T20 World Cup | ನನ್ನ ಈ ಸಾಧನೆಗೆ ಐಪಿಎಲ್​ ಕಾರಣ; ಸರಣಿ ಶ್ರೇಷ್ಠ ವಿಜೇತ ಸ್ಯಾಮ್​ ಕರನ್​ - Vistara News

Latest

T20 World Cup | ನನ್ನ ಈ ಸಾಧನೆಗೆ ಐಪಿಎಲ್​ ಕಾರಣ; ಸರಣಿ ಶ್ರೇಷ್ಠ ವಿಜೇತ ಸ್ಯಾಮ್​ ಕರನ್​

ಟಿ20 ವಿಶ್ವ ಕಪ್​ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರಲು ಇಂಡಿಯನ್​ ಪ್ರೀಮಿಯರ್​ ಲೀಗ್​ ಕಾರಣ ಎಂದು ಸ್ಯಾಮ್​ ಕರನ್​ ಹೇಳಿದ್ದಾರೆ.

VISTARANEWS.COM


on

Sam Curran
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೆಲ್ಬೋರ್ನ್​: ಐಸಿಸಿ ಟಿ20 ವಿಶ್ವ ಕಪ್(T20 World Cup)​ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಮೂರು ವಿಕೆಟ್​ ಕಿತ್ತು ಪಂದ್ಯಶ್ರೇಷ್ಠ ಮತ್ತು ಟೂರ್ನಿಯ ಶ್ರೇಷ್ಠ ಪ್ರಶಸ್ತಿ ಪಡೆದ ಇಂಗ್ಲೆಂಡ್​ ತಂಡದ ಸ್ಯಾಮ್​ ಕರನ್​​ ತನ್ನ ಈ ಸಾಧನೆಗೆ ಇಂಡಿಯನ್​ ಪ್ರೀಮಿಯರ್​ ಲೀಗ್​(ಐಪಿಎಲ್​) ಕಾರಣ ಎಂದು ಹೇಳಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಸ್ಯಾಮ್​ ಕರನ್​ ಐಪಿಎಲ್​ ಟೂರ್ನಿ ಇರದೇ ಇರುತ್ತಿದ್ದರೆ ನಾನು ಇಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಿಂಚಲು ಸಾಧ್ಯವಾಗುತ್ತಿರಲಿಲ್ಲ. ಐಪಿಎಲ್​ನಲ್ಲಿ ಸಿಕ್ಕ ಅನುಭವ ವಿಶ್ವ ಕಪ್​ನಲ್ಲಿ ಶ್ರೇಷ್ಠ ಪ್ರದರ್ಶನ ತೋರಲು ನೆರವಾಯಿತು ಎಂದರು.

“ಐಪಿಎಲ್​ನಲ್ಲಿ ಪಂಜಾಬ್​ ಕಿಂಗ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಪ್ರತಿನಿಧಿಸಿರುವ ನಾನು ಈ ತಂಡಗಳ ಆಟಗಾರರಿಂದ ಸಾಕಷ್ಟು ಕಲಿತಿದ್ದೇನೆ. ಇದುವೇ ನನ್ನ ಈ ಸಾಧನೆಗೆ ಕಾರಣ. ಕಲಿಯುವುದು ಸಾಕಷ್ಟಿದೆ. ಇದೇ ಹುರುಪಿನಲ್ಲಿ ಮತ್ತೆ ಭಾರತದ ಐಪಿಎಲ್​ ಟೂರ್ನಿಗೆ ಹಿಂದಿರುಗುವೆ” ಎಂದು ಸ್ಯಾಮ್​ ಕರನ್​ ತಿಳಿಸಿದರು.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸ್ಯಾಮ್​ ಕರನ್​ 4 ಓವರ್​ಗೆ ಕೇವಲ 12 ರನ್​ ಬಿಟ್ಟುಕೊಟ್ಟು ಪ್ರಮುಖ ಮೂರು ವಿಕೆಟ್​ ಕಿತ್ತು ಮಿಂಚಿದರು. ಇನ್ನು ಈ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ 5 ವಿಕೆಟ್​ ಗೆಲುವು ಸಾಧಿಸಿ 2ನೇ ಬಾರಿ ಟಿ20 ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ಇದನ್ನೂ ಓದಿ | T20 World Cup | ಟಿ20 ವಿಶ್ವ ಕಪ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಟಾಪ್​ 5 ಬೌಲರ್​ಗಳು ಯಾರು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

Narendra Modi: ಕಾಂಗ್ರೆಸ್‌ ರಾಜ್ಯದಲ್ಲಿ ಹನುಮಾನ್‌ ಚಾಲೀಸಾ ಹೇಳುವುದೂ ಮಹಾಪರಾಧ; ರಾಜಸ್ಥಾನದಲ್ಲಿ ಮೋದಿಯಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ತರಾಟೆ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ (Lok Sabha Election 2024) ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಮೊದಲ ಆದ್ಯತೆಯಾಗಿ ಹಂಚುತ್ತದೆ ಎಂಬ ಆರೋಪವನ್ನು ಮತ್ತೊಮ್ಮೆ ಪ್ರಸ್ತಾಪ ಮಾಡಿದ ಮೋದಿ (Narendra Modi), ನಾನು ಸತ್ಯ ಹೇಳಿದರೆ ಕಾಂಗ್ರೆಸ್‌ಗೆ ಮೆಣಸಿನ ಉರಿ ಬಿದ್ದಂತಾಗುತ್ತದೆ. ಈ ದೇಶದ ಸಂಪತ್ತಿನಲ್ಲಿ ಮುಸಲ್ಮಾನರಿಗೆ ಮೊದಲ ಪಾಲು ಸಿಗಬೇಕು ಎಂದು ಮನಮೋಹನ್‌ ಸಿಂಗ್‌ ತಾವು ಪ್ರಧಾನಿಯಾಗಿದ್ದ ಹೇಳಿದ್ದನ್ನು ನೀವು ಮರೆಯಬೇಡಿ ಎಂದಿದ್ದಾರೆ.

VISTARANEWS.COM


on

Narendra Modi and Siddaramaiah
Koo

ಕಾಂಗ್ರೆಸ್‌ ಆಡಳಿತ ಇರುವ ರಾಜ್ಯಗಳಲ್ಲಿ ಹನುಮಾನ್‌ ಚಾಲೀಸಾ ಹೇಳುವುದೂ ಮಹಾ ಅಪರಾಧ. ಶೋಭಾ ಯಾತ್ರೆ ನಡೆಸಲೂ ಅಲ್ಲಿ ಅವಕಾಶ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಜಸ್ಥಾನದಲ್ಲಿ ತಮ್ಮ ಚುನಾವಣಾ ಪ್ರಚಾರದ (Lok Sabha Election 2024) ವೇಳೆ ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

Modi in Karnataka Congress snatches Rs 4000 under Kisan Samman says PM Narendra Modi

ಕಾಂಗ್ರೆಸ್‌ ಎಂದೂ ಅಭಿವೃದ್ಧಿ ರಾಜಕಾರಣವನ್ನು ಮಾಡಿಯೇ ಇಲ್ಲ. ಅದು ಮಾಡುತ್ತಿರುವುದು ವೋಟ್‌ ಬ್ಯಾಂಕ್‌ ಪಾಲಿಟಿಕ್ಸ್‌, ಒಂದು ಸಮುದಾಯದ ಓಲೈಕೆ ರಾಜಕಾರಣ ಎಂದೂ ಮೋದಿ ಟೀಕಿಸಿದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಮೊದಲ ಆದ್ಯತೆಯಾಗಿ ಹಂಚುತ್ತದೆ ಎಂಬ ಆರೋಪವನ್ನು ಮತ್ತೊಮ್ಮೆ ಪ್ರಸ್ತಾಪ ಮಾಡಿದ ಮೋದಿ, ನಾನು ಸತ್ಯ ಹೇಳಿದರೆ ಕಾಂಗ್ರೆಸ್‌ಗೆ ಮೆಣಸಿನ ಉರಿ ಬಿದ್ದಂತಾಗುತ್ತದೆ. ಈ ದೇಶದ ಸಂಪತ್ತಿನಲ್ಲಿ ಮುಸಲ್ಮಾನರಿಗೆ ಮೊದಲ ಪಾಲು ಸಿಗಬೇಕು ಎಂದು ಮನಮೋಹನ್‌ ಸಿಂಗ್‌ ತಾವು ಪ್ರಧಾನಿಯಾಗಿದ್ದ ಹೇಳಿದ್ದನ್ನು ನೀವು ಮರೆಯಬೇಡಿ. ನಿಮ್ಮ ಕೊರಳಿನ ಮಂಗಳಸೂತ್ರವನ್ನೂ ಅವರು ಬಿಡುವುದಿಲ್ಲ ಎಂದು ಎಚ್ಚರಿಸಿದರು.

Narendra Modi

ದಲಿತರ ಮೀಸಲು ಮುಸಲ್ಮಾನರಿಗೆ

ದಲಿತರು ಮತ್ತು ಆದಿವಾಸಿಗಳ ಮೀಸಲ ಪಾಲನ್ನು ಕಿತ್ತು ಕಾಂಗ್ರೆಸ್‌ ಮುಸಲ್ಮಾನರಿಗೆ ನೀಡಲು ಸದಾ ಪ್ರಯತ್ನಿಸುತ್ತಿರುತ್ತದೆ. ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಪರಿಶಿಷ್ಟರ ಮೀಸಲಿನ ಪಾಲನ್ನು ಕಿತ್ತು ಮುಸಲ್ಮಾನರಿಗೆ ನೀಡಿತ್ತು. ಮುಂದೆ ಅಲ್ಲಿ ಬಿಜೆಪಿ ಸರ್ಕಾರ ಬಂದಾಗ ಅದನ್ನು ರದ್ದುಪಡಿಸಿ ಎಸ್‌ಸಿ, ಎಸ್‌ಟಿಯವರಿಗೆ ನ್ಯಾಯ ದೊರಕಿಸಲಾಯಿತು. ಆಂಧ್ರ ಪ್ರದೇಶದ ಕಾಂಗ್ರೆಸ್‌ ಸರ್ಕಾರ ಕೂಡ ಎಸ್‌ಸಿ, ಎಸ್‌ಟಿ ಮೀಸಲು ಕಡಿಮೆ ಮಾಡಿ ಮುಸಲ್ಮಾನರ ಮೀಸಲು ಹೆಚ್ಚಿಸಲು ನಾಲ್ಕು ಬಾರಿ ವಿಧೇಯಕ ಮಂಡಿಸಿ ಕಾಯಿದೆ ರೂಪಿಸಿತ್ತು. ಆದರೆ ಕೋರ್ಟ್‌ ಮಧ್ಯಪ್ರವೇಶದ ಕಾರಣ ಅದು ಸಾಧ್ಯವಾಗಲಿಲ್ಲ. 2012ರಲ್ಲಿ ಕೇಂದ್ರದ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಹೀಗೆಯೇ ಮಾಡಲು ಹೊರಟಿತ್ತು. ಎಸ್‌ಸಿ-ಎಸ್‌ಟಿ ಮತ್ತು ಆಸಿವಾಸಿಗಳಿಗೆ ನಾನು ಯಾವ ಕಾರಣಕ್ಕೂ ಮೀಸಲಿನಲ್ಲಿ ನಷ್ಟ ಮಾಡಲು ಬಿಡುವುದಿಲ್ಲ. ಇದು ಮೋದಿ ಗ್ಯಾರಂಟಿ ಎಂದು ಮೋದಿ ಘೋಷಿಸಿದರು.

ನುಸುಳುಕೋರರಿಗೆ ಸೌಲಭ್ಯ ಕೊಡಬೇಕೆ?

ನುಸುಳುಕೋರರಿಗೆ, ದೇಶದ್ರೋಹಿಗಳಿಗೆ ಕಾಂಗ್ರೆಸ್‌ ಈ ದೇಶದ ಸಂಪತ್ತು ಹಂಚಲು ಬಯಸುತ್ತದೆ ಎಂದು ತೀವ್ರ ವಾಗ್ದಾಳಿ ನಡೆಸಿದ ಮೋದಿ, ನೆರೆಯ ದೇಶದಿಂದ ಪದೇಪದೆ ದಾಳಿಗೆ ಒಳಗಾಗುವ ನಮ್ಮ ವೀರ ಸೈನಿಕರಿಗೆ ಯಾವುದೇ ನೆರವು ನೀಡುತ್ತಿರಲಿಲ್ಲ. ಆದರೆ ನಾವು ನಮ್ಮ ಯೋಧರಿಗೆ ಎಲ್ಲ ರೀತಿಯ ನೆರವು ನೀಡುತ್ತಿದ್ದೇವೆ. ಅವರ ಆತ್ಮಸ್ಥೈರ್ಯ ಹೆಚ್ಚಿಸುತ್ತಿದ್ದೇವೆ ಎಂದರು.
ಕಾಂಗ್ರೆಸ್‌ ಪ್ರಣಾಳಿಕೆಯನ್ನು ನೀವು ಎಚ್ಚರಿಕೆಯಿಂದ ಓದಿ. ಅವರು ಅಧಿಕಾರಕ್ಕೆ ಬಂದರೆ ನಿಮ್ಮ ಸಂಪತ್ತಿನ ಸರ್ವೆ ನಡೆಸುತ್ತಾರಂತೆ. ಆ ಬಳಿಕ ಅದನ್ನು ಅಗತ್ಯ ಇದ್ದವರಿಗೆ ಹಂಚುತ್ತಾರಂತೆ. ಆ ಅಗತ್ಯ ಇದ್ದವರು ಯಾರು ಎಂಬುದು ನಿಮಗೆ ಗೊತ್ತಿರಲಿ ಎಂದು ಮೋದಿ ಹೇಳಿದರು.

ಉತ್ತರ ಪ್ರದೇಶದಲ್ಲೂ ಮೋದಿ ಗುಡುಗಿದ್ದರು

ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿದ್ದ ಸಂಪತ್ತು ಮರುಹಂಚಿಕೆಯ ವಿಚಾರದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಉತ್ತರ ಪ್ರದೇಶದ ಅಲಗಢದಲ್ಲೂ ಗುಡುಗಿದ್ದರು. ಕಾಂಗ್ರೆಸ್‌ನವರಿಗೆ ಮಹಿಳೆಯರ ಮಂಗಳಸೂತ್ರದ ಮೇಲೂ ಕಣ್ಣು ಬಿದ್ದಿದೆ. ಮಾತೆಯರು, ಭಗಿನಿಯರ ಚಿನ್ನವನ್ನು ದೋಚುವ ದುರುದ್ದೇಶ ಇವರದ್ದು ಎಂದು ವಾಗ್ದಾಳಿ ನಡೆಸಿದ್ದರು.

“ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ನಿಮ್ಮ ಆದಾಯ ಮತ್ತು ಆಸ್ತಿಯ ಮೇಲೆ ಕಣ್ಣಿಟ್ಟಿವೆ. ಕಾಂಗ್ರೆಸ್ ತನ್ನಪ್ರಣಾಳಿಕೆಯಲ್ಲಿ ಇದನ್ನು ಉಲ್ಲೇಖಿಸಿದೆ. ಮಹಿಳೆಯರು ಚಿನ್ನವನ್ನು ಆಭರಣಗಳ ರೂಪದಲ್ಲಿ ಧರಿಸಲು ಮಾತ್ರವಲ್ಲ, ಅದನ್ನು ರಸಕ್ಷಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಈಗ ಅವರ ಕಣ್ಣು ಮಹಿಳೆಯರ ಮಂಗಳಸೂತ್ರದ ಮೇಲೆ ನೆಟ್ಟಿದೆ. ತಾಯಿ ಮತ್ತು ಸಹೋದರಿಯರ ಚಿನ್ನವನ್ನು ದೋಚುವುದು ಇವರ ಉದ್ದೇಶ. ಹೀಗಾಗಿ ಅವರು ಅಧಿಕಾರಕ್ಕೆ ಬಂದರೆ ನಿಮ್ಮ ಮಂಗಳಸೂತ್ರವೂ ಸುರಕ್ಷಿತವಲ್ಲʼʼ ಎಂದು ಮೋದಿ ಹೇಳಿದ್ದರು.
ʼʼಒಂದು ವೇಳೆ ನೀವು ಹಳ್ಳಿಯಲ್ಲಿ ಪಿತ್ರಾರ್ಜಿತ ಮನೆಯನ್ನು ಹೊಂದಿದ್ದು, ನಗರದಲ್ಲಿ ಮಕ್ಕಳಿಗಾಗಿ ಚಿಕ್ಕ ಫ್ಲ್ಯಾಟ್‌ ಖರೀದಿಸಿದ್ದೀರಿ ಎಂದಿಟ್ಟುಕೊಳ್ಳೋಣ. ಆಗ ಅವರು ಎರಡರ ಪೈಕಿ ಒಂದನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲಿದ್ದಾರೆ. ಇದು ಮಾವೋವಾದಿ ಮತ್ತು ಕಮ್ಯೂನಿಷ್ಟ್‌ ಮನೋಭಾವದ ಯೋಚನಾ ಲಹರಿ. ಹೀಗೆ ಮಾಡಿಯೇ ಅವರು ಹಲವು ದೇಶಗಳನ್ನು ನಾಶಪಡಿಸಿದ್ದಾರೆ. ಈಗ ಕಾಂಗ್ರೆಸ್‌ ಮತ್ತು ಪ್ರತಿಪಕ್ಷಗಳ ʼಒಂಡಿಯಾʼ ಒಕ್ಕೂಟ ಆ ನಿಯಮವನ್ನು ಭಾರತದಲ್ಲಿ ಜಾರಿಗೊಳಿಸಲು ಮುಂದಾಗಿದೆʼʼ ಎಂದು ಪ್ರಧಾನಮಂತ್ರಿ ದೂರಿದ್ದರು. ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಕಾಂಗ್ರೆಸ್ ಈ ಹಿಂದೆ ಹೇಳಿತ್ತು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ದೇಶದ ಆಸ್ತಿಯನ್ನು ವಿತರಿಸುವುದಾಗಿ ತಿಳಿಸಿತ್ತು. “”ಕಾಂಗ್ರೆಸ್ ಅಧಿಕಾರ ಬಂದರೆ, ಈ ದೇಶದಲ್ಲಿ ಯಾರು ಎಷ್ಟು ಆಸ್ತಿ ಹೊಂದಿದ್ದಾರೆ ಎಂದು ಸಮೀಕ್ಷೆ ಕೈಗೊಳ್ಳಲಾಗುವುದು. ಬಳಿಕ ಈ ಆಸ್ತಿಯನ್ನು ಮರು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದುʼʼ ಎಂದು ರಾಹುಲ್ ಗಾಂಧಿ ಹೇಳಿದ್ದರು. ಈ ಬಗ್ಗೆ ಮೋದಿ ತಮ್ಮ ಚುನಾವಣಾ ಭಾಷಣದಲ್ಲಿ ಪ್ರಸ್ತಾಪಿಸಿ ಕಾಂಗ್ರೆಸನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Lok Sabha Election 2024: ವಿಧಾನ ಪರಿಷತ್‌ ಸ್ಥಾನಕ್ಕೆ ಕೆ.ಪಿ. ನಂಜುಂಡಿ ರಾಜೀನಾಮೆ; ಕಾಂಗ್ರೆಸ್‌ ಸೇರ್ಪಡೆ?

Continue Reading

Latest

Voter Slip by Mobile: ಮತಪಟ್ಟಿಯಲ್ಲಿ ಹೆಸರು ಪರಿಶೀಲನೆ, ವೋಟರ್ ಸ್ಲಿಪ್ ಡೌನ್‌ಲೋಡ್‌ ಮೊಬೈಲ್‌ನಲ್ಲೇ ಮಾಡಿ!

Voter Slip by Mobile: ರಾಜ್ಯದಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 26ರಂದು ನಡೆಯಲಿದ್ದು, ಮತದಾರರ ಮಾಹಿತಿ ಸ್ಲಿಪ್ ಇನ್ನೂ ಸಿಕ್ಕಿಲ್ಲ ಎನ್ನುವ ಚಿಂತೆ ಬೇಡ. ಮೊಬೈಲ್, ಲ್ಯಾಪ್ ಟಾಪ್ ನಲ್ಲಿ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

Lok Sabha Election-2024
Koo

ಬೆಂಗಳೂರು: ಲೋಕಸಭಾ ಚುನಾವಣೆ 2024ರ (Lok Sabha Election 2024) ಪ್ರಯುಕ್ತ ರಾಜ್ಯದಲ್ಲಿ (karnataka) ಇದೇ ತಿಂಗಳ 26ರಂದು ಮೊದಲ ಹಂತದ ಮತದಾನ (voting) ನಡೆಯಲಿದೆ. ಭಾರತೀಯ ಚುನಾವಣಾ ಆಯೋಗ (Election Commission of India) ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ನೋಂದಾಯಿತ ಮತದಾರರಿಗೆ (Voter Slip by Mobile) ಮತದಾರರ ಮಾಹಿತಿ ಸ್ಲಿಪ್ (VIS) ಅನ್ನು ಮುದ್ರಿಸಿ ಕಳುಹಿಸುತ್ತಿದೆ.

ಒಂದು ವೇಳೆ ಈ ಸ್ಲಿಪ್ ಸಿಕ್ಕಿಲ್ಲದಿದ್ದರೆ ಚಿಂತೆ ಬೇಡ. ನೀವೇ ಇದನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಅರಿವಿಲ್ಲದವರಿಗೆ ಮತದಾರರ ಚೀಟಿ ಅಥವಾ ವಿಐಎಸ್ ಎನ್ನುವುದು ಇಐಸಿಯಿಂದ ಚುನಾವಣೆಗೆ ಮುಂಚಿತವಾಗಿ ಅಗತ್ಯ ವಿವರಗಳ ಬಗ್ಗೆ ಮತದಾರರಿಗೆ ತಿಳಿಸಲು ನೀಡಿದ ದಾಖಲೆಯಾಗಿದೆ.

ಇದನ್ನೂ ಓದಿ: Amit Shah: ಕರ್ನಾಟಕದಲ್ಲಿ ಇಂದು ಅಮಿತ್‌ ಶಾ, ಪ್ರಿಯಾಂಕಾ ವಾದ್ರಾ ಪ್ರಚಾರ; ಒಂದೇ ಕ್ಷೇತ್ರದಲ್ಲಿ ಕ್ಯಾಂಪೇನ್!‌

ವಿಐಎಸ್ ಎಂದರೆ ಏನು?

ಸ್ಲಿಪ್ ಹೆಸರು, ವಯಸ್ಸು, ಲಿಂಗ, ಅಸೆಂಬ್ಲಿ ಕ್ಷೇತ್ರ ಮತ್ತು ಪ್ರಮುಖವಾಗಿ ಮತಗಟ್ಟೆ ಸ್ಥಳ, ಕೊಠಡಿ ಸಂಖ್ಯೆ, ಮತದಾನದ ದಿನಾಂಕ ಮತ್ತು ಹೆಚ್ಚಿನ ವಿವರಗಳನ್ನು ಇದು ಒಳಗೊಂಡಿರುತ್ತದೆ. ಇದರೊಂದಿಗೆ ಮತದಾರರ ವಿವರಗಳನ್ನು ತ್ವರಿತವಾಗಿ ಪರಿಶೀಲಿಸಲು ಕ್ಯೂಆರ್ ಕೋಡ್ ಅನ್ನು ಸಹ ಇದು ಒಳಗೊಂಡಿದೆ.

ಈವರೆಗೆ ಮತದಾರರ ಮಾಹಿತಿ ಸ್ಲಿಪ್ ಸಿಗದೇ ಇದ್ದರೆ ಮತದಾನದ ದಿನಾಂಕದ ಮೊದಲು ಅದನ್ನು ಖಂಡಿತಾ ಸ್ವೀಕರಿಸುತ್ತೀರಿ. ಇಲ್ಲವಾದರೆ ಚುನಾವಣಾ ಆಯೋಗದ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮತ್ತು ಅಧಿಕೃತ ವೆಬ್‌ಸೈಟ್ ನಿಂದ ತಕ್ಷಣವೇ ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.


ಫೋನ್‌ನಲ್ಲಿ ಪಡೆಯುವುದು ಹೇಗೆ?

ಫೋನ್‌ನಲ್ಲಿ ಮತದಾರರ ಮಾಹಿತಿ ಸ್ಲಿಪ್ ಅಥವಾ ವಿಐಎಸ್ ಅನ್ನು ಹೇಗೆ ಡೌನ್‌ಲೋಡ್ ಮಾಡುವುದು ಎಂಬುದರ ಕುರಿತು ಹಂತ-ಹಂತದ ಮಾಹಿತಿ ಇಲ್ಲಿದೆ.

  • – ಮೊಬೈಲ್ ಅಪ್ಲಿಕೇಶನ್ ಬಳಸಿ ಮತದಾರರ ಮಾಹಿತಿ ಸ್ಲಿಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದಕ್ಕಾಗಿ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ ತೆರೆದು ಮತದಾರರ ಸಹಾಯವಾಣಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.
  • – ಡೌನ್‌ಲೋಡ್ “E-EPIC” ಆಯ್ಕೆಯನ್ನು ಟ್ಯಾಪ್ ಮಾಡಿ. ನೋಂದಾಯಿತ ಫೋನ್ ಸಂಖ್ಯೆ, ಪಾಸ್‌ವರ್ಡ್ ಮತ್ತು ಒಟಿಪಿ ಬಳಸಿ ಲಾಗಿನ್ ಮಾಡಿ. ಈಗಾಗಲೇ ನೋಂದಾಯಿಸದಿದ್ದರೆ ಮತದಾರ ಐಡಿ ಕಾರ್ಡ್‌ನಲ್ಲಿ ಇರುವ ಎಪಿಕ್ ಸಂಖ್ಯೆಯನ್ನು ನಮೂದಿಸಿ. ಪರ್ಯಾಯವಾಗಿ ಅಪ್ಲಿಕೇಶನ್ ಉಲ್ಲೇಖ ಸಂಖ್ಯೆಯನ್ನು ಬಳಸಿಕೊಂಡು ಮತದಾರರ ಮಾಹಿತಿ ಸ್ಲಿಪ್ ಅನ್ನು ನೋಡಬಹುದು.
  • – ಇದರ ಅನಂತರ ನಿಮ್ಮ ವೋಟರ್ ಸ್ಲಿಪ್ ವಿವರಗಳನ್ನು ಕಾಣಬಹುದು. ಅದರ ಮೇಲೆ ಟ್ಯಾಪ್ ಮಾಡಿ ಮತ್ತು ವಿಐಸಿ ಡಾಕ್ಯುಮೆಂಟ್ ತೆರೆಯಲು ಒಟಿಪಿಯನ್ನು ಮತ್ತೆ ನಮೂದಿಸಿ. ಬಳಿಕ ಇದನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.


ವೆಬ್‌ಸೈಟ್ ನಲ್ಲಿ ಹೇಗೆ?

https://voters.eci.gov.in/ ತೆರೆದು ಫೋನ್ ನಂಬರ್, ಪಾಸ್‌ವರ್ಡ್ ಮತ್ತು ಒಟಿಪಿ ಬಳಸಿ ಲಾಗಿನ್ ಮಾಡಿ. ವೆಬ್‌ಸೈಟ್‌ಗೆ ಹೊಸಬರಾಗಿದ್ದರೆ ಮೊದಲು ನೊಂದಾಯಿಸಿಕೊಳ್ಳಿ.

ಡೌನ್‌ಲೋಡ್ E-EPIC ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಬಳಿಕ ಮತದಾರರ ಗುರುತಿನ ಚೀಟಿಯಲ್ಲಿರುವ EPIC ಸಂಖ್ಯೆಯನ್ನು ನಮೂದಿಸಿ.

ಒಮ್ಮೆ ಇದನ್ನು ಮಾಡಿದ ಅನಂತರ, ವಿಐಸಿ ಜೊತೆಗೆ E-EPIC ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಒಮ್ಮೆ E-EPIC ಅನ್ನು ಹೊಂದಿದ್ದರೆ ಸಂಪೂರ್ಣ ಪುಟವನ್ನು ಅಥವಾ ವಿಐಸಿ ಪುಟವನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ. ಮತ ಚಲಾಯಿಸಲು ಇದನ್ನು ನಿಮ್ಮೊಂದಿಗೆ ಮತಗಟ್ಟೆಗೆ ಕೊಂಡೊಯ್ಯಬಹುದಾಗಿದೆ.

Continue Reading

ಲೈಫ್‌ಸ್ಟೈಲ್

Vastu Tips: ಸುಖ, ಶಾಂತಿ, ಸಮೃದ್ಧಿಗಾಗಿ ಹೀಗಿರಲಿ ಮನೆಯ ಕಿಟಕಿ, ಬಾಗಿಲು

Vastu Tips: ನಮ್ಮ ಪೂರ್ವಜರು ಕೂಡ ಮನೆಯ ಪ್ರತಿಯೊಂದು ಭಾಗವನ್ನು ವಾಸ್ತುವಿನ ದೃಷ್ಟಿಕೋನದಿಂದಲೇ ನೋಡುತ್ತಿದ್ದರು. ಕ್ರಮೇಣ ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿದೆವು. ಆದರೆ ಈಗ ಮತ್ತೆ ವಾಸ್ತುವಿಗೆ (Vastu Tips) ಪ್ರಾಮುಖ್ಯತೆ ಹೆಚ್ಚಾಗುತ್ತಿದೆ. ಮನೆಗೆ ಕಿಟಕಿ ಬಾಗಿಲು ಅಳವಡಿಸುವುದಕ್ಕೂ ವಾಸ್ತು ಪಾಲನೆ ಮಾಡುವುದು ಮುಖ್ಯ. ಇದರಿಂದ ಮನೆಯೊಳಗೆ ಧನಾತ್ಮಕ ಶಕ್ತಿ ವೃದ್ಧಿಯಾಗಿಸಬಹುದು.

VISTARANEWS.COM


on

By

Vastu Tips
Koo

ಮನೆಯೊಳಗೆ (home) ಸುಖ, ಶಾಂತಿ, ನೆಮ್ಮದಿ ಇರಬೇಕಾದರೆ ಧನಾತ್ಮಕ ಶಕ್ತಿ (Positive energy) ವೃದ್ಧಿಸಿಕೊಳ್ಳುವುದು ಬಹು ಮುಖ್ಯ. ಇದಕ್ಕಾಗಿ ವಾಸ್ತು ಅಂಶಗಳನ್ನು ನಾವು ಪರಿಗಣಿಸಿಬೇಕು. ನಮ್ಮ ಪೂರ್ವಜರು ಕೂಡ ಮನೆಯ ಪ್ರತಿಯೊಂದು ಭಾಗವನ್ನು ವಾಸ್ತುವಿನ ದೃಷ್ಟಿಕೋನದಿಂದಲೇ ನೋಡುತ್ತಿದ್ದರು. ಕ್ರಮೇಣ ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿದೆವು. ಆದರೆ ಈಗ ಮತ್ತೆ ವಾಸ್ತುವಿಗೆ (Vastu Tips) ಪ್ರಾಮುಖ್ಯತೆ ಹೆಚ್ಚಾಗುತ್ತಿದೆ.

ಮನೆಯಾದ್ಯಂತ ಧನಾತ್ಮಕ ಶಕ್ತಿಯನ್ನು ವೃದಿಸುವುದು ಸುಲಭವಲ್ಲ. ವಾಸ್ತು ಪ್ರಕಾರ ಮನೆಗೆ ಬಾಗಿಲು (door) ಮತ್ತು ಕಿಟಕಿಗಳನ್ನು (window) ಅಳವಡಿಸಿದರೆ ಮನೆಯೊಳಗೆ ಧನಾತ್ಮಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು.

ವಾಸ್ತು ಪ್ರಕಾರ ಬಾಗಿಲು ಮತ್ತು ಕಿಟಕಿಗಳನ್ನು ಅಳವಡಿಸಿದರೆ ಮುಚ್ಚಿರುವ ಜಾಗದಲ್ಲೂ ಧನಾತ್ಮಕ ಶಕ್ತಿ ಪುನರುತ್ಪಾದನೆಯಾಗುತ್ತದೆ. ಈ ಬಾಗಿಲು ಮತ್ತು ಕಿಟಕಿಗಳ ಮೂಲಕ ಶಕ್ತಿಗಳು ಮನೆಯ ಒಳ ಮತ್ತು ಹೊರಗೆ ಹರಿಯುತ್ತವೆ. ಆರೋಗ್ಯಕರ ಮತ್ತು ಶ್ರೀಮಂತ ಜೀವನಶೈಲಿಯ ವೃದ್ಧಿಗಾಗಿ ಇವುಗಳನ್ನು ಇಡಲು ನಿರ್ದಿಷ್ಟ ಜಾಗಗಳಿವೆ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: Vastu Tips: ನಿಮ್ಮ ಮನೆಯಲ್ಲಿ ಸಂತೋಷ ವೃದ್ಧಿಸಬೇಕೆ? ಈ ಸಲಹೆಗಳನ್ನು ಪಾಲಿಸಿ

ಬಾಗಿಲು, ಕಿಟಕಿಗಳಿಗೆ ವಾಸ್ತು ಪಾಲನೆ ಯಾಕೆ?

ಮನೆ ನಿರ್ಮಿಸಲು ಉತ್ಸುಕರಾಗಿರುವ ಮನೆ ಮಾಲೀಕರು ಹಲವಾರು ಕಾರಣಗಳಿಗಾಗಿ ಬಾಗಿಲು ಮತ್ತು ಕಿಟಕಿಗಳನ್ನು ಇಡುವ ಸ್ಥಾನ, ದಿಕ್ಕು ಮತ್ತು ಬಳಸುವ ವಸ್ತುಗಳ ಬಗ್ಗೆ ವಿಶೇಷ ಗಮನವನ್ನು ನೀಡಬೇಕು. ಅವು ಗಾಳಿ ಮತ್ತು ಸೂರ್ಯನ ಬೆಳಕಿಗೆ ಪೂರಕವಾಗಿದೆಯೇ ಎಂಬುದನ್ನು ನೋಡಿಕೊಳ್ಳಬೇಕು. ಇದರಿಂದಲೇ ಮನೆಯೊಳಗೇ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ ಮತ್ತು ನಕಾರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುವುದನ್ನು ತಡೆಯುತ್ತದೆ.
ಹೊಸ ಮನೆಯನ್ನು ನಿರ್ಮಿಸುತ್ತಿದ್ದರೆ ಅಥವಾ ಹಳೆ ಮನೆಯನ್ನು ನವೀಕರಿಸುತ್ತಿದ್ದರೆ ಬಾಗಿಲು ಮತ್ತು ಕಿಟಕಿಗಳ ವಾಸ್ತು ಬಗ್ಗೆ ತಿಳಿದುಕೊಳ್ಳಿ.


ಸರಿಯಾದ ಮುಖ್ಯ ಬಾಗಿಲು

ಮನೆಯ ಮುಖ್ಯ ಬಾಗಿಲು ದೊಡ್ಡ ಬಾಗಿಲಾಗಿರಬೇಕು. ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಒಳಗೆ ತೆರೆದುಕೊಳ್ಳುವ ಎರಡು ಕವಾಟದ ಬಾಗಿಲು ಮಂಗಳಕರ. ಪ್ರಕಾಶಮಾನವಾದ ದೀಪಗಳು ಮತ್ತು ಉತ್ತಮ ಬಣ್ಣಗಳೊಂದಿಗೆ ಮುಖ್ಯ ಬಾಗಿಲಿನ ಮೇಲೆ ಸುಂದರವಾದ ವಿನ್ಯಾಸಗಳನ್ನು ಅಳವಡಿಸಿಕೊಳ್ಳಿ. ನೀರಸವಾದ ಮುಖ್ಯ ಬಾಗಿಲು ಮನೆಗೆ ಶೋಭೆಯಲ್ಲ.

ಬಾಗಿಲುಗಳ ಸರಿಯಾದ ಸಂಖ್ಯೆ

ಸಕಾರಾತ್ಮಕತೆಯು ಸಹ ಸಮ ಸಂಖ್ಯೆಗಳಲ್ಲಿ ಬರುತ್ತದೆ. ಮನೆಯಲ್ಲಿ ಬಾಗಿಲು ಮತ್ತು ಕಿಟಕಿಗಳ ಸಂಖ್ಯೆ ಯಾವಾಗಲೂ ಸಮವಾಗಿರಬೇಕು. ಎರಡು, ನಾಲ್ಕು, ಆರು ಹೀಗೆ ಎರಡರ ಗುಣಕಗಳಲ್ಲಿರಬೇಕು ಎನ್ನುತ್ತಾರೆ ವಾಸ್ತು ತಜ್ಞರು.


ಬಾಗಿಲಿನ ಗಾತ್ರದಲ್ಲಿ ಸ್ಥಿರತೆ

ಮುಂಭಾಗದ ಬಾಗಿಲನ್ನು ಹೊರತುಪಡಿಸಿ ಮನೆಯಲ್ಲಿ ಎಲ್ಲಾ ಆಂತರಿಕ ಬಾಗಿಲುಗಳ ಗಾತ್ರದಲ್ಲಿ ಒಂದೇ ಆಗಿರಬೇಕು. ವಿಭಿನ್ನ ಬಾಗಿಲು ಗಾತ್ರಗಳು ಮನೆಗೆ ಒಳ್ಳೆಯದಲ್ಲ. ಎದ್ದು ಕಾಣಬೇಕಾದ ಏಕೈಕ ಬಾಗಿಲು ಮುಖ್ಯ ಬಾಗಿಲು. ಮನೆಯೊಳಗೆ ಕೆಲವು ಬಾಗಿಲುಗಳನ್ನು ದೊಡ್ಡದಾಗಿ ಮಾಡಲು ಬಯಸಿದರೆ ಅವುಗಳನ್ನು ಉತ್ತರ ಅಥವಾ ಪೂರ್ವಕ್ಕೆ ಬದಲಾಗಿ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಿಸಬೇಕು.

ದೋಷರಹಿತವಾಗಿರಲಿ ಮನೆ ಬಾಗಿಲು

ಮನೆಯಲ್ಲಿ ಬಾಗಿಲುಗಳ ಕಾರ್ಯವಿಧಾನದ ವಿಷಯಕ್ಕೆ ಬಂದರೆ ಬಾಗಿಲು ತೆರೆಯುವಾಗ ಅಥವಾ ಮುಚ್ಚುವಾಗ ಕೀಲು ಬಾಗಿಲುಗಳನ್ನು ಹಾಕುವುದು ಉತ್ತಮ. ಮನೆಯಲ್ಲಿ ಬಾಗಿಲುಗಳು ಮತ್ತು ಕಿಟಕಿಗಳೊಂದಿಗೆ ಹೆಚ್ಚು ಜಗಳಗಳು ಇರುತ್ತದೆ. ಸ್ಮೂತ್ ಕೀಲುಗಳು ಮನೆಯಲ್ಲಿ ಉತ್ತಮ ಸಂಬಂಧಗಳನ್ನು ಪ್ರತಿಬಿಂಬಿಸುತ್ತವೆ. ಸ್ವಯಂ-ಮುಚ್ಚುವ ಬಾಗಿಲುಗಳನ್ನು ತಪ್ಪಿಸುವುದು ಒಳ್ಳೆಯದು.

ಕಿಟಕಿಗಳು

ಎಲ್ಲಾ ಕಿಟಕಿಗಳು ಸರಿಯಾದ ಆಕಾರ ಮತ್ತು ಸಮವಾದ ಎತ್ತರವನ್ನು ಹೊಂದಿರಬೇಕು. ಕಿಟಕಿಗಳು ತಾಜಾ ಗಾಳಿ ಮತ್ತು ಸೂರ್ಯನ ಬೆಳಕಿನ ಮೂಲವಾಗಿರುತ್ತದೆ. ಅವುಗಳಿಗೆ ಯಾವಾಗಲೂ ಎದುರು ಬಾಗಿಲುಗಳನ್ನು ಇಡಬೇಕು. ಮನೆಯಲ್ಲಿ ಗರಿಷ್ಠ ವಾತಾಯನವಿದೆ ಎಂದು ಇದು ಖಚಿತಪಡಿಸುತ್ತದೆ. ಮನೆಯಲ್ಲಿರುವ ಕಿಟಕಿಗಳ ಸಂಖ್ಯೆಯೂ ಸಮ ಸಂಖ್ಯೆಯಲ್ಲಿರಬೇಕು. ಕಿಟಕಿಗಳಿಗೆ ಸಾಮಾನ್ಯವಾಗಿ ನೈಋತ್ಯ ದಿಕ್ಕನ್ನು ತಪ್ಪಿಸಿ. ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಕಿಟಕಿಗಳು ದೊಡ್ಡದಾಗಿದ್ದರೆ ಉತ್ತಮ. ಉತ್ತರವು ಸಮೃದ್ಧಿಯನ್ನು ತರುತ್ತದೆ ಆದರೆ ಪೂರ್ವವು ಪ್ರಗತಿ ಮತ್ತು ಆರೋಗ್ಯವನ್ನು ತರುತ್ತದೆ.

ಬಾಗಿಲಿಗೆ ಬಳಸುವ ವಸ್ತುಗಳು

ಬಾಗಿಲುಗಳಿಗೆ ವಸ್ತುಗಳನ್ನು ಎಚ್ಚರಿಕೆಯಿಂದ ಆರಿಸುವುದು ಮುಖ್ಯ. ಏಕೆಂದರೆ ಇದು ಎಷ್ಟು ಮಂಗಳಕರ ಎಂಬುದನ್ನು ನಿರ್ಧರಿಸುತ್ತದೆ. ಬಾಗಿಲುಗಳಿಗೆ ವಸ್ತುಗಳನ್ನು ಆಯ್ಕೆಮಾಡುವಾಗ ಮರದ ಬಾಗಿಲು ಯಾವಾಗಲೂ ಅತ್ಯುತ್ತಮ ಆಯ್ಕೆಯಾಗಿದೆ. ಇದಲ್ಲದೆ ಉತ್ತರ ದಿಕ್ಕಿನ ಬಾಗಿಲುಗಳಿಗೆ ಲೋಹ ಅಥವಾ ಕಬ್ಬಿಣದಂತಹ ಬೆಳ್ಳಿಯನ್ನು ಹೊಂದಿರುವ ಬಾಗಿಲುಗಳನ್ನು ಆಯ್ಕೆ ಮಾಡಿಕೊಳ್ಳಿ. ದಕ್ಷಿಣಕ್ಕೆ ಮರದ ಮತ್ತು ಲೋಹದ ಅಂಶಗಳನ್ನು ಹೊಂದಿರುವ ಬಾಗಿಲುಗಳು ಸೂಕ್ತವಾಗಿದೆ. ಪೂರ್ವ ದಿಕ್ಕಿಗೆ ಮರದಿಂದ ಮಾಡಿದ ಬಾಗಿಲು ಉತ್ತಮ. ಪಶ್ಚಿಮಕ್ಕೆ ಕಬ್ಬಿಣದಂತಹ ಲೋಹದಿಂದ ಪ್ರಧಾನವಾಗಿ ಮಾಡಿದ ಬಾಗಿಲನ್ನು ಆಯ್ಕೆ ಮಾಡಿಕೊಳ್ಳಿ.

ಬಾಗಿಲುಗಳು ಮತ್ತು ಕಿಟಕಿಗಳ ಬಣ್ಣ

ಗಾಢವಾದ ಬಣ್ಣಗಳು ಮನೆಯೊಳಗೆ ಹರ್ಷಚಿತ್ತ ಮತ್ತು ಶಕ್ತಿಯುತ ಮನಸ್ಥಿತಿಗೆ ಕಾರಣವಾಗುತ್ತವೆ. ಆದ್ದರಿಂದ ಮುಂಭಾಗದ ಬಾಗಿಲುಗಳಿಗೆ ಹಳದಿ ಮತ್ತು ನೀಲಿ ಬಣ್ಣಗಳನ್ನು ಆರಿಸಿ.

ಅಲಂಕಾರಿಕ ವಸ್ತುಗಳು

ಬಾಗಿಲಿನ ಮುಂದೆ ಹನುಮಾನ್ ಅಥವಾ ಗಣೇಶನ ವಿಗ್ರಹವನ್ನು ಇರಿಸುವುದರಿಂದ ದುಷ್ಟ ಶಕ್ತಿಗಳನ್ನು ದೂರವಿರಿಸಬಹುದು ಎಂದು ನಂಬಲಾಗಿದೆ. ಹಿತ್ತಾಳೆಯ ಬಟ್ಟಲಿನಲ್ಲಿ ನೀರನ್ನು ಇಟ್ಟುಕೊಳ್ಳುವುದು ಮನೆಯಲ್ಲಿ ನಕಾರಾತ್ಮಕತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಅದೃಷ್ಟ ಮತ್ತು ಸಂಪತ್ತನ್ನು ಆಕರ್ಷಿಸಲು ಬುದ್ಧನ ಪ್ರತಿಮೆ ಅಥವಾ ಗಾಳಿಯ ಚೈಮ್ ಅನ್ನು ಪ್ರವೇಶದ್ವಾರದ ಬಳಿ ಇರಿಸಬಹುದು.


ವಾಸ್ತು ಪರಿಣಾಮ

ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಬಾಗಿಲು, ಕಿಟಕಿಗಳು ತಾಜಾ ಗಾಳಿ ಮತ್ತು ಬೆಳಿಗ್ಗೆ ಒಳ್ಳೆಯದು. ದಿನದ ಆರಂಭದಲ್ಲಿ ಇದು ಮನೆಯ ಶುದ್ಧೀಕರಣ ಪ್ರಕ್ರಿಯೆಯನ್ನು ನಡೆಸುತ್ತದೆ.

ದಕ್ಷಿಣ ದಿಕ್ಕು ಎಲ್ಲಾ ಉತ್ತಮ ಶಕ್ತಿಗಳ ಕೇಂದ್ರ ಎಂದು ಪರಿಗಣಿಸಲಾಗಿದೆ. ದಕ್ಷಿಣಕ್ಕೆ ಎದುರಾಗಿ ನಿಖರವಾಗಿ ಮತ್ತು ಮಧ್ಯದಲ್ಲಿ ಬಾಗಿಲು, ಕಿಟಕಿಗಳನ್ನು ಇರಿಸಿದರೆ ಮನೆಯೊಳಗೆ ಉತ್ತಮ ಶಕ್ತಿ ಸಂಚಾರವಾಗುತ್ತದೆ.

ಪೂರ್ವ ಎಲ್ಲಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಇಲ್ಲಿ ಪ್ರವೇಶದ್ವಾರಗಳು ಸಮೃದ್ಧಿ, ಶಕ್ತಿ ಮತ್ತು ಸಂಪತ್ತನ್ನು ಆಕರ್ಷಿಸುತ್ತದೆ.

ಪಶ್ಚಿಮ ದಿಕ್ಕು ಸೂರ್ಯಾಸ್ತಮಾನವನ್ನು ಆನಂದಿಸುವ ಮನೆಮಾಲೀಕರಿಗೆ ಸೂಕ್ತವಾಗಿದೆ. ಈ ದಿಕ್ಕು ಸಂಪತ್ತು ಮತ್ತು ಸಮೃದ್ಧಿಯನ್ನು ಉತ್ತೇಜಿಸುತ್ತದೆ.

ಏನು ಮಾಡಬೇಕು?

ಮನೆಯ ಮುಖ್ಯ ಬಾಗಿಲು ಹೊಸ್ತಿಲನ್ನು ಹೊಂದಿರಬೇಕು. ಮನೆಗೆ ಸಂಪತ್ತನ್ನು ಆಕರ್ಷಿಸಲು ನಿರ್ದಿಷ್ಟ ಸಂಖ್ಯೆಯಲ್ಲಿ ಹೊಸ್ತಿಲಿನ ಎದುರು ಮೆಟ್ಟಿಲುಗಳನ್ನು ಇರಿಸಬೇಕು.

ಮುಖ್ಯ ಬಾಗಿಲು ಯಾವಾಗಲೂ ನೆಲದ ಮಟ್ಟಕ್ಕಿಂತ ಮೇಲಿರಬೇಕು. ಮಲಗುವ ಕೋಣೆಯ ಬಾಗಿಲುಗಳು ಮುಖ್ಯ ಬಾಗಿಲಿಗಿಂತ ಚಿಕ್ಕದಾಗಿರಬೇಕು. ಮುಖ್ಯ ಬಾಗಿಲನ್ನು ಮನೆಯಲ್ಲಿ ದೊಡ್ಡದಾಗಿಸಬೇಕು. ಎಲ್ಲಾ ಬಾಗಿಲುಗಳು ಪ್ರದಕ್ಷಿಣಾಕಾರವಾಗಿ ತೆರೆದಿರುವುದನ್ನು ಖಚಿತಪಡಿಸಿಕೊಳ್ಳಿ.


ಏನು ಮಾಡಬಾರದು?

ಮುಖ್ಯ ಬಾಗಿಲು ಮತ್ತು ನಿರ್ಗಮನ ಬಾಗಿಲು ಎದುರಾಗಿ ಇರಬಾರದು. ಮುಖ್ಯ ಬಾಗಿಲುಗಳು ಮನೆಯ ಆಯಾವನ್ನು ಬಿಟ್ಟು ಹೊರಗೆ ಇರಬಾರದು. ಮುಖ್ಯ ಬಾಗಿಲನ್ನು ಭೂಗತ ಟ್ಯಾಂಕ್ ಅಥವಾ ಸೆಪ್ಟಿಕ್ ಟ್ಯಾಂಕ್‌ಗಳ ಕೆಳಗೆ ಇಡುವುದನ್ನು ತಪ್ಪಿಸಿ.

ಮುಖ್ಯ ಬಾಗಿಲಿನ ಮುಂದೆ ಶೂ ಅಥವಾ ಕಸವನ್ನು ಇಡಬೇಡಿ. ಮುಖ್ಯ ಬಾಗಿಲಿನ ಮುಂಭಾಗದಲ್ಲಿ ಕಂಬ, ಮರ, ತಂತಿ ಸೇರಿದಂತೆ ಅಡೆತಡೆಗಳನ್ನು ತಪ್ಪಿಸಿ.

ಬಾಗಿಲು ಅಥವಾ ನಿರ್ಗಮನ ಬಾಗಿಲಿನ ಹೊರ ಭಾಗದಲ್ಲಿ ದೇವರ ಚಿತ್ರಗಳನ್ನು ಪ್ರದರ್ಶಿಸಬೇಡಿ. ಬಾಗಿಲಿನ ವಾಸ್ತು ಪ್ರಕಾರ ಇದು ದುಃಖಕ್ಕೆ ಕಾರಣವಾಗಬಹುದು.

ಮನೆಯಲ್ಲಿ ಹೆಚ್ಚಿನ ಮಹಡಿಗಳಿದ್ದರೆ ಪ್ರತಿ ಮಹಡಿಯಲ್ಲಿ ಒಂದರ ಮೇಲೊಂದು ಬಾಗಿಲು ಹಾಕದಂತೆ ನೋಡಿಕೊಳ್ಳಿ.

Continue Reading

ಬಾಲಿವುಡ್

OM Puri: ಹೊಟ್ಟೆಪಾಡಿಗಾಗಿ ಚಹಾ ಅಂಗಡಿಯಲ್ಲಿ ಲೋಟ ತೊಳೆಯುತ್ತಿದ್ದರು ಈ ಹೆಸರಾಂತ ನಟ!

OM Puri: ಸ್ಟಾರ್ ಆಗುವುದು ಸುಲಭವಲ್ಲ. ಇಂದಿನ ಎಷ್ಟೋ ಸ್ಟಾರ್ ಗಳು ಒಂದು ಕಾಲದಲ್ಲಿ ತುಂಬಾ ಕಷ್ಟ ಪಟ್ಟಿದ್ದರು. ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದರು. ಇವರಲ್ಲಿ ಓಂ ಪುರಿ ಕೂಡ ಒಬ್ಬರು. ಸ್ಟಾರ್ ಆಗುವ ಮೊದಲು ಅವರ ಬದುಕಿನ ಕಡುಕಷ್ಟದ ದಿನಗಳ ಹಿನ್ನೋಟ ಇಲ್ಲಿದೆ.

VISTARANEWS.COM


on

By

OM Puri
Koo

ಎಷ್ಟೇ ದೊಡ್ಡ ಮನೆತನದಿಂದ ಬಂದಿರಲಿ ಚಿತ್ರರಂಗದಲ್ಲಿ (film industry) ತನ್ನ ಸ್ವಂತ ಪರಿಶ್ರಮವಿಲ್ಲದೆ ಸ್ಟಾರ್ (star) ಆಗಲು ಸಾಧ್ಯವೇ ಇಲ್ಲ. ಇವತ್ತಿನ ಹಲವಾರು ಸೂಪರ್ ಸ್ಟಾರ್ ಗಳು (super star) ಒಂದು ಕಾಲದಲ್ಲಿ ಬೀದಿ ಬದಿಯಲ್ಲಿ ಮಲಗಿದ್ದರು, ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.

ಬಾಲಿವುಡ್ ನ (bollywood) ಶಾರುಖ್ ಖಾನ್ (Shah Rukh Khan) , ಅಮಿತಾಬ್ ಬಚ್ಚನ್ (Amitabh Bachchan) ಕೂಡ ಒಂದು ಕಾಲದಲ್ಲಿ ಸಾಕಷ್ಟು ಕಷ್ಟಗಳನ್ನು ಸಹಿಸಿಯೇ ಮೇಲಕ್ಕೆ ಏರಿದವರು. ಹೀಗೆಯೇ ಕಷ್ಟಪಟ್ಟು ಮನೆ ಮಾತಾಗಿರುವವರಲ್ಲಿ ಬಾಲಿವುಡ್ ನಲ್ಲಿ ವಿವಿಧ ಪಾತ್ರಗಳಿಂದ ಪ್ರಸಿದ್ದಿ ಪಡೆದ ನಟ ಓಂ ಪುರಿ (OM Puri) ಕೂಡ ಒಬ್ಬರು.

ಜನನ ದಾಖಲೆಯೇ ಇಲ್ಲ

ಹರಿಯಾಣದ ಅಂಬಾಲದಲ್ಲಿ ಜನಿಸಿದ್ದ ಓಂ ಪುರಿ ಅವರ ತಂದೆ ಟೆಕ್ ಚಂದ್ ಪುರಿ ಭಾರತೀಯ ಸೇನೆಯಲ್ಲಿದ್ದರು ಮತ್ತು ರೈಲ್ವೇಯಲ್ಲಿಯೂ ಕೆಲಸ ಮಾಡಿದ್ದರು. ಆದರೂ ಓಂ ಪುರಿ ಅವರು ಯಾವುದೇ ಜನನ ಪ್ರಮಾಣಪತ್ರವನ್ನು ಹೊಂದಿಲ್ಲ. ಹೀಗಾಗಿ ಅವರ ಜನ್ಮ ದಿನಾಂಕದ ಬಗ್ಗೆ ಅವರ ಕುಟುಂಬಕ್ಕೆ ಖಚಿತವಾಗಿ ತಿಳಿದಿಲ್ಲ.

ದಸರಾ ಆರಂಭವಾದ ಎರಡು ದಿನಗಳ ಅನಂತರ ತಾನು ಜನಿಸಿರುವುದಾಗಿ ತಾಯಿ ಹೇಳುತ್ತಿದ್ದರು ಎನ್ನುತ್ತಾರೆ ಓಂ ಪುರಿ.

ಇದನ್ನೂ ಓದಿ: Riteish Deshmukh: ರಾಮಮಂದಿರಕ್ಕೆ ಭೇಟಿ ಕೊಟ್ಟ ರಿತೇಶ್ ದೇಶಮುಖ್ ದಂಪತಿ!

ಸ್ವಂತ ಪರಿಶ್ರಮದಿಂದ ಖ್ಯಾತಿ

ಓಂಪುರಿ ಅವರ ಬಾಲ್ಯವು ತುಂಬಾ ಸುಲಭವಾಗಿರಲಿಲ್ಲ. ಇಂದು ನಾವು ಅವರ ಕುಟುಂಬದ ಬಗ್ಗೆ ಮಾತನಾಡುತ್ತೇವೆ. ಆದರೆ ಅವರು ಹಿಂದುಳಿದ ಹಿನ್ನೆಲೆಯಿಂದ ಬಂದು ದೊಡ್ಡ ಹೆಸರನ್ನು ತಮ್ಮ ಸ್ವಂತ ಪರಿಶ್ರಮದಿಂದಲೇ ಗಳಿಸಿದರು.
ಎಂಟು ಮಂದಿಯಲ್ಲಿ ಇಬ್ಬರು ಮಾತ್ರ ಬದುಕಿ ಉಳಿದರು.

ಓಂ ಪುರಿ ಅವರ ಎಂಟು ಸಹೋದರರು ಮತ್ತು ಸಹೋದರಿಯರಲ್ಲಿ ಕಿರಿಯರಾಗಿದ್ದರು. ದುರದೃಷ್ಟವಶಾತ್ ಅವರ ಎಲ್ಲಾ ಸಹೋದರರು ಮತ್ತು ಸಹೋದರಿಯರು ಬಾಲ್ಯದಲ್ಲೇ ಸರಿಯಾದ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ನಿಧನರಾದರು. ಅವರ ಹಿರಿಯ ಸಹೋದರ ವೇದ್ ಮತ್ತು ಪುರಿ ಮಾತ್ರ ಬದುಕುಳಿದರು.


ಕಷ್ಟದ ಜೀವನ

ತಂದೆ ರೈಲ್ವೇ ಉದ್ಯೋಗಿಯಾಗಿದ್ದಾಗ ಸಿಮೆಂಟ್ ಕಳ್ಳತನದ ಆರೋಪದಿಂದ ಜೈಲು ಸೇರಿದ್ದರು. ಇದರ ಬಳಿಕ ಅವರ ಕುಟುಂಬವು ನಿರಾಶ್ರಿತವಾಯಿತು. ಈ ಸಮಯದಲ್ಲಿ ಓಂ ಪುರಿ ಅವರ ಸಹೋದರ ವೇದ್ ಪ್ರಕಾಶ್ ಪುರಿ ರೈಲು ನಿಲ್ದಾಣಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಓಂ ಪುರಿ ಅವರು ಸ್ಥಳೀಯ ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಕಷ್ಟದ ದಿನಗಳಲ್ಲಿ ತಮ್ಮ ಕುಟುಂಬವನ್ನು ಬೆಂಬಲಿಸಲು ಇವರು ರೈಲು ಹಳಿಗಳಿಂದ ಕಲ್ಲಿದ್ದಲು ಸಂಗ್ರಹಿಸುತ್ತಿದ್ದರು.

ಕಷ್ಟವಿದ್ದರೂ ಓದು ಮುಂದುವರಿಸಿದರು

ಎಷ್ಟೇ ಕಷ್ಟವಿದ್ದರೂ ಪುರಿ ಅವರ ಅಧ್ಯಯನವನ್ನು ಬಿಡಲಿಲ್ಲ. ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಗೆ ಸೇರಿ, ಅಲ್ಲಿ ಅವರು ನಾಸಿರುದ್ದೀನ್ ಷಾ ಅವರನ್ನು ಭೇಟಿಯಾದರು. ಷಾ ಅವರು ಪುರಿ ಅವರನ್ನು ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಕರೆ ತಂದರು.

ಷಾ ಅವರೊಂದಿಗೆ ಕೆಲಸ

ಓಂ ಪುರಿ ಮತ್ತು ನಾಸಿರುದ್ದೀನ್ ಷಾ ಅವರೊಂದಿಗೆ ಒಟ್ಟಿಗೆ 26 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಮೊದಲ ಚಿತ್ರ 1977ರಲ್ಲಿ ಭೂಮಿಕಾ ಮತ್ತು ಅವರ ಕೊನೆಯ ಚಿತ್ರ 2009 ರಲ್ಲಿ ಬೋಲೋ ರಾಮ್.


ಹೃದಯಾಘಾತದಿಂದ ನಿಧನ

ಓಂ ಪುರಿ ಅವರು ಮುಂಬಯಿ ನ ಅಂಧೇರಿಯಲ್ಲಿರುವ ಅವರ ನಿವಾಸದಲ್ಲಿ ಹೃದಯಾಘಾತದಿಂದ 2017ರ ಜನವರಿ 6 ರಂದು ನಿಧನರಾದರು. ಚಾಚಿ 420 (1997), ಹೇರಾ ಫೆರಿ (2000), ಚೋರ್ ಮಚಾಯೆ ಶೋರ್ (2002), ದೀವಾನೆ ಹ್ಯೂ ಪಾಗಲ್, ಚುಪ್ ಚುಪ್ ಕೆ, ಕಿಸ್ಮೆತ್ ಕನೆಕ್ಷನ್ ಮತ್ತು ಮಲಾಮಾಲ್ ವೀಕ್ಲಿ (2006) ಮತ್ತು ಓಹ್ ಮೈ ಗಾಡ್, ಧೋಲ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅವರು ನಟಿಸಿದ್ದರು.

ಭಾರತೀಯ, ಬ್ರಿಟಿಷ್ ಮತ್ತು ಅಮೆರಿಕನ್ ಚಲನಚಿತ್ರಗಳಲ್ಲಿ ನಟಿಸಿರುವ ಅವರಿಗೆ ನ್ಯಾಷನಲ್ ಫಿಲಂ ಅವಾರ್ಡ್, ಅತ್ಯತ್ತಮ ನಟ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಲಭಿಸಿದೆ.

Continue Reading
Advertisement
Bridge Collapse
ದೇಶ4 mins ago

Bridge Collapse: ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ; ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ

dimond smuggling
ದೇಶ22 mins ago

Diamond Smuggling : ನೂಡಲ್ಸ್​ ಪ್ಯಾಕೆಟ್​​ನಲ್ಲಿ ಸಿಕ್ಕಿತು 6.46 ಕೋಟಿ ರೂಪಾಯಿ ಮೌಲ್ಯದ ವಜ್ರ!

Tongue Reveals Health
ಆರೋಗ್ಯ22 mins ago

Tongue Reveals Health: ನಮ್ಮ ಆರೋಗ್ಯದ ಚರಿತ್ರೆಯನ್ನು ನಮ್ಮ ನಾಲಿಗೆಯೇ ಹೇಳುತ್ತದೆ!

HD Devegowda
ಕರ್ನಾಟಕ28 mins ago

HD Devegowda: ನಾನು ಇನ್ನೆರಡು ವರ್ಷ ಬದುಕಬಹುದು ಎಂದು ಕಣ್ಣೀರು ಹಾಕಿದ ದೇವೇಗೌಡರು

Lok Sabha Election 2024 Only a guaranteed wave in Karnataka says Cm Siddaramaiah
ಕರ್ನಾಟಕ35 mins ago

Lok Sabha Election 2024: ಇಲ್ಲಿರೋದು ಗ್ಯಾರಂಟಿ ಅಲೆ ಮಾತ್ರ; ಹಸಿ ಸುಳ್ಳು ಹೇಳುತ್ತಿರುವ ಮೋದಿ, ದೇವೇಗೌಡ: ಸಿಎಂ ಸಿದ್ದರಾಮಯ್ಯ

Virat kohli
ಪ್ರಮುಖ ಸುದ್ದಿ50 mins ago

Virat Kohli : ವಿರಾಟ್ ಕೊಹ್ಲಿಯ 50ನೇ ಏಕದಿನ ಕ್ರಿಕೆಟ್​ ಶತಕಕ್ಕೆ ಅಂತಾರಾಷ್ಟ್ರೀಯ ಗೌರವ

Job Alert
ಉದ್ಯೋಗ51 mins ago

Job Alert: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಮೇ 4ರೊಳಗೆ ಅಪ್ಲೈ ಮಾಡಿ

Murder case In Bengaluur
ಬೆಂಗಳೂರು52 mins ago

Murder Case : ಕೊಲೆಯಾದ ಮಹಿಳೆಗೆ 20 ಹುಡುಗರ ಸಹವಾಸ! ಅವರಿಗೆ ಆಕೆ ಇಟ್ಟಿದ್ದ ಹೆಸರು ಆರೆಂಜ್, ಆ್ಯಪಲ್, ಬನಾನಾ ಇತ್ಯಾದಿ!

Summer Hairstyles
ಫ್ಯಾಷನ್52 mins ago

Summer Hairstyles: ಸೆಕೆಗಾಲದಲ್ಲಿ ಟ್ರೆಂಡಿಯಾದ 3 ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್ಸ್!

hardik pandya
ಕ್ರೀಡೆ53 mins ago

IPL 2024: ಹಾರ್ದಿಕ್​ ಪಾಂಡ್ಯ ನಿಜವಾಗಿಯೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರಾ?; ವಿಚಿತ್ರ ವರ್ತನೆಯ ವಿಡಿಯೊ ವೈರಲ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ13 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು1 day ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ1 day ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌