Raja Marga Column : ಪದೇಪದೆ ಡಿಪ್ರೆಸ್‌ ಆಗ್ತಾ ಇದ್ದೀರಾ? ಹುಷಾರು ಆತಂಕ ಒಂದು ನಿಧಾನ ವಿಷ! - Vistara News

ಪ್ರಮುಖ ಸುದ್ದಿ

Raja Marga Column : ಪದೇಪದೆ ಡಿಪ್ರೆಸ್‌ ಆಗ್ತಾ ಇದ್ದೀರಾ? ಹುಷಾರು ಆತಂಕ ಒಂದು ನಿಧಾನ ವಿಷ!

Raja Marga Column : ಆತಂಕ ಎನ್ನುವುದು ಇಂಚಿಂಚಾಗಿ ನಮ್ಮನ್ನು ಸಾಯಿಸುತ್ತದೆ. ಆತಂಕ ಯಾಕೆ ಕಾಣಿಸಿಕೊಳ್ಳುತ್ತದೆ. ಆದರಿಂದ ಹೊರ ಬರುವುದು ಹೇಗೆ? ಇಲ್ಲಿದೆ ಹೊಸ ದಾರಿ..

VISTARANEWS.COM


on

Raja Marga Column Anxiety article
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
RAJAMARGA

Raja Marga Column : ಇತ್ತೀಚೆಗೆ ವಿಜ್ಞಾನಿಗಳು ಒಂದು ಪ್ರಯೋಗವನ್ನು ಮಾಡಿದರು. ಒಂದು ಸಣ್ಣ ಪ್ರಾಯದ ಇಲಿಯನ್ನು ಒಂದು ಬೋನಿನಲ್ಲಿ (Rat in Cage) ಹಾಕಿದರು. ಅದಕ್ಕೆ ಭಯ ಹುಟ್ಟಿಸುವ ಬೆಕ್ಕಿನ ಕರ್ಕಶ ಧ್ವನಿಗಳನ್ನು ಪದೇಪದೆ ಕೇಳಿಸಿದರು. ಅದಕ್ಕೆ ಹೆದರಿಕೆ ಹುಟ್ಟಿಸುವ ಇನ್ನೂ ಕೆಲವು ಸಂಗತಿಗಳನ್ನು ರಿಪೀಟ್ ಮಾಡುತ್ತಲೇ ಇದ್ದರು. ಒಂದೆರಡು ವಾರಗಳ ನಂತರ ಆ ಪುಟ್ಟ ಇಲಿಯ ಉದರವನ್ನು ಬಗೆದು ಒಳಗಿನ ದೇಹದ ಭಾಗಗಳನ್ನು ಪರೀಕ್ಷೆ ಮಾಡಿದಾಗ ವಿಜ್ಞಾನಿಗಳಿಗೆ ಆಶ್ಚರ್ಯ ಕಾದಿತ್ತು!

ಆ ಸಣ್ಣ ಪ್ರಾಯದ ಇಲಿಗೆ ಅಕಾಲ ಮುಪ್ಪು ಆವರಿಸಿತ್ತು!

ಇಲಿಯ ದೇಹದ ಒಳಗಿನ ಪ್ರತಿಯೊಂದು ಭಾಗವೂ ದಣಿದು ಸುಸ್ತಾಗಿದ್ದವು. ಇಲಿಗೆ ಹೆಚ್ಚು ಪ್ರಾಯ ಆದ ಹಾಗೆ (Untimely old Age) ಅದರ ಒಳ ಅಂಗಗಳು ದುರ್ಬಲ ಆಗಿದ್ದವು. ಯಾಕೆ ಹೀಗಾಯಿತು? ಅದಕ್ಕೆ ಕಾರಣ ಆತಂಕ, ಆತಂಕ ಮತ್ತು ಆತಂಕ ಮಾತ್ರ (Anxiety)!

Raja Marga Column : ಆತಂಕ ಎಂಬ ನಿಧಾನ ವಿಷ!

ನಮ್ಮ ಜೀವನದಲ್ಲಿ ಕೂಡ ಈ ಆತಂಕ ಎಂಬ ನಿಧಾನ ವಿಷವು ನಮ್ಮನ್ನು ಖಾಲಿ ಮಾಡ್ತಾ ಇದೆ ಅಲ್ವಾ?
ಅದರಲ್ಲಿ ಕೂಡ ಸಣ್ಣ ಸಣ್ಣ ಕಾರಣಕ್ಕೆ ಡಿಪ್ರೆಸ್ ಆಗುವವರು, ಎಲ್ಲವನ್ನೂ ಭಾವನಾತ್ಮಕ ಆಗಿ ತೆಗೆದುಕೊಳ್ಳುವವರು ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ.

ಆತಂಕ ಒಂದು ಮೈಂಡ್ ಸೆಟ್! ಆದರೆ ಅದರ ನೇರ ಪರಿಣಾಮ ಆಗುವುದು ನಮ್ಮ ದೇಹದ ಮೇಲೆ! ವಿಶೇಷವಾಗಿ ಹೃದಯದ ಮೇಲೆ. ಆತಂಕಪಟ್ಟಾಗ ನಮ್ಮ ರಕ್ತದ ವೇಗ ಹೆಚ್ಚಾಗುತ್ತದೆ. ಹೃದಯದ ಮೇಲೆ ಹೆಚ್ಚು ಒತ್ತಡವು ಉಂಟಾಗುತ್ತದೆ. ಊಟ ತಿಂಡಿ ಸೇರುವುದಿಲ್ಲ. ನಿದ್ರೆಯು ದೂರ ಆಗುತ್ತದೆ. ಕೆಲಸ ಮಾಡುವ ಉತ್ಸಾಹವು ಕಡಿಮೆ ಆಗುತ್ತದೆ. ಪದೇಪದೆ ಕಾರಣ ಇಲ್ಲದೆ ಸಿಟ್ಟು ಬರುತ್ತದೆ. ಕೆಲಸದ ಮೇಲೆ ಏಕಾಗ್ರತೆಯು ಹೊರಟು ಹೋಗುತ್ತದೆ. ಇವೆಲ್ಲವೂ ಆತಂಕದ ಲಕ್ಷಣಗಳು.

Raja Marga Column Anxiety problem

ಆತಂಕದ ಕಾರಣಗಳು ನೂರಾರು!

ಅಂತವರನ್ನು ಮಾತಾಡಿಸಿದಾಗ ಆತಂಕದ ಕಾರಣಗಳು ಬೇರೆ ಬೇರೆ ಆಗಿರುವುದು ನನ್ನ ಗಮನಕ್ಕೆ ಬಂದಿದೆ. ಮುಖ್ಯವಾಗಿ ಆರ್ಥಿಕ ಸಮಸ್ಯೆ, ಸಾಮಾಜಿಕ ಸಮಸ್ಯೆ, ಪರೀಕ್ಷೆ ಇತ್ಯಾದಿ ಒತ್ತಡಗಳು, ಉಸಿರುಗಟ್ಟುವ ಕೌಟುಂಬಿಕ ವ್ಯವಸ್ಥೆ, ನಿತ್ಯ ಜೀವನದ ಒತ್ತಡಗಳು, ಬದುಕಿನ ಏಕತಾನತೆ, ಕಾಡುವ ಒಬ್ಬಂಟಿತನ, ಪದೇಪದೆ ಸೋಲುಗಳು, ನಿರಾಸೆ, ಅತಿಯಾದ ಆಸೆ, ಶಿಸ್ತು ಇಲ್ಲದ ಜೀವನ ಪದ್ಧತಿ, ಹೆಚ್ಚು ಟಾರ್ಗೆಟ್ ಇರುವ ಉದ್ಯೋಗಗಳು, ತುಂಬಾ ಸ್ಪರ್ಧಾತ್ಮಕ ಜೀವನ ಹೀಗೆ ನೂರಾರು ಕಾರಣಗಳು (Reasons for Anxiety)!

ಕೆಲವರ ಕಾರಣಗಳು ನಿಜವಾದ ಕಾರಣಗಳು ಆಗಿರುತ್ತವೆ. ಇನ್ನೂ ಕೆಲವರದ್ದು ತುಂಬಾ ಸಿಲ್ಲಿ ಅಂತ ನಮಗೆ ಅನ್ನಿಸುತ್ತದೆ. ಆದರೆ ಅವರನ್ನು ಮಾತಾಡಿಸಿದಾಗ ಅವರು ಸಣ್ಣ ಕಾರಣಗಳನ್ನು ಬೆಟ್ಟ ಮಾಡಿ ಸಮರ್ಥನೆಗೆ ಇಳಿಯುತ್ತಾರೆ. ನನಗೆ ಸಂಬಂಧಗಳಲ್ಲಿ ವಿಶ್ವಾಸವೇ ಇಲ್ಲ ಎಂದೆಲ್ಲ ಮಾತಾಡುತ್ತಾರೆ. ಇನ್ನೂ ಕೆಲವರು ತಮ್ಮ ಭವಿಷ್ಯದ ಬಗ್ಗೆ ಅತಿಯಾಗಿ ಯೋಚನೆ ಮಾಡಿ ಆತಂಕವನ್ನು ತಾವೇ ಕ್ರಿಯೇಟ್ ಮಾಡುತ್ತಾರೆ. ಇನ್ನೂ ಕೆಲವರಿಗೆ ಅಭದ್ರತೆಯ ಭಾವನೆ, ತೀವ್ರವಾದ ಸಂಶಯ ಪ್ರವೃತ್ತಿಗಳು ಕಾಡುತ್ತವೆ.

Raja Marga Column : ಆತಂಕ ಅತಿಯಾದರೆ ಕಷ್ಟ!

ಒಂದು ಸಣ್ಣ ಮಟ್ಟದ ಆತಂಕವನ್ನು ನಮ್ಮ ದೇಹವು ತಡೆದುಕೊಳ್ಳುತ್ತದೆ. ಆದರೆ ಮಿತಿ ಮೀರಿ ಹೋದಾಗ ತಡೆದುಕೊಳ್ಳುವುದು ಕಷ್ಟ. ಅಧ್ಯಯನಗಳ ಪ್ರಕಾರ ಹೆಚ್ಚು ಶಿಸ್ತಿನ ಜೀವನ ನಡೆಸುವವರು, ಅತಿಯಾದ ಸ್ವಾಭಿಮಾನ ಇರುವವರು, ತುಂಬಾ ಅಂತರ್ಮುಖಿಗಳು, ಹೆಚ್ಚು ಏಕತಾನತೆಯ ಕೆಲಸ ಮಾಡುವವರು ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ.

ಆತಂಕವು ನಿರಂತರ ಹೆಚ್ಚಾಗುತ್ತ ಹೋಗಿ ಮುಂದೆ ಡಿಪ್ರೆಶನ್ ಹಂತಕ್ಕೆ ಹೋದರೆ ಹಿಂದೆ ಬರುವುದು ಕಷ್ಟ ಆಗಬಹುದು. ಸೂಕ್ಷ್ಮ ಮನಸ್ಸಿನವರು ಆತ್ಮಹತ್ಯೆಗೂ ಪ್ರಯತ್ನವನ್ನು ಮಾಡಬಹುದು. ಆದ್ದರಿಂದ ಆತಂಕವನ್ನು ಮೊದಲ ಹಂತದಲ್ಲಿಯೇ ನಿವಾರಣೆ ಮಾಡಲು ಪ್ರಯತ್ನ ಅಗತ್ಯ. ಅದೇ ರೀತಿ ಅಂತವರ ಸಹವರ್ತಿಗಳು, ಗೆಳೆಯರು, ಕುಟುಂಬದವರು ಅವರಿಗೆ ಸ್ವಲ್ಪ ಸಾಂತ್ವನ ನೀಡಿ ಧೈರ್ಯವನ್ನು ತುಂಬುವುದು ಅತೀ ಅಗತ್ಯ.

ಇದನ್ನೂ ಓದಿ : Raja Marga Column : ಬಹುಮುಖಿ ಸ್ತ್ರೀ; ನೀವು ಕಂಡು ಕೇಳರಿಯದ ಹೆಣ್ಣಿನ ಮುಖಗಳು

Raja Marga Column : ಆತಂಕದ ನಿವಾರಣೆಗೆ ಹತ್ತಾರು ಪರಿಹಾರಗಳು!

1. ನಿಮ್ಮ ಜೊತೆಗೆ ಇರುವ ವ್ಯಕ್ತಿಗಳ ಮೇಲೆ ಇರುವ ನಂಬಿಕೆಯನ್ನು ಗಟ್ಟಿ ಮಾಡಿ. ಜಗತ್ತಿನಲ್ಲಿ ಎಲ್ಲರೂ ಸ್ವಾರ್ಥಿಗಳೆ ಆಗಿರುವುದಿಲ್ಲ.
2. ತುಂಬಾ ಸರಳವಾಗಿ ಬದುಕುವುದನ್ನು ಅಭ್ಯಾಸ ಮಾಡಿದರೆ ಆರ್ಥಿಕ ಅಭದ್ರತೆ ಕಾಡುವುದಿಲ್ಲ.
3. ತುಂಬಾ ಭಾವನಾತ್ಮಕವಾಗಿ ಯೋಚನೆ ಮಾಡುವುದನ್ನು ಕಡಿಮೆ ಮಾಡಿ. ಜೀವನದಲ್ಲಿ ಸ್ವಲ್ಪ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಲು ಕಲಿಯಿರಿ.
4. ಯಾವುದೇ ವ್ಯಕ್ತಿಯ ಮೇಲೆ ಹೆಚ್ಚು ಭಾವನಾತ್ಮಕವಾಗಿ ಅವಲಂಬನೆ ಮಾಡಬೇಡಿ.
5. ಅತಿಯಾದ ನಿರೀಕ್ಷೆ ಬೇಡ. ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡರೆ ಒಳ್ಳೆಯದು.

Raja Marga Column  Anxiety

6. ಒಬ್ಬಂಟಿತನ ಯಾವುದೇ ವಯಸ್ಸಿನವರಿಗೂ ಬಹು ದೊಡ್ಡ ಶಾಪ. ಆದಷ್ಟು ಗುಂಪಿನಲ್ಲಿ ಕೆಲಸ ಮಾಡಲು ಯೋಜನೆ ಮಾಡಿ.
7. ನಿಮ್ಮ ಖಾಲಿತನವನ್ನು ತುಂಬುವ ಸಂಗೀತ, ನೃತ್ಯ, ಪೈಂಟಿಂಗ್, ಕ್ರೀಡೆ ಮೊದಲಾದ ಹವ್ಯಾಸಗಳು ನಿಮ್ಮನ್ನು ಆತಂಕದಿಂದ ಹೊರತರುತ್ತವೆ. ಪುಸ್ತಕ ಓದುವ ಹವ್ಯಾಸವು ಎಲ್ಲಕ್ಕಿಂತ ಉತ್ತಮ. ಶಾಸ್ತ್ರೀಯ ಸಂಗೀತಕ್ಕೆ ಆತಂಕವನ್ನು ಕಡಿಮೆ ಮಾಡುವ ಶಕ್ತಿ ಇದೆ.

8. ಯೋಗ, ಪ್ರಾಣಾಯಾಮ, ಧ್ಯಾನ ಇವುಗಳಲ್ಲಿ ಯಾವುದಾದರೊಂದನ್ನು ಅಳವಡಿಸಿದರೆ ಉತ್ತಮ. ಇವುಗಳಿಗೆ ಆತಂಕವನ್ನು ಹೀಲ್ ಮಾಡುವ ಶಕ್ತಿ ಇದೆ.
7.ಯಾವುದೇ ಕೆಲಸವನ್ನು ಆರಂಭ ಮಾಡುವ ಮೊದಲೇ ಕಾನ್ಸಿಕ್ವೆನ್ಸ್ ಬಗ್ಗೆ ಹೆಚ್ಚು ಯೋಚನೆ ಮಾಡಬೇಡಿ. ಬಂದದ್ದನ್ನು ಬಂದ ಹಾಗೆ ಎದುರಿಸಲು ಕಲಿಯುವುದು ಒಳ್ಳೇದು.

8. ನಿಮ್ಮ ಜೀವನದಲ್ಲಿ ಹಿಂದೆ ಆಗಿರುವ ಕಹಿ ಘಟನೆಗಳನ್ನು ಮರೆಯಲು ಪ್ರಯತ್ನ ಪಟ್ಟಷ್ಟು ಅದು ಹಿಂಸೆ ಕೊಡಲು ಆರಂಭ ಆಗ್ತದೆ. ನಿಮಗೆ ಎರಡು ದಾರಿ ಇದೆ. ಒಂದು ಆ ಘಟನೆಗಳನ್ನು ನಿಮ್ಮ ಅತ್ಯಂತ ಆತ್ಮೀಯರ ಜೊತೆಗೆ ಶೇರ್ ಮಾಡಿ ಅದನ್ನು ನಿಮ್ಮ ಸುಪ್ತ ಮನಸಿನಿಂದ ಹೊರಹಾಕುವುದು. ಇನ್ನೊಂದು ಆ ಕಹಿ ಘಟನೆಗಳನ್ನು ನಿಮ್ಮ ಜೀವನದ ಭಾಗ ಎಂದು ಭಾವಿಸಿ ಮುನ್ನಡೆಯುವುದು. ಎರಡನೇ ದಾರಿಯೇ ಹೆಚ್ಚು ಶ್ರೇಯಸ್ಕರ!

9. ಯಾವುದೇ ವ್ಯಸನಗಳು ನಿಮ್ಮನ್ನು ಖಾಲಿ ಮಾಡುತ್ತವೆ. ಆದ್ದರಿಂದ ವ್ಯಸನಗಳಿಗೆ ನಿಮ್ಮ ಜೀವನದಲ್ಲಿ ಸ್ಪೇಸ್ ಕೊಡಬೇಡಿ.
10. ಆತಂಕದ ಸರಿಯಾದ ಕಾರಣ ಟ್ರೇಸ್ ಮಾಡಿದರೆ ಅದನ್ನು ಸ್ವ ನಿಯಂತ್ರಣದ ಮೂಲಕ ನಿರ್ವಹಣೆ ಮಾಡಬಹುದು. ಆತಂಕಕ್ಕೆ ಕಾರಣರಾದ ವ್ಯಕ್ತಿಗಳಿಂದ (ಅವರು ಎಷ್ಟೇ ಹತ್ತಿರದವರಾದರೂ) ಸ್ವಲ್ಪ ದೂರ ಇರಲು ಪ್ರಯತ್ನ ಮಾಡಿ.

11. ತಪ್ಪಿತಸ್ಥ ಭಾವನೆ ನಿಮ್ಮಲ್ಲಿ ಆತಂಕವನ್ನು ಹೆಚ್ಚು ಮಾಡುತ್ತದೆ. ಕ್ಷಮಾಯಾಚನೆ (ಕನ್ಫೆಷನ್) ಮೊದಲಾದ ವಿಧಾನಗಳಿಂದ ಗಿಲ್ಟನಿಂದ ಹೊರಬರಬಹುದು.
12. ಜೀವನದಲ್ಲಿ ಹೆಚ್ಚು ಕ್ರಿಯೇಟಿವ್ ಆದ ಕೆಲಸಗಳನ್ನು ಒಪ್ಪಿಕೊಳ್ಳಿ ಮತ್ತು ಪ್ರೀತಿಯಿಂದ ಮಾಡಿ.
13. ನಿಮ್ಮ ಇತಿ ಮಿತಿಗಳನ್ನು ಒಪ್ಪಿಕೊಳ್ಳಿ ಮತ್ತು ನೀವು ತುಂಬಾ ಸ್ಟ್ರಾಂಗ್ ಎಂದು ಪ್ರೂವ್ ಮಾಡಲು ಹೋಗಬೇಡಿ.

14. ಪ್ರತೀಯೊಂದು ಕೆಲಸದಲ್ಲೂ ಪರಿಪೂರ್ಣತೆ ಹುಡುಕುವವರು (perfectionists) ಆತಂಕದ ಗಂಗೋತ್ರಿಗಳು. ಆ ಮೈಂಡ್ ಸೆಟ್‌ನಿಂದ ಬೇಗ ಹೊರಬನ್ನಿ.
15. ಆತಂಕ ನಿರ್ವಹಣೆಗೆ ತಾರಕ ಮಂತ್ರ ಅಂದರೆ ಪಾಸಿಟಿವ್ ಥಿಂಕಿಂಗ್. ನಾನು ಚೆನ್ನಾಗಿದ್ದೇನೆ, ನನ್ನ ಯೋಚನೆಗಳು ಸರಿ ಇವೆ, ನಾನು ಉತ್ತಮವಾದ ಆತ್ಮವಿಶ್ವಾಸ ಹೊಂದಿದ್ದೇನೆ….. ಹೀಗೆ ಯೋಚನೆ ಮಾಡುತ್ತಾ ಹೋದರೆ ಆತಂಕವು ನಮ್ಮ ಹತ್ತಿರಕ್ಕೂ ಬರುವುದಿಲ್ಲ!

ಯೋಚನೆ ಮಾಡಿ ಮತ್ತು ಅನುಷ್ಠಾನ ಮಾಡಿ ಆಯ್ತಾ. ನಿಮಗೆ ಶುಭವಾಗಲಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

ಪ್ರಮುಖ ಸುದ್ದಿ

ವಿಜಯ್‌ ಸಿಎಂ ಆಗಿದ್ದಕ್ಕೆ ನನಗೆ ಅಸೂಯೆ ಇಲ್ಲ – ರಜನೀಕಾಂತ್‌

VISTARANEWS.COM


on

ಚೆನ್ನೈ: ತಮಿಳು ನಟ ವಿಜಯ್‌ ಮುಖ್ಯಮಂತ್ರಿ ಆಗಿರುವುದಕ್ಕೆ ನನಗೆ ಯಾವುದೇ ಅಸೂಯೆ ಇಲ್ಲ ಎಂದು ತಮಿಳು ನಟ, ಸೂಪರ್‌ ಸ್ಟಾರ್‌ ರಜನೀಕಾಂತ್‌ ಸ್ಪಷ್ಟಪಡಿಸಿದ್ದಾರೆ.

ಚೆನ್ನೈನಲ್ಲಿ ಮಾತನಾಡಿದ ಅವರು, ಪ್ರಬಲ ಮೈತ್ರಿಕೂಟಗಳನ್ನು ಸೋಲಿಸಿ ವಿಜಯ್‌ ಸಿಎಂ ಆಗಿದ್ದಾರೆ. ಇದರಿಂದ ನನಗೆ ಯಾವುದೇ ಅಸೂಯೆ ಇಲ್ಲ. ನನಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.

ನಾನು ರಾಜಕೀಯ ಪ್ರವೇಶಿಸಿದ್ದರೆ ಶೇ.100 ರಷ್ಟು ಯಶಸ್ಸು ಸಾಧಿಸುತ್ತಿದ್ದೆ. ಆದರೆ ನಾನು ರಾಜಕೀಯದಿಂದ ದೂರ ಸರಿದು ಬಹಳ ದಿನಗಳಾಗಿವೆ ಎಂದು ಹೇಳಿದ್ದಾರೆ.

ವಿಜಯ್‌ ಮತ್ತು ನನ್ನ ನಡುವೆ ಒಂದು ಜನರೇಶನ್‌ ಗ್ಯಾಪ್‌ ಇದೆ. ನಮ್ಮಿಬ್ಬರ ನಡುವೆ ಸುಮಾರು 25 ವರ್ಷದ ಅಂತರವಿದೆ. ಅವರ ಬಗ್ಗೆಯಾಗಲಿ, ಅವರ ಸಿಎಂ ಆಗಿರುವುದಕ್ಕಾಗಲಿ ನನಗೆ ಯಾವುದೇ ಅಸೂಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. ವಿಜಯ್‌ ಸಿಎಂ ಆದ ತಕ್ಷಣವೇ ನಾನು ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ ಎಂದು ರಜನೀಕಾಂತ್‌ ತಿಳಿಸಿದರು.

ಚುನಾವಣೆ ಬಳಿಕ ತಮ್ಮ ವಿರುದ್ಧ ಕೇಳಿಬರುತ್ತಿರುವ ಟೀಕೆಗಳ ಕುರಿತೂ ರಜನೀಕಾಂತ್‌ ಪ್ರತಿಕ್ರಿಯೆ ನೀಡಿದರು. ಚುನಾವಣೆ ನಂತರ ನನ್ನ ವಿರುದ್ಧ ಅನೇಕ ಟೀಕೆಗಳು ಬರುತ್ತಿವೆ. ನಾನು ಅವಕ್ಕೆ ಪ್ರತಿಕ್ರಿಯಿಸದಿದ್ದರೆ ಅವು ಸತ್ಯ ಎಂದು ಭಾವಿಸುವ ಸಾಧ್ಯತೆ ಇದೆ ಎಂದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರನ್ನು ಭೇಟಿ ಮಾಡಿದ ವಿಚಾರಕ್ಕೂ ಸ್ಪಷ್ಟನೆ ನೀಡಿದ ರಜನೀಕಾಂತ್‌, ಸ್ಟಾಲಿನ್‌ ಮತ್ತು ನನ್ನ ಸ್ನೇಹ ರಾಜಕೀಯವನ್ನೂ ಮೀರಿದ್ದು, ನಮ್ಮ ಸ್ನೇಹಕ್ಕೆ ಸುಮಾರು 35 ವರ್ಷಗಳ ಇತಿಹಾಸ ಇದೆ ಎಂದು ಹೇಳಿದರು.

“ಕೊಳತ್ತೂರಿನಲ್ಲಿ ಸ್ಟಾಲಿನ್‌ ಸೋತಿದ್ದಕ್ಕೆ ನನಗೆ ಬೇಸರವಾಯಿತು. ಸ್ನೇಹಿತನಾಗಿ ಅವರನ್ನು ಭೇಟಿಯಾಗಿ ಸಮಾಧಾನ ಮಾಡಿದ್ದೇನೆ. ಆದರೆ ಆ ವಿಚಾರದಲ್ಲೂ ಕೆಲವರು ನನ್ನನ್ನು ಟೀಕಿಸುತ್ತಿದ್ದಾರೆ, ಅದಕ್ಕೆ ಈ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ರಜನೀಕಾಂತ್‌ ಹೇಳಿದ್ದಾರೆ.

Continue Reading

Latest

ಅಬುಧಾಬಿಯಲ್ಲಿ ಮೋದಿ: ಯುಎಇ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ

VISTARANEWS.COM


on

ಅಬುಧಾಬಿ: ಆರು ದಿನಗಳ ವಿದೇಶ ಪ್ರವಾಸದಲ್ಲಿ ಪ್ರಧಾನಿ ಮೊದಲು ಯುಎಇಗೆ ಭೇಟಿ ನೀಡಿದ್ದಾರೆ. ಯುರೋಪ್ ಭೇಟಿಗೂ ಮುನ್ನ ಅಬುಧಾಬಿಗೆ ಭೇಟಿ ನೀಡಿದ್ದು, ಭಾರತ-ಯುಎಇ ನಡುವಿನ ನಿಕಟ ಸಂಬಂಧಕ್ಕೆ ಸಾಕ್ಷಿ ಎನ್ನಲಾಗುತ್ತಿದೆ.
ಅಬುಧಾಬಿಯಲ್ಲಿ ಪ್ರಧಾನಿ ಮೋದಿ ಮತ್ತು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ರಕ್ಷಣೆ, ವ್ಯಾಪಾರ, ಹೂಡಿಕೆ, ಇಂಧನ ಭದ್ರತೆ ಕುರಿತು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮೋದಿ ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸಲು ಎಲ್ಲಾ ಅಗತ್ಯ ನೆರವು ನೀಡುವ ಭರವಸೆ ನೀಡಿದರು. ಇದೇ ವೇಳೆ ಅವರು, ಯುಎಇ ಮೇಲಿನ ಇರಾನ್ ದಾಳಿಯನ್ನು ಖಂಡಿಸಿದರು.
ಪ್ರಧಾನಿ ಮೋದಿಯವರ ಭೇಟಿಯನ್ನು ಯುಎಇ ಮುಕ್ತಕಂಠದಿಂದ ಹೊಗಳಿದೆ. ‘ಭಾರತದ ಪ್ರಧಾನಿ ನಮ್ಮ ನಿಜವಾದ ಆಸ್ತಿ’ ಎಂದು ಯುಎಇ ಅಂತಾರಾಷ್ಟ್ರೀಯ ಸಹಕಾರ ಸಚಿವೆ ರೀಮ್ ಅಲ್ ಹಶಿಮಿ ಬಣ್ಣಿಸಿದ್ದಾರೆ.
ಪ್ರಧಾನಿ ಮೋದಿ ಯುಎಇಗೆ ಆಗಮಿಸುತ್ತಿದ್ದಂತೆಯೇ ಭವ್ಯ ಸ್ವಾಗತ ನೀಡಲಾಯಿತು. ಮೋದಿ ಅವರಿದ್ದ ವಿಶೇಷ ವಿಮಾನಕ್ಕೆ ಗಗನಮಾರ್ಗದಲ್ಲೇ ಯುಎಇಯ ಎಫ್‌-16 ಯುದ್ಧ ವಿಮಾನಗಳು ಗೌರವ ರಕ್ಷೆ ನೀಡಿದ್ದವು.
ಯುಎಇ ಬಳಿಕ ಮೋದಿ ನೆದರ್‌ಲ್ಯಾಂಡ್‌, ಸ್ವೀಡನ್, ನಾರ್ವೆ ಮತ್ತು ಇಟಲಿ ದೇಶಗಳಿಗೆ ತೆರಳಲಿದ್ದಾರೆ.

Continue Reading

Latest

ಪಶ್ಚಿಮ ಬಂಗಾಳದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿ; ನಿಯಮ ಉಲ್ಲಂಘಿಸಿದ್ರೆ ಜೈಲು ಶಿಕ್ಷೆ, ದಂಡ

VISTARANEWS.COM


on

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ದೀದಿ ಭದ್ರಕೋಟೆಯನ್ನು ಧೂಳೀಪಟಗೈದು ಅಧಿಕಾರಕ್ಕೇರಿದ ಸುವೇಂದು ಅಧಿಕಾರಿ ಮುಖ್ಯಮಂತ್ರಿ ಪಟ್ಟಕ್ಕೇರುತ್ತಿದ್ದಂತೆ ಮಹತ್ವದ ಆದೇಶ ಹೊರಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಆರೋಗ್ಯವಂತ ಜಾನುವಾರುಗಳ ಹತ್ಯೆ ಮಾಡಿದರೆ ಶಿಕ್ಷೆ ನೀಡಲಾಗುವುದು ಎಂದು ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಪಶುವೈದ್ಯರು ನೀಡುವ ಫಿಟ್‌ನೆಸ್‌‍ ಪ್ರಮಾಣಪತ್ರವಿಲ್ಲದೆ ಹಸು, ಹೋರಿ, ಎಮ್ಮೆ ಮತ್ತು ಕರು ಸೇರಿ ಯಾವುದೇ ಪ್ರಾಣಿಯನ್ನು ಹತ್ಯೆ ಮಾಡುವಂತಿಲ್ಲ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರವು ಅಧಿಸೂಚನೆ ಹೊರಡಿಸಿದೆ.
ಹಸು 14 ವರ್ಷ ಮೇಲ್ಪಟ್ಟಿದ್ದು, ಕೆಲಸ ಮಾಡಲು ಅಥವಾ ಸಂತಾನೋತ್ಪತ್ತಿ ಮಾಡಲು ಯೋಗ್ಯವಿಲ್ಲದಿದ್ದರೆ ಅಥವಾ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿದ್ದು, ಶಾಶ್ವತವಾಗಿ ಗುಣಪಡಿಸಲು ಸಾಧ್ಯವಾಗದಿದ್ದರೆ ಮಾತ್ರ ಸ್ಥಳೀಯ ನಾಗರಿಕ ಅಧಿಕಾರಿಗಳು ಅಥವಾ ಪಶುವೈದ್ಯರು ಜಂಟಿಯಾಗಿ ಪ್ರಮಾಣ ಪತ್ರವನ್ನು ನೀಡಬಹುದಾಗಿದೆ.
ನಿಯಮಗಳನ್ನು ಜಾರಿಗೊಳಿಸಲು ಅಧಿಕಾರಿಗಳು ನಡೆಸುವ ಯಾವುದೇ ಪರಿಶೀಲನೆಯನ್ನು ವ್ಯಕ್ತಿಗಳು ತಡೆಯುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಯಾವುದೇ ರೀತಿಯ ಕಾನೂನು ಉಲ್ಲಂಘನೆಗಳಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 1 ಸಾವಿರ ರೂಪಾಯಿವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

Continue Reading

ಪ್ರಮುಖ ಸುದ್ದಿ

ಕರ್ನಾಟಕ ಸೇರಿ 16 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌

VISTARANEWS.COM


on


ಕೇಂದ್ರ ಚುನಾವಣಾ ಆಯೋಗ 3 ನೇ ಹಂತದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ( ಎಸ್‌ಐಆರ್‌) ಘೋಷಣೆ ಮಾಡಿದೆ. ಇದರಲ್ಲಿ ಕರ್ನಾಟಕ ಸೇರಿದಂತೆ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಸೇರಿದ್ದು, ಮೇ 30ರಿಂದ ಎಸ್‌ಐಆರ್‌ ನಡೆಯಲಿದೆ.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ದೆಹಲಿ, ಹರಿಯಾಣ, ಪಂಜಾಬ್‌, ಚಂಡೀಗಢ, ಒಡಿಶಾ, ಮಿಜೋರಾಂ, ಸಿಕ್ಕಿಂ, ಮಣಿಪುರ, ಉತ್ತರಾಖಂಡ, ಅರುಣಾಚಲ ಪ್ರದೇಶ, ಮೇಘಾಲಯ, ಜಾರ್ಜಂಡ್‌, ನಾಗಾಲ್ಯಾಂಡ್‌, ತ್ರಿಪುರ, ದಾದರ್‌ ಮತ್ತು ನಗರ ಹವೇಲಿ, ದಮನ್‌ ಮತ್ತು ದಿಯುಗಳಲ್ಲಿ 3 ನೇ ಹಂತದಲ್ಲಿ ಎಸ್‌ಐಆರ್‌ ನಡೆಯಲಿದೆ.
3ನೇ ಹಂತದ ಎಸ್‌ಐಆರ್‌ನಲ್ಲಿ 3.94 ಲಕ್ಷಕ್ಕೂ ಅಧಿಕ ಬೂತ್‌ ಮಟ್ಟದ ಅಧಿಕಾರಿಗಳು 36.73ಕೋಟಿ ಮತದಾರರ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ.
ಈಗಾಗಲೇ ದೇಶದ 10 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌ ನಡೆಸಲಾಗಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ರಾಜಸ್ಥಾನ, ಛತ್ತೀಸಗಢ, ಕೇರಳಂ, ಪುದುಚೇರಿ, ಅಂಡಮಾನ್‌ ಮತ್ತು ನಿಕೋಬಾರ್‌, ಲಕ್ಷದ್ವೀಪ, ಗುಜರಾತ್‌, ಮಧ್ಯಪ್ರದೇಶ, ಗೋವಾ ಮತ್ತು ಬಿಹಾರದಲ್ಲಿ ಈಗಾಗಲೇ ಎಸ್‌ಐಆರ್‌ ಕಾರ್ಯ ಮುಗಿದಿದೆ.
ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಎಸ್‌ಐಆರ್‌ ಬಾಕಿ ಇದ್ದು, ಸ್ಥಳೀಯ ಹವಾಮಾನ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿ ಘೋಷಿಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

Continue Reading
Advertisement
ಪ್ರಮುಖ ಸುದ್ದಿ14 hours ago

ವಿಜಯ್‌ ಸಿಎಂ ಆಗಿದ್ದಕ್ಕೆ ನನಗೆ ಅಸೂಯೆ ಇಲ್ಲ – ರಜನೀಕಾಂತ್‌

Latest15 hours ago

ಕೇರಳಂ ಮುಖ್ಯಮಂತ್ರಿಯಾಗಿ ನಾಳೆ ವಿ.ಡಿ. ಸತೀಶನ್ ಪ್ರಮಾಣವಚನ

Latest2 days ago

ಅಬುಧಾಬಿಯಲ್ಲಿ ಮೋದಿ: ಯುಎಇ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ

Latest3 days ago

ವಾಹನ ಸವಾರರಿಗೆ ಶಾಕ್! ಪೆಟ್ರೋಲ್, ಡೀಸೆಲ್ ತಲಾ ₹3 ಏರಿಕೆ.

Latest3 days ago

ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಶಾಕ್‌, ಜಾಮೀನು ಅರ್ಜಿ ವಜಾ

Latest3 days ago

ಚೀನಾದಲ್ಲಿ ಟ್ರಂಪ್‌, ಶಿ ಜಿನ್‌‌ಪಿಂಗ್‌ ಹೈವೋಲ್ಟೇಜ್‌ ಮೀಟಿಂಗ್‌‌

Latest3 days ago

ಪಶ್ಚಿಮ ಬಂಗಾಳದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿ; ನಿಯಮ ಉಲ್ಲಂಘಿಸಿದ್ರೆ ಜೈಲು ಶಿಕ್ಷೆ, ದಂಡ

ಪ್ರಮುಖ ಸುದ್ದಿ3 days ago

ಕರ್ನಾಟಕ ಸೇರಿ 16 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌

Latest3 days ago

ಹಿಜಾಬ್‌ ಓಕೆ, ಕೇಸರಿ ಶಾಲುಗೆ ನೋ: ಪರ- ವಿರೋಧ ಚರ್ಚೆ ಶುರು

Latest4 days ago

ವಿ.ಡಿ. ಸತೀಶನ್‌ ಸಿಎಂ ಆಗಿ ಆಯ್ಕೆ ಹಿಂದಿನ ರಿಯಲ್ ಸ್ಟೋರಿ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌