Bigg Boss Kannada | ಕರಾವಳಿ ಕುವರ ರೂಪೇಶ್‌ ಶೆಟ್ಟಿ ಮುಡಿಗೆ ಬಿಗ್‌ಬಾಸ್‌ ಕಿರೀಟ - Vistara News

ಪ್ರಮುಖ ಸುದ್ದಿ

Bigg Boss Kannada | ಕರಾವಳಿ ಕುವರ ರೂಪೇಶ್‌ ಶೆಟ್ಟಿ ಮುಡಿಗೆ ಬಿಗ್‌ಬಾಸ್‌ ಕಿರೀಟ

ರೂಪೇಶ್‌ ಶೆಟ್ಟಿ ಅವರು ಬಿಗ್‌ ಬಾಸ್‌ ರಿಯಾಲಿಟಿ (Bigg Boss Kannada) ಶೋ 9ನೇ ಸೀಸನ್‌ನ ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ.

VISTARANEWS.COM


on

Roopesh Shetty Bigg Boss winner
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್‌ ಬಾಸ್‌ ಒಂಬತ್ತನೇ (Bigg Boss Kannada) ಸೀಸನ್‌ನ ವಿನ್ನರ್‌ ಆಗಿ ರೂಪೇಶ್‌ ಶೆಟ್ಟಿ ಆಯ್ಕೆಯಾಗಿದ್ದಾರೆ. ರಿಯಾಲಿಟಿ ಶೋನಲ್ಲಿ ಉತ್ತಮ ಪ್ರದರ್ಶನ ತೋರಿದ್ದ, ಜನರಿಂದ ಮೆಚ್ಚುಗೆ ಗಳಿಸಿದ್ದ ರಾಕೇಶ್‌ ಅಡಿಗ ರನ್ನರ್‌ ಅಪ್‌ ಎನಿಸಿದ್ದಾರೆ.

ಬಿಗ್‌ಬಾಸ್‌ ಫಿನಾಲೆ ತಲುಪಿದ್ದ ರೂಪೇಶ್‌ ಶೆಟ್ಟಿ ಹಾಗೂ ರಾಕೇಶ್‌ ಅಡಿಗ ಅವರ ಮಧ್ಯೆ ತೀವ್ರ ಪೈಪೋಟಿ ಇತ್ತು. ಆದರೆ, ಕೊನೆಗೆ ರೂಪೇಶ್‌ ಶೆಟ್ಟಿ ಅವರೇ ವಿನ್ನರ್‌ ಎಂದು ಘೋಷಿಸಲಾಯಿತು. ರೂಪೇಶ್‌ ಶೆಟ್ಟಿ ಅವರಿಗೆ ಬಿಗ್‌ಬಾಸ್‌ನ 50 ಲಕ್ಷ ರೂ. ನಗದು ಬಹುಮಾನ ಹಾಗೂ ಇಂಡಸ್‌ 555ನಿಂದ 10 ಲಕ್ಷ ರೂ. ಸೇರಿ ಒಟ್ಟು 60 ಲಕ್ಷ ರೂ. ಸಿಗಲಿದೆ. ರನ್ನರ್‌ ಅಪ್‌ ಆದ ರಾಕೇಶ್‌ ಅಡಿಗ ಅವರಿಗೆ 12 ಲಕ್ಷ ರೂ. ಸಿಗಲಿದೆ.

ಒಟಿಟಿಯಿಂದಲೂ ರೂಪೇಶ್‌ ಶೆಟ್ಟಿ ಬಲ ಸ್ಪರ್ಧಿ
ಒಟಿಟಿ ಮಾದರಿಯ ಶೋ ಹಾಗೂ ಬಿಗ್‌ ಬಾಸ್‌ ಶೋನಲ್ಲಿ ರೂಪೇಶ್‌ ಶೆಟ್ಟಿ ಪ್ರಬಲ ಸ್ಪರ್ಧಿಯಾಗಿದ್ದರು. ಹಾಗಾಗಿಯೇ, ಅವರು ಮೊದಲಿನಿಂದಲೂ ಎಲ್ಲರ ಫೇವರಿಟ್‌ ಎನಿಸಿದ್ದರು. ಫಿನಾಲೆ ತಲುಪಿದ ಐವರಲ್ಲಿ ಇವರು ನೆಚ್ಚಿನ ಸ್ಪರ್ಧಿ ಆಗಿದ್ದರು. ಕನ್ನಡ ಹಾಗೂ ತುಳು ಸಿನಿಮಾಗಳಲ್ಲಿ ನಟಿಸಿರುವ ರೂಪೇಶ್‌ ಶೆಟ್ಟಿ ಅವರಿಗೆ ‘ಗಿರಿಗಿಟ್’‌ ಹೆಸರು ತಂದುಕೊಟ್ಟ ಸಿನಿಮಾ ಆಗಿದೆ.

ಜನರ ಮನಸ್ಸು ಗೆದ್ದ ರಾಕೇಶ್‌ ಅಡಿಗ
ಒಟಿಟಿಯಿಂದ ಬಿಗ್‌ಬಾಸ್‌ ಮನೆ ಪ್ರವೇಶಿಸಿದ ರಾಕೇಶ್‌ ಅಡಿಗ ಫಿನಾಲೆಯಲ್ಲಿ ಗೆಲುವು ಸಾಧಿಸದಿದ್ದರೂ ಜನರ ಮನಸ್ಸು ಗೆದ್ದಿದ್ದಾರೆ. ಜೋಶ್‌, ಕೋಟಿಗೊಂದ್‌ ಲವ್‌ ಸ್ಟೋರಿ, ಪ್ರೀತಿಯಿಂದ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿರುವ ರಾಕೇಶ್‌ ಅಡಿಗ, ಬಿಗ್‌ ಬಾಸ್‌ ಮನೆಯಲ್ಲಿ ಕೂಲ್‌ ಆಗಿ ಆಟವಾಡಿಕೊಂಡಿದ್ದರು. ಯಾರಿಂದಿಗೂ ಹೆಚ್ಚು ಜಗಳವಾಡದೆ, ಮನಸ್ತಾಪ ಮಾಡಿಕೊಳ್ಳದೆ ಇದ್ದರು. ಇದೇ ಇವರ ಪ್ಲಸ್‌ ಪಾಯಿಂಟ್‌ ಆಗಿತ್ತು.

ಇದನ್ನೂ ಓದಿ | Bigg Boss Kannada | ದೀಪಿಕಾ ದಾಸ್‌ ಔಟ್‌: ಮೂರನೇ ರನ್ನರ್ ಅಪ್!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Lok Sabha Election 2024: ಚುನಾವಣಾ ಕಣಕ್ಕೆ ಧುಮುಕಿದ ಖಲಿಸ್ತಾನಿ ನಾಯಕ ಅಮೃತ್​ಪಾಲ್​ ಸಿಂಗ್‌; ಯಾವ ಕ್ಷೇತ್ರ?

Lok Sabha Election 2024: ಪ್ರಮುಖ ಬೆಳವಣಿಗೆಯೊಂದರಲ್ಲಿ ಜೈಲಿನಲ್ಲಿರುವ ಖಲಿಸ್ತಾನಿ ಪರ ಬೋಧಕ ಅಮೃತ್‌ಪಾಲ್‌ ಸಿಂಗ್ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‌ನ ಖದೂರ್ ಸಾಹಿಬ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾನೆ. ಈ ಬಗ್ಗೆ ಆತನ ಕಾನೂನು ಸಲಹೆಗಾರ ರಾಜ್‌ದೇವ್‌ ಸಿಂಗ್ ಖಾಲ್ಸಾ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಅಮೃತ್‌ಪಾಲ್‌ ಸಿಂಗ್ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿದ್ದಾನೆ.

VISTARANEWS.COM


on

Lok Sabha Election 2024
Koo

ಚಂಡಿಗಢ: ಪ್ರಮುಖ ಬೆಳವಣಿಗೆಯೊಂದರಲ್ಲಿ ಜೈಲಿನಲ್ಲಿರುವ ಖಲಿಸ್ತಾನಿ ಪರ ಬೋಧಕ (Pro-Khalistani preacher) ಅಮೃತ್‌ಪಾಲ್‌ ಸಿಂಗ್ (Amritpal Singh) ಲೋಕಸಭಾ ಚುನಾವಣೆ (Lok Sabha Election 2024)ಯಲ್ಲಿ ಪಂಜಾಬ್‌ನ ಖದೂರ್ ಸಾಹಿಬ್ (Khadoor Sahib) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾನೆ ಎಂದು ಆತನ ಕಾನೂನು ಸಲಹೆಗಾರ ಬುಧವಾರ ತಿಳಿಸಿದ್ದಾರೆ.

ʼʼಅಮೃತ್‌ಪಾಲ್‌ ಸಿಂಗ್ ಖದೂರ್ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ನಾನು ಇಂದು ದಿಬ್ರುಗಢದಲ್ಲಿ ಅಮೃತಪಾಲ್ ಸಿಂಗ್‌ನನ್ನು ಭೇಟಿಯಾದೆ. ಖದೂರ್ ಸಾಹಿಬ್‌ನಿಂದ ಚುನಾವಣೆಗೆ ಸ್ಪರ್ಧಿಸುವುದನ್ನು ಅವರು ಖಚಿತಪಡಿಸಿದ್ದಾರೆ” ಎಂದು ಕಾನೂನು ಸಲಹೆಗಾರ ರಾಜ್‌ದೇವ್‌ ಸಿಂಗ್ ಖಾಲ್ಸಾ ಹೇಳಿದ್ದಾರೆ. ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತ್‌ಪಾಲ್‌ ಸಿಂಗ್ ಪ್ರಸ್ತುತ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿದ್ದಾನೆ. ಮೂಲಗಳ ಪ್ರಕಾರ, ಮುಖ್ಯವಾಹಿನಿಯ ಪಕ್ಷವೊಂದು ಅಮೃತಪಾಲ್ ಸಿಂಗ್‌ಗೆ ಬಾಹ್ಯ ಬೆಂಬಲ ನೀಡುವ ಸಾಧ್ಯತೆ ಇದೆ.

ಅಮೃತ್‌ಪಾಲ್‌ ಸಿಂಗ್‌ನ ಹಿನ್ನೆಲೆ

ಅಮೃತಸರದ ಜಲ್ಲುಪುರ್‌ ಖೇರಾ ಎಂಬ ಗ್ರಾಮದಲ್ಲಿ 1993ರಲ್ಲಿ ಜನಿಸಿದ ಅಮೃತ್‌ಪಾಲ್‌, 12ನೇ ತರಗತಿವರೆಗೆ ಓದಿದ್ದಾನೆ. 2012ರಲ್ಲಿ ಭಾರತ ತೊರೆದು, ದುಬೈಯಲ್ಲಿ ತನ್ನ ಚಿಕ್ಕಪ್ಪನ ಟ್ರಾನ್ಸ್‌ಪೋರ್ಟ್‌ ಕಂಪನಿಯಲ್ಲಿ ದುಡಿದ. ಈತ ಪಂಜಾಬ್‌ನ ಪೊಲೀಸರ ಹಾಗೂ ರಾಜಕಾರಣಿಗಳ ಗಮನಕ್ಕೆ ಬಂದುದೇ ಆರು ತಿಂಗಳ ಹಿಂದೆ- ʼವಾರಿಸ್‌ ಪಂಜಾಬ್‌ ದೇʼ ಸಂಘಟನೆಯ ಮುಖ್ಯಸ್ಥನಾಗಿ ನಿಯುಕ್ತನಾದ ಸಂದರ್ಭದಲ್ಲಿ. ಈ ಸಂಘಟನೆಯನ್ನು ಸ್ಥಾಪಿಸಿದವನು ನಟ, ಚಳವಳಿಗಾರ ದೀಪ್‌ ಸಿಧು. ಇವನು 2022ರ ಫೆಬ್ರವರಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ಇವನನ್ನು ಸರ್ಕಾರ ಸಾಯಿಸಿದೆ ಎಂದು ಅಮೃತ್‌ಪಾಲ್‌ ಮತ್ತು ಬೆಂಬಲಿಗರು ಆರೋಪಿಸುತ್ತ ಬಂದಿದ್ದಾರೆ.

ಅಮೃತ್‌ಪಾಲ್‌ ಯಾವತ್ತೂ ಸಿಧುವನ್ನು ಭೇಟಿ ಮಾಡಿದವನೇ ಅಲ್ಲ. ಆದರೆ ಆನ್‌ಲೈನ್‌ನಲ್ಲಿ ತನ್ನನ್ನು ಅತ್ಯಂತ ಪ್ರಭಾವಿಸಿದ್ದ ಎಂದು ಹೇಳಿಕೊಳ್ಳುತ್ತಾನೆ. ಸಿಧುವಿನ ಸಾವಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಸಿಧುವಿನ ಸಲಹೆಯಂತೆ ತಾನು ಗಡ್ಡ ಟ್ರಿಮ್‌ ಮಾಡಿಕೊಳ್ಳುವುದು ಬಿಟ್ಟಿರುವುದಾಗಿ ಹೇಳಿದ್ದ.

2022ರ ಸೆಪ್ಟೆಂಬರ್‌ 25ರಂದು ಆನಂದ್‌ಪುರ ಸಾಹಿಬ್‌ನಲ್ಲಿ ನಡೆದ ಸಿಖ್‌ ಧರ್ಮದ ಸಾಂಪ್ರದಾಯಿಕ ಬ್ಯಾಪ್ಟಿಸಂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಮೃತ್‌ಪಾಲ್‌, ʼಅಮೃತಧಾರಿ ಸಿಖ್‌ʼ ಎನಿಸಿದ. ಈ ಕಾರ್ಯಕ್ರಮಕ್ಕೆ ಹರಿದುಬಂದ ಜನಸಾಗರ ನೋಡಿ ಪಂಜಾಬ್‌ ಅವಾಕ್ಕಾಯಿತು. ಇದಾದ ನಾಲ್ಕು ದಿನಗಳ ನಂತರ ಸೆ. 29ರಂದು ʼದಸ್ತರ್‌ ಬಂದಿʼ ಕಾರ್ಯಕ್ರಮ ನಡೆಯಿತು. ಇದಕ್ಕೂ ದಾಖಲೆ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ಇದು ನಡೆದುದು ರೋಡೆ ಗ್ರಾಮದಲ್ಲಿ. ಅದು ಖಲಿಸ್ತಾನ್‌ ಚಳವಳಿಯ ರಾಕ್ಷಸ ಭಯೋತ್ಪಾದಕನಾಗಿದ್ದ ಜರ್ನೈಲ್‌ ಸಿಂಗ್‌ ಭಿಂದ್ರಾನ್‌ವಾಲೆಯ ಜನ್ಮಸ್ಥಳ.

ಇದನ್ನೂ ಓದಿ: ವಿಸ್ತಾರ Explainer: ಯಾರು ಈ ಖಲಿಸ್ತಾನಿ, ಪ್ರತ್ಯೇಕತಾವಾದಿ ನಾಯಕ ಅಮೃತ್​ಪಾಲ್​ ಸಿಂಗ್‌?

ಹಲವು ಸಮಯದಿಂದ ಆತ ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಖಲಿಸ್ತಾನ್ ಪರ ಪೋಸ್ಟ್‌ಗಳನ್ನು ಹಾಕುತ್ತಿದ್ದಾನೆ. ಹಿಂದು ರಾಷ್ಟ್ರ ವಾದ ಸರಿ ಎಂದಾದರೆ ಖಲಿಸ್ತಾನ್‌ ಯಾಕೆ ತಪ್ಪು ಎಂದು ಪ್ರಶ್ನಿಸುತ್ತಾನೆ. ಇವನು ಪಾರಂಪರಿಕ ಧಾರ್ಮಿಕ ತರಬೇತಿ ಪಡೆದು ಮುಖ್ಯಸ್ಥನಾಗಿಲ್ಲ. ರಾಜಕೀಯ ವಿಚಾರದಿಂದ ಆರಂಭಿಸಿ ಮತೀಯ ಗುರು ಎನಿಸಿಕೊಂಡವನು. ಧಾರ್ಮಿಕ ವಿಷಯಗಳನ್ನು ಉಲ್ಲೇಖಿಸುವಾಗ ಈತನ ತಿಳಿವಳಿಕೆಯ ಪೊಳ್ಳುತನ ಎದ್ದು ಕಾಣಿಸುತ್ತದೆ. ಆದರೂ ಈತನ ಕಠೋರ ರಾಜಕೀಯ ನಿಲುವುಗಳಿಂದಾಗಿ ಅಭಿಮಾನಿಗಳು ಈತನನ್ನು ಸುತ್ತುವರಿಯುತ್ತಾರೆ. 2021ರಲ್ಲಿ ಕೆಂಪು ಕೋಟೆಯ ಮೇಲೆ ನಡೆದ ಗುಂಪು ದಾಳಿಯ ವೇಳೆ ಅದರ ನೇತೃತ್ವ ವಹಿಸಿದ್ದ ದೀಪ್‌ ಸಿಧುವಿನ ಕೃತ್ಯವನ್ನು ಈತ ಸಮರ್ಥಿಸಿಕೊಂಡಿದ್ದ. 

Continue Reading

ದೇಶ

Kotak Mahindra Bank: ಹೊಸ ಕ್ರೆಡಿಟ್ ಕಾರ್ಡ್ ನೀಡದಂತೆ ಕೊಟಕ್‌ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ; ಕಾರಣ ಇಲ್ಲಿದೆ

Kotak Mahindra Bank: ಕೊಟಕ್‌ ಮಹೀಂದ್ರಾ ಬ್ಯಾಂಕ್‌ಗೆ ಆರ್‌ಬಿಐ ಶಾಕ್‌ ಕೊಟ್ಟಿದೆ. ಹೊಸ ಗ್ರಾಹಕರಿಗೆ ಕ್ರೆಡಿಟ್‌ ಕಾರ್ಡ್‌ ವಿತರಣೆ, ಮೊಬೈಲ್‌ ಬ್ಯಾಂಕಿಂಗ್ ಹಾಗೂ ಆನ್‌ಲೈನ್‌ ಸೇವೆಗಳನ್ನು ನೀಡುವುದಕ್ಕೆ ಆರ್‌ಬಿಐ ನಿರ್ಬಂಧ ವಿಧಿಸಿದೆ. ಆರ್‌ಬಿಐ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಇಂತಹ ಕ್ರಮ ತೆಗೆದುಕೊಳ್ಳಲಾಗಿದ್ದು, ಇದರಿಂದ ಬ್ಯಾಂಕ್‌ಗೆ ಭಾರಿ ನಷ್ಟವಾಗಲಿದೆ ಎಂದು ತಿಳಿದುಬಂದಿದೆ.

VISTARANEWS.COM


on

Kotak Mahindra Bank
Koo

ಮುಂಬೈ: ನಿಯಮಗಳ ಪಾಲನೆಯ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ (Paytm Payments Bank) ಹಲವು ನಿರ್ಬಂಧ ವಿಧಿಸಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಈಗ ಕೊಟಕ್‌ ಮಹೀಂದ್ರಾ ಬ್ಯಾಂಕ್‌ಗೆ (Kotak Mahindra Bank) ಕೂಡ ಹಲವು ನಿರ್ಬಂಧ ವಿಧಿಸಿದೆ. ಅದರಲ್ಲೂ, ಹೊಸ ಗ್ರಾಹಕರಿಗೆ ನೂತನ ಕ್ರೆಡಿಟ್‌ ಕಾರ್ಡ್‌ಗಳನ್ನು ವಿತರಿಸುವುದು ಪ್ರಮುಖ ನಿರ್ಬಂಧವಾಗಿದೆ. ಇದರಿಂದ ಬ್ಯಾಂಕ್‌ಗೆ ಹೊಸ ಗ್ರಾಹಕರನ್ನು ಸೆಳೆಯಲು ಕಷ್ಟವಾಗಲಿದೆ ಎಂದು ತಿಳಿದುಬಂದಿದೆ.

ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆಯ 35ಎ ಸೆಕ್ಷನ್‌ನ ಅಡಿಯಲ್ಲಿ ಕೊಟಕ್‌ ಮಹೀಂದ್ರಾ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧಗಳನ್ನು ವಿಧಿಸಿದೆ. ಆರ್‌ಬಿಐ ನಿಯಮಗಳ ಪಾಲನೆ ಮಾಡದ ಹಿನ್ನೆಲೆಯಲ್ಲಿ ಆರ್‌ಬಿಐ ನಿರ್ಬಂಧಗಳನ್ನು ವಿಧಿಸಿದೆ ಎಂದು ತಿಳಿದುಬಂದಿದೆ. “ನೂತನ ಗ್ರಾಹಕರಿಗೆ ಕ್ರೆಡಿಟ್‌ ಕಾರ್ಡ್‌ಗಳನ್ನು ನೀಡಬಾರದು. ಹಾಗೆಯೇ, ಹೊಸ ಗ್ರಾಹಕರಿಗೆ ಆನ್‌ಲೈನ್‌ ಹಾಗೂ ಮೊಬೈಲ್‌ ಬ್ಯಾಂಕಿಂಗ್‌ ಸೇವೆಗಳನ್ನು ಒದಗಿಸಬಾರದು. ತತ್‌ಕ್ಷಣದಿಂದಲೇ ನಿರ್ಬಂಧಗಳು ಜಾರಿಗೆ ಬರಲಿವೆ” ಎಂದು ಆರ್‌ಬಿಐ ಆದೇಶಿಸಿದೆ.

ಆರ್‌ಬಿಐ ನಿಷೇಧಕ್ಕೆ ಕಾರಣವೇನು?

ಕೊಟಕ್‌ ಮಹೀಂದ್ರಾ ಬ್ಯಾಂಕ್‌ ಗ್ರಾಹಕರು ಆನ್‌ಲೈನ್‌ ಮೂಲಕ ವಹಿವಾಟು ನಡೆಸಲು ಬ್ಯಾಂಕ್‌ ಸರಿಯಾದ ಸುರಕ್ಷತೆ ಒದಗಿಸಿಲ್ಲ. 2022 ಹಾಗೂ 2023ರಲ್ಲಿ ಐಟಿ ಪರಿಶೀಲನೆ ಕುರಿತು ಆರ್‌ಬಿಐ ಆತಂಕ ವ್ಯಕ್ತಪಡಿಸಿದರೂ ಸುರಕ್ಷತೆ ನೀಡುವಲ್ಲಿ ಕೊಟಕ್‌ ಮಹೀಂದ್ರಾ ಬ್ಯಾಂಕ್‌ ವಿಫಲವಾಗಿದೆ. ಬ್ಯಾಂಕ್‌ನ ಐಟಿ ಮೂಲ ಸೌಕರ್ಯ, ಐಟಿ ನಿರ್ವಹಣೆ, ಪ್ಯಾಚ್‌ ಮತ್ತು ಚೇಂಜ್‌ ಮ್ಯಾನೇಜ್‌ಮೆಂಟ್‌, ಬಳಕೆದಾರರ ಅನುಮತಿ ನಿರ್ವಹಣೆ, ವೆಂಡರ್‌ ರಿಸ್ಕ್‌ ಮ್ಯಾನೇಜ್‌ಮೆಂಟ್, ಡೇಟಾ ಸೆಕ್ಯುರಿಟಿ ಸೇರಿ ಹಲವು ಸುರಕ್ಷತೆಗಳನ್ನು ಒದಗಿಸುವಲ್ಲಿ ಬ್ಯಾಂಕ್‌ ವಿಫಲವಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಇದೇ ಕಾರಣಕ್ಕಾಗಿ ನಿರ್ಬಂಧಗಳನ್ನು ವಿಧಿಸಿದೆ ಎಂದು ಮಾಹಿತಿ ನೀಡಿದೆ.

ಹಳೆಯ ಗ್ರಾಹಕರಿಗೆ ತೊಂದರೆ ಇದೆಯೇ?

ನೂತನ ಗ್ರಾಹಕರಿಗೆ ಕ್ರೆಡಿಟ್‌ ಕಾರ್ಡ್‌ ವಿತರಿಸುವುದು, ಅವರಿಗೆ ಆನ್‌ಲೈನ್‌ ಹಾಗೂ ಮೊಬೈಲ್‌ ಬ್ಯಾಂಕಿಂಗ್‌ ಸೇವೆಗಳನ್ನು ಒದಗಿಸುವುದಕ್ಕೆ ಆರ್‌ಬಿಐ ನಿರ್ಬಂಧ ಹೇರಿರುವ ಕಾರಣ ಹಳೆಯ ಗ್ರಾಹಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈಗಾಗಲೇ ಕೊಟಕ್‌ ಮಹೀಂದ್ರಾ ಬ್ಯಾಂಕ್ ಕ್ರೆಡಿಟ್‌ ಕಾರ್ಡ್‌ ಹೊಂದಿರುವವರು, ಆನ್‌ಲೈನ್‌ ಹಾಗೂ ಮೊಬೈಲ್‌ ಬ್ಯಾಂಕ್‌ ಸೌಲಭ್ಯ ಹೊಂದಿರುವವರು ಸೇವೆಗಳನ್ನು ಪಡೆಯಬಹುದಾಗಿದೆ. ಹಾಗಾಗಿ, ಹಳೆಯ ಗ್ರಾಹಕರಿಗೆ ಆರ್‌ಬಿಐ ಆದೇಶದಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿದುಂದಿದೆ.

ಇದನ್ನೂ ಓದಿ: Paytm Layoffs: ಪೇಟಿಎಂನಲ್ಲಿ ಉದ್ಯೋಗ ಕಡಿತದ ಭೀತಿ; ಎಷ್ಟು ಮಂದಿಗೆ ಗೇಟ್‌ಪಾಸ್‌?

Continue Reading

Lok Sabha Election 2024

Lok Sabha Election 2024: ಇಂದಿನಿಂದ 3 ದಿನ ಬೆಂಗಳೂರಲ್ಲಿ ಮದ್ಯ ಮಾರಾಟ ಇಲ್ಲ; ಮತ್ತೂ 1 ದಿನ ಸಿಗಲ್ಲ ಎಣ್ಣೆ!

Lok Sabha Election 2024: ಈ ಸಮಯದಲ್ಲಿ ಅಂಗಡಿಗಳು, ಬಾರ್‌ಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು ಸೇರಿದಂತೆ ಯಾವುದೇ ಸಂಸ್ಥೆಗಳು ಮದ್ಯ ಮಿಶ್ರಿತ ಪಾನೀಯಗಳನ್ನು ಮಾರಾಟ ಮಾಡುವಂತಿಲ್ಲ. ಈ ಎಲ್ಲದಕ್ಕೂ ನಿರ್ಬಂಧವನ್ನು ವಿಧಿಸಲಾಗಿದೆ. ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು ಆಹಾರ ಮತ್ತು ಆಲ್ಕೊಹಾಲ್‌ಯುಕ್ತವಲ್ಲದ ಪಾನೀಯಗಳನ್ನು ನೀಡಲು ಅನುಮತಿ ಇದೆ ಎಂದು ಆದೇಶದಲ್ಲಿ ಹೇಳಲಾಗಿದೆ.

VISTARANEWS.COM


on

Lok Sabha Election 2024 No sale of liquor in Bengaluru for 3 days from today
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಏಪ್ರಿಲ್ 26ರಂದು ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ (First phase of polling) ನಡೆಯಲಿದೆ. ಈ ವೇಳೆ 14 ಲೋಕಸಭಾ ಕ್ಷೇತ್ರಗಳಿಗೆ ಕೆಲವು ನಿಯಮಗಳು ಅನ್ವಯವಾಗಲಿದೆ. ಈ ಸಂಬಂಧ ಈಗ ಬೆಂಗಳೂರು ನಗರದಲ್ಲಿ ಬುಧವಾರ (ಏಪ್ರಿಲ್‌ 24) ಸಂಜೆ 5 ಗಂಟೆಯಿಂದ ಏಪ್ರಿಲ್‌ 26ರ ಮಧ್ಯರಾತ್ರಿ ವರೆಗೆ ಎಲ್ಲ ರೀತಿಯ ಮದ್ಯ ಮಾರಾಟವನ್ನು (Sale of liquor) ನಿಷೇಧಿಸಿ ಆದೇಶಿಸಲಾಗಿದೆ.

ಬೆಂಗಳೂರು ನಗರ ಪೊಲೀಸ್ ಇಲಾಖೆ ಈ ನಿರ್ದೇಶನವನ್ನು ನೀಡಿದೆ. ಏಪ್ರಿಲ್ 24ರ ಬುಧವಾರ ಸಂಜೆ 5 ರಿಂದ ಏಪ್ರಿಲ್ 26 ರ ಮಧ್ಯರಾತ್ರಿವರೆಗೆ ಎಲ್ಲ ಮದ್ಯದ ಅಂಗಡಿಗಳನ್ನು ಮುಚ್ಚಲಾಗುವುದು ಎಂದು ನಿರ್ದೇಶನದಲ್ಲಿ ಉಲ್ಲೇಖಿಸಲಾಗಿದೆ.

ಮತ ಎಣಿಕೆ ದಿನವೂ ಬೆಂಗಳೂರಲ್ಲಿ ಇಲ್ಲ ಮದ್ಯ ಮಾರಾಟ

ಬೆಂಗಳೂರಿನಲ್ಲಿ ಮತ ಎಣಿಕೆ ದಿನವೂ ಒಂದಿಡೀ ದಿನ ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶವನ್ನು ಹೊರಡಿಸಲಾಗಿದೆ. ಜೂನ್ 3ರ ಮಧ್ಯರಾತ್ರಿ 12 ಗಂಟೆಯಿಂದ ಜೂನ್ 4 ರ ಮಧ್ಯರಾತ್ರಿ 12 ಗಂಟೆವರೆಗೆ ಮದ್ಯ ಮಾರಾಟವನ್ನು ಸ್ಥಗಿತಗೊಳಿಸಿ ಆದೇಶಿಸಲಾಗಿದೆ.

ಈ ಸಮಯದಲ್ಲಿ ಅಂಗಡಿಗಳು, ಬಾರ್‌ಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು ಸೇರಿದಂತೆ ಯಾವುದೇ ಸಂಸ್ಥೆಗಳು ಮದ್ಯ ಮಿಶ್ರಿತ ಪಾನೀಯಗಳನ್ನು ಮಾರಾಟ ಮಾಡುವಂತಿಲ್ಲ. ಈ ಎಲ್ಲದಕ್ಕೂ ನಿರ್ಬಂಧವನ್ನು ವಿಧಿಸಲಾಗಿದೆ. ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು ಆಹಾರ ಮತ್ತು ಆಲ್ಕೊಹಾಲ್‌ಯುಕ್ತವಲ್ಲದ ಪಾನೀಯಗಳನ್ನು ನೀಡಲು ಅನುಮತಿ ಇದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಆದೇಶದಲ್ಲೇನಿದೆ?

“ನಾನು, ಡೆಪ್ಯುಟಿ ಕಮಿಷನರ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು, ಸರ್ಕಾರದ ಕರ್ನಾಟಕ ಅಬಕಾರಿ ಕಾಯಿದೆಗಳ (ಸಾಮಾನ್ಯ ಷರತ್ತುಗಳು) ನಿಯಮಗಳು, 1967 ರ ನಿಯಮ-10 (ಬಿ) ಸೆಕ್ಷನ್ 135 (ಸಿ) ಮೂಲಕ ಪ್ರದಾನ ಮಾಡಲಾದ ಅಧಿಕಾರಗಳನ್ನು ಚಲಾಯಿಸುವಾಗ ಮತ್ತು ಪ್ರಜಾಪ್ರತಿನಿಧಿ ಕಾಯಿದೆ, 1951 ಮತದಾನದ ದಿನಾಂಕ: 24-04-2024 ರಿಂದ ಸಂಜೆ 5.00 ರವರೆಗೆ ದಿನಾಂಕ: 26-04-2024 12.00 ಮಧ್ಯರಾತ್ರಿ ಮತ್ತು ಎಣಿಕೆ ದಿನಾಂಕ: 03-06-2024 12.00 ಮಧ್ಯರಾತ್ರಿಯಿಂದ 12.04-4 ಮಧ್ಯರಾತ್ರಿ 6 ರಂದು 24-04-2024 ರವರೆಗೆ ಬೆಂಗಳೂರು ನಗರ ಜಿಲ್ಲೆ (ಪೊಲೀಸ್ ಕಮಿಷನರೇಟ್ ಪ್ರದೇಶ ಹೊರತುಪಡಿಸಿ) ಎಲ್ಲ ರೀತಿಯ ಮದ್ಯ ಉತ್ಪಾದನೆ, ಮಾರಾಟ, ವಿತರಣೆ, ಸಾಗಣೆ, ಸಂಗ್ರಹಣೆ ಇತ್ಯಾದಿಗಳನ್ನು ನಿಷೇಧಿಸಿ ಆದೇಶವನ್ನು ಜಾರಿಗೊಳಿಸಿ ಮತ್ತು ‘ಡ್ರೈ ಡೇಸ್’ ಎಂದು ಘೋಷಿಸಲಾಗಿದೆ” ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಏಪ್ರಿಲ್‌ 26ಕ್ಕೆ ಮೊದಲ ಹಂತದ ಮತದಾನ; ಸಾರ್ವತ್ರಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ

ಬೆಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಏಪ್ರಿಲ್ 24 ರಂದು ಸಂಜೆ 6 ರಿಂದ ಏಪ್ರಿಲ್ 26 ರ ಮಧ್ಯರಾತ್ರಿಯವರೆಗೆ ಸಿಆರ್‌ಪಿಸಿಯ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Continue Reading

ಕರ್ನಾಟಕ

Muslims OBC Quota: ಎಲ್ಲ ಮುಸ್ಲಿಮರನ್ನು ಒಬಿಸಿಗೆ ಸೇರಿಸಿದ ಸಿದ್ದರಾಮಯ್ಯ ಸರ್ಕಾರ; ರಾಷ್ಟ್ರೀಯ ಆಯೋಗ ಕೆಂಡ!

Muslims OBC Quota: ಕರ್ನಾಟಕದ ಎಲ್ಲ ಮುಸ್ಲಿಮರನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಒಬಿಸಿ ಮೀಸಲಾತಿ ವ್ಯಾಪ್ತಿಗೆ ಸೇರಿಸಿದೆ. ಈ ಕುರಿತು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು ಮಾಹಿತಿ ನೀಡಿದೆ. ಆದರೆ, ಒಬಿಸಿ ಮೀಸಲಾತಿಯು ಸಮುದಾಯಗಳಿಗೆ ಸೇರಿದೆಯೇ ಹೊರತು, ಇಡೀ ಧರ್ಮಕ್ಕೆ ನೀಡುವುದು ಸರಿಯಲ್ಲ ಎಂದು ಆಯೋಗವು ಅಸಮಾಧಾನ ವ್ಯಕ್ತಪಡಿಸಿದೆ. ಇದು ಈಗ ಚರ್ಚೆಗೆ ಗ್ರಾಸವಾಗಿದೆ.

VISTARANEWS.COM


on

Muslims OBC Quota
Koo

ಬೆಂಗಳೂರು/ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹೊತ್ತಿನಲ್ಲಿಯೇ ಕರ್ನಾಟಕ ಸರ್ಕಾರವು (Karnataka Government) ಮಹತ್ವದ ತೀರ್ಮಾನವೊಂದು ತೆಗೆದುಕೊಂಡಿದೆ. ಹೌದು, ಉದ್ಯೋಗ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ದಿಸೆಯಲ್ಲಿ ರಾಜ್ಯ ಸರ್ಕಾರವು ಮುಸ್ಲಿಮರನ್ನು ಇತರೆ ಹಿಂದುಳಿದ ವರ್ಗಗಳ (Muslims OBC Quota) ಕೆಟಗರಿಗೆ ಸೇರಿದೆ. ಆದರೆ, ಇದಕ್ಕೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವು (NCBC) ಆಕ್ರೋಶ ವ್ಯಕ್ತಪಡಿಸಿದೆ.

ಕರ್ನಾಟಕ ಸರ್ಕಾರವು ಮುಸ್ಲಿಮರಿಗೆ ಮೀಸಲಾತಿ ನೀಡುವ ದಿಸೆಯಲ್ಲಿ ಆ ಧರ್ಮದ ಎಲ್ಲರನ್ನೂ ಒಬಿಸಿಗೆ ಸೇರಿಸಿರುವ ಕುರಿತು ಎನ್‌ಸಿಬಿಸಿಯೇ ಮಾಹಿತಿ ನೀಡಿದೆ. “ಮೀಸಲಾತಿ ನೀಡಲು ಕರ್ನಾಟಕ ಸರ್ಕಾರವು ಮುಸ್ಲಿಮರನ್ನು ಒಬಿಸಿ ಕೆಟಗರಿಗೆ ಸೇರಿಸಿದೆ. ಇದು ಸಾಮಾಜಿಕ ನ್ಯಾಯ ತತ್ವಕ್ಕೆ ವಿರುದ್ಧವಾಗಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಒಬಿಸಿ ಮೀಸಲಾತಿ ನೀಡಬೇಕೇ ಹೊರತು, ಇಡೀ ಧರ್ಮವನ್ನೇ ಒಬಿಸಿಗೆ ಸೇರಿಸಿರುವುದು ಸರಿಯಲ್ಲ” ಎಂದು ಎನ್‌ಸಿಬಿಸಿ ಅಸಮಾಧಾನ ವ್ಯಕ್ತಪಡಿಸಿದೆ.

ಕರ್ನಾಟಕ ಸರ್ಕಾರವು ಮುಸ್ಲಿಮರನ್ನು ಒಬಿಸಿಗೆ ಸೇರಿಸಿರುವ ಕುರಿತು ಎನ್‌ಸಿಬಿಸಿಯು ದಾಖಲೆಗಳನ್ನೂ ನೀಡಿದೆ. ಮಾಹಿತಿ ಪ್ರಕಾರ, “ಕರ್ನಾಟಕಲ್ಲಿ ಮುಸ್ಲಿಮರ ಸಂಖ್ಯೆ ಶೇ.12.92ರಷ್ಟಿದೆ. ಕೆಟಗರಿ II-B ಅನ್ವಯ ಕರ್ನಾಟಕದಲ್ಲಿರುವ ಎಲ್ಲ ಮುಸ್ಲಿಮರು ಒಬಿಸಿ ಕೆಟಗರಿ ವ್ಯಾಪ್ತಿಗೆ ಸೇರುತ್ತಾರೆ. ಕೆಟಗರಿ 1ರಲ್ಲಿ 17 ಮುಸ್ಲಿಂ ಸಮುದಾಯಗಳು, 2ಎ ಕೆಟಗರಿಯಲ್ಲಿ 19 ಮುಸ್ಲಿಂ ಸಮುದಾಯಗಳು ಬರುತ್ತವೆ. ಇದು ಸಾಮಾಜಿಕ ನ್ಯಾಯ ತತ್ವದ ವಿರುದ್ಧದ ತೀರ್ಮಾನವಾಗಿದೆ” ಎಂಬುದಾಗಿ ಎನ್‌ಸಿಬಿಸಿ ತಿಳಿಸಿದೆ.

“ಹಿಂದುಗಳು, ಮುಸ್ಲಿಮರು ಸೇರಿ ಎಲ್ಲ ಧರ್ಮಗಳಲ್ಲಿಯೇ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯದವರಿಗೆ ಮಾತ್ರ ಒಬಿಸಿ ಮೀಸಲಾತಿ ನೀಡಲಾಗುತ್ತಿದೆ. ಆದರೆ, ಒಂದಿಡೀ ಧರ್ಮಕ್ಕೇ ಒಬಿಸಿ ಮೀಸಲಾತಿ ನೀಡುವುದು ಆ ಮೀಸಲಾತಿಯ ತತ್ವಕ್ಕೆ ವಿರುದ್ಧವಾಗಿದೆ. ಆದರೆ, ಎಲ್ಲ ಮುಸ್ಲಿಂ ಸಮುದಾಯದವರನ್ನು ಒಬಿಸಿಗೆ ಸೇರ್ಪಡೆ ಮಾಡುವ ಮೂಲಕ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಒಬಿಸಿ ಕೆಟಗರಿ ವ್ಯಾಪ್ತಿಯ ಹಿಂದುಳಿದ ಸಮುದಾಯದವರ ಹಕ್ಕುಗಳನ್ನು ಕಸಿದುಕೊಂಡಿದೆ. ಹಾಗೆಯೇ, ಮೀಸಲಾತಿ ನೀಡಿರುವ ಕುರಿತು ಯಾವುದೇ ಮಾಹಿತಿಯನ್ನೂ ರಾಜ್ಯ ಸರ್ಕಾರ ಒದಗಿಸಿಲ್ಲ” ಎಂಬುದಾಗಿ ಎನ್‌ಸಿಬಿಸಿ ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಬೆಂಗಾಲಿ ಮುಸ್ಲಿಮರು ಬಹುಪತ್ನಿತ್ವ ತ್ಯಜಿಸಬೇಕು; ಹಿಮಂತ ಬಿಸ್ವಾ ಶರ್ಮಾ ಕಂಡಿಷನ್ಸ್‌ ಹೀಗಿವೆ

Continue Reading
Advertisement
Actress Saree Fashion
ಫ್ಯಾಷನ್2 mins ago

Actress Saree Fashion: ಟ್ರೆಂಡಿ ಸನ್‌ ಶೇಡ್‌ ಸೀರೆಯಲ್ಲಿ ನಟಿ ತೇಜಸ್ವಿನಿ ಶರ್ಮಾ ಸಮ್ಮರ್‌ ಲುಕ್‌

Sachin Tendulkar Birthday
ಕ್ರೀಡೆ3 mins ago

Sachin Tendulkar Birthday: ಈ ಬಾರಿ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಚಿನ್‌ ತೆಂಡೂಲ್ಕರ್‌; ವಿಡಿಯೊ ವೈರಲ್​

Condemns Neha murder case Gangavathi bandh
ಕೊಪ್ಪಳ6 mins ago

Neha Murder Case: ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ಗಂಗಾವತಿ ಬಂದ್; ಉತ್ತಮ ಪ್ರತಿಕ್ರಿಯೆ

Voter Slip
Lok Sabha Election 20248 mins ago

Voter Slip: ಮತದಾನಕ್ಕೆ ಇನ್ನೊಂದೇ ದಿನ ಬಾಕಿ; ವೋಟರ್ ಸ್ಲಿಪ್ ಸಿಕ್ಕಿಲ್ಲವೇ? ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಿ

Lok Sabha Election 2024
Lok Sabha Election 20249 mins ago

Lok Sabha Election 2024: ಚುನಾವಣಾ ಕಣಕ್ಕೆ ಧುಮುಕಿದ ಖಲಿಸ್ತಾನಿ ನಾಯಕ ಅಮೃತ್​ಪಾಲ್​ ಸಿಂಗ್‌; ಯಾವ ಕ್ಷೇತ್ರ?

ಕರ್ನಾಟಕ33 mins ago

Rapido Bike Taxi: ಏ.26ರಂದು ಬೆಂಗಳೂರು ಸೇರಿ 3 ನಗರಗಳಲ್ಲಿ ಮತದಾರರಿಗೆ ರ‍್ಯಾಪಿಡೋದಿಂದ ಉಚಿತ ರೈಡ್‌ ಆಫರ್‌

Kotak Mahindra Bank
ದೇಶ33 mins ago

Kotak Mahindra Bank: ಹೊಸ ಕ್ರೆಡಿಟ್ ಕಾರ್ಡ್ ನೀಡದಂತೆ ಕೊಟಕ್‌ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ; ಕಾರಣ ಇಲ್ಲಿದೆ

Lok Sabha Election 2024 No sale of liquor in Bengaluru for 3 days from today
Lok Sabha Election 202436 mins ago

Lok Sabha Election 2024: ಇಂದಿನಿಂದ 3 ದಿನ ಬೆಂಗಳೂರಲ್ಲಿ ಮದ್ಯ ಮಾರಾಟ ಇಲ್ಲ; ಮತ್ತೂ 1 ದಿನ ಸಿಗಲ್ಲ ಎಣ್ಣೆ!

Muslims OBC Quota
ಕರ್ನಾಟಕ41 mins ago

Muslims OBC Quota: ಎಲ್ಲ ಮುಸ್ಲಿಮರನ್ನು ಒಬಿಸಿಗೆ ಸೇರಿಸಿದ ಸಿದ್ದರಾಮಯ್ಯ ಸರ್ಕಾರ; ರಾಷ್ಟ್ರೀಯ ಆಯೋಗ ಕೆಂಡ!

Lok Sabha Election 2024 DK Shivakumar IT raids on Suresh close aides and Congress protests
Lok Sabha Election 202458 mins ago

Lok Sabha Election 2024: ಡಿ.ಕೆ. ಸುರೇಶ್‌ ಆಪ್ತರ ಮನೆ ಮೇಲೆ ಐಟಿ ರೇಡ್;‌ ಕಾಂಗ್ರೆಸ್‌ ಪ್ರತಿಭಟನೆ, ವಾಗ್ವಾದ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ14 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌