ಸದಾ ನಗುತ್ತಿರುವಂತೆ ಕಾಣುವ ಈ ಮಗು ಇಂಟರ್‌ನೆಟ್‌ ಸ್ಟಾರ್‌; ಅಪರೂಪದ ಕಾಯಿಲೆಗೆ ಹೆದರಿದ ಪಾಲಕರು

ವಿದೇಶ

ಸದಾ ನಗುತ್ತಿರುವಂತೆ ಕಾಣುವ ಈ ಮಗು ಇಂಟರ್‌ನೆಟ್‌ ಸ್ಟಾರ್‌; ಅಪರೂಪದ ಕಾಯಿಲೆಗೆ ಹೆದರಿದ ಪಾಲಕರು

ನಾಲ್ಕು ತಿಂಗಳ ಈ ಮಗು ನಗುತ್ತಲೇ ಇರುವಂತೆ ( Permanent Smile Condition) ಭಾಸವಾಗುತ್ತಿದೆ. ನೋಡಲು ಕ್ಯೂಟ್‌ ಎನ್ನಿಸಿದರೂ, ಮಗುವಿಗೆ ಹಾಲು ಕುಡಿಯಲಾಗಲಿ, ಬಾಯಿ ಮುಚ್ಚಲಾಗಲಿ ಆಗುತ್ತಿಲ್ಲ.

VISTARANEWS.COM


on

permanent smile Baby
ಇಂಟರ್‌ನೆಟ್‌ ಸೆನ್ಸೇಷನ್‌ ಆದ ಮಗು
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಹುಟ್ಟಿದ ಶಿಶುವೊಂದರ ಫೋಟೋ ಸೋಷಿಯಲ್‌ ಮೀಡಿಯಾಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ಮಗು ಹುಟ್ಟಿದ ತಕ್ಷಣ ವೈದ್ಯರೇ ಶಾಕ್‌ ಆಗಿದ್ದರಂತೆ. ಒಂದು ಸಣ್ಣ ಮತ್ತು ಅಪರೂಪದ ಆನುವಂಶಿಕ ಸಮಸ್ಯೆಯಿಂದಾಗಿ ಮಗುವೀಗ ಇಂಟರ್‌ನೆಟ್‌ ಸೆನ್ಸೇಷನ್‌ ಆಗಿದೆ. ಮಗುವಿನ ಹೆಸರು ಆಯ್ಲಾ ಸಮ್ಮರ್ ಮುಚಾ. ಇವಳು ಬೈಲೆಟರಲ್‌ ಮ್ಯಾಕ್ರೋಸ್ಟೊಮಿಯಾ ಎಂಬ ಅತ್ಯಂತ ಅಪರೂಪದ ಸ್ಥಿತಿಯಿಂದ ಹುಟ್ಟಿದ್ದಾಳೆ. ಇದರಿಂದಾಗಿ ಆಕೆಯ ಬಾಯಿಯ ಎರಡೂ ಬದಿಯ ಮೂಲೆಗಳು ಒಂದಕ್ಕೊಂದು ಬೆಸೆದುಕೊಂಡಿಲ್ಲ. ಪುಟ್ಟ ಪಾಪು ಸದಾ ನಗುತ್ತಿರುವಂತೆ (Permanent Smile Condition) ಭಾಸವಾಗುತ್ತಿದೆ. ಹೀಗಾಗಿ ಶಾಶ್ವತ ನಗುವಿನೊಂದಿಗೆ ಹುಟ್ಟಿದ ಬೇಬಿ ಎಂದೇ ಇಂಟರ್‌ನೆಟ್‌ನಲ್ಲಿ ಪ್ರಸಿದ್ಧಿ ಪಡೆಯುತ್ತಿದ್ದಾಳೆ.

ಹೆಣ್ಣು ಮಗು ಹುಟ್ಟಿದ್ದು 2021ರ ಡಿಸೆಂಬರ್‌ನಲ್ಲಿ. ಕ್ರಿಸ್ಟಿನಾ ವರ್ಚರ್(21) ಮತ್ತು ಬ್ಲೇಜ್ ಮುಚಾ (20) ದಂಪತಿಯ ಮಗಳು. ಆದರೆ ತಮ್ಮ ಮಗುವಿನ ಈ ಸ್ಥಿತಿ ನೋಡಿ ಪಾಲಕರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ವೈದ್ಯರು ಹೇಳುವ ಪ್ರಕಾರ, ಮಗು ಆಯ್ಲಾ, ತಾಯಿಯ ಹೊಟ್ಟೆಯಲ್ಲಿ ಬೆಳೆಯುವಾಗಲೇ ಹೀಗೆ ಬೆಳೆದಿದೆ. ಗರ್ಭಿಣಿಯಾದಾಗಿನಿಂದ ಹೆರಿಗೆಯಾಗುವವರೆಗೂ ವಿವಿಧ ಹಂತದಲ್ಲಿ ಕ್ರಿಸ್ಟಿನಾ ವರ್ಚರ್‌ ಅಲ್ಟ್ರಾ ಸೌಂಡ್‌ ಸ್ಕ್ಯಾನಿಂಗ್‌ಗೆ ಒಳಗಾಗಿದ್ದಾರೆ. ಆದರೆ ಸ್ಕ್ಯಾನಿಂಗ್ ರಿಪೋರ್ಟ್‌ನಲ್ಲಿ ಕೂಡ ಒಮ್ಮೆಯೂ ಗೊತ್ತಾಗಲಿಲ್ಲ. ಮಗುವನ್ನು ಸಿಸೇರಿಯನ್‌ ಮೂಲಕ ಹೊರತೆಗೆದಾಗಲೇ ಬಾಯಿ ಅಸಹಜವಾಗಿರುವುದ ಗೊತ್ತಾಯಿತು ಎನ್ನುತ್ತಾರೆ ಮಗುವಿನ ತಂದೆ ಬ್ಲೇಜ್‌ ಮುಚಾ.

ಮಗುವಿನ ಫೋಟೋ, ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ತುಂಬ ಫೇಮಸ್‌ ಆಗಿದ್ದರೂ, ನೆಟ್ಟಿಗರು ಅದನ್ನು ಮೆಚ್ಚಿಕೊಂಡಿದ್ದರೂ ಕೂಡ ಆಕೆಯನ್ನು ಹಾಗೇ ಬಿಡುವಂತಿಲ್ಲ. ಆಯ್ಲಾಗೆ ಸರ್ಜರಿ ಮಾಡುವ ಮೂಲಕ ಬಾಯಿಯನ್ನು ಸರಿಪಡಿಸುವಂತೆ ಆಕೆಯ ಪಾಲಕರೇ ವೈದ್ಯರ ಬಳಿ ಹೇಳಿದ್ದಾರೆ. ಆಯ್ಲಾಳಿಗೆ ಈಗ ಬಾಯಿಯನ್ನು ಸರಿಯಾಗಿ ಮುಚ್ಚಲು ಸಾಧ್ಯವಾಗುತ್ತಿಲ್ಲ ಮತ್ತು ಎದೆಹಾಲು ಕುಡಿಯಲೂ ಸಾಧ್ಯವಾಗುತ್ತಿಲ್ಲ. ಮುಂದೆ ಇನ್ನಷ್ಟು ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ಅದನ್ನು ಸರ್ಜರಿ ಮಾಡಿಸುವ ನಿರ್ಧಾರಕ್ಕೆ ಪಾಲಕರು ಬಂದಿದ್ದಾರೆ.

ಇದನ್ನೂ ಓದಿ: Viral video: ತಂದೆ ತಂದೆಯೇ, ಮಗ ಮಗನೇ! ಶಿಖರ್‌ ಧವನ್‌ಗೆ ಅಪ್ಪನ ಒದೆ!!

ಈಕೆಗಿರುವ ಕಾಯಿಲೆ ಅತ್ಯಪರೂಪವಾಗಿದೆ. ಹಾಗಾಗಿ ಚಿಕಿತ್ಸಾ ಹಂತದಲ್ಲಿ ಕೆಲವು ಸವಾಲುಗಳು ಎದುರಾಗಬಹುದ 2007ರಲ್ಲಿ left Palate-Craniofacial ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ ಪ್ರಕಾರ ಬೈಲೆಟರಲ್‌ ಮ್ಯಾಕ್ರೋಸ್ಟೊಮಿಯಾ ಕೇಸ್‌ಗಳು ಕೇವಲ 14. ಅದರಲ್ಲೂ ಈಗ ಆಯ್ಲಾ ಹುಟ್ಟಿದ ಆಸ್ಪತ್ರೆಯಲ್ಲಿ ಇದೇ ಮೊದಲ ಪ್ರಕರಣವಾಗಿದೆ. ಹಾಗಾಗಿ ಚಿಕಿತ್ಸೆಗೂ ಪೂರ್ವ ವೈದ್ಯರಿಗೆ ಅಧ್ಯಯನ ಅಗತ್ಯ ಎಂದು ನ್ಯೂಯಾರ್ಕ್‌ ಪೋಸ್ಟ್‌ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಏನಿದು ಮ್ಯಾಕ್ರೋಸ್ಟೊಮಿಯಾ?
ಮ್ಯಾಕ್ರೋಸ್ಟೊಮಿಯಾ ಕೂಡ ಒಂದು ದೈಹಿಕ ಅಸಹಜತೆಯಾಗಿದ್ದು, ಇದು ಮುಖದ ಭಾಗದಲ್ಲಿ ಸೀಳು ರಚನೆಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಈ ಸೀಳು ವ್ಯಕ್ತಿಯ ಬಲ ಕೆನ್ನೆಯಲ್ಲಿ ಕಂಡುಬರುತ್ತವೆ. ಆದರೆ ಆಯ್ಲಾಳಿಗೆ ಎರಡೂ ಕಡೆಗಳಲ್ಲಿ ಕಾಣಿಸಿಕೊಂಡಿದೆ. 1,50,000-3,00,000 ಜನರಲ್ಲಿ ಒಬ್ಬರಲ್ಲಿ ಇದು ಕಾಣಿಸಿಕೊಳ್ಳಬಹುದು. ಇದನ್ನು ಸರ್ಜರಿ ಮೂಲಕ ಸರಿಪಡಿಸಬಹುದಾದರೂ ಅದಕ್ಕೆ ನುರಿತ ತಜ್ಞರ ಅಗತ್ಯವಿದೆ.

ಇದನ್ನೂ ಓದಿ: Video: ʼಮಮ್ಮೀ ಬಾʼ ಎಂದು ಮುದ್ದಾಗಿ ಕೂಗುವ ಕೆಂಪು ಗಿಳಿ; ವಿಡಿಯೋ ನೋಡಿ ನೆಟ್ಟಿಗರು ಖುಷ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

Medal Biting: ಒಲಂಪಿಕ್ಸ್‌ನಲ್ಲಿ ಕ್ರೀಡಾಪಟುಗಳು ಪದಕ ಕಚ್ಚುವುದು ಏಕೆ?

Medal Biting: ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ಕ್ರೀಡಾಪಟುಗಳು ಪದಕಗಳನ್ನು ಕಚ್ಚಿ (Medal Biteing) ಫೋಟೋಗೆ ಪೋಸ್ ಕೊಡುತ್ತಾರೆ. ಇದು ಯಾಕಾಗಿ? ಪದಕದ ಶುದ್ಧತೆಯನ್ನು ಪರಿಶೀಲಿಸಲೇ ಅಥವಾ ಇದೊಂದು ಸಂಪ್ರದಾಯವೇ? ಇದು ಯಾವಾಗದಿಂದ ಆಚರಣೆಯಲ್ಲಿದೆ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

Medal Biteing
Koo

ಬೆಂಗಳೂರು: ಒಲಂಪಿಕ್ಸ್‌ನಲ್ಲಿ (Olympic) ಪದಕ ವಿಜೇತ ( winners ) ಕ್ರೀಡಾಪಟುಗಳು ಪದಕವನ್ನು ಕಚ್ಚಿ (Medal Biting) ಫೋಟೋಗೆ ಪೋಸ್ ಕೊಡುವುದನ್ನು ನೋಡಿರುತ್ತೇವೆ. ಇವರು ಯಾಕೆ ಹೀಗೆ ಮಾಡುತ್ತಾರೆ ಎನ್ನುವ ಪ್ರಶ್ನೆಯಂತೂ ಒಂದಲ್ಲಾ ಒಂದು ಬಾರಿ ನಮ್ಮ ಮನದಲ್ಲಿ ಮೂಡಿರುತ್ತದೆ. ಒಲಿಂಪಿಕ್ ಪದಕ ವಿಜೇತರು ಪದಕ ಕಚ್ಚಲು ಕಾರಣವಿದೆ ಮಾತ್ರವಲ್ಲ ಇದಕ್ಕೆ ದೊಡ್ಡ ಇತಿಹಾಸವೇ ಇದೆ.

ಒಲಿಂಪಿಕ್ಸ್ ಪದಕ ವಿಜೇತ ಗಣ್ಯ ಕ್ರೀಡಾಪಟುಗಳು ವೇದಿಕೆಯ ಮೇಲೆ ನಿಂತು ತಮ್ಮ ಪದಕಗಳನ್ನು ಕಚ್ಚುವುದು ಒಲಿಂಪಿಕ್ಸ್‌ನಲ್ಲಿ ಚಿರಪರಿಚಿತ ದೃಶ್ಯವಾಗಿದೆ. ಮೈಕೆಲ್ ಫೆಲ್ಪ್ಸ್, ಉಸೇನ್ ಬೋಲ್ಟ್ ಮತ್ತು ಸಿಮೋನ್ ಬೈಲ್ಸ್ ಅವರ ಇಂತಹ ಚಿತ್ರಗಳು ಇಂದಿಗೂ ಬಹುತೇಕ ಮಂದಿಯ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಒಲಿಂಪಿಯನ್‌ಗಳು ಹೀಗೆ ಪದಕಗಳನ್ನು ಏಕೆ ಕಚ್ಚುತ್ತಾರೆ, ಇದರ ಹಿಂದಿರುವ ಕಾರಣ ಏನು ಗೊತ್ತೇ?

ಶುದ್ಧತೆ ಪರಿಶೀಲನೆ?

ಒಲಿಂಪಿಕ್ಸ್ ನ ಆರಂಭಿಕ ದಿನಗಳು. ಬೆಲೆಬಾಳುವ ಚಿನ್ನವನ್ನು ಕರೆನ್ಸಿಯ ರೂಪದಲ್ಲಿ ಬಳಸಲು ಪ್ರಾರಂಭಿಸಲಾಯಿತು. ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸಲು ವ್ಯಾಪಾರಿಗಳು ಚಿನ್ನದ ನಾಣ್ಯಗಳನ್ನು ಕಚ್ಚಿ ನೋಡುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ಚಿನ್ನವು ಮೃದುವಾದ ಲೋಹವಾಗಿದೆ. ಇದರ ಮೇಲೆ ಸ್ವಲ್ಪ ಒತ್ತಡ ಬಿದ್ದರೂ ಗುರುತು ಬೀಳುತ್ತದೆ. ಹೀಗಾಗಿ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ಕ್ರೀಡಾಪಟುಗಳು ತಮಗೆ ಸಿಗುವ ಚಿನ್ನದ ಪದಕವನ್ನು ಪರಿಶೀಲಿಸಲು ಹೀಗೆ ಮಾಡುತ್ತಿದ್ದರು. ಕ್ರಮೇಣ ಇದೊಂದು ಅಭ್ಯಾಸದ ಭಾಗವಾಯಿತು.


ಒಲಿಂಪಿಕ್ ಚಾಂಪಿಯನ್‌ಗಳು ತಮ್ಮ ಬಾಯಿಯಲ್ಲಿ ಚಿನ್ನದ ಪದಕವನ್ನು ಕಚ್ಚುವುದು ಈಗ ಶುದ್ಧತೆಯನ್ನು ಪರಿಶೀಲಿಸುವುದಕ್ಕಾಗಿ ಅಲ್ಲ. ಯಾಕೆಂದರೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) 1912 ರಲ್ಲಿ ಶುದ್ಧ ಚಿನ್ನದ ಪದಕಗಳನ್ನು ನೀಡುವುದನ್ನು ನಿಲ್ಲಿಸಿತ್ತು. ಆದರೆ ಅದರ ಅಭ್ಯಾಸ ಕ್ರಮ ಇನ್ನೂ ಮುಂದುವರಿದಿದೆ.


ಕ್ರೀಡಾಪಟುಗಳು ಪದಕಗಳನ್ನು ಏಕೆ ಕಚ್ಚುತ್ತಾರೆ?

ಒಲಿಂಪಿಕ್ ಕ್ರೀಡಾಪಟುಗಳಿಗೆ ಪದಕಗಳನ್ನು ಕಚ್ಚಿ ಫೋಟೋಗೆ ಪೋಸ್ ಕೊಡಲು ಕ್ರೀಡಾ ಛಾಯಾಚಿತ್ರ ಗ್ರಾಹಕರು ಕೇಳುತ್ತಾರೆ. ಇದೀಗ ಗೀಳಾಗಿ ಪರಿಣಮಿಸಿದೆ ಎನ್ನುತ್ತಾರೆ ಇಂಟರ್ನ್ಯಾಷನಲ್ ಸೊಸೈಟಿ ಆಫ್ ಒಲಿಂಪಿಕ್ ಇತಿಹಾಸಕಾರರ ಅಧ್ಯಕ್ಷ ಡೇವಿಡ್ ವಾಲೆಚಿನ್ಸ್ ಕಿ.

ಪದಕವನ್ನು ಕಚ್ಚುವ ಭಂಗಿಯು ಪತ್ರಿಕೆಗಳ ಮೊದಲ ಪುಟಕ್ಕೆ ಕೊಡಬಹುದಾದ ಚಿತ್ರ ಎಂದು ಅವರು ಪರಿಗಣಿಸುತ್ತಾರೆ ಹೀಗಾಗಿ ಕ್ರೀಡಾಪಟುಗಳಿಗೆ ಹಾಗೆ ಮಾಡಲು ಪತ್ರಕರ್ತರೇ ವಿನಂತಿಸುತ್ತಾರೆ. ಅವರು ಅದನ್ನು ಒಂದು ಸಾಂಪ್ರದಾಯ ಎನ್ನುವಂತೆ ನೋಡುತ್ತಾರೆ. ಅಥ್ಲೀಟ್‌ಗಳು ಇದನ್ನು ಸ್ವಂತವಾಗಿ ಮಾಡುತ್ತಾರೆ ಎಂದು ನಾನು ಭಾವಿಸುವುದಿಲ್ಲ ಎಂದು ವಾಲೆಚಿನ್ಸ್ ಕಿ ವಿವರಿಸಿದರು.


ಇದನ್ನೂ ಓದಿ: Suryakumar Yadav Catch: ಸೂರ್ಯಕುಮಾರ್​ ಕ್ಯಾಚ್ ಎಡವಟ್ಟು; ವಿಶ್ವಕಪ್​ ವಾಪಸ್​ ನೀಡಬೇಕಾ ಭಾರತ?

ಹಲ್ಲು ಮುರಿದುಕೊಂಡ ಡೇವಿಡ್ ಮೊಲ್ಲರ್

2010ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಜರ್ಮನ್ ಲೂಗರ್ ಡೇವಿಡ್ ಮೊಲ್ಲರ್ ಅವರಿಗೆ ಈ ಭಂಗಿಯಲ್ಲಿ ಫೋಟೋಗೆ ಪೋಸ್ ಕೊಡಲು ಪತ್ರಕರ್ತರು ಕೇಳಿಕೊಂಡರು, ಆದರೆ ಇದರಿಂದ ಬಳಿಕ ಅವರು ಒಂದು ಹಲ್ಲು ಮುರಿದುಕೊಂಡಿರುವುದಾಗಿ ಹೇಳಿಕೊಂಡಿದ್ದರು.

Continue Reading

ರಾಜಕೀಯ

K Annamalai: ಕೆ ಅಣ್ಣಾಮಲೈ ಯುಕೆ ಫೆಲೋಶಿಪ್‌ಗೆ ಆಯ್ಕೆ; ಬಿಜೆಪಿ ರಾಜ್ಯಾಧ್ಯಕ್ಷತೆಗೆ ರಾಜೀನಾಮೆ?

ಯುಕೆ ವಿದೇಶಾಂಗ ಕಚೇರಿಯ ಚೆವೆನಿಂಗ್ ಗುರುಕುಲ ಫೆಲೋಶಿಪ್ ಫಾರ್ ಲೀಡರ್‌ಶಿಪ್ ಮತ್ತು ಎಕ್ಸಲೆನ್ಸ್ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಕೆ. ಅಣ್ಣಾಮಲೈ ( K Annamalai) ಅವರು ಬ್ರಿಟನ್‌ನಲ್ಲಿ ಕೋರ್ಸ್ ಮುಗಿಯುವವರೆಗೆ ತಮ್ಮನ್ನು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಿಂದ ಬಿಡುಗಡೆ ಮಾಡುವಂತೆ ಬಿಜೆಪಿ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

VISTARANEWS.COM


on

By

K Annamalai
Koo

ಲೋಕಸಭಾ ಚುನಾವಣೆಯಲ್ಲಿ (Lok sabha election) ಬಿಜೆಪಿಯಿಂದ (bjp) ತಮಿಳುನಾಡಿನಲ್ಲಿ (tamilnadu) ಸ್ಪರ್ಧಿಸಿ ಸೋತಿದ್ದ ಒಂದು ತಿಂಗಳ ಬಳಿಕ ಕೆ. ಅಣ್ಣಾಮಲೈ ( K Annamalai) ಅವರಿಗೆ ಯುಕೆ (UK) ಫೆಲೋಶಿಪ್‌ ದೊರೆತಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷರೂ ಆಗಿರುವ ಕೆ ಅಣ್ಣಾಮಲೈ ಅವರು ಸದ್ಯದಲ್ಲೇ ಲಂಡನ್‌ಗೆ ತೆರಳಲಿದ್ದಾರೆ. ಯುಕೆ ವಿದೇಶಾಂಗ ಕಚೇರಿಯ ಚೆವೆನಿಂಗ್ ಗುರುಕುಲ ಫೆಲೋಶಿಪ್ ಫಾರ್ ಲೀಡರ್‌ಶಿಪ್ ಮತ್ತು ಎಕ್ಸಲೆನ್ಸ್ ಕಾರ್ಯಕ್ರಮಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. ಮೂರು ತಿಂಗಳ ಕಾಲ ಅವರು ಅಲ್ಲಿ ನೆಲೆಸಲಿದ್ದಾರೆ.

ಫೆಲೋಶಿಪ್ ಕಾರ್ಯಕ್ರಮವು ಸೆಪ್ಟೆಂಬರ್ ಮಧ್ಯದಲ್ಲಿ ಪ್ರಾರಂಭವಾಗಲಿದ್ದು, ನವೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಮೂಲಗಳ ಪ್ರಕಾರ ಅಣ್ಣಾಮಲೈ ಅವರು 2024ರ ಲೋಕಸಭೆ ಚುನಾವಣೆಗೆ ಮುನ್ನ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರು ಮತ್ತು ಮೇ ತಿಂಗಳಲ್ಲಿ ದೆಹಲಿಯಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದರು. ಬ್ರಿಟನ್‌ನಲ್ಲಿ ಕೋರ್ಸ್ ಮುಗಿಯುವವರೆಗೆ ತಮ್ಮನ್ನು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಿಂದ ಬಿಡುಗಡೆ ಮಾಡುವಂತೆ ಬಿಜೆಪಿ ಹೈಕಮಾಂಡ್‌ಗೆ ಅಣ್ಣಾಮಲೈ ಅವರು ಮನವಿ ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಅಣ್ಣಾಮಲೈ ಅವರು ನಾಗರಿಕ ಸೇವೆಯನ್ನು ತೊರೆದ ಅನಂತರ ಅವರು ಪ್ರಾರಂಭಿಸಿದ ಎನ್‌ಜಿಒ ‘ವೀ ದಿ ಲೀಡರ್ಸ್’ ಪ್ರತಿಷ್ಠಾನದ ಸಂಸ್ಥಾಪಕರಾಗಿ ಚೆವೆನಿಂಗ್ ಗುರುಕುಲ ಫೆಲೋಶಿಪ್ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರು. ಕಾರ್ಯಕ್ರಮವನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ರಾಜಕೀಯ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ವಿಭಾಗದಲ್ಲಿ ಆಯೋಜಿಸಿದೆ ಎಂದು ಚೆವೆನಿಂಗ್ ವೆಬ್‌ಸೈಟ್ ತಿಳಿಸಿದೆ.

ಯುಕೆ ವಿದೇಶಾಂಗ ಕಚೇರಿಯು 20 ವರ್ಷಗಳಿಗೂ ಹೆಚ್ಚು ಕಾಲ ಫೆಲೋಶಿಪ್ ಕಾರ್ಯಕ್ರಮವನ್ನು ನಡೆಸುತ್ತಿದೆ. ಯುವ ಸಾಧಕರು ಮತ್ತು ಮಧ್ಯಮ ವೃತ್ತಿಪರರು ಹಾಗೂ ವಿವಿಧ ಹಿನ್ನೆಲೆಯ ವೃತ್ತಿಪರರು ಇಲ್ಲಿ ತಮ್ಮ ನಾಯಕತ್ವ ಸಾಮರ್ಥ್ಯವನ್ನು ಪ್ರದರ್ಶಿಸಬಹುದು ಎಂದು ವೆಬ್‌ಸೈಟ್ ಹೇಳಿದೆ. ಈ ಕುರಿತು ಜುಲೈ 26ರಂದು ಬ್ರಿಟಿಷ್ ಹೈ ಕಮಿಷನ್ ಘೋಷಣೆ ಮಾಡಲಿದ್ದು, ಅಣ್ಣಾಮಲೈ ಸೇರಿ ಸುಮಾರು ಹತ್ತು ವೃತ್ತಿಪರರು ಈ ಬಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಚೆವೆನಿಂಗ್ ಗುರುಕುಲ ಫೆಲೋಶಿಪ್ 12 ವಾರಗಳ ಕಾರ್ಯಕ್ರಮವಾಗಿದ್ದು, ಇದಕ್ಕಾಗಿ ಪ್ರತಿ ವರ್ಷ 12 ಅಭ್ಯರ್ಥಿಗಳನ್ನು ಭಾರತದಿಂದ ಗುರುಕುಲ ಫೆಲೋಗಳಾಗಿ ಆಯ್ಕೆ ಮಾಡಲಾಗುತ್ತದೆ. 12 ವಾರಗಳ ವಸತಿ ಕೋರ್ಸ್ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ರಾಜಕೀಯ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ವಿಭಾಗದಲ್ಲಿ ನಡೆಯಲಿದೆ.

ಫೆಲೋಶಿಪ್‌ಗೆ ಸಂಬಂಧಿಸಿದ ಒಂದೆರಡು ಪೂರ್ವ-ಉದ್ದೇಶಿತ ಕಾರ್ಯಕ್ರಮಗಳಿಗೆ ಅಣ್ಣಾಮಲೈ ಈಗಾಗಲೇ ಹಾಜರಾಗಿದ್ದಾರೆ ಮತ್ತು ಸೆಪ್ಟೆಂಬರ್‌ನಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಬಿಜೆಪಿ ಹೈಕಮಾಂಡ್ ರಾಜ್ಯಕ್ಕೆ ಹಂಗಾಮಿ ಅಧ್ಯಕ್ಷರನ್ನು ನೇಮಿಸುವ ನಿರೀಕ್ಷೆಯಿದೆ ಮತ್ತು ಸ್ಥಾನಕ್ಕೆ ಹೆಚ್ಚಿನ ಆಕಾಂಕ್ಷಿಗಳು ಇರುವುದರಿಂದ ತೀವ್ರ ಚರ್ಚೆಗಳು ನಡೆಯುತ್ತಿವೆ.

ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ 2020ರ ಆಗಸ್ಟ್ ನಲ್ಲಿ ಬಿಜೆಪಿ ಸೇರಿದ್ದರು. ‘ಪಕ್ಷದ ನಿಷ್ಠಾವಂತ ಸೈನಿಕ’ ಎಂದು ಗುರುತಿಸಿಕೊಂಡಿರುವ ಅವರು ಪಕ್ಷಕ್ಕೆ ಸೇರಿದಾಗಿನಿಂದ ರಾಜ್ಯದಲ್ಲಿ ಹಲವಾರು ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದರ ಜತೆಗೆ ವಿವಾದಗಳಿಗೂ ಕೇಂದ್ರವಾಗಿದ್ದಾರೆ.

ಇದನ್ನೂ ಓದಿ: Narendra Modi: ನೀಟ್‌ ಅಕ್ರಮ ಕುರಿತು ಸಂಸತ್‌ನಲ್ಲಿ ಮೋದಿ ಪ್ರಸ್ತಾಪ; ವಿದ್ಯಾರ್ಥಿಗಳಿಗೆ ಅವರು ಹೇಳಿದ್ದಿಷ್ಟು

2023ರಲ್ಲಿ ಅಣ್ಣಾಮಲೈ ಅವರು ನಾಲ್ಕು ಆಡಿಯೋ ಟೇಪ್‌ಗಳ ಸರಣಿಯನ್ನು ಬಿಡುಗಡೆ ಮಾಡಿದರು. ಅದರ ಮೂಲಕ ಅವರು ಡಿಎಂಕೆ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು. ‘ಡಿಎಂಕೆ ಫೈಲ್‌ಗಳು’ ಎಂಬ ಶೀರ್ಷಿಕೆಯಡಿ, ಆಡಿಯೋ ಟೇಪ್‌ಗಳ ಭಾಗ ಒಂದರಲ್ಲಿ ಪಟ್ಟಿ ಮಾಡಲಾದ ಆಸ್ತಿಗಳು 1.34 ಲಕ್ಷ ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಇದು ಸ್ಟಾಲಿನ್ ಅವರ ಕುಟುಂಬ ಸದಸ್ಯರು ಮತ್ತು ಇತರ ಹಿರಿಯ ನಾಯಕರು ಸೇರಿದಂತೆ 12 ವ್ಯಕ್ತಿಗಳ ಒಡೆತನದಲ್ಲಿದೆ ಎಂದು ಅವರು ಆರೋಪಿಸಿದ್ದರು. ಅಣ್ಣಾಮಲೈ ಈ ಬಾರಿ ಚುನಾವಣೆಯಲ್ಲಿ ಸೋತಿದ್ದಾರೆ. ಆದರೆ ಅವರ ನಾಯಕತ್ವದಲ್ಲ ಪಕ್ಷ ತಮಿಳುನಾಡಿನಲ್ಲಿ ಶೇಕಡಾವಾರು ಮತ ಗಳಿಕೆಯಲ್ಲಿ ಭಾರಿ ಸಾಧನೆ ಮಾಡಿದೆ.

Continue Reading

ವಾಣಿಜ್ಯ

SEBI: ಅದಾನಿ ವರದಿ: ಹಿಂಡನ್‌ಬರ್ಗ್‌ಗೆ ಸೆಬಿಯಿಂದ ಶೋಕಾಸ್ ನೋಟಿಸ್

SEBI: ಅಮೆರಿಕ ಮೂಲದ ಹಿಂಡನ್‌ಬರ್ಗ್‌ ರಿಸರ್ಚ್ ಸಂಸ್ಥೆಯ ಅದಾನಿ ವರದಿಗೆ ಸಂಬಂಧಿಸಿದಂತೆ ಭಾರತದ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ಶೋಕಾಸ್ ನೋಟಿಸ್ ನೀಡಿದೆ. 46 ಪುಟಗಳ ಶೋಕಾಸ್ ನೋಟಿಸ್ ಅನ್ನು ಜೂನ್ 27ರಂದು ನೀಡಲಾಗಿದೆ ಎಂದು ಹಿಂಡನ್‌ಬರ್ಗ್‌ನ ಮೂಲಗಳು ತಿಳಿಸಿವೆ.

VISTARANEWS.COM


on

SEBI
Koo

ಮುಂಬೈ: ಅಮೆರಿಕ ಮೂಲದ ಹಿಂಡನ್‌ಬರ್ಗ್‌ ರಿಸರ್ಚ್ (Hindenburg research) ಸಂಸ್ಥೆಯ ಅದಾನಿ ವರದಿಗೆ ಸಂಬಂಧಿಸಿದಂತೆ ಭಾರತದ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ(SEBI) ಶೋಕಾಸ್ ನೋಟಿಸ್ ನೀಡಿದೆ. 46 ಪುಟಗಳ ಶೋಕಾಸ್ ನೋಟಿಸ್ ಅನ್ನು ಜೂನ್ 27ರಂದು ನೀಡಲಾಗಿದೆ ಎಂದು ಹಿಂಡನ್‌ಬರ್ಗ್‌ನ ಮೂಲಗಳು ತಿಳಿಸಿವೆ.

ಇದಕ್ಕೆ ಪ್ರತಿಕ್ರಿಯಿಸಿದ ಹಿಂಡನ್‌ಬರ್ಗ್‌, “ಪೂರ್ವ ನಿರ್ದೇಶಿತ ಉದ್ದೇಶವನ್ನು ಪೂರೈಸಲು ರೂಪಿಸಿರುವ ಈ ಶೋಕಾಸ್‌ ನೋಟಿಸ್‌ ಅನ್ನು ನಾವು ಅಸಂಬದ್ಧ ಎಂದು ಭಾವಿಸುತ್ತೇವೆ. ಭ್ರಷ್ಟಾಚಾರವನ್ನು ಬಯಲಿಗೆಳೆಯುವವರನ್ನು ಬೆದರಿಸಿ ಮೌನಗೊಳಿಸುವ ಪ್ರಯತ್ನ ಇದಾಗಿದೆ. ಭಾರತದ ಅತ್ಯಂತ ಪ್ರಬಲ ಸಂಸ್ಥೆಯೊಂದು ವಂಚನೆ ಎಸಗಿದೆ” ಎಂದು ಎಂದು ಆರೋಪಿಸಿದೆ.

ʼʼಭಾರತದಲ್ಲಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳು ನಡೆಸುವ ಭ್ರಷ್ಟಾಚಾರ ಮತ್ತು ವಂಚನೆಯನ್ನು ಬಹಿರಂಗಪಡಿಸುವವರ ಬಾಯಿ ಮುಚ್ಚಿಸುವ ಪ್ರಯತ್ನ ಇದಾಗಿದೆ. ಸೆಬಿ ಕಳುಹಿಸಿದ ನೋಟಿಸ್‌ನಲ್ಲಿ ಕೆ-ಇಂಡಿಯಾ ಆಪೋರ್ಚೂನಿಟೀಸ್ ಫಂಡ್ ಹೆಸರನ್ನು ಪ್ರಸ್ತಾಪಿಸಿದೆ. ಆದರೆ ಅದು ಕೋಟಕ್ ಮಹೀಂದ್ರ ಬ್ಯಾಂಕ್ ಎಂದು ಸ್ಪಷ್ಟವಾಗಿ ಹೇಳಿಲ್ಲ ಯಾಕೆ? ಮತ್ತೊಬ್ಬ ಪ್ರಭಾವಶಾಲಿ ವ್ಯಕ್ತಿಯನ್ನು ರಕ್ಷಿಸುವ ಕೆಲಸ ಇದುʼʼ ಎಂದು ಹಿಂಡನ್‌ಬರ್ಗ್‌ ರಿಸರ್ಚ್ ಸಂಸ್ಥೆ ಖಾರವಾಗಿ ಪ್ರತಿಕ್ರಿಯಿಸಿದೆ.

ಕೆ ಇಂಡಿಯಾ ಆಪೋರ್ಚುನಿಟೀಸ್ ಫಂಡ್ ಅನ್ನು ಕೋಟಕ್ ಮಹೀಂದ್ರ ಇನ್ವೆಸ್ಟ್​ಮೆಂಟ್ ಲಿ ಸಂಸ್ಥೆ ನಿರ್ವಹಿಸುತ್ತದೆ. ಇದು ಉದಯ್ ಕೋಟಕ್ ಅವರ ಕೋಟಕ್ ಮಹೀಂದ್ರ ಬ್ಯಾಂಕ್ ಅಧೀನದಲ್ಲಿರುವ ಸಂಸ್ಥೆಯಾಗಿದೆ. ಕುತೂಹಲ ಎಂದರೆ ಉದಯ್ ಕೋಟಕ್ ಅವರು 2017ರಲ್ಲಿ ಸೆಬಿಯ ಕಾರ್ಪೊರೇಟ್ ಗವರ್ನೆನ್ಸ್ ಕಮಿಟಿಯ ನೇತೃತ್ವ ವಹಿಸಿದ್ದರು. ಇನ್ನು ತನ್ನ ವಿವಿಧ ನೆಟ್‌ವರ್ಕ್‌ಗಳನ್ನು ಬಳಸಿ ಅದಾನಿ ಸ್ಟಾಕ್​ಗಳನ್ನು ಶಾರ್ಟ್ ಮಾಡಿದ್ದೇವೆ ಎಂದು ಸೆಬಿ ಮಾಡಿರುವ ಆರೋಪವನ್ನು ಹಿಂಡನ್‌ಬರ್ಗ್‌ ನಿರಾಕರಿಸಿದೆ.

ಏನಿದು ಹಿಂಡನ್‌ಬರ್ಗ್‌ ವರದಿ ಕೇಸ್?‌

ಗೌತಮ್‌ ಅದಾನಿ ನೇತೃತ್ವದ ಅದಾನಿ ಗ್ರೂಪ್‌ ಅಕ್ರಮ ಎಸಗಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆಯು 2023ರ ಜನವರಿಯಲ್ಲಿ ಪ್ರಕಟಿಸಿದ ವರದಿಯು ದೇಶದಲ್ಲಿ ಸಂಚಲನ ಮೂಡಿಸಿತ್ತು. “ಹೂಡಿಕೆದಾರರಿಗೆ ಅದಾನಿ ಗ್ರೂಪ್‌ ವಂಚನೆ ಮಾಡದೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ ಷೇರು ಮೌಲ್ಯಗಳನ್ನು ಹೆಚ್ಚು ತೋರಿಸಿರುವುದು ವಂಚನೆಯಾಗಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದಾದ ಬಳಿಕ ಅದಾನಿ ಗ್ರೂಪ್‌ ಷೇರು ಮೌಲ್ಯವು ದಿಢೀರನೆ ಕುಸಿದು ಭಾರಿ ನಷ್ಟವಾಗಿತ್ತು. ಅಲ್ಲದೆ, ಅದಾನಿ ಗ್ರೂಪ್‌ ದಿವಾಳಿಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು.

ಇದನ್ನೂ ಓದಿ: ಹಿಂಡನ್‌ಬರ್ಗ್‌ ಕೇಸ್; ಅದಾನಿಗೆ ಬಿಗ್‌ ರಿಲೀಫ್, ಸೆಬಿ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ ಎಂದ ಸುಪ್ರೀಂ

Continue Reading

ವಿದೇಶ

Indian Origin Businessman: 8,300 ಕೋಟಿ ರೂ. ವಂಚನೆ; ಭಾರತೀಯ ಮೂಲದ ಅಮೆರಿಕದ ಉದ್ಯಮಿಗೆ ಜೈಲು

Indian Origin Businessman: ಗೋಲ್ಡ್‌ ಸಚ್ಸ್‌ ಗ್ರೂಪ್‌, ಗೂಗಲ್‌ ಪೇರೆಂಟ್‌ ಆಲ್ಫಬೆಟ್‌ ಮತ್ತು ಇಲಿನಾಯ್ಸ್ ಗವರ್ನರ್ ಜೆಬಿ ಪ್ರಿಟ್ಜ್ಕರ್ ಅವರ ಸಾಹಸೋದ್ಯಮ ಬಂಡವಾಳ ಸಂಸ್ಥೆಗೆ ತಮ್ಮ ಸ್ಕೀಂ ಮೂಲಕ ಶಾ ಕೋಟ್ಯಂತರ ರೂ. ವಂಚನೆ ಮಾಡಿರುವುದು ಸಾಬೀತಾಗಿದ್ದು, ಅಮೆರಿಕ ಜಿಲ್ಲಾ ನ್ಯಾಯಾಧೀಶ ಥಾಮನ್‌ ಡರ್ಕಿನ್‌ ಏಳೂವರೆ ವರ್ಷ ಕಠಿನ ಸಜೆ ವಿಧಿಸಿದೆ. ಹೂಡಿಕೆದಾರರಿಗೆ ಸುಳ್ಳು ಹೇಳಿ ವಂಚನೆ, ಸುಳ್ಳು ಜಾಹೀರಾತು ಪ್ರಕಟಿಸಿ ವಂಚನೆ ಹೀಗೆ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಶಾಗೆ 15ವರ್ಷಗಳ ಶಿಕ್ಷೆ ವಿಧಿಸಬೇಕೆಂದು ಕೋರ್ಟ್‌ಗೆ ಸಂತ್ರಸ್ತರು ಮನವಿ ಮಾಡಿದ್ದರು.

VISTARANEWS.COM


on

Indian Origin Businessman
Koo

ವಾಷಿಂಗ್ಟನ್‌: ಭಾರತೀಯ ಮೂಲದ ಅಮೆರಿಕದ ಉದ್ಯಮಿ(Indian Origin Businessman), ಔಟ್‌ಕಮ್‌ ಹೆಲ್ತ್‌ ಸಂಸ್ಥೆ(Outcome Health)ಯ ಸಹ ಸಂಸ್ಥಾಪಕ ರಿಶಿ ಶಾ ಅವರಿಗೆ ವಂಚನೆ ಪ್ರಕರಣದಲ್ಲಿ ಏಳೂವರೆ ವರ್ಷ ಶಿಕ್ಷೆಯಾಗಿದೆ. ಬರೋಬ್ಬರಿ 8,300 ಕೋಟಿ ರೂ. ವಂಚನೆ ಪ್ರಕರಣದಲ್ಲಿ ರಿಶಿ ಶಾ ಅವರನ್ನು ಅಮೆರಿಕ ಜಿಲ್ಲಾ ಕೋರ್ಟ್‌ ದೋಷಿ ಎಂದು ಘೋಷಿಸಿದ್ದು, ಇದೀಗ ಶಿಕ್ಷೆ ಪ್ರಮಾಣ ಪ್ರಕಟಿಸಿದೆ.

ಗೋಲ್ಡ್‌ ಸಚ್ಸ್‌ ಗ್ರೂಪ್‌, ಗೂಗಲ್‌ ಪೇರೆಂಟ್‌ ಆಲ್ಫಬೆಟ್‌ ಮತ್ತು ಇಲಿನಾಯ್ಸ್ ಗವರ್ನರ್ ಜೆಬಿ ಪ್ರಿಟ್ಜ್ಕರ್ ಅವರ ಸಾಹಸೋದ್ಯಮ ಬಂಡವಾಳ ಸಂಸ್ಥೆಗೆ ತಮ್ಮ ಸ್ಕೀಂ ಮೂಲಕ ಶಾ ಕೋಟ್ಯಂತರ ರೂ. ವಂಚನೆ ಮಾಡಿರುವುದು ಸಾಬೀತಾಗಿದ್ದು, ಅಮೆರಿಕ ಜಿಲ್ಲಾ ನ್ಯಾಯಾಧೀಶ ಥಾಮನ್‌ ಡರ್ಕಿನ್‌ ಏಳೂವರೆ ವರ್ಷ ಕಠಿನ ಸಜೆ ವಿಧಿಸಿದೆ. ಹೂಡಿಕೆದಾರರಿಗೆ ಸುಳ್ಳು ಹೇಳಿ ವಂಚನೆ, ಸುಳ್ಳು ಜಾಹೀರಾತು ಪ್ರಕಟಿಸಿ ವಂಚನೆ ಹೀಗೆ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಶಾಗೆ 15ವರ್ಷಗಳ ಶಿಕ್ಷೆ ವಿಧಿಸಬೇಕೆಂದು ಕೋರ್ಟ್‌ಗೆ ಸಂತ್ರಸ್ತರು ಮನವಿ ಮಾಡಿದ್ದರು.

ವೈದ್ಯರ ಕಚೇರಿಗಳಲ್ಲಿನ ಟಿವಿಗಳಲ್ಲಿ ಜಾಹೀರಾತುಗಳನ್ನು ಒದಗಿಸಿದ ಔಟ್‌ಕಮ್ ಹೆಲ್ತ್‌ನ ಸಹ-ಸಂಸ್ಥಾಪಕ, ಭಾರತೀಯ-ಅಮೆರಿಕನ್ ರಿಷಿ ಶಾ, 38, ಕಳೆದ ವರ್ಷ ಫೆಡರಲ್ ಕೋರ್ಟ್‌ ಅನೇಕ ವಂಚನೆ ಮತ್ತು ಮನಿ ಲಾಂಡರಿಂಗ್ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಿತ್ತು. ಇದೀಗ ಶಾ ಮತ್ತು ಮತ್ತು ಇತರ ಇಬ್ಬರು ಸಹೋದ್ಯೋಗಿಗಳಿಗೆ ಕಳೆದ ವಾರ ಚಿಕಾಗೋದಲ್ಲಿ US ಜಿಲ್ಲಾ ನ್ಯಾಯಾಧೀಶ ಥಾಮಸ್ ಡರ್ಕಿನ್ ಅವರು ಶಿಕ್ಷೆ ವಿಧಿಸಿದ್ದಾರೆ ಎಂದು US ಅಟಾರ್ನಿ ಕಚೇರಿ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

2017 ರ ವಾಲ್ ಸ್ಟ್ರೀಟ್ ಜರ್ನಲ್ ಲೇಖನದಲ್ಲಿ ವಂಚನೆಯನ್ನು ಬಹಿರಂಗಪಡಿಸುವ ಮೊದಲು, ಶಾ ಡೆಮಾಕ್ರಟಿಕ್ ವಲಯಗಳಲ್ಲಿ ಉದಯೋನ್ಮುಖ ಉದ್ಯಮಿಯಾಗಿದ್ದರು. 2006 ರಲ್ಲಿ ಅವರು ಚಿಕಾಗೋದ ಉತ್ತರದಲ್ಲಿರುವ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಶಾ ಕಾಂಟೆಕ್ಸ್ಸ್ಟ್‌ ಮೀಡಿಯಾ ಹೆಲ್ತ್‌ ಎಂಬ ಸ್ಟಾರ್ಟ್‌ಅಪ್‌ ಕಂಪೆನಿ ಶುರುಮಾಡಿದ್ದರು. ರೋಗಿಗಳನ್ನು ಗುರಿಯಾಗಿಸಿಕೊಂಡು ಆರೋಗ್ಯ ಜಾಹೀರಾತುಗಳನ್ನು ಸ್ಟ್ರೀಮ್ ಮಾಡಲು ವೈದ್ಯರ ಕಚೇರಿಗಳಲ್ಲಿ ಟೆಲಿವಿಷನ್‌ಗಳನ್ನು ಸ್ಥಾಪಿಸುವ ದೃಷ್ಟಿಕೋನದೊಂದಿಗೆ ಈ ಉದ್ಯಮ ಪ್ರಾರಂಭವಾಗಿತ್ತು. ಇದಾದ ಬಳಿ ಶಾ ತಮ್ಮ ಸಹ ಸಂಸ್ಥಾಪಕಮ ಶಾರದಾ ಅಗರ್ವಾಲ್‌ ಅವರ ಜೊತೆಗೂಡಿ ಸಂಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದರು.

ಔಟ್‌ಕಮ್‌ ಹೆಲ್ತ್‌ ದಿನೇ ದಿನೇ ಎತ್ತರಕ್ಕೆ ಬೆಳೆಯುತ್ತಿದ್ದಂತೆ ಅದರ ಕರ್ಮಕಾಂಡ ಬೆಳಕಿಗೆ ಬಂದಿತ್ತು. ಕಂಪನಿಯು ಪ್ರಸಾರ ಮಾಡುವುದಕ್ಕಿಂತ ಹೆಚ್ಚಿನ ಜಾಹೀರಾತುಗಳನ್ನು ಮಾರಾಟ ಮಾಡಿತು ಮತ್ತು ವೈದ್ಯರ ಕಚೇರಿಗಳಲ್ಲಿನ ಟಿವಿಗಳ ನೆಟ್‌ವರ್ಕ್‌ನ ಗಾತ್ರದ ಬಗ್ಗೆ ಔಷಧೀಯ ದೈತ್ಯ Novo Nordisk A/S ನಂತಹ ಗ್ರಾಹಕರಿಗೆ ಸುಳ್ಳು ಹೇಳಿತ್ತು ಎಂಬುದು ಬಯಲಾಗಿತ್ತು.

ಇದನ್ನೂ ಓದಿ: MUDA site scandal: ಮುಡಾ ನಿವೇಶನಗಳ ಹಂಚಿಕೆ ರದ್ದು; ಬಹುಕೋಟಿ ಹಗರಣದ ತನಿಖೆಗೆ ಸರ್ಕಾರ ಆದೇಶ

Continue Reading
Advertisement
Prajwal Devaraj cancel birthday darshan main reason
ಸಿನಿಮಾ1 min ago

Prajwal Devaraj: ಪ್ರಜ್ವಲ್ ದೇವರಾಜ್ ಬರ್ತ್‌ಡೇ ಸೆಲೆಬ್ರೇಷನ್‌ ಕ್ಯಾನ್ಸಲ್‌; ದರ್ಶನ್‌ ಕಾರಣ?

IND vs ZIM
ಕ್ರೀಡೆ11 mins ago

IND vs ZIM: ಜಿಂಬಾಬ್ವೆ ತಲುಪಿದ ಯಂಗ್‌ ಟೀಮ್‌ ಇಂಡಿಯಾ; ಶನಿವಾರದಿಂದ ಸರಣಿ ಆರಂಭ

Medal Biteing
ಕ್ರೀಡೆ18 mins ago

Medal Biting: ಒಲಂಪಿಕ್ಸ್‌ನಲ್ಲಿ ಕ್ರೀಡಾಪಟುಗಳು ಪದಕ ಕಚ್ಚುವುದು ಏಕೆ?

Tharun Sudhir sonal monteiro marriage update
ಸ್ಯಾಂಡಲ್ ವುಡ್29 mins ago

Tharun Sudhir: ಸೋನಾಲ್-ತರುಣ್ ಮದುವೆ ಯಾವಾಗ? ಭಾವಿ ಸೊಸೆ ಬಗ್ಗೆ ಡೈರೆಕ್ಟರ್ ಅಮ್ಮ ಏನಂದ್ರು?

Stock Market
ವಾಣಿಜ್ಯ52 mins ago

Stock Market: ಮೊದಲ ಬಾರಿಗೆ 80,000 ಗಡಿ ದಾಟಿದ ಸೆನ್ಸೆಕ್ಸ್: 24,250 ಪಾಯಿಂಟ್‌ ತಲುಪಿದ ನಿಫ್ಟಿ

bangalore murder case
ಕ್ರೈಂ1 hour ago

Murder Case: ರಾಜಧಾನಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ

Team India
ಕ್ರೀಡೆ1 hour ago

Team India: ತವರಿಗೆ ಪ್ರಯಾಣ ಬೆಳೆಸಿದ ಟೀಮ್​ ಇಂಡಿಯಾ; ನಾಳೆ ದಿಲ್ಲಿಗೆ ಆಗಮನ

Actor Darshan V Manohar About Darshan
ಸ್ಯಾಂಡಲ್ ವುಡ್1 hour ago

Actor Darshan: ಹೆಣ್ಣುಮಕ್ಕಳ ಶಾಪ ತಟ್ಟಿದ್ರೆ ಏನಾಗತ್ತೆ ಅನ್ನೋದಕ್ಕೆ ದರ್ಶನ್‌ ಕೇಸ್‌ ಸಾಕ್ಷಿ ಎಂದ ವಿ ಮನೋಹರ್‌!

Nitin Gadkari
ದೇಶ2 hours ago

Nitin Gadkari: ರಸ್ತೆಗಿಳಿಯಲಿದೆ 132 ಸೀಟು, ಹೋಸ್ಟೆಸ್‌ ಒಳಗೊಂಡ ಬಸ್‌; ಸಾರಿಗೆ ವಲಯದಲ್ಲಿನ ಯೋಜನೆ ವಿವರಿಸಿದ ಸಚಿವ ನಿತಿನ್‌ ಗಡ್ಕರಿ

Amarnath Tragedy
Latest2 hours ago

Amarnath Tragedy: ಬಸ್‌ ಬ್ರೇಕ್ ಫೇಲ್; ಜೀವ ಉಳಿಸಿಕೊಳ್ಳಲು ಬಸ್‌ನಿಂದ ಜಿಗಿದ ಅಮರನಾಥ ಯಾತ್ರಿಕರು! ವಿಡಿಯೊ ಇದೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ17 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌