Vistara Editorial, EPF interest rate hike hopeful, let it increase further ವಿಸ್ತಾರ ಸಂಪಾದಕೀಯ: ಇಪಿಎಫ್‌ ಬಡ್ಡಿದರ ಹೆಚ್ಚಳ ಆಶಾದಾಯಕ, ಇನ್ನಷ್ಟು ಹೆಚ್ಚಲಿ - Vistara News

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಇಪಿಎಫ್‌ ಬಡ್ಡಿದರ ಹೆಚ್ಚಳ ಆಶಾದಾಯಕ, ಇನ್ನಷ್ಟು ಹೆಚ್ಚಲಿ

ಆರ್ಥಿಕ ಏರುಪೇರು ಏನೇ ಇದ್ದರೂ ಪಿಎಫ್ ಬಡ್ಡಿಯ ಮೇಲೆ ಪ್ರಹಾರ ಆಗದಂತೆ ಸರಕಾರ ಮುತುವರ್ಜಿ ವಹಿಸಬೇಕು. ಇದನ್ನು ಇನ್ನಷ್ಟು ಹೆಚ್ಚಿಸುವ ಬಗ್ಗೆಯೂ ಚಿಂತಿಸಬೇಕು.

VISTARANEWS.COM


on

Vistara Editorial, EPF interest rate hike hopeful, let it increase further
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

2022-23ರ ಆರ್ಥಿಕ ವರ್ಷಕ್ಕೆ ಇಪಿಎಫ್‌ಒ ಬಡ್ಡಿದರವನ್ನು ಪರಿಷ್ಕರಿಸಲಾಗಿದೆ. ಕೇಂದ್ರ ನೌಕರರ ಭವಿಷ್ಯ ನಿಧಿ ಸಂಸ್ಥೆಯು ಇದನ್ನು ಶೇಕಡ 8.15ಕ್ಕೆ ಏರಿಸಿದೆ. ಮಂಗಳವಾರ ನಡೆದ ನೌಕರರ ಭವಿಷ್ಯ ನಿಧಿ ಸಂಘಟನೆಯ ಟ್ರಸ್ಟಿಗಳ ಸೆಂಟ್ರಲ್ ಬೋರ್ಡ್ ಸಭೆಯಲ್ಲಿ ಇದನ್ನು ನಿಗದಿಪಡಿಸಲಾಗಿದ್ದು, ಇದನ್ನು ಹಣಕಾಸು ಸಚಿವಾಲಯ ಅನುಮೋದಿಸಬೇಕಿದೆ. ಕಳೆದ ವರ್ಷ ಇಪಿಎಫ್‌ ಬಡ್ಡಿದರ ಶೇಕಡಾ 8.1ರಲ್ಲಿತ್ತು. ಇದು ಕಳೆದ ನಾಲ್ಕು ದಶಕಗಳ ಅತ್ಯಂತ ಕಡಿಮೆ ಬಡ್ಡಿ ದರವಾಗಿತ್ತು. 1977-78ರಲ್ಲಿ ಶೇ.8ರಷ್ಟಿದ್ದ ಬಡ್ಡಿ ದರ ಬಳಿಕ ಇಷ್ಟೊಂದು ಇಳಿದಿದ್ದುದು ಇದೇ ಮೊದಲು. ಈ ವರ್ಷ ಅದು ಏರಿಕೆಯಾಗಿದೆ. ಆದರೆ ಏರಿಕೆ ಅತ್ಯಲ್ಪ ಪ್ರಮಾಣದಲ್ಲಿದ್ದು, ಕೇವಲ ಶೇ.0.05ರಷ್ಟು ಹೆಚ್ಚಿದೆ. ಆದರೂ ಇದು ಆಶಾದಾಯಕ.

ಕಳೆದ ಕೆಲ ವರ್ಷಗಳಿಂದ ಇಪಿಎಫ್‌ ಬಡ್ಡಿದರ ಇಳಿಕೆಯನ್ನೇ ಕಾಣುತ್ತ ನೌಕರರ ವಲಯದಲ್ಲಿ ನಿರಾಸೆಯನ್ನು ತಂದಿಟ್ಟಿತ್ತು. ಬಡ್ಡಿದರಗಳ ಹೆಚ್ಚಳಕ್ಕೆ ತೀವ್ರ ಬೇಡಿಕೆಯಿತ್ತು. ದೇಶದಲ್ಲಿ ಸುಮಾರು ಐದು ಕೋಟಿ ಇಪಿಎಫ್‌ ಚಂದಾದಾರರಿದ್ದಾರೆ. ಇವರನ್ನು ಅವಲಂಬಿಸಿರುವ ಕುಟುಂಬಗಳೂ ಇವೆ. ಮೇಲ್ನೋಟಕ್ಕೆ ಈ ಬಡ್ಡಿದರಗಳು ಸಣ್ಣದಾಗಿ ಕಾಣಿಸುತ್ತವೆ. ಆದರೆ ಇದು ನೌಕರರ ನಿವೃತ್ತಿ ನಿಧಿಯನ್ನು ಕೂಡಿಸುವುದಕ್ಕಾಗಿ ಇರುವ ಉಳಿತಾಯ ಎಂಬುದನ್ನು ಮರೆಯಬಾರದು.

ವೈಯಕ್ತಿಕ ಹಣಕಾಸು ತಜ್ಞರು ʼಉದ್ಯೋಗದ ಆರಂಭದಿಂದಲೇ ಉಳಿತಾಯ ಮಾಡಿದರೆ ಹೆಚ್ಚಿನ ನಿವೃತ್ತಿ ನಿಧಿ ಕೂಡಿಸಬಹುದುʼ ಎಂಬ ಸೂತ್ರವನ್ನು ನೀಡುತ್ತಾರೆ. ಇದು ಸರ್ಕಾರಿ ನೌಕರರಿಗೆ ಮಾತ್ರವಲ್ಲ, ಇತರರೂ ಪಿಪಿಎಫ್‌ ಅನ್ನು ಆರಂಭಿಸಿ ಉಳಿತಾಯ ಮಾಡಬಹುದು. ಹೀಗೆ ಪ್ರತಿ ತಿಂಗಳು, ಪ್ರತಿ ವರ್ಷ ಮಾಡುವ ಉಳಿತಾಯವೂ ಮುಂದೆ ಭವಿಷ್ಯದಲ್ಲಿ ನೌಕರರು ನಿವೃತ್ತರಾದ ಬಳಿಕ, ಅವರು ದುಡಿಯಲು ದೇಹದಲ್ಲಿ ಶಕ್ತಿಯಿಲ್ಲದೆ ಹೋದಾಗ ನಿಧಿಯಾಗಿ ದೊರೆಯುತ್ತದೆ. ಅಂದರೆ ಬಡ್ಡಿದರದಲ್ಲಿ ಒಂದೊಂದು ಪಾಯಿಂಟ್‌ ಹೆಚ್ಚಳವೂ ಅಷ್ಟು ಹೆಚ್ಚಿನ ಗುಣಮಟ್ಟದ ಭವಿಷ್ಯದ ಜೀವನಶೈಲಿಯ ಸಾಧ್ಯತೆಯನ್ನು ಒದಗಿಸಿಕೊಡುತ್ತದೆ. ಇಪಿಎಫ್‌ ಬಡ್ಡಿದರ ಕಡಿಮೆಯಾಗುವುದು ಎಂದರೆ ನಿವೃತ್ತಿಜೀವನದಲ್ಲಿ ಖರ್ಚು ಮಾಡಬಹುದಾದ ಶಕ್ತಿಯನ್ನು ಕುಂಠಿತವಾಗಿಸುವುದು ಎಂದರ್ಥ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಮಹಿಳೆಯರ ಬಾಕ್ಸಿಂಗ್‌ ವಿಕ್ರಮ; ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಪಾರ ನಿರೀಕ್ಷೆ

ಉದ್ಯೋಗಿಗಳ ಪಾಲಿಗೆ ಪಿಎಫ್ ಮೊತ್ತವು ಸಂಕಷ್ಟದ ಸಂದರ್ಭಗಳಲ್ಲಿ ಆರ್ಥಿಕ ನೆರವನ್ನು ನೀಡುವ ಖಾತೆ. ಕುಟುಂಬದ ಸದಸ್ಯರಿಗೆ ಅದು ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ. ಪ್ರತಿ ತಿಂಗಳು ಉದ್ಯೋಗಿಯ ವೇತನದಿಂದ ಒಂದು ನಿರ್ದಿಷ್ಟ ಮೊತ್ತವನ್ನು ಕಡಿತಗೊಳಿಸಿ ಅದನ್ನು ಪಿಎಫ್ ಖಾತೆಯಲ್ಲಿ ಠೇವಣಿ ಮಾಡುವಂತೆ, ಅಷ್ಟೇ ಪ್ರಮಾಣದ ಮೊತ್ತವನ್ನು ಉದ್ಯೋಗದಾತರ ಪರವಾಗಿಯೂ ಪಿಎಫ್ ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ನಡೆಯುತ್ತದೆ. ಇದು ಒಂದು ದೊಡ್ಡ ಮೊತ್ತವಾಗಿ ನಿವೃತ್ತಿಯ ಸಂದರ್ಭದಲ್ಲಿ ಸಿಗುತ್ತದಾದ್ದರಿಂದ ನೌಕರಿಯಿಂದ ನಿವೃತ್ತಿ ಎಂಬುದು ನೌಕರನಿಗೂ ಕುಟುಂಬಕ್ಕೂ ಸಹನೀಯವಾಗುತ್ತದೆ.

ಪ್ರಾಮಾಣಿಕವಾಗಿ ಕೆಲಸ ಮಾಡುವ ಕೆಳ ಹಂತದ ಸರ್ಕಾರ ನೌಕರರಿಗೆ ಹಾಗೂ ಕೆಲವು ಖಾಸಗಿ ವಲಯದ ಉದ್ಯೋಗಿಗಳಿಗೆ ಈ ಪಿಎಫ್‌ ನಿಧಿ ಬಿಟ್ಟರೆ ಬೇರೆ ಉಳಿತಾಯವೂ ಇರಲಾರದು. ಶ್ರಮಿಕ ವರ್ಗಕ್ಕಂತೂ, ದುಡಿಮೆಯ ಶಕ್ತಿ ಕಳೆದುಕೊಂಡ ಬಳಿಕ ಇದೇ ಆಧಾರ. ಕೊರೊನಾ ಕಾಲದಲ್ಲಿ ಹಲವಾರು ಮಂದಿ ಉದ್ಯೋಗ ಕಳೆದುಕೊಂಡರು. ಅಂಥವರ ಪಾಲಿಗೆ ಉಳಿತಾಯದ ಹಣವೂ ಇಲ್ಲದೆ ಹೋದಾಗ ಬದುಕು ದುರ್ಭರವಾಯಿತು. ಉಳಿತಾಯದ ಹಣ ಇಡುಗಂಟಾಗಿ ಇದ್ದಾಗ, ತಾತ್ಕಾಲಿಕವಾದ ಉದ್ಯೋಗನಷ್ಟಗಳು ಅಷ್ಟೇನೂ ಆತಂಕಕಾರಿಯಾಗಿರುವುದಿಲ್ಲ. ಸ್ವಯಂನಿವೃತ್ತಿ ಪಡೆದರೂ ಪಿಎಫ್‌ ಒಂದು ಆಧಾರಸ್ತಂಭವಾಗುತ್ತದೆ. ಸಾಮಾನ್ಯವಾಗಿ ಹಣದುಬ್ಬರದ ಈ ಕಾಲದಲ್ಲಿ ಕಡಿಮೆ ಸಂಬಳದವರಿಗೆ ಪಿಎಫ್‌ ಹೊರತುಪಡಿಸಿ ಇತರ ಉಳಿತಾಯದ ಸಾಧ್ಯತೆಗಳೇ ಇರುವುದಿಲ್ಲ. ಇದೆಲ್ಲದರಿಂದಾಗಿ, ಆರ್ಥಿಕ ಏರುಪೇರು ಏನೇ ಇದ್ದರೂ ಪಿಎಫ್ ಬಡ್ಡಿಯ ಮೇಲೆ ಪ್ರಹಾರ ಆಗದಂತೆ ಸರಕಾರ ಮುತುವರ್ಜಿ ವಹಿಸಬೇಕು. ಇದನ್ನು ಇನ್ನಷ್ಟು ಹೆಚ್ಚಿಸುವ ಬಗ್ಗೆಯೂ ಚಿಂತಿಸಬೇಕು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Latest

IPL 2024 : ಸಿಎಸ್​ಕೆ ತಂಡದ ಸಮಸ್ಯೆಗಳನ್ನು ಬಹಿರಂಗಪಡಿಸಿದ ನಾಯಕ ಋತುರಾಜ್​

IPL 2024 : ಪಂದ್ಯದ ನಂತರದ ಸಮಾರಂಭದಲ್ಲಿ ಮಾತನಾಡಿದ ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಪಿಚ್ ನಿಧಾನಗತಿಯಲ್ಲಿತ್ತು. ಹೀಗಾಗಿ ನಾವು ಪೇರಿಸಿದ ರನ್​ ಬಗ್ಗೆ ಖುಷಿಯಿದೆ ಎಂದು ಹೇಳಿದರು. ವಿಕೆಟ್ ನಿಧಾನವಾಗಿತ್ತು.ಚೆಂಡು ಕಡಿಮೆ ಬೌನ್ಸ್ ಆಗುತ್ತಿತ್ತು ಇತ್ತು ಎಂದು ಹೇಳಿದರು.

VISTARANEWS.COM


on

IPL 2024
Koo

ಬೆಂಗಳೂರು: ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) 53 ನೇ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) ಸ್ಯಾಮ್ ಕರ್ರನ್ ನೇತೃತ್ವದ ಪಂಜಾಬ್ ಕಿಂಗ್ಸ್ (PBKS) ವಿರುದ್ಧ 28 ರನ್​ಗಳ ಗೆಲವು ಸಾಧಿಸಿದೆ. ಅದರ ಹೊರತಾಗಿಯೂ ಸಿಎಸ್​ಕೆ ತಂಡದಲ್ಲಿ ಕೆಲವೊಂದು ಸಮಸ್ಯೆಗಳು ಉಂಟಾಗಿವೆ ಎಂಬುದಾಗಿ ನಾಯಕ ಋತುರಾಜ್ ಗಾಯಕ್ವಾಡ್ ಹೇಳಿದ್ದಾರೆ.

ಗಾಯಕ್ವಾಡ್ ಟಾಸ್ ಸೋತರು. ಸಿಎಸ್​​ಕೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಬ್ಯಾಟರ್​ಗಳು ಉತ್ತಮ ಪ್ರದರ್ಶನ ನೀಡದ ಕಾರಣ 9 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ರವೀಂದ್ರ ಜಡೇಜಾ (43) ಗರಿಷ್ಠ ರನ್ ಗಳಿಸಿದರೆ, ಋತುರಾಜ್ ಗಾಯಕ್ವಾಡ್ ಮತ್ತು ಡ್ಯಾರಿಲ್ ಮಿಚೆಲ್ 30 ರನ್ ಗಳಿಸಿದರು. ರವೀಂದ್ರ ಜಡೇಜಾ 20 ರನ್ ನೀಡಿ 3 ವಿಕೆಟ್ ಪಡೆದರು. ಸಿಮರ್ಜೀತ್ ಸಿಂಗ್ ಮತ್ತು ತುಷಾರ್ ದೇಶಪಾಂಡೆ ತಲಾ ಎರಡು ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ ಮತ್ತು ಮಿಚೆಲ್ ಸ್ಯಾಂಟ್ನರ್​ ತಲಾ ಒಂದು ವಿಕೆಟ್ ಪಡೆದರು.

ಪಂದ್ಯದ ನಂತರದ ಸಮಾರಂಭದಲ್ಲಿ ಮಾತನಾಡಿದ ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಪಿಚ್ ನಿಧಾನಗತಿಯಲ್ಲಿತ್ತು. ಹೀಗಾಗಿ ನಾವು ಪೇರಿಸಿದ ರನ್​ ಬಗ್ಗೆ ಖುಷಿಯಿದೆ ಎಂದು ಹೇಳಿದರು. ವಿಕೆಟ್ ನಿಧಾನವಾಗಿತ್ತು.ಚೆಂಡು ಕಡಿಮೆ ಬೌನ್ಸ್ ಆಗುತ್ತಿತ್ತು ಇತ್ತು ಎಂದು ಹೇಳಿದರು. ಸಿಮರ್ಜೀತ್ ಸಿಂಗ್ ಬಗ್ಗೆ ಮಾತನಾಡಿದ ಋತುರಾಜ್ ಗಾಯಕ್ವಾಡ್, ವೇಗಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಅವರನ್ನು ಪರಿಚಯಿಸಲು ತಡ ಮಾಡಿಲ್ಲ ಎಂದ ಹೇಳಿದರ.

ತಂಡದಲ್ಲಿದೆ ಸಮಸ್ಯೆ

ನಮ್ಮ ತಂಡದಲ್ಲಿ ಸಮಸ್ಯೆಯಿದೆ. ಆಟಗಾರರು ಜ್ವರದಿಂದ ಬಳಲುತ್ತಿದ್ದಾರೆ. ಯಾರು ಆಡುತ್ತಿದ್ದಾರೆ ಅಥವಾ ಇಲ್ಲ ಎಂದು ಬೆಳಿಗ್ಗೆಯವರೆಗೆ ಖಚಿತವಾಗಿರಲಿಲ್ಲ. ಹೀಗಾಗಿ ಗೆಲುವು ನಿಜವಾಗಿಯೂ ಸಂತೋಷ ಕೊಟ್ಟಿದೆ ಎಂದು ಹೇಳದಿರು.

ಐದು ಸೋಲುಗಳನ್ನು ಕಂಡಿದ್ದ ಚೆನ್ನೈ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ದಾಖಲೆಯನ್ನು ಹೊಂದಿಲ್ಲ. 2024ರ ಐಪಿಎಲ್ ಟೂರ್ನಿಯಲ್ಲಿ ಮುಖಾಮುಖಿಯಾಗಿರುವ ಸಿಎಸ್​ಕೆ ತಂಡ ಪಿಬಿಕೆಎಸ್ ವಿರುದ್ಧ 15-14 ಗೆಲುವಿನ ಅಂತರದ ಮುನ್ನಡೆ ಹೊಂದಿದೆ. ಆದಾಗ್ಯೂ, ಹಿಂದಿನ ಐದು ಪಂದ್ಯಗಳಲ್ಲಿ, ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಏಕೆಂದರೆ ಅವರು ಆ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದಾರೆ.

ಇದನ್ನೂ ಓದಿ: IPL 2024 : 28 ರನ್​ಗಳಿಂದ ಗೆದ್ದು ಪಂಜಾಬ್ ವಿರುದ್ಧ ಪ್ರತಿಕಾರ ತೀರಿಸಿದ ಚೆನ್ನೈ

ಐಪಿಎಲ್ ಇತಿಹಾಸದಲ್ಲಿ, ಕೇವಲ ಎರಡು ತಂಡಗಳು 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸತತ ಐದು ಪಂದ್ಯಗಳಲ್ಲಿ ಸೋಲಿಸಿವೆ, ಮೊದಲ ತಂಡ ಮುಂಬೈ ಇಂಡಿಯನ್ಸ್ ಮತ್ತು ಇನ್ನೊಂದು ತಂಡ ಪಂಜಾಬ್ ಕಿಂಗ್ಸ್, ಇದು 2021 ರಲ್ಲಿ ತಮ್ಮ ಗೆಲುವಿನ ಸರಣಿಯನ್ನು ಪ್ರಾರಂಭಿಸಿತು ಮತ್ತು ಮೇ 1 ರ ಬುಧವಾರ ಚೆಪಾಕ್​​ನಲ್ಲಿ ಸಿಎಸ್ಕೆ ವಿರುದ್ಧ ಏಳು ವಿಕೆಟ್​​ಗಳಿಂದ ಸೋಲಿಸುವ ಮೂಲಕ ಮುಂಬೈ ದಾಖಲೆ ಸರಿಗಟ್ಟಿತು.

ಅಕ್ಟೋಬರ್ 7, 2021 ರಂದು, ಪಿಬಿಕೆಎಸ್ 42 ಎಸೆತಗಳು ಬಾಕಿ ಇರುವಾಗ 6 ವಿಕೆಟ್​​ಗಳಿಂದ ಗೆದ್ದಿತು ಮತ್ತು ಐಪಿಎಲ್ 2022ರಲ್ಲಿ ಕ್ರಮವಾಗಿ 54 ಮತ್ತು 11 ರನ್​ಗಳಿಂದ ಸತತ ಗೆಲುವುಗಳನ್ನು ದಾಖಲಿಸಿತು. ಐಪಿಎಲ್ 2023 ರಲ್ಲಿ, ಅವರು ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದರು ಏಪ್ರಿಲ್ 30 ರಂದು ನಡೆದ ಪಂದ್ಯವನ್ನು ಪಿಬಿಕೆಎಸ್ 4 ವಿಕೆಟ್​​ಗಳಿಂದ ಗೆದ್ದಿತು.

ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಪಂದ್ಯದ ಮುಕ್ತಾಯದ ನಂತರ, ಸಿಎಸ್​ಕೆ ಪರವಾಗಿ 16-14 ಅಂತರದ ದಾಖಲೆ ಹೊಂದಿದೆ.

Continue Reading

Lok Sabha Election 2024

Lok Sabha Election 2024: ಮತ್ತೆ ಮೋದಿ ಪ್ರಧಾನಿಯಾಗಲು ಸಾಧ್ಯವೇ ಇಲ್ಲ: ಸಿಎಂ ಸಿದ್ದರಾಮಯ್ಯ ಹೀಗೆ ಹೇಳಿದ್ದು ಏಕೆ?

Lok Sabha Election 2024: ಬಿಜೆಪಿ ಜಾತಿ – ಧರ್ಮಗಳನ್ನು ಪರಸ್ಪರ ಎತ್ತಿಕಟ್ಟುವ ಕೆಲಸಗಳನ್ನು ಮಾಡುತ್ತಾ ಬಂದಿದೆ. ದ್ವೇಷದ ರಾಜಕಾರಣವನ್ನು ಮಾಡುತ್ತಾ ಜನರ ಒಳಿತನ್ನು ಕಡೆಗಣಿಸಿದ್ದಾರೆ. ಮೋದಿಯವರು, ದಲಿತರ, ಹಿಂದುಳಿದವರ ಮೀಸಲಾತಿಯನ್ನು ಮುಸಲ್ಮಾನರಿಗೆ ಕಾಂಗ್ರೆಸ್ ನೀಡುತ್ತದೆ ಎಂದು ದೊಡ್ಡ ಸುಳ್ಳನ್ನು ಹೇಳಿದ್ದಾರೆ. ಈ ಪ್ರಮಾಣದಲ್ಲಿ ಸುಳ್ಳು ಹೇಳುವ ಪ್ರಧಾನಿಯನ್ನು ನಾನು ಹಿಂದೆಂದೂ ನೋಡಿಲ್ಲ. ಮುಸಲ್ಮಾನರ ವಿರುದ್ಧ ದಲಿತರನ್ನು, ಹಿಂದುಳಿದವರ ವಿರುದ್ಧ ದಲಿತರು, ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ ಕೆಲಸವನ್ನು ಮೋದಿಯವರು ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

VISTARANEWS.COM


on

Lok Sabha Election 2024 Narendra Modi cant become PM again says CM Siddaramaiah
Koo

ಹರಿಹರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರೋಧಿ ಅಲೆ ಜೋರಾಗಿದೆ ಎನ್ನುವುದನ್ನು ಸ್ವತಃ ಬಿಜೆಪಿಯವರೇ ಗುರುತಿಸಿದ್ದಾರೆ. ಆದ್ದರಿಂದ ಈ ಬಾರಿ ಮೋದಿ ಮತ್ತೆ ಪ್ರಧಾನಿಯಾಗಲು ಸಾಧ್ಯವಿಲ್ಲ ಹಾಗೂ ಆ ಪಕ್ಷದ ಸೋಲು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ದಾವಣಗೆರೆ ಲೋಕಸಭಾ ಚುನಾವಣೆಯ ಪ್ರಜಾಧ್ವನಿ-02 ಕಾರ್ಯಕ್ರಮದಲ್ಲಿ ಭಾಗವಹಿಸಿ ಪಕ್ಷದ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಪರವಾಗಿ ಮತದಾರರಲ್ಲಿ ಮತಯಾಚಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯ 25 ಸಂಸದರು ರಾಜ್ಯಕ್ಕಾಗಿರುವ ಅನ್ಯಾಯವನ್ನು ಎಂದೂ ಪ್ರಶ್ನಿಸಲಿಲ್ಲ. ಅವರಲ್ಲಿ ಹಲವರನ್ನು ಈ ಬಾರಿ ಬಿಜೆಪಿಯವರೇ ಕೈಬಿಟ್ಟಿದ್ದಾರೆ. ಈ ಹಿಂದೆ ಇದ್ದ ಬಿಜೆಪಿ ಸಂಸದರು ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿದೇ, ಬಿಜೆಪಿಯವರೇ ಈ ಬಾರಿ ಹಲವರನ್ನು ಕೈಬಿಟ್ಟಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ

ಹರಿಹರ ಪ್ರದೇಶದಲ್ಲಿ ಕುಡಿಯುವ ನೀರಿನ ಯೋಜನೆ ಹಾಗೂ ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರನ್ನು ಒದಗಿಸುವ ಏತ ನೀರಾವರಿ ಯೋಜನೆಗೆ ಚುನಾವಣೆ ನಂತರ ಚಾಲನೆ ನೀಡಲಾಗುವುದು. ನಾನು ನುಡಿದ ಮಾತಿನಂತೆ ನಡೆಯುವವನು. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆಂದು ತಿಳಿಸಿದಂತೆ 8 ತಿಂಗಳ ಒಳಗೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಅನ್ನಭಾಗ್ಯ, ಗೃಹ ಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಹಾಗೂ ಶಕ್ತಿ ಯೋಜನೆಗಳು ಜನರ ಪ್ರಶಂಸೆಯನ್ನು ಗಳಿಸಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ರೈತ ಸಾಲ ಮನ್ನಾ, ಇಂದಿರಾ ಕ್ಯಾಂಟೀನ್, ಶೂ ಭಾಗ್ಯ, ಶಾದಿ ಭಾಗ್ಯಗಳಂತಹ ಜನಪರ ಯೋಜನೆಗಳನ್ನು ಕಾಂಗ್ರೆಸ್ ನೀಡಿದೆ ಎಂದು ಹೇಳಿದರು.

ಯಪ್ಪಾ ಯಪ್ಪಾ ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ನಾನು ಹಿಂದೆಂದೂ ನೋಡಿಲ್ಲ

ಬಿಜೆಪಿ ಜಾತಿ – ಧರ್ಮಗಳನ್ನು ಪರಸ್ಪರ ಎತ್ತಿಕಟ್ಟುವ ಕೆಲಸಗಳನ್ನು ಮಾಡುತ್ತಾ ಬಂದಿದೆ. ದ್ವೇಷದ ರಾಜಕಾರಣವನ್ನು ಮಾಡುತ್ತಾ ಜನರ ಒಳಿತನ್ನು ಕಡೆಗಣಿಸಿದ್ದಾರೆ. ಮೋದಿಯವರು, ದಲಿತರ, ಹಿಂದುಳಿದವರ ಮೀಸಲಾತಿಯನ್ನು ಮುಸಲ್ಮಾನರಿಗೆ ಕಾಂಗ್ರೆಸ್ ನೀಡುತ್ತದೆ ಎಂದು ದೊಡ್ಡ ಸುಳ್ಳನ್ನು ಹೇಳಿದ್ದಾರೆ. ಈ ಪ್ರಮಾಣದಲ್ಲಿ ಸುಳ್ಳು ಹೇಳುವ ಪ್ರಧಾನಿಯನ್ನು ನಾನು ಹಿಂದೆಂದೂ ನೋಡಿಲ್ಲ. ಮುಸಲ್ಮಾನರ ವಿರುದ್ಧ ದಲಿತರನ್ನು, ಹಿಂದುಳಿದವರ ವಿರುದ್ಧ ದಲಿತರು, ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ ಕೆಲಸವನ್ನು ಮೋದಿಯವರು ಮಾಡುತ್ತಿದ್ದಾರೆ. ಸಂವಿಧಾನದ ಮೀಸಲಾತಿ ಪ್ರಮಾಣದಲ್ಲಿ ಶೇ. 10ರಷ್ಟನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಸೃಷ್ಟಿಸಿದರು. ಆದರೆ, ಸಂವಿಧಾನದಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿಯನ್ನು ಕೊಡಬಹುದಾಗಿದೆ. ಮೋದಿಯವರು ಸಂವಿಧಾನವನ್ನು ಪೂರ್ಣ ತಿಳಿದಿದ್ದಾರೋ ಇಲ್ಲವೋ ಗೊತ್ತಿಲ್ಲ. ನಾವು ಅಧಿಕಾರಕ್ಕೆ ಬಂದರೆ ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ಹೆಚ್ಚು ಮಾಡುತ್ತೇವೆ ಎಂದು ಹೇಳಿದ್ದೇವೆಯೇ ಹೊರತು. ಒಬ್ಬರ ಮೀಸಲಾತಿಯನ್ನು ಕಿತ್ತು ಮತ್ತೊಬ್ಬರಿಗೆ ಕೊಡುತ್ತೇವೆ ಎಂದು ಎಲ್ಲಿಯೂ ಹೇಳಿಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೀಸಲಾತಿ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ

ಬಿಜೆಪಿ ಹಾಗೂ ಆರ್‌ಎಸ್ಎಸ್ ಮೀಸಲಾತಿಯನ್ನು ಬೆಂಬಲಿಸಲಿಲ್ಲ. ಆದ್ದರಿಂದ ಮೀಸಲಾತಿ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ. ಮಂಡಲ್ ವರದಿಯಂತೆ ಉನ್ನತ ಶಿಕ್ಷಣಸಂಸ್ಥೆಗಳಲ್ಲಿ ಮೀಸಲಾತಿ ತರಲು ಬಿಜೆಪಿ ವಿರೋಧಿಸಿದರು. ಮಂಡಲ್ ಪಂಚಾಯಿತಿ, ನಗರ ಸಭೆಗಳಲ್ಲಿ ಮಹಿಳೆಯರು, ದಲಿತರು, ಹಿಂದುಳಿದವರಿಗೆ ಮೀಸಲಾತಿ ನೀಡುವುದನ್ನು ಬಿಜೆಪಿ ವಿರೋಧಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಮೀಸಲಾತಿ ನೀಡಿಕೆಯನ್ನು ಎತ್ತಿಹಿಡಿಯಿತು. ಚುನಾವಣೆ ಬಂದಾಗ ಮಾತ್ರ ಮೋದಿಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ ಎಂದು ಟೀಕಿಸಿದರು.

ಮೋದಿಯವರು ನೀಡಿದ ಭರವಸೆ ಈಡೇರಿಸಲಿಲ್ಲ

ಮೋದಿಯವರು ಹತ್ತು ವರ್ಷಗಳ ಕಾಲ ಜನರಿಗೆ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಲಿಲ್ಲ. ರೈತರ ಸಾಲ ಮನ್ನಾ ಮಾಡದೇ ಅದಾನಿ ಹಾಗೂ ಅಂಬಾನಿ ಕೈಗಾರಿಕೋದ್ಯಮಿಗಳಿಗೆ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದಾರೆ. ಮೋದಿಯವರು ಶ್ರೀಮಂತರ ಪರವಾಗಿರುವವರು. ಆದರೆ, ಇವರು ಬಡವರ ಪರವಾಗಿ ಇರುವವರು ಎಂದು ಮೋಸ ಹೋಗಿದ್ದಾಯ್ತು. ನಂಬಿಕೆ ದ್ರೋಹ ಎಸಗಿದ ಮೋದಿಯವರಿಗೆ ಮತ ಹಾಕಬೇಕೆ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವುದು ಪೂರ್ವದಲ್ಲಿ ಸೂರ್ಯ ಹುಟ್ಟುವಷ್ಟೇ ಸತ್ಯ

ನಮ್ಮ ಸರ್ಕಾರ ಇರುವವರೆಗೆ ಜನತೆಯ ಆಶೋತ್ತರಗಳನ್ನು ಈಡೇರಿಸಲಾಗುವುದು. ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವುದು ಪೂರ್ವದಲ್ಲಿ ಸೂರ್ಯ ಹುಟ್ಟುವಷ್ಟೇ ಸತ್ಯ. ನಮಗೆ ತೊಂದರೆ ಕೊಡಲು ವಿನಯ್ ಕುಮಾರ್ ಸ್ವತಂತ್ರ ಅಭ್ಯರ್ಥಿಯಾಗಿ ನಿಂತಿದ್ದಾರೆ. ಅವರು ಗೆಲ್ಲುವುದಿಲ್ಲ. ಏಕೆಂದರೆ ಬಿಜೆಪಿ ಜತೆಗೆ ಶಾಮೀಲಾಗಿದ್ದಾರೆ. ಕನಕ ಗುರುಪೀಠದ ನಿರಂಜನಾನಂದಾಪುರಿ ಸ್ವಾಮಿಗಳು ಮತ್ತು ನಾನು ವಿನಯ್ ಕುಮಾರ್ ಅವರೊಂದಿಗೆ ಮಾತನಾಡಿ, ನಿಲ್ಲುವುದು ಬೇಡ ಸಲಹೆ ನೀಡಿದಾಗ ಒಪ್ಪಿಕೊಂಡು ಈಗ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಕರ್ನಾಟಕದಲ್ಲಿ ನಾನು ಬೇಕೋ, ವಿನಯ್ ಕುಮಾರ್ ಬೇಕೋ ನಿರ್ಧರಿಸಿ ಎಂದು ಸಿಎಂ ಸಿದ್ದರಾಮಯ್ಯ ಕೇಳಿದರು.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ವಿಡಿಯೊ ಕೇಸ್‌; ವಿಡಿಯೊದಲ್ಲಿರುವ ಮಹಿಳಾ ಅಧಿಕಾರಿಗಳಿಗೆ SIT ನೋಟಿಸ್‌: ‘ನಾನವಳಲ್ಲ’ ಎಂದು ಹೇಳಿಕೆ!

ನಾನೇ ಚುನಾವಣೆಗೆ ನಿಂತಿದ್ದೇನೆ ಎಂದು ತಿಳಿಯಬೇಕು. ಕಾಂಗ್ರೆಸ್ ಅಭ್ಯರ್ಥಿಗೆ ಕೊಡುವ ಮತ ಸಿದ್ದರಾಮಯ್ಯಗೆ ಕೊಡುವ ಮತ. ನನಗೆ ಶಕ್ತಿ ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ನಮ್ಮ ಅಭ್ಯರ್ಥಿ ವಿದ್ಯಾವಂತೆ. ಸಂಸತ್ತಿನಲ್ಲಿ ನಿಮ್ಮ ಪರವಾಗಿ ಮಾತನಾಡುವ ಶಕ್ತಿ ಇದೆ. ಅದಕ್ಕಾಗಿ ನಮ್ಮ ಅಭ್ಯರ್ಥಿಗೆ ಆಶೀರ್ವಾದ ಮಾಡಿ. ಅವರು ಗೆದ್ದರೆ, ನಾನೇ ಗೆದ್ದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

Continue Reading

ದೇಶ

Radhika Khera: ಅಯೋಧ್ಯೆಗೆ ಭೇಟಿ ನೀಡಿದ್ದಕ್ಕೆ ಪಕ್ಷದಲ್ಲಿ ವಿರೋಧ; ಕಾಂಗ್ರೆಸ್‌ ತೊರೆದ ನಾಯಕಿ!

Radhika Khera: ಛತ್ತೀಸ್‌ಗಢ ಕಾಂಗ್ರೆಸ್‌ ನಾಯಕಿ ರಾಧಿಕಾ ಖೇರ ಅವರು ಪಕ್ಷವನ್ನು ತೊರೆದಿದ್ದಾರೆ. ರಾಮಮಂದಿರಕ್ಕೆ ಭೇಟಿ ನೀಡಿದ ಬಳಿಕ ಪಕ್ಷದಲ್ಲಿಯೇ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.

VISTARANEWS.COM


on

Radhika Khera
Koo

ಅಯೋಧ್ಯೆ: ಲೋಕಸಭೆ ಚುನಾವಣೆ (Lok Sabha Election 2024) ಹೊತ್ತಿನಲ್ಲೇ ಛತ್ತೀಸ್‌ಗಢ ಕಾಂಗ್ರೆಸ್‌ ನಾಯಕಿ ರಾಧಿಕಾ ಖೇರ (Radhika Khera) ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪಕ್ಷದಲ್ಲಿ ಪುರುಷರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹೆಣ್ಣುಮಕ್ಕಳಿಗೆ ಗೌರವ ನೀಡುತ್ತಿಲ್ಲ ಎಂದು ಆರೋಪಿಸಿದ ಇವರೀಗ ರಾಜೀನಾಮೆ ನೀಡಿದ್ದಾರೆ. “ನಾನು ರಾಮಮಂದಿರಕ್ಕೆ (Ram Mandir) ಭೇಟಿ ನೀಡಿದ ಬಳಿಕ ಪಕ್ಷದಲ್ಲೇ ಟೀಕೆ ಮಾಡಲಾಗುತ್ತಿದೆ. ಹಾಗಾಗಿ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ” ಎಂಬುದಾಗಿ ರಾಧಿಕಾ ಖೇರ ತಿಳಿಸಿದ್ದಾರೆ.

“ಪ್ರತಿಯೊಬ್ಬ ಹಿಂದುವಿಗೂ ರಾಮಮಂದಿರವು ಪವಿತ್ರ ಹಾಗೂ ಶ್ರದ್ಧಾ ಕೇಂದ್ರವಾಗಿದೆ. ಹಾಗಾಗಿ, ನಾನು ರಾಮಮಂದಿರಕ್ಕೆ ಭೇಟಿ ನೀಡಿದೆ. ನಾನು ಕಾಂಗ್ರೆಸ್‌ಗೆ 22 ವರ್ಷದ ನಿಷ್ಠಾವಂತಳಾಗಿ ದುಡಿದಿದ್ದೇನೆ. ಆದರೆ, ನಾನು ಹಿಂದು ಆಗಿ ರಾಮಮಂದಿರಕ್ಕೆ ಭೇಟಿ ನೀಡುವುದನ್ನು ತಡೆಯಲು ನನಗೇ ಆಗಲಿಲ್ಲ. ಪಕ್ಷದಲ್ಲಿ ಮಾತ್ರ, ನಾನು ರಾಮಮಂದಿರಕ್ಕೆ ಹೋಗಿದ್ದೇ ಅಪರಾಧ ಎಂಬಂತೆ ಬಿಂಬಿಸಲಾಗಿದೆ. ಇದಕ್ಕಾಗಿಯೇ ನನ್ನನ್ನು ಗುರಿಯಾಗಿಸಿ ಟೀಕಿಸಲಾಗಿದೆ. ಹಾಗಾಗಿ, ನಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ” ಎಂಬುದಾಗಿ ಮಾಹಿತಿ ನೀಡಿದ್ದಾರೆ.

ಛತ್ತೀಸ್‌ಗಢ ಕಾಂಗ್ರೆಸ್‌ನ ಪ್ರಮುಖ ನಾಯಕಿಯಾಗಿದ್ದ ರಾಧಿಕಾ ಖೇರ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಧಿಕಾ ಖೇರ ಅವರು ಬಿಜೆಪಿ ಸೇರುತ್ತಾರೋ, ಇಲ್ಲವೇ ಬೇರೆ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೋ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಕಲ್ಕಿ ದೇವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ್ದಕ್ಕೆ ಕಾಂಗ್ರೆಸ್‌ ನಾಯಕ ಆಚಾರ್ಯ ಪ್ರಮೋದ್‌ ಕೃಷ್ಣಂ ಅವರನ್ನು ಕಾಂಗ್ರೆಸ್‌ ಉಚ್ಚಾಟನೆ ಮಾಡಿದೆ. ಶ್ರೀ ಕಲ್ಕಿ ಧಾಮ ನಿರ್ಮಾಣ ಟ್ರಸ್ಟ್‌ ಚೇರ್ಮನ್‌ ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು ಕಾಂಗ್ರೆಸ್‌ ನಾಯಕರೂ ಆಗಿದ್ದರು. ಇವರನ್ನು ಕೆಲ ತಿಂಗಳ ಹಿಂದಷ್ಟೇ ಕಾಂಗ್ರೆಸ್‌ ಉಚ್ಚಾಟನೆ ಮಾಡಿದೆ. ಕಲ್ಕಿ ದೇವಾಲಯಕ್ಕೆ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ ಬಳಿಕ ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಉಚ್ಚಾಟನೆ ಮಾಡಿತ್ತು.

ಇದರ ಕುರಿತು ನರೇಂದ್ರ ಮೋದಿ ಮಾತನಾಡಿದ್ದರು. “ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು ಕಲ್ಕಿ ಧಾಮ ದೇವಾಲಯ ನಿರ್ಮಾಣಕ್ಕಾಗಿ ಹೋರಾಡಿದರು. ಇದಕ್ಕೂ ಮೊದಲಿನ ಸರ್ಕಾರಗಳು ಕಲ್ಕಿ ಧಾಮ ದೇವಾಲಯ ನಿರ್ಮಾಣಕ್ಕೆ ಅವಕಾಶ ಕೊಡಲಿಲ್ಲ. ಕಾನೂನು ಹೋರಾಟವನ್ನೂ ಪ್ರಮೋದ್‌ ಕೃಷ್ಣಂ ಅವರು ಮಾಡಬೇಕಾಯಿತು. ಕಲ್ಕಿ ಮಂದಿರ ನಿರ್ಮಾಣವಾದರೆ ಕಾನೂನು ಸುವ್ಯಸ್ಥೆಗೆ ಧಕ್ಕೆಯುಂಟಾಗುತ್ತದೆ ಎಂದರು. ಆದರೆ, ನಮ್ಮ ಸರ್ಕಾರದ ಅವಧಿಯಲ್ಲಿ ಕಲ್ಕಿ ಮಂದಿರ ನಿರ್ಮಾಣಕ್ಕೆ ಶಂಕುಸ್ತಾಪನೆ ನೆರವೇರಿಸಲಾಗುತ್ತದೆ” ಎಂದು ಪ್ರತಿಪಕ್ಷಗಳಿಗೆ ಮೋದಿ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದರು.

ಇದನ್ನೂ ಓದಿ: Keshav Maharaj: ರಾಮಮಂದಿರಕ್ಕೆ ಭೇಟಿ ನೀಡಿದ ಕೇಶವ್​ ಮಹರಾಜ್

Continue Reading

ಪ್ರಮುಖ ಸುದ್ದಿ

IPL 2024 : 28 ರನ್​ಗಳಿಂದ ಗೆದ್ದು ಪಂಜಾಬ್ ವಿರುದ್ಧ ಪ್ರತಿಕಾರ ತೀರಿಸಿದ ಚೆನ್ನೈ

IPL 2024: ಮೊದಲು ಬ್ಯಾಟ್‌ ಬೀಸಿದ ರುತುರಾಜ್‌ ಪಡೆಯುವ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 167 ರನ್‌ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಪಂಜಾಬ್‌ ಕಿಂಗ್ಸ್‌, ಸತತವಾಗಿ ವಿಕೆಟ್‌ ಕಳೆದುಕೊಂಡು ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್‌ ಕಳೆದುಕೊಂಡು 139 ರನ್‌ ಗಳಿಸಲಷ್ಟೇ ಶಕ್ತವಾಯ್ತು.

VISTARANEWS.COM


on

IPL 2024
Koo

ಧರ್ಮಶಾಲಾ: ಚೆನ್ನೈ ಸೂಪರ್ ಕಿಂಗ್ಸ್​ ತಂಡ ತನ್ನ ಹಿಂದಿನ ಪಂದ್ಯದ ಸೋಲಿಗೆ ಪ್ರತಿಕಾರ ತೀರಿಸಿಕೊಂಡಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್​ (IPL 2024) ಪಂದ್ಯದಲ್ಲಿ 28 ರನ್​ಗಳ ಗೆಲುವು ದಾಖಲಿಸಿದೆ. ಈ ಮೂಲಕ ಹಿಂದಿನ ಪಂದ್ಯದಲ್ಲಿ ಅದೇ ತಂಡದ ವಿರುದ್ಧ ಅನುಭವಿಸಿದ್ದ 7 ವಿಕೆಟ್ ಸೋಲಿಗೆ ಉತ್ತರ ಹೇಳಿದೆ. ಇದರೊಂದಿಗೆ ಐಪಿಎಲ್‌ 2024ರ ಆವೃತ್ತಿಯಲ್ಲಿ ಪ್ಲೇ ಆಫ್‌ ಆಸೆಯನ್ನು ಇನ್ನೂ ಜೀವಂತವಾಗಿ ಇರಿಸಿಕೊಂಡಿದೆ. ಅಲ್ಲದೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಅತ್ತ ಸತತ ಎರಡು ಪಂದ್ಯಗಳಲ್ಲಿ ಗೆದ್ದು ಪ್ಲೇ ಆಫ್‌ ಹಂತಕ್ಕೇರುವ ಕನಸು ಹೊತ್ತಿದ್ದ ಸ್ಯಾಮ್‌ ಕರನ್‌ ಪಡೆ, ಸಿಎಸ್‌ಕೆ ವಿರುದ್ಧ ಸೋಲಿನೊಂದಿಗೆ ಮತ್ತೆ ಹಿನ್ನಡೆ ಅನುಭವಿಸಿದೆ.

ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯಲ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟ್‌ ಬೀಸಿದ ರುತುರಾಜ್‌ ಪಡೆಯುವ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 167 ರನ್‌ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಪಂಜಾಬ್‌ ಕಿಂಗ್ಸ್‌, ಸತತವಾಗಿ ವಿಕೆಟ್‌ ಕಳೆದುಕೊಂಡು ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್‌ ಕಳೆದುಕೊಂಡು 139 ರನ್‌ ಗಳಿಸಲಷ್ಟೇ ಶಕ್ತವಾಯ್ತು.

ಬ್ಯಾಟಿಂಗ್‌ ಆಹ್ವಾನ ಪಡೆದ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಸಿಗಲಲ್ಲ. ಅಜಿಂಕ್ಯ ರಹಾನೆ 9 ರನ್‌ ಗಳಿಸಿ ಔಟಾದರು. ಈ ವೇಳೆ ಒಂದಾದ ನಾಯಕ ಋತುರಾಜ್‌ ಹಾಗೂ ಡ್ಯಾರಿಲ್​ ಮಿಚೆಲ್‌ ಅರ್ಧಶತಕದ ಜೊತೆಯಾಟ ನೀಡಿದರು. 21 ಎಸೆತಗಳಲ್ಲಿ 32 ರನ್‌ ಗಳಿಸಿ ಗಾಯಕ್ವಾಡ್‌ ಔಟಾದರೆ, ಅವರ ಬೆನ್ನಲ್ಲೇ ಶಿವಂ ದುಬೆ ಗೋಲ್ಡನ್‌ ಡಕ್‌ ಆದರು. ಈ ವೇಳೆ ಚೆನ್ನೈ ತಂಡಕ್ಕೆ ಆಘಾತವಾಯಿತು. ಅಲ್ಲದೆ ದುಬೆ ಸತತ ಎರಡು ಪಂದ್ಯಗಳಲ್ಲಿ ಮೊದಲ ಎಸೆತದಲ್ಲೇ ಔಟಾದರು. ಮಿಚೆಲ್‌ ಇನಿಂಗ್ಸ್​​ ರನ್‌ಗೆ ಅಂತ್ಯವಾದರೆ, ಮೊಯೀನ್‌ ಅಲಿ 17 ರನ್ ಗಳಿಸಿದರು.

ಇದನ್ನೂ ಓದಿ: IPL 2024 : ಚೆನ್ನೈ ತಂಡದ ಮಾರಕ ಬೌಲರ್ ಮಹೀಶ್​ ಪತಿರಾನಾ​ ಐಪಿಎಲ್​ನಿಂದ ಹೊರಕ್ಕೆ

ಸ್ಯಾಂಟ್ನರ್​ 11 ರನ್‌ ಗಳಿಸಿದರು. ಶಾರ್ದುಲ್‌ ಠಾಕೂರ್‌ 17 ರನ್‌ ಗಳಿಸಿ ನಿರ್ಗಮಿಸಿದರು. ಅವರ ಬೆನ್ನಲ್ಲೇ ಎಂಎಸ್‌ ಧೋನಿ ಕೂಡಾ ಗೋಲ್ಡನ್‌ ಡಕ್‌ ಆದರು. ಅಂತಿಮವಾಗಿ ತಂಡವು 167 ರನ್‌ ಗಳಿಸಲಷ್ಟೇ ಸಾಧ್ಯವಾಯ್ತು.

ಬ್ಯಾಟಿಂಗ್ ವೈಫಲ್ಯ

ಗುರಿ ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಹೆಚ್ಚಿನ ಚೈತನ್ಯ ಸಿಗಲಿಲ್ಲ. ಜಾನಿ ಬೈರ್​ಸ್ಟೋವ್​ 7 ರನ್​ಗೆ ಔಟಾದರೆ, ರೀಲಿ ರೊಸ್ಸೊ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಪ್ರಭ್​ಸಿಮ್ರಾನ್​ ಸಿಂಗ್​ 30 ರನ್ ಬಾರಿಸಿ ಹೋರಾಟ ಸಂಘಟಿಸಿದರೂ ಹೆಚ್ಚಿನ ಹೊತ್ತು ಇರಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ, ಶಶಾಂಕ್​ ಸಿಂಗ್ (27) ಜತೆ ಇನಿಂಗ್ಸ್ ಕಟ್ಟಲು ಯತ್ನಿಸಿದರು. ಆದರೆ ಶಶಾಂಕ್ ಔಟಾದ ಬಳಿಕ ಸ್ಯಾಮ್​ ಕರ್ರನ್​ 7 ರನ್​, ಜಿತೇಶ್ ಶರ್ಮಾ (0), ಅಶುತೋಷ್​ ಶರ್ಮಾ 7 ರನ್​ಗೆ ಔಟಾದರು. ಈ ವೇಳೆ ಪಂಜಾಬ್ ಸೋಲಿನ ಸುಳಿಗೆ ಸಿಲುಕಿತು.

ಹರ್​​ಪ್ರೀತ್​ ಬ್ರಾರ್​ 17 ರನ್​, ಹರ್ಷಲ್​ ಪಟೇಲ್ 12 ರನ್ ಹಾಗೂ ಕಗಿಸೊ ರಬಾಡ 11 ರನ್ ಬಾರಿಸಿ ಔಟಾದರು.

Continue Reading
Advertisement
Bernard Hill
Latest11 mins ago

Titanic Movie : ಟೈಟಾನಿಕ್​, ಗಾಂಧಿ ಸಿನಿಮಾದ ನಟ ಬರ್ನಾರ್ಡ್ ಹಿಲ್ ನಿಧನ

IPL 2024
Latest36 mins ago

IPL 2024 : ಸಿಎಸ್​ಕೆ ತಂಡದ ಸಮಸ್ಯೆಗಳನ್ನು ಬಹಿರಂಗಪಡಿಸಿದ ನಾಯಕ ಋತುರಾಜ್​

Air India
ದೇಶ38 mins ago

Air India: ವಿಮಾನ ಪ್ರಯಾಣಿಕರೇ ಗಮನಿಸಿ, ಚೆಕ್-ಇನ್ ಬ್ಯಾಗೇಜ್ ಭಾರದ ಮಿತಿ ಇಳಿಕೆ!

Lok Sabha Election 2024 Narendra Modi cant become PM again says CM Siddaramaiah
Lok Sabha Election 202443 mins ago

Lok Sabha Election 2024: ಮತ್ತೆ ಮೋದಿ ಪ್ರಧಾನಿಯಾಗಲು ಸಾಧ್ಯವೇ ಇಲ್ಲ: ಸಿಎಂ ಸಿದ್ದರಾಮಯ್ಯ ಹೀಗೆ ಹೇಳಿದ್ದು ಏಕೆ?

Radhika Khera
ದೇಶ45 mins ago

Radhika Khera: ಅಯೋಧ್ಯೆಗೆ ಭೇಟಿ ನೀಡಿದ್ದಕ್ಕೆ ಪಕ್ಷದಲ್ಲಿ ವಿರೋಧ; ಕಾಂಗ್ರೆಸ್‌ ತೊರೆದ ನಾಯಕಿ!

Viral News
ಕ್ರೈಂ45 mins ago

Viral News: ವಿಮಾನ ಪ್ರಯಾಣಿಕನ ಜೇಬಿನಲ್ಲಿತ್ತು ಎರಡು ಹಾವು!

Self-Healing Roads
ತಂತ್ರಜ್ಞಾನ47 mins ago

Self-Healing Roads: ರಸ್ತೆಗಳಲ್ಲಿ ಹೊಂಡಗಳೇ ಇರಲ್ಲ! ಬರಲಿವೆ ಸೆಲ್ಫ್‌ ಹೀಲಿಂಗ್‌ ರೋಡ್‌ಗಳು!

IPL 2024
ಪ್ರಮುಖ ಸುದ್ದಿ55 mins ago

IPL 2024 : 28 ರನ್​ಗಳಿಂದ ಗೆದ್ದು ಪಂಜಾಬ್ ವಿರುದ್ಧ ಪ್ರತಿಕಾರ ತೀರಿಸಿದ ಚೆನ್ನೈ

Narendra Modi
ದೇಶ57 mins ago

Narendra Modi: ಪ್ರಚಾರದ ಮಧ್ಯೆಯೇ ರಾಮಮಂದಿರಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮೋದಿ

Viral News
ವೈರಲ್ ನ್ಯೂಸ್59 mins ago

Viral News: ಕಾಳಿಂಗ ಸರ್ಪವನ್ನು ಈ ಕುಟುಂಬ ಹೇಗೆ ಪೂಜಿಸುತ್ತಿದೆ ನೋಡಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ1 hour ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ3 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ16 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ6 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

ಟ್ರೆಂಡಿಂಗ್‌