Vikram | ನಟ ಸೂರ್ಯ ಅವರ ರೋಲೆಕ್ಸ್‌ ಪಾತ್ರದ ಮೇಕಪ್‌ ಮಾಡಿದವರು ಇವರೆ! - Vistara News

ಟಾಲಿವುಡ್

Vikram | ನಟ ಸೂರ್ಯ ಅವರ ರೋಲೆಕ್ಸ್‌ ಪಾತ್ರದ ಮೇಕಪ್‌ ಮಾಡಿದವರು ಇವರೆ!

ವಿಕ್ರಮ್‌ ಚಿತ್ರದ ರೋಲೆಕ್ಸ್‌ ಪಾತ್ರದಲ್ಲಿ ಮಿಂಚಿದ ಸೂರ್ಯ ಇದೀಗ ಮೇಕಪ್‌ ಮಾಡಿರುವವರ ಜತೆ ಇರುವ ಪೋಟೊ ಹಂಚಿಕೊಂಡಿದ್ದಾರೆ. ಕಮಲ್‌ಹಾಸನ್‌ ಅವರಿಗೆ ರೋಲೆಕ್ಸ್‌ ವಾಚ್‌ ಗಿಫ್ಟ್‌ ನೀಡಿದ್ದರು.

VISTARANEWS.COM


on

ರೋಲೆಕ್ಸ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಇಂಗ್ಲೆಂಡ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚಿನ ಗಳಿಕೆ ಕಂಡ ತಮಿಳು ಸಿನಿಮಾ ಎಂದರೆ ವಿಕ್ರಮ್‌. ಚಿತ್ರದ ಸಕ್ಸಸ್‌ ಬಳಿಕ ಕಮಲ್‌ ಹಾಸನ್‌ ನಿರ್ದೇಶಕರಿಗೆ ಪತ್ರ ಬರೆದು ಸಂತಸವನ್ನು ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಜೂನ್ 7ರಂದು ಕಮಲ್ ಹಾಸನ್, ನಿರ್ದೇಶಕ ಲೋಕೇಶ್ ಕನಕರಾಜ್ ಅವರಿಗೆ ಲೆಕ್ಸನ್ ಇಎಸ್ 300ಹೆಚ್ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದರು. ಮಾರನೇ ದಿನ ನಟ ಸೂರ್ಯ ಅವರಿಗೆ ರೋಲೆಕ್ಸ್‌ ಕೈಗಡಿಯಾರವನ್ನು ಕೊಡುಗೆಯಾಗಿ ನೀಡಿದ್ದರು. 

ಈ ಚಿತ್ರ ಮೂರೇ ದಿನಕ್ಕೆ 175 ಕೋಟಿ ಗಳಿಸಿ ಮುನ್ನುಗ್ಗಿತ್ತು. ಈ ವರ್ಷ ಕರ್ನಾಟಕದ ಬಾಕ್ಸ್‌ ಅಫೀಸ್‌ನಲ್ಲಿ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ತಮಿಳು ಸಿನಿಮಾ ಎನ್ನುವ ಖ್ಯಾತಿ ವಿಕ್ರಮ್‌ಗೆ ಇದೆ. ಈ ಸಿನಿಮಾದಲ್ಲಿ ಕಮಲ್‌ ಹಾಸನ್‌ ಜತೆಗೆ ಫಹಾದ್‌ ಫಾಸಿಲ್‌, ವಿಜಯ್‌ ಸೇತುಪತಿ ಹಾಗೂ ಸೂರ್ಯ ಕೂಡ ನಟಿಸಿದ್ದಾರೆ.

ಇದನ್ನೂ ಓದಿ | ಕಮಲ್‌ ಹಾಸನ್‌ ನಟನೆಯ ವಿಕ್ರಮ್‌ ಚಿತ್ರಕ್ಕೆ ಸಿಕ್ಕಿತು ಪ್ರಮಾಣ ಪತ್ರ

ಖಡಕ್‌ ಲುಕ್‌ನೊಂದಿಗೆ ಎಂಟ್ರಿ ಆದ ಸೂರ್ಯ

ಸಿನಿಮಾ ರಿಲೀಸ್‌ ಆಗಿರುವ ಮೊದಲು ಸೂರ್ಯ ಸಿನಿಮಾದಲ್ಲಿ ಇರುವರಾ ಎಂದು ಸಾಕಷ್ಟು ಕುತೂಹಲವನ್ನು ಚಿತ್ರತಂಡ ಸೃಷ್ಟಿ ಮಾಡಿತ್ತು. ಆದರೆ ಸಿನಿಮಾದಲ್ಲಿ ಕೊನೆಗೆ ರಿವೀಲ್‌ ಆಗುವ ಸೂರ್ಯನ ಲುಕ್‌ಗೆ ಫ್ಯಾನ್‌ಗಳು ಫಿದಾ ಆಗಿದ್ದಾರೆ. ʼಡೋಂಟ್‌ ಕಾಲ್‌ ಮಿ ರೋಲೆಕ್ಸ್‌ , ಕಾಲ್‌ ಮಿ ಸರ್‌ ʼಎನ್ನುವ ಡೈಲಾಗ್‌ ಮೂಲಕ ಮಿಂಚಿದ್ದರು. ಟ್ವೀಟ್‌ನಲ್ಲಿ ಹ್ಯಾಷ್‌ಟ್ಯಾಗ್‌ ರೋಲೆಕ್ಸ್‌ ಎಂದು ಅಭಿಮಾನಿಗಳು ಖುಷಿಯನ್ನು ವ್ಯಕ್ತಪಡಿಸಿದ್ದರು.

ಇದನ್ನೂ ಓದಿ | ನಿರ್ದೇಶಕನಿಗೆ ʼಲೈಫ್‌ ಟೈಮ್‌ ಸೆಟಲ್‌ಮೆಂಟ್‌ʼ ಮಾಡಿದ ಕಮಲ್‌ ಹಾಸನ್‌

ಹೆಚ್ಚಾಗಿ ಈ ಸಿನಿಮಾದಲ್ಲಿ ಸೂರ್ಯ ಅವರ ಟೆರಿಫಯಿಂಗ್‌ ಲುಕ್‌ಗೆ ಫ್ಯಾನ್‌ ಮನಸೋತಿದ್ದರು. ಇದೀಗ ಮೇಕಪ್‌ ಕಲಾವಿದೆ ಸೆರಿನಾ ಟಿಕ್ಸೆರಾ ಅವರೊಂದಿಗೆ ಸೂರ್ಯ ಅವರು ರೋಲೆಕ್ಸ್‌ ಲುಕ್‌ನಲ್ಲಿ ಇರುವ ಚಿತ್ರವನ್ನು ಬಿಟಿಎಸ್‌ ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ ಕಮಲ್‌ ಹಾಸನ್‌ ಪಾತ್ರದ ಏಜೆಂಟ್‌ ವಿಕ್ರಮ್‌ ಅವರನ್ನು ಹಿಂಬಾಲಿಸುವ ಡ್ರಗ್‌ ಕ್ರೈಮ್‌ ಸಿಂಡಿಕೇಟ್‌ನ ಕಿಂಗ್‌ಪಿನ್‌ನ ವಿರೋಧಿ ರೋಲೆಕ್ಸ್‌ ಪಾತ್ರವನ್ನು ಸೂರ್ಯ ನಿರ್ವಹಿಸಿದ್ದಾರೆ. ಸೂರ್ಯ ಕೇವಲ 5 ನಿಮಿಷಗಳು ಮಾತ್ರ ಪಾತ್ರ ನಿರ್ವಹಿಸಿದ್ದರು. ಇದು ಅಭಿಮಾನಿಗಳನ್ನು ಮೆಚ್ಚಿಸಿತ್ತು.

ಇದನ್ನೂ ಓದಿ| Movie Review: Vikram | ತೆರೆಯ ಮೇಲೆ ಘಟಾನುಘಟಿಗಳ ತ್ರಿವಿಕ್ರಮ, ಕ್ಷಣ ಕ್ಷಣವೂ ರೋಚಕ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಟಾಲಿವುಡ್

Kamal Haasan: ಮುಂದೊಂದು ದಿನ ದೀಪಿಕಾ ಮಗು ಸಿನಿಮಾ ಮಾಡಬಹುದು ಎಂದು ಭವಿಷ್ಯ ನುಡಿದ ಕಮಲ್‌ ಹಾಸನ್‌!

Kamal Haasan: ಟ್ರೇಲರ್‌ನಲ್ಲಿ ಸಿನಿಮಾದ ಪಂಚ್‌ ಡೈಲಾಗ್‌, ಫೈಟ್ಸ್‌ ನೋಡಿ ಅಭಿಮಾನಿಗಳು ದಶಕದ ಟ್ರೇಲರ್‌ ಎಂದು ಹೇಳುತ್ತಿದ್ದಾರೆ. ಚಿತ್ರದ ಟ್ರೇಲರ್‌ ನೋಡುವವರಿಗೆ ಇದು ಯುಗಗಳ ಕಥೆ ಎಂಬುದು ಸ್ಪಷ್ಟವಾಗುತ್ತದೆ. ರೆಕಾರ್ಡ್‌ನಲ್ಲಿ ಇಲ್ಲಿಯವರೆಗೂ ಒಂದೇ ಒಂದು ಫೈಟ್‌ ಸೋತಿಲ್ಲ ಎಂದು ಟಾಲಿವುಡ್‌ ಯಂಗ್‌ ರೆಬಲ್‌ ಸ್ಟಾರ್‌ ಪ್ರಭಾಸ್‌ ಹೇಳುವ ಡೈಲಾಗ್‌ ಟ್ರೇಲರ್‌ನ ಹೈಲೆಟ್‌ ಆಗಿದೆ.

VISTARANEWS.COM


on

Kamal Haasan predicts Deepika Padukone baby choose cinema career
Koo

ಬೆಂಗಳೂರು: : ನಾಗ್ ಅಶ್ವಿನ್ ಅವರ ಕಲ್ಕಿ 2898 ADಯ (Kalki 2898 AD) ಪ್ರೀ-ರಿಲೀಸ್ ಈವೆಂಟ್ ಮುಂಬೈನಲ್ಲಿ ಇತ್ತೀಚೆಗೆ ನಡೆದಿತ್ತು. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದ ತಂಡದಲ್ಲಿ ಕಲ್ಕಿ ಕ್ರಾನಿಕಲ್ಸ್ ಎಂಬ ಶೀರ್ಷಿಕೆಯ ಚರ್ಚೆಯ (Kamal Haasan) ಸಂದರ್ಭದಲ್ಲಿ, ಕಮಲ್ ಹಾಸನ್ ಅವರು ದೀಪಿಕಾ ಅವರ ಮಗು ಮುಂದೊಂದು ದಿನ ಸಿನಿಮಾ ಮಾಡಬಹುದು ಎಂದು ಭವಿಷ್ಯ ನುಡಿದರು.

ನಿರ್ದೇಶಕ ನಾಗ್ ಅಶ್ವಿನ್ ಅವರು ಮಗುವಿನಂತೆ ಎಂದು ದೀಪಿಕಾ ಚರ್ಚೆ ನಡೆಯುತ್ತಿರುವಾಗ ಹೇಳಿದರು. ಈ ಬಗ್ಗೆ ದೀಪಿಕಾ ಮಾತನಾಡಿ ʻʻನಾಗ್ ಅಶ್ವಿನ್ ಅವರು ಕಾಲ್‌ ಮಾಡಿದ್ದಾಗ, ನಾನು ಬಾಂಬೆಯಲ್ಲಿದ್ದೆ. ಬೇರೆ ಬೇರೆ ಶೆಡ್ಯೂಲ್‌ಗಳಲ್ಲಿ ಚಿತ್ರೀಕರಣ ನಡೆಸುತ್ತಿದ್ದರಿಂದ ಸಿನಿಮಾಗೆ ಲಾಂಗ್‌ ಬ್ರೇಕ್‌ ಹಾಕಿದ್ದೆ. ಹೀಗಾಗಿ ಒಂದು ದಿನ ನಾಗ್ ಅಶ್ವಿನ್ ಅವರು ನನಗೆ ಕರೆ ಮಾಡಿದ್ದು. ಅವರಿಂದ ತುಂಬ ಮಿಸ್ಡ್ ಕಾಲ್ ಇತ್ತು. ಹೀಗಾಗಿ ನಾನು ಏನಾಯಿತು ಎಂದು ಕೇಳಿದಾಗ, ‘ನಾವು ಕಮಲ್ ಸರ್ ಜೊತೆಗೆ ನಮ್ಮ ಮೊದಲ ದಿನವನ್ನು ಶೂಟ್ ಮಾಡಿದ್ದೇವೆ ಎಂದು ಹೇಳಲು ನಾನು ನಿಮಗೆ ಕರೆ ಮಾಡಿದ್ದೇನೆ.’ ಎಂದು ಮಗುವಿನಂತೆ ಹೇಳಿದರುʼʼಎಂದರು. ಈ ವೇಳೆ ಕಮಲ್‌ ಅವರು ನಟಿಯ ಬೇಬಿ ಬಂಪ್‌ ಕಡೆ ತೋರಿಸಿ ʻʻಮುಂದೊಂದು ದಿನ ಈ ಮಗು ಕೂಡ ಸಿನಿಮಾ ಮಾಡಲಿ ಎಂದು ಆಶಿಸುತ್ತೇವೆʼʼ ಎಂದು ಹೇಳಿದರು.

ಇದನ್ನೂ ಓದಿ: Kamal Haasan: ತಮಿಳಿಗನೊಬ್ಬ ದೇಶ ಆಳುವ ದಿನ ಏಕೆ ಬರಬಾರದು? ಕಮಲ್‌ ಹಾಸನ್‌ ಪ್ರಶ್ನೆ!

ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ಪ್ರಭಾಸ್,‍ ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಹಾಗೂ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್‍ ನಿರ್ಮಿಸಿರುವ ಈ ಚಿತ್ರವನ್ನು ನಾಗ್‍ ಅಶ್ವಿನ್‍ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್‍ 27ರಂದು ಬಿಡುಗಡೆ ಆಗಲಿದೆ.

ಟ್ರೇಲರ್‌ನಲ್ಲಿ ಸಿನಿಮಾದ ಪಂಚ್‌ ಡೈಲಾಗ್‌, ಫೈಟ್ಸ್‌ ನೋಡಿ ಅಭಿಮಾನಿಗಳು ದಶಕದ ಟ್ರೇಲರ್‌ ಎಂದು ಹೇಳುತ್ತಿದ್ದಾರೆ. ಚಿತ್ರದ ಟ್ರೇಲರ್‌ ನೋಡುವವರಿಗೆ ಇದು ಯುಗಗಳ ಕಥೆ ಎಂಬುದು ಸ್ಪಷ್ಟವಾಗುತ್ತದೆ. ರೆಕಾರ್ಡ್‌ನಲ್ಲಿ ಇಲ್ಲಿಯವರೆಗೂ ಒಂದೇ ಒಂದು ಫೈಟ್‌ ಸೋತಿಲ್ಲ ಎಂದು ಟಾಲಿವುಡ್‌ ಯಂಗ್‌ ರೆಬಲ್‌ ಸ್ಟಾರ್‌ ಪ್ರಭಾಸ್‌ ಹೇಳುವ ಡೈಲಾಗ್‌ ಟ್ರೇಲರ್‌ನ ಹೈಲೆಟ್‌ ಆಗಿದೆ.

Continue Reading

ಟಾಲಿವುಡ್

Actor Nagarjuna: ವಿಶೇಷ ಚೇತನ ಅಭಿಮಾನಿಯನ್ನು ತಳ್ಳಿದ ನಾಗಾರ್ಜುನ ಬಾಡಿಗಾರ್ಡ್‌; ಕ್ಷಮೆ ಕೇಳಿದ ನಟ!

Actor Nagarjuna: ವಿಡಿಯೊದಲ್ಲಿ ನಾಗಾರ್ಜುನ ಅವರು ತಮ್ಮ ಬಾಡಿಗಾರ್ಡ್‌ ಜತೆಗೆ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದರು. ಅವರ ಪಕ್ಕದಲ್ಲಿ ನಟ ಧನುಷ್ ಕೂಡ ಕಾಣಿಸಿಕೊಂಡಿದ್ದರು. ಹೀಗೆ ಬರುತ್ತಿರುವಾಗ ವಿಶೇಷ ಚೇತನ ಅಭಿಮಾನಿ ಒಮ್ಮೆಲೆ ನಾಗಾರ್ಜುನ ಕಡೆಗೆ ಸೆಲ್ಫಿ ಕೇಳಲು ಬಂದರು. ಆಗ ನಾಗಾರ್ಜುನ ಅವರ ಬಾಡಿಗಾರ್ಡ್‌ ಆತನನ್ನು ದೂರಕ್ಕೆ ತಳ್ಳಿದ್ದಾನೆ. ಆತ ಬೀಳುತ್ತಿದ್ದಂತೆ ಪಕ್ಕದಲ್ಲೇ ಇದ್ದ ಇತರೆ ಕೆಲಸಗಾರರು ಹಿಡಿದುಕೊಂಡಿದ್ದಾರೆ.

VISTARANEWS.COM


on

Nagarjuna apologises after bodyguard pushes differently abled fan
Koo

ಬೆಂಗಳೂರು: ನಟ ನಾಗಾರ್ಜುನ (Actor Nagarjuna) ಅವರು ತಮ್ಮ ಬಾಡಿಗಾರ್ಡ್‌ ವಿಶೇಷ ಚೇತನ ಅಭಿಮಾನಿಯನ್ನು ತಳ್ಳಿದ ಹಿನ್ನೆಲೆಯಲ್ಲಿ ಸೋಷಿಯಲ್‌ ಮೀಡಿಯಾ ಮೂಲಕ ಕ್ಷಮೆಯಾಚಿಸಿದ್ದಾರೆ. ವೈರಲ್‌ ಆದ ವಿಡಿಯೊದಲ್ಲಿ ನಾಗಾರ್ಜುನ ಅವರು ತಮ್ಮ ಬಾಡಿಗಾರ್ಡ್‌ ಜತೆಗೆ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದರು. ಅವರ ಪಕ್ಕದಲ್ಲಿ ನಟ ಧನುಷ್ ಕೂಡ ಕಾಣಿಸಿಕೊಂಡಿದ್ದರು. ಹೀಗೆ ಬರುತ್ತಿರುವಾಗ ವಿಶೇಷ ಚೇತನ ಅಭಿಮಾನಿ ಒಮ್ಮೆಲೆ ನಾಗಾರ್ಜುನ ಕಡೆಗೆ ಸೆಲ್ಫಿ ಕೇಳಲು ಬಂದರು. ಆಗ ನಾಗಾರ್ಜುನ ಅವರ ಬಾಡಿಗಾರ್ಡ್‌ ಆತನನ್ನು ದೂರಕ್ಕೆ ತಳ್ಳಿದ್ದಾನೆ. ಆತ ಬೀಳುತ್ತಿದ್ದಂತೆ ಪಕ್ಕದಲ್ಲೇ ಇದ್ದ ಇತರೆ ಕೆಲಸಗಾರರು ಹಿಡಿದುಕೊಂಡಿದ್ದಾರೆ. ಆದರೆ ನಾಗಾರ್ಜುನ ಈ ಘಟನೆಯನ್ನು ಗಮನಿಸಿರಲಿಲ್ಲ. ಇದೀಗ ನಟ ಕ್ಷಮೆ ಕೇಳಿದ್ದಾರೆ.

“ಇದು ನನ್ನ ಗಮನಕ್ಕೆ ಬಂದಿದೆ. ಈ ರೀತಿ ಆಗಬಾರದಿತ್ತು. ಆ ವ್ಯಕ್ತಿಗೆ ನಾನು ಕ್ಷಮೆಯಾಚಿಸುತ್ತೇನೆ. ಮುಂದೆ ಹೀಗಾಗದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆʼʼಎಂದು ಬರೆದುಕೊಂಡಿದ್ದಾರೆ. ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ನಾಗಾರ್ಜುನ ಅವರಿಗೆ ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ವಿಡಿಯೋಗೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು, “ಆ ವ್ಯಕ್ತಿ ವಿಶೇಷ ಚೇತನ. ಅವರು ಎಷ್ಟು ಅವಮಾನ ಅನುಭವಿಸಿರಬೇಕು” ಎಂದು ಬರೆದಿದ್ದಾರೆ. ಇನ್ನೊಬ್ಬರು”ಸೆಲೆಬ್ರಿಟಿಗೆ ತುಂಬಾ ಹತ್ತಿರ ಬರುವ ಅಭಿಮಾನಿಗಳನ್ನು ನಿಭಾಯಿಸುವ ಕಲೆ ಗೊತ್ತಿರಬೇಕುʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Kannada New Movie: ಭಾರಿ ಮೊತ್ತಕ್ಕೆ ಸೇಲ್ ಆಯ್ತು ʻವಿಕಾಸ ಪರ್ವʼ ಸಿನಿಮಾ ಆಡಿಯೊ ರೈಟ್ಸ್

ಸಿನಿಮಾ ವಿಚಾರಕ್ಕೆ ಬಂದರೆ ಈ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ನಾಗಾರ್ಜುನ ನಟನೆಯ ‘ನಾ ಸಾಮಿ ರಂಗ’ ಸಿನಿಮಾ ತೆರೆಗೆ ಬಂದಿತ್ತು. ಮೊದಲಿನಂತೆ ಈಗ ನಾಗ್ ಸಿನಿಮಾಗಳು ಸದ್ದು ಮಾಡುತ್ತಿಲ್ಲ. ಇದೀಗ ನಟ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಧನುಷ್ ಜೊತೆ ‘ಕುಬೇರ’ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ತೆಲುಗು ನಿರ್ದೇಶಕ ಶೇಖರ್ ಕಮ್ಮುಲ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಕನ್ನಡಕ್ಕೂ ಡಬ್ ಆಗಿ ಬಿಡುಗಡೆ ಆಗಲಿದೆ. ʻಕುಬೇರ’ ಬಹು ನಿರೀಕ್ಷಿತ ಪ್ಯಾನ್-ಇಂಡಿಯನ್ ಚಲನಚಿತ್ರಗಳಲ್ಲಿ ಒಂದಾಗಿದೆ, ಇದನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶಿಸಿದ್ದಾರೆ. ಇತ್ತೀಚೆಗಷ್ಟೇ ಧನುಷ್ ಅವರ ಫಸ್ಟ್ ಲುಕ್ ಪೋಸ್ಟರ್‌ ಅನಾವರಣಗೊಂಡಿತ್ತು. ಮಾತ್ರವಲ್ಲ ಪ್ರೇಕ್ಷರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.ಸದ್ಯ ‘ಕುಬೇರ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಸೂಟಿಂಗ್‌ ಮುಕ್ತಾಯವಾಗುವ ನಿರೀಕ್ಷೆಯಿದೆ. ‘ಕುಬೇರ’ ತ್ರಿಭಾಷಾ ಚಿತ್ರವಾಗಿದ್ದು, ಏಕಕಾಲದಲ್ಲಿ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಚಿತ್ರೀಕರಣವಾಗುತ್ತಿದೆ.

ಶ್ರೀವೆಂಕಟೇಶ್ವರ ಸಿನಿಮಾಸ್​ ಮತ್ತು ಒಮಿಗೋಸ್​ ಕ್ರಿಯೇಷನ್ಸ್​ ಬ್ಯಾನರ್​ ಮೂಲಕ ಈ ಚಿತ್ರ ನಿರ್ಮಾಣ ಆಗಲಿದೆ. ಧನುಷ್‌​​ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯ ಸಿನಿಮಾ ಇದು.

Continue Reading

ಟಾಲಿವುಡ್

Anasuya Bharadwaj : ಪೈಪೋಟಿ ಕೊಡುವ ಭರದಲ್ಲಿ ವೇದಿಕೆ ಮೇಲೆ ಶರ್ಟ್‌ ಬಿಚ್ಚಿದ ʻಪುಷ್ಪʼ ನಟಿ ಅನಸೂಯಾ!

Anasuya Bharadwaj: ಸಿನಿಮಾಗಳ ಮೂಲಕ ಹೆಚ್ಚು ಹೈಲೈಟ್ ಆಗುತ್ತಿರುವ ಅನಸೂಯಾ ಭಾರದ್ವಾಜ್ ಈಗ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿಯೂ ನಟಿಸುತ್ತಿದ್ದಾರೆ. ಸದ್ಯ ಈ ಚೆಲುವೆ ‘ಹರಿಹರ ವೀರಮಲ್ಲು’, ‘ಪುಷ್ಪ 2’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ತಮಿಳಿನಲ್ಲಿ ‘ಫ್ಲ್ಯಾಶ್‌ಬ್ಯಾಕ್’ ಸೇರಿದಂತೆ ಕೆಲವು ಸಿನಿಮಾಗಳನ್ನು ಮಾಡುತ್ತಿದ್ದಾರೆ.

VISTARANEWS.COM


on

anasuya bharadwaj fight with sekhar master in kiraak boys khiladi girls show
Koo

ʼಜಬರ್ದಸ್ತ್ʼ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿ ಆ್ಯಂಕರ್ ಆಗಿ ಸ್ಟಾರ್ ಇಮೇಜ್ ಗಿಟ್ಟಿಸಿಕೊಂಡಿದ್ದ ಅನಸೂಯಾ ಭಾರದ್ವಾಜ್ (Anasuya Bharadwaj ) ಮತ್ತೆ ಹಾಟ್‌ ಅವತಾರ ತಾಳಿದ್ದಾರೆ.

ʼಕಿರ್ರಕ್ ಬಾಯ್ಸ್ ಕಿಲಾಡಿ ಗರ್ಲ್ಸ್ʼ ಶೋನಲ್ಲಿ ವೇದಿಕೆ ಮೇಲೇಯೇ ಚಾಕೆಟ್‌ ಬಿಚ್ಚಿ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ. ಪುಪ್ಪು ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಇಮೇಜ್‌ ಕ್ರಿಯೇಟ್‌ ಮಾಡಿಕೊಂಡಿರುವ ನಟಿ, ಪುಷ್ಪಾ 2 ಮೂಲಕ ತೆರೆಗೆ ಬರಲು ರೆಡಿಯಾಗಿದ್ದಾರೆ.

ಆಗಾಗ ಸೋಷಿಯಲ್‌ ಮೀಡಿಯಾಗಳಲ್ಲಿ ಹಾಟ್‌ ಅವತಾರ ತಾಳುವ ಇವರು ಇದೀಗ ಶರ್ಟ್‌ ಬಿಚ್ಚಿದ್ದಾರೆ.

ಇದನ್ನೂ ಓದಿ: Amithab Bacchan :14ನೇ ವರ್ಷಕ್ಕೆ ಕಾಲಿಟ್ಟ ʼರಾವಣ್ʼ ಚಿತ್ರ; ಮಗನನ್ನು ಹೊಗಳಿ ಸೊಸೆಯನ್ನು ನಿರ್ಲಕ್ಷಿಸಿದ ಅಮಿತಾಭ್!

ʼಕಿರ್ರಕ್ ಬಾಯ್ಸ್ ಕಿಲಾಡಿ ಗರ್ಲ್ಸ್ʼ (Kiraak Boys Khiladi Girls) ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೋಮೊ ಔಟ್‌ ಆಗಿದ್ದು, ನೃತ್ಯ ನಿರ್ದೇಶಕ ಶೇಖರ್‌ ಮಾಸ್ಟರ್‌ಗೆ ಮತ್ತು ಅನಸೂಯಾಗೆ ಪೈಪೋಟಿ ಬೀಳುತ್ತದೆ. ಶೇಖರ್‌ ಮಾಸ್ಟರ್‌ ಶರ್ಟ್‌ ಬಿಚ್ಚಿದರೆ ಅನಸೂಯ ಕೂಡ ತಾನು ಯಾವುದಕ್ಕೆ ಕಡಿಮೆ ಇಲ್ಲ ಎಂದು ತಮ್ಮ ಜಾಕೆಟ್‌ ಕಳಚಿದ್ದಾರೆ.

ಸಿನಿಮಾಗಳ ಮೂಲಕ ಹೆಚ್ಚು ಹೈಲೈಟ್ ಆಗುತ್ತಿರುವ ಅನಸೂಯಾ ಭಾರದ್ವಾಜ್ ಈಗ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿಯೂ ನಟಿಸುತ್ತಿದ್ದಾರೆ. ಸದ್ಯ ಈ ಚೆಲುವೆ ‘ಹರಿಹರ ವೀರಮಲ್ಲು’, ‘ಪುಷ್ಪ 2’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ತಮಿಳಿನಲ್ಲಿ ‘ಫ್ಲ್ಯಾಶ್‌ಬ್ಯಾಕ್’ ಸೇರಿದಂತೆ ಕೆಲವು ಸಿನಿಮಾಗಳನ್ನು ಮಾಡುತ್ತಿದ್ದಾರೆ.

Continue Reading

ಟಾಲಿವುಡ್

Kalki 2898 AD: ‘ಕಲ್ಕಿ’ ಟಿಕೆಟ್ ದರ ಡಬಲ್; ಬೆಂಗಳೂರಿನಲ್ಲಿ ಎಷ್ಟು?

Kalki 2898 AD: ಈ ಸಿನಿಮಾದಲ್ಲಿ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಕೆಲವು ದಿನಗಳ ಹಿಂದೆ ಚಿತ್ರತಂಡ ಅವರ ಪಾತ್ರ ಹೇಗಿರಲಿದೆ ಎನ್ನುವುದನ್ನು ರಿವೀಲ್ ಮಾಡಿತ್ತು. ಬಿಗ್ ಬಿ ಅಶ್ವತ್ಥಾಮನಾಗಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರದ ಟೀಸರ್‌ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು.

VISTARANEWS.COM


on

Kalki 2898 AD advance booking started with excellent response
Koo

ಬೆಂಗಳೂರು: ವೈಜ್ಞಾನಿಕ ಮತ್ತು ಕಾಲ್ಪನಿಕ (Kalki 2898 AD) ಸಮ್ಮಿಶ್ರಣದ ದೃಶ್ಯಕಾವ್ಯ ‘ಕಲ್ಕಿ 2898 AD’ ಚಿತ್ರದ ಬಹು ನಿರೀಕ್ಷಿತ ಟ್ರೈಲರ್ ಬಿಡುಗಡೆಯಾಗಿ ನೋಡುಗರ ಮನ ಸೆಳೆದಿದೆ. ಇದೀಗ ಈ ಸಿನಿಮಾ ಬಿಡುಗಡೆಗೆ ಕೇವಲ ನಾಲ್ಕು ದಿನ ಇದೆ. ಈಗಾಗಲೇ ಹಲವೆಡೆ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಇನ್ನು ಬೆಳ್ಳಂಬೆಳಗ್ಗೆ 5 ಗಂಟೆಗೆ ಸಾಕಷ್ಟು ಕಡೆಗಳಲ್ಲಿ ಮೊದಲ ಪ್ರದರ್ಶನ ಆರಂಭವಾಗಿದೆ. ದೊಡ್ಡ ಸಿನಿಮಾ, ಕ್ರೇಜ್ ಇದೆ ಎನ್ನುವ ಕಾರಣಕ್ಕೆ ಟಿಕೆಟ್ ದರ ಹೆಚ್ಚಿಸಲಾಗಿದೆ.

ಕನ್ನಡ ಶೋಗಳ ಸಂಖ್ಯೆ ಕಮ್ಮಿಯಿದ್ದು ತೆಲುಗು, ಹಿಂದಿ ವರ್ಷನ್‌ಗೆ ಹೆಚ್ಚು ಶೋ ಕೊಟ್ಟಿದ್ದಾರೆ. ಆಂಧ್ರ, ತೆಲಂಗಾಣದಲ್ಲಿ ಕೂಡ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ರಾಜಶೇಖರ್ ನಟನೆಯ ‘ಕಲ್ಕಿ’ ಎನ್ನುವ ಮತ್ತೊಂದು ಸಿನಿಮಾ ಬಿಡುಗಡೆಯಾಗಿದೆ. ಟಿಕೆಟ್ ದರವನ್ನು 400 ರೂಪಾಯಿ, 500 ರೂಪಾಯಿ, 700 ರೂಪಾಯಿಗೆ ಹೆಚ್ಚಿಸಲಾಗಿದೆ. ಆದರೂ ಪ್ರಭಾಸ್ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ.

ಈ ಸಿನಿಮಾದಲ್ಲಿ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಕೆಲವು ದಿನಗಳ ಹಿಂದೆ ಚಿತ್ರತಂಡ ಅವರ ಪಾತ್ರ ಹೇಗಿರಲಿದೆ ಎನ್ನುವುದನ್ನು ರಿವೀಲ್ ಮಾಡಿತ್ತು. ಬಿಗ್ ಬಿ ಅಶ್ವತ್ಥಾಮನಾಗಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರದ ಟೀಸರ್‌ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಗುಹೆಯೊಂದರಲ್ಲಿ ಮಗುವೊಂದು ನೀನು ಯಾರು? ಎಂದು ಕೇಳಿದಾಗ ʻʻಪ್ರಾಚೀನ ಕಾಲದಿಂದಲೂ ನಾನು ಕಲ್ಕಿಯ ಅವತಾರದ ಆಗಮನಕ್ಕಾಗಿ ಕಾಯುತ್ತಿದ್ದೇನೆ. ನಾನು ಗುರು ದ್ರೋಣರ ಮಗ ಅಶ್ವತ್ಥಾಮʼʼ ಎಂದು ಅಮಿತಾಭ್‌ ಹೇಳುವ ಮೂಲಕ ಈ ಸಿನಿಮಾದ ಕಥೆ ಪುರಾಣ ಕಾಲದಿಂದ ಭವಿಷ್ಯದತ್ತ ಸಾಗುತ್ತದೆ ಎನ್ನುವ ಸುಳಿವು ಲಭಿಸಿತ್ತು. ಭಾರತ ಚಿತ್ರರಂಗದ ಮಟ್ಟಿಗೆ ಇಂತಹ ಪ್ರಯೋಗ ಬಹಳ ಅಪರೂಪ.

ಇದನ್ನೂ ಓದಿ: Kalki 2898 AD: ‘ಕಲ್ಕಿ 2898 AD’ ಚಿತ್ರದ ಫೈನಲ್‌ ಟ್ರೇಲರ್‌ ಹೀಗಿದೆ ನೋಡಿ! ಜೂ.27ರಂದು ಚಿತ್ರ ರಿಲೀಸ್

ಈ ಹಿಂದೆ ಚಿತ್ರದ ಬಗ್ಗೆ ಮಾತನಾಡಿದ್ದ ನಿರ್ದೇಶಕ ಅಶ್ವಿನ್‌ ಚೈತ್ಯನ್ಯ, ʼʼಈ ಸಿನಿಮಾದ ಕಥೆ ಮಹಾಭಾರತದ ಕಾಲಘಟ್ಟಲ್ಲಿ ಆರಂಭವಾಗಿ ಕ್ರಿ.ಶ. 2898ರಲ್ಲಿ ಕೊನೆಗೊಳ್ಳಲಿದೆ. ಆ ಮೂಲಕ ಸುಮಾರು 6,000 ವರ್ಷಗಳ ಕಥೆಯನ್ನು ತೆರೆ ಮೇಲೆ ಮೂಡಿಸಲಿದ್ದೇವೆ. ಇದಕ್ಕಾಗಿ ಬಹಳಷ್ಟು ಶ್ರಮ ವಹಿಸಿದ್ದೇವೆʼʼ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದರು.

ಈ ಸಿನಿಮಾದಲ್ಲಿ ಪ್ರಭಾಸ್‌ ಭೈರವನಾಗಿ ಮಿಂಚಲಿದ್ದು, ಬಾಲಿವುಡ್‌ ನಟಿ ದಿಶಾ ಪಠಾಣಿ, ಕಮಲ್‌ ಹಾಸನ್‌ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮತ್ತೊಂದು ವಿಶೇಷ ಎಂದರೆ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿರುವ ಈ‌ ಸಿನಿಮಾದ ಕನ್ನಡ ಅವತರಣಿಕೆಯಲ್ಲಿ ತಮ್ಮ ಪಾತ್ರಕ್ಕೆ ದೀಪಿಕಾ ಪಡುಕೋಣೆಯೇ ಧ್ವನಿ ನೀಡಲಿದ್ದಾರೆ. ಜತೆಗೆ ಹಿಂದಿಯಲ್ಲಿಯೂ ಅವರು ಡಬ್‌ ಮಾಡಲಿದ್ದಾರೆ.

Continue Reading
Advertisement
Actor Darshan Judicial Custody Jailer Gave UTP Number
ಕ್ರೈಂ22 mins ago

Actor Darshan: ದರ್ಶನ್‌, ಪ್ರದೋಷ್‌ನಿಂದ ಮೂರು ಪಿಸ್ತೂಲ್‌ ವಶಕ್ಕೆ

Health Tips Kannada
ಆರೋಗ್ಯ32 mins ago

Health Tips Kannada: ಕುಂಬಳಕಾಯಿ ಬೀಜದಲ್ಲಿದೆ ನಮ್ಮ ಆರೋಗ್ಯದ ಗುಟ್ಟು!

NEET Paper Leak
ಶಿಕ್ಷಣ32 mins ago

NEET Paper Leak: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ರೂವಾರಿ ಸಂಜೀವ್ ಮುಖಿಯಾ; ಈತ ನಟೋರಿಯಸ್‌!

Karnataka Weather
ಕರ್ನಾಟಕ1 hour ago

Karnataka Weather: ಇಂದು ಹಾಸನ, ಕೊಡಗು, ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

David Warner
ಪ್ರಮುಖ ಸುದ್ದಿ2 hours ago

David Warner : ವಿಶ್ವ ಕಪ್​ನಿಂದ ಹೊರಬಿದ್ದ ಬೇಸರ; ಬಿಯರ್ ಕುಡಿತಾ ಕುಳಿತ ಆಸ್ಟ್ರೇಲಿಯಾದ ಆಟಗಾರರು

Fatty Lever Disease
ಆರೋಗ್ಯ2 hours ago

Fatty Lever Disease: ಎಚ್ಚರ ವಹಿಸಿ, ಮಕ್ಕಳನ್ನು ಸದ್ದಿಲ್ಲದೆ ಕಾಡುತ್ತಿದೆ ಫ್ಯಾಟಿ ಲಿವರ್‌ ಕಾಯಿಲೆ!

Karnataka Milk Federation
ಪ್ರಮುಖ ಸುದ್ದಿ3 hours ago

ವಿಸ್ತಾರ ಸಂಪಾದಕೀಯ: ಹಾಲು ದರ ಏರಿಕೆ ಬಳಕೆದಾರನಿಗೆ ಹೊರೆಯಾಗದಿರಲಿ

Dina Bhavishya
ಭವಿಷ್ಯ3 hours ago

Dina Bhavishya: ಈ ರಾಶಿಯವರಿಗೆ ದೀರ್ಘಕಾಲದ ಪ್ರಯತ್ನ ಇಂದು ಯಶಸ್ಸು ತಂದುಕೊಡಲಿದೆ

Women's Asia Cup
ಪ್ರಮುಖ ಸುದ್ದಿ8 hours ago

Women’s Asia Cup 2024 : ಮಹಿಳೆಯರ ಏಷ್ಯಾ ಕಪ್​ ಕ್ರಿಕೆಟ್​ನ ವೇಳಾಪಟ್ಟಿ ಬಿಡುಗಡೆ, ಜುಲೈ 19ಕ್ಕೆ ಭಾರತ- ಪಾಕ್ ಪಂದ್ಯ

minister mb patil visit japan and discuss about investment in Karnataka
ಕರ್ನಾಟಕ8 hours ago

Foreign Investment: 100 ಕೋಟಿ ರೂ. ವೆಚ್ಚದ ತ್ಯಾಜ್ಯ ನೀರು ನಿರ್ವಹಣಾ ಉಪಕರಣಗಳ ತಯಾರಿಕಾ ಘಟಕ ಸ್ಥಾಪನೆಗೆ ಒಪ್ಪಂದ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌