ಭಾರತದ ಸ್ವಾತಂತ್ರ್ಯ ದಿನ ಗೂಗಲ್‌ನಲ್ಲಿ ಕಾಣಿಸಿಕೊಂಡ ಗಾಳಿಪಟದ ಡೂಡಲ್ ಅರ್ಥವೇನು? - Vistara News

ಸ್ವಾತಂತ್ರ್ಯ ಅಮೃತ ಮಹೋತ್ಸವ

ಭಾರತದ ಸ್ವಾತಂತ್ರ್ಯ ದಿನ ಗೂಗಲ್‌ನಲ್ಲಿ ಕಾಣಿಸಿಕೊಂಡ ಗಾಳಿಪಟದ ಡೂಡಲ್ ಅರ್ಥವೇನು?

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಗೂಗಲ್‌ ಬಳಸಿಸುವ ಡೂಡಲ್‌ನಲ್ಲಿ ಗಾಳಿಪಟಗಳಿವೆ. ಈ ಚಿತ್ರ ಬಿಡಿಸಿದ ಕಲಾವಿದೆ ಇದರ ಬಗ್ಗೆ ಏನು ಹೇಳುತ್ತಾರೆ?

VISTARANEWS.COM


on

kites
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದಿನ ಬೆಳಗಾದರೆ, ಹಾಸಿಗೆಯಿಂದೇಳುವ ಹೊತ್ತಿಗೇ ಅನಾಯಾಸವಾಗಿ ಕೈ ಮೊಬೈಲು ಹುಡುಕುತ್ತದೆ. ಮುದುಕರಿಂದ ಮಕ್ಕಳಾದಿಯಾಗಿ ಅವರವರ ಆಸಕ್ತಿ ಅಗತ್ಯಗಳಿಗನುಗುಣವಾಗಿ ದಿನದಲ್ಲಿ ಏನಿಲ್ಲವೆಂದರೂ ಹಲವಾರು ಬಾರಿ ಏನಾದರೊಂದು ವಿಷಯಕ್ಕೆ ನಮ್ಮ ಬೆರಳುಗಳು ಗೂಗಲ್‌ ಹುಡುಕುತ್ತವೆ. ಆಗ ನಮ್ಮ ಕುತೂಹಲಕ್ಕೆ ಮೊದಲು ಕಾಣುವುದೇ ಡೂಡಲ್.‌ ಗೂಗಲ್‌ ಸರ್ಚ್‌ ಬಾರಿನ ಮೇಲೆ ಡೂಡಲ್‌ ಚಿತ್ರಗಳ ಮೂಲಕ ದೇಶ, ಅಂತಾರಾಷ್ಟ್ರೀಯ ಪ್ರಾಮುಖ್ಯತೆಗಳ್ನು ಕಲಾತ್ಮಕವಾಗಿ, ಕ್ರಿಯಾಶೀಲವಾಗಿ ನಮ್ಮ ಮುಂದೆ ತೆರೆದಿಟ್ಟು, ʻಅರೆ, ಇಂದಿನ ವಿಶೇಷ ಏನು?ʼ ಎಂದು ನಮ್ಮ ಕಣ್ಣು ಆ ದಿನದ ಪ್ರಾಮುಖ್ಯತೆಯನ್ನು ಹುಡುಕುವಂತೆ ಮಾಡುವ ರೇಖಾಚಿತ್ರ ʻಡೂಡಲ್‌ʼ ಎಲ್ಲರಿಗೂ ಪ್ರಿಯ.

ದೇಶ ಸ್ವತಂತ್ರವಾಗಿ ಅಮೃತ ಮಹೋತ್ಸವದ ಹೊಸ್ತಿಲಲ್ಲಿ ನಿಂತಾಗ ಗೂಗಲ್‌ ಡೂಡಲ್‌ ಮೂಲಕ ಹೇಗೆ ತೋರಿಸಿರಬಹುದು ಎಂಬ ಕುತೂಹಲ ಡೂಡಲ್‌ ಅನ್ನು ಸೂಕ್ಷ್ಮವಾಗಿ ಗಮನಿಸಿಕೊಂಡು ಬಂದಿರುವ ಎಲ್ಲರಿಗೂ ಇದ್ದೇ ಇರುತ್ತದೆ. ಅಂತೆಯೇ ಇಂದು ಗೂಗಲ್‌ನಲ್ಲಿ ಭಾರತದ ಸ್ವಾತಂತ್ರ್ಯದ ಅಮೃತಮಹೋತ್ಸವವೇ ಹೈಲೈಟ್‌ ಆಗಿದೆ. ೭೫ ವರ್ಷಗಳನ್ನು ಪೂರೈಸಿದ ಹೊಸ್ತಿಲಲ್ಲಿ ನಿಂತು ಸ್ವಾತಂತ್ರ್ಯದ ಸವಿ ಅನುಭವಿಸುತ್ತಿರುವ ದೇಶವೊಂದು ಡೂಡಲ್‌ನಲ್ಲಿ ವರ್ಣಮಯವಾಗಿ ಕಂಡಿದೆ.

ಈ ಡೂಡಲ್‌ ತನ್ನ ಚಿತ್ರದ ಮೂಲಕ ಸಾಕಷ್ಟು ವಿಚಾರಗಳನ್ನು ಸೂಕ್ಷ್ಮವಾಗಿ ದಾಟಿಸಿದೆ. ಬಣ್ಣ ಬಣ್ಣದ ಗಾಳಿಪಟಗಳು, ಗಾಳಿಪಟ ಮಾಡಲು ಕುಳಿತ ಮಹಿಳೆ, ೭೫ ಎಂದು ಬರೆದ ಗಾಳಿಪಟ ಹಾರಿಸುತ್ತಿರುವ ಮಕ್ಕಳು ಈ ಡೂಡಲ್‌ನಲ್ಲಿವೆ. ಗಾಳಿಪಟಗಳೆಂಬ ಸಾಂಸ್ಕೃತಿಕ ಪರಂಪರೆಯನ್ನು ದೇಶ ೭೫ರ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಇನ್ನಷ್ಟು ಮತ್ತಷ್ಟು ಮೇಲಕ್ಕೇರುತ್ತಿರುವುದನ್ನು ಸಾಂಕೇತಿಕವಾಗಿ ಡೂಡಲ್‌ ಮೂಲಕ ಹೇಳಲಾಗಿದೆ. ಈ ಬಾರಿ ಈ ಡೂಡಲ್‌ ವಿನ್ಯಾಸಗೊಳಿಸಿದವರು ಕೇರಳದ ಆರ್ಟಿಸ್ಟ್‌ ನೀತಿ.

ನೀತಿ ಅವರು ಹೇಳುವಂತೆ, ಗಾಳಿಪಟ ಎನ್ನುವ ಕಲೆಗೆ ಬಹಳ ಪುರಾತನ ಕಾಲದಿಂದಲೂ ಸಾಂಸ್ಕೃತಿಕ ಮಹತ್ವವಿದೆ. ಇದು ಕೇವಲ ಮಕ್ಕಳ ಆಟವಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಗಾಳಿಪಟವನ್ನು ಸ್ವಾತಂತ್ರ್ಯ ಹೋರಾಟದಲ್ಲೂ ಹಲವು ಮಾದರಿಗಳಲ್ಲಿ ಬಳಸಲಾಗಿತ್ತು. ಗಾಳಿಪಟಗಳ ಮೂಲಕ ಸ್ವಾತಂತ್ರ್ಯ ರಾಟ ಸಂಬಂಧೀ ಘೋಷವಾಕ್ಯಗಳನ್ನು ಬರೆದು ಹಾರಿಸಿ ಬಿಡಲಾಗುತ್ತಿತ್ತು. ಆ ಮೂಲಕ ದೇಶದ ಜನರ ಮನೆಮನಗಳಲ್ಲಿ ದೇಶಪ್ರೇಮದ ಕೆಚ್ಚು ಹೆಚ್ಚುವಲ್ಲಿ ಗಾಳಿಪಟಗಳ ಕಾಣಿಕೆಯೂ ಇದೆ. ಹಾಗಾಗಿ ಗಾಳಿಪಟವನ್ನು ನನ್ನ ಡೂಡಲ್‌ನಲ್ಲಿ ಬಳಸಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಅಮೃತ ನೆನಪು-75 | ಸ್ವಾತಂತ್ರ್ಯ ಹೋರಾಟದ ಜ್ವಾಲೆಯಲ್ಲಿ ಹವಿಸ್ಸಾದವರು ಇವರು!

೭೫ ವರ್ಷ ಪೂರ್ಣಗೊಳಿಸಿ ೭೬ಕ್ಕೆ ಬಂದು ನಿಂತಿದ್ದೇವೆ. ಈ ಸಂದರ್ಭ ತ್ರಿವರ್ಣಗಳ ಗಾಳಿಪಟಗಳ ಮೂಲಕ ನಾನು ಇಲ್ಲಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನ ಕಾಣಿಕೆಯನ್ನೂ ನೀಡಿದ, ಮನಮನಗಳನ್ನು ಸಾಂಸ್ಕೃತಿಕವಾಗಿ ಬೆಸೆಯುವ ಗಾಳಿಪಟಗಳನ್ನು ಮುಖ್ಯವಾಗಿ ತೆಗೆದುಕೊಂಡು ಸಾಂಸ್ಕೃತಿಕವಾಗಿ ಭವ್ಯ ಪರಂಪರೆಯಿರುವ ದೇಶಕ್ಕೆ ನಮನ ಸಲ್ಲಿಸಲು ಪ್ರಯತ್ನಿಸಿದ್ದೇನೆ. ಎಲ್ಲರಿಗೂ ಇಷ್ಟವಾಗಿರಬಹುದು ಎಂದು ನಂಬಿದ್ದೇನೆ ಎಂದಿದ್ದಾರೆ.

ಈ ಸಾರಿಯ ಉತ್ಸವಕ್ಕೆ ಹೆಸರೇ ಆಜಾದೀ ಕಾ ಅಮೃತ್‌ಮಹೋತ್ಸವ. ಹೆಸರಿಗೆ ತಕ್ಕಂತೆ ಸ್ವತಂತ್ರವಾಗಿ ನಾವು ಹಂಗು, ಬಂಧನಗಳನ್ನು ಮೀರಿ ಏರಬೇಕಾದ ಎತ್ತರ, ವಿಸ್ತರಿಕೊಳ್ಳಬೇಕಾದ ಮಿತಿಗಳು ಎಲ್ಲವನ್ನೂ ಈ ಗಾಳಿಪಟಗಳ ಹಾರಾಟವೇ ಧ್ವನಿಸುತ್ತದೆ. ಗಾಳಿಪಟ ಎಂದರೆ ಪ್ರಗತಿ. ದೇಶವಾಗಿ ನಾವು ೭೫ ವರ್ಷಗಳಲ್ಲಿ ಸಾಧಿಸಿದ ಪ್ರಗತಿ ಹಾಗೂ ಇನ್ನೂ ನಾವು ಸಾಗಬೇಕಾದ ಹಾದಿ ಎರಡನ್ನೂ ಗಾಳಿಪಟ ಸೂಚ್ಯವಾಗಿ ಹೇಳುತ್ತದೆ ಎಂದು ನೀತಿ ಹೇಳಿದ್ದಾರೆ.

ನನಗೆ ಬಾಲ್ಯದಲ್ಲಿ ಸ್ವಾತಂತ್ರ್ಯ ದಿನದಂದು ಗಾಳಿಪಟ ಹಾರಿಸಿದ ನೆನಪುಗಳಿವೆ. ಸ್ವಾತಂತ್ರ್ಯೋತ್ಸವ ಎಂದರೆ ಗಾಳಿಪಟದ ಹಾರಾಟ ಅದರ ಭಾಗ. ಹೀಗಾಗಿ, ಸಾಂಕೇತಿಕವಾಗಿ ಗಾಳಿಪಟದ ಪ್ರಾಮುಖ್ಯತೆ ನನಗೆ ಹೆಚ್ಚು ಹತ್ತಿರವಾಯಿತು ಎಂದು ಅವರು ಗಾಳಿಪಟವನ್ನೇ ಮುಖ್ಯವಾಗಿ ಬಳಸಿದ್ದರ ಬಗೆಗೆ ವಿವರಿಸಿದ್ದಾರೆ. ತನ್ನ ಡೂಡಲ್‌ನಲ್ಲಿ ಬಳಸಿದ ಸೂರ್ಯ, ಬಹುಮಹಡಿ ಕಟ್ಟಡಗಳ ಹಿನ್ನೆಲೆಯೂ ಕೂಡಾ ಕಟ್ಟಡಗಳ ಮಿತಿಯನ್ನೂ ದಾಟಿ ಸೂರ್ಯನೆತ್ತರಕ್ಕೆ ಹಾರಬೇಕೆನ್ನುವುದೇ ಆಗಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ | ಸ್ವಾತಂತ್ರ್ಯ ಸೇನಾನಿಗಳ ರುಧಿರಾಭಿಷೇಕ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Independence Day 2024: ಬಲಿಷ್ಠ ಭಾರತೀಯ ಸೇನೆ ಎದುರು ಯಾವ ಶತ್ರುವೂ ನಿಲ್ಲಲಾರ: ಕರ್ನಲ್‌ ವೆಂಕಟೇಶ್‌ ನಾಯಕ್

Independence Day 2024: ಬೆಂಗಳೂರು ನಗರದಲ್ಲಿ ಸುದಯ ಫೌಂಡೇಶನ್‌ನಿಂದ ಹಮ್ಮಿಕೊಳ್ಳಲಾಗಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಲ್‌ ವೆಂಕಟೇಶ್‌ ನಾಯಕ್‌ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಭಾರತೀಯ ಸೇನೆ ಸಾಕಷ್ಟು ಬಲಿಷ್ಠವಾಗಿದೆ ಹಾಗೆಯೇ ಅತ್ಯಾಧುನಿಕವಾಗಿದೆ. ಎಂತಹ ಶತ್ರುಗಳ ದಾಳಿಯನ್ನು ಕೂಡ ಹಿಮ್ಮೆಟ್ಟಿಸಬಲ್ಲುದು ಎಂದು ಅವರು ತಿಳಿಸಿದರು.

VISTARANEWS.COM


on

Independence Day 2024
Koo

ಬೆಂಗಳೂರು: ಭಾರತೀಯ ಸೇನೆ ಸಾಕಷ್ಟು ಬಲಿಷ್ಠವಾಗಿದೆ (Independence Day 2024) ಹಾಗೆಯೇ ಅತ್ಯಾಧುನಿಕವಾಗಿದೆ. ಎಂತಹ ಶತ್ರುಗಳ ದಾಳಿಯನ್ನು ಕೂಡ ಹಿಮ್ಮೆಟ್ಟಿಸಬಲ್ಲುದು ಎಂದು ಕರ್ನಲ್‌ ವೆಂಕಟೇಶ್‌ ನಾಯಕ್‌ ಹೇಳಿದರು.

ನಗರದಲ್ಲಿ ಸುದಯ ಫೌಂಡೇಶನ್‌ ಆಯೋಜಿಸಿದ್ದ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತ ಸ್ವತಂತ್ರ್ಯವಾದ ನಂತರ ಅನೇಕ ಸಂಘರ್ಷಗಳನ್ನು ದಾಟಿ ಬಂದಿದ್ದರ ಕುರಿತು ಇತಿಹಾಸ ಮೆಲುಕು ಹಾಕಿದರು. ಪಾಕಿಸ್ತಾನದೊಂದಿಗೆ ಮೊದಲ ಯುದ್ಧದಿಂದ ಪ್ರಾರಂಭಿಸಿ ಇತ್ತೀಚಿಗಿನ ಗ್ಯಾಲ್ವಾನ್‌ ಕಣಿವೆಯಲ್ಲಿನ ಘರ್ಷಣೆವರೆಗಿನ ಸಂಗತಿಗಳನ್ನು ವಿವರವಾಗಿ ಹಂಚಿಕೊಂಡರು.

33 ವರ್ಷಗಳ ತಮ್ಮ ಸೇವೆಯ ಅನುಭವಗಳನ್ನು ವಿವರಿಸುವುದರ ಜತೆಗೆ ಅಂದಿಗೂ ಇಂದಿಗೂ ಭಾರತೀಯ ಸೇನೆ ಅದೆಷ್ಟು ಬಲಿಷ್ಠ ಮತ್ತು ಆಧುನಿಕವಾಗಿದೆ ಎಂಬುದನ್ನು ಅವರು ತಿಳಿಸಿದರು.

ಇದನ್ನೂ ಓದಿ: Independence Day 2024: ಗ್ಯಾರಂಟಿ ಯೋಜನೆಗಳಿಂದ 1.2 ಕೋಟಿ ಜನ ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ: ಹೆಬ್ಬಾಳಕರ್

ಈ ವೇಳೆ ಮೀಡಿಯಾ ಕನೆಕ್ಟ್‌ ಹಾಗೂ ಸುದಯ ಫೌಂಡೇಷನ್‌ ಸಂಸ್ಥಾಪಕಿ ದಿವ್ಯಾ ರಂಗೇನಹಳ್ಳಿ ಮಾತನಾಡಿ, ಇಂದಿನ ಪೀಳಿಗೆಗೆ ಸ್ವಾತಂತ್ರ್ಯದ ಮಹತ್ವವನ್ನು ತಿಳಿಸಿಕೊಡುವುದು ಅಗತ್ಯವಾಗಿದೆ. ಅದೆಷ್ಟೋ ಬಲಿದಾನಗಳ ನಂತರ ಇಂದು ನಾವು ಸ್ವತಂತ್ರರಾಗಿದ್ದೇವೆ. ಅವರೆಲ್ಲರನ್ನು ನಾವು ಸ್ಮರಿಸುವುದರ ಜತೆಗೆ ಸ್ವಾತಂತ್ರ್ಯದ ಮಹತ್ವವನ್ನು ಸಾರೋಣ ಎಂದು ಹೇಳಿದರು.

ಇದನ್ನೂ ಓದಿ: Job Alert: ಹೆಸ್ಕಾಂನ 338 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

Continue Reading

ಬೆಂಗಳೂರು

Independence Day 2024: ಬೆಂಗಳೂರಿನಲ್ಲಿ ಎನ್‌ಸಿಸಿ ತಂಡದಿಂದ ತಿರಂಗಾ ರ‍್ಯಾಲಿ

Independence Day 2024: ಬೆಂಗಳೂರಿನ ನಂ. 2 ಕರ್ನಾಟಕ ಏರ್ (ಟೆಕ್ನಿಕಲ್) ಸ್ಕ್ವಾಡ್ರನ್ ಎನ್‌ಸಿಸಿ ಯೂನಿಟ್ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಗರದಲ್ಲಿ ತಿರಂಗಾ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ನಂ. 2 ಕರ್ನಾಟಕ ಏರ್ (ಟೆಕ್ನಿಕಲ್) ಸ್ಕ್ವಾಡ್ರನ್ ಎನ್‌ಸಿಸಿ ಯೂನಿಟ್‌ನ ಸೀನಿಯರ್ ಕೆಡೆಟ್‌ಗಳು ಹಾಗೂ ಏರ್‌ಫೋರ್ಸ್ ಸಿಬ್ಬಂದಿಯಿಂದ ಯುನಿಟ್‌ನ ಕಛೇರಿ ಯುವಿಸಿಇ ಕ್ಯಾಂಪಸ್, ಕೆ.ಆರ್. ಸರ್ಕಲ್‌ನಿಂದ ವಿಧಾನಸೌಧದವರೆಗೂ ತಿರಂಗಾ ರ‍್ಯಾಲಿ ಜರುಗಿತು.

VISTARANEWS.COM


on

Independence Day 2024
Koo

ಬೆಂಗಳೂರು: ಬೆಂಗಳೂರಿನ ನಂ. 2 ಕರ್ನಾಟಕ ಏರ್ (ಟೆಕ್ನಿಕಲ್) ಸ್ಕ್ವಾಡ್ರನ್ ಎನ್‌ಸಿಸಿ ಯೂನಿಟ್ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ (Independence Day 2024) ಅಂಗವಾಗಿ ನಗರದಲ್ಲಿ ತಿರಂಗಾ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.

ನಂ. 2 ಕರ್ನಾಟಕ ಏರ್ (ಟೆಕ್ನಿಕಲ್) ಸ್ಕ್ವಾಡ್ರನ್ ಎನ್‌ಸಿಸಿ ಯೂನಿಟ್‌ನ ಸೀನಿಯರ್ ಕೆಡೆಟ್‌ಗಳು ಹಾಗೂ ಏರ್‌ಫೋರ್ಸ್ ಸಿಬ್ಬಂದಿಯಿಂದ ಯುನಿಟ್‌ನ ಕಛೇರಿ ಯುವಿಸಿಇ ಕ್ಯಾಂಪಸ್, ಕೆ.ಆರ್. ಸರ್ಕಲ್‌ನಿಂದ ವಿಧಾನಸೌಧದವರೆಗೂ ಜರುಗಿತು.

ಇದನ್ನೂ ಓದಿ: Independence Day 2024: ಗ್ಯಾರಂಟಿ ಯೋಜನೆಗಳಿಂದ 1.2 ಕೋಟಿ ಜನ ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ: ಹೆಬ್ಬಾಳಕರ್

ಭಾರತವು ಸ್ವಾತಂತ್ರ್ಯ ಪಡೆದು 77 ವಸಂತಗಳನ್ನು ಪೂರೈಸಿದ ಈ ಸಂದರ್ಭದಲ್ಲಿ ಯುನಿಟ್‌ನ ವತಿಯಿಂದ ಪ್ರಧಾನಮಂತ್ರಿಯವರ ಒಂದು ಕೆಡೆಟ್ ಒಂದು ಗಿಡ ಎಂಬ ಧ್ಯೇಯ ವಾಕ್ಯದೊಂದಿಗೆ ಸಮಾಜದಲ್ಲಿ ಪರಿಸರ ಕಾಳಜಿಯನ್ನು ಹೆಚ್ಚಿಸುವ ಪ್ರಯುಕ್ತ ವಿವಿಧ ಶಾಲೆಗಳ ಎನ್‌ಸಿಸಿ ಕೆಡೆಟ್‌ಗಳು ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಪರಿಸರ ಜಾಗೃತಿ ಮೂಡಿಸಲಾಯಿತು. ಯುನಿಟ್‌ನ ಹಲವು ಶಾಲೆಗಳು ಭಾಗವಹಿಸಿ ಸಾವಿರಾರು ಗಿಡಗಳನ್ನು ನೆಟ್ಟು, ಸಮಾಜದಲ್ಲಿ ಪರಿಸರ ಅರಿವನ್ನು ಮೂಡಿಸಲಾಯಿತು.

ಇದನ್ನೂ ಓದಿ: Job Alert: ಹೆಸ್ಕಾಂನ 338 ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಸಂದರ್ಭದಲ್ಲಿ ನಂ. 2 ಕರ್ನಾಟಕ ಏರ್ (ಟೆಕ್ನಿಕಲ್) ಸ್ಕ್ವಾಡ್ರನ್ ಎನ್‌ಸಿಸಿ ಯೂನಿಟ್‌ನ ಕಮಾಂಡಿಂಗ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ರಾಜೇಶ್ ಚಂದ್ರ ಹಾಗೂ ಇತರರು ಉಪಸ್ಥಿತರಿದ್ದರು.

Continue Reading

ಕರ್ನಾಟಕ

Independence Day 2024: ಹಾಸನದಲ್ಲಿ 2500 ಅಡಿ ಉದ್ದದ ತ್ರಿವರ್ಣ ಧ್ವಜ ಪ್ರದರ್ಶನ

Independence Day 2024: ಹಾಸನದಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಆಯೋಜಿಸಿದ್ದ ಕಾರ್ಯಕ್ರಮಲ್ಲಿ ಬೃಹತ್ ಧ್ವಜ ಹಿಡಿದು 3000 ಸಾವಿರ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗಿದರು.

VISTARANEWS.COM


on

Independence Day 2024
Koo

ಹಾಸನ: 78ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಹಾಸನದಲ್ಲಿ 2500 ಅಡಿ ಉದ್ದ ಧ್ವಜ ಪ್ರದರ್ಶನ ಮಾಡಿರುವುದು ಗಮನಸೆಳೆಯಿತು. ಜಿಲ್ಲಾಡಳಿತ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಆಯೋಜಿಸಿದ್ದ ಕಾರ್ಯಕ್ರಮಲ್ಲಿ ಬೃಹತ್ ಧ್ವಜ ಹಿಡಿದು 3000 ಸಾವಿರ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗಿದರು.

ಹಾಸನ ನಗರದ ಪ್ರಮುಖ ರಸ್ತೆಗಳಲ್ಲಿ ಬಾವುಟ ಹಿಡಿದು ವಿದ್ಯಾರ್ಥಿಗಳು ಸಾಗಿದರು. ಡಿಸಿ ಕಚೇರಿ ಮುಂಭಾಗದಿಂದ ಎನ್‌.ಆರ್‌.ವೃತ್ತ, ಹೇಮಾವತಿ ಪ್ರತಿಮೆ ಮೂಲಕ ಜಿಲ್ಲಾ ಕ್ರೀಡಾಂಗಣದವರೆಗೂ ಧ್ವಜ ಹಿಡಿದು ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಸಾಗಿದರು.

ಇದನ್ನೂ ಓದಿ | Independence Day 2024: ಗ್ಯಾರಂಟಿ ಯೋಜನೆಗಳಿಂದ 1.2 ಕೋಟಿ ಜನ ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ: ಹೆಬ್ಬಾಳಕರ್

ಚಿಕ್ಕಬಳ್ಳಾಪುರ, ರಾಯಚೂರಿನಲ್ಲಿ ಧ್ವಜಾರೋಹಣ ವೇಳೆ ಕುಸಿದು ಬಿದ್ದ ಮಕ್ಕಳು, ಪೊಲೀಸರು

independence day 2024

ಚಿಕ್ಕಬಳ್ಳಾಪುರ/ರಾಯಚೂರು: 78ರ ಸ್ವಾತಂತ್ರ್ಯೋತ್ಸವ (Independence Day 2024) ದಿನದ ಧ್ವಜಾರೋಹಣದ ವೇಳೆ ವಿಪರೀತ ಬಿಸಿಲಿನ ತಾಪಕ್ಕೆ ಮಕ್ಕಳು, ಪೊಲೀಸರು ನಿತ್ರಾಣವಾಗಿ ಕುಸಿದು ಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ನಗರದ ಸರ್‌. ಎಂ. ವಿ ಕ್ರೀಡಾಂಗಣದಲ್ಲಿ ಸಚಿವ ಡಾ ಎಂ ಸಿ ಸುಧಾಕರ್ ಭಾಷಣದ ವೇಳೆ ಪೊಲೀಸರು ಮತ್ತು ಮಕ್ಕಳು (Independence Day 2024) ಕುಸಿದು ಬಿದ್ದಿದ್ದಾರೆ.

ಸಚಿವ ಡಾ ಎಂ ಸಿ ಸುಧಾಕರ್ ಸ್ವಾತಂತ್ರ್ಯ ದಿನಾಚರಣೆ ಕುರಿತು ಭಾಷಣ ಮಾಡುತ್ತಿದ್ದರು. ಈ ವೇಳೆ ತುಂಬ ಹೊತ್ತು ಬಿಸಿಲಿನಲ್ಲೇ ನಿಂತಿದ್ದ ಮಕ್ಕಳು ಸುಸ್ತಾಗಿ ಕುಸಿದು ಬಿದ್ದಿದ್ದಾರೆ. ಕುಸಿದು ಬಿದ್ದ ಮಕ್ಕಳನ್ನು ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಮಹಿಳಾ ತುಕಡಿಯ ನೇತೃತ್ವ ವಹಿಸಿದ್ದ ಪಿಎಸ್ಐ ನಾಗಮ್ಮ ಅವರು ವಿಪರೀತ ಬಿಸಿಲಿನ ತಾಪಕ್ಕೆ ನಿತ್ರಾಣವಾಗಿ ಬಿದ್ದರು. ಸ್ಟೇಡಿಯಂನಲ್ಲಿ ನಿಂತಿದ್ದಾಗ ಕುಸಿದು ಬಿದ್ದಿದ್ದಾರೆ. ತಕ್ಷಣ ಓಡಿಹೋಗಿ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ರಾಯಚೂರಿನಲ್ಲೂ ಕುಸಿದು ಬಿದ್ದ ಮಕ್ಕಳು

ರಾಯಚೂರಿನಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಕಾರ್ಯಕ್ರಮದ ವೇಳೆ ಬಿಸಿಲಿನ ತಾಪಕ್ಕೆ ಮಕ್ಕಳಿಬ್ಬರು ಕುಸಿದು ಬಿದ್ದಿದ್ದರು. ಕೂಡಲೇ ಇಬ್ಬರು ಮಕ್ಕಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಯಿತು. ರಾಯಚೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ | Independence Day 2024: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮೆಚ್ಚುಗೆ

ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಸಮ್ಮುಖದಲ್ಲಿ ಶಾಲಾ ಮಕ್ಕಳಿಗೆ ಪ್ರಶಸ್ತಿ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವಾಗ ಬಿಸಿಲಿನ ತಾಪಕ್ಕೆ ಮಕ್ಕಳು ಸುಸ್ತಾಗಿ ಕುಸಿದು ಬಿದ್ದಿದ್ದಾರೆ. ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗಿದೆ.

Continue Reading

ಕರ್ನಾಟಕ

Independence Day 2024: ನಾಡಿನೆಲ್ಲೆಡೆ 78ನೇ ಸ್ವಾತಂತ್ರ್ಯ ದಿನಾಚರಣೆ; ಸಂಭ್ರಮದ ಕ್ಷಣಗಳು ಇಲ್ಲಿವೆ

Independence Day 2024: ದೇಶದಾದ್ಯಂತ ಗುರುವಾರ 78ನೇ ಸ್ವಾತಂತ್ರ್ಯ ದಿನ ಆಚರಣೆ ಮಾಡಲಾಗಿದೆ. ಅದೇ ರೀತಿ ಕರ್ನಾಟಕದ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಸಂಘ-ಸಂಸ್ಥೆಗಳಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಗೀತೆ ಹಾಡುವ ಮೂಲಕ ಸ್ವಾತಂತ್ರ್ಯದ ಹಬ್ಬ ಆಚರಿಸಲಾಗಿದೆ.

VISTARANEWS.COM


on

Independence Day 2024
ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಧ್ವಜಾರೋಹಣ ನೆರವೇರಿಸಿದರು.
Koo

ಬೆಂಗಳೂರು: ರಾಜ್ಯಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು (Independence Day 2024) ಗುರುವಾರ ಸಂಭ್ರಮದಿಂದ ಆಚರಿಸಲಾಗಿದೆ. ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಸಂಘ-ಸಂಸ್ಥೆಗಳಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಗೀತೆ ಹಾಡುವ ಮೂಲಕ ಸ್ವಾತಂತ್ರ್ಯದ ಹಬ್ಬ ಆಚರಿಸಲಾಗಿದೆ. ಅಲ್ಲದೇ ದೇಶದ ಸ್ವಾತಂತ್ಯಕ್ಕಾಗಿ ಹೋರಾಡಿದ ಮಹಾನ್‌ ನಾಯಕರನ್ನು ಸ್ಮರಿಸುವ ಮೂಲಕ ಗೌರವ ಅರ್ಪಿಸಲಾಗಿದೆ.

ಶಾಲಾ-ಕಾಲೇಜುಗಳಲ್ಲಿ ಮಕ್ಕಳು ದೇಶಭಕ್ತಿ ಗೀತೆಗಳನ್ನು ಹಾಡಿ, ಸ್ವಾತಂತ್ರ್ಯ ಯೋಧರ ಕೊಡುಗೆಗಳನ್ನು ಸ್ಮರಿಸಿದರು. ಇನ್ನು ವಿದ್ಯಾರ್ಥಿಗಳು ಮಹಾತ್ಮ ಗಾಂಧಿ, ಸುಭಾಷ್‌ ಚಂದ್ರಬೋಸ್‌, ಭಗತ್‌ ಸಿಂಗ್‌, ಡಾ.ಬಿ.ಆರ್‌.ಅಂಬೇಡ್ಕರ್‌, ಜವಾಹರ್‌ಲಾಲ್‌ ನೆಹರು, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತಿತರ ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣ ಧರಿಸಿ ಗಮನ ಸೆಳೆದರು. ಮೆರವಣಿಗೆ ನಡೆಸಿ, ಸಿಹಿ ಹಂಚುವ ಮೂಲಕ ಸ್ವಾತಂತ್ರ್ಯೋತ್ಸವ ಆಚರಿಸಲಾಗಿದೆ. ಇನ್ನು ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಿದ್ದಾರೆ.

ದುಬೈನಲ್ಲೂ ಸ್ವಾತಂತ್ರ್ಯ ಹಬ್ಬದ ಸಂಭ್ರಮ

ದುಬೈನಲ್ಲೂ ಭಾರತೀಯರಿಂದ ಸ್ವಾತಂತ್ರ್ಯ ದಿನ ಆಚರಣೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೂಲದ ಫರ್ವೆಜ್ ಹಾಗೂ ಕುಟುಂಬದಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಗಿದೆ.

ಧಾರವಾಡದ ಆರ್.ಎನ್. ಶೆಟ್ಟಿ ಮೈದಾನದಲ್ಲಿ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಧ್ವಜಾರೋಹಣ ನೆರವೇರಿಸಿದರು.

ಇದನ್ನೂ ಓದಿ | ಭೂಕುಸಿತ ಸಂಭವಿಸಬಹುದಾದ 1,351 ಗ್ರಾಮಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ; ಸ್ವಾತಂತ್ರೋತ್ಸವ ಭಾಷಣದಲ್ಲಿ ಸಿದ್ದರಾಮಯ್ಯ

ಚಿತ್ರದುರ್ಗದ ಜಿಲ್ಲಾ ಕ್ರೀಡಾಂಗಣದಲ್ಲಿ ಉಸ್ತುವಾರಿ ಸಚಿವ ಡಿ.ಸುಧಾಕರ್ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳ 30 ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ಸಚಿವ ಮಂಕಾಳು ವೈದ್ಯ ಅವರು ಮಹಾತ್ಮ ಗಾಂಧಿ, ಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಧ್ವಜಾರೋಹಣ ನೆರವೇರಿಸಿದರು.
ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಧ್ವಜಾರೋಹಣ ನೆರವೇರಿಸಿದರು.
ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಶರಣ ಬಸಪ್ಪಗೌಡ ದರ್ಶನಾಪುರ ಧ್ವಜಾರೋಹಣ ನೆರವೇರಿಸಿದರು.
ಕೋಲಾರ ನಗರದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರು ರಾಷ್ಟ್ರ ಧ್ವಜಾರೋಹಣ ಮಾಡಿದರು.
ಚಾಮರಾಜನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಧ್ವಜಾರೋಹಣ ನೆರವೇರಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ವತಿಯಿಂದ ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂಸದ ಡಾ.ಸುಧಾಕರ್‌, ಸಚಿವ ಕೆ.ಎಚ್‌.ಮುನಿಯಪ್ಪ ಭಾಗಿಯಾಗಿದ್ದರು.

ಇದನ್ನೂ ಓದಿ | Independence Day 2024: ಹೊಸ ದಾಖಲೆ ಸೃಷ್ಟಿಸಿದೆ ಕೆಂಪುಕೋಟೆಯಲ್ಲಿನ ಮೋದಿ ಭಾಷಣದ ಅವಧಿ!

ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಶಿವಾನಂದ ಪಾಟೀಲ್‌ ಧ್ವಜಾರೋಹಣ ನೆರವೇರಿಸಿದರು.
Continue Reading
Advertisement
Kodava Family Hockey Tournament Website Launched
ಕೊಡಗು1 ತಿಂಗಳು ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು1 ತಿಂಗಳು ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ1 ತಿಂಗಳು ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ1 ತಿಂಗಳು ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

Bengaluru airport
ಬೆಂಗಳೂರು1 ತಿಂಗಳು ago

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುತ್ತಾ ಕಾಲಹರಣ ಮಾಡ್ಬೇಡಿ

dina bhavishya read your daily horoscope predictions for november 4 2024
ಭವಿಷ್ಯ2 ತಿಂಗಳುಗಳು ago

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

galipata neetu
ಕಿರುತೆರೆ1 ವರ್ಷ ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ1 ವರ್ಷ ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ1 ವರ್ಷ ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ3 ತಿಂಗಳುಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್4 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್4 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ4 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ5 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ5 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ5 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು5 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ5 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌