Rinku Singh : ಆಟದಲ್ಲಿ ಸಿಕ್ಕ ದೊಡ್ಡ ಬಹುಮಾನದಲ್ಲಿ ಅಪ್ಪನಿಗೆ ಕಾರು ಕೊಡಿಸಿದ ರಿಂಕು ಸಿಂಗ್​ - Vistara News

ಪ್ರಮುಖ ಸುದ್ದಿ

Rinku Singh : ಆಟದಲ್ಲಿ ಸಿಕ್ಕ ದೊಡ್ಡ ಬಹುಮಾನದಲ್ಲಿ ಅಪ್ಪನಿಗೆ ಕಾರು ಕೊಡಿಸಿದ ರಿಂಕು ಸಿಂಗ್​

Rinku Singh : ಲಕ್ನೋದ ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ರಿಂಕು ಅವರಿಗೆ 3 ಕೋಟಿ ರೂಪಾಯಿ ಬಹುಮಾನ ಬಂದಿದೆ.

VISTARANEWS.COM


on

Rinku Singh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತದ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ರಿಂಕು ಸಿಂಗ್ (Rinku Singh) ತಮ್ಮ ತಂದೆಗೆ ಕಾರು ಖರೀದಿಸಿ ಕೊಡಲಿದ್ದಾರೆ. ತಮಗೆ ಸಿಕ್ಕಿರುವ 3 ಕೋಟಿ ರೂಪಾಯಿಗಳ ಬಹುಮಾನದಲ್ಲಿ ಕಾರು ಖರೀದಿಸುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ. ಲಕ್ನೋದ ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ರಿಂಕು ಪದಕ ಗೆದ್ದು 3 ಕೋಟಿ ರೂಪಾಯಿ ಬಹುಮಾನ ಪಡೆದಿದ್ದರು.

ಲಕ್ನೋದ ಇಂದಿರಾ ಗಾಂಧಿ ಫೌಂಡೇಶನ್ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ರಿಂಕು ನೀಡಿದ ಅತ್ಯುತ್ತಮ ಪ್ರದರ್ಶನಕ್ಕಾಗಿ 3 ಕೋಟಿ ರೂಪಾಯಿ ಬಹುಮಾನ ಬಂದಿದೆ. ಬಹುಮಾನದ ಹಣದಿಂದ ರಿಂಕು ತನ್ನ ತಂದೆ ಖಾನ್​ಚಂದ್ರ ಸಿಂಗ್​ ಅವರಿಗೆ ಕಾರು ಉಡುಗೊರೆಯಾಗಿ ನೀಡಲು ಸಜ್ಜಾಗಿದ್ದಾರೆ. ಐಪಿಎಲ್ 2023 ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ತಮ್ಮ ರಿಂಕು ಅವರ ವೀರೋಚಿತ ಪ್ರದರ್ಶನದ ನಂತರ ಅವರ ತಂದೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ, ಖಾನ್​ಚಂದ್ರ ಸಿಂಗ್ ಅವರು ಕಷ್ಟದ ದಿನಗಳಲ್ಲಿ ಮಾಡುತ್ತಿದ್ದ ಗ್ಯಾಸ್​ ವಿತರಣೆಯ ಕೆಲಸವನ್ನು ಈಗಲೂ ಮುಂದುವರಿಸುತ್ತಿರುವ ವಿಡಿಯೊವೊಂದು ವೈರಲ್​ ಆಗಿತ್ತು.

ಭಾರತಕ್ಕೆ ಪ್ರಮುಖ ಆಟಗಾರ

ರಿಂಕು ಸಿಂಗ್ ಅವರ ಪ್ರದರ್ಶನವು ಅವರ ಖ್ಯಾತಿಯನ್ನು ಗಗನಕ್ಕೇರಿಸಿದೆ. ಐಪಿಎಲ್​ನಲ್ಲಿ ಅವರ ಪ್ರದರ್ಶನವು ಅವರು ಚುಟುಕು ಕ್ರಿಕೆಟ್​ನಲ್ಲಿ ಭಾರತೀಯ ತಂಡಕ್ಕೆ ಆಯ್ಕೆಯಾಗುವಂತೆ ಮಾಡಿತು. ಭಾರತ ಪರ 15 ಟಿ20 ಪಂದ್ಯಗಳನ್ನಾಡಿರುವ ರಿಂಕು 89ರ ಸರಾಸರಿಯಲ್ಲಿ 356 ರನ್ ಗಳಿಸಿದ್ದಾರೆ. ಟಿ20 ವಿಶ್ವಕಪ್ ಸಮೀಪಿಸುತ್ತಿರುವುದರಿಂದ ರಿಂಕು ತನ್ನ ಫಿನಿಶರ್ ಪಾತ್ರಕ್ಕೆ ಆಯ್ಯೆಯಾಗುವ ಸಾಧ್ಯತೆಗಳಿವೆ.

ಐಪಿಎಲ್ 2024 ಸಮೀಪಿಸುತ್ತಿದ್ದಂತೆ, ರಿಂಕು ಸಿಂಗ್ ಮತ್ತೊಮ್ಮೆ ಕೆಕೆಆರ್ ಜೆರ್ಸಿ ಧರಿಸಿ ಮತ್ತೊಮ್ಮೆ ಮಿಂಚುವುದು ಖಚಿತ. ಐಪಿಎಲ್ 2023 ರಲ್ಲಿ ರಿಂಕು ಸತತ 5 ಸಿಕ್ಸರ್​ಗಳನ್ನು ಬಾರಿಸಿ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧದ ಪಂದ್ಯದಲ್ಲಿ ಕೆಕೆಆರ್​ಗೆ ಕೊನೆಯ ಓವರ್​ನಲ್ಲಿ ಗೆಲುವು ತಂದುಕೊಟ್ಟಿದ್ದರು. ಅಲ್ಲಿಂದ ಅವರ ಜನಪ್ರಿಯತೆ ಉತ್ತುಂಗಕ್ಕೆ ಏರಿತ್ತು.

ಆಂಡ್ರೆ ರಸೆಲ್, ಸುನಿಲ್ ನರೈನ್, ಶ್ರೇಯಸ್ ಅಯ್ಯರ್ ಮತ್ತು ನಿತೀಶ್ ರಾಣಾ ಅವರಂತಹ ಬಲಿಷ್ಠ ಆಟಗಾರರೊಂದಿಗೆ ಅವರನ್ನು ಉಳಿಸಿಕೊಳ್ಳುವ ಮೂಲಕ ಕೋಲ್ಕತಾ ಫ್ರಾಂಚೈಸಿ ಯುವ ಪ್ರತಿಭೆಯ ಮೇಲೆ ಅಪಾರ ನಂಬಿಕೆ ಇಟ್ಟಿದೆ. ಮುಂಬರುವ ಋತುವಿನಲ್ಲಿ ಕೆಕೆಆರ್ ತಂಡದಲ್ಲಿ ರಿಂಕು ಪ್ರಮುಖ ಆಟಗಾರ ಎನಿಸಿಕೊಂಡಿದ್ದಾರೆ. ಐಪಿಎಲ್ ನಂತರ ಟಿ 20 ವಿಶ್ವಕಪ್ ನಿಗದಿಯಾಗಿರುವುದರಿಂದ, ರಿಂಕು 2024ರ ಟಿ 20 ವಿಶ್ವಕಪ್​ನಲ್ಲಿ ಅವಕಾಶ ಪಡೆಯಲು ಪ್ರಯತ್ನಿಸಬಹುದು.

ಇದನ್ನೂ ಓದಿ : Mayank Agarwal : ಸಂಚು ನಡೆದಿದೆ ಎಂದು ದೂರು ದಾಖಲಿಸಿದ ಮಯಾಂಕ್​

ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ವಿಶ್ವ ಕಪ್​

ಜೂನ್ 2024 ರಲ್ಲಿ ಟಿ20 ಪುರುಷರ ವಿಶ್ವಕಪ್​ನ ಒಂಬತ್ತನೇ ಆವೃತ್ತಿ ನಡೆಯಲಿದೆ. ತಂಡವನ್ನು ಅಂತಿಮಗೊಳಿಸಲು ಭಾರತೀಯ ಆಯ್ಕೆದಾರರು ಮತ್ತು ಟೀಮ್ ಮ್ಯಾನೇಜ್ಮೆಂಟ್ ಮುಂಬರುವ ಐಪಿಎಲ್ 2024 ಅನ್ನು ಸೂಕ್ಷ್ಮವಾಗಿ ಗಮನಿಸಲಿದೆ. ಟಿ20 ಕ್ರಿಕೆಟ್ ಟೂರ್ನಿಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆತಿಥ್ಯ ವಹಿಸಲಿದ್ದು, ವಿಂಡೀಸ್​ನಲ್ಲಿ 6 ಹಾಗೂ ಯುಎಸ್​ನಲ್ಲಿ 3 ಪಂದ್ಯಗಳು ನಡೆಯಲಿವೆ. ಚೊಚ್ಚಲ ಉಗಾಂಡಾ ಸೇರಿದಂತೆ ಒಟ್ಟು 20 ರಾಷ್ಟ್ರಗಳು ಪ್ರಶಸ್ತಿಗಾಗಿ ಸೆಣಸಲಿವೆ.

ತಂಡಗಳು ನಾಲ್ಕು ಗುಂಪುಗಳಾಗಿ ವಿಂಗಡಿಸಲ್ಪಟ್ಟಿವೆ. ಪ್ರತಿಯೊಂದೂ ಗುಂಪು ಐದು ತಂಡಗಳನ್ನು ಒಳಗೊಂಡಿದೆ. ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೂಪರ್ 8 ಹಂತಕ್ಕೆ ಪ್ರವೇಶಿಸುತ್ತವೆ. ನಂತರ ನಾಕೌಟ್ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯುತ್ತವೆ. ‘ಎ’ ಗುಂಪಿನಲ್ಲಿ ಆತಿಥೇಯ ಅಮೆರಿಕ, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ, ಕೆನಡಾ ಮತ್ತು ಯುರೋಪಿಯನ್ ತಂಡ ಐರ್ಲೆಂಡ್ ತಂಡಗಳು ಸ್ಥಾನ ಪಡೆದಿವೆ. ‘ಬಿ’ ಗುಂಪಿನಲ್ಲಿ ಕಳೆದ ಎರಡು ಪುರುಷರ ಟಿ 20 ವಿಶ್ವಕಪ್ ವಿಜೇತರಾದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳಿವೆ, ಅವು ನಮೀಬಿಯಾ, ಸ್ಕಾಟ್ಲೆಂಡ್ ಮತ್ತು ಒಮಾನ್ ವಿರುದ್ಧ ಸ್ಪರ್ಧಿಸಲಿವೆ.

‘ಸಿ’ ಗುಂಪಿನಲ್ಲಿ ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಉಗಾಂಡಾ ಮತ್ತು ಪಪುವಾ ನ್ಯೂಗಿನಿ ತಂಡಗಳಿವೆ. ‘ಡಿ’ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್ ಮತ್ತು ನೇಪಾಳ ತಂಡಗಳು ಸ್ಥಾನ ಪಡೆದಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Wayanad Landslide: ಭಯಾನಕ ಸಾವಿನಿಂದ ರಕ್ಷಿಸಿತು ಸಾಕಿದ ಹಸು! ಕನ್ನಡಿಗ ಕುಟುಂಬದ ಅನುಭವ

Wayanad Landslide: ವೈನಾಡಿನ ಚೂರಲ್‌ಮಲೆಯಲ್ಲಿ ನೆಲೆಸಿದ್ದ ಚಾಮರಾಜನಗರದ ವಿನೋದ್, ಜಯಶ್ರೀ, ಸಿದ್ದರಾಜು, ಮಹೇಶ್ ಹಾಗೂ ಗೌರಮ್ಮ ಎಂಬವರು ಪಾರಾದವರು. ಮೇಪ್ಪಾಡಿಯಲ್ಲಿದ್ದ ಪ್ರವಿದಾ, ಲಕ್ಷ್ಮಿ, ಪುಟ್ಟಸಿದ್ದಮ್ಮ ಮತ್ತು 2 ತಿಂಗಳ ಮಗು ಚಾಮರಾಜನಗರಕ್ಕೆ ಸುರಕ್ಷಿತವಾಗಿ ಬಂದಿದ್ದಾರೆ.

VISTARANEWS.COM


on

wayanad landslide cow rescues family
Koo

ಚಾಮರಾಜನಗರ: ಕೇರಳದ ವೈನಾಡಿನಲ್ಲಿ ಸಂಭವಿಸಿದ ರುದ್ರಭಯಾನಕ ಭೂಕುಸಿತದಲ್ಲಿ (Wayanad landslide, Kerala Landslide) ಚಾಮರಾಜನಗರ ಮೂಲದ ಕುಟುಂಬವೊಂದನ್ನು ಅವರು ಸಾಕಿದ ಹಸು ವಿಚಿತ್ರ ರೀತಿಯಲ್ಲಿ ಪಾರು ಮಾಡಿದ ಘಟನೆ (Viral news) ನಡೆದಿದೆ.

ವೈನಾಡಿನ ಚೂರಲ್‌ಮಲೆಯಲ್ಲಿ ನೆಲೆಸಿದ್ದ ಚಾಮರಾಜನಗರದ ವಿನೋದ್, ಜಯಶ್ರೀ, ಸಿದ್ದರಾಜು, ಮಹೇಶ್ ಹಾಗೂ ಗೌರಮ್ಮ ಎಂಬವರು ಪಾರಾದವರು. ಮೇಪ್ಪಾಡಿಯಲ್ಲಿದ್ದ ಪ್ರವಿದಾ, ಲಕ್ಷ್ಮಿ, ಪುಟ್ಟಸಿದ್ದಮ್ಮ ಮತ್ತು 2 ತಿಂಗಳ ಮಗು ಚಾಮರಾಜನಗರಕ್ಕೆ ಸುರಕ್ಷಿತವಾಗಿ ಬಂದಿದ್ದಾರೆ. ವಿನೋದ್ ಪತ್ನಿ ಬಾಣಂತಿಯಾದ ಕಾರಣ ಪ್ರವಿದಾ, ಅತ್ತೆ ಲಕ್ಷ್ಮೀ ಹಾಗೂ ಪುಟ್ಟಸಿದ್ದಮ್ಮ ಮೇಪ್ಪಾಡಿಯಲ್ಲಿದ್ದರು. ವಿನೋದ್ ಮತ್ತು ನಾಲ್ವರು ಚೂರಲ್‌ಮಲೆಯಲ್ಲಿದ್ದರು. ಚೂರಲ್‌ಮಲೆಗೂ ಮೇಪ್ಪಾಡಿಗೂ 6 ಕಿಮೀ ದೂರವಿದ್ದು, ಭೂಕುಸಿತ ಉಂಟಾಗುವ ಕೆಲವು ಸಮಯಕ್ಕೆ ಮುನ್ನ ಇವರು ಪಾರಾಗಿ ಸುರಕ್ಷಿತ ಸ್ಥಳಕ್ಕೆ ಸೇರಿಕೊಂಡಿದ್ದಾರೆ.

ಅದು ಘಟಿಸಿದ್ದು ಹೀಗೆ. ಚೂರಲ್ ಮಲೆಯಲ್ಲಿ ವಿನೋದ್ ಕುಟುಂಬ ನಿದ್ರಿಸುತ್ತಿದ್ದಾಗ ಕೊಟ್ಟಿಗೆಯಲ್ಲಿದ್ದ ಹಸು ಚೀರಾಡಿ, ಅಳುವ ಸದ್ದು ಮಾಡಿದೆ. ಕೂಡಲೇ ಎಚ್ಚೆತ್ತ ವಿನೋದ್ ಕೊಟ್ಟಿಗೆಗೆ ತೆರಳಿ ನೋಡಿದಾಗ ನೀರು ತುಂಬಿಕೊಂಡಿದ್ದನ್ನು ಕಂಡಿದ್ದಾರೆ. ಕೂಡಲೇ ವಿನೋದ್ ಮನೆಯಲ್ಲಿದ್ದವರನ್ನು ಎಬ್ಬಿಸಿ ಗುಡ್ಡದ ಮೇಲಕ್ಕೆ ತೆರಳಿದ್ದಾರೆ. ನೋಡನೋಡುತ್ತಿದ್ದಂತೆ ಇವರು ಇದ್ದ ಮನೆ, ವಾಹನ ಎಲ್ಲವೂ ಮಾಯವಾದಂತೆ ಭೂಮಿಯಡಿ ಹುದುಗಿಹೋಗಿದೆ. ಮನೆಯ ಸಮೀಪವೇ ಇದ್ದ ಸೇತುವೆ ಕೂಡ ಎರಡು ಭಾಗವಾಗಿದೆ. ಕೂಡಲೇ ಮೇಪ್ಪಾಡಿಯಲ್ಲಿದ್ದ ಪತ್ನಿಗೂ ವಿಚಾರ ತಿಳಿಸಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ವಿನೋದ್ ಸೂಚಿಸಿದ್ದಾರೆ. ಪ್ರವಿದಾ, ಲಕ್ಷ್ಮೀ ಹಾಗೂ ಪುಟ್ಟಸಿದ್ದಮ್ಮ ಸುರಕ್ಷಿತ ಸ್ಥಳಕ್ಕೆ ಬಂದು ಕಾರ್ ಮೂಲಕ ಚಾಮರಾಜನಗರಕ್ಕೆ ಮಂಗಳವಾರ ಸಂಜೆ ತಲುಪಿದ್ದಾರೆ.

ಗುಡ್ಡದ ಮೇಲೆ ಆಶ್ರಯ ಪಡೆದಿದ್ದ ವಿನೋದ್ ಹಾಗೂ ಮತ್ತಿತರರನ್ನು ರಕ್ಷಣಾ ಪಡೆ ಮಂಗಳವಾರ ಸಂಜೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಸಾಕಿದ್ದ ಹಸು ದೇವರಂತೆ ಅಪಾಯದ ಬಗ್ಗೆ ಕುಟುಂಬಕ್ಕೆ ಎಚ್ಚರಿಸಿ ಇಡೀ ಕುಟುಂಬವನ್ನು ಪಾರುಮಾಡಿದೆ. ಆದರೆ ಇವರನ್ನು ಕಾಪಾಡಿದ ಹಸು ಉಳಿದಿದೆಯೋ ಇಲ್ಲವೋ ತಿಳಿದುಬಂದಿಲ್ಲ.

ನಾಲ್ವರ ಶವ ಪತ್ತೆ, ಉಳಿದವರಿಗೆ ಶೋಧ ಮುಂದುವರಿಕೆ

ಚಾಮರಾಜನಗರ ಜಿಲ್ಲೆಯ ರಾಜೇಂದ್ರ(50), ರತ್ನಮ್ಮ(45), ಪುಟ್ಟಸಿದ್ದಶೆಟ್ಟಿ(62), ರಾಣಿ(50) ಇವರ ಶವಗಳು ದೊರೆತಿವೆ. ತ್ರಯಂಬಕಪುರದ ಸ್ವಾಮಿಶೆಟ್ಟಿ ಎಂಬವರಿಗೆ ಗಾಯಗಳಾಗಿವೆ. ರಾಜೇಂದ್ರ, ರತ್ನಮ್ಮ ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದವರು. ಇಬ್ಬರ ಶವ ಇನ್ನೂ ಪತ್ತೆಯಾಗಿಲ್ಲ. ವೈನಾಡು ಜಿಲ್ಲೆಯ ಮೆಪ್ಪಾಡಿಯ ವೈತ್ರಿ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್‌ ಬಾಬು ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆದಿದ್ದು, ತಹಸೀಲ್ದಾರ್ ನೇತೃತ್ವದ ತಂಡ ಮೃತರ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಝಾನ್ಸಿ, ಝಾನ್ಸಿ ಪುತ್ರ ನಿಹಾಲ್, ಅತ್ತೆ ಲೀಲಾವತಿ ನಾಪತ್ತೆಯಾಗಿದ್ದಾರೆ. ಮೈಸೂರಿನ ಸರಗೂರಿನ ಅನಿಲ್ ಕುಮಾರ್ ಎಂಬುವವರಿಗೆ ಝಾನ್ಸಿರಾಣಿಯನ್ನು ಕುಟುಂಬ ಮದುವೆ ಮಾಡಿಕೊಟ್ಟಿತ್ತು. ಕೇರಳದ ಮುಂಡಕೈಯಲ್ಲಿ ಅನಿಲ್, ಪತ್ನಿ ಝಾನ್ಸಿ, ಪುತ್ರ ನಿಹಾಲ್ ಹಾಗೂ ತಂದೆ-ತಾಯಿ ನೆಲೆಸಿದ್ದರು. ಮುಂಡಕೈ ಗುಡ್ಡ ಕುಸಿತದಲ್ಲಿ ಅನಿಲ್ ತಾಯಿ ಲೀಲಾವತಿ(55), ಪುತ್ರ ನಿಹಾಲ್(2.5) ನಾಪತ್ತೆಯಾಗಿದ್ದು, ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಅನಿಲ್ ಹಾಗೂ ಅವರ ಪತ್ನಿ ಝಾನ್ಸಿ, ತಂದೆ ದೇವರಾಜು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರೂ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮೂವರಿಗೆ ಕೇರಳದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಕುಟುಂಬಸ್ಥರನ್ನು ಕಾಣಲು ಝಾನ್ಸಿರಾಣಿ ಕುಟುಂಬಸ್ಥರು ಕೇರಳಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: Wayanad Landslide: ವೈನಾಡ್‌ ಭೂಕುಸಿತ ಪರಿಣಾಮ ಕರ್ನಾಟಕ- ಕೇರಳ ರಸ್ತೆ ಸಂಪರ್ಕ ಕಡಿತ, ಬಸ್‌ ಸಂಚಾರ ಸ್ಥಗಿತ

Continue Reading

ಪ್ರಮುಖ ಸುದ್ದಿ

Wayanad Landslide: ವೈನಾಡ್‌ ಭೂಕುಸಿತ ಪರಿಣಾಮ ಕರ್ನಾಟಕ- ಕೇರಳ ರಸ್ತೆ ಸಂಪರ್ಕ ಕಡಿತ, ಬಸ್‌ ಸಂಚಾರ ಸ್ಥಗಿತ

ಭೂಕುಸಿತದಿಂದ ತತ್ತರಿಸಿರುವ (Wayanad landslide, Kerala Landslide) ವೈನಾಡಿಗೆ ಶೀಘ್ರವೇ ತಲುಪಲು ಅನುವಾಗುವಂತೆ ಈ ಕ್ರಮ ತೆಗೆದುಕೊಳ್ಳಲಾಗಿದ್ದು, ಬಂಡಿಪುರ ಚೆಕ್‌ಪೋಸ್ಟ್‌ನಲ್ಲಿ (Bandipura Checkpost) ಎನ್‌ಡಿಆರ್‌ಎಫ್ ಹಾಗೂ ಸೇನೆಯ ತಂಡಗಳಿಗೆ ಹಾಗೂ ಪರಿಹಾರ ಸಾಮಗ್ರಿಗಳ ಸಾಗಾಣಿಕೆ ವಾಹನಗಳಿಗೆ ಗ್ರೀನ್‌ ಕಾರಿಡಾರ್‌ ಮೂಲಕ ಅನಿರ್ಬಂಧಿತ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ.

VISTARANEWS.COM


on

wayanad landslide bandipur checkpost
Koo

ಕೇರಳ: ಕರ್ನಾಟಕದಿಂದ ಕೇರಳವನ್ನು (Karnataka- Kerala) ಸಂಪರ್ಕಿಸುವ ಮೈಸೂರು- ಸುಲ್ತಾನ್ ಬತ್ತೇರಿ- ವೈನಾಡು ರಸ್ತೆ ಸಂಪರ್ಕವನ್ನು (Road Cut) ಕಡಿತಗೊಳಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ತಂಡಗಳು ಭೂಕುಸಿತದಿಂದ ತತ್ತರಿಸಿರುವ (Wayanad landslide, Kerala Landslide) ವೈನಾಡಿಗೆ ಶೀಘ್ರವೇ ತಲುಪಲು ಅನುವಾಗುವಂತೆ ಈ ಕ್ರಮ ತೆಗೆದುಕೊಳ್ಳಲಾಗಿದ್ದು, ಬಂಡಿಪುರ ಚೆಕ್‌ಪೋಸ್ಟ್‌ನಲ್ಲಿ (Bandipura Checkpost) ಎನ್‌ಡಿಆರ್‌ಎಫ್ ಹಾಗೂ ಸೇನೆಯ ತಂಡಗಳಿಗೆ ಹಾಗೂ ಪರಿಹಾರ ಸಾಮಗ್ರಿಗಳ ಸಾಗಾಣಿಕೆ ವಾಹನಗಳಿಗೆ ಗ್ರೀನ್‌ ಕಾರಿಡಾರ್‌ ಮೂಲಕ ಅನಿರ್ಬಂಧಿತ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ. ಬಹುತೇಕ ಬಸ್ಸುಗಳು ಸಂಚಾರ ರದ್ದುಪಡಿಸಿವೆ.

ಗುಂಡ್ಲುಪೇಟೆ ಮಾರ್ಗವಾಗಿ ಸಾಗುವ ಬೆಂಗಳೂರು-ವೈನಾಡ್ ರಾಷ್ಟ್ರೀಯ ಹೆದ್ದಾರಿ 766 ರ ಮಾರ್ಗದಲ್ಲಿ ಸಂಚಾರ ಮುಂಜಾಗ್ರತಾ ಕ್ರಮವಾಗಿ ನಿರ್ಬಂಧಿಸಲಾಗಿದ್ದು, ಪರ್ಯಾಯವಾಗಿ ಗುಂಡ್ಲುಪೇಟೆ-ಬಂಡೀಪುರ-ಗುಡಲೂರ ಮಾರ್ಗದಲ್ಲಿ ತೆರಳಲು ಸೂಚಿಸಲಾಗಿದೆ.

ಕರ್ನಾಟಕ ಸರ್ಕಾರವು ಕೇರಳ ಸರ್ಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯ ನೆರವು ನೀಡುತ್ತಿದ್ದು, ಗಡಿ ಭಾಗದ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಹ ಈ ಕುರಿತು ಸೂಕ್ತ ಬೆಂಬಲ ನೀಡಿದ್ದಾರೆ.

ಬಸ್‌ ಸಂಚಾರ ಸ್ಥಗಿತ

ಬೆಂಗಳೂರಿನಿಂದ ಕೇರಳಕ್ಕೆ ಸಂಚಾರ ಮಾಡುವ ಬಹುತೇಕ ಬಸ್ಸುಗಳ ಸಂಚಾರ ಸ್ಥಗಿತಗೊಂಡಿದೆ. ಕರ್ನಾಟಕ ಸಾರಿಗೆ, ಕೇರಳ ಸಾರಿಗೆ ಇಲಾಖೆಗೆ ಸೇರಿದ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಕಣ್ಣೂರು, ನಿಲಾಂಬೂರು, ಕೋಝಿಕ್ಕೋಡ್, ವಡಗಾರ, ತಲಚೇರಿ ಸೇರಿದಂತೆ ಕೆಲ ಭಾಗಗಳಿಗೆ ಮಾತ್ರ ಬೇರೆ ಬೇರೆ ಮಾರ್ಗಗಳ ಮೂಲಕ ಸಂಚಾರ ನಡೆಯುತ್ತಿದೆ.

ಕೇರಳದಿಂದಲೂ ಇಂದು ಬೆಂಗಳೂರಿಗೆ ಬಸ್‌ಗಳು ಬಂದಿಲ್ಲ. ಬೆಂಗಳೂರಿನಿಂದ ಕೇರಳಕ್ಕೆ ನಿತ್ಯ ಕೇರಳ ಸಾರಿಗೆ ಇಲಾಖೆಯ 15ಕ್ಕೂ ಹೆಚ್ಚು ಬಸ್‌ಗಳ ಸಂಚಾರ ಆಗುತ್ತಿತ್ತು. ಇಂದು ಕೇವಲ ಮೂರು ಬಸ್‌ಗಳು ಮಾತ್ರ ಸಂಚರಿಸಿವೆ. ಪ್ರತಿ ನಿತ್ಯ ರಾತ್ರಿ 8 ಗಂಟೆ ಬಳಿಕ ರಾಜ್ಯ ಸಾರಿಗೆಯಿಂದ 10ಕ್ಕೂ ಹೆಚ್ಚು ಬಸ್‌ಗಳ ಸಂಚಾರ ಇರುತ್ತಿದ್ದು, ಇಂದು ಒಂದು ಬಸ್ ಮಾತ್ರ ಕೇರಳಕ್ಕೆ ಪ್ರಯಾಣ ಬೆಳೆಸಿದೆ. ಮುಂಜಾಗ್ರತಾ ಕ್ರಮವಾಗಿ ಎರಡು ರಾಜ್ಯಗಳ ಬಸ್ ಸಂಚಾರ ಸ್ಥಗಿತಗೊಂಡಿದೆ.

ಸಂಜೆಯಿಂದ ಗುಂಡ್ಲುಪೇಟೆ- ಕೇರಳ ರಸ್ತೆ ಸಂಪರ್ಕ ಕೂಡ ಕಡಿತಗೊಂಡ ಹಿನ್ನೆಲೆಯಲ್ಲಿ ಬಸ್‌ಗಳ ಸಂಚಾರಕ್ಕೆ ತಡೆಯಾಗಿದೆ. ಕೇರಳದ ಮುತ್ತುಂಗ ಚೆಕ್​ಪೋಸ್ಟ್​ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ಜಲಾವೃತವಾಗಿ ಬಸ್ ಸಂಚಾರಕ್ಕೆ ಅಡ್ಡಿಯಾಗಿದೆ. ಬೆಳಗ್ಗೆಯಿಂದ ವಯನಾಡು ಭಾಗಕ್ಕೆ ಬೆಂಗಳೂರಿನಿಂದ 21ಕ್ಕೂ ಹೆಚ್ಚು ಬಸ್‌ಗಳು ಸಂಚಾರ ಮಾಡಬೇಕಿತ್ತು. ಆದರೆ ಮಳೆ ಹಾಗೂ ಗುಡ್ಡ ಕುಸಿತದ ಪರಿಣಾಮ 15ಕ್ಕೂ ಹೆಚ್ಚು ಬಸ್‌ಗಳು ಸ್ಥಗಿತಗೊಂಡಿವೆ. ಬಹುತೇಕ ಪ್ರಯಾಣಿಕರು ಸ್ವಯಂಪ್ರೇರಿತವಾಗಿ ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ. ಉಳಿದಂತೆ ಕೆಲ ಪ್ರಯಾಣಿಕರನ್ನು ಕ್ಲಬ್ ಮಾಡಿ ಮೂರ್ನಾಲ್ಕು ಬಸ್‌ಗಳಲ್ಲಿ ಬೇರೆ ಬೇರೆ ಮಾರ್ಗವಾಗಿ ಕಳಿಸಲು ಅನುವು ಮಾಡಿಕೊಡಲಾಗಿದೆ.

ಭೂಕುಸಿತದ ತ್ಯಾಜ್ಯ ವಿಲೇವಾರಿ

ವಯನಾಡಿನಲ್ಲಿ ಭೂಕುಸಿತದಿಂದ ಉಂಟಾಗಿರುವ ತ್ಯಾಜ್ಯಗಳ ತೆರವಿಗೆ ರಾಜ್ಯದಿಂದ ಅಗತ್ಯ ಜೆಸಿಬಿ, ಕ್ರೇನ್ ಮತ್ತಿತರ ಭಾರೀ ವಾಹನಗಳ ಸೌಕರ್ಯಗಳನ್ನು ಲೋಕೋಪಯೋಗಿ ಇಲಾಖೆ ಕೈಗೊಳ್ಳುತ್ತಿದೆ. ಮುಖ್ಯಮಂತ್ರಿಗಳು ಸ್ವತಃ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದು ವಯನಾಡಿನಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಚರಣೆಗೆ ಎಲ್ಲ ರೀತಿಯ ಬೆಂಬಲ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಡಳಿತ ಸಹಾಯವಾಣಿ

ಸಂತ್ರಸ್ತರಿಗಾಗಿ ಮೈಸೂರು ಜಿಲ್ಲಾಡಳಿತ ಸಹಾಯವಾಣಿ ತೆರೆದಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಕೊಠಡಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. 0821-2423800 ಅಥವಾ 1077 ದೂರವಾಣಿಗೆ ಕರೆ ಮಾಡುವಂತೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Wayanad Landslide: ವಯನಾಡು ದುರಂತದಲ್ಲಿ ಸಾವಿನ ಸಂಖ್ಯೆ 150ಕ್ಕೆ ಏರಿಕೆ; ಇಂದೂ ಭಾರಿ ಮಳೆಯ ಮುನ್ಸೂಚನೆ, ಮುಂದುವರಿದ ಕಾರ್ಯಾಚರಣೆ

Continue Reading

ದೇಶ

Wayanad Landslide: ವಯನಾಡು ದುರಂತದಲ್ಲಿ ಸಾವಿನ ಸಂಖ್ಯೆ 150ಕ್ಕೆ ಏರಿಕೆ; ಇಂದೂ ಭಾರಿ ಮಳೆಯ ಮುನ್ಸೂಚನೆ, ಮುಂದುವರಿದ ಕಾರ್ಯಾಚರಣೆ

Wayanad Landslide: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 150ರ ಗಡಿ ದಾಟಿದೆ. 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ಇಂದೂ (ಜುಲೈ 31) ವಯನಾಡು ಭಾಗದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಆತಂಕ ಮೂಡಿಸಿದೆ. ಇಂದು ಕೇರಳದಲ್ಲಿ ಗಂಟೆಗೆ 30-40ರಿಂದ 50 ಕಿ.ಮೀ. ವೇಗದಲ್ಲಿ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.

VISTARANEWS.COM


on

Wayanad Landslide
Koo

ತಿರುವನಂತಪುರಂ: ಮಳೆಯ ರುದ್ರ ನರ್ತನಕ್ಕೆ ದೇವರನಾಡು ಕೇರಳ ಅಕ್ಷರಶಃ ಕಂಗಾಲಾಗಿ ಹೋಗಿದೆ. ರಾಜ್ಯ ಕಂಡು ಕೇಳರಿಯದ ದುರಂತ ವಯನಾಡಿನಲ್ಲಿ ಸಂಭವಿಸಿದ್ದು, ಭೀಕರ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 150ರ ಗಡಿ ದಾಟಿದೆ (Wayanad Landslide). 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ಇಂದೂ (ಜುಲೈ 31) ವಯನಾಡು ಭಾಗದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಆತಂಕ ಮೂಡಿಸಿದೆ.

ಭಾರತ ಹವಾಮಾನ ಇಲಾಖೆ (India Meteorological Department) ಬುಧವಾರವೂ ವಯನಾಡು ಸೇರಿದಂತೆ ಉತ್ತರ ಕೇರಳದ ವಿವಿಧೆಡೆಗಳಲ್ಲಿ ಧಾರಾಕಾರ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಿದೆ. ʼʼಜುಲೈ 31 ಮತ್ತು ಆಗಸ್ಟ್ 1ರಂದು ವಯನಾಡು ಮತ್ತು ನೆರೆಯ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಆಗಸ್ಟ್ 2ರಂದುಈ ಭಾಗಗಳಲ್ಲಿ ಮಳೆಯ ಪ್ರಮಾನ ಇನ್ನೂ ಹೆಚ್ಚಾಗಲಿದೆ. ಇಂದು ಕೇರಳದಲ್ಲಿ ಗಂಟೆಗೆ 30-40ರಿಂದ 50 ಕಿ.ಮೀ. ವೇಗದಲ್ಲಿ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆಯಿದೆʼʼ ಎಂದು ಐಎಂಡಿ ತಿಳಿಸಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಕಾಸರಗೋಡು, ಕಣ್ಣೂರು, ಕೋಝಿಕೋಡ್, ವಯನಾಡು, ಮಲಪ್ಪುರಂ, ಪಾಲಕ್ಕಾಡ್, ತ್ರಿಶೂರ್, ಇಡುಕ್ಕಿ, ಎರ್ನಾಕುಲಂ, ಅಲಪ್ಪುಳ ಮತ್ತು ಪತ್ತನಂತೊಟ್ಟ ಜಿಲ್ಲೆಗಳ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಜತೆಗೆ ನಡೆಯಲಿರುವ ಪರೀಕ್ಷೆಗಳನ್ನೂ ಮುಂದೂಡಲಾಗಿದೆ.

ಭಾರಿ ದುರಂತ

ಭಾರೀ ಮಳೆಯ ನಡುವೆ ಮಂಗಳವಾರ ಬೆಳಗ್ಗೆ ವಯನಾಡು ಜಿಲ್ಲೆಯ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಭೂಕುಸಿತ ಸಂಭವಿಸಿದೆ. ಜತೆಗೆ ನಾಲ್ಕು ಗಂಟೆ ಅವಧಿಯಲ್ಲಿ ಸಂಭವಿಸಿದೆ ಮೂರು ದೊಡ್ಡ ಭೂಕುಸಿತ ವಯನಾಡು ಜಿಲ್ಲೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಮುಂಡಕೈ, ಚೂರಲ್‌ಮಲ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಹೆಚ್ಚು ಹಾನಿಗೊಳಗಾಗಿದ್ದು, ಇಲ್ಲಿ ಎಲ್ಲೆಂದರಲ್ಲಿ ಮಣ್ಣು, ಕಲ್ಲು ಬಂಡೆ, ಕೆಸರಿನ ರಾಶಿಯೇ ಕಂಡು ಬರುತ್ತಿದೆ. ಮನೆ, ಶಾಲೆ ಮುಳುಗಡೆಯಾಗಿದ್ದು, ರಸ್ತೆ, ಸೇತುವೆ ಕೊಚ್ಚಿ ಹೋಗಿ ಸಂಪರ್ಕವೇ ಕಡಿತಗೊಂಡಿದೆ. ಇದು ಕಾರ್ಯಾಚರಣೆಯ ಮೇಲೂ ಪರಿಣಾಮ ಬೀರಿದ್ದು, ಸೇನಾ ಸಿಬ್ಬಂದಿ ತಾತ್ಕಾಲಿಕ ಸೇತುವೆ ನಿರ್ಮಿಸಿ ಸಂತ್ರಸ್ತರನ್ನು ಪಾರು ಮಾಡುತ್ತಿದ್ದಾರೆ.

ಈ ದುರಂತ ಎಷ್ಟು ಭೀಕರವಾಗಿದೆ ಎಂದರೆ ನದಿಯಲ್ಲಿ ಕೊಚ್ಚಿಕೊಂಡು ಹೋದ ಸ್ಥಳೀಯರ ಶವ ಪಕ್ಕದ ಜಿಲ್ಲೆ ಮಲ್ಲಪ್ಪುರಂನಲ್ಲಿ ಸಿಕ್ಕಿದೆ. ಇನ್ನು ಮಣ್ಣು, ಕಲ್ಲುಬಂಡೆಗಳ ರಾಶಿಯಲ್ಲಿ ಮೃತದೇಹಗಳು ಕಂಡು ಬಂದಿದ್ದು, ಗುರುತೇ ಸಿಗದಷ್ಟು ನಜ್ಜುಗುಜ್ಜಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಗೊಂಡವರಿಗೆ ಮೆಪ್ಪಾಡಿ ಆರೋಗ್ಯ ಕೇಂದ್ರ, ವಿಮ್ಸ್ ಆಸ್ಪತ್ರೆ, ಬತ್ತೇರಿ ತಾಲೂಕು ಆಸ್ಪತ್ರೆ, ನಿಲಂಬೂರ್ ಜಿಲ್ಲಾಸ್ಪತ್ರೆ ಮುಂತಾದೆಡೆ ಚಿಕಿತ್ಸೆ ನೀಡಲಾಗುತ್ತಿದೆ.

ರಕ್ಷಣಾ ಕಾರ್ಯಾಚರಣೆ

ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA), ಅಗ್ನಿಶಾಮಕ ದಳ, ನಾಗರಿಕ ರಕ್ಷಣೆ, ಎನ್‌ಡಿಆರ್‌ಎಫ್‌ ಮತ್ತು ಸ್ಥಳೀಯ ತುರ್ತು ಪ್ರತಿಕ್ರಿಯೆ ತಂಡಗಳ ಸದಸ್ಯರುರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಜತೆಗೆ ಕಣ್ಣೂರಿನ ಡಿಎಸ್‌ಸಿ ಕೇಂದ್ರದ ಸುಮಾರು 200 ಭಾರತೀಯ ಸೇನಾ ಸಿಬ್ಬಂದಿ ಮತ್ತು ಕೋಝಿಕೋಡ್‌ನ 122 ಟಿಎ ಬೆಟಾಲಿಯನ್ ಸದಸ್ಯರು ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಇವರೊಂದಿಗೆ ಎರಡು ವಾಯುಪಡೆಯ ಹೆಲಿಕಾಪ್ಟರ್‌ಗಳು, ಒಂದು ಎಂಐ -17 ಮತ್ತು ಎಎಲ್ಎಚ್ ಕೂಡ ಕೈಜೋಡಿಸಿದೆ.

ಇದನ್ನೂ ಓದಿ: Wayanad Landslide Explainer: ಪ್ರಕೃತಿ ಮೇಲೆ ಮಾನವನ ವಿಕೃತಿ; ವಯನಾಡು ಭೂಕುಸಿತಕ್ಕೆ ಇಲ್ಲಿದೆ ಕಾರಣಗಳ ಪಟ್ಟಿ

Continue Reading

ಪ್ರಮುಖ ಸುದ್ದಿ

Wayanad Landslide: ವೈನಾಡ್‌ ಭೂಕುಸಿತದಲ್ಲಿ 13 ಕನ್ನಡಿಗರು ನಾಪತ್ತೆ; ನಾಲ್ವರ ಶವ ಪತ್ತೆ, ಇನ್ನುಳಿದವರಿಗಾಗಿ ಶೋಧ

Wayanad Landslide: ವೈನಾಡಿನಲ್ಲಿ ಕರ್ನಾಟಕ‌ ಮೂಲದ ನಾಪತ್ತೆಯಾದವರಿಗಾಗಿ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್ ಬಾಬು ನೇತೃತ್ವದಲ್ಲಿ ನಾಪತ್ತೆಯಾದವರ ಪತ್ತೆಗಾಗಿ ಶೋಧ ನಡೆದಿದೆ.

VISTARANEWS.COM


on

wayanad lanslide
Koo

ಚಾಮರಾಜನಗರ: ಕೇರಳದ ವಯನಾಡಿನಲ್ಲಿ ನಡೆದ ಭೀಕರ ಭೂಕುಸಿತ (wayanad landslide, kerala landslide) ಪ್ರಕರಣದಲ್ಲಿ ಕರ್ನಾಟಕದ (Karnataka) ಹತ್ತಾರು ಮಂದಿ ಕಣ್ಮರೆ (missing) ಆಗಿದ್ದಾರೆ. ಒಟ್ಟು 13 ಮಂದಿ ನಾಪತ್ತೆಯಾಗಿದ್ದಾರೆ ಎಂಬ ಅಂದಾಜು ಲೆಕ್ಕ ಇದುವರೆಗೆ ಸಿಕ್ಕಿದೆ. ಇವರಲ್ಲಿ ನಾಲ್ಕು ಮಂದಿಯ ಶವ ಸಿಕ್ಕಿದ್ದು, ಇನ್ನುಳಿದವರಿಗಾಗಿ ತೀವ್ರ ಶೋಧ (Rescue operation) ನಡೆಯುತ್ತಿದೆ.

ವೈನಾಡಿನಲ್ಲಿ ಕರ್ನಾಟಕ‌ ಮೂಲದ ನಾಪತ್ತೆಯಾದವರಿಗಾಗಿ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್ ಬಾಬು ನೇತೃತ್ವದಲ್ಲಿ ನಾಪತ್ತೆಯಾದವರ ಪತ್ತೆಗಾಗಿ ಶೋಧ ನಡೆದಿದೆ. ಈವರೆಗೆ ಗೊತ್ತಾಗಿರುವ, ನಾಪತ್ತೆಯಾಗಿರುವ ರಾಜ್ಯದ 10 ಮಂದಿಯ ಹೆಸರುಗಳು ಹೀಗಿವೆ:

ಗುರುಮಲ್ಲನ್(10)
ಸಾವಿತ್ರಿ (54)
ಸಬಿತಾ (43)
ಶಿವಣ್ಣನ್ (50)
ಅಪ್ಪಣ್ಣನ್(39)
ಅಶ್ವಿನ್ (13)
ಜೀತು (11)
ದಿವ್ಯಾ (35)
ರತ್ನಾ(48)

ಈವರೆಗೆ ರಾಜೇಂದ್ರ (50), ರತ್ನಮ್ಮ(45), ಪುಟ್ಟಸಿದ್ದಶೆಟ್ಟಿ (62), ರಾಣಿ (50) ಎಂಬವರ ಶವರಗಳನ್ನು ರಕ್ಷಣಾ ಪಡೆಗಳು ಹೊರತೆಗೆದಿವೆ.

ಚಾಮರಾಜನಗರ ಮೂಲದ ಇಬ್ಬರ ಸಾವು ಧೃಡ

ಮೆಪ್ಪಾಡಿಯಲ್ಲಿ ವಾಸವಿದ್ದ ಚಾಮರಾಜನಗರದ ಪುಟ್ಟ ಸಿದ್ದಿ(62) ಹಾಗು ರಾಣಿ ಎಂಬವರ ತಾಯಿ ಸಾವಿಗೀಡಾಗಿದ್ದಾರೆ. ಚಾಮರಾಜನಗರ ತಾಲೋಕು ಇರಸವಾಡಿ ಮೂಲದ ರಾಜನ್ ಹಾಗು ರಜನಿ ನಾಪತ್ತೆಯಾಗಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಕೇರಳದ ಚೂರಲ್ಲಾದಲ್ಲಿ ವಾಸವಿದ್ದ ರಾಜನ್ ಹಾಗು ರಜನಿ(55) ವಾಸವಿದ್ದರು. ರಾಜನ್, ರಜನಿಗಾಗಿ ಶೋಧಕಾರ್ಯ ನಡೆದಿದೆ.

ಚಾಮರಾಜನಗರ ಜಿಲ್ಲೆಯ ರಾಜೇಂದ್ರ(50), ರತ್ನಮ್ಮ(45), ಪುಟ್ಟಸಿದ್ದಶೆಟ್ಟಿ(62), ರಾಣಿ(50) ಇವರ ಶವಗಳು ದೊರೆತಿವೆ. ತ್ರಯಂಬಕಪುರದ ಸ್ವಾಮಿಶೆಟ್ಟಿ ಎಂಬವರಿಗೆ ಗಾಯಗಳಾಗಿವೆ. ರಾಜೇಂದ್ರ, ರತ್ನಮ್ಮ ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದವರು. ಇಬ್ಬರ ಶವ ಇನ್ನೂ ಪತ್ತೆಯಾಗಿಲ್ಲ. ವೈನಾಡು ಜಿಲ್ಲೆಯ ಮೆಪ್ಪಾಡಿಯ ವೈತ್ರಿ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್‌ ಬಾಬು ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆದಿದ್ದು, ತಹಸೀಲ್ದಾರ್ ನೇತೃತ್ವದ ತಂಡ ಮೃತರ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದೆ.

ಮಂಡ್ಯದ ಕುಟುಂಬಕ್ಕೆ ಸಂಕಷ್ಟ

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಝಾನ್ಸಿ, ಝಾನ್ಸಿ ಪುತ್ರ ನಿಹಾಲ್, ಅತ್ತೆ ಲೀಲಾವತಿ ನಾಪತ್ತೆಯಾಗಿದ್ದಾರೆ. ಮೈಸೂರಿನ ಸರಗೂರಿನ ಅನಿಲ್ ಕುಮಾರ್ ಎಂಬುವವರಿಗೆ ಝಾನ್ಸಿರಾಣಿಯನ್ನು ಕುಟುಂಬ ಮದುವೆ ಮಾಡಿಕೊಟ್ಟಿತ್ತು. ಕೇರಳದ ಮುಂಡಕೈಯಲ್ಲಿ ಅನಿಲ್, ಪತ್ನಿ ಝಾನ್ಸಿ, ಪುತ್ರ ನಿಹಾಲ್ ಹಾಗೂ ತಂದೆ-ತಾಯಿ ನೆಲೆಸಿದ್ದರು. ಮುಂಡಕೈ ಗುಡ್ಡ ಕುಸಿತದಲ್ಲಿ ಅನಿಲ್ ತಾಯಿ ಲೀಲಾವತಿ(55), ಪುತ್ರ ನಿಹಾಲ್(2.5). ನಾಪತ್ತೆಯಾಗಿದ್ದು, ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಅನಿಲ್ ಹಾಗೂ ಅವರ ಪತ್ನಿ ಝಾನ್ಸಿ, ತಂದೆ ದೇವರಾಜು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರೂ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮೂವರಿಗೆ ಕೇರಳದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಕುಟುಂಬಸ್ಥರನ್ನು ಕಾಣಲು ಝಾನ್ಸಿರಾಣಿ ಕುಟುಂಬಸ್ಥರು ಕೇರಳಕ್ಕೆ ತೆರಳಿದ್ದಾರೆ.

ಹನಿಮೂನ್‌ಗೆ ಬಂದವರು ಹೆಣವಾದರು

ಬೆಂಗಳೂರಿನಿಂದ ಹನಿಮೂನ್‌ಗೆ ಬಂದಿದ್ದ 4 ಪೈಕಿ ಇಬ್ಬರು ನಾಪತ್ತೆಯಾಗಿದ್ದಾರೆ. ಒರಿಸ್ಸಾ ಮೂಲದ ಎರಡು ನವ ಜೋಡಿಗಳು ಬಂದು ತಂಗಿದ್ದ ರೆಸಾರ್ಟ್‌ ಇವರು ಮಲಗಿದ್ದಲ್ಲೇ ಕೊಚ್ಚಿ ಹೋಗಿದೆ. ರೆಸಾರ್ಟ್‌ನಿಂದ 300 ಮೀಟರ್ ದೂರದಲ್ಲಿ ಕಾರಿನಲ್ಲಿ ಮಲಗಿದ್ದ ಹಾವೇರಿ ಮೂಲದ ಡ್ರೈವರ್ ಮಂಜುನಾಥ್ ಪಾರಾಗಿದ್ದಾರೆ. ಇವರು ದುರಂತದಲ್ಲಿ ಬದುಕುಳಿದಿದ್ದೇ ಅಚ್ಚರಿ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಕಾರಿನಲ್ಲಿ ಮಲಗಿದ್ದಕ್ಕೆ ಪ್ರಾಣ ಉಳಿಯಿತು. ರೆಸಾರ್ಟ್‌ನಲ್ಲಿ ಮಲಗಿದ್ರೆ ನಾನು ಬದುಕುತ್ತಿರಲಿಲ್ಲ. ಎತ್ತರದ ಪ್ರದೇಶದಲ್ಲಿ ಕಾರ್ ನಿಲ್ಲಿಸಿದ್ದರಿಂದ ಬಚಾವ್ ಆಗಿದ್ದೇನೆ. ನನ್ನ ಕಾರು ಕೂಡ ಅಲ್ಲೇ ಇದೆ ಎಂದು ಕೇರಳದ ವಯನಾಡಿನಲ್ಲಿ ಕ್ಯಾಬ್ ಡ್ರೈವರ್ ಮಂಜುನಾಥ್ ಹೇಳಿಕೆ ನೀಡಿದ್ದಾರೆ.

ಜಿಲ್ಲಾಡಳಿತ ಸಹಾಯವಾಣಿ

ಸಂತ್ರಸ್ತರಿಗಾಗಿ ಮೈಸೂರು ಜಿಲ್ಲಾಡಳಿತ ಸಹಾಯವಾಣಿ ತೆರೆದಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಕೊಠಡಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. 0821-2423800 ಅಥವಾ 1077 ದೂರವಾಣಿಗೆ ಕರೆ ಮಾಡುವಂತೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Wayanad Landslide Explainer: ಪ್ರಕೃತಿ ಮೇಲೆ ಮಾನವನ ವಿಕೃತಿ; ವಯನಾಡು ಭೂಕುಸಿತಕ್ಕೆ ಇಲ್ಲಿದೆ ಕಾರಣಗಳ ಪಟ್ಟಿ

Continue Reading
Advertisement
wayanad landslide cow rescues family
ವೈರಲ್ ನ್ಯೂಸ್2 mins ago

Wayanad Landslide: ಭಯಾನಕ ಸಾವಿನಿಂದ ರಕ್ಷಿಸಿತು ಸಾಕಿದ ಹಸು! ಕನ್ನಡಿಗ ಕುಟುಂಬದ ಅನುಭವ

Ismail Haniyeh
ವಿದೇಶ3 mins ago

Ismail Haniyeh: ಇಸ್ರೇಲ್‌ನಿಂದ ಪ್ರತೀಕಾರದ ಎಚ್ಚರಿಕೆ ಬೆನ್ನಲ್ಲೇ ಹಮಾಸ್‌ ನಾಯಕ ಇಸ್ಮಾಯಿಲ್ ಹನಿಯೆಹ್ ಬರ್ಬರ ಹತ್ಯೆ

Puri Jagannath Temple
ದೇಶ29 mins ago

Puri Jagannath Temple: ಪುರಿ ಜಗನ್ನಾಥ ಮಂದಿರದ ನಕಲಿ ಕೀ ಪತ್ತೆ; ಅಪಾರ ಪ್ರಮಾಣದ ಬಂಗಾರ ಕಳವು?

Nabha Natesh in red gown Darling movie review
ಟಾಲಿವುಡ್40 mins ago

Nabha Natesh: ರೆಡ್ ಗೌನ್‌ನಲ್ಲಿ ‘ಪಟಾಕ’ ಮಿಂಚಿಂಗ್; ಟಾಲಿವುಡ್‌ನಲ್ಲಿ ನಭಾ ನಟೇಶ್ ಧಮಾಕ!

winning tips ರಾಜಮಾರ್ಗ ಅಂಕಣ
ಅಂಕಣ50 mins ago

ರಾಜಮಾರ್ಗ ಅಂಕಣ: ಸಾಧನೆಯ ಹಾದಿಯ 25 ಮೈಲಿಗಲ್ಲುಗಳು

Actor Darshan Chethan Kumar on Darshan Case
ಸ್ಯಾಂಡಲ್ ವುಡ್59 mins ago

Actor Darshan: ಜೈಲಿನ ಊಟ ನಂಗಂತೂ ಸಖತ್‌ ಇಷ್ಟ ಆಗಿತ್ತು , ದರ್ಶನ್‌ಗೆ ಯಾಕೆ ಕಷ್ಟ ಆಗ್ತಿದೆ ಎಂದ ಚೇತನ್‌ ಅಹಿಂಸಾ!

Narayana Murthy
ದೇಶ1 hour ago

Narayana Murthy: ಜನ ವಾದ ಮಾಡದೆ ಸುಮ್ಮನೆ ಕೆಲಸ ಮಾಡುವುದರಿಂದ ಚೀನಾ ನಮ್ಮ ದೇಶಕ್ಕಿಂತ ಮುಂದಿದೆ: ನಾರಾಯಣಮೂರ್ತಿ ಹೊಸ ವಾದ!

drowned kalaburagi
ಕ್ರೈಂ1 hour ago

Drowned: ಆತ್ಮಹತ್ಯೆಗಾಗಿ ನದಿಗೆ ಹಾರಿದ ಮಹಿಳೆ ರಕ್ಷಣೆ, ಬದುಕಿಸಲು ಹೋದ ಗಂಡ- ಬಂಧು ಜಲಸಮಾಧಿ

ITR Filing
ದೇಶ1 hour ago

ITR Filing: ಐಟಿ ರಿಟರ್ನ್ಸ್ ಫೈಲ್‌ಗೆ ಇಂದು ಅಂತಿಮ ದಿನ; ಗಡುವು ವಿಸ್ತರಣೆಗೆ ಕಾದರೆ ದಂಡ ಕಟ್ಟಬೇಕಾದೀತು!

wayanad landslide bandipur checkpost
ಪ್ರಮುಖ ಸುದ್ದಿ2 hours ago

Wayanad Landslide: ವೈನಾಡ್‌ ಭೂಕುಸಿತ ಪರಿಣಾಮ ಕರ್ನಾಟಕ- ಕೇರಳ ರಸ್ತೆ ಸಂಪರ್ಕ ಕಡಿತ, ಬಸ್‌ ಸಂಚಾರ ಸ್ಥಗಿತ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ16 hours ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ20 hours ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ21 hours ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌