಸ್ಟಡಿಯಲ್ಲಿ ʻಡಿ ಬಾಸ್‌ʼ; ನೆಚ್ಚಿನ ನಟನ ವಿರುದ್ಧ ತಿರುಗಿ ಬಿದ್ರಾ ʻದಚ್ಚುʼ ಫ್ಯಾನ್ಸ್?

IND vs BAN
ಕ್ರೀಡೆ1 hour ago

IND vs BAN: ಇಂದಿನ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ ಒಂದು ಮಹತ್ವದ ಬದಲಾವಣೆ

Actress Ramya
ಕರ್ನಾಟಕ1 hour ago

Actress Ramya: ದರ್ಶನ್, ಪ್ರಜ್ವಲ್‌, ಸೂರಜ್, ಯಡಿಯೂರಪ್ಪ ಹೆಸರು ಉಲ್ಲೇಖಿಸಿ ಮತ್ತೆ ಕಿಡಿ ಕಾರಿದ ರಮ್ಯಾ; ಪೋಸ್ಟ್‌ನಲ್ಲಿ ಏನಿದೆ?

Suraj Revanna Case
ಕರ್ನಾಟಕ1 hour ago

Suraj Revanna Case: ಸೂರಜ್ ರೇವಣ್ಣ ವಿರುದ್ಧ ನಮಗೆ ಇನ್ನೂ ಅಧಿಕೃತ ದೂರು ಬಂದಿಲ್ಲ: ಗೃಹ ಸಚಿವ ಪರಮೇಶ್ವರ್‌

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ19 hours ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 day ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ2 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು5 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು5 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ6 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ6 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ6 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌