Narendra Modi : ಟ್ರೋಫಿಯನ್ನು ಕೈಯಲ್ಲಿ ಮುಟ್ಟದ ಪ್ರಧಾನಿ ಮೋದಿ, ಕಾರಣವೇನು? - Vistara News

ಪ್ರಮುಖ ಸುದ್ದಿ

Narendra Modi : ಟ್ರೋಫಿಯನ್ನು ಕೈಯಲ್ಲಿ ಮುಟ್ಟದ ಪ್ರಧಾನಿ ಮೋದಿ, ಕಾರಣವೇನು?

Narendra Modi:ಮೋದಿ ಅವರ ಜತೆ ಆಟಗಾರರು ಉಪಾಹಾರ ಸೇವಿಸಿದರು. ನಂತರ ಕೆಲ ಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಮೋದಿ ವಿಶ್ವಕಪ್‌ ಹೀರೋಗಳನ್ನು ಸನ್ಮಾನಿಸಿ, ಅಭಿನಂದಿಸಿದರು. ಸುಮಾರು 17 ವರ್ಷಗಳ ಬಳಿಕ ಟಿ-20 ವಿಶ್ವಕಪ್‌ ಗೆದ್ದುಕೊಂಡ ರೋಹಿತ್‌ ಶರ್ಮ ಮತ್ತು ತಂಡದ ಗೆಲುವನ್ನು ಪ್ರಧಾನಿ ಕೊಂಡಾಡಿದರು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವೆಸ್ಟ್​ ಇಂಡೀಸ್​​ನಲ್ಲಿ ನಡೆದ ಟಿ20 ವಿಶ್ವ ಕಪ್​ ಗೆದ್ದು ಭಾರತಕ್ಕೆ ಬಂದ ಟೀಮ್ ಇಂಡಿಯಾ ಆಟಗಾರರಿಗೆ ಪ್ರಧಾನಿ ಮೋದಿ (Narendra Modi) ತಮ್ಮ ನಿವಾಸದಲ್ಲಿ ಸನ್ಮಾನಿಸಿದ್ದಾರೆ. ಈ ವೇಳೆ ಅವರು ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ಜತೆ ಅವರು ವಿಶ್ವ ಕಪ್​​ನೊಂದಿಗೆ ಫೋಟೊಗೆ ಫೋಸ್ ಕೊಟ್ಟಿದ್ದಾರೆ. ಆದರೆ ಅವರು ವಿಶ್ವ ಕಪ್​ ಅನ್ನು ಕೈಯಲ್ಲಿ ಮುಟ್ಟಿಲ್ಲ ಎಂಬುದಾಗಿ ವರದಿಯಾಗಿದೆ. ಅವರು ರೋಹಿತ್​ ಮತ್ತು ವಿರಾಟ್​ ಕೊಹ್ಲಿಯ ಕೈಯನ್ನು ಮಾತ್ರ ಹಿಡಿದುಕೊಂಡಿದ್ದಾರೆ. ಅವರು ಆ ರೀತಿ ಮಾಡಿದ ಫೋಟೋ ವೈರಲ್ ಆಗಿದೆ.

ಪ್ರಧಾನಿ ಮೋದಿ ಅವರು ಯಾಕೆ ಟ್ರೋಫಿ ಮುಟ್ಟಿಲ್ಲ ಎಂಬ ಚರ್ಚೆ ಶುರುವಾಗಿದೆ. ಕೆಲವರು ಅದನ್ನು ಉತ್ತಮ ಗುಣವೆಂದು ಕೊಂಡಾಡಿದರೆ ಇನ್ನೂ ಕೆಲವರು ಸರಿಯಲ್ಲ ಎಂಬುದಾಗಿ ಹೇಳಿದ್ದಾರೆ,

ಗುರುವಾರ ಬೆಳಗ್ಗೆ ದೆಹಲಿಗೆ ಆಗಮಿಸಿದ ಆಟಗಾರರು ಬಳಿಕ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ವಿಶ್ವಕಪ್​ ಗೆಲುವಿನ ಕುರಿತು ಆಟಗಾರರು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡರು.

ಮೋದಿ ಅವರ ಜತೆ ಆಟಗಾರರು ಉಪಾಹಾರ ಸೇವಿಸಿದರು. ನಂತರ ಕೆಲ ಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಮೋದಿ ವಿಶ್ವಕಪ್‌ ಹೀರೋಗಳನ್ನು ಸನ್ಮಾನಿಸಿ, ಅಭಿನಂದಿಸಿದರು. ಸುಮಾರು 17 ವರ್ಷಗಳ ಬಳಿಕ ಟಿ-20 ವಿಶ್ವಕಪ್‌ ಗೆದ್ದುಕೊಂಡ ರೋಹಿತ್‌ ಶರ್ಮ ಮತ್ತು ತಂಡದ ಗೆಲುವನ್ನು ಪ್ರಧಾನಿ ಕೊಂಡಾಡಿದರು.

ಬಾರ್ಬಡಾಸ್​ನಲ್ಲೇ ಸಿಲುಕಿದ್ದ ಆಟಗಾರರು

ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್‌ (T20 World Cup 2024) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗುಬಡಿದ ರೋಹಿತ್‌ ಶರ್ಮಾ ನೇತೃತ್ವದ ಭಾರತದ ಕ್ರಿಕೆಟ್‌ ತಂಡವು ಇಂದು ಬೆಳಗ್ಗೆ ಭಾರತಕ್ಕೆ ಆಗಮಿಸಿತ್ತು. ಏರ್‌ ಇಂಡಿಯಾ ಏರ್‌ಲೈನ್ಸ್‌ನ ವಿಶೇಷ ಚಾರ್ಟರ್ಡ್‌ ವಿಮಾನದಲ್ಲಿ ಭಾರತ ತಂಡದ ಆಟಗಾರರು ದೆಹಲಿಗೆ ಆಗಮಿಸಿದ್ದರು. ಪ್ರತಿಕೂಲ ಹವಾಮಾನದ ಕಾರಣದಿಂದ ಆಟಗಾರರು ಕೆಲವು ದಿನ ಬಾರ್ಬಡಾಸ್​ನಲ್ಲೇ ಸಿಲುಕಿ ಹಾಕಿಕೊಂಡಿದ್ದರು. ಇದೀಗ ತವರಿಗೆ ಆಗಮಿಸಿದ ವಿಶ್ವಕಪ್‌ ಹೀರೋಗಳಿಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ದಾರೆ.

ಇದನ್ನೂ ಓದಿ : Virat kohli: ಏಕಾಂಗಿಯಾಗಿ ಎದುರಾಳಿಯನ್ನು ಧ್ವಂಸಗೊಳಿಸುವ ವೀರ ಹೋರಾಟಗಾರ ವಿರಾಟ್​​​

ಆಟಗಾರರಿಗೆ ಕರೆ ಮಾಡಿದ್ದ ಮೋದಿ

ಜೂನ್‌ 29ರಂದು ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ 7 ರನ್‌ಗಳಿಂದ ಜಯ ಸಾಧಿಸಿತ್ತು. ಆ ವೇಳೆ ಆಟಗಾರರಿಗೆ ಕರೆ ಮಾಡಿ ಮೋದಿ ಅಭಿನಂದನೆ ಸಲ್ಲಿಸಿದ್ದರು. ಮೋದಿ ಅವರು ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡಿ, ಅದ್ಭುತ ನಾಯಕತ್ವಕ್ಕಾಗಿ ಅಭಿನಂದನೆ ತಿಳಿಸಿದರು. ಅವರ ಟಿ20 ವೃತ್ತಿ ಜೀವನವನ್ನು ಶ್ಲಾಘಿಸಿದರು. ಜತೆಗೆ ಪ್ರಧಾನಿ ಫೈನಲ್‌ ಪಂದ್ಯದಲ್ಲಿ ಭಾರತವು ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ಸಹಾಯ ಮಾಡಿದ ವಿರಾಟ್ ಕೊಹ್ಲಿ (76 ರನ್) ಅವರ ಆಟವನ್ನೂ ಮೆಚ್ಚಿಕೊಂಡರು. ಜತೆಗೆ ಭಾರತೀಯ ಕ್ರಿಕೆಟ್‌ಗೆ ಕೊಹ್ಲಿ ನೀಡಿದ ಕೊಡುಗೆಯನ್ನೂ ನೆನಪಿಸಿಕೊಂಡಿದ್ದರು.

ಜತೆಗೆ ಭಾರತೀಯ ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೂ ಪ್ರಧಾನಿ ಮೆಚ್ಚುಗೆ ಸೂಚಿಸಿದ್ದರು. ಮಾತ್ರವಲ್ಲ ಅದ್ಭುತ ಕ್ಯಾಚ್‌ ಹಿಡಿದು ಪಂದ್ಯದ ಗತಿಯನ್ನೇ ಬದಲಾಯಿಸಿದ ಸೂರ್ಯ ಕುಮಾರ್ ಯಾದವ್ ಅವರನ್ನು ಉಲ್ಲೇಖಿಸಲು ಪ್ರಧಾನಿ ಮರೆತಿರಲಿಲ್ಲ. ಗೆಲುವಿಗಾಗಿ ಮುಖ್ಯ ಕೊಡುಗೆ ನೀಡಿದ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಮೋದಿ ಧನ್ಯವಾದ ಅರ್ಪಿಸಿದ್ದರು. ಈ ಕುರಿತಾದ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಪ್ರಧಾನಿ ಅವರ ನಡೆಗೆ ಕ್ರೀಡಾಪ್ರೇಮಿಗಳು ಮೆಚ್ಚುಗೆ ಸೂಚಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Latest

Puri Jagannath Temple: ಪುರಿ ಜಗನ್ನಾಥ ದೇವಾಲಯದ 10 ಅದ್ಭುತ ಸಂಗತಿಗಳಿವು!

Puri Jagannath Temple: ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯವು ಭಾರತದ ಅತ್ಯಂತ ಪೂಜ್ಯನೀಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಹಲವು ರಹಸ್ಯಗಳು ಮತ್ತು ಪವಾಡಗಳು ನಡೆಯುತ್ತದೆ. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಕಾರಣವಿಲ್ಲ. ಇತಿಹಾಸಕಾರರು, ವಿಜ್ಞಾನಿಗಳು, ಪುರೋಹಿತರು ಮತ್ತು ಸಾಮಾನ್ಯ ಜನರು ಈ ರಹಸ್ಯಗಳನ್ನು ಪರಿಹರಿಸಲು ಅನೇಕ ವರ್ಷಗಳಿಂದ ಶ್ರಮಿಸುತ್ತಿದ್ದಾರೆ ಆದರೆ ಇದು ಇಲ್ಲಿಯವರೆಗೆ ನಿಗೂಢವಾಗಿಯೇ ಉಳಿದಿದೆ. ಆ ರಹಸ್ಯಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

Puri Jagannath Temple
Koo

ಪುರಿ ಜಗನ್ನಾಥ ದೇವಾಲಯವು (Puri Jagannath Temple) ಭಾರತದ ಅತ್ಯಂತ ಪೂಜ್ಯನೀಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಒಡಿಶಾದ ಪುರಿಯಲ್ಲಿದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಜಗನ್ನಾಥ ದೇವಾಲಯದಲ್ಲಿ ಭಗವಾನ್ ಕೃಷ್ಣನನ್ನು ಭಗವಾನ್ ಜಗನ್ನಾಥನ ರೂಪದಲ್ಲಿ ಪೂಜಿಸಲಾಗುತ್ತದೆ. ಇಲ್ಲಿ ಕೃಷ್ಣನು ಜಗನ್ನಾಥನ ರೂಪದಲ್ಲಿ ಸಹೋದರ ಬಲರಾಮನ ರೂಪವಾದ ಭಗವಾನ್ ಬಲಭದ್ರ ಮತ್ತು ತಂಗಿ ದೇವಿ ಸುಭದ್ರಾ ಅವರೊಂದಿಗೆ ಈ ದೇವಾಲಯದಲ್ಲಿ ನೆಲೆಸಿದ್ದಾನೆ.

ಈ ದೇವಾಲಯದಲ್ಲಿ ಹಲವು ರಹಸ್ಯಗಳು ಮತ್ತು ಪವಾಡಗಳು ನಡೆಯುತ್ತದೆ. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಕಾರಣವಿಲ್ಲ. ಇತಿಹಾಸಕಾರರು, ವಿಜ್ಞಾನಿಗಳು, ಪುರೋಹಿತರು ಮತ್ತು ಸಾಮಾನ್ಯ ಜನರು ಈ ರಹಸ್ಯಗಳನ್ನು ಪರಿಹರಿಸಲು ಅನೇಕ ವರ್ಷಗಳಿಂದ ಶ್ರಮಿಸುತ್ತಿದ್ದಾರೆ ಆದರೆ ಇದು ಇಲ್ಲಿಯವರೆಗೆ ರಹಸ್ಯವಾಗಿ ಉಳಿದಿದೆ. ಆ ರಹಸ್ಯಗಳು ಯಾವುವು ಎಂದು ತಿಳಿಯೋಣ :-

Puri Jagannath Temple

ಧ್ವಜದ ದಿಕ್ಕು:

ಜಗನ್ನಾಥ ದೇವಾಲಯದ ಮೇಲ್ಭಾಗದಲ್ಲಿರುವ ಧ್ವಜವು ಗಾಳಿ ಬೀಸುವ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿ ಹಾರಾಡುತ್ತದೆ. 1800 ವರ್ಷಗಳ ಹಿಂದೆ, ಅರ್ಚಕರು ಸಂಪ್ರದಾಯದ ಪ್ರಕಾರ ಧ್ವಜವನ್ನು ಬದಲಾಯಿಸುವ ಸಲುವಾಗಿ ಪ್ರತಿದಿನ ಜಗನ್ನಾಥ ದೇವಾಲಯದ ಶಿಖರದ ಮೇಲೆ ಏರುತ್ತಾರೆ. ಈ ಆಚರಣೆಯನ್ನು ಒಂದು ದಿನದ ಮಟ್ಟಿಗೆ ತಪ್ಪಿಸಿದರೆ ದೇವಾಲಯವು 18 ವರ್ಷಗಳ ಕಾಲ ಮುಚ್ಚಲ್ಪಡುತ್ತದೆ ಎಂದು ಹೇಳಲಾಗುತ್ತದೆ. ಈ ದೇವಾಲಯವು ತುಂಬಾ ಎತ್ತರವಾಗಿದೆ. ದೇವಾಲಯದ ಮೇಲೆ ಏರಲು ಯಾವುದೇ ಉಪಕರಣವನ್ನು ಬಳಸುವುದಿಲ್ಲ ಇದನ್ನು ಬರಿಗೈಯಿಂದ ನಿರ್ವಹಿಸಲಾಗುತ್ತದೆ.

ಮರದ ವಿಗ್ರಹಗಳು;

ಇಲ್ಲಿ ದೇವರ ವಿಗ್ರಹಗಳನ್ನು ಪವಿತ್ರವಾದ ಬೇವಿನ ಮರದಿಂದ ತಯಾರಿಸಲಾಗುತ್ತದೆ ಮತ್ತು ನಬಕಲೆಬರಾ ಎಂಬ ಜಗನ್ನಾಥನ ವಿಶೇಷ ಹಬ್ಬದ ಸಮಯದಲ್ಲಿ ವಿಗ್ರಹಗಳನ್ನು ಬದಲಾಯಿಸಿ ಹೊಸ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಆಚರಣೆಯನ್ನು ಪ್ರತಿ 8, 12, ಅಥವಾ 19 ವರ್ಷಗಳಿಗೊಮ್ಮೆ ಮಾಡಲಾಗುತ್ತದೆ. ಈ ವಿಗ್ರಹ ಮಾಡಲು ಕಟ್ಟುನಿಟ್ಟಾದ ಕ್ರಮಗಳನ್ನು ಹೊಂದಿದ್ದು, ಇದಕ್ಕಾಗಿ ಪವಿತ್ರ ಬೇವಿನ ಮರಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ದ ಬಡಗಿಗಳು 21 ದಿನಗಳ ಅವಧಿಯಲ್ಲಿ ಕೆತ್ತನೆಯನ್ನು ರಹಸ್ಯವಾಗಿ ಮಾಡುತ್ತಾರೆ. ಹಳೆಯ ವಿಗ್ರಹಗಳನ್ನು ಕೊಯಿಲಿ ವೈಕುಂಠದ ಬಳಿ ಸಮಾಧಿ ಮಾಡಲಾಗಿದೆ. ಕೊನೆಯ ನಬಕಲೆಬರಾ 2015 ರಲ್ಲಿ ನಡೆಯಿತು ಮತ್ತು ಲಕ್ಷಾಂತರ ಭಕ್ತರು ಈ ಹಬ್ಬಕ್ಕೆ ಬಂದಿದ್ದರು.

Puri Jagannath Temple

ದೇವಾಲಯದ ನೆರಳು:

ದಿನದ ಯಾವುದೇ ಸಮಯದಲ್ಲಿ, ಸೂರ್ಯನ ಪ್ರಕಾಶ ಆಕಾಶದಲ್ಲಿ ಎಷ್ಟೇ ಹೆಚ್ಚಾಗಿದ್ದರೂ ಕೂಡ ದೇವಾಲಯದ ನೆರಳು ಬೀಳುವುದಿಲ್ಲ. ಅದು ವಾಸ್ತುಶಿಲ್ಪದ ಅದ್ಭುತವೇ ಅಥವಾ ಪವಾಡವೇ ಎಂಬುದು ಇನ್ನೂ ಬಗೆಹರಿದಿಲ್ಲ.

ಅಬಾಧ ಮಹಾಪ್ರಸಾದಂ:

ಮಹಾಪ್ರಸಾದವನ್ನು ಭಗವಾನ್ ಜಗನ್ನಾಥನಿಗೆ 5 ಹಂತಗಳಲ್ಲಿ ನೀಡಲಾಗುತ್ತದೆ ಮತ್ತು ಇದು 56 ರುಚಿಕರವಾದ ಭಕ್ಷ್ಯಗಳನ್ನು ಒಳಗೊಂಡಿದೆ. ಇದರಲ್ಲಿ ಎರಡು ವಿಧಗಳಿವೆ, ಸುಖಿಲಾ ಮತ್ತು ಶಂಖುಡಿ. ಸುಖಿಲಾ ಎಲ್ಲಾ ಒಣ ಮಿಠಾಯಿಗಳನ್ನು ಒಳಗೊಂಡಿದೆ ಮತ್ತು ಶಂಖುಡಿ ಅಕ್ಕಿ, ದಾಲ್ ಮತ್ತು ಇತರ ವಸ್ತುಗಳನ್ನು ಒಳಗೊಂಡಿದೆ. ಇದು ದೇವಾಲಯದ ಆವರಣದಲ್ಲಿರುವ ಆನಂದ ಬಜಾರ್‌ನ ಮಾರುಕಟ್ಟೆಯಲ್ಲಿ ಭಕ್ತರಿಗೆ ಲಭ್ಯವಿದೆ ಮತ್ತು ಇದು ದೈವಿಕ ರುಚಿಯನ್ನು ನೀಡುತ್ತದೆ.

Puri Jagannath Temple

ಮಹಾಪ್ರಸಾದದ ತಯಾರಿಕೆ:

ಮಹಾಪ್ರಸಾದವನ್ನು ಇಲ್ಲಿ ಸಾವಿರಾರು ಪುರೋಹಿತರು ತಯಾರಿಸುತ್ತಾರೆ ಮತ್ತು 7 ಮಣ್ಣಿನ ಮಡಕೆಗಳನ್ನು ಒಂದರ ಮೇಲೊಂದರಂತೆ ಇರಿಸಲಾಗುತ್ತದೆ ಮತ್ತು ಆಹಾರವನ್ನು ಸೌದೆ ಒಲೆಯ ಮೇಲೆ ಬೇಯಿಸಲಾಗುತ್ತದೆ. ಹೀಗೆ ಕಾಯಿಸಿದಾಗ ಮೇಲಿನ ಮಡಕೆಯಲ್ಲಿನ ಆಹಾರ ಮೊದಲು ಬೇಯುತ್ತದೆ. ಉಳಿದವು ನಂತರ ಬೇಯುತ್ತದೆ. ಇದು ಇಲ್ಲಿನ ಮತ್ತೊಂದು ಪವಾಡ.

Puri Jagannath Temple

ಅಲೆಗಳ ಶಬ್ದ:

ನೀವು ಒಮ್ಮೆ ದೇವಾಲಯದ ಒಳಗೆ ಕಾಲಿಟ್ಟರೆ, ಅಲ್ಲಿ ನಿಮಗೆ ಸಮುದ್ರದ ಅಲೆಗಳ ಶಬ್ದ ಕೇಳಿಸುವುದೇ ಇಲ್ಲ. ಪುರಾಣದ ಪ್ರಕಾರ, ಸುಭದ್ರಾ ದೇವಿಯು ದೇವಾಲಯವು ಪ್ರಶಾಂತತೆಯ ಸ್ಥಳವಾಗಬೇಕೆಂದು ಬಯಸಿದಳು, ಹಾಗಾಗಿ ಈ ದೇವಾಲಯದ ಒಳಗೆ ಸಮುದ್ರದ ಅಲೆಗಳ ಶಬ್ದ ಕೇಳಿಸುವುದಿಲ್ಲ ಎನ್ನಲಾಗಿದೆ.

Puri Jagannath Temple

ದೇವಾಲಯದ ಮೇಲೆ ಏನೂ ಹಾರುವುದಿಲ್ಲ:

ನೀವು ಆಕಾಶದಲ್ಲಿ ಮೇಲಕ್ಕೆ ನೋಡಿದಾಗ, ಪಕ್ಷಿಗಳು ಎತ್ತರಕ್ಕೆ ಹಾರುವುದನ್ನು ಕಾಣುತ್ತೀರಿ. ಆದರೆ ಪುರಿ ಜಗನ್ನಾಥ ದೇವಾಲಯದ ಗುಮ್ಮಟದ ಮೇಲೆ ಒಂದೇ ಒಂದು ಪಕ್ಷಿಯನ್ನು ಸಹ ನೋಡಲಾಗುವುದಿಲ್ಲ. ಯಾವುದೇ ಪಕ್ಷಿ ಗುಮ್ಮಟದ ಮೇಲೇ ಹಾರುವುದಿಲ್ಲ, ಯಾವುದೇ ವಸ್ತುವು ಹಾರುವುದಿಲ್ಲ. ಇದಕ್ಕೆ ಇನ್ನೂ ಯಾವುದೇ ತಾರ್ಕಿಕ ಸ್ಪಷ್ಟೀಕರಣ ಸಿಕ್ಕಿಲ್ಲ.

Puri Jagannath Temple

ಚಕ್ರದ ದಿಕ್ಕು:

ದೇವಾಲಯದ ಮೇಲ್ಭಾಗದಲ್ಲಿ ಅದೃಷ್ಟ ಚಕ್ರವಿದೆ. ಅದು ಸುಮಾರು ಒಂದು ಟನ್ ತೂಕವಿದೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಪುರಿಯ ಯಾವುದೇ ಸ್ಥಳದಲ್ಲಿ ನಿಂತು ಚಕ್ರವನ್ನು ಎತ್ತರದಿಂದ ಯಾವುದೇ ದಿಕ್ಕಿನಲ್ಲಿ ನೋಡಿದರೂ ವೀಕ್ಷಕರಿಗೆ ಯಾವಾಗಲೂ ಚಕ್ರವು ತನ್ನ ಕಡೆಗೆ ಮುಖ ಮಾಡಿರುವಂತೆ ಕಾಣುತ್ತದೆ. ಇನ್ನೂ ನಿಗೂಢವಾದ ವಿಚಾರವೇನೆಂದರೆ, 12ನೇ ಶತಮಾನದ ಜನರು ದೇವಾಲಯದ ಮೇಲ್ಭಾಗದಲ್ಲಿ ಇಷ್ಟು ಭಾರವಾದ ಚಕ್ರವನ್ನು ಹೇಗೆ ಹಾಕಿದರು ಎಂಬುದು!

Puri Jagannath Temple

ಪ್ರಸಾದದ ರಹಸ್ಯ:

ಪ್ರತಿವರ್ಷ ಲಕ್ಷಾಂತರ ಯಾತ್ರಾರ್ಥಿಗಳು ಈ ಪವಿತ್ರ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ರಥಯಾತ್ರೆ ಅಥವಾ ಜಗನ್ನಾಥನ ಪೂಜಾ ದಿನಗಳಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಯಾತ್ರಾರ್ಥಿಗಳು ಬರುತ್ತಾರೆ. ಆದರೆ ಪ್ರತಿದಿನ ಅಷ್ಟೇ ಪ್ರಮಾಣದಲ್ಲಿ ಪ್ರಸಾದವನ್ನು ಬೇಯಿಸಲಾಗುತ್ತದೆ. ಯಾವುದೇ ದಿನಗಳಲ್ಲಿ, ಪ್ರಸಾದವು ವ್ಯರ್ಥವಾಗುವುದಿಲ್ಲ, ಮತ್ತು ಯಾವುದೇ ಭಕ್ತರು ಪ್ರಸಾದವಿಲ್ಲದೆ ಹಿಂತಿರುಗುವುದಿಲ್ಲ.

ಇದನ್ನೂ ಓದಿ: ಕೀರ್ತಿ ಚಕ್ರ ಸ್ವೀಕರಿಸಿದ ಹುತಾತ್ಮ ಯೋಧನ ಪತ್ನಿ; ಭಾವುಕರಾದ ದ್ರೌಪದಿ ಮುರ್ಮು‌,ರಾಜನಾಥ್ ಸಿಂಗ್!

Puri Jagannath Temple

ಹಿಮ್ಮುಖ ಸಮುದ್ರದ ಗಾಳಿ:

ಇದು ಸಾಮಾನ್ಯವಾಗಿ ಕರಾವಳಿ ಪ್ರದೇಶಗಳಲ್ಲಿ ಹಗಲಿನಲ್ಲಿ ಸಂಭವಿಸುವ ನೈಸರ್ಗಿಕ ವಿದ್ಯಮಾನವಾಗಿದೆ, ಗಾಳಿಯು ಸಮುದ್ರದಿಂದ ಭೂಮಿಯ ಕಡೆಗೆ ಬೀಸುತ್ತದೆ ಮತ್ತು ಸಂಜೆಯ ಸಮಯದಲ್ಲಿ ಅದು ಭೂಮಿಯಿಂದ ಸಮುದ್ರದ ಕಡೆಗೆ ಬೀಸುತ್ತದೆ. ಆದರೆ ಪುರಿಯಲ್ಲಿ, ಇದು ವಿರುದ್ಧ ರೂಪದಲ್ಲಿ ನಡೆಯುತ್ತದೆ!

Continue Reading

ಭವಿಷ್ಯ

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಸಿಗಲಿದೆ ಶುಭ ಸುದ್ದಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷದ ಬಿದಿಗೆ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಭಾನುವಾರವೂ ಸಿಂಹ ರಾಶಿಯಲ್ಲೇ ನೆಲಸಲಿದ್ದಾನೆ. ಇದರಿಂದಾಗಿ ವೃಷಭ, ಕಟಕ, ಕನ್ಯಾ, ತುಲಾ, ಮಕರ, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಅತಿಯಾದ ಸಂಶಯಾತ್ಮಕ ಸ್ವಭಾವ ಮನಸ್ಸಿಗೆ ಘಾಸಿ ಮಾಡುವ ಸಾಧ್ಯತೆ ಇದೆ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ವೃಷಭ ರಾಶಿಯವರು ಕೈಗೆ ಬಂದ ತುತ್ತು ಬಾಯಿಗೆ ಬರುವ ಮುನ್ನ ಕೋಪದಿಂದ ಹದಗೆಡಲು ಹಾದಿ ಮಾಡಿಕೊಳ್ಳುವುದು ಬೇಡ, ತಾಳ್ಮೆಯಿಂದ ವರ್ತಿಸಿ. ತುಲಾ ರಾಶಿಯವರು ಆಪ್ತರ ಮಾತುಗಳು ನಿಮ್ಮ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಣಕಾಸು ವ್ಯವಹಾರದಲ್ಲಿ ಕುಂಠಿತವಾಗಲಿದೆ. ಕುಟುಂಬ ಸದಸ್ಯರ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (7-07-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ.
ತಿಥಿ: ಬಿದಿಗೆ 28:58 ವಾರ: ಭಾನುವಾರ
ನಕ್ಷತ್ರ: ಪುಷ್ಯ 30:01 ಯೋಗ: ಹರ್ಷಣ 26:11
ಕರಣ: ಬಾಲವ 16:37 ಅಮೃತಕಾಲ: ರಾತ್ರಿ 11:19 ರಿಂದ 01:00 ರವರೆಗೆ
ದಿನದ ವಿಶೇಷ: ಶ್ರೀರಾಮ ರಥೋತ್ಸವ, ಚಂದ್ರದರ್ಶನ

ಸೂರ್ಯೋದಯ : 05:58   ಸೂರ್ಯಾಸ್ತ : 06:50

ರಾಹುಕಾಲ: ಸಂಜೆ 05:14 ರಿಂದ 06:50
ಗುಳಿಕಕಾಲ: ಮಧ್ಯಾಹ್ನ 03:37 ರಿಂದ 05:14

ಯಮಗಂಡಕಾಲ: ಮಧ್ಯಾಹ್ನ 12:25 ರಿಂದ 02:01

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಆರೋಗ್ಯ ಉತ್ತಮವಾಗಿರಲಿದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ಇರಲಿದೆ. ಅತಿಯಾದ ಸಂಶಯಾತ್ಮಕ ಸ್ವಭಾವ ಮನಸ್ಸಿಗೆ ಘಾಸಿ ಮಾಡುವ ಸಾಧ್ಯತೆ ಇದೆ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 5

Horoscope Today

ವೃಷಭ: ಕೈಗೆ ಬಂದ ತುತ್ತು ಬಾಯಿಗೆ ಬರುವ ಮುನ್ನ ಕೋಪದಿಂದ ಹದಗೆಡಲು ಹಾದಿ ಮಾಡಿಕೊಳ್ಳುವುದು ಬೇಡ, ತಾಳ್ಮೆಯಿಂದ ವರ್ತಿಸಿ. ಕೆಲಸ ಕಾರ್ಯಗಳಲ್ಲಿ ನಿಧಾನಗತಿ. ಕುಟುಂಬದ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 4

Horoscope Today

ಮಿಥುನ: ಆಪ್ತ ವ್ಯಕ್ತಿಗಳಿಂದ ಸಲಹೆ ಸಿಗಲಿದೆ. ಆರ್ಥಿವಾಗಿ ಬಲ ಸಿಗಲಿದೆ. ದ್ವಿಸ್ವಭಾವದರಾದ ನೀವು ಆಂತರಿಕ ಭಯದಿಂದ ಬಳಲುತ್ತಿರುವ ಹಾಗೆ ಭಾಸವಾಗುವುದು. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ಕಟಕ: ಹಾಸ್ಯ ಪ್ರಜ್ಞೆಯಿಂದ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಹೊಸ ವ್ಯವಹಾರದಲ್ಲಿ ತೊಡಗುವಿರಿ. ಆತುರದ ತೀರ್ಮಾನಗಳನ್ನು ಮಾಡದೆ, ಕುಟುಂಬದ ಸದಸ್ಯರೊಂದಿಗೆ ಚರ್ಚೆ ನಡೆಸಿ. ಸಂಗಾತಿಯ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

Horoscope Today

ಸಿಂಹ: ಅತಿಯಾದ ವ್ಯಾಮೋಹ ದುಃಖಕ್ಕೆ ಕಾರಣವಾಗಬಹುದು. ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಪ್ರೀತಿ ಮೇಲುಗೈ ಸಾಧಿಸುತ್ತದೆ. ನಿಮ್ಮ ಶಕ್ತಿ ಮತ್ತು ನಿಮ್ಮ ಮುಂದಿನ ಯೋಜನೆಗಳನ್ನು ಮರು ನಿರ್ಣಯಿಸುವ ಸಮಯವಿದು. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಕನ್ಯಾ: ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಅತಿಥಿಗಳ ಆಗಮನ ಸಂತಸ ತರುವುದು. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 2

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆಪ್ತರ ಮಾತುಗಳು ನಿಮ್ಮ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಣಕಾಸು ವ್ಯವಹಾರದಲ್ಲಿ ಕುಂಠಿತವಾಗಲಿದೆ. ಕುಟುಂಬ ಸದಸ್ಯರ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಧೃತಿಗೆಡದೆ ಕಾರ್ಯದಲ್ಲಿ ಮುನ್ನುಗ್ಗಿ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

Horoscope Today

ವೃಶ್ಚಿಕ : ಆಹಾರ ಕ್ರಮದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಅನಗತ್ಯ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಉದಾರ ವರ್ತನೆಯನ್ನು ಬಳಸಿಕೊಂಡು ಬೇರೆಯವರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 6

Horoscope Today

ಧನಸ್ಸು: ದೈಹಿಕ ಆಯಾಸವಾಗುವುದು. ಅತಿಯಾದ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಕೆಲಸ-ಕಾರ್ಯಗಳಲ್ಲಿ ನಿಧಾನಗತಿ ಇರಲಿದೆ. ಕೌಟುಂಬಿಕವಾಗಿ ಮಿಶ್ರಫಲ. ಅದೃಷ್ಟ ಸಂಖ್ಯೆ: 3

Horoscope Today

ಮಕರ: ಆರೋಗ್ಯ ದೃಷ್ಟಿಯಿಂದ ಉತ್ತಮವಾದ ದಿನ. ಎಂದಿಗಿಂತ ಇಂದು ಉತ್ಸಾಹದಿಂದ ಇರುವಿರಿ. ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ಸಿಗಲಿದೆ. ಪ್ರೀತಿ ಅಂಕುರವಾಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 3

Horoscope Today

ಕುಂಭ: ಭರವಸೆಯು ನಿಮ್ಮ ಕೆಲಸದಲ್ಲಿ ಸಹಾಯ ಮಾಡುವುದು. ಕುಟುಂಬ ಸದಸ್ಯರ ಬೆಂಬಲ ದೊರೆಯಲಿದೆ. ವ್ಯಾಪಾರ-ವ್ಯವಹಾರದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡು ಬರುವುದು. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ಮೀನ: ಪ್ರೀತಿ, ಭರವಸೆ, ನಂಬಿಕೆ, ಸಹಾನುಭೂತಿ, ಆಶಾವಾದ ಮತ್ತು ನಿಷ್ಠೆಗಳಂಥ ಧನಾತ್ಮಕ ಭಾವನೆಗಳನ್ನು ಗ್ರಹಿಸಲು ಮನಸ್ಸು ಪ್ರೋತ್ಸಾಹಿಸುವುದು. ಕಾರ್ಯದಲ್ಲಿ ಪ್ರಗತಿ ಇರಲಿದೆ. ಹಿರಿಯರ ಆಶೀರ್ವಾದ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 8

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಪ್ರಮುಖ ಸುದ್ದಿ

Champions Trophy 2025 : ಭಾರತ ತಂಡ ಪಾಕಿಸ್ತಾನಕ್ಕೆ ಬರಲೇಬೇಕು ಹಠ ಹಿಡಿದು ಕುಳಿತಿರುವ ಪಿಸಿಬಿ

Champions Trophy 2025 : ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈ ತಿಂಗಳು ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಈ ವಿಷಯವನ್ನು ಎತ್ತಲು ಯೋಜಿಸಿದೆ. ಅಲ್ಲದೆ ಭಾರತ ತಂಡ ಬರಲೇಬೇಕು ಎಂದು ಒತ್ತಾಯ ಮಾಡುವ ಸಾಧ್ಯತೆಗಳಿವೆ. ಇದು ಸಭೆಯಲ್ಲಿ ನಿರ್ಧಾರ ಮಾಡಲು ದೊಡ್ಡ ಸಮಸ್ಯೆಗಳನ್ನು ತಂದೊಡ್ಡಲಿದೆ.

VISTARANEWS.COM


on

Champions Trophy 2025:
Koo

ಬೆಂಗಳೂರು: 2024ರ ಟಿ20 ವಿಶ್ವಕಪ್ ಬಳಿಕ ಇದೀಗ ಎಲ್ಲರ ಗಮನ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರತ್ತ (Champions Trophy 2025 ) ನೆಟ್ಟಿದೆ. ಮುಂದಿನ ವರ್ಷ ಫೆಬ್ರವರಿ-ಮಾರ್ಚ್​​ನಲ್ಲಿ ಪಾಕಿಸ್ತಾನದಲ್ಲಿ ಪಂದ್ಯಾವಳಿ ಆಯೋಜನೆಗೊಂಡಿದೆ. ಆದರೆ, ಟೂರ್ನಿಯಲ್ಲಿ ಭಾರತೀಯ ತಂಡದ ಭಾಗವಹಿಸುವಿಕೆಯೇ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಇತ್ತೀಚಿನ ವರದಿಗಳ ಪ್ರಕಾರ, ಐಸಿಸಿ ಚಾಂಪಿಯನ್ಸ್ ಟ್ರೋಫಿಯ 2025 ರ ಆವೃತ್ತಿಯಲ್ಲಿ ಭಾಗವಹಿಸಲು ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವ ಸಾಧ್ಯತೆಯಿಲ್ಲ. ಪಂದ್ಯಾವಳಿಯಲ್ಲಿ ಅವರ ಭಾಗವಹಿಸುವಿಕೆಯು ಭಾರತ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ಅವಲಂಬಿಸಿರುತ್ತದೆ.

ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸದಿರಲು ಕಾರಣವೆಂದರೆ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆ. ಉಭಯ ತಂಡಗಳು ದ್ವಿಪಕ್ಷೀಯ ಸರಣಿಗಳಲ್ಲಿ ಪರಸ್ಪರ ಆಡುವುದಿಲ್ಲ. ಐಸಿಸಿ ಈವೆಂಟ್ಗಳು ಮತ್ತು ಏಷ್ಯಾ ಕಪ್​ಗಳಲ್ಲಿ ಮಾತ್ರ ಪರಸ್ಪರ ಮುಖಾಮುಖಿಯಾಗುತ್ತವೆ. 2012-13ರಲ್ಲಿ ಕೊನೆಯ ಬಾರಿ ಸರಣಿ ಆಡಿತ್ತು.

ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಭಾರತ ಪ್ರಯಾಣಿಸದಿರುವ ವಿಷಯ ಸರ್ಕಾರದ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ/ ಅದರ ವಿವರಗಳನ್ನು ಐಸಿಸಿ ಸಭೆಯ ನಂತರ ಬಹಿರಂಗಪಡಿಸಲಾಗುವುದು ಎಂದು ಬಿಸಿಸಿಐ ಹೇಳಿದೆ.

ಇದನ್ನೂ ಓದಿ: ZIM vs IND : ಜಿಂಬಾಬ್ವೆ ವಿರುದ್ಧ 13 ರನ್​ಗಳಿಂದ ಸೋತ ವಿಶ್ವ ವಿಜೇತ ಭಾರತ ತಂಡ

ಪಂದ್ಯಾವಳಿಯ ವಿವರಗಳನ್ನು ಇನ್ನೂ ಚರ್ಚಿಸಲಾಗಿಲ್ಲವಾದರೂ, ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವ ಸಾಧ್ಯತೆಯಿಲ್ಲ. ಅಂತಿಮವಾಗಿ, ನಿರ್ಧಾರವು ಭಾರತ ಸರ್ಕಾರಕ್ಕೆ ಬಿಟ್ಟಿದ್ದು. ಆದಾಗ್ಯೂ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈ ತಿಂಗಳು ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಈ ವಿಷಯವನ್ನು ಎತ್ತಲು ಯೋಜಿಸಿದೆ. ಅಲ್ಲದೆ ಭಾರತ ತಂಡ ಬರಲೇಬೇಕು ಎಂದು ಒತ್ತಾಯ ಮಾಡುವ ಸಾಧ್ಯತೆಗಳಿವೆ. ಇದು ಸಭೆಯಲ್ಲಿ ನಿರ್ಧಾರ ಮಾಡಲು ದೊಡ್ಡ ಸಮಸ್ಯೆಗಳನ್ನು ತಂದೊಡ್ಡಲಿದೆ.

ಈ ವಿಷಯದಲ್ಲಿ ಸರ್ಕಾರದ ನಿರ್ಧಾರವು ಅಂತಿಮವಾಗಿರುತ್ತದೆ. ಏಕೆಂದರೆ ನಾವು ಅದನ್ನು ಆಂತರಿಕವಾಗಿ ಇನ್ನೂ ದೃಢಪಡಿಸಿಲ್ಲ. ಇದು ಐಸಿಸಿ ಟೂರ್ನಿಯಾಗಿರುವುದರಿಂದ ಯಾವುದೇ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನಮಗಿಲ್ಲ. ಆದಾಗ್ಯೂ, ಮುಂದಿನ ಐಸಿಸಿ ಸಭೆಯಲ್ಲಿ ಹೆಚ್ಚಿನ ವಿವರಗಳು ಹೊರಬರಬಹುದು ಎಂದು ಮೂಲಗಳು ತಿಳಿಸಿವೆ. ಭಾರತ ತನ್ನ ನಿರ್ಧಾರ ಬದಲಿಸದು ಎಂಬ ಕಾರಣಕ್ಕೆ ಪಾಕಿಸ್ತಾನ ಹಠ ಹಿಡಿಯಲಿದೆ.

2008ರ ಬಳಿಕ ಭಾರತ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ. ಅವರು 2023 ರಲ್ಲಿ ಏಷ್ಯಾ ಕಪ್ ಆಡಬೇಕಿತ್ತು ಆದರೆ ಅವರು ಪ್ರಯಾಣಿಸಲಿಲ್ಲ ಮತ್ತು ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಡಲಾಯಿತು. ಭಾರತ ಶ್ರೀಲಂಕಾದಲ್ಲಿ ಪಂದ್ಯಗಳನ್ನು ಆಡಿತು. ಆದರೆ ಅದರ ನಂತರ, ಭಾರತವು ಪ್ರಯಾಣಿಸಲು ನಿರಾಕರಿಸಿದರೂ ಪಾಕಿಸ್ತಾನವು ಸಕಾರಾತ್ಮಕ ಪ್ರತಿಕ್ರಿಯೆ ನೀಡಿತು.

2023ರ ಐಸಿಸಿ ವಿಶ್ವಕಪ್ ಟೂರ್ನಿಗಾಗಿ ಪಾಕಿಸ್ತಾನ ತಂಡ ಭಾರತಕ್ಕೆ ಪ್ರಯಾಣ ಬೆಳೆಸಿತ್ತು. ಅವರು ಹೈದರಾಬಾದ್, ಅಹಮದಾಬಾದ್, ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ಪಂದ್ಯಗಳನ್ನು ಆಡಿದರು ಮತ್ತು ಅವರು ಭಾರತದಲ್ಲಿ ಆಡಿದ ಎಲ್ಲಾ ಸ್ಥಳಗಳಾದ್ಯಂತ ಅಭಿಮಾನಿಗಳಿಂದ ಗರಿಷ್ಠ ಸ್ವಾಗತವನ್ನು ಪಡೆದಿದ್ದರು.

ವೇಳಾಪಟ್ಟಿ ಪ್ರಕಟಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ

ಇತ್ತೀಚೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ 2025 ರ ಚಾಂಪಿಯನ್ಸ್ ಟ್ರೋಫಿಯ ಕರಡು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತು. ಲಾಹೋರ್​ನಲ್ಲಿ 7 ಪಂದ್ಯಗಳು, ರಾವಲ್ಪಿಂಡಿಯಲ್ಲಿ 5 ಪಂದ್ಯಗಳು ಮತ್ತು ಕರಾಚಿಯಲ್ಲಿ 3 ಪಂದ್ಯಗಳು ನಡೆಯಲಿವೆ. ಭಾರತವು ತನ್ನ ಎಲ್ಲಾ ಪಂದ್ಯಗಳನ್ನು ಲಾಹೋರ್​ನಲ್ಲಿ ಆಡಬೇಕಾಗಿದೆ.

ಮಾರ್ಚ್ 1 ರಂದು ಲಾಹೋರ್​ನ ಗಡಾಫಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯಲಿದೆ ಎಂದು ವರದಿಗಳು ಉಲ್ಲೇಖಿಸಿವೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಗಾಗಿ ಬಹುತೇಕ ಎಲ್ಲಾ ಯೋಜನೆಗಳು ಪೂರ್ಣಗೊಂಡಿದ್ದು, ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕಾಗಿದೆ.

Continue Reading

ದೇಶ

Rain News: ವರುಣನ ಆರ್ಭಟ; ಮಳೆ ಸಂಬಂಧಿ ಅವಘಡಗಳಿಗೆ 24 ಗಂಟೆಯಲ್ಲಿ 13 ಜನ ಬಲಿ

Rain News: ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶದಲ್ಲಿ 18.3 ಮಿಲಿಮೀಟರ್‌ ಮಳೆಯಾಗಿದೆ. ಫತೇಪುರದಲ್ಲಿ ಇಬ್ಬರು, ರಾಯ್‌ಬರೇಲಿಯಲ್ಲಿ ಇಬ್ಬರು, ಬುಲಂದ್‌ಶಹರ್‌, ಕನೌಜ್‌, ಮೈನ್‌ಪುರಿ, ಕೌಶಂಬಿ, ಫಿರೋಜಾಬಾದ್‌, ಪ್ರತಾಪ್‌ಗಢ ಹಾಗೂ ಉನ್ನಾವೋ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

VISTARANEWS.COM


on

Rain News
Koo

ಲಖನೌ: ಕರ್ನಾಟಕದ (Karnataka) ಹಲವೆಡೆ, ಅದರಲ್ಲೂ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಸ್ತೆಗಳು ಕೊಚ್ಚಿಕೊಂಡು ಹೋಗಿದ್ದು, ಮನೆಗಳು ಕುಸಿದಿವೆ. ಇದರಿಂದ ನಾಡಿನ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಕರ್ನಾಟಕ ಮಾತ್ರವಲ್ಲ, ಉತ್ತರ ಪ್ರದೇಶದಲ್ಲೂ (Uttar Pradesh) ವರುಣನ ಆರ್ಭಟವು (Rain News) ಜೋರಾಗಿದೆ. ಕಳೆದ 24 ಗಂಟೆಗಳಲ್ಲಿಯೇ ಮಳೆ ಸಂಬಂಧಿ ಅವಘಡಗಳಿಂದ 13 ಜನ ಮೃತಪಟ್ಟಿದ್ದು, ನೂರಾರು ಜನ ಗಾಯಗೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಮಳೆ ಸಂಬಂಧಿ ಅವಘಡಗಳ ಕುರಿತು ಉತ್ತರ ಪ್ರದೇಶ ಪರಿಹಾರ ಇಲಾಖೆಯ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಮಳೆ ಸಂಬಂಧಿ ಅವಘಡಗಳಾದ ಸಿಡಿಲು, ಕಟ್ಟಡ ಕುಸಿತ, ಭೂಕುಸಿತ ಸೇರಿ ಹಲವು ರೀತಿಯ ಅವಘಡಗಳಿಂದ 13 ಜನ ಮೃತಪಟ್ಟಿದ್ದಾರೆ. ಶುಕ್ರವಾರ ಸಂಜೆ 6.30ರಿಂದ ಶನಿವಾರ ಸಂಜೆ 6.30ರ ಅವಧಿಯ 24 ಗಂಟೆಗಳಲ್ಲಿಯೇ ಇಷ್ಟು ಜನ ಮೃತಪಟ್ಟಿದ್ದಾರೆ. ನೂರಾರು ಜನ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶದಲ್ಲಿ ಸರಾಸರಿ 18.3 ಮಿಲಿಮೀಟರ್‌ ಮಳೆಯಾಗಿದೆ. ಫತೇಪುರದಲ್ಲಿ ಇಬ್ಬರು, ರಾಯ್‌ಬರೇಲಿಯಲ್ಲಿ ಇಬ್ಬರು, ಬುಲಂದ್‌ಶಹರ್‌, ಕನೌಜ್‌, ಮೈನ್‌ಪುರಿ, ಕೌಶಂಬಿ, ಫಿರೋಜಾಬಾದ್‌, ಪ್ರತಾಪ್‌ಗಢ ಹಾಗೂ ಉನ್ನಾವೋ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ 75 ಜಿಲ್ಲೆಗಳ ಪೈಕಿ 45 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಸತತ ಮಳೆಯಿಂದಾಗಿ ರಾಜ್ಯದ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿವೆ. ಮೀನುಗಾರಿಕೆಗೆ ತೆರಳದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಅಸ್ಸಾಂನಲ್ಲಿ 52 ಮಂದಿ ಸಾವು

ಅಸ್ಸಾಂನಲ್ಲಿ ಮಳೆಯಿಂದಾಗಿ ಕಳೆದ 24 ಗಂಟೆಗಳಲ್ಲಿ ಸುಮಾರು 52 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಮನೆ ಕಳೆದುಕೊಂಡಿದ್ದಾರೆ. ನೆರೆಯಿಂದಾಗಿ ಅಂದಾಜು 24 ಲಕ್ಷ ಮಂದಿ ತೊಂದರೆಗೆ ಒಳಗಾಗಿದ್ದಾರೆ. ರಾಜ್ಯದ ಮುಕ್ಕಾಲು ಭಾಗಗಳಲ್ಲಿ ನೆರೆ ಆವರಿಸಿದೆ. ರಾಜ್ಯದ 35 ಜಿಲ್ಲೆಗಳ ಪೈಕಿ 30 ಜಿಲ್ಲೆಗಳು ತೀವ್ರವಾಗಿ ಪ್ರವಾಹದ ಹೊಡೆತಕ್ಕೆ ಸಿಲುಕಿವೆ. ಒಂದು ತಿಂಗಳಿನಿಂದ ಇಲ್ಲಿನ ಪರಿಸ್ಥಿತಿ ಭೀಕರವಾಗಿದ್ದು, ಪ್ರಾಣಹಾನಿಯ ಜತೆಗೆ ವ್ಯಾಪಕ ಪ್ರಮಾಣದಲ್ಲಿ ಬೆಳೆ ನಾಶ ಉಂಟಾಗಿದೆ. ಈ ಈಶಾನ್ಯ ರಾಜ್ಯದ ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು ನಿರಾಶ್ರಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Continue Reading
Advertisement
Road Accident
ಕ್ರೈಂ8 mins ago

Road Accident: ಲಾರಿಗೆ ಬೈಕ್‌ ಡಿಕ್ಕಿ ಹೊಡೆದು ಪತ್ರಕರ್ತ ಸಾವು: ಇಬ್ಬರನ್ನು ಬಲಿ ಪಡೆದ ಅಪರಿಚಿತ ಕಾರು

actor darshan wife vijayalakshmi conducted a special pooja at bande mahakali last year goes viral
ಸ್ಯಾಂಡಲ್ ವುಡ್11 mins ago

Actor Darshan: ದರ್ಶನ್‌ಗಾಗಿ ವಿಶೇಷ ಪೂಜೆ ಮಾಡಿಸಿದ್ರಾ ವಿಜಯಲಕ್ಷ್ಮಿ? ಅಸಲಿ ಕಥೆ ಬೇರೆಯೇ ಇದೆ!

MS Dhoni Birthday
ಕ್ರಿಕೆಟ್15 mins ago

MS Dhoni Birthday: ಸಲ್ಮಾನ್​ ಖಾನ್​ ಜತೆ ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಧೋನಿ

Building Collapse
ದೇಶ33 mins ago

Building Collapse: ಐದು ಅಂತಸ್ತಿನ ಕಟ್ಟಡ ಧರಾಶಾಹಿ- ಏಳು ಜನ ದಾರುಣ ಸಾವು

Kannada New Movie Not Out Trailer out
ಸ್ಯಾಂಡಲ್ ವುಡ್39 mins ago

Kannada New Movie: ಕುತೂಹಲ ಮೂಡಿಸಿದೆ ʻನಾಟ್ ಔಟ್ʼ ಚಿತ್ರದ ಟ್ರೈಲರ್‌!

Boiler Blast
ಕರ್ನಾಟಕ45 mins ago

Boiler Blast: ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್‌ ಸ್ಫೋಟ; ತಪ್ಪಿದ ಬಹುದೊಡ್ಡ ಅನಾಹುತ

MS Dhoni Birthday
ಕ್ರೀಡೆ47 mins ago

MS Dhoni Birthday: 43ನೇ ವಸಂತಕ್ಕೆ ಕಾಲಿಟ್ಟ ಮಹೇಂದ್ರ ಸಿಂಗ್‌ ಧೋನಿ

Pearl Fashion
ಫ್ಯಾಷನ್1 hour ago

Pearl Fashion: ಮುತ್ತಿನ ಹಾರಕ್ಕೆ ಸಿಕ್ತು ನ್ಯೂ ಲುಕ್‌!

Crime News
ಕ್ರೈಂ1 hour ago

Crime News: ಗಾಂಜಾ ಮತ್ತಿನಲ್ಲಿ ಕಾರು ಓಡಿಸಿ ಬೈಕ್‌ಗಳಿಗೆ ಗುದ್ದಿದ ಚಾಲಕ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳರು

Health Food Tips
ಆರೋಗ್ಯ1 hour ago

Health Food Tips: ಈ ಕೆಲವು ಆಹಾರಗಳ ಸೇವನೆಯಿಂದ ಬಾಯಾರಿ, ಗಂಟಲೊಣಗಿ ನೀರು ಬೇಕೆನಿಸುತ್ತದೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 hours ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ15 hours ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ17 hours ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ18 hours ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು20 hours ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ22 hours ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ2 days ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ2 days ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ2 days ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

ಟ್ರೆಂಡಿಂಗ್‌