ಅಮೇಜಾನ್‌, ಫ್ಲಿಪ್‌ಕಾರ್ಟ್‌ ʼಅಂಗಡಿʼ ಬಂದ್‌ ಮಾಡಲಿದೆಯೇ ONDC? - Vistara News

ವಾಣಿಜ್ಯ

ಅಮೇಜಾನ್‌, ಫ್ಲಿಪ್‌ಕಾರ್ಟ್‌ ʼಅಂಗಡಿʼ ಬಂದ್‌ ಮಾಡಲಿದೆಯೇ ONDC?

ಫ್ಲಿಪ್‌ಕಾರ್ಟ್‌ ಹಾಗೂ ಅಮೇಜಾನ್‌ ಮೂಲಕ ವಸ್ತುಗಳನ್ನು ಖರೀದಿಸಲು ಆ ಸಂಸ್ಥೆಗಳ ಮೊಬೈಲ್‌ ಆಪ್‌ ಬಳಕೆ ಮಾಡಬೇಕು. ಆದರೆ ONDCಯಲ್ಲಿ ಅದರ ಅವಶ್ಯಕತೆ ಇರುವುದಿಲ್ಲ.

VISTARANEWS.COM


on

@PiyushGoyal: ಬೆಂಗಳೂರಿನಲ್ಲಿ ONDC ಅಳವಡಿಸಿಕೊಂಡಿರುವ ಕಿರಾಣಿ ಅಂಗಡಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಯುಪಿಐ(UPI) ಮೂಲಕ ಆನ್‌ಲೈನ್‌ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಕೇಂದ್ರ ಸರ್ಕಾರ ಇದೀಗ ವಿಶ್ವದ ಇ ಕಾಮರ್ಸ್‌ ದಿಗ್ಗಜ ಸಂಸ್ಥೆಗಳಾದ ಅಮೇಜಾನ್‌ (Amazon) ಹಾಗೂ ಫ್ಲಿಪ್‌ಕಾರ್ಟ್‌(Flipkart) ಎದುರಾಳಿಯಾಗಬಲ್ಲ ಸಂಸ್ಥೆಯನ್ನು ಸ್ಥಾಪಿಸಿದೆ.

ಆನ್‌ಲೈನ್‌ ನೆಟ್‌ವರ್ಕ್‌ ಫಾರ್‌ ಡಿಜಿಟಲ್‌ ಕಾಮರ್ಸ್‌(ONDC) ಈಗಾಗಲೆ ಬೆಂಗಳೂರು ಸೇರಿ ದೇಶದ ಐದು ನಗರಗಳಿಗೆ ಲಗ್ಗೆ ಇಟ್ಟಿದ್ದು, ನಿರೀಕ್ಷೆಯಂತೆಯೇ ಸಫಲವಾದರೆ ನಮ್ಮ ನೆರೆಹೊರೆ ಕಿರಾಣಿ ಅಂಗಡಿಗಳು ಆನ್‌ಲೈನ್‌ ಮೂಲಕ ಆರ್ಡರ್‌ ಪಡೆದು ವಹಿವಾಟು ನಡೆಸುತ್ತವೆ.

ಭಾರತದಲ್ಲಿ ಚಿಲ್ಲರೆ ಮಾರಾಟ ಉದ್ಯಮ ಬಹುದೊಡ್ಡದು. 2020ರಲ್ಲಿ ಪ್ರತಿ ವರ್ಷ 88 ಸಾವಿರ ಕೋಡಿ ಅಮೆರಿಕನ್‌ ಡಾಲರ್‌ನಷ್ಟಿದ್ದ ಚಿಲ್ಲರೆ ಮಾರುಕಟ್ಟೆ ವಹಿವಾಟು ವಾರ್ಷಿಕ 15% ಮೀರಿ ಏರಿಕೆ ಕಾಣುತ್ತಿದೆ. 2026ರ ವೇಳೆಗೆ ಈ ಮಾರುಕಟ್ಟೆ ದ್ವಿಗುಣವಾಗುವ, ಅಂದರೆ 1.7 ಲಕ್ಷ ಕೋಟಿ ಅಮೆರಿಕನ್‌ ಡಾಲರ್‌ನಷ್ಟಾಗುವ ಅಗಾಧ ಅವಕಾಶಗಳಿವೆ. ಈಗ ಸಾಮಾನ್ಯರ ಕಣ್ಣಿನಲ್ಲಿ ದೈತ್ಯ ಸಂಸ್ಥೆಗಳು ಎಂದು ಕಾಣುವ ಅಮೇಜಾನ್‌, ಫ್ಲಿಪ್‌ಕಾರ್ಟ್‌ ಸೇರಿ ಇನ್ನೂ ಹತ್ತಾರು ಸಂಸ್ಥೆಗಳು ಚಿಲ್ಲರೆ ಮಾರುಕಟ್ಟೆಯನ್ನು ಸಂಘಟಿತಗೊಳಿಸುತ್ತಿವೆ. ಇಷ್ಟೆಲ್ಲ ಸರ್ಕಸ್‌ ನಂತರವೂ ಈ ಎಲ್ಲ ಸಂಸ್ಥೆಗಳು ಭಾರತದ ಚಿಲ್ಲರೆ ಮಾರುಕಟ್ಟೆಯ 12% ಪಾಲನ್ನು ಮಾತ್ರ ಹೊಂದಲು ಸಾಧ್ಯವಾಗಿದೆ. ಅಂದರೆ ಇನ್ನೂ 80%ಕ್ಕಿಂತ ಹೆಚ್ಚು ಅಸಂಘಟಿತವಾಗಿರುವ ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್ನೂ ಹತ್ತಾರು ಕಂಪನಿಗಳಿಗೆ ಅವಕಾಶವಂತೂ ಇದೆ.

ಕೆಲವೇ ಕಂಪನಿಗಳ ಹಿಡಿತದಲ್ಲಿ ಈ ಚಿಲ್ಲರೆ ಮಾರುಟ್ಟೆ ಇರುವುದು ವಾಣಿಜ್ಯ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂಬ ಅಭಿಪ್ರಾಯವಿದೆ. ಬದಲಾದ ತಂತ್ರಜ್ಞಾನವನ್ನು ಭಾರತೀಯರು ಉತ್ಸಾಹದಿಂದ ಸ್ವಾಗತಿಸುತ್ತಿದ್ದಾರೆ. ನೋಟು ಅಮಾನ್ಯೀಕರಣದ ನಂತರ ತಂತ್ರಜ್ಞಾನ ಅಳವಡಿಕೆಗೆ ಸಾಕಷ್ಟು ವೇಗ ಸಿಕ್ಕಿದೆ. ಇದೇ ವೇಗವನ್ನು ಇ ಕಾಮರ್ಸ್‌ ಚಿಲ್ಲರೆ ಮಾರುಕಟ್ಟೆಯಲ್ಲಿ ಬಳಸಿಕೊಂಡು ಸ್ಥಳೀಯ ಕಿರಾಣಿ ಅಂಗಡಿಗಳೂ ಅಮೇಜಾನ್‌, ಫ್ಲಿಪ್‌ಕಾರ್ಟ್‌ನಂತೆ ಆನ್‌ಲೈನ್‌ ವಹಿವಾಟು ನಡೆಸುವಂತಾಗಬೇಕು ಎನ್ನುವುದು ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಇದೀಗ ಜಾರಿಗೆ ತಂದಿರುವ ಒಎನ್‌ಡಿಸಿ ಉದ್ದೇಶ.

ಇದನ್ನೂ ಓದಿ | Explainer: ಭಾರತೀಯರ ಫೇವರಿಟ್‌ ಆಗುವತ್ತ ಯುಎಇ, ಏನಿದರ ವಿಶೇಷ?

ಐದು ನಗರಗಳಲ್ಲಿ ಒಎನ್‌ಡಿಸಿ

ಫ್ಲಿಪ್‌ಕಾರ್ಟ್‌ ಹಾಗೂ ಅಮೇಜಾನ್‌ ಮೂಲಕ ವಸ್ತುಗಳನ್ನು ಖರೀದಿಸಲು ಆ ಸಂಸ್ಥೆಗಳ ಮೊಬೈಲ್‌ ಆಪ್‌ ಬಳಕೆ ಮಾಡಬೇಕು. ಆದರೆ ಇದೀಗ ಕೇಂದ್ರ ಸರ್ಕಾರ ರೂಪಿಸಿರುವ ಒಎನ್‌ಡಿಸಿ ಬಳಕೆ ಮಾಆಡಲು ಯಾವುದೇ ಒಂದು ಸಂಸ್ಥೆಯ ಆಪ್‌ ಅವಶ್ಯಕತೆ ಇಲ್ಲ. ಯುಪಿಐಮೂಲಕ ಯಾವುದೇ ಬ್ಯಾಂಕ್‌ನಿಂದ ಯಾವುದೇ ಬ್ಯಾಂಕ್‌ಗೆ ನೇರವಾಗಿ ಹಣ ವರ್ಗಾವಣೆ ಮಾಡುವ ರೀತಿಯಲ್ಲಿ ಯಾವುದೇ ಆಪ್‌ ಬಳಕೆ ಮಾಡಿ ವಹಿವಾಟು ನಡೆಸಬಹುದು. ಒಂದು ಕಂಪನಿಯ ಎಮೇಲ್‌ ವಿಳಾಸದಿಂದ ಮತ್ತೊಂದು ಕಂಪನಿಯ ಇಮೇಲ್‌ ವಿಳಾಸಕ್ಕೆ ಸಂದೇಶ ಕಳಿಸಿದಷ್ಟೇ ಸರಳವಾಗಿದೆ. ಇದು, ಕೆಲವೇ ಕಂಪನಿಗಳ ಒಡೆತನದಲ್ಲಿರುವ ಚಿಲ್ಲರೆ ಮಾರುಕಟ್ಟೆಯನ್ನು ಪ್ರಜಾತಾಂತ್ರಿಕಗೊಳಿಸುತ್ತದೆ ಎನ್ನುವುದು ಕೇಂದ್ರ ಸರ್ಕಾರದ ವಾದ.

ಎಫ್‌ಎಂಸಿಜಿಯಿಂದ ಪಾನ್‌ವಾಲಾವರೆಗೆ

ಸ್ಥಳೀಯ ಕಿರಾಣಿ ಅಂಗಡಿಗಳು, ಎಫ್‌ಎಂಸಿಜಿ ಕಂಪನಿಗಳಿಂದ ಹಿಡಿದು ಏರಿಯಾದಲ್ಲಿರುವ ಪಾನ್‌ವಾಲಾಗಳವರೆಗೂ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಜೋಡಿಸುವ ಹಾಗೂ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ವೇದಿಕೆಯಾಗಿದೆ. ಈ ಹಿಂದೆ ದೇಶದ ಮಹತ್ವಾಕಾಂಕ್ಷಿ ಯೋಜನೆಯಾದ ಆಧಾರ್‌ ಪ್ರಾರಂಭಿಕ ಜಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕರ್ನಾಟಕದ ಉದ್ಯಮಿ ನಂದನ್‌ ನಿಲೇಕಣಿ ಅವರ ಪರಿಕಲ್ಪನೆಯಲ್ಲಿ ಒಟ್ಟು ಯೋಜನೆ ಮೂಡಿಬಂದಿದೆ. ಪ್ರಾರಂಭಿಕ ಹಂತದಲ್ಲಿ ದೆಹಲಿ ಎನ್‌ಸಿಆರ್‌, ಬೆಂಗಳೂರು, ಮಧ್ಯಪ್ರದೇಶದ ಭೋಪಾಲ್‌, ಮೇಘಾಲಯದ ಶಿಲಾಂಗ್‌ ಹಾಗೂ ತಮಿಳುನಾಡಿನ ಕೊಯಮತ್ತೂರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಯೋಜನೆಯನ್ನು ಚಾಳನೆ ನೀಡಿ ಮಾತನಾಡಿದ ನಂದನ್‌ ನಿಲೇಕಣಿ, “ಭಾರತ ಡಿಜಿಟಲ್‌ ಕ್ರಾಂತಿಯಲ್ಲಿ ಯಾವಾಗಲೂ ಮುಂಚೂಣಿಯಲ್ಲಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಸಾಮಾನ್ಯ ಜನರಿಗೆ ಸೇವೆ ಒದಗಿಸುವಲ್ಲಿ ನಾವು ಮುಂದಿದ್ದೇವೆ. ಭಾರತದಂತಹ ಅತಿ ದೊಡ್ಡ ದೇಶದಲ್ಲಿ ಆಧಾರ್‌ ಕಾರ್ಯನಿರ್ವಹಿಸುತ್ತಿರುವುದೇ ಇದಕ್ಕೆ ಉದಾಹರಣೆ. ಆಧಾರ್‌ ಆಧಾರದಲ್ಲಿ ಯುಪಿಐ ರೂಪಿಸಲಾಯಿತು. ಯುಪಿಐ ಎಂಟು ವರ್ಷದಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದೆ. ಇದೇ ಮಾರ್ಗದಲ್ಲಿ ಇದೀಗ ಒಎನ್‌ಡಿಸಿ ಜಾರಿ ಮಾಡಲಾಗುತ್ತಿದೆ. ಿಂತಹ ನವೀನ ಯೋಜನೆಗಳಿಗೆ ಆರ್‌ಬಿಐ, ವಾಣಿಜ್ಯ ಸಚಿವಾಲಯ, ಪ್ರಧಾನಿ ಕಾರ್ಯಾಲಯದಂತಹ ಸಂಸ್ಥೆಗಳು ಒತ್ತಾಸೆ ನೀಡುತ್ತಿರುವುದು ಅತ್ಯಂತ ಆಶಾದಾಯಕವಾಗಿದೆ” ಎಂದರು.

ಇ ಕಾಮರ್ಸ್‌ ಕ್ಷೇತ್ರದಲ್ಲಿ ಅತಿ ದೊಡ್ಡ ಮಾರುಕಟ್ಟೆ ಇದೆ, ಆ ಮಾರುಕಟ್ಟೆಯಲ್ಲಿ ಮತ್ತಷ್ಟು ನಾವೀನ್ಯತೆ ತರುವ ಅವಕಾಶಗಳಿವೆ. ಇಂತಹ ಒಂದು ವ್ಯವಸ್ಥೆಯ ಸಾಮಾಜಿಕ ಅವಶ್ಯಕತೆಯೂ ಭಾರತದಲ್ಲಿದೆ. ಇ ಕಾಮರ್ಸ್‌ ಮುಂದಿನ ಜೀವನ ಶೈಲಿ ಆಗುತ್ತದೆ ಎನ್ನುವುದನ್ನು ಕರೊನಾ ತೋರಿಸಿದೆ. ಮುಂದಿನ ದಿನದಲ್ಲಿ ಹೆಚ್ಚೆಚ್ಚು ಜನರು ಆನ್‌ಲೈನ್‌ ಮೂಲಕ ಆರ್ಡರ್‌ ಮಾಡುತ್ತಾರೆ. ದೇಶದಲ್ಲಿ ನಡೆಯುವ 1 ಲಕ್ಷ ಕೋಟಿ ಡಾಲರ್‌ ರೀಟೇಲ್‌ ಆರ್ಥಿಕತೆಯಲ್ಲಿ 10-20 ಸಾವಿರ ಕೋಟಿಯಷ್ಟು ವಹಿವಾಟು ಈ ವೇದಿಕೆಯಲ್ಲಿ ನಡೆದರೂ ಅದು ಕ್ರಾಂತಿ ಆಗುತ್ತದೆ. ಸಣ್ಣ ವ್ಯಾಪಾರಿಯೂ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡುತ್ತದೆ. ಲಕ್ಷಾಂತರ ಜನರಿಗೆ ಸಹಕಾರ ಆಗುತ್ತದೆ ಎಂದರು.

ಈ ಕುರಿತು ಟ್ವೀಟ್‌ ಮಾಡಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯೆಲ್‌, ಯುಪಿಐ ನಂತರ ವಾಣಿಜ್ಯವನ್ನು ಪ್ರಜಾತಾಂತ್ರಿಕಗೊಳಿಸಲು ಕೆಲವೇ ಆಯ್ದ ಗ್ರಾಹಕರು, ಮಾರಾಟಗಾರರು ಹಾಗೂ ಸಾಗಣೆ ಸೇವಾದಾರರ ಮೂಲಕ ಒಎನ್‌ಡಿಸಿಗೆ ಪ್ರಾಯೋಗಿಕ ಚಾಲನೆ ನೀಡಲಾಗುತ್ತಿದೆ. ಾಯ್ಕೆ, ಅನುಕೂಲ ಹಾಗೂ ಪಾರದರ್ಶಕತೆಯ ಹೊಸ ವಿಶ್ವಕ್ಕೆ ನಿಮಗೆ ಸ್ವಾಗತ” ಎಂದಿದ್ದಾರೆ.

ಖ್ಯಾತ ಆಟೊಮೊಬೈಲ್‌ ಉದ್ಯಮಿ ಆನಂದ್‌ ಮಹೀಂದ್ರಾ ಈ ಕುರಿತು ಮೆಚ್ಚುಗೆಯ ಟ್ವೀಟ್‌ ಮಾಡಿದ್ದಾರೆ. “ವಿಶ್ವವು ಚಿಲ್ಲರೆ ಮಾರುಕಟ್ಟೆಯ ಕ್ರಾಂತಿಗೆ ತೆರೆದುಕೊಳ್ಳುವ ಸಂದರ್ಭದಲ್ಲಿ ನಾವಿದ್ದೇವೆ. ಇದು ಕೆಲವೇ ಬೃಹತ್‌ ಕಂಪನಿಗಳ ಹಿಡಿತದಿಂದ ಇ ಕಾಮರ್ಸ್‌ ಕ್ಷೇತ್ರವನ್ನು ಬಿಡುಗಡೆ ಮಾಡಿ ಪ್ರಾಜಾತಾಂತ್ರಿಕಗೊಳಿಸುತ್ತದೆ. ಸಣ್ಣ ಕಿರಾಣಿ ಅಂಗಡಿಗಳ ಲಕ್ಷಾಂತರ ಮಾಲೀಕರಿಗೆ ಇದು ಸಹಾಯ ಮಾಡುತ್ತದೆʼ ಎಂದಿದ್ದಾರೆ.

ಇದನ್ನೂ ಓದಿ | Explainer: ಉಳಿತಾಯ ಯಥಾಸ್ಥಿತಿ, ಖರ್ಚು ಏರಿಕೆಗಿಲ್ಲ ಬ್ರೇಕ್:‌ ಹಣಕಾಸು ನೀತಿ ಹೇಳಿದ್ದೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ ಗೈಡ್

PF Balance Check: ಬಡ್ಡಿ ಬಂದಿದೆಯೋ ಇಲ್ಲವೋ… ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

PF Balance Check: ಇನ್ನೇನು 2023 -2024ರ ಬಡ್ಡಿ ಹಣ ಇಪಿಎಫ್ ಖಾತೆಗೆ ಬೀಳಲಿದೆ. ನೌಕರರ ಭವಿಷ್ಯ ನಿಧಿ ಹೊಂದಿರುವ ಉದ್ಯೋಗಿಗಳು ತಮ್ಮ ಖಾತೆಗೆ ಇಪಿಎಫ್ ಬಡ್ಡಿ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ನೋಡಲು ನಾಲ್ಕು ದಾರಿಗಳಿವೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

PF Balance Check
Koo

ನವದೆಹಲಿ: ನೌಕರರ ಭವಿಷ್ಯ ನಿಧಿ (EPF) ಹೊಂದಿರುವ ಉದ್ಯೋಗಿಗಳಿಗೆ ಇನ್ನು ಕೆಲವೇ ದಿನಗಳಲ್ಲಿ 2023-2024ರ ಬಡ್ಡಿ ಹಣ (interest money) ಖಾತೆಗೆ ಬೀಳಲಿದೆ. ಹೀಗಾಗಿ ಈಗಾಗಲೇ ಇಪಿಎಫ್‌ಒ ಹೊಂದಿರುವ ಸದಸ್ಯರು ತಮ್ಮ ಖಾತೆಗೆ ಬಡ್ಡಿ ಹಣ (PF Balance Check) ಬಂದಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ತೊಡಗಿದ್ದಾರೆ. ಸ್ಮಾರ್ಟ್ ಫೋನ್ (smart phone) ಕೈಯಲ್ಲಿ ಇರುವುದರಿಂದ ಈಗ ಇದು ಕಷ್ಟವೇನಲ್ಲ.

ಇಪಿಎಫ್ ಬಡ್ಡಿ ಕ್ರೆಡಿಟ್ ಸ್ಥಿತಿಯನ್ನು ಪರಿಶೀಲಿಸಲು ನಾಲ್ಕು ದಾರಿಗಳಿವೆ. ಆನ್‌ಲೈನ್ ಮೂಲಕ, ಸಂದೇಶ ಕಳುಹಿಸಿ, ಮಿಸ್ಡ್ ಕಾಲ್‌ ಅಥವಾ ಉಮಂಗ್ ಅಪ್ಲಿಕೇಶನ್ ಮೂಲಕ ಇಪಿಎಫ್ ಬಡ್ಡಿ ಕ್ರೆಡಿಟ್ ಆಗಿದೆಯೇ ಇಲ್ಲವೋ ಎಂದು ನೋಡಬಹುದು.

ಆನ್ ಲೈನ್ ನಲ್ಲಿ ಪರಿಶೀಲಿಸಿ

ಇಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು epfindia.gov.in ಗೆ ಲಾಗಿನ್ ಮಾಡಿ. ಅಲ್ಲಿ UAN ಸಂಖ್ಯೆ, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್‌ ಅನ್ನು ಹಾಕಿ. ಬಳಿಕ ಇ-ಪಾಸ್‌ಬುಕ್ ಮೇಲೆ ಕ್ಲಿಕ್ ಮಾಡಿ. ಒಮ್ಮೆ ನೀವು ಎಲ್ಲಾ ವಿವರಗಳನ್ನು ಫೈಲ್ ಮಾಡಿದರೆ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ಸದಸ್ಯರ ಐಡಿ ತೆರೆದು ಖಾತೆಯಲ್ಲಿರುವ ಒಟ್ಟು EPF ಬ್ಯಾಲೆನ್ಸ್ ಅನ್ನು ನೋಡಬಹುದು.

ಇದನ್ನೂ ಓದಿ: Money Guide: ಮೇ 31ರೊಳಗೆ ಪ್ಯಾನ್‌-ಆಧಾರ್‌ ಲಿಂಕ್‌ ಆಗದಿದ್ದರೆ ಟಿಡಿಎಸ್ ದುಪ್ಪಟ್ಟು ಕಡಿತ; ಲಿಂಕ್‌ ಮಾಡುವ ವಿಧಾನ ಇಲ್ಲಿದೆ


ಉಮಂಗ್ ಅಪ್ಲಿಕೇಶನ್

ಉಮಂಗ್ ಅಪ್ಲಿಕೇಶನ್ ಮೂಲಕ EPF ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸಲು UMANG ಅಪ್ಲಿಕೇಶನ್ ತೆರೆಯಿರಿ. EPFO ಮೇಲೆ ಕ್ಲಿಕ್ ಮಾಡಿ. ಉದ್ಯೋಗಿ ಕೇಂದ್ರಿತ ಸೇವೆಗಳ ಮೇಲೆ ಕ್ಲಿಕ್ ಮಾಡಿ, ಬಳಿಕ View Passbook ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ UAN ಸಂಖ್ಯೆ ಮತ್ತು ಪಾಸ್‌ವರ್ಡ್‌ ಫೀಡ್ ಮಾಡಿ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಅನ್ನು ಅಲ್ಲಿ ಹಾಕಿ ಇಪಿಎಫ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.

ಎಸ್‌ಎಂಎಸ್

ಇಪಿಎಫ್ ಬ್ಯಾಲೆನ್ಸ್ ಅನ್ನು ಎಸ್ ಎಂಎಸ್ ಕಳುಹಿಸಿಯೂ ಪರಿಶೀಲಿಸಬಹುದು. ಮೊಬೈಲ್ ಸಂಖ್ಯೆಯನ್ನು ಹೊರತುಪಡಿಸಿ, ಯುಎಎನ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಸದಸ್ಯರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗಳಿಂದ ಎಸ್ ಎಂಎಸ್ ಕಳುಹಿಸುವ ಮೂಲಕ ತಮ್ಮ ಪಿಎಫ್ ವಿವರಗಳನ್ನು ಪಡೆಯಬಹುದು. ಇದಕ್ಕಾಗಿ EPFOHO UAN ಅನ್ನು 7738299899ಗೆ ಎಸ್‌ಎಂಎಸ್ ಮಾಡಬೇಕು.

ಮಿಸ್ಡ್ ಕಾಲ್

ಮಿಸ್ಡ್ ಕಾಲ್ ನೀಡಿಯೂ ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು. ಇದಕ್ಕಾಗಿ UAN ಪೋರ್ಟಲ್‌ನಲ್ಲಿ ನೋಂದಾಯಿಸಲಾದ EPFO ಚಂದಾದಾರರು UANನಲ್ಲಿ ನೋಂದಾಯಿಸಲಾದ ತಮ್ಮ ಮೊಬೈಲ್ ಸಂಖ್ಯೆಯಿಂದ 9966044425 ಈ ನಂಬರ್‌ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ತಮ್ಮ ಪಿಎಫ್ ವಿವರಗಳನ್ನು ಪಡೆಯಬಹುದು. ನೆನಪಿಡಿ, ನೀವು ಕರೆ ಮಾಡುವ ಸಂಖ್ಯೆ ನಿಮ್ಮ ಪಿಎಫ್‌ ಅಕೌಂಟ್‌ನಲ್ಲಿ ದಾಖಲಾಗಿರಬೇಕು.

Continue Reading

ವಾಣಿಜ್ಯ

Toyota Kirloskar Motor: ಕಾರ್‌ ಕೇರ್‌ಗೆ ʼಟಿಗ್ಲೊಸ್ʼ ಆರಂಭಿಸಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್

Toyota Kirloskar Motor: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ (ಟಿಕೆಎಂ) ತನ್ನ ಕ್ರಾಂತಿಕಾರಿ ಕಾರ್ ಕೇರ್ ಬ್ರಾಂಡ್ “ಟಿಗ್ಲೊಸ್” ಅನ್ನು ಪ್ರಾರಂಭಿಸಿದ್ದು, ಟಿಕೆಎಂ ವಾಹನದ ಇಂಟೀರಿಯರ್ ಮತ್ತು ಎಕ್ಸ್‌ಟೀರಿಯರ್ ಲುಕ್ ಅನ್ನು ಹೆಚ್ಚಿಸಲು ವ್ಯಾಪಕವಾದ ಸೇವೆಗಳನ್ನು ಇದು ನೀಡಲಿದೆ.

VISTARANEWS.COM


on

Toyota Kirloskar Motor launched the Tgloss
Koo

ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ (ಟಿಕೆಎಂ) ತನ್ನ ಕ್ರಾಂತಿಕಾರಿ ಕಾರ್ ಕೇರ್ ಬ್ರಾಂಡ್ “ಟಿಗ್ಲೊಸ್” ಅನ್ನು (Toyota Kirloskar Motor) ಪ್ರಾರಂಭಿಸಿದೆ.

ಮೇ 1, 2024 ರಿಂದ, “ಟಿಗ್ಲೊಸ್” ಸೇವೆಯು ಭಾರತದ ಎಲ್ಲಾ ಅಧಿಕೃತ ಟೊಯೊಟಾ ಡೀಲರ್‌ಶಿಪ್‌ಗಳಲ್ಲಿ ದೊರೆಯಲಿದೆ. ಕಾರು ತಯಾರಕರ ಇಂಡಸ್ಟ್ರಿ ಫಸ್ಟ್ ಉದ್ಯಮವಾಗಿ, “ಟಿಗ್ಲೊಸ್” ಬ್ರಾಂಡ್ ಅಡಿಯಲ್ಲಿ ಟಿಕೆಎಂ ವಾಹನದ ಇಂಟೀರಿಯರ್ ಮತ್ತು ಎಕ್ಸ್‌ಟೀರಿಯರ್ ಲುಕ್ ಅನ್ನು ಹೆಚ್ಚಿಸಲು ವ್ಯಾಪಕವಾದ ಸೇವೆಗಳನ್ನು ಇದು ನೀಡಲಿದೆ.

ವಾಹನಗಳ ಆಕರ್ಷಣೆ ಹೆಚ್ಚಿಸುವ ಗುರಿ

ಇದರಲ್ಲಿ ಸೆರಾಮಿಕ್ ಕೋಟ್, ಅಂಡರ್ ಬಾಡಿ ಕೋಟ್, ಸೈಲೆನ್ಸರ್ ಕೋಟ್ ಮತ್ತು ಇಂಟರ್‌ನಲ್ ಪ್ಯಾನಲ್ ಪ್ರೊಟೆಕ್ಷನ್ ಸೇರಿವೆ. ಇದು ವಾಹನಗಳ ಆಕರ್ಷಣೆಯನ್ನು ಹೆಚ್ಚಿಸುವ ಗುರಿಯ ಜತೆಗೆ ವಾತಾವರಣದಿಂದ ಕಾರಿನ ಮೇಲಾಗುವ ಪರಿಣಾಮಗಳ ವಿರುದ್ಧವೂ ರಕ್ಷಣೆಯನ್ನು ಒದಗಿಸುತ್ತದೆ.

ಇದನ್ನೂ ಓದಿ: IPL 2024 Points Table: ಚೆನ್ನೈ ಗೆಲುವಿನಿಂದ ಅಂಕಪಟ್ಟಿಯಲ್ಲಿ 3 ತಂಡಗಳಿಗೆ ಭಾರೀ ಹೊಡೆತ

ಗ್ರಾಹಕರ ಕಾರಿಗೆ ಹೊಸ ಜೀವ ತುಂಬುವುದು, ಕಾರಿನ ಆಕರ್ಷಣೆಯನ್ನು ಹೆಚ್ಚಿಸುವುದು ಮತ್ತು ಹೊಸದಾಗಿ ಕಾಣುವಂತೆ ಮಾಡುವ ಇಂಟೀರಿಯರ್ ಎನ್‌ರಿಚ್ಮೆಂಟ್, ಎಕ್ಸ್‌ಟೀರಿಯರ್ ಆಕರ್ಷಣೆಯನ್ನು ಹೆಚ್ಚಿಸುವ ಸೇವೆಗಳಂತಹ ಸಮಗ್ರ ಸರ್ವಿಸ್‌ಗಳನ್ನು ಇದರಿಂದ ಪಡೆಯಬಹುದಾಗಿದೆ.

ಹೆಚ್ಚುವರಿಯಾಗಿ ಪ್ರಯಾಣಿಕರ ಯೋಗಕ್ಷೇಮಕ್ಕಾಗಿ “ಟಿಗ್ಲೊಸ್” ಸೇವೆಗಳು ಎಸಿ ಡಕ್ಟ್ ಕ್ಲೀನಿಂಗ್ ಮತ್ತು ಎವಾಪರೇಟರ್ ಕ್ಲೀನಿಂಗ್ ಪರಿಹಾರಗಳನ್ನೂ ಇದು ಹೊಂದಿದೆ. ಇದು ಕಾರಿನಲ್ಲಿ ಪರಿಶುದ್ಧ ವಾತಾವರಣ ನಿರ್ಮಾಣ ಮತ್ತು ಆರೋಗ್ಯಕರ ಚಾಲನೆಯನ್ನು ಉತ್ತೇಜಿಸುತ್ತದೆ.

ಇದನ್ನೂ ಓದಿ: WhatsApp Exit India: ವಾಟ್ಸ್ಯಾಪ್‌ ಜೊತೆಗೇ ಭಾರತ ತೊರೆಯಲಿವೆಯೇ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ?

ಈ ಬಗ್ಗೆ ಮಾತನಾಡಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಸೇಲ್ಸ್–ಸರ್ವೀಸ್-ಯೂಸ್ಡ್ ಕಾರ್ ಬ್ಯುಸಿನೆಸ್‌ನ ಉಪಾಧ್ಯಕ್ಷ ಶಬರಿ ಮನೋಹರ್, ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ‘ಗ್ರಾಹಕ-ಮೊದಲು’ ತತ್ವಕ್ಕೆ ಅಚಲ ಬದ್ಧತೆಯನ್ನು ವ್ಯಕ್ತಪಡಿಸುವ ಇನ್ನೊವೇಟೀವ್ ಮತ್ತು ಇಂಡಸ್ಟ್ರಿ ಫಸ್ಟ್ “ಟಿಗ್ಲೊಸ್” ಅನ್ನು ಅನಾವರಣಗೊಳಿವುದು ನಮಗೆ ಹೆಚ್ಚು ಸಂತಸವನ್ನು ನೀಡುತ್ತದೆ. ಟಿಗ್ಲೊಸ್ ಅನ್ನು ತಮ್ಮ ಕಾರುಗಳನ್ನು ಆಕರ್ಷಣೀಯವಾಗಿ ಅತ್ಯುತ್ತಮ ಸ್ಥಿತಿಯಲ್ಲಿಡಲು ಸಹಾಯ ಮಾಡುವ ಮೂಲಕ ಅವರ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: Drown in Mekedatu: ಮೇಕೆದಾಟು ಬಳಿ ಈಜಲು ಹೋಗಿದ್ದ ಐವರು ಪ್ರವಾಸಿಗರ ಸಾವು

ಟಿಗ್ಲೊಸ್ ಎಂಬುದು ಒನ್-ಸ್ಟಾಪ್-ಶಾಪ್ ಸೊಲ್ಯೂಷನ್ ಆಗಿದೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಕಾರ್‌ ಕೇರ್ ಸರ್ವಿಸ್‌ಗಳನ್ನು ನೀಡುವ ಗುರಿಯನ್ನು ಹೊಂದಿದೆ, ಇದು ಟೊಯೊಟಾ ಮಾಲೀಕರಿಗೆ ಗುಣಮಟ್ಟ, ಬಾಳಿಕೆ ಮತ್ತು ವಿಶ್ವಾಸಾರ್ಹತೆಯ (ಕ್ಯೂಡಿಆರ್) ನಮ್ಮ ಪ್ರಮುಖ ಮೌಲ್ಯಗಳೊಂದಿಗೆ ತಡೆರಹಿತವಾಗಿ ಹೊಂದಾಣಿಕೆಯಾಗುವ ಸೇವೆ ಇದಾಗಿದೆ. ಸಮಗ್ರ ಕಾರ್ ಕೇರ್ ಸೊಲ್ಯೂಷನ್‌ಗಳನ್ನು ತಲುಪಿಸುವ ನಮ್ಮ ಪ್ರಯಾಣದಲ್ಲಿ ಮಹತ್ವದ ಮತ್ತೊಂದು ನಿರ್ಣಾಯಕ ಮೈಲಿಗಲ್ಲನ್ನು ಸೂಚಿಸುತ್ತದೆ. ಇಲ್ಲಿ ಹೆಚ್ಚು ನುರಿತ ಮತ್ತು ತರಬೇತಿ ಪಡೆದ ವೃತ್ತಿಪರರು ಸೇವೆಯನ್ನು ನೀಡುತ್ತಾರೆ ಎಂದು ತಿಳಿಸಿದ್ದಾರೆ.

Continue Reading

ಮನಿ-ಗೈಡ್

Money Guide: ಫೊರೆಕ್ಸ್‌ ಕಾರ್ಡ್‌ V/S ಕ್ರೆಡಿಟ್‌ ಕಾರ್ಡ್‌: ವಿದೇಶ ಪ್ರವಾಸಕ್ಕೆ ಯಾವುದು ಸೂಕ್ತ?

Money Guide: ವಿದೇಶ ಪ್ರವಾಸ ಅಂದುಕೊಂಡಷ್ಟು ಸುಲಭ ಅಲ್ಲ. ಪಾಸ್‌ಪೋರ್ಟ್‌, ವೀಸಾ ಹೊಂದಿಸುವುದರಿಂದ ಹಿಡಿದು ಟಿಕೆಟ್‌ ಬುಕ್‌ ಮಾಡುವುದು, ಅಲ್ಲಿನ ಪ್ರವಾಸ ತಾಣಗಳ ಬಗ್ಗೆ ಮಾಹಿತಿ ಕಲೆ ಹಾಕುವುದು, ಉಳಿದುಕೊಳ್ಳುವ ವ್ಯವಸ್ಥೆ, ಶಾಪಿಂಗ್‌ ಮಾಡುವ ರೀತಿ ಹೀಗೆ ಎಲ್ಲ ವಿಚಾರದ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಅಲ್ಲಿ ನಿಮ್ಮ ಹಣವನ್ನು ಹೇಗೆ ಖರ್ಚು ಮಾಡುವುದು ಎನ್ನುವ ವಿಚಾರವೂ ಮುಖ್ಯವಾಗುತ್ತದೆ. ಹಾಗಾದರೆ ವಿದೇಶಿ ಪ್ರಯಾಣದ ವೇಳೆ ನೆರವಾಗುವ ಫೊರೆಕ್ಸ್‌ ಕಾರ್ಡ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಪೈಕಿ ಯಾವುದು ಸೂಕ್ತ ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

VISTARANEWS.COM


on

Money Guide
Koo

ಬೆಂಗಳೂರು: ವಿದೇಶ ಪ್ರವಾಸ ಅಂದುಕೊಂಡಷ್ಟು ಸುಲಭ ಅಲ್ಲ. ಪಾಸ್‌ಪೋರ್ಟ್‌, ವೀಸಾ ಹೊಂದಿಸುವುದರಿಂದ ಹಿಡಿದು ಟಿಕೆಟ್‌ ಬುಕ್‌ ಮಾಡುವುದು, ಅಲ್ಲಿನ ಪ್ರವಾಸ ತಾಣಗಳ ಬಗ್ಗೆ ಮಾಹಿತಿ ಕಲೆ ಹಾಕುವುದು, ಉಳಿದುಕೊಳ್ಳುವ ವ್ಯವಸ್ಥೆ, ಶಾಪಿಂಗ್‌ ಮಾಡುವ ರೀತಿ ಹೀಗೆ ಎಲ್ಲ ವಿಚಾರದ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಸೂಕ್ತ ಪ್ಲಾನ್‌ ಮಾಡಬೇಕಾಗುತ್ತದೆ. ಜತೆಗೆ ಅಲ್ಲಿ ನಿಮ್ಮ ಹಣವನ್ನು ಹೇಗೆ ಖರ್ಚು ಮಾಡುವುದು ಎನ್ನುವ ವಿಚಾರವೂ ಮುಖ್ಯವಾಗುತ್ತದೆ. ತೆರಿಗೆಯನ್ನು ತಪ್ಪಿಸಲು ವಿದೇಶಿ ವಿನಿಮಯ ಕಾರ್ಡ್‌ (forex cards)ಗಳನ್ನು ಬಳಸಬೇಕೆ ಅಥವಾ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಬೇಕೆ ಎನ್ನುವ ಗೊಂದಲ ಕಾಡುವುದು ಸಹಜ. ಈ ಪ್ರಶ್ನೆಗೆ ಇಂದಿನ ಮನಿಗೈಡ್‌ (Money Guide)ನಲ್ಲಿದೆ ಉತ್ತರ.

ಕ್ರೆಡಿಟ್‌ ಕಾರ್ಡ್‌

ಗ್ರಾಹಕರು ಮೊದಲು ಸರಕು ಅಥವಾ ಸೇವೆಗಳನ್ನು ಖರೀದಿಸಿ ಬಳಿಕ ಪಾವತಿಸುವ ವ್ಯವಸ್ಥೆ ಕ್ರೆಡಿಟ್‌ ಕಾರ್ಡ್‌ನಲ್ಲಿದೆ. ಈ ಕಾರ್ಡ್ ಮೂಲಕ ನೀವು ನಿಮ್ಮ ಅಗತ್ಯಗಳನ್ನು ಸೀಮಿತ ಪ್ರಮಾಣದಲ್ಲಿ ಪೂರೈಸಿಕೊಳ್ಳಬಹುದು. ತೀರ ಬೇಕೆಂದಾಗ ನೀವು ಕ್ರೆಡಿಟ್ ಕಾರ್ಡ್‌ನಿಂದ ಹಣವನ್ನು ಕೂಡ ಪಡೆಯಬಹುದು. ಈ ರೀತಿಯಾಗಿ ಕ್ರೆಡಿಟ್ ಕಾರ್ಡ್ ಹೊಂದಿರುವವರು ಬ್ಯಾಂಕ್ ಬ್ಯಾಲೆನ್ಸ್ ಇಲ್ಲದಿದ್ದರೂ ಯಾವುದೇ ತೊಂದರೆಯಿಲ್ಲದೆ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು. ಕಡಿಮೆ ಬ್ಯಾಂಕ್ ಬ್ಯಾಲೆನ್ಸ್‌ನ ಸಂದರ್ಭದಲ್ಲಿಯೂ ಸಹ ಖರೀದಿ ಮಾಡಲು ಕ್ರೆಡಿಟ್ ಕಾರ್ಡ್ ನೆರವಾಗುತ್ತದೆ. ಇಲ್ಲಿ ನೀವು ಅನೇಕ ಬಡ್ಡಿ ರಹಿತ ಕ್ರೆಡಿಟ್‌ಗಳ ಪ್ರಯೋಜನವನ್ನು ಸಹ ಪಡೆಯಬಹುದು. ಕ್ರೆಡಿಟ್ ಕಾರ್ಡ್‌ಗಳನ್ನು ಆನ್‌ಲೈನ್ ಶಾಪಿಂಗ್, ಶಾಪಿಂಗ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಪಾವತಿ ಮಾಡಲು ಬಳಸಬಹುದು.

ಫೊರೆಕ್ಸ್‌ ಕಾರ್ಡ್‌

ಫೊರೆಕ್ಸ್‌ ಕಾರ್ಡ್ ಒಂದು ರೀತಿಯ ಪ್ರಿಪೇಯ್ಡ್ ಟ್ರಾವೆಲ್ ಕಾರ್ಡ್ ಆಗಿದ್ದು, ಇದು ವಿದೇಶಿ ಹಣವನ್ನು ಲೋಡ್ ಮಾಡಿ ಅದನ್ನು ಖರ್ಚು ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಈ ಕಾರ್ಡ್ ಅನ್ನು ಬ್ಯಾಂಕುಗಳು ನೀಡುತ್ತವೆ. ನೀವು ಇದರಲ್ಲಿ ನಿಮ್ಮ ಆಯ್ಕೆಯ ಕರೆನ್ಸಿಯನ್ನು ಮುಂಚಿತವಾಗಿಯೇ ಲೋಡ್ ಮಾಡಬಹುದು ಮತ್ತು ನೀವು ಭೇಟಿ ನೀಡುವ ವಿದೇಶಿ ರಾಷ್ಟ್ರದಲ್ಲಿ ನಗದು ಹಿಂಪಡೆಯಲು, ಶಾಪಿಂಗ್ ಮಾಡಲು ಬಳಸಬಹುದು. ವಿದೇಶದಲ್ಲಿ ಅಧ್ಯಯನ ಮಾಡುವ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಈ ಕಾರ್ಡ್ ಬಳಸುತ್ತಾರೆ.

ಯಾವುದು ಉತ್ತಮ?

  • ನೀವು ಫೊರೆಕ್ಸ್‌ ಕಾರ್ಡ್‌ಗೆ ಹಣವನ್ನು ಲೋಡ್ ಮಾಡಿದಾಗ ವಿದೇಶಿ ವಿನಿಮಯ ದರವನ್ನು ಲಾಕ್ ಮಾಡಲಾಗುತ್ತದೆ. ಇದು ಭವಿಷ್ಯದ ಕರೆನ್ಸಿ ಬದಲಾವಣೆಯ ದರಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಕ್ರೆಡಿಟ್ ಕಾರ್ಡ್‌ನ ವಹಿವಾಟಿನ ಸಮಯದಲ್ಲಿ ಅದಕ್ಕೆ ದರ ಅನ್ವಯವಾಗುತ್ತದೆ. ಇದು ನಿರೀಕ್ಷಿತ ಏರಿಳಿತಗಳಿಗೆ ನಿಮ್ಮನ್ನು ಒಡ್ಡುತ್ತದೆ.
  • ಫೊರೆಕ್ಸ್‌ ಕಾರ್ಡ್‌ಗೆ ವ್ಯತಿರಿಕ್ತವಾಗಿ ಅಂತಾರಾಷ್ಟ್ರೀಯ ವಹಿವಾಟು ಮತ್ತು ನಗದು ಮುಂಗಡ ಶುಲ್ಕದಿಂದಾಗಿ ವಿದೇಶದಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ನಗದು ಹಿಂಪಡೆಯುವಿಕೆ ದುಬಾರಿಯಾಗಬಹುದು.
  • ಫೊರೆಕ್ಸ್‌ ಕಾರ್ಡ್ ಪ್ರಿಪೇಯ್ಡ್ ಆಗಿರುತ್ತವೆ. ಆದ್ದರಿಂದ ಕ್ರೆಡಿಟ್ ಕಾರ್ಡ್‌ನಲ್ಲಿ ವಿಧಿಸಲಾಗುವ ವಿಳಂಬ ಪಾವತಿಯ ದಂಡ ಮತ್ತು ಅತಿಯಾದ ಬಡ್ಡಿದರಗಳಿಂದ ಪಾರಾಗುತ್ತೀರಿ.
  • ನಿಮ್ಮ ಕ್ರೆಡಿಟ್ ಕಾರ್ಡ್‌ನ ಸಂಪೂರ್ಣ ಕ್ರೆಡಿಟ್ ಮಿತಿಯನ್ನು ಬಳಸಬಹುದು. ಇದು ಖರೀದಿಗಳು ಮತ್ತು ತುರ್ತು ಪರಿಸ್ಥಿತಿಗಳಿಗೆ ಸೂಕ್ತ. ಆದಾಗ್ಯೂ ಫೊರೆಕ್ಸ್‌ ಕಾರ್ಡ್‌ನಲ್ಲಿ ಮೊದಲೇ ಲೋಡ್ ಮಾಡಿದ ಮೊತ್ತವನ್ನಷ್ಟೇ ಬಳಸಬಹುದು. ನಿಮ್ಮ ಮೊತ್ತವು ಮುಗಿದರೆ, ನೀವು ಅದನ್ನು ಮತ್ತೆ ಲೋಡ್ ಮಾಡಬೇಕಾಗುತ್ತದೆ. ಇದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಜತೆಗೆ ಮರು-ಲೋಡ್ ಶುಲ್ಕ ಪಾವತಿಸಬೇಕಾಗುತ್ತದೆ.

ಒಟ್ಟಿನಲ್ಲಿ ವಿದೇಶ ಪ್ರವಾಸದ ಸಂದರ್ಭದಲ್ಲಿ ಕ್ರೆಡಿಟ್‌ ಕಾರ್ಡ್‌ಗಿಂತ ಫೊರೆಕ್ಸ್‌ ಕಾರ್ಡ್‌ ಉತ್ತಮ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಇದನ್ನೂ ಓದಿ: Money Guide: ಕ್ರೆಡಿಟ್‌ ಕಾರ್ಡ್‌ ಹೊಂದಿದ್ದೀರಾ? ವಂಚಕರ ಬಲೆಗೆ ಬೀಳದಿರಲು ಈ ಟಿಪ್ಸ್‌ ಫಾಲೋ ಮಾಡಿ

Continue Reading

Latest

Gold Rate : ಏರುಗತಿಯಲ್ಲಿದೆ ಬಂಗಾರದ ಬೆಲೆ; ಇನ್ನೂ ಏರುವ ಮೊದಲು ಖರೀದಿ ಸೂಕ್ತ

Gold Rate: ಭಾನುವಾರ ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,685ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹53,480 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ಅನುಕ್ರಮವಾಗಿ ₹66,850 ಮತ್ತು ₹6,68,500 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,293 ಆಗಿದ್ದರೆ, ಎಂಟು ಗ್ರಾಂ ಬೆಲೆ ₹58,344 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹72, 930 ಮತ್ತು ₹7,20,300 ವೆಚ್ಚವಾಗಲಿದೆ.

VISTARANEWS.COM


on

Gold Rate
Koo

ಬೆಂಗಳೂರು: ಬಂಗಾರದ ಬೆಲೆ (Gold Rate) ದಿನದಿಂದ ದಿನಕ್ಕೆ ಏರುತ್ತಲೇ ಸಾಗುತ್ತಿದೆ. ಭಾನುವಾರವೂ ಶನಿವಾರದ ದರವೇ ಮುಂದುವರಿದಿದೆ. ರಾಜ್ಯದಲ್ಲಿ ಶನಿವಾರ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today) ಗ್ರಾಮ್​ಗೆ ಕ್ರ ಮವಾಗಿ ₹20 ಹಾಗೂ ₹22 ಏರಿಕೆಯಾಗಿತ್ತು. ಅದೇ ಬೆಲೆ ಭಾನುವಾರವೂ ಮುಂದುವರಿದಿದೆ.

ಭಾನುವಾರ ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,685ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹53,480 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ಅನುಕ್ರಮವಾಗಿ ₹66,850 ಮತ್ತು ₹6,68,500 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,293 ಆಗಿದ್ದರೆ, ಎಂಟು ಗ್ರಾಂ ಬೆಲೆ ₹58,344 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹72, 930 ಮತ್ತು ₹7,20,300 ವೆಚ್ಚವಾಗಲಿದೆ.

ಒಂದು ಗ್ರಾಂ ಬೆಳ್ಳಿಯ ಬೆಲೆ (Silver rate today) ₹83.50, ಎಂಟು ಗ್ರಾಂ ₹840 ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹8,400 ಮತ್ತು 1 ಕಿಲೋಗ್ರಾಂಗೆ ₹84,00 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.

ನಗರ22 ಕ್ಯಾರಟ್24 ಕ್ಯಾರಟ್
ದಿಲ್ಲಿ67,00073,080
ಮುಂಬಯಿ66,85072,930
ಬೆಂಗಳೂರು66,850₹72,930
ಚೆನ್ನೈ67,70072,760

ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?

ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

1) ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರೆಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.

2) ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ ಹಾಲ್ಮಾರ್ಕ್ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ BIS ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.

3) ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

4) ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್ಮಾರ್ಕ್ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.

Continue Reading
Advertisement
Karnataka Weather
ಕರ್ನಾಟಕ29 mins ago

Karnataka Weather: ರಾಯಚೂರಿನಲ್ಲಿ ರಾಜ್ಯದಲ್ಲೇ ಗರಿಷ್ಠ ಉಷ್ಣಾಂಶ ದಾಖಲು; ಇನ್ನೂ 4 ದಿನ ಶಾಖದ ಅಲೆ ಎಚ್ಚರಿಕೆ

Lok Sabha Election
ದೇಶ31 mins ago

3ನೇ ಹಂತದಲ್ಲಿ ಕಣಕ್ಕಿಳಿದ 1,352 ಅಭ್ಯರ್ಥಿಗಳ ಪೈಕಿ 244 ಜನರ ವಿರುದ್ಧ ಕ್ರಿಮಿನಲ್‌ ಕೇಸ್!

Thomas Cup 2024
ಕ್ರೀಡೆ54 mins ago

Thomas Cup 2024: ಕ್ವಾರ್ಟರ್‌ ಫೈನಲ್​ಗೆ ಲಗ್ಗೆಯಿಟ್ಟ ಹಾಲಿ ಚಾಂಪಿಯನ್​ ಭಾರತ

Rameshwaram Cafe blast
ಕರ್ನಾಟಕ1 hour ago

Rameshwaram Cafe Blast: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಕೇಸ್‌; ಇಬ್ಬರು ಶಂಕಿತ ಉಗ್ರರಿಗೆ 14 ದಿನ ನ್ಯಾಯಾಂಗ ಬಂಧನ

IPL 2024
ಕ್ರೀಡೆ2 hours ago

IPL 2024: ರಿಂಕು ಸಿಂಗ್​ಗೆ ಬೌಲಿಂಗ್​ ಮಾಡಿದ ಶಾರುಖ್‌ ಪುತ್ರ ಅಬ್ರಾಮ್; ವಿಡಿಯೊ ವೈರಲ್​

Narendra Modi
ದೇಶ2 hours ago

Narendra Modi: ತಾಕತ್ತಿದ್ದವರು 370ನೇ ವಿಧಿ ಜಾರಿಗೆ ತರಲಿ; ಪ್ರತಿಪಕ್ಷಗಳಿಗೆ ಮೋದಿ ಸವಾಲು!

International Labor Day-2024
ಉದ್ಯೋಗ2 hours ago

Labour Day 2024: ಮೇ 1ರ ಕಾರ್ಮಿಕ ದಿನಾಚರಣೆಯ ಹಿನ್ನೆಲೆ ಏನು? ಏನಿದರ ಸಂದೇಶ?

car crossed the divider and collided with a lorry Driver death
ತುಮಕೂರು2 hours ago

Road Accident: ಡಿವೈಡರ್ ದಾಟಿ ಲಾರಿಗೆ ಡಿಕ್ಕಿ ಹೊಡೆದ ಕಾರು; ಚಾಲಕ ಸ್ಥಳದಲ್ಲೇ ಸಾವು

Hassan Pen Drive Case
ಕರ್ನಾಟಕ2 hours ago

Hassan Pen Drive Case: ವಿಚಾರಣೆಗೆ ಕರೆದಾಗ ವಿದೇಶದಿಂದ ಪ್ರಜ್ವಲ್ ಬರುತ್ತಾನೆ ಎಂದ ಎಚ್‌.ಡಿ.ರೇವಣ್ಣ

PF Balance Check
ಮನಿ ಗೈಡ್2 hours ago

PF Balance Check: ಬಡ್ಡಿ ಬಂದಿದೆಯೋ ಇಲ್ಲವೋ… ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra modi in Bagalakote and Attack on Congress
Lok Sabha Election 20248 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 202410 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ16 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20241 day ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20241 day ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20241 day ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20241 day ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

ಟ್ರೆಂಡಿಂಗ್‌