Explainer: Land in moon- ಹೋಗಲಾಗದ ಚಂದ್ರನ ಮೇಲೆ ಜಮೀನು ಖರೀದಿ ಯಾಕೆ? - Vistara News

EXPLAINER

Explainer: Land in moon- ಹೋಗಲಾಗದ ಚಂದ್ರನ ಮೇಲೆ ಜಮೀನು ಖರೀದಿ ಯಾಕೆ?

ತಾವೆಂದೂ ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಎಂದು ಗೊತ್ತಿದ್ದರೂ ಹಲವು ಭಾರತೀಯರು ಚಂದ್ರಗ್ರಹದ ಮೇಲೆ ಜಮೀನು (land in moon) ಕೊಂಡುಕೊಂಡಿದ್ದಾರೆ. ಈ ಕ್ರೇಜಿತನಕ್ಕೆ ಏನು ಕಾರಣ?

VISTARANEWS.COM


on

land in moon
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಾರ್ಚ್‌ ತಿಂಗಳಲ್ಲಿ ಗುಜರಾತ್‌ನ ವಡೋದರಾದ ಮಯೂರ್‌ ಪಟೇಲ್‌ ಎಂಬ ಉದ್ಯಮಿ ತಮ್ಮ ಪ್ರೇಯಸಿಗೆ ಚಂದ್ರಗ್ರಹದಲ್ಲಿ ಒಂದು ತುಣುಕು ಭೂಮಿಯನ್ನು (land in moon) ಗಿಫ್ಟ್‌ ಆಗಿ ಕೊಟ್ಟರು. ಫೆಬ್ರವರಿಯಲ್ಲಿ ತ್ರಿಪುರಾದ ಒಂದು ಗ್ರಾಮದ ಗಣಿತ ಟೀಚರ್‌ ಚಂದ್ರನಲ್ಲಿ ಜಮೀನು ಕೊಂಡುಕೊಂಡರು. ಕಳೆದ ವರ್ಷ ಜೂನ್‌ನಲ್ಲಿ ರಾಂಚಿಯ 33 ವರ್ಷದ ವೆಡ್ಡಿಂಗ್‌ ಪ್ಲಾನರ್‌ ಒಬ್ಬರು ಒಂದೆಕರೆ ಜಾಗವನ್ನು ಕೊಂಡು ತಾಯಿಗೆ ನೀಡಿದರು. 2020 ಡಿಸೆಂಬರ್‌ನಲ್ಲಿ ಅಜ್ಮೇರ್‌ನ ಒಬ್ಬ ವ್ಯಕ್ತಿ ತಮ್ಮ ಪತ್ನಿಗೆ ಆನಿವರ್ಸರಿ ಗಿಫ್ಟ್‌ ಆಗಿ ಚಂದ್ರನಲ್ಲಿ ಒಂದಿಷ್ಟಯ ಜಮೀನು ಖರೀದಿಸಿ ಕೊಟ್ಟಿದ್ದರು. 2003ರಲ್ಲಿ ಹೈದರಾಬಾದ್‌ನ ಭವಿಷ್ಯಕಾರ ಕಮ್‌ ಷೇರು ಮಾರುಕಟ್ಟೆ ತಜ್ಞರು ಕೆಲವು ಎಕರೆ ಭೂಮಿಯನ್ನು ಚಂದ್ರನಲ್ಲಿ ಕೊಂಡಿದ್ದರು.

ಅದೆಲ್ಲ ಸರಿ. ಇವರೆಲ್ಲ ಚಂದ್ರ ಗ್ರಹದ ಮೇಲೆ ಜಮೀನನ್ನು ಹೊಂದಿ ಸಾಧಿಸುವುದಾದರೂ ಏನು? ಅಲ್ಲಿಗೆ ಇವರು ಎಂದಾದರೂ ಹೋಗಲು ಸಾಧ್ಯವೇ? ಬಹುಶಃ ಅದೆಂದಿಗೂ ಸಾಧ್ಯವಾಗದು. ಹಾಗಿದ್ದರೆ ಇವರ ಹಕೀಕತ್ತು ಏನು?

ಮೊದಲು ಇವರು ಏನು ಹೇಳುತ್ತಾರೆ ಕೇಳೋಣ.
ʼʼನಾನು ಎಂದಿಗೂ ಅಲ್ಲಿಗೆ ಹೋಗಲಾರೆ ಎಂಬುದು ನನಗೆ ಗೊತ್ತಿದೆ. ನನಗೆ ಇದರಿಂದ ಯಾವ ಆರ್ಥಿಕ ಲಾಭವೂ ಇಲ್ಲ ಎಂಬುದೂ ಗೊತ್ತಿದೆ. ಆದರೆ ಈ ಜಗತ್ತಿನಲ್ಲಿ ಕೆಲವು ಸಂಗತಿಗಳಿವೆ- ಲಾಭ ಅಥವಾ ನಷ್ಟದ ದೃಷ್ಟಿಯಿಂದ ಅವನ್ನು ಅಳೆಯಲಾಗುವುದಿಲ್ಲ. ಸುಶಾಂತ್‌ ಸಿಂಗ್‌ ರಜಪೂತ್‌, ಶಾರುಕ್‌ ಖಾನ್‌ ಅವರಂಥ ಬಾಲಿವುಡ್‌ ಸ್ಟಾರ್‌ಗಳು ಅಲ್ಲಿ ಜಮೀನು ತಗೊಂಡಿದ್ದಾರೆ. ಅದು ದುಬಾರಿ ಇರಬಹುದು ಅಂತ ನಾನು ಮೊದಲು ಭಾವಿಸಿದ್ದೆ. ಆದ್ರೆ ನಾನೂ ತಗೋಬಹುದು ಅಮತ ಪರಿಶೀಲಿಸಿದಾಗ ತಿಳೀತುʼʼ ಎನ್ನುತ್ತಾರೆ ಜಮೀನು ಖರೀದಿಸಿದ ತ್ರಿಪುರಾದ ಸುಮನ್‌ ದೇವನಾಥ್.‌ ಅವರು ಎಕರೆಗೆ ₹ 6000 ನೀಡಿದ್ದಾರೆ.

ʼʼನನ್ನ ಪ್ರೇಯಸಿಗೆ ಅಮೂಲ್ಯವಾದುದು, ತುಂಬಾ ವಿಶಿಷ್ಟವಾದುದು ಏನನ್ನಾದರೂ ನೀಡಬೇಕು ಎಂದು ನನಗೆ ಅನಿಸುತ್ತಿತ್ತು. ಇದೊಂದು ಕುತೂಹಲಕಾರಿ ಐಡಿಯಾ ಅನಿಸಿತು. ಕೊಂಡುಕೊಂಡು ಗಿಫ್ಟ್‌ ಆಗಿ ನೀಡಿದೆʼʼ ಎನ್ನುತ್ತಾರೆ ವಡೋದರಾದ ಮಯೂರ್‌ ಪಟೇಲ್.‌ ಇವರಿಗೆ 24 ವರ್ಷ. ಪೆಟ್‌ಶಾಪ್‌ ಮಾಲಿಕ. ಕೊಂಡದ್ದು ಎಕರೆಗೆ ₹ 9000ದಂತೆ. ʼʼಚಂದ್ರನನ್ನೇ ಕೊಡುವೆ ಎಂದು ಹೆಣ್ಣಿಗೆ ಭರವಸೆ ನೀಡುವ ಗಂಡಸರು ಪ್ರಪಂಚದಲ್ಲಿದ್ದಾರೆ. ಆದರೆ ನನಗೆ ನಿಜವಾಗಿಯೂ ಚಂದ್ರನನ್ನೇ ಕೊಟ್ಟಿದ್ದಾನೆ ನನ್ನ ಗೆಳೆಯʼʼ ಎಂದು ನಗುತ್ತಾಳೆ ಆತನ ಭಾವಿ ಪತ್ನಿ ಹಿಮಾಲಿ.

ಇದನ್ನೂ ಓದಿ: National Technology Day ಪೋಖ್ರಾನ್‌ ಅಣು ಪರೀಕ್ಷೆ ಯಶಸ್ವಿಯಾಗಿ ನಡೆದ ಹೆಮ್ಮೆಯ ದಿನ

ಸುಶಾಂತ್‌, ಶಾರುಕ್‌ ಹೊಂದಿದ್ದರು
ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್‌ ಸ್ಟಾರ್‌ ಸುಶಾಂತ್‌ ಸಿಂಗ್‌ ರಜಪೂತ್‌, ಚಂದ್ರನ ಮೇಲೆ ಜಮೀನು ಹೊಂದಿದ್ದ. ಇವನು ಹೊಂದಿದ್ದ ಜಾಗವಿದ್ದ ಪ್ರಾಂತ್ಯದ ಹೆಸರು Mare Muscoviense. ಈತ ತೀರಿಕೊಂಡಾಗ, ಈತ ಚಂದ್ರನ ಮೇಲೆ ಜಮೀನು ಹೊಂದಿದ್ದ ವಿಚಾರ ಜನಪ್ರಿಯವಾಯಿತು. ಈತನನ್ನು ಮಾದರಿಯಾಗಿ ಅನುಸರಿಸಿ ಹಲವರು ಖರೀದಿಗೆ ಮುಂದಾದರು. ಬಾಲಿವುಡ್‌ ಬಾದ್‌ಶಾ ಶಾರುಕ್‌ ಖಾನ್‌ ಕೂಡ ಒಂದಿಷ್ಟು ಚಂದ್ರಭೂಮಿ ಹೊಂದಿದ್ದಾನೆ- ಆಸ್ಟ್ರೇಲಿಯಾದ ಅಭಿಮಾನಿಯೊಬ್ಬಳು ಇದನ್ನು ಖರೀದಿಸಿ ಶಾರುಕ್‌ಗೆ ಗಿಫ್ಟ್‌ ಆಗಿ ಕೊಟ್ಟಿದ್ದಳಂತೆ.

ಚಂದ್ರನಲ್ಲಿ ಭೂಮಿ ಖರೀದಿಸುವುದು ಹೇಗೆ?

  • ಮೊದಲು lunarregistry.comಗೆ ಲಾಗಿನ್‌ ಆಗಿರಿ.
  • ಮೂನ್‌ ಪ್ರಾಪರ್ಟಿ ಐಕಾನ್‌ ಒತ್ತಿ.
  • ಎಲ್ಲಿ ಭೂಮಿ ಖರೀದಿಸಬೇಕು ಎಂಬುದನ್ನು ಫಿಕ್ಸ್‌ ಮಾಡಿ.
  • ಖರೀದಿಸಬೇಕಾದ ಜಮೀನಿನ ಅಳತೆ ನಿರ್ಧರಿಸಿ. ಒಬ್ಬರಿಗೆ ಗರಿಷ್ಠ 10 ಎಕರೆ ಮಾತ್ರ.
  • ಇದು ಗಿಫ್ಟ್‌ ಎಂದಾದರೆ ಅದಕ್ಕೆ ತಕ್ಕಂತೆ ಸಂದೇಶ ಬರೆಯಿರಿ.
  • ನಿಮ್ಮ ದೇಶ, ವಿಳಾಸ, ಫೋನ್‌ ನಂಬರ್‌, ಇಮೇಲ್‌ ವಿಳಾಸಗಳನ್ನೆಲ್ಲ ನಮೂದಿಸಿ.
  • ಆನ್‌ಲೈನ್‌ ಮೂಲಕ ಪೇಮೆಂಟ್‌ ಮಾಡಿ.
  • ಮುದ್ರಿತ ದಾಖಲೆಗಳು ನಿಮಗೆ ಅಂಚೆಯ ಮೂಲಕ ಬರುತ್ತವೆ. ಪಿಡಿಎಫ್‌ ದಾಖಲೆಗಳು ಇಮೇಲ್‌ನಲ್ಲಿ ಬರುತ್ತವೆ.
  • ಈ ಜಮೀನನ್ನು ನೀವು ಬೇರೆ ಯಾರಿಗಾದರೂ ಮಾರಬಹುದು ಅಥವಾ ವರ್ಗಾಯಿಸಬಹುದು.

ಯಾರು ಮಾರುವವರು?
ಚಂದ್ರನಲ್ಲಿನ ಜಮೀನಿನ ತುಣುಕುಗಳನ್ನು ಮಾರುವ ಹಲವು ಸಂಸ್ಥೆಗಳಿವೆ- ಲ್ಯೂನಾ ಸೊಸೈಟಿ ಇಂಟರ್‌ನ್ಯಾಷನಲ್‌ (LSI), ಇಂಟರ್‌ನ್ಯಾಷನಲ್‌ ಲ್ಯೂನಾರ್‌ ಲ್ಯಾಂಡ್ಸ್‌ ಅಥಾರಿಟಿ, ಸೀ ಆಫ್‌ ಟ್ರಾಂಕ್ವಿಲಿಟಿ, ಲ್ಯೂನಾರ್‌ ಲ್ಯಾಂಡ್ಸ್‌ ರಿಜಿಸ್ಟ್ರಿ ಇತ್ಯಾದಿ. LSI ವೆಬ್‌ಸೈಟ್‌ನಲ್ಲಿ ಈಗಾಗಲೇ 53,000 ಮಂದಿ ಜಮೀನು ಖರೀದಿಸಿದ್ದಾರೆ. ಈ ಸಂಸ್ಥೆಗಳಿಗೆ ಚಂದ್ರನ ಮೇಲಿನ ಹಕ್ಕುಸ್ವಾಮ್ಯ ಕೊಟ್ಟವರಾರು? ಗೊತ್ತಿಲ್ಲ. ಆದರೆ ಇದರಿಂದ ಬಂದ ಹಣವನ್ನು ತಾವು ಖಾಸಗಿ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ಬಳಸುತ್ತೇವೆ ಎನ್ನುತ್ತವೆ.

ಇದನ್ನೂ ಓದಿ: ತಂತ್ರಜ್ಞಾನ: ಕಾರು ಖರೀದಿಗೆ ಪರಿಗಣಿಸುವ 3 ಹೊಸ ಅಂಶಗಳು ನಿಮಗೆ ಗೊತ್ತೆ?

ಇದು ಸಾಧ್ಯವೇ?
ಬಾಹ್ಯಾಕಾಶವನ್ನು ಬಳಸುವ ಎಲ್ಲ ದೇಶಗಳ ನಡುವೆ ʼಭೂಮಿಯಾಚೆಗಿನ ಬಾಹ್ಯಾಕಾಶ ಒಪ್ಪಂದʼ ಜಾರಿಯಲ್ಲಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕಾನೂನುಗಳು ಇಲ್ಲಿ ಅನ್ವಯ ಆಗುತ್ತವೆ. ಇದರ ಪ್ರಕಾರ, ʼʼಭೂಮಿಯ ಆಚೆಗಿನ ಬಾಹ್ಯಾಕಾಶವು ಯಾವುದೇ ದೇಶದ ಸಾರ್ವಭೌಮತೆಗೆ ಬಳಕೆ, ಸ್ವಾಧೀನ, ಇನ್ಯಾವುದೇ ರೀತಿಯಲ್ಲಿ ಒಳಪಡುವುದಿಲ್ಲʼʼ ಎಂದು ಈ ಒಪ್ಪಂದಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. 1967ರಲ್ಲಿ ಬ್ರಿಟನ್‌, ಅಮೆರಿಕ, ರಷ್ಯಾ, ಭಾರತ ಸೇರಿದಂತೆ 109 ದೇಶಗಳು ಇದಕ್ಕೆ ಸಹಿ ಹಾಕಿವೆ.

ʼʼಆಯಾ ದೇಶದ ಸರಕಾರಗಳ ಅನುಮತಿಯಿಲ್ಲದೆ ಯಾವುದೇ ಸಂಘಟನೆ ಸ್ವತಂತ್ರ ಸಂಶೋಧನೆ, ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿ ಎತ್ತಿಕೊಳ್ಳುವಂತಿಲ್ಲʼʼ ಎಂಬುದು ಕೂಡ ಈ ಒಪ್ಪಂದದ ಆರ್ಟಿಕಲ್‌ 6ರಲ್ಲಿ ಇದೆ.

ಹಾಗಿದ್ದರೆ ಈ ಜಮೀನು ಖರೀದಿಗಳು ನಿಜಕ್ಕೂ ಏನು? ಇವುಗಳಿಗೆ ಏನಾದರೂ ಅರ್ಥ ಇದೆಯೇ?

ಸದ್ಯಕ್ಕಂತೂ ಇಲ್ಲ. ಈ ಖರೀದಿಗಳನ್ನು ಯಾವ ಸರಕಾರವೂ ಮಾನ್ಯ ಮಾಡುವುದಿಲ್ಲ. ಮುದ್ರಿತ ದಾಖಲೆಗಳಿಗೂ ಮಾನ್ಯತೆಯಿಲ್ಲ.

ಹಾಗಿದ್ದರೆ ಈಗಾಗಲೇ ಖರೀದಿಸಿದವರು, ಇನ್ನೂ ಖರೀದಿಸುತ್ತಿರುವವರ ಸಂಗತಿ ಏನು?

ಇದಕ್ಕೆ ನೇರ ಉತ್ತರವಿಲ್ಲ. ಕೆಲವು ವರ್ಷಗಳ ಹಿಂದೆ, ಕ್ರಿಪ್ಟೋಕರೆನ್ಸಿ ಕೂಡ ಇಂಥದೇ ಒಂದು ʼಗಾಳಿಯಲ್ಲಿ ನಡೆಯುವ ವ್ಯವಹಾರʼ ಎನಿಸಿಕೊಂಡಿತ್ತು. ಮುಂದೆ ಚಂದ್ರನ ಜಮೀನು ಖರೀದಿಯೂ ಹೀಗೆ ಆಗಬಹುದೇ? ಕಾಲವೇ ಹೇಳಬೇಕು.

ಅಲ್ಲಿಯ ವರೆಗೆ? ಇಂಥ ಖರೀದಿಗಳಿಗೆ ಭಾವನಾತ್ಮಕ ಮೌಲ್ಯ ಮಾತ್ರವೇ ಇರುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

CGI Technology In Film: ʼವೆಸ್ಟ್‌ವರ್ಲ್ಡ್‌ʼನಿಂದ ʼಅವತಾರ್‌ʼ ಚಿತ್ರದವರೆಗೆ ಸಿಜಿಐ ತಂತ್ರಜ್ಞಾನದ ರೋಚಕ ಹಾದಿ! ವಿಡಿಯೊಗಳಿವೆ

ಹೊಸ ತಂತ್ರಜ್ಞಾನಗಳು, ಆವಿಷ್ಕಾರಗಳು ಚಲನಚಿತ್ರ ಕ್ಷೇತ್ರದಲ್ಲೂ ಸಾಕಷ್ಟು ನಡೆದಿದೆ. ಇದರಲ್ಲಿ ಸಿಜಿಐ (CGI Technology In Film) ಕೂಡ ಒಂದು. 1970ರ ದಶಕದ ಆರಂಭದ ದಿನಗಳಿಂದಲೂ ಕಂಪ್ಯೂಟರ್ ರಚಿತ ಚಿತ್ರಣ (CGI- computer generated imagery) ಸಾಕಷ್ಟು ಪ್ರಯೋಗಗಳಿಗೆ ಒಳಗಾಗಿದೆ. ಇದು ಸಾಕಷ್ಟು ಅದ್ಭುತ ಚಲನಚಿತ್ರಗಳ ಮೇಲೆ ಪ್ರಭಾವವನ್ನು ಬೀರಿದೆ. ಕಥೆ ಹೇಳುವ ಶೈಲಿ ಮತ್ತು ದೃಶ್ಯ ಸಂಯೋಜನೆಯ ಗಡಿಗಳನ್ನು ವಿಸ್ತರಿಸಿದೆ. ಚಲನಚಿತ್ರ ರಂಗದಲ್ಲಿ ಸಿಜಿಐ ನ ಮೈಲುಗಲ್ಲು ಹೇಗಿತ್ತು ಎನ್ನುವ ಕಿರು ನೋಟ ಇಲ್ಲಿದೆ.

VISTARANEWS.COM


on

By

CGI Technology In Film
Koo

ಹಿಂದಿನ ದಿನಗಳಲ್ಲಿ ಚಲನಚಿತ್ರಗಳಲ್ಲಿ (film) ಒಂದು ವಿಶೇಷ ಸನ್ನಿವೇಶವನ್ನು ಚಿತ್ರಿಸಬೇಕಾದರೆ ಸೆಟ್‌ಗಳ ನಿರ್ಮಾಣಕ್ಕೆ ನಿರ್ಮಾಪಕರು (filmmakers), ಕೆಮರಾಮೆನ್‌ಗಳು (camera men) ಸಾಕಷ್ಟು ಕಷ್ಟಪಡುತ್ತಿದ್ದರು. ಆದರೆ ಈಗ ಎಲ್ಲವೂ ಕಂಪ್ಯೂಟರ್ ರಚಿತ ಚಿತ್ರಣ (CGI- computer generated imagery) ತಂತ್ರಜ್ಞಾನದ (CGI Technology In Film) ಮೂಲಕ ನಡೆದುಹೋಗುತ್ತದೆ. ಇದೀಗ ʼಮುಂಜ್ಯಾʼ ಎಂಬ ಭಾರತದ ಚಿತ್ರದಲ್ಲಿ ಈ ತಂತ್ರಜ್ಞಾನ ಬಳಸಲಾಗುತ್ತಿದೆ. ʼಮುಂಜ್ಯಾʼ ಭಾರತದ ಮೊದಲ CGI ಚಿತ್ರ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ತಂತ್ರಜ್ಞಾನದ ಹಿನ್ನೋಟ ಇಲ್ಲಿ ಕೊಡಲಾಗಿದೆ.

ಸಿನಿಮಾ ಜಗತ್ತಿನಲ್ಲಿ ಸಿಜಿಐಯ ವಿಕಾಸ ಒಂದು ಪ್ರಮುಖ ಮೈಲುಗಲ್ಲು ಎಂದರೆ ತಪ್ಪಾಗಲಾರದು. ಇದು ಸಿನಿಮಾದ ಭವಿಷ್ಯವನ್ನೇ ಬದಲಾಯಿಸಿತ್ತು. ಹಿಂದೆ ಚಲನಚಿತ್ರ ನಿರ್ಮಾಪಕರು ಪ್ರೇಕ್ಷಕರ ಗ್ರಹಿಕೆಯನ್ನು ರೂಪಿಸಲು ವಿವಿಧ ಪ್ರಯೋಗಗಳನ್ನು ಮಾಡುತ್ತಿದ್ದರು ಜೊತೆಗೆ ಆಪ್ಟಿಕಲ್ ತಂತ್ರಗಳನ್ನು ಅವಲಂಬಿಸಿದ್ದರು. ಕೆಮರಾ ಕೋನಗಳು, ಲೆನ್ಸ್ ಆಯ್ಕೆ ಮತ್ತು ವಿಸ್ತಾರವಾಗಿ ವಿನ್ಯಾಸಗೊಳಿಸಿದ ಸೆಟ್‌ ಗಳ ತಂತ್ರಗಳನ್ನು ಬಳಸುತ್ತಿದ್ದರು. ಹಸಿರು ಮತ್ತು ವಾಲ್ಯೂಮೆಟ್ರಿಕ್ ಎಲ್ಇಡಿ ಪರದೆಯನ್ನು ಬಳಸಿ ಹಿಂದೆ ಸೆಟ್ ವಿಸ್ತರಣೆಗಳನ್ನು ಕೈಯಿಂದ ನಿಖರವಾಗಿ ಚಿತ್ರಿಸಲಾಗುತ್ತಿತ್ತು.

ಈ ವಿಧಾನಕ್ಕೆ ಈಗ ಡಿಜಿಟಲ್ ಸ್ಪರ್ಶ ಸಿಕ್ಕಿದೆ. ಇಲ್ಲಿ ಕಂಪ್ಯೂಟರ್‌ಗಳು ಮತ್ತು ವಿವಿಧ ಸಾಫ್ಟ್‌ವೇರ್‌ಗಳು ಊಹಿಸುವ ಯಾವುದೇ ವಿನ್ಯಾಸವನ್ನು ರಚಿಸಲು ಇದು ಸಹಾಯ ಮಾಡುತ್ತದೆ. ಡಿಜಿಟಲ್ ಸೃಜನಶೀಲತೆಯೆಡೆಗಿನ ಈ ಬದಲಾವಣೆಯು ಸಿಜಿಐ ತಂತ್ರಜ್ಞಾನದ ಪ್ರಗತಿ ವೇಗವನ್ನು ಹೆಚ್ಚಿಸಿತ್ತು.


ಕಂಪ್ಯೂಟರ್ ಗ್ರಾಫಿಕ್ಸ್ ಬಳಸಿ ಈಗಾಗಲೇ ಹಲವಾರು ಚಿತ್ರಗಳನ್ನು ನಿರ್ಮಿಸಲಾಗಿದೆ. ಉದಾಹರಣೆಗೆ ಮಾರ್ವೆಲ್‌ನ ದಿ ಅವೆಂಜರ್ಸ್‌ನಲ್ಲಿ ಮಾರ್ಕ್ ರುಫಲೋ ಧರಿಸಿರುವ ಸೂಟ್ ಮತ್ತು ಸುತ್ತಲಿನ ದೃಶ್ಯಗಳಿಗೆ ಮತ್ತೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ.

ಸಿಜಿಐಯ ಮೊದಲ ಪ್ರಯೋಗ ಯಾವಾಗ?

ಸಿಜಿಐ ಅನ್ನು ಆಧುನಿಕ ಚಲನಚಿತ್ರಗಳಲ್ಲಿ ಮಾತ್ರ ನಾವು ಗಮನಿಸಿದ್ದೇವೆ. ಆದರೆ ಇದು 2000 ರ ದಶಕದಿಂದ ಹಾಲಿವುಡ್‌ನ ಚಿತ್ರೀಕರಣದಲ್ಲಿ ಬಳಕೆಯಾಗುತ್ತಿದೆ. ಕಂಪ್ಯೂಟರ್ ರಚಿತ ಚಿತ್ರಣ 1973ರ ವೆಸ್ಟ್‌ವರ್ಲ್ಡ್ ಮತ್ತು 1977ರ ಸ್ಟಾರ್ ವಾರ್ಸ್‌ನಲ್ಲೂ ಮಾಡಲಾಗಿದೆ.

ವೆಸ್ಟ್‌ವರ್ಲ್ಡ್ ( 1973)

ವೆಸ್ಟ್‌ವರ್ಲ್ಡ್ ಚಲನಚಿತ್ರದಲ್ಲಿ ಸಿಜಿಐ ಸಂಕ್ಷಿಪ್ತವಾಗಿ ಸರಿಸುಮಾರು 10 ಸೆಕೆಂಡ್ ನಷ್ಟೇ ಬಳಕೆ ಮಾಡಲಾಗಿದೆ. ಚಿತ್ರದಲ್ಲಿ ಇದು ಬಣ್ಣಗಳನ್ನು ಬದಲಾಯಿಸುವುದು, ಸಂಕುಚಿತಗೊಳಿಸುವುದು ಮತ್ತು ಚಿತ್ರಣವನ್ನು ವಿಸ್ತರಿಸುವುದು ಸೇರಿದೆ.


ಸ್ಟಾರ್ ವಾರ್ಸ್ (1977)

ಇದರಲ್ಲಿ ಚಿಕಣಿ ಮಾದರಿಗಳು ಮತ್ತು ಬೆಳಕಿನ ತಂತ್ರಗಳ ಮಿಶ್ರಣವನ್ನು ಮಾಡಲಾಗಿದೆ. ಚಿತ್ರದ ಪ್ರಮುಖ ಕ್ಷಣವೊಂದರಲ್ಲಿ ಲ್ಯೂಕ್ ಸ್ಕೈವಾಕರ್ ಮತ್ತು ಇತರ ಎಕ್ಸ್-ವಿಂಗ್ ಪೈಲಟ್‌ಗಳು ಡೆತ್ ಸ್ಟಾರ್‌ನ ಮೇಲೆ ತಮ್ಮ ಆಕ್ರಮಣಕ್ಕೆ ತಯಾರಿ ನಡೆಸುತ್ತಿರುವಾಗ ಇದನ್ನು ಪ್ರಯೋಗಿಸಲಾಗಿದೆ. ಇದರಲ್ಲಿ 3ಡಿ ಯುದ್ಧತಂತ್ರದ ನಕ್ಷೆಯನ್ನು ತೋರಿಸಲಾಗಿದೆ. ಇದನ್ನು ಇಲಿನಾಯ್ಸ್ ವಿಶ್ವವಿದ್ಯಾಲಯವು ಚಿಕಾಗೋದ ಎಲೆಕ್ಟ್ರಾನಿಕ್ ದೃಶ್ಯೀಕರಣ ಪ್ರಯೋಗಾಲಯ ತಂಡದೊಂದಿಗೆ ಅಭಿವೃದ್ಧಿಪಡಿಸಿದೆ.


ಸಿಜಿಐನ ಸಂಪೂರ್ಣ ಬಳಕೆ

ಸಂಪೂರ್ಣವಾಗಿ ಸಿಜಿಐ ಪಾತ್ರವನ್ನು ಸ್ಟಾರ್ ವಾರ್ಸ್ ಮತ್ತೊಮ್ಮೆ ಪರಿಚಯಿಸಿದ್ದು 1999ರ ಸ್ಟಾರ್ ವಾರ್ಸ್ ಸಂಚಿಕೆ 1: ದಿ ಫ್ಯಾಂಟಮ್ ಮೆನೇಸ್‌ನಲ್ಲಿ ಜಾರ್ ಜಾರ್ ಬಿಂಕ್ಸ್ ಮೂಲಕ.

ಸ್ಟಾರ್ ವಾರ್ಸ್: ಎ ನ್ಯೂ ಹೋಪ್ (1977)

1977ರಲ್ಲಿ ಬಿಡುಗಡೆಯಾದ ಜಾರ್ಜ್ ಲ್ಯೂಕಾಸ್‌ನ ಸ್ಟಾರ್ ವಾರ್ಸ್: ಎ ನ್ಯೂ ಹೋಪ್‌ ಪ್ರಾಯೋಗಿಕ ಮತ್ತು ಚಿಕಣಿ ಪರಿಣಾಮಗಳೊಂದಿಗೆ ಬೆರೆಸಿದ ಸಿಜಿಐ ಅಂಶಗಳ ಮನಮುಟ್ಟುವ ಬಳಕೆಯ ಮೂಲಕ ಚಲನಚಿತ್ರ ನಿರ್ಮಾಣದ ಹೊಸ ಯುಗವನ್ನು ಪ್ರಾರಂಭಿಸಿತು. 80ರ ದಶಕದಲ್ಲಿ ಇದು ಟ್ರಾನ್, ಪ್ರಿಡೇಟರ್, ಸೂಪರ್‌ಮ್ಯಾನ್, ಇ.ಟಿ. ಮತ್ತು ಏಲಿಯನ್ಸ್‌ನಂತಹ ಚಲನಚಿತ್ರಗಳ ಮೇಲೆ ಇದು ಪ್ರಭಾವ ಬೀರಿತು.


ಟರ್ಮಿನೇಟರ್ 2: ಜಡ್ಜ್‌ಮೆಂಟ್ ಡೇ (1991)

ಹೆಚ್ಚಿನ ಚಲನಚಿತ್ರ ಶಾಲೆಗಳಲ್ಲಿ ಒಂದು ಸಾಮಾನ್ಯ ಮಾತು ಇದೆ. ಸ್ಟಾರ್ ವಾರ್ಸ್ ಆಟವನ್ನು ಪ್ರಾರಂಭಿಸಿತು ಮತ್ತು ನಂತರ ಜುರಾಸಿಕ್ ಪಾರ್ಕ್ ಅದನ್ನು ಬದಲಾಯಿಸಿತು. ಇದಕ್ಕೆ ಸರಿಯಾದ ಒಂದು ಚಿತ್ರ ಟರ್ಮಿನೇಟರ್ 2: ಜಡ್ಜ್‌ಮೆಂಟ್ ಡೇ. ಈ ಚಿತ್ರದಲ್ಲಿ ಸಿಜಿಐ ಬಳಕೆಯಲ್ಲಿ ಇದು ಒಂದು ಅತ್ಯಂತ ಪ್ರಭಾವಶಾಲಿ ಚಲನಚಿತ್ರ. ಯಾಕೆಂದರೆ ಇಲ್ಲಿ ಖಳನಾಯಕನನ್ನು ಸಿಜಿಐ ಮೂಲಕ ಸಂಪೂರ್ಣ ಲಿಕ್ವಿಡ್ ಮೆಟಲ್ ಪಾತ್ರದಲ್ಲಿ ರಚಿಸಲಾಗಿದೆ. ಈ ಮೂಲಕ ಇದು ಯಾವುದೇ ಆಕಾರವನ್ನು ಮಾರ್ಫ್ ಮಾಡಬಹುದು ಎಂಬುದನ್ನು ನಿರೂಪಿಸಿತ್ತು.


ಜುರಾಸಿಕ್ ಪಾರ್ಕ್ (1995)

ಜುರಾಸಿಕ್ ಪಾರ್ಕ್ ಒಂದು ಬ್ಲಾಕ್ಬಸ್ಟರ್ ಚಿತ್ರ. ಇದು ಸಿಜಿಐ ಇತಿಹಾಸದಲ್ಲೊಂದು ಮೈಲುಗಲ್ಲು ಸ್ಥಾಪಿಸಿತ್ತು. ಇದರಲ್ಲಿ ಡೈನೋಸಾರ್‌ಗಳು ಕಲಾವಿದರೊಂದಿಗೆ ಸಂವಾದ ನಡೆಸುವುದನ್ನು ಕಾಣಬಹುದು. ಇದರಲ್ಲಿ ಮಾನವನ ಪಕ್ಕದಲ್ಲಿ ಡೈನೋಸಾರ್ ತಲೆಯ ಕ್ಲೋಸ್-ಅಪ್ ಅಗತ್ಯವಿರುವಾಗ ಪ್ರಾಯೋಗಿಕ ಡೈನೋಸಾರ್ ಮಾದರಿಯನ್ನು ಬಳಸಿದ್ದರೆ ದೂರದ ಶಾಟ್ ಗಳಿಗಾಗಿ ಡೈನೋಸಾರ್‌ಗಳ ಸಿಜಿಐ ಆವೃತ್ತಿಗಳನ್ನು ಬಳಸಲಾಗಿತ್ತು.


ದಿ ಮ್ಯಾಟ್ರಿಕ್ಸ್ (1999)

ಪ್ರೇಕ್ಷಕರನ್ನು ಬೆಚ್ಚಿಬೀಳಿಸಿದ ದೃಶ್ಯ ದಿ ಮ್ಯಾಟ್ರಿಕ್ಸ್ ಚಿತ್ರದ ತುಣುಕು ಚಿತ್ರ ನೋಡಿದವರೆಲ್ಲರಿಗೂ ನೆನಪಿರಬಹುದು. 360 ಡಿಗ್ರಿ ಕ್ಯಾಮರಾ ರಿಗ್‌ನ ಬಳಕೆ, ಮಧ್ಯದಲ್ಲಿ ಕೀನು ರೀವ್ಸ್‌ನ ಪ್ರತ್ಯೇಕ ಫೋಟೋಗಳನ್ನು ತೆಗೆಯುವ ಮೂಲಕ ನಟರು ಮತ್ತು ಸಿಜಿಐ ಒಟ್ಟಿಗೆ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ಈ ಚಿತ್ರ ತೋರಿಸಿಕೊಟ್ಟಿದೆ. ಸಿಜಿಐ ಅನ್ನು ದೋಷರಹಿತವಾಗಿ ಕಾರ್ಯಗತಗೊಳಿಸಿದ ಕೀರ್ತಿ ಈ ಚಿತ್ರ ತಂಡದ್ದು.


ಅವತಾರ್ (2009)

ಅವತಾರ್ ಚಿತ್ರದ ದೃಶ್ಯಾವಳಿಗಳು ಎಲ್ಲರ ಕಣ್ಣ ಮುಂದಿದೆ. ಇದರಲ್ಲಿ ಮೋಷನ್ ಕ್ಯಾಪ್ಚರ್ ಮತ್ತು ಸಿಜಿಐ ಸಂಪೂರ್ಣ ಮಿಶ್ರಣವಾಗಿತ್ತು.ಇದರಲ್ಲಿ ಕ್ಯಾಮರಾಗಳನ್ನು ಬಳಸಿಕೊಂಡು ನಟರ ಹೆಚ್ಚು ವಿವರವಾದ ಫೇಸ್ ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸಲಾಗಿದೆ. ಆ ಡೇಟಾವನ್ನು ಬಳಿಕ ಕಂಪ್ಯೂಟರ್ ರಚಿತ ಅಕ್ಷರ ಮಾದರಿಗಳಿಗೆ ವರ್ಗಾಯಿಸುತ್ತದೆ. ಸಂಪೂರ್ಣ ಮೂರು ಗಂಟೆಗಳ ಚಿತ್ರದಲ್ಲಿ ಶೇ. 60ರಷ್ಟನ್ನು ಸಿಜಿಐ ಮೂಲಕವೇ ಚಿತ್ರಣ ಮಾಡಲಾಗಿದೆ. ಈ ಚಿತ್ರವು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ.

ಇನ್ಸೆಪ್ಶನ್ (2010)

ಕ್ರಿಸ್ಟೋಫರ್ ನೋಲನ್ ಅವರ ಇನ್ಸೆಪ್ಶನ್ ನಲ್ಲಿ ಸಿಜಿಐನೊಂದಿಗೆ ಸಂಕೀರ್ಣ ನಿರೂಪಣಾ ರಚನೆಯ ನವೀನ ಅಪ್ಲಿಕೇಶನ್‌ ಅನ್ನು ಬಳಸಲಾಗಿದೆ. ಇದು ಕನಸಿನ ಕುಶಲತೆಯ ಮೂಲಕ ಮಾನವ ಮನಸ್ಸಿನ ಆಳವನ್ನು ಪರಿಶೋಧಿಸುತ್ತದೆ. ವೀಕ್ಷಕರ ವಾಸ್ತವತೆಯ ಗ್ರಹಿಕೆಗೆ ಸವಾಲು ಹಾಕುವ ಈ ಚಿತ್ರ ಪ್ರೇಕ್ಷಕರನ್ನು ತನ್ನ ಕಥೆಯೊಳಗೆ ಲೀನ ವಾಗುವಂತೆ ಮಾಡುತ್ತದೆ.


ಅವತಾರ್: ದಿ ವೇ ಆಫ್ ವಾಟರ್ (2022)

ಜೇಮ್ಸ್ ಕ್ಯಾಮರೂನ್ ಅವರ ಅವತಾರ್‌ನ ಬಹುನಿರೀಕ್ಷಿತ ಮುಂದುವರಿದ ಭಾಗ ದಿ ವೇ ಆಫ್ ವಾಟರ್ ಸಿನಿಮೀಯ ತಂತ್ರಜ್ಞಾನ ಮತ್ತು ಕಥೆ ಹೇಳುವಿಕೆಯನ್ನು ಮೀರಿ ಮತ್ತಷ್ಟು ಅಭಿವೃದ್ಧಿ ಹೊಂದಿದೆ. ಅತ್ಯಾಧುನಿಕ ಸಿಜಿಐ ಮತ್ತು ಕಾರ್ಯಕ್ಷಮತೆ ಕ್ಯಾಪ್ಚರ್ ತಂತ್ರಜ್ಞಾನದ ಪ್ರಭಾವಶಾಲಿ ಪರಾಕಾಷ್ಠೆಯನ್ನು ಈ ಚಿತ್ರದಲ್ಲಿ ಕಾಣಬಹುದು.


ಸಿಜಿಐ ಪ್ರಭಾವ ಹೇಗಿದೆ?

ಇತ್ತೀಚಿನ ವರ್ಷಗಳಲ್ಲಿ ಸ್ಟುಡಿಯೋಗಳು ಮತ್ತು ಚಲನಚಿತ್ರ ನಿರ್ಮಾಪಕರು ಸಿಜಿಐ ಅನ್ನು ದೂರವಿಡುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸಿಜಿಐ ಬಳಕೆಯಿಂದ ನಿಜವಾದ ಅನುಭವ, ಸಂತೃಪ್ತಿ ಕಲಾವಿದನಿಗೆ ಸಿಗುವುದಿಲ್ಲ. ಕಲಾವಿದರೊಬ್ಬರ ಪ್ರಕಾರ ಶೂಟಿಂಗ್ ವೇಳೆ ನಾನು ಜೆಟ್ ಗಳಲ್ಲಿ ಹಾರಲು ಬಯಸಿದರೆ ಸಿಜಿಐನಲ್ಲಿ ಜೆಟ್‌ಗಳೇ ಇರುವುದಿಲ್ಲ ಎನ್ನುತ್ತಾರೆ. ಈ ಹೇಳಿಕೆ ಚಿತ್ರರಂಗದ ಮಾರುಕಟ್ಟೆಯಲ್ಲಿ ಬಹುದೊಡ್ಡ ಪ್ರಭಾವವನ್ನು ಬೀರಿದೆ. ಯಾಕೆಂದರೆ ಚಿತ್ರಗಳಲ್ಲಿ ನೋಡುವ ದೃಶ್ಯಗಳು ಯಾವುದು ನಿಜವಲ್ಲ ಎಂದು ಪ್ರೇಕ್ಷಕರಿಗೆ ಗೊತ್ತಾದರೆ ಅವರು ಚಿತ್ರದ ಮೇಲಿನ ಆಸಕ್ತಿ ಕಳೆದುಕೊಳ್ಳಬಹುದು ಎನ್ನುವ ವಾದವೂ ಇದೆ.

ಇದನ್ನೂ ಓದಿ: Munjya Teaser: ʻಮುಂಜ್ಯಾʼ ಟೀಸರ್‌ ಔಟ್‌; ಇದು ಭಾರತದ ಮೊದಲ CGI ಚಿತ್ರ!

ಸಿಜಿಐನ ಭವಿಷ್ಯವೇನು?

ಸಿಜಿಐ ಭವಿಷ್ಯವು ಸ್ಟುಡಿಯೋದ ಮಿತಿಯಲ್ಲಿರುವುದು ಸ್ಪಷ್ಟ. ಚಿತ್ರೀಕರಣದಲ್ಲಿ ಈಗ ಅದ್ಧೂರಿ ಬಜೆಟ್‌ಗಳ ಯುಗವು ಕ್ಷೀಣಿಸುತ್ತಿದೆ. ಆದರೆ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ನೈಜ ಸಮಯದ ಫೋಟೊರಿಯಾಲಿಸ್ಟಿಕ್ ಹಿನ್ನೆಲೆಗಳನ್ನು ಪ್ರದರ್ಶಿಸುವ ಎಲ್ಇಡಿ ಪರದೆಗಳನ್ನು ಒಳಗೊಂಡಿರುವ ವರ್ಚುವಲ್ ಸೆಟ್ ಗಳ ಆಗಮನವು ಅಭೂತಪೂರ್ವ ಉನ್ನತ ಗುಣಮಟ್ಟದ ಸಿಜಿಐ ಯುಗವನ್ನು ಸೂಚಿಸುತ್ತದೆ.

ದಿ ಬ್ಯಾಟ್‌ಮ್ಯಾನ್, ಡ್ಯೂನ್ ಮತ್ತು ದಿ ಮ್ಯಾಂಡಲೋರಿಯನ್‌ನಂತಹ ಕೃತಿಗಳಲ್ಲಿ ಈ ನವೀನ ತಂತ್ರಜ್ಞಾನದ ಸಾಮರ್ಥ್ಯವನ್ನು ಪ್ರದರ್ಶಿಸುವ ಗ್ರೀಗ್ ಫ್ರೇಸರ್‌ನಂತಹ ಸಿನಿಮಾಟೋಗ್ರಾಫರ್‌ಗಳು ಮುಂಚೂಣಿಯಲ್ಲಿದ್ದಾರೆ.

Continue Reading

ವಿದೇಶ

Air Crashes: ವಿಮಾನ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ 10 ಪ್ರಭಾವಿ ರಾಜಕಾರಣಿಗಳಿವರು

ಇರಾನ್ ಅಧ್ಯಕ್ಷರ ಸಾವು ವಿಶ್ವದಲ್ಲೇ ರಾಜಕೀಯ ನಾಯಕರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಮಾಡುವಂತೆ ಮಾಡಿದೆ. ವಿಮಾನ, ಹೆಲಿಕಾಪ್ಟರ್ ಅಪಘಾತದಲ್ಲಿ (Air Crashes) ರಾಜಕೀಯ ನಾಯಕರ ಸಾವು ಇದೇ ಮೊದಲಲ್ಲ. ವಿಶ್ವದ ಹತ್ತು ಪ್ರಮುಖ ನಾಯಕರು ಈ ರೀತಿಯ ದುರಂತದಲ್ಲಿ ಮೃತಪಟ್ಟಿದ್ದಾರೆ.

VISTARANEWS.COM


on

By

Air Crashes
Koo

ಇರಾನ್ ಅಧ್ಯಕ್ಷ (Iran President) ಇಬ್ರಾಹಿಂ ರೈಸಿ (Ebrahim Raisi) ಅವರು ಭಾನುವಾರ ರಾತ್ರಿ ದೇಶದ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ (Air Crashes) ಸಾವನ್ನಪ್ಪಿದ್ದಾರೆ. ರೈಸಿ ಅವರ ದಣಿವರಿಯದ ಸ್ಫೂರ್ತಿಯ ಸೇವೆಯ ಮಾರ್ಗದಲ್ಲಿ ಮುಂದುವರಿಯುವುದಾಗಿ ಇರಾನ್‌ ಆಡಳಿತ ರಾಷ್ಟ್ರದ ಜನರಿಗೆ ಭರವಸೆ ನೀಡಿದೆ. ವಿಮಾನ ದುರಂತಗಳಲ್ಲಿ ರಾಜಕೀಯ ನಾಯಕರು ಸಾವನ್ನಪ್ಪಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಬೇರೆಬೇರೆ ರಾಷ್ಟ್ರಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಆ ಕುರಿತ ಹಿನ್ನೋಟ ಇಲ್ಲಿದೆ.


ಸ್ವೀಡನ್ ಪ್ರಧಾನಿ ಅರ್ವಿಡ್ ಲಿಂಡ್‌ಮನ್ (1936)

ಸ್ವೀಡನ್‌ನ ಹಿಂದಿನ ಅಡ್ಮಿರಲ್ ಮತ್ತು ಎರಡು ಬಾರಿ ಸ್ವೀಡನ್‌ನ ಪ್ರಧಾನಮಂತ್ರಿ ಆಗಿದ್ದ ಸಾಲೋಮನ್ ಅರ್ವಿಡ್ ಅಚಾಟೆಸ್ ಲಿಂಡ್‌ಮನ್ ಪ್ರಭಾವಿ ಸಂಪ್ರದಾಯವಾದಿ ರಾಜಕಾರಣಿಯಾಗಿದ್ದರು. 1936ರ ಡಿಸೆಂಬರ್ 9ರಂದು ಲಿಂಡ್‌ಮನ್ ಅವರು ಪ್ರಯಾಣಿಸುತ್ತಿದ್ದ ಡಗ್ಲಾಸ್ ಡಿಸಿ-2 ಯುನೈಟೆಡ್ ಕಿಂಗ್‌ಡಂನ ಕ್ರೊಯ್ಡಾನ್ ವಿಮಾನವು ನಿಲ್ದಾಣದ ಬಳಿ ದಟ್ಟವಾದ ಮಂಜಿನಿಂದ ಟೇಕಾಫ್ ಆದ ಸ್ವಲ್ಪ ಸಮಯದ ಅನಂತರ ಮನೆಗಳಿಗೆ ಅಪ್ಪಳಿಸಿದಾಗ ಮೃತಪಟ್ಟರು.

ಫಿಲಿಪೈನ್ಸ್ ಅಧ್ಯಕ್ಷ ರಾಮನ್ ಮ್ಯಾಗ್ಸೆಸೆ (1957)

ಫಿಲಿಪೈನ್ಸ್‌ನ ಏಳನೇ ಅಧ್ಯಕ್ಷ ರಾಮನ್ ಮ್ಯಾಗ್ಸೆಸೆ ಅವರು ತಮ್ಮ ಬಲವಾದ ಭ್ರಷ್ಟಾಚಾರ ವಿರೋಧಿ ನಿಲುವು ಮತ್ತು ಜನಪ್ರಿಯ ಕಾರ್ಯಕ್ಕೆ ಹೆಸರುವಾಸಿಯಾಗಿದ್ದರು. ಅವರ ಅಧ್ಯಕ್ಷತೆಯು 1957ರ ಮಾರ್ಚ್ 17ರಂದು ಥಟ್ಟನೆ ಕೊನೆಗೊಂಡಿತು. “ಮೌಂಟ್ ಪಿನಾಟುಬೊ” ಎಂದು ಕರೆಯಲ್ಪಡುವ ಅವರ ಸಿ-47 ವಿಮಾನವು ಸೆಬು ನಗರದ ಮನುಂಗಲ್ ಪರ್ವತಕ್ಕೆ ಅಪ್ಪಳಿಸಿತು. ಆಗ ಮ್ಯಾಗ್ಸೆಸೆ ಮೃತಪಟ್ಟರು. 25 ಪ್ರಯಾಣಿಕರ ಪೈಕಿ ಒಬ್ಬರು ಮಾತ್ರ ಬದುಕುಳಿದಿದ್ದರು.


ಬ್ರೆಜಿಲ್ ಅಧ್ಯಕ್ಷ ನೆರೆಯು ರಾಮೋಸ್ (1958)

ಬ್ರೆಜಿಲ್‌ನ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನೆರೆಯು ರಾಮೋಸ್ ಅವರು 1958ರ ಜೂನ್ 16ರಂದು ನಿಧನರಾದರು. ರಾಮೋಸ್ ಅವರು ಕ್ರೂಝೈರೊ ಡೊ ಸುಲ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಪರಾನಾ ರಾಜ್ಯದ ಕುರಿಟಿಬಾ ಅಫೊನ್ಸೊ ಪೆನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿ ಮೃತಪಟ್ಟರು.

ಇರಾಕ್ ಅಧ್ಯಕ್ಷ ಅಬ್ದುಲ್ ಸಲಾಂ ಆರಿಫ್ (1966)

ಇರಾಕ್‌ನ ಎರಡನೇ ಅಧ್ಯಕ್ಷರಾದ ಅಬ್ದುಲ್ ಸಲಾಂ ಆರಿಫ್ ರಾಜಪ್ರಭುತ್ವವನ್ನು ಉರುಳಿಸಿದ 1958ರ ಕ್ರಾಂತಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. 1966ರ ಏಪ್ರಿಲ್ 13ರಂದು ಆರಿಫ್ ಅವರ ಇರಾಕಿ ಏರ್ ಫೋರ್ಸ್ ವಿಮಾನ, ಡಿ ಹ್ಯಾವಿಲ್ಯಾಂಡ್ ಡಿಹೆಚ್ 104 ಡೋವ್, ಬಸ್ರಾ ಬಳಿ ಅಪಘಾತಕ್ಕೀಡಾದಾಗ ನಿಧನರಾದರು. ಅವರ ಸಹೋದರ ಅಬ್ದುಲ್ ರಹಮಾನ್ ಆರಿಫ್ ಅವರ ಅನಂತರ ಅಧ್ಯಕ್ಷರಾದರು.


ಬ್ರೆಜಿಲ್ ಅಧ್ಯಕ್ಷ ಹಂಬರ್ಟೊ ಡಿ ಅಲೆಂಕಾರ್ ಕ್ಯಾಸ್ಟೆಲೊ ಬ್ರಾಂಕೊ (1967)

ಬ್ರೆಜಿಲ್‌ನ 26ನೇ ಅಧ್ಯಕ್ಷ ಮತ್ತು ಮಾಜಿ ಮಿಲಿಟರಿ ಸರ್ವಾಧಿಕಾರದ ಪ್ರಮುಖ ವ್ಯಕ್ತಿಯಾಗಿದ್ದ ಹಂಬರ್ಟೊ ಡಿ ಅಲೆಂಕಾರ್ ಕ್ಯಾಸ್ಟೆಲೊ ಬ್ರಾಂಕೊ 1967ರ ಜುಲೈ 18ರಂದು ನಿಧನರಾದರು. ಅವರ ಅಧ್ಯಕ್ಷೀಯ ಅವಧಿ ಮುಗಿದ ಸ್ವಲ್ಪ ಸಮಯದ ಅನಂತರ ಕ್ಯಾಸ್ಟೆಲೊ ಬ್ರಾಂಕೋ ಅವರ ಪೈಪರ್ ಪಿಎ -23 ಅಜ್ಟೆಕ್ ವಿಮಾನ ಬ್ರೆಜಿಲಿಯನ್ ವಾಯುಪಡೆ ವಿಮಾನಕ್ಕೆ ಡಿಕ್ಕಿ ಹೊಡೆದು ದುರಂತ ಸಂಭವಿಸಿತು. ಅವರ ಸಾವು ಭಾರಿ ಚರ್ಚೆಗೆ ಕಾರಣವಾಗಿತ್ತು.

ಇಂದಿರಾ ಗಾಂಧಿ ಮಗ ಸಂಜಯ್ ಗಾಂಧಿ (1980)

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ್ ಗಾಂಧಿ 1980ರ ಜೂನ್ 23ರಂದು ವಿಮಾನ ಅಪಘಾತದಲ್ಲಿ ನಿಧನರಾದರು. ದೆಹಲಿಯ ಸಫ್ದರ್‌ಜಂಗ್ ವಿಮಾನ ನಿಲ್ದಾಣದಲ್ಲಿ ತಾವು ಚಲಾಯಿಸುತ್ತಿದ್ದ ವಿಮಾನದ ನಿಯಂತ್ರಣವನ್ನು ಕಳೆದುಕೊಂಡು ದುರಂತ ಸಾವು ಕಂಡರು.


ಲೆಬನಾನ್ ಪ್ರಧಾನಿ ರಶೀದ್ ಕರಾಮಿ (1987)

ಲೆಬನಾನ್‌ನ ಅತಿ ಹೆಚ್ಚು ಬಾರಿ ಚುನಾಯಿತರಾದ ಪ್ರಧಾನಮಂತ್ರಿ ರಶೀದ್ ಕರಾಮಿ ಅವರು ಲೆಬನಾನಿನ ಅಂತರ್ಯುದ್ಧದ ಸಮಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. 1987ರ ಜೂನ್ 1ರಂದು, ಬೈರುತ್‌ಗೆ ಹೋಗುವ ಮಾರ್ಗದಲ್ಲಿ ಅವರ ಹೆಲಿಕಾಪ್ಟರ್‌ನಲ್ಲಿ ಬಾಂಬ್ ಸ್ಫೋಟಗೊಂಡು ಕರಾಮಿ ಕೊಲ್ಲಲ್ಪಟ್ಟರು.

ಪಾಕಿಸ್ತಾನದ ಅಧ್ಯಕ್ಷ ಮುಹಮ್ಮದ್ ಜಿಯಾ-ಉಲ್-ಹಕ್ (1988)

ಪಾಕಿಸ್ತಾನದ ಆರನೇ ಅಧ್ಯಕ್ಷರಾದ ಜನರಲ್ ಮುಹಮ್ಮದ್ ಜಿಯಾ-ಉಲ್-ಹಕ್ ಅವರು 1988ರ ಆಗಸ್ಟ್ 17ರಂದು ನಿಧನರಾದರು. ಅವರು ಪ್ರಯಾಣಿಸುತ್ತಿದ್ದ ಸಿ-130 ಹರ್ಕ್ಯುಲಸ್ ವಿಮಾನವು ಬಹವಾಲ್‌ಪುರದಿಂದ ಟೇಕಾಫ್ ಆದ ಸ್ವಲ್ಪ ಸಮಯದ ಅನಂತರ ಅಪಘಾತಕ್ಕೀಡಾಯಿತು. ಅಪಘಾತದ ಕಾರಣವು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಇದನ್ನೂ ಓದಿ: Ebrahim Raisi: ಹೆಲಿಕಾಫ್ಟರ್‌ ಪತನದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತ್ಯು; ವಿಧ್ವಂಸಕ ಕೃತ್ಯವೇ?


ಕಾಂಗ್ರೆಸ್‌ ನಾಯಕ ಮಾಧವರಾವ್ ಸಿಂಧಿಯಾ (2001)

ಮಾಧವರಾವ್ ಸಿಂಧಿಯಾ ಭಾರತದ ಪ್ರಮುಖ ರಾಜಕಾರಣಿ ಮತ್ತು ಕಾಂಗ್ರೆಸ್ ನಾಯಕರಾಗಿದ್ದರು. 2001ರ ಸೆಪ್ಟೆಂಬರ್ 30ರಂದು ವಿಮಾನ ಅಪಘಾತದಲ್ಲಿ ದಾರುಣ ಅಂತ್ಯ ಕಂಡರು. ಉತ್ತರ ಪ್ರದೇಶದ ಮೈನ್‌ಪುರಿ ಬಳಿ ಅವರ ಖಾಸಗಿ ಬೀಚ್‌ಕ್ರಾಫ್ಟ್ ಕಿಂಗ್ ಏರ್ ಸಿ 90 ಗಾಳಿಯಲ್ಲಿ ಬೆಂಕಿ ಹೊತ್ತಿಕೊಂಡು ಅಪಘಾತ ಸಂಭವಿಸಿತ್ತು.

ಚಿಲಿಯ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ (2024)

ಚಿಲಿಯ ಮಾಜಿ ಅಧ್ಯಕ್ಷರಾದ ಸೆಬಾಸ್ಟಿಯನ್ ಪಿಮೆರಾ ಅವರು ಫೆಬ್ರವರಿ 2024ರಲ್ಲಿ ನಿಧನರಾದರು. ಪಿನೆರಾ ಅವರ ಹೆಲಿಕಾಪ್ಟರ್ ದಕ್ಷಿಣ ಚಿಲಿಯ ಸರೋವರಕ್ಕೆ ಅಪ್ಪಳಿಸಿತು. ಈ ದುರಂತದಲ್ಲಿ ಅವರು ಪ್ರಾಣ ಕಳೆದುಕೊಂಡರು. ಅವರು ಸತತ ಎರಡು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದ ವೈ ಎಸ್‌ ರಾಜಶೇಖರ್‌ ರೆಡ್ಡಿ ಅವರೂ ಹೆಲಿಕಾಪ್ಟರ್‌ ಅಪಘಾತದಲ್ಲಿ ಮೃತಪಟ್ಟಿದ್ದರು.

Continue Reading

ವಿಜ್ಞಾನ

Nuclear Test In Pokhran: ಭಾರತ ಮೊದಲ ಪರಮಾಣು ಪರೀಕ್ಷೆ ನಡೆಸಿ ಇಂದಿಗೆ 50 ವರ್ಷ; ಏನಿದು ಸ್ಮೈಲಿಂಗ್‌ ಬುದ್ಧ?

ಭಾರತ ಪರಮಾಣು ಶಕ್ತಿ ರಾಷ್ಟ್ರವಾಗಿ ಇಂದಿಗೆ 50 ವರ್ಷ. ಇಂದಿಗೆ ಸುಮಾರು 50 ವರ್ಷಗಳ ಹಿಂದೆ ಭಾರತ ರಾಜಸ್ಥಾನದ ಪೋಖ್ರಾನ್‌ನಲ್ಲಿ ತನ್ನ ಮೊದಲ ಪರಮಾಣು ಪರೀಕ್ಷೆಯನ್ನು (Nuclear Test In Pokhran) ನಡೆಸಿತ್ತು. ಈ ಕುರಿತ ಕುತೂಹಲಕರ ಹಿನ್ನೋಟ ಇಲ್ಲಿದೆ.

VISTARANEWS.COM


on

By

Nuclear test at Pokhran
Koo

ಇಂದಿಗೆ 50 ವರ್ಷಗಳ ಹಿಂದೆ ಭಾರತದ (India) ಇತಿಹಾಸದಲ್ಲಿ ಒಂದು ಅಭೂತಪೂರ್ವ ಕ್ಷಣ ದಾಖಲಾಗಿತ್ತು. ಅದುವೇ ಅಣು ಪರೀಕ್ಷೆ. ಪೋಖ್ರಾನ್‌ನಲ್ಲಿ ಪರಮಾಣು ಪರೀಕ್ಷೆ (Nuclear Test In Pokhran) ನಡೆಸಲು ಭಾರತಕ್ಕೆ ಸುಮಾರು ಎರಡು ವರ್ಷಗಳ ತಯಾರಿ ಬೇಕಾಯಿತು. ಆಗಿನ ಪ್ರಧಾನಿಯಾಗಿದ್ದ (Prime Minister) ಇಂದಿರಾ ಗಾಂಧಿಯವರು (Indira gandhi) 1972ರ ಸೆಪ್ಟೆಂಬರ್‌ನಲ್ಲಿ ಸ್ವದೇಶಿ ವಿನ್ಯಾಸದ ಪರಮಾಣು ಸಾಧನವನ್ನು ಸ್ಫೋಟಿಸಲು ಬಿಎಆರ್‌ಸಿ (BARC) ವಿಜ್ಞಾನಿಗಳಿಗೆ ಅನುಮತಿ ನೀಡಿದ್ದರು.

ಭಾರತ ಇಂದು ರಾಜಸ್ಥಾನದ ಪೋಖ್ರಾನ್‌ನಲ್ಲಿ ತನ್ನ ಮೊದಲ ಪರಮಾಣು ಪರೀಕ್ಷೆಯ 50ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಅಂದಿನ ಪರೀಕ್ಷೆ ಭಾರತವನ್ನು ಪರಮಾಣು ಶಕ್ತಿಯನ್ನಾಗಿ ರೂಪಿಸಿತು.

ಸ್ಮೈಲಿಂಗ್ ಬುದ್ಧ ಹೆಸರು ನೀಡಿದ್ದು ಯಾಕೆ?

ಈ ಪರೀಕ್ಷೆಗೆ ‘ಸ್ಮೈಲಿಂಗ್ ಬುದ್ಧ’ ಎಂಬ ಸಂಕೇತನಾಮವನ್ನು ನೀಡಲಾಯಿತು. 1974ರ ಮೇ 18ರಂದು ಆ ವರ್ಷದ ಬುದ್ಧ ಪೂರ್ಣಿಮೆಯಂದು ಪರೀಕ್ಷೆಯನ್ನು ನಡೆಸಲಾಗಿದ್ದರಿಂದ ಈ ಹೆಸರನ್ನು ಆಯ್ಕೆ ಮಾಡಲಾಯಿತು. “ಬುದ್ಧ ಅಂತಿಮವಾಗಿ ಮುಗುಳ್ನಕ್ಕ” ಎಂಬುದು ಭಾರತದ ಪ್ರಧಾನ ಪರಮಾಣು ಸಂಶೋಧನಾ ಸಂಸ್ಥೆ ಭಾಭಾ ಪರಮಾಣು ಸಂಶೋಧನಾ ಕೇಂದ್ರದ (BARC) ನಿರ್ದೇಶಕ ರಾಜಾ ರಾಮಣ್ಣ ಅವರು ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಸಂದೇಶವನ್ನು ರವಾನಿಸಿದ್ದರು!


ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಕಾಯಂ ಸದಸ್ಯತ್ವ ಹೊಂದಿರದ ರಾಷ್ಟ್ರವೊಂದು ನಡೆಸಿದ ಮೊದಲ ಪರಮಾಣು ಪರೀಕ್ಷೆ ಇದಾಗಿದೆ.

ಪೋಖ್ರಾನ್‌ನಲ್ಲಿ ಸ್ಫೋಟಿಸಿದ ಸಾಧನದ ಬಗ್ಗೆ ಚರ್ಚೆಯಾಗಿದ್ದರೂ, ಇದು ಸುಮಾರು 8- 12 ಕಿಲೋ ಟನ್‌ಗಳಷ್ಟು ಟಿಎನ್‌ಟಿ (ಪರಮಾಣು ಪರೀಕ್ಷೆ ಮಾಪನ) ಎಂದು ನಂಬಲಾಗಿದೆ. ಪರೀಕ್ಷೆಯ ಪ್ರಮುಖ ಅಂಶವೆಂದರೆ ಭಾರತವು ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ಗುಪ್ತಚರ ಸಂಸ್ಥೆಗಳ ಪತ್ತೆಯನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದು. ಇಂತಹ ಪರೀಕ್ಷೆಗಳು ಪರಮಾಣು ಪ್ರಸರಣಕ್ಕೆ ಕಾರಣವಾಗಬಹುದು ಎಂದು ಹೇಳಿದ ಅಮೆರಿಕದಂತಹ ರಾಷ್ಟ್ರದ ನಿರ್ಬಂಧಗಳ ಸರಣಿಯನ್ನು ದೇಶವು ಎದುರಿಸಿತು.


ಎರಡು ವರ್ಷಗಳ ತಯಾರಿ

ಈ ಪರೀಕ್ಷೆಯನ್ನು ನಡೆಸಲು ಭಾರತಕ್ಕೆ ಸುಮಾರು ಎರಡು ವರ್ಷಗಳ ತಯಾರಿ ಬೇಕಾಯಿತು. ಇಂದಿರಾ ಗಾಂಧಿಯವರು 1972ರ ಸೆಪ್ಟೆಂಬರ್‌ನಲ್ಲಿ ಸ್ವದೇಶಿ ವಿನ್ಯಾಸದ ಪರಮಾಣು ಸಾಧನವನ್ನು ಸ್ಫೋಟಿಸಲು ಬಿಎಆರ್‌ಸಿ ವಿಜ್ಞಾನಿಗಳಿಗೆ ಅನುಮತಿ ನೀಡಿದ್ದರು.

ಇದನ್ನೂ ಓದಿ: Chinese Scientists: ಇನ್ನು ಮನುಷ್ಯರು 130 ವರ್ಷ ಬದುಕಬಹುದು! ಚೀನಾ ವಿಜ್ಞಾನಿಗಳ ಸಂಶೋಧನೆ

ಪೋಖ್ರಾನ್-II ಪರೀಕ್ಷೆ

1974ರ ಅನಂತರ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ 1998ರಲ್ಲಿ ಭಾರತವು ಅದೇ ಸ್ಥಳದಲ್ಲಿ ಪೋಖ್ರಾನ್- II ಹೆಸರಿನಲ್ಲಿ ಮತ್ತೊಂದು ಪರಮಾಣು ಪರೀಕ್ಷೆ ನಡೆಸಿತು. ಈ ಪರೀಕ್ಷೆ ಮೇ 1998ರಲ್ಲಿ ಪೋಖ್ರಾನ್‌ನಲ್ಲಿ ಐದು ಪರಮಾಣು ಸ್ಫೋಟಗಳ ಸರಣಿಯನ್ನು ಕಂಡವು. ಪೋಖ್ರಾನ್-II ಪರೀಕ್ಷೆಗಳ ವಾರ್ಷಿಕೋತ್ಸವದ ನೆನಪಿಗಾಗಿ ಪ್ರತಿ ವರ್ಷ ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಗುತ್ತದೆ. 2020ರಿಂದ ಭಾರತವು 1974ರ ಪೋಖ್ರಾನ್ ಪರೀಕ್ಷೆಗಳ ವಾರ್ಷಿಕೋತ್ಸವವನ್ನು ಆಚರಿಸಲು ಪ್ರಾರಂಭಿಸಿತ್ತು.

Continue Reading

ರಾಜಕೀಯ

Prime Minister Of India: ಸುದೀರ್ಘ ಕಾಲ ಪ್ರಧಾನಿಯಾಗಿದ್ದ ನೆಹರೂ, ಇಂದಿರಾ ದಾಖಲೆಯನ್ನು ಮೋದಿ ಮುರಿಯಲು ಸಾಧ್ಯವೆ?

ಭಾರತ ಸ್ವಾತಂತ್ರ್ಯವಾದ ಬಳಿಕ 14 ಮಂದಿ ಪ್ರಧಾನ ಮಂತ್ರಿ (Prime Minister Of India) ಸ್ಥಾನವನ್ನು ಅಲಂಕರಿಸಿದ್ದಾರೆ. ಅವರಲ್ಲಿ ಕೆಲವರು ಮಾತ್ರ ಸುದೀರ್ಘಾವಧಿಗೆ ಪ್ರಧಾನಿಯಾಗಿದ್ದರು. ಯಾರು ಎಷ್ಟು ಅವಧಿಗೆ ಪ್ರಧಾನಮಂತ್ರಿಯಾಗಿದ್ದರು? ಈ ಕುರಿತ ದಾಖಲೆ ಇಲ್ಲಿದೆ.

VISTARANEWS.COM


on

By

Prime Minister of India
Koo

ಪ್ರತಿ ಬಾರಿಯೂ ಲೋಕಸಭಾ ಚುನಾವಣೆ (Lok sabha election) ಘೋಷಣೆಯಾದ ಬಳಿಕ ಮುಂದಿನ ಪ್ರಧಾನಿ (Prime Minister Of India) ಯಾರಾಗಬಹುದು ಎನ್ನುವ ಕುತೂಹಲವಂತೂ ಇದ್ದೇ ಇರುತ್ತದೆ.

ಭಾರತ ಸ್ವಾತಂತ್ರ್ಯವಾದ ಬಳಿಕ 14 ಮಂದಿ ಪ್ರಧಾನಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರೆಂದರೆ ಜವಾಹರ್ ಲಾಲ್ ನೆಹರೂ (Jawaharlal Nehru) , ಲಾಲ್ ಬಹಾದ್ದೂರ್ ಶಾಸ್ತ್ರೀ (Lal Bahadur Shastri), ಇಂದಿರಾ ಗಾಂಧಿ (Indira gandhi), ಮೊರಾರ್ಜಿ ದೇಸಾಯಿ (morarji desai), ಚರಣ್ ಸಿಂಗ್ (charan singh), ರಾಜೀವ್ ಗಾಂಧಿ (rajiv gandhi), ವಿಶ್ವನಾಥ್ ಪ್ರತಾಪ್ ಸಿಂಗ್ (vishwanath pratap singh), ಚಂದ್ರಶೇಖರ್ (chandra shekhar) , ಪಿ.ವಿ. ನರಸಿಂಹ ರಾವ್ (p.v. narasimha rao), ಅಟಲ್ ಬಿಹಾರಿ ವಾಜಪೇಯಿ (atal bihari vajpayee), ಎಚ್.ಡಿ. ದೇವೇಗೌಡ (h.d. deve gowda), ಇಂದರ್ ಕುಮಾರ್ ಗುಜ್ರಾಲ್ (inder kumar gujral), ಮನ್ ಮೋಹನ್ ಸಿಂಗ್ (manmohan singh), ನರೇಂದ್ರ ಮೋದಿ (narendra modi). ಇವರಲ್ಲಿ ಕೆಲವರು ಮಾತ್ರ ದೀರ್ಘಾವಧಿಗೆ ಪ್ರಧಾನಿ ಯಾಗಿದ್ದರು. ಅವರು ಯಾರು? ಇಲ್ಲಿದೆ ಮಾಹಿತಿ.


ಇಂದಿರಾ ಗಾಂಧಿ (1966ರಿಂದ1977, 1980ರಿಂದ1984)

ಜವಾಹರಲಾಲ್ ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ ಒಟ್ಟು 15 ವರ್ಷ 350 ದಿನಗಳ ಕಾಲ ಪ್ರಧಾನಿಯಾಗಿದ್ದರು. 1975ರಲ್ಲಿ ತುರ್ತುಪರಿಸ್ಥಿತಿಯ ಜಾರಿ, ಆಪರೇಷನ್‌ ಬ್ಲೂ ಸ್ಟಾರ್‌ ಕಾರ್ಯಾಚರಣೆ ಸೇರಿದಂತೆ ಹಲವು ದಿಟ್ಟ ಮತ್ತು ವಿವಾದಾತ್ಮಕ ನಿರ್ಧಾರಗಳಿಗೆ ಹೆಸರುವಾಸಿಯಾಗಿದ್ದರು. ತುರ್ತು ಪರಿಸ್ಥಿತಿ ಹೇರಿಕೆ ವಿರುದ್ಧ ದೇಶಾದ್ಯಂತ ಜನಾಕ್ರೋಶ ಭುಗಿಲೆದ್ದು ಇಂದಿರಾ ಗಾಂಧಿ 1977ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರು ಹೀನಾಯ ಹಿನ್ನಡೆ ಕಂಡು ಅಧಿಕಾರ ತ್ಯಜಿಸಬೇಕಾಯಿತು. ಆದರೆ 1980ರಲ್ಲಿ ಅವರು ಮತ್ತೆ ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ಮರಳಿದರು. ಆದರೆ 1984ರಲ್ಲಿ ಸಿಖ್‌ ಭಯೋತ್ಪಾದನೆಗೆ ಬಲಿಯಾದರು.


ಅಟಲ್ ಬಿಹಾರಿ ವಾಜಪೇಯಿ (1996, 1998-2004)

ನುರಿತ ವಾಗ್ಮಿ ಮತ್ತು ದೂರದೃಷ್ಟಿಯ ನಾಯಕ, ಅಟಲ್ ಬಿಹಾರಿ ವಾಜಪೇಯಿ ಅವರು ಮೂರು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಒಮ್ಮೆ 13 ದಿನ, ಮತ್ತೊಮ್ಮೆ 13 ತಿಂಗಳಷ್ಟೇ ಅವರು ಪ್ರಧಾನಿಯಾಗಿದ್ದರು. ಆದರೆ 1998ರಿಂದ 2004ರ ಅವರು ಪೂರ್ಣಾವಧಿ ಪ್ರಧಾನಿಯಾಗಿದ್ದರು. ಒಂದೆಡೆ ಪರಮಾಣು ಪರೀಕ್ಷೆಯ ದಿಟ್ಟತನ ಮತ್ತು ಇನ್ನೊಂದೆಡೆ ಪಾಕಿಸ್ತಾನದೊಂದಿಗೆ ಶಾಂತಿಯನ್ನು ಬೆಳೆಸುವ, ಸಂದರ್ಭ ಬಂದಾಗ ಅದಕ್ಕೆ ಬುದ್ಧಿ ಕಲಿಸುವ ಅವರ ಉಪಕ್ರಮಗಳಿಗಾಗಿ ವಾಜಪೇಯಿ ಸದಾ ನೆನಪಿನಲ್ಲಿರುತ್ತಾರೆ. ಹೆದ್ದಾರಿ ನಿರ್ಮಾಣದ ಕ್ರಾಂತಿ ನಡೆದಿದ್ದು ಅವರ ಕಾಲದಲ್ಲಿ.


ಮನಮೋಹನ್ ಸಿಂಗ್ (2004-2014)

ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದ ಮನಮೋಹನ್ ಸಿಂಗ್ ಅವರು ಒಟ್ಟು 10 ವರ್ಷಗಳ ಕಾಲ ಪ್ರಧಾನಿಯಾಗಿ ಸತತ ಎರಡು ಬಾರಿ ಸೇವೆ ಸಲ್ಲಿಸಿದರು. ಅವರ ಅಧಿಕಾರಾವಧಿಯು ಗಮನಾರ್ಹ ಆರ್ಥಿಕ ಸುಧಾರಣೆಗಳು ಮತ್ತು ಉದಾರೀಕರಣದ ಉಪಕ್ರಮಗಳಿಂದ ಗುರುತಿಸಲ್ಪಟ್ಟಿದೆ.


ನರೇಂದ್ರ ಮೋದಿ (2014ರಿಂದ ಈಗಿನವರೆಗೆ)

ಪ್ರಸ್ತುತ ಭಾರತದ ಪ್ರಧಾನಮಂತ್ರಿ ಆಗಿರುವ ನರೇಂದ್ರ ಮೋದಿ ಅವರು ಸತತ ಎರಡನೇ ಅವಧಿಯಲ್ಲಿದ್ದಾರೆ. ವರ್ಚಸ್ವಿ ನಾಯಕತ್ವಕ್ಕೆ ಹೆಸರುವಾಸಿಯಾದ ಅವರು ದೇಶದಲ್ಲಿ ಗಮನಾರ್ಹ ಸುಧಾರಣೆಗಳನ್ನು ತಂದಿದ್ದಾರೆ. ದೇಶ ಮತ್ತು ವಿದೇಶಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದಾರೆ. ಇದೇ ವೇಳೆ ಅವರನ್ನು ವಿರೋಧಿಸುವವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ಪಾಕಿಸ್ತಾನಕ್ಕೆ ನಡುವ ಹುಟ್ಟಿಸಿದ ಕೀರ್ತಿ ಖ್ಯಾತಿ ಇವರಿಗಿದೆ. ನೋಟ್‌ ಬ್ಯಾನ್‌, ಜಿಎಸ್‌ಟಿ ಜಾರಿಯಂಥ ಆರ್ಥಿಕ ಸುಧಾರಣೆ ಕ್ರಮಗಳನ್ನೂ ಕೈಗೊಂಡಿದ್ದಾರೆ. ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ವಿದೇಶಿ ನಾಯಕರೊಂದಿಗೆ ಮಾತುಕತೆ ನಡೆಸಿ ಶಾಂತಿ ನೆಲೆಸುವ ಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಎರಡನೇ ಅವಧಿಯು 2019ರಲ್ಲಿ ಪ್ರಾರಂಭವಾಯಿತು. ಮೂರನೇ ಅವಧಿಯಲ್ಲೂ ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಎಂದು ಚುನಾವಣೆ ಪೂರ್ವ ಸಮೀಕ್ಷೆಗಳು ಹೇಳಿವೆ. ಆದರೆ ಮೋದಿ ಅವರು ಮೂರನೇ ಅವಧಿಯಲ್ಲಿ ಪ್ರಧಾನಿಯಾಗಿ ಪೂರ್ಣಾವಧಿ ಮುಗಿಸಿದರೂ ನೆಹರೂ ಮತ್ತು ಇಂದಿರಾ ಗಾಂಧಿ ಅವರ ಸುದೀರ್ಘ ಆಡಳಿತ ಅವಧಿಯ ದಾಖಲೆ ಹಾಗೆಯೇ ಮುಂದುವರಿಯುತ್ತದೆ. ಈ ದಾಖಲೆ ಮುರಿಯಬೇಕೆಂದರೆ ಮೋದಿ ನಾಲ್ಕನೇ ಬಾರಿಯೂ ಪ್ರಧಾನಿ ಆಗಬೇಕಾಗುತ್ತದೆ!

Continue Reading
Advertisement
Karnataka rain
ಮಳೆ42 mins ago

Karnataka Rain : ಮಳೆ ಅವಘಡಕ್ಕೆ ಜನರು ತತ್ತರ; ಧರೆಗುರುಳಿದ ಮರಗಳು, ಕುಸಿದು ಬಿದ್ದ ಮನೆಗಳು

Shivasharane Hemaraddi Mallamma Jayanti celebration in Srisailam
ಯಾದಗಿರಿ44 mins ago

Yadgiri News: ಶ್ರೀಶೈಲಂನಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ

union minister Pralhad Joshi latest statement in bidar
ಕರ್ನಾಟಕ46 mins ago

Pralhad Joshi: ಅಮಾಯಕ ಹೆಣ್ಣುಮಕ್ಕಳ ಹತ್ಯೆಯಾದರೂ ಪೊಲೀಸರ ಮೌನ; ಪ್ರಲ್ಹಾದ ಜೋಶಿ ಆರೋಪ

Rave party 86 people including Hema and Ashi consumed drugs in the rave party Blood report positive
ಕ್ರೈಂ48 mins ago

Rave party: ರೇವ್‌ ಪಾರ್ಟಿಯಲ್ಲಿ ಹೇಮಾ, ಆಶಿ ಸೇರಿ 86 ಮಂದಿಯಿಂದ ಮಾದಕ ವಸ್ತು ಸೇವನೆ; ಬ್ಲಡ್‌ ರಿಪೋರ್ಟ್‌ ಪಾಸಿಟಿವ್‌

Remedies For SadeSati
ಧಾರ್ಮಿಕ51 mins ago

Remedies For SadeSati: ಶನಿಯ ವಕ್ರದೃಷ್ಟಿ ಕಡಿಮೆ ಮಾಡಲು ಇಲ್ಲಿದೆ ಸುಲಭ ಪರಿಹಾರ

Sharad Kelkar
ಸಿನಿಮಾ53 mins ago

Sharad Kelkar: ‘ಬಾಹುಬಲಿ’ಗೆ ಧ್ವನಿ ನೀಡಿದ್ದು ಮರೆಯಲಾಗದ ಅನುಭವ ಎಂದ ಶರದ್ ಕೇಳ್ಕರ್

Glenn Maxwell
ಪ್ರಮುಖ ಸುದ್ದಿ1 hour ago

Glenn Maxwell : ಮ್ಯಾಕ್ಸ್​​ವೆಲ್​ಗೆ ಕೊಟ್ಟ ಹಣ ವಾಪಸ್​ ಪಡೆಯಿರಿ; ಅಭಿಮಾನಿಗಳ ಒತ್ತಾಯ

Theatre
ಸಿನಿಮಾ1 hour ago

‘ಸ್ಟಾರ್‌’ ಸಿನಿಮಾಗಳಿಲ್ಲದ ಕಾರಣ ಚಿತ್ರಮಂದಿರಗಳ ಬಂದ್‌ಗೆ ಚಿಂತನೆ;‌ ನಿರ್ಮಾಪಕರಿಂದ ಭಾರಿ ಆಕ್ರೋಶ!

Dengue Fever
ಆರೋಗ್ಯ1 hour ago

Dengue Fever: ಮಳೆಗಾಲ ಬರುತ್ತಿದೆ! ಡೆಂಗ್ಯೂ ಬಗ್ಗೆ ಇರಲಿ ಎಚ್ಚರಿಕೆ!

Star Gown Fashion
ಫ್ಯಾಷನ್1 hour ago

Star Gown Fashion: ಕೇಪ್‌ ಗೌನ್‌ನಲ್ಲಿ ತ್ರಿಲೋಕ ಸುಂದರಿಯಂತೆ ಕಂಡ ನಟಿ ನಮ್ರತಾ ಗೌಡ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ14 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌