ಭದ್ರತಾ ವ್ಯವಸ್ಥೆಗೇ ಬೆದರಿಕೆ ಒಡ್ಡಿದ ನೂಪುರ್‌ ಶರ್ಮಾ ದೇಶದ ಕ್ಷಮೆ ಕೋರಬೇಕು: ಸುಪ್ರೀಂಕೋರ್ಟ್‌ - Vistara News

ದೇಶ

ಭದ್ರತಾ ವ್ಯವಸ್ಥೆಗೇ ಬೆದರಿಕೆ ಒಡ್ಡಿದ ನೂಪುರ್‌ ಶರ್ಮಾ ದೇಶದ ಕ್ಷಮೆ ಕೋರಬೇಕು: ಸುಪ್ರೀಂಕೋರ್ಟ್‌

ನೂಪುರ್‌ ಶರ್ಮಾಗೆ ಇಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು ಛೀಮಾರಿ ಹಾಕಿದ್ದಾರೆ. ಆಕೆಗೆ ಅಧಿಕಾರದ ಅಮಲು ಎಂದೂ ಹೇಳಿದ್ದಾರೆ.

VISTARANEWS.COM


on

Supreme Court on Nupur Sharma
ನೂಪುರ್‌ ಶರ್ಮಾ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಇಡೀ ದೇಶದ ಕ್ಷಮೆ ಕೋರಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಇತ್ತೀಚೆಗೆ ಜ್ಞಾನವಾಪಿ ಮಸೀದಿ ಕೇಸ್‌ ಬಗ್ಗೆ ಮಾತನಾಡಲು ಸುದ್ದಿ ಮಾಧ್ಯಮದ ಡಿಬೇಟ್‌ವೊಂದರಲ್ಲಿ ಪಾಲ್ಗೊಂಡಿದ್ದ ನೂಪುರ್‌ ಶರ್ಮಾ, ಆ ಕಾರ್ಯಕ್ರಮದಲ್ಲಿ ಪ್ರವಾದಿ ಮೊಹಮ್ಮದ್‌ಗೆ ಅವಮಾನ ಮಾಡಿದ್ದಾರೆ ಎಂದು ಮುಸ್ಲಿಂ ಸಮುದಾಯಗಳು ತಿರುಗಿಬಿದ್ದವು. ಇವರ ಹೇಳಿಕೆ ವಿರೋಧಿಸಿ, ದೇಶದ ಅನೇಕ ಕಡೆ ಹಿಂಸಾತ್ಮಕ ಪ್ರತಿಭಟನೆ ನಡೆಯಿತು. ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಲಾಯಿತು.

ದೇಶದೊಳಗಿನ ಮುಸ್ಲಿಮರಷ್ಟೇ ಅಲ್ಲ, ವಿಶ್ವಾದ್ಯಂತ ಮುಸ್ಲಿಂ ರಾಷ್ಟ್ರಗಳೂ ಭಾರತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದವು. ಭಾರತದ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂಬ ಅಭಿಯಾನವನ್ನೂ ನಡೆಸಿದ್ದವು. ಕತಾರ್‌, ಸೌದಿ ಅರೇಬಿಯಾ, ಕುವೈತ್‌ಗಳು ಅಲ್ಲಿರುವ ಭಾರತೀಯ ರಾಯಭಾರಿಗಳಿಗೆ ನೋಟಿಸ್‌ ನೀಡಿ, ಈ ಹೇಳಿಕೆಯ ಬಗ್ಗೆ ಸ್ಪಷ್ಟನೆಯನ್ನೂ ಕೇಳಿದ್ದವು. ಒಟ್ಟಾರೆ ನೂಪುರ್‌ ಶರ್ಮಾ ಹೇಳಿಕೆಯಿಂದ ದೇಶದ ಕಾನೂನು-ಸುವ್ಯವಸ್ಥೆ ಹದಗೆಡುವ ಜತೆ, ನಷ್ಟವೂ ಉಂಟಾಗಿದೆ.

ಇದೆಲ್ಲದರ ಮಧ್ಯೆ ನೂಪುರ್‌ ಶರ್ಮಾ ಸುಪ್ರೀಂಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಸಿ ತಮ್ಮ ವಿರುದ್ಧ ದೇಶದ ವಿವಿಧ ರಾಜ್ಯಗಳ ಪೊಲೀಸ್‌ ಠಾಣೆಗಳಲ್ಲಿ ದಾಖಲಾದ ಎಫ್‌ಐಆರ್‌ಗಳನ್ನೆಲ್ಲ ದೆಹಲಿಗೆ ವರ್ಗಾಯಿಸಬೇಕು. ಗಂಭೀರ ಸ್ವರೂಪದ ಜೀವ ಬೆದರಿಕೆ ಇರುವುದರಿಂದ ವಿಚಾರಣೆಗೆಂದು ದೆಹಲಿಯಿಂದ ಆಚೆಗೆ ಹೋಗಲು ಭಯವಾಗುತ್ತಿದೆ ಎಂದು ಹೇಳಿದ್ದರು. ನೂಪುರ್‌ ಶರ್ಮಾರಿಗೆ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ಸಮನ್ಸ್‌ ಕೊಟ್ಟಿದ್ದಾರೆ. ಆದರೆ ಅವರು ಮುಂಬೈಗೆ ಬಂದಿಲ್ಲ. ಅಷ್ಟಲ್ಲದೆ, ಎಲ್ಲಿಯೂ ಕಾಣುತ್ತಿಲ್ಲ ಎಂದೂ ಹೇಳಲಾಗಿದೆ. ಈ ಮಧ್ಯೆ ನೂಪುರ್‌ ತಮ್ಮ ವಕೀಲರ ಮೂಲಕ ಸುಪ್ರೀಂಕೋರ್ಟ್‌ಗೆ ಮನವಿ ಅರ್ಜಿ ಕೊಟ್ಟಿದ್ದರು.

ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಸೂರ್ಯಕಾಂತ್‌, ʼನೂಪುರ್‌ ಶರ್ಮಾ ಪಾಲ್ಗೊಂಡ ಡಿಬೇಟ್‌ನ್ನು ನಾವು ವೀಕ್ಷಿಸಿದ್ದೇವೆ. ಅದರಲ್ಲಿ ನೂಪುರ್‌ ಶರ್ಮಾರನ್ನು ಹೇಗೆ ಪ್ರಚೋದಿಸಲಾಯಿತು ಎಂಬುದನ್ನೂ ನೋಡಿದ್ದೇವೆ. ಆದರೆ ನಂತರ ಅವಳಾಡಿದ ಮಾತು, ಕೊನೆಯಲ್ಲಿ ನಾನೊಬ್ಬ ವಕೀಲೆ ಎಂದು ಹೇಳಿಕೊಂಡಿದ್ದೆಲ್ಲ ನಾಚಿಕೆಗೇಡು. ಆಕೆಯ ಹೇಳಿಕೆಯಿಂದ ಇಡೀ ದೇಶದಲ್ಲಿ ಕಿಡಿ ಹೊತ್ತಿಕೊಂಡಿತು. ಏನೆಲ್ಲ ಪ್ರತಿಭಟನೆ, ಹಿಂಸಾಚಾರ, ನಷ್ಟವಾಯಿತೋ ಅದೆಲ್ಲದಕ್ಕೂ ನೂಪುರ್‌ ಶರ್ಮಾ ಒಬ್ಬರೇ ಸಂಪೂರ್ಣ ಹೊಣೆ ಹೊರತು ಇನ್ಯಾರೂ ಅಲ್ಲ. ತಕ್ಷಣವೇ ಅವರು ದೇಶದ ಕ್ಷಮೆ ಕೋರಲಿʼ ಎಂದು ಹೇಳಿದ್ದಾರೆ.

ಅಧಿಕಾರದ ಅಮಲು !
ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು ಇಂದು ಅರ್ಜಿ ವಿಚಾರಣೆ ವೇಳೆ ನೂಪುರ್‌ ಶರ್ಮಾರಿಗೆ ಕಠಿಣವಾಗಿಯೇ ಬೈದಿದ್ದಾರೆ. “ಇಂಥವರಿಗೆಲ್ಲ ಅಧಿಕಾರದ ಅಮಲು. ಅಹಂಕಾರದಿಂದ ಆಡಿದ ಮಾತುಗಳು ಇವು. ಏನು ಅಧಿಕಾರವಿದೆ ಎಂದು ಇವರು ಹೀಗೆ ಹೇಳಿಕೆ ಕೊಟ್ಟಿದ್ದಾರೆ? ಇನ್ನೊಂದು ಧರ್ಮವನ್ನು ಗೌರವಿಸದ ಇವರೆಲ್ಲ ಧರ್ಮಿಷ್ಠರೇ ಅಲ್ಲ. ಅಗ್ಗದ ಪ್ರಚಾರ, ರಾಜಕೀಯ ಕಾರಣಕ್ಕಾಗಿಯೇ ಮಾತಾಡುತ್ತಾರೆ ಎಂದು ಸ್ಪಷ್ಟವಾಗುತ್ತದೆ” ಎಂದು ಹೇಳಿದ್ದಾರೆ. “ನೂಪುರ್‌ ಶರ್ಮಾಗೆ ಬೆದರಿಕೆಯಿದೆ ಎಂದು ಅರ್ಜಿಯಲ್ಲಿ ಹೇಳುತ್ತಿದ್ದೀರಿ, ಆದರೆ ವಾಸ್ತವದಲ್ಲಿ, ತಮ್ಮ ಹಿಡಿತವಿಲ್ಲದ ನಾಲಿಗೆಯಿಂದ ಇಡೀ ದೇಶದ ಭದ್ರತಾ ವ್ಯವಸ್ಥೆಗೆ ಬೆದರಿಕೆ ಒಡ್ಡಿದ್ದು ಅವರು” ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ನೂಪುರ್‌ ಶರ್ಮಾ ಬೆಂಬಲಿಸಿ ಪೋಸ್ಟ್‌ ಹಾಕಿದ್ದಕ್ಕೆ ಉದಯಪುರದಲ್ಲಿ ನಡೆದ ಟೇಲರ್‌ ಹತ್ಯೆಯನ್ನೂ ಇದೇ ವೇಳೆ ಉಲ್ಲೇಖ ಮಾಡಿದ ಸುಪ್ರೀಂಕೋರ್ಟ್‌, ಶರ್ಮಾ ಆವೇಶದಿಂದ, ಅವಿವೇಕದಿಂದ ಆಡಿದ ಮಾತುಗಳೇ ಉದಯಪುರ ಘಟನೆಗೆ ಕಾರಣ ಎಂದು ಹೇಳಿದೆ. ಹಾಗೇ, ಎಫ್‌ಐಆರ್‌ಗಳನ್ನೆಲ್ಲ ದೆಹಲಿಗೇ ವರ್ಗಾಯಿಸಿಕೊಡಿ ಎಂಬ ಮನವಿಯನ್ನೂ ತಿರಸ್ಕರಿಸಿದೆ.

ಇದನ್ನೂ ಓದಿ: ನೂಪುರ್‌ ಶರ್ಮಾ ಬೆಂಬಲಿಸಿ ಪೋಸ್ಟ್‌ ಹಾಕಿದ ಹಿಂದು ಯುವಕನ ಶಿರಚ್ಛೇದ; ರಸ್ತೆ ಮಧ್ಯೆ ರಕ್ತದೋಕುಳಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

NEET UG : ಫಿಸಿಕ್ಸ್​ನಲ್ಲಿ 85, ಕೆಮೆಸ್ಟ್ರಿಯಲ್ಲಿ 5! ನೀಟ್ ಆಕಾಂಕ್ಷಿಯ ಸ್ಕೋರ್ ಕಾರ್ಡ್ ಸೋರಿಕೆ, ಆರೋಪಿ ಸೆರೆ

NEET UG : ಎಂಬಿಬಿಎಸ್, ಬಿಡಿಎಸ್ ಮತ್ತು ಆಯುಷ್ ಕೋರ್ಸ್ಗಳ ಪ್ರವೇಶಕ್ಕಾಗಿ ಅಖಿಲ ಭಾರತ ಪರೀಕ್ಷೆಯ ಫಲಿತಾಂಶಗಳನ್ನು ಜೂನ್ 4 ರಂದು ಘೋಷಿಸಿದಾಗಿನಿಂದ ಅನೇಕ ಅಕ್ರಮಗಳು ಬೆಳಕಿಗೆ ಬಂದಿವೆ. 67 ವಿದ್ಯಾರ್ಥಿಗಳು 720ಕ್ಕೆ720 ಅಂಕಗಳನ್ನು ಗಳಿಸಿದ್ದಾರೆ. ಅವರಲ್ಲಿ ಆರು ವಿದ್ಯಾರ್ಥಿಗಳು ಹರಿಯಾಣದ ಒಂದೇ ಕೋಚಿಂಗ್​ ಸೆಂಟರ್​ನವರು. ಈ ಅಕ್ರಮದ ಕುರಿತು ರಾಷ್ಟ್ರಿಯ ಮಟ್ಟದಲ್ಲಿ ಪ್ರತಿಭಟನೆಗಳು ನಡೆದಿದ್ದವು.

VISTARANEWS.COM


on

NEET UG
Koo

ಪಾಟ್ನಾ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET UG) ಸುತ್ತ ಭಾರಿ ವಿವಾದದ ಮಧ್ಯೆ ಬಿಹಾರದ ನಾಲ್ವರು ವಿದ್ಯಾರ್ಥಿಗಳ ಅಂಕಪಟ್ಟಿಗಳು ಮಾಧ್ಯಮಗಳಿಗೆ ದೊರಕಿವೆ. ಈ ಎರಡು ಸ್ಕೋರ್ ಕಾರ್ಡ್​ಗಳು ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಾಕ್ಷಿಯಾಗಿದೆ. ಬಂಧಿತರಾದ ನಾಲ್ವರಲ್ಲಿ ಒಬ್ಬರಾದ ಅನುರಾಗ್ ಯಾದವ್ ನಡೆದ ಘಟನೆಯನ್ನು ವಿವರಿಸಿದ್ದಾನೆ. ಕೋಚಿಂಗ್ ಹಬ್ ಕೋಟಾದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಆತನನ್ನು ಚಿಕ್ಕಪ್ಪ ಸಿಕಂದರ್ ಅವರು ಸಂಪರ್ಕಿಸಿ ಸಮಸ್ತಿಪುರಕ್ಕೆ ಹೋಗುವಂತೆ ಹೇಳಿದ್ದರು. ಸಿಕಂದರ್ ಕೂಡ ಈಗ ಈ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಅಂತೆಯೇ ಪರೀಕ್ಷೆಯ ಹಿಂದಿನ ರಾತ್ರಿ ಕೆಲವು ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳನ್ನು ಅನುರಾಗ್​ಗೆ ನೀಡಲಾಗಿತ್ತು. ಈ ಪ್ರಶ್ನೆಗಳು ಮರುದಿನ ಪರೀಕ್ಷೆಯಲ್ಲಿ ಬಂದಿತ್ತು ಎಂದು ಅವರು ಹೇಳಿದ್ದಾರೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಬಿಡುಗಡೆ ಮಾಡಿದ ಅನುರಾಗ್ ಅವರ ಸ್ಕೋರ್ ಕಾರ್ಡ್​ನಲ್ಲಿ 720 ರಲ್ಲಿ 185 ಅಂಕಗಳನ್ನು ಗಳಿಸಿದ್ದಾರೆ. ಅವರ ಒಟ್ಟು ಶೇಕಡಾವಾರು ಸ್ಕೋರ್ 54.84 (ರೌಂಡ್ ಆಫ್). ಆದರೆ ಪ್ರತ್ಯೇಕ ವಿಷಗಯಳಲ್ಲಿ ಆತನ ಅಂಕಗಳು ಒಂದಕ್ಕೊಂದು ಹೊಂದಿಕೆಯಾಗುತ್ತಿರಲಿಲ್ಲ. ಅನುರಾಗ್ ಭೌತಶಾಸ್ತ್ರದಲ್ಲಿ 85.8 ಪ್ರತಿಶತ ಮತ್ತು ಜೀವಶಾಸ್ತ್ರದಲ್ಲಿ 51 ಪ್ರತಿಶತ ಅಂಕಗಳನ್ನು ಗಳಿಸಿದ್ದಾರೆ. ಆದರೆ ಅವನ ರಸಾಯನಶಾಸ್ತ್ರದ ಅಂಕವು ಶೇಕಡಾ 5 ಮಾತ್ರ! ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ತನಗೆ ಪ್ರಶ್ನೆಗಳು ಬಂದಿವೆ ಎಂದು ಹೇಳಿದರೂ 22 ವರ್ಷದ ವಿದ್ಯಾರ್ಥಿಗೆ ರಸಾಯನಶಾಸ್ತ್ರದಲ್ಲಿ ಸೂಕ್ತ ಪ್ರಮಾಣದಲ್ಲಿ ಅಂಕಗಳು ಸಿಗದೇ ಹೋಗಿರುವುದು ಅಚ್ಚರಿಗೆ ಕಾರಣವಾಗಿದೆ.

ಅನುರಾಗ್ ಅವರ ರಾಷ್ಟ್ರಿಯ ಮಟ್ಟದ ರ್ಯಾಂಕ್​ 10,51,525 ಎಂದು ಉಲ್ಲೇಖಿಸಲಾಗಿದೆ ಮತ್ತು ಒಬಿಸಿ ಅಭ್ಯರ್ಥಿಯಾಗಿ ಅವರ ವರ್ಗದ ಶ್ರೇಯಾಂಕ 4,67,824 ಆಗಿದೆ. ಅನುರಾಗ್ ಅವರನ್ನು ಬಂಧಿಸಲಾಗಿದ್ದು, ಇತರ ಮೂವರನ್ನು ಪ್ರಶ್ನಿಸಲಾಗಿದೆ. ಈ ಮೂವರೂ ಒಬಿಸಿ ವರ್ಗಕ್ಕೆ ಸೇರಿದವರು. ಅವರಲ್ಲಿ ಒಬ್ಬರು ಪರೀಕ್ಷೆಯಲ್ಲಿ 720 ರಲ್ಲಿ 300 ಅಂಕಗಳನ್ನು ಗಳಿಸಿದ್ದಾರೆ ಮತ್ತು ಶೇಕಡಾವಾರು 73.37 (ರೌಂಡ್-ಆಫ್) ಆಗಿದೆ. ಇಲ್ಲಿಯೂ ಪ್ರತ್ಯಕೇ ವಿಷಯಗಳ ಅಂಕಗಳು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಜೀವಶಾಸ್ತ್ರದಲ್ಲಿ ಶೇ.87.8, ಭೌತಶಾಸ್ತ್ರದಲ್ಲಿ ಶೇ.15.5 ಹಾಗೂ ರಸಾಯನಶಾಸ್ತ್ರದಲ್ಲಿ ಶೇ.15.3 ಅಂಕಗಳನ್ನು ಗಳಿಸಿದ್ದಾರೆ. ಇತರ ಇಬ್ಬರು ವಿದ್ಯಾರ್ಥಿಗಳ ಸ್ಕೋರ್ ಕಾರ್ಡ್ ಗಳು ಎಲ್ಲಾ ಮೂರು ವಿಷಯಗಳಲ್ಲಿ ಉತ್ತಮವಾಗಿದೆ. ಅವರಲ್ಲಿ ಒಬ್ಬರು 720 ರಲ್ಲಿ 581 ಮತ್ತು ಇನ್ನೊಬ್ಬರು 483 ಅಂಕಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ: 7th Pay Commission: ಸರ್ಕಾರಿ ನೌಕರರ ಸಂಬಳ 27% ಹೆಚ್ಚಿಸಿದರೆ ಒಟ್ಟು ಏರಿಕೆ ಎಷ್ಟಾಗಲಿದೆ? ಇಲ್ಲಿದೆ ಲೆಕ್ಕಾಚಾರ

ಪ್ರಶ್ನೆ ಪತ್ರಿಕೆಗಳಿಗಾಗಿ ಅಮಿತ್ ಆನಂದ್ ಮತ್ತು ನಿತೀಶ್ ಕುಮಾರ್ ಅವರೊಂದಿಗೆ ನಾಲ್ವರು ವಿದ್ಯಾರ್ಥಿಗಳು ಸಂಪರ್ಕದಲ್ಲಿದ್ದರು ಎಂದು ಅನುರಾಗ್​ ಅವರ ಚಿಕ್ಕಪ್ಪ ಸಿಕಂದರ್ ಯಡವೇಂದು ಪೊಲೀಸರಿಗೆ ತಿಳಿಸಿದ್ದಾರೆ. ಅಮಿತ್ ಮತ್ತು ನಿತೀಶ್ ಪ್ರತಿ ವಿದ್ಯಾರ್ಥಿಗೆ 30-32 ಲಕ್ಷ ರೂಪಾಯಿಗಳನ್ನು ಕೇಳಿದ್ದಾರೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಎಂಬಿಬಿಎಸ್, ಬಿಡಿಎಸ್ ಮತ್ತು ಆಯುಷ್ ಕೋರ್ಸ್ಗಳ ಪ್ರವೇಶಕ್ಕಾಗಿ ಅಖಿಲ ಭಾರತ ಪರೀಕ್ಷೆಯ ಫಲಿತಾಂಶಗಳನ್ನು ಜೂನ್ 4 ರಂದು ಘೋಷಿಸಿದಾಗಿನಿಂದ ಅನೇಕ ಅಕ್ರಮಗಳು ಬೆಳಕಿಗೆ ಬಂದಿವೆ. 67 ವಿದ್ಯಾರ್ಥಿಗಳು 720ಕ್ಕೆ720 ಅಂಕಗಳನ್ನು ಗಳಿಸಿದ್ದಾರೆ. ಅವರಲ್ಲಿ ಆರು ವಿದ್ಯಾರ್ಥಿಗಳು ಹರಿಯಾಣದ ಒಂದೇ ಕೋಚಿಂಗ್​ ಸೆಂಟರ್​ನವರು. ಈ ಅಕ್ರಮದ ಕುರಿತು ರಾಷ್ಟ್ರಿಯ ಮಟ್ಟದಲ್ಲಿ ಪ್ರತಿಭಟನೆಗಳು ನಡೆದಿದ್ದವು.

Continue Reading

ವಾಣಿಜ್ಯ

PAN Card Safety: ಪಾನ್ ಕಾರ್ಡ್ ದುರ್ಬಳಕೆಯಿಂದ ಪಾರಾಗುವುದು ಹೇಗೆ?

ಭಾರತದಲ್ಲಿ ಪಾನ್ ಕಾರ್ಡ್ ದುರ್ಬಳಕೆ ಹೆಚ್ಚಾಗುತ್ತಿದೆ. ಅದರಲ್ಲೂ ಹಿರಿಯ ನಾಗರಿಕರು, ದುರ್ಬಲರು ಈ ವಂಚನೆಗೆ ಬಲಿಯಾಗುತ್ತಿದ್ದಾರೆ. ವಂಚಕರು ಪಾನ್ (PAN Card Safety) ವಿವರಗಳನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ವಂಚನೆಗಳನ್ನು ಹೇಗೆ ಗುರುತಿಸಬಹುದು ಮತ್ತು ಆರ್ಥಿಕ ಯೋಗಕ್ಷೇಮವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

PAN Card Safety
Koo

ಪಾನ್ ಕಾರ್ಡ್‌ಗಳ (PAN Card Safety) ದುರುಪಯೋಗ ಭಾರತದಲ್ಲಿ (india) ಹೆಚ್ಚಾಗುತ್ತಿದೆ. ವಿಶೇಷವಾಗಿ ಹಿರಿಯ ನಾಗರಿಕರು (senior citizens), ರೈತರು (farmers), ವಿದ್ಯಾರ್ಥಿಗಳು (students) ಇದಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ನಾವು ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ. ಅದರಲ್ಲೂ ಪಾನ್ ಕಾರ್ಡ್ (pan card) ಬಳಕೆ, ಮಾಹಿತಿ ಹಂಚಿಕೆ ವಿಚಾರದಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸಬೇಕಿದೆ.

ಪಾನ್ ಕಾರ್ಡ್ ಭಾರತದಲ್ಲಿನ ಹಣಕಾಸಿನ ವಹಿವಾಟುಗಳಿಗೆ ಪ್ರಮುಖ ದಾಖಲೆಯಾಗಿದೆ. ಹೀಗಾಗಿ ಇದನ್ನು ವಿವಿಧ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳಬಹುದಾದ ಸಾಧ್ಯತೆಗಳಿವೆ. ಮುಂಬಯಿಯ ಹಿರಿಯ ನಾಗರಿಕರೊಬ್ಬರ ಪಾನ್ ವಿವರಗಳನ್ನು 1.3 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮಾರಾಟವನ್ನು ನೋಂದಾಯಿಸಲು ಬಳಸಿದ್ದಾರೆ ಎನ್ನುವುದು ಆದಾಯ ತೆರಿಗೆ ಇಲಾಖೆಯಿಂದ ತನಿಖೆಗೆ ಬಂದ ಬಳಿಕ ಗೊತ್ತಾಗಿದೆ.

ವಂಚಕರು ಸಾಮಾನ್ಯವಾಗಿ ತಂತ್ರಜ್ಞಾನದ ಬಗ್ಗೆ ತಿಳಿದಿರುತ್ತಾರೆ. ಹೀಗಾಗಿ ಅವರು ಹೆಚ್ಚು ಜಾಗರೂಕರಾಗಿರದ ವ್ಯಕ್ತಿಗಳನ್ನು ಗುರಿಯಾಗಿಸುತ್ತಾರೆ. ಅವರು ವಿವಿಧ ವಿಧಾನಗಳ ಮೂಲಕ ಪಾನ್ ವಿವರಗಳನ್ನು ಪಡೆದು ಅನಂತರ ಅವುಗಳನ್ನು ಕಾನೂನುಬಾಹಿರವಾಗಿ ಬಳಸುತ್ತಾರೆ.

ವಂಚನೆ ಹೇಗೆ?

ನಕಲಿ ಆಸ್ತಿ ನೋಂದಣಿ

ಮುಂಬಯಿ ಪ್ರಕರಣದಂತೆ ವಂಚಕರು ನಕಲಿ ಆಸ್ತಿ ಮಾರಾಟವನ್ನು ನೋಂದಾಯಿಸಲು ಪಾನ್ ಕಾರ್ಡ್‌ಗಳನ್ನು ದುರುಪಯೋಗಪಡಿಸಿಕೊಳ್ಳಬಹುದು. ಇದು ಸಂತ್ರಸ್ತರಿಗೆ ತೆರಿಗೆ ನೊಟೀಸ್ ಜಾರಿಯಾಗಲು ಕಾರಣವಾಗಬಹುದು.

ಸಾಲ ಪಡೆಯಲು

ಕ್ರಿಮಿನಲ್‌ಗಳು ಫಿನ್‌ಟೆಕ್ ಅಪ್ಲಿಕೇಶನ್‌ಗಳ ಮೂಲಕ ಸಾಲಗಳನ್ನು ಪಡೆಯಲು ಪಾನ್ ವಿವರಗಳನ್ನು ಬಳಸಿಕೊಳ್ಳಬಹುದು. ಇದರಿಂದ ಸಂತ್ರಸ್ತರು ಅನಿರೀಕ್ಷಿತವಾಗಿ ಸಾಲಗಾರರಾಗಬಹುದು.


ಪಾನ್ ರಕ್ಷಿಸುವುದು ಹೇಗೆ?

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಪಾನ್ ಮಾಹಿತಿಯನ್ನು ಹಂಚಿಕೊಳ್ಳುವಾಗ ತೀವ್ರ ಎಚ್ಚರಿಕೆಯಿಂದ ಇರಲು ಸೂಚಿಸಿದೆ. ಪಾನ್ ವಿವರಗಳನ್ನು ಸರ್ಕಾರದಿಂದ ಅಧಿಕೃತವಾಗಿರುವ ಘಟಕಗಳೊಂದಿಗೆ ಮಾತ್ರ ಹಂಚಿಕೊಳ್ಳಿ. ಪಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದರಿಂದ ದುರುಪಯೋಗದ ವಿರುದ್ಧ ಸ್ವಲ್ಪ ರಕ್ಷಣೆ ಪಡೆಯಬಹುದು.

ಪ್ಯಾನ್ ಕಾರ್ಡ್ ದುರುಪಯೋಗವನ್ನು ಪರಿಶೀಲಿಸುವುದು ಹೇಗೆ?

ಪಾನ್ ಕಾರ್ಡ್ ಹಗರಣವನ್ನು ಗುರುತಿಸಲು ತೆಗೆದುಕೊಳ್ಳಬೇಕಾದ ಕೆಲವು ಕ್ರಮಗಳಿವೆ.
ವಾರ್ಷಿಕ ಮಾಹಿತಿ ಪರಿಶೀಲಿಸಿ (AIS)

ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಈ ಡಾಕ್ಯುಮೆಂಟ್, ಬ್ಯಾಂಕ್‌ಗಳು ಮತ್ತು ಇತರ ಸಂಸ್ಥೆಗಳು ವರದಿ ಮಾಡಿರುವ ನಿಮ್ಮ ಹಣಕಾಸಿನ ವಹಿವಾಟಿನ ವಿವರವಾದ ದಾಖಲೆಯನ್ನು ಒದಗಿಸುತ್ತದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆಗಾಗಿ ನಿಮ್ಮ ವಾರ್ಷಿಕ ಮಾಹಿತಿಯನ್ನು ನಿಯಮಿತವಾಗಿ ಪರಿಶೀಲಿಸಿ.

ಕ್ರೆಡಿಟ್ ಸ್ಕೋರ್ ಮೇಲ್ವಿಚಾರಣೆ ಮಾಡಿ

CIBIL, Equifax, Experian ಅಥವಾ CRIF ಹೈ ಮಾರ್ಕ್ ನಂತಹ ಏಜೆನ್ಸಿಗಳ ಮೂಲಕ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಿ. ನಿಮಗೆ ತಿಳಿಯದೆ ನಿಮ್ಮ ಹೆಸರಿನಲ್ಲಿ ತೆಗೆದುಕೊಂಡ ಯಾವುದೇ ಸಾಲಗಳನ್ನು ಗುರುತಿಸಿ.

ಇದನ್ನೂ ಓದಿ: Elon Musk: ಟೆಸ್ಲಾದಲ್ಲಿ ಎಲಾನ್ ಮಸ್ಕ್ ಒಬ್ಬರ ಸಂಬಳ ಟಾಟಾ ಮೋಟಾರ್ಸ್‌ ಒಟ್ಟು ಆದಾಯಕ್ಕಿಂತ ಹೆಚ್ಚು!

ಹಣಕಾಸು ವರದಿಗಳನ್ನು ಪರೀಕ್ಷಿಸಿ

ಪೇಟಿಎಂ ಅಥವಾ ಬ್ಯಾಂಕ್ ಬಜಾರ್‌ನಂತಹ ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳು ಹಣಕಾಸು ವರದಿಗಳನ್ನು ಪಡೆಯಲು ಅನುಮತಿಸುತ್ತವೆ. ಈ ವರದಿಗಳನ್ನು ನಿಯಮಿತವಾಗಿ ಪರಿಶೀಲಿಸುವುದರಿಂದ ಯಾವುದೇ ಅನಧಿಕೃತ ವಹಿವಾಟುಗಳನ್ನು ಪತ್ತೆಹಚ್ಚಲು ಸಹಾಯವಾಗುವುದು.

ಜಾಗರೂಕರಾಗಿರಿ ಮತ್ತು ಕ್ರಮ ಕೈಗೊಳ್ಳಿ

ಪಾನ್ ಕಾರ್ಡ್ ಹಂಚಿಕೆ ವಿಚಾರದಲ್ಲಿ ಜಾಗರೂಕರಾಗಿರಿ. ಅನುಮಾನಾಸ್ಪದವಾಗಿ ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳಿ. ಇದರಿಂದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಪಾನ್ ಕಾರ್ಡ್ ವಂಚನೆಗೆ ಬಲಿಯಾದರೆ ತಕ್ಷಣ ಪೊಲೀಸ್ ಇಲಾಖೆಗೆ ದೂರು ನೀಡಿ. ಆರ್ಥಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಪಾನ್ ವಿವರಗಳನ್ನು ರಕ್ಷಿಸುವುದು ಬಹಳ ಮುಖ್ಯ.

Continue Reading

Latest

IIT Bombay: ಹಿಂದೂ ದೇವರ ಅವಹೇಳನಕಾರಿ ನಾಟಕ; ಐಐಟಿ ವಿದ್ಯಾರ್ಥಿಗಳಿಗೆ ದಂಡ

IIT Bombay: ಧರ್ಮ ಹಾಗೂ ದೇವರುಗಳ ವಿಷಯ ತುಂಬಾ ಸೂಕ್ಷ್ಮವಾದದ್ದು. ಇದನನು ಕೆದಕಿದರೆ ದೇಶದಲ್ಲಿನ ಶಾಂತಿ ಕದಡಿದ ಹಾಗೆ.ಅದರಲ್ಲೂ ದೇಶದ ಪ್ರಜೆಗಳಾದ ವಿದ್ಯಾರ್ಥಿಗಳು ಈ ವಿಷಯದ ಕುರಿತು ಹೆಚ್ಚಿನ ನಿಗಾವಹಿಸಬೇಕು. ಐಐಟಿ ಬಾಂಬೆಯ ಬಯಲು ರಂಗಮಂದಿರದಲ್ಲಿ ನಡೆದ ಇನ್ ಸ್ಟಿಟ್ಯೂಟ್ ನ ಪರ್ಫಾರ್ಮಿಂಗ್ ಆರ್ಟ್ಸ್ ಫೆಸ್ಟಿವಲ್ ನಲ್ಲಿ “ರಾಹೋವನ್” ಶೀರ್ಷಿಕೆಯ ನಾಟಕವಾಡಿದ ವಿದ್ಯಾರ್ಥಿಗಳು ಇದರಲ್ಲಿ ಹಿಂದೂ ಧರ್ಮಕ್ಕೆ ಅಗೌರವ ತೋರಿದಲ್ಲದೇ ರಾಮ ಮತ್ತು ಸೀತೆಯನ್ನು ಅವಹೇಳನ ಮಾಡಿದ್ದರು. ಇದಕ್ಕೆ ತೀವ್ರವಾದ ವಿರೋಧ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಐಐಟಿ ವಿದ್ಯಾರ್ಥಿಗಳಿಗೆ ದಂಡ ವಿಧಿಸಿದೆ.

VISTARANEWS.COM


on

IIT Bombay
Koo

ಮುಂಬೈ : ರಾಮ ಮತ್ತು ಸೀತೆ ಹಿಂದೂ(Hindu)ಗಳ ಆರಾಧ್ಯ ದೇವರು. ಹಾಗಾಗಿ ಈ ದೇವರ ಹೆಸರಿಗೆ ಅವಮಾನ ಮಾಡಿದರೆ ಯಾರೂ ಸುಮ್ಮನೆ ಇರುವುದಿಲ್ಲ. ಆದರೆ ಇದೀಗ ಐಐಟಿ ಬಾಂಬೆಯಲ್ಲಿ (IIT Bombay) ಹಿಂದೂ ದೇವರಿಗೆ ಅವಹೇಳನ ಮಾಡುವಂತಹ ನಾಟಕವಾಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ (Student) ದಂಡ ವಿಧಿಸಲಾಗಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಬಾಂಬೆಯ ಬಯಲು ರಂಗಮಂದಿರದಲ್ಲಿ ಈ ವರ್ಷ ಮಾರ್ಚ್ 31ರಂದು ನಡೆದ ಇನ್‌ಸ್ಟಿಟ್ಯೂಟ್‌ನ ಪರ್ಫಾರ್ಮಿಂಗ್ ಆರ್ಟ್ಸ್ ಫೆಸ್ಟಿವಲ್‌ನಲ್ಲಿ “ರಾಹೋವನ್” ಶೀರ್ಷಿಕೆಯ ನಾಟಕದಲ್ಲಿ ವಿದ್ಯಾರ್ಥಿಗಳು ರಾಮಾಯಣದ ಕಥಾ ಹಂದರವನ್ನು ಹೊಂದಿರುವ ನಾಟಕವಾಡಿದ್ದರು. ಇದರಲ್ಲಿ ಹಿಂದೂ ಧರ್ಮಕ್ಕೆ ಅಗೌರವ ತೋರಿದಲ್ಲದೇ ರಾಮ ಮತ್ತು ಸೀತೆಯನ್ನು ಅವಹೇಳನ ಮಾಡಿದ್ದರು.

ಈ ನಾಟಕವನ್ನು ವಿರೋಧಿಸಿ ಕಾಲೇಜಿನ ಒಂದು ವಿಭಾಗ ಪ್ರತಿಭಟನೆ ಮಾಡಿತ್ತು. ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಎಕ್ಸ್‌ನಲ್ಲಿನ ‘ಐಐಟಿ ಬಿ ಫಾರ್ ಭಾರತ್’ ಹ್ಯಾಂಡಲ್‌ನಲ್ಲಿ ಈ ನಾಟಕವನ್ನು ಖಂಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಐಐಟಿ ವಿದ್ಯಾರ್ಥಿಯೊಬ್ಬನಿಗೆ 1.2 ಲಕ್ಷ ರೂ. ದಂಡ ವಿಧಿಸಿದೆ. ಇತರ ಏಳು ವಿದ್ಯಾರ್ಥಿಗಳಿಗೆ ತಲಾ 40,000 ರೂ. ದಂಡ ವಿಧಿಸಲಾಗಿದೆ.

ಇದನ್ನೂ ಓದಿ: Murder Case: ಅಶ್ಲೀಲ ವಿಡಿಯೊ ಚಟ; ಮಗಳನ್ನೇ ಲೈಂಗಿಕಕ್ರಿಯೆಗೆ ಒತ್ತಾಯಿಸಿ ಕೊಂದ ಪಾಪಿ ತಂದೆ

ಅಲ್ಲದೇ ನಾಟಕಕ್ಕೆ ಸಂಬಂಧಿಸಿದ ದೂರುಗಳ ಪರಿಹಾರಕ್ಕೆ ಶಿಸ್ತು ಸಭೆ ಕರೆದ ಐಐಟಿ ಅಲ್ಲಿನ ಚರ್ಚೆಗಳ ಆಧಾರದ ಮೇಲೆ ಶಿಕ್ಷಾರ್ಹ ಕ್ರಮಗಳನ್ನು ಶಿಫಾರಸು ಮಾಡಿದೆ. ಅದರಂತೆ ಜುಲೈ 20, 2024ರಂದು ವಿದ್ಯಾರ್ಥಿ ವ್ಯವಹಾರ ಡೀನ್ ಕಚೇರಿ ಯಲ್ಲಿ ರೂ. 1.2ಲಕ್ಷ ದಂಡವನ್ನು ಪಾವತಿಸಬೇಕಾಗಿ ಹೇಳಿದೆ. ಮತ್ತು ಸಂಸ್ಥೆಯ ಜಿಮ್ಖಾನಾ ಪ್ರಶಸ್ತಿಗಳಿಂದ ಯಾವುದೇ ಮಾನ್ಯತೆ ಪಡೆಯದಂತೆ ನಿರ್ಬಂಧ ಹೇರಿದರೆ ಕಿರಿಯ ಏಳು ವಿದ್ಯಾರ್ಥಿಗಳಿಗೆ 40,000 ದಂಡದ ಜೊತೆಗೆ ಹಾಸ್ಟೆಲ್ ಸೌಲಭ್ಯದಿಂದ ಅಮಾನತುಗೊಳಿಸಲಾಗಿದೆ. ಒಂದು ವೇಳೆ ದಂಡವನ್ನು ತಪ್ಪಿಸಿದರೆ ಮತ್ತಷ್ಟು ನಿರ್ಬಂಧಕ್ಕೆ ಒಳಪಡಿಸುವುದಾಗಿ ತಿಳಿಸಿದೆ.

Continue Reading

ದೇಶ

UGC-NET: ಯುದ್ಧವನ್ನೇ ನಿಲ್ಲಿಸುವ ಸಾಮರ್ಥ್ಯವಿರುವ ಮೋದಿ ಪ್ರಶ್ನೆ ಪತ್ರಿಕೆ ಸೋರಿಕೆ ಯಾಕೆ ತಡೆಯುತ್ತಿಲ್ಲ? ರಾಹುಲ್‌ ಗಾಂಧಿ ವ್ಯಂಗ್ಯ

UGC-NET: ಜೂನ್‌ 18ರಂದು ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನೇ ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಈ ವಿಚಾರವಾಗಿ ಇದೀಗ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ”ಪ್ರಧಾನಿ ಮೋದಿ ಅವರಿಗೆ ರಷ್ಯಾ-ಉಕ್ರೇನ್ ಯುದ್ಧವನ್ನೇ ನಿಲ್ಲಿಸುವ ಸಾಮರ್ಥ್ಯವಿದೆ ಎಂದು ಹೇಳಲಾಗುತ್ತಿದೆ. ಆದರೆ ಕೆಲವು ಕಾರಣಗಳಿಂದಾಗಿ ನರೇಂದ್ರ ಮೋದಿ ಅವರಿಗೆ ಭಾರತದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಅಥವಾ ಅದನ್ನು ನಿಯಂತ್ರಿಸಲು ಅವರು ಬಯಸುತ್ತಿಲ್ಲ” ಎಂದು ದೂರಿದ್ದಾರೆ.

VISTARANEWS.COM


on

UGC-NET
Koo

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET 2024) ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಪರೀಕ್ಷೆಯನ್ನೇ ರದ್ದುಗೊಳಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಜೂನ್‌ 18ರಂದು ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನೇ (NET 2024) ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಈ ವಿಚಾರವಾಗಿ ಇದೀಗ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ʼʼಭಾರತ್‌ ಜೋಡೋ ನ್ಯಾಯ ಯಾತ್ರೆ ವೇಳೆಯೇ ಸಾವಿರಾರು ಮಂದಿ ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆ ದೂರು ನೀಡಿದ್ದರು. ಪ್ರಧಾನಿ ಮೋದಿ ಅವರಿಗೆ ರಷ್ಯಾ-ಉಕ್ರೇನ್ ಯುದ್ಧವನ್ನೇ ನಿಲ್ಲಿಸುವ ಸಾಮರ್ಥ್ಯವಿದೆ ಎಂದು ಹೇಳಲಾಗುತ್ತಿದೆ. ಆದರೆ ಕೆಲವು ಕಾರಣಗಳಿಂದಾಗಿ ನರೇಂದ್ರ ಮೋದಿ ಅವರಿಗೆ ಭಾರತದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಅಥವಾ ಅದನ್ನು ನಿಯಂತ್ರಿಸಲು ಅವರು ಬಯಸುತ್ತಿಲ್ಲ” ಎಂದು ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.  “ಶಿಕ್ಷಣ ವ್ಯವಸ್ಥೆಯನ್ನು ಬಿಜೆಪಿಯ ಮಾತೃ ಸಂಸ್ಥೆ ವಶಪಡಿಸಿಕೊಂಡಿದೆ. ಈ ಕಾರಣಕ್ಕೆ ಪ್ರಶ್ನೆ ಪತ್ರಿಕೆ ಸೋರಿಕೆ ನಡೆಯುತ್ತಿದೆ. ಇದು ರಾಷ್ಟ್ರ ವಿರೋಧಿ ಚಟುವಟಿಕೆ” ಎಂದು ಅವರು ಟೀಕಿಸಿದ್ದಾರೆ.

“ಒಂದು ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಇನ್ನೊಂದನ್ನು ರದ್ದುಗೊಳಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂದು ನಮಗೆ ತಿಳಿದಿಲ್ಲ. ಅದೇನೇ ಇರಲಿ ತಪ್ಪಿತಸ್ಥರನ್ನು ಬಂಧಿಸಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ನಾಳೆ ದೇಶಾದ್ಯಂತ ಪ್ರತಿಭಟನೆ

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET-UG) ಅಕ್ರಮ ನಡೆದಿದ್ದು, ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್‌ ಶುಕ್ರವಾರ (ಜೂನ್‌ 21) ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಿದೆ. ಈ ಬಗ್ಗೆ ಮಾಹಿತಿ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್, “ನೀಟ್ ಪರೀಕ್ಷೆಯಲ್ಲಿನ ಭ್ರಷ್ಟಾಚಾರ ಮತ್ತು ಅಕ್ರಮಗಳು ಮತ್ತು ಎನ್‌ಡಿಎ ಸರ್ಕಾರದ ನಿಷ್ಕೀಯತೆಯನ್ನು ಎತ್ತಿ ತೋರಿಸಿದೆ. ವಿದ್ಯಾರ್ಥಿಗಳ ನ್ಯಾಯಕ್ಕಾಗಿ ಒತ್ತಾಯಿಸಿ ಎಲ್ಲ ಪ್ರದೇಶ ಕಾಂಗ್ರೆಸ್ ಸಮಿತಿಗಳು ಜೂನ್ 21ರಂದು ರಾಜ್ಯ ಪ್ರಧಾನ ಕಚೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಬೇಕು. ಇದರಲ್ಲಿ ಹಿರಿಯ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಭಾಗಿಯಾಗಬೇಕು” ಎಂದು ಕರೆ ನೀಡಿದ್ದಾರೆ.

ಇದನ್ನೂ ಓದಿ: NET 2024: ಪರೀಕ್ಷೆ ನಡೆದ ಒಂದೇ ದಿನದಲ್ಲಿ ನೆಟ್ ರದ್ದುಗೊಳಿಸಿದ ಕೇಂದ್ರ ಸರ್ಕಾರ; ಏನಿದು ಕೇಸ್?‌

ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಇನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಟ್​ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, “ನರೇಂದ್ರ ಮೋದಿಯವರೇ, ನೀವು ಪರೀಕ್ಷೆಗಳ ಬಗ್ಗೆ ಸಾಕಷ್ಟು ಚರ್ಚಿಸುತ್ತೀರಿ. ಆದರೆ ನೀವು ಯಾವಾಗ ‘ನೀಟ್ ಪರೀಕ್ಷಾ ಪೇ ಚರ್ಚಾ’ ನಡೆಸುತ್ತೀರಿ? ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಉತ್ಸಾಹಕ್ಕೆ ತಣ್ಣೀರೆರಚಿದ್ದೀರಿ. ಇದು ಮೋದಿ ಸರ್ಕಾರದ ದುರಹಂಕಾರದ ಸೋಲು” ಎಂದು ಖರ್ಗೆ ಟೀಕಿಸಿದ್ದಾರೆ.

Continue Reading
Advertisement
Virat kohli
ಪ್ರಮುಖ ಸುದ್ದಿ7 mins ago

Virat kohli : ಕೊಹ್ಲಿಯನ್ನು ಮತ್ತೆ ಸ್ವಾರ್ಥಿ ಎಂದು ದೂರಿದ ಪಾಕಿಸ್ತಾನದ ಮೊಹಮ್ಮದ್ ಹಫೀಜ್​

Darshan Arrested
ಕರ್ನಾಟಕ41 mins ago

Darshan Arrested: ದರ್ಶನ್‌ ಸೇರಿ ನಾಲ್ವರನ್ನೇ ಪೊಲೀಸರು ಕಸ್ಟಡಿಗೆ ಪಡೆದಿದ್ದೇಕೆ? ಯಾವೆಲ್ಲ ತನಿಖೆ ಬಾಕಿ ಇದೆ?

Floral Jumpsuit fashion
ಲೈಫ್‌ಸ್ಟೈಲ್49 mins ago

Floral Jumpsuit fashion: ಔಟಿಂಗ್‌ಗೆ ಪರ್ಫೆಕ್ಟ್ ಔಟ್‌ ಫಿಟ್‌ ಈ ಫ್ಲೋರಲ್‌ ಜಂಪ್‌ ಸೂಟ್‌!

Karnataka Weather Forecast
ಮಳೆ1 hour ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Weight Loss tension
ಆರೋಗ್ಯ1 hour ago

International Yoga Day 2024: ದೇಹ ತೂಕ ಇಳಿಕೆಗೆ ಈ 5 ಆಸನಗಳು ಸೂಕ್ತ

NEET UG
ಪ್ರಮುಖ ಸುದ್ದಿ1 hour ago

NEET UG : ಫಿಸಿಕ್ಸ್​ನಲ್ಲಿ 85, ಕೆಮೆಸ್ಟ್ರಿಯಲ್ಲಿ 5! ನೀಟ್ ಆಕಾಂಕ್ಷಿಯ ಸ್ಕೋರ್ ಕಾರ್ಡ್ ಸೋರಿಕೆ, ಆರೋಪಿ ಸೆರೆ

PAN Card Safety
ವಾಣಿಜ್ಯ1 hour ago

PAN Card Safety: ಪಾನ್ ಕಾರ್ಡ್ ದುರ್ಬಳಕೆಯಿಂದ ಪಾರಾಗುವುದು ಹೇಗೆ?

7th Pay Commission
ಕರ್ನಾಟಕ1 hour ago

7th Pay Commission: ಸರ್ಕಾರಿ ನೌಕರರ ಸಂಬಳ 27% ಹೆಚ್ಚಿಸಿದರೆ ಒಟ್ಟು ಏರಿಕೆ ಎಷ್ಟಾಗಲಿದೆ? ಇಲ್ಲಿದೆ ಲೆಕ್ಕಾಚಾರ

Protest by BJP in Yallapur against petrol and diesel price hike
ಉತ್ತರ ಕನ್ನಡ2 hours ago

Uttara Kannada News: ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ವಿರೋಧಿಸಿ ಯಲ್ಲಾಪುರದಲ್ಲಿ ಬಿಜೆಪಿಯಿಂದ ಪ್ರತಿಭಟನೆ

Renuka swamy Murder case
ಬೆಂಗಳೂರು2 hours ago

Renuka Swamy Murder : ನಟ ದರ್ಶನ್ ಹಲ್ಲೆ ಮಾಡುವುದನ್ನು ವಿಡಿಯೊ ಮಾಡಿದ್ದ ಮೂವರು ಅರೆಸ್ಟ್‌; ಸಿಕ್ಕೇ ಬಿಡ್ತಾ ದೊಡ್ಡ ಸಾಕ್ಷಿ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ1 hour ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು3 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು3 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ4 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ4 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ4 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ5 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ6 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

ಟ್ರೆಂಡಿಂಗ್‌