Ghulam Nabi Azad | ಕಾಶ್ಮೀರದಲ್ಲಿ ಸಕ್ರಿಯರಾದ ಗುಲಾಂ ನಬಿ ಆಜಾದ್​​ರಿಗೆ ಉಗ್ರರಿಂದ ಜೀವ ಬೆದರಿಕೆ - Vistara News

ದೇಶ

Ghulam Nabi Azad | ಕಾಶ್ಮೀರದಲ್ಲಿ ಸಕ್ರಿಯರಾದ ಗುಲಾಂ ನಬಿ ಆಜಾದ್​​ರಿಗೆ ಉಗ್ರರಿಂದ ಜೀವ ಬೆದರಿಕೆ

ಗುಲಾಂ ನಬಿ ಆಜಾದ್​ ಕಾಂಗ್ರೆಸ್​ ಬಿಟ್ಟಾಗ ಅವರು ಬಿಜೆಪಿ ಸೇರುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ನಂತರ ತಾನೊಂದು ಹೊಸ ಪಕ್ಷವನ್ನೇ ಕಟ್ಟುವುದಾಗಿ ಅವರು ಘೋಷಿಸಿದ್ದರು. ಕಾಶ್ಮೀರದಲ್ಲಿ ಅದರ ಮೊದಲ ಘಟಕ ಪ್ರಾರಂಭ ಮಾಡುತ್ತೇನೆ ಎಂದಿದ್ದರು.

VISTARANEWS.COM


on

Ghulam Nabi Azad gets threat from The Resistance Front terror outfit
ಗುಲಾಂ ನಬಿ ಆಜಾದ್​
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶ್ರೀನಗರ: ಕಾಂಗ್ರೆಸ್​ ತೊರೆದು ಈಗ ಜಮ್ಮು-ಕಾಶ್ಮೀರಕ್ಕೆ ಹೋಗಿ ಅಲ್ಲಿ ಹೊಸದಾದ ರಾಜಕೀಯ ಪಕ್ಷವನ್ನು ಕಟ್ಟಲು ನಿರ್ಧಾರ ಮಾಡಿರುವ ಗುಲಾಂ ನಬಿ ಆಜಾದ್​​ಗೆ ಉಗ್ರರಿಂದ ಜೀವ ಬೆದರಿಕೆ ಎದುರಾಗಿದೆ. ಗುಲಾಂ ನಬಿ ಆಜಾದ್​ ಅವರು ಹೊಸದಾದ ರಾಷ್ಟ್ರೀಯ ಪಕ್ಷವನ್ನು ಹುಟ್ಟುಹಾಕಲು ನಿರ್ಧರಿಸಿದ್ದು, ಅದರ ಮೊದಲ ಘಟಕವನ್ನು ಜಮ್ಮು-ಕಾಶ್ಮೀರದಲ್ಲಿ ಪ್ರಾರಂಭ ಮಾಡುವುದಾಗಿ ತಿಳಿಸಿದ್ದಾರೆ. ತಮ್ಮ ನೂತನ ಪಕ್ಷ ಪ್ರಾರಂಭದ ಭಾಗವಾಗಿ ಮಿಷನ್​ ಕಾಶ್ಮೀರ್​ ಶುರುವಿಟ್ಟುಕೊಂಡಿದ್ದು ಅಲ್ಲಿ ಸಾರ್ವಜನಿಕ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಱಲಿಗಳನ್ನು ಆಯೋಜಿಸುತ್ತಿದ್ದಾರೆ.

ಹೀಗೆ ಕಾಶ್ಮೀರದಲ್ಲಿ ಸಕ್ರಿಯವಾದ ಅವರಿಗೆ ಅವರಿಗೆ ಲಷ್ಕರೆ ತೊಯ್ಬಾ ಉಗ್ರ ಸಂಘಟನೆಯ ಅಂಗ ಸಂಘಟನೆಯಾದ ರೆಸಿಸ್ಟೆನ್ಸ್​​​ ಫ್ರಂಟ್​ ಉಗ್ರ ಸಂಘಟನೆ ಜೀವ ಬೆದರಿಕೆಯನ್ನೊಡ್ಡಿದೆ. ಗುಲಾಂ ನಬಿ ಆಜಾದ್​​ಗೆ ಬೆದರಿಕೆ ಹಾಕಿದ ಪೋಸ್ಟರ್​​ಗಳು ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿವೆ. ಸದ್ಯ ಗುಲಾಂ ನಬಿ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕಾಶ್ಮೀರದಲ್ಲಿ 2019ರಲ್ಲಿ ವಿಶೇಷ ಸ್ಥಾನಮಾನ ತೆಗೆದ ಬಳಿಕ ಹುಟ್ಟಿಕೊಂಡಿದ್ದು ಈ ರೆಸಿಸ್ಟೆನ್ಸ್​ ಫ್ರಂಟ್​. ಕಾಶ್ಮೀರದಲ್ಲಿ ಸಕ್ರಿಯವಾಗಿ ಹೋರಾಟ ನಡೆಸಲು ಲಷ್ಕರೆ ತೊಯ್ಬಾ ನಾಯಕರೇ ಈ ಸಂಘಟನೆಯನ್ನು ಹುಟ್ಟುಹಾಕಿದ್ದಾರೆ. 2020ರಿಂದ ಇಲ್ಲಿಯವರೆಗೆ ಕಾಶ್ಮೀರದಲ್ಲಿ ನಡೆದ ಹಲವು ದಾಳಿಗಳಲ್ಲಿ ಈ ‘ದಿ ರೆಸಿಸ್ಟೆನ್ಸ್​ ಫ್ರಂಟ್​ (TRF)’ ಪಾತ್ರವಿದೆ.

ಟಿಆರ್​ಎಫ್​ ಹೇಳೋದೇನು?
ಸಾಮಾಜಿಕ ಜಾಲತಾಣದಲ್ಲಿ ಗುಲಾಂ ನಬಿ ಆಜಾದ್​ಗೆ ಬೆದರಿಕೆ ಹಾಕಿರುವ ದಿ ರೆಸಿಸ್ಟೆನ್ಸ್ ಫ್ರಂಟ್​ ಉಗ್ರ ಸಂಘಟನೆ ‘ಗುಲಾಂ ನಬಿ ಆಜಾದ್​​ ಇತ್ತೀಚೆಗೆ ಕಾಂಗ್ರೆಸ್​ ತೊರೆದು, ಜಮ್ಮು-ಕಾಶ್ಮೀರ ರಾಜಕೀಯಕ್ಕೆ ಪ್ರವೇಶ ಮಾಡಿರುವದರ ಹಿಂದೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೈವಾಡ ಇದೆ. ಇವೆಲ್ಲ ಬದಲಾವಣೆಗಳೂ ಕೇಂದ್ರ ಸರ್ಕಾರದ ಕಾರ್ಯಕತಂತ್ರಗಳೇ ಆಗಿವೆ. ಗುಲಾಂ ನಬಿ ಆಜಾದ್​ ಕಾಂಗ್ರೆಸ್ ತೊರೆಯುವುದಕ್ಕೂ ಮೊದಲು ಅವರು ಗೃಹ ಸಚಿವ ಅಮಿತ್​ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ರನ್ನು ಭೇಟಿಯಾಗಿದ್ದಾರೆ. ಅವರೊಬ್ಬ ಬಿಜೆಪಿಯ ಏಜೆಂಟ್​. ಅಷ್ಟೇ ಅಲ್ಲ, ಬಿಜೆಪಿ ತನ್ನ ರಾಜಕೀಯಕ್ಕಾಗಿ, ಇಲ್ಲಿಂದ ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರನ್ನು ಬಳಸಿಕೊಳ್ಳುತ್ತಿದೆ’ ಎಂದು ಆರೋಪಿಸಿದೆ.

ರಾಹುಲ್​ ಭಟ್​​ನನ್ನು ಕೊಂದಿದ್ದೇಕೆ?
ಇತ್ತೀಚೆಗೆ ಹತ್ಯೆಯಾದ ರಾಹುಲ್​ ಭಟ್​ ಬಗ್ಗೆಯೂ ಟಿಆರ್​ಎಫ್​ ತನ್ನ ಸೋಷಿಯಲ್​ ಮೀಡಿಯಾ ಪೋಸ್ಟರ್​​ನಲ್ಲಿ ಉಲ್ಲೇಖ ಮಾಡಿದೆ. ರಾಹುಲ್​ ಭಟ್​ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೂ, ಆತ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಜತೆ ನೇರ ಸಂಪರ್ಕದಲ್ಲಿದ್ದ ಎಂಬ ಬಗ್ಗೆ ನಮ್ಮ ಗುಪ್ತಚರ ಸಿಬ್ಬಂದಿ ಮಾಹಿತಿ ನೀಡಿದ್ದರು. ಇನ್ನೊಬ್ಬ ಕಾಶ್ಮೀರಿ ಹಿಂದುವನ್ನು ಕೊಲ್ಲಲೂ ಇದೇ ಕಾರಣ ಎಂದು ಹೇಳಿದೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್​ 370 ಇನ್ನೆಂದೂ ಸ್ಥಾಪಿತವಾಗದು ಎಂದ ಗುಲಾಂ ನಬಿ ಆಜಾದ್​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Reliance Retail: ಚರ್ಮ ರಕ್ಷಣೆಯ ʼಅಕೈಂಡ್ʼ ಬ್ರಾಂಡ್‌ನ ಕ್ರೀಮ್‌ ಬಿಡುಗಡೆ

Reliance Retail: ರಿಲಯನ್ಸ್ ರೀಟೇಲ್‌ಗೆ ಸೇರಿದ ಸೌಂದರ್ಯ ರೀಟೇಲ್ ಪ್ಲಾಟ್‌ಫಾರ್ಮ್ ಟಿರಾ ಬುಧವಾರ ತನ್ನ ಚರ್ಮರಕ್ಷಣೆ ಬ್ರಾಂಡ್‌ ಆದ “ಅಕೈಂಡ್” (Akind) ಬಿಡುಗಡೆ ಘೋಷಣೆ ಮಾಡಿದೆ. ಮುಂಬೈನ ಜಿಯೋ ವರ್ಲ್ಡ್‌ ಡ್ರೈವ್‌ನಲ್ಲಿರುವ ಟಿರಾ ಮಳಿಗೆಯಲ್ಲಿ ಅಕೈಂಡ್ ಸಹ ಸಂಸ್ಥಾಪಕಿ ಮೀರಾ ಕಪೂರ್ ಅವರು ಅಕೈಂಡ್ ಅನ್ನು ಅನಾವರಣ ಮಾಡಿದರು.

VISTARANEWS.COM


on

Reliance Retail Tira unveils skin care brand Akind
Koo

ಮುಂಬೈ: ರಿಲಯನ್ಸ್ ರೀಟೇಲ್‌ಗೆ (Reliance Retail) ಸೇರಿದ ಸೌಂದರ್ಯ ರೀಟೇಲ್ ಪ್ಲಾಟ್‌ಫಾರ್ಮ್ ಟಿರಾ (Tira) ಬುಧವಾರ ತನ್ನ ಚರ್ಮರಕ್ಷಣೆ ಬ್ರಾಂಡ್ ಆದ “ಅಕೈಂಡ್” (Akind) ಬಿಡುಗಡೆ ಬಗ್ಗೆ ಘೋಷಣೆ ಮಾಡಿದೆ. ಮುಂಬೈನ ಜಿಯೋ ವರ್ಲ್ಡ್‌ ಡ್ರೈವ್‌ನಲ್ಲಿರುವ ಟಿರಾ ಮಳಿಗೆಯಲ್ಲಿ ಅಕೈಂಡ್ ಸಹ ಸಂಸ್ಥಾಪಕಿ ಮೀರಾ ಕಪೂರ್, ಅಕೈಂಡ್ ಅನ್ನು ಅನಾವರಣ ಮಾಡಿದರು.

ಚರ್ಮದ ಆರೈಕೆಗೆ ಅಕೈಂಡ್

ಪ್ರತಿ ವ್ಯಕ್ತಿಯೂ ತನ್ನ ಚರ್ಮದ ಆರೈಕೆ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಲೇಬೇಕಾಗುತ್ತದೆ. ಏಕೆಂದರೆ ವ್ಯಕ್ತಿಯಿಂದ ವ್ಯಕ್ತಿಗೆ ಚರ್ಮವು ವಿಭಿನ್ನ ಹಾಗೂ ವಿಶಿಷ್ಟವಾಗಿರುತ್ತದೆ. ವೈಯಕ್ತಿಕವಾಗಿ ಪ್ರತ್ಯೇಕ ಆರೈಕೆ ಮಾಡಬೇಕಾಗುತ್ತದೆ. ಈ ಸಂಗತಿ “ಅಕೈಂಡ್” ಅರ್ಥ ಮಾಡಿಕೊಳ್ಳುತ್ತದೆ. ಇನ್ನು ಪ್ರತಿ ವ್ಯಕ್ತಿಯ ಚರ್ಮದ ಅಗತ್ಯಗಳನ್ನು ಅರಿತು, ಆರೈಕೆಯನ್ನು ಸರಳಗೊಳಿಸಲಾಗುತ್ತದೆ. ಈ ನಿಶ್ಚಿತ ಗುರಿಯ ವಿಧಾನದ ಮೂಲಕವಾಗಿ ಈ ಬ್ರ್ಯಾಂಡ್ ಪ್ರತಿ ವ್ಯಕ್ತಿಯ ಚರ್ಮ ಕಾಳಜಿಯ ಗುರಿಯನ್ನು ಸಾಧಿಸಲು ಬಲ ತುಂಬುತ್ತದೆ. ಅಕೈಂಡ್‌ನಲ್ಲಿ ಇರುವಂಥ ಪ್ರತಿ ಸೂತ್ರವು ವಿಶಿಷ್ಟ ಉದ್ದೇಶವನ್ನು ಈಡೇರಿಸಿ, ಚರ್ಮದ ಆರೋಗ್ಯಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುತ್ತದೆ ಮತ್ತು ಅದು ಮೂರು ವರ್ಗಗಳ ಅಡಿಯಲ್ಲಿ ಬರುತ್ತದೆ.

3 ಹಂತಗಳಲ್ಲಿ ಚರ್ಮದ ರಕ್ಷಣೆ

ಬಿಲ್ಡ್, ಬ್ಯಾಲೆನ್ಸ್ ಹಾಗೂ ಡಿಫೆನ್ಸ್ ಹೀಗೆ ಮೂರು ಶ್ರೇಣಿಗಳಿವೆ. ಅದರಲ್ಲಿ ಮೊದಲನೆಯ ಶ್ರೇಣಿಯಾದ ಬಿಲ್ಡ್ ಚರ್ಮದ ಅಡೆತಡೆಗಳನ್ನು ನಿವಾರಿಸಿ, ಅದರ ಸಹಜ ಸ್ಥಿತಿಗೆ ತರುವ ಕಡೆಗೆ ಗಮನ ಕೇಂದ್ರೀಕರಿಸುತ್ತದೆ. ಇನ್ನು ಎರಡನೆಯ ಶ್ರೇಣಿ ಚರ್ಮದ ಅಡೆತಡೆಗಳನ್ನು ನಯವಾಗಿ ನಿರ್ವಹಿಸುತ್ತದೆ, ಯಥಾ ಸ್ಥಿತಿಯಲ್ಲಿ ಇರಿಸುತ್ತದೆ, ಅದರ ಫಲಿತವಾಗಿ ಆರೋಗ್ಯಪೂರ್ಣವಾಗಿ, ಹೊಳೆಯುವಂಥ ಚರ್ಮವನ್ನು ಕಾಪಾಡುತ್ತದೆ. ಇನ್ನು ಮೂರನೆಯ ಶ್ರೇಣಿಯು ಮಾಲಿನ್ಯ, ಜೀವನಶೈಲಿ ಸಂಗತಿಗಳು ಹಾಗೂ ಸೂರ್ಯನ ಕಿರಣದಿಂದ ಆಗುವಂಥ ಹಾನಿಯಿಂದ ತಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Glasses or Lenses?: ಕನ್ನಡಕವೋ ಕಾಂಟ್ಯಾಕ್ಟ್‌ ಲೆನ್ಸ್‌ ಬೇಕೋ? ಇದನ್ನು ಓದಿ, ನೀವೇ ನಿರ್ಧರಿಸಿ!

ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಇಶಾ ಅಂಬಾನಿ ಈ ಕುರಿತು ಮಾತನಾಡಿ, “ಟಿರಾದ ಮೊದಲ ಚರ್ಮ ಆರೈಕೆ ಬ್ರ್ಯಾಂಡ್ ಆದ ಅಕೈಂಡ್ ಅನ್ನು ಸ್ವಂತ ಬ್ರಾಂಡ್‌ಗಳ ಪೋರ್ಟ್‌ಫೋಲಿಯೊದಲ್ಲಿ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ಈಗ ಮಾಡಿರುವ ಉತ್ಪನ್ನದ ಬಿಡುಗಡೆಯು ಟಿರಾದ ಪಯಣದಲ್ಲಿ ಮಹತ್ವದ ಮೈಲುಗಲ್ಲು ಎನಿಸುತ್ತದೆ. ನಾವು ವಿಸ್ತರಿಸುವುದನ್ನು ಮತ್ತು ವಿಕಸನಗೊಳ್ಳುವುದನ್ನು ಮುಂದುವರಿಸಿದಂತೆ, ನಾವೀನ್ಯತೆ ಮತ್ತು ಉತ್ಕೃಷ್ಟತೆಗೆ ಬದ್ಧರಾಗಿರುತ್ತೇವೆ. ಪ್ರತಿ ಕೊಡುಗೆಯು ನಮ್ಮ ಗ್ರಾಹಕರ ಸೌಂದರ್ಯದ ಅನುಭವವನ್ನು ಹೆಚ್ಚಿಸುತ್ತದೆ ಎಂದು ಖಚಿತಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ.

ಅಕೈಂಡ್ ಸಹ-ಸಂಸ್ಥಾಪಕಿ ಮೀರಾ ಕಪೂರ್ ಮಾತನಾಡಿ, ಬಹಳ ಹಿಂದೆಯೇನೂ ಅಲ್ಲ, ನನ್ನದೇ ಚರ್ಮ ರಕ್ಷಣೆಯ ಬಗ್ಗೆ ಪ್ರಶ್ನೆ ಕೇಳಿಕೊಳ್ಳುತ್ತಾ ಚರ್ಮದ ರಕ್ಷಣೆಯ ಈ ಪ್ರಯಾಣವು ನಿಜವಾಗಿಯೂ ಪ್ರಾರಂಭವಾಯಿತು. ಅಕೈಂಡ್ ಶ್ರೇಣಿಯು ಎಚ್ಚರಿಕೆಯಿಂದ, ಪ್ರಯೋಗಗಳಿಂದ ಮತ್ತು ತಪ್ಪುಗಳಿಂದ ಹಾಗೂ ನಿರ್ದಿಷ್ಟ ಸಮಸ್ಯೆಗಳಿಗೆ ಉದ್ದೇಶಿತ ಪರಿಹಾರವಾಗಿ ಕಾರ್ಯನಿರ್ವಹಿಸುವ ಉನ್ನತ-ಪರಿಣಾಮಕಾರಿ ಪದಾರ್ಥಗಳ ಬಗ್ಗೆ ವ್ಯಾಪಕವಾದ ಸಂಶೋಧನೆಯೊಂದಿಗೆ ನಿಖರವಾಗಿ ರೂಪಿಸಲಾಗಿದೆ ಮತ್ತು ಕ್ಯುರೇಟೆಡ್‌ ಬ್ರ್ಯಾಂಡ್‌ಗಳ ಪಾಲಿ ಅಂತಿಮ ತಾಣದಂತೆ ಇರುವ ಟಿರಾ ಮೂಲಕ ನಾವು ತಲುಪುವುದಕ್ಕಿಂತ ಉತ್ತಮವಾದ ಮಾರ್ಗ ಯಾವುದಿದೆ. ಇದರಿಂದ ನಮ್ಮ ದೃಷ್ಟಿ ಹೆಚ್ಚು ವ್ಯಾಪಿಸುತ್ತದೆ ಹಾಗೂ ಉದ್ದೇಶವನ್ನು ಜೀವಂತ ಇರಿಸುತ್ತದೆ. ಅಕೈಂಡ್ ಜತೆಗೆ, ಹೇಗೆ ನನಗೆ ಅತ್ಯುತ್ತಮ ಚರ್ಮ ರಕ್ಷಣೆಯ ಮಾರ್ಗ ದೊರೆಯಿತೋ ಅದು ಎಲ್ಲರ ಜತೆಗೂ ಈ ಚರ್ಮರಕ್ಷಣೆ ಸಂತೋಷವನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಟಿರಾ ಟೂಲ್ಸ್ (Tira Tools) ಯಶಸ್ವಿ ಬಿಡುಗಡೆಯ ನಂತರ, ಖಾಸಗಿ ಲೇಬಲ್ ಅಡಿಯಲ್ಲಿ ಪ್ರೀಮಿಯಂ ಕ್ಯುರೇಟೆಡ್ ಸೌಂದರ್ಯ ಪರಿಕರಗಳು ಮತ್ತು ನೈಲ್ಸ್ ಅವರ್ ವೇ, ರೋಮಾಂಚಕ ಉಗುರು ಬಣ್ಣಗಳು ಮತ್ತು ಕಿಟ್‌ಗಳ ವಿಶೇಷ ಶ್ರೇಣಿಯ ಮೂಲಕವಾಗಿ ರಿಲಯನ್ಸ್ ರಿಟೇಲ್ ಲಿಮಿಟೆಡ್ (RRL) ತನ್ನ ನವೀನ ಕೊಡುಗೆಗಳನ್ನು ವಿಸ್ತರಿಸುವುದನ್ನು ಮುಂದುವರಿಸಿದೆ.

ಇದನ್ನೂ ಓದಿ: SSLC Examination 2 : 700ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಶುರು

ಅದರ ಮೊದಲ ಚರ್ಮರಕ್ಷಣೆ ಬ್ರಾಂಡ್‌ನ ಸೇರ್ಪಡೆ, ಅಕೈಂಡ್ ಸೌಂದರ್ಯ ಮತ್ತು ವೈಯಕ್ತಿಕ ಆರೈಕೆ ವಿಭಾಗಗಳಾದ್ಯಂತ ಗ್ರಾಹಕರಿಗೆ ಉತ್ತಮ-ಗುಣಮಟ್ಟದ, ವೈವಿಧ್ಯಮಯ ಮತ್ತು ಟ್ರೆಂಡ್-ಸೆಟ್ಟಿಂಗ್ ಉತ್ಪನ್ನಗಳನ್ನು ಒದಗಿಸುವ ಟಿರಾ ಬದ್ಧತೆಯನ್ನು ಒತ್ತಿ‌ ಹೇಳುತ್ತದೆ.

Continue Reading

ದೇಶ

Union Budget 2024: ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಯಾವಾಗ? ಇಲ್ಲಿದೆ ಬಿಗ್‌ ಅಪ್‌ಡೇಟ್‌

Union Budget 2024: ಜೂನ್‌ 24ರಿಂದ ಜುಲೈ 3ರವರೆಗೆ ಸಂಸತ್‌ ಅಧಿವೇಶನ ನಡೆಯಲಿದ್ದು, ಲೋಕಸಭೆ ಸ್ಪೀಕರ್‌ ಆಯ್ಕೆ, ನೂತನ ಸಂಸದರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಇದಾದ ನಂತರ ಅಂದರೆ, ಜುಲೈ ಮೂರನೇ ವಾರದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್‌ ಮಂಡನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

Union Budget 2024
Koo

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಸ್ಪಷ್ಟ ಬಹುಮತ ಸಾಧಿಸಿದ್ದು, ನರೇಂದ್ರ ಮೋದಿ (Narendra Modi) ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನು, ನೂತನ ಸರ್ಕಾರ ರಚನೆಯಾಗುತ್ತಲೇ ಮೊದಲ ಬಜೆಟ್‌ ಮಂಡನೆ (Union Budget 2024) ಮಾಡಲಾಗುತ್ತದೆ. ಅದರಂತೆ, ಜುಲೈ 15-21ರ ಅವಧಿಯಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.

ಒಂದು ವಾರದಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಹಣಕಾಸು ಸಚಿವಾಲಯದ ಅಧಿಕಾರಿಗಳು ಸೇರಿ ಹಲವರೊಂದಿಗೆ ಸಭೆ, ಸಮಾಲೋಚನೆ ನಡೆಸುವ ಮೂಲಕ ಬಜೆಟ್‌ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಲಿದ್ದಾರೆ. ಅಷ್ಟೇ ಅಲ್ಲ, ಜೂನ್‌ 22ರಂದು ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ 53ನೇ ಜಿಎಸ್‌ಟಿ ಸಮಿತಿ ಸಭೆ ನಡೆಯಲಿದ್ದು, ಅಧಿಕಾರಿಗಳ ಸಲಹೆ-ಸೂಚನೆಗಳನ್ನೂ ಸಚಿವೆ ಪಡೆಯಲಿದ್ದಾರೆ. ಬಜೆಟ್‌ ಮಂಡನೆ ದೃಷ್ಟಿಯಿಂದ ಜಿಎಸ್‌ಟಿ ಸಮಿತಿ ಸಭೆಯು ಕೂಡ ಪ್ರಾಮುಖ್ಯತೆ ಪಡೆದಿದೆ.

ನಿರ್ಮಲಾ ಸೀತಾರಾಮನ್‌ ಅವರು ಫೆಬ್ರವರಿ 1ರಂದು ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಕೊನೆಯ ಬಜೆಟ್‌ ಮಂಡಿಸಿದ್ದರು. ಇದು ಮಧ್ಯಂತರ ಬಜೆಟ್‌ ಆದ ಕಾರಣ ಮಹತ್ವದ ಘೋಷಣೆಗಳನ್ನು ಮಾಡಿರಲಿಲ್ಲ. ಆದರೆ, ನೂತನ ಸರ್ಕಾರ ರಚನೆಯಾಗಿದ್ದು, ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಾಗುತ್ತದೆ. ಉದ್ಯೋಗ ಸೃಷ್ಟಿ, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಕೊಡುಗೆ, ತೆರಿಗೆ ಹೊರೆ ಇಳಿಸುವುದು ಸೇರಿ ಹಲವು ಅಂಶಗಳು ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್‌ನ ಪ್ರಮುಖ ಅಂಶಗಳಾಗಿವೆ ಎಂದು ತಿಳಿದುಬಂದಿದೆ.

ಹೊಸ ದಾಖಲೆ ಬರೆಯಲಿದ್ದಾರೆ ನಿರ್ಮಲಾ

ನಿರ್ಮಲಾ ಸೀತಾರಾಮನ್‌ ಅವರು ಜುಲೈನಲ್ಲಿ ಪೂರ್ಣಪ್ರಮಾಣದ ಬಜೆಟ್‌ ಮಂಡಿಸಿದರೆ ಹೊಸ ದಾಖಲೆ ಬರೆಯಲಿದ್ದಾರೆ. ಇದುವರೆಗೆ ನಿರ್ಮಲಾ ಸೀತಾರಾಮನ್‌ ಅವರು ಹಣಕಾಸು ಸಚಿವೆಯಾಗಿ ಐದು ಪೂರ್ಣ ಪ್ರಮಾಣದ ಹಾಗೂ ಒಂದು ಮಧ್ಯಂತರ ಬಜೆಟ್‌ ಮಂಡಿಸಿದ್ದಾರೆ. ಈಗ ಏಳನೇ ಬಾರಿಗೆ ಬಜೆಟ್‌ ಮಂಡಿಸಿದರೆ, ದೇಶದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದ ಖ್ಯಾತಿಗೆ ಭಾಜನರಾಗಲಿದ್ದಾರೆ. ಮೊರಾರ್ಜಿ ದೇಸಾಯಿ ಅವರು ಆರು ಬಾರಿ ಬಜೆಟ್‌ ಮಂಡಿಸಿದ ದಾಖಲೆ ಮಾಡಿದ್ದಾರೆ. ಇದನ್ನು ನಿರ್ಮಲಾ ಸೀತಾರಾಮನ್‌ ಅವರು ಮುರಿಯಲಿದ್ದಾರೆ.

ಇದನ್ನೂ ಓದಿ: G7 Summit: ಮೂರನೇ ಬಾರಿ ಪ್ರಧಾನಿಯಾದ ಬಳಿಕ ಮೋದಿ ಮೊದಲ ವಿದೇಶ ಪ್ರವಾಸ; ಇಟಲಿಯ ಜಿ7 ಶೃಂಗಸಭೆಯಲ್ಲಿ ಭಾಗಿ

Continue Reading

ದೇಶ

Joshimath Teshil Now Jyotirmath: ಉತ್ತರಾಖಂಡದ ಜೋಶಿಮಠ ಈಗ ಜ್ಯೋತಿರ್ಮಠ!

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಕಳೆದ ವರ್ಷ ನಡೆದ ಕಾರ್ಯಕ್ರಮವೊಂದರಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಅವರು ಜೋಶಿಮಠ ತಹಸಿಲ್ (Joshimath Teshil Now Jyotirmath) ಅನ್ನು ಮರುನಾಮಕರಣ ಮಾಡುವುದಾಗಿ ಭರವಸೆ ನೀಡಿದ್ದರು. ಆ ಮಾತನ್ನು ಅವರು ಈಗ ಪೂರ್ಣಗೊಳಿಸಿದ್ದಾರೆ.

VISTARANEWS.COM


on

By

Joshimath Teshil Now Jyotirmath
Koo

ಉತ್ತರಾಖಂಡದ (Uttarakhand) ಚಮೋಲಿ (Chamoli) ಜಿಲ್ಲೆಯಲ್ಲಿರುವ ಜೋಶಿಮಠ ತಾಲೂಕು (Joshimath tehsil) ಅನ್ನು ‘ಜ್ಯೋತಿರ್ಮಠ’ (Joshimath Teshil Now Jyotirmath) ಎಂಬ ಹೊಸ ಹೆಸರಿನಿಂದ ಕರೆಯಲಾಗುವುದು ಎಂದು ಮುಖ್ಯಮಂತ್ರಿ (Chief Minister) ಪುಷ್ಕರ್ ಸಿಂಗ್ ಧಮಿ (Pushkar Singh Dhami) ಘೋಷಣೆ ಮಾಡಿದ್ದಾರೆ. ಜ್ಯೋತಿರ್ಮಠವು ಜೋಶಿಮಠದ ಪ್ರಾಚೀನ ಹೆಸರಾಗಿದೆ.

ತಹಸಿಲ್‌ನ ಹೆಸರು ಬದಲಾವಣೆ ಕುರಿತು ಉತ್ತರಾಖಂಡ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಯನ್ನು ಕೇಂದ್ರವು ಅನುಮೋದಿಸಿದೆ.

ಸ್ಥಳೀಯರಿಂದ ಸ್ವಾಗತ

ಜೋಶಿಮಠ ತಹಸಿಲ್ ಅನ್ನು ‘ಜ್ಯೋತಿರ್ಮಠ’ ಎಂದು ಹೆಸರು ಬದಲಾವಣೆ ಮಾಡಿರುವುದನ್ನು ಜೋಶಿಮಠದ ನಿವಾಸಿಗಳು ಸ್ವಾಗತಿಸಿದ್ದಾರೆ. ಯಾಕೆಂದರೆ ತಹಸಿಲ್ ಅನ್ನು ಅದರ ಮೂಲ ಹೆಸರಿಗೆ ಹಿಂತಿರುಗಿಸುವುದರಿಂದ ಅದರ ಪ್ರಾಚೀನ ಮೂಲವನ್ನು ಎತ್ತಿ ತೋರಿಸುತ್ತದೆ. ಮಾತ್ರವಲ್ಲದೆ ಅದರ ವಿಶಾಲವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಗೆ ಗೌರವ ಸಲ್ಲಿಸುತ್ತದೆ ಎಂದಿದ್ದಾರೆ.

ಕಳೆದ ವರ್ಷ ಚಮೋಲಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಹಸಿಲ್ ಅನ್ನು ಮರುನಾಮಕರಣ ಮಾಡುವ ಸರ್ಕಾರದ ನಿರ್ಣಯದ ಬಗ್ಗೆ ಸಾರ್ವಜನಿಕ ಪ್ರಕಟಣೆಯನ್ನು ಮಾಡಿದರು. ಆ ಮೂಲಕ ಅದರ ಐತಿಹಾಸಿಕ ವೈಭವವನ್ನು ಮರುಸ್ಥಾಪನೆಗೆ ಯೋಚಿಸಿರುವುದಾಗಿ ಹೇಳಿದ್ದರು.

ಬಹುಕಾಲದ ಬೇಡಿಕೆ

ಜೋಶಿ ಮಠದ ಸ್ಥಳೀಯರು ಬಹಳ ಹಿಂದಿನಿಂದಲೂ ಹೆಸರು ಬದಲಾವಣೆಗೆ ಒತ್ತಾಯಿಸುತ್ತಿದ್ದರು. ಜನರ ಭಾವನೆಗಳಿಗೆ ಸ್ಪಂದಿಸಿ ಧಾಮಿ ಸರ್ಕಾರ ತಹಸಿಲ್ ಹೆಸರನ್ನು ಮರುನಾಮಕರಣ ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಬುಧವಾರ ಅನುಮೋದನೆ ಪಡೆದಿದೆ.

ಇದನ್ನೂ ಓದಿ: Jagannath Temple: 4 ವರ್ಷದ ಬಳಿಕ ಜಗನ್ನಾಥ ದೇಗುಲದ ಬಾಗಿಲು ಓಪನ್;‌ ಇದಕ್ಕೂ ಬಿಜೆಪಿ ಪ್ರಣಾಳಿಕೆಗೂ ಇದೆ ಸಂಬಂಧ!


ಶಂಕರಾಚಾರ್ಯರಿಗೂ ಇದೆ ನಂಟು

8ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಈ ಕ್ಷೇತ್ರಕ್ಕೆ ಬಂದಿದ್ದರು ಎಂಬುದು ಸ್ಥಳೀಯರ ನಂಬಿಕೆ. ಅವರು ಅಮ6ರ ಕಲ್ಪ ವೃಕ್ಷದ ಕೆಳಗೆ ತಪಸ್ಸು ಕೈಗೊಂಡರು ಎಂದು ಹೇಳಲಾಗುತ್ತದೆ. ಇದರಿಂದಾಗಿ ದೈವಿಕ ಜ್ಞಾನೋದಯ ಮತ್ತು ಜ್ಞಾನವನ್ನು ಸಾಧಿಸಿದರು. ಈ ಸ್ಥಳವನ್ನು ಮೂಲತಃ ಜ್ಯೋತಿರ್ಮಠ ಎಂದು ಕರೆಯಲಾಗುತ್ತಿತ್ತು. ಆದರೆ ಕಾಲಾನಂತರದಲ್ಲಿ ಇದು ಜೋಶಿಮಠ ಎಂಬ ಬೇರೆ ಹೆಸರಿನಲ್ಲಿ ಜನಪ್ರಿಯತೆಯನ್ನು ಗಳಿಸಿತು.

ಜ್ಯೋತಿರ್ಮಠವು 6,150 ಅಡಿ ಅಂದರೆ ಸರಿಸುಮಾರು 1,875 ಮೀಟರ್ ಎತ್ತರದಲ್ಲಿದೆ. ಹಲವಾರು ಹಿಮಾಲಯ ಪರ್ವತಾರೋಹಣ, ಚಾರಣ ಮತ್ತು ಬದರಿನಾಥದಂತಹ ಯಾತ್ರಾ ಕೇಂದ್ರಗಳಿಗೆ ಇದು ಹೆಬ್ಬಾಗಿಲಾಗಿದೆ.

Continue Reading

ವಾಣಿಜ್ಯ

ATM Cash Withdrawal Fee: ಎಟಿಎಂ ನಗದು ಹಿಂಪಡೆಯುವಿಕೆ ಶುಲ್ಕ 21 ರೂ.ಗೆ ಏರಿಕೆ?

ಎಟಿಎಂ ಉದ್ಯಮದ ಒಕ್ಕೂಟ (ಸಿಎಟಿಎಂಐ) ವ್ಯವಹಾರಕ್ಕೆ ಹೆಚ್ಚಿನ ನಿಧಿಯನ್ನು ಪಡೆಯಲು ಎಟಿಎಂ ಆಪರೇಟರ್‌ಗಳು ಎಟಿಎಂಗಳಲ್ಲಿ ನಗದು ಹಿಂಪಡೆಯುವಿಕೆಯ ಮೇಲಿನ ಇಂಟರ್‌ಚೇಂಜ್ ಶುಲ್ಕವನ್ನು (ATM Cash Withdrawal Fee) ಪ್ರತಿ ವಹಿವಾಟಿಗೆ ಗರಿಷ್ಠ 23 ರೂ. ಹೆಚ್ಚಿಸಲು ಒತ್ತಾಯಿಸಿದೆ. ಇವರ ಬೇಡಿಕೆ ಏನು ಇತ್ಯಾದಿ ವಿವರ ಇಲ್ಲಿದೆ.

VISTARANEWS.COM


on

By

ATM Cash Withdrawal Fee
Koo

ಎಟಿಎಂನಲ್ಲಿ (ATM) ಇನ್ನು ಮುಂದೆ ಹಣ ಪಡೆಯುವ (Cash Withdrawal) ಮುನ್ನ ಯೋಚಿಸಿ. ಯಾಕೆಂದರೆ ಈಗಾಗಲೇ ಬ್ಯಾಂಕ್‌ಗಳು ವಿಧಿಸುತ್ತಿರುವ ಎಟಿಎಂ ಸೇವಾ ಶುಲ್ಕ (ATM Cash Withdrawal Fee) ಇನ್ನೂ ಹೆಚ್ಚಾಗಬಹುದು. ಎಟಿಎಂ ಆಪರೇಟರ್‌ಗಳು ನಗದು ಹಿಂಪಡೆಯುವಿಕೆಯ ಮೇಲಿನ ಶುಲ್ಕವನ್ನು ಹೆಚ್ಚಿಸಲು ಒತ್ತಾಯಿಸುತ್ತಿದ್ದು, ಈಗಾಗಲೇ ಇವರು ತಮ್ಮ ಮನವಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾಗೆ (NPCI) ಸಲ್ಲಿಸಿದ್ದಾರೆ.

ಎಟಿಎಂ ಉದ್ಯಮದ ಒಕ್ಕೂಟ (ಸಿಎಟಿಎಂಐ) ವ್ಯವಹಾರಕ್ಕೆ ಹೆಚ್ಚಿನ ನಿಧಿಯನ್ನು ಪಡೆಯಲು ಎಟಿಎಂ ಆಪರೇಟರ್‌ಗಳು ಎಟಿಎಂಗಳಲ್ಲಿ ನಗದು ಹಿಂಪಡೆಯುವಿಕೆಯ ಮೇಲಿನ ಇಂಟರ್‌ಚೇಂಜ್ ಶುಲ್ಕವನ್ನು ಪ್ರತಿ ವಹಿವಾಟಿಗೆ ಗರಿಷ್ಠ 23 ರೂ. ಹೆಚ್ಚಿಸಲು ಒತ್ತಾಯಿಸಿದೆ. ಎರಡು ವರ್ಷಗಳ ಹಿಂದೆ ಈ ವಿನಿಮಯ ದರವನ್ನು ಕೊನೆಯದಾಗಿ ಹೆಚ್ಚಿಸಲಾಗಿತ್ತು ಎಂದು ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸ್ಟಾನ್ಲಿ ಜಾನ್ಸನ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಈ ಕುರಿತು ಭಾರತೀಯ ರಿಸರ್ವ್ ಅನ್ನು ಸಂಪರ್ಕಿಸಲಾಗುತ್ತಿದೆ. ಅವರು ನಮ್ಮ ವಿನಂತಿಯನ್ನು ಬೆಂಬಲಿಸುವಂತೆ ತೋರುತ್ತಿದೆ. ಸಿಎಟಿಎಂಐ ಶುಲ್ಕವನ್ನು 21 ರೂ. ಗೆ ಏರಿಸಲು ಪ್ರಸ್ತಾಪಿಸಿದೆ. ಆದರೆ ಕೆಲವು ಎಟಿಎಂ ತಯಾರಕರು 23 ರೂ. ಗೆ ಹೆಚ್ಚಿಸುವಂತೆ ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು.


ಎಟಿಎಂ ವಹಿವಾಟಿನ ಇಂಟರ್ಚೇಂಜ್ ಶುಲ್ಕವನ್ನು ಕೊನೆಯದಾಗಿ 2021ರಲ್ಲಿ 15 ರಿಂದ 17ಕ್ಕೆ ಹೆಚ್ಚಿಸಲಾಗಿತ್ತು. ಹಿಂದಿನ ಬಾರಿ ಈ ಶುಲ್ಕ ಹೆಚ್ಚಳಕ್ಕೆ ಹಲವಾರು ವರ್ಷಗಳನ್ನು ತೆಗೆದುಕೊಂಡಿತು. ಆದರೆ ಈಗ ಎಲ್ಲರೂ ಇದಕ್ಕೆ ಹೊಂದಿಕೊಂಡಿದ್ದಾರೆ. ಶುಲ್ಕ ಹೆಚ್ಚಳಕ್ಕೆ ಇನ್ನು ಅನುಮೋದನೆ ಸಿಕ್ಕಿಲ್ಲ. ಶೀಘ್ರದಲ್ಲೇ ಸಿಗಬಹುದು ಎಂದು ಜಾನ್ಸನ್ ತಿಳಿಸಿದ್ದಾರೆ.

ಇದನ್ನೂ ಓದಿ: Money Guide: ಪಿಎಫ್‌ ಅಕೌಂಟ್‌ಗೆ ಹೊಸ ಮೊಬೈಲ್‌ ನಂಬರ್‌ ಸೇರಿಸಬೇಕೆ? ಜಸ್ಟ್‌ ಹೀಗೆ ಮಾಡಿ ಸಾಕು

ಇಂಟರ್‌ಚೇಂಜ್ ಶುಲ್ಕ ಎಂದರೇನು?

ಎಟಿಎಂ ಇಂಟರ್ ಚೇಂಚ್ ಶುಲ್ಕವು ಎಟಿಎಂ ಕಾರ್ಡ್ ಅನ್ನು ವಿತರಿಸುವ ಬ್ಯಾಂಕ್ (ವಿತರಕರು) ಪಾವತಿಸುವ ಶುಲ್ಕವಾಗಿದೆ. ಎಟಿಎಂ ಕಾರ್ಡ್ ಅನ್ನು ನಗದು ಹಿಂಪಡೆಯಲು ಬಳಸಲಾಗುತ್ತದೆ. ಇದು ಹೆಚ್ಚುವರಿಯಾಗಿ ಗ್ರಾಹಕರಿಗೆ ವಿಧಿಸಬಹುದಾದ ಶುಲ್ಕವಾಗಿದೆ. ಪ್ರಸ್ತುತ ಆರು ಪ್ರಮುಖ ನಗರಗಳಲ್ಲಿ ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಮುಂಬಯಿ ಮತ್ತು ನವದೆಹಲಿ ಬ್ಯಾಂಕ್‌ಗಳು ತಮ್ಮ ಉಳಿತಾಯ ಖಾತೆದಾರರಿಗೆ ತಿಂಗಳಿಗೆ ಕನಿಷ್ಠ ಐದು ಉಚಿತ ವಹಿವಾಟುಗಳನ್ನು ಹಾಗೂ ಇತರ ಬ್ಯಾಂಕ್‌ಗಳ ಎಟಿಎಂಗಳಲ್ಲಿ ತಿಂಗಳಿಗೆ ಮೂರು ಉಚಿತ ವಹಿವಾಟು ಸೌಲಭ್ಯವನ್ನು ಒದಗಿಸುತ್ತದೆ. ಬಳಿಕ ನಡೆಯುವ ಪ್ರತಿ ವಹಿವಾಟಿಗೆ ಶುಲ್ಕ ವಿಧಿಸಲಾಗುತ್ತದೆ.

Continue Reading
Advertisement
Actress Ramya
ಕರ್ನಾಟಕ39 mins ago

Actress Ramya: ಕಾನೂನಿಗಿಂತ ಯಾರೂ ದೊಡ್ಡೋರಲ್ಲ; ದರ್ಶನ್‌ಗೆ ಮತ್ತೆ ನಟಿ ರಮ್ಯಾ ಕ್ಲಾಸ್!

Namma Clinic
ಕರ್ನಾಟಕ40 mins ago

Namma Clinic: ಬಸ್‌ ನಿಲ್ದಾಣ ಸೇರಿದಂತೆ 254 ಕಡೆ ʼನಮ್ಮ ಕ್ಲಿನಿಕ್‌ʼ ಸ್ಥಾಪನೆ

Maruti Suzuki
ಆಟೋಮೊಬೈಲ್1 hour ago

Maruti Suzuki: ಮಾರುತಿ ಸುಜುಕಿ ಸಿಎನ್‌ಜಿ ವಾಹನದ ಟೀಸರ್ ಔಟ್‌; ಹಲವು ವೈಶಿಷ್ಟ್ಯಗಳ ನಿರೀಕ್ಷೆ

Reliance Retail Tira unveils skin care brand Akind
ದೇಶ2 hours ago

Reliance Retail: ಚರ್ಮ ರಕ್ಷಣೆಯ ʼಅಕೈಂಡ್ʼ ಬ್ರಾಂಡ್‌ನ ಕ್ರೀಮ್‌ ಬಿಡುಗಡೆ

Union Budget 2024
ದೇಶ2 hours ago

Union Budget 2024: ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಯಾವಾಗ? ಇಲ್ಲಿದೆ ಬಿಗ್‌ ಅಪ್‌ಡೇಟ್‌

AIDSO protest demanding investigation into corruption in NEET entrance exam
ರಾಯಚೂರು2 hours ago

Raichur News: ನೀಟ್ ಭ್ರಷ್ಟಾಚಾರದ ತನಿಖೆಗೆ ಆಗ್ರಹಿಸಿ ಮಾನ್ವಿಯಲ್ಲಿ ಎಐಡಿಎಸ್ಒ ಪ್ರತಿಭಟನೆ

Joshimath Teshil Now Jyotirmath
ದೇಶ2 hours ago

Joshimath Teshil Now Jyotirmath: ಉತ್ತರಾಖಂಡದ ಜೋಶಿಮಠ ಈಗ ಜ್ಯೋತಿರ್ಮಠ!

ATM Cash Withdrawal Fee
ವಾಣಿಜ್ಯ2 hours ago

ATM Cash Withdrawal Fee: ಎಟಿಎಂ ನಗದು ಹಿಂಪಡೆಯುವಿಕೆ ಶುಲ್ಕ 21 ರೂ.ಗೆ ಏರಿಕೆ?

Siddaramaiah
ಕರ್ನಾಟಕ3 hours ago

ಸರ್ಕಾರಿ ನೌಕರರಿಗೆ ನಿರಾಸೆ; ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗದ ಬಗ್ಗೆ ಯಾವುದೇ ನಿರ್ಣಯ ಇಲ್ಲ!

NEET UG Result 2024
ಶಿಕ್ಷಣ3 hours ago

NEET UG Result 2024: ಏನಿದು ನೀಟ್‌ ವಿವಾದ? ಗ್ರೇಸ್‌ ಅಂಕ ಕೊಟ್ಟಿದ್ಯಾಕೆ? ಮರು ಪರೀಕ್ಷೆ ಮಾಡೋದ್ಯಾಕೆ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ2 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ2 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ6 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ6 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌