Taj Mahal | ಹಾಗೇ ಉಳಿಯಲಿದೆ ತಾಜ್​ಮಹಲ್​ 22 ಕೋಣೆಗಳ ರಹಸ್ಯ; ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್​ - Vistara News

ದೇಶ

Taj Mahal | ಹಾಗೇ ಉಳಿಯಲಿದೆ ತಾಜ್​ಮಹಲ್​ 22 ಕೋಣೆಗಳ ರಹಸ್ಯ; ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್​

ಮೊಘಲ್​ ರಾಜ​​ ಷಜಹಾನ್ ಆಳ್ವಿಕೆಯಲ್ಲಿ, ತಾಜ್​ಮಹಲ್​​ನ್ನು 1632ರಿಂದ ಕಟ್ಟಲು ಪ್ರಾರಂಭಿಸಿ 1653ರಲ್ಲಿ ಪೂರ್ಣಗೊಳಿಸಲಾಯಿತು ಎಂದು ಹೇಳಲಾಗುತ್ತದೆ. ಆದರೆ ಅದಕ್ಕೂ ಮೊದಲೇ ಈ ಸ್ಮಾರಕ ಇತ್ತು, ಶಿವಾಲಯ ಆಗಿತ್ತು ಎಂಬುದು ಹಿಂದು ಸಂಘಟನೆಗಳ ವಾದ.

VISTARANEWS.COM


on

visitors are not allowed to Taj Mahal at night during Ramzan month
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ತಾಜ್​ಮಹಲ್ ಮೂಲದಲ್ಲಿ ಒಂದು ಶಿವಾಲಯವಾಗಿತ್ತು. ಬಳಿಕ ಮೊಘಲ್ ದೊರೆ ಷಹಜಹಾನ್ ಅದನ್ನು ತನ್ನ ಪತ್ನಿ ಮುಮ್ತಾಜ್​ ಸಮಾಧಿಯಾಗಿ ಪರಿವರ್ತಿಸಿದ. ಹೀಗಾಗಿ ಸತ್ಯ ಶೋಧನೆ ಮಾಡಬೇಕು. ತಾಜ್​ಮಹಲ್​​ನಲ್ಲಿ 22 ಮುಚ್ಚಿದ ಕೋಣೆಗಳು ಇದ್ದು, ಅವುಗಳ ಬಾಗಿಲು ತೆಗೆಸಬೇಕು. ಅದರಲ್ಲಿ ಹಿಂದು ದೇವರ ವಿಗ್ರಹಗಳ ಇವೆಯಾ ಪರಿಶೀಲನೆ ನಡೆಸಬೇಕು. ಈ ಮೂಲಕ ಸತ್ಯ ಹೊರಗೆ ಬರುವಂತಾಗಬೇಕು ಎಂದು ಸುಪ್ರೀಂಕೋರ್ಟ್​ಗೆ ಸಲ್ಲಿಕೆಯಾಗಿದ್ದ ಅರ್ಜಿ ತಿರಸ್ಕೃತಗೊಂಡಿದೆ. ಸುಪ್ರಿಂಕೋರ್ಟ್​ ನ್ಯಾಯಮೂರ್ತಿಗಳಾದ ಎಂ.ಆರ್​.ಶಾ ಮತ್ತು ಎಂ.ಎಂ.ಸುಂದರೇಶ್​ ನೇತೃತ್ವದ ಪೀಠ ಅರ್ಜಿಯನ್ನು ತಿರಸ್ಕಾರ ಮಾಡಿದೆ. ಈ ಮೂಲಕ ಅಲಹಾಬಾದ್ ಹೈಕೋರ್ಟ್​ ನೀಡಿದ ತೀರ್ಪಿನ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ. ಹಾಗೇ, ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ, ಪ್ರಚಾರಕ್ಕಾಗಿ ಸಲ್ಲಿಸಿದ ಅರ್ಜಿ ಎಂದೂ ಟೀಕಿಸಿದೆ.

ತಾಜ್​ಮಹಲ್​ ವಿಚಾರದಲ್ಲಿ ಹೆಚ್ಚಿನ ತನಿಖೆ ಆಗಬೇಕು ಎಂದು ಬಿಜೆಪಿ ಅಯೋಧ್ಯಾ ಘಟಕದ ಉಸ್ತುವಾರಿ ರಜನೀಶ್​ ಸಿಂಗ್​ ಮೇ 12ರಂದು ಅಲಹಾಬಾದ್​ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ತಾಜ್​ಮಹಲ್​​ನ್ನು ಅತಿಕ್ರಮಣ ಮಾಡಲಾಗಿದೆ ಎಂಬುದನ್ನು ಕಾನೂನು ಮತ್ತು ಸಂವಿಧಾನ ಬದ್ಧವಾಗಿ ಸಾಕ್ಷೀಕರಿಸಲು ವಿಫಲರಾಗಿದ್ದರು. ಹೀಗಾಗಿ ತಾಜ್​​ಮಹಲ್ ಶೋಧಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್​ ಹೈಕೋರ್ಟ್​ ತೀರ್ಪು ನೀಡಿತ್ತು. ಈ ಹೈಕೋರ್ಟ್ ತೀರ್ಪಿನ ವಿರುದ್ಧ ರಜನೀಶ್​ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಸುಪ್ರೀಂಕೋರ್ಟ್​ ‘ಇದೊಂದು ಪ್ರಚಾರಾಸಕ್ತಿ ಅರ್ಜಿ ಎನ್ನಿಸುತ್ತಿದೆ. ಈಗಾಗಲೇ ಈ ಬಗ್ಗೆ ಅಲಹಾಬಾದ್​ ಹೈಕೋರ್ಟ್ ತೀರ್ಪು ನೀಡಿದೆ. ಹೈಕೋರ್ಟ್​ ಆದೇಶದಲ್ಲಿ ಯಾವುದೇ ತಪ್ಪು ಇಲ್ಲ’ ಎಂದು ಹೇಳಿದೆ.

ಮೊಘಲ್​ ರಾಜ​​ ಷಜಹಾನ್ ಆಳ್ವಿಕೆಯಲ್ಲಿ, ತಾಜ್​ಮಹಲ್​​ನ್ನು 1632ರಿಂದ ಕಟ್ಟಲು ಪ್ರಾರಂಭಿಸಿ 1653ರಲ್ಲಿ ಪೂರ್ಣಗೊಳಿಸಲಾಯಿತು ಎಂದು ಹೇಳಲಾಗುತ್ತದೆ. ಆದರೆ ಭಾರತದಲ್ಲಿ ಮೊಘಲರ ಆಳ್ವಿಕೆ ಪ್ರಾರಂಭಕ್ಕೂ ಮೊದಲೇ ಇಲ್ಲಿ ಈ ಸ್ಮಾರಕ ಇತ್ತು. ಅದು ಶಿವನ ದೇವಸ್ಥಾನ ಆಗಿತ್ತು ಎಂದು ಕೆಲವು ಹಿಂದು ಸಂಘಟನೆಗಳು, ಇತಿಹಾಸ ತಜ್ಞರು ಹೇಳುತ್ತಿದ್ದಾರೆ. ಅದರಲ್ಲೂ ಆ 22 ಕೋಣೆಗಳು ಮೊದಲು ತೆರೆದೇ ಇದ್ದವು. ಕಳೆದ 45 ವರ್ಷಗಳಿಂದಲ ಅಲ್ಲಿಗೆ ಯಾರಿಗೂ ಪ್ರವೇಶ ಕೊಡುತ್ತಿಲ್ಲ ಎಂದು ರಜನೀಶ್​ ತಮ್ಮ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದರು.

ಇದನ್ನೂ ಓದಿ: ಸದ್ಯ ಬಗೆಹರಿಯಲ್ಲ TAJ MAHAL ಮುಚ್ಚಿದ ಕೋಣೆಗಳ ರಹಸ್ಯ, ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Brain-Eating Amoeba: ಮೆದುಳು ತಿನ್ನುವ ಅಮೀಬಾಕ್ಕೆ ಮತ್ತೊಂದು ಬಲಿ; 2 ತಿಂಗಳ ಅಂತರದಲ್ಲಿ 3ನೇ ಪ್ರಕರಣ

Brain-Eating Amoeba: ಅಪರೂಪದ ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಕೇರಳದಲ್ಲಿ ಮತ್ತೊಬ್ಬ ಬಾಲಕ ಬಲಿಯಾಗಿದ್ದಾನೆ. ಬುಧವಾರ ರಾತ್ರಿ ಮೃತಪಟ್ಟ ಕೇರಳದ ಕೋಝಿಕ್ಕೋಡ್‌ ಜಿಲ್ಲೆಯ 12 ವರ್ಷ ಬಾಲಕನಿಗೆ ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ (ಮೆದುಳು ತಿನ್ನುವ ಅಮೀಬಾ) ಸೋಂಕು ತಗುಲಿದ್ದು ದೃಧಪಟ್ಟಿದ್ದು, ಕಳೆದ ಎರಡು ತಿಂಗಳಲ್ಲಿ ಸಂಭವಿಸಿದ ಇಂತಹ ಮೂರನೇ ಸಾವಿನ ಪ್ರಕರಣ ಇದಾಗಿದೆ.

VISTARANEWS.COM


on

Brain-Eating Mmoeba
Koo

ತಿರುವನಂತಪುರಂ: ಅಪರೂಪದ ಮೆದುಳು ತಿನ್ನುವ ಅಮೀಬಾ (Brain-Eating Amoeba) ಸೋಂಕಿಗೆ ಮತ್ತೊಬ್ಬ ಬಾಲಕ ಬಲಿಯಾಗಿದ್ದಾನೆ. ಬುಧವಾರ ರಾತ್ರಿ ಮೃತಪಟ್ಟ ಕೇರಳದ ಕೋಝಿಕ್ಕೋಡ್‌ ಜಿಲ್ಲೆಯ 12 ವರ್ಷ ಬಾಲಕನಿಗೆ ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ (ಮೆದುಳು ತಿನ್ನುವ ಅಮೀಬಾ) ಸೋಂಕು ತಗುಲಿದ್ದು ದೃಧಪಟ್ಟಿದ್ದು, ಕಳೆದ ಎರಡು ತಿಂಗಳಲ್ಲಿ ಸಂಭವಿಸಿದ ಇಂತಹ ಮೂರನೇ ಸಾವಿನ ಪ್ರಕರಣ ಇದಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಬಾಲಕನನ್ನು ಮೃದುಲ್‌ ಇ.ಪಿ. ಎಂದು ಗುರುತಿಸಲಾಗಿದೆ. ಕೋಝಿಕ್ಕೋಡ್‌ ಜಿಲ್ಲೆಯ ಫೆರೊಕೆ ಮೂಲದ ಈತನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 7ನೇ ತರಗತಿಯಲ್ಲಿ ಓದುತ್ತಿದ್ದ ಮೃದುಲ್‌ನಲ್ಲಿ ಕೆಲವು ದಿನಗಳ ಹಿಂದೆ ಸೋಂಕಿನ ಲಕ್ಷಣಗಳಾದ ತೀವ್ರ ತಲೆನೋವು, ವಾಕರಿಕೆ, ವಾಂತಿ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಜೂನ್‌ 24ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೊಳದಲ್ಲಿ ಸ್ನಾನ ಮಾಡಿದ ನಂತರ ಬಾಲಕನಿಗೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಕೊಳಗಳು ಮತ್ತು ಸರೋವರಗಳಂತಹ ಸಿಹಿನೀರಿನ ಮೂಲಗಳಲ್ಲಿ ಕಂಡುಬರುವ ಈ ಅಮೀಬಾ ಮೂಗಿನ ಮೂಲಕ ಶರೀರವನ್ನು ಸೇರಿ ಮಾರಣಾಂತಿಕವಾಗುತ್ತದೆ. ಇದು ಮೆದುಳಿನ ಜೀವಕೋಶಗಳನ್ನು ತಿನ್ನುವುದರಿಂದ ಇದನ್ನು ಮೆದುಳು ತಿನ್ನುವ ಅಮೀಬಾ ಎಂದೇ ಕರೆಯಲಾಗುತ್ತದೆ.

ಆರಂಭದಲ್ಲಿ ಮೃದುಲ್‌ನನ್ನು ಎರಡು ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಯಿತು ಮತ್ತು ನಂತರ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಆ್ಯಂಟಿ ಮೈಕ್ರೊಬಿಯಲ್ ಚಿಕಿತ್ಸೆ ನೀಡಲಾಯಿತು. ಆದಾಗ್ಯೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ಬಳಿಕ ರಾಮನಾಟುಕರ ಮುನ್ಸಿಪಾಲಿಟಿ ಮೃದುಲ್‌ ಸ್ನಾನ ಮಾಡಿದ್ದ ಕೊಳಕ್ಕೆ ಸಾರ್ವಜನಿಕರ ಪ್ರವೇಸವನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಮೂರನೇ ಪ್ರಕರಣ

ಈ ಹಿಂದೆ ಜೂನ್ 25ರಂದು ಕಣ್ಣೂರು ಜಿಲ್ಲೆಯ 13 ವರ್ಷದ ಬಾಲಕಿ ಮತ್ತು ಮೇ 21ರಂದು ಮಲಪ್ಪುರಂನ 5 ವರ್ಷದ ಬಾಲಕಿ ಈ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದರು. “ನಾವು ರಾಜ್ಯದಲ್ಲಿ ಸಂಭವಿಸಿದ ಈ ಮೂರು ಸಾವುಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡುತ್ತಿದ್ದೇವೆ. ಕಣ್ಗಾವಲು ತೀವ್ರಗೊಳಿಸಿದ್ದೇವೆ. ನಾವು ಮೃದುಲ್‌ನಂತೆ ಅದೇ ಕೊಳದಲ್ಲಿ ಸ್ನಾನ ಮಾಡಿದ ಇತರರನ್ನು ಪರೀಕ್ಷಿಸಿದ್ದೇವೆ. ಆದರೆ ಇಲ್ಲಿಯವರೆಗೆ ಯಾರಲ್ಲಿಯೂ ಸೋಂಕಿನ ಲಕ್ಷಣ ಕಂಡು ಬಂದಿಲ್ಲʼʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜನರು ಭಯಭೀತರಾಗುವ ಅಗತ್ಯವಿಲ್ಲ ಎಂದು ಆರೋಗ್ಯ ಅಧಿಕಾರಿ ಹೇಳಿದ್ದಾರೆ. “ಕೊಳಗಳು ಅಥವಾ ಸರೋವರಗಳಲ್ಲಿ ಸ್ನಾನ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸುವ ಅಗತ್ಯವಿಲ್ಲ. ಏಕೆಂದರೆ ಇದು ಅತ್ಯಂತ ಅಪರೂಪದ ಸೋಂಕು. ಅಮೀಬಾ ಪ್ರಭೇದಗಳ ಉಪಸ್ಥಿತಿಯನ್ನು ಪರೀಕ್ಷಿಸಲು ನಾವು ವಿವಿಧ ಜಲ ಮೂಲಗಳ ಮಾದರಿಗಳನ್ನು ಪರೀಕ್ಷಿಸುತ್ತೇವೆ. ಮಳೆ ತೀವ್ರಗೊಳ್ಳುತ್ತಿದ್ದಂತೆ ಸೋಂಕುಗಳ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ” ಎಂದು ಅವರು ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ: Brain eating amoeba | ಮೆದುಳು ತಿನ್ನುವ ಅಮೀಬಾ! ಏನಿದು ವಿಚಿತ್ರ ಕಾಯಿಲೆ?

ಹೇಗೆ ಹರಡುತ್ತದೆ?

ಈ ರೋಗಾಣು ಇರುವ ನೀರಿನಲ್ಲಿ ಈಜುವುದು ಅಥವಾ ಇನ್ನಾವುದಾದರೂ ರೀತಿಯಿಂದ ಈ ನೀರು ಮೂಗಿನೊಳಗೆ ಹೋದರೆ, ಆ ವ್ಯಕ್ತಿಗೆ ಈ ಅಮೀಬಾ ಸೋಂಕು ತಗುಲುತ್ತದೆ. ತುಂಬ ದಿನದಿಂದ ಈಜುಕೊಳದ ನೀರು ಬದಲಿಸದೆ ಇದ್ದರೆ ಅಲ್ಲಿಯೂ ಈ ಅಮೀಬಾ ಇರಬಹುದು. ಅದರಲ್ಲೂ ಕಲುಷಿತ ನೀರಿನಲ್ಲಿ ಈ ಅಮೀಬಾ ಉತ್ಪತ್ತಿ ಪ್ರಮಾಣ ಹೆಚ್ಚು. ನೀರೊಳಗೆ ಮುಖ ಒಳಗೆ ಹಾಕಿ ಈಜಿದಾಗ, ಸರೋವರ, ಕೊಳ, ನದಿ ನೀರಿನಲ್ಲಿ ಮುಖ ಮುಳುಗಿಸಿದಾಗ, ಕಲುಷಿತ ನೀರಿನಲ್ಲಿ ತಲೆ ಸ್ನಾನ ಮಾಡಿದಾಗ ಈ ಅಮೀಬಾ ಮೂಗಿನ ಮೂಲಕ ಮೆದುಳು ಸೇರುವ ಸಾಧ್ಯತೆ ಹೆಚ್ಚು.

Continue Reading

ಉದ್ಯೋಗ

Job Alert: ಇಂಡಿಯನ್‌ ಹೈವೇ ಮ್ಯಾನೇಜ್‌ಮೆಂಟ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ಪಡೆದವರು ಇಂದೇ ಅಪ್ಲೈ ಮಾಡಿ

Job Alert: ಇಂಡಿಯನ್‌ ಹೈವೇ ಮ್ಯಾನೇಜ್‌ಮೆಂಟ್‌ ಕಂಪನಿ ಲಿಮಿಟೆಡ್‌ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.ಒಟ್ಟು 31 ಹುದ್ದೆ ಖಾಲಿ ಇದೆ. ಎಂಜಿನಿಯರ್‌ ಮತ್ತು ಆಫೀಸರ್‌ ಹುದ್ದೆ ಇದಾಗಿದ್ದು, ಪದವಿ, ಸಿಎ ಓದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಆಗಸ್ಟ್ 16. ಅರ್ಜಿ ಸಲ್ಲಿಸುವ ವಿಧಾನದ ಮಾಹಿತಿ ಇಲ್ಲಿದೆ.

VISTARANEWS.COM


on

Job Alert
Koo

ಬೆಂಗಳೂರು: ಪದವಿ ಶಿಕ್ಷಣ ಮುಗಿಸಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಇಲ್ಲಿದೆ. ಇಂಡಿಯನ್‌ ಹೈವೇ ಮ್ಯಾನೇಜ್‌ಮೆಂಟ್‌ ಕಂಪನಿ ಲಿಮಿಟೆಡ್‌ (Indian Highway Management Company Limited) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (IHMCL Recruitment 2024). ಒಟ್ಟು 31 ಹುದ್ದೆ ಖಾಲಿ ಇದೆ. ಎಂಜಿನಿಯರ್‌ ಮತ್ತು ಆಫೀಸರ್‌ ಹುದ್ದೆ ಇದಾಗಿದ್ದು, ಪದವಿ, ಸಿಎ ಓದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಆಗಸ್ಟ್ 16 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಎಂಜಿನಿಯರ್‌ – 30 ಮತ್ತು ಆಫೀಸರ್‌ – 1 ಹುದ್ದೆ ಖಾಲಿ ಇದೆ. ಎಂಜಿನಿಯರ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಐಟಿ / ಸಿಎಸ್ / ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ಸ್ / ಎಲೆಕ್ಟ್ರಿಕಲ್ / ಇನ್‌ಸ್ಟ್ರುಮೆಂಟೇಶನ್ / ಡಾಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು. ಇನ್ನು ಸಿಎ, ಸಿಎಂಎ ವಿದ್ಯಾರ್ಹತೆ ಹೊಂದಿದವರು ಆಫೀಸರ್‌ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಯೋಮಿತಿ

ಎಂಜಿನಿಯರಿಂಗ್‌ ಹುದ್ದೆಗೆ ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 21 ವರ್ಷ. ಗರಿಷ್ಠ ವಯಸ್ಸು 30 ವರ್ಷ. ಆಫೀಸರ್‌ ಹುದ್ದೆಗೂ ಗರಿಷ್ಠ ವಯೋಮಿತಿ 30 ವರ್ಷ. ಮೀಸಲಾತಿಗೆ ಅನುಗುಣವಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಡಿ (ಸಾಮಾನ್ಯ) ಅಭ್ಯರ್ಥಿಗಳಿಗೆ 10 ವರ್ಷ, ಪಿಡಬ್ಲ್ಯುಡಿ (ಒಬಿಸಿ) ಅಭ್ಯರ್ಥಿಗಳಿಗೆ 13 ವರ್ಷ ಮತ್ತು ಪಿಡಬ್ಲ್ಯುಡಿ (ಎಸ್‌ಸಿ / ಎಸ್‌ಟಿ) ಅಭ್ಯರ್ಥಿಗಳಿಗೆ 15 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಯಾವುದೇ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಗೇಟ್‌ (GATE) ಅಂಕ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಮಾಸಿಕ ವೇತನ

ಆಯ್ಕೆಯಾದವರಿಗೆ 40,000 ರೂ. – 1,40,000 ರೂ. ಮಾಸಿಕ ವೇತನ ದೊರೆಯಲಿದೆ. ಉದ್ಯೋಗದ ಸ್ಥಳ: ಭಾರತಾದ್ಯಂತ.

IHMCL Recruitment 2024ರ ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://recruitment.ihmcl.co.in/panel/login.php)
  • ಅಗತ್ಯ ಮಾಹಿತಿ, ಇಮೇಲ್‌ ವಿಳಾಸ ನಮೂದಿಸಿ ಹೆಸರು ನೋಂದಾಯಿಸಿ.
  • ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.
  • ಹೆಸರು, ವಿಳಾಸ, ಶೈಕ್ಷಣಿಕ ಮಾಹಿಸಿ ನೀಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ಡಾಕ್ಯುಮೆಂಟ್‌, ಫೋಟೊ ಅಪ್‌ಲೋಡ್‌ ಮಾಡಿ.
  • ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಅಪ್ಲಿಕೇಷನ್‌ ಫಾರಂನ ಪ್ರಿಂಟ್‌ಔಟ್‌ ತೆಗೆದಿಡಿ.

ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್‌ ವಿಳಾಸ: ihmcl.co.inಕ್ಕೆ ಭೇಟಿ ನೀಡಿ.

ಇದನ್ನೂ ಓದಿ: Job Alert: ಬ್ಯಾಂಕ್‌ ಆಫ್‌ ಬರೋಡಾದ 627 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ; ಇಲ್ಲಿದೆ ಹೊಸ ಟೈಮ್‌ ಟೇಬಲ್‌

Continue Reading

ಆಟೋಮೊಬೈಲ್

Bajaj Freedom 125: ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಬಜಾಜ್‌ ಫ್ರೀಡಂ 125 ಇಂದು ಬಿಡುಗಡೆ

Bajaj Freedom 125: ಬುದಿನಗಳ ಕಾಯುವಿಕೆ ಅಂತ್ಯವಾಗುವ ಸಮಯ ಬಂದಿದೆ. ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಎನ್ನುವ ಖ್ಯಾತಿಯ, ಭಾರತದ ಬಜಾಜ್‌ ಆಟೋ ಕಂಪನಿ ಆವಿಷ್ಕರಿಸಿರುವ ಫ್ರೀಡಂ 125 ಬೈಕ್‌ ಇಂದು (ಜುಲೈ 5) ಬಿಡುಗಡೆಯಾಗಲಿದೆ. ಈ ಹಿಂದೆ ಜೂನ್‌ 18ರಂದು ಬೈಕ್‌ ಬಿಡುಗಡೆಗೆ ಮಾಡುವುದಾಗಿ ಕಂಪನಿ ಘೋಷಿಸಿತ್ತು. ಬಳಿಕ ಕಾರಣಾಂತರಗಳಿಂದ ದಿನಾಂಕವನ್ನು ಮುಂದೂಡಲಾಗಿತ್ತು.

VISTARANEWS.COM


on

Bajaj Freedom 125
Koo

ಮುಂಬೈ: ವಿಶ್ವದ ಮೊದಲ ಸಿಎನ್‌ಜಿ ಬೈಕ್‌ (CNG Bike) ಎನ್ನುವ ಖ್ಯಾತಿಯ, ಭಾರತದ ಬಜಾಜ್‌ ಆಟೋ (Bajaj Auto) ಕಂಪನಿ ಆವಿಷ್ಕರಿಸಿರುವ ಫ್ರೀಡಂ 125 (Bajaj Freedom 125) ಬೈಕ್‌ ಇಂದು (ಜುಲೈ 5) ಬಿಡುಗಡೆಯಾಗಲಿದೆ. ಬಜಾಜ್‌ ಬ್ರೂಝರ್‌ ಎಂದೂ ಕರೆಯಲ್ಪಡುವ ಈ ಬೈಕ್‌ ಅನ್ನು ದ್ವಿಚಕ್ರ ವಾಹನ ವಲಯದಲ್ಲಿ ಒಂದು ಮೈಲಿಗಲ್ಲು ಎಂದೇ ಪರಿಗಣಿಸಲಾಗಿದೆ.

ಕಂಪನಿಯು ಮುಂಬೈಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಬೈಕ್‌ ಬಿಡುಗಡೆ ಮಾಡಲಿದ್ದು, ಬಜಾಜ್‌ ಎಂ.ಡಿ. ರಾಜೀವ್‌ ಬಜಾಜ್‌ ಮತ್ತು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಈ ಹಿಂದೆ ಜೂನ್‌ 18ರಂದು ಬೈಕ್‌ ಬಿಡುಗಡೆಗೆ ಮಾಡುವುದಾಗಿ ಕಂಪನಿ ಘೋಷಿಸಿತ್ತು. ಬಳಿಕ ಕಾರಣಾಂತರಗಳಿಂದ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಬೈಕ್‌ ಪ್ರಿಯರ ಹಲವು ದಿನಗಳ ಕಾಯುವಿಕೆ ಅಂತ್ಯವಾಗಲಿದೆ. ಈ ಮೂಲಕ ಬಜಾಜ್‌ ಆಟೋ ಸಾಂಪ್ರದಾಯಿಕ ಪೆಟ್ರೋಲ್ ಚಾಲಿತ ಬೈಕುಗಳಿಗೆ ಪರಿಸರ ಸ್ನೇಹಿ ಪರ್ಯಾಯವನ್ನು ಪರಿಚಯಿಸುತ್ತಿದ್ದು, ಬಹುದೊಡ್ಡ ಕ್ರಾಂತಿಯನ್ನುಂಟು ಮಾಡಲು ಸಜ್ಜಾಗಿದೆ.

ವೈಶಿಷ್ಟ್ಯ

ಮೊದಲೇ ಹೇಳಿದಂತೆ ಫ್ರೀಡಂ 125 ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಆಗಿದ್ದು, ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡರಲ್ಲೂ ಕಾರ್ಯ ನಿರ್ವಹಿಸುತ್ತದೆ. ಈ ಬೈಕ್‌ನ ಉದ್ದಕ್ಕೂ ಸಿಎನ್‌ಜಿ ಟ್ಯಾಂಕ್ ಅನ್ನು ಅಳವಡಿಸಲಾಗಿದೆ. ಹಾಗೇ ಇದನ್ನು ನಿರ್ವಹಿಸುವ ವಿಶಿಷ್ಟವಾದ ಚಾಸಿಸ್ ಸೆಟಪ್ ಅನ್ನು ಬೈಕ್ ಹೊಂದಿದೆ. ಸಿಎನ್‌ಜಿ ಬೈಕ್‌ನ ಆಯಿಲ್ ಟ್ಯಾಂಕ್ ಚಿಕ್ಕದಾಗಿದ್ದರೂ, ಬೈಕ್‌ಗೆ ಹೆಚ್ಚುವರಿ ಮೈಲೇಜ್ ನೀಡುತ್ತದೆ. ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನೊಂದಿಗೆ ಜೋಡಿಸಲಾದ 125 ಸಿಸಿ ಎಂಜಿನ್‌ನೊಂದಿಗೆ ಈ ಬೈಕ್‌ ಬರುವ ನಿರೀಕ್ಷೆ ಇದೆ. ಅಲ್ಲದೇ ಈ ಬೈಕ್ ಅನ್ನು ನಗರ ಪ್ರದೇಶಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎರಡೂ ಕಡೆ ಆರಾಮವಾಗಿ ಓಡಿಸಬಹುದು. ಈ ಬೈಕ್ ಕ್ಲಚ್ ಗಾರ್ಡ್, ಹ್ಯಾಂಡಲ್ ಬಾರ್ ಬ್ರೇಸ್ ಮತ್ತು ಸಂಪ್ ಗಾರ್ಡ್ ಅನ್ನು ಹೊಂದಿರುವುದರಿಂದ ಇದರಲ್ಲಿ ಕಳಪೆ ರಸ್ತೆಯಲ್ಲೂ ಕೂಡ ಆರಾಮವಾಗಿ ಸವಾರಿ ಮಾಡಬಹುದು.

ದರ ಎಷ್ಟು?

ಈ ಬೈಕ್ ಬೆಲೆ ಸುಮಾರು 90,000 ರೂ. ಆಗಿರುವ ನಿರೀಕ್ಷೆ ಇದೆ. ಬಜಾಜ್ ಫ್ರೀಡಂ 125 ಬೈಕ್ ಟಿವಿಎಸ್ ರೇಡಿಯನ್, ಹೋಂಡಾ ಸಿಬಿ ಶೈನ್, ಹೀರೋ ಹೆಚ್ ಎಫ್ 100, ಟಿವಿಎಸ್ ಸ್ಪೋರ್ಟ್, ಬಜಾಜ್ ಸಿಟಿ 110 ಮತ್ತು ಬಜಾಜ್ ಪ್ಲಾಟಿನಾಗಳಂತಹ ಇತರ ಮೋಟಾರ್ ಸೈಕಲ್‌ಗಳ ಎದುರು ಸ್ಪರ್ಧೆಗಿಳಿಯುವ ಸಾಧ್ಯತೆ ಇದೆ.

ಈಗಾಗಲೇ ಈ ಬೈಕ್‌ ಅನ್ನು ಬಿಗುಡೆಗೆ ಮುನ್ನವೇ ಹಲವು ಬಾರಿ ಸಾರ್ವಜನಿಕ ರಸ್ತೆಯಲ್ಲಿ ಓಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಅಲ್ಲದೆ ಸಿಎನ್‌ಜಿ ತಂತ್ರಜ್ಞಾನಕ್ಕೆ ಬಜಾಜ್ ಆಟೋ ಪ್ರವೇಶಿಸುತ್ತಿರುವುದು ಇದು ಹೊಸತೇನಲ್ಲ. ಕಂಪನಿಯು ಈಗಾಗಲೇ ತನ್ನ ಸಿಎನ್‌ಜಿ ಚಾಲಿತ ತ್ರಿಚಕ್ರ ವಾಹನಗಳೊಂದಿಗೆ ಯಶಸ್ಸನ್ನು ಸಾಧಿಸಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು ಶೇ. 60ರಷ್ಟು ಪಾಲನ್ನು ಹೊಂದಿದೆ. ಬಜಾಜ್ ಫ್ರೀಡಂ 125 ಮೂಲಕ ಕಂಪನಿ ತನ್ನ ಯಶಸ್ಸನ್ನು ಪುನರಾವರ್ತಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

Continue Reading

ಬಾಲಿವುಡ್

Anant-Radhika Wedding: ಅನಂತ್-ರಾಧಿಕಾ ಸಂಗೀತ ಕಾರ್ಯಕ್ರಮಕ್ಕೆ ಕೆನಡಾದ ಖ್ಯಾತ ಗಾಯಕ ಆಗಮನ; ಸಂಭಾವನೆ ಕೇಳಿದ್ರೆ ದಂಗಾಗ್ತೀರಾ!

Anant-Radhika Wedding: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12ರಂದು ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಇದರ ವಿವರವನ್ನು ಬಹಿರಂಗಪಡಿಸುವ ಆಹ್ವಾನ ಪತ್ರಿಕೆ ರಿಲೀಸ್‌ ಆಗಿ, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಜುಲೈ 14ರವರೆಗೆ ಶುಭ ವಿವಾಹ, ಶುಭ ಆಶೀರ್ವಾದ ಮತ್ತು ಮಂಗಳ ಉತ್ಸವ ಎನ್ನುವ ಮೂರು ದಿನಗಳ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

Anant-Radhika Wedding Justin Bieber arrives in Mumbai
Koo

ಬೆಂಗಳೂರು: ಜುಲೈ 12ರಂದು ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ (Anant-Radhika Wedding) ಅವರ ಕಿರಿಯ ಮಗ ಅನಂತ್ ಅಂಬಾನಿ ಮದುವೆ ಅದ್ಧೂರಿಯಾಗಿ ನೆರವೇರುತ್ತಿದೆ. ಇಂದು (ಜುಲೈ 5) ಮುಂಬೈನಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಕೆನಡಾದ ಖ್ಯಾತ ಗಾಯಕ ಜಸ್ಟಿನ್ ಬೀಬರ್ (Justin Bieber) ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಈಗಾಗಲೇ ಗಾಯಕ ಮುಂಬೈಗೆ ಬಂದಿರುವ ಫೋಟೊ ಹಾಗೂ ವಿಡಿಯೊಗಳು ವೈರಲ್‌ ಆಗಿವೆ.

ಜುಲೈ 12 ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ (BKC) ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅನಂತ್ ಮತ್ತು ರಾಧಿಕಾ ವಿವಾಹವಾಗಲಿದ್ದಾರೆ. ಪಾಪರಾಜೋ ಹಂಚಿಕೊಂಡ ಕ್ಲಿಪ್‌ನಲ್ಲಿ,ಖ್ಯಾತ ಗಾಯಕ ಜಸ್ಟಿನ್ ಬೀಬರ್ ಅವರ ಕಾರು ಮುಂಬೈನಲ್ಲಿ ಕಂಡುಬಂದಿದೆ. ಮುಂಬೈನಲ್ಲಿ ಅನಂತ್ ಮತ್ತು ರಾಧಿಕಾ ಅವರ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅಡೆಲೆ, ಡ್ರೇಕ್ ಮತ್ತು ಲಾನಾ ಡೆಲ್ ರೇ ಕೂಡ ಅಂಬಾನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿ ಮಾಡಿದೆ.

ಇವರು ಸುಮಾರು 10 ಮಿಲಿಯನ್ ಅಮೆರಿಕನ್ ಡಾಲರ್ ಚಾರ್ಜ್ ಮಾಡಿದ್ದಾರೆ. ಅಂದರೆ ಭಾರತದ ರೂಪಾಯಿಗೆ ಲೆಕ್ಕ ಹಾಕಿದರೆ ಅವರ ಸಂಭಾವನೆ ಬರೋಬ್ಬರಿ 83.51 ಕೋಟಿ ರೂ.

ಜಸ್ಟಿನ್‌ ಬೀಬರ್‌ ಅವರ ಸಂಗೀತ ಕಾರ್ಯಕ್ರಮಕ್ಕೆ ವಿಶ್ವಾದ್ಯಂತ ಬೇಡಿಕೆ ಇದೆ. ಜಗತ್ತಿನ ಮಹಾನ್‌ ಗಾಯಕರಲ್ಲಿ ಒಬ್ಬನೆಂದು ಗುರುತಿಸಲಾಗುತ್ತಿರುವ ಜಸ್ಟಿನ್‌ನ್ನು ಫೇಮಸ್‌ ಮಾಡಿದ್ದು ಅವನ ತಾಯಿ. ಜಸ್ಟಿನ್‌ಗೆ 13 ವರ್ಷ ಆಗಿದ್ದಾಗ ಅವನು ಹಾಡುತ್ತಿದ್ದ ಹಾಡುಗಳನ್ನು ಅಮ್ಮ ಯೂ ಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಅದು‌ ಜನಪ್ರಿಯವಾಗಿ ಜಾಗತಿಕ ಜನಪ್ರಿಯತೆ ಪಡೆಯಿತು. ಎರಡು ಗ್ರಾಮಿ ಸೇರಿದಂತೆ 22 ಜಾಗತಿಕ ಪ್ರಶಸ್ತಿಗಳು ದೊರೆತವು. 2022ರಲ್ಲಿ ಜಸ್ಟಿನ್ ಬೀಬರ್​ ಮುಖಕ್ಕೆ ಪಾರ್ಶವಾಯು ಆಗಿತ್ತು. ಹೀಗಾಗಿ ಅವರ ಅನೇಕ ಶೋಗಳು ಕ್ಯಾನ್ಸಲ್ ಆಗಿತ್ತು. ಈಗ ಅವರು ಇದರಿಂದ ಚೇತರಿಕೆ ಕಂಡಿದ್ದಾರೆ.

ಇದನ್ನೂ ಓದಿ: Anant-Radhika Wedding: ಅನಂತ್‌ ಅಂಬಾನಿ ಮದುವೆಗೆ ಪೂರ್ವಭಾವಿಯಾಗಿ ಸಾಮೂಹಿಕ ವಿವಾಹ; ಪ್ರತಿ ವಧುವಿಗೆ ಚಿನ್ನಾಭರಣ, 1 ಲಕ್ಷ ರೂ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12ರಂದು ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಇದರ ವಿವರವನ್ನು ಬಹಿರಂಗಪಡಿಸುವ ಆಹ್ವಾನ ಪತ್ರಿಕೆ ರಿಲೀಸ್‌ ಆಗಿ, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಜುಲೈ 14ರವರೆಗೆ ಶುಭ ವಿವಾಹ, ಶುಭ ಆಶೀರ್ವಾದ ಮತ್ತು ಮಂಗಳ ಉತ್ಸವ ಎನ್ನುವ ಮೂರು ದಿನಗಳ ಕಾರ್ಯಕ್ರಮ ನಡೆಯಲಿದೆ. ಕೆಲವು ದಿನಗಳ ಹಿಂದೆ ಮೂರು ದಿನಗಳ ಅದ್ದೂರಿ ಮದುವೆ ಪೂರ್ವ ಸಮಾರಂಭ ನಡೆದಿತ್ತು. ದೇಶ-ವಿದೇಶಗಳ ವಿವಿಧ ಕ್ಷೇತ್ರಗಳ ಗಣ್ಯರು ಇದರಲ್ಲಿ ಪಾಲ್ಗೊಂಡಿದ್ದರು.

Continue Reading
Advertisement
Robbery Case
ಕ್ರೈಂ1 min ago

Robbery Case : ರಾಯಚೂರಿನಲ್ಲಿ ಸ್ವಾಮೀಜಿ ತಲೆಗೆ ಗನ್ ಇಟ್ಟು ದರೋಡೆ!

Jay Shah
ಕ್ರೀಡೆ8 mins ago

Jay Shah: ಕೊಹ್ಲಿಯನ್ನೇ ದಿಟ್ಟಿಸಿ ನೋಡುತ್ತಾ ನಿಂತ ಜಯ್​ ಶಾ; ವಿಡಿಯೊ ವೈರಲ್​

hd kumaraswamy
ಪ್ರಮುಖ ಸುದ್ದಿ10 mins ago

HD Kumaraswamy: ಸಿಎಂ ಕುರ್ಚಿ ಮೇಲೆ ಟವಲ್‌ ಹಾಕಿದವರಿಂದಲೇ ಮುಡಾ ಹಗರಣ ಬಯಲು: ಎಚ್‌ಡಿಕೆ

Bigg Boss Telugu 8 Astrologer Venu Swamy A Contestant
ಟಾಲಿವುಡ್23 mins ago

Bigg Boss Telugu 8: ಬಿಗ್‌ ಬಾಸ್‌ ಮನೆಗೆ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಎಂಟ್ರಿ?

Gold Rate Today
ಚಿನ್ನದ ದರ38 mins ago

Gold Rate Today: ಇಂದು ಏರಿಕೆಯಾಗಿಲ್ಲ ಚಿನ್ನದ ದರ; ಬೆಲೆ ಎಷ್ಟಿದೆ ನೋಡಿ

Physical Abuse
ಬೆಂಗಳೂರು44 mins ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Team India
ಕ್ರಿಕೆಟ್50 mins ago

Team India: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಡುವುದು ನಮ್ಮ ಸಂಸ್ಕೃತಿಯಲ್ಲ ಎಂದು ತೋರಿಸಿಕೊಟ್ಟ ಟೀಮ್​ ಕ್ರಿಕೆಟಿಗರು

ಉದ್ಯೋಗ57 mins ago

Job Alert: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 2,700 ಅಪ್ರೆಂಟಿಸ್ ಶಿಪ್ ಹುದ್ದೆ; ಆಯ್ಕೆಯಾಗಲು ಏನು ಮಾಡಬೇಕು? ವಿಸ್ತೃತ ಮಾಹಿತಿ

Actor Darshan SIM Secret Revealed investigation start
ಸ್ಯಾಂಡಲ್ ವುಡ್58 mins ago

Actor Darshan: ದರ್ಶನ್ ಬಳಸುತ್ತಿದ್ದ ಸಿಮ್ ಸೀಕ್ರೆಟ್‌ ರಿವೀಲ್; ಆಪ್ತರಿಗೆ ತಟ್ಟಿದೆ ವಿಚಾರಣೆ ಬಿಸಿ!

Brain-Eating Mmoeba
ಆರೋಗ್ಯ1 hour ago

Brain-Eating Amoeba: ಮೆದುಳು ತಿನ್ನುವ ಅಮೀಬಾಕ್ಕೆ ಮತ್ತೊಂದು ಬಲಿ; 2 ತಿಂಗಳ ಅಂತರದಲ್ಲಿ 3ನೇ ಪ್ರಕರಣ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Physical Abuse
ಬೆಂಗಳೂರು44 mins ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು1 hour ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ6 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ18 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ19 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ20 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ22 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ23 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ24 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ1 day ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

ಟ್ರೆಂಡಿಂಗ್‌