Roger Federer | ಟೆನಿಸ್‌ ಕ್ಷೇತ್ರದ ಲೆಜೆಂಡ್‌ ಫೆಡರರ್‌ ಸೃಷ್ಟಿಸಿರುವ ಸಾಧನೆಯ ಮೈಲುಗಲ್ಲುಗಳು - Vistara News

ಕ್ರೀಡೆ

Roger Federer | ಟೆನಿಸ್‌ ಕ್ಷೇತ್ರದ ಲೆಜೆಂಡ್‌ ಫೆಡರರ್‌ ಸೃಷ್ಟಿಸಿರುವ ಸಾಧನೆಯ ಮೈಲುಗಲ್ಲುಗಳು

ಗುರುವಾರ ನಿವೃತ್ತಿ ಘೋಷಿಸಿದ ಸ್ವಿಜರ್ಲೆಂಡ್‌ನ ಟೆನಿಸ್‌ ತಾರೆ ರೋಜರ್‌ ಫೆಡರರ್‌(Roger Federer) ಹಲವು ದಾಖಲೆಗಳನ್ನು ಸೃಷ್ಟಿಸಿದ್ದು, ಅವುಗಳು ಇಂತಿವೆ…

VISTARANEWS.COM


on

roger federer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ : ಸ್ವಿಜರ್ಲೆಂಡ್‌ನ ಟೆನಿಸ್‌ ತಾರೆ ರೋಜರ್‌ ಫೆಡರರ್‌(Roger Federer) ಗುರುವಾರ (ಸೆಪ್ಟೆಂಬರ್‌ ೧೫) ವೃತ್ತಿ ಟೆನಿಸ್‌ಗೆ ವಿದಾಯ ಹೇಳಿದ್ದಾರೆ. ೪೧ ವರ್ಷದ ಹಿರಿಯ ಆಟಗಾರ ಸುದೀರ್ಘ ವಿದಾಯ ಪತ್ರದೊಂದಿಗೆ ಟೆನಿಸ್‌ ಅಂಗಣದಿಂದ ವಿಮುಖರಾಗುವ ಸುದ್ದಿಯನ್ನು ಪ್ರಕಟಿಸಿದ್ದಾರೆ. ೧೯ ವರ್ಷಗಳ ಕಾಲ ಅಂತಾರಾಷ್ಟ್ರೀಯ ಟೆನಿಸ್‌ ಕ್ಷೇತ್ರವನ್ನು ಆಳಿದ ಫೆಡರರ್‌ ಅವರ ಕೆಲವೊಂದು ಸಾಧನೆಗಳು ಇಲ್ಲಿವೆ.

  • ೨೦ ಗ್ರ್ಯಾನ್‌ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದು, ರಾಫೆಲ್‌ ನಡಾಲ್‌ (೨೨), ನೊವಾಕ್‌ ಜೊಕೊವಿಕ್‌ (೨೧) ಅವರಿಗಿಂತ ಹಿಂದಿದ್ದಾರೆ.
  • ಒಟ್ಟು ೧೦೩ ಪ್ರಶಸ್ತಿಗಳನ್ನು ಗೆದ್ದಿದ್ದು, ಆಧುನಿಕ ಯುಗದ ಟೆನಿಸ್‌ನಲ್ಲಿ ಅವರು ಈ ಸಾಧನೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಜಿಮ್ಮಿ ಕನ್ನೋರ್ಸ್‌ (೧೦೯) ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
  • ೧೨೫೧ ಸಿಂಗಲ್ಸ್‌ ಪಂದ್ಯಗಳನ್ನು ಗೆದ್ದಿದ್ದು, ಆಧುನಿಕ ಯುಗದ ಟೆನಿಸ್‌ನಲ್ಲಿ ಈ ಸಾಲಿನಲ್ಲೂ ದ್ವಿತೀಯ ಸ್ಥಾನ ಪಡೆದಿದ್ದಾರೆ. ಜಿಮ್ಮಿ ೧೨೭೪ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
  • ೨೩೭ ವಾರಗಳ ಕಾಲ ಅವರು ಸತತವಾಗಿ ಎಟಿಪಿ rank ಪಟ್ಟಿಯಲ್ಲಿ ನಂಬರ್‌ ಒನ್‌ ಸ್ಥಾನ ಪಡೆದುಕೊಂಡಿದ್ದರು.
  • ೩೬ ವರ್ಷ ೩೨೦ ದಿನಗಳಾಗಿದ್ದಾಗ ಅವರು (೨೦೧೮) ಎಟಿಪಿ ನಂಬರ್‌ ಒನ್‌ ಸ್ಥಾನ ಪಡೆದುಕೊಂಡಿದ್ದರು. ಈ ಮೂಲಕ ನಂಬರ್ ಒನ್‌ ಸ್ಥಾನ ಪಡೆದ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
  • ೮ ವಿಂಬಲ್ಡನ್‌ ಪ್ರಶಸ್ತಿ ಗೆಲ್ಲುವ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
  • ೨೦೧೭ರಲ್ಲಿ ವಿಂಬಲ್ಡನ್‌ ಆಡುವಾಗ ಫೆಡರರ್‌ಗೆ ೩೫ ವರ್ಷ ೩೪೨ ದಿನಗಳು. ಈ ಮೂಲಕ ವಿಂಬಲ್ಡನ್‌ನಲ್ಲಿ ಆಡಿದ ಪುರುಷರ ಸಿಂಗಲ್ಸ್‌ನ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
  • ೧೫೨೫ ಸಿಂಗಲ್ಸ್, ೨೨೩ ಡಬಲ್ಸ್‌ ಪಂದ್ಯಗಳನ್ನು ಆಡಿರುವ ಅವರು ಒಂದೇ ಒಂದು ಬಾರಿಯೂ ಪಂದ್ಯದ ನಡುವೆ ನಿವೃತ್ತಿ ಪಡೆದಿಲ್ಲ.
  • ಎರಡು ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಗಳನ್ನು ಸತತವಾಗಿ ಐದು ಬಾರಿಗೆ ಗೆದ್ದಿರುವ ಏಕೈಕ ಟೆನಿಸ್‌ ಅಟಗಾರ. ವಿಂಬಲ್ಡನ್‌ (೨೦೩ರಿಂದ ೨೦೦೭ ನಡುವೆ). ಯುಎಸ್‌ ಓಪನ್‌ (೨೦೦೪ರಿಂದ೨೦೦೮ರವರೆಗೆ).
  • ಸತತವಾಗಿ ೧೦ ಗ್ರ್ಯಾನ್‌ ಸ್ಲಾಮ್‌ ಟೂರ್ನಿಯ ಫೈನಲ್‌ಗೇರಿದ ಏಕೈಕ ಟೆನಿಸ್‌ ಆಟಗಾರ. ರೋಜರ್‌ ಒಟ್ಟಾರೆ ೩೧ ಫೈನಲ್‌ಗಳಲ್ಲಿ ಆಡಿದ್ದು, ನೊವಾಕ್ ಜೊಕೊವಿಕ್‌ (೩೨) ಅವರಿಗಿಂತ ಹಿಂದಿದ್ದಾರೆ.
  • ಮೂರು ಬಾರಿ ಒಂದೇ ಋತುವಿನ ಗ್ರ್ಯಾನ್‌ ಸ್ಲಾಮ್‌ ಟೂರ್ನಿಗಳಲ್ಲಿ ಫೈನಲ್‌ಗೇರಿದ ಏಕೈಕ ಟೆನಿಸ್‌ ಅಟಗಾರ (೨೦೦೬, ೨೦೦೭, ೨೦೦೯).
  • ಟೆನಿಸ್‌ನ ಹುಲ್ಲಿನಂಗಣದಲ್ಲಿ ಸುದೀರ್ಘ ೬೫ ಗೆಲುವಿನ ಸಾಧನೆ ಹಾಗೂ ೫೬ ವಾರಗಳ ಕಾಲ ಹಾರ್ಡ್‌ ಕೋರ್ಟ್‌ನಲ್ಲಿ ಸತತ ಗೆಲುವು ಸಾಧಿಸಿದ ಸಾರ್ವಕಾಲಿಕ ದಾಖಲೆ ಹೊಂದಿರುವ ಆಟಗಾರ.
  • ಆವೆಮಣ್ಣಿನ, ಹುಲ್ಲಿನಂಗಣ ಹಾಗೂ ಹಾರ್ಡ್‌ ಕೋರ್ಟ್‌ ಸೇರಿ ಮೂರೂ ಮಾದರಿಯ ಕೋರ್ಟ್‌ಗಳಲ್ಲಿ ೧೦ ಅಥವಾ ಅದಕ್ಕಿಂತ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿರುವ ಏಕೈಕ ಆಟಗಾರ
  • ಎಟಿಪಿ ಟೂರ್‌ನಲ್ಲಿ ಸತತವಾಗಿ ೨೪ ಫೈನಲ್‌ಗೇರಿದ ಆಟಗಾರ (೨೦೦೩-೦೫)
  • ಇಯರ್‌ ಎಂಡ್‌ ಟೂರ್‌ ನಲ್ಲಿ ಗರಿಷ್ಠ (೬) ಪ್ರಶಸ್ತಿಗಳನ್ನು ಗೆದ್ದಿರುವ ಸಾಧನೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Thomas Cup 2024: ಉಬೆರ್‌ ಕಪ್‌ ಬಳಿಕ ಥಾಮಸ್‌ ಕಪ್​ನಲ್ಲಿಯೂ ಮುಗ್ಗರಿಸಿದ ಭಾರತ

Thomas Cup 2024: ಪುರುಷರ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಪ್ರಣಯ್ 15-21 21-11 21-14 ತೀವ್ರ ಹೋರಾಟ ನಡೆಸಿದರೂ ಶಿ ಯು ಕಿ ವಿರುದ್ಧ ಸೋಲು ಕಂಡರು. ಆ ಬಳಿಕ ಆಡಿದ ಡಬಲ್ಸ್​ನಲ್ಲಿ ಬರವಸೆಯ ಜೋಡಿ ವಿಶ್ವ ನಂ.3 ಸಾತ್ವಿಕ್‌-ಚಿರಾಗ್‌ ಶೆಟ್ಟಿ 21-15 11-21 21-12 ಅಂತರದಿಂದ ಲಿಯಾಂಗ್ ವೀ ಕೆಂಗ್- ವಾಂಗ್ ಚಾಂಗ್ ಜೋಡಿ ವಿರುದ್ಧ ಸೋತರು.

VISTARANEWS.COM


on

Thomas Cup 2024
Koo

ಚೆಂಗ್ಡು(ಚೀನಾ): ಸತತ 2ನೇ ಬಾರಿ ಥಾಮಸ್‌ ಕಪ್‌(Thomas Cup 2024) ಗೆಲ್ಲುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದ ಭಾರತ ಪುರುಷರ ಬ್ಯಾಡ್ಮಿಂಟನ್​ ತಂಡ ಕ್ವಾರ್ಟರ್​ ಫೈನಲ್​ನಲ್ಲಿ ಚೀನಾ ವಿರುದ್ಧ 1-3 ಅಂತರದಲ್ಲಿ ಪರಾಭವಗೊಳ್ಳುವ ಮೂಲಕ ನಿರಾಸೆ ಮೂಡಿಸಿದೆ. ಇದಕ್ಕೂ ಮುನ್ನ ನಡೆದ ಉಬೆರ್‌ ಕಪ್‌(Uber Cup 2024) ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಮಹಿಳಾ ತಂಡ ಕೂಡ ಕ್ವಾರ್ಟರ್​ ಫೈನಲ್​ನಲ್ಲಿ ಸೋಲು ಕಂಡಿತ್ತು. ಉಭಯ ತಂಡಗಳು ಕೂಡ ಸೋಲು ಕಾಣುವ ಮೂಲಕ ಭಾರತದ ಪದಕ ನಿರೀಕ್ಷೆ ಹುಸಿಯಾಯಿತು.

ಪುರುಷರ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಪ್ರಣಯ್ 15-21 21-11 21-14 ತೀವ್ರ ಹೋರಾಟ ನಡೆಸಿದರೂ ಶಿ ಯು ಕಿ ವಿರುದ್ಧ ಸೋಲು ಕಂಡರು. ಆ ಬಳಿಕ ಆಡಿದ ಡಬಲ್ಸ್​ನಲ್ಲಿ ಬರವಸೆಯ ಜೋಡಿ ವಿಶ್ವ ನಂ.3 ಸಾತ್ವಿಕ್‌-ಚಿರಾಗ್‌ ಶೆಟ್ಟಿ 21-15 11-21 21-12 ಅಂತರದಿಂದ ಲಿಯಾಂಗ್ ವೀ ಕೆಂಗ್- ವಾಂಗ್ ಚಾಂಗ್ ಜೋಡಿ ವಿರುದ್ಧ ಸೋತರು. ಭಾರತಕ್ಕೆ ಗೆಲುವಿನ ಖಾತೆ ತೆರೆದದ್ದು ಲಕ್ಷ್ಯ ಸೇನ್‌ ಮಾತ್ರ. 2ನೇ ಸಿಂಗಲ್ಸ್​ನಲ್ಲಿ ಆಡಿದ ಸೇನ್ ಗೆಲುವು ಸಾಧಿಸಿ ಪಂದ್ಯವನ್ನು ಜೀವಂತವಿರಿಸಿದರು. ಆದರೆ 4ನೇ ಪಂದ್ಯದಲ್ಲಿ ಅರ್ಜುನ್‌-ಧ್ರುವ್‌ ಕಪಿಲಾ ಸೋಲುವುದರೊಂದಿಗೆ ಭಾರತ ಟೂರ್ನಿಯಿಂದ ಹೊರಬಿದ್ದಿತು. ಈ ಪಂದ್ಯದಲ್ಲಿ ಗೆಲ್ಲುತ್ತಿದ್ದರೆ 2-2 ಸಮಬಲ ಸಾಧಿಸಿ ಅಂತಿಮ ಹೋರಾಟಲ್ಲಿ ಗೆಲ್ಲುವ ಅವಕಾಶವಿತ್ತು.

ಮಹಿಳೆಯರಿಗೂ ಸೋಲು

ಉಬೆರ್‌ ಕಪ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಕ್ವಾರ್ಟರ್​ ಫೈನಲ್(Uber Cup 2024 Quarterfinal)​ ಪಂದ್ಯದಲ್ಲಿ ಭಾರತದ(India) ಮಹಿಳಾ ತಂಡ ಜಪಾನ್(Japan)​ ವಿರುದ್ಧ 3-0 ಅಂತರದ ಸೋಲು ಕಾಣುವ ಮೂಲಕ ತನ್ನ ಅಭಿಯಾನವನ್ನು ಅಂತ್ಯಗೊಳಿಸಿತು. ಭಾರತ 1957, 2014 ಮತ್ತು 2016ರಲ್ಲಿ ಮೂರು ಬಾರಿ ಉಬರ್ ಕಪ್‌ನಲ್ಲಿ ಸೆಮಿಫೈನಲ್ ತಲುಪಿತ್ತು.

ಮೊದಲ ಮಹಿಳಾ ಸಿಂಗಲ್ಸ್‌ನಲ್ಲಿ ಅಶ್ಮಿತಾ ಚಲಿಹಾ 10-21, 22-20, 15-21 ರಲ್ಲಿ ಅಯಾ ಒಹೊರಿ ವಿರುದ್ಧ ಸೋತರು. ಮೊದಲ ಗೇಮ್‌ನಲ್ಲಿ ಲಯ ಕಂಡುಕೊಳ್ಳಲು ಹರಸಾಹಸಪಟ್ಟ ಚಲಿಹಾ ಎರಡನೇ ಗೇಮ್​ನಲ್ಲಿ ತಿರುಗಿ ಬಿದ್ದು 22-20 ಅಂತರದಿಂದ ಕೈವಶ ಮಾಡಿಕೊಳ್ಳುವ ಮೂಲಕ ಸಮಬಲ ಸಾಧಿಸಿದರು. ಆದರೆ ನಿರ್ಣಾಯಕ ಗೇಮ್​ನಲ್ಲಿ ಸೋಲು ಕಂಡರು.

ಡಬಲ್ಸ್​ನಲ್ಲಿ ಕೆ.ಪ್ರಿಯಾ-ಶ್ರುತಿ ಮಿಶ್ರಾ ಜೋಡಿಯನ್ನು ನಮಿ ಮತ್ಸುಯಾಮಾ-ಚಿಹರು ಶಿದಾ ಸೇರಿಕೊಂಡು 8-21, 9-21 ನೇರ ಗೇಮ್​ಗಳಿಂದ ಹಿಮ್ಮೆಟ್ಟಿಸಿದರು. ದ್ವಿತೀಯ ಮಹಿಳಾ ಸಿಂಗಲ್ಸ್​ನಲ್ಲಿ ಇಶಾರಾಣಿ ಶಾರಾಣಿ ಬರುಹಾ ಅವರನ್ನು 15-21, 12-21 ನೇರ ಗೇಮ್​ಗಳ ಅಂತದಿಂದ 2017ರ ವಿಶ್ವ ಚಾಂಪಿಯನ್‌ ಜಪಾನಿನ ನೊಜೊಮಿ ಒಕುಹಾರ ಮಣಿಸಿದರು. ಈ ಸೋಲಿನೊಂದಿಗೆ ಭಾರತ ತಂಡದ ಸವಾಲು ಕೂಡ ಅತ್ಯಂಗೊಂಡಿತು.

Continue Reading

ಕ್ರಿಕೆಟ್

T20 World Cup 2024: ಟಿ20 ವಿಶ್ವಕಪ್​ನ ಅಧಿಕೃತ ಹಾಡು ಬಿಡುಗಡೆ; ಕುಣಿದು ಕುಪ್ಪಳಿಸಿದ ಕ್ರಿಸ್​ ಗೇಲ್​, ಉಸೇನ್‌ ಬೋಲ್ಟ್

T20 World Cup 2024: ಎಂಟು ಬಾರಿಯ ಒಲಂಪಿಕ್ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಟ್, ವೆಸ್ಟ್ ಇಂಡೀಸ್ ಕ್ರಿಕೆಟ್ ಐಕಾನ್‌ಗಳಾದ ಕ್ರಿಸ್ ಗೇಲ್, ಶಿವನಾರಾಯಣ್ ಚಂದ್ರಪಾಲ್ ಮತ್ತು ಮಹಿಳಾ ಆಟಗಾರ್ತಿ ಸ್ಟಾಫಾನಿ ಟೇಲರ್, ಅಮೆರಿಕದ ಬೌಲರ್ ಅಲಿ ಖಾನ್ ಸೇರಿದಂತೆ ಇತರ ಪ್ರಮುಖ ಕೆರಿಬಿಯನ್ ವ್ಯಕ್ತಿಗಳು ಈ ಗೀತೆಯಲ್ಲಿ ಕಾಣಿಸಿಕೊಂಡಿದ್ದಾರೆ.

VISTARANEWS.COM


on

T20 World Cup 2024
Koo

ನವದೆಹಲಿ: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಐಸಿಸಿ(ICC) ಪುರುಷರ ಟಿ20 ವಿಶ್ವಕಪ್​ ಟೂರ್ನಿ(T20 World Cup 2024) ಆರಂಭಕ್ಕೆ ಇನ್ನು ಕೇವಲ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಉಳಿದಿವೆ. ವಿಶ್ವಕಪ್​ ಪಂದ್ಯವಾವಳಿಗಳು ಜೂನ್​ 1ರಿಂದ ಆರಂಭವಾಗಿ ಜೂನ್​ 29ಕ್ಕೆ ಮುಕ್ತಾಯ ಕಾಣಲಿದೆ. ಒಟ್ಟು 55 ಪಂದ್ಯಗಳು ಇರಲಿದೆ. ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಐಸಿಸಿ ಪಂದ್ಯಾವಳಿಯ ಅಧಿಕೃತ ಗೀತೆಯನ್ನು ಅನಾವರಣಗೊಳಿಸಿದೆ.

ಗ್ರ್ಯಾಮಿ ಪ್ರಶಸ್ತಿ ವಿಜೇತ ಕಲಾವಿದ ಸೀನ್ ಪಾಲ್ ಮತ್ತು ಸೋಕಾ ಸೂಪರ್‌ಸ್ಟಾರ್ ಕೇಸ್ ಅವರು ‘ಔಟ್ ಆಫ್ ದಿಸ್ ವರ್ಲ್ಡ್’ ಎಂಬ ಶೀರ್ಷಿಕೆಯ ಗೀತೆಯನ್ನು ರಚಿಸಿದ್ದಾರೆ. ಇದು ಸಂಗೀತ ಮತ್ತು ಕ್ರೀಡೆಗಳೆರಡರಲ್ಲೂ ಕೆಲವು ಪ್ರಮುಖ ವ್ಯಕ್ತಿಗಳ ನಡುವಿನ ಸಹಯೋಗವನ್ನು ಇದು ಒಳಗೊಂಡಿದೆ. ಅಮೆರಿಕದ ಈ ಮೂರು ಕ್ರೀಡಾಂಗಣಗಳಲ್ಲಿ 16 ಪಂದ್ಯಗಳು ನಡೆಯಲಿದೆ. ಉಳಿದ 39 ಪಂದ್ಯಗಳಿಗೆ ವೆಸ್ಟ್ ಇಂಡೀಸ್ ಆತಿಥ್ಯ ವಹಿಸಿದೆ. 

ಎಂಟು ಬಾರಿಯ ಒಲಂಪಿಕ್ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಟ್, ವೆಸ್ಟ್ ಇಂಡೀಸ್ ಕ್ರಿಕೆಟ್ ಐಕಾನ್‌ಗಳಾದ ಕ್ರಿಸ್ ಗೇಲ್, ಶಿವನಾರಾಯಣ್ ಚಂದ್ರಪಾಲ್ ಮತ್ತು ಮಹಿಳಾ ಆಟಗಾರ್ತಿ ಸ್ಟಾಫಾನಿ ಟೇಲರ್, ಅಮೆರಿಕದ ಬೌಲರ್ ಅಲಿ ಖಾನ್ ಸೇರಿದಂತೆ ಇತರ ಪ್ರಮುಖ ಕೆರಿಬಿಯನ್ ವ್ಯಕ್ತಿಗಳು ಈ ಗೀತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬೀಚ್​ ಒಂದರಲ್ಲಿ ಟಿ20 ವಿಶ್ವಕಪ್​ ಎಂದು ಬರೆದಿರುವ ಚೆಂಡೊಂದು ಬಿದ್ದಿರುತ್ತದೆ. ಇದನ್ನು ಹೆಕ್ಕುವ ಮೂಲಕ ಗೀತೆ ಆರಂಭೊಂಡಿದೆ. ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ಜಾಸ್​ ಬಟ್ಲರ್​, ಗ್ಲೆನ್​ ಮ್ಯಾಕ್ಸ್​ವೆಲ್ ಅವರ ಕ್ರಿಕೆಟ್​ ಶಾಟ್​ಗಳ ಶೈಲಿಯಲ್ಲಿ ನೃತ್ಯ ಮಾಡಿದ್ದು ಕೂಡ ಈ ದೃಶ್ಯದಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ಗೆ ಪಾಕಿಸ್ತಾನ ತಂಡ ಪ್ರಕಟಿಸಲು ಹೆದರುತ್ತಿರುವುದಕ್ಕೆ ಇದುವೇ ಅಸಲಿ ಕಾರಣ

ಕ್ರಿಕೆಟ್ ಯಾವಾಗಲೂ ಕೆರಿಬಿಯನ್ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ಆದ್ದರಿಂದ ಟಿ20 ವಿಶ್ವಕಪ್‌ಗಾಗಿ ಅಧಿಕೃತ ಗೀತೆಯನ್ನು ಬರೆಯಲು ಮತ್ತು ರೆಕಾರ್ಡ್ ಮಾಡಲು ನನಗೆ ಗೌರವವಿದೆ. ಈ ಗೀತೆಗೆ ಸ್ಫೂರ್ತಿ ನೀಡಿದ ಸೃಜನಾತ್ಮಕ ಇನ್‌ಪುಟ್‌ನ ಸಂಪೂರ್ಣ ಸಿಬ್ಬಂದಿಗೆ ಗೌರವವು ಸಲ್ಲುತ್ತದೆ ಎಂದು ಸೋಕಾ ಸೂಪರ್‌ಸ್ಟಾರ್ ಕೆಸ್ ಹೇಳಿದ್ದಾರೆ.

ವಿಶ್ವಕಪ್​ಗೆ ಮುನ್ನ ಎಲ್ಲ 20 ತಂಡಗಳು ತಮ್ಮ ಆಗಮನಕ್ಕೆ ತಕ್ಕಂತೆ ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿವೆ. ಟೂರ್ನಿಯ ಲೀಗ್​ ಮತ್ತು ಸೂಪರ್​ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿ ಮತ್ತು ಫೈನಲ್​ ಫೈನಲ್​ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.

Continue Reading

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ಗೆ ಪಾಕಿಸ್ತಾನ ತಂಡ ಪ್ರಕಟಿಸಲು ಹೆದರುತ್ತಿರುವುದಕ್ಕೆ ಇದುವೇ ಅಸಲಿ ಕಾರಣ

T20 World Cup 2024: ಮೇ 24 ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಅಂತಿಮ ದಿನವಾಗಿದೆ. ಹೀಗಾಗಿ ಪಾಕ್​ ಇದೇ ದಿನ ತನ್ನ ತಂಡವನ್ನು ಪ್ರಕಟಿಸಲು ಯೋಜನೆಯೊಂದನ್ನು ಹಾಕಿಕೊಂಡಂತಿದೆ. ಆದರೆ ಮೇ 1 ತಂಡದ ಆಯ್ಕೆಗೆ ಅಂತಿಮ ದಿನವಾದ ಕಾರಣ ಐಸಿಸಿ ಇದಕ್ಕೆ ಅನುಮತಿ ನೀಡಲಿದೆಯೇ ಎಂದು ಕಾದು ನೋಡಬೇಕಿದೆ.

VISTARANEWS.COM


on

T20 World Cup 2024
Koo

ಕರಾಚಿ: ಮುಂಬರುವ ಟಿ20 ವಿಶ್ವಕಪ್​ಗೆ(T20 World Cup 2024) ಈಗಾಗಲೇ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್​, ನ್ಯೂಜಿಲ್ಯಾಂಡ್​ ಸೇರಿ ಹಲವು ದೇಶಗಳು ತಮ್ಮ ತಂಡವನ್ನು ಪ್ರಕಟಿಸಿದೆ. ತಂಡ ಪ್ರಕಟಿಸಲು ಮೇ 1 ಅಂತಿಮ ದಿನವಾಗಿದ್ದರೂ ಕೂಡ ಪಾಕ್​ ಇದುವರೆಗೆ ತಂಡವನ್ನು ಪ್ರಕಟಿಸಿಲ್ಲ. ಇದಕ್ಕೆ ಕಾರಣ ಏನೆಂಬುದು ತಿಳಿದು ಬಂದಿದೆ. ಹೌದು, ಕೆಲವು ಪ್ರಮುಖ ಆಟಗಾರರು ಫಿಟ್‌ನೆಸ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಮೇ 23 ಅಥವಾ 24ರ ವೇಳೆ ತಂಡವನ್ನು ಪ್ರಕಟಿಸುವುದು ಪಿಸಿಬಿ ಯೋಜನೆಯಾಗಿದೆ.

ಪ್ರಮುಖ ಟಿ20 ಆಟಗಾರರಾದ ಮೊಹಮ್ಮದ್‌ ರಿಜ್ವಾನ್‌, ಆಜಂ ಖಾನ್‌, ಇರ್ಫಾನ್‌ ಖಾನ್‌ ನಿಯಾಜಿ ಮತ್ತು ಹ್ಯಾರಿಸ್‌ ರೌಫ್ ಅವರು ಫಿಟ್‌ನೆಸ್‌ ಹೊಂದಿಲ್ಲ. ಹೀಗಾಗಿ ಇವರನ್ನು ಮುಂಬರುವ ಐರ್ಲೆಂಡ್‌, ಇಂಗ್ಲೆಂಡ್‌ ಸರಣಿಗಳಲ್ಲಿ ಆಡಿಸಿ ನೋಡುವುದು ಪಾಕ್​ನ ಉದ್ದೇಶವಾಗಿದೆ. ಮೇ 24 ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಅಂತಿಮ ದಿನವಾಗಿದೆ. ಹೀಗಾಗಿ ಪಾಕ್​ ಇದೇ ದಿನ ತನ್ನ ತಂಡವನ್ನು ಪ್ರಕಟಿಸಲು ಯೋಜನೆಯೊಂದನ್ನು ಹಾಕಿಕೊಂಡಂತಿದೆ. ಆದರೆ ಮೇ 1 ತಂಡದ ಆಯ್ಕೆಗೆ ಅಂತಿಮ ದಿನವಾದ ಕಾರಣ ಐಸಿಸಿ ಇದಕ್ಕೆ ಅನುಮತಿ ನೀಡಲಿದೆಯೇ ಎಂದು ಕಾದು ನೋಡಬೇಕಿದೆ.

ಭಾರತ ಮತ್ತು ಪಾಕಿಸ್ತಾನ ತಂಡಗಳು ಜೂನ್​ 9ರಂದು ನಡೆಯುವ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕಾಗಿ ಉಭಯ ದೇಶಗಳ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ನ್ಯೂಯಾರ್ಕ್​ನಲ್ಲಿ ತಾತ್ಕಾಲಿಕವಾಗಿ ತಲೆ ಎತ್ತಿದ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ(Nassau County International Cricket Stadium)ನಲ್ಲಿ ಇತ್ತಂಡಗಳ ನಡುವಣ ಪಂದ್ಯ ನಡೆಯಲಿದೆ.

34 ಸಾವಿರ ಪ್ರೇಕ್ಷಕರು ಕೂರುವಷ್ಟು ಸಾಮರ್ಥ್ಯದ ಸ್ಟೇಡಿಯಂ ಇದಾಗಿದ್ದು. ಭಾರತ-ಪಾಕ್​ ಪಂದ್ಯಕ್ಕಾಗಿಯೇ ಇದನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ಪಂದ್ಯದ ನಂತರ ಇದನ್ನು ಕೆಡವಲಾಗುತ್ತದೆ. ಎಂದು ತಿಳಿಸಲಾಗಿದೆ. ಭಾರತ ಮತ್ತು ಪಾಕ್​ ನಡುವಣ ಪಂದ್ಯ ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ T20 World Cup 2024: ಡ್ರಾಪ್ -ಇನ್ ಪಿಚ್ ಅಳವಡಿಕೆ ಕಾರ್ಯ ಆರಂಭಿಸಿದ ಐಸಿಸಿ

ನ್ಯೂಯಾರ್ಕ್ ಮತ್ತು ನವದೆಹಲಿ ನಡುವೆ 10.5 ಗಂಟೆಗಳ ಸಮಯದ ವ್ಯತ್ಯಾಸವಿರುವುದರಿಂದ, ಸಂಘಟಕರು ಕೆಲವು ಪಂದ್ಯಗಳನ್ನು, ವಿಶೇಷವಾಗಿ ಭಾರತವನ್ನು ಒಳಗೊಂಡ ಪಂದ್ಯಗಳನ್ನು ಬೆಳಗ್ಗೆ ಪ್ರಾರಂಭಿಸಲು ಒಪ್ಪಿಕೊಂಡಿದ್ದಾರೆ. ಇದು ಭಾರತೀಯ ದೂರದರ್ಶನ ಪ್ರೇಕ್ಷಕರಿಗೆ ತಮ್ಮ ಅನುಕೂಲದ ಸಮಯದಲ್ಲಿ ಪಂದ್ಯವನ್ನು ನೋಡಲು ಸಹಾಯ ಮಾಡಲಿದೆ. ಜೂನ್​ 9 ಕೂಡ ಭಾನುವಾರವಾಗಿದೆ. ಅಮೆರಿಕದಲ್ಲಿ ರಾತ್ರಿ ಪಂದ್ಯ ಆಯೋಜಿಸಿದರೆ, ಭಾರತದಲ್ಲಿ ಸೋಮವಾರ ಮುಂಜಾನೆ ಪಂದ್ಯ ಪ್ರಸಾರವಾಗುತ್ತದೆ. ಹೀಗಾಗಿ ಅಮೆರಿಕದಲ್ಲಿ ರಾತ್ರಿ ಪಂದ್ಯ ನಡೆಸುವುದಾದರೆ ಜೂನ್​ 8ರಂದೇ ನಡೆಯಲಿದೆ. ಆಗ ಭಾರತದಲ್ಲಿ ಭಾನುವಾರ ಬೆಳಗ್ಗೆ ಪಂದ್ಯ ಪ್ರಸಾರವಾಗಲಿದೆ.

Continue Reading

ಕ್ರೀಡೆ

IPL 2024 Points Table: ರೋಚಕ 1 ರನ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಹೈದರಾಬಾದ್​

IPL 2024 Points Table: ಹೈದರಾಬಾದ್​ ಗೆಲುವಿನಿಂದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ 1 ಸ್ಥಾನಗಳ ಕುಸಿತ ಕಂಡಿತು. ಇಂದು ನಡೆಯುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಕೆಕೆಆರ್​ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈ ಸೋತರೆ ಟೂರ್ನಿಯಿಂದ ಹೊರಬೀಳಲಿದೆ.

VISTARANEWS.COM


on

IPL 2024 Points Table
Koo

ಹೈದರಾಬಾದ್​: ಅತ್ಯಂತ ರೋಚಕವಾಗಿ ಸಾಗಿದ, ಕ್ರಿಕೆಟ್​ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸುವಂತೆ ಮಾಡಿದ ಸನ್​ರೈಸರ್ಸ್​ ಹೈದರಾಬಾದ್​ ಮತ್ತು ರಾಜಸ್ಥಾನ್​ ರಾಯಲ್ಸ್​ ನಡುವಿನ ಪಂದ್ಯದಲ್ಲಿ ಕೊನೆಗೂ ಹೈದರಾಬಾದ್​ ರೋಚಕ 1 ರನ್​ ಅಂತರದ ಗೆಲುವು ಸಾಧಿಸಿ ಮೆರೆದಾಡಿತು. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ(IPL 2024 Points Table) 4ನೇ ಸ್ಥಾನಕ್ಕೇರಿತು.

ಹೈದರಾಬಾದ್​ ಗೆಲುವಿನಿಂದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ 1 ಸ್ಥಾನಗಳ ಕುಸಿತ ಕಂಡಿತು. ಇಂದು ನಡೆಯುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಕೆಕೆಆರ್​ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈ ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಕೆಕೆಆರ್​ ಗೆದ್ದರೆ 14 ಅಂಕದೊಂದಿಗೆ 2ನೇ ಸ್ಥಾನದಲ್ಲೇ ಮುಂದುವರಿಯಲಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​98116 (+0.694)
ಕೆಕೆಆರ್​​96312 (+1.096)
ಲಕ್ನೋ​​106412 (+0.094)
ಹೈದರಾಬಾದ್​106512 (+0.072)
ಚೆನ್ನೈ​105510 (+0.627)
ಡೆಲ್ಲಿ115610 (-0.442)
ಪಂಜಾಬ್​10488 (-0.062)
ಗುಜರಾತ್​10468 (-1.113)
ಮುಂಬೈ10376 (-0.272)
ಆರ್​ಸಿಬಿ10376 (-0.415)

ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಎಸ್​ಆರ್​ಎಚ್​ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ಗೆ 201 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ರಾಜಸ್ಥಾನ್ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 7 ವಿಕೆಟ್​ಗೆ 200 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಕೊನೇ ಓವರ್​ನಲ್ಲಿ ರಾಯಲ್ಸ್ ತಂಡಕ್ಕೆ 13 ರನ್​ಗಳು ಬೇಕಾಗಿತ್ತು. ಪೊವೆಲ್​ ನಿಖರವಾಗಿ ರನ್​ ಗಳಿಸಿ ತಂಡವನ್ನು ಗೆಲುವಿನ ಹೊಸ್ತಿಲಲ್ಲಿ ತಂದು ನಿಲ್ಲಿಸಿದ್ದರು. ಆದರೆ, ಭುವನೇಶ್ವರ್ ಕುಮಾರ್​ ಲೊ ಪುಲ್​ಟಾಸ್​ ಹಾಕುವ ಮೂಲಕ ಪೊವೆಲ್ ಅವರನ್ನು ಎಲ್​ಬಿಡಬ್ಲ್ಯು ಬಲೆಗೆ ಕೆಡವಿದರು.

ಇದನ್ನೂ ಓದಿ IPL 2024 Points Table: ಚೆನ್ನೈ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಪಂಜಾಬ್​

ಮೊದಲು ಬ್ಯಾಟಿಂಗ್​ ನಡೆಸಿದ ಎಸ್​ಆರ್​​ಎಚ್​ ತಂಡ ಅಭಿಶೇಕ್​ ಶರ್ಮಾ ಅವರನ್ನು 12 ರನ್​ಗೆ ಕಳೆದುಕೊಂಡಿತು. ಈ ವೇಳೆ ತಂಡದ ಮೊತ್ತ 25 ಆಗಿತ್ತು. ನಂತರ ಬಂದ ಅನ್ಮೋಲ್ ಪ್ರೀತ್ ಸಿಂಗ್​ 5 ರನ್​ಗೆ ಔಟಾಗಿ ನಿರಾಸೆ ಮೂಡಿಸಿದರು. ಆ ಬಳಿಕ ಜತೆಯಾದ ನಿತೀಶ್​ ಕುಮಾರ್ ರೆಡ್ಡಿ ಅರಂಭಿಕ ಬ್ಯಾಟರ್​ ಟ್ರಾವಿಸ್​ ಹೆಡ್​ ಜತೆ ಉತ್ತಮವಾಗಿ ಬ್ಯಾಟ್ ಬೀಸಿದರು. ಅವರಿಬ್ಬರೂ ನಾಲ್ಕನೇ ವಿಕೆಟ್​ಗೆ 96 ರನ್ ಜತೆಯಾಟ ನೀಡಿದರು. ಹೆಡ್​ 58 ರನ್ ಬಾರಿಸಿದರೆ ನಿತೀಶ್​ 76 ರನ್ ಬಾರಿಸಿ ಅಜೇಯವಾಗಿ ಉಳಿದರು. ಕೊನೆಯಲ್ಲಿ ಹೆನ್ರಿಚ್ ಕ್ಲಾಸೆನ್​ 19 ಎಸೆತಕ್ಕೆ 42 ರನ್​ ಬಾರಿಸುವ ಮೂಲಕ ತಂಡದ ಮೊತ್ತವನ್ನು 200 ರ ಗಡಿ ದಾಟಿಸಲು ನೆರವಾದರು.

Continue Reading
Advertisement
Thomas Cup 2024
ಕ್ರೀಡೆ34 mins ago

Thomas Cup 2024: ಉಬೆರ್‌ ಕಪ್‌ ಬಳಿಕ ಥಾಮಸ್‌ ಕಪ್​ನಲ್ಲಿಯೂ ಮುಗ್ಗರಿಸಿದ ಭಾರತ

ACTOR DHANUSH Nagarjuna mysterious first look from Kubera
ಕಾಲಿವುಡ್36 mins ago

Actor Dhanush: ಧನುಷ್‌ ನಟನೆಯ ʻಕುಬೇರʼ ಸಿನಿಮಾದ ನಾಗಾರ್ಜುನ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌!

Viral News
ವೈರಲ್ ನ್ಯೂಸ್38 mins ago

Viral News: ಶಾಕಿಂಗ್‌ ವಿಡಿಯೊ; ಹಾವು ಕಚ್ಚಿದ್ದ ಯುವಕ ಗುಣಮುಖನಾಗಲೆಂದು ಗಂಗಾ ನದಿಯಲ್ಲಿ ನೇತಾಡಿಸಿದರು!

T20 World Cup 2024
ಕ್ರಿಕೆಟ್1 hour ago

T20 World Cup 2024: ಟಿ20 ವಿಶ್ವಕಪ್​ನ ಅಧಿಕೃತ ಹಾಡು ಬಿಡುಗಡೆ; ಕುಣಿದು ಕುಪ್ಪಳಿಸಿದ ಕ್ರಿಸ್​ ಗೇಲ್​, ಉಸೇನ್‌ ಬೋಲ್ಟ್

woman assault case haveri
ಕ್ರೈಂ1 hour ago

Assault Case: ಇನ್ನೊಂದು ವಂಟಮೂರಿ ಮಾದರಿ ಕೇಸ್‌, ಮಹಿಳೆಯನ್ನು ಕಂಬಕ್ಕೆ ಕಟ್ಟಿ ಥಳಿತ

West Bengal Governor
ದೇಶ1 hour ago

West Bengal Governor: ರಾಜ್ಯಪಾಲರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ; TMC ಆಕ್ರೋಶ

T20 World Cup 2024
ಕ್ರೀಡೆ2 hours ago

T20 World Cup 2024: ಟಿ20 ವಿಶ್ವಕಪ್​ಗೆ ಪಾಕಿಸ್ತಾನ ತಂಡ ಪ್ರಕಟಿಸಲು ಹೆದರುತ್ತಿರುವುದಕ್ಕೆ ಇದುವೇ ಅಸಲಿ ಕಾರಣ

Actor Darshan React about Kaatera 2
ಸ್ಯಾಂಡಲ್ ವುಡ್2 hours ago

Actor Darshan: ಗೆದ್ದ ಎತ್ತಿನ ಬಾಲ ಹಿಡಿಯಬಾರದು ಎಂದ ದರ್ಶನ್‌! ಕಾಟೇರ 2 ಬರತ್ತಾ?

KSET Exam 2023 provisional score list
ಪ್ರಮುಖ ಸುದ್ದಿ2 hours ago

KSET Exam 2023: ಉಪನ್ಯಾಸಕರ ಅರ್ಹತಾ ಪರೀಕ್ಷೆ ಕೆಸೆಟ್‌- 2023ರ ತಾತ್ಕಾಲಿಕ ಅಂಕಪಟ್ಟಿ ಪ್ರಕಟ

Amith Shah
Lok Sabha Election 20242 hours ago

Amit Shah: ಅಮಿತ್‌ ಶಾ ವಿಡಿಯೊ ತಿರುಚಿದ ಪ್ರಕರಣ; ಕಾಂಗ್ರೆಸ್ ಐಟಿ ಸೆಲ್‌ನ ಐವರು ಸದಸ್ಯರ ಬಂಧನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ16 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ1 day ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20245 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಟ್ರೆಂಡಿಂಗ್‌