Pune Porsche Crash : ಪೋರ್ಶೆ ಕಾರು ಗುದ್ದಿಸಿ ಇಬ್ಬರ ಸಾವಿಗೆ ಕಾರಣನಾದ ಬಾಲಕನ ಅಪ್ಪ, ಅಜ್ಜನಿಗೆ ಜಾಮೀನು - Vistara News

ಪ್ರಮುಖ ಸುದ್ದಿ

Pune Porsche Crash : ಪೋರ್ಶೆ ಕಾರು ಗುದ್ದಿಸಿ ಇಬ್ಬರ ಸಾವಿಗೆ ಕಾರಣನಾದ ಬಾಲಕನ ಅಪ್ಪ, ಅಜ್ಜನಿಗೆ ಜಾಮೀನು

Pune Porsche Crash : ಕುಡಿದ ಮತ್ತಿನಲ್ಲಿ 17 ವರ್ಷದ ಬಾಲಕ ಚಲಾಯಿಸುತ್ತಿದ್ದ ಪೋರ್ಷೆ ಕಾರು ಬೈಕ್ ಹೋಗುದ್ದಿ ಇಬ್ಬರು ಸಾಫ್ಟ್ ವೇರ್ ಎಂಜಿನಿಯರ್ ಗಳಿಗೆ ಡಿಕ್ಕಿ ಹೊಡೆದಿತ್ತು. ಈ ಪ್ರಕರಣದಲ್ಲಿ ಅಪಹರಣ ಮತ್ತು ಅಕ್ರಮ ಬಂಧನ ಪ್ರಕರಣದಲ್ಲಿ ತನ್ನ ಕಕ್ಷಿದಾರರಿಗೆ ನ್ಯಾಯಾಲಯ ಜಾಮೀನು ನೀಡಿದೆ ಎಂದು ಪ್ರತಿವಾದಿ ವಕೀಲ ಪ್ರಶಾಂತ್ ಪಾಟೀಲ್ ಮಾಹಿತಿ ನೀಡಿದರು.

VISTARANEWS.COM


on

Pune Porsche Crash
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪುಣೆ: ಐಷಾರಾಮಿ ಪೋರ್ಷೆ ಕಾರು ಅಪಘಾತದ (Pune Porsche Crash) ಆರೋಪಿಯಾಗಿರುವ ಬಾಲಕನ ತಂದೆ ಮತ್ತು ಅಜ್ಜನಿಗೆ ಪುಣೆ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ. ಅವರಿಬ್ಬರನ್ನು ಕುಟುಂಬದ ಚಾಲಕನನ್ನು ಅಪಹರಿಸಿದ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಮೇ ಅಂತ್ಯಕ್ಕೆ 17 ವರ್ಷದ ಬಾಲಕನ ತಂದೆ, ಮಹಾರಾಷ್ಟ್ರದ ಬಿಲ್ಡರ್ ವಿಶಾಲ್ ಅಗರ್ವಾಲ್ ಮತ್ತು ಆತನ ಅಜ್ಜನಿಗೆ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯ ಜಾಮೀನು ನೀಡಿದೆ.

ಪೊಲೀಸರ ಪ್ರಕಾರ, ಬಾಲಕನ ತಂದೆ ಮತ್ತು ಅಜ್ಜ ಮೇ 19 ರಂದು ರಾತ್ರಿ 11 ಗಂಟೆಗೆ ಪೊಲೀಸ್ ಠಾಣೆಯಿಂದ ಹೊರಟ ನಂತರ ತಮ್ಮ ಕುಟುಂಬ ಕಾರು ಚಾಲಕನನ್ನು ಅಪಹರಿಸಿದ್ದರು. ಅವರನ್ನು ತಮ್ಮ ಬಂಗಲೆಯಲ್ಲಿ ಇಟ್ಟುಕೊಂಡು ಅಪಘಾತ ಸಂಭವಿಸಿದಾಗ ನಾನೇ ಕಾರು ಓಡಿಸುತ್ತಿದ್ದೆ ಎಂದು ಒಪ್ಪಿಕೊಳ್ಳುವಂತೆ ಬೆದರಿಕೆ ಒಡ್ಡಿದ್ದರು. ಈ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು.

ಕುಡಿದ ಮತ್ತಿನಲ್ಲಿ 17 ವರ್ಷದ ಬಾಲಕ ಚಲಾಯಿಸುತ್ತಿದ್ದ ಪೋರ್ಷೆ ಕಾರು ಬೈಕ್ ಹೋಗುದ್ದಿ ಇಬ್ಬರು ಸಾಫ್ಟ್ ವೇರ್ ಎಂಜಿನಿಯರ್ ಗಳಿಗೆ ಡಿಕ್ಕಿ ಹೊಡೆದಿತ್ತು. ಈ ಪ್ರಕರಣದಲ್ಲಿ ಅಪಹರಣ ಮತ್ತು ಅಕ್ರಮ ಬಂಧನ ಪ್ರಕರಣದಲ್ಲಿ ತನ್ನ ಕಕ್ಷಿದಾರರಿಗೆ ನ್ಯಾಯಾಲಯ ಜಾಮೀನು ನೀಡಿದೆ ಎಂದು ಪ್ರತಿವಾದಿ ವಕೀಲ ಪ್ರಶಾಂತ್ ಪಾಟೀಲ್ ಮಾಹಿತಿ ನೀಡಿದರು.

ಇದನ್ನೂ ಓದಿ: NEET PG exam : ಮೋಸ ತಡೆಯಲು ಕ್ರಮ; ನೀಟ್ ಪರೀಕ್ಷೆ ಆರಂಭಕ್ಕೆ ಕೆಲವೇ ಗಂಟೆಗಳ ಮೊದಲು ಪ್ರಶ್ನೆ ಪತ್ರಿಕೆ ತಯಾರಿ!

ನನ್ನ ಕಕ್ಷಿದಾರರು ತನಿಖಾ ಸಂಸ್ಥೆಯೊಂದಿಗೆ ಸಹಕರಿಸುತ್ತಾರೆ. ನ್ಯಾಯಾಲಯದ ಕಠಿಣ ಷರತ್ತುಗಳಿಗೆ ಬದ್ಧರಾಗಿರುತ್ತಾರೆ ಎಂದು ಪಾಟೀಲ್ ಹೇಳಿದ್ದಾರೆ. ಬಾಲಾಪರಾಧಿ ನ್ಯಾಯ ಕಾಯ್ದೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮೇ 21 ರಂದು ಬಂಧಿಸಲ್ಪಟ್ಟ ಅಗರ್ವಾಲ್​ಗೆ ಕಳೆದ ತಿಂಗಳು ನ್ಯಾಯಾಲಯ ಜಾಮೀನು ನೀಡಿತ್ತು. ಪೋಷಕರಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲವಾದ ಕಾರಣ ಬಿಲ್ಡರ್ ವಿರುದ್ಧ ಮೋಟಾರು ವಾಹನ ಕಾಯ್ದೆ (ಎಂವಿಎ) ಮತ್ತು ಬಾಲನ್ಯಾಯ ಕಾಯ್ದೆ (ಜೆಜೆಎ) ಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜೂನ್ 25 ರಂದು, ಬಾಂಬೆ ಹೈಕೋರ್ಟ್ ಬಾಲಕನನ್ನು ವೀಕ್ಷಣಾ ಗೃಹದಿಂದ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿತು. ಅವನ ಬಂಧನದ ಬಗ್ಗೆ ಬಾಲನ್ಯಾಯ ಮಂಡಳಿಯ (ಜೆಜೆಬಿ) ಆದೇಶವು ಕಾನೂನುಬಾಹಿರವಾಗಿದೆ ಎಂದು ಹೇಳಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Rohit Sharma : ವಾಂಖೆಡೆ ಸ್ಟೇಡಿಯಮ್​ನಲ್ಲಿ ಡಾನ್ಸ್ ಮಾಡಿದ ರೋಹಿತ್ ಶರ್ಮಾ

Rohit Sharma : ದ್ರಾವಿಡ್ ಮತ್ತು ಕೊಹ್ಲಿ ತಮ್ಮ ಧ್ವನಿಯಲ್ಲಿ ಸಂಭ್ರಮಿಸುತ್ತಿದ್ದರು, ಅಭಿಮಾನಿಗಳು ಭಾರತದ ತಂಡದ ಬಸ್ ಸುತ್ತಲೂ ಜಮಾಯಿಸಿದ್ದರು. ಭಾರತವು ಗುರುವಾರವೇ ಸ್ವದೇಶಕ್ಕೆ ಮರಳಿತ್ತು. ನವದೆಹಲಿಯಲ್ಲಿ ಇಳಿದು ನಂತರ ಮುಂಬೈಗೆ ಹಾರಿತು. ಭಾರತವು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತು ಮತ್ತು ನಂತರ ಅವರ ಆಚರಣೆಗಳಿಗಾಗಿ ಮುಂಬೈಗೆ ಹಾರಿತು.

VISTARANEWS.COM


on

Rohit Sharma
Koo

ಮುಂಬೈ: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಟಿ20 ವಿಶ್ವಕಪ್​ ವಿಜಯೋತ್ಸವ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ (Rohit Sharma) ‘ಚಕ್ ದೇ ಇಂಡಿಯಾ’ ಹಾಡಿಗೆ ನೃತ್ಯ ಮಾಡಿದ್ದಾರೆ. ಮರೀನ್ ಡ್ರೈವ್​​ನಲ್ಲಿ ಓಪನ್-ಟಾಪ್ ಬಸ್ ವಿಜಯ ಮೆರವಣಿಗೆಯ ನಂತರ ಭಾರತ ತಂಡವು ರಾತ್ರಿ 9 ಗಂಟೆ ಸುಮಾರಿಗೆ ವಾಂಖೆಡೆ ಕ್ರೀಡಾಂಗಣ ತಲುಪಿತು. ವಾಂಖೆಡೆ ಕ್ರೀಡಾಂಗಣವನ್ನು ತಲುಪಿದ ನಂತರ, ಶರ್ಮಾ ವಿರಾಟ್ ಕೊಹ್ಲಿಯನ್ನು ತಮ್ಮೊಂದಿಗೆ ಸ್ಟ್ಯಾಂಡ್​ ಕಡೆಗೆ ಎಳೆದುಕೊಂಡು ಹೋದರು.

ದೀರ್ಘ ದಿನದ ನಂತರ ಭಾರತ ಗುರುವಾರ ಸಂಜೆ ವಾಂಖೆಡೆ ಕ್ರೀಡಾಂಗಣ ತಲುಪಿತು. ಭಾರತ ತಂಡದ ಆಟಗಾರರು ಮುಂಜಾನೆ ನವದೆಹಲಿಗೆ ಬಂದಿಳಿದರು. ಅಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಮೋದಿ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಪಾಲ್ಗೊಂಡರು. ಔಪಚಾರಿಕತೆಗಳ ನಂತರ, ಭಾರತೀಯ ತಂಡವು ವಿಸ್ತಾರಾ ಏರ್​ಲೈನ್ಸ್​ ವಿಮಾನದಲ್ಲಿ ಮುಂಬೈಗೆ. ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ವಾಟರ್ ಸೆಲ್ಯೂಟ್ ನೊಂದಿಗೆ ಆಟಗಾರರನ್ನು ಸ್ವಾಗತಿಸಲಾಯಿತು.

ಇದನ್ನೂ ಓದಿ: India’s open-bus parade : ಭಾರತ ತಂಡದ ವಿಜಯೋತ್ಸವ ಮೆರವಣಿಗೆಯಲ್ಲಿ ಭದ್ರತಾ ವೈಫಲ್ಯ; ಬಸ್​​ನಲ್ಲಿದ್ದ ಆಟಗಾರರು ಜಸ್ಟ್​ ಮಿಸ್​​

ಮುಂಬೈನಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾದ ಕಾರಣ ತೆರೆದ ಬಸ್​​ನ ಮೆರವಣಿಗೆ ವಿಳಂಬವಾಯಿತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಮತ್ತು ಸೂರ್ಯಕುಮಾರ್ ಯಾದವ್ ಬಸ್​ನಲ್ಲಿ ಸಾಗುತ್ತಾ ಸಂಭ್ರಮಿಸಿದರು.

ದ್ರಾವಿಡ್ ಮತ್ತು ಕೊಹ್ಲಿ ತಮ್ಮ ಧ್ವನಿಯಲ್ಲಿ ಸಂಭ್ರಮಿಸುತ್ತಿದ್ದರು, ಅಭಿಮಾನಿಗಳು ಭಾರತದ ತಂಡದ ಬಸ್ ಸುತ್ತಲೂ ಜಮಾಯಿಸಿದ್ದರು. ಭಾರತವು ಗುರುವಾರವೇ ಸ್ವದೇಶಕ್ಕೆ ಮರಳಿತ್ತು. ನವದೆಹಲಿಯಲ್ಲಿ ಇಳಿದು ನಂತರ ಮುಂಬೈಗೆ ಹಾರಿತು. ಭಾರತವು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತು ಮತ್ತು ನಂತರ ಅವರ ಆಚರಣೆಗಳಿಗಾಗಿ ಮುಂಬೈಗೆ ಹಾರಿತು.

ಭಾರತವು ಸಂಜೆ 7 ಗಂಟೆಗೆ ತಮ್ಮ ಸಮಾರಂಭವನ್ನು ಪ್ರಾರಂಭಿಸುವ ನಿರೀಕ್ಷೆಯಿತ್ತು, ಆದರೆ ತಂಡವನ್ನು ಸ್ವಾಗತಿಸಲು ಬಂದ ಅಭಿಮಾನಿಗಳ ಸಂಖ್ಯೆಯಿಂದಾಗಿ ತಂಡವು ಮರೀನ್ ಡ್ರೈವ್ ಅನ್ನು ದಾಟಲು ಬಹಳ ಸಮಯ ತೆಗೆದುಕೊಂಡಿತು

Continue Reading

ದೇಶ

Mukesh Ambani: ಸೋನಿಯಾ ಗಾಂಧಿಯನ್ನು ಮಗನ ಮದುವೆಗೆ ಆಹ್ವಾನಿಸಿದ ಮುಕೇಶ್‌ ಅಂಬಾನಿ

Mukesh Ambani: ಜುಲೈ 12ರಂದು ಮುಂಬೈಯಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ನಡೆಯಲಿದೆ. ಅದಕ್ಕೆ ಮುನ್ನುಡಿಯಾಗಿ ಜುಲೈ 2ರಂದು ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಸುಮಾರು 50 ಬಡ ಜೋಡಿಗಳ ಸಾಮೂಹಿಕ ವಿವಾಹ ನೆರವೇರಿಸಿ ಮಾದರಿಯಾಗಿದ್ದಾರೆ. ಮುಂಬೈಯಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಫಾಲ್ಘರ್‌ನಲ್ಲಿ ಈ ಸಾಮೂಹಿಕ ವಿವಾಹ ನೆರವೇರಿದೆ. ಈಗ ಮುಕೇಶ್‌ ಅಂಬಾನಿ ಅವರು ದೇಶದ ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡುವಲ್ಲಿ ಬ್ಯುಸಿಯಾಗಿದ್ದಾರೆ.

VISTARANEWS.COM


on

Mukesh Ambani
Koo

ನವದೆಹಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (RIL) ಮುಖ್ಯಸ್ಥ, ದೇಶದ ಆಗರ್ಭ ಶ್ರೀಮಂತ ಮುಕೇಶ್‌ ಅಂಬಾನಿ (Mukesh Ambani) ಅವರ ಪುತ್ರ ಅನಂತ್‌ ಅಂಬಾನಿ (Anant Ambani) ಹಾಗೂ ರಾಧಿಕಾ ಮರ್ಚಂಟ್‌ (Radhika Merchant) ಅವರ ವಿವಾಹಕ್ಕೆ ದಿನಗಣನೆ ಆರಂಭವಾಗಿದೆ. ಜುಲೈ 12ರಂದು ಮುಂಬೈನಲ್ಲಿರುವ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಜೋಡಿಯು ದಾಂಪತ್ಯ ಜೀವನಕ್ಕೆ ಕಾಲಿಡಲಿದೆ. ಹಾಗಾಗಿ, ಗುರುವಾರ (ಜುಲೈ 4) ಮುಕೇಶ್‌ ಅಂಬಾನಿ ಅವರು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರನ್ನು ಭೇಟಿಯಾಗಿ, ಮಗನ ಮದುವೆಗೆ ಆಹ್ವಾನಿಸಿದ್ದಾರೆ.

ನವದೆಹಲಿಯ 10 ಜನಪಥದಲ್ಲಿರುವ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ತೆರಳಿದ ಮುಕೇಶ್‌ ಅಂಬಾನಿ ಅವರು ಕಾಂಗ್ರೆಸ್‌ ನಾಯಕಿಯನ್ನು ಮದುವೆಗೆ ಆಹ್ವಾನಿಸಿದ್ದಾರೆ. ಅದ್ಧೂರಿಯಾಗಿ ನಡೆಯುವ ವಿವಾಹ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ನೂರಾರು ರಾಜಕಾರಣಿಗಳು, ಬಾಲಿವುಡ್‌ ನಟ-ನಟಿಯರು, ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಬಹುತೇಕ ಜನರಿಗೆ ಮುಕೇಶ್‌ ಅಂಬಾನಿ ಅವರ ಕುಟುಂಬದಿಂದ ವಿವಾಹ ಆಮಂತ್ರಣ ಪತ್ರಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಜುಲೈ 12ರಂದು ನಡೆಯುವ ಅದ್ಧೂರಿ ವಿವಾಹ ಸಮಾರಂಭಕ್ಕೆ ಮುನ್ನುಡಿಯಾಗಿ ಜುಲೈ 2ರಂದು ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಸುಮಾರು 50 ಬಡ ಜೋಡಿಗಳ ಸಾಮೂಹಿಕ ವಿವಾಹ ನೆರವೇರಿಸಿ ಮಾದರಿಯಾಗಿದ್ದಾರೆ. ಮುಂಬೈಯಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಫಾಲ್ಘರ್‌ನಲ್ಲಿ ಈ ಸಾಮೂಹಿಕ ವಿವಾಹ ನೆರವೇರಿತು. ರಿಲಯನ್ಸ್‌ ಕಾರ್ಪೋರೇಟ್‌ ಪಾರ್ಕ್‌ನಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಆರ್ಥಿಕವಾಗಿ ಹಿಂದುಳಿದ 50 ಜೋಡಿಗಳು ಹಸೆಮಣೆ ಏರಿದವು.

ಈ ಸಾಮೂಹಿಕ ವಿವಾಹದಲ್ಲಿ ವಧು-ವರರ ಕುಟುಂಬದ ಸುಮಾರು 800 ಮಂದಿ ಪಾಲ್ಗೊಂಡಿದ್ದರು. ಸ್ವತಃ ಮುಕೇಶ್‌ ಅಂಬಾನಿ, ನೀತಾ ಅಂಬಾನಿ, ಆಕಾಶ್‌ ಅಂಬಾನಿ, ಶ್ಲೋಕ ಮೆಹ್ತಾ, ಇಶಾ ಅಂಬಾನಿ, ಆನಂದ್‌ ಪಿರಮಾಲ್‌ ಆಗಮಿಸಿ ನೂತನ ವಧು-ವರರನ್ನು ಹಾರೈಸಿದರು.

ಪ್ರತಿ ಜೋಡಿಗೆ ಚಿನ್ನದ ಉಂಗುರ, ಮಂಗಳ ಸೂತ್ರ, ಮೂಗುತ್ತಿ ಉಡುಗೊರೆಯಾಗಿ ನೀಡಲಾಯಿತು. ಜತೆಗೆ ಬೆಳ್ಳಿಯ ಆಭರಗಳನ್ನೂ ನೀಡಲಾಗಿದೆ. ಜತೆಗೆ ಸ್ತ್ರೀಧನವಾಗಿ ಪ್ರತಿ ವಧುವಿಗೆ 1.01 ಲಕ್ಷ ರೂ. ಚೆಕ್‌ ಅನ್ನು ಅಂಬಾನಿ ಕುಟುಂಬಸ್ಥರು ವಿತರಿಸಿದ್ದಾರೆ. ಮಾತ್ರವಲ್ಲ ಪ್ರತಿ ಜೋಡಿಗೆ ಒಂದು ವರ್ಷಕ್ಕೆ ಅಗತ್ಯವಾದ ದಿನಸಿ ಸಾಮಗ್ರಿಗಳನ್ನೂ ವಿತರಿಸಲಾಗಿದೆ. ಇದು ಪಾತ್ರೆ ಪರಿಕರಗಳು, ಗ್ಯಾಸ್‌ ಸ್ಟವ್‌, ಮಿಕ್ಸಿ, ಫ್ಯಾನ್‌, ಹಾಸಿಗೆ ಮತ್ತು ತಲೆ ದಿಂಬುಗಳನ್ನು ಒಳಗೊಂಡಿದೆ. ಅದ್ಧೂರಿ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಈ ವೇಳೆ ವರ್ಲಿ ಬುಡಕಟ್ಟು ಜನಾಂಗದವರು ಪ್ರದರ್ಶಿಸಿದ ಸಾಂಪ್ರದಾಯಿಕ ತಾರ್ಪ ನೃತ್ಯವನ್ನು ಅತಿಥಿಗಳು ಮತ್ತು ಅಂಬಾನಿ ಕುಟುಂಬದ ಸದಸ್ಯರು ವೀಕ್ಷಿಸಿದರು.

ಇದನ್ನೂ ಓದಿ: Anant Ambani: ಅನಂತ್ ಅಂಬಾನಿ ಬಳಿ ಇವೆ 300 ಕೋಟಿಯ ವಾಚ್‌ಗಳು! ಎಂಥೆಂಥ ಗಡಿಯಾರಗಳಿವೆ ನೋಡಿ!

Continue Reading

ಪ್ರಮುಖ ಸುದ್ದಿ

India’s open-bus parade : ಭಾರತ ತಂಡದ ವಿಜಯೋತ್ಸವ ಮೆರವಣಿಗೆಯಲ್ಲಿ ಭದ್ರತಾ ವೈಫಲ್ಯ; ಬಸ್​​ನಲ್ಲಿದ್ದ ಆಟಗಾರರು ಜಸ್ಟ್​ ಮಿಸ್​​

India’s open-bus parade: ಭಾರತೀಯ ಆಟಗಾರರು ಅಭಿಮಾನಿಗಳೊಂದಿಗೆ ಗೆಲುವು ಆಚರಿಸಿದರು. ಆಟಗಾರರನ್ನು ಹೊತ್ತ ಓಪನ್-ಟಾಪ್ ಬಸ್ ಅಭಿಮಾನಿಗಳ ಸಮುದ್ರದ ಮೂಲಕ ಹಾದುಹೋಗುತ್ತಿದ್ದಂತೆ ಮರೀನ್ ಡ್ರೈವ್​ನಲ್ಲಿ ಮೆರವಣಿಗೆ ಪ್ರಾರಂಭವಾಯಿತು. ಮೆರವಣಿಗೆಯ ಸಮಯದಲ್ಲಿ, ಅನಿರೀಕ್ಷಿತ ಘಟನೆ ನಡೆಯಿತು.

VISTARANEWS.COM


on

India's open-bus parade
Koo

ಬೆಂಗಳೂರು: ಮಳೆಯಿಂದ ಆದ ಅಡಚಣೆ ಬಳಿಕ ಆರಂಭಗೊಂಡ ಟೀಮ್ ಇಂಡಿಯಾದ ವಿಶ್ವ ಕಪ್ ​ ವಿಜಯೋತ್ಸವ ಮುಂಬೈನ ವಾಖೆಂಡೆ ಕ್ರಿಕೆಟ್​ ಸ್ಟೇಡಿಯಮ್ ತಲುಪಿತು. ಮೆರವಣಿಗೆಯು (India’s open-bus parade) ಸಂಜೆ ಮರೀನ್ ಡ್ರೈವ್​ನಿಂದ ಆರಂಭಗೊಂಡು ರಸ್ತೆಯುದ್ದಕ್ಕೂ ನೆರೆದಿದ್ದ ಅಭಿಮಾನಿಗಳ ಸಮ್ಮುಖದಲ್ಲಿ ಸಾಗಿತು. ಮೆರವಣಿಗೆಯನ್ನು ಸಂಜೆ 5 ಗಂಟೆಯಿಂದ ಪ್ರಾರಂಭಿಸಲು ಯೋಜಿಸಲಾಗಿದ್ದರೂ, ಎರಡು ಗಂಟೆಗಳಿಗಿಂತ ಹೆಚ್ಚು ವಿಳಂಬದ ನಂತರ ಬಸ್​ ಹೊರಟಿತು.

ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ಐತಿಹಾಸಿಕ ವಿಜಯವನ್ನು ಆಚರಿಸಲು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು. ಆದಾಗ್ಯೂ ದೀರ್ಘ ವಿಳಂಬ ಅವರನ್ನು ನಿರಾಶೆಗೊಳಿಸಲಿಲ್ಲ. ಟೀಮ್ ಇಂಡಿಯಾ ಮುಂಬೈಗೆ ಆಗಮಿಸುವ ಮೊದಲೇ ಸಾವಿರಾರು ಅಭಿಮಾನಿಗಳು ಮರೀನ್ ಡ್ರೈವ್​ಗೆ ಆಗಮಿಸಿದ್ದರು. ವಿಶ್ವಕಪ್ ವಿಜೇತರಿಗಾಗಿ ಅಭಿಮಾನಿಗಳು ತೀವ್ರವಾಗಿ ಕಾಯುತ್ತಿದ್ದರಿಂದ ವಾಂಖೆಡೆ ಕ್ರೀಡಾಂಗಣವೂ ಜನರಿಂದ ತುಂಬಿತ್ತು.

ಸಂಜೆ 7:30 ರ ಸುಮಾರಿಗೆ ವಿಜಯೋತ್ಸವ ಮೆರವಣಿಗೆ ಪ್ರಾರಂಭವಾಯಿತು. ಭಾರತೀಯ ಆಟಗಾರರು ಅಭಿಮಾನಿಗಳೊಂದಿಗೆ ಗೆಲುವು ಆಚರಿಸಿದರು. ಆಟಗಾರರನ್ನು ಹೊತ್ತ ಓಪನ್-ಟಾಪ್ ಬಸ್ ಅಭಿಮಾನಿಗಳ ಸಮುದ್ರದ ಮೂಲಕ ಹಾದುಹೋಗುತ್ತಿದ್ದಂತೆ ಮರೀನ್ ಡ್ರೈವ್​ನಲ್ಲಿ ಮೆರವಣಿಗೆ ಪ್ರಾರಂಭವಾಯಿತು. ಮೆರವಣಿಗೆಯ ಸಮಯದಲ್ಲಿ, ಅನಿರೀಕ್ಷಿತ ಘಟನೆ ನಡೆಯಿತು.

ಅಪಾರ ಸಂಖ್ಯೆಯ ಅಭಿಮಾನಿಗಳು ತಮ್ಮ ಹೀರೋಗಳ ನೋಡಲು ತೀವ್ರವಾಗಿ ಪ್ರಯತ್ನಿಸುತ್ತಿರುವಾಗ, ಅಭಿಮಾನಿಯೊಬ್ಬರು ಮರ ಏರಿ ಆಟಗಾರರ ಹತ್ತಿರಕ್ಕೆ ಬರಲು ಯತ್ನಿಸಿದರು. ಇದು ನಿಜವಾಗಿಯೂ ಭದ್ರತೆಯ ವೈಫಲ್ಯವಾಗಿದೆ. ಆಟಗಾರರಿಗೆ ಏನಾದರೂ ಸಮಸ್ಯೆ ಆಗಿದ್ದರೆ ಮೆರವಣಿಗೆಯ ಖುಷಿ ಹಾಳಾಗುತ್ತಿತ್ತು.

ಹಲವು ಕಡೆ ಮರ ಹತ್ತಿದ ಅಭಿಮಾನಿಗಳು

ಬಸ್ ಮೆರವಣಿಗೆ ಮಾರ್ಗದ ಮೂಲಕ ಹಾದುಹೋಗುತ್ತಿದ್ದಂತೆ, ಅಭಿಮಾನಿಯೊಬ್ಬ ಕೊಂಬೆಯ ಮೇಲೆ ಮಲಗಿ ತನ್ನ ಫೋನ್​ನಿಂದ ಫೋಟೋಗಳನ್ನು ಕ್ಲಿಕ್ಕಿಸುತ್ತಿರುವುದನ್ನು ಕಂಡು ಬಂದಿದೆ. ಇದು ದೊಡ್ಡ ಭದ್ರತಾ ಲೋಪವಾಗಿತ್ತು ಆದರೆ ಅದೃಷ್ಟವಶಾತ್, ಅದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.

ಏತನ್ಮಧ್ಯೆ, ಮೆರವಣಿಗೆ ವಾಂಖೆಡೆ ಕ್ರೀಡಾಂಗಣದಲ್ಲಿ ಕೊನೆಗೊಂಡಿತು. ಅಲ್ಲಿ ಬಿಸಿಸಿಐ ಅಭಿಮಾನಿಗಳನ್ನು ಸನ್ಮಾನಿಸಿತು. ಈ ಸಂದರ್ಭದಲ್ಲಿ ಬಿಸಿಸಿಐ 125 ಕೋಟಿ ರೂ.ಗಳ ಬಹುಮಾನ ಮೊತ್ತವನ್ನು ಭಾರತ ತಂಡಕ್ಕೆ ಹಸ್ತಾಂತರಿಸಲಿದೆ. ಇದಕ್ಕೂ ಮುನ್ನ ಭಾರತ ತಂಡ ನವದೆಹಲಿಗೆ ಬಂದಿಳಿದಿದ್ದು, ಅಭಿಮಾನಿಗಳಿಂದ ಭವ್ಯ ಸ್ವಾಗತ ಪಡೆಯಿತು.

ಇದನ್ನೂ ಓದಿ: Team India : ಅಪರೂಪದಲ್ಲಿ ಅಪರೂಪ; ಮುಂಬೈ ವಿಮಾನ ನಿಲ್ದಾಣದಲ್ಲಿ ಟೀಂ ಇಂಡಿಯಾದ ವಿಮಾನಕ್ಕೆ ಸೆಲ್ಯೂಟ್

ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಮುಂಬೈಗೆ ತೆರಳುವ ಮೊದಲು ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿಯಾದರು. ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುವ ಈ ಆಚರಣೆಯು ಭಾರತೀಯ ತಂಡಕ್ಕೆ ಸ್ಮರಣೀಯವಾಗಲಿದೆ.

ಕೇವಲ ಒಂದು ತಿಂಗಳ ಹಿಂದೆ, ಭಾರತವು ಟಿ 20 ವಿಶ್ವಕಪ್​​ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಿತು. ಜೂನ್ 5 ರಂದು, ಅವರು ತಮ್ಮ ಮೊದಲ ಪಂದ್ಯದಲ್ಲಿ ಐರ್ಲೆಂಡ್ ಅನ್ನು ಸೋಲಿಸಿದ್ದರು ಫೈನಲ್​​ನಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡವು ದಕ್ಷಿಣ ಆಫ್ರಿಕಾವನ್ನು 7 ರನ್​ಗಳಿಂದ ಸೋಲಿಸಿತು, ಭಾರತವು ಎರಡು ಬಾರಿ ಟಿ 20 ವಿಶ್ವಕಪ್ ಗೆದ್ದ ಏಷ್ಯಾದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಒಟ್ಟಾರೆಯಾಗಿ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಂತರ ಪಂದ್ಯಾವಳಿಯನ್ನು ಒಂದಕ್ಕಿಂತ ಹೆಚ್ಚು ಬಾರಿ ಗೆದ್ದ ಮೂರನೇ ತಂಡವಾಯಿತು.

Continue Reading

ಪ್ರಮುಖ ಸುದ್ದಿ

Team India : ಅಪರೂಪದಲ್ಲಿ ಅಪರೂಪ; ಮುಂಬೈ ವಿಮಾನ ನಿಲ್ದಾಣದಲ್ಲಿ ಟೀಂ ಇಂಡಿಯಾದ ವಿಮಾನಕ್ಕೆ ಸೆಲ್ಯೂಟ್

Team India: ತಂಡವು ವಿಮಾನ ನಿಲ್ದಾಣಕ್ಕೆ ಬಂದಾಗ ವಿಶ್ವಕಪ್ ವಿಜೇತರನ್ನು ಸ್ವಾಗತಿಸಲು ನೂರಾರು ಅಭಿಮಾನಿಗಳು ಮಳೆಯನ್ನು ಲೆಕ್ಕಿಸದೆ ವಿಮಾನ ನಿಲ್ದಾಣದ ಹೊರಗೆ ಸಾಲುಗಟ್ಟಿ ನಿಂತಿದ್ದರು. ವಿಜಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಲು ಮುಂಬೈಗೆ ತೆರಳುವ ಮೊದಲು ಭಾರತ ತಂಡವು ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ನಿವಾಸದಲ್ಲಿ ಸಮಯ ಕಳೆಯಿತು.

VISTARANEWS.COM


on

Team India
Koo

ಮುಂಬಯಿ: ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ (T20 World Cup) ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಮ್ ಇಂಡಿಯಾದ (Team India) ವಿಜಯೋತ್ಸವ ಮುಗಿಲು ಮುಟ್ಟುತ್ತಿದೆ. ಗುರುವಾರ ಬೆಳಗ್ಗೆ ಡೆಲ್ಲಿಗೆ ಬಂದ ಅವರು ಪ್ರಧಾನಿ ಮೋದಿಯವರ ಆತಿಥ್ಯ ಸ್ವೀಕರಿಸಿದ್ದಾರೆ. ಬಳಿಕ ಆಟಗಾರರು ಮುಂಬಯಿಗೆ ಬಂದರು. ವಿಶೇಷ ವಿಮಾನದಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದ ಅವರಿಗೆ ಇನ್ನಷ್ಟು ದೊಡ್ಡ ಗೌರವ ದೊರಕಿತು. ವಿಮಾನ ನಿಲ್ದಾಣದಲ್ಲಿ ಅವರ ವಿಮಾನಕ್ಕೆ ವಾಟರ್​ಜೆಟ್​ ಸೆಲ್ಯೂಟ್ ಹೊಡೆಯಲಾಯಿತು. ಅದೇ ರೀತಿ ಅವರ ವಿಮಾನವನ್ನು ಭಾರತದ ಧ್ವಜವನ್ನು ಹೊಂದಿರುವ ಜೀಪ್​ಗಳ ಮೂಲಕ ಪಾರ್ಕಿಂಗ್​ ಬೇ ತನಕ ಕರೆದುಕೊಂಡು ಬರಲಾಯಿತು. ಇಂಥ ಗೌರವಗಳು ಸಿಗುವುದು ಅಪರೂಪಕ್ಕೆ ಅಪರೂಪ ಎಂಬುದು ವಿಶೇಷ. ಇಂಥ ವಿಶೇಷ ಗೌರವವನ್ನು ಅವರು ಪಡೆದುಕೊಂಡರು.

ತಂಡವು ವಿಮಾನ ನಿಲ್ದಾಣಕ್ಕೆ ಬಂದಾಗ ವಿಶ್ವಕಪ್ ವಿಜೇತರನ್ನು ಸ್ವಾಗತಿಸಲು ನೂರಾರು ಅಭಿಮಾನಿಗಳು ಮಳೆಯನ್ನು ಲೆಕ್ಕಿಸದೆ ವಿಮಾನ ನಿಲ್ದಾಣದ ಹೊರಗೆ ಸಾಲುಗಟ್ಟಿ ನಿಂತಿದ್ದರು. ವಿಜಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಲು ಮುಂಬೈಗೆ ತೆರಳುವ ಮೊದಲು ಭಾರತ ತಂಡವು ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ನಿವಾಸದಲ್ಲಿ ಸಮಯ ಕಳೆಯಿತು.

ಬಳಿಕ ವಿಸ್ತಾರಾ ಏರ್​ಲೈನ್ಸ್​ ವಿಮಾನ ಯಾನ ಸಂಸ್ಥೆಯು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಗೌರವ ಸಲ್ಲಿಸಿದೆ. ಭಾರತೀಯ ತಂಡಕ್ಕೆ ನಿಯೋಜಿಸಲಾದ ವಿಮಾನವು ‘ಯುಕೆ 1845’ ಕೋಡ್​ ಹೊಂದಿತ್ತು. ಕೋಡ್ ರೋಹಿತ್ ಮತ್ತು ಕೊಹ್ಲಿಯ ಜೆರ್ಸಿ ಸಂಖ್ಯೆಗಳನ್ನು ಪ್ರತಿನಿಧಿಸುತ್ತದೆ. ವಿಶ್ವಕಪ್ ಫೈನಲ್ ಪಂದ್ಯದ ನಂತರ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಟಿ 20 ಪಂದ್ಯಗಳಿಂದ ನಿವೃತ್ತಿ ಘೋಷಿಸಿದ್ದರು.

ಇದನ್ನೂ ಓದಿ: Hardik Pandya : ಅವಮಾನ ಮಾಡಿದ ಪ್ರೇಕ್ಷಕರಿಂದಲೇ ಜೈಕಾರ ಹಾಕಿಸಿಕೊಂಡ ಹಾರ್ದಿಕ್ ಪಾಂಡ್ಯ!

ಮುಂಬೈನಲ್ಲಿ ವಿಸ್ತಾರಾ ವಿಮಾನದಿಂದ ಭಾರತೀಯ ತಂಡವು ಹೊರಬರುವ ಮೊದಲೇ, ವಿಮಾನಯಾನ ಸಂಸ್ಥೆ ಮತ್ತೊಂದು ವಿಶೇಷತೆ ತೋರಿತು/ ವಿಮಾನವು ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ, ಭಾರತೀಯ ತಂಡಕ್ಕೆ ಅದ್ಭುತ ವಾಟರ್ ಸೆಲ್ಯೂಟ್ ನೀಡಲಾಯಿತು. ಈ ವಿಶೇಷ ಕ್ಷಣದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಟೀಮ್ ಇಂಡಿಯಾ ಮರೀನ್ ಡ್ರೈವ್​ನಿಂದ ವಾಂಖೆಡೆ ಕ್ರೀಡಾಂಗಣಕ್ಕೆ ಓಪನ್-ಟಾಪ್ ಬಸ್​ನಲ್ಲಿ ವಿಜಯದ ಮೆರವಣಿಗೆ ನಡೆಸಿತು. ಭಾರತ ತಂಡದ ಆಗಮನಕ್ಕೂ ಮೊದಲೇ ಸಾವಿರಾರು ಅಭಿಮಾನಿಗಳು ಬೀದಿಗಿಳಿದಿದ್ದರು. ವಾಂಖೆಡೆ ಸ್ಟೇಡಿಯಂ ಕೂಡ ಸಂಪೂರ್ಣ ಭರ್ತಿಯಾಗಿದೆ. ಮೆರವಣಿಗೆಯ ನಂತರ, ಬಿಸಿಸಿಐ ಕ್ರೀಡಾಂಗಣದಲ್ಲಿ ಭಾರತೀಯ ತಂಡವನ್ನು ಸನ್ಮಾನಿಸಲಿದೆ.

ಟಿ20 ವಿಶ್ವಕಪ್​​ನಲ್ಲಿ ಭಾರತ ತಂಡದ ಕನಸಿನ ಓಟ

2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಅವರು ಸ್ಪರ್ಧೆಯಲ್ಲಿ ಒಂದೇ ಒಂದು ಪಂದ್ಯವನ್ನು ಸೋಲಲಿಲ್ಲ. ಗುಂಪು ಹಂತದಲ್ಲಿ ಭಾರತವು ಐರ್ಲೆಂಡ್, ಪಾಕಿಸ್ತಾನ ಮತ್ತು ಯುಎಸ್ಎಗಳನ್ನು ಸೋಲಿಸಿದರೆ, ಕೆನಡಾ ವಿರುದ್ಧದ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು.

ಸೂಪರ್ 8ರರಲ್ಲಿ ಭಾರತ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾವನ್ನು ಸೋಲಿಸಿತು. ಬಾರ್ಬಡೋಸ್​​ನ ಲ್ಲಿ ನಡೆದ ಸೆಮಿ ಫೈನಲ್​ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 68 ರನ್​ಗಳ ಜಯ ಸಾಧಿಸಿದರೆ, ಬಾರ್ಬಡೋಸ್​ನಲ್ಲಿ ನಡೆದ ಫೈನಲ್​​ನಲ್ಲಿ ಮೆನ್ ಇನ್ ಬ್ಲೂ ದಕ್ಷಿಣ ಆಫ್ರಿಕಾವನ್ನು 7 ರನ್ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಐಸಿಸಿ ಟ್ರೋಫಿ ಮತ್ತು ಟಿ 20 ವಿಶ್ವಕಪ್​ಗೆ ಮರಳಿತು.

Continue Reading
Advertisement
Rohit Sharma
ಕ್ರಿಕೆಟ್8 mins ago

Rohit Sharma : ವಾಂಖೆಡೆ ಸ್ಟೇಡಿಯಮ್​ನಲ್ಲಿ ಡಾನ್ಸ್ ಮಾಡಿದ ರೋಹಿತ್ ಶರ್ಮಾ

Mukesh Ambani
ದೇಶ1 hour ago

Mukesh Ambani: ಸೋನಿಯಾ ಗಾಂಧಿಯನ್ನು ಮಗನ ಮದುವೆಗೆ ಆಹ್ವಾನಿಸಿದ ಮುಕೇಶ್‌ ಅಂಬಾನಿ

India's open-bus parade
ಪ್ರಮುಖ ಸುದ್ದಿ1 hour ago

India’s open-bus parade : ಭಾರತ ತಂಡದ ವಿಜಯೋತ್ಸವ ಮೆರವಣಿಗೆಯಲ್ಲಿ ಭದ್ರತಾ ವೈಫಲ್ಯ; ಬಸ್​​ನಲ್ಲಿದ್ದ ಆಟಗಾರರು ಜಸ್ಟ್​ ಮಿಸ್​​

Team India
ಪ್ರಮುಖ ಸುದ್ದಿ2 hours ago

Team India : ಅಪರೂಪದಲ್ಲಿ ಅಪರೂಪ; ಮುಂಬೈ ವಿಮಾನ ನಿಲ್ದಾಣದಲ್ಲಿ ಟೀಂ ಇಂಡಿಯಾದ ವಿಮಾನಕ್ಕೆ ಸೆಲ್ಯೂಟ್

BS Yediyurappa
ಕರ್ನಾಟಕ2 hours ago

BS Yediyurappa: ಪೋಕ್ಸೊ ಕೇಸ್;‌ ಜುಲೈ 17ರಂದು ವಿಚಾರಣೆಗೆ ಹಾಜರಾಗುವಂತೆ ಬಿಎಸ್‌ವೈಗೆ ಕೋರ್ಟ್‌ ಸಮನ್ಸ್!

Hatras Stampede
ದೇಶ2 hours ago

Hathras Stampede: ಕಾಲ್ತುಳಿತದ ಬಳಿಕ ಕಾಲ್ಕಿತ್ತಿದ್ದ ಡೋಂಗಿ ಬಾಬಾ- ವೈರಲ್‌ ಆಯ್ತು ವಿಡಿಯೋ

PF Interest
ದೇಶ2 hours ago

PF Interest: ನೌಕರರಿಗೆ ಗುಡ್‌ ನ್ಯೂಸ್;‌ ಪಿಎಫ್‌ ಬಡ್ಡಿದರ ಘೋಷಿಸಿದ ಕೇಂದ್ರ ಸರ್ಕಾರ, ಎಷ್ಟಿದೆ ನೋಡಿ

Hardik Pandya
ಪ್ರಮುಖ ಸುದ್ದಿ2 hours ago

Hardik Pandya : ಅವಮಾನ ಮಾಡಿದ ಪ್ರೇಕ್ಷಕರಿಂದಲೇ ಜೈಕಾರ ಹಾಕಿಸಿಕೊಂಡ ಹಾರ್ದಿಕ್ ಪಾಂಡ್ಯ!

Heavy rain in Uttara Kannada district district NDRF team for rescue says DC Gangubai Manakar
ಉತ್ತರ ಕನ್ನಡ2 hours ago

Uttara Kannada News: ಉ.ಕ ಜಿಲ್ಲೆಯಲ್ಲಿ ವ್ಯಾಪಕ ಮಳೆ, ರಕ್ಷಣೆಗೆ ಎನ್.ಡಿ.ಆರ್.ಎಫ್ ತಂಡ

Central Govt approves quadrilateral road in Shira at a cost of Rs 1000 rs crore says TB Jayachandra
ತುಮಕೂರು2 hours ago

Shira News: ಶಿರಾದಲ್ಲಿ 1,000 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆಗೆ ಕೇಂದ್ರದಿಂದ ಅನುಮೋದನೆ: ಟಿ.ಬಿ ಜಯಚಂದ್ರ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ5 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ6 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ7 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ9 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ9 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ11 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ12 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ2 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ3 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ4 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

ಟ್ರೆಂಡಿಂಗ್‌