Rahul Dravid : ತಮಗೆ ನೀಡಿದ 2.5 ಕೋಟಿ ರೂಪಾಯಿ ನಿರಾಕರಿಸಿ ಸಮಾನತೆ ತತ್ವ ಸಾರಿದ ರಾಹುಲ್ ದ್ರಾವಿಡ್​ - Vistara News

ಪ್ರಮುಖ ಸುದ್ದಿ

Rahul Dravid : ತಮಗೆ ನೀಡಿದ 2.5 ಕೋಟಿ ರೂಪಾಯಿ ನಿರಾಕರಿಸಿ ಸಮಾನತೆ ತತ್ವ ಸಾರಿದ ರಾಹುಲ್ ದ್ರಾವಿಡ್​

Rahul Dravid: ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ, ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರಂತೆಯೇ ರಾಹುಲ್ ದ್ರಾವಿಡ್​ 2.5 ಕೋಟಿ ರೂ.ಗಳ ಬೋನಸ್ ಹಣವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಅವರ ಭಾವನೆಗಳನ್ನು ನಾವು ಗೌರವಿಸುತ್ತೇವೆ, “ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

VISTARANEWS.COM


on

Rahul Dravid
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಹುಲ್ ದ್ರಾವಿಡ್ ತಾವೊಬ್ಬ ಆದರ್ಶ ವ್ಯಕ್ತಿ ಹಾಗೂ ಉತ್ತಮ ಕ್ರೀಡಾಪಟು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ವಿಶ್ವ ಕಪ್​ ಗೆದ್ದ ಹಿನ್ನೆಲೆಯಲ್ಲಿ ಬಿಸಿಸಿಐ ನೀಡಿದ ಬಹುಮಾನ ಮೊತ್ತದಲ್ಲಿ ಉಳಿದ ಸಹಾಯಕ ಸಿಬ್ಬಂದಿಗಿಂತ ಹೆಚ್ಚುವರಿಯಾಗಿ ನೀಡಿರುವ 2.5 ಕೋಟಿ ರೂಪಾಯಿ ಪಡೆಯಲು ನಿರಾಕರಿಸಿ ದೊಡ್ಡವರೆನಿಸಿಕೊಂಡಿದ್ದಾರೆ. ಅವರು ಉಳಿದವರಂತೆ 2.5 ಕೋಟಿ ರೂಪಾಯಿಯನ್ನೇ ಪಡೆದುಕೊಂಡಿದ್ದು ಸಮಾನತೆ ತತ್ವವನ್ನು ಸಾರುವ ಜತೆ ಉತ್ತಮ ನಾಯಕ ಎನಿಸಿಕೊಂಡಿದ್ದಾರೆ.

ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ, ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರಂತೆಯೇ ರಾಹುಲ್ ದ್ರಾವಿಡ್​ 2.5 ಕೋಟಿ ರೂ.ಗಳ ಬೋನಸ್ ಹಣವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಅವರ ಭಾವನೆಗಳನ್ನು ನಾವು ಗೌರವಿಸುತ್ತೇವೆ, “ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಬಿಸಿಸಿಐ ರೂಪಿಸಿದ ವಿತರಣಾ ಸೂತ್ರದ ಪ್ರಕಾರ, ಭಾರತದ ವಿಜೇತ ತಂಡದ 15 ಆಟಗಾರರು ಮತ್ತು ದ್ರಾವಿಡ್ 125 ಕೋಟಿ ರೂ.ಗಳ ಬಹುಮಾನದ ಹಣದಿಂದ ತಲಾ 5 ಕೋಟಿ ರೂ.ಗಳನ್ನು ಪಡೆಯಬೇಕಾಗಿತ್ತು. ಸಹಾಯಕ ಸಿಬ್ಬಂದಿಗೆ ತಲಾ 2.5 ಕೋಟಿ ರೂ., ಆಯ್ಕೆದಾರರು ಮತ್ತು ತಂಡದ ಪ್ರಯಾಣಿಸುವ ಸದಸ್ಯರಿಗೆ ತಲಾ 1 ಕೋಟಿ ರೂ. ಆದರೆ ದ್ರಾವಿಡ್ ಉಳಿದ ಕೋಚಿಂಗ್ ಸಿಬ್ಬಂದಿ ರೀತಿ ತಮಗೂ 2.5 ರೂಪಾಯಿ ಸಾಕು ಎಂದಿದ್ದಾರೆ.

ದ್ರಾವಿಡ್ ಅವರು 2018ರ ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದ ಮುಖ್ಯ ಕೋಚ್ ಆಗಿದ್ದರು. ದ್ರಾವಿಡ್ ಅವರಿಗೆ 50 ಲಕ್ಷ ರೂ., ಸಹಾಯಕ ಸಿಬ್ಬಂದಿಗೆ ತಲಾ 20 ಲಕ್ಷ ರೂ., ಆಟಗಾರರಿಗೆ ತಲಾ 30 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಆ ವೇಳೆ ನಿರ್ಧರಿಸಲಾಗಿತ್ತು. ಆ ವೇಳೆಯೂ ಅವರು ಅಸಮಾನ ಸೂತ್ರವನ್ನು ನಿರಾಕರಿಸಿದ್ದರು. ಬಿಸಿಸಿಐ ಎಲ್ಲರಿಗೂ ಸಮಾನವಾಗಿ ಪ್ರಶಸ್ತಿ ನೀಡಬೇಕು ಎಂದು ದ್ರಾವಿಡ್ ಬಯಸಿದ್ದರು.

ದ್ರಾವಿಡ್ ಸೇರಿದಂತೆ ಕೋಚಿಂಗ್ ಸಿಬ್ಬಂದಿಯ ಪ್ರತಿಯೊಬ್ಬ ಸದಸ್ಯರಿಗೆ ನಗದು ಬಹುಮಾನಗಳ ಪರಿಷ್ಕೃತ ಪಟ್ಟಿಯನ್ನು (₹ 25 ಲಕ್ಷ ಹೆಚ್ಚುವರಿ ) ತಯಾರಿಸಲಾಗಿದೆ.

ವಿಶ್ವ ಕಪ್​ ಗೆದ್ದ ಖುಷಿ

ಆಟಗಾರನಾಗಿ ತನ್ನ ಎಲ್ಲಾ ಸಾಧನೆಗಳ ಹೊರತಾಗಿಯೂ ಎಂದಿಗೂ ವಿಶ್ವಕಪ್ ಗೆಲ್ಲದ ದ್ರಾವಿಡ್ ಅಂತಿಮವಾಗಿ ಭಾರತದ ಟಿ 20 ವಿಶ್ವಕಪ್ ವಿಜೇತ ತಂಡದ ಮುಖ್ಯ ತರಬೇತುದಾರರಾಗಿ ಈ ಸಾಧನೆ ಮಾಡಿದ್ದಾರೆ. ನಾಯಕ ರೋಹಿತ್ ಶರ್ಮಾರಿಂದ ಹಿಡಿದು ಹಿರಿಯ ವಿರಾಟ್ ಕೊಹ್ಲಿವರೆಗೆ ದ್ರಾವಿಡ್ ಅವರ ಗೆಲುವಿನ ಸಂಭ್ರಮದಲ್ಲಿ ಪಾಲ್ಗೊಂಡರು. ಕಳೆದ ವರ್ಷ ಏಕದಿನ ವಿಶ್ವಕಪ್ ಫೈನಲ್​​ನಲ್ಲಿ ಭಾರತದ ಸೋಲಿನ ನಂತರ ಅವರ ಕೋಚಿಂಗ್ ಅವಧಿ ಮುಗಿದಿತ್ತು. ಟಿ 20 ವಿಶ್ವಕಪ್​ನಲ್ಲಿ ಉಳಿಯಲು ದ್ರಾವಿಡ್ ಅವರನ್ನು ಮನವೊಲಿಸಿದವರು ರೋಹಿತ್.

ಇದನ್ನೂ ಓದಿ: Euro 2024 : ಫ್ರಾನ್ಸ್ ತಂಡವನ್ನು ಸೋಲಿಸಿ ಯೂರೂ ಕಪ್​​ ಫೈನಲ್ ತಲುಪಿದ ಸ್ಪೇನ್​

“ನೀವು ಈ ಆಟದ ಸಂಪೂರ್ಣ ದಿಗ್ಗಜರು, ಆದರೆ ನೀವು ನಿಮ್ಮ ಎಲ್ಲಾ ಪ್ರಶಂಸೆಗಳು ಮತ್ತು ಸಾಧನೆಗಳನ್ನು ಬಾಗಿಲಲ್ಲಿ ಬಿಟ್ಟು ನಮ್ಮ ತರಬೇತುದಾರರಾಗಿ ಕಾಲಿಟ್ಟಿದ್ದೀರಿ. ನಾವೆಲ್ಲರೂ ನಿಮಗೆ ಏನನ್ನಾದರೂ ಹೇಳುವಷ್ಟು ಆರಾಮದಾಯಕ ಮಟ್ಟಕ್ಕೆ ಬಂದಿದ್ದೀರಿ” ಎಂದು ರೋಹಿತ್ ಮಂಗಳವಾರ ದ್ರಾವಿಡ್ ಬಗ್ಗೆ ಬರೆದುಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Actor Darshan: ರೇಣುಕಾ ಸ್ವಾಮಿ ದೇಹ ಪೋಸ್ಟ್‌ ಮಾರ್ಟಮ್‌ ಮಾಡಿದ ವೈದ್ಯ ಪವಿತ್ರ ಗೌಡ ಆಪ್ತೆಯ ಪತಿ!

Actor Darshan: ಶಾಕಿಂಗ್ ಸಂಗತಿ ಏನು ಅಂದರೆ ರೇಣುಕಾ ಸ್ವಾಮಿಯ ಶವ ಪೋಸ್ಟ್‌ಮಾರ್ಟಮ್ ಮಾಡಿದ್ದೇ ಸಮತಳ ಪತಿ! ಸಮತ ಪತಿ ಡಾ. ಸುರೇಶ್ ಅವರಿಂದ ರೇಣುಕಾ ಸ್ವಾಮಿ ಶವದ ಮರಣೋತ್ತರ ಪರೀಕ್ಷೆ ನಡೆದಿತ್ತು. ಆ ಮರಣೋತ್ತರ ಪರೀಕ್ಷೆ ಪೊಲೀಸರ ಕೈ ಸೇರುವ ಮೊದಲೇ ಜೈಲಿನಲ್ಲಿ ದರ್ಶನ್ ಹಾಗೂ ಪವಿತ್ರರನ್ನು ಸಮತ ಭೇಟಿ ಮಾಡಿದ್ದಳು.

VISTARANEWS.COM


on

actor darshan samata husband
Koo

ಬೆಂಗಳೂರು: ನಟ ದರ್ಶನ್ (Actor Darshan) ಗ್ಯಾಂಗ್‌ನಿಂದ ನಡೆದ ರೇಣುಕಾಸ್ವಾಮಿ ಕೊಲೆ (Renuka Swamy Murder) ಪ್ರಕರಣದ ವಿಚಾರಣೆಗೆ ಮತ್ತೊಂದು ಟ್ವಿಸ್ಟ್‌ ದೊರೆತಿದೆ. ಮೃತ ರೇಣುಕಾಸ್ವಾಮಿ ಶವ ಪೋಸ್ಟ್‌ ಮಾರ್ಟಮ್‌ (Post Martem) ನಡೆಸಿದ ವೈದ್ಯ ಬೇರೆ ಯಾರೂ ಅಲ್ಲ, ಜೈಲಿನಲ್ಲಿ ದರ್ಶನ್‌ ಹಾಗೂ ಪವಿತ್ರ ಗೌಡ (Pavitra Gowda) ಅವರನ್ನು ಭೇಟಿಯಾಗಿದ್ದ ಪವಿತ್ರ ಆಪ್ತೆ ಸಮತ ಅವರ ಪತಿ!

ಅಂದರೆ, ಈ ಪ್ರಕರಣದ ಸಾಕ್ಷ್ಯಗಳನ್ನು ತಿರುಚುವಲ್ಲಿ ಸಮತ ಕೈವಾಡ ಇದೆಯಾ, ಇದ್ದರೆ ಎಷ್ಟು ಎನ್ನುವ ಬಗ್ಗೆ ಈಗ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ. ಆ ಶಾಕಿಂಗ್ ಸ್ಟೋರಿಯ ಕಥನಾಯಕಿಯೇ ಪವಿತ್ರಗೌಡ ಸ್ನೇಹಿತೆ ಸಮತ. ಕೊಲೆ ಕೇಸ್‌ನಲ್ಲಿ ಜೈಲುಪಾಲಾಗಿರುವ ಪವಿತ್ರ ಗೌಡಳನ್ನು ಸಮತ ಭೇಟಿ ಮಾಡಿದ್ದಳು. ಪವಿತ್ರ ಗೌಡ ಮಾತ್ರವಲ್ಲದೇ ದರ್ಶನ್ ಜೊತೆಗೂ ಮಾತುಕತೆ ನಡೆಸಿದ್ದಳು. ಸಮತಳ ಜೈಲು ಭೇಟಿಯಿಂದ ತನಿಖಾಧಿಕಾರಿಗಳ ತಲೆಯಲ್ಲಿ ಅನುಮಾನ ಮೂಡಿತ್ತು. ಡೌಟ್ ಹಿನ್ನೆಲೆಯಲ್ಲಿ, ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿ ನೋಟೀಸ್ ನೀಡಿದ್ದರು.

ಸಮತಳನ್ನು ಆಡುಗೋಡಿ ಟೆಕ್ನಿಕಲ್ ಸೆಲ್‌ನಲ್ಲಿ ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ, ಪೊಲೀಸರೇ ಒಂದು ಕ್ಷಣ ಶಾಕ್ ಆಗುವಂಥ ಸಂಗತಿ ಬೆಳಕಿಗೆ ಬಂದಿತ್ತು. ಆ ವಿಚಾರ, ರೇಣುಕ ಸ್ವಾಮಿ ದೇಹದ ಪೋಸ್ಟ್‌ಮಾರ್ಟಮ್ ಮಾಡಿದ ವೈದ್ಯರ ಮೇಲೂ ಪೊಲೀಸರಿಗೆ ಅನುಮಾನ ಮೂಡಿಸುವಂತಿತ್ತು. ಆ ಅನುಮಾನ ಮೂಡಲು ಕಾರಣವಾದದ್ದು ಸಮತಳ ಪತಿಯ ವರ್ತನೆ. ಸಮತಳಿಂದ ಪವಿತ್ರ ಗೌಡ ಹಾಗೂ ದರ್ಶನ್ ಭೇಟಿ ಬಳಿಕ ಕೇಸ್‌ನಲ್ಲಿ ಈ ಬಿಗ್ ಟ್ವಿಸ್ಟ್ ದೊರೆತಿದೆ.

ಶಾಕಿಂಗ್ ಸಂಗತಿ ಏನು ಅಂದರೆ ರೇಣುಕಾ ಸ್ವಾಮಿಯ ಶವ ಪೋಸ್ಟ್‌ಮಾರ್ಟಮ್ ಮಾಡಿದ್ದೇ ಸಮತಳ ಪತಿ! ಸಮತ ಪತಿ ಡಾ. ಸುರೇಶ್ ಅವರಿಂದ ರೇಣುಕಾ ಸ್ವಾಮಿ ಶವದ ಮರಣೋತ್ತರ ಪರೀಕ್ಷೆ ನಡೆದಿತ್ತು. ಆ ಮರಣೋತ್ತರ ಪರೀಕ್ಷೆ ಪೊಲೀಸರ ಕೈ ಸೇರುವ ಮೊದಲೇ ಜೈಲಿನಲ್ಲಿ ದರ್ಶನ್ ಹಾಗೂ ಪವಿತ್ರರನ್ನು ಸಮತ ಭೇಟಿ ಮಾಡಿದ್ದಳು. ಹಾಗಾದರೆ ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿದ್ದುವ ಯತ್ನ ನಡೆದಿತ್ತೇ? ಈ ಅನುಮಾನದಲ್ಲಿ ಸಮತಳನ್ನು ತನಿಖಾ ತಂಡ ತೀವ್ರ ವಿಚಾರಣೆಗೆ ಒಳಪಡಿಸಿತ್ತು.

ತನಿಖೆಗೊಳಪಡಿಸಿ ಸಮತ ನೀಡಿದ ಹೇಳಿಕೆಯನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ. ಜೊತೆಗೆ ಸಮತ ಪತಿ ಡಾ. ಸುರೇಶ್ ಅವರ ಕಾಲ್ ಡಿಟೇಲ್ಸ್, ಚಾಟಿಂಗ್ಸ್ ಪರಿಶೀಲಿಸಲಾಗಿದೆ. ರೇಣುಕಾ ಸ್ವಾಮಿ ಶವ ಮರಣೋತ್ತರ ಪರೀಕ್ಷೆ ನಡೆಸುವ ವೇಳೆ, ತಮ್ಮ ಡ್ಯೂಟಿಗೆ ರಜೆ ಇದ್ದರೂ ಸುರೇಶ್‌ ಕರ್ತವ್ಯಕ್ಕೆ ಹಾಜರಾಗಿದ್ದರು. ತಾನೇ ಖುದ್ದು ಮುಂದೆ ನಿಂತು ರೇಣುಕಾಸ್ವಾಮಿ ಶವ ಮರಣೋತ್ತರ ಪರೀಕ್ಷೆ ಮಾಡಿಸಿದ್ದರು.

ಪವಿತ್ರ ಗೌಡ ಕ್ಲೋಸ್ ಫ್ರೆಂಡ್ ಪತಿಯಾಗಿರುವ ಕಾರಣ ಮರಣೋತ್ತರ ಪರೀಕ್ಷೆ ವರದಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಲಾಗುತ್ತಿದೆ. ಪರಿಶೀಲನೆ ನಡೆಸಿ ಡಾ. ಪ್ರದೀಪ್ ಎಂಬ ವೈದ್ಯರಿಂದ ಪೊಲೀಸರಿಗೆ ಮತ್ತೆ ಮರಣೋತ್ತರ ಪರೀಕ್ಷಾ ವರದಿ ಸಲ್ಲಿಕೆ ಮಾಡಲಾಗುತ್ತಿದೆ. ಜೈಲಿಗೆ ತರಾತುರಿಯಿಂದ ಬಂದು ದರ್ಶನ್‌ ಹಾಗೂ ಪವಿತ್ರರನ್ನು ಭೇಟಿಯಾದದ್ದೇ ಇದೀಗ ಈ ಪ್ರಕರಣದ ಸಾಕ್ಷಿ ನಾಶದ ಪ್ರಯತ್ನದಲ್ಲಿ ಇನ್ನೊಂದು ಬಿಗ್‌ ಟ್ವಿಸ್ಟ್‌ ನೀಡಿದೆ.

ಇದನ್ನೂ ಓದಿ: Actor Darshan: ಪವಿತ್ರಾ ಗೌಡ ಆರೋಗ್ಯದಲ್ಲೂ ಏರುಪೇರು; ಚಿಕಿತ್ಸೆ ನೀಡಿದ ವೈದ್ಯರು

Continue Reading

ಉದ್ಯೋಗ

Job Alert: ಅಂಚೆ ಇಲಾಖೆಯಿಂದ ಬೃಹತ್‌ ನೇಮಕಾತಿ; ಕರ್ನಾಟಕದಲ್ಲಿಯೂ ಇದೆ 1,940 ಹುದ್ದೆ: ಹೀಗೆ ಅಪ್ಲೈ ಮಾಡಿ

Job Alert: ಭಾರತೀಯ ಅಂಚೆ ಇಲಾಖೆ ಬಹುನಿರೀಕ್ಷಿತ ಗ್ರಾಮೀಣ ಡಾಕ್ ಸೇವಕ್‌ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ನಮ್ಮ ರಾಜ್ಯದಲ್ಲಿ 1,940 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಗ್ರಾಮೀಣ ಡಾಕ್‌ ಸೇವಕ್‌ (ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌ ಮತ್ತು ಅಸಿಸ್ಟಂಟ್‌ ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌) ಹುದ್ದೆಗಳಿಗೆ 10ನೇ ತರಗತಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಕೊನೆಯ ದಿನ ಆಗಸ್ಟ್‌ 5. ಅರ್ಜಿ ಸಲ್ಲಿಸುವ ವಿಧಾನದ ಮಾಹಿತಿ ಇಲ್ಲಿದೆ.

VISTARANEWS.COM


on

Job Alert
Koo

ಬೆಂಗಳೂರು: ಭಾರತೀಯ ಅಂಚೆ ಇಲಾಖೆ (India Post Office) ಬಹುನಿರೀಕ್ಷಿತ ಗ್ರಾಮೀಣ ಡಾಕ್ ಸೇವಕ್‌ (Gramin Dak Sevak) ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ದೇಶಾದ್ಯಂತ ಸುಮಾರು 44,228 ಹುದ್ದೆಗಳು ಖಾಲಿ ಇವೆ. ಈ ಪೈಕಿ ನಮ್ಮ ರಾಜ್ಯದಲ್ಲಿ 1,940 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ (Karnataka Postal Circle Recruitment 2024). ಗ್ರಾಮೀಣ ಡಾಕ್‌ ಸೇವಕ್‌ (ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌ ಮತ್ತು ಅಸಿಸ್ಟಂಟ್‌ ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌) ಹುದ್ದೆಗಳಿಗೆ 10ನೇ ತರಗತಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಕೊನೆಯ ದಿನ ಆಗಸ್ಟ್‌ 5 (Job Alert).

ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆ?

ಬಾಗಲಕೋಟೆ 23, ಬಳ್ಳಾರಿ 50, ಬೆಂಗಳೂರು ಜಿಪಿಒ 4, ಬೆಳಗಾವಿ 33, ಬೆಂಗಳೂರು ಪೂರ್ವ 83, ಬೆಂಗಳೂರು ದಕ್ಷಿಣ 62, ಬೆಂಗಳೂರು ಪಶ್ಚಿಮ 39, ಬೀದರ್ 59, ಚನ್ನಪಟ್ಟಣ 87, ಚಿಕ್ಕಮಗಳೂರು 60, ಚಿಕ್ಕೋಡಿ 19, ಚಿತ್ರದುರ್ಗ 27, ದಾವಣಗೆರೆ ಕಚೇರಿ 40, ಧಾರವಾಡ 22, ಗದಗ 18, ಗೋಕಾಕ್ 7, ಹಾಸನ 78, ಹಾವೇರಿ 44, ಕಲಬುರಗಿ 83, ಕಾರವಾರ 43, ಕೊಡಗು 76, ಕೋಲಾರ 106, ಕೊಪ್ಪಳ 36, ಮಂಡ್ಯ 65, ಮಂಗಳೂರು 62, ಮೈಸೂರು 42, ನಂಜನಗೂಡು 66, ಪುತ್ತೂರು 89, ರಾಯಚೂರು 63, ಆರ್‌ಎಂಎಸ್‌ ಎಚ್‌ಬಿ 3, ಆರ್‌ಎಂಎಸ್‌ ಕ್ಯೂ 9, ಶಿವಮೊಗ್ಗ 89, ಶಿರಸಿ 66, ತುಮಕೂರು 107, ಉಡುಪಿ 90, ವಿಜಯಪುರ 40, ಯಾದಗಿರಿ 50 ಹುದ್ದೆಗಳಿವೆ.

ವಿದ್ಯಾರ್ಹತೆ ಮತ್ತು ವಯೋಮಿತಿ

ಭಾರತದ ಯಾವುದೇ ಶಿಕ್ಷಣ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ (ಇಂಗ್ಲಿಷ್‌ ಮತ್ತು ಗಣಿತ ವಿಷಯ ಒಳಗೊಂಡಿರುವುದು ಕಡ್ಡಾಯ) ಪಾಸಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 40 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಅರ್ಜಿ ಶುಲ್ಕವಾಗಿ ಸಾಮಾನ್ಯ / ಒಬಿಸಿ ವಿಭಾಗದ ಅಭ್ಯರ್ಥಿಗಳು 100 ರೂ. ಪಾವತಿಸಬೇಕು. ಎಸ್‌ಸಿ / ಎಸ್‌ಟಿ / ಅಂಗವಿಕಲ ವಿಭಾಗದ ಮತ್ತು ಎಲ್ಲ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. 10ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌-12,000 ರೂ. -29,380 ರೂ., ಅಸಿಸ್ಟಂಟ್‌ ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌-10,000 ರೂ. – 24,470 ರೂ. ಮಾಸಿಕ ವೇತನ ಇದೆ.

India Post GDS Recruitment 2024 ಅಧಿಕೃತ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://indiapostgdsonline.gov.in/)
  • ಹೆಸರು ನೋಂದಾಯಿಸಿ.
  • ಲಾಗಿನ್‌ ಆಗಿ ವಿವರಗಳನ್ನು ಭರ್ತಿ ಮಾಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ದಾಖಲೆ, ಫೋಟೊ, ಸಹಿಯನ್ನು ಸೂಕ್ತ ಅಳತೆಯಲ್ಲಿ ಅಪ್‌ಲೋಡ್‌ ಮಾಡಿ.
  • ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: ಪದವೀಧರರಿಗೆ ಗುಡ್‌ನ್ಯೂಸ್‌; SCDCC ಬ್ಯಾಂಕ್‌ನಲ್ಲಿದೆ 123 ಹುದ್ದೆ: ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

Continue Reading

Latest

Viral Video: ಕಾಮುಕರ ಹಾವಳಿ ಮಿತಿ‌ ಮೀರಿದೆ; ಬೀದಿ ನಾಯಿಯನ್ನೂ ಇವರು ಬಿಡುತ್ತಿಲ್ಲ! ಆಘಾತಕಾರಿ ವಿಡಿಯೊ

Viral Video : ವೃದ್ಧನೊಬ್ಬ ಬೀದಿಯಲ್ಲಿ ಮಲಗಿದ್ದ ಗಂಡು ನಾಯಿಯ ಖಾಸಗಿ ಭಾಗಗಳನ್ನು ಪದೇ ಪದೇ ಸ್ಪರ್ಶಿಸುವ ಮೂಲಕ ಕಿರುಕುಳ ನೀಡಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಮುಂಬೈನ ಸ್ಟ್ರೀಟ್ ಅನಿಮಲ್ಸ್ ಎಂಬ ಇನ್ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೊದಲ್ಲಿ ಕೆಲವು ಅಸಹ್ಯವಾದ ತುಣುಕುಗಳನ್ನು ಸೆನ್ಸಾರ್ ಮಾಡಲಾಗಿದ್ದು, ಅಲ್ಲಿ ವೃದ್ಧ ವ್ಯಕ್ತಿ ಬೀದಿ ನಾಯಿಯನ್ನು ತನ್ನ ಕಡೆಗೆ ಸೆಳೆಯುವುದು ಮತ್ತು ಅನುಚಿತವಾಗಿ ಸ್ಪರ್ಶಿಸುವುದು ಕಂಡುಬಂದಿದೆ. ನಾಗರಿಕ ಸಮಾಜ ತಲೆತಗ್ಗಿಸುವ ವಿಡಿಯೊ ಈಗ ಬಹಿರಂಗವಾಗಿದೆ.

VISTARANEWS.COM


on

Viral Video
Koo


ಮುಂಬೈ : ಕಾಮುಕರು ತಮ್ಮ ಕಾಮದಾಟಕ್ಕೆ ಮನುಷ್ಯರನ್ನು ಮಾತ್ರವಲ್ಲ ಪ್ರಾಣಿಗಳನ್ನು ಕೂಡ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಲೈಂಗಿಕ ಬಯಕೆಯನ್ನು ತೀರಿಸಿಕೊಳ್ಳಲು ಮೂಕ ಪ್ರಾಣಿಗಳ ಮೇಲೂ ದೌರ್ಜನ್ಯ ಎಸಗುತ್ತಿದ್ದಾರೆ. ಇದೀಗ ಅಂತಹದೊಂದು ಘಟನೆ ಬೆಳಕಿಗೆ ಬಂದಿದ್ದು, ವಿಕೃತ ಕಾಮುಕನೊಬ್ಬ ಬೀದಿ ನಾಯಿಗೆ ಪದೇ ಪದೇ ಲೈಂಗಿಕ ಕಿರುಕುಳ ನೀಡಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಗುರ್ಗಾಂವ್‍ನ ಸೆಕ್ಟರ್ 48ರಲ್ಲಿ ವೃದ್ಧನೊಬ್ಬ ಬೀದಿಯಲ್ಲಿ ಮಲಗಿದ್ದ ಗಂಡು ನಾಯಿಯ ಖಾಸಗಿ ಭಾಗಗಳನ್ನು ಪದೇ ಪದೇ ಸ್ಪರ್ಶಿಸುವ ಮೂಲಕ ಬಹಿರಂಗವಾಗಿ ಕಿರುಕುಳ ನೀಡಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಮುಂಬೈನ ಸ್ಟ್ರೀಟ್ ಅನಿಮಲ್ಸ್ ಎಂಬ ಇನ್ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೊದಲ್ಲಿ ಕೆಲವು ಅಸಹ್ಯವಾದ ತುಣುಕುಗಳನ್ನು ಸೆನ್ಸಾರ್ ಮಾಡಲಾಗಿದ್ದು, ಅಲ್ಲಿ ವೃದ್ಧ ವ್ಯಕ್ತಿ ಬೀದಿ ನಾಯಿಯನ್ನು ತನ್ನ ಕಡೆಗೆ ಸೆಳೆಯುವುದು ಮತ್ತು ಅನುಚಿತವಾಗಿ ಸ್ಪರ್ಶಿಸುವುದು ಕಂಡುಬಂದಿದೆ.

ಇದರಲ್ಲಿ ಮೊದಲು ವ್ಯಕ್ತಿಯು ನಾಯಿಯನ್ನು ನೆಲದ ಮೇಲೆ ಮಲಗುವಂತೆ ಒತ್ತಾಯಿಸುವುದನ್ನು ತೋರಿಸುತ್ತದೆ. ಆತ ತನ್ನ ಕೈಗಳಿಂದ ನಾಯಿಯ ಮೈಯನ್ನು ಸವರುತ್ತಿದ್ದಾನೆ. ನಾಯಿ ಎಚ್ಚರಗೊಂಡು ನೇರವಾಗಿ ನಿಲ್ಲಲು ಪ್ರಯತ್ನಿಸಿದಾಗ, ಆತ ಪದೇ ಪದೇ ಪ್ರಾಣಿಯನ್ನು ವಿಶ್ರಾಂತಿ ಪಡೆಯುವಂತೆ ಮಾಡಿದ. ನಂತರ ಅವನು ಅದರ ಖಾಸಗಿ ಭಾಗಗಳನ್ನು ಸ್ಪರ್ಶಿಸುವುದನ್ನು ಮುಂದುವರಿಸಿದ.

ಮತ್ತೊಂದು ಘಟನೆಯಲ್ಲಿ, ಅದೇ ವ್ಯಕ್ತಿ ಮತ್ತೊಮ್ಮೆ ತಮ್ಮ ನಿವಾಸದ ಹೊರಗೆ ಬೀದಿ ನಾಯಿಗೆ ಕಿರುಕುಳ ನೀಡುತ್ತಿರುವುದು ಕಂಡುಬಂದಿದೆ. ಅವನು ನಾಯಿಯ ಜನನಾಂಗಗಳನ್ನು ಕಂಡುಹಿಡಿಯಲು ಮತ್ತು ಅವುಗಳನ್ನು ಮಟ್ಟಲು ಪ್ರಯತ್ನಿಸುತ್ತಿದ್ದ. ಇದಲ್ಲದೆ, ವ್ಯಕ್ತಿಯು ಕುರ್ಚಿಯ ಮೇಲೆ ಕುಳಿತು ತನ್ನ ಬರಿಗೈಯಿಂದ ನಾಯಿಯನ್ನು ಅನುಚಿತವಾಗಿ ಸ್ಪರ್ಶಿಸುವುದನ್ನು ವೀಡಿಯೊ ತೋರಿಸುತ್ತದೆ. ಆದರೆ ವ್ಯಕ್ತಿಯ ಈ ಅನುಚಿತ ವರ್ತನೆಯ ಬಗ್ಗೆ ಕ್ರಮ ಕೈಗೊಳ್ಳಲು ಸ್ಥಳೀಯ ಯುವತಿಯೊಬ್ಬಳು ಪೊಲೀಸರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಆತನ ವಿರುದ್ಧ ಯಾವುದೇ ಪೊಲೀಸ್ ಕ್ರಮ ದಾಖಲಾಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಮೊಬೈಲ್‌ನಲ್ಲಿ ಮಾತನಾಡುತ್ತ ರಸ್ತೆ ದಾಟಿದರೆ ಏನಾಗುತ್ತದೆ ನೋಡಿ; ಬೆಚ್ಚಿ ಬೀಳಿಸುವ ವಿಡಿಯೊ

Viral Video

ಪ್ರಾಣಿಗಳ ಮೇಲಿನ ಲೈಂಗಿಕ ದೌರ್ಜನ್ಯ ಭಾರತದಲ್ಲಿ ಮಾತ್ರವಲ್ಲ ಎಲ್ಲಾ ಕಡೆ ನಡೆಯುತ್ತಿದೆ. ಇದೀಗ ಬರೋಬ್ಬರಿ 60ಕ್ಕೂ ಹೆಚ್ಚು ನಾಯಿಗಳನ್ನು ಅತ್ಯಾಚಾರ ಮಾಡಿ, ಕೊಂದ ಪ್ರಕರಣದಲ್ಲಿ ಖ್ಯಾತ ಪ್ರಾಣಿಶಾಸ್ತ್ರಜ್ಞ ಆಡಂ ಬ್ರಿಟನ್‌ಗೆ 249 ವರ್ಷಗಳ ಜೈಲು ಶಿಕ್ಷೆಯಾಗಿದೆ. ಆತ ನಾಯಿಗಳನ್ನು ಕೋಣೆಗಳಲ್ಲಿ ಕೂಡಿ ಹಾಕಿ ವಿಚಿತ್ರವಾಗಿ ಹಿಂಸಿಸುತ್ತಿದ್ದನು. ಅತ್ಯಾಚಾರವೆಸಗಿ ಬರ್ಬರವಾಗಿ ಕೊಂದಿದ್ದನು ಎನ್ನಲಾಗಿತ್ತು. ವಿಚಾರಣೆಯ ವೇಳೆ ಈತನೂ ತನ್ನ ತಪ್ಪನ್ನು ಒಪ್ಪಿದ್ದನು. ಹೀಗಾಗಿ ಆತನಿಗೆ ಕೋರ್ಟ್ ಈಗ ಶಿಕ್ಷೆ ವಿಧಿಸಿದೆ.

Continue Reading

ದೇಶ

Jitan Sahani: ಬಿಹಾರದಲ್ಲಿ ವಿಕಾಸಶೀಲ ಇನ್ಸಾನ್‌ ಪಕ್ಷದ ಮುಖ್ಯಸ್ಥನ ತಂದೆಯ ಭೀಕರ ಹತ್ಯೆ; ಮನೆ ತುಂಬ ರಕ್ತ!

Jitan Sahani: ರಾಜಕೀಯ ಕಾರಣದಿಂದಾಗಿ ಮುಕೇಶ್‌ ಸಹಾನಿ ಅವರ ತಂದೆಯನ್ನು ಮನೆಯಲ್ಲಿಯೇ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಜಿತನ್‌ ಸಹಾನಿ ಅವರು ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ

VISTARANEWS.COM


on

Jitan Sahani
Koo

ಬಿಹಾರ: ತಮಿಳುನಾಡಿನಲ್ಲಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್‌ ಅವರನ್ನು ಹತ್ಯೆ ಮಾಡಿದ ಕೆಲವೇ ದಿನಗಳಲ್ಲಿ ಬಿಹಾರದಲ್ಲೂ (Bihar) ರಾಜಕೀಯ ಪ್ರೇರಿತ ಹಿಂಸಾಚಾರ ನಡೆದಿದೆ. ವಿಕಾಸಶೀಲ ಇನ್ಸಾನ್‌ ಪಕ್ಷದ (VHP) ಮುಖ್ಯಸ್ಥ ಮುಕೇಶ್‌ ಸಹಾನಿ (Mukesh Sahani) ಅವರ ತಂದೆ ಜಿತನ್‌ ಸಹಾನಿ (Jitan Sahani) ಅವರನ್ನು ಮನೆಯಲ್ಲಿಯೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ದರ್ಭಾಂಗದಲ್ಲಿರುವ ಜಿತನ್‌ ಸಹಾನಿ ಅವರ ಮನೆಗೆ ಸೋಮವಾರ (ಜುಲೈ 15) ರಾತ್ರಿ ನುಗ್ಗಿದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಕೊಚ್ಚಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮುಕೇಶ್‌ ಸಹಾನಿ ಅವರು ವಿಐಪಿ ಪಕ್ಷದ ಮುಖ್ಯಸ್ಥರಾಗಿದ್ದು, ಮಲ್ಲಾಹ್‌ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರು ಇದಕ್ಕೂ ಮೊದಲು ಬಿಹಾರದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಖಾತೆ ಸಚಿವರಾಗಿದ್ದರು. ಮಲ್ಲಾಹ್‌ ಸಮುದಾಯದವರ ಬೆಂಬಲವು ಮುಕೇಶ್‌ ಸಹಾನಿ ಅವರಿಗಿದೆ. ಇದೇ ರಾಜಕೀಯ ಕಾರಣದಿಂದಾಗಿ ಮುಕೇಶ್‌ ಸಹಾನಿ ಅವರ ತಂದೆಯನ್ನು ಮನೆಯಲ್ಲಿಯೇ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಜಿತನ್‌ ಸಹಾನಿ ಅವರು ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ

ಕೆಲ ದಿನಗಳ ಹಿಂದಷ್ಟೇ ತಮಿಳುನಾಡಿನಲ್ಲಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್‌ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಚೆನ್ನೈನ ಪೆರಂಬೂರ್‌ನಲ್ಲಿರುವ ಸದಯಪ್ಪನ್‌ ಸ್ಟ್ರೀಟ್‌ನಲ್ಲಿರುವ ಅವರ ನಿವಾಸದ ಬಳಿ ಜುಲೈ 5ರಂದು ಸಂಜೆ 7.30ರ ವೇಳೆಗೆ ಸುಮಾರು 6 ಜನರ ಗ್ಯಾಂಗ್‌ ದಾಳಿ ಮಾಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆರ್ಮ್‌ಸ್ಟ್ರಾಂಗ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಉಪಯೋಗ ಆಗಲಿಲ್ಲ. ದಾಳಿಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿತ್ತು.

ತಮಿಳುನಾಡು ಬಿಎಸ್‌ಪಿ ಘಟಕದ ಅಧ್ಯಕ್ಷರಾಗಿದ್ದ ಆರ್ಮ್‌ಸ್ಟ್ರಾಂಗ್‌ ಅವರು ಇದಕ್ಕೂ ಮೊದಲು ಗ್ರೇಟರ್‌ ಚೆನ್ನೈ ಕಾರ್ಪೊರೇಷನ್‌ನ ಕೌನ್ಸಿಲರ್‌ ಆಗಿದ್ದರು. ಚುನಾವಣಾ ರಾಜಕೀಯದಲ್ಲಿ ಹೆಚ್ಚು ತೊಡಗಿಸಿಕೊಳ್ಳದ ಆರ್ಮ್‌ಸ್ಟ್ರಾಂಗ್‌ ಅವರು ರಾಜ್ಯದಲ್ಲಿ ದಲಿತರ ಪರ ಚಿಂತಕ, ಅಂಬೇಡ್ಕರ್‌ವಾದಿ ಎಂಬುದಾಗಿಯೇ ಹೆಚ್ಚು ಗುರುತಿಸಿಕೊಂಡಿದ್ದರು. ಹಾಗಾಗಿ, ಆರ್ಮ್‌ಸ್ಟ್ರಾಂಗ್‌ ಅವರು ರಾಜಕೀಯದಲ್ಲಿ ಹೆಚ್ಚಿನ ಶತ್ರುಗಳನ್ನು ಹೊಂದಿರಲಿಲ್ಲ. ಪ್ರಕರಣದ ಕುರಿತು ಈಗಲೂ ತನಿಖೆ ನಡೆಯುತ್ತಿದ್ದು, ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಇದನ್ನೂ ಓದಿ: Arvind Kejriwal: “ಜೈಲಿನಲ್ಲಿ ಕೇಜ್ರಿವಾಲ್‌ ಹತ್ಯೆಗೆ ಸಂಚು”- ಸಂಚಲನ ಮೂಡಿಸ್ತಿದೆ ಆಪ್‌ ಆರೋಪ

Continue Reading
Advertisement
Gauri Lankesh murder
ಕ್ರೈಂ4 mins ago

Gauri Lankesh Murder: ಗೌರಿ ಲಂಕೇಶ್‌ ಹತ್ಯೆ ಪ್ರಕರಣದ 3 ಆರೋಪಿಗಳಿಗೆ ಜಾಮೀನು

karnataka Rain
ಮಳೆ9 mins ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

Road Accident
ದೇಶ13 mins ago

Road Accident: ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ವೇಯಲ್ಲಿ ಭೀಕರ ಅಪಘಾತ; ಪಂಢರಪುರಕ್ಕೆ ತೆರಳುತ್ತಿದ್ದ ಐವರು ಭಕ್ತರ ಸಾವು

actor darshan samata husband
ಪ್ರಮುಖ ಸುದ್ದಿ27 mins ago

Actor Darshan: ರೇಣುಕಾ ಸ್ವಾಮಿ ದೇಹ ಪೋಸ್ಟ್‌ ಮಾರ್ಟಮ್‌ ಮಾಡಿದ ವೈದ್ಯ ಪವಿತ್ರ ಗೌಡ ಆಪ್ತೆಯ ಪತಿ!

Karnataka Rain
ಮಳೆ39 mins ago

Karnataka Rain : ರಣಭೀಕರ ಮಳೆಗೆ ಶಿರೂರು ಬಳಿ ಗುಡ್ಡ ಕುಸಿತ; ಹಲವರು ಮಣ್ಣಿನಡಿ ಸಿಲುಕಿರುವ ಶಂಕೆ

Rishabh Pant
ಕ್ರೀಡೆ49 mins ago

Rishabh Pant: ಡೆಲ್ಲಿ ತೊರೆದು ಮುಂದಿನ ಐಪಿಎಲ್​ನಲ್ಲಿ ಈ ಫ್ರಾಂಚೈಸಿ ಪರ ಆಡಲಿದ್ದಾರೆ ರಿಷಭ್​ ಪಂತ್​

Job Alert
ಉದ್ಯೋಗ60 mins ago

Job Alert: ಅಂಚೆ ಇಲಾಖೆಯಿಂದ ಬೃಹತ್‌ ನೇಮಕಾತಿ; ಕರ್ನಾಟಕದಲ್ಲಿಯೂ ಇದೆ 1,940 ಹುದ್ದೆ: ಹೀಗೆ ಅಪ್ಲೈ ಮಾಡಿ

Viral Video
Latest1 hour ago

Viral Video: ಕಾಮುಕರ ಹಾವಳಿ ಮಿತಿ‌ ಮೀರಿದೆ; ಬೀದಿ ನಾಯಿಯನ್ನೂ ಇವರು ಬಿಡುತ್ತಿಲ್ಲ! ಆಘಾತಕಾರಿ ವಿಡಿಯೊ

Jitan Sahani
ದೇಶ1 hour ago

Jitan Sahani: ಬಿಹಾರದಲ್ಲಿ ವಿಕಾಸಶೀಲ ಇನ್ಸಾನ್‌ ಪಕ್ಷದ ಮುಖ್ಯಸ್ಥನ ತಂದೆಯ ಭೀಕರ ಹತ್ಯೆ; ಮನೆ ತುಂಬ ರಕ್ತ!

karnataka assembly live
ಪ್ರಮುಖ ಸುದ್ದಿ2 hours ago

Karnataka Assembly Live: ಸದನದಲ್ಲಿ ಇಂದು ಕಿಡಿಯೆಬ್ಬಿಸಲಿರುವ ವಾಲ್ಮೀಕಿ ಹಗರಣ; ಉತ್ತರ ನೀಡಲು ಸಿಎಂ ಸಜ್ಜು; ಇಲ್ಲಿದೆ ಕ್ಷಣಕ್ಷಣದ ಲೈವ್‌

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ9 mins ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ18 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

ಟ್ರೆಂಡಿಂಗ್‌