ವರ್ಕ್‌ ಫ್ರಂ ಮೌಂಟೇನ್:‌ ಇಲ್ಲೆಲ್ಲಾ ಪ್ರವಾಸ ಮಾಡುತ್ತಾ ಕೆಲಸ ಮಾಡಿ! - Vistara News

ಪ್ರಮುಖ ಸುದ್ದಿ

ವರ್ಕ್‌ ಫ್ರಂ ಮೌಂಟೇನ್:‌ ಇಲ್ಲೆಲ್ಲಾ ಪ್ರವಾಸ ಮಾಡುತ್ತಾ ಕೆಲಸ ಮಾಡಿ!

VISTARANEWS.COM


on

workation
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೊರೋನಾ ಜಗತ್ತಿಗೆ ಕಾಲಿಡುತ್ತಿದ್ದಂತೆ ಜಗತ್ತಿಡೀ ಒಮ್ಮೆ ಮಗ್ಗುಲು ಬದಲಾಯಿಸಿತು. ಬಹುತೇಕ ಎಲ್ಲ ಕೆಲಸಗಳೂ ʻವರ್ಕ್‌ ಫ್ರಂ ಹೋಂʼ ಆದವು. ಶಾಲೆಗಳು ಆನ್‌ಲೈನ್‌ ಆದವು. ಒಂದೆರಡು ವರ್ಷ ಜಗತ್ತು ಹೇಗೋ ನಡೆದುಕೊಂಡು ಮುಂದೆ ಹೋಯಿತು ಎಂದರೆ ತಪ್ಪಲ್ಲ. ಇಂಥ ಕೊರೋನಾ ಜಗತ್ತಿಗೆ ಕಲಿಸಿದ ಪಾಠ ಅನೇಕ. ಆದರೆ, ಹಲವು ಸಂಸ್ಥೆಗಳು ಇದೀಗ ಕೋರೋನೋತ್ತರ ಕಾಲಘಟ್ಟದಲ್ಲಿ ʻವರ್ಕ್‌ ಫ್ರಂ ಹೋಂʼ ಅನ್ನೇ ಮುಂದುವರಿಸಿವೆ. ಹಲವು ಮಂದಿ, ಆಫೀಸಿಗೆ ಹೋಗಬೇಕಾದ ಅನಿವಾರ್ಯತೆ ಇಲ್ಲದ ಕಾರಣ, ಹಾಗೂ ಕೊರೋನಾ ಸಂದರ್ಭ ಮನೆಯೊಳಗೇ ಕೂತು ಸುಸ್ತಾದ ಮಂದಿ ಈಗೆಲ್ಲ ಒಂದಿಷ್ಟು ದಿನ ಯಾವುದಾದರೊಂದು ಹೊಸ ಜಾಗದಲ್ಲಿ ಕೂತು ಕೆಲಸ ಮಾಡುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಗುಡ್ಡಬೆಟ್ಟಗಳ ಚಂದನೆಯ ದೃಶ್ಯಗಳನ್ನು ಸವಿಯುತ್ತಾ, ತರಹೇವಾರಿ ಊಟದ ರುಚಿಯನ್ನು ನೋಡುತ್ತಾ ಹೊಸ ಜನರ ಸ್ನೇಹವನ್ನು ಸಂಪಾದಿಸುತ್ತಾ ಬದುಕಿನಲ್ಲಿ ಹೊಸ ಅನುಭವಗಳನ್ನು ಕಲೆ ಹಾಕುತ್ತಾ ಹೊಟ್ಟೆಯನ್ನೂ ಹೊರೆದುಕೊಳ್ಳುತ್ತಾ ಹದಿನೈದಿಪ್ಪತ್ತು ದಿನಗಳಿಂದ ಹಿಡಿದು ತಿಂಗಳುಗಟ್ಟಲೆ ಒಂದೇ ಜಾಗದಲ್ಲಿ ಇದ್ದುಕೊಂಡು ಪ್ರವಾಸದ ರುಚಿಯನ್ನು ಅನುಭವಿಸುವವರಿದ್ದಾರೆ. ಹಾಗಾಗಿ ʻವರ್ಕ್‌ ಫ್ರಂ ಮೌಂಟೇನ್‌ʼ ಹೆಸರಿನಲ್ಲಿ ಜನಪ್ರಿಯವಾಗಿರುವ ಕೊರೋನೋತ್ತರ ಈ ಪ್ರವಾಸಕ್ಕೆ ಸೂಕ್ತ ಎನಿಸುವ ಸ್ಥಳಗಳು ಇಲ್ಲಿವೆ!

jibhi

೧. ಜಿಬಿ, ಹಿಮಾಚಲ ಪ್ರದೇಶ: ಪರ್ವತಗಳು ಕರೆದಾಗ ಹೋಗಿಬಿಡಬೇಕು ಎಂಬ ಪ್ರಸಿದ್ಧ ಮಾತೊಂದಿದೆ. ಇದು ಅಂಥದ್ದೇ ಪರ್ವತ ಪ್ರದೇಶ. ಬಿಜಿಗೆ ಬಂದವರು ಮರಳಲು ಮನಸ್ಸು ಮಾಡುವುದಿಲ್ಲ. ಪ್ರಶಾಂತ ವಾತಾವರಣ, ಸದಾ ಜುಳುಜುಳು ನಾದ ಕಿವಿಗೆ ಕೇಳುತ್ತಲೇ ಇರುವ ಹಸಿರು ಹಸಿರು ಬೆಟ್ಟಗುಡ್ಡಗಳು, ಗದ್ದೆ ಬಯಲುಗಳು, ಪ್ರೀತಿ ತುಂಬಿದ ಮನಸ್ಸುಗಳು, ನಗರ ಬದುಕಿನ ಜಂಜಡಗಳೇ ಇಲ್ಲದ ನಿಧಾನಗತಿಯ ಲೈಫು, ದೂರದಲ್ಲಿ ಕಾಣುವ ಹಿಮಚ್ಛಾದಿತ ಬೆಟ್ಟಗುಡ್ಡಗಳು ಹೀಗೆ ಜಿಬಿಯನ್ನು ವರ್ಣಿಸಲು ಪದಗಳ ಕೊರತೆಯಾದರೆ ಆಶ್ಚರ್ಯವಿಲ್ಲ. ಇಲ್ಲಿ ಸಿಗುವ ಹೋಂಸ್ಟೇಗಳಲ್ಲಿ ಇದ್ದುಕೊಂಡು, ಆಫೀಸಿನ ಕೆಲಸದ ಸಮಯದಲ್ಲಿ ಕೆಲಸ ಮಾಡುತ್ತಾ, ಉಳಿದ ಸಮಯಗಳಲ್ಲಿ ಊರು ನೋಡುತ್ತಾ, ವಾರಾಂತ್ಯಗಳಲ್ಲಿ ಹಳ್ಳಿಗಳ ಜನರೊಂದಿಗೆ ಬೆರೆಯುತ್ತಾ ಅಥವಾ ಚಾರಣ ಮಾಡುತ್ತಾ ಕಳೆಯಲು ಹೇಳಿ ಮಾಡಿಸಿದಂಥ ಜಾಗವಿದು.

shillong

೨. ಶಿಲ್ಲಾಂಗ್‌, ಮೇಘಾಲಯ: ಯಾವ ಸಮಯದಲ್ಲಿ ಮಳೆ ಬರುತ್ತದೆ ಎಂದು ಹೇಳಲಾಗದ, ಬಂದರೆ ಮಳೆ ನೋಡುತ್ತಾ ಕೂತು ಬಿಡಬಹುದಾದ, ಇಲ್ಲವಾದರೆ, ಶಿಲ್ಲಾಂಗ್‌ನ ಬೀದಿ ಸುತ್ತುತ್ತಾ, ಇಲ್ಲಿನ ಉದ್ಯಾನ, ಸರೋವರಗಳ ಬದಿಯಲ್ಲಿ ಅಡ್ಡಾಗಿ ನೆಮ್ಮದಿಯಿಂದ ಸಮಯ ಕಳೆಯುತ್ತಾ ಇರಲು ಅತ್ಯುತ್ತಮ ಜಾಗ. ನಗರದ ಎಲ್ಲ ವ್ಯವಸ್ಥೆಗಳೂ ಇರುವ, ಒಂದೆಡೆ ಇದ್ದುಕೊಂಡು ಕೆಲಸ ಮಾಡಲು ಯಾವುದೇ ತೊಂದರೆ ಇರದ ಜಾಗ. ವಾರಾಂತ್ಯವಾದರೆ, ದಟ್ಟ ಕಾಡಿನಲ್ಲಿ ಕಳೆದುಹೋಗಬಹುದಾದ ಭರಪೂರ ಜಾಗಗಳೂ ಇಲ್ಲಿವೆ.

mussorie

೩. ಮಸ್ಸೂರಿ, ಉತ್ತರಾಖಂಡ: ೨೦೧೫ರಲ್ಲಿ ʻಫ್ರೀ ವೈಫೈ ನಗರʼ ಎಂದು ಘೋಷಿತವಾದ, ಚಂದನೆಯ ಬೆಟ್ಟದೂರು. ಶಾಂತವಾದ, ಪರ್ವತದ ನಗರವೊಂದು ಹೊಂದಿರಬಹುದಾದ ಎಲ್ಲ ವ್ಯವಸ್ಥೆಗಳನ್ನು ಹೊಂದಿರುವ ಸದಾ ತಂಪಾಗಿರುವ ನಗರಿ. ಒಂದೆರಡು ವಾರ ಆರಾಮವಾಗಿ ಕೆಲಸ ಮಾಡಿಕೊಂಡು ಕಳೆಯಬಹುದಾದ ಎಲ್ಲ ಅರ್ಹತೆಗಳೂ ಈ ಬೆಟ್ಟದೂರಿಗಿದೆ.

manali

೪. ಮನಾಲಿ, ಹಿಮಾಚಲ ಪ್ರದೇಶ: ಪ್ರವಾಸಿಗರಿಂದ ಗಿಜಿಗುಡುವ ಊರೇನೋ ನಿಜ. ಆದರೆ ಇಲ್ಲೂ ಶಾಂತಿ ಹುಡುಕಿಕೊಂಡು ಹೋದರೆ ಸ್ವಲ್ಪ ಕಷ್ಟಪಟ್ಟು ಸ್ಥಳಗಳನ್ನು ಹುಡುಕಿದರೆ, ಆರಾಮವಾಗಿ ಬೆಟ್ಟದ ಬದಿಯ ಪುಟ್ಟ ಗುಡಿಸಲಲ್ಲಿ ಕೂತು ಲ್ಯಾಪ್‌ಟಾಪ್‌ ತೊಡೆಗೇರಿಸಿ ಕೆಲಸ ಮಾಡುವಂಥ ಬೇಕಾದಷ್ಟು ಜಾಗಗಳಿವೆ. ತಿಂಗಳುಗಟ್ಟಲೆ ಇಲ್ಲೇ ಕೂತು, ಪರ್ವತ ಪ್ರದೇಶದ ಬದುಕನ್ನು ಅಭ್ಯಾಸ ಮಾಡಿಕೊಂಡು ಮತ್ತೆ ತಮ್ಮೂರಿಗೆ ಮರಳಲು ಮನಸ್ಸು ಮಾಡದ ಎಷ್ಟೋ ಜೀವಗಳು ಇಂದು ಇಂತಹ ಜೀವನವನ್ನೇ ನೆಚ್ಚಿಕೊಂಡಿದ್ದಾರೆ. ಮನಾಲಿ, ಎಲ್ಲ ರೀತಿಯಲ್ಲೂ ಅಂತಹ ಮನಸ್ಸುಗಳಿಗೆ ಸೂಕ್ತ ಜಾಗ.

bir billing

೫. ಬೀರ್‌ ಬಿಲ್ಲಿಂಗ್‌, ಹಿಮಾಚಲ ಪ್ರದೇಶ: ನೀವು ಸ್ವಲ್ಪ ಸಾಹಸಮಯ ಪ್ರವೃತ್ತಿಯವರೆಂದಾದಲ್ಲಿ ಈ ಜಾಗ ಬೆಸ್ಟ್‌. ಕೆಲಸದ ಸಮಯದಲ್ಲಿ ಕೆಲಸ ಮಾಡಿಕೊಂಡು ಉಳಿದ ಸಮಯದಲ್ಲಿ, ರೋಮಾಂಚಕ ಪ್ಯಾರಾಗ್ಲೈಡಿಂಗ್‌ ಮಾಡಿಕೊಂಡೋ, ಸೈಕ್ಲಿಂಗ್‌ ಮಾಡುತ್ತಲೋ ಅಥವಾ ಚಾಋಣ ಮಾಡುತ್ತಲೋ ಕಳೆದು ಬಿಡಬಹುದಾದ ಪ್ರದೇಶ. ಜೊತೆಗೆ ಧ್ಯಾನದಂತಹ ಮನೋನಿಗ್ರಹಕ್ಕೂ, ಬದುಕಿಗೆ ಹಲವು ಒಳನೋಟಗಳನ್ನು ನೀಡುವ ಈ ಜಾಗ ಸೈ. ಧರ್ಮಶಾಲಾದಲ್ಲಿ ಟಿಬೆಟಿಯನ್‌ ಬೌದ್ಧವಿಹಾರಗಳನ್ನು ನೋಡುತ್ತಾ ಮನಸ್ಸಿನ ಶಾಂತಿ ನೆಮ್ಮದಿಯನ್ನೂ ಅನುಭವಿಸುತ್ತಾ ಇರಬೇಕೆಂದರೆ ಈ ಜಾಗ ಅತ್ಯುತ್ತಮ. ಆಧ್ಯಾತ್ಮದಿಂದ ಸಾಹಸದವರೆಗೆ ಎಲ್ಲವನ್ನೂ ಒಂದೇ ತಟ್ಟೆಯಲ್ಲಿಟ್ಟು ಕೊಡುವ ಜಾಗ. ಯಾವುದು ಬೇಕೋ ಅದು ನಮ್ಮ ಆಯ್ಕೆ ಅಷ್ಟೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Cannes 2024 Sandalwood Actress Interview: ಕಾನ್‌ನಲ್ಲಿ ಹ್ಯಾಟ್ರಿಕ್‌ ವಾಕ್‌ ಮಾಡಿದ ಸ್ಯಾಂಡಲ್‌ವುಡ್‌ ನಟಿ ಇತಿ ಆಚಾರ್ಯ ಹೇಳಿದ್ದೇನು?

ಕಾನ್‌ ರೆಡ್‌ ಕಾರ್ಪೆಟ್‌ನಲ್ಲಿ ಸತತವಾಗಿ ಮೂರನೇ ಬಾರಿ ಹ್ಯಾಟ್ರಿಕ್‌ ವಾಕ್‌ ಮಾಡಿದ ಹೆಗ್ಗಳಿಕೆ ಸ್ಯಾಂಡಲ್‌ವುಡ್‌ ನಟಿ, ಮಾಡೆಲ್‌ ಇತಿ ಆಚಾರ್ಯಗೆ ಸಲ್ಲುತ್ತದೆ. ಈ ಬಾರಿ ಹ್ಯಾಟ್ರಿಕ್‌ ವಾಕ್‌ ಮಾಡಿದ ಅವರು ದೂರದ ಫ್ರಾನ್ಸ್ ನಿಂದ ವಿಸ್ತಾರ ನ್ಯೂಸ್‌ನೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಅವರ ಸಂದರ್ಶನದ (Cannes 2024 Sandalwood Actress Interview) ಸಾರಂಶ ಇಲ್ಲಿದೆ.

VISTARANEWS.COM


on

Cannes 2024 Sandalwood Actress Interview
ಚಿತ್ರಗಳು: 2024 ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ 3ನೇ ಬಾರಿ ವಾಕ್‌ ಮಾಡಿದ ಸ್ಯಾಂಡಲ್‌ವುಡ್‌ ನಟಿ, ಮಾಡೆಲ್‌ ಇತಿ ಆಚಾರ್ಯ
Koo

ಸಂದರ್ಶನ : ಶೀಲಾ ಸಿ. ಶೆಟ್ಟಿ
ಸ್ಯಾಂಡಲ್‌ವುಡ್‌ ನಟಿ ಹಾಗೂ ಮಾಡೆಲ್‌ ಇತಿ ಆಚಾರ್ಯ, ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸತತವಾಗಿ 3 ನೇ ಬಾರಿ ರೆಡ್‌ ಕಾರ್ಪೆಟ್‌ ವಾಕ್‌ ಮಾಡಿ, ಹ್ಯಾಟ್ರಿಕ್‌ ಬಾರಿಸಿದ್ದಾರೆ. ಯಾರಿದು ಇತಿ ಆಚಾರ್ಯ? ಕಳೆದೆರಡು ಬಾರಿಯೂ ಕಾನ್‌ ಫೆಸ್ಟಿವಲ್‌ನಲ್ಲಿ ಸ್ಯಾಂಡಲ್‌ವುಡ್‌ ಪ್ರತಿನಿಧಿಸಿರುವ ಇತಿ ಆಚಾರ್ಯ, ಸಾಕಷ್ಟು ಸ್ಯಾಂಡಲ್‌ವುಡ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇಕೆ! ಸಾಕಷ್ಟು ಫ್ಯಾಷನ್‌ ಶೋಗಳಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿಯೂ ರ್ಯಾಂಪ್‌ ವಾಕ್‌ ಮಾಡಿದ್ದಾರೆ. ಇಂಟರ್‌ನ್ಯಾಷನಲ್‌ ಆಲ್ಬಂ ಸಿಂಗರ್‌ ಮರ್ಲಿನ್‌ ಬಾಬಾಜೀ ಜೊತೆ ಆಲ್ಬಂನಲ್ಲೂ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿ ಕಾನ್‌ನಲ್ಲಿ ಲ್ಯಾವೆಂಡರ್‌ ಎಲಾಂಗೆಟೆಡ್‌ ನೆಟ್‌ ಗೌನ್‌ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಕಳೆದ ಬಾರಿಯೂ ಇದೇ ರೀತಿ ಟ್ರೆಂಡಿ ಡಿಸೈನರ್‌ ಗೌನ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಈ ಬಾರಿ ದೂರದ ಫ್ರಾನ್ಸ್‌ನಿಂದಲೇ ವಿಸ್ತಾರ ನ್ಯೂಸ್‌ನೊಂದಿಗೆ ಸಂತಸ ಹಂಚಿಕೊಂಡ ಇತಿ ಆಚಾರ್ಯ ಪುಟ್ಟ ಸಂದರ್ಶನ (Cannes 2024 Sandalwood Actress Interview) ನೀಡಿದರು.

Iti Acharya

ಕಾನ್‌ 2024 ರೆಡ್‌ಕಾರ್ಪೆಟ್‌ನಲ್ಲಿ ನಿಮ್ಮ ಲುಕ್‌ ಬಗ್ಗೆ ನೀವು ಹೇಳುವುದೇನು?

ಸ್ಕೈ ಬ್ಲ್ಯೂ ಶೇಡ್‌ನ ಶಿಮ್ಮರ್‌ ಅಸೆಮ್ಮಿಟ್ರಿಕಲ್‌ ಸಿಂಗಲ್‌ ಶೋಲ್ಡರ್ ಫಿಶ್‌ ಟೇಲ್‌ ಗೌನ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಸಾಕಷ್ಟು ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಂಡರೂ, ಹೆಚ್ಚು ಹೈಲೈಟಾದ ಗೌನ್‌ ಇದು.

Iti Acharya

ಕಾನ್‌ ರೆಡ್‌ಕಾರ್ಪೆಟ್‌ ವಾಕ್‌ ನಿಮಗೆ ಕಲಿಸಿದ್ದೇನು?

ಈಗಾಗಲೇ ಸತತವಾಗಿ 3ನೇ ಬಾರಿ ವಾಕ್‌ ಮಾಡಿರುವುದು ನನಗೆ ಆತ್ಮವಿಶ್ವಾಸ ಹೆಚ್ಚಿಸಿದೆ. ಕೇವಲ ಫ್ಯಾಷನ್‌ ಮಾತ್ರವಲ್ಲ, ಸಿನಿಮಾ ಕುರಿತಂತೆಯೂ ಸಾಕಷ್ಟು ವಿಚಾರ-ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗಿಸಿದೆ.

Iti Acharya

ನಿಮ್ಮ ಪ್ರಕಾರ, ಕಾನ್‌ ಫೆಸ್ಟಿವಲ್‌ ಚಿತ್ರಣ ಹೇಗಿತ್ತು?

ಜಾಗತೀಕ ಮಟ್ಟದ ಫ್ಯಾಷನ್‌ ಸ್ಟಾರ್‌ಗಳು ವಾಕ್‌ ಮಾಡುವುದನ್ನು ನೋಡುವುದೇ ಒಂದು ಖುಷಿ!. 23 ಸಾವಿರಕ್ಕೂ ಹೆಚ್ಚು ಇಂಟರ್‌ನ್ಯಾಷನಲ್‌ ಬ್ರಾಂಡ್‌ಗಳು ಭಾಗವಹಿಸಿದ್ದವು. ಬೆಂಗಳೂರಿನ ಜ್ಯುವೆಲರಿ ಬ್ರಾಂಡ್‌ ಕೂಡ ಕಾಣಿಸಿಕೊಂಡಿತು. ಪ್ರಪಂಚಾದಾದ್ಯಂತ ಇರುವ ಡಿಸೈನರ್‌ಗಳಿಗೆ ಇದು ದೊಡ್ಡ ವೇದಿಕೆಯಾಗಿದ್ದು, ಪ್ರಾಕ್ಟಿಕಲ್‌ ಪಾಠದ ಪ್ರದರ್ಶನದಂತಿತ್ತು.

Iti Acharya

ಕಾನ್‌ ಫ್ಯಾಷನ್‌ನಲ್ಲಿ ವಾಕ್‌ ಮಾಡುವುದು ಸುಲಭವೇ!

ಖಂಡಿತಾ ಇಲ್ಲ! ಇಂಡಿಯನ್‌ ನಟಿಯರಿಗೆ ಡಿಸೈನರ್‌ ಜೊತೆ ಹೋಗಲು ಅವಕಾಶವಿರುವುದಿಲ್ಲ. ಒಬ್ಬರೇ ಭಾರಿ ಗಾತ್ರದ ಡಿಸೈನರ್‌ವೇರ್‌ ಧರಿಸಿ ವಾಕ್‌ ಮಾಡಬೇಕಾಗುತ್ತದೆ. ಜಾರಿ ಬಿದ್ದರೇ ನಗೆಪಾಟಲಿಗೀಡಾಗುವುದಂತೂ ಗ್ಯಾರಂಟಿ!

ಇದನ್ನೂ ಓದಿ: Summer Dress Fashion: ಸೀಸನ್‌ ಎಂಡ್‌ ಫ್ಯಾಷನ್‌ಗೆ ಕಾಲಿಟ್ಟ ಸಮುದ್ರದ ಅಲೆ ಬಿಂಬಿಸುವ ವೆವಿ ಡ್ರೆಸ್‌!

ಕಾನ್‌ನಲ್ಲಿ 3 ನೇ ಬಾರಿ ವಾಕ್‌ ಮಾಡಿದ ಮೊದಲ ಕನ್ನಡ ನಟಿಯಾದ ನಿಮ್ಮ ಅಭಿಪ್ರಾಯವೇನು?

ಹೆಮ್ಮೆ ಎಂದೆನಿಸುತ್ತದೆ. ಕನ್ನಡದ ನಟಿಯರೂ ಕಡಿಮೆಯೇನಿಲ್ಲ! ಎಂಬುದನ್ನು ಅಂತರಾಷ್ಟ್ರೀಯ ಮಟ್ಟದ ರೆಡ್‌ಕಾರ್ಪೆಟ್‌ನಲ್ಲಿ 3 ಬಾರಿ ವಾಕ್‌ ಮಾಡುವುದರ ಮೂಲಕ ಪ್ರೂವ್‌ ಮಾಡಿ ತೋರಿಸಿದ್ದೇನೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ದೇಶ

Delhi Temperature: ದೆಹಲಿಯಲ್ಲಿ 52 ಡಿಗ್ರಿ ಸೆಲ್ಸಿಯಸ್‌ ತಾಪಮಾನ; ದೇಶದಲ್ಲೇ ಇದುವರೆಗಿನ ಗರಿಷ್ಠ ಟೆಂಪರೇಚರ್!

Delhi Temperature: ತಾಪಮಾನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೆಹಲಿಯ ವಿದ್ಯುತ್‌ ಬೇಡಿಕೆ ಪ್ರಮಾಣವೂ ದಾಖಲೆಯಾಗಿದೆ. ದೆಹಲಿಯ ವಿದ್ಯುತ್‌ ಬಳಕೆಯು ಗುರುವಾರ ಮಧ್ಯಾಹ್ನದ 3.36ರ ಸುಮಾರಿಗೆ 8,300 ಮೆಗಾವ್ಯಾಟ್‌ ದಾಟಿದೆ. ಇದು ದೆಹಲಿಯ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಳಕೆಯಾದ ವಿದ್ಯುತ್‌ ಪ್ರಮಾಣ ಎಂಬ ದಾಖಲೆಯಾಗಿದೆ. ತಾಪಮಾನ ಹೆಚ್ಚಾದ ಕಾರಣ ಜನ ನಿರಂತರವಾಗಿ ಫ್ಯಾನ್‌, ಕೂಲರ್‌ ಹಾಗೂ ಎ.ಸಿಗಳ ಮೊರೆ ಹೋಗಿದ್ದಾರೆ.

VISTARANEWS.COM


on

Delhi Temperature
Koo

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಇರುವುದೇ ಹಾಗೆ. ಮಳೆ ಬಂದರೆ ಅತಿಯಾದ ಮಳೆ, ಚಳಿಗಾಲದಲ್ಲಿ ವಿಪರೀತ ಚಳಿ ಹಾಗೂ ಬೇಸಿಗೆಯಲ್ಲಿ ವಿಪರೀತ ಬಿಸಿಲು. ಇದಕ್ಕೆ ನಿದರ್ಶನ ಎಂಬಂತೆ, ದೆಹಲಿಯ ಮಂಗೇಶ್‌ಪುರದಲ್ಲಿ (Mungeshpur) ಬುಧವಾರ (ಮೇ 29) ಮಧ್ಯಾಹ್ನ 2.30ರ ಸುಮಾರಿಗೆ 52.3 ಡಿಗ್ರಿ ಸೆಲ್ಸಿಯಸ್‌ ತಾಪಮಾನ (Delhi Temperature) ದಾಖಲಾಗಿದ್ದು, ದೇಶದ ಇತಿಹಾಸದಲ್ಲಿಯೇ ಗರಿಷ್ಠ ತಾಪಮಾನ ಇದಾಗಿದೆ ಎಂದು ತಿಳಿದುಬಂದಿದೆ. ಚುರುಗುಡುವ ಬಿಸಿಲು, ಮನೆಯಲ್ಲಿ ಕೂತರೂ ಬೆವರುವ ಪರಿಸ್ಥಿತಿ ಎದುರಾದ ಕಾರಣ ರಾಜಧಾನಿ ಜನ ಪರಿತಪಿಸುವಂತಾಗಿದೆ ಎಂದು ತಿಳಿದುಬಂದಿದೆ.

ದೆಹಲಿಯತ್ತ ಉಷ್ಣಮಾರುತ ಅಪ್ಪಳಿಸುತ್ತಿದೆ. ಮಳೆಯೂ ಇಲ್ಲದ ಕಾರಣ ಬಿಸಿಲು ಮತ್ತಷ್ಟು ಜೋರಾಗಿದೆ. ನಿರೀಕ್ಷೆಗಿಂತ ಬರೋಬ್ಬರಿ 9 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಹೆಚ್ಚಾಗಿರುವುದು ಜನ ಹೈರಾಣಾಗುವಂತೆ ಮಾಡಿದೆ. ದೆಹಲಿಯಲ್ಲಿ 2002ರಲ್ಲಿ 49.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದೇ ಇದುವರೆಗಿನ ದಾಖಲೆಯಾಗಿತ್ತು. ಆದರೀಗ, ತಾಪಮಾನವು 50 ಡಿಗ್ರಿ ಸೆಲ್ಸಿಯಸ್‌ ದಾಟಿರುವುದು ಜನರಿಗೆ ಚಿಂತೆಯಾಗಿದೆ. ತಾಪಮಾನದ ಕುರಿತು ದೆಹಲಿಯ ಹವಾಮಾನ ಇಲಾಖೆಯ ಕಚೇರಿಯು ಮಾಹಿತಿ ನೀಡಿದೆ.

ವಿದ್ಯುತ್‌ ಬೇಡಿಕೆಯಲ್ಲೂ ದಾಖಲೆ

ತಾಪಮಾನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೆಹಲಿಯ ವಿದ್ಯುತ್‌ ಬೇಡಿಕೆ ಪ್ರಮಾಣವೂ ದಾಖಲೆಯಾಗಿದೆ. ದೆಹಲಿಯ ವಿದ್ಯುತ್‌ ಬಳಕೆಯು ಗುರುವಾರ ಮಧ್ಯಾಹ್ನದ 3.36ರ ಸುಮಾರಿಗೆ 8,300 ಮೆಗಾವ್ಯಾಟ್‌ ದಾಟಿದೆ. ಇದು ದೆಹಲಿಯ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಳಕೆಯಾದ ವಿದ್ಯುತ್‌ ಪ್ರಮಾಣ ಎಂಬ ದಾಖಲೆಯಾಗಿದೆ. ವಿದ್ಯುತ್‌ ಪೂರೈಕೆ ಕಂಪನಿಗಳ ಪ್ರಕಾರ ದೆಹಲಿಗೆ ನಿತ್ಯ 8,200 ಮೆಗಾ ವ್ಯಾಟ್‌ ವಿದ್ಯುತ್ ಬೇಕಾಗುತ್ತಿತ್ತು. ಆದರೆ, ತಾಪಮಾನ ಜಾಸ್ತಿಯಾದ ಕಾರಣ ಪ್ರತಿಯೊಂದು ಮನೆಯಲ್ಲೂ ನಿರಂತರವಾಗಿ ಫ್ಯಾನ್‌, ಕೂಲರ್‌ ಹಾಗೂ ಎ.ಸಿ ಬಳಸುತ್ತಿರುವ ಕಾರಣ ವಿದ್ಯುತ್‌ ಬೇಡಿಕೆಯೂ ದಾಖಲೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೆಹಲಿಯ ನಜಾಫ್‌ಗಢ, ಮಂಗೇಶ್‌ಪುರ ಹಾಗೂ ನರೇಲಾದಲ್ಲಿ ಗುರುವಾರ 45 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಕನಿಷ್ಠ ಎಂಬಂತಾಗಿದೆ. ಇದರಿಂದಾಗಿ ಬಹುತೇಕ ನಗರಗಳಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಿದೆ. ಇನ್ನು ಹೆಚ್ಚು ಮರುಭೂಮಿ ಹೊಂದಿರುವ ರಾಜಸ್ಥಾನದ ಫಲೋಡಿಯಲ್ಲಿ ಗರಿಷ್ಠ 51 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಬಂಗಾಳ ಕೊಲ್ಲಿಯಿಂದ ತಂಪು ಗಾಳಿ ಬೀಸುತ್ತಿರುವ ಕಾರಣ ಉತ್ತರ ಪ್ರದೇಶದಲ್ಲಿ ತಾಪಮಾನ ನಿಯಮಿತವಾಗಿದೆ ಎಂದು ತಿಳಿದುಬಂದಿದೆ.

ಅಗ್ನಿ ದುರಂತಗಳ ಸಂಖ್ಯೆಯೂ ಜಾಸ್ತಿ

ಗರಿಷ್ಠ ತಾಪಮಾನ ದಾಖಲಾಗುತ್ತಿರುವ ಕಾರಣ ದೆಹಲಿಯಲ್ಲಿ ಅಗ್ನಿ ದುರಂತಗಳ ಸಂಖ್ಯೆಯೂ ಜಾಸ್ತಿಯಾಗುತ್ತಿವೆ ಎಂಬುದಾಗಿ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. “ಪ್ರತಿದಿನ ಅಗ್ನಿ ಅವಘಡಗಳ ಕುರಿತು ಸರಾಸರಿ 200ಕ್ಕೂ ಅಧಿಕ ಕರೆಗಳು ಬರುತ್ತಿವೆ. ಇದು ಕಳೆದ 10 ವರ್ಷಗಳಲ್ಲೇ ಗರಿಷ್ಠವಾಗಿದೆ. ಇನ್ನೂ ಒಂದು ಡಿಗ್ರಿ ಸೆಲ್ಸಿಯಸ್‌ ಹೆಚ್ಚಾದರೂ ಕರೆಗಳ ಸಂಖ್ಯೆ 250 ದಾಟಬಹುದು. ಹಾಗಾಗಿ, ದೆಹಲಿ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಯನ್ನು ಇನ್ನಷ್ಟು ಹೆಚ್ಚಿಸಲಾಗುತ್ತಿದೆ” ಎಂದು ದೆಹಲಿ ಫೈರ್‌ ಡಿಪಾರ್ಟ್‌ಮೆಂಟ್‌ ನಿರ್ದೇಶಕ ಅತುಲ್‌ ಗರ್ಗ್‌ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Karnataka Weather : ಗರಿಷ್ಠ ತಾಪಮಾನ ಇಳಿಕೆ; ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ

Continue Reading

ಕರ್ನಾಟಕ

Bhavani Revanna: ಭವಾನಿ ರೇವಣ್ಣ ‘ಜಾಮೀನು’ ತೀರ್ಪು ಕಾಯ್ದಿರಿಸಿದ ಕೋರ್ಟ್;‌ ಮೇ 31 ಅಮ್ಮ-ಮಗನಿಗೆ ಬಿಗ್‌ ಡೇ!

Bhavani Revanna: ಮೇ 31ರಂದು ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಈಗಾಗಲೇ ಪ್ರಜ್ವಲ್‌ ರೇವಣ್ಣ ಸ್ಪಷ್ಟಪಡಿಸಿದ್ದಾರೆ. ಇನ್ನು ಮೇ 31ರಂದೇ ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತ ಆದೇಶವನ್ನು ಹೊರಡಿಸುವುದಾಗಿ ಕೋರ್ಟ್‌ ತಿಳಿಸಿದೆ. ಹಾಗಾಗಿ, ತಾಯಿ-ಮಗನಿಗೆ ಮೇ 31 ಮಹತ್ವದ ದಿನವಾಗಿದೆ.

VISTARANEWS.COM


on

Bhavani Revanna
Koo

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ (Prajwal Revanna Case) ಕೆ.ಆರ್.ನಗರ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ (Bhavani Revanna) ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತು ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮೇ 31ರವರೆಗೆ ತೀರ್ಪು ಕಾಯ್ದಿರಿಸಿದೆ. ಮೇ 31ರಂದು ನ್ಯಾಯಾಲಯವು ಆದೇಶ ಹೊರಡಿಸಿದ್ದು, ಅಲ್ಲಿಯವರೆಗೆ ಭವಾನಿ ರೇವಣ್ಣ ಕಾಯಬೇಕಿದೆ. ಇನ್ನು, ಮೇ 31ರಂದು ಆಗಮಿಸಲಿರುವ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನೂ ಮೇ 31ಕ್ಕೆ ನಡೆಸುವುದಾಗಿ ಕೋರ್ಟ್‌ ತಿಳಿಸಿದೆ. ಹಾಗಾಗಿ, ಮೇ 31 ತಾಯಿ-ಮಗನಿಗೆ ಪ್ರಮುಖ ದಿನವಾಗಿದೆ.

ಮೇ 31ರಂದು ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಈಗಾಗಲೇ ಪ್ರಜ್ವಲ್‌ ರೇವಣ್ಣ ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ, ಪ್ರಜ್ವಲ್‌ ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂಬುದಾಗಿ ವಕೀಲ ಅರುಣ್‌ ಅವರು ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮೇ 31ರಂದು ವಿಚಾರಣೆ ನಡೆಸುವುದಾಗಿ ಕೋರ್ಟ್‌ ತಿಳಿಸಿದೆ. ಇನ್ನು ಮೇ 31ರಂದೇ ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತ ಆದೇಶವನ್ನು ಹೊರಡಿಸುವುದಾಗಿ ಕೋರ್ಟ್‌ ತಿಳಿಸಿದೆ. ಅತ್ತ, ತಮ್ಮ ವಿರುದ್ಧ ದಾಖಲಾದ ಎರಡೂ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಎಚ್‌.ಡಿ.ರೇವಣ್ಣ ಕೂಡ ಅರ್ಜಿ ಸಲ್ಲಿಸಿದ್ದಾರೆ. ಮೂರೂ ಅರ್ಜಿಗಳ ಕುರಿತು ಕೋರ್ಟ್‌ ನೀಡುವ ತೀರ್ಪಿನ ಎಚ್‌.ಡಿ.ರೇವಣ್ಣ ಕುಟುಂಬದ ಭವಿಷ್ಯ ನಿಂತಿದೆ.

Prajwal Revanna Case

ಇದಕ್ಕೂ ಮೊದಲು ಭವಾನಿ ರೇವಣ್ಣ ಪರ ವಾದ ಮಂಡಿಸಿದ ವಕೀಲ ಸಂದೇಶ ಚೌಟ, “ಎಫ್ಐಆರ್ ದಾಖಲಿಸಿ 27 ದಿನಗಳಾದರೂ ಭವಾನಿ ರೇವಣ್ಣ ಅವರಿಗೆ ಎಸ್ಐಟಿ ನೋಟಿಸ್ ನೀಡಿಲ್ಲ. ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ನಂತರ ಬೆಟ್ಟದಷ್ಟು ದಾಖಲೆ ಇವೆ ಎನ್ನುತ್ತಿದ್ದಾರೆ. ಹಾಗಿದ್ದರೆ ಇದುವರೆಗೂ ಏಕೆ ವಿಚಾರಣೆಗೆ ಕರೆಯಲಿಲ್ಲ? ತನಿಖೆಗೆ ಸಹಕರಿಸುವುದಾಗಿ ಈ ಹಿಂದೆಯೇ ಎಸ್ಐಟಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಭವಾನಿಗೆ ನಿರೀಕ್ಷಣಾ ಜಾಮೀನು ನೀಡಬೇಕು” ಎಂದರು.

ಎಸ್‌ಪಿಪಿ ವಾದವೇನಿತ್ತು?

ಮಗನ ರಕ್ಷಣೆಗಾಗಿ ಭವಾನಿ ರೇವಣ್ಣ ಒಳಸಂಚು ರೂಪಿಸಿದ್ದಾರೆ. ಸಂತ್ರಸ್ತ ಮಹಿಳೆಯ ಅಪಹರಣದ ಹಿಂದೆ ಇವರ ಕೈವಾಡವಿದೆ. ಸಂತ್ರಸ್ತ ಮಹಿಳೆಗೆ ಊಟ ನೀರು, ಸರಿಯಾಗಿ ಕೊಟ್ಟಿಲ್ಲ‌. ಆಕೆಗೆ ಬಟ್ಟೆ ಸೀರೆಯನ್ನು ಕೊಟ್ಟಿಲ್ಲ. ಆರೋಪಿ ಸತೀಶ್ ಬಾಬಣ್ಣ ಜತೆ ಭವಾನಿ ಮಾತನಾಡಿದ್ದಾರೆ. ಆರೋಪಿ ಸತೀಶ್ ಬಾಬಣ್ಣ ಕೇಳಿದಾಗ ಭವಾನಿಯವರು ಆಯ್ತು 150 ರೂಪಾಯಿ ಅಥವಾ 200 ರೂಪಾಯಿ ಸೀರೆ ಕೊಡ್ಸು ಎಂಬುದಾಗಿ ಸೂಚಿಸಿದ್ದಾರೆ” ಎಂದು ಕೋರ್ಟ್‌ಗೆ ಮಾಹಿತಿ ನೀಡಿದರು. ಕೊನೆಗೆ ನ್ಯಾಯಾಲಯವು ತೀರ್ಪನ್ನು ಮೇ 31ರವರೆಗೆ ಕಾಯ್ದಿರಿಸಿತು.

ನಾಳೆಯೇ ವಿಚಾರಣೆ ಸಾಧ್ಯವಿಲ್ಲ ಎಂದ ಕೋರ್ಟ್‌

ಪ್ರಜ್ವಲ್‌ ರೇವಣ್ಣ ಅವರು ಮೇ 31ರಂದು ಭಾರತಕ್ಕೆ ಆಗಮಿಸಲಿದ್ದು, ನಾಳೆ ಅಂದರೆ ಮೇ 30ರಂದೇ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಬೇಕು ಎಂದು ವಕೀಲ ಅರುಣ್‌ ಮನವಿ ಮಾಡಿದ್ದಾರೆ. ಆದರೆ, ನಾಳೆಯೇ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದಿರುವ ಕೋರ್ಟ್‌, ಈ ಕುರಿತು ಪ್ರತಿಕ್ರಿಯಿಸುವಂತೆ ಎಸ್‌ಐಟಿಗೆ ನೋಟಿಸ್‌ ಜಾರಿಗೊಳಿಸಿದೆ. ಮೂರು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್‌ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಮೂರೂ ಪ್ರಕರಣಗಳಲ್ಲಿ ಎಸ್‌ಐಟಿಗೆ ಆಕ್ಷೇಪಣೆ ಸಲ್ಲಿಸಲು ಸಮಯ ಬೇಕು. ಹಾಗಾಗಿ, ಮೇ 31ರಂದು ನಿರೀಕ್ಷಣಾ ಜಾಮೀನಿನ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್‌ ತಿಳಿಸಿತು.

4 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಜೂ.3ಕ್ಕೆ ವಿಚಾರಣೆ ಮುಂದೂಡಿಕೆ

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಹಂಚಿಕೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ನವೀನ್‌ ಗೌಡ, ಎಚ್.ಪಿ. ಪುಟ್ಟರಾಜು, ಕಾರ್ತಿಕ್‌ ಹಾಗೂ ಚೇತನ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜೂನ್ 3 ಕ್ಕೆ ಮುಂದೂಡಲಾಗಿದೆ.

ಇದನ್ನೂ ಓದಿ: Prajwal Revanna Case: ಕೆ ಆರ್‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌; ಭವಾನಿ ರೇವಣ್ಣ ಕಾರು ಚಾಲಕನಿಗೆ‌ SIT ಸಮನ್ಸ್

Continue Reading

ಕರ್ನಾಟಕ

Prajwal Revanna Case: ಭಾರತಕ್ಕೆ ಬರುವ ಮೊದಲೇ ಜಾಮೀನಿಗಾಗಿ ಪ್ರಜ್ವಲ್‌ ಅರ್ಜಿ ಸಲ್ಲಿಕೆ; ಮುಂದೇನಾಗತ್ತೆ?

Prajwal Revanna Case: ಪ್ರಜ್ವಲ್‌ ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂಬುದಾಗಿ ವಕೀಲ ಅರುಣ್‌ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ, ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್‌ ಸಿಕ್ಕಂತಾಗಿದೆ. ಭಾರತಕ್ಕೆ ಹಾಸನ ಸಂಸದ ಬರುತ್ತಲೇ ಬಂದನಕ್ಕೀಡಾಗಬಾರದು ಎಂಬ ದೃಷ್ಟಿಯಿಂದ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಮೇ 31ರಂದು ಭಾರತಕ್ಕೆ ಆಗಮಿಸುವುದಾಗಿ ಹೇಳಿದ್ದ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ಅವರು, ಇದೀಗ ಬೆಂಗಳೂರಿಗೆ ಟಿಕೆಟ್‌ ಮಾಡಿರುವುದು ಕಂಡುಬಂದಿದೆ. ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿಗೆ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿಕೊಂಡಿರುವ ಪ್ರಜ್ವಲ್‌ ರೇವಣ್ಣ, ಮೇ 30ರಂದು ಮಧ್ಯಾಹ್ನ ಜರ್ಮನಿಯಲ್ಲಿ ಫ್ಲೈಟ್‌ ಹತ್ತಲಿದ್ದಾರೆ. ಮತ್ತೊಂದೆಡೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೇ (Bengaluru Report) ಅವರನ್ನು ವಶಕ್ಕೆ ಪಡೆಯಲು ಎಸ್‌ಐಟಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ, ನಿರೀಕ್ಷಣಾ ಜಾಮೀನಿಗಾಗಿ ಪ್ರಜ್ವಲ್‌ ರೇವಣ್ಣ ಪರ ವಕೀಲರೊಬ್ಬರು ಅರ್ಜಿ (Anticipatory Bail Plea) ಸಲ್ಲಿಸಿದ್ದಾರೆ.

ಹೌದು, ಪ್ರಜ್ವಲ್‌ ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂಬುದಾಗಿ ವಕೀಲ ಅರುಣ್‌ ಅವರು ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ, ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್‌ ಸಿಕ್ಕಂತಾಗಿದೆ. ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಬರುತ್ತಲೇ ಅವರನ್ನು ಬಂಧಿಸಬಾರದು ಎಂಬ ದೃಷ್ಟಿಯಿಂದ ಅರುಣ್‌ ಅವರು ಪ್ರಜ್ವಲ್‌ ರೇವಣ್ಣ ಪರ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈಗ ನ್ಯಾಯಾಲಯವು ಅರ್ಜಿಯ ಕುರಿತು ಯಾವ ತೀರ್ಪು ನೀಡುತ್ತದೆ ಎಂಬ ಕುತೂಹಲ ಮೂಡಿದೆ.

Prajwal Revanna case

ಲುಫ್ತಾನ್ಸಾ ಏರ್‌ಲೈನ್ಸ್‌ ಮೂಲಕ ಫ್ಲೈಟ್ ಟಿಕೆಟ್ ಬುಕ್ ಮಾಡಿರುವ ಪ್ರಜ್ವಲ್ ರೇವಣ್ಣ, ಗುರುವಾರ ಮಧ್ಯಾಹ್ನ 12.05ಕ್ಕೆ ಮ್ಯೂನಿಚ್‌ನಲ್ಲಿ ಫ್ಲೈಟ್ ಹತ್ತಲಿದ್ದಾರೆ. ಮಧ್ಯರಾತ್ರಿ 12.30ಕ್ಕೆ ಬೆಂಗಳೂರು ಏರ್‌ಪೋರ್ಟ್‌ಗೆ ಆಗಮಿಸಲಿದ್ದಾರೆ. ಪ್ರಜ್ವಲ್‌ ರೇವಣ್ಣ ಅವರು ಆಗಮಿಸುತ್ತಲೇ ವಶಕ್ಕೆ ಪಡೆಯಲು ಎಸ್‌ಐಟಿ ಸಜ್ಜಾಗಿದ ಎಂದು ಈಗಾಗಲೇ ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ.

ಮೇ 27ರಂದು ವಿಡಿಯೊದಲ್ಲಿ ಮಾತನಾಡಿದ್ದ ಪ್ರಜ್ವಲ್‌ ರೇವಣ್ಣ, ನಾನು ಶುಕ್ರವಾರ (ಮೇ 31) ಕರ್ನಾಟಕಕ್ಕೆ ಆಗಮಿಸಿ, ಎಸ್‌ಐಟಿ ತನಿಖೆಗೆ ಸಹಕಾರ ನೀಡುತ್ತೇನೆ. ನನಗೆ ಕಾನೂನಿನ ಮೇಲೆ ಅಪಾರ ಗೌರವವಿದೆ. ನನ್ನ ವಿರುದ್ಧ ರಾಹುಲ್‌ ಗಾಂಧಿ ಸೇರಿ ಕಾಂಗ್ರೆಸ್‌ ನಾಯಕರು ಮಾಡಿದ ಆರೋಪಗಳನ್ನು ಕೇಳಿ ನನಗೆ ಶಾಕ್‌ ಆಯಿತು. ಇದೇ ಕಾರಣಕ್ಕಾಗಿ ನಾನು ಕೆಲ ದಿನಗಳಿಂದ ಐಸೋಲೇಷನ್‌ನಲ್ಲಿ ಇದ್ದೆ. ವಿದೇಶ ಪ್ರವಾಸವು ಮೊದಲೇ ನಿಗದಿಯಾಗಿತ್ತು. ನಾನು ವಿದೇಶಕ್ಕೆ ಬಂದ ಬಳಿಕ ಪ್ರಕರಣ ತಿಳಿಯಿತು. ನನ್ನ ವಿರುದ್ಧ ರಾಹುಲ್‌ ಗಾಂಧಿ ಸೇರಿ ಎಲ್ಲರೂ ವೇದಿಕೆ ಮೇಲೆಯೇ ಹೇಳಿಕೆಗಳನ್ನು ಕೊಟ್ಟರು. ಆ ಮೂಲಕ ರಾಜಕೀಯ ಪಿತೂರಿ ನಡೆಸಿದರು. ಆದರೂ, ನಾನು ರಾಜ್ಯಕ್ಕೆ ಆಗಮಿಸಿ ತನಿಖೆಗೆ ಸಹಕಾರ ನೀಡುತ್ತೇನೆ. ನಾನು ಈ ಪ್ರಕರಣದಿಂದ ಆರೋಪಮುಕ್ತನಾಗಿ ಹೊರಬರುತ್ತೇನೆ ಎಂಬ ವಿಶ್ವಾಸವಿದೆ ಎಂಬುದಾಗಿ ಹೇಳಿದ್ದರು.

ಇದನ್ನೂ ಓದಿ: Prajwal Revanna Case: ಬೆಂಗಳೂರಿಗೆ ಪ್ರಜ್ವಲ್‌ ರೇವಣ್ಣ ಟಿಕೆಟ್ ಬುಕ್; ನಾಳೆ ಮಧ್ಯಾಹ್ನ ಜರ್ಮನಿಯಿಂದ ಪ್ರಯಾಣ

Continue Reading
Advertisement
Dinesh Karthik
ಕ್ರೀಡೆ23 mins ago

Dinesh Karthik: ಪ್ಯಾರಿಸ್​ನಲ್ಲಿ ನೀರಜ್​ಗೆ ತೀವ್ರ ಪೈಪೋಟಿ ನೀಡಲು ಮುಂದಾದರೇ ದಿನೇಶ್​ ಕಾರ್ತಿಕ್​?; ಜಾವೆಲಿನ್​ ಅಭ್ಯಾಸದ ವಿಡಿಯೊ ವೈರಲ್​

Prajwal Revanna Case
ಕರ್ನಾಟಕ33 mins ago

Prajwal Revanna Case: ಚೇತನ್‌, ನವೀನ್ ಗೌಡಗೆ ಮೂರು ದಿನ ಎಸ್‌ಐಟಿ ಕಸ್ಟಡಿ

Forbes World Billionaires List
ವಾಣಿಜ್ಯ45 mins ago

Forbes World Billionaires List: ವಿಶ್ವದ ಶ್ರೀಮಂತ ಮಹಿಳೆಯರು; ಭಾರತದ ಸಾವಿತ್ರಿ ಜಿಂದಾಲ್‌ಗೆ ಎಷ್ಟನೇ ಸ್ಥಾನ?

Cannes 2024 Sandalwood Actress Interview
ಫ್ಯಾಷನ್47 mins ago

Cannes 2024 Sandalwood Actress Interview: ಕಾನ್‌ನಲ್ಲಿ ಹ್ಯಾಟ್ರಿಕ್‌ ವಾಕ್‌ ಮಾಡಿದ ಸ್ಯಾಂಡಲ್‌ವುಡ್‌ ನಟಿ ಇತಿ ಆಚಾರ್ಯ ಹೇಳಿದ್ದೇನು?

Delhi Temperature
ದೇಶ52 mins ago

Delhi Temperature: ದೆಹಲಿಯಲ್ಲಿ 52 ಡಿಗ್ರಿ ಸೆಲ್ಸಿಯಸ್‌ ತಾಪಮಾನ; ದೇಶದಲ್ಲೇ ಇದುವರೆಗಿನ ಗರಿಷ್ಠ ಟೆಂಪರೇಚರ್!

Babar Azam
ವೈರಲ್ ನ್ಯೂಸ್1 hour ago

Babar Azam: ಫೋಟೋ ತೆಗೆಯಲು ಬಂದ ಅಭಿಮಾನಿಗಳಿಗೆ ಬೈದು ಓಡಿಸಿದ ಬಾಬರ್ ಅಜಂ; ವಿಡಿಯೊ ವೈರಲ್​

Madhu Chopra on Priyanka Chopra-Nick Jonas' age gap
ಬಾಲಿವುಡ್1 hour ago

Madhu Chopra: ಮಗಳು-ಅಳಿಯನ ವಯಸ್ಸಿನ ಅಂತರ ಬಗ್ಗೆ ಪ್ರಿಯಾಂಕಾ ಚೋಪ್ರಾ ತಾಯಿ ಹೇಳಿದ್ದೇನು?

Tamarind Fruit Benefits
ಆರೋಗ್ಯ1 hour ago

Tamarind Fruit Benefits: ಜೀರ್ಣಶಕ್ತಿ ಹೆಚ್ಚಿಸಿ ತೂಕ ಇಳಿಸಲು ಹುಣಸೇ ಹಣ್ಣು ಸುಲಭದ ಉಪಾಯ!

Karnataka Weather
ಮಳೆ2 hours ago

Karnataka Weather: ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಇಂದು ಸಂಜೆ ಭಾರಿ ಮಳೆ ಸಾಧ್ಯತೆ!

Viral News
ವೈರಲ್ ನ್ಯೂಸ್2 hours ago

Viral News: 10 ಅಡಿಯ ದೈತ್ಯ ಮೊಸಳೆಯಿಂದ ಕಬ್ಬಿಣದ ಗೇಟು ಹಾರಲು ಯತ್ನ; ಮೈ ಜುಮ್ಮೆನ್ನಿಸುವ ವಿಡಿಯೊ ಇಲ್ಲಿದೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ23 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ7 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌