Life guide | ಜೀವನದಲ್ಲಿ ಸಫಲರಾಗಲು ಬೆನ್ನಿಗೆ ಬೇಕು ಇಂಥ ಮಾರ್ಗದರ್ಶಕರು! - Vistara News

ಲೈಫ್‌ಸ್ಟೈಲ್

Life guide | ಜೀವನದಲ್ಲಿ ಸಫಲರಾಗಲು ಬೆನ್ನಿಗೆ ಬೇಕು ಇಂಥ ಮಾರ್ಗದರ್ಶಕರು!

ಬದುಕಿಗೆ ಮಾರ್ಗದರ್ಶಕರು ಬೇಕು. ಆದರೆ ಮಾರ್ಗದರ್ಶಕರಲ್ಲೂ ಹಲವು ವಿಧಗಳಿವೆ. ನಿಮಗೆ ಎಂಥ ಜತೆಗಾರ, ಮಾರ್ಗದರ್ಶಕ (life guide) ಸಿಕ್ಕಿದ್ದಾರೆ ಎಂಬುದನ್ನು ನೀವೇ ಇಲ್ಲಿ ಕಂಡುಕೊಳ್ಳಬಹುದು.

VISTARANEWS.COM


on

life guide
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿದ್ಯಾಭ್ಯಾಸದ ಸಮಯದಲ್ಲಿ ಪೋಷಕರು, ಶಿಕ್ಷಕರು ನಮ್ಮ ಭವಿಷ್ಯದ ಕನಸುಗಳಿಗೆ, ಗುರಿಗಳಿಗೆ ಸದಾ ಪ್ರೇರನೆಯಾಗಿ, ಮಾರ್ಗದರ್ಶನ ಮಾಡುತ್ತಾರೆ. ಅದರಲ್ಲೂ ಕೆಲವೇ ಕೆಲವರಿಗೆ ಶಿಕ್ಷಣದ ಸಮಯದಲ್ಲೇ ಅತ್ಯದ್ಭುತ ಶಿಕ್ಷಕರು ದಕ್ಕಿ, ಅವರಿಂದಾಗಿ ಬದುಕು ಒಂದು ಅತ್ಯದ್ಭುತ ಸಾಧ್ಯತೆಯನ್ನು ಪಡೆದುಕೊಳ್ಳುತ್ತದೆ. ಇಂತಹ ಗುರುಗಳು ಜೀವನ ಪರ್ಯಂತ ತಮ್ಮ ಮೆಚ್ಚಿನ ಶಿಷ್ಯನನ್ನು ಸಾಧನೆಯ ಹಾದಿಯಲ್ಲಿ ಮುನ್ನಡೆಸುತ್ತಾರೆ. ಕೆಲವರು ಆಯಾ ಕಾಲಘಟ್ಟದಲ್ಲಿ ನಮ್ಮ ಜೀವನದಲ್ಲಿ ಬಂದು ಹೋಗುತ್ತಾರೆ. ಆದರೆ, ಸಾಧನೆಯ ಹಾದಿಯಲ್ಲಿ ಮುನ್ನಡೆಯುವ ಗುರಿಯಿರುವಾತನಿಗೆ ಅತ್ಯದ್ಭುತ ಮೆಂಟರ್‌ (ಮಾರ್ಗದರ್ಶಕ)ನೊಬ್ಬನ ಅವಶ್ಯಕತೆ ನಿಜವಾಗಿಯೂ ಇರುತ್ತದೆ. ಸದಾ ಎಚ್ಚರಿಸುವ, ಹಾದಿ ತಪ್ಪದಂತೆ ಮುನ್ನಡೆಸುವ, ಸರಿಯಾದ ಸಮಯಕ್ಕೆ ಗೈಡ್‌ ಮಾಡುವ ಹಾಗೂ ಆ ಬಗ್ಗೆ ದೃಢವಾದ ನಿಶ್ಚಯದೊಂದಿಗೆ ಮುಂದುವರಿಯುವಂತೆ ಪ್ರೇರೇಪಿಸುವ ಮಾಗದರ್ಶಕನೊಬ್ಬನ ಪಾತ್ರ ಪ್ರತಿಯೊಬ್ಬನ ಜೀವನದಲ್ಲೂ ಬಹಳ ಮುಖ್ಯವಾಗುತ್ತದೆ.

ಇಂಥ ಮಾರ್ಗದರ್ಶಕರಲ್ಲಿಯೂ ಹಲವು ವಿಧಗಳಿವೆ. ಬಹಳ ಸಾರಿ ನಿಮ್ಮ ಮೆಂಟರ್‌ ನಿಮ್ಮ ಸ್ನೇಹಿತನೂ ಆಗಿರಬಹುದು. ಆತ ನಿಮ್ಮ ಪ್ರೊಫೆಸರೋ, ಅಥವಾ ಹಳೇ ಆಫೀಸಿನ ಬಾಸೋ ಅಗಿರಬೇಕಾಗಿಲ್ಲ. ನಿಮ್ಮದೇ ವಯಸ್ಸಿನ ನಿಮ್ಮ ಗೆಳೆಯನೂ ಕೆಲವೊಮ್ಮೆ ವೃತ್ತಿ, ಕನಸು, ಗುರಿಗಳ ವಿಷಯ ಬಂದಾಗ ಸಾಕ್ಷಾತ್‌ ಮೆಂಟರ್‌ನ ರೂಪ ಧರಿಸಬಹುದು. ಹಾಗೆ ನೋಡಿದರೆ, ಪ್ರತಿಯೊಬ್ಬರ ಜೀವನದಲ್ಲಿ ಇತರರ ಮಾರ್ಗದರ್ಶನ, ಸಲಹೆ ಸೂಚನೆಗಳು ಬಹುಮುಖ್ಯ ಪಾತ್ರ ವಹಿಸುತ್ತದೆ. ಸದಾ ಗುರಿ ಕನಸುಗಳ ಬೆನ್ನತ್ತಿ ಅದಕ್ಕೆ ತುಡಿಯುವಂತೆ ಹಾಗೂ ಆ ನಿಟ್ಟಿನಲ್ಲಿ ಮುಂದುವರಿಯಲು ಬೆನ್ನಿಗೆ ನಿಲ್ಲುವ ಮೆಂಟರುಗಳ ಪೈಕಿ ನಿಮ್ಮ ಜೊತೆ ಎಂಥವರಿದ್ದಾರೆ ಎಂದೊಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಿ.‌

ಇದನ್ನೂ ಓದಿ | Office life | ಕಚೇರಿಯಲ್ಲಿ ಯಶಸ್ವಿಯಾಗಲು ಸೂತ್ರ ಬೇಕೆ? 7 ಶಾರ್ಟ್‌ಕಟ್‌ ಇಲ್ಲಿವೆ ನೋಡಿ

೧. ಕ್ರಿಯಾಶೀಲ ಮಾರ್ಗದರ್ಶಕ: ಇಂಥ ಮಾರ್ಗದರ್ಶಕರು ಸದಾ ನಿಮ್ಮಲ್ಲಿರುವ ಕ್ರಿಯಾಶೀಲತೆಯನ್ನು ಬಡಿದೆಬ್ಬಿಸುತ್ತಿರುತ್ತಾರೆ. ನೀವು ಸುಮ್ಮನೆ ಕೂರಲು ಬಿಡುವುದಿಲ್ಲ. ಒತ್ತಾಯಪೂರ್ವಕವಾಗಿಯಾದರೂ ನಿಮ್ಮಲ್ಲಿರುವ ಸಾಮರ್ಥ್ಯವನ್ನು ನೀವು ಬಳಸುವಂತೆ, ಹೊರಗೆ ತರುವಂತೆ, ಆ ನಿಟ್ಟಿನಲ್ಲಿ ಪ್ರಯತ್ನಪಡುವಂತೆ ಪ್ರೇರೇಪಿಸುತ್ತಾರೆ. ಅವರು ಬೆನ್ನು ಬಿದ್ದದ್ದಕ್ಕಾಗಿಯೇ ಅಂಥದ್ದೊಂದು ಸಾಧನೆ ನಿಮ್ಮಿಂದ ಸಾಧ್ಯವಾಗುತ್ತದೆ ಅಲ್ಲದೆ, ಅಂಥದ್ದೊಂದು ಸಾಧನೆ ನೀವು ಮಾಡಬಹುದೆಂಬ ಕಲ್ಪನೆಯೂ ನಿಮ್ಮಲ್ಲಿರುವುದಿಲ್ಲ. ಅಷ್ಟಾಗಿ ಜಿದ್ದಿಗೆ ಬಿದ್ದು ಹಠ ಸಾಧಿಸಿ ಕೆಲಸ ಮಾಡುವ ಗುಣವಿಲ್ಲದ ಮಂದಿಗೆ ಇಂಥ ಮಾರ್ಗದರ್ಶಕರು ಸಿಕ್ಕರೆ ಅವರಷ್ಟು ಅದೃಷ್ಟವಂತರು ಇನ್ನೊಬರಿಲ್ಲ.

೨. ಹೊಗಳುಭಟ ಮಾರ್ಗದರ್ಶಕ: ಇಂಥ ಮಾರ್ಗದರ್ಶಕರು ಸದಾ ನಿಮ್ಮ ಬೆನ್ನು ತಟ್ಟುವವರು. ಹೋದಲ್ಲಿ, ಬಂದಲ್ಲಿ, ಎಲ್ಲರೆದುರು ನಿಮ್ಮ ಗುಣಗಾನ ಮಾಡುತ್ತಿರುತ್ತಾರೆ. ನಿಮ್ಮ ಶಕ್ತಿ ಸಾಮರ್ಥ್ಯದ ವಿವರಣೆಯನ್ನು ಎಲ್ಲಿ ತಲುಪಿಸಬೇಕೋ ಅಲ್ಲಿಗೆ ಮುಟ್ಟಿಸಲು ಪ್ರಯತ್ನಪಡುತ್ತಾರೆ. ಇಂಥ ಮಾರ್ಗದರ್ಶಕರಿಂದಲೂ ನಿಮಗೆ ಬದುಕಿನಲ್ಲಿ ಒಳ್ಳೆಯದೇ ಆಗುತ್ತದೆ.

೩. ಜೊತೆಗಾರ ಮಾರ್ಗದರ್ಶಕ: ಏನೇ ಆಗಲಿ, ನಿಮ್ಮ ಏಳುಬೀಳುಗಳಲ್ಲಿ ಜೊತೆಗೆ ನಿಲ್ಲುವ ಮಾರ್ಗದರ್ಶಕರೂ ಇರುತ್ತಾರೆ. ಇಂಥ ಮಾರ್ಗದರ್ಶಕರನ್ನು ಜೊತೆಗೆ ಪಡೆದವರೇ ಧನ್ಯ. ಯಾಕೆಂದರೆ, ಇವರು ನಿಮ್ಮ ಕಷ್ಟದ ದಿನಗಳಲ್ಲಿಯೂ, ಸುಖದ ದಿನಗಳಲ್ಲಿಯೂ ಜೊತೆಗೇ ಇರುತ್ತಾರೆ. ಫ್ರೆಂಡ್‌, ಗೈಡ್‌ ಆಗಿ ನಮಗೆ ನಿಮ್ಮೆಲ್ಲ ಕೆಲಸಗಳಿಗೆ ಸಾಥ್‌ ನೀಡಿ ನೀವು ಕಷ್ಟಪಡುತ್ತಿದ್ದ ಸಮಸ್ಯೆಯಿಂದ ಹೊರಗೆ ಬರಲು ಸಹಾಯ ಮಾಡುತ್ತಾರೆ. ಇವರು ನಿಮ್ಮನ್ನು ಎಲ್ಲಿಯೂ ಬಿಟ್ಟುಕೊಡುವುದಿಲ್ಲ. ನಿಮಗೆ ಅರ್ಥವಾಗದ್ದನ್ನು ತಾಳ್ಮೆಯಿಂದ ವಿವರಿಸುವ ಹಾಗೂ ನೀವು ಅದರಲ್ಲಿ ಪಕ್ವವಾಗುವವರೆಗೂ ನಿಮಗೆ ಸಹಾಯ ಮಾಡುತ್ತಲೇ ಇರುವ ಮನಸ್ಸುಳ್ಳವರು ಇವರು.

೪. ಮಾನಸಿಕ ಮಾರ್ಗದರ್ಶಕರು: ಇಂಥವರು ಜೊತೆಗಿದ್ದು ಸಹಾಯ ಮಾಡಲಾಗದಿದ್ದರೂ, ಯಾವುದೇ ಸಹಕಾರ ಕೊಡಲಾಗದಿದ್ದರೂ, ದೂರವಿದ್ದುಕೊಂಡೇ ಮಾನಸಿಕವಾಗಿ ಸದಾ ನಿಮ್ಮ ಅಭಿವೃದ್ಧಿ ಬಯಸುವವರು. ನೀವು ತೊಂದರೆಯಲ್ಲಿದ್ದಾಗ, ಮಾಡಲಾಗದಿದ್ದಾಗ ಧೈರ್ಯ ತುಂಬಿ, ಮುಂದುವರಿಯುವಂತೆ ಬೆನ್ನು ಬೀಳುವವರು ಹಾಗೂ ಧೈರ್ಯ ತುಂಬುವವರು. ದೂರದಲ್ಲಿದ್ದರೂ ಸದಾ ನಿಮ್ಮ ಅಭಿವೃದ್ಧಿ ಬಯಸುವವರು.

ಇದನ್ನೂ ಓದಿ | ʼನೀನಂದ್ರೆ ನಂಗಿಷ್ಟʼ ಅಂತ ಆಗಾಗ ಹೇಳಬೇಕು ಕಣ್ರೀ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Covishield: ಭಾರತದಲ್ಲಿ ಕೋವಿಶೀಲ್ಡ್‌ ಸೈಡ್‌ ಎಫೆಕ್ಟ್‌ನ ಎಲ್ಲ ಮಾಹಿತಿ ಬಹಿರಂಗ ಎಂದ ಕಂಪನಿ, ಉತ್ಪಾದನೆಯೂ ಸ್ಥಗಿತ!

Covishield: ಅಸ್ಟ್ರಾಜೆನಿಕಾ ಸಹಯೋಗದಲ್ಲಿಯೇ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಕೋವಿಶೀಲ್ಡ್‌ಅನ್ನು ಭಾರತದಲ್ಲಿ ಉತ್ಪಾದನೆ ಮಾಡಿದೆ. ಜಾಗತಿಕವಾಗಿ ಅಡ್ಡ ಪರಿಣಾಮದ ಕುರಿತು ಚರ್ಚಿಸುತ್ತಿರುವ ಬೆನ್ನಲ್ಲೇ ಕಂಪನಿಯು ಸ್ಪಷ್ಟನೆ ನೀಡಿದೆ. ಲಸಿಕೆಯ ಅಡ್ಡ ಪರಿಣಾಮಗಳ ಕುರಿತು ಲಸಿಕೆ ವಿತರಿಸುವಾಗಲೇ ಮಾಹಿತಿ ನೀಡಲಾಗಿದೆ. ಈಗ ಯಾವುದೇ ಮಾಹಿತಿ ಹಂಚಿಕೊಳ್ಳಲು ಬಾಕಿ ಇಲ್ಲ ಎಂಬುದಾಗಿ ಕಂಪನಿ ತಿಳಿಸಿದೆ.

VISTARANEWS.COM


on

Covishield
Koo

ಪುಣೆ: ಲಸಿಕೆಯ ಅಡ್ಡಪರಿಣಾಮದ ಕುರಿತು ಭಾರತ ಸೇರಿ ಜಗತ್ತಿನಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಬ್ರಿಟಿಷ್ ಔಷಧೀಯ ದೈತ್ಯ ಅಸ್ಟ್ರಾಜೆನಿಕಾ (AstraZeneca) ಕಂಪನಿಯು ಕೊರೊನಾ ನಿರೋಧಕ ಲಸಿಕೆ ಕೋವಿಶೀಲ್ಡ್ (Covishield Vaccine)‌ ಅನ್ನು ಜಾಗತಿಕ ಮಟ್ಟದಲ್ಲಿ ಹಿಂಪಡೆಯಲು ಮುಂದಾಗಿದೆ. ಇದರ ಬೆನ್ನಲ್ಲೇ, ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆಯನ್ನು ಉತ್ಪಾದಿಸಿದ್ದ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (SII) ಕಂಪನಿಯು, “ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮದ ಕುರಿತು ಇದಕ್ಕೂ ಮೊದಲೇ ಬಹಿರಂಗಪಡಿಸಲಾಗಿದೆ” ಎಂದು ಸ್ಪಷ್ಟಪಡಿಸಿದೆ.

ಅಸ್ಟ್ರಾಜೆನಿಕಾ ಸಹಯೋಗದಲ್ಲಿಯೇ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಕೋವಿಶೀಲ್ಡ್‌ಅನ್ನು ಭಾರತದಲ್ಲಿ ಉತ್ಪಾದನೆ ಮಾಡಿದೆ. ಜಾಗತಿಕವಾಗಿ ಅಡ್ಡ ಪರಿಣಾಮದ ಕುರಿತು ಚರ್ಚಿಸುತ್ತಿರುವ ಬೆನ್ನಲ್ಲೇ ಕಂಪನಿಯು ಸ್ಪಷ್ಟನೆ ನೀಡಿದೆ. “ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome – TTS ಸೇರಿ ಎಲ್ಲ ವಿರಳ ಅಡ್ಡ ಪರಿಣಾಮಗಳ ಕುರಿತು ಈಗಾಗಲೇ ಮಾಹಿತಿ ಬಹಿರಂಗಪಡಿಸಲಾಗಿದೆ” ಎಂದು ಸೀರಂ ಸಂಸ್ಥೆಯ ವಕ್ತಾರರೊಬ್ಬರು ಪ್ರಕಟಣೆ ತಿಳಿಸಿದ್ದಾರೆ.

2021ರಲ್ಲೇ ಉತ್ಪಾದನೆ ಸ್ಥಗಿತ

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶದಲ್ಲಿ ಕೋವಿಶೀಲ್ಡ್‌ ಲಸಿಕೆಯನ್ನು ಕೋಟ್ಯಂತರ ಡೋಸ್‌ಗಳನ್ನು ಜನರಿಗೆ ನೀಡಲಾಗಿದೆ. ಕೊರೊನಾ ಬಿಕ್ಕಟ್ಟಿನ ಬಳಿಕ ಅಂದರೆ, 2021ರ ಡಿಸೆಂಬರ್‌ನಿಂದಲೇ ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆಯ ಉತ್ಪಾದನೆಯನ್ನು ನಿಲ್ಲಿಸಲಾಗಿದೆ ಎಂಬುದಾಗಿ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಮಾಹಿತಿ ನೀಡಿದೆ. ಅಷ್ಟೇ ಅಲ್ಲ, ಲಸಿಕೆಯ ಬಾಟಲಿ ಮೇಲೆಯೇ ಅಡ್ಡ ಪರಿಣಾಮದ ಕುರಿತು ಎಚ್ಚರಿಕೆ ನೀಡಿತ್ತು.

ಕೋವಿಶೀಲ್ಡ್‌ ಲಸಿಕೆ ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome – TTS) ಎಂಬ ಅಪರೂಪದ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂಬುದನ್ನು ಈ ಹಿಂದೆ ಕೋರ್ಟ್‌ನಲ್ಲಿ ಒಪ್ಪಿಕೊಂಡಿದ್ದ ಅಸ್ಟ್ರಾಜೆನಿಕಾ ಕಂಪನಿಯು ಈಗ ವ್ಯಾಪಾರ ಉದ್ದೇಶದಿಂದ ಎಲ್ಲ ಮಾರುಕಟ್ಟೆಗಳಿಂದ ತನ್ನ ಈ ಲಸಿಕೆಯನ್ನು ತೆಗೆದು ಹಾಕುವುದಾಗಿ ಘೋಷಿಸಿದೆ.

ತಜ್ಞರು ಹೇಳುವುದಿಷ್ಟು

ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆ ತೆಗೆದುಕೊಂಡವರಲ್ಲಿ ರಕ್ತ ಹೆಪ್ಪುಗಟ್ಟುವ ಅಡ್ಡ ಪರಿಣಾಮದ ಅಪಾಯದ ಸಾಧ್ಯತೆಗಳು ತೀರಾ ಕಡಿಮೆ ಎಂದು ಭಾರತದ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಮಾಜಿ ICMR ವಿಜ್ಞಾನಿ ಡಾ. ರಾಮನ್ ಗಂಗಾಖೇಡ್ಕರ್ ಅವರು ಕೆಲ ದಿನಗಳ ಹಿಂದಷ್ಟೇ ಹೇಳಿದ್ದಾರೆ. ಕೋವಿಶೀಲ್ಡ್ ಅನ್ನು ಸ್ವೀಕರಿಸುವ 10 ಲಕ್ಷ ಜನರಲ್ಲಿ ಏಳರಿಂದ ಎಂಟು ವ್ಯಕ್ತಿಗಳು ಮಾತ್ರ ಥ್ರಂಬೋಸಿಸ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಎಂದು ಕರೆಯಲ್ಪಡುವ ಅಪರೂಪದ ಅಡ್ಡ ಪರಿಣಾಮವನ್ನು ಅನುಭವಿಸುತ್ತಾರೆ. ಭಾರತದಲ್ಲಿ ಇದರ ಪ್ರಮಾಣ ಇನ್ನೂ ಕಡಿಮೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: Covishield vaccine: ಕೋವಿಶೀಲ್ಡ್‌ ಲಸಿಕೆಯಿಂದ ಸೈಡ್‌ ಎಫೆಕ್ಟ್‌ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Continue Reading

ಆರೋಗ್ಯ

Cancer Risk: ಕ್ಯಾನ್ಸರ್ ಅಪಾಯದಿಂದ ಪಾರಾಗಲು ಯಾವ ಆಹಾರ ಸೇವಿಸಬಾರದು? ಯಾವ ಆಹಾರ ಸೇವಿಸಬೇಕು?

ಜೀನ್‌ಗಳು ಮತ್ತು ಕುಟುಂಬದ ಇತಿಹಾಸವನ್ನು ಹೊರತುಪಡಿಸಿ ಆಹಾರ ಪದ್ಧತಿಯಂತಹ ಬಾಹ್ಯ ಅಂಶಗಳು ಕ್ಯಾನ್ಸರ್ ಹರಡುವಿಕೆಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಿದೆ. ಕ್ಯಾನ್ಸರ್ ಬಾರದಂತೆ (Cancer Risk) ನಾವು ನಮ್ಮನ್ನು ರಕ್ಷಿಸಿಕೊಳ್ಳಲು ಕೆಲವೊಂದು ಆಹಾರವನ್ನು ತ್ಯಜಿಸಲೇಬೇಕು. ಕ್ಯಾನ್ಸರ್‌ ಅಪಾಯದಿಂದ ಪಾರಾಗುವ ಕುರಿತು ಉಪಯುಕ್ತ ಸಲಹೆ ಇಲ್ಲಿದೆ.

VISTARANEWS.COM


on

By

Cancer Risk
Koo

ನಮ್ಮ ಜೀವನ ಶೈಲಿ (life style), ಆಹಾರ (food) ಪದ್ಧತಿಯಿಂದ ಕೆಲವೊಂದು ರೋಗಗಳನ್ನು ಆಹ್ವಾನಿಸುತ್ತಿದ್ದೇವೆ. ಅದರಲ್ಲಿ ಕ್ಯಾನ್ಸರ್ ಕೂಡ ಒಂದು. ಕ್ಯಾನ್ಸರ್‌ಗೆ (Cancer Risk) ಮುಖ್ಯ ಕಾರಣ ನಮ್ಮ ದೈನಂದಿನ ಆಹಾರಗಳು ಎನ್ನುತ್ತಾರೆ ತಜ್ಞರು. ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗುವ ಹಲವಾರು ಅಂಶಗಳಿವೆ. ವಿಶೇಷವಾಗಿ ಪ್ರಸ್ತುತ ಹೆಚ್ಚಿನ ಜನರು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸುತ್ತಿಲ್ಲ.

ಜೀನ್‌ಗಳು ಮತ್ತು ಕುಟುಂಬದ ಇತಿಹಾಸವನ್ನು ಹೊರತುಪಡಿಸಿ ಆಹಾರ ಪದ್ಧತಿಯಂತಹ ಬಾಹ್ಯ ಅಂಶಗಳು ಕ್ಯಾನ್ಸರ್ ಹರಡುವಿಕೆಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಿದೆ. ಕ್ಯಾನ್ಸರ್ ಬಾರದಂತೆ ನಾವು ನಮ್ಮನ್ನು ರಕ್ಷಿಸಿಕೊಳ್ಳಲು ಕೆಲವೊಂದು ಆಹಾರವನ್ನು ತ್ಯಜಿಸಲೇಬೇಕು. ಕ್ಯಾನ್ಸರ್ ಅನೇಕ ಅಪಾಯಕಾರಿ ಅಂಶಗಳನ್ನು ಹೊಂದಿರುವ ಭಯಾನಕ ಕಾಯಿಲೆಯಾಗಿದೆ. ತಜ್ಞರ ಪ್ರಕಾರ, ಈ ಭಯಾನಕ ಕಾಯಿಲೆಯು ನಾವು ಪ್ರತಿದಿನ ಸೇವಿಸುವ ಆಹಾರದಿಂದಲೇ ಬರುತ್ತವೆ. ಈ ಆಹಾರಗಳಲ್ಲಿ ಹೆಚ್ಚಿನವು ರುಚಿಕರ ಮತ್ತು ವ್ಯಸನಕಾರಿಯಾಗಿರುತ್ತದೆ.

ಈ ವರ್ಷದ ಆರಂಭದಲ್ಲಿ ಅಮೆರಿಕನ್ ಕ್ಯಾನ್ಸರ್ ಸೊಸೈಟಿ ಮಾಡಿರುವ ವರದಿ ಪ್ರಕಾರ 55 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕ್ಯಾನ್ಸರ್ ರೋಗಿಗಳ ಸಂಖ್ಯೆ ಒಂದು ದಶಕದ ಹಿಂದೆ ಹೋಲಿಸಿದರೆ ದ್ವಿಗುಣಗೊಂಡಿದೆ. ಹೀಗಾಗಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಕೆಲವು ಆಹಾರಗಳನ್ನು ತ್ಯಜಿಸಬೇಕು.


1. ಕೆಂಪು ಮಾಂಸ

ಹಂದಿ, ಕುರಿ ಮತ್ತು ಗೋಮಾಂಸ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಹಾರ್ವರ್ಡ್ ಹೆಲ್ತ್ ಪ್ರಕಾರ, ಮಾಂಸದ ಹೆಚ್ಚಿನ ಸೇವನೆಯು ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಸೋಡಿಯಂನೊಂದಿಗೆ ಪ್ಯಾಕ್ ಮಾಡಲ್ಪಟ್ಟಿರುವುದರಿಂದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ವಾರದಲ್ಲಿ 18 ಔನ್ಸ್ ಕೆಂಪು ಮಾಂಸವನ್ನು ತಿನ್ನಬಹುದು. ಅದನ್ನು ಬೇಯಿಸುವಾಗ ತಾಪಮಾನವನ್ನು ಗಮನಿಸಬೇಕು. ಯಾಕೆಂದರೆ ಅದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಬರ್ಗರ್‌ ಮತ್ತು ಸ್ಟೀಕ್ಸ್‌ಗಳಂತಹ ಸುಟ್ಟ ಮಾಂಸಗಳು ಬೇಕಿಂಗ್ ಅಥವಾ ಸೌಸ್ ವೈಡ್‌ನಂತಹ ವಿಧಾನಗಳನ್ನು ಬಳಸಿಕೊಂಡು ಕಡಿಮೆ ತಾಪಮಾನದಲ್ಲಿ ತಯಾರಿಸಲಾಗುತ್ತದೆ. ಇದರಿಂದ ಅಪಾಯ ಹೆಚ್ಚಾಗಿರುತ್ತದೆ.


2. ಮದ್ಯ

ಆಲ್ಕೋಹಾಲ್ ಸೇವನೆ ಈಗ ಎಲ್ಲರಲ್ಲೂ ಸಾಮಾನ್ಯವಾಗಿದೆ. ಇದು ವಿಶೇಷವಾಗಿ ಯುವಜನರಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ವೈದ್ಯರ ಪ್ರಕಾರ, ಆಲ್ಕೋಹಾಲ್ ಸೇವನೆಯು ಹೊಟ್ಟೆ, ಕರುಳು, ಅನ್ನನಾಳ, ಯಕೃತ್ತು, ಪ್ಯಾಂಕ್ರಿಯಾಟಿಕ್ ಮತ್ತು ಸ್ತನ ಕ್ಯಾನ್ಸರ್ ಗಳಿಗೆ ಕಾರಣವಾಗುತ್ತದೆ. ಕಾಲಾನಂತರದಲ್ಲಿ ಇದು ಅಂಗಾಂಶಗಳಿಗೆ ಹಾನಿಯನ್ನು ಉಂಟು ಮಾಡುತ್ತದೆ. ಜೀವಕೋಶದ ಡಿಎನ್ ಎ ಯಲ್ಲಿ ಅನೇಕ ಬದಲಾವಣೆಗಳನ್ನು ಉಂಟುಮಾಡುತ್ತದೆ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಆಲ್ಕೋಹಾಲ್ ಅನ್ನು ಸಂಪೂರ್ಣವಾಗಿ ತ್ಯಜಿಸುವುದು ಒಳ್ಳೆಯದು.


3. ಸಕ್ಕರೆ ಪಾನೀಯಗಳು

ಬೇಸಿಗೆಯಲ್ಲಿ ಹೆಚ್ಚಿನ ಜನರು ಸಕ್ಕರೆ ತುಂಬಿದ ತಂಪಾದ ಪಾನೀಯಗಳನ್ನು ಕುಡಿಯುತ್ತಾರೆ. ಹಾರ್ವರ್ಡ್ ಟಿ ಎಚ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಪ್ರಕಾರ, ದಿನಕ್ಕೆ ಎರಡಕ್ಕಿಂತ ಹೆಚ್ಚು ಸಕ್ಕರೆ ಪಾನೀಯಗಳನ್ನು ಸೇವಿಸಿದವರು ಕೊಲೊರೆಕ್ಟಲ್ ಕ್ಯಾನ್ಸರ್‌ನ ಆರಂಭಿಕ ಹಂತಕ್ಕಿಂತ ಎರಡು ಪಟ್ಟು ಹೆಚ್ಚು ಅಪಾಯವನ್ನು ಹೊಂದಿರುತ್ತಾರೆ. ಅಲ್ಲದೇ ಇದು ತೂಕ ಮತ್ತು ಬೊಜ್ಜಿಗೂ ಕಾರಣವಾಗುವುದು. ಇದರ ಬದಲು ನೀರು, ಹಾಲು ಅಥವಾ ಸಿಹಿಗೊಳಿಸದ ಚಹಾ ಅಥವಾ ಕಾಫಿ ಸೇವನೆ ಸೂಕ್ತ.


4. ಡೇರಿ ಉತ್ಪನ್ನ

ಹಾಲು, ಚೀಸ್ ಮತ್ತು ಮೊಸರುಗಳಂತಹ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ಎಂದು ಅನೇಕ ಅಧ್ಯಯನಗಳು ಹೇಳುತ್ತವೆ. ಸಂಶೋಧನೆಯ ಪ್ರಕಾರ, ಡೈರಿ ಇನ್ಸುಲಿನ್ ತರಹದ ಬೆಳವಣಿಗೆಯ ಅಂಶ 1 (IGF-1) ಮಟ್ಟವನ್ನು ಹೆಚ್ಚಿಸುತ್ತದೆ. ಇದು ಪ್ರಾಸ್ಟೇಟ್ ಕ್ಯಾನ್ಸರ್ ನ ಹೆಚ್ಚಿನ ಅಪಾಯಕ್ಕೆ ಸಂಬಂಧಿಸಿದೆ. IGF-1 ಪ್ರಾಸ್ಟೇಟ್ ಕ್ಯಾನ್ಸರ್ ಕೋಶಗಳ ಪ್ರಸರಣ ಅಥವಾ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Fried Oil: ಒಮ್ಮೆ ಕರಿದ ಎಣ್ಣೆಯನ್ನು ಮತ್ತೊಮ್ಮೆ ಬಳಸಬಹುದೆ?

ಕ್ಯಾನ್ಸರ್ ಅಪಾಯ ಕಡಿಮೆ ಮಾಡುವ ಆಹಾರಗಳು ಯಾವವು?

ವೈಜ್ಞಾನಿಕ ಸಂಶೋಧನೆಯು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುವ ಅನೇಕ ಆಹಾರಗಳಿವೆ.


1. ಹಣ್ಣು ಮತ್ತು ತರಕಾರಿಗಳು

ಹೆಚ್ಚಿನ ಹಣ್ಣು ಮತ್ತು ತರಕಾರಿಗಳು ರೋಗ ನಿರೋಧಕ ಗುಣಗಳಿಂದ ತುಂಬಿರುತ್ತವೆ. ಆಕ್ಸಿಡೇಟಿವ್ ಒತ್ತಡ ಮತ್ತು ಡಿಎನ್ಎ ಹಾನಿಯಿಂದ ಜೀವಕೋಶಗಳನ್ನು ರಕ್ಷಿಸುತ್ತವೆ.

2. ಬೀಜಗಳು

ಬೀಜಗಳ ನಿಯಮಿತ ಸೇವನೆಯು ಉರಿಯೂತ ಮತ್ತು ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ.

3. ಬೀನ್ಸ್ ಮತ್ತು ದ್ವಿದಳ ಧಾನ್ಯಗಳು

ಬೀನ್ಸ್, ದ್ವಿದಳ ಧಾನ್ಯಗಳು ಫೈಬರ್‌ನಿಂದ ಕೂಡಿದ್ದು, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.


4. ಮೀನು

ಬಿಳಿ ಮೀನು ಒಮೆಗಾ-3 ಕೊಬ್ಬಿನಾಮ್ಲಗಳಿಂದ ತುಂಬಿರುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಕೆಲವು ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

Continue Reading

ಫ್ಯಾಷನ್

Girls Pleats Skirts Fashion: ಹುಡುಗಿಯರ ಮೆಚ್ಚಿನ ಆಯ್ಕೆ ಕೊರಿಯನ್‌ ಪ್ಲೀಟ್ಸ್‌ ಸ್ಕರ್ಟ್ಸ್‌ಗಳು

ಇದೀಗ ಕೊರಿಯನ್‌ ಪ್ಲೀಟ್ಸ್‌ ಸ್ಕರ್ಟ್‌ಗಳು ಹುಡುಗಿಯರ ಫ್ಯಾಷನ್‌ಗೆ (Girls Pleats Skirts Fashion) ಎಂಟ್ರಿ ನೀಡಿವೆ. ಇದಕ್ಕೆ ಪೂರಕ ಎಂಬಂತೆ, ಸ್ಥಳೀಯ ಡಿಸೈನ್‌ಗಳೊಂದಿಗೆ ಮಿಕ್ಸ್‌ ಮ್ಯಾಚ್‌ ಆಗಿ ಹೊಸ ರೂಪ ಪಡೆದು ನಾನಾ ಶೈಲಿಯಲ್ಲಿ ಕಾಲಿಟ್ಟಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್‌.

VISTARANEWS.COM


on

Girls Pleats Skirts Fashion
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೊರಿಯನ್‌ ಪ್ಲೀಟ್ಸ್‌ ಸ್ಕರ್ಟ್‌ಗಳು ಹುಡುಗಿಯರ ಫ್ಯಾಷನ್‌ಗೆ (Girls Pleats Skirts Fashion) ಎಂಟ್ರಿ ನೀಡಿವೆ. ಕೊರಿಯನ್‌ ಗ್ಲಾಸ್‌ ಸ್ಕಿನ್‌ ಟ್ರೆಂಡ್‌ ಸೈಡಿಗೆ ಸರಿಯುತ್ತಿದ್ದಂತೆ, ಇದೀಗ ಕೊರಿಯನ್‌ ಪ್ಲೀಟೇಡ್‌ ಸ್ಕರ್ಟ್‌ಗಳು, ಜೆನ್‌ ಜಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ವೆಸ್ಟರ್ನ್‌ ಫ್ಯಾಷನ್‌ ಲಿಸ್ಟ್‌ಗೆ ಸೇರಿಕೊಂಡು ಹಂಗಾಮಾ ಎಬ್ಬಿಸಿವೆ.

Girls Pleats Skirts Fashion

ಹುಡುಗಿಯರನ್ನು ಸೆಳೆದ ಕೊರಿಯನ್‌ ಸ್ಕರ್ಟ್ಸ್‌

ಕೊರಿಯನ್‌ ಪ್ಲೀಟೇಡ್‌ ಸ್ಕರ್ಟ್ಸ್‌ ಇಂದು ಕಾಲೇಜು ಹುಡುಗಿಯರನ್ನು ಮಾತ್ರವಲ್ಲ, ವೀಕೆಂಡ್‌ ಹಾಗೂ ಔಟಿಂಗ್‌ ಇಷ್ಟಪಡುವ ಹುಡುಗಿಯರನ್ನು ಆವರಿಸಿಕೊಂಡಿವೆ. ಸಮ್ಮರ್‌ ಲುಕ್‌ಗೆ ಸಾಥ್‌ ನೀಡುವ ಇವು ನಾನಾ ಶೈಲಿಯ ಟಾಪ್‌ಗಳೊಂದಿಗೆ ಮಿಕ್ಸ್‌ ಮ್ಯಾಚ್‌ ಆಗಿ ಆಕರ್ಷಕ ಸ್ಕರ್ಟ್‌ ಫ್ಯಾಷನ್‌ಗೆ ನಾಂದಿ ಹಾಡಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Girls Pleats Skirts Fashion

ಟ್ರೆಂಡಿಯಾಗಿರುವ ಕೊರಿಯನ್‌ ಸ್ಕರ್ಟ್ಸ್‌

ಹೈ ವೇಸ್ಟ್‌ ಪ್ಲೀಟೆಡ್‌ ಕೊರಿಯನ್‌ ಸ್ಕರ್ಟ್‌, ಎ-ಲೈನ್‌ ಪ್ಲೀಟೆಡ್‌, ಹೈ ವೇಸ್ಟ್‌ ಟೆನ್ನೀಸ್‌ ಸ್ಕರ್ಟ್‌, ಸ್ಯಾಟೀನ್‌ ಪ್ಲೀಟೆಡ್‌, ನೆಟ್ಟೆಡ್‌ ಪ್ಲೀಟೆಡ್‌, ಪ್ಲೀಟೆಡ್‌ ಮಿಡಿ ಸ್ಕರ್ಟ್‌, ಶಾರ್ಟ್‌ ಪ್ಲೀಟೆಡ್‌, ಬಿಗೇ ಪ್ಲೀಟೆಡ್‌, ಮಿನಿ ಪ್ಲೀಟೆಡ್‌ ಸ್ಕರ್ಟ್‌, ಲಾಂಗ್‌ ಪ್ಲೀಟೆಡ್‌ ಸ್ಲರ್ಟ್‌ ಸೇರಿದಂತೆ ಸಾಕಷ್ಟು ನೆರಿಗೆ ಇರುವ ಕೊರಿಯನ್‌ ಸ್ಕರ್ಟ್‌ಗಳು ನಮ್ಮಲ್ಲಿ ಬಂದು ಟ್ರೆಂಡಿಯಾಗಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Girls Pleats Skirts Fashion

ಏನಿದು ಕೊರಿಯನ್‌ ಪ್ಲೀಟೆಡ್‌ ಸ್ಕರ್ಟ್ಸ್‌?

ಕೊರಿಯನ್‌ ಶೈಲಿಯ ನೆರಿಗೆ ಪಕ್ಕ ನೆರಿಗೆ ಇರುವಂತಹ ಸ್ಕರ್ಟ್‌ಗಳಿವು. ಪಕ್ಕ ಪಕ್ಕದಲ್ಲೆ ಇರುವಂತಹ ಪ್ಲೀಟೆಡ್‌ ಸ್ಕರ್ಟ್ಸ್‌ ನೋಡಲು ತಕ್ಷಣಕ್ಕೆ ನಮ್ಮ ರಾಷ್ಟ್ರದಲ್ಲಿ ಶಾಲೆಯ ಯೂನಿಫಾರ್ಮ್‌ ಸ್ಕರ್ಟ್‌ನಂತೆಯೇ ಕಾಣುತ್ತವೆ. ಒಟ್ಟಿನಲ್ಲಿ, ನೆರಿಗೆ ಇರುವಂತಹ ಸ್ಕರ್ಟ್‌ಗಳಿವು. ನೆರಿಗೆಯ ಸ್ಕರ್ಟ್‌ಗಳು ಎಂದು ಹೇಳಬಹುದು. ದಪ್ಪನೆಯ ಫ್ಯಾಬ್ರಿಕ್‌ನದ್ದಾದಲ್ಲಿ ನೀಟಾಗಿ ಈ ನೆರಿಗೆಗಳು ಕಾಣಿಸುತ್ತವೆ. ತೆಳುವಾದ ಅಂದರೇ, ನೆಟ್ಟೆಡ್‌ನದ್ದಾದಲ್ಲಿ ಲೈನಿಂಗ್‌ ಕಾಣಿಸುತ್ತವೆ. ಒಟ್ನಲ್ಲಿ, ನಾನಾ ಬಗೆಯವು ದೊರೆಯುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಇದನ್ನೂ ಓದಿ: Torn Jeans Styling Tips: ಟೊರ್ನ್‌ ಜೀನ್ಸ್‌ ಪ್ಯಾಂಟ್‌ ಪ್ರಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಸಂಗತಿಗಳು

“ಕೊರಿಯನ್‌ ಪ್ಲೀಟೆಡ್‌ ಸ್ಕರ್ಟ್‌ಗಳು ಇಂದು ಟೀನೇಜ್‌ ಹಾಗೂ ಕಾಲೇಜು ಹುಡುಗಿಯರ ಫೇವರೇಟ್‌ ವಾರ್ಡ್ರೋಬ್‌ ಲಿಸ್ಟ್‌ಗರ ಸೇರಿವೆ. ವೆಸ್ಟರ್ನ್‌ ಲುಕ್‌ಗೆ ಸಾಥ್‌ ನೀಡುವ ಈ ಕೊರಿಯನ್‌ ಶೈಲಿಯವು ಇದೀಗ ಜಾಗತೀಕ ಮಟ್ಟದಲ್ಲಿ ಪ್ರಚಲಿತದಲ್ಲಿವೆ. ಪಾಸ್ಟೆಲ್‌ ಶೇಡ್‌ನವು ಹಾಗೂ ಚೆಕ್ಸ್‌ ಮತ್ತು ಮಾನೋಕ್ರಾಮ್‌ ಡಿಸೈನ್‌ನವು ಹೆಚ್ಚು ಹುಡುಗಿಯರಿಗೆ ಪ್ರಿಯವಾಗಿವೆ ” ಎನ್ನುವ ಸ್ಟೈಲಿಸ್ಟ್‌ಗಳು, ಇವು ನಾನಾ ಬಗೆಯಲ್ಲಿ ಧರಿಸಬಹುದು ಎನ್ನುತ್ತಾರೆ.

Girls Pleats Skirts Fashion

ಕೊರಿಯನ್‌ ಪ್ಲೀಟೆಡ್‌ ಸ್ಕರ್ಟ್ಸ್‌ ಟಿಪ್ಸ್‌

  • ಫ್ಯಾಬ್ರಿಕ್‌ ಆಧಾರದ ಮೇಲೆ ಸ್ಟೈಲಿಂಗ್‌ ಮಾಡಬಹುದು.
  • ಸ್ಕರ್ಟ್ಸ್‌ ಜೊತೆ ಸ್ಟಾಕಿಂಗ್ಸ್‌ ಧರಿಸಬಹುದು.
  • ಹೈ ಹೀಲ್ಸ್‌ ಅಥವಾ ಶೂ ಧರಿಸಿದರೆ ಆಕರ್ಷಕವಾಗಿ ಕಾಣಿಸುತ್ತದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಆರೋಗ್ಯ

Fried Oil: ಒಮ್ಮೆ ಕರಿದ ಎಣ್ಣೆಯನ್ನು ಮತ್ತೊಮ್ಮೆ ಬಳಸಬಹುದೆ?

ಕರಿಯಲು ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೊಮ್ಮೆ ಬಳಸುವುದು ಭಾರತೀಯ ಮನೆಗಳಲ್ಲಿ ಸಾಮಾನ್ಯ ಸಂಪ್ರದಾಯ. ಒಮ್ಮೆ ಪೂರಿಯೋ, ಚಕ್ಕುಲಿಯನ್ನು ಕರಿದ ಎಣ್ಣೆಯನ್ನು ಮತ್ತೊಮ್ಮೆ ಹಪ್ಪಳ ಕರಿಯಲು ಅಥವಾ ಇನ್ನೇನನ್ನೋ ಕರಿಯಲು ಬಳಸಿಬಿಡುತ್ತೇವೆ. ಅದು ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ ಎಂದು ಯೋಚಿಸುವುದೂ ಇಲ್ಲ. ಬಹಳಷ್ಟು ಮಂದಿಗೆ ಹಾಗೆ ಒಮ್ಮೆ ಕರಿದ ಎಣ್ಣೆಯನ್ನು ಇನ್ನೊಮ್ಮೆ ಬಳಸಬಾರದು ಎಂದೂ ತಿಳಿದಿರುವುದಿಲ್ಲ. ಈ ಬಗ್ಗೆ ಅರಿವು (fried oil) ಮೂಡಿಸುವ ಮಾಹಿತಿ ಇಲ್ಲಿದೆ.

VISTARANEWS.COM


on

Fried Oil
Koo

ಎಣ್ಣೆಯಿಲ್ಲದೆ ಅಡುಗೆಯಿಲ್ಲ. ನಿತ್ಯವೂ ಅಡುಗೆ ಮನೆಯಲ್ಲಿ ಅವರರವರ ಆಯ್ಕೆಯ ಎಣ್ಣೆಯನ್ನು ಪ್ರತಿಯೊಬ್ಬರೂ ಬಳಸುತ್ತಾರೆ. ಕೆಲವರು ಬಳಸುವ ಪ್ರಮಾಣ ಕಡಿಮೆಯಿರಬಹುದು, ಕೆಲವರು ಹೆಚ್ಚು ಬಳಸಬಹುದು. ಆದರೆ, ಒಂದಲ್ಲ ಒಂದು ವಿಧದಲ್ಲಿ ಎಣ್ಣೆ ದೇಹ ಸೇರಿಯೇ ಸೇರುತ್ತದೆ. ಮಳೆ ಬಂದಾಗ ಬಿಸಿಬಿಸಿ ಪಕೋಡ ಕರಿಯಲು, ಸಿಂಪಲ್‌ ಮೊಸರನ್ನ ಮಾಡಿದಾಗ ಹಪ್ಪಳ ಸೆಂಡಿಗೆ ಕರಿದುಕೊಳ್ಳಲು, ಹಬ್ಬ ಬಂದಾಗ, ಚಕ್ಕುಲಿ ಕೋಡುಬಳೆ ಮಾಡಲು, ನಿತ್ಯವೂ ಮಾಡಿದ ಅಡುಗೆಗೆ ಒಗ್ಗರಣೆ ಹಾಕಲು ಎಣ್ಣೆ ಒಂದಿಲ್ಲೊಂದು ಬಗೆಯಲ್ಲಿ ಬಳಕೆಯಾಗುತ್ತಲೇ ಇರುತ್ತದೆ. ಆದರೆ, ಕರಿಯಲು ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೊಮ್ಮೆ ಬಳಸುವುದು ಭಾರತೀಯ ಮನೆಗಳಲ್ಲಿ ಸಾಮಾನ್ಯ ಸಂಪ್ರದಾಯ. ಒಮ್ಮೆ ಪೂರಿಯೋ, ಚಕ್ಕುಲಿಯನ್ನು ಕರಿದ ಎಣ್ಣೆಯನ್ನು ಮತ್ತೊಮ್ಮೆ ಹಪ್ಪಳ ಕರಿಯಲು ಅಥವಾ ಇನ್ನೇನನ್ನೋ ಕರಿಯಲು ಬಳಸಿಬಿಡುತ್ತೇವೆ. ಅದು ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ ಎಂದು ಯೋಚಿಸುವುದೂ ಇಲ್ಲ. ಬಹಳಷ್ಟು ಮಂದಿಗೆ ಹಾಗೆ ಒಮ್ಮೆ ಕರಿದ ಎಣ್ಣೆಯನ್ನು (fried oil) ಇನ್ನೊಮ್ಮೆ ಬಳಸಬಾರದು ಎಂದೂ ತಿಳಿದಿರುವುದಿಲ್ಲ.

Oil background

ಅಧ್ಯಯನಗಳ ಪ್ರಕಾರ, ಒಮ್ಮೆ ಕರಿದ ಎಣ್ಣೆಯಲ್ಲಿ ಟ್ರಾನ್ಸ್‌ ಫ್ಯಾಟ್‌ ಅಧಿಕವಾಗಿರುತ್ತದೆ. ಅದು ಆರೋಗ್ಯಕ್ಕೆ ಬಹಳ ಕೆಟ್ಟದ್ದು. ಕೋಲ್ಡ್‌ ಪ್ರೆಸ್‌ ಮಾಡಿದ ಎಣ್ಣೆಗಳಲ್ಲಿ ಬಹುಮುಖ್ಯವಾಗಿ ಕಡಿಮೆ ಸ್ಮೋಕಿಂಗ್‌ ಪಾಯಿಂಟ್‌ ಇರುವುದರಿಂದ ಬಿಸಿ ಮಾಡಿದ ತಕ್ಷಣ ಹಾನಿಕಾರಕ ಫ್ರೀ ರ್ಯಾಡಿಕಲ್ಸ್‌ಗಳನ್ನು ಉತ್ಪತ್ತಿ ಮಾಡುತ್ತವೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೆಟ್ಟ ಕೊಲೆಸ್ಟೆರಾಲ್‌ ಮಟ್ಟ ಏರುವ ಮೂಲಕ ಹೃದಯಕ್ಕೆ ಮತ್ತಷ್ಟು ಹಾನಿಕಾರಕವಾಗಿ ಪರಿಣಮಿಸುತ್ತದೆ. ತಜ್ಞರ ಪ್ರಕಾರ, ಒಮ್ಮೆ ಕರಿದ ಎಣ್ಣೆಯನ್ನು ಮತ್ತೆ ಬಳಸುವುದೇ ಆರೋಗ್ಯಕ್ಕೆ ಹಿತವಲ್ಲ. ಕೇವಲ ಒಗ್ಗರಣೆ ಹಾಕಲು ಇತ್ಯಾದಿ ಬೇರೆ ಬಳಕೆಗೂ ಅದು ಯೋಗ್ಯವಲ್ಲ. ಆದರೂ, ಒಮ್ಮೆ ಬಳಸಿದ ಎಣ್ಣೆಯನ್ನು ಎಸೆಯಲು ಬಹುತೇಕರು ಮನಸ್ಸು ಮಾಡದ ಕಾರಣ ಇನ್ನೊಮ್ಮೆ ಕರಿಯಲು ಬಳಸಬಹುದು ಎನ್ನಲಾಗುತ್ತದೆ. ಆದರೆ ಎರಡಕ್ಕಿಂತ ಹೆಚ್ಚು ಬಾರಿ ಬಳಕೆ ಸಲ್ಲದು.

ಎಸೆಯುವುದು ಒಳ್ಳೆಯದು

ಎಫ್‌ಎಸ್‌ಎಸ್‌ಎಐ ರೆಗ್ಯುಲೇಶನ್‌ ಪ್ರಕಾರ, ವೆಜಿಟೇಬಲ್‌ ಆಯಿಲ್‌ನ ಪೋಲಾರ್‌ ಕಾಂಪೌಂಡ್‌ ಶೇ.25 ದಾಟಿದ ತಕ್ಷಣ ಅದು ಅಡುಗೆಗೆ ಅನರ್ಹ. ಹಾಗಾಗಿ, ಎರಡಕ್ಕಿಂತ ಹೆಚ್ಚಿ ಬಾರಿ ಒಂದೇ ಎಣ್ಣೆಯಲ್ಲಿ ಕರಿಯುವುದು ಆರೋಗ್ಯದ ದೃಷ್ಟಿಯಿಂದ ಯೋಗ್ಯವಲ್ಲ. ಎರಡು ಬಾರಿ ಕರಿದ ಮೇಲೆ ಎಣ್ಣೆಯನ್ನು ಎಸೆಯುವುದು ಒಳ್ಳೆಯದು.

Fried Oil pic

ಹೊಗೆಯಾಡುವವರೆಗೆ ಕುದಿಸಬೇಡಿ

ಅಡುಗೆ ಎಣ್ಣೆ ಯಾವುದೇ ಇರಲಿ, ಅದು ಹೊಗೆಯಾಡುವವರೆಗೆ ಕುದಿಸಬೇಡಿ. ಯಾವಾಗಲೂ ಕಡಿಮೆ ಉಷ್ಣತೆಯಲ್ಲಿಟ್ಟು ಅದನ್ನು ಅಡುಗೆಗೆ, ಕರಿಯಲು ಬಳಸುವುದು ಯೋಗ್ಯ. ಸ್ಮೋಕಿಂಗ್‌ ಪಾಯಿಂಟ್‌ ಮೀರಿ ಹೋಗಲು ಬಿಡಬೇಡಿ.

ತಣಿಯಲು ಬಿಡಿ

ಕರಿದ ಮೇಲೆ ಎಣ್ಣೆಯನ್ನು ತಣಿಯಲು ಬಿಡಿ ಹಾಗೂ ಅದರಲ್ಲಿ ಕರಿದ ಪದಾರ್ಥಗಳ ತುಣುಕುಗಳಿದ್ದರೆ ಅದನು ಸೋಸಿ ತೆಗೆಯಿರಿ. ನಂತರ ಅದನ್ನು ಗಾಳಿಯಾಡದ ಬಾಟಲಿಯಲ್ಲಿ ಹಾಕಿಟ್ಟು ಮತ್ತೆ ಬಳಸಬಹುದು. ಎರಡಕ್ಕಿಂತ ಹೆಚ್ಚು ಬಾರಿ ಎಣ್ಣೆಯನ್ನು ಬಳಸಬೇಡಿ.

ಹೆಚ್ಚು ಕಾಲ ಇಡಬೇಡಿ

ಒಮ್ಮೆ ಬಳಸಿದ ಎಣ್ಣೆಯನ್ನು ಒಂದು ತಿಂಗಳಿಗಿಂತ ಹೆಚ್ಚು ಕಾಲ ಇಡಬೇಡಿ. ಒಂದು ತಿಂಗಳೊಳಗಾಗಿ ಮತ್ತೊಮ್ಮೆ ಕರಿಯಲು ಬಳಸಿ ಆಮೇಲೆ ಬಿಸಾಕಿ.

Frying Churros in OIl

ಆಗಾಗ ಪರಿಶೀಲಿಸಿ

ಒಮ್ಮೆ ಬಳಸಿದ ಮೇಲೆ ಶೇಖರಿಸಿಟ್ಟ ಎಣ್ಣೆಯನ್ನು ಆಗಾಗ ಚೆಕ್‌ ಮಾಡಿ. ಅದರ ಬಣ್ಣ ವಾಸನೆಯಲ್ಲಿ ಬದಲಾವಣೆಯಾದರೆ ಬಳಸಬೇಡಿ.

ಹೊಗೆ ಏಳುತ್ತಿದೆಯೇ ನೋಡಿ

ಎಣ್ಣೆ ಸರಿಯಾಗಿ ಬಿಸಿಯಾಗುವ ಮೊದಲೇ ಹೊಗೆಯೇಳಲು ಆರಂಭವಾದರೆ ಆ ಎಣ್ಣೆ ಕರಿಯಲು ಯೋಗ್ಯವಲ್ಲ. ಹೊಗೆಯಾಡುವ ಆದರೆ ಬಿಸಿ ಸರಿಯಾಗಿ ಆಗದ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಸರಿಯಾಗಿ ಫ್ರೈ ಆಗಲಾರದು.

ಇದನ್ನೂ ಓದಿ: Drinking Water Before Meals: ಊಟಕ್ಕಿಂತ ಎಷ್ಟು ಮೊದಲು ನೀರು ಕುಡಿದರೆ ಒಳ್ಳೆಯದು?

ಬೇಕಾದಷ್ಟೇ ತೆಗೆದುಕೊಳ್ಳಿ

ಬಾಣಲೆಯಲ್ಲಿ ಕರಿಯಲು ಎಣ್ಣೆ ತೆಗೆದುಕೊಳ್ಳುವಾಗಲೇ ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಆಗ ಹೆಚ್ಚು ಎಣ್ಣೆ ಉಳಿಯುವುದು ತಪ್ಪಿಸಬಹುದು.

Continue Reading
Advertisement
Pune
ದೇಶ29 mins ago

ಹಾಸ್ಟೆಲ್‌ ಬಾತ್‌ರೂಮ್‌ನಲ್ಲಿ ತೆಗೆದ ನೂರಾರು ಯುವತಿಯರ ಬೆತ್ತಲೆ ವಿಡಿಯೊಗಳನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ!

ಉತ್ತರ ಕನ್ನಡ49 mins ago

Bheemanna Naik: ಶಿರಸಿ ಶಾಸಕ ಭೀಮಣ್ಣ ನಾಯ್ಕ್‌ ಮೇಲೆ ಜೇನು ದಾಳಿ; ಆಸ್ಪತ್ರೆಗೆ ದಾಖಲು

Kulgam
ದೇಶ55 mins ago

Kulgam: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ಮತ್ತೊಬ್ಬ ಉಗ್ರನ ಎನ್‌ಕೌಂಟರ್‌, 2 ದಿನದಲ್ಲಿ 3ನೇ ಬಲಿ

ವಿಸ್ತಾರ ಗ್ರಾಮದನಿ Vistara Gramadaani
ಕರ್ನಾಟಕ1 hour ago

ವಿಸ್ತಾರ ಗ್ರಾಮ ದನಿ: ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಮತದಾನ, SSLC ಫಲಿತಾಂಶದಂತೆ!

LSG vs SRH
ಕ್ರೀಡೆ2 hours ago

LSG vs SRH: ಹೆಡ್, ಅಭಿಷೇಕ್ ಬ್ಯಾಟಿಂಗ್​ ಸುಂಟರಗಾಳಿಗೆ ತತ್ತರಿಸಿದ ಲಕ್ನೋ; 10 ವಿಕೆಟ್​ ಹೀನಾಯ ಸೋಲು

Hindu Girl
ದೇಶ2 hours ago

Hindu Girl: ಹಿಂದು ಬಾಲಕಿಯ ಅತ್ಯಾಚಾರಗೈದು, ಇಸ್ಲಾಂ ಪಾಲಿಸುವಂತೆ ಒತ್ತಾಯ; ಇಬ್ರಾಹಿಂ ವಿರುದ್ಧ ಕೇಸ್

Monty Panesar
ಕ್ರಿಕೆಟ್2 hours ago

Monty Panesar: ರಾಜಕೀಯಕ್ಕೆ ಎಂಟ್ರಿ ಕೊಟ್ಟು ಒಂದೇ ವಾರದಲ್ಲಿ ಗುಡ್​ ಬೈ ಹೇಳಿದ ಇಂಗ್ಲೆಂಡ್​ ಸ್ಪಿನ್ನರ್

Murder Case
ಕರ್ನಾಟಕ2 hours ago

Murder Case: ಶಿವಮೊಗ್ಗದಲ್ಲಿ ಗ್ಯಾಂಗ್ ವಾರ್; ಹಾಡಹಗಲೇ ಇಬ್ಬರು ರೌಡಿಶೀಟರ್‌ಗಳ ಭೀಕರ ಹತ್ಯೆ

Virat Kohli
ಕ್ರೀಡೆ3 hours ago

Virat Kohli: ಪಂಜಾಬಿ ಮಾತನಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Poonch Terrorists
ದೇಶ3 hours ago

Poonch Terrorists: ಪೂಂಚ್‌ನಲ್ಲಿ ಸೇನೆ ಮೇಲೆ ದಾಳಿ ಮಾಡಿದ 3 ಉಗ್ರರ ಫೋಟೊ ರಿಲೀಸ್; ಹತ್ಯೆಗೆ ಪ್ಲಾನ್!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ19 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ1 day ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ1 day ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ1 day ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌