power-tariff-hike-reduce-burden-on-consumers ವಿಸ್ತಾರ ಸಂಪಾದಕೀಯ: ವಿದ್ಯುತ್ ದರ ವಿಪರೀತ ಏರಿಕೆ, ಗ್ರಾಹಕರ ಮೇಲಿನ ಹೊರೆ ಇಳಿಸಿ - Vistara News

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ವಿದ್ಯುತ್ ದರ ವಿಪರೀತ ಏರಿಕೆ, ಗ್ರಾಹಕರ ಮೇಲಿನ ಹೊರೆ ಇಳಿಸಿ

ಒಂದು ಕಡೆ ಉಚಿತ ವಿದ್ಯುತ್‌ ನೀಡಿ, ಇನ್ನೊಂದು ಕಡೆ ದರ ಏರಿಸಿದರೆ ಗಣನೀಯ ಪ್ರಮಾಣದ ಬಳಕೆದಾರರಿಗೆ ಪ್ರಯೋಜನ ಸಿಗದಂತಾಗುತ್ತದೆ. ಕೈಗಾರಿಕೆಗಳಿಗೂ ಇದು ಹೊರೆಯಾಗುತ್ತದೆ. ಸರ್ಕಾರ ತಕ್ಷಣ ದರ ಇಳಿಸುವ ಕೆಲಸ ಮಾಡಲಿ.

VISTARANEWS.COM


on

Electricity Bill
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

200 ಯುನಿಟ್ ವರೆಗೆ ಎಲ್ಲರಿಗೂ ವಿದ್ಯುತ್ ಉಚಿತ ಎಂದು ಹೊಸ ಕಾಂಗ್ರೆಸ್ ಸರ್ಕಾರ ಘೋಷಿಸಿದೆ. ಇದು ಆಡಳಿತ ಪಕ್ಷದ ಚುನಾವಣಾ ಪ್ರಣಾಳಿಕೆಯ ಗ್ಯಾರಂಟಿಗಳ ಒಂದು ಭಾಗವಾಗಿದ್ದು, ಇದಕ್ಕಿರುವ ನಿಯಮ ನಿಬಂಧನೆಗಳ ಬಗ್ಗೆ ಇನ್ನೂ ಕೆಲವು ಗೊಂದಲಗಳಿವೆ. ಅದೇ ಹೊತ್ತಿಗೆ ಇನ್ನೊಂದೆಡೆ, ಈ ತಿಂಗಳ ವಿದ್ಯುತ್ ದರ ಎರಡು ಮೂರು ಪಟ್ಟು ಹೆಚ್ಚು ಬಂದಿದೆ! ವಿದ್ಯುತ್ ಬಿಲ್ ನೋಡಿ ಗ್ರಾಹಕರು ಶಾಕ್ ಗೊಳಗಾಗಿದ್ದಾರೆ. ಒಂದು ಕಡೆ ವಿದ್ಯುತ್‌ ಉಚಿತ ಎಂದು ಘೋಷಿಸಿ ಇನ್ನೊಂದು ಕಡೆ ದರ ಏರಿಸಲಾಗಿದೆ ಎಂದು ಜನ ದೂರುತ್ತಿದ್ದರೆ, ಇದು ಹಳೆಯ ಬಿಜೆಪಿ ಸರ್ಕಾರ ಮಾಡಿ ಹೋಗಿರುವ ನಿರ್ಧಾರ, ನಮಗೂ ಅದಕ್ಕೂ ಸಂಬಂಧವೆ ಇಲ್ಲ ಎಂದು ಕಾಂಗ್ರೆಸ್ ಸರ್ಕಾರ ವಾದಿಸುತ್ತಿದೆ. ಆದರೆ ಬಳಕೆದಾರನಿಗೆ ಮುಖ್ಯವಾಗುವುದು ಯಾರು ಏರಿಸಿದರು ಎಂಬುದಲ್ಲ, ಆತನ ಜೇಬಿಗೆ ಎಷ್ಟು ಹೆಚ್ಚಿನ ಹೊರೆಯಾಗಲಿದೆ ಎಂಬುದು.

ವಿದ್ಯುತ್‌ ಬಿಲ್‌ ಹೆಚ್ಚಳ ಆಗಿದ್ದು ನಮ್ಮ ಅವಧಿಯಲ್ಲಿ ಅಲ್ಲ. ಮೇ 12ಕ್ಕೆ ಪರಿಷ್ಕೃತ ನೀಡಿದ್ದಾರೆ. ಅದರ ಪ್ರಕಾರ ಪ್ರತಿ ಯುನಿಟ್‌ಗೆ 70 ಪೈಸೆಯನ್ನು ಹೆಚ್ಚಿಸಿ, ಏಪ್ರಿಲ್‌ನಿಂದ ಅನ್ವಯ ಮಾಡಿದ್ದಾರೆ. ಹಿಂದಿನ ಸರ್ಕಾರ ಇದಕ್ಕೆ ಅನುಮತಿ ನೀಡಿದೆ. ಈ ಹಿಂದಿನ ಸರ್ಕಾರ, ಕೆಇಆರ್‌ಸಿ ಆದೇಶವನ್ನು ತಡೆ ಹಿಡಿದಿಲ್ಲ. ಈ ಹಿಂದೆ ನಾಲ್ಕು ಸ್ಲಾಬ್‌ ಇತ್ತು. ಅದನ್ನು ಕೆಇಆರ್‌ಸಿ ಎರಡು ಸ್ಲಾಬ್‌ಗೆ ಇಳಿಸಿದೆ. 0-50, 51-100, 101-200 ಹಾಗೂ 200 ಮೇಲ್ಪಟ್ಟು ದರ ವಿಧಿಸಲಾಗುತ್ತಿತ್ತು. ಈಗ 0-100 ಹಾಗೂ 100ಕ್ಕಿಂತ ಮೇಲ್ಪಟ್ಟು ಎರಡನೇ ಸ್ಲಾಬ್‌ ಮಾಡಿದ್ದಾರೆ. ಇದರಿಂದ ಕೈಗಾರಿಕೆಗಳಿಗೆ ಅನುಕೂಲ ಆಗುತ್ತದೆ ಎಂದು ಮಾಡಿದ್ದಾರೆ. ಈಗ ಏಕಾಏಕಿ ಕೆಇಆರ್‌ಸಿ ಆದೇಶವನ್ನು ರದ್ದುಪಡಿಸಲು ಸಾಧ್ಯವಿಲ್ಲ. ಅವರು ಮಾಡಿದ ಆದೇಶವನ್ನು ಒಪ್ಪಬೇಕು ಎನ್ನುವುದು ಕಾಯ್ದೆಯಲ್ಲಿದೆ. ಗ್ಯಾರಂಟಿ ಯೋಜನೆಯ ಹೊರೆಯನ್ನು ಯಾವುದೇ ಗ್ರಾಹಕರ ಮೇಲೆ ಹೊರಿಸುತ್ತಿಲ್ಲ. ಸರ್ಕಾರವೇ ಇದನ್ನು ಸಂಪೂರ್ಣವಾಗಿ ಭರಿಸುತ್ತದೆ ಎಂದು ಇಂಧನ ಸಚಿವ ಜಾರ್ಜ್‌ ಹೇಳಿದ್ದಾರೆ.

ಆದರೆ ವಿದ್ಯುತ್‌ ವಿಚಾರದಲ್ಲಿ ಹೀಗೆನ್ನುತ್ತಿರುವ ಸರ್ಕಾರ ಹಳೆಯ ಸರ್ಕಾರದ ಇತರ ಕೆಲ ನಿರ್ಧಾರಗಳ ಬಗ್ಗೆ ಚುರುಕಾಗಿದೆ. ಗೋ ಹತ್ಯೆ ನಿಷೇಧ ಕಾಯಿದೆ, ವನವಾಸಿ ಆಶ್ರಮಗಳಿಗೆ ನೀಡಿದ ಭೂಮಿ ವಾಪಸಾತಿ, ಹಿಜಾಬ್‌ ನಿಯಮ ರದ್ದತಿ ಸೇರಿದಂತೆ ಹಿಂದಿನ ಬಿಜೆಪಿ ಸರ್ಕಾರ ಮಾಡಿರುವ ಎಲ್ಲ ಪ್ರಮುಖ ನಿರ್ಧಾರಗಳನ್ನು ವಾಪಸ್ ಪಡೆಯಲು ಈಗಿನ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಹೀಗಿರುವಾಗ ಚುನಾವಣೆಗೆ ಕೆಲವೇ ದಿನಗಳ ಮೊದಲು ಹಿಂದಿನ ಬಿಜೆಪಿ ಸರ್ಕಾರ ವಿದ್ಯುತ್ ದರ ಏರಿಕೆಗೆ ಸಂಬಂಧಿಸಿದಂತೆ ತೆಗೆದುಕೊಂಡ ನಿರ್ಧಾರವನ್ನು ಮಾತ್ರ ವಾಪಸ್ ಪಡೆಯಲಾಗುವುದಿಲ್ಲ ಅಂದರೆ ಹೇಗೆ? ಇದು ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರನ್ನು ಏನೇನೊ ಸಬೂಬು ಹೇಳಿ ಯಾಮಾರಿಸುವ ಪ್ರಯತ್ನ ಅಲ್ಲವೆ?

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಭಾರತೀಯ ಕ್ರಿಕೆಟ್‌ ತಂಡದ ಐಸಿಸಿ ಟ್ರೋಫಿ ಬರ ನೀಗಲಿ

ತಕ್ಷಣ ಈಗಿನ ಸರ್ಕಾರ, ವಿದ್ಯುತ್ ದರ ನಿಗದಿ ಮಾಡುವ ಕೆಇಆರ್‌ಸಿಗೆ ಮನವಿ ಸಲ್ಲಿಸಿ ದರ ಕಡಿಮೆ ಮಾಡಲಿ. ವಿದ್ಯುತ್ ದರ ಏರಿಕೆ ಕೈಗಾರಿಕೆಗಳಿಗೂ ಭಾರಿ ಹೊಡೆತ ನೀಡಿದೆ. ರಾಜ್ಯವನ್ನೇ ತೊರೆದು ನೆರೆಯ ರಾಜ್ಯಗಳಿಗೆ ಹೋಗಬೇಕಾಗುತ್ತದೆ ಎಂದು ಕೈಗಾರಿಕೆಗಳ ಸಂಘಟನೆಗಳು ಎಚ್ಚರಿಸಿವೆ. ಸದ್ಯ ರಾಜ್ಯದಲ್ಲಿ ವಿದ್ಯುತ್‌ ಉತ್ಪಾದನೆಯಲ್ಲಿ ಕೊರತೆಯಿಲ್ಲ. ರಾಜ್ಯದ ಬೇಡಿಕೆಯನ್ನು ಪೂರೈಸುವಷ್ಟು ವಿದ್ಯುತ್‌ ಲಭ್ಯವಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಹೀಗಾಗಿಯೇ ಉಚಿತ ವಿದ್ಯುತ್‌ ಯೋಜನೆಗೆ ಕಾಂಗ್ರೆಸ್‌ ಮುಂದಾಗಿದ್ದು. ಇದೇ ತತ್ವವನ್ನು ಆಧರಿಸಿ, ವಿದ್ಯುತ್‌ ದರ ಏರಿಕೆಯನ್ನು ಕೈ ಬಿಡಬೇಕಿದೆ. ಒಂದು ಕಡೆ ಉಚಿತ ವಿದ್ಯುತ್‌ ನೀಡಿ, ಇನ್ನೊಂದು ಕಡೆ ದರ ಏರಿಸಿದರೆ ಗಣನೀಯ ಪ್ರಮಾಣದ ಬಳಕೆದಾರರಿಗೆ ಪ್ರಯೋಜನ ಸಿಗದಂತಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Tax Returns: ಟ್ಯಾಕ್ಸ್‌ ರಿಟರ್ನ್ಸ್‌ ಸಲ್ಲಿಸದ 5 ಲಕ್ಷ ಜನರ ಸಿಮ್‌ ಕಾರ್ಡ್‌ ಶೀಘ್ರವೇ ಬಂದ್!

Tax Returns: ಹಣದುಬ್ಬರದಿಂದ ಪಾಕಿಸ್ತಾನವು ತತ್ತರಿಸಿ ಹೋಗಿದೆ. ಒಂದೆಡೆ, ಪಾಕಿಸ್ತಾನಕ್ಕೆ ಬೇರೆ ದೇಶಗಳಿಂದ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಹಣಕಾಸು ನೆರವು ಸಿಗುತ್ತಿಲ್ಲ. ಇನ್ನೊಂದೆಡೆ, ಹಣದುಬ್ಬರ ನಿಯಂತ್ರಣ ಮಾಡಲು ಆಗುತ್ತಿಲ್ಲ. ಹಾಗಾಗಿ, ಪಾಕಿಸ್ತಾನದ ನಾಗರಿಕರು ಒಂದು ಕೆ.ಜಿ ಗೋಧಿ ಹಿಟ್ಟಿಗೆ 800 ರೂ. ಪಾವತಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಹಣದುಬ್ಬರ ಏರಿಕೆಯು ಅವರ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಇದರ ಬೆನ್ನಲ್ಲೇ, ಸರ್ಕಾರವು ಜನರಿಗೆ ತೆರಿಗೆ ಎಂಬ ಗುರಾಣಿ ಬಳಸಲು ಮುಂದಾಗಿದೆ.

VISTARANEWS.COM


on

Tax Returns
Koo

ಇಸ್ಲಾಮಾಬಾದ್:‌ ಉಗ್ರರ ಪೋಷಣೆ, ಹಣಕಾಸು ನೆರವು, ಅಸಮರ್ಥ ನಾಯಕತ್ವ, ಕೊರೊನಾ ಬಿಕ್ಕಟ್ಟು ಸೇರಿ ಹಲವು ಕಾರಣಗಳಿಂದ ಪಾಕಿಸ್ತಾನ (Pakistan) ದಿವಾಳಿಯಾಗಿದೆ. ಇದೇ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಎದುರು ಹಣಕ್ಕಾಗಿ ಭಿಕ್ಷಾ ಪಾತ್ರೆ ಹಿಡಿದು ನಿಂತಿದೆ. ಸಾಲ ಪಡೆಯಲು ಹೆಣಗಾಡುತ್ತಿದೆ. ಹಣದುಬ್ಬರದ ಏರಿಕೆಯಿಂದಾಗಿ ಜನರ ಜೀವನವೂ ಸಂಕಷ್ಟಕ್ಕೆ ಸಿಲುಕಿದೆ. ಇದರ ಬೆನ್ನಲ್ಲೇ, ದೇಶದ ನಾಗರಿಕರ ವಿರುದ್ಧ ಪಾಕಿಸ್ತಾನವು ತೆರಿಗೆಯ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದು, ಆದಾಯ ತೆರಿಗೆ ರಿಟರ್ನ್ಸ್‌ (Tax Returns) ಸಲ್ಲಿಸದ 5 ಲಕ್ಷ ಜನರ ಸಿಮ್‌ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲು ತೀರ್ಮಾನಿಸಿದೆ.

ಪಾಕಿಸ್ತಾನದ ಖಜಾನೆಯಲ್ಲಿ ಹಣವಿಲ್ಲ. ಇದರಿಂದ ಸುಗಮವಾಗಿ ಆಡಳಿತ ನಡೆಸುವುದು ಬಿಡಿ ನೌಕರರಿಗೆ ಸಂಬಳ ಕೊಡಲೂ ಆಗುತ್ತಿಲ್ಲ. ಹಾಗಾಗಿ, ಜನರಿಂದ ತೆರಿಗೆ ಸಂಗ್ರಹಿಸಲು ಪಾಕಿಸ್ತಾನವು ಮುಂದಾಗಿದೆ. ಇದರ ಭಾಗವಾಗಿಯೇ, 2023ರಲ್ಲಿ ಐಟಿ ರಿಟರ್ನ್ಸ್‌ ಸಲ್ಲಿಸದ 5,06,671 ಜನರ ಸಿಮ್‌ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲು ಪಾಕಿಸ್ತಾನದ ಫೆಡರಲ್‌ ಬೋರ್ಡ್‌ ಆಫ್‌ ರೆವೆನ್ಯೂ (FBR) ನಿರ್ಧರಿಸಿದೆ. ಅವರು ಐಟಿ ರಿಟರ್ನ್ಸ್‌ ಸಲ್ಲಿಸಿದ ಬಳಿಕವೇ ಸಿಮ್‌ಕಾರ್ಡ್‌ಗಳನ್ನು ಸಕ್ರಿಯಗೊಳಿಸಲಾಗುವುದು ಎಂದು ಕೂಡ ತಿಳಿಸಿದೆ.

ಸಿಮ್‌ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುವ ಕುರಿತು ಪಾಕಿಸ್ತಾನದ ಟೆಲಿಕಮ್ಯುನಿಕೇಷನ್‌ ಅಥಾರಿಟಿಗೆ (PTA) ನಿರ್ದೇಶನ ನೀಡಲಾಗಿದೆ. ಸಿಮ್‌ ಕಾರ್ಡ್‌ ಬಂದ್‌ ಮಾಡಿರುವ ಕುರಿತು ಮೇ 15ರೊಳಗೆ ವರದಿ ನೀಡುವಂತೆಯೂ ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದಲ್ಲಿ ತೆರಿಗೆ ಪಾವತಿಸದ ಸುಮಾರು 24 ಲಕ್ಷ ತೆರಿಗೆದಾರರನ್ನು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ. ಆರಂಭಿಕ ಹಂತದಲ್ಲಿ 5 ಲಕ್ಷ ತೆರಿಗೆದಾರರ ಸಿಮ್‌ ಕಾರ್ಡ್‌ ನಿಷ್ಕ್ರಿಯಗೊಳಿಸಲು ತೀರ್ಮಾನಿಸಲಾಗಿದೆ.

ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ

ಪಾಕಿಸ್ತಾನದಲ್ಲಿ ಹಣದುಬ್ಬರದ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯು ಗಗಣಕ್ಕೇರಿದೆ. ಒಂದು ಲೀಟರ್‌ ಹಾಲಿಗೆ 212 ರೂ., ಕೆ.ಜಿ ಅಕ್ಕಿಗೆ 330 ರೂ., ಒಂದು ಕೆ.ಜಿ ಸೇಬಿಗೆ 300 ರೂ., ಒಂದು ಕೆ.ಜಿ ಟೊಮ್ಯಾಟೊಗೆ 125 ರೂ., ಒಂದು ಕೆ.ಜಿ ಈರುಳ್ಳಿ 125 ರೂ., ಒಂದು ಲೀಟರ್‌ ಪೆಟ್ರೋಲ್‌ಗೆ 290 ರೂ. ಇದೆ. ದಿನೇದಿನೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇರುವುದು ಪಾಕಿಸ್ತಾನದ ನಾಗರಿಕರನ್ನು ಸಂಕಷ್ಟಕ್ಕೆ ಸಿಲುಕಿದೆ. ಕೊರೊನಾ ನಂತರದ ದುಸ್ಥಿತಿ ಹೀಗೆಯೇ ಮುಂದುವರಿದಿರುವುದು ಅವರನ್ನು ಆತಂಕಕ್ಕೆ ದೂಡಿದೆ.

ಪಾಕಿಸ್ತಾನವು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯಲು ಹೆಣಗಾಡುತ್ತಿದೆ. ಈಗಾಗಲೇ ಐಎಂಎಫ್‌ 1.10 ಶತಕೋಟಿ ಡಾಲರ್‌ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ. ಆದರೆ, ಮುಂದಿನ ಮೂರು ವರ್ಷಗಳವರೆಗೆ 6 ಶತಕೋಟಿ ಡಾಲರ್‌ ಸಾಲ ನೀಡಿ ಎಂಬುದಾಗಿ ಪಾಕಿಸ್ತಾನ ಮನವಿ ಮಾಡುತ್ತಿದೆ. ಆದರೆ, ಪಾಕ್‌ನಲ್ಲಿ ದಿನೇದಿನೆ ಹಣದುಬ್ಬರದ ಏರಿಕೆಯಾಗುತ್ತಿರುವ ಕಾರಣ ಸಾಲ ನೀಡಲು ಐಎಂಎಫ್‌ ಹಿಂದೇಟು ಹಾಕುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Narendra Modi:”ಇಲ್ಲಿ ಕಾಂಗ್ರೆಸ್‌ ಸಾಯುತ್ತಿದೆ…ಅಲ್ಲಿ ಪಾಕಿಸ್ತಾನ ಅಳುತ್ತಾ ಪ್ರಾರ್ಥಿಸುತ್ತಿದೆ”-ಮೋದಿ ಅಟ್ಯಾಕ್‌

Continue Reading

ಪ್ರಮುಖ ಸುದ್ದಿ

M S Dhoni : ಧೋನಿಯನ್ನು ರನ್​ಔಟ್ ಮಾಡಿದ ಜಿತೇಶ್​ ಶರ್ಮಾ ನಿಂದಿಸಿದ ಅಭಿಮಾನಿಗಳು!

M S Dhoni: ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಬುಧವಾರ (ಮೇ 1) ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 7 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿದೆ. ಈ ಋತುವಿನಲ್ಲಿ ಪಂಜಾಟ್​​ನ ನಾಲ್ಕನೇ ಗೆಲುವಿನ ವೇಳೆ ಜಿತೇಶ್ ಶರ್ಮಾಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಆದಾಗ್ಯೂ, ಸಿಎಸ್​ಕೆ ಬ್ಯಾಟಿಂಗ್ ಸಮಯದಲ್ಲಿ ಧೋನಿಯನ್ನು ರನ್ ಔಟ್ ಮಾಡಿದ್ದರು. ಇದು ಧೋನಿಯ ಅಭಿಮಾನಿಗಳಿಗೆ ಕೋಪ ತರಿಸಿತ್ತು.

VISTARANEWS.COM


on

M S Dhoni
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL 2024) ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಪಂದ್ಯದ ನಂತರ ಪಂಜಾಬ್ ಕಿಂಗ್ಸ್ (PBKS) ವಿಕೆಟ್ ಕೀಪರ್ ಬ್ಯಾಟರ್​​ ಜಿತೇಶ್ ಶರ್ಮಾ ಸೋಶಿಯಲ್ ಮೀಡಿಯಾಗಳ ಮೂಲಕ ಬೈಗುಳಗಳನ್ನು ಕೇಳಬೇಕಾಯಿತು. ಅದಕ್ಕೆ ಕಾರಣ ಅವರು ಮಹೇಂದ್ರ ಸಿಂಗ್ ಧೋನಿಯನ್ನು (MS Dhoni) ರನ್​ಔಟ್ ಮಾಡಿರುವುದು. ಜತೇಶ್​ ಅವರ ಇನ್​ಸ್ಟಾಗ್ರಾಮ್​ ಖಾತೆ ಮೂಲಕ ಹಲವಾರು ನಿಂದನಾತ್ಮಕ ಕಾಮೆಂಟ್​ಗಳನ್ನು ಪೋಸ್ಟ್ ಮಾಡಿದ್ದಾರೆ.

ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಬುಧವಾರ (ಮೇ 1) ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 7 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿದೆ. ಈ ಋತುವಿನಲ್ಲಿ ಪಂಜಾಟ್​​ನ ನಾಲ್ಕನೇ ಗೆಲುವಿನ ವೇಳೆ ಜಿತೇಶ್ ಶರ್ಮಾಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಆದಾಗ್ಯೂ, ಸಿಎಸ್​ಕೆ ಬ್ಯಾಟಿಂಗ್ ಸಮಯದಲ್ಲಿ ಧೋನಿಯನ್ನು ರನ್ ಔಟ್ ಮಾಡಿದ್ದರು. ಇದು ಧೋನಿಯ ಅಭಿಮಾನಿಗಳಿಗೆ ಕೋಪ ತರಿಸಿತ್ತು.

ಜಿತೇಶ್ ಶರ್ಮಾಗೆ ಧೋನಿ ಅಭಿಮಾನಿಗಳಿಂದ ಟಾರ್ಗೆಟ್

ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ರಲ್ಲಿ ಎಂಎಸ್ ಧೋನಿ ತಮ್ಮ ವಿಕೆಟ್ ಕಳೆದುಕೊಳ್ಳದ ಗಮನಾರ್ಹ ಸಾಧನೆಯನ್ನು ಪಂಜಾಬ್ ವಿರುದ್ಧ ಕಳೆದುಕೊಂಡರು. ಚೆಂಡು ಥರ್ಡ್​ ಮ್ಯಾನ್​​ ಕಡೆಗೆ ಹೋದ ನಂತರ ಧೋನಿ ಅಪಾಯಕಾರಿ ಎರಡನೇ ರನ್ ಗಳಿಸಲು ಪ್ರಯತ್ನಿಸಿದರು. ಹರ್ಷಲ್ ಪಟೇಲ್ ಆರಂಭದಲ್ಲಿ ತಪ್ಪಾಗಿ ಫೀಲ್ಡಿಂಗ್ ಮಾಡಿದರು. ಆದರೆ ಬೇಗನೆ ಚೇತರಿಸಿಕೊಂಡರು ಮತ್ತು ಚೆಂಡನ್ನು ಬ್ಯಾಟ್ಸ್ ಮನ್ ನ ತುದಿಗೆ ಎಸೆದರು. ಚೆನ್ನೈ ವಿಕೆಟ್ ಕೀಪರ್ ಧೋನಿ ಕ್ರೀಸ್​ ತಲುಪುವ ಮೊದಲೇ ಜಿತೇಶ್​ ಬೇಲ್ಸ್ ಎಗರಿಸಿದರು. ಸಿಎಸ್​ಕೆ ಮಾಜಿ ನಾಯಕ 11 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 14 ರನ್ ಗಳಿಸಿ ಔಟಾದರು. ಋತುರಾಜ್ ಗಾಯಕ್ವಾಡ್ ನೇತೃತ್ವದ ತಂಡವು 20 ಓವರ್ ಗಳಲ್ಲಿ 162 ರನ್ ಗಳಿಸಲು ಮಾತ್ರ ಯಶಸ್ವಿಯಾಯಿತು.

ಧೋನಿ ರನೌಟ್ ಅವರ ನಿಷ್ಠಾವಂತ ಅಭಿಮಾನಿಗಳಲ್ಲಿ ನಿರಾಶೆಯನ್ನು ಹುಟ್ಟುಹಾಕಿತು. ಕೆಲವರು ಹತಾಶೆಯನ್ನು ವ್ಯಕ್ತಪಡಿಸಿದರೆ, ಇತರರು ಜಿತೇಶ್ ಶರ್ಮಾ ಅವರ ಪಾತ್ರಕ್ಕಾಗಿ ಟ್ರೋಲ್ ಮಾಡಿದರು. ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಧೋನಿಯನ್ನು ಔಟ್ ಮಾಡುವುದನ್ನು ನೋಡಿದ ಅಭಿಮಾನಿಗಳು ನಾನಾ ರೀತಿ ಪ್ರತಿಕ್ರಿಯಿಸಿದರು.

“ನೀವು ವಿಶ್ವಕಪ್​ಗೆ ಆಯ್ಕೆಯಾಗದಿರುವುದು ಒಳ್ಳೆಯದು, ನೀವು ತಲಾ ಅವರನ್ನು ರನ್ ಔಟ್ ಮಾಡಿದ್ದೀರಿ, ಒಂದು ರನ್ ಏನು ವ್ಯತ್ಯಾಸವನ್ನುಂಟು ಮಾಡುತ್ತದೆ?” ಎಂದು ಬಳಕೆದಾರರೊಬ್ಬರು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: KL Rahul : ವಿಶ್ವ ಕಪ್​ ತಂಡದಲ್ಲಿ ರಾಹುಲ್​ಗೆ ಸ್ಥಾನ ನೀಡದಿರುವ ಬಗ್ಗೆ ಸ್ಪಷ್ಟನೆ ನೀಡಿದ ಆಯ್ಕೆಗಾರ ಅಜಿತ್ ಅಗರ್ಕರ್​​

“ಗೆಳೆಯ, ಜನರು ಅವನಿಗಾಗಿ ಪಂದ್ಯಗಳನ್ನು ನೋಡುತ್ತಾರೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ನಾವು ಎಷ್ಟು ಕೆಟ್ಟದಾಗಿ ಭಾವಿಸಬೇಕು, ನೀವು ಅವನನ್ನು ರನ್ ಔಟ್ ಮಾಡಿದ್ದೀರಿ. ಇದಲ್ಲದೆ, ಅವನ ಕಾಲಿಗೆ ಗಾಯವಾಗಿದೆ. ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ, ಗೆಳೆಯ” ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

163 ರನ್​ಗಳ ಗುರಿ ಬೆನ್ನತ್ತಿದ ಸ್ಯಾಮ್ ಕರ್ರನ್ ಪಡೆ 17.5 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಜಾನಿ ಬೈರ್​ಸ್ಟೋವ್​ 30 ಎಸೆತಗಳಲ್ಲಿ 46 ರನ್ ಗಳಿಸಿದರೆ, ರಿಲೀ ರೊಸ್ಸೌ 23 ಎಸೆತಗಳಲ್ಲಿ 43 ರನ್ ಗಳಿಸಿದರು. ಈ ಗೆಲುವಿನೊಂದಿಗೆ ಪಿಬಿಕೆಎಸ್ ಎಂಟು ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್​​ನಲ್ಲಿ ಏಳನೇ ಸ್ಥಾನಕ್ಕೆ ಏರಿದರೆ, ಸಿಎಸ್ಕೆ 10 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ನಾವು ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾಗಿದೆ: ಸ್ಯಾಮ್ ಕರ್ರನ್


ಪಿಬಿಕೆಎಸ್ ಸ್ಟ್ಯಾಂಡ್-ಇನ್ ನಾಯಕ ಸ್ಯಾಮ್ ಕರ್ರನ್ ಚೆನ್ನೈನ ಗೆಲುವಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಐಪಿಎಲ್ 2024 ರಲ್ಲಿ ಪ್ಲೇಆಫ್ ಸ್ಥಾನ ಪಡೆಯಲು ತಂಡವು ಉಳಿದ ಎಲ್ಲಾ ಪಂದ್ಯಗಳಲ್ಲಿ ಗೆಲುವುಗಳನ್ನು ಪಡೆಯಲು ಬಯಸುತ್ತದೆ ಎಂದು ಅವರು ಒತ್ತಿ ಹೇಳಿದರು.

ತುಂಬಾ ಸಂತೋಷವಾಗಿದೆ. ಪ್ರತಿ ಬಾರಿ ನೀವು ಚೆನ್ನೈಗೆ ಬಂದು ಎರಡು ಗೆಲುವುಗಳನ್ನು ಪಡೆದಾಗ ಯಾವಾಗಲೂ ವಿಶೇಷ ಭಾವನೆ ಬರುತ್ತದೆ. ಕಳೆದ ವರ್ಷದಂತೆ, ನಾವು ನಮ್ಮ ತವರು ಪಂದ್ಯಗಳಲ್ಲಿ ಬಹಳಷ್ಟು ಸೋತಿದ್ದೇವೆ ಮತ್ತು ಆ ಮೇಲೆ ಗೆದ್ದಿದ್ದೇವೆ ಎಂದು ಹೇಳಿದ್ದಾರೆ.

Continue Reading

ದೇಶ

Rahul Gandhi: ಅಮೇಥಿಯಿಂದ ರಾಹುಲ್‌ ಗಾಂಧಿ, ರಾಯ್‌ಬರೇಲಿಯಲ್ಲಿ ಪ್ರಿಯಾಂಕಾ ವಾದ್ರಾ ಸ್ಪರ್ಧಿಸಲ್ಲ; ಯಾರಿಗೆ ಮಣೆ?

Rahul Gandhi: ಅಮೇಥಿ ಹಾಗೂ ರಾಯ್‌ಬರೇಲಿಯಲ್ಲಿ ಮೇ 17ರಂದು ನಡೆಯುವ ಐದನೇ ಹಂತದ ಮತದಾನದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಮೇ 3 ಕೊನೆಯ ದಿನವಾಗಿದೆ. ನಾಮಪತ್ರ ಸಲ್ಲಿಸಲು ಇನ್ನೂ ಕೆಲವೇ ಗಂಟೆಗಳು ಬಾಕಿ ಇವೆ. ಇಷ್ಟಾದರೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಸ್ಪರ್ಧಿಸಲ್ಲ ಎಂದು ತಿಳಿದುಬಂದಿದೆ. ಹಾಗಾಗಿ, ಯಾರಿಗೆ ಮಣೆ ಹಾಕಲಾಗುತ್ತದೆ ಎಂಬ ಕುತೂಹಲ ಜಾಸ್ತಿಯಾಗಿದೆ.

VISTARANEWS.COM


on

Rahul Gandhi
Koo

ನವದೆಹಲಿ: ಉತ್ತರ ಪ್ರದೇಶದ ಅಮೇಥಿ (Amethi) ಹಾಗೂ ರಾಯ್‌ಬರೇಲಿಯಲ್ಲಿ (Raebareli) ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ (Rahul Gandhi) ಹಾಗೂ ಪ್ರಿಯಾಂಕಾ ವಾದ್ರಾ (Priyanka Vadra) ಸ್ಪರ್ಧೆ ಕುರಿತ ವರದಿಗಳು ಕೇಳಿಬರುತ್ತಲೇ ಇವೆ. ಗಾಂಧಿ ಕುಟುಂಬದ ಅತ್ಯಾಪ್ತ ಕ್ಷೇತ್ರಗಳಲ್ಲಿ ಇಬ್ಬರೂ ಸ್ಪರ್ಧಿಸುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ಎರಡೂ ಕ್ಷೇತ್ರಗಳಲ್ಲಿ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಸ್ಪರ್ಧಿಸದಿರಲು ತೀರ್ಮಾನಿಸಿದ್ದಾರೆ. ಅಮೇಥಿ ಹಾಗೂ ರಾಯ್‌ಬರೇಲಿಯಲ್ಲಿ ಮೇ 17ರಂದು ನಡೆಯುವ ಐದನೇ ಹಂತದ ಮತದಾನದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಮೇ 3 ಕೊನೆಯ ದಿನವಾಗಿದೆ. ನಾಮಪತ್ರ ಸಲ್ಲಿಸಲು ಇನ್ನೂ ಕೆಲವೇ ಗಂಟೆಗಳು ಬಾಕಿ ಇವೆ. ಇಷ್ಟಾದರೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಸ್ಪರ್ಧಿಸಲ್ಲ ಎಂದು ತಿಳಿದುಬಂದಿದೆ.

ರಾಹುಲ್‌ ಗಾಂಧಿ ಅವರು ಕೇರಳದ ವಯನಾಡು ಲೋಕಸಭೆ ಕ್ಷೇತ್ರದಿಂದ ಎರಡನೇ ಬಾರಿ ಸ್ಪರ್ಧಿಸುತ್ತಿದ್ದು, ಏಪ್ರಿಲ್‌ 26ರಂದು ಮತದಾನ ನಡೆದಿದೆ. ಇನ್ನು ರಾಯ್‌ಬರೇಲಿಯಿಂದ ಸ್ಪರ್ಧಿಸುತ್ತಿದ್ದ ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಈ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಅಥವಾ ಅವರ ಪತಿ ರಾಬರ್ಟ್‌ ವಾದ್ರಾ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈಗ ಪ್ರಿಯಾಂಕಾ ವಾದ್ರಾ ಅವರು ರಾಯ್‌ಬರೇಲಿಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿದುಬಂದಿದೆ.

Rahul Gandhi And Priyanka Vadra

ರಾಹುಲ್‌ ಗಾಂಧಿ ಅವರು ಅಮೇಥಿಯಿಂದ 2004ರಿಂದಲೂ ಸ್ಪರ್ಧಿಸಿ, ಗೆಲುವು ಸಾಧಿಸುತ್ತಿದ್ದರು. ಆದರೆ, 2019ರಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಅವರು ಸೋಲನುಭವಿಸಿದ ಕಾರಣ ವಯನಾಡು ಅವರ ಲೋಕಸಭೆ ಕ್ಷೇತ್ರವಾಗಿದೆ. ಈ ಬಾರಿಯೂ ರಾಹುಲ್‌ ಗಾಂಧಿ ಅವರು ಅಮೇಥಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ರಾಯ್‌ಬರೇಲಿಯಲ್ಲಿ ಸೋನಿಯಾ ಗಾಂಧಿ ಅವರು ಕೂಡ 2004ರಿಂದ ಸ್ಪರ್ಧಿಸುತ್ತಿದ್ದರು. ಇವರು ಈಗ ರಾಜ್ಯಸಭೆಗೆ ಆಯ್ಕೆಯಾದ ಕಾರಣ ರಾಯ್‌ಬರೇಲಿಯಲ್ಲಿ ಯಾರು ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲ ಮುಂದುವರಿದಿದೆ.

ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ತೆರಳದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಶ್ರೀರಾಮನ ವಿರೋಧಿ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಇದು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ರಾಮಮಂದಿರಕ್ಕೆ ಭೇಟಿ ನೀಡುವ ಮೂಲಕ ಕಾಂಗ್ರೆಸ್‌ ರಾಮಮಂದಿರ ವಿರೋಧಿ ಅಲ್ಲ ಎಂಬ ಸಂದೇಶ ರವಾನಿಸುವ ಉದ್ದೇಶವೂ ಇತ್ತು. ನಾಮಪತ್ರ ಸಲ್ಲಿಕೆಗೂ ಮುನ್ನ ರಾಮಮಂದಿರಕ್ಕೆ ಭೇಟಿ ನೀಡುವ ಯೋಜನೆ ಇತ್ತು. ಈಗ ಇದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪಿ ಬ್ರಿಜ್‌ ಭೂಷಣ್‌ಗಿಲ್ಲ ಟಿಕೆಟ್‌; ಮಗನಿಗೆ ಮಣೆ, ರಾಯ್‌ಬರೇಲಿಗೂ ಅಭ್ಯರ್ಥಿ ಘೋಷಿಸಿದ ಬಿಜೆಪಿ

Continue Reading

ಕ್ರೀಡೆ

Virat kohli : ಕೊಹ್ಲಿಯ ಸ್ಟ್ರೈಕ್​ರೇಟ್​ ಕುರಿತ ಪ್ರಶ್ನೆಗೆ ರೋಹಿತ್​, ಅಗರ್ಕರ್​ ಪ್ರತಿಕ್ರಿಯೆ ಹೀಗಿತ್ತು…

Virat kohli: ವಿರಾಟ್ ಕೊಹ್ಲಿ ಎಲ್ಲಾ ಸ್ವರೂಪಗಳಲ್ಲಿ ದೊಡ್ಡ ಮಟ್ಟದ ಸ್ಕೋರ್ ಮಾಡುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಅವರ ಸ್ಟ್ರೈಕ್ ರೇಟ್​ ಕಾರಣಕ್ಕೆ ಟೀಕೆಗಳನ್ನು ಎದುರಿಸುತ್ತಿದ್ದಾರೆ. ವರದಿಗಳ ಪ್ರಕಾರ ಆಯ್ಕೆದಾರರು ಈ ವರ್ಷದ ಆರಂಭದಲ್ಲಿ ಅವರನ್ನು ಟಿ20 ಐ ತಂಡಕ್ಕೆ ಮರಳಿ ಕರೆಸಿಕೊಳ್ಳುವ ಮೊದಲು ತಂಡದ ಬೇಡಿಕೆಗಳಿಗೆ ಅನುಗುಣವಾಗಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಲು ಹೇಳಲಾಗಿತ್ತು. ಅದೇ ಷರತ್ತಿನ ಮೇರೆಗೆ ಅವರಿಗೆ ಅವಕಾಶ ನೀಡಲಾಗಿದೆ.

VISTARANEWS.COM


on

Virat kohli
Koo

ನವದೆಹಲಿ: ಮುಂಬರುವ ಐಸಿಸಿ ಟಿ20 ವಿಶ್ವಕಪ್ 2024ಗಾಗಿ (T20 World Cup) 15 ಸದಸ್ಯರ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ (Virat kohli) ಸೇರ್ಪಡೆಗೆ ಏನು ಕಾರಣ ಎಂಬುದನ್ನು ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ (Ajit Agarkar) ವಿವರಿಸಿದ್ದಾರೆ. ಯಾಕೆಂದರೆ ಕೊಹ್ಲಿಯ ಸ್ಟ್ರೈಕ್​ರೇಟ್​​ ಬಗ್ಗೆ ಜೋರು ಚರ್ಚೆ ನಡೆಯುತ್ತಿರುವ ಜತೆಗೆ ಅವರ ಆಯ್ಕೆಯನ್ನು ಹಲವರು ಪ್ರಶ್ನಿಸಿದ್ದಾರೆ. ಹೀಗಾಗಿ ಅಗರ್ಕರ್ ಉತ್ತರ ನೀಡಿದ್ದಾರೆ.

ವಿರಾಟ್ ಕೊಹ್ಲಿ ಎಲ್ಲಾ ಸ್ವರೂಪಗಳಲ್ಲಿ ದೊಡ್ಡ ಮಟ್ಟದ ಸ್ಕೋರ್ ಮಾಡುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಅವರ ಸ್ಟ್ರೈಕ್ ರೇಟ್​ ಕಾರಣಕ್ಕೆ ಟೀಕೆಗಳನ್ನು ಎದುರಿಸುತ್ತಿದ್ದಾರೆ. ವರದಿಗಳ ಪ್ರಕಾರ ಆಯ್ಕೆದಾರರು ಈ ವರ್ಷದ ಆರಂಭದಲ್ಲಿ ಅವರನ್ನು ಟಿ20 ಐ ತಂಡಕ್ಕೆ ಮರಳಿ ಕರೆಸಿಕೊಳ್ಳುವ ಮೊದಲು ತಂಡದ ಬೇಡಿಕೆಗಳಿಗೆ ಅನುಗುಣವಾಗಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಲು ಹೇಳಲಾಗಿತ್ತು. ಅದೇ ಷರತ್ತಿನ ಮೇರೆಗೆ ಅವರಿಗೆ ಅವಕಾಶ ನೀಡಲಾಗಿದೆ.

ಅಂದ ಹಾಗೆ ಈ ಪ್ರಶ್ನೆಯನ್ನು ರೋಹಿತ್​ ಶರ್ಮಾ ಅವರಿಗೂ ಕೇಳಲಾಗಿತ್ತು. ಆದರೆ, ಅವರು ಜೋರಾಗಿ ನಗುವ ಮೂಲಕ ಇದೊಂದು ಚರ್ಚೆಯ ವಿಷಯವೇ ಅಲ್ಲ ಎಂಬುದಾಗಿ ಹೇಳಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ರಲ್ಲಿ, ಬಲಗೈ ಬ್ಯಾಟರ್​ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಆದರೆ ಸ್ಟ್ರೈಕ್ ರೇಟ್ ಟೀಕೆಗಳು ಅವರ ಬಗ್ಗೆ ಟೀಕೆ ಮಾಡಲು ಅವಕಾಶ ಕೊಟ್ಟಿದೆ. 10 ಪಂದ್ಯಗಳಲ್ಲಿ 1 ಶತಕ ಹಾಗೂ 4 ಅರ್ಧಶತಕಗಳ ನೆರವಿನಿಂದ 500 ರನ್ ಗಳಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಸ್ಪರ್ಧೆಯಲ್ಲಿ ಋತುರಾಜ್ ಗಾಯಕ್ವಾಡ್ ಮಾತ್ರ ಅವರಿಗಿಂತ ಹೆಚ್ಚು ಸ್ಕೋರ್ ಮಾಡಿದವರು.

ಕೊಹ್ಲಿಯನ್ನು ಸಮರ್ಥಿಸಿಕೊಂಡ ಅಜಿತ್ ಅಗರ್ಕರ್

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ತಂಡದಲ್ಲಿದ್ದಾರೆ. ಉತ್ತಮ ಇನ್ನಿಂಗ್ಸ್ ನಿರ್ಮಿಸಲು ಬಯಸುವ ಮತ್ತು ಅನೇಕ ಆಧುನಿಕ ಟಿ 20 ಬ್ಯಾಟರ್​ಗಳಂತೆ ಆರಂಭದಿಂದಲೇ ವೇಗವಾಗಿ ಸ್ಕೋರ್ ಮಾಡಲು ಪ್ರಾರಂಭಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೊಹ್ಲಿಯ ಅಗತ್ಯವಿಲ್ಲ ಎಂದು ಅನೇಕರ ವಾದ ಮಾಡಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ಸ್ಟ್ರೈಕ್ ರೇಟ್ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅಜಿತ್ ಅಗರ್ಕರ್, ಇದು ಆಯ್ಕೆದಾರರು ಮತ್ತು ತಂಡದ ಮ್ಯಾನೇಜ್ಮೆಂಟ್ ನಡುವೆ ಚರ್ಚೆಯ ವಿಷಯವೂ ಅಲ್ಲ ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ ಅವರ ಅನುಭವವು ತಂಡಕ್ಕೆ ದೊಡ್ಡ ಉತ್ತೇಜನ ನೀಡಲಿದೆ ಎಂದು ಭಾರತದ ಮಾಜಿ ವೇಗಿ ಗಮನಸೆಳೆದರು.

ಇದನ್ನೂ ಓದಿ: KL Rahul : ವಿಶ್ವ ಕಪ್​ ತಂಡದಲ್ಲಿ ರಾಹುಲ್​ಗೆ ಸ್ಥಾನ ನೀಡದಿರುವ ಬಗ್ಗೆ ಸ್ಪಷ್ಟನೆ ನೀಡಿದ ಆಯ್ಕೆಗಾರ ಅಜಿತ್ ಅಗರ್ಕರ್​​

“ನಾವು ಕೊಹ್ಲಿಯ ಸ್ಟ್ರೈಕ್ ರೇಟ್ ಬಗ್ಗೆ ಚರ್ಚಿಸುತ್ತಿಲ್ಲ. ಐಪಿಎಲ್ ಮತ್ತು ಅಂತಾರರಾಷ್ಟ್ರೀಯ ಕ್ರಿಕೆಟ್ ನಡುವೆ ವ್ಯತ್ಯಾಸವಿದೆ. ನಿಮಗೆ ಅನುಭವ ಬೇಕು. ನಾವು ತಂಡದಲ್ಲಿ ಸಾಕಷ್ಟು ಸಮತೋಲನ ಹೊಂದಿದ್ದೇವೆ. ಐಪಿಎಲ್​​ನಲ್ಲಿ ಏನಾಗುತ್ತಿದೆ ಎಂಬುದನ್ನು ನೀವು ನೋಡುತ್ತೀರಿ. ಸಕಾರಾತ್ಮಕತೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕಾಗುತ್ತದೆ. ವಿಶ್ವಕಪ್ ಪಂದ್ಯದ ಒತ್ತಡವೇ ಬೇರೆ. ಹೀಗಾಗಿ ವಿರಾಟ್ ಕೊಹ್ಲಿ ಅವರ ಸ್ಟ್ರೈಕ್ ರೇಟ್ ಬಗ್ಗೆ ನಡೆದ ಮಾತುಕತೆಗಳನ್ನು ಅಜಿತ್ ಅಗರ್ಕರ್ ತಳ್ಳಿಹಾಕಿದ್ದಾರೆ.

ಕಳೆದ ಆವೃತ್ತಿಯ ಟಿ20 ವಿಶ್ವಕಪ್​​ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅವರು 6 ಪಂದ್ಯಗಳಲ್ಲಿ ನಾಲ್ಕು ಅರ್ಧಶತಕಗಳ ಸಹಾಯದಿಂದ 296 ರನ್ ಗಳಿಸಿದ್ದರು. ಸುಮಾರು 100 ರ ಅದ್ಭುತ ಸರಾಸರಿ ಹೊಂದಿದ್ದರು. ಮುಂಬರುವ ವಿಶ್ವಕಪ್​​ನಲ್ಲಿಯೂ ಸ್ಟಾರ್ ಬ್ಯಾಟರ್​​ ತಮ್ಮ ಪ್ರದರ್ಶನವನ್ನು ಪುನರಾವರ್ತಿಸುತ್ತಾರೆ ಎಂದು ಭಾರತ ತಂಡ ಆಶಿಸುತ್ತಿದೆ.

Continue Reading
Advertisement
Tax Returns
ಪ್ರಮುಖ ಸುದ್ದಿ3 mins ago

Tax Returns: ಟ್ಯಾಕ್ಸ್‌ ರಿಟರ್ನ್ಸ್‌ ಸಲ್ಲಿಸದ 5 ಲಕ್ಷ ಜನರ ಸಿಮ್‌ ಕಾರ್ಡ್‌ ಶೀಘ್ರವೇ ಬಂದ್!

Dr Vinayaka Prasanna passed away
ಬಳ್ಳಾರಿ25 mins ago

Dr Vinayaka Prasanna: ಡಾ.ವಿನಾಯಕ ಪ್ರಸನ್ನ ವಿಧಿವಶ

Sri Siddhivinayaka Swami SrimanMaharathotsava in Ripponpet
ಶಿವಮೊಗ್ಗ27 mins ago

Shivamogga News: ವಿಜೃಂಭಣೆಯ ರಿಪ್ಪನ್‌ಪೇಟೆ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ರಥೋತ್ಸವ

Minister Santosh Lad latest statement in Dharwad
ಕರ್ನಾಟಕ30 mins ago

Lok Sabha Election 2024: ಮಹಾರಾಷ್ಟ್ರ ಸಿಎಂ ಕರೆಸಿ ಕನ್ನಡಿಗರಿಗೆ ಅವಮಾನ ಮಾಡಿದ ಜೋಶಿ: ಸಂತೋಷ್‌ ಲಾಡ್‌

Voting Awareness for Passengers at Hosapete Railway Station
ವಿಜಯನಗರ31 mins ago

Lok Sabha Election 2024: ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮತದಾನ ಜಾಗೃತಿ

BJP workers meeting in Banavasi
ರಾಜಕೀಯ33 mins ago

Lok Sabha Election 2024: ಕೇಂದ್ರದ ಸಾಧನೆಗಳನ್ನು ಮನೆ ಮನೆಗೂ ಪರಿಚಯಿಸಿ: ವಿ. ಸುನೀಲ್ ಕುಮಾರ್

Yakshagana performance for voting awareness in Uttara Kannada district on May 4
ಉತ್ತರ ಕನ್ನಡ34 mins ago

Lok Sabha Election 2024: ಉ.ಕ. ಜಿಲ್ಲೆಯಲ್ಲಿ ಮತದಾನ ಜಾಗೃತಿಗಾಗಿ ಮೇ 4 ರಂದು ಯಕ್ಷಗಾನ

Reliance Retail Tira Beauty launch new brand Nails Our Way
ದೇಶ34 mins ago

Reliance Retail: ರಿಲಯನ್ಸ್ ರಿಟೇಲ್‌ನ ಟಿರಾ ಬ್ಯೂಟಿಯಿಂದ ಹೊಸ ಬ್ರ್ಯಾಂಡ್ ‘ನೈಲ್ಸ್ ಅವರ್ ವೇ’ ಅನಾವರಣ

M S Dhoni
ಪ್ರಮುಖ ಸುದ್ದಿ39 mins ago

M S Dhoni : ಧೋನಿಯನ್ನು ರನ್​ಔಟ್ ಮಾಡಿದ ಜಿತೇಶ್​ ಶರ್ಮಾ ನಿಂದಿಸಿದ ಅಭಿಮಾನಿಗಳು!

Rahul Gandhi
ದೇಶ55 mins ago

Rahul Gandhi: ಅಮೇಥಿಯಿಂದ ರಾಹುಲ್‌ ಗಾಂಧಿ, ರಾಯ್‌ಬರೇಲಿಯಲ್ಲಿ ಪ್ರಿಯಾಂಕಾ ವಾದ್ರಾ ಸ್ಪರ್ಧಿಸಲ್ಲ; ಯಾರಿಗೆ ಮಣೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ16 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

ಟ್ರೆಂಡಿಂಗ್‌