T20 World Cup | ಅಂದು ವೀಕ್ಷಕ ವಿವರಣೆಗಾರ, ಇಂದು ಸರಣಿ ಶ್ರೇಷ್ಠ ಆಟಗಾರ ಯಾರಿವರು? - Vistara News

Latest

T20 World Cup | ಅಂದು ವೀಕ್ಷಕ ವಿವರಣೆಗಾರ, ಇಂದು ಸರಣಿ ಶ್ರೇಷ್ಠ ಆಟಗಾರ ಯಾರಿವರು?

ಪಾಕಿಸ್ತಾನ ವಿರುದ್ಧದ ಟಿ20 ವಿಶ್ವ ಕಪ್​ ಫೈನಲ್​ನಲ್ಲಿ ಮೂರು ವಿಕೆಟ್​ ಕಿತ್ತು ಮಿಂಚಿದ ಸ್ಯಾಮ್​ ಕರನ್​ ಕಳೆದ ವಿಶ್ವ ಕಪ್​ನಲ್ಲಿ ವೀಕ್ಷಕ ವಿವರಣೆಗಾರನಾಗಿ ಕರ್ತವ್ಯ ನಿರ್ವಹಿಸಿದ್ದರು.

VISTARANEWS.COM


on

Sam Curran
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೆಲ್ಬೋರ್ನ್​: ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ ಐಸಿಸಿ ಟಿ20 ವಿಶ್ವ ಕಪ್(T20 World Cup) ಕೂಟ ಭಾನುವಾರ ಮೆಲ್ಬೋರ್ನ್​ನಲ್ಲಿ ಅದ್ಧೂರಿಯಾಗಿ ಅಂತ್ಯಕಂಡಿದೆ. ಪಾಕಿಸ್ಥಾನ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಗೆದ್ದ ಇಂಗ್ಲೆಂಡ್ ತಂಡವು ಎರಡನೇ ಬಾರಿಗೆ ಟಿ20 ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೇ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪಡೆದ ಸ್ಯಾಮ್ ಕರನ್​ ಕಳೆದ ಟಿ20 ವಿಶ್ವ ಕಪ್​ನಲ್ಲಿ ವೀಕ್ಷಕ ವಿವರಣೆಗಾರನಾಗಿ ಕರ್ತವ್ಯ ನಿರ್ವಹಿಸಿದ್ದು ಈಗ ಇತಿಹಾಸ.

ಮೆಲ್ಬೋರ್ನ್​ ಕ್ರಿಕೆಟ್​ ಮೈದಾನದಲ್ಲಿ ನಡೆದ ಸಣ್ಣ ಮೊತ್ತದ ಫೈನಲ್​ ಮೇಲಾಟದಲ್ಲಿ ಮೊದಲು ಬ್ಯಾಟ್​ ಮಾಡಿದ ಪಾಕಿಸ್ತಾನ 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಜಾಸ್​ ಬಟ್ಲರ್​ ಪಡೆ ಐದು ವಿಕೆಟ್​ಗೆ 138 ರನ್​ ಬಾರಿಸಿ ಜಯ ಸಾಧಿಸಿತು.

ಕಳೆದ 2021ರ ಭಾರತ ಆತಿಥ್ಯದಲ್ಲಿ ದುಬೈನಲ್ಲಿ ನಡೆದ ಟಿ20 ವಿಶ್ವ ಕಪ್​ನಲ್ಲಿ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆಯದ ಕರನ್​ ವೀಕ್ಷಕ ವಿವರಣೆಗಾರರಾಗಿ ಕೆಲಸ ಮಾಡಿದ್ದರು. ಆದರೆ ಈ ಬಾರಿಯ ವಿಶ್ವ ಕಪ್​ನಲ್ಲಿ ಶ್ರೇಷ್ಠ ಪ್ರದರ್ಶನದೊಂದಿಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಟೂರ್ನಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ತೋರಿದ್ದಾರೆ. ಜತೆಗೆ ಫೈನಲ್ ಪಂದ್ಯದಲ್ಲಿ ಮಿಂಚಿದ ಸ್ಯಾಮ್​ ಕರನ್​ ನಾಲ್ಕು ಓವರ್​ನಲ್ಲಿ ಕೇವಲ 12 ರನ್ ಬಿಟ್ಟುಕೊಟ್ಟು ಮೂರು ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಜತೆಗೆ ಸರಣಿ ಶ್ರೇಷ್ಠ ಪುರಸ್ಕಾರಕ್ಕೂ ಭಾಜನರಾದರು.

ಇದನ್ನೂ ಓದಿ | T20 World Cup | ಟಿ20 ವಿಶ್ವ ಕಪ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಟಾಪ್​ 5 ಬೌಲರ್​ಗಳು ಯಾರು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಶಿಕ್ಷಣ

Best Courses After SSLC: ವಿಜ್ಞಾನ, ವಾಣಿಜ್ಯ, ಕಲೆ; ಯಾವುದು ಉತ್ತಮ ಆಯ್ಕೆ?

After SSLC career options: ವೃತ್ತಿಯನ್ನು ಆಯ್ಕೆ ಮಾಡುವುದು ಜೀವನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವು ಕಡಿಮೆ ಅವಧಿಯಲ್ಲಿ ಯಶಸ್ಸಿನ ದೊಡ್ಡ ಎತ್ತರವನ್ನು ತಲುಪಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ತಮ್ಮ ಕೌಶಲ್ಯ, ಆಸಕ್ತಿಗಳು ಮತ್ತು ಸಾಮರ್ಥ್ಯಗಳಿಗೆ ಅನುಗುಣವಾಗಿ ತಮ್ಮ ನೆಚ್ಚಿನ ಕ್ಷೇತ್ರವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಅದಕ್ಕಾಗಿ ಎಸ್ ಎಸ್ ಎಲ್ ಸಿ ಮುಗಿಸಿರುವ ವಿದ್ಯಾರ್ಥಿಗಳೇ ನಿಮಗೆ ಸೂಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

By

After SSLC career options
Koo

ಎಸ್ ಎಸ್ ಎಲ್ ಸಿ (SSLC) ಬಳಿಕ ಮುಂದೇನು ಎಂಬ ಚಿಂತೆಯಲ್ಲಿದ್ದೀರಾ? ವಿಜ್ಞಾನ (Science), ವಾಣಿಜ್ಯ (commerce) ಅಥವಾ ಕಲೆ (arts) ಈ ಮೂರು ವಿಷಯಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲವಿದೆಯೇ ? ಯಾವ ವಿಷಯವನ್ನು ಆಯ್ಕೆ ಮಾಡಿದರೆ ಮುಂದೆ ಯಾವ ಉದ್ಯೋಗಕ್ಕೆ (After SSLC career options) ಸೇರಿಕೊಳ್ಳಬಹುದು ಎನ್ನುವ ಪ್ರಶ್ನೆ ಕಾಡುತ್ತಿದೆಯೇ ? ಹಾಗಿದ್ದರೆ ಇಲ್ಲಿದೆ ನಿಮಗೆ ಸೂಕ್ತ ಮಾಹಿತಿ.

10 ನೇ ತರಗತಿಯ ಫಲಿತಾಂಶಗಳು ಹೊರಬಂದ ಅನಂತರ ಹೆಚ್ಚಿನ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಾಮಾನ್ಯ ಗೊಂದಲಗಳು ಇದಾಗಿದೆ. ಅನೇಕ ವಿದ್ಯಾರ್ಥಿಗಳು ತಮ್ಮ ಸ್ನೇಹಿತರು ಅಥವಾ ಪೋಷಕರ ಒತ್ತಡದಿಂದಾಗಿ ತಮ್ಮ ಮಾರ್ಗವನ್ನು ಆಯ್ಕೆ ಮಾಡುವಾಗ ತಪ್ಪುಗಳನ್ನು ಮಾಡುತ್ತಾರೆ.

ವೃತ್ತಿಯನ್ನು ಆಯ್ಕೆ ಮಾಡುವುದು ಜೀವನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವು ಕಡಿಮೆ ಅವಧಿಯಲ್ಲಿ ಯಶಸ್ಸಿನ ದೊಡ್ಡ ಎತ್ತರವನ್ನು ತಲುಪಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ತಮ್ಮ ಕೌಶಲ್ಯ, ಆಸಕ್ತಿಗಳು ಮತ್ತು ಸಾಮರ್ಥ್ಯಗಳಿಗೆ ಅನುಗುಣವಾಗಿ ತಮ್ಮ ನೆಚ್ಚಿನ ಕ್ಷೇತ್ರವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ.

ಇದನ್ನೂ ಓದಿ: Which is best after SSLC: ಎಸ್‌ಎಸ್ಎಲ್‌ಸಿ ನಂತರ ಮುಂದೇನು? ಇಲ್ಲಿದೆ ಉಪಯುಕ್ತ ಮಾಹಿತಿ

ವಿಜ್ಞಾನ, ವಾಣಿಜ್ಯ ಅಥವಾ ಕಲೆ ಈ ಮೂರರಲ್ಲಿ ಯಾವುದು ಎನ್ನುವುದು ಹೆಚ್ಚಿನ ವಿದ್ಯಾರ್ಥಿಗಳು ಎದುರಿಸುವ ಸಾಮಾನ್ಯ ಗೊಂದಲವಾಗಿದೆ. ಕೆಲವು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಏನನ್ನು ಬಯಸುತ್ತಾರೆ ಎಂಬುದರ ಬಗ್ಗೆ ಬಹಳ ಸ್ಪಷ್ಟತೆಯನ್ನು ಹೊಂದಿರುತ್ತಾರೆ. ಆದರೆ ಮತ್ತೊಂದೆಡೆ 10 ನೇ ತರಗತಿಯ ಅನಂತರ ತಮ್ಮ ವೃತ್ತಿಯನ್ನು ಆಯ್ಕೆ ಮಾಡುವಾಗ ಗೊಂದಲಕ್ಕೊಳಗಾಗುವ ಮತ್ತು ಮುಂದಿನ ಭವಿಷ್ಯದ ಬಗ್ಗೆ ಸುಳಿವೇ ಇಲ್ಲದ ಅನೇಕ ವಿದ್ಯಾರ್ಥಿಗಳಿದ್ದಾರೆ. ಸರಿಯಾದ ಮಾರ್ಗವನ್ನು ಆರಿಸುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರಕ್ಕೂ ಸಾಕಷ್ಟು ಅವಕಾಶಗಳಿವೆ. ಆದರೆ ಒಬ್ಬರು ಯಾವಾಗಲೂ ತಮ್ಮ ಆಸಕ್ತಿಗಳಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬೇಕು.

10 ನೇ ತರಗತಿಯಲ್ಲಿ ಉತ್ತೀರ್ಣರಾದ ಅನಂತರ ಟಾಪ್ 5 ವೃತ್ತಿ ಆಯ್ಕೆಗಳ ಕುರಿತು ಮಾಹಿತಿ ಇಲ್ಲಿವೆ.


ವಿಜ್ಞಾನ

ವಿಜ್ಞಾನವು ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಸಂಶೋಧನಾ ಪಾತ್ರಗಳಂತಹ ಅನೇಕ ವೃತ್ತಿ ಆಯ್ಕೆಗಳನ್ನು ನೀಡುತ್ತದೆ. ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಇದು ಅತ್ಯಂತ ನೆಚ್ಚಿನ ವೃತ್ತಿ ಆಯ್ಕೆಯಾಗಿದೆ.

ವಿಜ್ಞಾನ ಆಯ್ಕೆ ಮಾಡುವ ಪ್ರಮುಖ ಪ್ರಯೋಜನವೆಂದರೆ 12 ನೇ ತರಗತಿಯ ಅನಂತರ ವಿಜ್ಞಾನದಿಂದ ವಾಣಿಜ್ಯಕ್ಕೆ ಅಥವಾ ವಿಜ್ಞಾನಕ್ಕೆ ಕಲೆಗೆ ಬದಲಾಯಿಸಬಹುದು. 12 ನೇ ತರಗತಿಯ ಅನಂತರ ವಿಜ್ಞಾನ ವಿಷಯಕ್ಕೆ ಸಂಬಂಧಿಸಿ ಹಲವಾರು ವೃತ್ತಿ ಆಯ್ಕೆಗಳು ಲಭ್ಯವಿದೆ.

ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ಮುಖ್ಯ ವಿಷಯಗಳಾಗಿವೆ. ಆದರೆ ಗಣಿತವನ್ನು ಇಷ್ಟಪಡದ ಅಥವಾ ಅದರಲ್ಲಿ ಆಸಕ್ತಿಯಿಲ್ಲದ ಅನೇಕ ವಿದ್ಯಾರ್ಥಿಗಳಿದ್ದಾರೆ. ಆದರೆ ನೀವು ವೈದ್ಯಕೀಯ ವೃತ್ತಿಯನ್ನು ಮುಂದುವರಿಸಲು ಬಯಸಿದರೆ ನೀವು ಗಣಿತವನ್ನು ಬಿಟ್ಟು ಇತರ ವಿಷಯಗಳನ್ನು ಆರಿಸಿಕೊಳ್ಳಬಹುದು.

ವೃತ್ತಿ ಆಯ್ಕೆಗಳು: ವಿಜ್ಞಾನ ವಿದ್ಯಾರ್ಥಿಗಳಿಗೆ ಐದು ಪ್ರಮುಖ ವೃತ್ತಿ ಆಯ್ಕೆಗಳಿವೆ. ಬಿಟೆಕ್/ಬಿಇ, ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ (MBBS), ಬ್ಯಾಚುಲರ್ ಆಫ್ ಫಾರ್ಮಸಿ, ಬ್ಯಾಚುಲರ್ ಆಫ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ಬಿಎಸ್ ಸಿ ಹೋಮ್ ಸೈನ್ಸ್ / ಫೊರೆನ್ಸಿಕ್ ಸೈನ್ಸ್.


ವಾಣಿಜ್ಯ

ವಿಜ್ಞಾನದ ಅನಂತರ ವಾಣಿಜ್ಯ ವಿಷಯವು ಎರಡನೇ ಅತ್ಯಂತ ಜನಪ್ರಿಯ ವೃತ್ತಿ ಆಯ್ಕೆಯಾಗಿದೆ. ವ್ಯಾಪಾರಕ್ಕೆ ವಾಣಿಜ್ಯವು ಉತ್ತಮವಾಗಿದೆ. ಸಂಖ್ಯೆ, ಹಣಕಾಸು ಮತ್ತು ಅರ್ಥಶಾಸ್ತ್ರ ಇಷ್ಟದ ವಿಷಯವಾಗಿದ್ದರೆ ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು.

ಚಾರ್ಟರ್ಡ್ ಅಕೌಂಟೆಂಟ್, ಎಂಬಿಎ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಹೂಡಿಕೆಯಂತಹ ವ್ಯಾಪಕವಾದ ಆಯ್ಕೆಗಳನ್ನು ಇದು ನೀಡುತ್ತದೆ. ಅಕೌಂಟೆನ್ಸಿ, ಹಣಕಾಸು ಮತ್ತು ಅರ್ಥಶಾಸ್ತ್ರದೊಂದಿಗೆ ಪರಿಚಿತರಾಗಿರುವ ವಾಣಿಜ್ಯ ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆಗಳು ಇಂತಿವೆ.

ಚಾರ್ಟರ್ಡ್ ಅಕೌಂಟೆಂಟ್, ವ್ಯಾಪಾರ ನಿರ್ವಹಣೆ, ಜಾಹೀರಾತು ಮತ್ತು ಮಾರಾಟ ನಿರ್ವಹಣೆ, ಡಿಜಿಟಲ್ ಮಾರ್ಕೆಟಿಂಗ್, ಮಾನವ ಸಂಪನ್ಮೂಲ ಅಭಿವೃದ್ಧಿ.


ಕಲೆ ಅಥವಾ ಮಾನವಶಾಸ್ತ್ರ

ಕಲೆ ಅಥವಾ ಮಾನವೀಯ ವಿಷಯಗಳ ಬಗ್ಗೆ ಶೈಕ್ಷಣಿಕ ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವವರು ಸೃಜನಶೀಲರಾಗಿದ್ದರೆ ಮತ್ತು ಮಾನವೀಯತೆಗೆ ಆಳವಾಗಿ ಧುಮುಕಲು ಬಯಸಿದರೆ ಕಲೆ ಅತ್ಯುತ್ತಮ ಆಯ್ಕೆಯಾಗಿದೆ. ಕಲಾ ವಿದ್ಯಾರ್ಥಿಗಳಿಗೆ ಇತಿಹಾಸ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ ಮುಖ್ಯ ವಿಷಯಗಳು.
ಆರ್ಟ್ಸ್ ಈಗ ವೃತ್ತಿಜೀವನದ ಪರ್ಯಾಯವನ್ನು ನೀಡುತ್ತದೆ. ಇದು ವಿಜ್ಞಾನ ಮತ್ತು ವಾಣಿಜ್ಯದಿಂದ ನೀಡಲಾಗುವ ಸಮಾನವಾಗಿ ಲಾಭದಾಯಕವಾಗಿದೆ.

ಕಲಾ ವಿದ್ಯಾರ್ಥಿಗಳಿಗೆ ವೃತ್ತಿಯಲ್ಲಿ ಉತ್ಪನ್ನ ವಿನ್ಯಾಸ, ಮಾಧ್ಯಮ / ಪತ್ರಿಕೋದ್ಯಮ, ಫ್ಯಾಷನ್ ತಂತ್ರಜ್ಞಾನ, ವೀಡಿಯೊ ರಚನೆ ಮತ್ತು ಸಂಪಾದನೆ, ಮಾನವ ಸಂಪನ್ಮೂಲ ತರಬೇತಿ, ಶಾಲಾ ಬೋಧನೆ ಇತ್ಯಾದಿ ಕ್ಷೇತ್ರಗಳಿಗೆ ಪ್ರವೇಶ ಪಡೆಯಬಹುದು.


ಐಟಿಐ- ಕೈಗಾರಿಕಾ ತರಬೇತಿ ಸಂಸ್ಥೆ

ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿದ ಅನಂತರ ಸುಲಭವಾಗಿ ಉದ್ಯೋಗವನ್ನು ಬಯಸುವ ವಿದ್ಯಾರ್ಥಿಗಳಿಗೆ ಕೋರ್ಸ್‌ಗಳನ್ನು ಒದಗಿಸುವ ತರಬೇತಿ ಕೇಂದ್ರಗಳಾಗಿವೆ ಐಟಿಐ. ಯಾವುದೇ ತಾಂತ್ರಿಕ ಕೋರ್ಸ್ ಅನ್ನು ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಲು ಬಯಸುವ ವಿದ್ಯಾರ್ಥಿಗಳಿಗೆ ಐಟಿಐ ಕೋರ್ಸ್‌ಗಳು ಉತ್ತಮ ಅವಕಾಶಗಳನ್ನು ಒದಗಿಸುತ್ತದೆ.

ಐಟಿಐಯಲ್ಲಿ ಕೋರ್ಸ್ ಪೂರ್ಣಗೊಳಿಸುವ ವಿದ್ಯಾರ್ಥಿಯು ಕೈಗಾರಿಕಾ ಕೌಶಲ್ಯಗಳಲ್ಲಿ ತರಬೇತಿ ಪಡೆಯಬಹುದು ಮತ್ತು ಅದೇ ಕ್ಷೇತ್ರದಲ್ಲಿ ಕೆಲಸ ಮಾಡುವ ಮೂಲಕ ಜೀವನ ನಿರ್ವಹಣೆ ಮಾಡಬಹುದು.

ಐಟಿಐ ಅನಂತರ ವೃತ್ತಿ ಆಯ್ಕೆಗಳು ಇಂತಿವೆ. ಪಿಡಬ್ಲ್ಯೂಡಿಗಳು ಮತ್ತು ಇತರ ಸಾರ್ವಜನಿಕ ವಲಯಗಳಲ್ಲಿ ಉದ್ಯೋಗಾವಕಾಶ, ಖಾಸಗಿ ವಲಯಗಳಲ್ಲಿ ಉದ್ಯೋಗಗಳು, ಸ್ವಯಂ ಉದ್ಯೋಗ, ವಿದೇಶಗಳಲ್ಲಿ ಉದ್ಯೋಗ, ವಿಶೇಷತೆಯಲ್ಲಿ ಹೆಚ್ಚಿನ ಅಧ್ಯಯನಗಳಿಗೆ ಅವಕಾಶವಿದೆ.


ಪಾಲಿಟೆಕ್ನಿಕ್ ಕೋರ್ಸ್‌

10ನೇ ತರಗತಿಯ ಅನಂತರ ವಿದ್ಯಾರ್ಥಿಗಳು ಮೆಕ್ಯಾನಿಕಲ್, ಸಿವಿಲ್, ಕೆಮಿಕಲ್, ಕಂಪ್ಯೂಟರ್, ಆಟೋಮೊಬೈಲ್ ನಂತಹ ಪಾಲಿಟೆಕ್ನಿಕ್ ಕೋರ್ಸ್‌ಗಳಿಗೆ ಹೋಗಬಹುದು. ಈ ಕಾಲೇಜುಗಳು 3 ವರ್ಷ, 2 ವರ್ಷ ಮತ್ತು 1 ವರ್ಷದ ಡಿಪ್ಲೊಮಾ ಕೋರ್ಸ್‌ಗಳನ್ನು ಒದಗಿಸುತ್ತದೆ.

ಪಾಲಿಟೆಕ್ನಿಕ್ ಕೋರ್ಸ್ ಅನಂತರ ವೃತ್ತಿಯಲ್ಲಿ ಮುಖ್ಯವಾಗಿ ಖಾಸಗಿ ವಲಯದ ಉದ್ಯೋಗಗಳು, ಸರ್ಕಾರಿ ವಲಯದ ಉದ್ಯೋಗಗಳು, ಉನ್ನತ ಅಧ್ಯಯನಗಳು, ಸ್ವಯಂ ಉದ್ಯೋಗಿ, ಸ್ವಂತ ವ್ಯಾಪಾರವನ್ನು ನಡೆಸಲು ಅವಕಾಶವಿದೆ.

Continue Reading

ಪ್ರವಾಸ

E-Pass Mandatory: ಊಟಿ, ಕೊಡೈಕೆನಾಲ್‌ ಪ್ರವಾಸ ಹೊರಟಿದ್ದೀರಾ? ಹಾಗಿದ್ದರೆ ಗಮನಿಸಿ

E-Pass Mandatory: ಬೇಸಿಗೆಯಲ್ಲಿ ಬೆಟ್ಟ ಗುಡ್ಡಗಳಿರುವ ತಂಪಾದ ಪ್ರದೇಶದಲ್ಲಿ ಸುತ್ತಾಡಬೇಕು ಎನ್ನುವ ಆಸೆಯಿಂದ ಊಟಿ, ಕೊಡೈಕೆನಾಲ್‌ ಗೆ ಪ್ರವಾಸ ಹೊರಡುವ ಯೋಜನೆ ಇದ್ದರೆ ಕೂಡಲೇ ಇ ಪಾಸ್ ಪಡೆಯಿರಿ.

VISTARANEWS.COM


on

By

E-Pass Mandatory
Koo

ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟು ಎಲ್ಲಾದರೂ ತಂಪಾದ ಪ್ರದೇಶಗಳಲ್ಲಿ ಸುತ್ತಾಡಬೇಕು ಎನ್ನುವ ಆಸೆಯಿಂದ ಊಟಿ ಮತ್ತು ಕೊಡೈಕೆನಾಲ್‌ ಗೆ ಪ್ರವಾಸ ಹೊರಡಲು ಯೋಜನೆ ಹಾಕಿಕೊಂಡಿದ್ದೀರಾ. ಹಾಗಿದ್ದರೆ ಒಂದು ಮಹತ್ವದ ಸುದ್ದಿ ಇದೆ. ಈ ಬಾರಿ ಊಟಿ (Ooty) ಮತ್ತು ಕೊಡೈಕೆನಾಲ್‌ ಗೆ ( Kodaikanal) ಪ್ರವಾಸ (tour) ಹೋಗುವವರಿಗೆ ಇ-ಪಾಸ್ (E-Pass Mandatory) ಕಡ್ಡಾಯವಾಗಿದೆ.

ಬೇಸಗೆ ರಜೆ (summer vacation) ಹಿನ್ನೆಲೆಯಲ್ಲಿ ಊಟಿ ಮತ್ತು ಕೊಡೈಕೆನಾಲ್ ಪ್ರವಾಸಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬರುತ್ತಿರುವುದರಿಂದ ಪ್ರಸ್ತುತ ಇರುವ ವಿವಿಧ ವಾಹನಗಳು ಮತ್ತು ಬೇಸಿಗೆಯ ತಿಂಗಳುಗಳಲ್ಲಿ ಈ ಗಿರಿಧಾಮಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಗೆ ಸಂಬಂಧಿಸಿದಂತೆ ಡೇಟಾವನ್ನು ಸಂಗ್ರಹಿಸಲು ಜಿಲ್ಲಾಡಳಿತಗಳಿಗೆ ಅನುಕೂಲವಾಗುವಂತೆ ಇ-ಪಾಸ್ ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: Summer Tour: ಬೇಸಿಗೆ ಪ್ರವಾಸಕ್ಕೆ ಸೂಕ್ತ ಈ 5 ಅದ್ಭುತ ಗಿರಿಧಾಮಗಳು!

ಇ-ಪಾಸ್ ಕಡ್ಡಾಯ

ಮೇ 7ರಿಂದ ಜೂನ್ 30ರವರೆಗೆ ಊಟಿ ಮತ್ತು ಕೊಡೈಕೆನಾಲ್‌ಗೆ ಭೇಟಿ ನೀಡುವ ಪ್ರವಾಸಿಗರು ಕಡ್ಡಾಯವಾಗಿ ಇ-ಪಾಸ್ ಪಡೆಯಬೇಕು ಎಂದು ನ್ಯಾಯಮೂರ್ತಿಗಳಾದ ಎನ್. ಸತೀಶ್ ಕುಮಾರ್ ಮತ್ತು ಡಿ. ಭರತ್ ಚಕ್ರವರ್ತಿ ಅವರನ್ನೊಳಗೊಂಡ ವಿಶೇಷ ವಿಭಾಗೀಯ ಪೀಠ ಆದೇಶ ನೀಡಿದೆ.


ವಿಶೇಷ ವಿಭಾಗೀಯ ಪೀಠವು ನೀಲಗಿರಿ ಮತ್ತು ದಿಂಡುಗಲ್ ಕಲೆಕ್ಟರೇಟ್‌ಗಳಿಂದ ಇ-ಪಾಸ್‌ಗಳ ವಿತರಣೆಗೆ ಯಾವುದೇ ಮಿತಿಯಿಲ್ಲ ಎಂದು ಹೇಳಿದೆ. ಈ ಪಾಸ್‌ಗಳನ್ನು ಪಡೆದುಕೊಳ್ಳುವುದರಿಂದ ಸ್ಥಳೀಯ ನಿವಾಸಿಗಳಿಗೆ ವಿನಾಯಿತಿ ನೀಡಲಾಗಿದೆ.

ಹಲವು ವ್ಯವಸ್ಥೆ

ಇ- ಪಾಸ್ ವ್ಯವಸ್ಥೆಯನ್ನು ವ್ಯಾಪಕವಾಗಿ ಪ್ರಚಾರ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಇದರ ಜೊತೆಗೆ ಇಬ್ಬರು ಕಲೆಕ್ಟರ್‌ಗಳು, ಮಾಹಿತಿ ತಂತ್ರಜ್ಞಾನ ಇಲಾಖೆಯ ಬೆಂಬಲದೊಂದಿಗೆ, ಇ-ಪಾಸ್ ವ್ಯವಸ್ಥೆಯಲ್ಲಿ ಪಾವತಿ ಗೇಟ್‌ವೇ ಅನ್ನು ಸಂಯೋಜಿಸುವ ಬಗ್ಗೆ ಅನ್ವೇಷಿಸಲು ಪ್ರಸ್ತಾಪಿಸಲಾಗಿದೆ. ಇದು ಅರ್ಜಿದಾರರಿಗೆ ಆನ್‌ಲೈನ್‌ನಲ್ಲಿ ಟೋಲ್ ಶುಲ್ಕವನ್ನು ಪಾವತಿಸಲು, ಚೆಕ್‌ಪೋಸ್ಟ್‌ಗಳ ಬಳಿ ದಟ್ಟಣೆಯನ್ನು ಕಡಿಮೆ ಮಾಡಲು, ಇಂಧನವನ್ನು ಉಳಿಸಲು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ತಡೆಯಲು ಅನುವು ಮಾಡಿಕೊಡುತ್ತದೆ.


ಯಾಕೆ ಈ ಕ್ರಮ?

ಪ್ರವಾಸಿಗರ ಸಂಖ್ಯೆಗೆ ಕಡಿವಾಣ ಹಾಕುವ ಹೈಕೋರ್ಟ್‌ನ ಚಿಂತನೆಗೆ ಪ್ರತಿಕ್ರಿಯೆಯಾಗಿ ನೀಲಗಿರಿ ಮತ್ತು ದಿಂಡುಗಲ್ ಜಿಲ್ಲಾಧಿಕಾರಿಗಳು ವಾಹನ ಸಂಚಾರವನ್ನು ನಿರ್ಬಂಧಿಸಲು ಈ ಹಿಂದೆ ಪ್ರಸ್ತಾಪಿಸಲಾಗಿತ್ತು. ರಜೆ ಸೀಸನ್‌ಗಳಲ್ಲಿ ಊಟಿ ಮತ್ತು ಕೊಡೈಕೆನಾಲ್‌ ಗೆ ಬರುವ ವಾಹನಗಳ ಸಂಖ್ಯೆ ದಿನಕ್ಕೆ 2,000 ರಿಂದ 20,000ಕ್ಕೆ ಏರುತ್ತದೆ. ಇದು ವಾಹನ ದಟ್ಟಣೆ ಮತ್ತು ಪರಿಸರ ಹಾನಿಗೆ ಕಾರಣವಾಗುತ್ತದೆ.


ಈ ವಿಷಯವನ್ನು ಅಂಗೀಕರಿಸಿದ ನ್ಯಾಯಮೂರ್ತಿಗಳ ವಿಶೇಷ ವಿಭಾಗೀಯ ಪೀಠವು ಈ ವಿಷಯದ ಬಗ್ಗೆ ಚರ್ಚೆ ನಡೆಸಿದೆ. ಘಾಟ್ ರಸ್ತೆಗಳ ಮೇಲಿನ ಒತ್ತಡ ಮತ್ತು ಬೇಸಿಗೆಯಲ್ಲಿ ಅತಿಯಾದ ಪ್ರವಾಸಿ ಚಟುವಟಿಕೆಯಿಂದ ಉಂಟಾಗುವ ಪರಿಸರ ನಾಶವನ್ನು ವಕೀಲರು ಎತ್ತಿ ತೋರಿಸಿದರು.

ಈ ಕುರಿತು ಮಾತನಾಡಿರುವ ನೀಲಗಿರಿ ಜಿಲ್ಲಾಧಿಕಾರಿ ಎಂ. ಅರುಣಾ, ಕೇರಳ ಮತ್ತು ಕರ್ನಾಟಕ ಗಡಿಯಲ್ಲಿರುವ ಊಟಿ ಮತ್ತು ಕೊಡೈಕೆನಾಲ್‌ ಗೆ ಒಂಬತ್ತು ಗಡಿ ಚೆಕ್ ಪೋಸ್ಟ್‌ ಗಳಿವೆ. ರಜೆಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ವಾಹನ ದಟ್ಟಣೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ಹೀಗಾಗಿ ವಾಹನಗಳ ಎಣಿಕೆಯು ಅಗತ್ಯ. ಕೇವಲ ಪ್ರವಾಸಿ ವಾಹನಗಳಲ್ಲದೇ ಸರಕುಗಳ ಸಾಗಣೆಯ ವಾಹನಗಳನ್ನೂ ಇದು ಒಳಗೊಂಡಿರುತ್ತದೆ ಎಂದು ಹೇಳಿದರು.

Continue Reading

ಒಟಿಟಿ

Movie Release: ಈ ವಾರ ಒಟಿಟಿಯಲ್ಲಿ ನೀವು ನೋಡಬಹುದಾದ ಸಿನಿಮಾ, ವೆಬ್‌ ಸಿರೀಸ್‌ಗಳಿವು; ಟ್ರೈಲರ್‌ಗಳನ್ನು ಇಲ್ಲಿ ನೋಡಿ

Movie Release: ಹಾಸ್ಯದಿಂದ ಥ್ರಿಲ್ಲರ್‌ಗಳವರೆಗೆ, ರೋಮ್ಯಾಂಟಿಕ್‌ನಿಂದ ಅಪರಾಧ ಸರಣಿಗಳವರೆಗೆ ಪ್ರತಿಯೊಬ್ಬರಿಗೂ ಇಷ್ಟವಾಗುವ ಚಿತ್ರಗಳು, ಸರಣಿಗಳು ಒಟಿಟಿಗೆ ಕಾಲಿಟ್ಟಿದ್ದು ಮನೆಯಲ್ಲೇ ಕುಳಿತು ವೀಕ್ಷಿಸಬಹುದು. ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

VISTARANEWS.COM


on

By

Movie Release
Koo

ಈ ಬಾರಿ ವಿಭಿನ್ನ ಪ್ರಕಾರದ ಚಲನಚಿತ್ರಗಳು (Movie Release) ಒಟಿಟಿಯಲ್ಲಿ (OTT) ಬಿಡುಗಡೆಗೆ ಸಿದ್ಧವಾಗಿದೆ. ಹಾಸ್ಯದಿಂದ (Comedy) ಆಕ್ಷನ್ (Action), ಥ್ರಿಲ್ಲರ್‌ಗಳವರೆಗೆ ( Thriller), ರೋಮ್ಯಾಂಟಿಕ್‌ನಿಂದ ಅಪರಾಧ ಸರಣಿಗಳವರೆಗೆ ಹೀಗೆ ಪ್ರತಿಯೊಬ್ಬರಿಗೂ ಇಷ್ಟವಾಗುವ ಚಿತ್ರಗಳನ್ನು ಮನೆಯಲ್ಲೇ ಕುಳಿತು ವೀಕ್ಷಿಸಬಹುದು. ಹೆಚ್ಚು ಇಷ್ಟಪಡುವ ಕೆಲವು ಹೊಸ ಚಲನಚಿತ್ರಗಳು ಮತ್ತು ಸರಣಿಗಳು ಈ ವಾರ ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಲಿದೆ.

ಫಿಯಾಸ್ಕೋ

ಇಗೊರ್ ಗೋಟ್ಸ್‌ಮನ್ ಬರೆದು ನಿರ್ದೇಶಿಸಿರುವ ಫ್ರೆಂಚ್ ಹಾಸ್ಯ ಸರಣಿ ಫಿಯಾಸ್ಕೋ. ಇದರಲ್ಲಿ ನೈನಿ, ಫ್ರಾಂಕೋಯಿಸ್ ಸಿವಿಲ್, ಗೋಟ್ಸ್‌ಮನ್, ಜೆರಾಲ್ಡಿನ್ ನಕಾಚೆ, ಲೂಯಿಸ್ ಕೋಲ್ಡೆಫಿ, ಲೆಸ್ಲಿ ಮೆಡಿನಾ, ಪಾಸ್ಕಲ್ ಡೆಮೊಲನ್, ಜೂಲಿಯೆಟ್ ಗ್ಯಾಸ್ಕೆಟ್, ಡಿಜಿಮೊ, ಮೇರಿ-ಕ್ರಿಸ್ಟಿನ್ ಬರಾಲ್ಟ್ ಮತ್ತು ವಿನ್ಸೆಂಟ್ ಕ್ಯಾಸೆಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ.


2024ರ ಏಪ್ರಿಲ್ 8ರಂದು ಕ್ಯಾನೆಸರೀಸ್ ಫೆಸ್ಟಿವಲ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿರುವ ಫಿಯಾಸ್ಕೋ ಸರಣಿಯು ಅಜ್ಜಿಗೆ ಗೌರವ ಸಲ್ಲಿಸಲು ರಾಫೆಲ್ ವಾಲಾಂಡೆ ಅವರ ನಿರ್ದೇಶಿಸುವ ಚೊಚ್ಚಲ ಸಿನಿಮಾದ ಸುತ್ತ ಸುತ್ತುತ್ತದೆ. ತಂಡದ ಸದಸ್ಯರು ಚಲನಚಿತ್ರವನ್ನು ಹಾಳುಮಾಡಲು ಪ್ರಯತ್ನಿಸಿದಾಗ ಅದು ದುಃಸ್ವಪ್ನವಾಗುತ್ತದೆ. ನೆಟ್‌ಫ್ಲಿಕ್ಸ್ ಈ ಸರಣಿಯು ಏಪ್ರಿಲ್ 30ರಿಂದ ಪ್ರದರ್ಶನ ಕಾಣಲಿದೆ.

ಇದನ್ನೂ ಓದಿ: Vettaiyan Movie: ರಜನಿಕಾಂತ್ ಸಿನಿಮಾದಲ್ಲಿ ಅನಿರುದ್ಧ್ ರವಿಚಂದರ್; ಲೀಕ್‌ ಆಯ್ತು ಫೋಟೊ!


ಅಕಾಪುಲ್ಕೊ ಸೀಸನ್ 3

ಅಮೆರಿಕನ್ ಸ್ಪ್ಯಾನಿಷ್ ಮತ್ತು ಇಂಗ್ಲಿಷ್ ಭಾಷೆಯ ಹಾಸ್ಯ ಸರಣಿ ಅಕಾಪುಲ್ಕೊದ ಮೂರನೇ ಸರಣಿ ಒಟಿಟಿ ಪ್ಲಾಟ್‌ಫಾರ್ಮ್ ಮೇಲೆ ಬರಲು ಸಜ್ಜಾಗಿದೆ. ಇದನ್ನು ಆಸ್ಟಿನ್ ವಿನ್ಸ್‌ಬರ್ಗ್, ಎಡ್ವರ್ಡೊ ಸಿಸ್ನೆರೋಸ್ ಮತ್ತು ಜೇಸನ್ ಶುಮನ್ ರಚಿಸಿದ್ದಾರೆ. ಈ ಸರಣಿಯು ಹೌ ಟು ಬಿ ಎ ಲ್ಯಾಟಿನ್ ಲವರ್ (2017) ನಿಂದ ಸ್ಫೂರ್ತಿ ಪಡೆದಿದೆ. ಇದರ ಮೊದಲ ಸೀಸನ್ 2021ರ ಅಕ್ಟೋಬರ್ 8ರಂದು ಬಿಡುಗಡೆಯಾಗಿತ್ತು. ಅನಂತರ ಎರಡನೇ ಸೀಸನ್ 2022ರ ಅಕ್ಟೋಬರ್ ನಲ್ಲಿ ಬಿಡುಗಡೆಯಾಯಿತು. ಈಗ ಮೂರನೇ ಸೀಸನ್ ಬಿಡುಗಡೆಗೆ ಸಿದ್ಧವಾಗಿದೆ. Apple TV+ ನಲ್ಲಿ ಈ ಸರಣಿ ಮೇ 1ರಿಂದ ಪ್ರದರ್ಶನ ಕಾಣಲಿದೆ.


T・P ಬಾನ್

T・P BON ಎಂಬುದು ಬಾನ್ ಮೇಲೆ ಕೇಂದ್ರೀಕರಿಸುವ ನಾಮಸೂಚಕ ಮಂಗಾದ ಅನಿಮೆ ರೂಪಾಂತರ. ಬಾನ್ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದು, ಟೈಮ್ ಪ್ಯಾಟ್ರೋಲ್ ಎಂದು ಕರೆಯಲ್ಪಡುವ ಟೈಮ್-ಟ್ರಾವೆಲಿಂಗ್ ಸ್ಕ್ವಾಡ್‌ನ ಸದಸ್ಯರಾಗಿದ್ದಾರೆ. ಪ್ರಪಂಚದಾದ್ಯಂತದ ವಿವಿಧ ಸಮಯ ಮತ್ತು ಸ್ಥಳಗಳ ಮೂಲಕ ಜನರನ್ನು ಪ್ರಮುಖ ಐತಿಹಾಸಿಕ ಕ್ಷಣಗಳಿಂದ ರಕ್ಷಿಸುವ ಮೂಲಕ ಇದು ನೋಡಲು ಆಹ್ಲಾದಕರವಾದ ಆದರೆ ಪ್ರಮುಖವಾದ ಮಿಷನ್ ಅನ್ನು ನಿರೂಪಿಸುತ್ತದೆ. ಬಾನ್ ಮತ್ತು ಅವನ ಸಂಗಡಿಗರು ಸಮಯ ಪ್ರಯಾಣದ ಜಟಿಲತೆಗಳನ್ನು ಪರಿಶೀಲಿಸಿದಾಗ ಅವರು ತಮ್ಮ ನಿರ್ಣಯವನ್ನು ಪರೀಕ್ಷಿಸುವ ಸವಾಲುಗಳನ್ನು ಎದುರಿಸುತ್ತಾರೆ ಮತ್ತು ಇತಿಹಾಸದ ಬಗ್ಗೆ ಅವರ ಒಳನೋಟವನ್ನು ಆಳವಾಗಿಸುತ್ತಾರೆ. ನೆಟ್‌ಫ್ಲಿಕ್ಸ್ ನಲ್ಲಿ ಈ ಸರಣಿ ಮೇ 2ರಿಂದ ತೆರೆ ಕಾಣಲಿದೆ.


ದಿ ಐಡಿಯಾ ಆಫ್ ಯು

2024ರ ಅಮೇರಿಕನ್ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರ ದಿ ಐಡಿಯಾ ಆಫ್ ಯು. ಇದನ್ನು ಮೈಕೆಲ್ ಶೋಲ್ಟರ್ ನಿರ್ದೇಶಿಸಿದ್ದಾರೆ. ಈ ಚಲನಚಿತ್ರವನ್ನು ಜೆನ್ನಿಫರ್ ವೆಸ್ಟ್‌ಫೆಲ್ಡ್ ಜೊತೆ ಸಹ-ಬರೆದಿದ್ದಾರೆ ಮತ್ತು ಚಲನಚಿತ್ರವು ರಾಬಿನ್ನೆ ಲೀ ಅವರ ಅದೇ ಹೆಸರನ್ನು ಆಧರಿಸಿದೆ. ಇದು ಅನ್ನಿ ಹ್ಯಾಥ್‌ವೇ ಮತ್ತು ನಿಕೋಲಸ್ ಗ್ಯಾಲಿಟ್‌ಜಿನ್ ಒಬ್ಬ ತಾಯಿ ಮತ್ತು ಜನಪ್ರಿಯ ಬಾಯ್ ಬ್ಯಾಂಡ್‌ನ ಪ್ರಮುಖ ಗಾಯಕ ಮತ್ತು ಪ್ರಮುಖ ಗಾಯಕ ನಡುವಿನ ಪ್ರೇಮಕಥೆಯನ್ನು ನಿರೂಪಿಸುತ್ತದೆ. ಪ್ರಧಾನ ವಿಡಿಯೋ ನಲ್ಲಿ ಮಾರ್ಚ್ 16ರಿಂದ ಚಿತ್ರ ತೆರೆ ಕಾಣುತ್ತಿದೆ.


ಶೈತಾನ್

ಶೈತಾನ್ 2024ರ ಭಾರತೀಯ ಹಿಂದಿ ಭಾಷೆಯ ಅಲೌಕಿಕ ಹಾರರ್ ಥ್ರಿಲ್ಲರ್ ಚಲನಚಿತ್ರವಾಗಿದೆ. ಚಿತ್ರವನ್ನು ವಿಕಾಸ್ ಬಹ್ಲ್ ನಿರ್ದೇಶಿಸಿದ್ದಾರೆ ದೇವಗನ್ ಫಿಲ್ಮ್ಸ್, ಪನೋರಮಾ ಸ್ಟುಡಿಯೋಸ್ ಮತ್ತು ಜಿಯೋ ಸ್ಟುಡಿಯೋಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಅಜಯ್ ದೇವಗನ್, ಆರ್. ಮಾಧವನ್, ಜ್ಯೋತಿಕಾ, ಅಂಗದ್ ರಾಜ್ ಮತ್ತು ಜಾಂಕಿ ಬೋಡಿವಾಲಾ ನಟಿಸಿದ್ದಾರೆ. ತಮ್ಮ ಹಿರಿಯ ಮಗಳು ಮಾಟಮಂತ್ರದ ಮಾಟಕ್ಕೆ ಸಿಲುಕಿದಾಗ ಅವರ ಜೀವನವು ಅಸ್ತವ್ಯಸ್ತವಾಗಿರುವ ಕುಟುಂಬದ ಸುತ್ತ ಚಲನಚಿತ್ರವು ಸುತ್ತುತ್ತದೆ. ನೆಟ್‌ಫ್ಲಿಕ್ಸ್ ನಲ್ಲಿ ಈ ಚಿತ್ರ ಮೇ 3ರಿಂದ ತೆರೆ ಕಾಣಲಿದೆ.


ಟಿಲ್ಲು 2

ಟಿಲ್ಲು ಸ್ಕ್ವೇರ್ ಭಾರತೀಯ ತೆಲುಗು ಭಾಷೆಯ ರೋಮ್ಯಾಂಟಿಕ್ ಕ್ರೈಮ್ ಹಾಸ್ಯ ಚಲನಚಿತ್ರವಾಗಿದ್ದು, ಇದನ್ನು ಮಲ್ಲಿಕ್ ರಾಮ್ ನಿರ್ದೇಶಿಸಿದ್ದಾರೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸೂರ್ಯದೇವರ ನಾಗ ವಂಶಿ ನಿರ್ಮಿಸಿದ್ದಾರೆ. 2022 ರ ಡಿ.ಜೆ. ಟಿಲ್ಲು ಚಿತ್ರದ ಮುಂದುವರಿದ ಭಾಗವಾಗಿದ್ದು, ಸಿದ್ದು ಜೊನ್ನಲಗಡ್ಡ ಅವರು ಹಿಂದಿನ ಚಿತ್ರದಲ್ಲಿ ತಮ್ಮ ಪಾತ್ರವನ್ನು ಪುನರಾವರ್ತಿಸಿದರೆ, ಅನುಪಮಾ ಪರಮೇಶ್ವರನ್ ನಾಯಕಿಯಾಗಿ ನಟಿಸಿದ್ದಾರೆ. ಮಾರ್ಚ್ 26ರಿಂದ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ.


ಭೀಮಾ

ಆಕ್ಸನ್ ಚಿತ್ರವಾಗಿರುವ ಭೀಮಾದಲ್ಲಿ ಗೋಪಿಚಂದ್ ಡಬಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾ, ಭವಾನಿ ಶಂಕರ್, ಮಾಳವಿಕಾ ಶರ್ಮ ಸೇರಿದಂತೆ ಹಲವು ಪ್ರಮುಖರು ಚಿತ್ರದಲ್ಲಿ ಕಂಡಿಸಿಕೊಂಡಿದ್ದಾರೆ. ಎ. ಹರ್ಷ ನಿರ್ದೇಶನದ ಈ ಚಿತ್ರವನ್ನು ಕೆ.ಕೆ. ರಾಧಾಮೋಹನ್ ನಿರ್ಮಿಸಿದ್ದಾರೆ. 28 ಕೋಟಿ ಬಜೆಟ್‌ನ ಈ ಚಿತ್ರ ಹಾಟ್ ಸ್ಟಾರ್ ನಲ್ಲಿ ಮಾರ್ಚ್ 26ರಿಂದ ತೆರೆ ಕಾಣಲಿದೆ.


ಕುಂಗ್ ಫು ಪಂಡಾ 4

ಅಮೆರಿಕನ್ ಅನಿಮೇಷನ್ ಚಿತ್ರ ಕುಂಗ್ ಫು ಪಂಡಾ 4 ಅನ್ನು ಡ್ರೀಮ್ ವರ್ಕ್ ಅನಿಮೇಷನ್ ನಿರ್ದೇಶಿಸಿದೆ. ಜೇಮ್ಸ್ ಹಾಂಗ್, ಬ್ರಯಾನ್ ಕ್ರೇನ್ಸ್ಟೋನ್, ಡುಸ್ಟಿನ್ ಹಾಫ್ಮ್ಯಾನ್, ಜೇಮ್ಸ್ ಹೊಂಗ್ ಸೇರಿದಂತೆ ಹಲವು ಪಾತ್ರಗಳು ಹಿಂದಿನ ಸರಣಿಯಂತೆ ಈ ಬಾರಿಯ ಸರಣಿಯಲ್ಲೂ ಕಾಣಿಸಿಕೊಳ್ಳಲಿದೆ. ಇದು ಬುಕ್ ಮೈ ಶೋ ನಲ್ಲಿ ಮಾರ್ಚ್ 26 ರಿಂದ ತೆರೆ ಕಾಣಲಿದೆ.


ದಿ ಫಿಲಂ ಸ್ಟಾರ್

ಅಮೆಜಾನ್ ಪ್ರೈಮ್ ನಲ್ಲಿ ಮಾರ್ಚ್ 26ರಿಂದ ತೆರೆ ಕಾಣಲಿರುವ ವಿಜಯ್ ದೇವರಕೊಂಡ ಅಭಿನಯದ ಕೌಟುಂಬಿಕ ಪ್ರಧಾನ ಚಿತ್ರ ದಿ ಫಿಲಂ ಸ್ಟಾರ್. ಉತ್ತಮ ಜೀವನ ನಿರ್ವಹಣೆಗಾಗಿ ಮಾಡುವ ಸಾಹಸ ಚಿತ್ರದ ಮುಖ್ಯ ಕಥೆಯಾಗಿದೆ.


ಡೆಡ್ ಬಾಡಿ ಡಿಟೆಕ್ಟಿವ್

ನೆಟ್ ಫ್ಲಿಕ್ಸ್ ನಲ್ಲಿ ಮಾರ್ಚ್ 26ರಿಂದ ತೆರೆ ಕಾಣಲಿರುವ ಈ ಸರಣಿ ಸ್ಟೀವ್ ಯೊಕೆಯ್ ನಿರ್ದೇಶಿಸಿದ್ದಾರೆ. ಕ್ರೈಮ್ ನ ಕಾರಣಗಳನ್ನು ಹುಡುಕಿ ಕುತೂಹಲ ವಿಚಾರಗಳನ್ನು ವಿಶೇಷ ರೀತಿಯಲ್ಲಿ ತೆರೆದಿಡುವ ಸರಣಿ ಇದಾಗಿದೆ.

Continue Reading

ಕ್ರೈಂ

Divorce Case: ಪತಿ, ಕುಟುಂಬದ ವಿರುದ್ಧದ ಸುಳ್ಳು ಕೇಸು ಕ್ರೌರ್ಯಕ್ಕೆ ಸಮಾನ; ಬಾಂಬೆ ಹೈಕೋರ್ಟ್

Divorce Case: ವಿಚ್ಛೇದನ ಪ್ರಕರಣದಲ್ಲಿ ಸಿವಿಲ್ ಪ್ರಕರಣಗಳನ್ನು ಹೊರತುಪಡಿಸಿ ಪತಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವುದು ಕ್ರೌರ್ಯಕ್ಕೆ ಸಮಾನವಾಗಿರುತ್ತದೆ ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ ಹೇಳಿದೆ.

VISTARANEWS.COM


on

By

Divorce Case
Koo

ಮುಂಬಯಿ: ಪತಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ವಿವಿಧ ಸುಳ್ಳು (fake) ಕ್ರಿಮಿನಲ್ ಪ್ರಕರಣಗಳನ್ನು (criminal case) ದಾಖಲಿಸುವುದು ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ಬಾಂಬೆ ಹೈಕೋರ್ಟ್‌ನ (bombay high court) ಔರಂಗಾಬಾದ್ ಪೀಠ (Aurangabad bench) ಹೇಳಿದೆ. ವಿಚ್ಛೇದನಕ್ಕೆ ದಂಪತಿ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಪತಿ ಸಲ್ಲಿಸಿದ ಮನವಿಯ ಮೇರೆಗೆ ಕೆಳ ನ್ಯಾಯಾಲಯವು ದಂಪತಿಗೆ ವಿಚ್ಛೇದನವನ್ನು ನೀಡಿದರೆ, ವೈವಾಹಿಕ ಹಕ್ಕುಗಳನ್ನು ಮರುಸ್ಥಾಪಿಸಲು ಪತ್ನಿ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಮೂರ್ತಿ ವೈ.ಜಿ. ಖೋಬ್ರಾಗಡೆ ಅವರ ಪೀಠವು ವಿಚಾರಣೆ ನಡೆಸುತ್ತಿದೆ. ದಂಪತಿಗೆ ನೀಡಿರುವ ವಿಚ್ಛೇದನವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. 2004 ರಲ್ಲಿ ಪರ್ಭಾನಿಯಲ್ಲಿ ವಿವಾಹವಾದ ದಂಪತಿ 2012 ರವರೆಗೆ ಒಟ್ಟಿಗೆ ವಾಸಿಸುತ್ತಿದ್ದರು. ಅವರಿಗೆ ಒಬ್ಬ ಮಗಳು ಇದ್ದಾಳೆ.

ಇದನ್ನೂ ಓದಿ: Physical Abuse: ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ ಎಸಗಿದವನಿಗೆ 106 ವರ್ಷ ಜೈಲು ಶಿಕ್ಷೆ

2012ರಲ್ಲಿ ಹೆಂಡತಿ ತನ್ನನ್ನು ತೊರೆದು ಮಗಳೊಂದಿಗೆ ತವರು ಮನೆಯಲ್ಲಿ ಹೆತ್ತವರೊಂದಿಗೆ ವಾಸಿಸುತ್ತಿದ್ದಾಳೆ ಎಂದು ವ್ಯಕ್ತಿ ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದಾನೆ. ಇದಾದ ಬಳಿಕ 2015ರಲ್ಲಿ ವೈವಾಹಿಕ ಹಕ್ಕುಗಳ ಮರುಸ್ಥಾಪನೆಗಾಗಿ ಪತ್ನಿ ಮನವಿ ಸಲ್ಲಿಸಿದ್ದು, ನ್ಯಾಯಾಲಯವು ಅವರ ಪರವಾಗಿ ತೀರ್ಪು ನೀಡಿದ್ದರಿಂದ ಪತ್ನಿ ಗಂಡನೊಂದಿಗೆ ವಾಸಿಸಲು ಹೋಗಿದ್ದರು. ಆದರೆ ಆತ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಪತ್ನಿ ಗಂಡನ ವಿರುದ್ಧ ನಾಪತ್ತೆ ದೂರನ್ನು ದಾಖಲಿಸಿದ್ದರು. ಅವರು ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಕಾನೂನು ಹೋರಾಟವನ್ನು ಪ್ರಾರಂಭಿಸಿದರು.

ಪತ್ನಿ ತನ್ನ ಮತ್ತು ತನ್ನ ಕುಟುಂಬ ಸದಸ್ಯರ ವಿರುದ್ಧ ಸುಳ್ಳು ಕ್ರಿಮಿನಲ್ ದೂರುಗಳು ಸೇರಿದಂತೆ ವಿವಿಧ ಕೇಸುಗಳನ್ನು ದಾಖಲಿಸಿದ್ದಾರೆ. ಈ ಸುಳ್ಳು ದೂರುಗಳಿಂದಾಗಿ ತಾನು ಮತ್ತು ತನ್ನ ಕುಟುಂಬ ಸದಸ್ಯರು ಮಾನಸಿಕ ಕ್ರೌರ್ಯವನ್ನು ಅನುಭವಿಸಿರುವುದಾಗಿ ವ್ಯಕ್ತಿ ನ್ಯಾಯಾಲಯದ ಮುಂದೆ ಹೇಳಿದ್ದಾರೆ. ಅಲ್ಲದೇ ಪತ್ನಿ ತನ್ನ ತಂದೆ ಮತ್ತು ಸಹೋದರನ ವಿರುದ್ಧವೂ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನಕಲಿ ಮತ್ತು ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ . ಅನಂತರ ಅವರನ್ನು ಈ ಪ್ರಕರಣದಲ್ಲಿ ಖುಲಾಸೆಗೊಳಿಸಲಾಯಿತು, ಆದರೆ ಪತ್ನಿಯಿಂದಾಗಿ ತನ್ನ ಕುಟುಂಬ ಸದಸ್ಯರು ಆಘಾತವನ್ನು ಅನುಭವಿಸಿದ್ದಾರೆ ಮತ್ತು ಸಮಾಜದಲ್ಲಿ ಅವರ ಖ್ಯಾತಿಯನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ತನಗೆ ಅತ್ತೆಯಂದಿರು ಕಿರುಕುಳ ನೀಡಿರುವುದಾಗಿ ಪ್ರಕರಣ ದಾಖಲಿಸಿಸಿರುವುದಾಗಿ ಮಹಿಳೆ ನ್ಯಾಯಾಲಯದ ಮುಂದೆ ತಿಳಿಸಿದ್ದಾರೆ.


ನ್ಯಾ. ಖೋಬ್ರಗಡೆ ಅವರು ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಿದ ಅನಂತರ, ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿಯಲ್ಲಿ ವಿಚಾರಣೆಯನ್ನು ಪ್ರಾರಂಭಿಸುವುದು ಮತ್ತು ದಾಂಪತ್ಯದ ಹಕ್ಕುಗಳನ್ನು ಮರುಸ್ಥಾಪಿಸುವುದು ಕ್ರೌರ್ಯವಲ್ಲ. ಆದರೆ, ಪತಿ, ಅವರ ತಂದೆ, ಸಹೋದರ ಮತ್ತು ಇತರ ಕುಟುಂಬ ಸದಸ್ಯರ ವಿರುದ್ಧ ಪೊಲೀಸ್ ಅಧಿಕಾರಿಗಳಿಗೆ ವಿವಿಧ ಸುಳ್ಳು, ಆಧಾರರಹಿತ ದೂರುಗಳನ್ನು ಸಲ್ಲಿಸುವುದು ಖಂಡಿತವಾಗಿಯೂ ಕ್ರೌರ್ಯದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಹೇಳಿದ್ದಾರೆ.

ಮಹಿಳೆಯ ಕಡೆಯಿಂದ ಕ್ರೌರ್ಯವಿದೆ ಎಂದು ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಪೀಠ ಒಪ್ಪಿತು. ದಂಪತಿಗೆ ವಿಚ್ಛೇದನ ನೀಡುವ ಕೆಳ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಹೇಳಿ ಹೈಕೋರ್ಟ್ ಮಹಿಳೆಯ ಅರ್ಜಿಯನ್ನು ವಜಾಗೊಳಿಸಿದೆ.

Continue Reading
Advertisement
CoWin Certificates
ದೇಶ2 mins ago

CoWIN Certificates: ಕೋವಿಡ್‌ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಔಟ್‌; ಕೇಂದ್ರ ಹೇಳೋದೇನು?

PBKS vs CSK
ಕ್ರೀಡೆ5 mins ago

PBKS vs CSK: ಕೆಕೆಆರ್​ ದಾಖಲೆ ಹಿಂದಿಕ್ಕಿದ ಪಂಜಾಬ್​ ಕಿಂಗ್ಸ್

Parineeti Chopra husband Raghav Chadha doing well after eye surgery
ಬಾಲಿವುಡ್14 mins ago

Parineeti Chopra: ಪರಿಣಿತಿ ಚೋಪ್ರಾ ಪತಿ ಕಣ್ಣು ಕಳೆದುಕೊಳ್ಳುವ ಸಾಧ್ಯತೆ: ವೈದ್ಯರು ಹೇಳೋದೇನು?

Rahul Gandhi
ಪ್ರಮುಖ ಸುದ್ದಿ21 mins ago

Rahul Gandhi: ಇಂದು ಶಿವಮೊಗ್ಗದಲ್ಲಿ ರಾಹುಲ್‌ ಗಾಂಧಿ ಪ್ರಚಾರ; ಪ್ರಜ್ವಲ್‌ ರೇವಣ್ಣ ವಿಚಾರ ತೆಗೀತಾರಾ?

Job Alert
ಉದ್ಯೋಗ26 mins ago

Job Alert: ಗಮನಿಸಿ; ಹಟ್ಟಿ ಚಿನ್ನದ ಗಣಿ ಕಂಪನಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

After SSLC career options
ಶಿಕ್ಷಣ30 mins ago

Best Courses After SSLC: ವಿಜ್ಞಾನ, ವಾಣಿಜ್ಯ, ಕಲೆ; ಯಾವುದು ಉತ್ತಮ ಆಯ್ಕೆ?

Thomas Cup 2024
ಬ್ಯಾಡ್ಮಿಂಟನ್30 mins ago

Thomas Cup 2024: ಅಂತಿಮ ಲೀಗ್​ ಪಂದ್ಯದಲ್ಲಿ ಇಂಡೊನೇಷ್ಯಾಕ್ಕೆ ಮಣಿದ ಭಾರತ

Aadhaar Crads For Dog
ಪ್ರಮುಖ ಸುದ್ದಿ34 mins ago

Aadhaar Crads For Dog: ದೆಹಲಿಯಲ್ಲಿ ನಾಯಿಗಳಿಗೂ ಬಂತು ಆಧಾರ್ ಕಾರ್ಡ್!

Pushpa 2 The Rule Title track out
ಟಾಲಿವುಡ್46 mins ago

Pushpa 2: ‘ಪುಷ್ಪ 2’ ಟೈಟಲ್​ ಸಾಂಗ್ ಔಟ್‌: ಸ್ಟೈಲಿಶ್‌ ಆಗಿ ಎಂಟ್ರಿ ಕೊಟ್ಟ ಅಲ್ಲು ಅರ್ಜುನ್!

Congress Candidate List
Lok Sabha Election 202450 mins ago

Congress Candidate List: ಅಮೇಥಿ, ರಾಯ್‌ ಬರೇಲಿಯಿಂದ ರಾಹುಲ್‌, ಪ್ರಿಯಾಂಕಾ ಸ್ಪರ್ಧಿಸುತ್ತಾರಾ? ಕುತೂಹಲಕ್ಕೆ ಇಂದು ತೆರೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ5 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌