ವಿಸ್ತಾರ ಸಂಪಾದಕೀಯ: ಕೋವಿಡ್ ಲಸಿಕೆ ಅಡ್ಡಪರಿಣಾಮ, ಸರ್ಕಾರ ಹೊಣೆಗಾರಿಕೆ ಹೊರಲಿ - Vistara News

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಕೋವಿಡ್ ಲಸಿಕೆ ಅಡ್ಡಪರಿಣಾಮ, ಸರ್ಕಾರ ಹೊಣೆಗಾರಿಕೆ ಹೊರಲಿ

ಕೇಂದ್ರ ಸರ್ಕಾರ ಹೀಗೆ ನುಣುಚಿಕೊಳ್ಳುವುದನ್ನು ಬಿಟ್ಟು, ಈ ಲಸಿಕೆಯಿಂದ ನಿಜಕ್ಕೂ ಆಗುತ್ತಿರುವ ಹಾನಿ ಏನು, ಇದಕ್ಕೆ ಏನು ಪರಿಹಾರ ಎಂಬ ಬಗ್ಗೆ ಅಧ್ಯಯನ ನಡೆಸಲು ಸೂಕ್ತ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರಲ್ಲಿನ ಗೊಂದಲ-ಆತಂಕ ನಿವಾರಿಸಬೇಕು.

VISTARANEWS.COM


on

ಸಂಪಾದಕೀಯ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೋವಿಡ್ ಲಸಿಕೆಯಿಂದ ಆಗುವ ಸಾವು ನೋವಿಗೆ ನಾವು ಹೊಣೆಯಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿತ್ ಸಲ್ಲಿಸಿದೆ. ಕಳೆದ ವರ್ಷ ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕ ಅನಾರೋಗ್ಯ ಉಲ್ಬಣಿಸಿ ಇಬ್ಬರು ಯುವತಿಯರು ಮೃತಪಟ್ಟಿದ್ದು, ಅವರ ಪೋಷಕರು ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸರ್ಕಾರ ಹೀಗೆಂದಿದೆ. ಹೀಗೆ ಸಾವಿನ ಪ್ರಕರಣಗಳಿದ್ದಲ್ಲಿ ಅದಕ್ಕೆ ಪರಿಹಾರ ನೀಡಲು ಸರ್ಕಾರ ಹೊಣೆಯಲ್ಲ, ಇವುಗಳನ್ನು ಒಂದೊಂದೇ ಪ್ರಕರಣದಂತೆ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಬೇಕಿದೆ ಅನ್ನುವ ಮೂಲಕ ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆ. ಇದು ಜವಾಬ್ದಾರಿಯುತ ಸರ್ಕಾರದ ವರ್ತನೆಯಲ್ಲ ಎಂದೇ ಹೇಳಬೇಕಿದೆ.

ಕೋವಿಡ್ ಲಸಿಕೆಯ ಸೈಡ್ ಎಫೆಕ್ಟ್ ಏನು ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಕೇಳಿದಾಗಲೂ ಕೇಂದ್ರ ಹಾರಿಕೆಯ ಉತ್ತರ ನೀಡಿತ್ತು. ಆದರೆ, ಕೊರೊನಾ ಲಸಿಕೆ ಸೈಡ್ ಎಫೆಕ್ಟ್‌ನಿಂದ ಸಂಪೂರ್ಣ ಮುಕ್ತವೆಂದು ಅದನ್ನು ತಯಾರಿಸಿದ ಲಸಿಕೆ ಕಂಪನಿಗಳು ಕೂಡ ಹೇಳಿಲ್ಲ. ಪ್ರತಿ ಔಷಧಕ್ಕೂ ಅಡ್ಡ ಪರಿಣಾಮ ಇದ್ದೇ ಇರುತ್ತದೆ. ಕೋವಿಡ್ ಲಸಿಕೆ ಸೈಡ್ ಎಫೆಕ್ಟ್ ಬಗ್ಗೆಯೂ ದೂರುಗಳಿವೆ. ಅಲ್ಲಿ ಇಲ್ಲಿ ಹಲವು ತಜ್ಞರು ಇದರ ಸೈಡ್ ಎಫೆಕ್ಟ್‌ಗಳ ಬಗ್ಗೆ ಮಾತನಾಡಿದ್ದರು. ಆದರೆ ಲಸಿಕೆಯಿಂದಾಗುವ ಸಾಮೂಹಿಕ ಧನಾತ್ಮಕ ಉಪಯೋಗಗಳ ವಿಜೃಂಭಣೆಯ ಮುಂದೆ ಈ ದನಿಗಳು ಕ್ಷೀಣವಾಗಿ ಹೋಗಿದ್ದವು. ಲಸಿಕೆಯಿಂದಾಗಿ ದೇಶ ಬಹುತೇಕ ಕೊರೊನಾ ಮುಕ್ತವಾಗಿರುವುದು ನಿಜ. ಆದರೆ ಈಗಲಾದರೂ ನಾವು ಅದರ ಅಡ್ಡ ಪರಿಣಾಮಗಳ ಬಗ್ಗೆ ಧೈರ್ಯವಾಗಿ ಮಾತನಾಡಬೇಕಿದೆ.

ಅಫಿಡವಿತ್‌ನಲ್ಲಿ ಸರ್ಕಾರವೇ ಕೆಲವು ಅಂಕಿ ಅಂಶಗಳನ್ನು ನೀಡಿದೆ. ಇದುವರೆಗೂ ದೇಶದಲ್ಲಿ 219.86 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ. ಇದರಲ್ಲಿ 92,114 ಅಡ್ಡಪರಿಣಾಮದ ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ 2782 ಪ್ರಕರಣಗಳಲ್ಲಿ ಸಾವು ನೋವು, ಅತಿ ಗಂಭೀರ ಹಾಗೂ ಗಂಭೀರ ಅನಾರೋಗ್ಯಗಳು ಉಂಟಾಗಿವೆ. ಅಂದರೆ ಒಟ್ಟಾರೆ ಡೋಸ್ ಪ್ರಮಾಣದ 0.00013%. ಇದೊಂದು ಅತಿ ಸಣ್ಣ ಸಂಖ್ಯೆ ಎಂದು ಕೇಂದ್ರ ನುಣುಚಿಕೊಳ್ಳಲು ಯತ್ನಿಸಿದೆ. ಆದರೆ 2782 ಗಂಭೀರ ಪ್ರಕರಣಗಳು ಸಣ್ಣ ಪ್ರಮಾಣದ್ದು ಎಂಬ ಗ್ರಹಿಕೆಯೂ ತಪ್ಪಿನದೇ. ಒಂದು ಸಾವು ಸಂಭವಿಸಿದರೂ ಅಡ್ಡ ಪರಿಣಾಮವಿದೆಯೆಂದು ಅರ್ಥ ಹಾಗೂ ಅದರ ಹೊಣೆಯನ್ನು ಸರ್ಕಾರ ಹೊರಬೇಕಾಗುತ್ತದೆ.

ದೇಶದ ಪ್ರತಿಯೊಬ್ಬರಿಗೂ ಲಸಿಕೆ ಕೊಟ್ಟಿದ್ದೇವೆ ಎಂದು ಸರ್ಕಾರ ಹೇಳಿಕೊಂಡಿದೆ. ಜಗತ್ತಿನಲ್ಲೇ ತಮ್ಮದು ಅತ್ಯಂತ ಪರಿಣಾಮಕಾರಿ ಲಸಿಕಾ ಅಭಿಯಾನ ಎಂದೂ ಎದೆ ತಟ್ಟಿಕೊಂಡಿದೆ. ಸಾಧನೆಯನ್ನು ಹೇಳಿ ಎದೆ ತಟ್ಟಿಕೊಳ್ಳುವಾಗ ಲಸಿಕೆ ತಮ್ಮದು, ಅಡ್ಡ ಪರಿಣಾಮಗಳು ಉಂಟಾದಾಗ ತಮ್ಮದಲ್ಲ ಎನ್ನುವುದು ಹಾಸ್ಯಾಸ್ಪದವಲ್ಲವೇ? ಇದು ದ್ವಂದ್ವ ನಿಲುವು ಅಲ್ಲವೇ? ಲಸಿಕೆ ಕಡ್ಡಾಯವಲ್ಲ, ಆದ್ದರಿಂದ ಸರ್ಕಾರ ಹೊಣೆಯಲ್ಲ ಎಂದು ಕೇಂದ್ರ ಹೇಳಬಹುದು. ಆದರೆ ಸಾರ್ವಜನಿಕ ಆರೋಗ್ಯದ ಹೊಣೆ ಸರ್ಕಾರದ್ದೇ ಆಗಿದೆ. ಕೋವಿಡ್ ಸಾಂಕ್ರಾಮಿಕ ಒಂದು ಸಾಮಾಜಿಕ, ಸಾಮೂಹಿಕ ಆರೋಗ್ಯ ದುರಂತ. ಆದ್ದರಿಂದ ಇದರ ಉತ್ತರದಾಯಿತ್ವವೂ ಸರ್ಕಾರದ್ದೇ ಆಗಬೇಕಿರುವುದು ಸ್ವಾಭಾವಿಕ.

ಕೋವಿಡ್ ನಂತರ, ಕೋವಿಡ್ ಲಸಿಕೆಯ ಸ್ವೀಕಾರದ ನಂತರ ದೇಶದ ಯುವಜನತೆಯಲ್ಲಿ ಅಸಹಜ ಸಾವುಗಳು ಹೆಚ್ಚಿರುವುದನ್ನು ಜನತೆ ಗಮನಿಸುತ್ತಿದ್ದಾರೆ. ಅತ್ಯಂತ ಆರೋಗ್ಯಯುತ ದೇಹ ಹೊಂದಿರುವ ಯುವಜನ ಮೃತಪಡುತ್ತಿರುವುದು ಕಂಡುಬಂದಿದೆ. ಈ ಸಾವುಗಳು ಕಡೇ ಪಕ್ಷ ನಮ್ಮ ಆರೋಗ್ಯ ಇಲಾಖೆಯಿಂದ ಗಂಭೀರ ಸಮೀಕ್ಷೆಗೆ, ಅಧ್ಯಯನಕ್ಕೆ ವಸ್ತುವಾಗಬೇಕಲ್ಲವೇ? ಈ ಕುರಿತು ಯಾವುದೇ ಪ್ರಯತ್ನ ಎಲ್ಲೂ ನಡೆದಂತಿಲ್ಲ. ಕನಿಷ್ಠ ಪಕ್ಷ ಖಾಸಗಿ ವೈದ್ಯಕೀಯ ತಂಡಗಳು ಮಾಡಿದರೆ ಅದಕ್ಕೆ ಸಹಾಯವನ್ನಾದರೂ ಒದಗಿಸಬೇಕು.

ಕೇಂದ್ರ ಸರ್ಕಾರ ಹೀಗೆ ನುಣುಚಿಕೊಳ್ಳುವುದನ್ನು ಬಿಟ್ಟು, ಈ ಲಸಿಕೆಯಿಂದ ನಿಜಕ್ಕೂ ಆಗುತ್ತಿರುವ ಹಾನಿ ಏನು, ಇದಕ್ಕೆ ಏನು ಪರಿಹಾರ ಎಂಬ ಬಗ್ಗೆ ಅಧ್ಯಯನ ನಡೆಸಲು ಸೂಕ್ತ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರಲ್ಲಿ ಈ ಬಗ್ಗೆ ಗೊಂದಲವಿದೆ; ಸರ್ಕಶರ ತಾನು ಹೊಣೆಯಲ್ಲ ಎಂದ ಕೂಡಲೇ ಆತಂಕವೂ ಉಂಟಾಗುತ್ತದೆ. ಈ ಗೊಂದಲ ಆತಂಕಗಳನ್ನು ನಿವಾರಿಸಿಕೊಳ್ಳಲು ಸರ್ಕಾರ ಮುಂದಾಗಬೇಕೇ ಹೊರತು ನುಣುಚಿಕೊಂಡು ಪ್ರಜೆಗಳ ದೃಷ್ಟಿಯಲ್ಲಿ ಸಣ್ಣದಾಗಬಾರದು.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ರೌಡಿ – ರಾಜಕಾರಣ ನಂಟು ಪ್ರಜಾಪ್ರಭುತ್ವಕ್ಕೆ ಆಪತ್ತು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024 : “ಶಾರುಖ್​ ಎಂದೂ ನಮ್ಮನ್ನು ಪ್ರಶ್ನಿಸಿಲ್ಲ”, ಎಲ್​ಎಸ್​​ಜಿ ಮಾಲೀಕನಿಗೆ ತಿರುಗೇಟು ಕೊಟ್ಟ ಗಂಭೀರ್​

IPL 2024: ಗೌತಮ್ ಗಂಭೀರ್ ಐಪಿಎಲ್​​ನ ಕಳೆದ ಎರಡು ಆವೃತ್ತಿಗಳಲ್ಲಿ ಎಲ್ಎಸ್​ಜಿ ಮಾರ್ಗದರ್ಶಕರಾಗಿ ತಮ್ಮ ಕೋಚಿಂಗ್​ ವೃತ್ತಿಯನ್ನು ಆರಂಭಿಸಿದ್ದರು. ಮಾರ್ಗದರ್ಶಕರಾಗಿದ್ದ ಸಮಯದಲ್ಲಿ, ಎಲ್ಎಸ್ಜಿ ಎರಡೂ ಋತುಗಳಲ್ಲಿ ಪ್ಲೇಆಫ್​​ಗೆ ಅರ್ಹತೆ ಪಡೆದಿತ್ತು. ಆದಾಗ್ಯೂ, ಗೌತಮ್ ಗಂಭೀರ್ ಆಶ್ಚರ್ಯಕರವಾಗಿ ಪ್ರಭಾವಶಾಲಿ ಅಭಿಯಾನದ ನಂತರವೂ ಫ್ರಾಂಚೈಸಿಯಿಂದ ಬೇರ್ಪಡಲು ನಿರ್ಧರಿಸಿದ್ದರು.

VISTARANEWS.COM


on

IPL 2024
Koo

ಬೆಂಗಳೂರು: ಐಪಿಎಲ್​ 2024ರ (IPL 2024) ಪಂದ್ಯದ ವೇಳೆ ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರು ಕೆಎಲ್ ರಾಹುಲ್​​ಗೆ ಮೈದಾನದಲ್ಲಿಯೇ ನಿಂದಿಸಿರುವ ವಿಚಾರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಆರಂಭದಲ್ಲಿ ನೆಟ್ಟಿಗರು ಎಲ್​ಎಸ್​ಜಿ ಮಾಲೀಕ ಸಂಜೀವ್​ ಗೋಯೆಂಕಾ ಅವರನ್ನು ತರಾಟೆಗೆ ತೆಗೆದುಕೊಂಡರೆ ಇದೀಗ ಹಿರಿಯ ಆಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಂತೆಯೇ ಆ ತಂಡದ ಪರವಾಗಿ ಎರಡು ವರ್ಷ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದ ಗೌತಮ್ ಗಂಭೀರ್ ಕೂಡ ರಾಹುಲ್ ಪರವಾಗಿ ನಿಂತಿದ್ದಾರೆ. ಪರೋಕ್ಷವಾಗಿ ಗೋಯೆಂಕಾಗೆ ಪಾಠ ಮಾಡಿದ್ದಾರೆ.

ಈ ವಾರದ ಆರಂಭದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಎಲ್ಎಸ್​ಜಿ 10 ವಿಕೆಟ್​ಗಳ ಭಾರಿ ಸೋಲಿನ ನಂತರ ರಾಹುಲ್ ಅವರೊಂದಿಗಿನ ಸಂಭಾಷಣೆ ನಡೆಸಿದ್ದ ಗೋಯೆಂಕಾ ಹಲವರ ಹುಬ್ಬೇರುವಂತೆ ಮಾಡಿದ್ದರು. ಎಸ್ಆರ್ಹೆಚ್ ಕೇವಲ 9.4 ಓವರ್​ಗಳಲ್ಲಿ 166 ರನ್​ಗಳನ್ನು ಬೆನ್ನಟ್ಟಿ ಎಲ್ಎಸ್​​ಜಿಯ ಪ್ಲೇಆಫ್ ಭರವಸೆಗಳಿಗೆ ಭಾರಿ ಹೊಡೆತ ನೀಡಿದ ನಂತರ, ಗೋಯೆಂಕಾ ಮೈದಾನದಲ್ಲಿ ರಾಹುಲ್ ಮತ್ತು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರನ್ನು ಬೈದಿದ್ದಾರೆ.

ಇದನ್ನೂ ಓದಿ: Colin Munro : ನ್ಯೂಜಿಲ್ಯಾಂಡ್​ ಟಿ20 ಸ್ಪೆಷಲಿಸ್ಟ್​ ಅಟಗಾರ ನಿವೃತ್ತಿ; ಈ ಆಟಗಾರನ ಸಾಧನೆಗಳ ವಿವರ ಇಲ್ಲಿದೆ

ಭಾರಿ ಸೋಲಿನಿಂದ ಗೋಯೆಂಕಾ ಅಸಮಾಧಾನಗೊಂಡಿದ್ದರು ಮತ್ತು ಅದರ ಬಗ್ಗೆ ತಮ್ಮ ಹತಾಶೆಯನ್ನು ಹೊರಹಾಕುತ್ತಿರುವುದು ಕಂಡುಬಂದಿದೆ. ಎಲ್ಎಸ್ಜಿ ಮಾಲೀಕರ ಕ್ರಮವು ಅನೇಕರಿಗೆ ಹಿಡಿಸಿಲ್ಲ. ಈ ಎಲ್ಲದರ ನಡುವೆ, ಗೌತಮ್ ಗಂಭೀರ್ ಅವರು ಶಾರುಖ್ ಖಾನ್ ಅವರನ್ನು ತಾವು ಕೆಲಸ ಮಾಡಿದ ಅತ್ಯುತ್ತಮ ಫ್ರ್ಯಾಂಚೈಸಿ ಮಾಲೀಕ ಎಂದು ಕರೆಯುವ ಮೂಲಕ ಪರೋಕ್ಷವಾಗಿ ಗೋಯೆಂಕಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂಜೀವ್ ಗೋಯೆಂಕಾ ವಿರುದ್ಧ ಗಂಭೀರ್ ಗರಂ

ಗೌತಮ್ ಗಂಭೀರ್ ಐಪಿಎಲ್​​ನ ಕಳೆದ ಎರಡು ಆವೃತ್ತಿಗಳಲ್ಲಿ ಎಲ್ಎಸ್​ಜಿ ಮಾರ್ಗದರ್ಶಕರಾಗಿ ತಮ್ಮ ಕೋಚಿಂಗ್​ ವೃತ್ತಿಯನ್ನು ಆರಂಭಿಸಿದ್ದರು. ಮಾರ್ಗದರ್ಶಕರಾಗಿದ್ದ ಸಮಯದಲ್ಲಿ, ಎಲ್ಎಸ್ಜಿ ಎರಡೂ ಋತುಗಳಲ್ಲಿ ಪ್ಲೇಆಫ್​​ಗೆ ಅರ್ಹತೆ ಪಡೆದಿತ್ತು. ಆದಾಗ್ಯೂ, ಗೌತಮ್ ಗಂಭೀರ್ ಆಶ್ಚರ್ಯಕರವಾಗಿ ಪ್ರಭಾವಶಾಲಿ ಅಭಿಯಾನದ ನಂತರವೂ ಫ್ರಾಂಚೈಸಿಯಿಂದ ಬೇರ್ಪಡಲು ನಿರ್ಧರಿಸಿದ್ದರು. ಐಪಿಎಲ್ 2024 ಕ್ಕೆ ಮುಂಚಿತವಾಗಿ ಕೋಲ್ಕತಾ ನೈಟ್ ರೈಡರ್ಸ್​ಗೆ ಸೇರಿದರು.

ಗೋಯೆಂಕಾ ಮತ್ತು ಶಾರುಖ್ ಅವರೊಂದಿಗೆ ಕೆಲಸ ಮಾಡಿದ ನಂತರ, ಭಾರತದ ಮಾಜಿ ಬ್ಯಾಟ್ಸ್ಮನ್ ಅವರು ಗೋಯೆಂಕಾ ಮತ್ತು ಶಾರುಖ್ ಅವರೊಂದಿಗೆ ಕೆಲಸ ಮಾಡಿದ ಅತ್ಯುತ್ತಮ ಮಾಲೀಕ ಎಂದು ಕರೆದರು. ಕೋಲ್ಕತಾ ನೈಟ್ ರೈಡರ್ಸ್ ಮಾಜಿ ನಾಯಕ, ಶಾರುಖ್ ಎಂದಿಗೂ ಕ್ರಿಕೆಟ್ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಮತ್ತು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಬೆಂಬಲವನ್ನು ನೀಡುತ್ತಾರೆ ಎಂದು ಒತ್ತಿ ಹೇಳಿದರು.

ಕ್ರಿಕೆಟ್​ಗೆ ಹಸ್ತಕ್ಷೇಪ ಮಾಡುವುದಿಲ್ಲ

“ನಾನು ಅವರೊಂದಿಗೆ ಅದ್ಭುತ ಸಂಬಂಧ ಹೊಂದಿದ್ದೇನೆ. ನನಗೆ, ಅವರು ನಾನು ಕೆಲಸ ಮಾಡಿದ ಅತ್ಯುತ್ತಮ ಮಾಲೀಕರು. ಅವರು ವಿನಮ್ರರು ಮಾತ್ರವಲ್ಲ, ಅವರು ಸಾಕಷ್ಟು ಗೌರವ ಹೊಂದಿರುವವು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಅವರು ಎಂದಿಗೂ ಕ್ರಿಕೆಟ್ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಿಲ್ಲ. ಎಂದು ನಾನು ಭಾವಿಸುವುದಿಲ್ಲ. ನನ್ನಂತಹ ವ್ಯಕ್ತಿಗೆ ಇದು ಬಹಳ ದೊಡ್ಡ ವಿಷಯ. ಏಕೆಂದರೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಪಡೆಯುವುದು ದೊಡ್ಡ ವಿಷಯ. ನಾನು ಯಾವುದೇ ನಿರ್ಧಾರ ತೆಗೆದುಕೊಂಡರೂ, ಅವರು ನನ್ನನ್ನು ಬೆಂಬಲಿಸುತ್ತಾರೆ ಎಂದು ನನಗೆ ತಿಳಿದಿದೆ ಎಂಬುದಾಗಿ ಗಂಭೀರ್​ ಹೇಳಿದರು.

ಇದು ನಮ್ಮ ನಡುವಿನ ನಂಬಿಕೆ. ಏಕೆಂದರೆ ಅವರು ಎಂದಿಗೂ ಕ್ರಿಕೆಟ್ ವಿಷಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಿಲ್ಲ ಎಂದು ನನಗೆ ತಿಳಿದಿದೆ. ನಾನು ತೆಗೆದುಕೊಳ್ಳುವ ಯಾವುದೇ ನಿರ್ಧಾರವು ತಂಡದ ಹಿತಾಸಕ್ತಿಗಳಿಗೆ ಅನುಗುಣವಾಗಿರುತ್ತದೆ ಮತ್ತು ಎಂಬುದು ಅವರಿಗೆ ತಿಳಿದಿದೆ” ಎಂದು ಅವರು ಹೇಳಿದರು.

ಗಂಭೀರ್ 2011 ರಿಂದ 2017 ರವರೆಗೆ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದರು ಮತ್ತು ನಾಯಕನಾಗಿ ಅತ್ಯಂತ ಯಶಸ್ವಿ ಅವಧಿಯನ್ನು ಅನುಭವಿಸಿದರು. ಅವರ ನಾಯಕತ್ವದಲ್ಲಿ ನೈಟ್ ರೈಡರ್ಸ್ 2012 ರಲ್ಲಿ ತಮ್ಮ ಮೊದಲ ಪ್ರಶಸ್ತಿಯನ್ನು ಗೆದ್ದಿತ್ತು. 2014 ರಲ್ಲಿಯೂ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಪ್ರಸಕ್ತ ಋತುವಿನಲ್ಲಿ, ಅವರು ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪ್ರಸ್ತುತ 11 ಪಂದ್ಯಗಳಲ್ಲಿ ಎಂಟು ಗೆಲುವುಗಳೊಂದಿಗೆ ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

Continue Reading

ಕರ್ನಾಟಕ

Dr C N Manjunath: ಮತ್ತೆ ವೈದ್ಯ ವೃತ್ತಿಗೆ ಮರಳಿದ್ದಾರೆ ಹೃದ್ರೋಗ ತಜ್ಞ ಡಾ.ಸಿ.ಎನ್‌. ಮಂಜುನಾಥ್‌

Dr C N Manjunath: ಬೆಂಗಳೂರಿನ ಜಯನಗರದ ಸೌತ್‌ ಎಂಡ್‌ ಸರ್ಕಲ್‌ನಲ್ಲಿರುವ ʼಬೆಂಗಳೂರು ಆಸ್ಪತ್ರೆʼಯ ಹೃದ್ರೋಗ ವಿಭಾಗದ ಮುಖ್ಯಸ್ಥರಾಗಿ ಡಾ. ಸಿ ಎನ್‌ ಮಂಜುನಾಥ್‌ (Dr C N Manjunath) ಕಾರ್ಯಾರಂಭ ಮಾಡಿದ್ದಾರೆ. ಅನಿವಾಸಿ ಭಾರತೀಯ ಕೃಷ್ಣ ಸ್ವರೂಪ ಅವರು ಈ ಆಸ್ಪತ್ರೆಯನ್ನು ಖರೀದಿಸಿ ಇದಕ್ಕೆ ಅತ್ಯಾಧುನಿಕತೆಯ ಸ್ಪರ್ಶ ನೀಡುತ್ತಿದ್ದಾರೆ. ಯಶಸ್ವಿನಿ, ಸುವರ್ಣ ಆರೋಗ್ಯ ಇತ್ಯಾದಿ ಸರ್ಕಾರಿ ವೈದ್ಯಕೀಯ ಯೋಜನೆಗಳು ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಲಭ್ಯ ಆಗಲಿವೆ.

VISTARANEWS.COM


on

Dr C N Manjunath
Koo

ಬೆಂಗಳೂರು: ಬಿಜೆಪಿ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ. ಸಿ.ಎನ್‌. ಮಂಜುನಾಥ್‌ (Dr C N Manjunath) ಅವರು ಫಲಿತಾಂಶ ಬರುವ ಮೊದಲೇ ವೈದ್ಯ ವೃತ್ತಿಗೆ ಮರಳಿದ್ದಾರೆ. ಬೆಂಗಳೂರಿನ ಜಯನಗರದ ಸೌತ್‌ ಎಂಡ್‌ ಸರ್ಕಲ್‌ನಲ್ಲಿರುವ ʼಬೆಂಗಳೂರು ಆಸ್ಪತ್ರೆʼಯ ಹೃದ್ರೋಗ ವಿಭಾಗದ ಮುಖ್ಯಸ್ಥರಾಗಿ ಅವರು ಕಾರ್ಯಾರಂಭ ಮಾಡಿದ್ದಾರೆ.

ʼಬೆಂಗಳೂರು ಆಸ್ಪತ್ರೆʼಯಲ್ಲಿ ಹೊಸದಾಗಿ ಕಾರ್ಡಿಯಾಲಜಿ ವಿಭಾಗ ಆರಂಭಿಸಲಾಗಿದ್ದು, ಇಲ್ಲಿ ಡಾ.ಸಿ.ಎನ್‌. ಮಂಜುನಾಥ್‌ ಅವರು ಸೇವೆ ಸಲ್ಲಿಸಲು ಆರಂಭಿಸಿದ್ದಾರೆ. ಇವರು ವಾರದಲ್ಲಿ ಮೂರು ದಿನ ಈ ಆಸ್ಪತ್ರೆಯಲ್ಲಿ ಹೃದ್ರೋಗಿಗಳಿಗೆ ಲಭ್ಯರಾಗಲಿದ್ದಾರೆ.

ಅನಿವಾಸಿ ಭಾರತೀಯ ಕೃಷ್ಣ ಸ್ವರೂಪ ಅವರು ಈ ಆಸ್ಪತ್ರೆಯನ್ನು ಖರೀದಿಸಿ ಇದಕ್ಕೆ ಅತ್ಯಾಧುನಿಕತೆಯ ಸ್ಪರ್ಶ ನೀಡುತ್ತಿದ್ದಾರೆ. ಬಡವರಿಗೆ ಇಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ಸಿಗಲಿದೆ. ಯಶಸ್ವಿನಿ, ಸುವರ್ಣ ಆರೋಗ್ಯ ಇತ್ಯಾದಿ ಸರ್ಕಾರಿ ವೈದ್ಯಕೀಯ ಯೋಜನೆಗಳು ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಲಭ್ಯ ಆಗಲಿವೆ. ಇದು 150 ಬೆಡ್‌ಗಳ ಆಸ್ಪತ್ರೆಯಾಗಿದೆ. ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ.

ಡಾ.ಸಿ.ಎನ್‌. ಮಂಜುನಾಥ್‌ ಅವರಂಥ ಅಪರೂಪದ ಹೃದ್ರೋಗ ತಜ್ಞರ ಸೇವೆ ಸಾಮಾನ್ಯ ಜನರಿಗೆ ಸಿಗಬೇಕು ಎಂಬ ಉದ್ದೇಶದಿಂದ ಆಸ್ಪತ್ರೆಯ ನೆಲ ಮಹಡಿಯಲ್ಲಿ 50 ಬೆಡ್‌ ಸಾಮರ್ಥ್ಯದ ಹೃದ್ರೋಗ ವಿಭಾಗ ತೆರೆಯಲಾಗಿದೆ. ಮಾಸ್ಟರ್‌ ಹೆಲ್ತ್‌ ಚೆಕಪ್‌ ಸೌಲಭ್ಯವೂ ಇಲ್ಲಿದೆ. ಹೊಸ ತಂತ್ರಜ್ಞಾನದ ಸಿಟಿ ಸ್ಕ್ಯಾನ್‌ ಕೂಡ ಇದೆ ಎಂದು ಈ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಅಭಿಷೇಕ್‌ ತಿಳಿಸಿದ್ದಾರೆ.

ಇದನ್ನೂ ಓದಿ | Dietary Guidelines: ಕಡಿಮೆ ದೈಹಿಕ ಚಟುವಟಿಕೆ ಇರುವವರಿಗೆ ಯಾವ ರೀತಿಯ ಆಹಾರ ಸೂಕ್ತ?

ಬೆಂಗಳೂರಿನ ಜಯನಗರದ ಸೌತ್‌ ಎಂಡ್‌ ಸರ್ಕಲ್‌ನಲ್ಲಿರುವ ʼಬೆಂಗಳೂರು ಆಸ್ಪತ್ರೆʼಯ ಹೃದ್ರೋಗ ವಿಭಾಗದ ಮುಖ್ಯಸ್ಥರಾಗಿ ಡಾ.ಸಿ.ಎನ್‌ ಮಂಜುನಾಥ್‌ ಕಾರ್ಯಾರಂಭ ಮಾಡಿದ ಸಂದರ್ಭದಲ್ಲಿ ದಿ ಸಿಟಿ ಇನ್‌ಸ್ಟಿಟ್ಯೂಟ್‌ ಉಪಾಧ್ಯಕ್ಷರಾದ ಎಸ್‌ ಸಿ ಚಂದ್ರಶೇಖರ್‌ ಅವರು ಹೂಗುಚ್ಛ ನೀಡಿ ಶುಭ ಕೋರಿದರು.

Continue Reading

ದೇಶ

Akbar Nagar: ಉತ್ತರ ಪ್ರದೇಶದ ಅಕ್ಬರ್‌ ನಗರದ ಅಕ್ರಮ ಮನೆಗಳ ಧ್ವಂಸಕ್ಕೆ ಸುಪ್ರೀಂ ಕೋರ್ಟ್‌ ಅಸ್ತು!

Akbar Nagar: ಅಕ್ಬರ್‌ ನಗರದಲ್ಲಿ ನೆಲಸಮ ಕಾರ್ಯಾಚರಣೆ ಕೈಗೊಳ್ಳಲು ಅನುಮತಿ ನೀಡಿದ ಅಲಹಾಬಾದ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ದೀಪಾಂಕರ್‌ ದತ್ತಾ ನೇತೃತ್ವದ ನ್ಯಾಯಪೀಠವು, ಲಖನೌ ಅಭಿವೃದ್ಧಿ ಪ್ರಾಧಿಕಾರಕ್ಕೆ ನೆಲಸಮ ಕಾರ್ಯಾಚರಣೆ ಕೈಗೊಳ್ಳಲು ಅನುಮತಿ ನೀಡಿದೆ. ಆದರೆ, ಪ್ರಾಧಿಕಾರಕ್ಕೆ ಜನರ ಹಿತದೃಷ್ಟಿಯಿಂದ ಕೋರ್ಟ್‌ ಕೆಲ ಸೂಚನೆಗಳನ್ನು ನೀಡಿದೆ.

VISTARANEWS.COM


on

Akbar Nagar
Koo

ಲಖನೌ: ಉತ್ತರ ಪ್ರದೇಶದ (Uttar Pradesh) ಲಖನೌನಲ್ಲಿರುವ ಅಕ್ಬರ್‌ ನಗರದಲ್ಲಿ (Akbar Nagar) ಅಕ್ರಮವಾಗಿ ನಿರ್ಮಿಸಲಾಗಿರುವ ಎಲ್ಲ ಮನೆಗಳನ್ನು ನೆಲಸಮಗೊಳಿಸಲು ಸುಪ್ರೀಂ ಕೋರ್ಟ್‌ (Supreme Court) ಗ್ರೀನ್‌ ಸಿಗ್ನಲ್‌ ನೀಡಿದೆ. ಇದರೊಂದಿಗೆ ಅಕ್ಬರ್‌ ನಗರದಲ್ಲಿ ಕಟ್ಟಡಗಳ ನೆಲಸಮಗೊಳಿಸುವ ಕುರಿತು ಲಖನೌ ಅಭಿವೃದ್ಧಿ ಪ್ರಾಧಿಕಾರ (LDA) ತೆಗೆದುಕೊಂಡ ನಿರ್ಧಾರಕ್ಕೆ ಭಾರಿ ಮುನ್ನಡೆ ಸಿಕ್ಕಂತಾಗಿದೆ. ಶೀಘ್ರದಲ್ಲಿಯೇ ಅಕ್ಬರ್‌ ನಗರದಲ್ಲಿರುವ ಎಲ್ಲ ಮನೆಗಳನ್ನು ನೆಲಸಮಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಅಕ್ಬರ್‌ ನಗರದಲ್ಲಿ ನೆಲಸಮ ಕಾರ್ಯಾಚರಣೆ ಕೈಗೊಳ್ಳಲು ಅನುಮತಿ ನೀಡಿದ ಅಲಹಾಬಾದ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ದೀಪಾಂಕರ್‌ ದತ್ತಾ ನೇತೃತ್ವದ ನ್ಯಾಯಪೀಠವು, ಲಖನೌ ಅಭಿವೃದ್ಧಿ ಪ್ರಾಧಿಕಾರಕ್ಕೆ ನೆಲಸಮ ಕಾರ್ಯಾಚರಣೆ ಕೈಗೊಳ್ಳಲು ಅನುಮತಿ ನೀಡಿತು. “ಕಟ್ಟಡಗಳನ್ನು ನೆಲಸಮಗೊಳಿಸುವ ಕುರಿತು ಅಲಹಾಬಾದ್‌ ಹೈಕೋರ್ಟ್‌ ಸೂಚನೆಗಳು, ನಿರ್ದೇಶನಗಳು ಸರಿಯಾಗಿವೆ” ಎಂದು ಸ್ಪಷ್ಟಪಡಿಸಿತು.

ಏಕೆ ಕಟ್ಟಡಗಳ ನೆಲಸಮ?

ಅಕ್ಬರ್‌ ನಗರದಲ್ಲಿ ಕಾನೂನುಬಾಹಿರವಾಗಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಅದರಲ್ಲೂ, ಪ್ರವಾಹದ ಭೀತಿ ಜಾಸ್ತಿ ಇರುವ ಪ್ರದೇಶದಲ್ಲಿ (Floodplain) ಇಡೀ ನಗರದ ಕಟ್ಟಡಗಳು ನಿರ್ಮಾಣಗೊಂಡಿವೆ. ಕುಕ್ರೈಲ್‌ ನದಿ ತೀರದಲ್ಲಿ ಸುಮಾರು 15 ಸಾವಿರ ಜನ ವಾಸಿಸುತ್ತಿದ್ದು, ಸಾವಿರಾರು ಕಟ್ಟಡಗಳು ತಲೆಎತ್ತಿವೆ. ಇಲ್ಲಿ ಸರ್ಕಾರದ ಜಾಗವನ್ನು ಅತಿಕ್ರಮಣ ಮಾಡಿಕೊಂಡು, ಸ್ಲಮ್‌ಗಳನ್ನು ನಿರ್ಮಾಣ ಮಾಡಿಕೊಂಡು, ದೊಡ್ಡ ಊರನ್ನೇ ನಿರ್ಮಿಸಲಾಗಿದೆ. ಆದರೆ, ಈ ಊರು ನದಿ ತೀರದಲ್ಲಿರುವುದರಿಂದ ಪ್ರವಾಹದ ಭೀತಿ ಜಾಸ್ತಿ ಇದೆ. ಇದನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ನ್ಯಾಯಾಲಯವು ನೆಲಸಮಕ್ಕೆ ಆದೇಶ ನೀಡಿದೆ ಎಂದು ತಿಳಿದುಬಂದಿದೆ.

15 ಸಾವಿರ ಜನರ ಸ್ಥಿತಿ ಏನು?

ಕಟ್ಟಡಗಳು, ಸ್ಲಮ್‌ಗಳಲ್ಲಿರುವ ಜೋಪಡಿಗಳನ್ನು ನೆಲಸಮಗೊಳಿಸುವುದರಿಂದ ಸುಮಾರು 15 ಸಾವಿರ ಜನರಿಗೆ ತೊಂದರೆಯಾಗಲಿದೆ ಎಂದು ತಿಳಿದುಬಂದಿದೆ. ಇದನ್ನು ಕೂಡ ಗಮನದಲ್ಲಿಟ್ಟುಕೊಂಡಿರುವ ಸುಪ್ರೀಂ ಕೋರ್ಟ್‌, “ನೀವು ಯಾರನ್ನು ಸ್ಥಳಾಂತರ ಮಾಡಬೇಕು ಎಂದಿದ್ದೀರೋ, ಅವರಿಗೆ ಬೇರೆ ಜಾಗದಲ್ಲಿ ಮನೆ ನಿರ್ಮಿಸಿಕೊಡಿ. ಅವರಿಗೆ ಬದಲಿ ಮನೆಯ ವ್ಯವಸ್ಥೆ ಆಗುವವರೆಗೆ ಅಲ್ಲಿಂದ ಸ್ಥಳಾಂತರ ಮಾಡುವ ಹಾಗಿಲ್ಲ” ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಹಾಗಾಗಿ, ಅಕ್ಬರ್‌ ನಗರದ ನಿವಾಸಿಗಳು ನಿರಾಶ್ರಿತರಾಗುವುದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Bulldozer Justice Video: ಅತ್ಯಾಚಾರ ಎಸಗಿ ಕ್ರೂರಹಿಂಸೆ; ಆರೋಪಿ ಅಯಾನ್‌ ಪಠಾಣ್‌ ಮನೆ ಧ್ವಂಸಗೊಳಿಸಿದ ಬುಲ್ಡೋಜರ್‌!

Continue Reading

ಪ್ರಮುಖ ಸುದ್ದಿ

Colin Munro : ನ್ಯೂಜಿಲ್ಯಾಂಡ್​ ಟಿ20 ಸ್ಪೆಷಲಿಸ್ಟ್​ ಅಟಗಾರ ನಿವೃತ್ತಿ; ಈ ಆಟಗಾರನ ಸಾಧನೆಗಳ ವಿವರ ಇಲ್ಲಿದೆ

VISTARANEWS.COM


on

Colin Munro
Koo

ನವದೆಹಲಿ: ನ್ಯೂಜಿಲೆಂಡ್ ಕ್ರಿಕೆಟ್​ ತಂಡದ ಟಿ20 ಸ್ಪೆಷಲಿಸ್ಟ್ ಹಾಗೂ ವಿನಾಶಕಾರಿ ಬ್ಯಾಟರ್​ಗಳಲ್ಲಿ ಒಬ್ಬರಾಗಿದ್ ಕಾಲಿನ್ ಮನ್ರೊ ಶುಕ್ರವಾರ (ಮೇ 10) ಅಂತರರಾಷ್ಟ್ರೀಯ ಕ್ರಿಕೆಟ್ ಅಖಾಡದಿಂದ ನಿರ್ಗಮಿಸಿದ್ದಾರೆ. ಮುಂಬರುವ ಟಿ20 ವಿಶ್ವ ಕಪ್​ನಲ್ಲಿ ಅವಕಾಶ ಪಡೆಯದ ಅವರು ನಿವೃತ್ತಿ ಘೋಷಿಸಿದ್ದಾರೆ. 2020 ರಲ್ಲಿ ಬೇ ಓವಲ್​ನಲ್ಲಿ ಭಾರತ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಕೊನೆಯ ಬಾರಿಗೆ ಬ್ಲ್ಯಾಕ್​ ಕ್ಯಾಪ್ಟ್​​ ತಂಡವನ್ನು ಅವರು ಪ್ರತಿನಿಧಿಸಿದ್ದರು. ಈ ಡೈನಾಮಿಕ್ ಎಡಗೈ ಬ್ಯಾಟ್ಸ್ಮನ್, ನ್ಯೂಜಿಲೆಂಡ್ ಕ್ರಿಕೆಟ್​​ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರು 65 ಟಿ 20, 57 ಏಕದಿನ ಮತ್ತು ಏಕೈಕ ಟೆಸ್ಟ್ ಪಂದ್ಯವನ್ನಾಡಿದ್ದಾರೆ. ಮನ್ರೊ 3,000 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ್ದಾರೆ ಮತ್ತು ಏಳು ವಿಕೆಟ್​ಗಳನ್ನು ಪಡೆದಿದ್ದಾರೆ.

ನ್ಯೂಜಿಲ್ಯಾಂಡ್​ ತಂಡದ (ಬ್ಲ್ಯಾಕ್​ ಕ್ಯಾಪ್ಟ್​) ಜೆರ್ಸಿ ಧರಿಸಿದ್ದಕ್ಕೆ ಹೆಮ್ಮೆ ವ್ಯಕ್ತಪಡಿಸಿದ ಕಾಲಿನ್ ಮನ್ರೊ, ತಮ್ಮ ಅಂತಾರಾಷ್ಟ್ರೀಯ ಪ್ರಯಾಣವನ್ನು ಕೊನೆಗೊಳಿಸಲು ಇದು ಸೂಕ್ತ ಕ್ಷಣ ಎಂದು ಹೇಳಿದ್ದಾರೆ. “ಬ್ಲ್ಯಾಕ್ ಕ್ಯಾಪ್ಸ್ ಪರ ಆಡುವುದು ಯಾವಾಗಲೂ ನನ್ನ ವೃತ್ತಿಜೀವನದ ವಿಶೇಷ ಕ್ಷಣವಾಗಿದೆ. ಎಲ್ಲಾ ಸ್ವರೂಪಗಳ 123 ಪಂದ್ಯಗಳಲ್ಲಿ ಆ ಜರ್ಸಿಯನ್ನು ಧರಿಸಿರುವುದು ನನಗೆ ಅಪಾರ ಹೆಮ್ಮೆ ತರುವ ಸಾಧನೆಯಾಗಿದೆ” ಎಂದು ಹೇಳಿದ್ದಾರೆ.

ಮನ್ರೊ ಅವರ ಕ್ರಿಕೆಟ್ ಪಯಣ 2006 ರ ಐಸಿಸಿ ಅಂಡರ್ 19 ವಿಶ್ವಕಪ್​ನಲ್ಲಿ ಪ್ರಾರಂಭವಾಗಿತ್ತು. ನಂತರ ಅವರು 2012-13 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಸಮಯದಲ್ಲಿ ಹಿರಿಯರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.

2016 ಮತ್ತು 2019 ರ ನಡುವೆ ಟಿ 20 ಮತ್ತು ಏಕದಿನ ಪಂದ್ಯಗಳಲ್ಲಿ ಬ್ಲ್ಯಾಕ್ ಕ್ಯಾಪ್ಸ್​​ ತಂಡಕ್ಕೆ ಪ್ರಮುಖವಾಗಿ ಕಾಣಿಸಿಕೊಂಡಿದ್ದರು. ವೈಟ್-ಬಾಲ್ ಕ್ರಿಕೆಟ್​ನಲ್ಲಿ ತಮ್ಮನ್ನು ತಾವು ಪರಿಗಣಿಸಲೇಬೇಕಾದ ಆಟಗಾರನಾಗಿ ರೂಪುಗೊಂಡರು 2019ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದ ಏಕದಿನ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದರು.

ಯಶಸ್ವಿ ಆಟಗಾರ

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳುತ್ತಿರುವ ಮುನ್ರೊ, ನ್ಯೂಜಿಲೆಂಡ್​ ತಂಡದ ಅತ್ಯಂತ ಯಶಸ್ವಿ ಟಿ20 ಬ್ಯಾಟರ್​ಗಳಲ್ಲಿ ಒಬ್ಬರಾಗಿ ತಮ್ಮ ಪರಂಪರೆ ಸೃಷ್ಟಿಸಿದ್ದರು. ಪ್ರಸ್ತುತ ಅವರು ಟಿ 20 ಪಂದ್ಯಗಳಲ್ಲಿ ಬ್ಲ್ಯಾಕ್ ಕ್ಯಾಪ್ಸ್​​ ತಂಡ ಪರ ಆರನೇ ಅತಿ ಗರಿಷ್ಠ ಸ್ಕೋರರ್ ಆಗಿದ್ದಾರೆ. ಪ್ರಭಾವಶಾಲಿ 31 ರ ಸರಾಸರಿ ಮತ್ತು 156.4 ಸ್ಟ್ರೈಕ್ ರೇಟ್​ನಲ್ಲಿ 1,724 ರನ್ ಗಳಿಸಿದ್ದಾರೆ.

ಇದನ್ನೂ ಓದಿ: T20 World Cup : ವಿಶ್ವ ಕಪ್​ಗೆ ಭಾರತ ತಂಡ ಪ್ರಯಾಣಿಸುವ ದಿನಾಂಕ ಪ್ರಕಟಿಸಿದ ಜಯ್​ ಶಾ

ಅವರು ನ್ಯೂಜಿಲೆಂಡ್​ ಪರ ಅತಿ ಹೆಚ್ಚು ಟಿ 20 ಅಂತರರಾಷ್ಟ್ರೀಯ ಶತಕಗಳ ದಾಖಲೆಯನ್ನು ಹೊಂದಿದ್ದಾರೆ. ಅಂದ ಹಅಗೆ ಅವರ ಹೆಸರಿನಲ್ಲಿ ಮೂರು ಶತಕಗಳಿವೆ.

2018ರಲ್ಲಿ ಬೇ ಓವಲ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮನ್ರೊ 47 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇದು ಆ ಸಮಯದಲ್ಲಿ ನ್ಯೂಜಿಲೆಂಡ್​ಪರ ವೇಗದ ಟಿ 20 ಶತಕ ಮಾತ್ರವಲ್ಲ, ಮೂರು ಟಿ 20 ಶತಕಗಳನ್ನು ದಾಖಲಿಸಿದ ತಮ್ಮ ದೇಶದ ಮೊದಲ ಆಟಗಾರ ಎಂಬ ಸ್ಥಾನಮಾನ ಹೊಂದಿದ್ದರು.

Continue Reading
Advertisement
IPL 2024
ಕ್ರೀಡೆ46 seconds ago

IPL 2024 : “ಶಾರುಖ್​ ಎಂದೂ ನಮ್ಮನ್ನು ಪ್ರಶ್ನಿಸಿಲ್ಲ”, ಎಲ್​ಎಸ್​​ಜಿ ಮಾಲೀಕನಿಗೆ ತಿರುಗೇಟು ಕೊಟ್ಟ ಗಂಭೀರ್​

Dr C N Manjunath
ಕರ್ನಾಟಕ1 min ago

Dr C N Manjunath: ಮತ್ತೆ ವೈದ್ಯ ವೃತ್ತಿಗೆ ಮರಳಿದ್ದಾರೆ ಹೃದ್ರೋಗ ತಜ್ಞ ಡಾ.ಸಿ.ಎನ್‌. ಮಂಜುನಾಥ್‌

Murder Case
ಕರ್ನಾಟಕ26 mins ago

Murder Case: ಬೆಂಗಳೂರಿನಲ್ಲಿ ಒಂಟಿ ಮಹಿಳೆಯ ಕತ್ತು ಹಿಸುಕಿ ಕೊಲೆ; ಮನೆ ಬಾಡಿಗೆ ಕೇಳುವ ನೆಪದಲ್ಲಿ ಕೃತ್ಯ

Akbar Nagar
ದೇಶ32 mins ago

Akbar Nagar: ಉತ್ತರ ಪ್ರದೇಶದ ಅಕ್ಬರ್‌ ನಗರದ ಅಕ್ರಮ ಮನೆಗಳ ಧ್ವಂಸಕ್ಕೆ ಸುಪ್ರೀಂ ಕೋರ್ಟ್‌ ಅಸ್ತು!

Colin Munro
ಪ್ರಮುಖ ಸುದ್ದಿ49 mins ago

Colin Munro : ನ್ಯೂಜಿಲ್ಯಾಂಡ್​ ಟಿ20 ಸ್ಪೆಷಲಿಸ್ಟ್​ ಅಟಗಾರ ನಿವೃತ್ತಿ; ಈ ಆಟಗಾರನ ಸಾಧನೆಗಳ ವಿವರ ಇಲ್ಲಿದೆ

T20 world cup
ಕ್ರೀಡೆ1 hour ago

T20 World Cup : ವಿಶ್ವ ಕಪ್​ಗೆ ಭಾರತ ತಂಡ ಪ್ರಯಾಣಿಸುವ ದಿನಾಂಕ ಪ್ರಕಟಿಸಿದ ಜಯ್​ ಶಾ

Dietary Guidelines
Latest2 hours ago

Dietary Guidelines: ಕಡಿಮೆ ದೈಹಿಕ ಚಟುವಟಿಕೆ ಇರುವವರಿಗೆ ಯಾವ ರೀತಿಯ ಆಹಾರ ಸೂಕ್ತ?

Lover refused to marriage Young woman committed suicide in kalaburagi
ಕಲಬುರಗಿ2 hours ago

Self Harming: ಪ್ರೀತಿಸಲು ಓಕೆ, ಮದುವೆಗೆ ನೋ ಎಂದ ಪ್ರಿಯಕರ; ಮನನೊಂದು ಯುವತಿ ಆತ್ಮಹತ್ಯೆ

Jay Shah
ಪ್ರಮುಖ ಸುದ್ದಿ2 hours ago

Jay Shah : ”ನಾನವನಲ್ಲ, ನಾನವನಲ್ಲ”; ಶ್ರೇಯಸ್​, ಇಶಾನ್ ವಿವಾದಕ್ಕೆ ಸ್ಪಷ್ಟನೆ ನೀಡಿದ ಜಯ್​ ಶಾ

Naxals K
ದೇಶ2 hours ago

Naxals Encounter: ಛತ್ತೀಸ್‌ಗಢದಲ್ಲಿ ಭದ್ರತಾ ಸಿಬ್ಬಂದಿ ಭರ್ಜರಿ ಬೇಟೆ; 12 ನಕ್ಸಲರ ಹತ್ಯೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Physical Abuse The public prosecutor called the client woman to the lodge
ಕ್ರೈಂ7 hours ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ8 hours ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ10 hours ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ16 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ23 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ1 day ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ1 day ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ1 day ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

ಟ್ರೆಂಡಿಂಗ್‌