Viral Video| ಲಿಫ್ಟ್​​ನಲ್ಲಿ ಸಿಲುಕಿದ 8 ವರ್ಷದ ಬಾಲಕನ ಪರದಾಟ; ಎಮರ್ಜನ್ಸಿ ಬಟನ್​ ಒತ್ತಿದರೂ ಆಗಲಿಲ್ಲ ಪ್ರಯೋಜನ - Vistara News

ದೇಶ

Viral Video| ಲಿಫ್ಟ್​​ನಲ್ಲಿ ಸಿಲುಕಿದ 8 ವರ್ಷದ ಬಾಲಕನ ಪರದಾಟ; ಎಮರ್ಜನ್ಸಿ ಬಟನ್​ ಒತ್ತಿದರೂ ಆಗಲಿಲ್ಲ ಪ್ರಯೋಜನ

ಗ್ರೇಟರ್​​ ನೊಯ್ಡಾದ ನಿರಾಲಾ ನಿರಾಲಾ ಆಸ್ಪೈರ್ ಸೊಸೈಟಿ ಅಪಾರ್ಟ್​​ಮೆಂಟ್​​ನಲ್ಲಿ 8 ವರ್ಷದ ಹುಡುಗನಿಗೆ ಈ ಭಯಾನಕ ಸನ್ನಿವೇಶ ಎದುರಾಗಿತ್ತು. ಟ್ಯೂಷನ್​ನಿಂದ ಮರಳಿದ ಈತ ತನ್ನ ಸೈಕಲ್​​ನ್ನೂ ಲಿಫ್ಟ್​​ನಲ್ಲಿ ಇಟ್ಟುಕೊಂಡು, 14ನೇ ಫ್ಲೋರ್​​ನಲ್ಲಿರುವ ಮನೆಗೆ ಹೊರಟಿದ್ದ.

VISTARANEWS.COM


on

Small Boy Stuck in Lift In Greater Noida
ಲಿಫ್ಟ್​​ನಲ್ಲಿ ಪರದಾಡಿದ ಬಾಲಕ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಬಹುಮಹಡಿ ಕಟ್ಟಡಗಳಿದ್ದಲ್ಲಿ ಲಿಫ್ಟ್​ ಅತ್ಯಗತ್ಯ. ಅಪಾರ್ಟ್​ಮೆಂಟ್​​ಗಳಲ್ಲೆಲ್ಲ ಬಳಕೆ ಅನಿವಾರ್ಯ. ಈ ಲಿಫ್ಟ್​​ಗಳಿಂದ ಉಪಯೋಗ ಇರುವುದು ಸತ್ಯವಾದರೂ, ಅಪಾಯವೂ ಕಟ್ಟಿಟ್ಟಬುತ್ತಿ. ಲಿಫ್ಟ್​ ಏಕಾಏಕಿ ಕೈಕೊಟ್ಟರೆ, ನಿಂತುಬಿಟ್ಟರೆ ಅದರಲ್ಲಿದ್ದವರು ಪರದಾಡಬೇಕಾಗುತ್ತದೆ. ದೊಡ್ಡವರಾಗಲೀ, ನಾವೆಷ್ಟೇ ಧೈರ್ಯವಂತರಾಗಿರಲಿ ಲಿಫ್ಟ್​ನಲ್ಲಿ ಸಿಕ್ಕಿಬಿದ್ದರೆ ಒಂದು ಕ್ಷಣ ಭಯವಾಗಿಯೇ ಆಗುತ್ತದೆ. ಅಂಥದ್ದರಲ್ಲಿ ಮಕ್ಕಳಿಗೆ ಈ ಅನುಭವ ಆದರೆ ಏನಾಗಬೇಡ !

ಗ್ರೇಟರ್​​ ನೊಯ್ಡಾದ ನಿರಾಲಾ ನಿರಾಲಾ ಆಸ್ಪೈರ್ ಸೊಸೈಟಿ ಅಪಾರ್ಟ್​​ಮೆಂಟ್​​ನಲ್ಲಿ 8 ವರ್ಷದ ಹುಡುಗನಿಗೆ ಈ ಭಯಾನಕ ಸನ್ನಿವೇಶ ಎದುರಾಗಿತ್ತು. ಟ್ಯೂಷನ್​ನಿಂದ ಮರಳಿದ ಈತ ತನ್ನ ಸೈಕಲ್​​ನ್ನೂ ಲಿಫ್ಟ್​​ನಲ್ಲಿ ಇಟ್ಟುಕೊಂಡು, ಗ್ರೌಂಡ್ ಫ್ಲೋರ್​​ನಿಂದ 14ನೇ ಮಹಡಿಗೆ ಹೋಗುತ್ತಿದ್ದ. ಆದರೆ ನಾಲ್ಕು ಮತ್ತು ಐದನೇ ಮಹಡಿಗಳ ನಡುವೆ ಲಿಫ್ಟ್​ ಸುಮಾರು 10 ನಿಮಿಷ ಸಿಲುಕಿಕೊಂಡಿತ್ತು. ಅವನು ಪುಟ್ಟ ಹುಡುಗ. ಬೆನ್ನಿಗೆ ಬ್ಯಾಗ್​ ಕೂಡ ಇದೆ. ಲಿಫ್ಟ್​ ಸ್ಥಗಿತಗೊಂಡಾಗ ಅವನು ಹಲವು ಸಲ ಎಮರ್ಜನ್ಸಿ ಗುಂಡಿ ಒತ್ತಿದ್ದಾನೆ. ಬಾಗಿಲು ಬಡಿದಿದ್ದಾನೆ. ಕೂಗಿದ್ದಾನೆ. ಹತಾಶೆಯಿಂದ ಸೈಕಲ್​ ಮೇಲೆ ಕೂಡ ಗುದ್ದಿದ್ದಾನೆ. ಆದರೂ ಸುಮಾರು 10 ನಿಮಿಷಗಳ ಕಾಲ ಅವನು ಹಾಗೇ ಇರಬೇಕಾಯ್ತು. ಆತ ಎಮರ್ಜನ್ಸಿ ಬಟನ್​ ಒತ್ತಿದ್ದಾಗ ಅಲ್ಲಿ ಸಿಸಿಟಿವಿ ರೂಮ್​​ನಲ್ಲಿ ಕುಳಿತುಕೊಳ್ಳುವ ಸಿಬ್ಬಂದಿ ಸಹಾಯಕ್ಕೆ ಬರಬೇಕಿತ್ತು. ಆದರೆ ಆ ಸಮಯದಲ್ಲಿ ಅಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಬಾಲಕ ಅಷ್ಟೊತ್ತು ಲಿಫ್ಟ್​ನಲ್ಲಿ ಇರಬೇಕಾಯ್ತು. ಬಳಿಕ ಅದೇ ಫ್ಲೋರ್​​ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಯಾರಿಗೋ, ಲಿಫ್ಟ್​​ನಲ್ಲಿ ಯಾರೋ ಸಿಲುಕಿಕೊಂಡಿರುವುದು ಗೊತ್ತಾಗಿ ಅವರು ಬಾಗಿಲು ತೆಗೆದು ಬಾಲಕನನ್ನು ಹೊರಗೆ ಕರೆದುಕೊಂಡು ಹೋಗಿದ್ದಾರೆ.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ. ಅದನ್ನು ನೋಡಿದ ಜನರು ಲಿಫ್ಟ್​ ನಿರ್ವಹಣಾ ಸಿಬ್ಬಂದಿಗೆ ಬೈಯುತ್ತಿದ್ದಾರೆ. ಗ್ರೇಟರ್​ ನೋಯ್ಡಾದಲ್ಲಿ ಹಲವು ಕಡೆಗಳಲ್ಲಿ ಹೀಗೆ ಲಿಫ್ಟ್​ ಸಂಬಂಧಿ ಅವಘಡಗಳು ಉಂಟಾಗುತ್ತಿವೆ. ಕೂಡಲೇ ಯಾವುದಾದರೂ ಕಾನೂನು ತಂದು, ಲಿಫ್ಟ್ ಅವಘಡಗಳನ್ನು ತಡೆಗಟ್ಟಿ ಎಂದು ಆಗ್ರಹ ಮಾಡುತ್ತಿದ್ದಾರೆ.

ಇದನ್ನೂ ಓದಿ: Viral Video| ಡ್ರೈವ್​ ಮಾಡುತ್ತಿದ್ದಾಗಲೇ ಬಸ್​ ಚಾಲಕ ಸಾವು; ಸಿಗ್ನಲ್​ನಲ್ಲಿ ನಿಂತಿದ್ದವರಿಗೆ ರಭಸದಿಂದ ಡಿಕ್ಕಿ ಹೊಡೆದ ವಾಹನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Wayanad Landslide: ಭಯಾನಕ ಸಾವಿನಿಂದ ರಕ್ಷಿಸಿತು ಸಾಕಿದ ಹಸು! ಕನ್ನಡಿಗ ಕುಟುಂಬದ ಅನುಭವ

Wayanad Landslide: ವೈನಾಡಿನ ಚೂರಲ್‌ಮಲೆಯಲ್ಲಿ ನೆಲೆಸಿದ್ದ ಚಾಮರಾಜನಗರದ ವಿನೋದ್, ಜಯಶ್ರೀ, ಸಿದ್ದರಾಜು, ಮಹೇಶ್ ಹಾಗೂ ಗೌರಮ್ಮ ಎಂಬವರು ಪಾರಾದವರು. ಮೇಪ್ಪಾಡಿಯಲ್ಲಿದ್ದ ಪ್ರವಿದಾ, ಲಕ್ಷ್ಮಿ, ಪುಟ್ಟಸಿದ್ದಮ್ಮ ಮತ್ತು 2 ತಿಂಗಳ ಮಗು ಚಾಮರಾಜನಗರಕ್ಕೆ ಸುರಕ್ಷಿತವಾಗಿ ಬಂದಿದ್ದಾರೆ.

VISTARANEWS.COM


on

wayanad landslide cow rescues family
Koo

ಚಾಮರಾಜನಗರ: ಕೇರಳದ ವೈನಾಡಿನಲ್ಲಿ ಸಂಭವಿಸಿದ ರುದ್ರಭಯಾನಕ ಭೂಕುಸಿತದಲ್ಲಿ (Wayanad landslide, Kerala Landslide) ಚಾಮರಾಜನಗರ ಮೂಲದ ಕುಟುಂಬವೊಂದನ್ನು ಅವರು ಸಾಕಿದ ಹಸು ವಿಚಿತ್ರ ರೀತಿಯಲ್ಲಿ ಪಾರು ಮಾಡಿದ ಘಟನೆ (Viral news) ನಡೆದಿದೆ.

ವೈನಾಡಿನ ಚೂರಲ್‌ಮಲೆಯಲ್ಲಿ ನೆಲೆಸಿದ್ದ ಚಾಮರಾಜನಗರದ ವಿನೋದ್, ಜಯಶ್ರೀ, ಸಿದ್ದರಾಜು, ಮಹೇಶ್ ಹಾಗೂ ಗೌರಮ್ಮ ಎಂಬವರು ಪಾರಾದವರು. ಮೇಪ್ಪಾಡಿಯಲ್ಲಿದ್ದ ಪ್ರವಿದಾ, ಲಕ್ಷ್ಮಿ, ಪುಟ್ಟಸಿದ್ದಮ್ಮ ಮತ್ತು 2 ತಿಂಗಳ ಮಗು ಚಾಮರಾಜನಗರಕ್ಕೆ ಸುರಕ್ಷಿತವಾಗಿ ಬಂದಿದ್ದಾರೆ. ವಿನೋದ್ ಪತ್ನಿ ಬಾಣಂತಿಯಾದ ಕಾರಣ ಪ್ರವಿದಾ, ಅತ್ತೆ ಲಕ್ಷ್ಮೀ ಹಾಗೂ ಪುಟ್ಟಸಿದ್ದಮ್ಮ ಮೇಪ್ಪಾಡಿಯಲ್ಲಿದ್ದರು. ವಿನೋದ್ ಮತ್ತು ನಾಲ್ವರು ಚೂರಲ್‌ಮಲೆಯಲ್ಲಿದ್ದರು. ಚೂರಲ್‌ಮಲೆಗೂ ಮೇಪ್ಪಾಡಿಗೂ 6 ಕಿಮೀ ದೂರವಿದ್ದು, ಭೂಕುಸಿತ ಉಂಟಾಗುವ ಕೆಲವು ಸಮಯಕ್ಕೆ ಮುನ್ನ ಇವರು ಪಾರಾಗಿ ಸುರಕ್ಷಿತ ಸ್ಥಳಕ್ಕೆ ಸೇರಿಕೊಂಡಿದ್ದಾರೆ.

ಅದು ಘಟಿಸಿದ್ದು ಹೀಗೆ. ಚೂರಲ್ ಮಲೆಯಲ್ಲಿ ವಿನೋದ್ ಕುಟುಂಬ ನಿದ್ರಿಸುತ್ತಿದ್ದಾಗ ಕೊಟ್ಟಿಗೆಯಲ್ಲಿದ್ದ ಹಸು ಚೀರಾಡಿ, ಅಳುವ ಸದ್ದು ಮಾಡಿದೆ. ಕೂಡಲೇ ಎಚ್ಚೆತ್ತ ವಿನೋದ್ ಕೊಟ್ಟಿಗೆಗೆ ತೆರಳಿ ನೋಡಿದಾಗ ನೀರು ತುಂಬಿಕೊಂಡಿದ್ದನ್ನು ಕಂಡಿದ್ದಾರೆ. ಕೂಡಲೇ ವಿನೋದ್ ಮನೆಯಲ್ಲಿದ್ದವರನ್ನು ಎಬ್ಬಿಸಿ ಗುಡ್ಡದ ಮೇಲಕ್ಕೆ ತೆರಳಿದ್ದಾರೆ. ನೋಡನೋಡುತ್ತಿದ್ದಂತೆ ಇವರು ಇದ್ದ ಮನೆ, ವಾಹನ ಎಲ್ಲವೂ ಮಾಯವಾದಂತೆ ಭೂಮಿಯಡಿ ಹುದುಗಿಹೋಗಿದೆ. ಮನೆಯ ಸಮೀಪವೇ ಇದ್ದ ಸೇತುವೆ ಕೂಡ ಎರಡು ಭಾಗವಾಗಿದೆ. ಕೂಡಲೇ ಮೇಪ್ಪಾಡಿಯಲ್ಲಿದ್ದ ಪತ್ನಿಗೂ ವಿಚಾರ ತಿಳಿಸಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ವಿನೋದ್ ಸೂಚಿಸಿದ್ದಾರೆ. ಪ್ರವಿದಾ, ಲಕ್ಷ್ಮೀ ಹಾಗೂ ಪುಟ್ಟಸಿದ್ದಮ್ಮ ಸುರಕ್ಷಿತ ಸ್ಥಳಕ್ಕೆ ಬಂದು ಕಾರ್ ಮೂಲಕ ಚಾಮರಾಜನಗರಕ್ಕೆ ಮಂಗಳವಾರ ಸಂಜೆ ತಲುಪಿದ್ದಾರೆ.

ಗುಡ್ಡದ ಮೇಲೆ ಆಶ್ರಯ ಪಡೆದಿದ್ದ ವಿನೋದ್ ಹಾಗೂ ಮತ್ತಿತರರನ್ನು ರಕ್ಷಣಾ ಪಡೆ ಮಂಗಳವಾರ ಸಂಜೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಸಾಕಿದ್ದ ಹಸು ದೇವರಂತೆ ಅಪಾಯದ ಬಗ್ಗೆ ಕುಟುಂಬಕ್ಕೆ ಎಚ್ಚರಿಸಿ ಇಡೀ ಕುಟುಂಬವನ್ನು ಪಾರುಮಾಡಿದೆ. ಆದರೆ ಇವರನ್ನು ಕಾಪಾಡಿದ ಹಸು ಉಳಿದಿದೆಯೋ ಇಲ್ಲವೋ ತಿಳಿದುಬಂದಿಲ್ಲ.

ನಾಲ್ವರ ಶವ ಪತ್ತೆ, ಉಳಿದವರಿಗೆ ಶೋಧ ಮುಂದುವರಿಕೆ

ಚಾಮರಾಜನಗರ ಜಿಲ್ಲೆಯ ರಾಜೇಂದ್ರ(50), ರತ್ನಮ್ಮ(45), ಪುಟ್ಟಸಿದ್ದಶೆಟ್ಟಿ(62), ರಾಣಿ(50) ಇವರ ಶವಗಳು ದೊರೆತಿವೆ. ತ್ರಯಂಬಕಪುರದ ಸ್ವಾಮಿಶೆಟ್ಟಿ ಎಂಬವರಿಗೆ ಗಾಯಗಳಾಗಿವೆ. ರಾಜೇಂದ್ರ, ರತ್ನಮ್ಮ ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದವರು. ಇಬ್ಬರ ಶವ ಇನ್ನೂ ಪತ್ತೆಯಾಗಿಲ್ಲ. ವೈನಾಡು ಜಿಲ್ಲೆಯ ಮೆಪ್ಪಾಡಿಯ ವೈತ್ರಿ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್‌ ಬಾಬು ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆದಿದ್ದು, ತಹಸೀಲ್ದಾರ್ ನೇತೃತ್ವದ ತಂಡ ಮೃತರ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಝಾನ್ಸಿ, ಝಾನ್ಸಿ ಪುತ್ರ ನಿಹಾಲ್, ಅತ್ತೆ ಲೀಲಾವತಿ ನಾಪತ್ತೆಯಾಗಿದ್ದಾರೆ. ಮೈಸೂರಿನ ಸರಗೂರಿನ ಅನಿಲ್ ಕುಮಾರ್ ಎಂಬುವವರಿಗೆ ಝಾನ್ಸಿರಾಣಿಯನ್ನು ಕುಟುಂಬ ಮದುವೆ ಮಾಡಿಕೊಟ್ಟಿತ್ತು. ಕೇರಳದ ಮುಂಡಕೈಯಲ್ಲಿ ಅನಿಲ್, ಪತ್ನಿ ಝಾನ್ಸಿ, ಪುತ್ರ ನಿಹಾಲ್ ಹಾಗೂ ತಂದೆ-ತಾಯಿ ನೆಲೆಸಿದ್ದರು. ಮುಂಡಕೈ ಗುಡ್ಡ ಕುಸಿತದಲ್ಲಿ ಅನಿಲ್ ತಾಯಿ ಲೀಲಾವತಿ(55), ಪುತ್ರ ನಿಹಾಲ್(2.5) ನಾಪತ್ತೆಯಾಗಿದ್ದು, ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಅನಿಲ್ ಹಾಗೂ ಅವರ ಪತ್ನಿ ಝಾನ್ಸಿ, ತಂದೆ ದೇವರಾಜು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರೂ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮೂವರಿಗೆ ಕೇರಳದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಕುಟುಂಬಸ್ಥರನ್ನು ಕಾಣಲು ಝಾನ್ಸಿರಾಣಿ ಕುಟುಂಬಸ್ಥರು ಕೇರಳಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: Wayanad Landslide: ವೈನಾಡ್‌ ಭೂಕುಸಿತ ಪರಿಣಾಮ ಕರ್ನಾಟಕ- ಕೇರಳ ರಸ್ತೆ ಸಂಪರ್ಕ ಕಡಿತ, ಬಸ್‌ ಸಂಚಾರ ಸ್ಥಗಿತ

Continue Reading

ದೇಶ

Puri Jagannath Temple: ಪುರಿ ಜಗನ್ನಾಥ ಮಂದಿರದ ನಕಲಿ ಕೀ ಪತ್ತೆ; ಅಪಾರ ಪ್ರಮಾಣದ ಬಂಗಾರ ಕಳವು?

Puri Jagannath Temple: ವಿಶ್ವ ಪ್ರಸಿದ್ಧ ಒಡಿಶಾದ ಪುರಿ ಜಗನ್ನಾಥ ಮಂದಿರದ ರತ್ನ ಭಂಡಾರದಲ್ಲಿ  ಅಪಾರ ಪ್ರಮಾಣದ ಸಂಪತ್ತಿದೆ. ಈ ಮಧ್ಯೆ ನಕಲಿ ಕೀ ಬಳಸಿ ರತ್ನ ಭಂಡಾರವನ್ನು ತೆರೆದು ಅಪಾರ ಪ್ರಮಾಣದ ಚಿನ್ನ ಕಳವು ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ತೆರೆದು ಬೆಲೆಬಾಳುವ ವಸ್ತುಗಳನ್ನು ತಾತ್ಕಾಲಿಕ ಭಂಡಾರಕ್ಕೆ ಸ್ಥಳಾಂತರಿಸಲಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರ ನೇಮಿಸಿದ ಸಮಿತಿಯ ಸದಸ್ಯರಾಗಿದ್ದ ಜಗದೀಶ್ ಮೊಹಾಂತಿ ಅವರು ಭಂಡಾರದಿಂದ ಚಿನ್ನ ಕಳುವಾಗಿದೆ ಎಂದು ಬಾಂಬ್‌ ಸಿಡಿಸಿದ್ದಾರೆ.

VISTARANEWS.COM


on

Puri Jagannath Temple
Koo

ಭುವನೇಶ್ವರ: ವಿಶ್ವ ಪ್ರಸಿದ್ಧ ಒಡಿಶಾದ ಪುರಿ ಜಗನ್ನಾಥ ಮಂದಿರ (Puri Jagannath Temple)ದ ರತ್ನ ಭಂಡಾರ (Ratna Bhandar)ದಲ್ಲಿ ಅಪಾರ ಪ್ರಮಾಣದ ಸಂಪತ್ತಿದೆ. ಈ ಮಧ್ಯೆ ನಕಲಿ ಕೀ ಬಳಸಿ ರತ್ನ ಭಂಡಾರವನ್ನು ತೆರೆದು ಅಪಾರ ಪ್ರಮಾಣದ ಚಿನ್ನ ಕಳವು ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಇತ್ತೀಚೆಗೆ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ತೆರೆದು ಬೆಲೆಬಾಳುವ ವಸ್ತುಗಳನ್ನು ತಾತ್ಕಾಲಿಕ ಭಂಡಾರಕ್ಕೆ ಸ್ಥಳಾಂತರಿಸಲಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರ ನೇಮಿಸಿದ ಸಮಿತಿಯ ಸದಸ್ಯರಾಗಿದ್ದ ಜಗದೀಶ್ ಮೊಹಾಂತಿ ಅವರು ಭಂಡಾರದಿಂದ ಚಿನ್ನ ಕಳುವಾಗಿದೆ ಎಂಬ ಬಾಂಬ್‌ ಸಿಡಿಸಿದ್ದಾರೆ.

ʼʼಆಭರಣಗಳನ್ನು ಕದಿಯುವ ಉದ್ದೇಶದಿಂದ ನಕಲಿ ಕೀಲಿಗಳನ್ನು ಬಳಸಲಾಗಿದೆ. ಹೀಗಾಗಿ ರತ್ನ ಭಂಡಾರಗಳನ್ನು ತೆರೆಯುವಾಗ ಕೀಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಬೀಗಗಳನ್ನು ಮುರಿಯಬೇಕಾಯಿತುʼʼ ಎಂದು ಅವರು ಹೇಳಿದ್ದಾರೆ. ʼʼನಕಲಿ ಕೀ ಬಳಕೆಯ ಹಿಂದೆ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಳ್ಳುವ ಕ್ರಿಮಿನಲ್ ಉದ್ದೇಶವಿದೆ” ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.

ಜುಲೈ 14ರಂದು ಪುರಿ ಜಗನ್ನಾಥ ಮಂದಿರದ ರತ್ನ ಭಂಡಾರವನ್ನು 46 ವರ್ಷಗಳ ಬಳಿಕ ತೆರೆಯಲಾಗಿತ್ತು. ಆದರೆ ಮೂಲ ಕೀ ಕಾಣೆಯಾದ ಹಿನ್ನೆಲೆಯಲ್ಲಿ ಸಮಿತಿಯ ಸದಸ್ಯರು ರತ್ನ ಭಂಡಾರದ ಒಳ ಕೋಣೆಗೆ ಪ್ರವೇಶಿಸಲು ಮೂರು ಬೀಗಗಳನ್ನು ಮುರಿದಿದ್ದರು. ಮೂಲ ಕೀಲಿ 2018ರಲ್ಲಿ ಕಾಣೆಯಾಗಿದ್ದವು. ಹೀಗಾಗಿ ಇದರ ತನಿಖೆಗೆ ಹಿಂದಿನ ನವೀನ್ ಪಟ್ನಾಯಕ್ ಸರ್ಕಾರವು ಒರಿಶಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಘುಬೀರ್ ದಾಸ್ ನೇತೃತ್ವದ ತಂಡವನ್ನು ನೇಮಿಸಿತ್ತು.

ರತ್ನ ಭಂಡಾರದ ಒಳಗಿರುವ ಕಪಾಟಿನಿಂದ ಕೀ ಕಾಣೆಯಾಗಿವೆ ಎಂದು ಝೀ ನ್ಯೂಸ್ ವರದಿ ಮಾಡಿದೆ. ರತ್ನ ಭಂಡಾರದ ಒಳಗಿನ ಕೋಣೆಯಲ್ಲಿ ಮೂರು ಮರದ ಕಪಾಟು, ಒಂದು ಉಕ್ಕಿನ ಕಪಾಟು, ಎರಡು ಮರದ ಪೆಟ್ಟಿಗೆ ಮತ್ತು ಕಬ್ಬಿಣದ ಪೆಟ್ಟಿಗೆ ಇದೆ. ದೇವಾಲಯದ ಆಡಳಿತದ ಮೂಲಗಳ ಪ್ರಕಾರ, ಮರದ ಕಪಾಟುಗಳ ಪೈಕಿ ಒಂದನ್ನು ಮಾತ್ರ ಲಾಕ್ ಮಾಡಲಾಗಿತ್ತು. ಕಬ್ಬಿಣದ ಪೆಟ್ಟಿಗೆಯ ಪೈಕಿ ಎರಡು ಲಾಕ್ ಕಾರ್ಯವಿಧಾನಗಳನ್ನು ಹೊಂದಿತ್ತು, ಆದರೆ ಒಂದರ ಬೀಗ ತೆರೆದಿತ್ತು. ಇದು ಸಂಶಯಕ್ಕೆ ಕಾರಣವಾಗಿದೆ.

ಸರ್ಪ ಕಾವಲು ಸುಳ್ಳು

ಅಲ್ಲದೆ ರತ್ನ ಭಂಡಾರವನ್ನು ವಿಷಕಾರಿ ಹಾವುಗಳು ಕಾಯುತ್ತಿವೆ ಎನ್ನುವುದು ಸುಳ್ಳು ಸುದ್ದಿ ಎಂದೂ ಜಗದೀಶ್ ಮೊಹಾಂತಿ ತಿಳಿಸಿದ್ದಾರೆ. ಕಳ್ಳತನವನ್ನು ಮರೆಮಾಚಲು ಉದ್ದೇಶಪೂರ್ವಕವಾಗಿ ಈ ಸುಳ್ಳು ಸುದ್ದಿಯನ್ನು ಹರಡಿರಬಹುದು ಎಂದು ಅವರು ಶಂಕಿಸಿದ್ದಾರೆ. ಈ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸಲು ದೇವಾಲಯದ ಆಡಳಿತವು ಇನ್ನೂ ಸರ್ಕಾರವನ್ನು ಸಂಪರ್ಕಿಸಿಲ್ಲ ಎನ್ನಲಾಗಿದೆ.

ಏನಿದು ರತ್ನ ಭಂಡಾರ?‌

ದೇವರ ಆಭರಣ ಪೆಟ್ಟಿಗೆಯನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ‘ಹೊರ ಭಂಡಾರ’ ಎಂದು ಕರೆಯಲಾಗುವ ಭಾಗದಲ್ಲಿ ವಾರ್ಷಿಕ ರಥೋತ್ಸವದಂತಹ ವಿಶೇಷ ಸಂದರ್ಭಗಳಲ್ಲಿ ಬಳಸುವ ಉಡುಪುಗಳು, ಆಭರಣಗಳಿವೆ. ‘ಒಳ ಭಂಡಾರ’ ಎಂದು ಕರೆಯುವ ಮತ್ತೊಂದು ಭಾಗದಲ್ಲಿ ರಾಜರಿಂದ ಕಾಣಿಕೆಯಾಗಿ ಲಭಿಸಿದ ಚಿನ್ನ, ಬೆಳ್ಳಿ, ವಜ್ರದ ಆಭರಣಗಳಿವೆ. ‘ಒಳ ಭಂಡರ’ವನ್ನು ಕೊನೆಯ ಬಾರಿ 1978ರಲ್ಲಿ ತೆರೆಯಲಾಗಿತ್ತು. ಅದಾದ ಬಳಿಕ ಜುಲೈ 14ರಂದು ಬಾಗಿಲು ತೆರೆಯಲಾಗಿತ್ತು.

ಇದನ್ನೂ ಓದಿ: Ratna Bhandar: ಒಂದೇ ವಾರದಲ್ಲಿ ಎರಡನೇ ಬಾರಿ ತೆರೆದ ಪುರಿ ಜಗನ್ನಾಥನ ʼರತ್ನ ಭಂಡಾರʼ

Continue Reading

ದೇಶ

Narayana Murthy: ಜನ ವಾದ ಮಾಡದೆ ಸುಮ್ಮನೆ ಕೆಲಸ ಮಾಡುವುದರಿಂದ ಚೀನಾ ನಮ್ಮ ದೇಶಕ್ಕಿಂತ ಮುಂದಿದೆ: ನಾರಾಯಣಮೂರ್ತಿ ಹೊಸ ವಾದ!

Narayana Murthy: ಭಾನುವಾರ ನಡೆದ ELCIA ಟೆಕ್ ಶೃಂಗಸಭೆ 2024 ರಲ್ಲಿ ಮಾತನಾಡಿದ ಮೂರ್ತಿ, ಭಾರತವು ಚೀನಾವನ್ನು ಹಿಂದಿಕ್ಕಿ ಜಾಗತಿಕ ಉತ್ಪಾದನಾ ಕೇಂದ್ರವಾಗುವುದು ಸುಲಭವಲ್ಲ ಎಂದು ಹೇಳಿದರು. ಅಲ್ಲದೇ ಮೂರ್ತಿ ಅವರು “ಹಬ್” ಮತ್ತು “ವಿಶ್ವ ಗುರು” ನಂತಹ ಭವ್ಯವಾದ ಪದಗಳನ್ನು ಸುಖಾ ಸುಮ್ಮನೆ ಬಳಸದಂತೆ ಸಲಹೆ ನೀಡಿದರು.

VISTARANEWS.COM


on

Narayana Murthy
Koo

ನವದೆಹಲಿ: ಚೀನಾ ನಮ್ಮ ದೇಶಕ್ಕಿಂತ ಆರು ಪಟ್ಟು ಹೆಚ್ಚಿನ ಜಿಡಿಪಿ(GDP)ಯನ್ನು ಹೊಂದಿದ್ದು, ಅದರ ಉತ್ಪಾದನಾ ಸಾಮರ್ಥ್ಯವನ್ನು ಮ್ಯಾಚ್‌ ಮಾಡಲು ಭಾರತಕ್ಕೆ ಸಾಧ್ಯವಿಲ್ಲ. ಜನ ವಾದ ಮಾಡದೆ ಸುಮ್ಮನೆ ಕೆಲಸ ಮಾಡುವುದರಿಂದ ಚೀನಾ ನಮ್ಮ ದೇಶಕ್ಕಿಂತ ಮುಂದಿದೆ. ಉತ್ಪಾದನಾ ಕೇಂದ್ರವಾಗುವ ಭಾರತದ ಕನಸು ಇನ್ನು ಬಹಳ ದೂರದಲ್ಲಿದೆ ಎಂದು ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ(Narayana Murthy) ಹೇಳಿದ್ದಾರೆ.

ಭಾನುವಾರ ನಡೆದ ELCIA ಟೆಕ್ ಶೃಂಗಸಭೆ 2024 ರಲ್ಲಿ ಮಾತನಾಡಿದ ಮೂರ್ತಿ, ಭಾರತವು ಚೀನಾವನ್ನು ಹಿಂದಿಕ್ಕಿ ಜಾಗತಿಕ ಉತ್ಪಾದನಾ ಕೇಂದ್ರವಾಗುವುದು ಸುಲಭವಲ್ಲ ಎಂದು ಹೇಳಿದರು. ಅಲ್ಲದೇ ಮೂರ್ತಿ ಅವರು “ಹಬ್” ಮತ್ತು “ವಿಶ್ವ ಗುರು” ನಂತಹ ಭವ್ಯವಾದ ಪದಗಳನ್ನು ಸುಖಾ ಸುಮ್ಮನೆ ಬಳಸದಂತೆ ಸಲಹೆ ನೀಡಿದರು.

ಚೀನಾ ಈಗಾಗಲೇ ವಿಶ್ವದ ಕಾರ್ಖಾನೆಯಾಗಿದೆ. ಇತರ ದೇಶಗಳಲ್ಲಿನ ಸೂಪರ್ ಮಾರ್ಕೆಟ್‌ಗಳು ಮತ್ತು ಹೋಮ್ ಡಿಪೋಗಳಲ್ಲಿ ಸುಮಾರು 90% ರಷ್ಟು ವಸ್ತುಗಳನ್ನು ಚೀನಾದಲ್ಲಿ ತಯಾರಿಸಲಾಗುತ್ತದೆ. ಅವರ ಆರ್ಥಿಕತೆ (ಜಿಡಿಪಿ) ಭಾರತಕ್ಕಿಂತ ಆರು ಪಟ್ಟು ದೊಡ್ಡದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತವು ಉತ್ಪಾದನಾ ಕೇಂದ್ರವಾಗಲಿದೆ ಎಂದು ಹೇಳುವುದು ದೊಡ್ಡ ವಿಷಯವಾಗಿದೆ ಎಂದು ಮೂರ್ತಿ ಹೇಳಿದರು.

ಐಟಿ ವಲಯವು ರಫ್ತಿನ ಮೇಲೆ ಅವಲಂಬಿತವಾಗಿರುವಾಗ, ಉತ್ಪಾದನಾ ಉದ್ಯಮಕ್ಕೆ ಹೆಚ್ಚಿನ ದೇಶೀಯ ಕೊಡುಗೆ ಮತ್ತು ಸರ್ಕಾರದ ಬೆಂಬಲದ ಅಗತ್ಯವಿದೆ. ಉತ್ಪಾದನೆಗೆ ದೇಶೀಯ ಕೊಡುಗೆ ಹೆಚ್ಚು. ಉತ್ಪಾದನೆಯ ಯಶಸ್ಸಿನಲ್ಲಿ ಸರ್ಕಾರವು ದೊಡ್ಡ ಪಾತ್ರವನ್ನು ವಹಿಸುತ್ತದೆ. ದುರದೃಷ್ಟವಶಾತ್, ಭಾರತದಂತಹ ದೇಶದಲ್ಲಿ ಉತ್ತರದಾಯಿತ್ವ, ಪಾರದರ್ಶಕತೆ, ವೇಗ ಮತ್ತು ಸಾರ್ವಜನಿಕ ಆಡಳಿತದಲ್ಲಿ ಉತ್ಕೃಷ್ಟತೆಯು ಇನ್ನೂ ಸುಧಾರಣೆಯ ಅಗತ್ಯವಿದೆ. ಉತ್ಪಾದನಾ ಕ್ಷೇತ್ರದ ಬೆಳವಣಿಗೆಗೆ ಸರ್ಕಾರ ಮತ್ತು ಉದ್ಯಮದ ನಡುವೆ ಕನಿಷ್ಠ ಹಸ್ತಕ್ಷೇಪದ ಅಗತ್ಯವಿದೆ ಎಂದು ಒತ್ತಿ ಹೇಳಿದರು.

“ಮಾರುಕಟ್ಟೆ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ಣಯಿಸಲು ಮತ್ತು ಮೌಲ್ಯವನ್ನು ಸೇರಿಸಲು ಮತ್ತು ಮಾರುಕಟ್ಟೆಯನ್ನು ನಿರ್ಣಯಿಸಲು ಉದ್ಯಮಿಗಳು ಸರಳವಾದ ಗಣಿತದ ಮಾದರಿಗಳನ್ನು ಬಳಸಲು ಕಲಿಯಬೇಕು. ಅವರಿಗೆ ಎಷ್ಟು ಮಾರುಕಟ್ಟೆ ಸಿಗಬಹುದು ಎನ್ನುವುದನ್ನು ಅಂದಾಜಿಸಬೇಕು. ಉದ್ಯಮದ ಭವಿಷ್ಯದ ಕುರಿತು ಮಾತನಾಡಿದ ಮೂರ್ತಿ, ಕೃತಕ ಬುದ್ಧಿಮತ್ತೆಯ (ಎಐ) ಬೆಳವಣಿಗೆಯ ಹೊರತಾಗಿಯೂ ಮಾನವನ ಸೃಜನಶೀಲತೆ ಉಳಿಯುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಎಐ ವಿನ್ಯಾಸಕರು ಮತ್ತು ದೊಡ್ಡ ಪ್ರಮಾಣದ ಅಪ್ಲಿಕೇಶನ್ ಸಿಸ್ಟಮ್‌ಗಳನ್ನು ಅಳವಡಿಸುವ ವ್ಯಕ್ತಿಗಳನ್ನು ಬದಲಿಸುವುದಿಲ್ಲ. ಅದಕ್ಕಾಗಿಯೇ ಅವು ತುಂಬಾ ಸಂಕೀರ್ಣವಾಗಿವೆ. ಇದು ದೊಡ್ಡ ಡೇಟಾ ನಿಘಂಟುಗಳು, ಡೇಟಾ ಪ್ರೋಗ್ರಾಂಗಳು ಮತ್ತು ಪ್ರತಿಯೊಬ್ಬರ ನಡುವೆ ಪರಸ್ಪರ ಸಂಪರ್ಕವನ್ನು ಹೊಂದಿರಬೇಕು. ಮಾನವ ಮನಸ್ಸಿನ ಸೃಜನಶೀಲತೆ ಮತ್ತು ಶಕ್ತಿಯು ಈ ವ್ಯವಸ್ಥೆಗಿಂತ ಹೆಚ್ಚು ಶ್ರೇಷ್ಠವಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Business Ideas: 20 ದೇಶಗಳಿಗೆ ಮಣ್ಣಿನ ಪಾತ್ರೆಗಳ ರಫ್ತು; ವರ್ಷಕ್ಕೆ 5 ಕೋಟಿ ರೂ. ಗಳಿಸುತ್ತಿದೆ ಈ ಕುಟುಂಬ!

Continue Reading

ದೇಶ

ITR Filing: ಐಟಿ ರಿಟರ್ನ್ಸ್ ಫೈಲ್‌ಗೆ ಇಂದು ಅಂತಿಮ ದಿನ; ಗಡುವು ವಿಸ್ತರಣೆಗೆ ಕಾದರೆ ದಂಡ ಕಟ್ಟಬೇಕಾದೀತು!

ITR Filing: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಇಂದೇ (ಜುಲೈ 31) ಕೊನೆಯ ದಿನ. ಹೀಗಾಗಿ ದಂಡ ತಪ್ಪಿಸಿಕೊಳ್ಳಲು ತೆರಿಗೆ ಪಾವತಿದಾರರಿಗೆ ಇಂದೇ ಕೊನೆಯ ಅವಕಾಶ. ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಗಡುವನ್ನು ವಿಸ್ತರಿಸಬೇಕು ಎಂಬ ಕೂಗು ಕೇಳಿ ಬಂದಿದ್ದರೂ ಇನ್ನೂ ಆದಾಯ ತೆರಿಗೆ ಇಲಾಖೆ ದಿನ ಮುಂದೂಡಿಕೆ ಮಾಡಿಲ್ಲ. ಹೀಗಾಗಿ ಗಡುವು ಮುಗಿಯಲು ಕೆಲವೇ ಗಂಟೆಗಷ್ಟೇ ಬಾಕಿ ಉಳಿದಿದ್ದು ಬೇಗ ಬೇಗ ಸಲ್ಲಿಸಿ.

VISTARANEWS.COM


on

ITR Filing
Koo

ನವದೆಹಲಿ: ಆದಾಯ ತೆರಿಗೆ ರಿಟರ್ನ್ (Income Tax Returns) ಸಲ್ಲಿಕೆಗೆ ಇಂದೇ (ಜುಲೈ 31) ಕೊನೆಯ ದಿನ. ಹೀಗಾಗಿ ದಂಡ ತಪ್ಪಿಸಿಕೊಳ್ಳಲು ತೆರಿಗೆ ಪಾವತಿದಾರರಿಗೆ ಇಂದೇ ಕೊನೆಯ ಅವಕಾಶ. ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಗಡುವನ್ನು ವಿಸ್ತರಿಸಬೇಕು ಎಂಬ ಕೂಗು ಕೇಳಿ ಬಂದಿದ್ದರೂ ಇನ್ನೂ ಆದಾಯ ತೆರಿಗೆ ಇಲಾಖೆ ದಿನ ಮುಂದೂಡಿಕೆ ಮಾಡಿಲ್ಲ. ಹೀಗಾಗಿ ಗಡುವು ಮುಗಿಯಲು ಕೆಲವೇ ಗಂಟೆಗಷ್ಟೇ ಬಾಕಿ ಉಳಿದಿದ್ದು ಬೇಗ ಬೇಗ ಸಲ್ಲಿಸಿ ಎಂದು ಆರ್ಥಿಕ ತಜ್ಞರು ಸಹೆ ನೀಡಿದ್ದಾರೆ (ITR Filing).

ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಸಂಬಂಧ ಜುಲೈ 26ರಂದು ಮಾಹಿತಿ ನೀಡಿದ್ದ ಇಲಾಖೆ, ಕೆಲವು ದಿನಗಳ ಹಿಂದಿನವರೆಗೆ 5 ಕೋಟಿ ಐಟಿಆರ್‌ಗಳು ಸಲ್ಲಿಕೆಯಾಗಿವೆ. ಈ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಿಟರ್ನ್ಸ್‌ ಸಲ್ಲಿಕೆ ಹೆಚ್ಚಾಗಿದೆ ಎಂದು ಹೇಳಿತ್ತು. ಜತೆಗೆ ಅಂತಿಮ ದಿನಾಂಕವರೆಗೆ ಕಾಯದೇ ಕೂಡಲೇ ಸಲ್ಲಿಸುವಂತೆ ತಿಳಿಸಿತ್ತು.

ದಂಡ ಕಟ್ಟಬೇಕು

ಜುಲೈ 31ರೊಳಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಆಗದಿದ್ದರೆ ಅಂತಹವರು ದಂಡ ಕಟ್ಟಬೇಕಾಗುತ್ತದೆ. ತೆರಿಗೆ ಲೆಕ್ಕಪರಿಶೋಧನೆಯ ಅಗತ್ಯವಿರುವ ತೆರಿಗೆದಾರರಿಗೆ ದಂಡ ಸಹಿತ ಐಟಿಆರ್ ಫೈಲ್ ಮಾಡಲು 2024ರ ಅಕ್ಟೋಬರ್ 31ರವರೆಗೆ ಅವಕಾಶವಿದೆ. ಆರ್ಥಿಕ ವರ್ಷ 2024-25ಗಾಗಿ ಪರಿಷ್ಕೃತ ಮತ್ತು ತಡವಾದ ರಿಟರ್ನ್‌ಗಳನ್ನು ಸಲ್ಲಿಸಲು ಅಂತಿಮ ಗಡುವು 2024ರ ಡಿಸೆಂಬರ್ 31 ಆಗಿದೆ.

ತೆರಿಗೆ ಸಲ್ಲಿಸುವಿಕೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಆದಾಯ ತೆರಿಗೆ ಇಲಾಖೆಯು ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ವಿವಿಧ ಐಟಿಆರ್ ಫಾರ್ಮ್‌ಗಳು ಮತ್ತು ಎಕ್ಸೆಲ್ ಮಾಹಿತಿಗಳನ್ನು ನಿರ್ಧಿಷ್ಟ ವೆಬ್‌‌ಸೈಟ್ ಮೂಲಕ ಪ್ರಕಟಿಸುತ್ತದೆ. ಆದರೂ ಹೆಚ್ಚಿನ ಸಂಬಳ ಪಡೆಯುವ ವ್ಯಕ್ತಿಗಳು ತಮ್ಮ ಫಾರ್ಮ್ 16 ಅನ್ನು ಉದ್ಯೋಗದಾತರಿಂದ ಸ್ವೀಕರಿಸಲು ಕಾಯುತ್ತಾರೆ. ಸಾಮಾನ್ಯವಾಗಿ ಇದನ್ನು ಜೂನ್ ಕೊನೆಯಲ್ಲಿ ಅಥವಾ ಜುಲೈ ಆರಂಭದಲ್ಲಿ ವಿತರಿಸಲಾಗುತ್ತದೆ.

ಜುಲೈ 31ರ ಗಡುವಿನ ನಂತರ ಐಟಿಆರ್ ಸಲ್ಲಿಸುವುದರಿಂದ ದಂಡ ಪಾವತಿಸಬೇಕಾಗುತ್ತದೆ. ನಿವ್ವಳ ತೆರಿಗೆಯ ಆದಾಯವು 5 ಲಕ್ಷ ರೂ. ವರೆಗೆ ಇದ್ದರೆ ತಡವಾಗಿ ತೆರಿಗೆ ರಿಟರ್ನ್‌ಗೆ ಗರಿಷ್ಠ ದಂಡ 1,000 ರೂ ಆಗಿದೆ. 5 ಲಕ್ಷ ರೂ. ಗಿಂತ ಹೆಚ್ಚಿನ ಆದಾಯ ಹೊಂದಿರುವವರು 5,000 ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಆದಾಯ ತೆರಿಗೆ ಕಾಯಿದೆಯ ಪ್ರಕಾರ ಒಟ್ಟು ಆದಾಯವು ಮೂಲ ವಿನಾಯಿತಿ ಮಿತಿಗಿಂತ ಕಡಿಮೆಯಾದರೆ ಯಾವುದೇ ದಂಡವನ್ನು ವಿಧಿಸಲಾಗುವುದಿಲ್ಲ.

ಪ್ರತಿ ಜುಲೈನಲ್ಲಿ ತೆರಿಗೆ ಇಲಾಖೆಯು ಗಡುವು ಮುಗಿಯುವವರೆಗೆ ತೆರಿಗೆದಾರರಿಗೆ ನಿಗದಿತ ದಿನಾಂಕವನ್ನು ನಿರಂತರವಾಗಿ ನೆನಪಿಸುತ್ತಿರುತ್ತದೆ. ತೆರಿಗೆ ಸಲ್ಲಿಸುವಿಕೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಆದಾಯ ತೆರಿಗೆ ಇಲಾಖೆಯು ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ವಿವಿಧ ಐಟಿಆರ್ ಫಾರ್ಮ್‌ಗಳು ಮತ್ತು ಎಕ್ಸೆಲ್ ಮಾಹಿತಿಗಳನ್ನು ನಿರ್ಧಿಷ್ಟ ವೆಬ್‌‌ಸೈಟ್ ಮೂಲಕ ಪ್ರಕಟಿಸುತ್ತದೆ. ಆದರೂ ಹೆಚ್ಚಿನ ಸಂಬಳ ಪಡೆಯುವ ವ್ಯಕ್ತಿಗಳು ತಮ್ಮ ಫಾರ್ಮ್ 16 ಅನ್ನು ಉದ್ಯೋಗದಾತರಿಂದ ಸ್ವೀಕರಿಸಲು ಕಾಯುತ್ತಾರೆ. ಸಾಮಾನ್ಯವಾಗಿ ಇದನ್ನು ಜೂನ್ ಕೊನೆಯಲ್ಲಿ ಅಥವಾ ಜುಲೈ ಆರಂಭದಲ್ಲಿ ವಿತರಿಸಲಾಗುತ್ತದೆ.

ಇದನ್ನೂ ಓದಿ: Money Guide: ಐಟಿಆರ್ ಇನ್ನೂ ಸಲ್ಲಿಸಿಲ್ಲವೇ? ಕೊನೆಯ ಕ್ಷಣದ ಗೊಂದಲ ತಪ್ಪಿಸಲು ಈ ಟಿಪ್ಸ್‌ ಫಾಲೋ ಮಾಡಿ

Continue Reading
Advertisement
wayanad landslide cow rescues family
ವೈರಲ್ ನ್ಯೂಸ್4 mins ago

Wayanad Landslide: ಭಯಾನಕ ಸಾವಿನಿಂದ ರಕ್ಷಿಸಿತು ಸಾಕಿದ ಹಸು! ಕನ್ನಡಿಗ ಕುಟುಂಬದ ಅನುಭವ

Ismail Haniyeh
ವಿದೇಶ6 mins ago

Ismail Haniyeh: ಇಸ್ರೇಲ್‌ನಿಂದ ಪ್ರತೀಕಾರದ ಎಚ್ಚರಿಕೆ ಬೆನ್ನಲ್ಲೇ ಹಮಾಸ್‌ ನಾಯಕ ಇಸ್ಮಾಯಿಲ್ ಹನಿಯೆಹ್ ಬರ್ಬರ ಹತ್ಯೆ

Puri Jagannath Temple
ದೇಶ32 mins ago

Puri Jagannath Temple: ಪುರಿ ಜಗನ್ನಾಥ ಮಂದಿರದ ನಕಲಿ ಕೀ ಪತ್ತೆ; ಅಪಾರ ಪ್ರಮಾಣದ ಬಂಗಾರ ಕಳವು?

Nabha Natesh in red gown Darling movie review
ಟಾಲಿವುಡ್43 mins ago

Nabha Natesh: ರೆಡ್ ಗೌನ್‌ನಲ್ಲಿ ‘ಪಟಾಕ’ ಮಿಂಚಿಂಗ್; ಟಾಲಿವುಡ್‌ನಲ್ಲಿ ನಭಾ ನಟೇಶ್ ಧಮಾಕ!

winning tips ರಾಜಮಾರ್ಗ ಅಂಕಣ
ಅಂಕಣ53 mins ago

ರಾಜಮಾರ್ಗ ಅಂಕಣ: ಸಾಧನೆಯ ಹಾದಿಯ 25 ಮೈಲಿಗಲ್ಲುಗಳು

Actor Darshan Chethan Kumar on Darshan Case
ಸ್ಯಾಂಡಲ್ ವುಡ್1 hour ago

Actor Darshan: ಜೈಲಿನ ಊಟ ನಂಗಂತೂ ಸಖತ್‌ ಇಷ್ಟ ಆಗಿತ್ತು , ದರ್ಶನ್‌ಗೆ ಯಾಕೆ ಕಷ್ಟ ಆಗ್ತಿದೆ ಎಂದ ಚೇತನ್‌ ಅಹಿಂಸಾ!

Narayana Murthy
ದೇಶ1 hour ago

Narayana Murthy: ಜನ ವಾದ ಮಾಡದೆ ಸುಮ್ಮನೆ ಕೆಲಸ ಮಾಡುವುದರಿಂದ ಚೀನಾ ನಮ್ಮ ದೇಶಕ್ಕಿಂತ ಮುಂದಿದೆ: ನಾರಾಯಣಮೂರ್ತಿ ಹೊಸ ವಾದ!

drowned kalaburagi
ಕ್ರೈಂ1 hour ago

Drowned: ಆತ್ಮಹತ್ಯೆಗಾಗಿ ನದಿಗೆ ಹಾರಿದ ಮಹಿಳೆ ರಕ್ಷಣೆ, ಬದುಕಿಸಲು ಹೋದ ಗಂಡ- ಬಂಧು ಜಲಸಮಾಧಿ

ITR Filing
ದೇಶ1 hour ago

ITR Filing: ಐಟಿ ರಿಟರ್ನ್ಸ್ ಫೈಲ್‌ಗೆ ಇಂದು ಅಂತಿಮ ದಿನ; ಗಡುವು ವಿಸ್ತರಣೆಗೆ ಕಾದರೆ ದಂಡ ಕಟ್ಟಬೇಕಾದೀತು!

wayanad landslide bandipur checkpost
ಪ್ರಮುಖ ಸುದ್ದಿ2 hours ago

Wayanad Landslide: ವೈನಾಡ್‌ ಭೂಕುಸಿತ ಪರಿಣಾಮ ಕರ್ನಾಟಕ- ಕೇರಳ ರಸ್ತೆ ಸಂಪರ್ಕ ಕಡಿತ, ಬಸ್‌ ಸಂಚಾರ ಸ್ಥಗಿತ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ16 hours ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ20 hours ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ21 hours ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌