IPL 2023 | ಪಂಜಾಬ್​ ಕಿಂಗ್ಸ್​ನಿಂದ ಕನ್ನಡಿಗ ಮಯಾಂಕ್​ ಅಗರ್ವಾಲ್​, ಶಾರುಖ್​, ಸ್ಮಿತ್​ಗೆ ಕೋಕ್​! - Vistara News

Latest

IPL 2023 | ಪಂಜಾಬ್​ ಕಿಂಗ್ಸ್​ನಿಂದ ಕನ್ನಡಿಗ ಮಯಾಂಕ್​ ಅಗರ್ವಾಲ್​, ಶಾರುಖ್​, ಸ್ಮಿತ್​ಗೆ ಕೋಕ್​!

ಕನ್ನಡಿಗ ಮಯಾಂಕ್​ ಅಗರ್ವಾಲ್​ ಅವರನ್ನು ಪಂಜಾಬ್​ ಕಿಂಗ್ಸ್​ ಮುಂದಿನ ಐಪಿಎಲ್​ಗೆ ತಂಡದಿಂದ ಕೈಬಿಡಲಾಗಿದೆ ಎಂದು ವರದಿಯಾಗಿದೆ.

VISTARANEWS.COM


on

mayank
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಐಪಿಎಲ್ 16ನೇ (IPL 2023) ಆವೃತ್ತಿಯ ಮೇಜರ್​ ಸರ್ಜರಿ ಭರದಿಂದ ಸಾಗುತ್ತಿದ್ದು ನವೆಂಬರ್ 15 ಫ್ರಾಂಚೈಸಿಗಳು ಟ್ರೇಡಿಂಗ್ ಮಾಡಲು ಕೊನೆಯ ದಿನವಾಗಿರುವುದರಿಂದ ಎಲ್ಲ ತಂಡಗಳು ತಮ್ಮ ಬಳಿ ಉಳಿಸಿಕೊಳ್ಳುವ ಮತ್ತು ತಂಡದಿಂದ ಕೈಬಿಡುವ ಆಟಗಾರರ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳುತ್ತಿವೆ. ಅದರಂತೆ ಪಂಜಾಬ್​ ಕಿಂಗ್ಸ್​ ಕೂಡ ಕೆಲವು ಅಚ್ಚರಿಯ ತೀರ್ಮಾನಗಳನ್ನು ತೆಗೆದುಕೊಂಡಿದೆ. ಕಳೆದ ಬಾರಿ ತಂಡವನ್ನು ಮುನ್ನಡೆಸಿದ ನಾಯಕ ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಅವರನ್ನು ಈ ಬಾರಿ ತಂಡದಿಂದ ಕೈ ಬಿಡುವುದಾಗಿ ವರದಿಯಾಗಿದೆ.

ಈ ಬಾರಿಯ ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ತಂಡದ ಸ್ಟಾರ್‌ ಆಲ್‌ರೌಂಡರ್‌ ಬೆನ್ ಸ್ಟೋಕ್ಸ್, ಟಿ20 ವಿಶ್ವ ಕಪ್​ನ ಸರಣಿ ಶ್ರೇಷ್ಠ ವಿಜೇತ ಸ್ಯಾಮ್ ಕರನ್ ಮತ್ತು ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಪಾಲ್ಗೊಳ್ಳುತ್ತಿದ್ದಾರೆ. ಈ ಆಟಗಾರರನ್ನು ಖರೀದಿಸುವ ಸಲುವಾಗಿ ಮಯಾಂಕ್ ಅಗರ್ವಾಲ್ (12 ಕೋಟಿ), ತಮಿಳುನಾಡು ಬ್ಯಾಟರ್ ಶಾರುಖ್ ಖಾನ್ (9 ಕೋಟಿ) ಮತ್ತು ವೆಸ್ಟ್ ಇಂಡೀಸ್ ಆಲ್ ರೌಂಡರ್ ಒಡೆನ್ ಸ್ಮಿತ್ (6 ಕೋಟಿ) ಅವರನ್ನು ತಂಡದಿಂದ ಕೈಬಿಡಲು ಸಜ್ಜಾಗಿದೆ ಎಂದು ತಿಳಿದು ಬಂದಿದೆ. ಈ ಆಟಗಾರರನ್ನು ಕೈ ಬಿಟ್ಟರೆ ಪಂಜಾಬ್‌ ತಂಡದ ಬಳಿ 30 ಕೋಟಿಗಿಂತ ಹೆಚ್ಚಿನ ಮೊತ್ತ ಉಳಿದುಕೊಳ್ಳಲಿದೆ. ಆಗ ಈ ಸ್ಟಾರ್‌ ಆಟಗಾರರನ್ನು ಖರೀದಿ ಮಾಡಲು ನೆರವಾಗುವುದರಿಂದ ಪಂಜಾಬ್‌ ಈ ಮೈಂಡ್‌ಗೇಮ್‌ ಪ್ಲ್ಯಾನ್‌ ಮಾಡಿದೆ ಎಂದು ತಿಳಿದುಬಂದಿದೆ.

2022 ಆವೃತ್ತಿಯಲ್ಲಿ ತಂಡದ ನಾಯಕತ್ವವಹಿಸಿಕೊಂಡಿದ್ದ ಅಗರ್ವಾಲ್ ಆಡಿದ 13 ಪಂದ್ಯಗಳಲ್ಲಿ ಕೇವಲ 196 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಹಾಗೆಯೇ ಶಾರುಖ್ ಖಾನ್ ಆಡಿದ 8 ಪಂದ್ಯಗಳಲ್ಲಿ 117 ರನ್ ಗಳಿಸಿದ್ದರು. ಉಳಿದಂತೆ ಓಡಿನ್‌ ಸ್ಮಿತ್ ಕೂಡ ಬೌಲಿಂಗ್​ನಲ್ಲಿ ತುಂಬಾ ದುಬಾರಿಯಾಗಿದ್ದರು.

ಇದನ್ನೂ ಓದಿ |IPL 2023 | ಕೆಕೆಆರ್​ಗೆ​ ಗುಡ್​ಬೈ ಹೇಳಿದ ಇಂಗ್ಲೆಂಡ್​ ಕ್ರಿಕೆಟಿಗ ಸ್ಯಾಮ್​ ಬಿಲ್ಲಿಂಗ್ಸ್​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್​ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ

IPL 2024: ವಿಶೇಷ ಎಂದರೆ ಎಲಿಮಿನೇಟರ್​​ನಲ್ಲಿ ಲಕ್ನೋವನ್ನು ಸೋಲಿಸಿದ ನಂತರ ಆರ್​ಸಿಬಿ ತಂಡವು 2022 ರ ಋತುವಿನಲ್ಲಿ ಕ್ವಾಲಿಫೈಯರ್ 2 ಹಂತದಲ್ಲಿ ರಾಲ್ಸ್​​ನಿಂದಲೇ ಹೊಡೆತ ತಿಂದು ಹೊರಕ್ಕೆ ಬಿದ್ದಿತ್ತು. 2020 ಮತ್ತು 2021ರಲ್ಲಿಯೂ ಆರ್​ಸಿಬಿ ಎಲಿಮಿನೇಟರ್​ನಲ್ಲಿ ಸೋಲು ಕಂಡಿತ್ತು. 2016ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್​​ಸಿಬಿ ಕೊನೆಯ ಬಾರಿ ಫೈನಲ್ ತಲುಪಿತ್ತು.

VISTARANEWS.COM


on

IPL 2024
Koo

ಬೆಂಗಳೂರು: ಐಪಿಎಲ್ ಟ್ರೋಫಿಯನ್ನು ಗೆಲ್ಲುವ ಆರ್​ಸಿಬಿಯ (RCB) ಭರವಸೆಗಳು ಮೇ 22 ರ ಬುಧವಾರ ಕೊನೆಗೊಂಡವು. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ್ ವಿರುದ್ಧ ಸೋತ ನಂತರ ಐಪಿಎಲ್ 2024 ರ (IPL 2024) ಎಲಿಮಿನೇಟರ್​ ಹಂತದಲ್ಲಿಯೇ ರೆಡ್​ಆರ್ಮಿ ಹೊರಕ್ಕೆ ಬಿತ್ತು. ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ಪಂದ್ಯಾವಳಿಯ ನಾಕೌಟ್ ಹಂತದಲ್ಲಿ ತನ್ನ ಆವೇಗ ಉಳಿಸಿಕೊಳ್ಳಲಿಲ್ಲ. ಆರು ಪಂದ್ಯಗಳ ಗೆಲುವಿನ ನಂಬಲಾಗದ ಓಟವನ್ನು ಮುಂದುವರಿಸಲಿಲ್ಲ. ಮತ್ತದೇ ಹಳೆ ರಾಗವೆಂಬಂತೆ ಸೋಲಿನ ಸುಳಿಗೆ ಸಿಲುಕಿ ಕೋಟ್ಯಂತರ ಅಭಿಮಾನಿಗಳಿಗೆ ಬೇಸರ ಮೂಡಿಸಿದರು.

ನಾಕೌಟ್ ಹಂತದಲ್ಲಿ ಒತ್ತಡಕ್ಕೆ ಒಳಗಾಗುವ ಆರ್​​ಸಿಬಿ ಚಾಳಿ ಇಲ್ಲಿಯೂ ಮುಂದುವರಿಯಿತು. ಆರ್​ಆರ್​ ತಂಡದ ಹಿಂದೆ ಈ ಹಿಂದೆ ನಾಕೌಟ್​ ಹಂತದಲ್ಲಿ ಸೋತಂತೆ ಇಂದೂ ಸೋತಿತು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಲಷ್ಟೇ ಶಕ್ತವಾಯಿತು. ಇದು ಇಬ್ಬನಿ ಪರಿಣಾಮ ಸೇರಿದಂತೆ ರನ್​ ಚೇಸ್ ಮಾಡುವ ತಂಡಕ್ಕೆ ಅನುಕೂಲವಾಗಿದ್ದ ಪರಿಸ್ಥಿತಿಯಲ್ಲಿ ಕಡಿಮೆ ಸ್ಕೋರ್ ಆಗಿತ್ತು. ಹೀಗಾಗಿ ಸೋಲು ಸಹಜವಾಗಿಯೇ ಬಂದಿದೆ. ಇದೇ 17 ಆವೃತ್ತಿಗಳು ಮುಗಿದರೂ ಆರ್​ಸಿಬಿಯ ಕಪ್​ ಬರ ನೀಗಲಿಲ್ಲ. ಕಪ್​ಗಾಗಿ ಕಾಯುವ ದಿನಗಳು ಮತ್ತಷ್ಟು ಮುಂದೂಡಿಕೆಯಾದವು.

ವಿಶೇಷ ಎಂದರೆ ಎಲಿಮಿನೇಟರ್​​ನಲ್ಲಿ ಲಕ್ನೋವನ್ನು ಸೋಲಿಸಿದ ನಂತರ ಆರ್​ಸಿಬಿ ತಂಡವು 2022 ರ ಋತುವಿನಲ್ಲಿ ಕ್ವಾಲಿಫೈಯರ್ 2 ಹಂತದಲ್ಲಿ ರಾಲ್ಸ್​​ನಿಂದಲೇ ಹೊಡೆತ ತಿಂದು ಹೊರಕ್ಕೆ ಬಿದ್ದಿತ್ತು. 2020 ಮತ್ತು 2021ರಲ್ಲಿಯೂ ಆರ್​ಸಿಬಿ ಎಲಿಮಿನೇಟರ್​ನಲ್ಲಿ ಸೋಲು ಕಂಡಿತ್ತು. 2016ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್​​ಸಿಬಿ ಕೊನೆಯ ಬಾರಿ ಫೈನಲ್ ತಲುಪಿತ್ತು.

ಪಂದ್ಯದಲ್ಲಿ ಏನಾಯಿತು?

ಬೌಲರ್​ಗಳ ಸಂಘಟಿತ ಹೋರಾಟ ಹಾಗೂ ಯಶಸ್ವಿ ಜೈಸ್ವಾಲ್ (45 ರನ್​) ಹಾಗೂ ರಿಯಾನ್ ಪರಾಗ್​ (36 ರನ್​) ಬ್ಯಾಟಿಂಗ್ ಬಲದಿಂದ ಮಿಂಚಿದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್​ 2024ರ (IPL 2024) ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸಿದೆ. ಲೀಗ್ ಹಂತದಲ್ಲಿ ಸತತ ನಾಲ್ಕು ಸೋಲು ಹಾಗೂ ಮಳೆಯಿಂದಾಗಿ ಒಂದು ಪಂದ್ಯ ರದ್ದುಗೊಂಡ ಕಾರಣ ಬೇಸರಕ್ಕೆ ಒಳಗಾಗಿದ್ದ ರಾಜಸ್ಥಾನ್ ಬಳಗ ಈ ಗೆಲುವಿನೊಂದಿಗೆ ಖುಷಿ ಕಂಡು ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶ ಪಡೆಯಿತು. ಅಲ್ಲಿ ಸಂಜು ಬಳಗ ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ಸನ್​ ರೈಸರ್ಸ್​ ಹೈದರಾಬಾದ್​ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ: IPL 2024 : ದಿನೇಶ್​ ಕಾರ್ತಿಕ್​ ಔಟಾ; ನಾಟೌಟಾ? ಮತ್ತೊಂದು ಅಂಪೈರಿಂಗ್ ವಿವಾದ

ಈ ಸೋಲಿನೊಂದಿಗೆ ಆರ್​ಸಿಬಿ ತಂಡದ 2024ರ ಐಪಿಎಲ್​ ಅಭಿಯಾನ ಮುಕ್ತಾಯಗೊಂಡಿತು. ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದಿರುವುದೇ ರೆಡ್​ ಆರ್ಮಿಯ ದೊಡ್ಡ ಸಾಧನೆ ಎನಿಸಿಕೊಂಡಿತು. ಜತೆಗೆ ಆರ್​​ಸಿಬಿಯ ಅಪಾರ ಅಭಿಮಾನಿಗಳ ಹೃದಯ ಛಿದ್ರಗೊಂಡಿತು. ಈ ಬಾರಿಯಾದರೂ ಕಪ್​ ಗೆಲ್ಲಬೇಕೆಂಬ ಆಸೆ ಕಮರಿತು. ಕಷ್ಟದಲ್ಲಿ ಪ್ಲೇಆಫ್​ ಹಂತಕ್ಕೇರಿದ ಹೊರತಾಗಿಯೂ ಮುಂದಿನ ಹಂತಕ್ಕೆ ಹೋಗಲು ಸಾಧ್ಯವಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಚೆನ್ನೈ ವಿರುದ್ಧದ ಲೀಗ್ ಪಂದ್ಯದಲ್ಲಿ ಹೆಚ್ಚು ನಿಖರವಾಗಿ ಆಡಿದ್ದ ಆರ್​ಸಿಬಿ ಈ ಪಂದ್ಯದಲ್ಲಿ ನಿರ್ಲಕ್ಷ್ಯ ತೋರಿತು. ಬ್ಯಾಟಿಂಗ್​ನಲ್ಲಿ ಅನಗತ್ಯವಾಗಿ ವಿಕೆಟ್​ ಒಪ್ಪಿಸಿದರೆ ಬೌಲಿಂಗ್ ವೇಳೆಯೂ ಕ್ಯಾಚ್​ ಕೈಚೆಲ್ಲಿ, ಕಳಪೆ ಫೀಲ್ಡಿಂಗ್ ಮಾಡಿ, ರನ್​ಔಟ್​ ಚಾನ್ಸ್​ ಕಳೆದುಕೊಂಡಿತು. ಇದು ಸೋಲಿಗೆ ಕಾರಣವಾಯಿತು.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಆರ್​ಸಿಬಿ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 172 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 174 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

Continue Reading

ಪ್ರಮುಖ ಸುದ್ದಿ

IPL 2024 : ದಿನೇಶ್​ ಕಾರ್ತಿಕ್​ ಔಟಾ; ನಾಟೌಟಾ? ಮತ್ತೊಂದು ಅಂಪೈರಿಂಗ್ ವಿವಾದ

IPL 2024 : ಆನ್-ಫೀಲ್ಡ್ ಅಂಪೈರ್​ ನೀಡಿದ ಎಲ್ಬಿಡಬ್ಲ್ಯು ಕರೆಯನ್ನು ಪರಿಶೀಲಿಸಲು ಪಾಲುದಾರ ಮಹಿಪಾಲ್ ಲೊಮ್ರೊರ್ ಮನವೊಲಿಸಬೇಕಾಗಿ ಬಂದಿತ್ತು. ಹೀಗಾಗಿ ದಿನೇಶ್ ಕಾರ್ತಿಕ್​ಗೆ ತಾವು ಔಟ್ ಆಗಿರುವುದು ಮನವರಿಕೆಯಾಯಿತು. ಹಿಂದಿನ ಎಸೆತದಲ್ಲಿ ರಜತ್ ಪಾಟಿದಾರ್ ವಿಕೆಟ್ ಪಡೆದ ನಂತರ ಹೆಚ್ಚಿನ ಆತ್ಮವಿಶ್ವಾಸದಲ್ಲಿದ್ದ ಅವೇಶ್ ಖಾನ್ ಖುಷಿಯಲ್ಲಿದ್ದರು.

VISTARANEWS.COM


on

IPL 2024
Koo

ಅಹಮದಾಬಾದ್ : ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ (ಮೇ 22) ನಡೆದ ಆರ್​ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್​ ನಡುವಿನ ಐಪಿಎಲ್ 2024 ರ (IPL 2024) ಎಲಿಮಿನೇಟರ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಎಲ್​ಬಿಡಬ್ಲ್ಯು ಡಿಆರ್​ಎಷ್​ ಪರಿಶೀಲೆನ ವಿವಾದಕ್ಕೆ ಕಾರಣವಾಯಿತು. ಆರ್​ಸಿಬಿ ಇನ್ನಿಂಗ್ಸ್​ನ 15 ನೇ ಓವರ್​ನಲ್ಲಿ ಕಾರ್ತಿಕ್ ಎದುರಿಸಿದ ಮೊದಲ ಎಸೆತದಲ್ಲೇ ಎಲ್​ಬಿಡಬ್ಲ್ಯು ಔಟ್​ ನೀಡಲಾಯಿತು. ಪರಿಶೀಲನೆಯ ನಂತರ ಮೂರನೇ ಅಂಪೈರ್ ನಿರ್ಧಾರವನ್ನು ಬದಲಿಸುವಂತೆ ಫೀಲ್ಡ್​ ಅಂಪೈರ್​ಗೆ ಸೂಚಿಸಿದರು. ಅವೇಶ್ ಖಾನ್​ಗೆ ಮತ್ತೊಂದು ವಿಕೆಟ್ ನೀಡಲು ನಿರಾಕರಿಸಿದರು. ಥರ್ಡ್ ಅಂಪೈರ್ ಅನಿಲ್ ಚೌಧರಿ ಅವರ ನಿರ್ಧಾರವು ವೀಕ್ಷಕ ವಿವರಣೆಗಾರರಾದ ಸುನಿಲ್ ಗವಾಸ್ಕರ್ ಮತ್ತು ರವಿ ಶಾಸ್ತ್ರಿ ಸೇರಿದಂತೆ ಹಲವರಿಗೆ ಆಶ್ಚರ್ಯ ಮತ್ತು ಆಘಾತವನ್ನುಂಟು ಮಾಡಿತು.

ಆನ್-ಫೀಲ್ಡ್ ಅಂಪೈರ್​ ನೀಡಿದ ಎಲ್ಬಿಡಬ್ಲ್ಯು ಕರೆಯನ್ನು ಪರಿಶೀಲಿಸಲು ಪಾಲುದಾರ ಮಹಿಪಾಲ್ ಲೊಮ್ರೊರ್ ಮನವೊಲಿಸಬೇಕಾಗಿ ಬಂದಿತ್ತು. ಹೀಗಾಗಿ ದಿನೇಶ್ ಕಾರ್ತಿಕ್​ಗೆ ತಾವು ಔಟ್ ಆಗಿರುವುದು ಮನವರಿಕೆಯಾಯಿತು. ಹಿಂದಿನ ಎಸೆತದಲ್ಲಿ ರಜತ್ ಪಾಟಿದಾರ್ ವಿಕೆಟ್ ಪಡೆದ ನಂತರ ಹೆಚ್ಚಿನ ಆತ್ಮವಿಶ್ವಾಸದಲ್ಲಿದ್ದ ಅವೇಶ್ ಖಾನ್ ಖುಷಿಯಲ್ಲಿದ್ದರು.

ದಿನೇಶ್ ಕಾರ್ತಿಕ್ ವಿಮರ್ಶೆ ತೆಗೆದುಕೊಂಡ ನಂತರ, ಮೂರನೇ ಅಂಪೈರ್ ಎಸೆತದ ರಿಪ್ಲೇ ನೋಡಿದರು. ಈ ನಿರ್ಧಾರವು ಬರಿಗಣ್ಣಿಗೆ ಪ್ಲಮ್ ಆಗಿ ಕಂಡರೂ, ಅಲ್ಟ್ರಾ-ಎಡ್ಜ್ ತಂತ್ರಜ್ಞಾನವು ಚೆಂಡು ಬ್ಯಾಟ್ ಅನ್ನು ದಾಟುವಾಗ ಸ್ಪೈಕ್ ಅನ್ನು ತೋರಿಸಿರು. ಅದೇ ಸಮಯದಲ್ಲಿ, ಬ್ಯಾಟ್ ಕೂಡ ಪ್ಯಾಡ್​ಗೆ ಬಡಿದಿತ್ತು. ಆದಾಗ್ಯೂ, ಮೂರನೇ ಅಂಪೈರ್ ಹೆಚ್ಚಿನ ರಿಪ್ಲೇಗಳನ್ನು ನೋಡದೆ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಂಡರು.

ಇದನ್ನೂ ಓದಿ: Yuzvendra Chahal : ರಾಜಸ್ಥಾನ್​ ರಾಯಲ್ಸ್​ ಪರ ವಿಕೆಟ್​ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಯಜ್ವೇಂದ್ರ ಚಹಲ್​

ಮೂರನೇ ಅಂಪೈರ್ ಅವರು ಅಲ್ಟ್ರಾ-ಎಡ್ಜ್ ಮೂಲಕ ಚೆಂಡು ಹೊಡೆದಿದೆ ಎಂದು ಹೇಳಿದ್ದರು. ಒಂದು ವೇಳೆ ಬ್ಯಾಟ್​​ ಪ್ಯಾಡ್​ಗೆ ಬಡಿಯುವಾಗ ಸದ್ದು ಬಂದಿರಬಹುದು ಎಂಬುದು ಕೆಲವರ ವಾದವಾಗಿತ್ತು. ಅದರಿಂದ ಸ್ಪೈಕ್ ಸಾಧ್ಯತೆಯನ್ನು ಅನಿಲ್ ಚೌಧರಿ ಏಕೆ ಪರಿಗಣಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಅಭಿಪ್ರಾಯವೇನು?

ಅನಿಲ್ ಚೌಧರಿ ಅವರ ನಿರ್ಧಾರವನ್ನು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಆಘಾತಕಾರಿ ಎಂದರು. “ಇದಕ್ಕೆ ಒಂದು ಪದವಿದ್ದರೆ ಅದು ಸಂಪೂರ್ಣ ಆಘಾತಕಾರಿ” ಎಂದು ಶಾಸ್ತ್ರಿ ವೀಕ್ಷಕವಿವರಣೆಯ ಸಮಯದಲ್ಲಿ ಹೇಳಿದ್ದಾರೆ.

ಬ್ಯಾಟ್ ಪ್ಯಾಡ್ಗೆ ಹೊಡೆಯುವುದನ್ನು ಸ್ಪಷ್ಟವಾಗಿ ನೋಡಿದ್ದೇನೆ ಮತ್ತು ಚೆಂಡಿನೊಂದಿಗೆ ಬ್ಯಾಟ್​ಗೆ ಯಾವುದೇ ಸಂಪರ್ಕ ಆಗಿಲ್ಲ ಎಂದು ಲೆಜೆಂಡರಿ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಅನಿಲ್ ಚೌಧರಿ ಅವರ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ವಾಸ್ತವವಾಗಿ, ರಾಜಸ್ಥಾನದ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ನಿರ್ಧಾರದಿಂದ ನಿರಾಶೆಗೊಂಡಿದ್ದರು. ನಿರ್ಧಾರ ತೆಗೆದುಕೊಂಡ ನಂತರ ಅವರು ಸ್ಥಳದಲ್ಲಿ ಪಂದ್ಯದ ಅಧಿಕಾರಿಗಳೊಂದಿಗೆ ಮಾತನಾಡುತ್ತಿರುವುದು ಕಂಡುಬಂತು.

Continue Reading

ಪ್ರಮುಖ ಸುದ್ದಿ

Yuzvendra Chahal : ರಾಜಸ್ಥಾನ್​ ರಾಯಲ್ಸ್​ ಪರ ವಿಕೆಟ್​ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಯಜ್ವೇಂದ್ರ ಚಹಲ್​

Yuzvendra Chahal: ಚಹಲ್ ಈಗಾಗಲೇ ರಾಯಲ್ಸ್ ತಂಡದ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿ ಶೇನ್ ವಾರ್ನ್ ಅವರನ್ನು ಹಿಂದಿಕ್ಕಿದ್ದಾರೆ. ವಾರ್ನ್ ಐಪಿಎಲ್​​ನಲ್ಲಿ ಆರ್ಆರ್ ಪರ 57 ವಿಕೆಟ್​ಗಳನ್ನು ಪಡೆದಿದ್ದರು. ಆರ್​ಆರ್​​ ಸ್ಪಿನ್ನರ್ ಚಹಲ್​, 4 ಓವರ್​ಗಳಲ್ಲಿ 43 ರನ್​ಗಳಿಗೆ 1 ಅಂಕಿಅಂಶಗಳೊಂದಿಗೆ ತಮ್ಮ ಸ್ಪೆಲ್ ಅನ್ನು ಕೊನೆಗೊಳಿಸಿದರು.

VISTARANEWS.COM


on

IPL 2024
Koo

ಬೆಂಗಳೂರು: ಮೇ 22 ರಂದು ಆರ್​ಸಿಬಿ ವಿರುದ್ಧ ನಡೆದ ಐಪಿಎಲ್ 2024 ರ ಎಲಿಮಿನೇಟರ್ ಪಂದ್ಯದಲ್ಲಿ ಯಜ್ವೇಂದ್ರ ಚಹಲ್ (Yuzvendra Chahal) ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಅಹ್ಮದಾಬಾದ್​ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಚಹಲ್ ರಾಯಲ್ಸ್ ಪರ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂದ ಹಾಗೆ ಚಹಲ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಕೊಹ್ಲಿಯನ್ನು ಔಟ್ ಮಾಡಿದ್ದು ಇದೇ ಮೊದಲು.

ಪವರ್ಪ್ಲೇ ಮುಗಿದ ನಂತರ ಚಹಲ್ ಬೌಲಿಂಗ್ ಮಾಡಲು ಬಂದರು. ಕೊಹ್ಲಿ ಆಕ್ರಮಣಕಾರಿಯಾಗಿ 24 ಎಸೆತಗಳಲ್ಲಿ 33 ರನ್ ಗಳಿಸಿದ್ದರು. ಅಂತೆಯೇ ಆರ್​ಸಿಬಿ ಸ್ಟಾರ್ ಚಹಲ್ ಅವರನ್ನು ಎದುರಿಸಲು ಮುಂದಾಗಿ ಸ್ಲಾಗ್ ಸ್ವೀಪ್​ ಮಾಡಿದರು. ಈ ಪ್ರಯತ್ನ ಅವರಿಗೆ ಹಾಲಿ ಋತುವಿನಲ್ಲಿ ಸಾಕಷ್ಟು ಯಶಸ್ಸನ್ನು ತಂದುಕೊಟ್ಟಿತು. ಆದಾಗ್ಯೂ, ಡೊನೊವನ್ ಫೆರೇರಾ ಅವರನ್ನು ಬೌಂಡರಿ ಕ್ಯಾಚ್ ಹಿಡಿದರು. ಇದರೊಂದಿಗೆ ಐಪಿಎಲ್​​ನಲ್ಲಿ ರಾಜಸ್ಥಾನ್​ ಪರ ಅತಿ ಹೆಚ್ಚು ವಿಕೆಟ್ ಪಡೆದ ಸಿದ್ಧಾರ್ಥ್ ತ್ರಿವೇದಿ ಅವರನ್ನು ಚಹಲ್ ಹಿಂದಿಕ್ಕಿದರು.

ಚಹಲ್ ಈಗಾಗಲೇ ರಾಯಲ್ಸ್ ತಂಡದ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿ ಶೇನ್ ವಾರ್ನ್ ಅವರನ್ನು ಹಿಂದಿಕ್ಕಿದ್ದಾರೆ. ವಾರ್ನ್ ಐಪಿಎಲ್​​ನಲ್ಲಿ ಆರ್ಆರ್ ಪರ 57 ವಿಕೆಟ್​ಗಳನ್ನು ಪಡೆದಿದ್ದರು. ಆರ್​ಆರ್​​ ಸ್ಪಿನ್ನರ್ ಚಹಲ್​, 4 ಓವರ್​ಗಳಲ್ಲಿ 43 ರನ್​ಗಳಿಗೆ 1 ಅಂಕಿಅಂಶಗಳೊಂದಿಗೆ ತಮ್ಮ ಸ್ಪೆಲ್ ಅನ್ನು ಕೊನೆಗೊಳಿಸಿದರು.

ಐಪಿಎಲ್​ನಲ್ಲಿ ಆರ್​ಆರ್​ ಪರ ಅತಿ ಹೆಚ್ಚು ವಿಕೆಟ್ ಪಡೆದವರು


  • 66 – ಯಜುವೇಂದ್ರ ಚಹಲ್
  • 65 – ಸಿದ್ಧಾರ್ಥ್ ತ್ರಿವೇದಿ
  • 61 – ಶೇನ್ ವ್ಯಾಟ್ಸನ್
  • 57 – ಶೇನ್ ವಾರ್ನ್
  • 47 – ಜೇಮ್ಸ್ ಫಾಲ್ಕನರ್

ಕಾಕತಾಳೀಯವೆಂಬಂತೆ, ಚಹಲ್ ಅವರು ಆರ್​ಸಿಬಿ ಪರ ಆಡಿದ ಸಮಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿ ಪಡೆದಿದ್ದರು. 2014ರಿಂದ 2021ರವರೆಗೆ ಬೆಂಗಳೂರು ಪರ ಆಡಿರುವ ಚಹಲ್ 113 ಪಂದ್ಯಗಳಲ್ಲಿ 139 ವಿಕೆಟ್ ಕಬಳಿಸಿದ್ದಾರೆ.

ಐಪಿಎಲ್ 2024ರಲ್ಲಿ ಚಹಲ್ ಪ್ರದರ್ಶನ ಹೇಗಿದೆ?

ಚಹಲ್ ಈ ಋತುವಿನಲ್ಲಿ ಆರ್​ಅರ್​​ ಪರ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಸ್ಪಿನ್ನರ್ ಪ್ರಸ್ತುತ ಈ ಋತುವಿನಲ್ಲಿ ರಾಯಲ್ಸ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಚಹಲ್ 14 ಪಂದ್ಯಗಳಿಂದ 26.88ರ ಸರಾಸರಿಯಲ್ಲಿ 18 ವಿಕೆಟ್ ಪಡೆದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚಾಹಲ್ ಐಪಿಎಲ್​​ನಲ್ಲಿ 200 ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಐಪಿಎಲ್ನಲ್ಲಿ ಅವರ ಪ್ರದರ್ಶನವು ಅವರನ್ನು 2024 ರ ಟಿ 20 ವಿಶ್ವಕಪ್ಗಾಗಿ ಭಾರತೀಯ ತಂಡಕ್ಕೆ ಮರಳಿ ಪಡೆಯುತ್ತದೆ.

Continue Reading

ದೇಶ

Lok Sabha Election : ಬಿಜೆಪಿ 305 ಸೀಟ್ ಗೆಲ್ಲೋದು ಗ್ಯಾರಂಟಿ; ಅಮೆರಿಕದ ರಾಜಕೀಯ ಪಂಡಿತನ ಭವಿಷ್ಯ

Lok Sabha Election: ಜಾಗತಿಕವಾಗಿ ಅಗಾಧ ಪ್ರಮಾಣದ ರಾಜಕೀಯ ಅನಿಶ್ಚಿತತೆ ಸೃಷ್ಟಿಯಾಗಿದೆ. ಜಾಗತೀಕರಣದ ಭವಿಷ್ಯವು ಕಂಪನಿಗಳು ಬಯಸಿದ ರೀತಿಯಲ್ಲಿ ಹೋಗುತ್ತಿಲ್ಲ. ರಾಜಕೀಯವು ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಮೂಗು ತೂರಿಸುತ್ತಿದೆ. ಯುದ್ಧಗಳು, ಯುಎಸ್-ಚೀನಾ ಸಂಬಂಧಗಳು ಮತ್ತು ಯುಎಸ್ ಚುನಾವಣೆ ಎಲ್ಲವೂ ಅದರ ದೊಡ್ಡ ಭಾಗವಾಗಿದೆ ಎಂದು ಇಯಾನ್ ಬ್ರೆಮ್ಮರ್​ ಹೇಳಿದರು.

VISTARANEWS.COM


on

lok sabha election
Koo

ನವದೆಹಲಿ: 2024 ರ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಬಿಜೆಪಿ 305 ಸ್ಥಾನಗಳನ್ನು (ಹೆಚ್ಚು ಕಡಿಮೆ) ಗೆಲ್ಲಲಿದೆ ಎಂದು ಅಮೆರಿಕದ ರಾಜಕೀಯ ಪಂಡಿತ ಇಯಾನ್ ಬ್ರೆಮ್ಮರ್ ಮಂಗಳವಾರ ಭವಿಷ್ಯ ನುಡಿದಿದ್ದಾರೆ. ಎನ್​ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ಕುರಿತು ಮಾತನಾಡುತ್ತಾ ಬಿಜೆಪಿಗೆ ಮತ್ತೆ ಬಹುಮತ ಖಾತರಿ ಎಂದು ಹೇಳಿದ್ದಾರೆ. ಸಂಶೋಧನಾ ಸಲಹಾ ಸಂಸ್ಥೆಯಾದ ಯುರೇಷಿಯಾ ಗ್ರೂಪ್ನ ಸ್ಥಾಪಕರಾಗಿರುವ ಬ್ರೆಮ್ಮರ್, ಜಾಗತಿಕ ರಾಜಕೀಯ ದೃಷ್ಟಿಕೋನದಿಂದ ಭಾರತೀಯ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆ ಸ್ಥಿರವಾಗಿದೆ. ನವೆಂಬರ್ ನಲ್ಲಿ ನಡೆಯಲಿರುವ ಅಮೆರಿಕದ ಚುನಾವಣೆಗಿಂತಲೂ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕವಾಗಿ ಅಗಾಧ ಪ್ರಮಾಣದ ರಾಜಕೀಯ ಅನಿಶ್ಚಿತತೆ ಸೃಷ್ಟಿಯಾಗಿದೆ. ಜಾಗತೀಕರಣದ ಭವಿಷ್ಯವು ಕಂಪನಿಗಳು ಬಯಸಿದ ರೀತಿಯಲ್ಲಿ ಹೋಗುತ್ತಿಲ್ಲ. ರಾಜಕೀಯವು ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಮೂಗು ತೂರಿಸುತ್ತಿದೆ. ಯುದ್ಧಗಳು, ಯುಎಸ್-ಚೀನಾ ಸಂಬಂಧಗಳು ಮತ್ತು ಯುಎಸ್ ಚುನಾವಣೆ ಎಲ್ಲವೂ ಅದರ ದೊಡ್ಡ ಭಾಗವಾಗಿದೆ. ಎಲ್ಲವನ್ನೂ ಸರಿಯಾಗಿ ನಿರ್ವಹಿಸಲಾಗುತ್ತಿಲ್ಲ ಮತ್ತು ಹೆಚ್ಚು ನಕಾರಾತ್ಮಕವಾಗಿವೆ. ಜಗತ್ತಿನಲ್ಲಿ ರಾಜಕೀಯವಾಗಿ ಸ್ಥಿರವಾಗಿ ಕಾಣುವ ಏಕೈಕ ವಿಷಯವೆಂದರೆ ಭಾರತದ ಚುನಾವಣೆ. ಉಳಿದೆಲ್ಲವೂ ಸಮಸ್ಯಾತ್ಮಕ ಕಾಣುತ್ತದೆ ಎಂದು ಬ್ರೆಮ್ಮರ್​ ಹೇಳಿದ್ದಾರೆ.

ಏಪ್ರಿಲ್ 19 ರಂದು ಪ್ರಾರಂಭವಾದ ಏಳು ಹಂತಗಳಲ್ಲಿ ಭಾರತೀಯ ಚುನಾವಣೆಯ ಬಗ್ಗೆ ಅವರ ಭವಿಷ್ಯವಾಣಿಯ ಬಗ್ಗೆ ಕೇಳಿದಾಗ, ಯುರೇಷಿಯಾ ಗ್ರೂಪ್ ಸಂಶೋಧನೆಯ ಪ್ರಕಾರ ಬಿಜೆಪಿ 295ರಿಂದ 315 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 2014 ರ ಚುನಾವಣೆಯಲ್ಲಿ 282 ಸ್ಥಾನಗಳೊಂದಿಗೆ (ಅದರ ಎನ್ಡಿಎ ಪಾಲುದಾರರೊಂದಿಗೆ ಸೇರಿಕೊಂಟ್ಟು ಒಟ್ಟು 336 ಸ್ಥಾನ ) ಮತ್ತು 2019 ರಲ್ಲಿ 303 (ಎನ್​ಡಿ ಮಿತ್ರಪಕ್ಷಗಳೊಂದಿಗೆ 353) ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ ಈ ಬಾರಿ ಹ್ಯಾಟ್ರಿಕ್ ಸಾಧನೆ ಮಾಡುವ ನಿರೀಕ್ಷೆಯಿದೆ.

ಭಾರತದಲ್ಲಿ ರಾಜಕೀಯ ಅನಿಶ್ಚಿತತೆ ಇಲ್ಲ

ವಿಶ್ವದ ಎಲ್ಲಾ ಚುನಾವಣೆಗಳಲ್ಲಿ (ಯುರೋಪಿಯನ್ ಒಕ್ಕೂಟದ ಚುನಾವಣೆಗಳು ಮತ್ತು ಬಹುಶಃ, ಯುನೈಟೆಡ್ ಕಿಂಗ್ಡಮ್​ನ ರಾಷ್ಟ್ರೀಯ ಚುನಾವಣೆ ಸೇರಿದಂತೆ) ಅತಿದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ಭಾರತವು ಸುಗಮ ಚುನಾಣೆಯನ್ನು ಹೊಂದಿದೆ. ಭಾರತೀಯ ರಾಜಕೀಯ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಅನಿಶ್ಚಿತತೆ ಇಲ್ಲ” ಎಂದು ಇಯಾನ್ ಬ್ರೆಮ್ಮರ್​ ಹೇಳಿದರು.

ಇದನ್ನೂ ಓದಿ: Other Backward Classes: 2011ರ ನಂತರ ನೀಡಿದ್ದ ಒಬಿಸಿ ಪ್ರಮಾಣಪತ್ರಗಳನ್ನು ರದ್ದು ಮಾಡಿದ ಕೋಲ್ಕೊತಾ ಹೈಕೋರ್ಟ್​​

ಬ್ರೆಮ್ಮರ್ ಅವರು “ಮುಕ್ತ ಮತ್ತು ನ್ಯಾಯಸಮ್ಮತ ಮತ್ತು ಪಾರದರ್ಶಕ” ಭಾರತೀಯ ಚುನಾವಣಾ ಪ್ರಕ್ರಿಯೆಯನ್ನು ಶ್ಲಾಘಿಸಿದರು. “ಬಲವಾದ ಆರ್ಥಿಕ ಕಾರ್ಯಕ್ಷಮತೆ ಮತ್ತು ಸ್ಥಿರ ಸುಧಾರಣೆಯ ಹಿನ್ನೆಲೆಯಲ್ಲಿ ಮೋದಿ ಮೂರನೇ ಅವಧಿಗೆ ಗೆಲ್ಲುವುದು ಬಹುತೇಕ ಖಚಿತ ಎಂದು ಅವರು ಹೇಳಿದರು.

ಭಾರತದ ಆರ್ಥಿಕ ಭವಿಷ್ಯದ ಬಗ್ಗೆ ಮಾತನಾಡಿದ ಬ್ರೆಮ್ಮರ್, “ಭಾರತವು ದಶಕಗಳಿಂದ ಕಳಪೆ ಸಾಧನೆ ಮಾಡಿರುವುದನ್ನು ಜಗತ್ತು ನೋಡಿದೆ. ಭಾರತವು ನಂಬಲಾಗದ ಮಾನವ ಸಂಪನ್ಮೂಲ ಮತ್ತು ಬಲವಾದ ಬೌದ್ಧಿಕ ಬಂಡವಾಳ ಹೊಂದಿದೆ. ಅಮೆರಿಕದ ಅನೇಕ ಸಿಇಒಗಳು ಭಾರತದಿಂದ ಬರುತ್ತಾರೆ. ಆದರೂ ಭಾರತವು ಆರ್ಥಿಕತೆಯಾಗಿ ಕಳಪೆ ಸಾಧನೆ ಮಾಡಿದೆ ಎಂಬುದಾಗಿ ವಿಶ್ಲೇಷಣೆ ಮಾಡಿದರು.

ಈಗ ನಾವು ಬೆಳವಣಿಗೆಯನ್ನು ನೋಡುತ್ತಿದ್ದೇವೆ. ಭಾರತವು ಮುಂದಿನ ವರ್ಷ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಮತ್ತು ಬಹುಶಃ 2028 ರ ವೇಳೆಗೆ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ನಾವು ನಂಬಿದ್ದೇವೆ. ಆದರೆ ವಿಶ್ವದ ಇತರ ಭಾಗಗಳೊಂದಿಗಿನ ಸ್ನೇಹವನ್ನು ವ್ಯಾಖ್ಯಾನಿಸುವ ವಿಷಯದಲ್ಲಿ ಭಾರತವು ಹೆಚ್ಚು ಶಕ್ತಿಶಾಲಿಯಾಗುತ್ತಿರುವುದನ್ನು ನಾವು ನೋಡುತ್ತೇವೆ ಎಂದು ಅವರು ಹೇಳಿದರು.

Continue Reading
Advertisement
IPL 2024
ಕ್ರೀಡೆ2 hours ago

IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್​ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ

Karnataka police
ಪ್ರಮುಖ ಸುದ್ದಿ2 hours ago

ವಿಸ್ತಾರ ಸಂಪಾದಕೀಯ: ಒಂದು ಕಡೆ ಸರಣಿ ಕೊಲೆ, ಇನ್ನೊಂದೆಡೆ ಪೊಲೀಸರ ಬೀದಿ ಸುಲಿಗೆ!

Harish Poonja
ಕರ್ನಾಟಕ3 hours ago

Harish Poonja: ವಿಚಾರಣೆ ಮುಗಿಸಿ ಠಾಣೆಯಿಂದ ಹೊರಬಂದ ಶಾಸಕ ಹರೀಶ್‌ ಪೂಂಜಾ

IPL 2024
ಕ್ರೀಡೆ3 hours ago

IPL 2024 : ಐಪಿಎಲ್​ 17ನೇ ಆವೃತ್ತಿಯಲ್ಲಿ ಆರ್​ಸಿಬಿ ಅಭಿಯಾನ ಅಂತ್ಯ; ರಾಜಸ್ಥಾನ್​ 2ನೇ ಕ್ವಾಲಿಫೈಯರ್​ಗೆ

IPL 2024
ಪ್ರಮುಖ ಸುದ್ದಿ4 hours ago

IPL 2024 : ದಿನೇಶ್​ ಕಾರ್ತಿಕ್​ ಔಟಾ; ನಾಟೌಟಾ? ಮತ್ತೊಂದು ಅಂಪೈರಿಂಗ್ ವಿವಾದ

Mother Dies
ಕರ್ನಾಟಕ4 hours ago

Mother Dies: ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ ಸಾವು; 35 ಲಕ್ಷ ಬಿಲ್‌ ಕಟ್ಟಿ ಮೃತದೇಹ ತೆಗೆದುಕೊಳ್ಳಿ ಎಂದ ಆಸ್ಪತ್ರೆ!

young womans lover was stabbed in the neck by an ex lover
ಉತ್ತರ ಕನ್ನಡ4 hours ago

Assault Case: ಯುವತಿಯ ಪ್ರಿಯಕರನ ಕುತ್ತಿಗೆಗೆ ಚಾಕುವಿನಿಂದ ಇರಿದ ಮಾಜಿ ಪ್ರಿಯಕರ!

IPL 2024
ಪ್ರಮುಖ ಸುದ್ದಿ4 hours ago

Yuzvendra Chahal : ರಾಜಸ್ಥಾನ್​ ರಾಯಲ್ಸ್​ ಪರ ವಿಕೆಟ್​ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಯಜ್ವೇಂದ್ರ ಚಹಲ್​

Pune porsche car crash
ದೇಶ5 hours ago

Pune porsche car crash : ಕುಡಿದು ಕಾರು ಚಲಾಯಿಸಿ ಇಬ್ಬರ ಸಾವಿಗೆ ಕಾರಣನಾದ ಬಾಲಕನ ಜಾಮೀನು ವಜಾ

Kalki 2898 AD
ಪ್ರಮುಖ ಸುದ್ದಿ5 hours ago

Kalki 2898 AD: ಕಲ್ಕಿ ಚಿತ್ರದ ʼಬುಜ್ಜಿʼ ಪಾತ್ರ ರಿವೀಲ್; ಅದ್ಧೂರಿ ಕಾರ್ಯಕ್ರಮದ LIVE ವಿಡಿಯೊ ಇಲ್ಲಿದೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ20 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ6 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌