IT Raid: ಚಿನ್ನದ ವ್ಯಾಪಾರಿಗಳಿಗೆ ಐಟಿ ಶಾಕ್‌; ಬೆಳ್ಳಂಬೆಳಗ್ಗೆ ರೇಡ್‌, ಕೋಟಿ ಕೋಟಿ ಹಣ ಜಪ್ತಿ! - Vistara News

ದೇಶ

IT Raid: ಚಿನ್ನದ ವ್ಯಾಪಾರಿಗಳಿಗೆ ಐಟಿ ಶಾಕ್‌; ಬೆಳ್ಳಂಬೆಳಗ್ಗೆ ರೇಡ್‌, ಕೋಟಿ ಕೋಟಿ ಹಣ ಜಪ್ತಿ!

IT Raid: ಐಟಿ ಅಧಿಕಾರಿಗಳು ಚಿನ್ನದ ಮಳಿಗೆಯಲ್ಲಿ ಶೋಧ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಶೋಧ ಕಾರ್ಯದ ವೇಳೆ ಬರೋಬ್ಬರಿ 26 ಕೋಟಿ ರೂ. ನಗದು ಮತ್ತು 90 ಕೋಟಿ ರೂ. ಮೊತ್ತದ ವಸ್ತುಗಳು ಪತ್ತೆ ಆಗಿವೆ. ಇನ್ನು ಈ ನಗದು ಮತ್ತು ಸ್ವತ್ತುಗಳನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದು, ಕೇಸ್‌ ದಾಖಲಿಸಿಕೊಂಡಿದ್ದಾರೆ.

VISTARANEWS.COM


on

IT Raid
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಹಾರಾಷ್ಟ್ರ: ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ(IT Raid) ಅಧಿಕಾರಿಗಳು ನಾಸಿಕ್ ಮೂಲದ ಚಿನ್ನದ ವ್ಯಾಪಾರಿ(Jewellers)ಗಳಿಗೆ ಬಿಸಿ ಮುಟ್ಟಿದ್ದಾರೆ. ಅಕ್ರಮ ಹಣ ವರ್ಗಾವಣೆ ಮತ್ತು ತೆರಿಗೆ ವಂಚನೆ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರದ ನಾಸಿಕ್‌ನ ಸುರಾನಾ ಜ್ಯುವೆಲ್ಲರ್ಸ್‌ ಮೇಲೆ ರೇಡ್‌ ಮಾಡಿದ ಅಧಿಕಾರಿಗಳು ಭಾರೀ ಮೊತ್ತದ ಅಕ್ರಮ ಹಣ ಮತ್ತು ಸಂಪತ್ತನ್ನು ವಶಕ್ಕೆ ಪಡೆದಿದ್ದಾರೆ.

ಅಧಿಕೃತ ಮಾಹಿತಿ ಮೇರೆಗೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಚಿನ್ನದ ಮಳಿಗೆಯಲ್ಲಿ ಶೋಧ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಶೋಧ ಕಾರ್ಯದ ವೇಳೆ ಬರೋಬ್ಬರಿ 26 ಕೋಟಿ ರೂ. ನಗದು ಮತ್ತು 90 ಕೋಟಿ ರೂ. ಮೊತ್ತದ ವಸ್ತುಗಳು ಪತ್ತೆ ಆಗಿವೆ. ಇನ್ನು ಈ ನಗದು ಮತ್ತು ಸ್ವತ್ತುಗಳನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದು, ಕೇಸ್‌ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:Fire Accident: ಗುಜರಾತ್‌ ಅಗ್ನಿ ದುರಂತ; ಸಾವಿನ ಸಂಖ್ಯೆ 32ಕ್ಕೆ ಏರಿಕೆ; SIT ತನಿಖೆಗೆ ಆದೇಶ

ಇನ್ನು ಕೆಲವು ವಾರಗಳ ಹಿಂದೆ ಜಾರ್ಖಂಡ್‌ನಲ್ಲೂ ಇಂತಹದ್ದೇ ಒಂದು ರೇಡ್‌ ನಡೆದಿತ್ತು. ಜಾರಿ ನಿರ್ದೇಶನಾಲಯ (Enforcement Directorate)ದ ಅಧಿಕಾರಿಗಳು ಜಾರ್ಖಂಡ್‌ನ ರಾಜಧಾನಿ ರಾಂಚಿಯ ಅನೇಕ ಸ್ಥಳಗಳಲ್ಲಿ ಸರಣಿ ದಾಳಿ ನಡೆಸಿ ಭರ್ಜರಿ ಬೇಟೆಯಾಡಿದ್ದರು. (ED Raid). ಈ ವೇಳೆ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ, ಕಾಂಗ್ರೆಸ್‌ ಮುಖಂಡ ಅಲಂಗೀರ್ ಆಲಂ (Alamgir Alam) ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ (Sanjiv Lal) ಮನೆಯಲ್ಲಿ ಲೆಕ್ಕವಿಲ್ಲದ 25 ಕೋಟಿ ರೂ.ಗಿಂತ ಅಧಿಕ ಹಣವನ್ನು ವಶಕ್ಕೆ ಪಡೆಯಲಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Eid Prayers: ಬಕ್ರೀದ್‌ ದಿನವೂ ಶ್ರೀನಗರದ ಜಾಮಾ ಮಸೀದಿಯಲ್ಲಿ ನಮಾಜ್‌ಗೆ ಭದ್ರತಾ ಸಿಬ್ಬಂದಿ ನಕಾರ; ಏಕೆ?‌

Eid Prayers: ಜಮ್ಮು-ಕಾಶ್ಮೀರದಲ್ಲಿ 2019ರಿಂದಲೂ ಬಕ್ರೀದ್‌ ಸೇರಿ ಯಾವುದೇ ಹಬ್ಬಗಳ ಸಂದರ್ಭದಲ್ಲಿ ಜಾಮಾ ಮಸೀದಿ ಹಾಗೂ ಈದ್ಗಾ ಮೈದಾನದಲ್ಲಿ ಮುಸ್ಲಿಮರು ನಮಾಜ್‌ ಮಾಡುವುದನ್ನು ನಿಷೇಧಿಸಲಾಗಿದೆ. ಶ್ರೀನಗರದಲ್ಲಿ ಉಗ್ರರ ಉಪಟಳ ಜಾಸ್ತಿ ಇರುವ ಕಾರಣ ಭದ್ರತಾ ದೃಷ್ಟಿಯಿಂದಾಗಿ ಭದ್ರತಾ ಸಿಬ್ಬಂದಿಯು ಸಾವಿರಾರು ಮುಸ್ಲಿಮರು ಬಕ್ರೀದ್‌ ದಿನ ನಮಾಜ್‌ ಮಾಡುವುದನ್ನು ನಿರ್ಬಂಧಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Eid Prayers
Koo

ಶ್ರೀನಗರ: ದೇಶಾದ್ಯಂತ ಮುಸ್ಲಿಮರು ತ್ಯಾಗ, ಬಲಿದಾನದ ಸಂದೇಶ ಸಾರುವ ಬಕ್ರೀದ್‌ (Bakrid 2024) ಸಡಗರ-ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮಸೀದಿಗೆ ತೆರಳಿ, ನಮಾಜ್‌ ಮಾಡುವ ಮೂಲಕ, ತಮ್ಮ ಕೈಲಾದಷ್ಟು ದಾನ-ಧರ್ಮವನ್ನೂ ಮಾಡುವ ಮೂಲಕ ಹಬ್ಬವನ್ನು ಆಚರಿಸುತ್ತಿದ್ದಾರೆ. ಆದರೆ, ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ಜಾಮಾ ಮಸೀದಿಯಲ್ಲಿ (Jama Masjid) ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮರು ನಮಾಜ್‌ (Eid Prayers) ಮಾಡಲು ಭದ್ರತಾ ಸಿಬ್ಬಂದಿಯು ಅವಕಾಶ ಮಾಡಿಕೊಟ್ಟಿಲ್ಲ ಎಂದು ತಿಳಿದುಬಂದಿದೆ.

“ಜಾಮಾ ಮಸೀದಿಯಲ್ಲಿ ಸತತ ಆರನೇ ವರ್ಷವೂ ಮುಸ್ಲಿಮರು ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಭದ್ರತಾ ಸಿಬ್ಬಂದಿಯು ಅವಕಾಶ ಮಾಡಿಕೊಟ್ಟಿಲ್ಲ. ಸೋಮವಾರ (ಜೂನ್‌ 17) ಬೆಳಗ್ಗೆ ಜಾಮಾ ಮಸೀದಿಯಲ್ಲಿ ನಮಾಜ್‌ ಮಾಡಲಾಯಿತು. ಇದಾದ ನಂತರ 9 ಗಂಟೆಗೆ ಈದ್‌ ಪ್ರಾರ್ಥನೆ ಕಾರ್ಯಕ್ರಮ ಇತ್ತು. ಆದರೆ, ಭದ್ರತಾ ಸಿಬ್ಬಂದಿಯು ಮಸೀದಿಯ ಗೇಟ್‌ಗೆ ಬೀಗ ಹಾಕಿ, 9 ಗಂಟೆಯ ಪ್ರಾರ್ಥನೆ ಸಲ್ಲಿಸಲು ಅವಕಾಶವಿಲ್ಲ ಎಂಬುದಾಗಿ ಹೇಳಿದರು” ಎಂದು ಮಸೀದಿಯಲ್ಲಿ ನಮಾಜ್‌ ಪ್ರಕ್ರಿಯೆ ನಡೆಸಿಕೊಡಬೇಕಿದ್ದ ಅಂಜುಮಾನ್‌ ಔಕಾಫ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಬಾರಾಮುಲ್ಲಾದಲ್ಲಿ ಬಕ್ರೀದ್‌ ಆಚರಣೆ

“ಜಾಮಾ ಮಸೀದಿಯಲ್ಲಿ ನಿರಂತರವಾಗಿ ನಮಾಜ್‌ ಮಾಡಲು ನಿರ್ಬಂಧ ವಿಧಿಸಲಾಗುತ್ತಿದೆ. ಬಕ್ರೀದ್‌ನಂತಹ ಸಂದರ್ಭಗಳಲ್ಲಿ ಪ್ರಾರ್ಥನೆ ಸಲ್ಲಿಸುವುದು ಧಾರ್ಮಿಕ ಆಚರಣೆ, ಅಧ್ಯಾತ್ಮಿಕ ಪ್ರತಿಬಿಂಬ ಹಾಗೂ ಸಾಮರಸ್ಯದ ಸಂಕೇತವಾಗಿದೆ. ಹಾಗಾಗಿ, ನಿರಂತರವಾಗಿ ಪ್ರಾರ್ಥನೆಗೆ ನಿರ್ಬಂಧವನ್ನು ವಿಧಿಸುವುದು ಜಮ್ಮು-ಕಾಶ್ಮೀರದಲ್ಲಿ ಎಲ್ಲವೂ ಸುಸೂತ್ರವಾಗಿಲ್ಲ ಎಂಬುದಕ್ಕೆ ಕೈಗನ್ನಡಿಯಾಗಿದೆ. ಪದೇಪದೆ ನಿರ್ಬಂಧಗಳನ್ನು ಹೇರುವುದು, ಜನರ ಆಚರಣೆಗಳಿಗೆ ಅಡ್ಡಿ ಮಾಡುವುದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ 2019ರಿಂದಲೂ ಬಕ್ರೀದ್‌ ಸೇರಿ ಯಾವುದೇ ಹಬ್ಬಗಳ ಸಂದರ್ಭದಲ್ಲಿ ಜಾಮಾ ಮಸೀದಿ ಹಾಗೂ ಈದ್ಗಾ ಮೈದಾನದಲ್ಲಿ ಮುಸ್ಲಿಮರು ನಮಾಜ್‌ ಮಾಡುವುದನ್ನು ನಿಷೇಧಿಸಲಾಗಿದೆ. ಶ್ರೀನಗರದಲ್ಲಿ ಉಗ್ರರ ಉಪಟಳ ಜಾಸ್ತಿ ಇರುವ ಕಾರಣ ಭದ್ರತಾ ದೃಷ್ಟಿಯಿಂದಾಗಿ ಭದ್ರತಾ ಸಿಬ್ಬಂದಿಯು ಸಾವಿರಾರು ಮುಸ್ಲಿಮರು ಬಕ್ರೀದ್‌ ದಿನ ನಮಾಜ್‌ ಮಾಡುವುದನ್ನು ನಿರ್ಬಂಧಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಪ್ರತಿ ವರ್ಷವೂ ನಮಾಜ್‌ಗೆ ತಡೆ ನೀಡುತ್ತಿರುವುದಕ್ಕೆ ಮುಸ್ಲಿಮರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Continue Reading

ಉದ್ಯೋಗ

HPCL Job Interview: ಎಚ್ ಪಿ ಸಿ ಎಲ್ ಸಿಎಂಡಿ ಹುದ್ದೆ ಸಂದರ್ಶನ; ಘಟಾನುಘಟಿ 8 ಅಭ್ಯರ್ಥಿಗಳು ಫೇಲ್!

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ ಸಿಎಂಡಿ ಹುದ್ದೆಗೆ ಸಂದರ್ಶನ ನೀಡಿದ (HPCL Job Interview) ಎಲ್ಲ ಎಂಟು ಅಭ್ಯರ್ಥಿಗಳನ್ನು ಸರ್ಕಾರದ ಪಬ್ಲಿಕ್ ಎಂಟರ್‌ಪ್ರೈಸಸ್ ಸೆಲೆಕ್ಷನ್ ಬೋರ್ಡ್ (ಪಿಇಎಸ್‌ಬಿ) ತಿರಸ್ಕರಿಸಿದೆ. ಜೂನ್ 14ರಂದು ಪಿಇಎಸ್‌ಬಿ ಎಚ್‌ಪಿಸಿಎಲ್ ಮಂಡಳಿಯ ನಿರ್ದೇಶಕರು ಮತ್ತು ಇಂದ್ರಪ್ರಸ್ಥ ಗ್ಯಾಸ್‌ನ ಎಂಡಿ ಸೇರಿ ಎಂಟು ಅಭ್ಯರ್ಥಿಗಳ ಸಂದರ್ಶನ ನಡೆಸಲಾಗಿತ್ತು.

VISTARANEWS.COM


on

By

HPCL Job Interview
Koo

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ (HPCL) ಸಿಎಂಡಿ (CMD) ಹುದ್ದೆಗೆ ಸರ್ಕಾರದ ಪಬ್ಲಿಕ್ ಎಂಟರ್‌ಪ್ರೈಸಸ್ ಸೆಲೆಕ್ಷನ್ ಬೋರ್ಡ್ (PESB) ಸಂದರ್ಶನ (HPCL Job Interview) ನಡೆಸಿದ್ದು, ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸಿದೆ. ಜೂನ್ 14 ರಂದು ಪಿಇಎಸ್‌ಬಿ ಎಚ್‌ಪಿಸಿಎಲ್ ಮಂಡಳಿಯ ನಿರ್ದೇಶಕರು ಮತ್ತು ಇಂದ್ರಪ್ರಸ್ಥ ಗ್ಯಾಸ್‌ನ ಎಂಡಿ ಸೇರಿ ಎಂಟು ಅಭ್ಯರ್ಥಿಗಳ ಸಂದರ್ಶನ ನಡೆಸಿದ್ದರು. ಆದರೆ ಅವರೆಲ್ಲರನ್ನೂ ತಿರಸ್ಕರಿಸಲಾಗಿದೆ.

ಎಚ್‌ಪಿಸಿಎಲ್ ನ ಸಿಎಂಡಿ ಹುದ್ದೆಗೆ ಇದು ಮೂರನೇ ಸಂದರ್ಶನವಾಗಿದ್ದು, ಈವರೆಗೆ ರಾಜ್ಯ ತೈಲ ಸಂಸ್ಥೆಯಲ್ಲಿನ ಈ ಹುದ್ದೆಗೆ ಯಾವುದೇ ಸೂಕ್ತ ಅಭ್ಯರ್ಥಿಯನ್ನು ಮಂಡಳಿಗೆ ಆಯ್ಕೆ ಮಾಡುವುದು ಸಾಧ್ಯವಾಗಲಿಲ್ಲ.

ಎಚ್‌ಪಿಸಿಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಮ್‌ಡಿ) ಹುದ್ದೆಗೆ ಯಾವುದೇ ಅಭ್ಯರ್ಥಿಯನ್ನು ಮಂಡಳಿಯು ಶಿಫಾರಸು ಮಾಡಿಲ್ಲ ಮತ್ತು ಸರ್ಚ್-ಕಮ್-ಸೆಲೆಕ್ಷನ್ ಕಮಿಟಿ (ಎಸ್‌ಸಿಎಸ್‌ಸಿ) ಸೇರಿದಂತೆ ಆಯ್ಕೆಗಾಗಿ ಮುಂದಿನ ಕ್ರಮದ ಸೂಕ್ತ ಕೋರ್ಸ್ ಅನ್ನು ಆಯ್ಕೆ ಮಾಡಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ಸಲಹೆ ನೀಡಿದೆ ಎಂದು ಪಿಇಎಸ್ ಬಿ ಸಮಿತಿಯು ಅಧಿಸೂಚನೆಯಲ್ಲಿ ತಿಳಿಸಿದೆ.

ಎಚ್‌ಪಿಸಿಎಲ್ ನ ಸಿಎಂಡಿ ಹುದ್ದೆಯು 2024ರ ಸೆಪ್ಟೆಂಬರ್ 1ರಂದು ಖಾಲಿಯಾಗಲಿದೆ. ಪ್ರಸ್ತುತ ಪುಷ್ಪ್ ಕುಮಾರ್ ಜೋಶಿ ಅವರು ಈ ಹುದ್ದೆಯಲ್ಲಿದ್ದು, ಅವರು 60 ವರ್ಷಗಳನ್ನು ತಲುಪಿದಾಗ ನಿವೃತ್ತರಾಗಲಿದ್ದಾರೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮತ್ತು ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ಒಎನ್‌ಜಿಸಿ) ನಲ್ಲಿ ಉನ್ನತ ಹುದ್ದೆಗೆ ಸೂಕ್ತವಾದ ಯಾರನ್ನೂ ಪಿಇಎಸ್‌ಬಿ ಈ ಹಿಂದೆಯೂ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಇದು ಐಒಸಿಯಲ್ಲಿ ಅಧಿಕಾರ ವಹಿಸಿಕೊಂಡವರು ನಿವೃತ್ತಿ ವಯಸ್ಸನ್ನು ತಲುಪಿದ ಅನಂತರವೂ ಹೆಚ್ಚುವರಿ ವರ್ಷ ಅಧಿಕಾರದಲ್ಲಿ ಇರಲು ಸಾಧ್ಯವಾಯಿತು ಮತ್ತು ನಿವೃತ್ತ ಕಾರ್ಯನಿರ್ವಾಹಕರಿಗೆ ಒಎನ್ ಜಿಸಿ ಯಲ್ಲಿ ಪ್ರಭಾರ ಅಧಿಕಾರವನ್ನು ನೀಡಲಾಯಿತು.

ಪಿಇಎಸ್‌ಬಿ 2021ರ ಜೂನ್ 3ರಂದು ಭಾರತದ ಅತಿದೊಡ್ಡ ತೈಲ ಮತ್ತು ಅನಿಲ ಉತ್ಪಾದಕ ಒಎನ್ ಜಿಸಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಐಎಎಸ್ ಅಧಿಕಾರಿಗಳು ಸೇರಿದಂತೆ ಒಂಬತ್ತು ಅಭ್ಯರ್ಥಿಗಳನ್ನು ಸಂದರ್ಶಿಸಿತು. ಹಿರಿಯ ಅಧಿಕಾರಿಗಳಾದ ಅವಿನಾಶ್ ಜೋಶಿ, ನೀರಜ್ ವರ್ಮಾ, ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಹಣಕಾಸು ನಿರ್ದೇಶಕಿ ಪೊಮಿಲಾ ಜಸ್ಪಾಲ್ ಮತ್ತು ತಂತ್ರಜ್ಞಾನ ಮತ್ತು ಕ್ಷೇತ್ರ ಸೇವೆಗಳ ಒಎನ್‌ಜಿಸಿ ನಿರ್ದೇಶಕ ಓಂ ಪ್ರಕಾಶ್ ಸಿಂಗ್ ಅವರನ್ನು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದೆ.

ಅನಂತರ ಸಚಿವಾಲಯವು ಆಯ್ಕೆ ಸಮಿತಿಯನ್ನು ರಚಿಸಿತು. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ನಿಂದ 60 ವರ್ಷ ವಯಸ್ಸಿನ ಅನಂತರ ನಿವೃತ್ತರಾದ ಅರುಣ್ ಕುಮಾರ್ ಸಿಂಗ್ ಅವರನ್ನು ಒಎನ್ ಜಿಸಿ ಮುಖ್ಯಸ್ಥರನ್ನಾಗಿ ಹೆಸರಿಸಿತು. ಸಿಂಗ್ ಅವರು ಮೊದಲ ಸ್ಥಾನದಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರಲಿಲ್ಲ. ಆದರೆ 60 ವರ್ಷ ವಯಸ್ಸಿನ ವ್ಯಕ್ತಿಗಳನ್ನು ಪರಿಗಣಿಸಲು ಅರ್ಹತಾ ನಿಯಮವನ್ನು ಬದಲಾಯಿಸಲಾಯಿತು. ಅವರಿಗೆ ಮೂರು ವರ್ಷಗಳ ಅವಧಿಯನ್ನು ನೀಡಲಾಗಿದ್ದು ಅದು ಡಿಸೆಂಬರ್ 2025ರಲ್ಲಿ ಕೊನೆಗೊಳ್ಳಲಿದೆ.

ಐಒಸಿ, ಪಿಇಎಸ್‌ಬಿ ಪ್ರಕರಣದಲ್ಲಿ ಕಳೆದ ವರ್ಷ ಮೇನಲ್ಲಿ ಶ್ರೀಕಾಂತ್ ಮಾಧವ್ ವೈದ್ಯ ಅವರ ಬದಲಿಗಾಗಿ ಯಾವುದೇ ಶಿಫಾರಸು ಮಾಡಲಿಲ್ಲ. ಅವರು ಆಗಸ್ಟ್ 2023 ರಲ್ಲಿ 60 ವರ್ಷ ವಯಸ್ಸಿನ ಅನಂತರ ನಿವೃತ್ತಿ ಹೊಂದಿದ್ದರು. ಸಮಿತಿಯು ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನ (CPCL) ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ಕುಮಾರ್ ಸೇರಿ 10 ಅಭ್ಯರ್ಥಿಗಳನ್ನು ಸಂದರ್ಶಿಸಿತು.

2020ರ ಜುಲೈ 1ರಂದು ಭಾರತದ ಅತಿದೊಡ್ಡ ತೈಲ ಕಂಪೆನಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವೈದ್ಯ ಅವರು ಗುತ್ತಿಗೆ ಆಧಾರದ ಮೇಲೆ ಮರು-ಉದ್ಯೋಗ ದಲ್ಲಿ ತಮ್ಮ ನಿವೃತ್ತಿಯ ದಿನಾಂಕದ ಅನಂತರ 2023ರ ಸೆಪ್ಟೆಂಬರ್ 1ರಿಂದ 202೪ರ ಆಗಸ್ಟ್ ವರೆಗೆ ಜಾರಿಗೆ ಬರುವಂತೆ ಅಧಿಕಾರ ವಹಿಸಿಕೊಂಡರು.

ಈ ತಿಂಗಳು, ತೈಲ ಸಚಿವಾಲಯವು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ನ ಹೊಸ ಅಧ್ಯಕ್ಷರ ಅರ್ಜಿಗಳನ್ನು ಆಹ್ವಾನಿಸಿದೆ. ಪಿಇಎಸ್‌ಬಿ ಅಧ್ಯಕ್ಷರ ನೇತೃತ್ವದ ಮೂವರು ಸದಸ್ಯರ ಹುಡುಕಾಟ-ಕಮ್-ಆಯ್ಕೆ ಸಮಿತಿಯು ಈ ಆಯ್ಕೆಯನ್ನು ಮಾಡುತ್ತದೆ. ಈ ಸಮಿತಿಯು ತೈಲ ಕಾರ್ಯದರ್ಶಿ ಮತ್ತು ಮಾಜಿ ಎಚ್‌ಪಿಸಿಎಲ್ ಅಧ್ಯಕ್ಷ ಎಂ.ಕೆ. ಸುರಾನಾ ಅವರನ್ನು ಸದಸ್ಯರನ್ನಾಗಿ ಒಳಗೊಂಡಿದೆ.

ಜುಲೈ 3ರೊಳಗೆ ನಾಯಕತ್ವದಲ್ಲಿ ಕನಿಷ್ಠ ಐದು ವರ್ಷಗಳ ಅನುಭವ ಹೊಂದಿರುವ ಪ್ರಮುಖ ಸಂಸ್ಥೆಗಳಿಂದ ಸ್ನಾತಕೋತ್ತರ ನಿರ್ವಹಣಾ ಪದವಿಗಳನ್ನು ಹೊಂದಿರುವ ಎಂಜಿನಿಯರ್‌ಗಳು, ಚಾರ್ಟರ್ಡ್ ಅಕೌಂಟೆಂಟ್‌ಗಳು ಮತ್ತು ವೆಚ್ಚ ಲೆಕ್ಕಪರಿಶೋಧಕರಿಂದ ಅರ್ಜಿಗಳನ್ನು ಕೋರಲಾಗಿದೆ. ವಯಸ್ಸಿನ ಅರ್ಹತೆಯ ಕಟ್-ಆಫ್ ಅನ್ನು ಆಂತರಿಕರಿಗೆ 58 ವರ್ಷಗಳಿಗಿಂತ ಹೆಚ್ಚಿಲ್ಲ ಎಂದು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಮತ್ತು ಹೊರಗಿನವರಿಗೆ 57 ವರ್ಷಗಳು, ಜಾಹೀರಾತಿನ ಪ್ರಕಾರ ನಿವೃತ್ತಿ ವಯಸ್ಸು 60 ವರ್ಷಗಳು.

ಸಚಿವಾಲಯವು ಆರಂಭದಲ್ಲಿ 61 ವರ್ಷ ವಯಸ್ಸನ್ನು ತಲುಪದ ಯಾರನ್ನಾದರೂ ಕೆಲಸಕ್ಕೆ ಪರಿಗಣಿಸಲು ಅವಕಾಶ ನೀಡಿತು. ಇದರಿಂದ ವೈದ್ಯ ಅವರು ಕೆಲಸಕ್ಕೆ ಅರ್ಹರಾದರು.


ಪಿಎಸ್‌ಯುಗಳಲ್ಲಿ ಬೋರ್ಡ್ ಮಟ್ಟದ ಹುದ್ದೆಗಳನ್ನು ನೇಮಿಸಿಕೊಳ್ಳಲು ಅಸ್ತಿತ್ವದಲ್ಲಿರುವ ನಿಯಮಗಳು ನಿವೃತ್ತಿಯ ಮೊದಲು ಕನಿಷ್ಠ ಎರಡು ವರ್ಷಗಳ ಸೇವೆಯನ್ನು ಹೊಂದಿರುವ ಆಂತರಿಕ ವ್ಯಕ್ತಿಯ ಉಮೇದುವಾರಿಕೆಯನ್ನು ಪರಿಗಣಿಸಲು ಮತ್ತು ಹೊರಗಿನ ಅಭ್ಯರ್ಥಿಗಳ ಸಂದರ್ಭದಲ್ಲಿ ಮೂರು ವರ್ಷಗಳನ್ನು ಅನುಮತಿಸುತ್ತದೆ.

ಇದನ್ನೂ ಓದಿ: Amazon India: ನೀರು ಕುಡಿಯುವಂತಿಲ್ಲ, ವಾಶ್ ರೂಮ್ ಗೆ ಹೋಗುವಂತಿಲ್ಲ; ಸಿಬ್ಬಂದಿಗೆ ಅಮೆಜಾನ್ ಕಂಪನಿ ತಾಕೀತು!

ಹೆಚ್ ಪಿಸಿಎಲ್ ಉನ್ನತ ಹುದ್ದೆಗೆ ಜೂನ್ 14 ರ ಅಧಿಸೂಚನೆಯಲ್ಲಿ ಪಿಇಎಸ್ ಬಿ , ಹೆಚ್ ಪಿಸಿಎಲ್ ಸಂಸ್ಕರಣಾಗಾರಗಳ ನಿರ್ದೇಶಕ ಶುಣ್ಮುಗವೇಲ್ ಭರತನ್, ಕಂಪೆನಿಯ ನಾಲ್ವರು ಕಾರ್ಯನಿರ್ವಾಹಕ ನಿರ್ದೇಶಕರಾದ ಅನುಜ್ ಕುಮಾರ್ ಜೈನ್, ಸುಬೋಧ್ ಬಾತ್ರಾ, ಕೆ. ವಿನೋದ್, ಸಂದೀಪ್ ಮಹೇಶ್ವರಿ ಹಾಗೂ ಐಒಸಿ, ಗೇಲ್ ಮತ್ತು ಐಜಿಎಲ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಕಮಲ್ ಕಿಶೋರ್ ಚಾಟಿವಾಲ್ ಅವರನ್ನು ಸಂದರ್ಶನ ನಡೆಸಿತ್ತು. ಆದರೆ ಹೆಚ್ ಪಿಸಿಎಲ್ ನ ಉನ್ನತ ಹುದ್ದೆಗೆ ಇವರು ಯಾರೂ ಸೂಕ್ತವಾಗಿಲ್ಲ ಎಂದು ಮಂಡಳಿ ಹೇಳಿದೆ.

Continue Reading

EXPLAINER

Train Accident: ‘ಕವಚ’ ಇಲ್ಲದಿರುವುದೇ ಬಂಗಾಳ ರೈಲು ಅಪಘಾತಕ್ಕೆ ಕಾರಣ; ಹಾಗಾದರೆ ಏನಿದು?

Train Accident: ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಬಳಿ ಸೋಮವಾರ ಕಾಂಚನಜುಂಗಾ ಎಕ್ಸ್​ಪ್ರೆಸ್​ ರೈಲಿಗೆ ಗೂಡ್ಸ್​ ರೈಲು ಡಿಕ್ಕಿ ಹೊಡೆದ ಪರಿಣಾಮ 5 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೀಲ್ದಾಹ್‌ಗೆ ಹೋಗುವ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಹಿಂದಿನಿಂದ ಗೂಡ್ಸ್ ರೈಲು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಈ ಮಾರ್ಗದಲ್ಲಿ ಕವಚ ಸುರಕ್ಷತಾ ವ್ಯವಸ್ಥೆ ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

VISTARANEWS.COM


on

Train Accident
Koo

ಕೋಲ್ಕೊತಾ: ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಬಳಿ ಸೋಮವಾರ ಕಾಂಚನಜುಂಗಾ ಎಕ್ಸ್​ಪ್ರೆಸ್​ (Kanchanjunga Express) ರೈಲಿಗೆ ಗೂಡ್ಸ್​ ರೈಲು ಡಿಕ್ಕಿಯಾಗಿ (Train Accident) 15 ಮಂದಿ ಮೃತಪಟ್ಟಿದ್ದಾರೆ. 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೀಲ್ದಾಹ್‌ಗೆ ಹೋಗುವ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಹಿಂದಿನಿಂದ ಗೂಡ್ಸ್ ರೈಲು ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಅದರಲ್ಲೂ, ಈ ಮಾರ್ಗದಲ್ಲಿ ರೈಲುಗಳ ಸುರಕ್ಷತೆಗಾಗಿ ಅಳವಡಿಸಿಕೊಳ್ಳಲಾಗಿರುವ ಕವಚ (Kavach) ಸುರಕ್ಷಾ ವ್ಯವಸ್ಥೆ ಇಲ್ಲದಿರುವುದೇ ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಹಾಗಾದರೆ, ಏನಿದು ಕವಚ ಸುರಕ್ಷಾ ವ್ಯವಸ್ಥೆ? ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕಿರು ಮಾಹಿತಿ ಇಲ್ಲಿದೆ.

ಏನಿದು ಕವಚ?

ಆತ್ಮನಿರ್ಭರ ಭಾರತದ ಭಾಗವಾಗಿ 2022-23ರಲ್ಲಿ ರೈಲುಗಳ ಸುರಕ್ಷತೆ ಮತ್ತು ಸಾಮರ್ಥ್ಯ ಹೆಚ್ಚಳಕ್ಕಾಗಿ ಸುಮಾರು 2,000 ಕಿ.ಮೀ. ಮಾರ್ಗವನ್ನು ಕವಚ ಸುರಕ್ಷತಾ ವಿಧಾನದ ಅಡಿಯಲ್ಲಿ ತರಲಾಗುವುದು ಎಂದು ಸಚಿವಾಲಯ ಹೇಳಿತ್ತು. ಕವಚ ಎಂಬುದು ಸೇಫ್ಟಿ ಇಂಟೆಗ್ರಿಟಿ ಲೆವೆಲ್ 4 ಮಾನದಂಡಗಳಾಗಿವೆ. ಇದನ್ನು ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್​​ಡಿಎಸ್​​ಒ) ಅಭಿವೃದ್ಧಿಪಡಿಸಿದೆ. ಕವಚ​ ವ್ಯವಸ್ಥೆಯು ರೈಲುಗಳು ಕೆಂಪು ಸಿಗ್ನಲ್​ ದಾಟಿ ಮುಂದಕ್ಕೆ ಹೋಗುವುದನ್ನು ತಡೆಯುತ್ತದೆ. ಒಂದು ವೇಳೆ ದಾಟಿದರೆ ಸ್ವಯಂಚಾಲಿತ ಬ್ರೇಕಿಂಗ್ ವ್ಯವಸ್ಥೆ ಆ್ಯಕ್ವಿವೇಟ್​ ಆಗುತ್ತದೆ. ಹೀಗಾಗಿ ಎರಡು ರೈಲುಗಳ ನಡುವಿನ ಮುಖಾಮುಖಿ ಡಿಕ್ಕಿಯ ಸಂಭವ ಕಡಿಮೆ.

ಕವಚ ಕಾರ್ಯನಿರ್ವಹಿಸುವುದು ಹೇಗೆ?

ಯಾವುದೇ ತುರ್ತು ಸಂದರ್ಭದಲ್ಲಿ ರೈಲು ಅಪಘಾತ ತಡೆಯುವುದೇ ಕವಚದ ಉದ್ದೇಶವಾಗಿದೆ. ರೈಲು ಹಳಿಗಳು, ಸ್ಟೇಷನ್‌ ಯಾರ್ಡ್‌ ಹಾಗೂ ಸಿಗ್ನಲ್‌ಗಳಿಗೆ ಆರ್‌ಎಫ್‌ಐಡಿ (ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್)‌ ಟ್ಯಾಗ್‌ಗಳನ್ನು ಅಳವಡಿಸಲಾಗಿರುತ್ತದೆ. ಇದರಿಂದ ರೈಲುಗಳು ಎದುರು ಬದಿರಾಗಿ ಒಂದೇ ಹಳಿಯ ಮೇಲೆ ಚಲಿಸಿದರೂ ಎರಡೂ ಡಿಕ್ಕಿಯಾಗುವ ಮುನ್ನ ಸ್ವಯಂಚಾಲಿತವಾಗಿಯೇ ರೈಲುಗಳು ಬ್ರೇಕ್‌ ಹಾಕಿಕೊಳ್ಳುತ್ತವೆ. ಲೋಕೊ ಪೈಲಟ್‌ ಬ್ರೇಕ್‌ ಹಾಕುವುದನ್ನು ಮರೆತರೂ, ಸಿಗ್ನಲ್‌ನಿಂದಾಗಿಯೇ ಸ್ವಯಂಚಾಲಿತವಾಗಿ ಬ್ರೇಕ್‌ ಹಾಕಿಕೊಳ್ಳುತ್ತವೆ.

ಅಷ್ಟೇ ಅಲ್ಲ, ಒಂದು ರೈಲಿನ ಹಿಂದೆ ಮತ್ತೊಂದು ರೈಲು ಚಲಿಸುವಾಗ ಹಿಂದಿನ ರೈಲು ನಿಧಾನಗತಿಯಲ್ಲಿ ಸಾಗುವುದು, ರೈಲಿನ ಸಮೀಪ ಹೋದಾಗ ಬ್ರೇಕ್‌ ಹಾಕುವುದು, ಹವಾಮಾನ ವೈಪರೀತ್ಯದಿಂದ ಮಂದ ಬೆಳಕು ಇದ್ದಾಗ ಬ್ರೇಕ್‌ ಹಾಕುವುದು, ಗೇಟ್‌ಗಳು ಅಡ್ಡ ಬಂದಾಗ ಬ್ರೇಕ್‌ ಹಾಕುವುದು ಸೇರಿ ಯಾವುದೇ ತುರ್ತು ಸಂದರ್ಭದಲ್ಲಿ ಲೋಕೊಮೋಟಿವ್‌ ಪೈಲಟ್‌ ಬ್ರೇಕ್‌ ಹಾಕುವುದನ್ನು ಮರೆತರೂ, ಸ್ವಯಂಚಾಲಿತವಾಗಿ ಕವಚ ವ್ಯವಸ್ಥೆಯ ಅಡಿಯಲ್ಲಿ ಬ್ರೇಕ್‌ ಹಾಕಿಕೊಳ್ಳುತ್ತವೆ.

ದೇಶಾದ್ಯಂತ ವಿಸ್ತರಣೆ ಯಾವಾಗ?

ಕವಚ ಸುರಕ್ಷಾ ವಿಧಾನದ ಅಳವಡಿಕೆಯಿಂದ ರೈಲುಗಳ ಅಪಘಾತವು ಗಣನೀಯವಾಗಿ ಕುಸಿದಿದೆ. ಆದರೆ, ಇದುವರೆಗೆ 1,500 ಕಿಲೋಮೀಟರ್‌ ರೈಲು ಮಾರ್ಗಕ್ಕೆ ಮಾತ್ರ ಕವಚ ಅಳವಡಿಸಲಾಗಿದೆ. ಆರಂಭಿಕ ಹಂತದಲ್ಲಿ 2 ಸಾವಿರ ಕಿಲೋಮೀಟರ್‌ ಹಾಗೂ ಹಂತ ಹಂತವಾಗಿ 34 ಸಾವಿರ ಕಿಲೋಮೀಟರ್‌ ಉದ್ದದ ರೈಲು ಮಾರ್ಗಕ್ಕೆ ಕವಚ ಅಳವಡಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಭಾರತೀಯ ರೈಲ್ವೆಯು ಸುಮಾರು 1 ಲಕ್ಷ ಕಿಲೋಮೀಟರ್‌ ಮಾರ್ಗವನ್ನು ಹೊಂದಿರುವ ಕಾರಣ ಎಲ್ಲ ಮಾರ್ಗಗಳಲ್ಲೂ ಕವಚ ಅಳವಡಿಸಲು ಸಮಯ ಬೇಕಾಗುತ್ತದೆ.

ಇದನ್ನೂ ಓದಿ: Train Accident: ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್​ ರೈಲು ಡಿಕ್ಕಿ; ಕನಿಷ್ಠ 15 ಮಂದಿ ಸಾವು

Continue Reading

ದೇಶ

Train Accident: ಕಾಂಚನಜುಂಗಾ ಎಕ್ಸ್​ಪ್ರೆಸ್ ರೈಲು​ ದುರಂತ; ಮೃತರ ಕುಟುಂಬಗಳಿಗೆ ಪರಿಹಾರ ಧನ ಘೋಷಣೆ

Train Accident: ಪಶ್ಚಿಮ ಬಂಗಾಳದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು, ಮೃತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಡಾರ್ಜಿಲಿಂಗ್ ಜಿಲ್ಲೆಯ ಫನ್ಸಿಡೆವಾದ ನ್ಯೂ ಜಲ್ಪೈಗುರಿ ಬಳಿಯ ರಂಗಪಾಣಿ ಎಂಬಲ್ಲಿ ಸೋಮವಾರ ಬೆಳಿಗ್ಗೆ ಕಾಂಚನಜುಂಗಾ ಎಕ್ಸ್​ಪ್ರೆಸ್ ರೈಲಿಗೆ ಗೂಡ್ಸ್​ ರೈಲು ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಕ್ಕೆ 2 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ. ಮಾತ್ರವಲ್ಲ ಗಾಯಗೊಂಡವರಿಗೆ 50 ಸಾವಿರ ರೂ. ಪ್ರಕಟಿಸಿದ್ದಾರೆ.

VISTARANEWS.COM


on

Train Accident
Koo

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು, ಮೃತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಡಾರ್ಜಿಲಿಂಗ್ ಜಿಲ್ಲೆಯ ಫನ್ಸಿಡೆವಾದ ನ್ಯೂ ಜಲ್ಪೈಗುರಿ ಬಳಿಯ ರಂಗಪಾಣಿ ಎಂಬಲ್ಲಿ ಸೋಮವಾರ ಬೆಳಿಗ್ಗೆ ಕಾಂಚನಜುಂಗಾ ಎಕ್ಸ್​ಪ್ರೆಸ್​ (Kanchanjunga Express) ರೈಲಿಗೆ ಗೂಡ್ಸ್​ ರೈಲು ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದೆ. ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಅಗರ್ತಲಾದಿಂದ ಪಶ್ಚಿಮ ಬಂಗಾಳದ ಸೀಲ್ಡಾಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ (Train Accident). ಇದೀಗ ಮೃತರ ಮತ್ತು ಗಾಯಗೊಂಡವರ ಕುಟುಂಬಗಳಿಗೆ ಪರಿಹಾರ ಧನ ಘೋಷಿಸಲಾಗಿದೆ.

ಆಘಾತ ವ್ಯಕ್ತಪಡಿಸಿದ ಮೋದಿ

ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆಘಾತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ʼʼಪಶ್ಚಿಮ ಬಂಗಾಳದಲ್ಲಿ ನಡೆದ ರೈಲು ದುರಂತದ ಸುದ್ದಿ ಕೇಳಿ ಆಘಾತವಾಯಿತು. ಅಪಘಾತದಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ಸಿಗಲಿ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಪರಿಸ್ಥಿತಿ ಬಗ್ಗೆ ಅಧಿಕಾರಿಗಳ ಜತೆ ಮಾತುಕಡೆ ನಡೆಸಿದ್ದೇನೆ. ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಸ್ಥಳ ಪರಿಶೀಲನೆ ನಡೆಸಲಿದ್ದಾರೆʼʼ ಎಂದು ಹೇಳಿದ್ದಾರೆ.

ಪರಿಹಾರ ಧನ ಘೋಷಣೆ

ಇದರ ಜತೆಗೆ ಮೋದಿ ಅವರು ಮೃತರ ಕುಟುಂಬಕ್ಕೆ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಈತನ್ಮಧ್ಯೆ ಡಾರ್ಜಿಲಿಂಗ್‌ಗೆ ತೆರಳುತ್ತಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮೃತರ ಸಂಬಂಧಿಕರಿಗೆ 10 ಲಕ್ಷ ರೂ., ಗಂಭೀರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂ. ಮತ್ತು ಸಣ್ಣ ಪುಟ್ಟ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರವನ್ನು ಪ್ರಕಟಿಸಿದ್ದಾರೆ. ಘಟನೆ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತಿತರರು ಆಘಾತ ವ್ಯಕ್ತಪಡಿಸಿದ್ದಾರೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಮಮತಾ ಬ್ಯಾನರ್ಜಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಾರಣವೇನು?

ಸೀಲ್ಡಾಗೆ ಹೋಗುವ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಹಿಂದಿನಿಂದ ಗೂಡ್ಸ್ ರೈಲು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತ ಹೊಡೆದ ರಭಸಕ್ಕೆ ಕಾಂಚನಜುಂಗಾ ಎಕ್ಸ್‌ಪ್ರೆಸ್‌ನ ಮೂರು ಬೋಗಿಗಳು ಹಳಿ ತಪ್ಪಿವೆ. ದುರಂತ ಯಾಕೆ ಸಂಭವಿಸಿತು ಎನ್ನುವುದನ್ನು ಕಂಡುಕೊಳ್ಳಲು ತನಿಖೆಗೆ ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಗೂಡ್ಸ್‌ ರೈಲಿನ ಲೋಕೋ ಪೈಲಟ್‌ ಮತ್ತು ಕಾಂಚನಜುಂಗಾ ಎಕ್ಸ್‌ಪ್ರೆಸ್‌ನ ಗಾರ್ಡ್‌ ಕೂಡ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗೂಡ್ಸ್ ರೈಲು ಸಿಗ್ನಲ್ ಅನ್ನು ಜಂಪ್‌ ಮಾಡಿ ಕಾಂಚನಜುಂಗಾ ಎಕ್ಸ್‌ಪ್ರೆಸ್‌ನ ಹಿಂಭಾಗದ ಪಾರ್ಸೆಲ್ ಬೋಗಿಗೆ ಡಿಕ್ಕಿ ಹೊಡೆದಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌, ʼʼರಕ್ಷಣಾ ಕಲಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ರೈಲ್ವೆ, ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ತಂಡಗಳು ನೆರವಿಗೆ ಧಾವಿಸಿವೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರಗರ ದಾಖಲಿಸಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು, ಮೇಲ್ವಿಚಾರಣೆ ನಡೆಸುತ್ತಿದ್ದಾರೆʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Train Accident: ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್​ ರೈಲು ಡಿಕ್ಕಿ; ಕನಿಷ್ಠ 15 ಮಂದಿ ಸಾವು

Continue Reading
Advertisement
Dawood Ibrahim
ವಿದೇಶ8 seconds ago

Dawood Ibrahim: ವೃದ್ಧ ಡಾನ್‌ ದಾವೂದ್‌ ಇಬ್ರಾಹಿಂ ಈಗ ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯ ಕೈಗೊಂಬೆ?

Two drown in quarry
ಕರ್ನಾಟಕ1 min ago

Drown in Quarry: ಕ್ವಾರಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರ ಸಾವು

MAHE Manipal 1 Day Treatment Capacity Development Training Program at KMC
ಬೆಂಗಳೂರು12 mins ago

MAHE Manipal: ಕೆಎಂಸಿಯಲ್ಲಿ 1 ದಿನದ ಚಿಕಿತ್ಸಾ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

Job Recruitment
Latest14 mins ago

Job Recruitment: ಬ್ಯಾಂಕ್ ಆಫ್ ಬರೋಡಾದಲ್ಲಿ 627 ಹುದ್ದೆಗಳಿಗೆ ಅರ್ಜಿ ಆಹ್ವಾನ; 55 ಲಕ್ಷದವರೆಗೆ ಸಂಬಳ!

Viral Video
Latest21 mins ago

Viral Video: ಯುಪಿಎಸ್‌ಸಿ ಪರೀಕ್ಷಾ ಕೇಂದ್ರಕ್ಕೆ ನೋ ಎಂಟ್ರಿ; ಗೇಟ್ ಬಳಿ ಮೂರ್ಛೆ ಹೋದ ತಾಯಿ!

Kannada New Movie RAMARASA Hero Introduction By Kiccha Sudeepa
ಸ್ಯಾಂಡಲ್ ವುಡ್27 mins ago

Kannada New Movie: ʻರಾಮರಸ’ಸಿನಿಮಾಗೆ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಹೀರೊ ; ಬೆಂಬಲಿಸಿದ ಸುದೀಪ್!

Eid Prayers
ದೇಶ28 mins ago

Eid Prayers: ಬಕ್ರೀದ್‌ ದಿನವೂ ಶ್ರೀನಗರದ ಜಾಮಾ ಮಸೀದಿಯಲ್ಲಿ ನಮಾಜ್‌ಗೆ ಭದ್ರತಾ ಸಿಬ್ಬಂದಿ ನಕಾರ; ಏಕೆ?‌

Road Accident
ಬೆಳಗಾವಿ30 mins ago

Road Accident : ರಸ್ತೆ ದಾಟುವಾಗ ಹರಿದ ಕಾರು; ಒದ್ದಾಡಿ ಪ್ರಾಣಬಿಟ್ಟ ಬಾಲಕ

HPCL Job Interview
ಉದ್ಯೋಗ35 mins ago

HPCL Job Interview: ಎಚ್ ಪಿ ಸಿ ಎಲ್ ಸಿಎಂಡಿ ಹುದ್ದೆ ಸಂದರ್ಶನ; ಘಟಾನುಘಟಿ 8 ಅಭ್ಯರ್ಥಿಗಳು ಫೇಲ್!

Team India
ಕ್ರೀಡೆ54 mins ago

Team India: ಬಾರ್ಬಡೋಸ್​ನಲ್ಲಿ ಬೀಚ್​ ವಾಲಿಬಾಲ್​ ಆಡಿದ ಟೀಮ್​ ಇಂಡಿಯಾ; ವಿಡಿಯೊ ವೈರಲ್​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು4 hours ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು4 hours ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ22 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ23 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 day ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌