Viral Video: ಯುಪಿಎಸ್‌ಸಿ ಪರೀಕ್ಷಾ ಕೇಂದ್ರಕ್ಕೆ ನೋ ಎಂಟ್ರಿ; ಗೇಟ್ ಬಳಿ ಮೂರ್ಛೆ ಹೋದ ತಾಯಿ! - Vistara News

Latest

Viral Video: ಯುಪಿಎಸ್‌ಸಿ ಪರೀಕ್ಷಾ ಕೇಂದ್ರಕ್ಕೆ ನೋ ಎಂಟ್ರಿ; ಗೇಟ್ ಬಳಿ ಮೂರ್ಛೆ ಹೋದ ತಾಯಿ!

Viral Video: ಎಲ್ಲಾ ಪೋಷಕರಿಗೂ ತಮ್ಮ ಮಕ್ಕಳಿಗೊಂದು ಸರ್ಕಾರಿ ಉದ್ಯೋಗ ಸಿಕ್ಕಿದರೆ ಒಳ್ಳೆಯದು ಎಂಬ ಭಾವನೆ ಇರುತ್ತದೆ.ಇನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಂದೆ-ತಾಯಂದಿರೂ ಸಾಕಷ್ಟು ಶ್ರಮವಹಿಸುತ್ತಾರೆ. ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆ ನಡೆಯುತ್ತಿದ್ದು, ಈ ವೇಳೆ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಯುವತಿಯೊಬ್ಬಳು ಎಕ್ಸಾಂ ಸೆಂಟರ್‌ಗೆ ತಡವಾಗಿ ಬಂದಳು ಎಂಬ ಕಾರಣಕ್ಕೆ ಆಕೆಗೆ ಪರೀಕ್ಷಾ ಹಾಲ್‌ಗೆ ಪ್ರವೇಶಿಸಲು ಪ್ರಾಂಶುಪಾಲರು ನಿರಾಕರಿಸಿದ್ದಾರೆ. ಮಗಳ ಸ್ಥಿತಿ ಕಂಡು ಮನನೊಂದ ತಾಯಿ ಗೇಟ್ ಬಳಿ ಮೂರ್ಛೆ ಹೋದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗುರುಗ್ರಾಮ: ಸರ್ಕಾರಿ ಕೆಲಸಕ್ಕಾಗಿ ಜನರು ಹಾತೊರೆಯುತ್ತಾರೆ. ಸಂಬಳದ ಜೊತೆಗೆ ಅನೇಕ ಸೌಲಭ್ಯಗಳು ಸರ್ಕಾರಿ ಉದ್ಯೋಗಿಗಳಿಗೆ ದೊರೆಯುತ್ತದೆ. ಜತೆಗೆ ಜನಸೇವೆ ಸಲ್ಲಿಸಲೂ ಒಳ್ಳೆಯ ಅವಕಾಶ ಸಿಗುತ್ತದೆ. ಆದರೆ ಸರ್ಕಾರಿ ಉದ್ಯೋಗ ಪಡೆಯಲು ಅದಕ್ಕೆ ಸಂಬಂಧಪಟ್ಟ ಪರೀಕ್ಷೆಗಳನ್ನು ಬರೆಯಲೇಬೇಕು. ಹಾಗಾಗಿ ಇಂದು ಕೂಡ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆ ನಡೆಯಿತು. ಈ ಸಂದರ್ಭದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಯುಪಿಎಸ್‌ಸಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಯುವತಿಯೊಬ್ಬಳು ತಡವಾಗಿ ಬಂದಿದ್ದಾಳೆ ಎಂದು ಆಕೆಗೆ ಪರೀಕ್ಷಾ ಕೊಠಡಿಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು. ಇದರಿಂದ ಆಘಾತಗೊಂಡ ತಾಯಿ ಮೂರ್ಛೆ ಹೋಗಿದ್ದಾರೆ. ಈ ಘಟನೆ ಗುರುಗ್ರಾಮದಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.

ವಿಡಿಯೊದಲ್ಲಿ ಯುವತಿಯ ತಾಯಿ ಪರೀಕ್ಷಾ ಕೇಂದ್ರದ ಗೇಟ್ ಬಳಿ ಮೂರ್ಛೆ ತಪ್ಪಿ ಕೆಳಕ್ಕೆ ಬಿದ್ದಿರುವುದು ಕಂಡುಬಂದಿದೆ. ಅಲ್ಲಿ ಆಕೆಯ ತಂದೆ ಹಾಗೂ ಆಕೆ ತಾಯಿಗೆ ನೀರು ಕುಡಿಸಿ ಸಮಾಧಾನ ಪಡಿಸಿದರು. ಆಕೆಯ ತಂದೆ ಕೋಪದಿಂದ ತನ್ನ ಮಗಳಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಿ ಎಂದು ಕೂಗುತ್ತಿದ್ದರೆ, ಆಕೆ ತಾನು ಮುಂದಿನ ವರ್ಷ ಪರೀಕ್ಷೆ ಬರೆಯುವೆ ಎಂದು ತಂದೆಗೆ ಸಮಾಧಾನ ಹೇಳುತ್ತಿರುವ ವಿಡಿಯೊ ಎಲ್ಲರ ಮನಕಲಕುತ್ತದೆ. ಮಗಳ ಒಂದು ವರ್ಷ ವ್ಯರ್ಥವಾಯಿತು ಎಂಬ ನೋವು ತಂದೆಯದಾದರೆ, ಅದಕ್ಕೆ ಆಕೆ ತಾನು ಇನ್ನೂ ಚಿಕ್ಕವಳು. ನನಗೆ ಅವಕಾಶ ಸಿಗುತ್ತದೆ ಎಂದು ಹೇಳುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ಇದರಲ್ಲಿ ‘ಹೃದಯ ವಿದ್ರಾವಕ ವಿಡಿಯೊ’ ಇಂದು ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆಗೆ ತಮ್ಮ ಮಗಳೊಂದಿಗೆ ಬಂದ ಪೋಷಕರ ಸ್ಥಿತಿ ಎಂದು ಶೀರ್ಷಿಕೆ ಬರೆದು, ತಡವಾಗಿ ಬಂದಿದ್ದರಿಂದ ಅವರ ಮಗಳಿಗೆ ಅವಕಾಶ ನೀಡಲಿಲ್ಲ, ಬೆಳಿಗ್ಗೆ 9.30ಕ್ಕೆ ಪರೀಕ್ಷೆ ಪ್ರಾರಂಭವಾಗುತ್ತದೆ. ಆದರೆ ಅವರು ಬೆಳಿಗ್ಗೆ 9 ಗಂಟೆಗೆ ಗೇಟ್ ಬಳಿ ಇದ್ದರು. ಆದರೆ ಗುರುಗ್ರಾಮದ ಸೆಕ್ಟರ್ 47ರ ಎಸ್ ಡಿ ಆದರ್ಶ ವಿದ್ಯಾಲಯದ ಪ್ರಾಂಶುಪಾಲರು ಅವರನ್ನು ಒಳಗೆ ಬಿಡಲಿಲ್ಲ ಎಂದು ಬರೆದಿದ್ದಾರೆ.

ಈ ವಿಡಿಯೊ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು ಸಿಕ್ಕಾಪಟ್ಟೆ ಕಾಮೆಂಟ್‌ಗಳು ಬಂದಿವೆ. ಕೆಲವರು ಪ್ರಾಂಶುಪಾಲರ ವಿರುದ್ಧ ಕಿಡಿಕಾರಿದ್ದಾರೆ. ಇನ್ನೂ ಕೆಲವರು ಈ ಸ್ಥಿತಿಯಲ್ಲಿ ಮಗಳ ಧೈರ್ಯ ಮತ್ತು ಪೋಷಕರಿಗೆ ಸಮಾಧಾನ ಮಾಡುವ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Yogi Adithyanath: ಎರಡು ವರ್ಷಗಳ ಬಳಿಕ ತಾಯಿಯನ್ನು ಭೇಟಿಯಾದ ಯೋಗಿ ಆದಿತ್ಯನಾಥ್

ಇಂತಹ ಘಟನೆಗಳು ನಮ್ಮ ದೇಶದಲ್ಲಿ ಹಲವು ಕಡೆ ನಡೆಯುತ್ತಿರುತ್ತದೆ. ಎಷ್ಟೋ ಬಡ ಮಕ್ಕಳು ಸರ್ಕಾರಿ ಉದ್ಯೋಗಕ್ಕೆ ಅರ್ಹರಾಗಿದ್ದರೂ ಕೂಡ ಕೆಲವು ಜನರ ಹೀನ ಮನಸ್ಸಿನಿಂದ ಪರೀಕ್ಷೆ ಬರೆಯಲಾಗದೆ ಈ ರೀತಿ ಒದ್ದಾಡುತ್ತಾರೆ. ಇಂತಹ ಕೃತ್ಯ ಇನ್ನು ಮುಂದೆ ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Sexual Assault: ಐಸ್‌ಕ್ರೀಂ ಕೊಳ್ಳಲು ಬಂದ ಬಾಲಕಿಯ ಗುಪ್ತಾಂಗ ಮುಟ್ಟಿ ದೌರ್ಜನ್ಯ; ಮೊಹಮ್ಮದ್ ಖಾನ್ ಬಂಧನ

ಭೋಪಾಲ್ ನಲ್ಲಿ ಐಸ್ ಕ್ರೀಮ್ ಮಾರಾಟಗಾರ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Sexual Assault) ಹಾಕಿದ ವ್ಯಕ್ತಿಯನ್ನು ಮತ್ತು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಐಸ್ ಕ್ರೀಮ್ ಮಾರಾಟಗಾರನನ್ನು ಪೊಲೀಸರು ಬಂಧಿಸಿದ್ದಾರೆ. ಏನಿದು ಪ್ರಕರಣ? ಇಲ್ಲಿದೆ ವಿವರ.

VISTARANEWS.COM


on

By

Sexual Assault
Koo

ಭೋಪಾಲ್: ಐಸ್‌ಕ್ರೀಂ ಮಾರಾಟಗಾರನೊಬ್ಬ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ (Sexual Assault) ನೀಡಿದ ಘಟನೆ ಮಧ್ಯಪ್ರದೇಶದ (madhyapradesh) ಭೋಪಾಲ್‌ನಲ್ಲಿ (bhopal) ನಡೆದಿದ್ದು, ಇದರ ವಿಡಿಯೋ (video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಎರಡು ವಾರಗಳ ಹಿಂದೆ ನಡೆದ ಘಟನೆ ಇದಾಗಿದೆ. ಐಸ್ ಕ್ರೀಮ್ ಮಾರಾಟಗಾರ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವುದು ಕೆಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಐಸ್ ಕ್ರೀಮ್ ಮಾರಾಟಗಾರ ಮೊಹಮ್ಮದ್ ಖಾಲಿದ್ ಖಾನ್ (52) ಎಂಬಾತನನ್ನು ಬಂಧಿಸಲಾಗಿದೆ.

ಪ್ಯಾರೆ ಎಂದು ಕರೆಯಲ್ಪಡುವ ಮೊಹಮ್ಮದ್ ಖಾಲಿದ್ ಖಾನ್ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ನಿವಾಸಿ. ಜಹಾಂಗೀರಾಬಾದ್‌ನಲ್ಲಿ ರಾತ್ರಿ ವ್ಯಕ್ತಿಯೊಬ್ಬ ತನ್ನ ಬಾಲ್ಕನಿಯಲ್ಲಿ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ.

ಖಾಲಿದ್ 11 ವರ್ಷದ ಬಾಲಕಿಯ ಖಾಸಗಿ ಅಂಗಗಳನ್ನು ಸ್ಪರ್ಶಿಸುತ್ತಿರುವುದು ಕಂಡುಬಂದಿದ್ದು, ಬಾಲಕಿ ಐಸ್‌ಕ್ರೀಂ ಕಾರ್ಟ್‌ನಲ್ಲಿ ಐಸ್‌ಕ್ರೀಂ ಆಯ್ಕೆ ಮಾಡಿಕೊಳ್ಳುತ್ತಿದ್ದಳು. ಆರೋಪಿಯು ಬಾಲಕಿಯನ್ನು ಹಿಡಿದಿದ್ದು, ಆಕೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ಬಾಲಕಿ ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.

ಸ್ವಲ್ಪ ಸಮಯದ ಅನಂತರ ಹುಡುಗಿಗೆ ಐಸ್ ಕ್ರೀಂ ಅನ್ನು ಹಸ್ತಾಂತರಿಸುತ್ತಾನೆ. ಈ ವಿಡಿಯೋವನ್ನು ರಮೇಶ್ ಸಾಹು ಎಂಬಾತ ರೆಕಾರ್ಡ್ ಮಾಡಿದ್ದು, ಅದನ್ನು ವಾಟ್ಸಾಪ್ ನಲ್ಲಿ ಶೇರ್ ಮಾಡಿದ್ದಾನೆ. ಇದು ಸಾಕಷ್ಟು ವೈರಲ್ ಆಗಿದೆ.

ಸಂತ್ರಸ್ತೆಯ ತಾಯಿ ತನ್ನ ಮಗಳನ್ನು ಆಕೆಯ ಬಟ್ಟೆ ಮತ್ತು ವಿಡಿಯೋದಲ್ಲಿ ಸ್ವಲ್ಪ ಗೋಚರಿಸುವ ಮುಖದ ಭಾಗದಿಂದ ಗುರುತಿಸಿದ್ದಾರೆ. ಅನಂತರ ಮಹಿಳೆ ಪೊಲೀಸರನ್ನು ಸಂಪರ್ಕಿಸಿ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ.
ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಜಹಾಂಗೀರಾಬಾದ್ ಪೊಲೀಸ್ ಠಾಣೆಯಲ್ಲಿ ಘಟನೆ ವರದಿಯಾಗಿದೆ.

ಜೂನ್ 28ರಂದು ರಾತ್ರಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ತಾಯಿ ಎರಡು ದಿನಗಳ ಅನಂತರ ವಿಡಿಯೋವನ್ನು ನೋಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಆರೋಪಿ ತನ್ನ ಊರಿಗೆ ಪರಾರಿಯಾಗಿದ್ದ ಆರೋಪಿಯನ್ನು ಆತನ ಗ್ರಾಮವಾದ ಕಲ್ಪಿಯಿಂದ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Viral Video: ಬೆಂಗಳೂರಿನ ಹೋಟೆಲ್‌ನಲ್ಲಿ ಫ್ಯಾನ್‌ ಬದಲು ಪುರಾತನ ಕಾಲದ ಬೀಸಣಿಕೆ! ವಿಡಿಯೊ ನೋಡಿ

ಅಪ್ರಾಪ್ತ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ್ದಕ್ಕಾಗಿ ಪೋಲಿಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ ರಮೇಶ್ ಸಾಹು ಅವರನ್ನೂ ಬಂಧಿಸಿದ್ದಾರೆ ಎನ್ನಲಾಗಿದೆ.

Continue Reading

ವಾಣಿಜ್ಯ

Anant Radhika Wedding: ಅನಂತ್ – ರಾಧಿಕಾ ವಿವಾಹದಂತೆ ಅದ್ಧೂರಿಯಾಗಿ ನಡೆದಿತ್ತು ಈ ಐದು ಮದುವೆಗಳು

ಸುಮಾರು 5000- 6000 ಕೋಟಿ ರೂಪಾಯಿ ಖರ್ಚು ಮಾಡಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ (Anant Radhika Wedding) ಅದ್ದೂರಿಯಾಗಿ ನೆರವೇರಿದೆ. ಅಂತೆಯೇ ವಿಶ್ವದ 5 ವಿವಾಹ ಕಾರ್ಯಕ್ರಮಗಳನ್ನು ಅತ್ಯಂತ ದುಬಾರಿ ವಿವಾಹಗಳು ಎಂದೇ ಪರಿಗಣಿಸಲಾಗಿದೆ. ಯಾರ ಮದುವೆ ಎಷ್ಟು ವೆಚ್ಚದಲ್ಲಿ ನಡೆದಿತ್ತು ಎಂಬುದರ ವಿವರ ಇಲ್ಲಿದೆ.

VISTARANEWS.COM


on

By

Anant Radhika Wedding
Koo

ಏಷ್ಯಾದ ಬಿಲಿಯನೇರ್ ಉದ್ಯಮಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹ (Anant Radhika Wedding) ಈಗ ವಿಶ್ವದ ಗಮನ ಸೆಳೆದಿದೆ. ಅಂತೆಯೇ ಈ ಹಿಂದೆ ವಿಶ್ವದ ಗಮನ ಸೆಳೆದ ಐದು ಪ್ರಮುಖ ಅದ್ದೂರಿ ಮದುವೆಗಳು ಯಾರದ್ದು, ಹೇಗಿತ್ತು ಗೊತ್ತೇ?

ಸುಮಾರು 5000- 6000 ಕೋಟಿ ರೂಪಾಯಿ ಖರ್ಚು ಮಾಡಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಭರ್ಜರಿಯಾಗಿ ನೆರವೇರಿದೆ. ಅಂತೆಯೇ ವಿಶ್ವದ 5 ವಿವಾಹ ಕಾರ್ಯಕ್ರಮಗಳನ್ನು ಅತ್ಯಂತ ದುಬಾರಿ ವಿವಾಹಗಳು ಎಂದೇ ಪರಿಗಣಿಸಲಾಗಿದೆ.


1. ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್

1979ರಲ್ಲಿ ರಾಜಕುಮಾರಿ ಸಲಾಮಾ ಅವರನ್ನು ವಿವಾಹವಾದ ದುಬೈನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ತಮ್ಮ ಮದುವೆಗಾಗಿ 137 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 11,44,21,50,950 ರೂಪಾಯಿ ಖರ್ಚು ಮಾಡಿದ್ದರು. ಮದುವೆಯು ಐದು ದಿನಗಳ ಕಾಲ ನಡೆಯಿತು. ಈ ಸಮಾರಂಭದಲ್ಲಿ ವಧುವಿಗೆ ಮದುವೆಯ ಉಡುಗೊರೆಗಳಾಗಿ 20 ಬೆಜೆವೆಲ್ಡ್ ಒಂಟೆಗಳನ್ನು ನೀಡಲಾಯಿತು. ಈ ಮದುವೆಯು ಅತ್ಯಂತ ದುಬಾರಿ ವಿವಾಹಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಪಡೆದಿದೆ.


2. ಮೊನಾಕೊದ ಪ್ರಿನ್ಸ್ ಆಲ್ಬರ್ಟ್ II

ಮೊನಾಕೊದ ಪ್ರಿನ್ಸ್ ಆಲ್ಬರ್ಟ್ II ಮತ್ತು ಚಾರ್ಲೀನ್ ವಿಟ್‌ಸ್ಟಾಕ್ 2011ರಲ್ಲಿ ವಿವಾಹವಾಗಿದ್ದು, ಈ ರಾಜಮನೆತನದ ವಿವಾಹವು ಬಹು ದಿನಗಳ ಆಚರಣೆಗಳನ್ನು ಒಳಗೊಂಡಿತ್ತು. ಇದು ಪ್ರಿನ್ಸ್ ಅರಮನೆಯಲ್ಲಿ ನಡೆದ ಸಮಾರಂಭ. ಮೊನಾಕೊದಲ್ಲಿ ಗಣ್ಯರು ಮತ್ತು ಪ್ರಸಿದ್ಧ ವ್ಯಕ್ತಿಗಳಿಗೆ ಅದ್ದೂರಿ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಈ ಮದುವೆಗಾಗಿ 70 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 5,847,779,000 ರೂ. ಗಳನ್ನು ಖರ್ಚು ಮಾಡಲಾಗಿತ್ತು.


3. ವನಿಶಾ ಮಿತ್ತಲ್

ಉಕ್ಕಿನ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಮಗಳು ವನಿಶಾ ಮಿತ್ತಲ್ ಅವರು ಅಮಿತ್ ಭಾಟಿಯಾ ಅವರೊಂದಿಗೆ
2004ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಐಷಾರಾಮಿ ವಸತಿ ಮತ್ತು ಸಾಂಪ್ರದಾಯಿಕ ಆಚರಣೆಗಳಿಂದ ಗುರುತಿಸಲ್ಪಟ್ಟ ಈ ವಿವಾಹಕ್ಕೆ 66 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 5,512,392,006 ರೂ. ವೆಚ್ಚವಾಗಿತ್ತು.


4. ಪ್ರಿನ್ಸ್ ಚಾರ್ಲ್ಸ್

ಪ್ರಿನ್ಸ್ ಚಾರ್ಲ್ಸ್ ಮತ್ತು ಪ್ರಿನ್ಸೆಸ್ ಡಯಾನಾ 1981ರಲ್ಲಿ ವಿವಾಹವಾಗಿದ್ದು, ಇವರ ವಿವಾಹವು ಅತ್ಯಂತ ಸಾಂಪ್ರದಾಯಿಕ ಮತ್ತು ದುಬಾರಿ ವಿವಾಹಗಳಲ್ಲಿ ಒಂದಾಗಿದೆ. ಸೇಂಟ್ ಪಾಲ್ಸ್ ಕ್ಯಾಥೆಡ್ರಲ್‌ನಲ್ಲಿ ನಡೆದ ಈ ಮದುವೆಗೆ 750 ಮಿಲಿಯನ್ ಜನರು ಸಾಕ್ಷಿಯಾಗಿದ್ದರು. 48 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 4,007,368,656 ರೂಪಾಯಿ ವೆಚ್ಚವಾಗಿದೆ.

ಇದನ್ನೂ ಓದಿ: Anant Radhika Wedding: ಅನಂತ್ ರಾಧಿಕಾ ಮದುವೆಯಲ್ಲಿ 160 ವರ್ಷಗಳ ಹಿಂದಿನ ಸೀರೆ ಧರಿಸಿ ಮಿಂಚಿದ ಅಲಿಯಾ


5. ಪ್ರಿನ್ಸ್ ವಿಲಿಯಂ

ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಮಿಡಲ್‌ಟನ್ 2011ರಲ್ಲಿ ವಿವಾಹವಾಗಿದ್ದು, ಅವರ ಹೆತ್ತವರ ಮದುವೆಗಿಂತ ಕಡಿಮೆ ಅತಿರಂಜಿತವಾಗಿದ್ದರೂ ಕೇಂಬ್ರಿಡ್ಜ್‌ನ ಡ್ಯೂಕ್ ಮತ್ತು ಡಚೆಸ್ ಸಂಪ್ರದಾಯದ ವಿವಾಹಗಳು ಜಾಗತಿಕವಾಗಿ ದೂರದರ್ಶನದಲ್ಲಿ ಪ್ರಸಾರ ಮಾಡಲಾಗಿತ್ತು. ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಅದ್ದೂರಿ ಮೆರವಣಿಗೆ ಮತ್ತು ವಿಶೇಷ ಅತಿಥಿ ಸತ್ಕಾರ ಕಾರ್ಯಕ್ರಮವನ್ನು ಒಳಗೊಂಡಿತ್ತು. 34 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 2,838,056,500 ರೂಪಾಯಿ ಖರ್ಚಾಗಿತ್ತು.

Continue Reading

ಸಿನಿಮಾ

Anant Radhika Wedding: ಅನಂತ್ ರಾಧಿಕಾ ಮದುವೆಯಲ್ಲಿ 160 ವರ್ಷಗಳ ಹಿಂದಿನ ಸೀರೆ ಧರಿಸಿ ಮಿಂಚಿದ ಅಲಿಯಾ

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ (Anant Radhika Wedding) ಬಹುತೇಕ ಎಲ್ಲರೂ ಆಧುನಿಕ ಲೆಹೆಂಗಾವನ್ನು ಧರಿಸಿ ಮಿಂಚಿದ್ದರೆ ಆಲಿಯಾ ಇತಿಹಾಸಕ್ಕೆ ಹಿಂತಿರುಗಿದರು. ಸುಮಾರು 160 ವರ್ಷ ವಯಸ್ಸಿನ ನೇಯ್ದ ಆಶಾವಲಿ ಸೀರೆಯನ್ನು ಅವರು ಧರಿಸಿದ್ದು ಸಂಪೂರ್ಣವಾಗಿ ಎಥ್ನಿಕ್ ಲುಕ್ ಮಿಂಚಿದ್ದರು.

VISTARANEWS.COM


on

By

Anant Radhika Wedding
Koo

ನಾವು ಎಷ್ಟೇ ಆಧುನಿಕತೆಯನ್ನು ಒಪ್ಪಿಕೊಂಡರೂ ಹಿಂದಿನ ಕಾಲದ ಸಂಸ್ಕೃತಿ, ಸಂಭ್ರಮದ ಸೊಬಗಿಗೆ ಸರಿ ಸಾಟಿಯಾಗುವುದು ಯಾವುದೂ ಇಲ್ಲ. ಇದೀಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ (Anant Radhika Wedding) ಎಲ್ಲರ ಗಮನ ಸೆಳೆದಿರುವ ಬಾಲಿವುಡ್ ನಟಿ (bollywood actress) ಅಲಿಯಾ ಭಟ್ (Alia Bhatt) ಧರಿಸಿದ್ದು 160 ವರ್ಷಗಳ ಹಿಂದಿನ ಸೀರೆಯನ್ನು.

alia bhat and ranbir kapoor

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ ಬಹುತೇಕ ಎಲ್ಲರೂ ಆಧುನಿಕ ಲೆಹೆಂಗಾವನ್ನು ಧರಿಸಿ ಮಿಂಚಿದ್ದರೆ ಆಲಿಯಾ ಇತಿಹಾಸಕ್ಕೆ ಹಿಂತಿರುಗಿದರು. ಸುಮಾರು 160 ವರ್ಷ ವಯಸ್ಸಿನ ನೇಯ್ದ ಆಶಾವಲಿ ಸೀರೆಯನ್ನು ಅವರು ಧರಿಸಿದ್ದು ಸಂಪೂರ್ಣವಾಗಿ ಎಥ್ನಿಕ್ ಲುಕ್ ಮಿಂಚಿದ್ದರು. ಕಾರ್ಯಕ್ರಮದಲ್ಲಿ ಆಲಿಯಾ ಭಟ್ ತಮ್ಮ ನಟ ಪತಿ ರಣಬೀರ್ ಕಪೂರ್ ಅವರೊಂದಿಗೆ ಹೆಜ್ಜೆ ಹಾಕಿದರು. ಈ ಸೀರೆಯನ್ನು ಗುಜರಾತ್ ನಲ್ಲಿ ತಯಾರಿಸಲಾಗುತ್ತದೆ. ಸಂಕೀರ್ಣವಾದ ಬಟ್ಟೆಯಲ್ಲಿ ಶುದ್ಧ ರೇಷ್ಮೆ ಮತ್ತು ಝರಿಯನ್ನು ಬಳಸಿ ಮಾಡುವ ಇದು ಆರ್ಕೈವಲ್ ಸೀರೆಯಾಗಿದೆ.

ಆಲಿಯಾ ಭಟ್ ಧರಿಸಿದ್ದ ಸೀರೆಯಲ್ಲಿ ಆರು ಗ್ರಾಂನ ಶುದ್ಧ ಚಿನ್ನವನ್ನು ಬಳಸಲಾಗಿದೆ. ಸ್ಟ್ರಾಪ್‌ಲೆಸ್ ಬ್ಲೌಸ್‌ನೊಂದಿಗೆ ಜೋಡಿಸಲಾದ ಇದು ರಾಣಿ ಗುಲಾಬಿ ಬಣ್ಣವನ್ನು ಹೊಂದಿದೆ. ಭಾರೀ ಆಭರಣ ಮತ್ತು ನಯವಾದ ಕೇಶವಿನ್ಯಾಸದಿಂದ ಈ ಸೀರೆಯಲ್ಲಿ ಅಲಿಯಾ ಕಂಗೊಳಿಸಿದ್ದರು. ಶುದ್ಧ ರೇಷ್ಮೆ ಮತ್ತು ಶೇ. 99ರಷ್ಟು ಶುದ್ಧ ಬೆಳ್ಳಿಯಿಂದ ಮಾಡಿದ ಝರಿ ಬಾರ್ಡರ್ ಅನ್ನು ಇದು ಹೊಂದಿತ್ತು. ವಜ್ರದ ನೆಕ್ಲೇಸ್ ಗೆ ಸೂಕ್ತವಾದ ಕಿವಿಯೋಲೆಗಳು ಮತ್ತು ಮಾಂಗ್ ಟಿಕಾ ಸೇರಿದಂತೆ ಹಲವು ಆಭರಣಗಳನ್ನು ಧರಿಸಿದ್ದ ನಟಿ ಇದರ ಬೆಲೆಯ ಬಗ್ಗೆ ಯಾವುದೇ ಸ್ಪಷ್ಟ ಸೂಚನೆಗಳಿಲ್ಲ.

alia bhat

ಆಶಾವಲಿ ಸೀರೆ

ಆಶಾವಲಿ ಸೀರೆ ಮತ್ತು ದುಪಟ್ಟಾಗಳು ಅಹಮದಾಬಾದ್‌ನಿಂದ ಹುಟ್ಟಿಕೊಂಡ ಸಾಂಪ್ರದಾಯಿಕ ನೇಯ್ಗೆ ಶೈಲಿಯಾಗಿದೆ. 16 ನೇ ಶತಮಾನದಷ್ಟು ಹಿಂದಿನ ಕಾಲದ ಈ ಸೀರೆ ಬಹುಶಃ ಗುಜರಾತಿ ನೇಕಾರರ ವಲಸೆಯ ಮೂಲಕ ಬನಾರಸ್‌ನ ಬ್ರೊಕೇಡ್ ನೇಯ್ಗೆಯ ಮೇಲೆ ಪ್ರಭಾವ ಬೀರಿರಬಹುದು ಎನ್ನಲಾಗಿದೆ. ಆ ಕಾಲದಲ್ಲಿ ಆಶಾವಲಿ ಜವಳಿಗಳು ರಾಜಮನೆತನದ ಮತ್ತು ಶ್ರೀಮಂತರಿಂದ ಒಲವು ಹೊಂದಿದ್ದವು. ಇದನ್ನು ಜಾಮಗಳು, ಪಟ್ಕಾಗಳು, ಒಂಟೆ ಮತ್ತು ಆನೆಗಳಂತಹ ಪ್ರಾಣಿಗಳ ಮೇಲೆ ಮೇಲಾವರಣ ಮತ್ತು ಅಲಂಕಾರಿಕ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ಕೆಲವರು ಆಶಾವಲಿ ನೇಯ್ಗೆಯನ್ನು ಬನಾರಸ್ ಜವಳಿಗಳಿಗೆ ಪೂರ್ವಭಾವಿಯಾಗಿ ಪರಿಗಣಿಸುತ್ತಾರೆ.

ಆಶಾವಲಿ ಜವಳಿಗಳ ವಿಶಿಷ್ಟ ಲಕ್ಷಣಗಳು ಗಡಿ ಮತ್ತು ಪಲ್ಲುಗಳಲ್ಲಿ ಸಂಕೀರ್ಣವಾದ ಎನಾಮೆಲ್ಡ್ ಅಥವಾ ಮೀನಕರಿ ಕೆಲಸವನ್ನು ಇದು ಒಳಗೊಂಡಿವೆ. ಬ್ರೊಕೇಡ್‌ಗಳ ಜೊತೆಗೆ ಅವುಗಳನ್ನು ಪಟೋಲಾ ಅಥವಾ ಟೈ-ಡೈ ತಂತ್ರಗಳಿಂದ ನೇಯಲಾಗುತ್ತದೆ. ಬಾರ್ಡರ್‌ ಮತ್ತು ಪಲ್ಲಸ್‌ಗಳನ್ನು ಇಂಟರ್‌ಲಾಕಿಂಗ್ ತಂತ್ರಗಳನ್ನು ಬಳಸಿಕೊಂಡು ಸಂಕೀರ್ಣವಾಗಿ ನೇಯುವ ಈ ಸೀರೆಗೆ ಬಲುಚಾರಿ ಸೀರೆಗಳಂತೆಯೇ ಬಾದ್‌ಶಾ ಪಲ್ಲು, ಚಂದ್-ತಾರಾ ಮೋಟಿಫ್‌ಗಳು, ಗಿಳಿಗಳು ಮತ್ತು ನವಿಲುಗಳಂತಹ ವಿನ್ಯಾಸಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ: Aishwarya Rai: ಅಂಬಾನಿ ಮದುವೆಯಲ್ಲಿ ಕುಟುಂಬದ ಜತೆ ಪೋಸ್‌ ಕೊಡದ ಐಶ್ವರ್ಯಾ ರೈ; ಡಿವೋರ್ಸ್ ನಿಜವೇ?

ಇದೇ ರೀತಿಯ ವಿನ್ಯಾಸಗಳು ಗುಜರಾತ್‌ನ ಇತರ ಜವಳಿ ಕರಕುಶಲಗಳಾದ ಮೋಚಾ ಕಸೂತಿ, ಬೀಡ್‌ವರ್ಕ್ ಮತ್ತು ಜಾಲಿವರ್ಕ್‌ ಮತ್ತು ಮಹಾರಾಷ್ಟ್ರದ ಪೈಥಾನಿ ಸೀರೆಗಳಲ್ಲಿಯೂ ಕಂಡುಬರುತ್ತವೆ. ವೈವಿಧ್ಯಮಯ ಕೌಶಲಗಳು ಮತ್ತು ಕರಕುಶಲ ಸಂಪ್ರದಾಯಗಳ ಮಿಶ್ರಣವು ಆಶಾವಲಿ ಜವಳಿಗಳ ಬೇಡಿಕೆಯನ್ನು ಹೆಚ್ಚಿಸುತ್ತದೆ.

Continue Reading

ಸಿನಿಮಾ

OTT releases: ಒಟಿಟಿಯಲ್ಲಿ ಈ ವಾರಾಂತ್ಯ ತೆರೆ ಕಾಣಲಿವೆ ಶೋಟೈಮ್, ಕಾಕುಡಾ, ಪಿಲ್‌, ವೈಕಿಂಗ್ಸ್ ವಲ್ಹಾಲಾ!

ಭಯಾನಕ, ಹಾಸ್ಯ, ಥ್ರಿಲ್ಲರ್‌, ಆಕ್ಷನ್‌.. ಹೀಗೆಸಾಕಷ್ಟು ನಿರೀಕ್ಷೆಯ ಹಲವಾರು ಸಿನಿಮಾಗಳು ಈ ವಾರದಲ್ಲಿ ಒಟಿಟಿ ತೆರೆ (OTT releases) ಮೇಲೆ ಬರಲಿದೆ. ಸೋನಾಕ್ಷಿ ಸಿನ್ಹಾ, ರಿತೇಶ್ ದೇಶ್ ಮುಖ್ ಅಭಿನಯದ ಕಾಕುಡ, ಇಮ್ರಾನ್ ಹಶ್ಮಿ, ಮೌನಿ ರಾಯ್ ಅಭಿನಯದ ಶೋ ಟೈಮ್- ಭಾಗ 2
ಸೇರಿದಂತೆ ನಾಲ್ಕು ಬಹು ನಿರೀಕ್ಷಿತ ಚಿತ್ರ ಮತ್ತು ಸರಣಿಗಳು ಈ ವಾರ ಒಟಿಟಿಯಲ್ಲಿ ಭರ್ಜರಿ ಮನೋರಂಜನೆ ಒದಗಿಸಲಿದೆ.

VISTARANEWS.COM


on

By

OTT releases
Koo

ಭಯಾನಕ, ಹಾಸ್ಯ, ಥ್ರಿಲ್ಲರ್‌, ಆಕ್ಷನ್‌.. ಹೀಗೆ ಈ ವಾರದಲ್ಲಿ ಸಾಕಷ್ಟು ನಿರೀಕ್ಷೆಯ ಹಲವಾರು ಸಿನಿಮಾಗಳು ಒಟಿಟಿಯ ತೆರೆ (OTT releases) ಮೇಲೆ ಬರಲಿವೆ. ಹಳೆಯ ಶೋಗಳ ಹೊಸ ಸೀಸನ್‌ಗಳಿಂದ ಹಿಡಿದು ಹೊಚ್ಚಹೊಸ ಚಿತ್ರಗಳು ಪ್ರೇಕ್ಷಕರನ್ನು ರಂಜಿಸಲಿವೆ. ಡಿಸ್ನಿಪ್ಲಸ್ ಹಾಟ್‌ಸ್ಟಾರ್ (disney plus hotstar), ಜಿಯೋ ಸಿನಿಮಾ (jio cinema) , ಝೀ 5 (zee 5), ನೆಟ್ ಫ್ಲಿಕ್ಸ್ ನಲ್ಲಿ (netflix) ತೆರೆ ಕಾಣುವ ಚಿತ್ರಗಳ ಸಂಪೂರ್ಣ ವಿವರ ಇಲ್ಲಿದೆ.

ಶೋ ಟೈಮ್- ಭಾಗ 2

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ತೆರೆ ಕಂಡಿರುವ ಈ ಸರಣಿಯಲ್ಲಿ ಇಮ್ರಾನ್ ಹಶ್ಮಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ರಘು ಖನ್ನಾ ಪಾತ್ರಧಾರಿ ಇಮ್ರಾನ್ ಹಶ್ಮಿ ಅವರ ಮನೆ ಮೇಲೆ ನಡೆಯುವ ದಾಳಿಯಿಂದ ಅವರು ತೀವ್ರ ಹಿನ್ನಡೆಯನ್ನು ಎದುರಿಸಬೇಕಾಗುತ್ತದೆ. ಭವಿಷ್ಯದ ಅವರ ಯೋಜನೆಗಳು ಅಪಾಯಕ್ಕೆ ಸಿಲುಕಿಸುತ್ತದೆ. ಮೌನಿ ರಾಯ್, ಶ್ರಿಯಾ ಸರನ್ , ರಾಜೀವ್ ಖಂಡೇಲ್ವಾಲ್ ಅವರ ಸಂಬಂಧವು ಸವಾಲುಗಳನ್ನು ಎದುರಿಸುವ ಕಥಾ ಹಂದರವನ್ನು ಇದು ಒಳಗೊಂಡಿದೆ.


ಪಿಲ್

ಜಿಯೋ ಸಿನಿಮಾದಲ್ಲಿ ತೆರೆ ಕಂಡಿರುವ ʼಪಿಲ್‌ʼನಲ್ಲಿ ರಿತೇಶ್ ದೇಶ್‌ಮುಖ್ ಅವರು ಡಾ ಪ್ರಕಾಶ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇದು ಫಾರ್ಮಾ ಕಂಪನಿಗಳು, ಮಧ್ಯವರ್ತಿಗಳು ಮತ್ತು ವೈದ್ಯರನ್ನು ಒಳಗೊಂಡಿರುವ ಭ್ರಷ್ಟ ಸಂಬಂಧವನ್ನು ಬಹಿರಂಗಪಡಿಸುತ್ತದೆ. ಸಾಮಾನ್ಯ ವ್ಯಕ್ತಿಯೇ ಇದನ್ನು ತಡೆಯುವ ಭಾರವನ್ನು ಹೊರುತ್ತಾನೆ ಮತ್ತು ಇದರಿಂದ ಅಸಾಧಾರಣ ಸವಾಲುಗಳನ್ನು ಎದುರಿಸುವ ಕಥೆ ಇದಾಗಿದೆ.


ಕಾಕುಡ

ಝೀ 5ನಲ್ಲಿ ಬಿಡುಗಡೆಯಾದ ʼಕಾಕುಡʼ ಉತ್ತರ ಪ್ರದೇಶದ ರಾಥೋಡಿಯಲ್ಲಿ ಚಿತ್ರೀಕರಣಗೊಂಡಿದೆ. ʼಮುಂಜ್ಯಾʼ ಅನಂತರ ಆದಿತ್ಯ ಸರ್ಪೋತದಾರ್ ನಟಿಸಿರುವ ಮತ್ತೊಂದು ಹಾರರ್ ಕಾಮಿಡಿ ಚಿತ್ರ ಇದಾಗಿದೆ. ಕಾಕುಡನ ಕೋಪದಿಂದ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರು ಪ್ರತಿ ದಿನ ಸಂಜೆ 7.15 ಕ್ಕೆ ಮನೆಯ ಹಿಂಬಾಗಿಲನ್ನು ತೆರೆಯಬೇಕು ಎಂದು ನಿರ್ದೇಶಿಸುವ ವಿಶಿಷ್ಟ ಆಚರಣೆಯನ್ನು ಚಿತ್ರವು ಪರಿಶೋಧಿಸುತ್ತದೆ. ಸೋನಾಕ್ಷಿ ಸಿನ್ಹಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ರಿತೇಶ್ ದೇಶಮುಖ್ ಅವರ ವಿಕ್ಟರ್ ಪ್ರೇತ ಬೇಟೆಗಾರ ಪಾತ್ರ ಹಾಸ್ಯದ ಪದರವನ್ನು ಚಿತ್ರದಲ್ಲಿ ಸೇರಿಸಿದೆ.


ಇದನ್ನೂ ಓದಿ: Kung Fu Panda 4 OTT: ಪುಟಾಣಿಗಳ ಫೇವರಿಟ್‌ ʻಕುಂಗ್ ಫು ಪಾಂಡಾ 4 ಸಿನಿಮಾʼ ಒಟಿಟಿಗೆ; ಕನ್ನಡ ಭಾಷೆಯಲ್ಲೂ ಲಭ್ಯ!

ವೈಕಿಂಗ್ಸ್: ವಲ್ಹಲ್ಲಾ ಸರಣಿ- 3

ನೆಟ್‌ಫ್ಲಿಕ್ಸ್‌ನಲ್ಲಿ ತೆರೆ ಕಂಡಿರುವ ಈ ಸರಣಿ ಏಳು ವರ್ಷಗಳ ಅನಂತರ ಬಂದಿದೆ. ಹೊಸ ಸವಾಲುಗಳು ಸಂಕಲ್ಪ ಮತ್ತು ಸ್ನೇಹವನ್ನು ಪರೀಕ್ಷಿಸುವ ಕಥೆಯನ್ನು ಇದು ಹೊಂದಿದೆ. ಫ್ರೆಡಿಸ್ ಎರಿಕ್ಸ್‌ಡೋಟರ್ ಪಾತ್ರದಲ್ಲಿ ನಾಯಕ ಪೇಗನ್ ಜೋಮ್ಸ್‌ಬೋರ್ಗ್‌, ಬ್ರಾಡ್ಲಿ ಫ್ರೀಗಾರ್ಡ್ ಕಿಂಗ್ ಕ್ಯಾನೂಟ್ ಆಗಿ, ಲಾರಾ ಬರ್ಲಿನ್ ರಾಣಿ ಎಮ್ಮಾ ಆಗಿ ಮತ್ತು ಡೇವಿಡ್ ಓಕ್ಸ್ ಅರ್ಲ್ ಗಾಡ್ವಿನ್ ಆಗಿ ಕಾಣಿಸಿಕೊಂಡಿದ್ದಾರೆ.


ಒಟ್ಟಿನಲ್ಲಿ ನಾಲ್ಕು ಬಹು ನಿರೀಕ್ಷಿತ ಚಿತ್ರ ಮತ್ತು ಸರಣಿಗಳು ಈ ವಾರ ಒಟಿಟಿಯಲ್ಲಿ ಭರ್ಜರಿ ಮನೋರಂಜನೆ ಒದಗಿಸಲಿವೆ.

Continue Reading
Advertisement
Car Catches fire
ಕೊಡಗು5 mins ago

Car Catches fire: ಮಡಿಕೇರಿ ಬಳಿ ತಾಂತ್ರಿಕ ದೋಷದಿಂದ ಹೊತ್ತಿ ಉರಿದ ಸ್ವಿಫ್ಟ್‌ ಕಾರು!

Bypoll Results
ದೇಶ21 mins ago

Bypoll Results: ಉಪ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ; 13ರ ಪೈಕಿ 10ರಲ್ಲಿ ಇಂಡಿಯಾ ಒಕ್ಕೂಟಕ್ಕೆ ಜಯ!

MS Dhoni
ಪ್ರಮುಖ ಸುದ್ದಿ22 mins ago

MS Dhoni : ಅಂಬಾನಿ ಪುತ್ರನ ಮದುವೆಯಲ್ಲಿ ಬಿಂದಾಸ್​ ​ ಡಾನ್ಸ್ ಮಾಡಿದ ಮಹೇಂದ್ರ ಸಿಂಗ್ ಧೋನಿ

CM Siddaramaiah
ಕರ್ನಾಟಕ39 mins ago

CM Siddaramaiah: ಕೆಪಿಸಿಸಿ ಕಚೇರಿ ಸ್ವಚ್ಛತಾ ಸಿಬ್ಬಂದಿಗೆ ಮನೆ ನೀಡಲು ಸಿಎಂ ಸೂಚನೆ

Israel Hamas War
ವಿದೇಶ47 mins ago

Israel Hamas War: ಗಾಜಾ ಮೇಲೆ ಇಸ್ರೇಲ್‌ ದಾಳಿ; ಹಮಾಸ್‌ ‘ಮಿಲಿಟರಿ ಚೀಫ್’ ಸೇರಿ 71 ಮಂದಿಯ ಹತ್ಯೆ

karnataka Weather Forecast
ಮಳೆ54 mins ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

Healthy Food For Dengue
ಫ್ಯಾಷನ್57 mins ago

Healthy Food For Dengue: ಈ ಆಹಾರಗಳನ್ನು ತಿನ್ನಿ; ಡೆಂಗ್ಯೂಗೆ ಡೋಂಟ್ ಕೇರ್ ಅನ್ನಿ

radioactive material
ದೇಶ1 hour ago

Radioactive Material: ಅಪಾಯಕಾರಿ ರಾಸಾಯನಿಕ ವಸ್ತು ತುಂಬಿದ್ದ ಬಾಕ್ಸ್‌ಗಳು ಪತ್ತೆ; ಐವರು ಅರೆಸ್ಟ್‌

Ambani Wedding Fashion
ಫ್ಯಾಷನ್2 hours ago

Ambani Wedding Fashion: ಅನಂತ್ ಅಂಬಾನಿ ಶೆರ್ವಾನಿ ಬೆಲೆಯೇ 214 ಕೋಟಿ ರೂ! ಹೇಗಿತ್ತು ನೋಡಿ ಅಂಬಾನಿ ಜೋಡಿಯ ವೆಡ್ಡಿಂಗ್ ಫ್ಯಾಷನ್!

Bagalkot news
ಕರ್ನಾಟಕ2 hours ago

Bagalkot News: ಭಕ್ತರಿಗೆ ಭಂಡಾರ ಹಚ್ಚಿ ಕೊಡಲಿ ಏಟು ನೀಡೋ ಪೂಜಾರಿ; ಮೌಢ್ಯ ನಿಷೇಧ ಕಾಯ್ದೆಯಡಿ ಬಂಧನ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ54 mins ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ6 hours ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ7 hours ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ4 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ4 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ5 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ5 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ5 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

ಟ್ರೆಂಡಿಂಗ್‌