ಪಿಎಫ್​ಐ ಆಯ್ತು, ಈಗ ಇನ್ನೊಂದು ಕಾರ್ಯಾಚರಣೆಗೆ ಇಳಿದ ಎನ್​ಐಎ; 3 ರಾಜ್ಯಗಳ, 50 ಸ್ಥಳಗಳಲ್ಲಿ ರೇಡ್​​ - Vistara News

ದೇಶ

ಪಿಎಫ್​ಐ ಆಯ್ತು, ಈಗ ಇನ್ನೊಂದು ಕಾರ್ಯಾಚರಣೆಗೆ ಇಳಿದ ಎನ್​ಐಎ; 3 ರಾಜ್ಯಗಳ, 50 ಸ್ಥಳಗಳಲ್ಲಿ ರೇಡ್​​

ಭಾರತದಿಂದ ಪಲಾಯನ ಮಾಡಿದ ಅನೇಕ ಪ್ರಮುಖ ಗ್ಯಾಂಗ್​ಸ್ಟರ್​ಗಳು ವಿದೇಶದಲ್ಲಿಯೇ ಕುಳಿತು, ಭಾರತದಲ್ಲಿ ಕ್ರಿಮಿನಲ್​ ಮತ್ತು ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

VISTARANEWS.COM


on

NIA raids in 3 states Over terrorists gangsters and drug smugglers Link
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಯೋತ್ಪಾದಕರು, ಗ್ಯಾಂಗ್​ಸ್ಟರ್​​ಗಳು ಮತ್ತು ಮಾದಕ ವಸ್ತು ಸಾಗಣೆದಾರರ ನಡುವೆ ಸಂಪರ್ಕ ಏರ್ಪಡುತ್ತಿದೆ ಎಂಬ ಆರೋಪದಡಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಎನ್​ಐಎ (ರಾಷ್ಟ್ರೀಯ ತನಿಖಾ ದಳ) ತನಿಖೆ ಪ್ರಾರಂಭಿಸಿದೆ. ಉಗ್ರರು, ಮಾದಕ ವಸ್ತುಗಳ ಕಳ್ಳ ಸಾಗಣೆದಾರರು ಮತ್ತು ದೇಶದೊಳಗಿನ ಗ್ಯಾಂಗ್​ಸ್ಟಾರ್​​ಗಳು ಪರಸ್ಪರ ಸಹಕಾರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪದ ತನಿಖೆಯ ಒಂದು ಭಾಗವಾಗಿ ರಾಷ್ಟ್ರೀಯ ತನಿಖಾ ದಳ ಇಂದು (ಅ.18) ಪಂಜಾಬ್​, ಹರ್ಯಾಣ ಮತ್ತು ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಶೋಧಕಾರ್ಯ ನಡೆಸಿದೆ. ಪ್ರಮುಖ ಗ್ಯಾಂಗ್​ಸ್ಟರ್​ಗಳ ನಿವಾಸಗಳು ಸೇರಿ ಸುಮಾರು 50 ಸ್ಥಳಗಳಲ್ಲಿ ಇಂದು ಎನ್​ಐಎ ರೇಡ್​ ನಡೆದಿದೆ.

ದೇಶದ-ವಿದೇಶಗಳಲ್ಲಿರುವ ಕೆಲವು ಅತ್ಯಂತ ಅಪಾಯಕಾರಿ ಗ್ಯಾಂಗ್​​ಗಳ ಪ್ರಮುಖ ನಾಯಕರು, ಅವರ ಸಹಚರರು ಭಾರತದಲ್ಲಿ ಉಗ್ರ ಮತ್ತು ಕ್ರಿಮಿನಲ್​ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬ ಕೇಸ್​ ದೆಹಲಿ ಪೊಲೀಸ್​ ಠಾಣೆಗಳಲ್ಲಿ ದಾಖಲಾಗಿತ್ತು. ಆ ಸಂಬಂಧ ದೃಢವಾದ ಮಾಹಿತಿ ಸಿಗುವ ಜತೆಗೆ, ಪೂರಕವಾದ ಸಾಕ್ಷಿಗಳೂ ದೊರೆತ ಹಿನ್ನೆಲೆಯಲ್ಲಿ ಈ ಪ್ರಕರಣ​ ದೆಹಲಿ ಪೊಲೀಸರಿಂದ ಎನ್​ಐಎಗೆ ಹಸ್ತಾಂತರಗೊಂಡಿತ್ತು. ಅದರ ಮೊದಲ ಹಂತವಾಗಿ ಸೆ.12ರಂದು ಎನ್​ಐಎ ಪಂಜಾಬ್​, ಹರ್ಯಾಣ, ರಾಜಸ್ಥಾನ ಮತ್ತು ದೆಹಲಿಗಳಲ್ಲಿ ರೇಡ್​ ಮಾಡಿತ್ತು. ಪಂಜಾಬ್ ಗಾಯಕ ಸಿಧು ಮೂಸೆವಾಲಾ ಹಂತಕರ ವಿರುದ್ಧವೂ ಹೆಚ್ಚಿನ ತನಿಖೆ ಪ್ರಾರಂಭವಾಗಿದೆ.

‘ಭಾರತದಿಂದ ಓಡಿ ಹೋಗಿ ಪಾಕಿಸ್ತಾನ, ಕೆನಡಾ, ಮಲೇಷಿಯಾ, ಆಸ್ಟ್ರೇಲಿಯಾ ಮತ್ತು ಇತರ ದೇಶಗಳಲ್ಲಿ ನೆಲೆಸಿರುವ ದೊಡ್ಡದೊಡ್ಡ ಗ್ಯಾಂಗ್​ಸ್ಟರ್​​ಗಳು, ಇಲ್ಲಿರುವವರ ಜತೆ ಸೇರಿ ಕ್ರಿಮಿನಲ್​, ಉಗ್ರ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಹೇಳಿರುವ ಎನ್​ಐಎ, ‘ಇಂದಿನ ರೇಡ್​​ನಲ್ಲಿ ಆರು ಪಿಸ್ತೂಲ್​​ಗಳು, ಒಂದು ರಿವಾಲ್ವರ್​, ಶಾಟ್​ಗನ್​, ಮಾದಕ ವಸ್ತುಗಳು, ನಗದು, ಡಿಜಿಟಲ್​ ಉಪಕರಣಗಳು, ಬೇನಾಮಿ ಆಸ್ತಿ ಇರುವ ಬಗ್ಗೆ ಕಾಗದಪತ್ರಗಳು, ಬೆದರಿಕೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಎನ್​ಐಎ ಮಾಹಿತಿ ನೀಡಿದೆ.

ಇದನ್ನೂ ಓದಿ:ಎನ್‌ಐಎ, ಪೊಲೀಸ್‌ ದಾಳಿಗೆ ಅಡ್ಡಿಪಡಿಸಿದ್ದೇ ಬಂಧನಕ್ಕೆ ಕಾರಣ: ಗೃಹ ಸಚಿವ ಆರಗ ಜ್ಞಾನೇಂದ್ರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Prashant Kishor: 3ನೇ ಅವಧಿಯ ಮೋದಿ ಸರ್ಕಾರದಿಂದ ಈ 4 ಕ್ರಾಂತಿಕಾರಕ ಬದಲಾವಣೆ; ಪ್ರಶಾಂತ್‌ ಕಿಶೋರ್‌ ಭವಿಷ್ಯ

Prashant Kishor: ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ಗದ್ದುಗೆ ಏರುವುದು ಖಚಿತ. ಆದರೆ ಮೂರನೇ ಬಾರಿಯ ಆಡಳಿತದಲ್ಲಿ ಕನಿಷ್ಠ ನಾಲ್ಕು ಬದಲಾವಣೆಗಳನ್ನೂ ಪ್ರಧಾನಿ ಮೋದಿ ತಂದೇ ತರುತ್ತಾರೆ. ಭ್ರಷ್ಟಾಚಾರ ನಿಗ್ರಹಕ್ಕೆ ಹೆಚ್ಚಿನ ಒತ್ತು ನೀಡುವ ಮೋದಿ ಸರ್ಕಾರ, ರಚನಾತ್ಮಕ ಮತ್ತು ಕಾರ್ಯಾತ್ಮಕ ಬದಲಾವಣೆಗಳನ್ನು ತರಲಿದೆ ಎಂದು ಹೇಳಿದ್ದಾರೆ.

VISTARANEWS.COM


on

Prashant Kishor
Koo

ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024) ಫಲಿತಾಂಶದ ಬಗ್ಗೆ ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಚುನಾವಣೆ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ (Prashant Kishor) ಅವರು ಇದೀಗ ಮತ್ತೆ ಪ್ರಧಾನಿ ನರೇಂದ್ರ ಮೋದಿಯವರ ಮೂವನೆ ಅವಧಿ ಆಡಳಿತದ ಬಗ್ಗೆ ಮಾತನಾಡಿದ್ದಾರೆ. ಮೂರನೇ ಅವಧಿಯ ಮೋದಿ ಸರ್ಕಾರದಲ್ಲಿ ಒಟ್ಟು ನಾಲ್ಕು ಬದಲಾವಣೆಗಳಾಗಲಿವೆ ಎಂದು ಹೇಳಿಕೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ಗದ್ದುಗೆ ಏರುವುದು ಖಚಿತ. ಆದರೆ ಮೂರನೇ ಬಾರಿಯ ಆಡಳಿತದಲ್ಲಿ ಕನಿಷ್ಠ ನಾಲ್ಕು ಬದಲಾವಣೆಗಳನ್ನೂ ಪ್ರಧಾನಿ ಮೋದಿ ತಂದೇ ತರುತ್ತಾರೆ. ಭ್ರಷ್ಟಾಚಾರ ನಿಗ್ರಹಕ್ಕೆ ಹೆಚ್ಚಿನ ಒತ್ತು ನೀಡುವ ಮೋದಿ ಸರ್ಕಾರ, ರಚನಾತ್ಮಕ ಮತ್ತು ಕಾರ್ಯಾತ್ಮಕ ಬದಲಾವಣೆಗಳನ್ನು ತರಲಿದೆ ಎಂದು ಹೇಳಿದ್ದಾರೆ.

ನನ್ನ ಊಹೆಯ ಪ್ರಕಾರ ಪ್ರಧಾನಿ ಮೋದಿ ನೇತೃತ್ವದ 3.0 ಸರ್ಕಾರ ಬಹಳಷ್ಟು ಸದ್ದು ಮಾಡಲಿದೆ. ಕೇಂದ್ರದಲ್ಲಿ ಅಧಿಕಾರ ಮತ್ತು ಸಂಪನ್ಮೂಲ ಎರಡಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತದೆ. ರಾಜ್ಯಗಳ ಆರ್ಥಿಕ ಸ್ವಾವಲಂಬನೆಯನ್ನು ಮೊಟಕುಗೊಳಿಸುವ ಸಾಧ್ಯತೆ ಇದೆ. ಅಲ್ಲದೇ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ಅಡಿಯಲ್ಲಿ ತಂದರೂ ಅಚ್ಚರಿ ಇಲ್ಲ ಎಂದು ಹೇಳುವ ಮೂಲಕ ಶಾಕ್‌ ಕೊಟ್ಟಿದ್ದಾರೆ.

ಪ್ರಸ್ತುತ ಪೆಟ್ರೋಲ್‌, ಡೀಸೆಲ್‌, ATF ಮತ್ತು ನೈಸರ್ಗಿಕ ಅನಿಲಗಳು ಜಿಎಸ್‌ಟಿ ಅಡಿಯಲ್ಲಿ ಬರುತ್ತಿರಲಿಲ್ಲ. ಅವುಗಳಿಗೆ ವ್ಯಾಟ್‌, ಕೇಂದ್ರ ತೆರಿಗೆ ಮತ್ತು ಅಬಕಾರಿ ಟ್ಯಾಕ್ಸ್‌ ವಿಧಿಸಲಾಗುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿಯಡಿಯಲ್ಲಿ ತರಬೇಕೆಂಬುದು ಕೈಗಾರಿಕೆಗಳ ಬಹುದಿನದ ಬೇಡಿಕೆ ಆಗಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ಬಾರಿ ಈ ಬೇಡಿಕೆ ಪೂರೈಸುವ ಸಾಧ್ಯತೆ ಇದ್ದು, ಇದರಿಂದ ರಾಜ್ಯ ಸರ್ಕಾರಗಳ ಆದಾಯಕ್ಕೆ ಬಹುದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇದೆ. ಅದೂ ಅಲ್ಲದೇ ಈ ನೀತಿಯಿಂದ ಕೇಂದ್ರದ ಮೇಲೆ ರಾಜ್ಯ ಸರ್ಕಾರಗಳು ಇನ್ನು ಹೆಚ್ಚಾಗಿ ಅವಲಂಬನೆ ಆಗುವ ಸಾಧ್ಯತೆ ಇದೆ.

ಇನ್ನು ಕೇಂದ್ರವು ಸಂಪನ್ಮೂಲಗಳ ವಿಕೇಂದ್ರೀಕರಣವನ್ನು ವಿಳಂಬಗೊಳಿಸಬಹುದು ಮತ್ತು ರಾಜ್ಯಗಳ ಬಜೆಟ್ ಸಾಲವನ್ನು ಕಠಿಣಗೊಳಿಸಬಹುದು ಎಂದು ಕಿಶೋರ್ ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಜಾಗತಿಕ ಮಟ್ಟದಲ್ಲಿ, ದೇಶಗಳೊಂದಿಗೆ ವ್ಯವಹರಿಸುವಾಗ ಭಾರತದ ದೃಢತೆ ಹೆಚ್ಚಾಗುತ್ತದೆ ಅವರು ಹೇಳಿದರು.

ನಿನ್ನೆ ಪತ್ರಕರ್ತೆ ಬರ್ಖಾ ದತ್‌ ಜೊತೆ ಮಾತನಾಡಿದ್ದ ಪ್ರಶಾಂತ್‌ ಕಿಶೋರ್‌, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮೇಲೆ ಜನ ಸಿಟ್ಟಾಗಿದ್ದಾರೆ ಎಂಬುದು ಎಲ್ಲೂ ಕೇಳಿಲ್ಲ, ನೋಡಿಲ್ಲ. ಹಾಗಾಗಿ, ಅವರೇ ಪ್ರಧಾನಿಯಾಗುವುದು ನಿಶ್ಚಿತ ಎಂದಿದ್ದರು. ಅಲ್ಲದೇ ದೇಶದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಂತಹ ಅಲೆ ಇಲ್ಲ. ನರೇಂದ್ರ ಮೋದಿ ಅವರ ಬಗ್ಗೆ ಜನರಿಗೆ ಈಗಲೂ ವಿಶ್ವಾಸವಿದೆ. ಜನರು ಮೋದಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರಬಹುದು, ಒಂದಷ್ಟು ಭರವಸೆಗಳು ಈಡೇರಿದೆ ಇರಬಹುದು. ಆದರೆ, ಮೋದಿ ಜನರಿಗೆ ಖಂಡಿತವಾಗಿಯೂ ಸಿಟ್ಟಿಲ್ಲ ಎಂದಿದ್ದರು.

ಇದನ್ನೂ ಓದಿ:Drone Prathap: ಡಿಫರೆಂಟ್‌ ಆಗಿ ಬರ್ತ್‌ಡೇ ಸೆಲೆಬ್ರೇಷನ್‌ಗೆ ಡ್ರೋನ್ ಪ್ರತಾಪ್ ಪ್ಲ್ಯಾನ್‌: ವೋಟ್‌ ಹಾಕಿದ್ದು ಸಾರ್ಥಕ ಅಂದ್ರು ಫ್ಯಾನ್ಸ್‌!

ಇನ್ನು ಬಿಜೆಪಿ ಸ್ಪಷ್ಟ ಬಹುಮತ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ʼʼಈ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ತಮ ಪ್ರದರ್ಶನ ತೋರಲಿದೆ. ಜತೆಗೆ ಸೀಟುಗಳ ಸಂಖ್ಯೆಯನ್ನೂ ವೃದ್ಧಿಸಿಕೊಳ್ಳಲಿದೆ. ಅದರಲ್ಲಿಯೂ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಬಿಜೆಪಿ ಇನ್ನಷ್ಟು ಶಕ್ತವಾಗಲಿದೆ. ಅಲ್ಲದೆ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿಯೂ ಸೀಟು ಹೆಚ್ಚಳವಾಗುವ ನಿರೀಕ್ಷೆ ಇದೆʼʼ ಎಂದು ಅಭಿಪ್ರಾಯಪಟ್ಟಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ರಸ್ತೆ ಜಗಳದಿಂದ ತಪ್ಪಿಸಿಕೊಳ್ಳುವುದು ಹೇಗೆ? ಬೆಂಗಳೂರು ಪೊಲೀಸರ ವಿಡಿಯೊ ಪಾಠ ಇಲ್ಲಿದೆ!

ಬೆಂಗಳೂರು ರಸ್ತೆಗಳಲ್ಲಿ ಗುಂಡಿಗಳು ಸಾಮಾನ್ಯ, ಅಂತೆಯೇ ಜಗಳಗಳು. ಇದು ಕೆಲವೊಮ್ಮೆ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗುವುದಿದೆ. ಇದನ್ನು ತಪ್ಪಿಸಲು ಬೆಂಗಳೂರು ಪೊಲೀಸರು ಕೆಲವೊಂದು ಸಲಹೆಗಳನ್ನು ನೀಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ (Viral Video) ಭಾರೀ ವೈರಲ್ ಆಗಿದೆ.

VISTARANEWS.COM


on

By

Viral Video
Koo

ಸಣ್ಣಪುಟ್ಟ ಘಟನೆಗಳು ರಸ್ತೆಯಲ್ಲಿ (road) ಕೆಲವೊಮ್ಮೆ ವಾಹನ (vehicle) ಸವಾರರ ನಡುವೆ ಜಗಳಕ್ಕೆ ಕಾರಣವಾಗುತ್ತಿದೆ. ಇತ್ತೀಚೆಗೆ ಇಂತಹ ಮಾತಿನ ಚಕಮಕಿಯ ಘಟನೆಗಳು ಸಾಮಾನ್ಯವಾಗಿದೆ. ಕೆಲವೊಮ್ಮೆ ಇಂತಹ ಘಟನೆಗಳು ಮಾರಾಮಾರಿಗೂ (physical fights) ಕಾರಣವಾಗಿ, ವಾಹನಗಳಿಗೆ ಹಾನಿ, ವ್ಯಕ್ತಿಗಳಿಗೆ ಗಾಯವನ್ನು ಉಂಟು ಮಾಡುತ್ತದೆ. ಕೊಲೆ ನಡೆದಿದ್ದೂ ಇದೆ.

ಹೆಚ್ಚುತ್ತಿರುವ ಇಂತಹ ಪ್ರಕರಣಗಳ ನಡುವೆ ಬೆಂಗಳೂರು ಪೊಲೀಸರು (bengaluru police) ಈ ರೀತಿಯ ಘಟನೆಗಳನ್ನು ಹೇಗೆ ಎದುರಿಸಬೇಕು ಎಂದು ಸಾಮಾಜಿಕ ಜಾಲತಾಣದ (Viral Video) ಮೂಲಕ ಸಾರ್ವಜನಿಕರಿಗೆ ಉಪಯುಕ್ತ ಸಲಹೆ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೊಲೀಸ್ ಇಲಾಖೆ ಜಾಗೃತಿ ವಿಡಿಯೋವನ್ನು ಹಂಚಿಕೊಂಡಿದ್ದು, ಈ ರೀತಿಯ ಸಂದರ್ಭಗಳನ್ನು ಎದುರಿಸುವಾಗ ನಾವು ಶಾಂತವಾಗಿರುವುದು ಬಹಳ ಮುಖ್ಯ ಎಂದಿದ್ದಾರೆ. ಈ ವಿಡಿಯೋ ಕ್ಲಿಪ್ ಪ್ರಯಾಣಿಕರ ನಡುವಿನ ಜಗಳದಿಂದ ಪ್ರಾರಂಭವಾಗುತ್ತದೆ. ಇದು ಹಲವಾರು ಅಂಶಗಳನ್ನು ಒಳಗೊಂಡಿದೆ. ಇದೇ ರೀತಿಯ ಸಂದರ್ಭಗಳು ಬಂದರೆ ಪ್ರಯಾಣಿಕರು ಏನು ಮಾಡಬೇಕೆಂಬ ಕುರಿತು ಮಾರ್ಗದರ್ಶನ ನೀಡುತ್ತದೆ.

ರಸ್ತೆಯಲ್ಲಿ ವಾಹನ ಓಡಿಸುವಾಗ ಸುರಕ್ಷತೆ ಮೊದಲನೆಯದು. ಕೆಲವೊಂದು ಘಟನೆಗಳು ನಮಗೆ ಸಿಟ್ಟು ತರಿಸಬಹುದು. ಆದರೆ ಪರಿಸ್ಥಿತಿಗಳನ್ನು ಹೇಗೆ ಸುರಕ್ಷಿತವಾಗಿ ನಿರ್ವಹಿಸುವುದು ಎಂಬುದರ ಕುರಿತು ಪ್ರಾಯೋಗಿಕ ಸಲಹೆಗಳಿಗಾಗಿ ನಮ್ಮ ಇತ್ತೀಚಿನ ವಿಡಿಯೋವನ್ನು ಪರಿಶೀಲಿಸಿ. ಮಾಹಿತಿಯಲ್ಲಿರಿ, ಸುರಕ್ಷಿತವಾಗಿರಿ ಎಂದು ವಿಡಿಯೋವನ್ನು ಹಂಚಿಕೊಳ್ಳುವಾಗ ಬೆಂಗಳೂರು ಪೊಲೀಸರು ಬರೆದಿದ್ದಾರೆ.

ಶಾಂತವಾಗಿರಿ ಜಗಳ ತಪ್ಪಿಸಿ

ಪ್ರಯಾಣಿಕರೇ ಶಾಂತವಾಗಿರಿ, ಇತರ ವ್ಯಕ್ತಿಗಳೊಂದಿಗೆ ಜಗಳವಾಡುವುದನ್ನು ತಪ್ಪಿಸಿ, ಅದನ್ನು ನೀವೇ ಪರಿಹರಿಸಲು ಪ್ರಯತ್ನಿಸಬೇಡಿ. ವಾಹನದ ವಿವರಗಳನ್ನು ಗಮನಿಸಿ, ತುರ್ತು ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಮತ್ತು ಘಟನೆಯ ಬಗ್ಗೆ ತಕ್ಷಣ ಮಾಹಿತಿ ನೀಡಿ ಎಂದು ಬೆಂಗಳೂರು ಪೊಲೀಸ್ ಇಲಾಖೆ ಪ್ರಯಾಣಿಕರಲ್ಲಿ ಮನವಿ ಮಾಡಿದೆ.

ಟ್ರಾಫಿಕ್ ಅಡಚಣೆಯನ್ನು ತಪ್ಪಿಸಲು ಮತ್ತು ಘಟನೆ ಅಥವಾ ವಾಹನದ ಫೋಟೋಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳು ವೀಕ್ಷಕರಿಗೆ ಹೇಳಿದ್ದಾರೆ. ಪೊಲೀಸರು ಬಂದಾಗ ಏನಾಯಿತು ಎಂಬುದರ ಕುರಿತು ನಿಮ್ಮ ಸಂಪೂರ್ಣ ಮಾಹಿತಿಯನ್ನು ಒದಗಿಸಿ ಮತ್ತು ಇತರ ವ್ಯಕ್ತಿಗಳಿಗೆ ಅವರ ಅನಿಸಿಕೆ ಹಂಚಿಕೊಳ್ಳಲು ಅವಕಾಶ ಮಾಡಿಕೊಡಿ. ಕೊನೆಯದಾಗಿ ಪೊಲೀಸರಿಗೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ನೀಡಿ ಎಂದು ಹೇಳಿದ್ದಾರೆ.

4 ಲಕ್ಷಕ್ಕೂ ಹೆಚ್ಚು ವೀಕ್ಷಣೆ

ಬೆಂಗಳೂರು ಪೊಲೀಸರು ಕೆಲವೇ ಗಂಟೆಗಳ ಹಿಂದೆ ಹಂಚಿಕೊಂಡಿರುವ ಈ ವಿಡಿಯೋ ಪೋಸ್ಟ್ ಇನ್ ಸ್ಟಾಗ್ರಾಮ್ ನಲ್ಲಿ 4,05,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ಕ್ಲಿಪ್ ಅನ್ನು ಎಕ್ಸ್ ನಲ್ಲೂ ಹಂಚಿಕೊಳ್ಳಲಾಗಿದೆ. ಹಲವಾರು ಬಳಕೆದಾರರು ಈ ಜಾಗೃತಿ ವಿಡಿಯೋ ಗೆ ಪೊಲೀಸರಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಆದರೂ ಇಂತಹ ಘಟನೆಗಳು ಸಂಭವಿಸಿದಾಗ ಇಲಾಖೆಯು ಏನನ್ನೂ ಮಾಡುತ್ತಿಲ್ಲ ಎಂದು ಕೆಲವರು ಆರೋಪಿಸಿದರು.

ಇದನ್ನೂ ಓದಿ: IndiGo Flight: ಇಂಡಿಗೊ ವಿಮಾನದಲ್ಲಿ ಮತ್ತೊಂದು ಎಡವಟ್ಟು; ನಿಂತುಕೊಂಡೇ ಪ್ರಯಾಣಿಸಲು ಮುಂದಾದ ಪ್ಯಾಸೆಂಜರ್‌!

ರಸ್ತೆ ಸುರಕ್ಷತೆಯ ಕುರಿತು ಬೆಂಗಳೂರು ಪೊಲೀಸರು ನೀಡಿರುವ ಸಾರ್ವಜನಿಕರಿಗೆ ಶಿಕ್ಷಣವನ್ನು ನಾನು ಇಷ್ಟಪಟ್ಟಿದ್ದೇನೆ. ಪೊಲೀಸ್ ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರಿಗೂ ಕಾನೂನಿನ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ ಎಂದೊಬ್ಬರು ತಮ್ಮ ಅನಿಸಿಕೆ ಬರೆದಿದ್ದಾರೆ.

Continue Reading

ದೇಶ

MDH, Everest Spices: ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳಲ್ಲಿ ಮಾರಕ ರಾಸಾಯನಿಕ ಇಲ್ಲ; FSSAI ವರದಿಯಲ್ಲಿ ಬಯಲು

MDH, Everest Spices: ಕೆಲವು ದಿನಗಳ ಹಿಂದೆ ಎಂಡಿಎಚ್‌, ಎವರೆಸ್ಟ್‌ ಮಸಾಲೆ ಸೇರಿದಂತೆ ಭಾರತದ ಒಟ್ಟು 527 ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲಿನ್‌ ಆಕ್ಸೈಡ್‌ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಯುರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ಬಹಿರಂಗಪಡಿಸಿದ್ದರು. ಹೀಗಾಗಿ 572 ಉತ್ಪನ್ನಗಳ ಪೈಕಿ 87 ಉತ್ಪನ್ನಗಳ ರಫ್ತನ್ನು ಈಗಾಗಲೇ ಗಡಿಯಲ್ಲಿ ರದ್ದುಗೊಳಿಸಲಾಗಿದೆ.

VISTARANEWS.COM


on

MDH, Everest Spices
Koo

ನವದೆಹಲಿ: ಕ್ಯಾನ್ಸರ್‌(Cancer)ಕಾರಕ ರಾಸಾಯನಿಕ ಹೊಂದಿದೆ ಎಂದು ಹಾಂಗ್‌ಕಾಂಗ್‌, ನೇಪಾಳ ಮತ್ತು ಸಿಂಗಾಪುರದಲ್ಲಿ ನಿಷೇಧಿಸ್ಪಟ್ಟಿರುವ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನ (MDH, Everest Spices)ಗಳಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಾಧಿಕಾರ (FSSAI) ಕ್ಲೀನ್‌ಚಿಟ್‌ ನೀಡಿದೆ. ಈ ಎರಡು ಮಸಾಲೆ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕ ಪತ್ತೆ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆ ಸುಮಾರು 34ಮಾದರಿಗಳನ್ನು ದೇಶಾದ್ಯಂತ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿತ್ತು. ಇದರ ಪೈಕಿ 28 ಸ್ಯಾಂಪಲ್‌ಗಳಲ್ಲಿ ಕ್ಯಾನ್ಸರ್‌ಕಾರಕ ಎಥೆಲೈನ್‌ ಆಕ್ಸೈಡ್‌ ಇರುವುದು ಪತ್ತೆಯಾಗಿಲ್ಲ ಎಂದು ವರದಿ ನೀಡಿದೆ.

ಕೆಲವು ದಿನಗಳ ಹಿಂದೆ ಎಂಡಿಎಚ್‌, ಎವರೆಸ್ಟ್‌ ಮಸಾಲೆ ಸೇರಿದಂತೆ ಭಾರತದ ಒಟ್ಟು 527 ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲಿನ್‌ ಆಕ್ಸೈಡ್‌ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಯುರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ಬಹಿರಂಗಪಡಿಸಿದ್ದರು. ಹೀಗಾಗಿ 572 ಉತ್ಪನ್ನಗಳ ಪೈಕಿ 87 ಉತ್ಪನ್ನಗಳ ರಫ್ತನ್ನು ಈಗಾಗಲೇ ಗಡಿಯಲ್ಲಿ ರದ್ದುಗೊಳಿಸಲಾಗಿದೆ.

ಇನ್ನು ಅಪಾಯಕಾರಿ ರಾಸಾಯನಿಕಗಳು ಎಳ್ಳು ಬೀಜಗಳು, ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಇತರ ಆಹಾರ ಪದಾರ್ಥಗಳಲ್ಲೂ ಕಂಡು ಬಂದಿವೆ. ಇನ್ನು ಎಥಿಲೀನ್ ಆಕ್ಸೈಡ್ ಅನ್ನು ಮೂಲತಃ ವೈದ್ಯಕೀಯ ಸಾಧನಗಳನ್ನು ಸ್ವಚ್ಛಗೊಳಿಸ ಬಳಸುವ ಕ್ರಿಮಿನಾಶಕವಾಗಿ ಬಳಸಲಾಗುತ್ತದೆ. ಈ ರಾಸಾಯನಿಕ ದೇಹಕ್ಕೆ ಸೇರಿದರೆ ಲಿಂಫೋಮಾ ಮತ್ತು ಲ್ಯುಕೇಮಿಯಾ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳು ಬರು ಸಾಧ್ಯತೆ ಅತಿ ಹೆಚ್ಚಿದೆ.

ಕ್ಯಾನ್ಸರ್ ಉಂಟು ಮಾಡುವ ಕೀಟ ನಾಶಕವನ್ನು ಒಳಗೊಂಡಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನ (MDH, Everest Spices)ಗಳನ್ನು ಸಿಂಗಾಪುರ, ಹಾಂಕಾಂಗ್‌ ಮತ್ತು ಜಪಾನ್‌ನಲ್ಲಿ ಬ್ಯಾನ್‌ ಮಾಡಲಾಗಿತ್ತು.  ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ. ಕೃಷಿ ಉತ್ಪನ್ನಗಳ ಫ್ಯುಮಿಗೇಶನ್‌ ವೇಳೆ ಸೂಕ್ಷ್ಮಜೀವಿ ಮಾಲಿನ್ಯವನ್ನು ತಡೆಗಟ್ಟಲು ಮಾತ್ರ ಅದನ್ನು ಬಳಸಲಾಗುತ್ತದೆ ಎಂದು ಸಿಂಗಾಪುರ ಹೇಳಿತ್ತು. ಅದಾದ ಬಳಿಕ ಹಾಂಕಾಂಗ್‌ನಲ್ಲೂ ಎಂಡಿಎಚ್‌ ಹಾಗೂ ಎವರೆಸ್ಟ್‌ ಮಸಾಲಾ ಪದಾರ್ಥಗಳ ಮಾರಾಟವನ್ನು ನಿಷೇಧಿಸಲಾಗಿತ್ತು. ಇದಾದ ಬಳಿಕ  ಅಮೆರಿಕವೂ ಕ್ರಮಕ್ಕೆ ಮುಂದಾಗಿತ್ತು. ಅಮೆರಿಕದ ಫುಡ್ ಆ್ಯಂಡ್‌ ಡ್ರಗ್ ಅಡ್ಮಿನಿಸ್ಟ್ರೇಷನ್ (Food and Drug Administration) ಎಂಡಿಎಚ್ ಮತ್ತು ಎವರೆಸ್ಟ್‌ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಹಾಗಾಗಿ ಜಾಗತಿಕವಾಗಿ ಭಾರತದ ಎರಡು ಮಸಾಲಾ ಬ್ರ್ಯಾಂಡ್‌ಗಳು ನಕಾರಾತ್ಮಕ ಕಾರಣಕ್ಕಾಗಿ ಸುದ್ದಿಯಾಗಿವೆ.

ಇದನ್ನೂ ಓದಿ:Bangladesh MP Missing: ಕೋಲ್ಕತ್ತಾಕ್ಕೆ ಬಂದಿದ್ದ ಬಾಂಗ್ಲಾದೇಶ ಸಂಸದ ಮಿಸ್ಸಿಂಗ್‌

ವಿವಾದದ ಬಳಿಕ ಎವರೆಸ್ಟ್ ಸಂಸ್ಥೆ ಪ್ರತಿಕ್ರಿಯಿಸಿ, ʼʼತನ್ನ ಮಸಾಲೆಗಳು ಸೇವನೆಗೆ ಸುರಕ್ಷಿತʼʼ ಎಂದು ಹೇಳಿತ್ತು. ಆದರೆ ಎಂಡಿಎಚ್ ಇದುವರೆಗೆ ತನ್ನ ಉತ್ಪನ್ನಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಕಂಪನಿಗಳ ಉತ್ಪನ್ನಗಳನ್ನು ಅಮೆರಿಕ, ಯುರೋಪ್‌, ಇಂಗ್ಲೆಂಡ್‌ ಮತ್ತು ಮಧ್ಯಪ್ರಾಚ್ಯ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.

Continue Reading

ದೇಶ

Aam Aadmi Party: ಆಪ್‌ಗೆ ಬರ್ತಿದ್ಯಾ ಖಲಿಸ್ತಾನಿ ಫಂಡಿಂಗ್ಸ್?‌ BKI ಉಗ್ರನ ಜೊತೆ ಪಕ್ಷ ಮುಖಂಡ ಫೊಟೋ

Aam Aadmi Party:ಕೆನಡಾದಲ್ಲಿ BKI ಮುಖಂಡ ಹರ್ಜೀತ್‌ ಸಿಂಗ್‌ ಭಜ್ವಾನನ್ನು ಪಂಜಾಬ್‌ನ ಆಪ್‌ ಶಾಸಕ ಕುಲ್ತಾರ್‌ ಸಿಂಗ್‌ ಸಂದ್ವಾನ್‌ ಭೇಟಿ ಆಗಿ ಮಾತುಕತೆ ನಡೆಸಿರುವ ಫೋಟೋವೊಂದು ಬಹಳ ಸದ್ದು ಮಾಡುತ್ತಿದೆ. ಇವರಿಬ್ಬರು 2022 ಸೆಪ್ಟೆಂಬರ್‌ನಲ್ಲಿ ಕೆನಡಾದ ಮಾಂಟ್ರೀಲ್‌ನಲ್ಲಿ ಭೇಟಿ ಆಗಿದ್ದರು. ಇನ್ನು ಪ್ರತ್ಯಕ್ಷದರ್ಶಿಯ ನೀಡಿರುವ ಮಾಹಿತಿ ಪ್ರಕಾರ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮನ್‌ ಮತ್ತು ದಿಲ್ಲಿ ಮುಖ್ಯಮಂತ್ರಿ ಕೂಡ ಆತನ ಜೊತೆ ಫೋನ್‌ನಲ್ಲಿ ಮಾತನಾಡಿದ್ದರು ಎಂದು ಹೇಳಲಾಗಿದೆ.

VISTARANEWS.COM


on

Aam Aadmi Party
Koo

ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024) ನಡೆಯುತ್ತಿರುವಾಗಲೇ ಆಮ್‌ ಆದ್ಮಿ ಪಕ್ಷ(Aam Aadmi Party) ದಿನಕ್ಕೊಂದು ವಿವಾದಕೀಡಾಗುತ್ತಿದೆ. ಇದೀಗ ಮತ್ತೊಂದು ವಿವಾದವನ್ನು ಆಪ್‌ ಮೈಮೇಲೆ ಎಳೆದುಕೊಂಡಿದೆ. ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಬಬ್ಬರ್‌ ಖಾಲ್ಸಾ(BKI) ಮುಖ್ಯಸ್ಥನ ಜೊತೆ ಪಕ್ಷದ ಮುಖಂಡರು ಕಾಣಿಸಿಕೊಳ್ಳುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು, ಆಪ್‌ ಕೆನಾಡಾ ಮೂಲದಿಂದ ದೇಣಿಗೆ ಸಂಗ್ರಹಿಸಲು ಯತ್ನಿಸುತ್ತಿರುವ ಆರೋಪ ಕೇಳಿಬಂದಿದೆ.

ಕೆನಡಾದಲ್ಲಿ BKI ಮುಖಂಡ ಹರ್ಜೀತ್‌ ಸಿಂಗ್‌ ಭಜ್ವಾನನ್ನು ಪಂಜಾಬ್‌ನ ಆಪ್‌ ಶಾಸಕ ಕುಲ್ತಾರ್‌ ಸಿಂಗ್‌ ಸಂದ್ವಾನ್‌ ಭೇಟಿ ಆಗಿ ಮಾತುಕತೆ ನಡೆಸಿರುವ ಫೋಟೋವೊಂದು ಬಹಳ ಸದ್ದು ಮಾಡುತ್ತಿದೆ. ಇವರಿಬ್ಬರು 2022 ಸೆಪ್ಟೆಂಬರ್‌ನಲ್ಲಿ ಕೆನಡಾದ ಮಾಂಟ್ರೀಲ್‌ನಲ್ಲಿ ಭೇಟಿ ಆಗಿದ್ದರು. ಇನ್ನು ಪ್ರತ್ಯಕ್ಷದರ್ಶಿಯ ನೀಡಿರುವ ಮಾಹಿತಿ ಪ್ರಕಾರ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮನ್‌ ಮತ್ತು ದಿಲ್ಲಿ ಮುಖ್ಯಮಂತ್ರಿ ಕೂಡ ಆತನ ಜೊತೆ ಫೋನ್‌ನಲ್ಲಿ ಮಾತನಾಡಿದ್ದರು ಎಂದು ಹೇಳಲಾಗಿದೆ.

BKI ನಿಂದ ಆಪ್‌ಗೆ 5 ಮಿಲಿಯನ್‌ ಡಾಲರ್‌ ದೇಣಿಗೆ

ಮೂಲಗಳ ಮಾಹಿತಿ ಪ್ರಕಾರ, BKI ಆಮ್‌ ಆದ್ಮಿ ಪಕ್ಷಕ್ಕೆ 5 ಮಿಲಿಯನ್‌ ಡಾಲರ್‌ ದೇಣಿಗೆ ನೀಡಿತ್ತು. ಇದಕ್ಕೆ ಬದಲಾಗಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ಅರೆಸ್ಟ್‌ ಮಾಡದಂತೆ ಆಪ್‌ ಸರ್ಕಾರ ಒಪ್ಪಿತ್ತು. ಭಜ್ವಾ ಕೆನಾಡದಲ್ಲಿರುವ ಖಲಿಸ್ತಾನಿ ಪ್ರತ್ಯೇಕತಾವಾದಿಯಾಗಿದ್ದು, ಪ್ರತ್ಯೇಕ ರಾಷ್ಟ್ರಕ್ಕಾಗಿ ಸಿಖ್ಖರನ್ನು ಪ್ರಚೋದಿಸುವುದೇ ಇವನ ಪ್ರಮುಖ ಕೆಲಸವಾಗಿದೆ. ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ಎದುರು ಈ ಖಲಿಸ್ತಾನಿ ಜಿಂದಾಬಾದ್‌ ಎಂದು ಘೋಷಣೆ ಕೂಗಿ ಗಮನಸೆಳೆದಿದ್ದ.

ಇನ್ನು ಆಪ್‌ ವಿದೇಶಿ ದೇಣಿಗೆ ಪಡೆಯುತ್ತಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿರುವ ಬೆನ್ನಲ್ಲೇ ಜಾರಿ ನಿರ್ದೇಶನಾಲಯ (ED) ಕೇಸ್‌ ದಾಖಲಿಸಿಕೊಂಡಿತ್ತು.

2014 ಮತ್ತು 2022 ರ ನಡುವೆ ಚುನಾವಣೆಗೆ ಹಣ ನೀಡಲು ಖಲಿಸ್ತಾನಿ ಗುಂಪುಗಳು ಕೇಜ್ರಿವಾಲ್ ಅವರ ಎಎಪಿಗೆ USD 16 ಮಿಲಿಯನ್ (ಅಂದಾಜು 133.54 ಕೋಟಿ ರೂ.) ನೀಡಿವೆ ಎಂದು ಎಸ್‌ಎಫ್‌ಜೆ ಉಗ್ರ ಗುರುಪತ್‌ವಂತ್ ಸಿಂಗ್ ಪನ್ನೂನ್ ಹೇಳಿದ್ದ ವೀಡಿಯೊ ಬಹಳ ಸುದ್ದಿ ಆಗಿತ್ತು. ಈ ಹಣಕಾಸಿನ ನೆರವಿನ ಬದಲಾಗಿ ಶಿಕ್ಷೆಗೊಳಗಾದ ಭಯೋತ್ಪಾದಕ ದೇವಿಂದರ್ ಪಾಲ್ ಸಿಂಗ್ ಭುಲ್ಲರ್ ಅವರನ್ನು ಬಿಡುಗಡೆ ಮಾಡಲು ಕೇಜ್ರಿವಾಲ್‌ ಒಪ್ಪಿದ್ದರು ಎಂದೂ ಆತ ಹೇಳಿದ್ದ. ಭುಲ್ಲರ್ 1993 ರಲ್ಲಿ ದೆಹಲಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದನು, ಆ ದಾಳಿ ಒಂಬತ್ತು ಜನರನ್ನು ಬಲಿ ತೆಗೆದುಕೊಂಡಿತು ಮತ್ತು 31 ಜನರು ಗಾಯಗೊಂಡಿದ್ದರು.

ಇದನ್ನೂ ಓದಿ:Job Alert: ಟಿಸಿಎಸ್‌ನಲ್ಲಿದೆ ಭರ್ಜರಿ ಉದ್ಯೋಗಾವಕಾಶ; ಇಂದೇ ಅರ್ಜಿ ಸಲ್ಲಿಸಿ

ಪನ್ನುನ್ ಪ್ರಕಾರ, ವಿದೇಶಿ ದೇಣಿಗೆ ಸಂಗ್ರಹಿಸಲು ಕೇಜ್ರಿವಾಲ್ ಮೂರು ತಂಡಗಳನ್ನು ಹೊಂದಿದ್ದು, ಅದರ ಪ್ರಮುಖ ಕಿಂಗ್‌ ಪಿನ್‌ ಸ್ವತಃ ಅವರೇ ಆಗಿದ್ದಾರೆ. ಇನ್ನುಳಿದಂತೆ ತಂಡ 1 ರಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಹಿಂದಿನ ಎಎಪಿ ನಾಯಕ ಗುರುಪ್ರೀತ್ ಘುಗ್ಗಿ ಇದ್ದಾರೆ. ಘುಗ್ಗಿ ಅವರು ಬಬ್ಬರ್ ಖಾಲ್ಸಾ ಅಂತರಾಷ್ಟ್ರೀಯ ಕಾರ್ಯಕರ್ತ ರಾಜಿಂದರ್ ಸಿಂಗ್ ಅವರನ್ನು ಭೇಟಿಯಾಗಿದ್ದರು

Continue Reading
Advertisement
List of Movies Releasing From may 24
ಟಾಲಿವುಡ್12 mins ago

List of Movies Releasing: ಈ ವಾರ ಬಿಡುಗಡೆಗೆ ಸಜ್ಜಾಗಿವೆ ಈ ಸಾಲು ಸಾಲು ಸಿನಿಮಾಗಳು!

Prashant Kishor
ದೇಶ27 mins ago

Prashant Kishor: 3ನೇ ಅವಧಿಯ ಮೋದಿ ಸರ್ಕಾರದಿಂದ ಈ 4 ಕ್ರಾಂತಿಕಾರಕ ಬದಲಾವಣೆ; ಪ್ರಶಾಂತ್‌ ಕಿಶೋರ್‌ ಭವಿಷ್ಯ

Viral Video
ವೈರಲ್ ನ್ಯೂಸ್38 mins ago

Viral Video: ರಸ್ತೆ ಜಗಳದಿಂದ ತಪ್ಪಿಸಿಕೊಳ್ಳುವುದು ಹೇಗೆ? ಬೆಂಗಳೂರು ಪೊಲೀಸರ ವಿಡಿಯೊ ಪಾಠ ಇಲ್ಲಿದೆ!

Diabetes Management Tips
Latest40 mins ago

Diabetes Management Tips: ಈ ಏಳು ಪಾನೀಯಗಳನ್ನು ಸೇವಿಸಿ, ಮಧುಮೇಹ ನಿಯಂತ್ರಿಸಿ

gold rate today beauty
ಚಿನ್ನದ ದರ41 mins ago

Gold Rate Today: ಬಂಗಾರದ ಬೆಲೆಯಲ್ಲಿ ಯಥಾಸ್ಥಿತಿ; ಇಂದಿನ ದರಗಳನ್ನು ಇಲ್ಲಿಯೇ ನೋಡಿ

Viral News
ವೈರಲ್ ನ್ಯೂಸ್44 mins ago

Viral News: ಸಿಂಹದ ಹಿಂಡನ್ನೇ ಹಿಮ್ಮೆಟ್ಟಿಸಿದ ಕಾಡುಕೋಣಗಳು; ರೋಮಾಂಚನಕಾರಿ ವಿಡಿಯೊ ನೀವೂ ನೋಡಿ

Rishab shetty family visit Hariharpur Narasimhaswamy
ಸ್ಯಾಂಡಲ್ ವುಡ್1 hour ago

Rishab shetty: ಹರಿಹರಪುರ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಕುಟುಂಬದ ಭೇಟಿ: ನರಸಿಂಹಸ್ವಾಮಿಯ ದರ್ಶನ ಪಡೆದ ಡಿವೈನ್‌ ಸ್ಟಾರ್‌!

nisha cp yogeshwara
ವೈರಲ್ ನ್ಯೂಸ್1 hour ago

CP Yogeshwara: “ಹೊಡೀತಾರೆ, ಭಿಕ್ಷೆ ಬೇಡು ಅನ್ತಾರೆ….ʼʼ ಯೋಗೇಶ್ವರ್‌ ವಿರುದ್ಧ ಕಣ್ಣೀರು ಹಾಕುತ್ತಾ ರೆಬೆಲ್‌ ಆದ ಮಗಳು

Nandini Milk No incentives for milk producers Ashok slams govt for sponsoring foreign cricket team
ರಾಜಕೀಯ1 hour ago

Nandini Milk: ಹಾಲು ಉತ್ಪಾದಿಸಿದ ರೈತರಿಗಿಲ್ಲ ಹಣ; ವಿದೇಶಿ ಕ್ರಿಕೆಟ್‌ ಟೀಂಗೆ ಪ್ರಾಯೋಜಕತ್ವ: ಸರ್ಕಾರದ ವಿರುದ್ಧ ಅಶೋಕ್‌ ಗರಂ

Viral video
ವೈರಲ್ ನ್ಯೂಸ್1 hour ago

Viral Video:‌ ಅಬ್ಬಾ..ಇದೆಂಥಾ ಹುಚ್ಚಾಟ; ಸ್ವಲ್ಪ ಮಿಸ್‌ ಆದ್ರೂ ಸಾವು ಗ್ಯಾರಂಟಿ-ಶಾಕಿಂಗ್‌ ವಿಡಿಯೋ ವೈರಲ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ7 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ20 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 day ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 day ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌