Paris Olympics 2024 : ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿಯಿಂದ ಪ್ಯಾರಿಸ್ ಒಲಿಂಪಿಕ್ಸ್ ಸಾಧಕರಿಗೆ ಆತಿಥ್ಯ - Vistara News

ಪ್ರಮುಖ ಸುದ್ದಿ

Paris Olympics 2024 : ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿಯಿಂದ ಪ್ಯಾರಿಸ್ ಒಲಿಂಪಿಕ್ಸ್ ಸಾಧಕರಿಗೆ ಆತಿಥ್ಯ

Paris Olympics 2024 : ಪ್ಯಾರಿಸ್​ನಲ್ಲಿ ಭಾರತದ ಪದಕ ವಿಜೇತರ ಜತೆ ಪ್ರಧಾನಿ ಫೋನ್ ಮಾಡಿ ಮಾತನಾಡಿದ್ದರು. ವೇದಿಕೆ ಏರಿದ್ದ ಕ್ರೀಡಾಪಟುಗಳಿಗೆ ತಮ್ಮ ಬೆಂಬಲ ವ್ಯಕ್ತಡಪಡಿಸಿದ್ದರು. ಕುಸ್ತಿ ಫೈನಲ್​ನಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಮೋದಿ ಟ್ವೀಟ್ ಮಾಡಿದ್ದರು. ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ ಅಥ್ಲೀಟ್ಗಳು 6 ಪದಕಗಳನ್ನು ಗೆದ್ದಿದ್ದಾರೆ. ಟೋಕಿಯೊದಲ್ಲಿ ನಡೆದ ಹಿಂದಿನ ಒಲಿಂಪಿಕ್ಸ್​ನಲ್ಲಿ ಭಾರತ ಚಿನ್ನ ಸಮೇತ 7 ಪದಕ ಗೆದ್ದಿದ್ದರೆ, ಈ ಬಾರಿ ಭಾರತೀಯ ತಂಡವು 5 ಕಂಚಿನ ಪದಕಗಳು ಮತ್ತು ಒಂದು ಬೆಳ್ಳಿಯೊಂದಿಗೆ ಮರಳಿದೆ.

VISTARANEWS.COM


on

Paris Olympics 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics 2024) ಸ್ಪರ್ಧಿಸಿದ್ದ ಭಾರತದ ಅಥ್ಲೀಟ್​ಗಳ ನಿಯೋಗವನ್ನು ಭೇಟಿಯಾಗಲಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ನಂತರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪಿಎಂ ಮೋದಿ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಆಗಸ್ಟ್ 15 ರಂದು ನಡೆಯಲಿರುವ ಸಮಾರಂಭದಲ್ಲಿ 117 ಕ್ರೀಡಾಪಟುಗಳ ಸಂಪೂರ್ಣ ಭಾರತೀಯ ತಂಡ ಭಾಗವಹಿಸುವ ನಿರೀಕ್ಷೆಯಿದೆ. ಬೆಳಗ್ಗಿನ ಕಾರ್ಯಕ್ರಮದ ನಂತರ ಪ್ರಧಾನಿ ಒಲಿಂಪಿಕ್ಸ್​​ನ ಭಾರತಕ್ಕೆ 6 ಪದಕಗಳನ್ನು ಮರಳಿ ತಂದ ಕ್ರೀಡಾಪಟುಗಳನ್ನು ಭೇಟಿ ಮಾಡಲಿದ್ದಾರೆ.

ಪ್ಯಾರಿಸ್​ನಲ್ಲಿ ಭಾರತದ ಪದಕ ವಿಜೇತರ ಜತೆ ಪ್ರಧಾನಿ ಫೋನ್ ಮಾಡಿ ಮಾತನಾಡಿದ್ದರು. ವೇದಿಕೆ ಏರಿದ್ದ ಕ್ರೀಡಾಪಟುಗಳಿಗೆ ತಮ್ಮ ಬೆಂಬಲ ವ್ಯಕ್ತಡಪಡಿಸಿದ್ದರು. ಕುಸ್ತಿ ಫೈನಲ್​ನಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಮೋದಿ ಟ್ವೀಟ್ ಮಾಡಿದ್ದರು. ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ ಅಥ್ಲೀಟ್ಗಳು 6 ಪದಕಗಳನ್ನು ಗೆದ್ದಿದ್ದಾರೆ. ಟೋಕಿಯೊದಲ್ಲಿ ನಡೆದ ಹಿಂದಿನ ಒಲಿಂಪಿಕ್ಸ್​ನಲ್ಲಿ ಭಾರತ ಚಿನ್ನ ಸಮೇತ 7 ಪದಕ ಗೆದ್ದಿದ್ದರೆ, ಈ ಬಾರಿ ಭಾರತೀಯ ತಂಡವು 5 ಕಂಚಿನ ಪದಕಗಳು ಮತ್ತು ಒಂದು ಬೆಳ್ಳಿಯೊಂದಿಗೆ ಮರಳಿದೆ.

ಪ್ಯಾರಿಸ್ 2024 ಒಲಿಂಪಿಕ್ಸ್​ನಲ್ಲಿ ಭಾರತದ ಪ್ರದರ್ಶನವು ಸಾಧನೆಗಳು ಮತ್ತು ನಿರಾಶೆಗಳ ಮಿಶ್ರಣವಾಗಿದೆ. ಈ ಒಲಿಂಪಿಕ್ಸ್​ನಲ್ಲಿ ಭಾರತವು 10 ಪದಕಗಳ ಮೈಲುಗಲ್ಲು ದಾಟಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೆಲವು ಕ್ರೀಡಾಪಟುಗಳು ನಾಲ್ಕನೇ ಸ್ಥಾನ ಪಡೆದಿದ್ದರಿಂದ ಅದು ಸಾಧ್ಯವಾಗಲಿಲ್ಲ.

ಟೋಕಿಯೊ 2020 ರಲ್ಲಿ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ನೇತೃತ್ವದ ದೇಶದ ಅಥ್ಲೆಟಿಕ್ಸ್ ತಂಡವು ಗಮನಾರ್ಹ ಹೈಲೈಟ್ ಆಗಿದೆ. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿಯೊಂದಿಗೆ ಚೋಪ್ರಾ ಅಥ್ಲೆಟಿಕ್ಸ್​​ನಲ್ಲಿ ಭಾರತದ ಏಕೈಕ ಪದಕ ಗೆದ್ದರು, ಒಲಿಂಪಿಕ್ಸ್​​ನಲ್ಲಿ ಅಥ್ಲೆಟಿಕ್ಸ್​​ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಎಂಬ ಇತಿಹಾಸ ನಿರ್ಮಿಸಿದರು.

ಶೂಟಿಂಗ್ ಸಾಧನೆ

ಭಾರತದ ಶೂಟಿಂಗ್ ತಂಡವೂ ಗಮನಾರ್ಹ ಪ್ರಗತಿ ಸಾಧಿಸಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ಕಂಚಿನ ಪದಕ ಗೆದ್ದರು, ಒಲಿಂಪಿಕ್ ಶೂಟಿಂಗ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸರಬ್ಜೋತ್ ಸಿಂಗ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಮತ್ತೊಂದು ಪದಕವನ್ನು ಗೆದ್ದಿದ್ದರೆ. ಒಲಿಂಪಿಕ್ಸ್​​ನ ಒಂದು ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಸ್ವತಂತ್ರ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದನ್ನೂ ಓದಿ: Manu Bhaker : ಮದುವೆಯಾಗ್ತೀರಾ ಹೇಗೆ? ನೀರಜ್​ ಚೋಪ್ರಾ- ಮನು ಭಾಕರ್​ ಭೇಟಿಯ ವಿಡಿಯೊ ವೈರಲ್ ಮಾಡಿದ ನೆಟ್ಟಿಗರು

ಸ್ಪೇನ್ ತಂಡವನ್ನು 2-1 ಅಂತರದಿಂದ ಮಣಿಸಿದ ಭಾರತ ಹಾಕಿ ತಂಡ ಕಂಚಿನ ಪದಕ ಗೆದ್ದುಕೊಂಡಿತು. 1972ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಸತತವಾಗಿ ಪದಕಗಳನ್ನು ಗೆದ್ದಿದೆ. ಹರ್ಮನ್ ಪ್ರೀತ್ ಸಿಂಗ್ ಗಳಿಸಿದ ಗೋಲಿನ ನೆರವಿನಿಂದ ಭಾರತ ಒಲಿಂಪಿಕ್ಸ್ ನಲ್ಲಿ ದಾಖಲೆಯ 13ನೇ ಹಾಕಿ ಪದಕ ಜಯಿಸಿದೆ.

ಟೇಬಲ್ ಟೆನಿಸ್ನಲ್ಲಿ ಮಣಿಕಾ ಬಾತ್ರಾ ಮತ್ತು ಶ್ರೀಜಾ ಅಕುಲಾ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಬಾತ್ರಾ ಒಲಿಂಪಿಕ್ ಕ್ರೀಡಾಕೂಟದ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ ಮೊದಲ ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರೆ, ಅಕುಲಾ 16 ನೇ ಸುತ್ತು ಪ್ರವೇಶಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಭವಿಷ್ಯ

Dina Bhavishya : ಅನಿರೀಕ್ಷಿತ ಸುದ್ದಿಯಿಂದಾಗಿ ಈ ರಾಶಿಯವರಿಗೆ ಇಡೀ ದಿನ ಖುಷಿಯೋ ಖುಷಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ ಅಷ್ಟಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ವೃಶ್ಚಿಕ ರಾಶಿಯಿಂದ ಮಂಗಳವಾರ ಬೆಳಗ್ಗೆ 06:00 ಗಂಟೆಗೆ ಧನಸ್ಸು ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದಾಗಿ ವೃಷಭ, ಮಿಥುನ, ಕನ್ಯಾ, ವೃಶ್ಚಿಕ, ಮಕರ, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ವೃಷಭ ರಾಶಿಯವರಿಗೆ ದಿನದಲ್ಲಿ ಅನಿರೀಕ್ಷಿತವಾದ ಒಳ್ಳೆಯ ಸುದ್ದಿ ಇಡೀ ಕುಟುಂಬಕ್ಕೆ ಸಂತೋಷ ಮತ್ತು ಆನಂದ ತೆರೆದಿಡುತ್ತದೆ. ಯಾರಾದರೂ ನಿಮ್ಮನ್ನು ಶ್ಲಾಘಿಸಬಹುದು. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಅದರ ಬಗ್ಗೆ ಅನುಭವಿ ಜನರೊಂದಿಗೆ ಮಾತನಾಡಿ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (13-08-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ.
ತಿಥಿ: ಅಷ್ಟಮಿ 09:30 ವಾರ: ಮಂಗಳವಾರ
ನಕ್ಷತ್ರ: ವಿಶಾಖ 10:43 ಯೋಗ: ಬ್ರಹ್ಮ 16:32
ಕರಣ: ಭವ 09:30 ಅಮೃತಕಾಲ: ಮಧ್ಯರಾತ್ರಿ 01:10 ರಿಂದ 02:52
ದಿನದ ವಿಶೇಷ: ಮಂಗಳ ಗೌರೀ ವ್ರತ

ಸೂರ್ಯೋದಯ : 06:07   ಸೂರ್ಯಾಸ್ತ : 06:41

ರಾಹುಕಾಲ: ಮಧ್ಯಾಹ್ನ 03:33ರಿಂದ 05:07
ಗುಳಿಕಕಾಲ: ಮಧ್ಯಾಹ್ನ 12:24ರಿಂದ01:59
ಯಮಗಂಡಕಾಲ: ಬೆಳಗ್ಗೆ 09:16 ರಿಂದ 10:50

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಬೆಂಬಲ ನೀಡುವ ಸ್ನೇಹಿತರು ನಿಮ್ಮನ್ನು ಸಂತೋಷವಾಗಿ ಇರಿಸುತ್ತಾರೆ. ಇಂದು ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆರ್ಥಿಕವಾಗಿ ಸುದೃಢ ಇರಲಿದೆ. ಆರೋಗ್ಯ ಪರಿಪೂರ್ಣ ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ವೃಷಭ: ದಿನದಲ್ಲಿ ಅನಿರೀಕ್ಷಿತವಾದ ಒಳ್ಳೆಯ ಸುದ್ದಿ ಇಡೀ ಕುಟುಂಬಕ್ಕೆ ಸಂತೋಷ ಮತ್ತು ಆನಂದ ತೆರೆದಿಡುತ್ತದೆ. ಯಾರಾದರೂ ನಿಮ್ಮನ್ನು ಶ್ಲಾಘಿಸಬಹುದು. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಅದರ ಬಗ್ಗೆ ಅನುಭವಿ ಜನರೊಂದಿಗೆ ಮಾತನಾಡಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕವಾಗಿ ಸಭಲತೆ ಇರಲಿದೆ. ಕೌಟಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 1

Horoscope Today

ಮಿಥುನ: ನಿಮ್ಮ ಸಭ್ಯ ನಡವಳಿಕೆ ಮೆಚ್ಚುಗೆ ಪಡೆಯುತ್ತದೆ. ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ. ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ವಿದೇಶಕ್ಕೆ ಹೋಗಿ ಅಧ್ಯಯನ ಮಾಡಲು ಬಯಸುತ್ತಿದ್ದರೆ ಆರ್ಥಿಕ ಬಿಕ್ಕಟ್ಟು ಆಗುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 8

Horoscope Today

ಕಟಕ:ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತವಾಗಿರಲಿದೆ. ಇಂದು ನೀವು ಇತರರ ಅಗತ್ಯಗಳಿಗೆ ಗಮನ ನೀಡಬೇಕಾದರೂ ಮಕ್ಕಳೊಂದಿಗೆ ಅತೀ ಉದಾರತೆ ತೋರಿಸುವುದು ತೊಂದರೆಗೆ ಕಾರಣವಾಗುತ್ತದೆ. ಆರೋಗ್ಯ ಪರಿಪೂರ್ಣವಾಗಿ ಇದ್ದರೂ, ದೈಹಿಕ ಶ್ರಮ ಹೆಚ್ಚಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ಸಿಂಹ: ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದುವ ಸಾಧ್ಯತೆ ಇದೆ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಮಕ್ಕಳಿಂದ ಅನಿರೀಕ್ಷಿತ ಸುದ್ದಿ ಸಂತೋಷದ ಕ್ಷಣಗಳನ್ನು ತರುತ್ತದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭವಾಗಲಿ. ಅದೃಷ್ಟ ಸಂಖ್ಯೆ: 1

Horoscope Today

ಕನ್ಯಾ: ಸ್ನೇಹಿತರು ನಿಮ್ಮ ಆಲೋಚನೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ಅತಿಥಿಗಳ ಆಗಮನವಾಗಲಿದೆ. ಸಕರಾತ್ಮಕ ಆಲೋಚನೆಗಳು ನಿಮ್ಮ ಉತ್ಸಾಹ ಇಮ್ಮಡಿಗೊಳಿಸಿಲಿದೆ. ಆರೋಗ್ಯ ಪರಿಪೂರ್ಣ ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 9

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ನಕಾರಾತ್ಮಕ ಆಲೋಚನೆಗಳು ತಲೆದೊರಲಿವೆ. ಆದಷ್ಟು ಯೋಗ ಧ್ಯಾನದ ಮೂಲಕ ನೆಮ್ಮದಿ ತಂದುಕೊಳ್ಳುವುದು ಉತ್ತಮ. ಸ್ನೇಹಿತರೊಂದಿಗೆ ಕಾಲಕಳಿಯುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ವೃಶ್ಚಿಕ: ಇಂದು ಹೂಡಿಕೆಗಳನ್ನು ಮಾಡಿದಲ್ಲಿ ಒಳ್ಳೆಯ ಹಣ ಮಾಡುತ್ತೀರಿ. ನಿಮ್ಮ ಭವಿಷ್ಯವನ್ನು ಯೋಜಿಸಲು ಸೂಕ್ತ ದಿನವಿದು. ಆರೋಗ್ಯದ ಕುರಿತು ಕಾಳಜಿ ವಹಿಸಿ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ನಿಮ್ಮ ಆರೋಗ್ಯ ಇಂದು ಪರಿಪೂರ್ಣವಾಗಿಲ್ಲದಿದ್ದರಿಂದ ನೀವು ನಿಮ್ಮ ಕೆಲಸದ ಮೇಲೆ ಗಮನ ಕೊಡುವುದು ಕಷ್ಟವಾಗಬಹುದು. ಸಣ್ಣ ಉದ್ಯೋಗವನ್ನು ಮಾಡುವ ಜನರು, ಇಂದು ತಮ್ಮ ಆಪ್ತರಿಂದ ಯಾವುದೇ ಸಲಹೆಯನ್ನು ಪಡೆಯಬಹುದು. ಇದರಿಂದ ಅವರಿಗೆ ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆ ಇದೆ.ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ಮಕರ: ಸ್ನೇಹಿತರೊಂದಿಗೆ ವಿರಾಮ ಭೋಜನದಲ್ಲಿ ಭಾಗಿಯಾಗುವಿರಿ. ಇದು ಒತ್ತಡದಿಂದ ಕೂಡಿದ್ದರೂ ಹೆಚ್ಚು ಲಾಭದಾಯಕವಾಗಿರುತ್ತದೆ.ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಇಂದು ನಿಮಗೆ ಖರ್ಚಿನ ದಿನವಾಗಿರಲಿದೆ. ಅದೃಷ್ಟ ಸಂಖ್ಯೆ: 1

Horoscope Today

ಕುಂಭ: ಆಭರಣದ ಹೂಡಿಕೆ ವ್ಯವಹಾರಗಳಲ್ಲಿ ಲಾಭ ಇರಲಿದೆ. ಸಮೃದ್ಧಿ ತುಂಬಿದ ದಿನವಿರಲಿದೆ. ನಿಮ್ಮ ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರುತ್ತದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 8

Horoscope Today

ಮೀನ: ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುವ ಸಾಧ್ಯತೆ ಇದೆ. ಅನಿರಿಕ್ಷಿತ ಲಾಭ ಸಿಗಲಿದೆ. ಸಮಸ್ಯೆಗಳ ಕುರಿತು ಚಿಂತೆ ಮಾಡುವುದು ಬೇಡ. ಆರೋಗ್ಯ ಪರಿಪೂರ್ಣ ಇರಲಿದೆ. ಆರ್ಥಿಕವಾಗಿ ಸುದೃಢ ವಾತಾವರಣ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಕ್ರೀಡೆ

 Emmanuel Macron : ಒಲಿಂಪಿಕ್ಸ್​ಗೆ ಆತಿಥ್ಯ ವಹಿಸುವ ಭಾರತದ ಉತ್ಸಾಹಕ್ಕೆ ಬೆಂಬಲ ನೀಡಿದ ಫ್ರಾನ್ಸ್​ ಪ್ರಧಾನಿ ಎಮ್ಯಾನುಯೆಲ್ ಮ್ಯಾಕ್ರೋನ್

Emmanuel Macron : ಭಾರತ ಮತ್ತು ಈಜಿಪ್ಟ್ ಎರಡೂ ಈ ಹಿಂದೆ ಒಲಿಂಪಿಕ್ಸ್ ಅನ್ನು ಆಯೋಜಿಸಿಲ್ಲ/ ಎರಡೂ ದೇಶಗಳು ತಮ್ಮ ಕ್ರೀಡಾ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿರುವುದರಿಂದ ಇದನ್ನು ಆದ್ಯತಾ ಕ್ರಮವೆಂದು ಲೆಕ್ಕಹಾಕಿದೆ. ಒಲಿಂಪಿಕ್ಸ್ ಆತಿಥ್ಯ ವಹಿಸುವುದು ತೀವ್ರ ಸ್ಪರ್ಧೆಯಾಗಿದೆ ಎಂದು ಒಪ್ಪಿಕೊಂಡ ಅವರು, ಭಾರತವು ತನ್ನ ಸಾಮರ್ಥ್ಯವನ್ನು ಕಡೆಗಣಿಸಬಾರದು ಎಂದರು. 2024ರ ಒಲಿಂಪಿಕ್ಸ್​ಗೆ ಬಿಡ್ ಮಾಡುವಾಗ ಅಮೆರಿಕದೊಂದಿಗಿನ ಸ್ಪರ್ಧೆಯನ್ನು ಅವರು ನೆನಪಿಸಿಕೊಂಡರು.

VISTARANEWS.COM


on

Emmanuel Macron
Koo

ಬೆಂಗಳೂರು: ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯ ವಹಿಸುವ ಭಾರತದ ಸಾಮರ್ಥ್ಯದ ಬಗ್ಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ನಂಬಿಕೆ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಜಾಗತಿಕ ಕ್ರೀಡಾಕೂಟ ಆಯೋಜಿಸುವ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ. 2036 ರಲ್ಲಿ ಪ್ರತಿಷ್ಠಿತ ಅಂತರರಾಷ್ಟ್ರೀಯ ಕ್ರೀಡಾಕೂಟದ ಆತಿಥ್ಯ ವಹಿಸುವುದಕ್ಕಾಗಿ ಭಾರತ ಯತ್ನಿಸುತ್ತಿದೆ. ಈ ನಡುವೆ ಜಿಯೋ ಸಿನೆಮಾಗೆ ನೀಡಿದ ಸಂದರ್ಶನದಲ್ಲಿ, ಮ್ಯಾಕ್ರನ್ ಭಾರತದ ಸಾಮರ್ಥ್ಯದ ಬಗ್ಗೆ ತಮ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ 2026ರ ಒಲಿಂಪಿಕ್ಸ್​​ ಭಾರತ ಮತ್ತು ಈಜಿಪ್ಟ್ ಸೇರಿದಂತೆ ಹಲವಾರು ದೇಶಗಳು ಬಿಡ್ ಸಲ್ಲಿಸಿವೆ.

ಭಾರತ ಮತ್ತು ಈಜಿಪ್ಟ್ ಎರಡೂ ಈ ಹಿಂದೆ ಒಲಿಂಪಿಕ್ಸ್ ಅನ್ನು ಆಯೋಜಿಸಿಲ್ಲ. ಎರಡೂ ದೇಶಗಳು ತಮ್ಮ ಕ್ರೀಡಾ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿರುವುದರಿಂದ ಇದನ್ನು ಆದ್ಯತಾ ಕ್ರಮವೆಂದು ಲೆಕ್ಕಹಾಕಿದೆ. ಒಲಿಂಪಿಕ್ಸ್ ಆತಿಥ್ಯ ವಹಿಸುವುದು ತೀವ್ರ ಸ್ಪರ್ಧೆಯಾಗಿದೆ ಎಂದು ಒಪ್ಪಿಕೊಂಡ ಅವರು, ಭಾರತವು ತನ್ನ ಸಾಮರ್ಥ್ಯವನ್ನು ಕಡೆಗಣಿಸಬಾರದು ಎಂದರು. 2024ರ ಒಲಿಂಪಿಕ್ಸ್​ಗೆ ಬಿಡ್ ಮಾಡುವಾಗ ಅಮೆರಿಕದೊಂದಿಗಿನ ಸ್ಪರ್ಧೆಯನ್ನು ಅವರು ನೆನಪಿಸಿಕೊಂಡರು.

ನಾನು ನಿಮ್ಮ ದೇಶ ಮತ್ತು ನಿಮ್ಮ ದೇಶದ ಭವಿಷ್ಯದ ಬಗ್ಗೆ ಬಲವಾದ ನಂಬಿಕೆ ಹೊಂದಿದ್ದೇನೆ. ನಿಮಗೆ ಒಲಿಂಪಿಕ್​ನಂಥ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಮರ್ಥ್ಯವಿದೆ. ಇದು ತೀವ್ರ ಸ್ಪರ್ಧೆ ವಿಚಾರ ಎಂದು ನಾನು ಭಾವಿಸುತ್ತೇನೆ. ಆ ಸಂಗತಿಯನ್ನು ಕಡಿಮೆ ಅಂದಾಜು ಮಾಡಬಾರದು. ಏಳು ವರ್ಷಗಳ ಹಿಂದೆ ನಾವು ಲೌಸಾನ್ ಗೆ ಹೋದಾಗ, ನಾವು ಆ ಸಮಯದಲ್ಲಿ ಯುಎಸ್ ನೊಂದಿಗೆ ಸ್ಪರ್ಧಿಸಿದ್ದೆವು. ಬಿಡ್​ಗಾಗಿ ಸ್ಪರ್ಧಿಸುವುದು ಉತ್ತಮ ಸಿದ್ಧತೆ” ಎಂದು ಮಾರ್ಕಾನ್ ಜಿಯೋ ಸಿನೆಮಾಗೆ ತಿಳಿಸಿದರು.

ಒಲಿಂಪಿಕ್ಸ್​​ ತಯಾರಿ ನಡೆಸುವಲ್ಲಿ ಫ್ರಾನ್ಸ್ ಮತ್ತು ಭಾರತದ ನಡುವಿನ ಸಹಯೋಗದ ಪ್ರಯತ್ನಗಳನ್ನು ಮ್ಯಾಕ್ರನ್ ಎತ್ತಿ ತೋರಿಸಿದರು. ಸಿದ್ಧತೆಗಳಲ್ಲಿ ಸಹಾಯ ಮಾಡಲು ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್​​ ತಾಂತ್ರಿಕ ತಂಡವನ್ನು ವಿನಂತಿಸಿದ್ದಾರೆ. ಭಾರತೀಯ ಅಧಿಕಾರಿಗಳು ತಮ್ಮ ಅನುಭವದಿಂದ ಕಲಿಯಲು ಫ್ರೆಂಚ್ ತಂಡಗಳನ್ನು ಭೇಟಿ ಮಾಡಿದ್ದಾರೆ. ಒಲಿಂಪಿಕ್ಸ್​ಗೆ ಭಾರತದ ಸಂಭಾವ್ಯ ಬಿಡ್ ಅನ್ನು ಬೆಂಬಲಿಸಲು ತಂತ್ರಜ್ಞಾನವನ್ನು ನೀಡುವುದಾಗಿ ಹೇಳಿದರು.

ಇದಲ್ಲದೆ, ಒಲಿಂಪಿಕ್ಸ್ ಅನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ಕ್ರೀಡಾ ಸಂಸ್ಥೆಗಳು, ಸ್ಥಳೀಯ ಸಮುದಾಯಗಳು ಮತ್ತು ರಾಜ್ಯ ಸೇರಿದಂತೆ ವಿವಿಧ ಮಧ್ಯಸ್ಥಗಾರರ ನಡುವೆ ಏಕತೆಯ ಮಹತ್ವವನ್ನು ಮ್ಯಾಕ್ರನ್ ಒತ್ತಿ ಹೇಳಿದರು. ಕಳೆದ ಏಳು ವರ್ಷಗಳಲ್ಲಿ ಈ ಕಾರ್ಯಕ್ರಮದಲ್ಲಿ ಫ್ರಾನ್ಸ್ ನ ಗಮನಾರ್ಹ ಹೂಡಿಕೆ ಮಾಡಿತ್ತು. ಸಿದ್ಧತೆ ಪ್ರಕ್ರಿಯೆಯಲ್ಲಿ ಉದ್ಭವಿಸುವ ಸವಾಲುಗಳನ್ನು ನಿವಾರಿಸುವಲ್ಲಿ ಸ್ಥಿರತೆ ಮತ್ತು ಬದ್ಧತೆ ನಿರ್ಣಾಯ ಎಂದು ನುಡಿದರು.

ಇದನ್ನೂ ಓದಿ: Paris Olympics 2024 : ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿಯಿಂದ ಪ್ಯಾರಿಸ್ ಒಲಿಂಪಿಕ್ಸ್ ಸಾಧಕರಿಗೆ ಆತಿಥ್ಯ

ನನ್ನ ಪ್ರಕಾರ, ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ಪ್ರಮುಖವಾದುದು ಸಮಗ್ರತೆ. ಸ್ಥಳೀಯ ಸಮುದಾಯಗಳು, ಸ್ಥಳೀಯ ಕ್ಷೇತ್ರಗಳು ಮತ್ತು ನಿಸ್ಸಂಶಯವಾಗಿ ರಾಜ್ಯಗಳ ನೆರವು ಬೇಕು. ಭದ್ರತೆಯಿಂದ ಸಂಘಟನೆಯವರೆಗೆ ಎಲ್ಲವೂ ವಿಶೇಷ.” ಎಂದು ಮ್ಯಾಕ್ರನ್ ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

Broadcasting Services Bill : ಸಾರ್ವಜನಿಕರ ಆಕ್ಷೇಪ; ಪ್ರಸಾರ ಸೇವೆಗಳ ಕರಡು ಬಿಲ್​ ವಾಪಸ್​ ಪಡೆದ ಕೇಂದ್ರ ಸರ್ಕಾರ

Broadcasting Services Bill : ಕರಡು ಮಸೂದೆಯನ್ನು ಸಮಾಲೋಚನೆಗಾಗಿ ನವೆಂಬರ್ 11, 2023 ರಂದು ಸಾರ್ವಜನಿಕ ಡೊಮೈನ್​ನಲ್ಲಿ ಪ್ರಕಟಿಸಲಾಗಿತ್ತು. ಇತ್ತೀಚೆಗೆ, ಕರಡಿನ ಪರಿಷ್ಕೃತ ಆವೃತ್ತಿಯನ್ನು ಕೆಲವು ಆಯ್ದ ಪಾಲುದಾರಿಗೆ “ರಹಸ್ಯವಾಗಿ” ನೀಡಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ತೃಣಮೂಲ ಕಾಂಗ್ರೆಸ್ ಸಂಸದ ಜವಾಹರ್ ಸರ್ಕಾರ್ ಅವರು ರಾಜ್ಯಸಭೆಯಲ್ಲಿ ಈ ವಿಷಯವನ್ನು ಎತ್ತಿದ್ದಾರೆ.

VISTARANEWS.COM


on

Broadcasting Services Bill
Koo

ಬೆಂಗಳೂರು: ಈಗಾಗಲೇ ಸಾರ್ವಜನಿಕ ಡೊಮೈನ್​ನಲ್ಲಿ ಪ್ರಕಟಿಸಲಾಗಿರುವ ಉದ್ದೇಶಿತ ಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆಯ ಹೊಸ ಕರಡನ್ನು (Broadcasting Services Bill) ವಾಪಸ್ ಪಡೆದು ಹೊಸದನ್ನು ಪ್ರಕಟಿಸಲಾಗುವುದು ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ. ಮಸೂದೆಯ ಕೆಲವು ನಿಬಂಧನೆಗಳು ಆನ್​​ಲೈನ್​ ಕಂಟೆಂಟ್​ ಕ್ರಿಯೇಟರ್​ಗಳಲ್ಲಿ ಕಳವಳ ಹುಟ್ಟುಹಾಕಿದ ನಂತರ ಸರ್ಕಾರ ಕ್ರಮ ಕೈಗೊಂಡಿದೆ. ತಮ್ಮನ್ನು ಒಟಿಟಿ ಅಥವಾ ಡಿಜಿಟಲ್ ಸುದ್ದಿ ಪ್ರಸಾರಕರೊಂದಿಗೆ ಸೇರಿಸಲು ಪ್ರಯತ್ನಿಸಿದ್ದಾರೆ ಎಂದು ಕಂಟೆಂಟ್ ಕ್ರಿಯೇಟರ್​ಗಳು ಆಕ್ಷೇಪ ವ್ಯಕ್ತಪಡಿಸಿದ್ದರು.

ಪ್ರತಿಕ್ರಿಯೆಯಾಗಿ, ವಿವಿಧ ಸಂಘಗಳಿಂದ ಸೇರಿದಂತೆ ಅನೇಕ ಶಿಫಾರಸುಗಳು, ಕಾಮೆಂಟ್​ಗಳು, ಸಲಹೆಗಳನ್ನು ಸ್ವೀಕರಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಕರಡು ಮಸೂದೆಯ ಬಗ್ಗೆ ಸಚಿವಾಲಯವು ಪಾಲುದಾರರ ಜತೆ ಸರಣಿ ಸಮಾಲೋಚನೆಗಳನ್ನು ನಡೆಸುತ್ತಿದೆ. ಅಕ್ಟೋಬರ್ 15 ರವರೆಗೆ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಕೋರಲು ಹೆಚ್ಚುವರಿ ಸಮಯ ನೀಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ವಿವರವಾದ ಸಮಾಲೋಚನೆಗಳ ನಂತರ ಹೊಸ ಕರಡು ಪ್ರಕಟಿಸಲಾಗುವುದು ಎಂದು ಅದು ಹೇಳಿದೆ.

ಕರಡು ಮಸೂದೆಯನ್ನು ಸಮಾಲೋಚನೆಗಾಗಿ ನವೆಂಬರ್ 11, 2023 ರಂದು ಸಾರ್ವಜನಿಕ ಡೊಮೈನ್​ನಲ್ಲಿ ಪ್ರಕಟಿಸಲಾಗಿತ್ತು. ಇತ್ತೀಚೆಗೆ, ಕರಡಿನ ಪರಿಷ್ಕೃತ ಆವೃತ್ತಿಯನ್ನು ಕೆಲವು ಆಯ್ದ ಪಾಲುದಾರಿಗೆ “ರಹಸ್ಯವಾಗಿ” ನೀಡಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ತೃಣಮೂಲ ಕಾಂಗ್ರೆಸ್ ಸಂಸದ ಜವಾಹರ್ ಸರ್ಕಾರ್ ಅವರು ರಾಜ್ಯಸಭೆಯಲ್ಲಿ ಈ ವಿಷಯವನ್ನು ಎತ್ತಿದ್ದಾರೆ.

ಮಸೂದೆಯ ವಿಷಯಗಳು ಚಲಾವಣೆಯಲ್ಲಿವೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಪೋಸ್ಟ್​ಗಳು ಪ್ರಕಟಗೊಂಡಿವೆ.

ಹೊಸ ವರ್ಗೀಕರಣ

ವರದಿಗಳ ಪ್ರಕಾರ, ಪರಿಷ್ಕೃತ ಕರಡು ಮಸೂದೆಯು ಇನ್ಸ್ಟಾಗ್ರಾಮ್ ಇನ್​ಫ್ಲ್ಯುಯೆನ್ಸರ್​ಗಳು ಮತ್ತು ಯೂಟ್ಯೂಬರ್​ಗಳನ್ನು ಅವರ ಬಳಕೆದಾರರ ನೆಲೆಯನ್ನು ವ್ಯಾಖ್ಯಾನಿಸಲು “ಡಿಜಿಟಲ್ ಸುದ್ದಿ ಪ್ರಸಾರಕರು” ಎಂದು ವರ್ಗೀಕರಿಸಲು ಪ್ರಯತ್ನಿಸುತ್ತದೆ. ಕಂಟೆಂಟ್​ ಪರಿಶೀಲನೆಗಾಗಿ ಅವರು ಸರ್ಕಾರದೊಂದಿಗೆ ಪೂರ್ವ ನೋಂದಣಿ ಪಡೆಯಬೇಕಾಗುತ್ತದೆ ಎಂದಿತ್ತು. ಇದು ವಾಕ್ ಸ್ವಾತಂತ್ರ್ಯದ ಬಗ್ಗೆ ಕಳವಳ ಹುಟ್ಟುಹಾಕಿತು.

ಇದನ್ನೂ ಓದಿ: Train Accident : ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ಪ್ಯಾಸೆಂಜರ್ ರೈಲಿನ ಎರಡು ಬೋಗಿ

ಈ ಡಿಜಿಟಲ್ ಸುದ್ದಿ ಪ್ರಸಾರಕರು ಒಟಿಟಿ ಪ್ರಸಾರ ಸೇವೆಗಳು ಮತ್ತು ನೋಂದಾಯಿತ ಡಿಜಿಟಲ್ ಮಾಧ್ಯಮದಿಂದ ಪ್ರತ್ಯೇಕವಾಗಿರುತ್ತಾರೆ ಎಂದು ವರದಿಯಾಗಿದೆ. ಯಾವುದೇ ರೀತಿಯ ವಿಷಯವನ್ನು ರಚಿಸುವ ಸ್ವಾತಂತ್ರ್ಯವನ್ನು ಹೊಂದಿರುವ ಒಟಿಟಿ ಪ್ಲಾಟ್​ಫಾರ್ಮ್​ಗಳು ಪ್ರೋಗ್ರಾಂ ಕೋಡ್​ಗೆ ಬದ್ಧವಾಗಿರುತ್ತವೆ ಎಂದು ಮಸೂದೆಯ ಮೊದಲ ಕರಡು ಈಗಾಗಲೇ ಪ್ರಸ್ತಾಪಿಸಿತ್ತು.

ಕಳೆದ ವಾರ, 90 ಕ್ಕೂ ಹೆಚ್ಚು ಡಿಜಿಟಲ್ ಸುದ್ದಿ ಪ್ರಕಾಶಕರನ್ನು ಪ್ರತಿನಿಧಿಸುವ ಸಂಸ್ಥೆಯಾದ ಡಿಜಿಪಬ್ ನ್ಯೂಸ್ ಇಂಡಿಯಾ ಫೌಂಡೇಶನ್ ಮತ್ತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಪ್ರತಿನಿಧಿಗಳು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆಯ್ದ ಪಾಲುದಾರರೊಂದಿಗೆ ಸಮಾಲೋಚನೆಗಳನ್ನು ನಡೆಸಿದೆ. ಡಿಜಿಟಲ್ ಮಾಧ್ಯಮ ಸಂಸ್ಥೆಗಳು ಮತ್ತು ನಾಗರಿಕ ಸಮಾಜದ ಸಂಘಗಳೊಂದಿಗೆ ದೊಡ್ಡ ಚರ್ಚೆಗಳು ಇಲ್ಲಿಯವರೆಗೆ ನಡೆದಿಲ್ಲ ಎಂದು ಹೇಳಿದರು. ಕರಡು ಮಸೂದೆಯ ಪ್ರತಿಗಳನ್ನು ಕೋರಿ ಅವರು ಸಚಿವಾಲಯಕ್ಕೆ ಪತ್ರ ಬರೆದಿದ್ದರು.

Continue Reading

ಪ್ರಮುಖ ಸುದ್ದಿ

Train Accident : ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ಪ್ಯಾಸೆಂಜರ್ ರೈಲಿನ ಎರಡು ಬೋಗಿ

Train Accident : ಭಾನುವಾರ, ಉತ್ತರ ಪ್ರದೇಶದ ಸೋನ್ಭದ್ರದ ಶಕ್ತಿನಗರ ಪ್ರದೇಶದಲ್ಲಿ ಗೂಡ್ಸ್ ರೈಲಿನ ಎರಡು ವ್ಯಾಗನ್​ಗಳು ಮತ್ತು ಅದರ ಎಂಜಿನ್ ಹಳಿ ತಪ್ಪಿತ್ತು . ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಈ ರೈಲು ಖಾಡಿಯಾದಲ್ಲಿನ ನಾರ್ದರ್ನ್ ಕೋಲ್​ಫೀಲ್ಡ್ ಲಿಮಿಟೆಡ್ (ಎನ್ಸಿಎಲ್) ನಿಂದ ಅನ್ಪಾರಾ ವಿದ್ಯುತ್ ಸ್ಥಾವರಕ್ಕೆ ಕಲ್ಲಿದ್ದಲನ್ನು ಸಾಗಿಸುತ್ತಿತ್ತು.

VISTARANEWS.COM


on

Koo

ಬೆಂಗಳೂರು: ಮತ್ತೊಂದು ರೈಲು ದುರ್ಘಟನೆಯಲ್ಲಿ ರಾಣಿ ಕಮಲಾಪತಿ-ಸಹರ್ಸಾ ವಿಶೇಷ ಪ್ಯಾಸೆಂಜರ್ ರೈಲಿನ ಎರಡು ಬೋಗಿಗಳು ಮಧ್ಯಪ್ರದೇಶದಲ್ಲಿ ಸೋಮವಾರ ಸಂಜೆ ಹಳಿ ತಪ್ಪಿವೆ (Train Accident ). ಸಂಜೆ 6:10 ಕ್ಕೆ ರೈಲು ಇಟಾರ್ಸಿ ನಿಲ್ದಾಣವನ್ನು ಪ್ರವೇಶಿಸುತ್ತಿದ್ದಾಗ ಈ ಘಟನೆ ನಡೆದಿದೆ/ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರೈಲು ಪ್ಲಾಟ್ ಫಾರ್ಮ್ ಸಂಖ್ಯೆ 2 ಅನ್ನು ಪ್ರವೇಶಿಸುತ್ತಿದ್ದಾಗ ಅದರ ಎರಡು ಬೋಗಿಗಳು ಹಳಿ ತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಳಿ ತಪ್ಪಿದಾಗ ರೈಲು 5 ಕಿ.ಮೀ.ಗಿಂತ ಕಡಿಮೆ ವೇಗದಲ್ಲಿ ಚಲಿಸುತ್ತಿದ್ದರಿಂದ ಸಂಭವನೀಯ ದುರಂತ ತಪ್ಪಿದೆ. ಅಪಘಾತ ಸಂಭವಿಸಿದ ಎರಡೂವರೆ ಗಂಟೆಗಳ ನಂತರವೂ ರೈಲು ಹೋಶಂಗಾಬಾದ್ ಜಿಲ್ಲೆಯ ಇಟಾರ್ಸಿ ಜಂಕ್ಷನ್ನಲ್ಲಿ ನಿಂತಿತ್ತು.

ಭಾನುವಾರ, ಉತ್ತರ ಪ್ರದೇಶದ ಸೋನ್ಭದ್ರದ ಶಕ್ತಿನಗರ ಪ್ರದೇಶದಲ್ಲಿ ಗೂಡ್ಸ್ ರೈಲಿನ ಎರಡು ವ್ಯಾಗನ್​ಗಳು ಮತ್ತು ಅದರ ಎಂಜಿನ್ ಹಳಿ ತಪ್ಪಿತ್ತು . ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಈ ರೈಲು ಖಾಡಿಯಾದಲ್ಲಿನ ನಾರ್ದರ್ನ್ ಕೋಲ್​ಫೀಲ್ಡ್ ಲಿಮಿಟೆಡ್ (ಎನ್ಸಿಎಲ್) ನಿಂದ ಅನ್ಪಾರಾ ವಿದ್ಯುತ್ ಸ್ಥಾವರಕ್ಕೆ ಕಲ್ಲಿದ್ದಲನ್ನು ಸಾಗಿಸುತ್ತಿತ್ತು.

ಆಗಸ್ಟ್ 9 ರಂದು ಉತ್ತರ ಪ್ರದೇಶದ ಅಲಿಗಢದ ಬಳಿ ಕಲ್ಲಿದ್ದಲು ಸೈಡಿಂಗ್​ನಲ್ಲಿ ಸರಕು ರೈಲಿನ ಎರಡು ಖಾಲಿ ವ್ಯಾಗನ್​ಗಳು ಹಳಿ ತಪ್ಪಿದ್ದವು. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಕುಮೇದ್ಪುರ ನಿಲ್ದಾಣದ ಬಳಿ ಸರಕು ರೈಲಿನ ಐದು ವ್ಯಾಗನ್ಗಳು ಹಳಿ ತಪ್ಪಿವೆ. ಬಿಹಾರದ ಕಟಿಹಾರ್ ಜಿಲ್ಲೆಯ ಕುಮೇದ್ಪುರ ಸೇತುವೆ ಬಳಿ ಸರಕು ರೈಲಿನ ಐದು ಟ್ಯಾಂಕ್ ವ್ಯಾಗನ್ಗಳು ಹಳಿ ತಪ್ಪಿವೆ. ಹಳಿ ತಪ್ಪಿದ ಕಾರಣ ಹಳಿಗೆ ಅಡ್ಡಿಯುಂಟಾಗಿದ್ದು, ಸುಗಮ ರೈಲು ಕಾರ್ಯಾಚರಣೆಗಾಗಿ ಮಾರ್ಗಗಳನ್ನು ತೆರವುಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ.

ಇದನ್ನೂ ಓದಿ: S Jaishankar’s Maldives visit : ಚೀನಾ ವಿರುದ್ಧ ಭಾರತಕ್ಕೆ ರಾಜತಾಂತ್ರಿಕ ಗೆಲುವು, 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟುಕೊಟ್ಟ ಮಾಲ್ಡೀವ್ಸ್​​

ಆಗಸ್ಟ್ 4 ರಂದು ಸಹರಾನ್ಪುರ ರೈಲ್ವೆ ನಿಲ್ದಾಣದಿಂದ ವಾಷಿಂಗ್ ಶೆಡ್​ಗೆ ಕರೆದೊಯ್ಯುವಾಗ ಖಾಲಿ ಸ್ಥಳೀಯ ರೈಲಿನ ಮೂರು ಬೋಗಿಗಳು ಹಳಿ ತಪ್ಪಿದ್ದವು. ಜುಲೈ 30 ರಂದು ಜಾರ್ಖಂಡ್​​ನ ಚಕ್ರಧರ್ಪುರ ಬಳಿ ಹೌರಾ-ಸಿಎಸ್ಎಂಟಿ ಎಕ್ಸ್​ಪ್ರೆಸ್​​ ಹಲವಾರು ಬೋಗಿಗಳು ಹಳಿ ತಪ್ಪಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದರು. ಆರು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಐವರಲ್ಲಿ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೇ ದಿನ ಒಡಿಶಾದ ಸಂಬಲ್ಪುರ ವಿಭಾಗದ ಯಾರ್ಡ್ನಲ್ಲಿ ಖಾಲಿ ಗೂಡ್ಸ್ ರೈಲಿನ ಒಂದು ಟ್ರಾಲಿ ಹಳಿ ತಪ್ಪಿತ್ತು.

Continue Reading
Advertisement
Dina Bhavishya
ಭವಿಷ್ಯ44 seconds ago

Dina Bhavishya : ಅನಿರೀಕ್ಷಿತ ಸುದ್ದಿಯಿಂದಾಗಿ ಈ ರಾಶಿಯವರಿಗೆ ಇಡೀ ದಿನ ಖುಷಿಯೋ ಖುಷಿ

Emmanuel Macron
ಕ್ರೀಡೆ5 hours ago

 Emmanuel Macron : ಒಲಿಂಪಿಕ್ಸ್​ಗೆ ಆತಿಥ್ಯ ವಹಿಸುವ ಭಾರತದ ಉತ್ಸಾಹಕ್ಕೆ ಬೆಂಬಲ ನೀಡಿದ ಫ್ರಾನ್ಸ್​ ಪ್ರಧಾನಿ ಎಮ್ಯಾನುಯೆಲ್ ಮ್ಯಾಕ್ರೋನ್

Paris Olympics 2024
ಪ್ರಮುಖ ಸುದ್ದಿ6 hours ago

Paris Olympics 2024 : ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿಯಿಂದ ಪ್ಯಾರಿಸ್ ಒಲಿಂಪಿಕ್ಸ್ ಸಾಧಕರಿಗೆ ಆತಿಥ್ಯ

Broadcasting Services Bill
ಪ್ರಮುಖ ಸುದ್ದಿ6 hours ago

Broadcasting Services Bill : ಸಾರ್ವಜನಿಕರ ಆಕ್ಷೇಪ; ಪ್ರಸಾರ ಸೇವೆಗಳ ಕರಡು ಬಿಲ್​ ವಾಪಸ್​ ಪಡೆದ ಕೇಂದ್ರ ಸರ್ಕಾರ

ಪ್ರಮುಖ ಸುದ್ದಿ7 hours ago

Train Accident : ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ಪ್ಯಾಸೆಂಜರ್ ರೈಲಿನ ಎರಡು ಬೋಗಿ

Pralhad Joshi
ದೇಶ7 hours ago

Pralhad Joshi: ಪ್ರತಿ ಜಿಲ್ಲೆಗೊಂದು ‘ಮಾದರಿ ಸೌರ ಗ್ರಾಮ’ ಅನುಷ್ಠಾನಕ್ಕೆ ಕ್ರಮ; ಪ್ರಲ್ಹಾದ್‌ ಜೋಶಿ

CM Siddaramaiah
ಕರ್ನಾಟಕ7 hours ago

CM Siddaramaiah: 6000ಕ್ಕೂ ಹೆಚ್ಚು ಗ್ರಂಥಾಲಯ ಮೇಲ್ಚಿಚಾರಕರು ಕನಿಷ್ಠ ವೇತನ ವ್ಯಾಪ್ತಿಗೆ; ಸಿದ್ದರಾಮಯ್ಯ ಮಹತ್ವದ ಘೋಷಣೆ

Independence day speech in Kannada
ದೇಶ7 hours ago

Independence day speech in Kannada: ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಸ್ವಾತಂತ್ರ್ಯ ದಿನಾಚರಣೆಯ ಸಿದ್ಧ ಭಾಷಣ!

S Jaishankar's Maldives visit
ಪ್ರಮುಖ ಸುದ್ದಿ7 hours ago

S Jaishankar’s Maldives visit : ಚೀನಾ ವಿರುದ್ಧ ಭಾರತಕ್ಕೆ ರಾಜತಾಂತ್ರಿಕ ಗೆಲುವು, 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟುಕೊಟ್ಟ ಮಾಲ್ಡೀವ್ಸ್​​

Manu Bhaker
ಕ್ರೀಡೆ8 hours ago

Manu Bhaker : ಮದುವೆಯಾಗ್ತೀರಾ ಹೇಗೆ? ನೀರಜ್​ ಚೋಪ್ರಾ- ಮನು ಭಾಕರ್​ ಭೇಟಿಯ ವಿಡಿಯೊ ವೈರಲ್ ಮಾಡಿದ ನೆಟ್ಟಿಗರು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ4 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ5 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ5 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು6 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ7 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌