Vastu Tips For Students: ವಿದ್ಯಾರ್ಥಿಗಳು ಸ್ಟಡಿ ಮಾಡುವಾಗ ಈ ವಾಸ್ತು ಸೂತ್ರ ಪಾಲಿಸಿದರೆ ಸಕ್ಸೆಸ್‌! - Vistara News

ಪ್ರಮುಖ ಸುದ್ದಿ

Vastu Tips For Students: ವಿದ್ಯಾರ್ಥಿಗಳು ಸ್ಟಡಿ ಮಾಡುವಾಗ ಈ ವಾಸ್ತು ಸೂತ್ರ ಪಾಲಿಸಿದರೆ ಸಕ್ಸೆಸ್‌!

ಹಲವಾರು ಗಂಟೆ ನಿರಂತರವಾಗಿ ಓದಿದರೂ ವಿಷಯ ತಲೆಗೆ ಹತ್ತುವುದಿಲ್ಲ ಎನ್ನುತ್ತಾರೆ ಕೆಲವು (Vastu Tips For Students) ವಿದ್ಯಾರ್ಥಿಗಳು. ಇದಕ್ಕೆ ಸ್ಟಡಿ ರೂಮ್‌ನ ವಾತಾವರಣವೂ ಒಂದು ಕಾರಣ ಇರಬಹುದು. ಹಾಗಾದರೆ ಅಭ್ಯಾಸ ಮಾಡುವ ವಾತಾವರಣ ಹೇಗಿರಬೇಕು? ಇಲ್ಲಿದೆ ಮಾಹಿತಿ.

VISTARANEWS.COM


on

Vastu Tips For Students
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮನೆ ಕಟ್ಟುವುದರಿಂದ ಹಿಡಿದು ದೇವರ ಪೂಜೆ ಮಾಡುವವರೆಗೆ ಎಲ್ಲದಕ್ಕೂ ವಾಸ್ತು (Vastu Tips For Students) ತುಂಬಾನೇ ಮುಖ್ಯ. ವಾಸ್ತು ಪ್ರಕಾರವಾಗಿ ನಡೆದುಕೊಂಡರೆ ಒಳ್ಳೆಯ ಪರಿಣಾಮವನ್ನು ಕಾಣಬಹುದು ಎಂದು ಹೇಳಲಾಗುತ್ತದೆ. ಅದೇ ರೀತಿಯಲ್ಲಿ ವಿದ್ಯಾರ್ಥಿಗಳ ಓದಿನ ವಿಚಾರದಲ್ಲೂ ವಾಸ್ತು ಪ್ರಭಾವ ಬೀರುತ್ತದೆ. ಹಾಗಾದರೆ ವಿದ್ಯಾರ್ಥಿಗಳಿಗೆ ವಾಸ್ತು ಪ್ರಭಾವ ಚೆನ್ನಾಗಿರಬೇಕು ಎಂದರೆ ಏನು ಮಾಡಬೇಕು ಎನ್ನುವ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Study room in the attic

ಸ್ಟಡಿ ರೂಮ್‌ ಎಲ್ಲಿರಬೇಕು?

ನೀವು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳುವ ಕೊಠಡಿಯು ಮನೆಯ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು. ಅದರಿಂದ ನಿಮ್ಮ ಗ್ರಹಿಕೆ ಹೆಚ್ಚಾಗುತ್ತದೆ ಮತ್ತು ನಿಮಗೆ ದಣಿವಾಗುವುದು ಕಡಿಮೆಯಾಗುತ್ತದೆ. ಉತ್ತರ ಮತ್ತು ಪೂರ್ವ ದಿಕ್ಕು ನಿಮಗೆ ಶಕ್ತಿಯುತ ಎನಿಸುತ್ತದೆಯಾದ್ದರಿಂದ ಆ ಭಾಗದಲ್ಲೇ ಇರುವ ಕೊಠಡಿಯಲ್ಲಿ ಅಧ್ಯಯನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಅಧ್ಯಯನ ಕೊಠಡಿಯ ಬಾಗಿಲು

ಹಾಗೆಯೇ ನೀವು ಅಧ್ಯಯನ ಮಾಡುವುದಕ್ಕೆ ಕೂರುವ ಕೋಣೆಯ ಬಾಗಿಲಿನ ದಿಕ್ಕೂ ಮುಖ್ಯವಾಗುತ್ತದೆ. ಆ ಕೋಣೆಯ ಬಾಗಿಲು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು.

Toilet

ಶೌಚಾಲಯದ ಕೆಳಗೆ ಇರಬಾರದು

ನೀವು ಅಧ್ಯಯನ ಮಾಡುವ ಕೊಠಡಿಯು ಮನೆಯ ಶೌಚಾಲಯದ ಕೆಳಗಾಗಲಿ ಅಥವಾ ಮನೆಯ ಬೀಮ್‌ ಅಥವಾ ಮೆಟ್ಟಿಲುಗಳ ಕೆಳಗೆ ಇರಬಾರದು.

ಕನ್ನಡಿಯ ಪ್ರತಿಬಿಂಬ

ನೀವು ಅಧ್ಯಯನ ಮಾಡುತ್ತ ಕುಳಿತಾಗ ಪುಸ್ತಕಗಳ ಮೇಲೆ ಯಾವುದೇ ಕನ್ನಡಿಯ ಪ್ರತಿಬಿಂಬ ಬೀಳುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಕನ್ನಡಿಯ ಪ್ರತಿಬಿಂಬ ಬಿದ್ದರೆ ಅದು ನಿಮ್ಮ ಮೇಲಿನ ಒತ್ತಡವನ್ನು ಹೆಚ್ಚು ಮಾಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಯಾವ ದಿಕ್ಕಿಗೆ ಮುಖ?

ಓದುವಾಗ ನಿಮ್ಮ ದೇಹ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು ಎಂದಾದರೆ ನೀವು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು. ಓದುವಾಗ ಸೂರ್ಯನ ಬೆಳಕು ಅತ್ಯಗತ್ಯವಾಗಿರುತ್ತದೆ. ಓದುವ ಸಮಯದಲ್ಲಿ ನಿಮ್ಮ ನೆರಳು ನಿಮ್ಮ ಪುಸ್ತಕದ ಮೇಲೆ ಬೀಳಬಾರದು. ಈ ಎರಡೂ ಅಂಶಗಳನ್ನು ನೀವು ನೋಡಿಕೊಂಡಿದ್ದೀರೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

Concentration

ಏಕಾಗ್ರತೆ ಇರಬೇಕೆಂದರೆ

ಓದುವಾಗ ಪೂರ್ವ ದಿಕ್ಕಿನಲ್ಲಿ ಕುಳಿತುಕೊಂಡು ಓದುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಓದಿನ ಮೇಲೆ ಏಕಾಗ್ರತೆ ಹೆಚ್ಚಾಗುತ್ತದೆ ಎನ್ನಲಾಗಿದೆ. ಓದುವುದಕ್ಕೆ ಅಡ್ಡಿಪಡಿಸಬಹುದಾದಂತಹ ಕಂಬಗಳು, ಮೊನಚಾಗಿರುವ ಅಂಚುಗಳನ್ನು ಹೊಂದಿರುವ ಪೀಠೋಪಕರಣಗಳ ಜತೆ ಆಟ ಆಡುವುದಕ್ಕೆ ಹೋಗಬೇಡಿ. ಇದರಿಂದ ಏಕಾಗ್ರತೆ ಹಾಳಾಗುವ ಸಾಧ್ಯತೆಯಿರುತ್ತದೆ.

ಟೇಬಲ್‌ ಹೇಗಿರಬೇಕು?

ನೀವು ಓದುವುದಕ್ಕೆ ಬಳಸುವ ಟೇಬಲ್‌ ಆಕೃತಿ ಚೌಕಾಕಾರ ಅಥವಾ ಆಯತಾಕಾರದಲ್ಲಿ ಇರಬೇಕು. ಅದನ್ನು ಹೊರತು ಬೇರೆ ಆಕಾರಗಳಲ್ಲಿ ಇದ್ದರೆ ನಿಮ್ಮ ಏಕಾಗ್ರತೆ ಓದುವುದನ್ನು ಬಿಟ್ಟು ಟೇಬಲ್‌ನತ್ತ ಹೊರಳುತ್ತದೆ. ಹಾಗೆಯೇ ಟೇಬಲ್‌ನ ಅಂಚು ಚೂಪಾಗಿರದಂತೆ ನೋಡಿಕೊಳ್ಳಿ.

ಟೇಬಲ್‌ ಯಾವ ದಿಕ್ಕಿನಲ್ಲಿರಬೇಕು?

ಅಧ್ಯಯನಕ್ಕೆ ಬಳಸುವ ಟೇಬಲ್‌ ಅನ್ನು ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರಿಸಿ. ಇದರಿಂದ ನೀವು ಅದೇ ದಿಕ್ಕುಗಳಲ್ಲಿ ಕುಳಿತು ಓದುವಂತಾಗುತ್ತದೆ. ಮತ್ತು ಅದರಿಂದ ಅಧ್ಯಯನ ಉತ್ತಮವಾಗುತ್ತದೆ.

ಪುಸ್ತಕಗಳು ಅಚ್ಚುಕಟ್ಟಾಗಿರಲಿ

ಓದುವ ಟೇಬಲ್‌ ಸ್ವಚ್ಛವಾಗಿದ್ದು, ಅದರ ಮೇಲೆ ಪುಸ್ತಕಗಳು ಅಚ್ಚುಕಟ್ಟಾಗಿ ಜೋಡಿಸಿಟ್ಟುಕೊಳ್ಳಿ. ಒಂದು ವೇಳೆ ಸ್ವಚ್ಛತೆ ಇಲ್ಲದೆ, ಪುಸ್ತಕಗಳು ಅಸ್ತವ್ಯಸ್ತವಾಗಿದ್ದರೆ ನಿಮ್ಮಲ್ಲಿ ಗೊಂದಲ ಸೃಷ್ಟಿಯಾಗುತ್ತದೆ.
ಓದುವ ಟೇಬಲ್‌ ಗೋಡೆಗೆ ವಿರುದ್ಧವಾಗಿರಬಾರದು. ಈ ವಿಚಾರದಲ್ಲಿ ಜಾಗೃತರಾಗಿರಿ.

ಸರಸ್ವತಿ ಯಂತ್ರ ಇರಲಿ

ನೀವು ಮಲಗುವ ಹಾಸಿಗೆ ಹಾಗೇ ಓದುವ ಟೇಬಲ್‌ ಬಳಿ ಸರಸ್ವತಿ ಯಂತ್ರವನ್ನು ಇರಿಸಿಕೊಳ್ಳಿ. ಇದರಿಂದ ನಿಮ್ಮಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಪುಸ್ತಕದ ಕಪಾಟನ್ನು ಓದುವುದಕ್ಕೆ ಬಳಸುವ ಟೇಬಲ್‌ನ ಮೇಲೆ ಇರಿಸಬೇಡಿ.

ಪ್ರಕಾಶಮಾನವಾಗಿರಲಿ

ನೀವು ಓದುವ ಕೊಠಡಿಯು ಪ್ರಕಾಶಮಾನವಾಗಿರಬೇಕು. ಸೂರ್ಯನ ಬೆಳಕು ಕೊಠಡಿಗೆ ಚೆನ್ನಾಗಿ ಬರುವಂತಿರಬೇಕು. ಕೊಠಡಿಯಲ್ಲಿ ಮಂದವಾದ ಬೆಳಕಿದ್ದರೆ ನಿಮ್ಮ ಶಿಕ್ಷಣ ಕೂಡ ನಿಧಾನವಾಗುತ್ತದೆ. ಏಕಾಗ್ರತೆ ತಪ್ಪುತ್ತದೆ.

Study lamp

ಸ್ಟಡಿ ಲ್ಯಾಂಪ್‌ ಬಳಸಿ

ವಾಸ್ತು ಪ್ರಕಾರವಾಗಿ ವಿದ್ಯಾರ್ಥಿಗಳು ಓದುವ ಟೇಬಲ್‌ ಮೇಲೆ ಸ್ಟಡಿ ಲ್ಯಾಂಪ್‌ ಬಳಸಬೇಕು. ಇದರಿಂದ ಓದಿನ ಮೇಲಿನ ಏಕಾಗ್ರತೆ ಹೆಚ್ಚಾಗುತ್ತದೆ. ಟೇಬಲ್‌ ಮುಂಭಾಗದಲ್ಲಿ ತೆರೆದ ಸ್ಥಳ ಇರುವುದು ಅವಶ್ಯಕ. ಇದರಿಂದ ನೀವು ಹೊಸ ಆಲೋಚನೆ ಮಾಡಲು ಮತ್ತು ವಿಧಾನವನ್ನು ಅನುಸರಿಸಲು ಪ್ರೇರಣೆ ಸಿಗುತ್ತದೆ.

ಸ್ಫೂರ್ತಿ ತುಂಬುವ ಚಿತ್ರಗಳಿರಲಿ

ನೀವು ಓದುವ ಕೋಣೆಯಲ್ಲಿ ನಿಮಗೆ ಸ್ಫೂರ್ತಿ ನೀಡಲು ಓಡುವ ಕುದುರೆ, ಉದಯಿಸುತ್ತಿರುವ ಸೂರ್ಯ, ಜ್ಞಾನದ ದೇವತೆ ಸರಸ್ವತಿ, ಗಣೇಶನ ಚಿತ್ರಗಳನ್ನು ಇಟ್ಟುಕೊಳ್ಳಬಹುದು. ನೀವು ಓದು ಮತ್ತು ಇತರೆ ಚಟುವಟಿಕೆಗಳಲ್ಲಿ ಗಳಿಸಿಕೊಂಡ ಪ್ರಮಾಣ ಪತ್ರಗಳನ್ನು ಟ್ರೋಫಿಗಳನ್ನು ಓದುವ ಕೋಣೆಯೊಳಗೆ ಪ್ರದರ್ಶಿಸಿಕೊಳ್ಳಿ. ಇದರಿಂದ ನಿಮಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ.

ಯಾವ ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು?

ಓದುವಾಗ ತಿಳಿ ಬಣ್ಣಗಳಾದ ಬಿಳಿ, ಹಸಿರುವ, ಹಳದಿ, ಕಿತ್ತಳೆ ಬಣ್ಣದ ಬಟ್ಟೆಯನ್ನೇ ಧರಿಸಿ. ಇದರಿಂದ ಏಕಾಗ್ರತೆ ಹೆಚ್ಚುತ್ತದೆ. ಕಪ್ಪು ಬಣ್ಣದ ಬಟ್ಟೆ ಧರಿಸಿ ಓದುವುದು ಒಳ್ಳೆಯದಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಓದುವ ಟೇಬಲ್‌ ಮೇಲೆ ಯಾವ ಕಾರಣಕ್ಕೂ ಕನ್ನಡಿಯನ್ನು ಇಡಬೇಡಿ. ಓದುವ ಟೇಬಲ್‌ ಮೇಲೆ ಭೂಪಟದ ಗ್ಲೋಬ್‌ ಅನ್ನು ಇಡುವುದು ಒಳ್ಳೆಯದು ಎಂದು ಹೇಳಲಾಗಿದೆ.

ಇದನ್ನೂ ಓದಿ: Vastu Tips: ಬೆಳಗೆ ಎದ್ದು ಈ ಐದು ವಸ್ತುಗಳನ್ನು ನೋಡಲೇಬಾರದು! ನೋಡಿದರೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

ನಿಗದಿಗಿಂತ ಹೆಚ್ಚಿನ ಫೀಸ್ ತೆಗೆದುಕೊಂಡರೆ ಕ್ರಮ; ಖಾಸಗಿ ಶಾಲೆಗಳಿಗೆ ಮಧು ಬಂಗಾರಪ್ಪ ಖಡಕ್‌ ಎಚ್ಚರಿಕೆ

ರಾಜ್ಯದಲ್ಲಿ ಇನ್ನೇನು ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಶಾಲೆಗಳಲ್ಲಿ ಅಡ್ಮಿಷನ್‌ ಪ್ರಕ್ರಿಯೆ ಕೂಡ ಆರಂಭವಾಗಲಿದೆ. ಇದಕ್ಕಾಗಿ ಮಕ್ಕಳು ಮಾತ್ರವಲ್ಲ ಪೋಷಕರು ಕೂಡ ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ, ಶಾಲಾ ಶುಲ್ಕ ಪಡೆಯುವಾಗ ಎಚ್ಚರದಿಂದ ಇರಿ ಎಂದು ಖಾಸಗಿ ಶಾಲೆಗಳಿಗೆ ಸಚಿವ ಮಧು ಬಂಗಾರಪ್ಪ ಎಚ್ಚರಿಕೆ ನೀಡಿದ್ದಾರೆ.

VISTARANEWS.COM


on

Madhu Bangarappa
Koo

ಶಿವಮೊಗ್ಗ: ರಾಜ್ಯದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ (SSLC Result) ಫಲಿತಾಂಶ ಪ್ರಕಟವಾಗಿದೆ. ಇನ್ನೇನು ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಈಗಾಗಲೇ ಪೋಷಕರು ಮಕ್ಕಳನ್ನು ಯಾವ ಶಾಲೆಗೆ ಸೇರಿಸಿದರೆ ಒಳ್ಳೆಯದು? ಎಲ್ಲಿ ಎಷ್ಟು ಫೀ ಇದೆ? ಯಾವ ಶಾಲೆಗೆ ಸೇರಿಸಬೇಕು ಎಂದರೆ ಎಷ್ಟು ಡೊನೇಷನ್‌ ಕೊಡಬೇಕು ಎಂಬುದು ಸೇರಿ ಹಲವು ರೀತಿಯಲ್ಲಿ ಯೋಚಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಪ್ರಾಥಮಿಕ ಮತ್ತು ಸಾಕ್ಷರತಾ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಖಾಸಗಿ ಶಾಲೆಗಳಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

“ಖಾಸಗಿ ಶಾಲೆಗಳಿಗೆ ಒಂದು ಸಲಹೆ ಕೊಡುತ್ತೇನೆ. ಕಾನೂನಿನ ಪ್ರಕಾರವೇ ಶಾಲೆಯಲ್ಲಿ ಫೀಸ್‌ ತೆಗೆದುಕೊಳ್ಳಬೇಕು. ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಖಾಸಗಿ ಶಾಲೆಗಳು ಸಹಾಯ ಮಾಡಬೇಕು. ಅಕ್ರಮವಾಗಿ ಫೀಸ್‌ ತೆಗೆದುಕೊಂಡರೆ, ಹೆಚ್ಚಿನ ಶುಲ್ಕವನ್ನು ಪೋಷಕರಿಂದ ವಸೂಲಿ ಮಾಡಿದರೆ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂಬುದಾಗಿ ಅವರು ಶಿವಮೊಗ್ಗದಲ್ಲಿ ಎಚ್ಚರಿಕೆ ನೀಡಿದರು.

ಅಂಕಿತಾಗೆ ವೈಯಕ್ತಿಕ ಸಹಾಯ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೇ ಮೊದಲ ರ‍್ಯಾಂಕ್‌ ಬಂದ ಬಾಗಲಕೋಟೆ ಜಿಲ್ಲೆಯ ಅಂಕಿತಾ ಕೊನ್ನೂರ್‌ಗೆ ವೈಯಕ್ತಿಕವಾಗಿಯೂ ನೆರವು ನೀಡುವುದಾಗಿ ಮಧು ಬಂಗಾರಪ್ಪ ಘೋಷಿಸಿದರು. “ಏನಾದರೂ ಸಹಾಯ ಬೇಕು ಎಂದರೆ ಕೇಳು ಎಂಬುದಾಗಿ ಅಂಕಿತಾಗೆ ಹೇಳಿದ್ದೇನೆ. ಸರ್ಕಾರದಿಂದ ಸಿಗುವ ಸೌಲಭ್ಯಗಳು ಆಕೆಗೆ ಸಿಗುತ್ತವೆ. ಉನ್ನತ ಶಿಕ್ಷಣಕ್ಕೆ ಬೇಕಾದರೆ ಆಕೆಗೆ ವೈಯಕ್ತಿಕವಾಗಿ ಸಹಾಯ ಮಾಡುತ್ತೇನೆ” ಎಂಬುದಾಗಿ ಮಧು ಬಂಗಾರಪ್ಪ ಹೇಳಿದರು.

“ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ನಾನೂ ಗಮನಿಸಿದ್ದೇನೆ. ಸರ್ಕಾರಿ ಶಾಲೆಗಳ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸುತ್ತೇನೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಇದು ಪುಣ್ಯದ ಕೆಲಸವಾಗಿದ್ದು, ಹಂತ ಹಂತವಾಗಿ ಎಲ್ಲ ಕೆಲಸವನ್ನೂ ಮಾಡುತ್ತೇವೆ. ಮಳೆಗಾಲ ಸಮೀಪಿಸುತ್ತಿದ್ದು, ಸರ್ಕಾರಿ ಶಾಲೆಗಳ ದುರಸ್ತಿಗೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ” ಎಂದು ತಿಳಿಸಿದರು. ಹಾಸನ ಪೆನ್‌ಡ್ರೈ ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, “ಕಾನೂನು ಇದೆ, ಅದರ ಅನ್ವಯ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದಷ್ಟೇ ಹೇಳಿದರು.

ಇದನ್ನೂ ಓದಿ: SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾರ್ವಭೌಮ ಗುರುಕುಲಕ್ಕೆ ಶೇ.100 ಫಲಿತಾಂಶ

Continue Reading

ಕರ್ನಾಟಕ

Siddaramaiah: ಮೋದಿ ಸುಳ್ಳಿನ ಸರದಾರ, ಭಾವನಾತ್ಮಕ ಆಟ ನಡೆಯಲ್ಲ; ಸಿದ್ದರಾಮಯ್ಯ ತಿರುಗೇಟು

Siddaramaiah: ವಿರೋಧ ಪಕ್ಷದವರು ಯಾರನ್ನೂ ಸಮಾಧಿ ಮಾಡುವುದಿಲ್ಲ. ಪ್ರಧಾನಿಯವರನ್ನು ರಾಜಕೀಯವಾಗಿ ವಿರೋಧ ಮಾಡುತ್ತಿದ್ದೇವೆ. ನರೇಂದ್ರ ಮೋದಿ 10 ವರ್ಷ ಪ್ರಧಾನಿಯಾಗಿ ಬಡವರ ಪರವಾಗಿ ಏನೂ ಮಾಡಿಲ್ಲ ಎನ್ನುವುದು ಹಾಗೂ ಸುಳ್ಳಿನ ಸರದಾರ ಎನ್ನುವುದು ನಮ್ಮ ಆರೋಪ. ಜನರಿಗೆ ನೀಡಿದ್ದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ ಎಂದು ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

VISTARANEWS.COM


on

Siddaramaiah
Koo

ಮೈಸೂರು: “ಪ್ರತಿಪಕ್ಷಗಳು ನನ್ನನ್ನು ಸಮಾಧಿ ಮಾಡಲು ಹೊರಟಿವೆ. ಜನರೇ ನನ್ನನ್ನು ಕಾಪಾಡಲು ಹೊರಟಿವೆ” ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ನೀಡಿದ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ (Siddaramaiah), “ನರೇಂದ್ರ ಮೋದಿ ಸುಳ್ಳುಗಳ ಸರದಾರ ಆಗಿದ್ದಾರೆ. ಅವರ ಭಾವನಾತ್ಮಕ ಆಟವು ಭಾರತೀಯರಿಗೆ ಗೊತ್ತಾಗಿದೆ” ಎಂದು ಹೇಳಿದರು.

“ವಿರೋಧ ಪಕ್ಷದವರು ಯಾರನ್ನೂ ಸಮಾಧಿ ಮಾಡುವುದಿಲ್ಲ. ಪ್ರಧಾನಿಯವರನ್ನು ರಾಜಕೀಯವಾಗಿ ವಿರೋಧ ಮಾಡುತ್ತಿದ್ದೇವೆ. ನರೇಂದ್ರ ಮೋದಿ 10 ವರ್ಷ ಪ್ರಧಾನಿಯಾಗಿ ಬಡವರ ಪರವಾಗಿ ಏನೂ ಮಾಡಿಲ್ಲ ಎನ್ನುವುದು ಹಾಗೂ ಸುಳ್ಳಿನ ಸರದಾರ ಎನ್ನುವುದು ನಮ್ಮ ಆರೋಪ. ಜನರಿಗೆ ನೀಡಿದ್ದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ರಾಜಕೀಯವಾಗಿ ಅವರನ್ನು ಸೋಲಿಸಬೇಕೆನ್ನುವುದು ವಿರೋಧ ಪಕ್ಷಗಳ ಗುರಿ. ಏಕೆಂದರೆ ಈ ದೇಶ ಆರ್ಥಿಕ ಹಾಗೂ ಬಡವರ ಅಭಿವೃದ್ಧಿ ಆಗಿಲ್ಲ” ಎಂದರು.

ಮೇಲಕ್ಕೇರಿದವರು ಕೆಳಕ್ಕೆ ಇಳಿಯಲೇಬೇಕು

ನರೇಂದ್ರ ಮೋದಿ ಅವರಿಗೆ ಚುನಾವಣೆಯಲ್ಲಿ ಸೋಲುತ್ತೇವೆ ಎಂಬುದು ಖಾತರಿಯಾಗಿದೆ. ಹಾಗಾಗಿಯೇ ಅವರು ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಅವರ ಭಾವನಾತ್ಮಕ ಆಟ ಜನರಿಗೆ ಗೊತ್ತಾಗಿದೆ. ಅವರು ಸುಳ್ಳು ಹೇಳುವುದು, ಭಾವನಾತ್ಮಕವಾಗಿ ಶೋಷಣೆ ಮಾಡುವುದು ಜನರಿಗೆ ಗೊತ್ತಾಗಿದೆ. ಜನರಿಗೆ ಗೊತ್ತಾದ ಮೇಲೆ ಮತ್ತೆ ಅದೇ ತಪ್ಪನ್ನು ಮಾಡುವುದಿಲ್ಲ. ಮೇಲಕ್ಕೇರಿದವರು ಕೆಳಕ್ಕೆ ಇಳಿಯಲೇಬೇಕು” ಎಂದು ಕುಟುಕಿದರು.

ನೈತಿಕ ಹಕ್ಕಿಲ್ಲ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದಲ್ಲಿ ಬರಗಾಲ ಇರುವುದರಿಂದ ರೈತರ ಸಾಲ ಮನ್ನಾ ಮಾಡಬೇಕು ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಈ ಹಿಂದೆ ಸಾಲ ಮನ್ನಾ ಮಾಡಿ ಎಂದಾಗ ನಮ್ಮ ಬಳಿ ಪ್ರಿಂಟಿಂಗ್ ಮಶೀನ್ ಇಲ್ಲ ಎಂದಿದ್ದರು ಈಗ. ಇವರಿಗೆ ಯಾವ ನೈತಿಕತೆ ಇದೆ” ಎಂದು ಪ್ರಶ್ನಿಸಿದರು. ಮೈಸೂರಿನಲ್ಲಿ ಶ್ರೀನಿವಾಸ ಪ್ರಸಾದ್‌ ಅವರ ನಿಧನದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಿದರು.

ಇದನ್ನೂ ಓದಿ: BS Yediyurappa: ಪ್ರಜ್ವಲ್‌ ಕೇಸ್‌ನಿಂದ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಧಕ್ಕೆ? ಯಡಿಯೂರಪ್ಪ ಹೇಳಿದ್ದಿಷ್ಟು

Continue Reading

ಕರ್ನಾಟಕ

BS Yediyurappa: ಪ್ರಜ್ವಲ್‌ ಕೇಸ್‌ನಿಂದ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಧಕ್ಕೆ? ಯಡಿಯೂರಪ್ಪ ಹೇಳಿದ್ದಿಷ್ಟು

BS Yediyurappa: ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಹಾಗೂ ಜೆಡಿಎಸ್‌ ನಡುವಿನ ಹೊಂದಾಣಿಕೆಯ ಮೈತ್ರಿಗೆ ಧಕ್ಕೆ ಬರುವುದಿಲ್ಲ. ಮುಂದೆಯೂ ಎರಡೂ ಪಕ್ಷಗಳ ನಡುವಿನ ಮೈತ್ರಿ ಮುಂದುವರಿಯುತ್ತದೆ. ವಿಧಾನ ಪರಿಷತ್‌ ಚುನಾವಣೆಯಲ್ಲೂ ಮೈತ್ರಿ ಇರುತ್ತದೆ. ಪರಿಷತ್‌ನ 6 ಸ್ಥಾನಗಳ ಪೈಕಿ ಜೆಡಿಎಸ್‌ಗೆ 2 ಹಾಗೂ ನಾವು 4 ಸ್ಥಾನಗಳಿಗೆ ಸ್ಪರ್ಧಿಸುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

VISTARANEWS.COM


on

BS Yediyurappa
Koo

ಮೈಸೂರು: ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣವು (Prajwal Revanna Case) ಕರ್ನಾಟಕ ಮಾತ್ರವಲ್ಲ ದೇಶಾದ್ಯಂತ ಸಂಚಲನ ಮೂಡಿಸಿದೆ. ಇದರಿಂದ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಗೆ ಭಂಗ ತಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಬಿಜೆಪಿ ವರಿಷ್ಠ ನಾಯಕ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರು ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ್ದು, “ಪ್ರಜ್ವಲ್ ರೇವಣ್ಣ ಕೇಸ್‌ನಿಂದ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಗೆ ಯಾವುದೇ ಭಂಗ ತರುವುದಿಲ್ಲ” ಎಂದು ತಿಳಿಸಿದರು.

“ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಹಾಗೂ ಜೆಡಿಎಸ್‌ ನಡುವಿನ ಹೊಂದಾಣಿಕೆಯ ಮೈತ್ರಿಗೆ ಧಕ್ಕೆ ಬರುವುದಿಲ್ಲ. ಮುಂದೆಯೂ ಎರಡೂ ಪಕ್ಷಗಳ ನಡುವಿನ ಮೈತ್ರಿ ಮುಂದುವರಿಯುತ್ತದೆ. ವಿಧಾನ ಪರಿಷತ್‌ ಚುನಾವಣೆಯಲ್ಲೂ ಮೈತ್ರಿ ಇರುತ್ತದೆ. ಪರಿಷತ್‌ನ 6 ಸ್ಥಾನಗಳ ಪೈಕಿ ಜೆಡಿಎಸ್‌ಗೆ 2 ಹಾಗೂ ನಾವು 4 ಸ್ಥಾನಗಳಿಗೆ ಸ್ಪರ್ಧಿಸುತ್ತೇವೆ. ಎಲ್ಲಿ ಬಿಟ್ಟುಕೊಡಬೇಕು ಎಂಬುದರ ಬಗ್ಗೆ ತೀರ್ಮಾನ ಆಗಿಲ್ಲ. ಇಂದು (ಮೇ 11) ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪಟ್ಟಿ ಬಿಡುಗಡೆ ಮಾಡಲಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.

ಸಿಬಿಐ ತನಿಖೆಗೆ ವಹಿಸಿ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದರು. “ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಪ್ರಕರಣದ ಕುರಿತು ಪಾರದರ್ಶಕವಾಗಿ ತನಿಖೆ ನಡೆಯಬೇಕು ಎಂದರೆ ಸಿಬಿಐಗೆ ವಹಿಸಬೇಕು. ಸಿದ್ದರಾಮಯ್ಯ ಅವರ ಅಭಿಪ್ರಾಯ ಅವರದ್ದು. ಆದರೆ, ಸಿಬಿಐ ತನಿಖೆಯಾಗಬೇಕು ಎಂಬುದು ನಮ್ಮ ಅಭಿಪ್ರಾಯ” ಎಂದರು.

400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು

ಲೋಕಸಭೆ ಚುನಾವಣೆ ಕುರಿತು ಮಾತನಾಡಿದ ಬಿ.ಎಸ್.ಯಡಿಯೂರಪ್ಪ, “ದೇಶದಲ್ಲಿ ಎನ್‌ಡಿಎ 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಾರೆ. ಸೂರ್ಯ, ಚಂದ್ರ ಇರೋದು ಎಷ್ಟು ಸತ್ಯವೋ, ಮೋದಿ ಅವರು ಮತ್ತೆ ಪ್ರಧಾನಿಯಾಗೋದೂ ಅಷ್ಟೇ ಸತ್ಯ. ಕರ್ನಾಟಕದಲ್ಲಿ ಕಾಂಗ್ರೆಸ್‌ನವರು ಏನು ಹೇಳಿದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ರಾಜ್ಯದಲ್ಲಿ 24-25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ. ಅಷ್ಟಕ್ಕೂ, ಕಾಂಗ್ರೆಸ್‌ನಲ್ಲಿ ಪ್ರಧಾನಿಯಾಗುವ ಯೋಗ್ಯತೆ ಯಾರಿಗಿದೆ” ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Prajwal Revanna Case: ದೇವರಾಜೇಗೌಡ ಹುಚ್ಚುನಾಯಿ, ನಕಲಿ ವಕೀಲ ಎಂದ ಶಿವರಾಮೇಗೌಡ

Continue Reading

ಕರ್ನಾಟಕ

Prajwal Revanna Case: ದೇವರಾಜೇಗೌಡ ಹುಚ್ಚುನಾಯಿ, ನಕಲಿ ವಕೀಲ ಎಂದ ಶಿವರಾಮೇಗೌಡ

Prajwal Revanna Case: ಏಪ್ರಿಲ್‌ 29 ಹಾಗೂ 30ರಂದು ನಾವು ಭೇಟಿ ಮಾಡಿ ಮಾತನಾಡಿದ್ದೇವೆ. ಏಪ್ರಿಲ್‌ 29ಕ್ಕೂ ಮೊದಲು ನಾನು ಭೇಟಿ ಮಾಡಿಲ್ಲ. ಏಪ್ರಿಲ್‌ 29ರ ಬಳಿಕ 30ನೇ ತಾರೀಖಿನಂದೂ ಅವನೇ ಬಂದು ಭೇಟಿ ಮಾಡಿದ್ದಾನೆ. ಆ ಎರಡು ಸಭೆ ಹೊರತುಪಡಿಸಿ ನಾನು ಅವನ ಜತೆ ಮಾತನಾಡಿಲ್ಲ. ಅವನೊಬ್ಬ ಹುಚ್ಚುನಾಯಿ ಎಂದು ಮಾಜಿ ಸಂಸದ ಎಲ್‌.ಆರ್.ಶಿವರಾಮೇಗೌಡ ವಾಗ್ದಾಳಿ ನಡೆಸಿದ್ದಾರೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣವು (Prajwal Revanna Case) ದೇಶಾದ್ಯಂತ ಸಂಚಲನ ಮೂಡಿಸಿದೆ. ಇದೇ ಪ್ರಕರಣದಲ್ಲಿ ಜೆಡಿಎಸ್‌ ನಾಯಕ ಎಚ್‌.ಡಿ.ರೇವಣ್ಣ ಜೈಲುಪಾಲಾಗಿದ್ದಾರೆ. ಪ್ರಜ್ವಲ್‌ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ದೇವರಾಜೇಗೌಡ (Devaraje Gowda) ಹಾಗೂ ಮಾಜಿ ಸಂಸದ ಎಲ್‌.ಆರ್.ಶಿವರಾಮೇಗೌಡ (L R Shivarame Gowda) ನಡುವಿನ ವಾಕ್ಸಮರವೂ ಜೋರಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, “ದೇವರಾಜೇಗೌಡ ಹುಚ್ಚು ನಾಯಿ ಇದ್ದಂತೆ. ಆತ ನಕಲಿ ವಕೀಲ” ಎಂದು ಎಲ್‌.ಆರ್.ಶಿವರಾಮೇಗೌಡ ವಾಗ್ದಾಳಿ ನಡೆಸಿದ್ದಾರೆ.

“ಏಪ್ರಿಲ್‌ 29 ಹಾಗೂ 30ರಂದು ನಾವು ಭೇಟಿ ಮಾಡಿ ಮಾತನಾಡಿದ್ದೇವೆ. ಏಪ್ರಿಲ್‌ 29ಕ್ಕೂ ಮೊದಲು ನಾನು ಭೇಟಿ ಮಾಡಿಲ್ಲ. ಏಪ್ರಿಲ್‌ 29ರ ಬಳಿಕ 30ನೇ ತಾರೀಖಿನಂದೂ ಅವನೇ ಬಂದು ಭೇಟಿ ಮಾಡಿದ್ದಾನೆ. ಆ ಎರಡು ಸಭೆ ಹೊರತುಪಡಿಸಿ ನಾನು ಅವನ ಜತೆ ಮಾತನಾಡಿಲ್ಲ. ಅವನೊಬ್ಬ ಹುಚ್ಚುನಾಯಿ, ನಕಲಿ ವಕೀಲ. ಅಲ್ಲದೆ, ಆತನೊಬ್ಬರ ರೋಲ್‌ ಕಾಲ್‌ ಮಾಸ್ಟರ್‌ ಆಗಿದ್ದಾನೆ. ಅವನ ಹಣಕಾಸಿನ ವ್ಯವಹಾರದ ಬಗ್ಗೆ ಎಸ್‌ಐಟಿ ತನಿಖೆ ನಡೆಸಬೇಕು” ಎಂದು ಮಾಜಿ ಸಂಸದ ‘ವಿಸ್ತಾರ ನ್ಯೂಸ್‌’ಗೆ ತಿಳಿಸಿದ್ದಾರೆ.

ಕಾರ್ತಿಕ್‌, ದೇವರಾಜೇಗೌಡ ಪೆನ್‌ಡ್ರೈವ್‌ ರೂವಾರಿಗಳು

“ಪೆನ್‌ಡ್ರೈವ್‌ ರಿಲೀಸ್‌ ಮಾಡಿರುವುದರ ಹಿಂದೆ ಕಾರು ಚಾಲಕ ಕಾರ್ತಿಕ್‌ ಹಾಗೂ ದೇವರಾಜೇಗೌಡ ಇದ್ದಾರೆ. ಏಟ್ರಿಯಾ ಹೋಟೆಲ್‌ನಲ್ಲಿ ಮಾತನಾಡುವಾಗ ನನ್ನ ವಿರುದ್ಧ ತನಿಖೆ ಮಾಡಬೇಕು ಅಂತಿದ್ದಾರೆ ಎಂದ. ಡಿ.ಕೆ.ಶಿವಕುಮಾರ್‌ ಹಾಗೂ ಮುಖ್ಯಮಂತ್ರಿ ಬಗ್ಗೆ ಪದೇಪದೆ ಮಾತನಾಡಬೇಡ ಎಂದೆ. ನಿನ್ನದು ನೀನು ಸರಿಮಾಡಿಕೊ. ಉಳಿದ ಉಸಾಬರಿ ನಿನಗೆ ಬೇಡ ಎಂಬುದಾಗಿ ಹೇಳಿದ್ದೆ” ಎಂದು ತಿಳಿಸಿದರು.

“ದೇವರಾಜೇಗೌಡ ಖದೀಮ ಇದ್ದಾನೆ. ಪ್ರಚಾರ ಪ್ರಿಯನಾದ ಅವನಿಗೆ ಮಾಧ್ಯಮಗಳು ಆದ್ಯತೆ ನೀಡಬಾರದು. ಸಿಎಂ ಹಾಗೂ ಡಿಸಿಎಂ ಮೇಲೆ ನಂಬಿಕೆ ಇಲ್ಲ ಎಂದ. ನೀನು ಅವರನ್ನು ಬಿಡು, ಇವತ್ತಿನಿಂದ ಕೇಸ್‌ ಬಗ್ಗೆ ಹೋರಾಡ ಮಾಡಿಲ್ಲ ಎಂದು ಹೇಳು ಅಂದೆ. ಅಷ್ಟಕ್ಕೂ, ಅವನು ಬ್ಲ್ಯಾಕ್‌ಮೇಲ್‌ ಮಾಡಿ ದುಡ್ಡು ಮಾಡಿದ್ದಾನೆ. ಅವನು ವಕೀಲಿಕೆ ಮಾಡಲ್ಲ. ಇಷ್ಟಾದರೂ ಹೇಗೆ ದುಡ್ಡು ಬರುತ್ತದೆ? ವಿಧಾನಸಭೆ ಚುನಾವಣೆಯಲ್ಲಿ ದುಡ್ಡು ಇಟ್ಟುಕೊಂಡು ಸುಮ್ಮನಾದ. ಅವನ ಬಾಡಿಯಲ್ಲಿ ಯಾವಾಗಲೂ ಕ್ಯಾಮೆರಾ (ಬಾಡಿ ಕ್ಯಾಮ್)‌ ಇರುತ್ತದೆ. ನಾವು ಕೂತಾಗ ಒಂದೂ ಮಾತಾಡಲ್ಲ. ನನಗೆ ಅವನ ಬಗ್ಗೆ ಭಯ ಇಲ್ಲ. ಎಸ್‌ಐಟಿ ಅವರು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದರೆ ಎಲ್ಲವೂ ಬಯಲಾಗುತ್ತದೆ” ಎಂದು ಹೇಳಿದರು.

ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ ಸ್ಫೋಟಕ ಆಡಿಯೊ ಹೊರಬಿದ್ದಿದೆ. ಇತ್ತೀಚೆಗೆ ಈ ಹಗರಣದಲ್ಲಿ ಡಿಸಿಎಂ ಡಿಕೆಶಿ ಕೈವಾಡ ಎಂದು ಆರೋಪಿಸಿದ್ದ ವಕೀಲ ದೇವರಾಜೇಗೌಡ, ಮತ್ತೊಂದು ಆಡಿಯೊ ಬಾಂಬ್‌ ಹಾಕಿದ್ದಾರೆ. ದೇವರಾಜೇಗೌಡ-ಶಿವರಾಮೇಗೌಡ ನಡುವಿನ ಮಾತುಕತೆಯ 36 ಸೆಕೆಂಡ್ಸ್‌ ಆಡಿಯೊ ವೈರಲ್‌ ಆಗಿದೆ. ಇದರ ಬೆನ್ನಲ್ಲೇ ವಕೀಲ ದೇವರಾಜೇಗೌಡ ಅವರನ್ನು ಹಿರಿಯೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆಡಿಯೊ ಬಯಲಾದ ಬೆನ್ನಲ್ಲೇ ಈಗ ಶಿವರಾಮೇಗೌಡ ಸುದ್ದಿಗೋಷ್ಠಿ ನಡೆಸಿ ಹಲವು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Prajwal Revanna Case: ಸ್ಫೋಟಕ ಆಡಿಯೊ ರಿಲೀಸ್‌ ಮಾಡಿದ ಬೆನ್ನಲ್ಲೇ ವಕೀಲ ದೇವರಾಜೇಗೌಡ ವಶಕ್ಕೆ

Continue Reading
Advertisement
Bengaluru News
ಬೆಂಗಳೂರು13 mins ago

Bengaluru News : ಕೆಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Madhu Bangarappa
ಕರ್ನಾಟಕ22 mins ago

ನಿಗದಿಗಿಂತ ಹೆಚ್ಚಿನ ಫೀಸ್ ತೆಗೆದುಕೊಂಡರೆ ಕ್ರಮ; ಖಾಸಗಿ ಶಾಲೆಗಳಿಗೆ ಮಧು ಬಂಗಾರಪ್ಪ ಖಡಕ್‌ ಎಚ್ಚರಿಕೆ

Navneet Rana
ದೇಶ31 mins ago

Navneet Rana: ಮೋದಿಯವರ ಸಿಂಹಗಳು, ರಾಮಭಕ್ತರು ಗಲ್ಲಿ ಗಲ್ಲಿಯಲ್ಲಿದ್ದಾರೆ ಹುಷಾರ್‌!- ಓವೈಸಿಗೆ ಮತ್ತೆ ನವನೀತ್‌ ರಾಣಾ ಟಾಂಗ್

Murder Case in kodagu
ಕೊಡಗು1 hour ago

Murder Case : ಕೊಡಗು ಹತ್ಯೆ ಕೇಸ್‌; ಬಾಲಕಿ ರುಂಡ ಕಂಡು ವಿಚಿತ್ರವಾಗಿ ವರ್ತಿಸಿದ ಸಹೋದರ! ಬೆಚ್ಚಿ ಬಿದ್ದ ಪೊಲೀಸರು

Arvind Kejriwal
ದೇಶ1 hour ago

Arvind Kejriwal: ಜೈಲಿನಿಂದ ಬಂದ ಕೇಜ್ರಿವಾಲ್‌ಗೆ ಆರತಿ ಬೆಳಗಿ, ಹೂ ಹಾರ ಹಾಕಿ ಸ್ವಾಗತಿಸಿದ ತಾಯಿ! ವಿಡಿಯೊ ನೋಡಿ

Siddaramaiah
ಕರ್ನಾಟಕ1 hour ago

Siddaramaiah: ಮೋದಿ ಸುಳ್ಳಿನ ಸರದಾರ, ಭಾವನಾತ್ಮಕ ಆಟ ನಡೆಯಲ್ಲ; ಸಿದ್ದರಾಮಯ್ಯ ತಿರುಗೇಟು

accident case
ಕ್ರೈಂ2 hours ago

Accident Case : ಬ್ಯಾನರ್‌ ಕಟ್ಟುವಾಗ ಕರೆಂಟ್‌ ಶಾಕ್‌ಗೆ ವ್ಯಕ್ತಿ ಸಾವು; ಡಿವೈಡರ್‌ಗೆ ಗುದ್ದಿ ಪಲ್ಟಿಯಾದ ಕಾರು

Chinese app
ವಿದೇಶ2 hours ago

Chinese Apps: ಟಿಕ್‌ಟಾಕ್‌ ಮಾತ್ರ ಅಲ್ಲ.. ಚೀನಾದ ಈ ಆಪ್‌ಗಳೂ ಅಷ್ಟೇ ಡೇಂಜರಸ್‌; ಶಾಕಿಂಗ್‌ ವರದಿ ಔಟ್‌

Jyoti Rai
ಕಿರುತೆರೆ2 hours ago

Jyoti Rai: ನೋವಿನ ನಡುವೆಯೂ ಸಹಾಯ ಹಸ್ತ ಚಾಚಿದ ನಟಿ ಜ್ಯೋತಿ ರೈ; ವಿಡಿಯೊ ವೈರಲ್‌ ಮಾಡುವಂತೆ ಸವಾಲು ಹಾಕಿದ್ದೇಕೆ?

BS Yediyurappa
ಕರ್ನಾಟಕ3 hours ago

BS Yediyurappa: ಪ್ರಜ್ವಲ್‌ ಕೇಸ್‌ನಿಂದ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಧಕ್ಕೆ? ಯಡಿಯೂರಪ್ಪ ಹೇಳಿದ್ದಿಷ್ಟು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ10 hours ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ1 day ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ1 day ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ1 day ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ1 day ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ2 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ2 days ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ2 days ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

ಟ್ರೆಂಡಿಂಗ್‌