Fast Charging, ದೀರ್ಘ ಬಾಳಿಕೆ ಬ್ಯಾಟರಿಗಳ ಆವಿಷ್ಕಾರ: IISc ಮಹತ್ವದ ಶೋಧ - Vistara News

ತಂತ್ರಜ್ಞಾನ

Fast Charging, ದೀರ್ಘ ಬಾಳಿಕೆ ಬ್ಯಾಟರಿಗಳ ಆವಿಷ್ಕಾರ: IISc ಮಹತ್ವದ ಶೋಧ

ಬೆಂಗಳೂರಿನ IISc ವಿಜ್ಞಾನಿಗಳು ಮಾಡಿದ ಹೊಸ ಸಂಶೋಧನೆ ಇನ್ನು ಮುಂದೆ Fast charging ಆಗಬಲ್ಲ ನಮ್ಮ ಮೊಬೈಲ್‌ಗಳ ಬ್ಯಾಟರಿಗಳಲ್ಲಿ ಪ್ರಯೋಜನ ನೀಡಲಿದೆ.

VISTARANEWS.COM


on

fast charging
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂದಿನ ತಲೆಮಾರಿನ ಘನರೂಪದ ಬ್ಯಾಟರಿಗಳು (solid state battery) ದೀರ್ಘ ಬಾಳಿಕೆ ಬರುವಂತೆ ಹಾಗೂ ಫಾಸ್ಟ್‌ ಚಾರ್ಜಿಂಗ್‌ ಆಗುವಂತೆ ಮಾಡಲು ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆ (IISc) ನೂತನ ವಿಧಾನವನ್ನು ಆವಿಷ್ಕರಿಸಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಇದೊಂದು ಮಹತ್ವದ ಬೆಳವಣಿಗೆಯಾಗಿದೆ.

solid state battery ಅಥವಾ ಘನರೂಪದ ಬ್ಯಾಟರಿಗಳು ಭವಿಷ್ಯದಲ್ಲಿ ಈ ಹಿಂದಿನ ದ್ರವರೂಪದ, ಪಾಲಿಮರ್‌ ಜೆಲ್‌ ಎಲೆಕ್ಟ್ರೋಲೈಟ್‌ನಿಂದ ಶಕ್ತಿಯನ್ನು ಪಡೆಯುತ್ತಿದ್ದ ಬ್ಯಾಟರಿಗಳನ್ನು ಸ್ಥಳಾಂತರಿಸಲಿವೆ. ಈ ಹಿಂದೆ ಎಲ್ಲ ಎಲೆಕ್ಟ್ರಾನಿಕ್‌ ಸಾಧನಗಳಲ್ಲೂ ಲಿಥಿಯಂ- ಅಯಾನ್‌ ಬ್ಯಾಟರಿಗಳನ್ನು ಬಳಸಲಾಗುತ್ತಿತ್ತು. ಆದರೆ ಬಹುಕಾಲದ ಬಳಕೆಯ ನಂತರ ಅವುಗಳಲ್ಲಿ ʼಡೆಂಡ್ರೈಟ್‌ʼಗಳು ಎಂದು ಕರೆಯಲಾಗುವ ತೆಳ್ಳಗಿನ ಪರದೆ ನಿರ್ಮಾಣವಾಗುತ್ತಿತ್ತು. ಇದು ಬ್ಯಾಟರಿಗಳಲ್ಲಿ ಶಾರ್ಟ್‌ ಸರ್ಕಿಟ್‌ ಹಾಗೂ ವೈಫಲ್ಯಕ್ಕೆ ಕಾರಣವಾಗುತ್ತಿತ್ತು.

ʼನೇಚರ್‌ ಮೆಟೀರಿಯಲ್ಸ್‌ʼ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, IIScಯ ಸಂಶೋಧಕರು ಈ ಡೆಂಡ್ರೈಟ್‌ ನಿರ್ಮಾಣದ ಕಾರಣವನ್ನು ಕಂಡುಹಿಡಿದಿದ್ದಾರೆ. ಎಲೆಕ್ಟ್ರೋಲೈಟ್‌ಗಳ ನಡುವೆ ತೆಳ್ಳಗಿನ ಲೋಹದ ಪರದೆಯನ್ನು ಇಟ್ಟರೆ, ಆಗ ಡೆಂಡ್ರೈಟ್‌ ನಿರ್ಮಾಣವನ್ನು ಮುಂದೂಡಲು ಸಾಧ್ಯ. ಇದರಿಂದ ಬ್ಯಾಟರಿಯ ಬಾಳಿಕೆ ಹೆಚ್ಚುತ್ತದೆ ಹಾಗೂ ಚಾರ್ಜಿಂಗ್‌ ಕೂಡ ಫಾಸ್ಟ್‌ ಆಗುತ್ತದೆ ಎಂದು ಈ ಅಧ್ಯಯನದಲ್ಲಿ ಹೇಳಲಾಗಿದೆ.

ಅಧ್ಯಯನಕಾರರು ನೂರಾರು ಬ್ಯಾಟರಿಗಳನ್ನು ಎಲೆಕ್ಟ್ರಾನ್‌ ಮೈಕ್ರೋಸ್ಕೋಪ್‌ನಡಿ ಪರಿಶೀಲನೆಗೆ ಒಳಪಡಿಸಿದ್ದಾರೆ. ಲಿಥಿಯಮ್‌ ಆನೋಡ್‌ಗಳ ಡಿಸ್‌ಚಾರ್ಜ್‌ ವೇಳೆ ಮೈಕ್ರೋಸ್ಕಾಪಿಕ್‌ ಗುಳ್ಳೆಗಳು ಉಂಟಾಗುವುದು ಕಂಡುಬಂತು. ಈ ಗುಳ್ಳೆಗಳು ಬ್ಯಾಟರಿಯ ವಿದ್ಯುತ್‌ ಪ್ರವಾಹಕ್ಕಿಂತಲೂ ಅಧಿಕ ಗಾತ್ರದ್ದಾಗಿದ್ದವು. ಇವು ಸಾಲಿಡ್‌ ಎಲೆಕ್ಟ್ರೋಲೈಟ್‌ನ ಮೇಲೆ ಒತ್ತಡವನ್ನು ಸೃಷ್ಟಿಸಿ ಡೆಂಡ್ರೈಟ್‌ ಸೃಷ್ಟಿಗೆ ವೇವವರ್ಧನೆ ಮಾಡುತ್ತಿದ್ದವು. ಸಂಶೋಧಕರು ಈ ಲಿಥಿಯಂ ಆನೋಡ್‌ ಹಾಗೂ ಎಲೆಕ್ಟ್ರೋಲೈಟ್‌ ನಡುವೆ ಶಾಖ ಮತ್ತು ತಿಕ್ಕಾಟವನ್ನು ತಡೆಯಬಲ್ಲ ಲೋಹದ ಪದರವನ್ನು ಇರಿಸಿದರು. ಇದು ಡೆಂಡ್ರೈಟ್‌ ಸೃಷ್ಟಿಯನ್ನು ಯಶಸ್ವಿಯಾಗಿ ತಡೆಯಿತು ಎಂದು IIScಯ ಅಸಿಸ್ಟೆಂಟ್‌ ಪ್ರೊಫೆಸರ್‌ ಹಾಗೂ ಸಂಶೋಧಕರಲ್ಲಿ ಒಬ್ಬರಾದ ವಿಕಲ್ಪ್‌ ರಾಜ್‌ ತಿಳಿಸಿದ್ದಾರೆ.

ಇದನ್ನೂ ಓದಿ: Cockroach files: ಜಿರಳೆಗಳೇತಕೆ ಹಾರವು ದೂರಕೆ, ಇದ್ದರೂ ಎರಡು ರೆಕ್ಕೆ?

ಈ ಸಂಶೋಧನೆಗೆ ಅಮೆರಿಕದ ಕಾರ್ನೆಗಿ ಮೆಲನ್‌ ಯೂನಿವರ್ಸಿಟಿಯ ಸಂಶೋಧಕರೂ ಕೈಜೋಡಿಸಿದ್ದಾರೆ.

ಭವಿಷ್ಯದಲ್ಲಿ ಲಿಥಿಯಂ ಅಯಾನ್‌ ಬ್ಯಾಟರಿಗಳನ್ನು ಸಾಲಿಡ್‌ ಸ್ಟೇಟ್‌ ಬ್ಯಾಟರಿಗಳು ಸ್ಥಳಾಂತರಿಸಲಿವೆ. ಸಾಮಾನ್ಯವಾಗಿ ನಾವು ಬಳಸುವ ಸ್ಮಾರ್ಟ್‌ಫೋನ್‌ ಹಾಗೂ ಲ್ಯಾಪ್‌ಟಾಪ್‌ಗಳಲ್ಲಿ ಲಿಥಿಯಂ ಅಯಾನ್‌ ಬ್ಯಾಟರಿಗಳಿವೆ. ಇವುಗಳಲ್ಲಿ ಇರುವ ಸಮಸ್ಯೆ ಎಂದರೆ, ಅತ್ಯಧಿಕ ತಾಪಮಾನಕ್ಕೆ ಒಡ್ಡಿಕೊಂಡಾಗ ಇವು ಸ್ಫೋಟಗೊಳ್ಳಬಹುದು. ಹೀಗಾಗಿ ಇವುಗಳ ಬದಲಿಗೆ ಸಾಲಿಡ್‌ ಸ್ಟೇಟ್‌ ಬ್ಯಾಟರಿಗಳ ಬಳಕೆಗೆ ಒತ್ತು ಸಿಗುತ್ತಿದೆ.

ಸಾಲಿಡ್‌ ಸ್ಟೇಟ್‌ ಬ್ಯಾಟರಿಗಳಲ್ಲಿ ದ್ರವರೂಪದ ಎಲೆಕ್ಟ್ರೋಲೈಟ್‌ಗಳ ಬದಲಿಗೆ ಸಾಲಿಡ್‌ ಸೆರಾಮಿಕ್‌ ಎಲೆಕ್ಟ್ರೋಲೈಟ್‌ಗಳನ್ನು ಬಳಸಲಾಗುತ್ತದೆ. ಇವು ಹೆಚ್ಚಿನ ತಾಪಮಾನದ ಪ್ರದೇಶಗಳಲ್ಲೂ ಅಪಾಯವಿಲ್ಲದೇ ಕಾರ್ಯಾಚರಿಸಬಲ್ಲವು. ಆದರೆ ಇವುಗಳೊಳಗೆ ಸೃಷ್ಟಿಯಾಗುತ್ತಿದ್ದ ಡೆಂಡ್ರೈಟ್‌ ಪದರಗಳು ಈ ಬ್ಯಾಟರಿಗಳ ಕಡಿಮೆ ಬಾಳಿಕೆಗೆ ಕಾರಣವಾಗುತ್ತಿದ್ದವು. ಇದೀಗ ಈ ಪದರಗಳ ನಿರ್ಮೂಲನಕ್ಕೆ ಸಹಕಾರಿಯಾಗಬಲ್ಲ ಸಂಶೋಧನೆಯನ್ನು IISc ಮಾಡಿದೆ. ಇದು ತಂತ್ರಜ್ಞಾನ ಜಗತ್ತಿಗೆ ಪ್ರಮುಖವೆನಿಸಲಿದೆ.

ಇದನ್ನೂ ಓದಿ: ತಂತ್ರಜ್ಞಾನ: ಕಾರು ಖರೀದಿಗೆ ಪರಿಗಣಿಸುವ 3 ಹೊಸ ಅಂಶಗಳು ನಿಮಗೆ ಗೊತ್ತೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Zomato: ಜೊಮ್ಯಾಟೊ ಹೊಸ ತಂತ್ರಜ್ಞಾನ; ಮನೆ ಹೊರಗೆ ಕಾಲಿಡುವ ಮುನ್ನ ಇದನ್ನು ನೋಡಲೇಬೇಕು!

Zomato: ಜೊಮ್ಯಾಟೊದ ಹೊಸ ವೆಬ್‌ಸೈಟ್‌ ಎಲ್ಲರಿಗೂ ಉಚಿತವಾಗಿ ಲಭ್ಯವಿದೆ. ಜೊಮ್ಯಾಟೊ ಫುಡ್‌ ಡೆಲಿವರಿ ಅಗ್ರಿಗೇಟರ್‌ ಆಗಿದ್ದು, ಇಂತಹ ಅಗ್ರಿಗೇಟರ್‌ಗಳು ದೇಶಾದ್ಯಂತ ಜೊಮ್ಯಾಟೊದ ವೆಬ್‌ಸೈಟ್‌ ಮೂಲಕ ಹವಾಮಾನದ ಕುರಿತ ಮಾಹಿತಿಯನ್ನು ಅರಿತುಕೊಂಡು, ತಮ್ಮ ವ್ಯಾಪಾರ, ಡೆಲಿವರಿ ಮುಂದುವರಿಸಲು ಭಾರಿ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ.

VISTARANEWS.COM


on

Zomato
Koo

ನವದೆಹಲಿ: ಆನ್‌ಲೈನ್‌ ಮೂಲಕ ಆಹಾರ ಪೂರೈಕೆ ಮಾಡುವಲ್ಲಿ ದೇಶಾದ್ಯಂತ ಖ್ಯಾತಿಯಾಗಿರುವ ಜೊಮ್ಯಾಟೊ ಕಂಪನಿ ಈಗ ಹೊಸ ಸಾಹಸಕ್ಕೆ ಮುಂದಾಗಿದೆ. ಹೌದು, ಹವಾಮಾನದ ಕುರಿತು ನಿಖರ ಮಾಹಿತಿ ನೀಡುವ, ದೇಶದ ಮೊದಲ ಕ್ರೌಡ್‌-ಸಪೋರ್ಟೆಡ್‌ ವೆದರ್‌ ಇನ್‌ಫ್ರಾಸ್ಟ್ರಕ್ಚರ್‌ಗೆ (First Crowd-Supported Weather Infrastructure) ಜೊಮ್ಯಾಟೊ (Zomato) ಸಿಇಒ ದೀಪಿಂದರ್‌ ಗೋಯಲ್‌ (Deepinder Goyal) ಚಾಲನೆ ನೀಡಿದ್ದಾರೆ. ಇದರಿಂದ ದೇಶದ ಪ್ರಮುಖ ನಗರಗಳ ಹವಾಮಾನವನ್ನು ಪರಿಶೀಲನೆ ಮಾಡಬಹುದಾಗಿದೆ.

ವೆದರ್‌ಯುನಿಯನ್.ಕಾಮ್‌ (ಇಲ್ಲಿ ಕ್ಲಿಕ್‌ ಮಾಡಿ-Weatherunion.com) ಎಂಬ ವೆಬ್‌ಸೈಟ್‌ಗೆ ದೀಪಿಂದರ್‌ ಗೋಯಲ್‌ ಬುಧವಾರ (ಮೇ 8) ಚಾಲನೆ ನೀಡಿದ್ದಾರೆ. ದೇಶಾದ್ಯಂತ 650 ಹವಾಮಾನ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದ್ದು, ಇದು ದೇಶದಲ್ಲಿಯೇ ಹವಾಮಾನ ಕುರಿತು ಮಾಹಿತಿ ಒದಗಿಸುವ ಮೊದಲ ಖಾಸಗಿ ಮೂಲ ಸೌಕರ್ಯ ಎಂದು ಹೇಳಲಾಗುತ್ತಿದೆ. ಇದು ಸಾಮಾನ್ಯ ಜನರ ಜತೆಗೆ ಉದ್ಯಮಿಗಳಿಗೆ, ಸ್ಟಾರ್ಟ್‌ಅಪ್‌ಗಳಿಗೆ ಭಾರಿ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

45 ನಗರಗಳಲ್ಲಿ ಈಗ ಲಭ್ಯ

“ಜೊಮ್ಯಾಟೊ ಚಾಲನೆ ನೀಡಿರುವ ವೆದರ್‌ ವೆಬ್‌ಸೈಟ್‌ ಈಗ ಬೆಂಗಳೂರು ಸೇರಿ ದೇಶದ ಪ್ರಮುಖ 45 ನಗರಗಳಲ್ಲಿ ಲಭ್ಯವಿದೆ. Weatherunion.comಗೆ ಭೇಟಿ ನೀಡುವ ಮೂಲಕ ತಾಪಮಾನ, ಮಳೆ ಪ್ರಮಾಣ, ಸೆಕೆ, ಗಾಳಿಯ ವೇಗ, ಮಳೆ ಮುನ್ಸೂಚನೆ ಸೇರಿ ಹವಾಮಾನಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಒದಗಿಸಲಿದೆ. ಸದ್ಯ, 45 ನಗರಗಳಲ್ಲಿ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಣೆ ಮಾಡುವ ಯೋಜನೆ ಇದೆ” ಎಂದು ಜೊಮ್ಯಾಟೊ ಸಂಸ್ಥಾಪಕರೂ ಆದ ದೀಪಿಂದರ್‌ ಗೋಯಲ್‌ ಮಾಹಿತಿ ನೀಡಿದ್ದಾರೆ.

ಎಲ್ಲರಿಗೂ ಫ್ರೀ ಫ್ರೀ

ಜೊಮ್ಯಾಟೊದ ಹೊಸ ವೆಬ್‌ಸೈಟ್‌ ಎಲ್ಲರಿಗೂ ಉಚಿತವಾಗಿ ಲಭ್ಯವಿದೆ. ಜೊಮ್ಯಾಟೊ ಫುಡ್‌ ಡೆಲಿವರಿ ಅಗ್ರಿಗೇಟರ್‌ ಆಗಿದ್ದು, ಇಂತಹ ಅಗ್ರಿಗೇಟರ್‌ಗಳು ದೇಶಾದ್ಯಂತ ಜೊಮ್ಯಾಟೊದ ವೆಬ್‌ಸೈಟ್‌ ಮೂಲಕ ಹವಾಮಾನದ ಕುರಿತ ಮಾಹಿತಿಯನ್ನು ಅರಿತುಕೊಂಡು, ತಮ್ಮ ವ್ಯಾಪಾರ, ಡೆಲಿವರಿ ಮುಂದುವರಿಸಲು ಭಾರಿ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಹವಾಮಾನ ಕುರಿತು ಮಾಹಿತಿ ಒದಗಿಸುವ ಅಪ್ಲಿಕೇಶನ್‌ಗಳು, ವೆಬ್‌ಸೈಟ್‌ಗಳು ಇದ್ದರೂ, ವಿಭಿನ್ನವಾದ ಹಾಗೂ ವೇಗವಾದ ಮಾಹಿತಿ ನೀಡಲು ಜೊಮ್ಯಾಟೊ ವೆಬ್‌ಸೈಟ್‌ ಅಭಿವೃದ್ಧಿಪಡಿಸಿದೆ ಎನ್ನಲಾಗಿದೆ. ಒಂದು ನಿಮಿಷಕ್ಕೊಮ್ಮೆ ಹವಾಮಾನದ ಕುರಿತು ಮಾಹಿತಿ ಒದಗಿಸುವ ಸೌಲಭ್ಯವಿದ್ದು, ವೆದರ್‌ ಸ್ಟೇಷನ್‌ಗಳ ಸಂಖ್ಯೆಯನ್ನೂ ಇನ್ನಷ್ಟು ಹೆಚ್ಚಿಸುವ ಗುರಿ ಹೊಂದಿದೆ.

ಇದನ್ನೂ ಓದಿ: Zomato Pure Veg: ʼಜೊಮ್ಯಾಟೋ ಪ್ಯೂರ್‌ ವೆಜ್‌ʼ ಡೆಲಿವರಿಗೆ ಅಪಹಾಸ್ಯ? ʼಜಾಹೀರಾತು ಮಾಲೀಕ ನಾನಲ್ಲʼ ಎಂದ ಸ್ವಿಗ್ಗಿ!

Continue Reading

ಗ್ಯಾಜೆಟ್ಸ್

Apple New Products: ಐಪ್ಯಾಡ್ ಪ್ರೊನಿಂದ ಪೆನ್ಸಿಲ್ ಪ್ರೊವರೆಗೆ; 2024ರ ಆಪಲ್‌ ಹೊಸ ಉತ್ಪನ್ನಗಳಿವು

2024ರ ಆವೃತ್ತಿಯಲ್ಲಿ ಆಪಲ್ ಹಲವು ಉತ್ಪನ್ನಗಳ ಮಾರಾಟಕ್ಕೆ ಮುಂದಾಗಿದೆ. ಇದರ ಮೊದಲ ಹಂತವಾಗಿ
ಆಪಲ್ ನ ಐಪ್ಯಾಡ್ ಏರ್, ಐಪ್ಯಾಡ್ ಪ್ರೊ, M4 ಚಿಪ್, ಆಪಲ್ ಪೆನ್ಸಿಲ್ ಪ್ರೊ, ಮ್ಯಾಜಿಕ್ ಕೀಬೋರ್ಡ್ ಗಳು ಶೀಘ್ರದಲ್ಲೇ ಮಾರುಕಟ್ಟೆ (Apple New Products) ಪ್ರವೇಶಿಸಲಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Apple New Products
Koo

ಆಪಲ್‌ನ (Apple New Products) ಐಪ್ಯಾಡ್ ಏರ್ (iPad Air), ಐಪ್ಯಾಡ್ ಪ್ರೊ (iPad Pro), M4 ಚಿಪ್ (M4 chip), ಆಪಲ್ ಪೆನ್ಸಿಲ್ ಪ್ರೊ (Apple Pencil Pro), ಮ್ಯಾಜಿಕ್ ಕೀಬೋರ್ಡ್‌ಗಳಿಗೆ (Magic Keyboard) ಮುಂಗಡ ಬುಕ್ಕಿಂಗ್ ಆರಂಭವಾಗಿದ್ದು, ಮುಂದಿನ ವಾರದಿಂದ ಗ್ರಾಹಕರನ್ನು ತಲುಪಲು ಇದು ಸಜ್ಜಾಗಿದೆ. ಕ್ಯಾಲಿಫೋರ್ನಿಯಾದ (California) ಕ್ಯುಪರ್ಟಿನೊದಲ್ಲಿ ನಡೆದ ಆಪಲ್ ‘ಲೆಟ್ ಲೂಸ್’ ಕಾರ್ಯಕ್ರಮದಲ್ಲಿ ಸಿಇಒ ತಂಡ ಈ ಕುರಿತು ಹಲವು ಮಾಹಿತಿಗಳನ್ನು ಹಂಚಿಕೊಂಡಿದೆ.

2024ರ ಆವೃತ್ತಿಯಲ್ಲಿ ಆಪಲ್ ಹಲವು ಉತ್ಪನ್ನಗಳ ಮಾರಾಟಕ್ಕೆ ಮುಂದಾಗಿದೆ. ಇದರ ಮೊದಲ ಹಂತವಾಗಿ
ಆಪಲ್ ನ ಐಪ್ಯಾಡ್ ಏರ್, ಐಪ್ಯಾಡ್ ಪ್ರೊ, M4 ಚಿಪ್, ಆಪಲ್ ಪೆನ್ಸಿಲ್ ಪ್ರೊ, ಮ್ಯಾಜಿಕ್ ಕೀಬೋರ್ಡ್ ಗಳು ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ.


1. ಐಪ್ಯಾಡ್ ಏರ್ (2024)

ಹೊಸ iPad Air M2 ಚಿಪ್‌ನೊಂದಿಗೆ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ಹಿಂದಿನ M1 ಏರ್‌ಗಿಂತ ಶೇ. 50ರಷ್ಟು ವೇಗವಾಗಿ ಇದು ಕಾರ್ಯ ನಿರ್ವಹಿಸಲಿದೆ. ಉತ್ತಮ ಕಾರ್ಯಕ್ಷಮತೆಯೊಂದಿಗೆ ಐಪ್ಯಾಡ್ ಏರ್ ಅನ್ನು ಲ್ಯಾಂಡ್‌ಸ್ಕೇಪ್ ಓರಿಯಂಟೇಶನ್‌ಗಾಗಿ ಮಾಡಲಾಗಿದೆ. ಲ್ಯಾಂಡ್‌ಸ್ಕೇಪ್ ಮೋಡ್‌ನಲ್ಲಿ ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ ಇದು ಹೊಸ ನೀಲಿ ಮತ್ತು ನೇರಳೆ ಬಣ್ಣದಲ್ಲಿ ಬರುತ್ತಿದೆ. ಜೊತೆಗೆ ಪರಿಚಿತ ಸ್ಟಾರ್ಲೈಟ್ ಮತ್ತು ಸ್ಪೇಸ್ ಗ್ರೇ ಬಣ್ಣಗಳಲ್ಲೂ ಬರಲಿದೆ. ಐಪ್ಯಾಡ್ ಏರ್ (2024) ವಾಸ್ತವವಾಗಿ ಎರಡು ಗಾತ್ರಗಳಲ್ಲಿ ಬರಲಿದೆ. 11 ಇಂಚಿನ ಮತ್ತು 13 ಇಂಚಿನ ಐಪ್ಯಾಡ್ ಏರ್ ಲಭ್ಯವಾಗಲಿದೆ. 13 ಇಂಚಿನ ಮಾದರಿಯು ಶೇ. 30ರಷ್ಟು ಹೆಚ್ಚಿನ ಸ್ಕ್ರೀನ್ ರಿಯಲ್ ಎಸ್ಟೇಟ್ ಅನ್ನು ಹೊಂದಿದೆ. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ವೈಶಿಷ್ಟ್ಯಗಳೊಂದಿಗೆ ಆಪಲ್ ಐಪ್ಯಾಡ್ ಏರ್ ನಾಲ್ಕು ವಿಶೇಷತೆಗಳನ್ನು ಒಳಗೊಂಡಿದೆ. ಲ್ಯಾಂಡ್‌ಸ್ಕೇಪ್ ಸ್ಟಿರಿಯೊ ಆಡಿಯೋ, ಮ್ಯಾಜಿಕ್ ಕೀಬೋರ್ಡ್, 5G ಸಂಪರ್ಕ, 12MP ಕೆಮರಾ ಮತ್ತು 1TB ವರೆಗೆ ಸಂಗ್ರಹಣೆಯೊಂದಿಗೆ 11 ಇಂಚಿನ ರೂಪಾಂತರವು 599 ಡಾಲರ್ ನಿಂದ ಪ್ರಾರಂಭವಾಗುತ್ತದೆ. 13 ಇಂಚಿನ ಮಾದರಿಯು 799 ಡಾಲರ್ (67,000 ರೂ.) ಬೆಲೆಯದ್ದಾಗಿದೆ.


2. ಐಪ್ಯಾಡ್ ಪ್ರೊ

ಐಪ್ಯಾಡ್ ಪ್ರೊ ಆಪಲ್‌ನ ಅತ್ಯಂತ ತೆಳುವಾದ ಉತ್ಪನ್ನವಾಗಿದೆ. ಒಳಗೆ ಪ್ಯಾಕ್ ಮಾಡಲಾದ ಎರಡು OLED ಪ್ಯಾನೆಲ್‌ಗಳನ್ನು ಇದು ಒಳಗೊಂಡಿದೆ. ಐಪ್ಯಾಡ್ ಪ್ರೊ ಆಪಲ್ ಎಂ4 ಚಿಪ್‌ಸೆಟ್ ಅನ್ನು ಒಳಗೊಂಡಿರುವ ಮೊದಲ ಸಾಧನವಾಗಿದೆ. ಐಪ್ಯಾಡ್ ಪ್ರೊಗೆ ಅದರ ತೆಳುವಾದ ವಿನ್ಯಾಸ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಹೊಸ ಪ್ರೊಸೆಸರ್ ಅಗತ್ಯ ಎಂದು ಆಪಲ್ ಹೇಳುತ್ತದೆ.
ಹೊಸ ಐಪ್ಯಾಡ್ ಪ್ರೊ ಎರಡು ಗಾತ್ರಗಳಲ್ಲಿ 11 ಇಂಚು ಮತ್ತು 13 ಇಂಚುಗಳಲ್ಲಿ ಬರಲಿದೆ. ಇದು ಬೆಳ್ಳಿ ಮತ್ತು ಕಪ್ಪು ಎರಡು ಬಣ್ಣಗಳಲ್ಲಿ ಲಭ್ಯವಾಗಲಿದೆ. ಹೊಸ 10 ಕೋರ್ GPUನೊಂದಿಗೆ ಬರುವ ಇದು ರೇಟ್ರೇಸಿಂಗ್ ಅನ್ನು ಬೆಂಬಲಿಸುತ್ತದೆ. ಇದರಲ್ಲೂ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನ ಸೇವೆಗಳು ಇರಲಿವೆ. 11 ಇಂಚಿನದ್ದು 999 ಡಾಲರ್ (83,000 ರೂ.) ಮತ್ತು 13 ಇಂಚಿನದ್ದು 1299 (1 ಲಕ್ಷ 8 ಸಾವಿರ ರೂ.) ಡಾಲರ್‌ಗೆ ಸಿಗಲಿವೆ.


3. M4 ಚಿಪ್

M4 ಪ್ರೊಸೆಸರ್ ಎರಡನೇ ತಲೆಮಾರಿನ 3nm ತಂತ್ರಜ್ಞಾನ, ಸಂಪೂರ್ಣವಾಗಿ ಮರುನಿರ್ಮಿಸಲಾದ ಡಿಸ್ ಪ್ಲೇ , ರೇ ಟ್ರೇಸಿಂಗ್ ಸಾಮರ್ಥ್ಯಗಳೊಂದಿಗೆ 10 ಕೋರ್ GPU ಮತ್ತು M2 ಚಿಪ್‌ಗಿಂತ ನಾಲ್ಕು ಪಟ್ಟು ತ್ವರಿತ ಕಾರ್ಯಕ್ಷಮತೆಯನ್ನು ನೀಡುವ ಮೂಲಕ ತೆಳುವಾದ ವಿನ್ಯಾಸ ಮತ್ತು ಟಂಡೆಮ್ OLED ಪ್ರದರ್ಶನದೊಂದಿಗೆ ಬರಲಿದೆ.
ಇದು ಎಂ3 ಚಿಪ್‌ನ ಮೇಲೆ ಅಪ್‌ಗ್ರೇಡ್ ಆಗಿದೆ. M2 ಗಿಂತ ಶೇ. 50ರಷ್ಟು CPU ವೇಗವನ್ನು ನೀಡುತ್ತದೆ. ಇದು ಹೊಸ 10 ಕೋರ್ GPU ನೊಂದಿಗೆ ಬರುತ್ತದೆ.ರೇಟ್ರೇಸಿಂಗ್ ಅನ್ನು ಬೆಂಬಲಿಸುವ ಮೊದಲ ಸಾಧನವಾಗಿ iPad Pros ಅನ್ನು ಮಾಡುತ್ತದೆ.

4. ಪ್ರೊ ಅಪ್ಲಿಕೇಶನ್‌ನಲ್ಲಿ ನವೀಕರಣಗಳು

ಹೊಸ M4 ಪ್ರೊಸೆಸರ್ ಫೈನಲ್ ಕಟ್ ಪ್ರೊನಲ್ಲಿ ರೆಂಡರಿಂಗ್ ಅನ್ನು ಹೆಚ್ಚಿಸುತ್ತದೆ. M1ಗಿಂತ ಎರಡು ಪಟ್ಟು ವೇಗವನ್ನು ಹೊಂದಿದೆ. ಇದಲ್ಲದೆ, ಹೊಸ ಲೈವ್ ಮಲ್ಟಿಕ್ಯಾಮ್ ಮೋಡ್ ಬಳಕೆದಾರರಿಗೆ ಏಕಕಾಲದಲ್ಲಿ ನಾಲ್ಕು ಕ್ಯಾಮರಾಗಳನ್ನು ಸಂಪರ್ಕಿಸಲು ಮತ್ತು ಮೌಲ್ಯಮಾಪನ ಮಾಡಲು ಅನುವು ಮಾಡಿಕೊಡುತ್ತದೆ. ಇದಲ್ಲದೆ ಐಫೋನ್ ಮತ್ತು ಐಪ್ಯಾಡ್‌ಗಾಗಿ ಉದ್ದೇಶಿಸಲಾದ ಹೊಸ ಫೈನಲ್ ಕಟ್ ಕ್ಯಾಮರಾವು ಲೈವ್ ಮಲ್ಟಿಕ್ಯಾಮ್ ಸೆಷನ್‌ಗಳಲ್ಲಿ ಹೆಚ್ಚುವರಿಯಾಗಿ ಸೆರೆಹಿಡಿಯುತ್ತದೆ. ಫೂಟೇಜ್ ರೆಕಾರ್ಡ್ ಮಾಡಲು ಫೈನಲ್ ಕಟ್ ಕ್ಯಾಮರಾ ಅಪ್ಲಿಕೇಶನ್ ಅನ್ನು ಸ್ವತಂತ್ರ ಕ್ಯಾಮರಾ ಅಪ್ಲಿಕೇಶನ್ ಆಗಿ ಬಳಸಬಹುದು. ಐಪ್ಯಾಡ್‌ಗಳಿಗಾಗಿ ಹೊಸ ಫೈನಲ್ ಕಟ್ ಕ್ಯಾಮರಾ ವೈಶಿಷ್ಟ್ಯವನ್ನು ಪರಿಚಯಿಸುವುದು ಅತ್ಯಂತ ಗಮನಾರ್ಹವಾದ ವರ್ಧನೆಗಳಲ್ಲಿ ಒಂದಾಗಿದೆ. ವಿಡಿಯೋ ಚಿತ್ರೀಕರಣದ ಸಮಯದಲ್ಲಿ ಲೈವ್ ಕ್ಯಾಮೆರಾಗಳಂತೆ ಇವುಗಳ ಬಳಕೆಯನ್ನು ಸಕ್ರಿಯಗೊಳಿಸುತ್ತದೆ.


5. ಆಪಲ್ ಪೆನ್ಸಿಲ್ ಪ್ರೊ

ಹೊಸ ಆಪಲ್ ಪೆನ್ಸಿಲ್ ಪ್ರೊ ಬ್ಯಾರೆಲ್‌ನಲ್ಲಿ ಸಂವೇದಕವನ್ನು ಹೊಂದಿದ್ದು ಅದು ಟೂಲ್ ಮೆನುವನ್ನು ಪ್ರವೇಶಿಸಲು ಬಳಕೆದಾರರಿಗೆ ಸ್ಕ್ವೀಜ್ ಮಾಡಲು ಅನುಮತಿಸುತ್ತದೆ. ಇದು ಕಾರ್ಯಾಚರಣೆಯ ಸಮಯದಲ್ಲಿ ಸ್ಪರ್ಶ ಪ್ರತಿಕ್ರಿಯೆಗಳನ್ನು ನೀಡಲು ಬಲವಂತದ ಪ್ರತಿಕ್ರಿಯೆಯನ್ನು ಹೊಂದಿದೆ ಮತ್ತು ಈಗ ಆಪಲ್‌ನ “ನನ್ನನ್ನು ಹುಡುಕಿ” ತಂತ್ರಜ್ಞಾನವನ್ನು ಬೆಂಬಲಿಸುತ್ತದೆ, ಇದು ತಪ್ಪಾಗಿದ್ದರೆ ಅದನ್ನು ಪತ್ತೆಹಚ್ಚಲು ಸುಲಭವಾಗುತ್ತದೆ.
ಟೂಲ್‌ಸೆಟ್ ಅನ್ನು ತರಲು ಪೆನ್ಸಿಲ್ ಅನ್ನು ಹಿಂಡಬಹುದು. ಪೆನ್ಸಿಲ್ ಕಾರ್ಯ ನಿರ್ವಹಿಸಿದೆ ಎಂಬುದನ್ನು ತಿಳಿಸಲು ಹ್ಯಾಪ್ಟಿಕ್ ಎಂಜಿನ್ ಕಂಪನವನ್ನು ನೀಡುತ್ತದೆ. ಇದು ಟಿಲ್ಟಿಂಗ್ ಮತ್ತು ತಿರುಗುವಿಕೆಯನ್ನು ಪತ್ತೆಹಚ್ಚಲು ನಿರ್ಮಿಸಲಾದ ಗೈರೊಸ್ಕೋಪ್ ಅನ್ನು ಹೊಂದಿದೆ.

ಪೆನ್ಸಿಲ್ ಮೆನುಗಳನ್ನು ಪ್ರವೇಶಿಸಲು ಸ್ಕ್ವೀಜ್ ವೈಶಿಷ್ಟ್ಯ, ಸ್ಪರ್ಶ ಪ್ರತಿಕ್ರಿಯೆಗಾಗಿ ಹ್ಯಾಪ್ಟಿಕ್ ಪ್ರತಿಕ್ರಿಯೆ, ಬ್ರಷ್ ಆಕಾರಗಳನ್ನು ಬದಲಾಯಿಸಲು ಪೆನ್ಸಿಲ್ ಅನ್ನು ರೋಲ್ ಮಾಡುವ ಸಾಮರ್ಥ್ಯ ಮತ್ತು ಹೆಚ್ಚಿನ ಅನುಕೂಲಕ್ಕಾಗಿ ಫೈಂಡ್ ಮೈ ನೊಂದಿಗೆ ಏಕೀಕರಣದಂತಹ ಹೊಸ ಕಾರ್ಯಗಳನ್ನು ನೀಡುತ್ತದೆ. ಆಪಲ್ ಪೆನ್ಸಿಲ್ ಪ್ರೊ ಬೆಲೆ 129 ಡಾಲರ್ ಆಗಿದೆ.

ಇದನ್ನೂ ಓದಿ: High-tech Gadget: ಸೆಕೆಗೆ ಎಸಿ, ಫ್ಯಾನ್‌, ಕೂಲರ್‌ ಸಾಕಾಗ್ತಿಲ್ವಾ..? ಹಾಗಿದ್ರೆ ಇಲ್ಲಿದೆ ನೋಡಿ ಹೈಟೆಕ್‌ ಗ್ಯಾಜೆಟ್‌


6. ಮ್ಯಾಜಿಕ್ ಕೀಬೋರ್ಡ್

ಹಲವು ಪ್ರಮುಖ ವೈಶಿಷ್ಟ್ಯಗಳನ್ನು ಉಳಿಸಿಕೊಂಡು ಸ್ಲೀಕರ್ ವಿನ್ಯಾಸ ಪರಿಕಲ್ಪನೆಯೊಂದಿಗೆ ನವೀಕರಿಸಿದ ಮ್ಯಾಜಿಕ್ ಕೀಬೋರ್ಡ್ ಅನ್ನು ಪರಿಚಯಿಸಲಾಗುತ್ತಿದೆ. ಹೊಸ ಆವೃತ್ತಿಯು ಫಂಕ್ಷನ್ ರೋ, ಅಲ್ಯೂಮಿನಿಯಂ ಪಾಮ್ ರೆಸ್ಟ್ ಮತ್ತು ಹ್ಯಾಪ್ಟಿಕ್ ಪ್ರತಿಕ್ರಿಯೆಯೊಂದಿಗೆ ಟ್ರ್ಯಾಕ್‌ಪ್ಯಾಡ್ ಅನ್ನು ಒಳಗೊಂಡಿದೆ, ಇದು ಮ್ಯಾಕ್‌ಬುಕ್ ಅನ್ನು ಬಳಸುವಂತಹ ಅನುಭವವನ್ನು ನೀಡುತ್ತದೆ. ಮ್ಯಾಜಿಕ್ ಕೀಬೋರ್ಡ್‌ಗಳು 299 (25,000 ರೂ. ) ಮತ್ತು 329 (27,475 ರೂ.) ಡಾಲರ್‌ಗೆ ಲಭ್ಯವಿದೆ.

Continue Reading

ಆಟೋಮೊಬೈಲ್

Nissan India : ಉಚಿತ ಏಸಿ ರಿಪೇರಿ ಮಾಡಿಸಿಕೊಳ್ಳಲು ನಿಸ್ಸಾನ್ ಕಾರು ಮಾಲೀಕರಿಗೆ ಇಲ್ಲಿದೆ ಅವಕಾಶ

Nissan India: ಉಚಿತ ಏಸಿ ತಪಾಸಣಾ ಕಾರ್ಯಾಗಾರ ಏಪ್ರಿಲ್ 15ರಿಂದಲೇ ಆರಂಭಗೊಂಡಿದ್ದು ಜೂನ್ 15ರವರೆಗೆ ನಡೆಯಲಿದೆ. ನಿಸ್ಸಾನ್ ಗ್ರಾಹಕರು ವಿವಿಧ ಶ್ರೇಣಿಗಳ ಸರ್ವೀಸ್ ಗಳು ಮತ್ತು ರಿಯಾಯಿತಿ ಪಡೆಯುವ ಭಾರತದಾದ್ಯಂತ ಇರುವ ಎಲ್ಲಾ ನಿಸ್ಸಾನ್ ಅಧಿಕೃತ ಸರ್ವೀಸ್ ವರ್ಕ್ ಶಾಪ್ ಗಳಲ್ಲಿ ಈ ಸೌಲಭ್ಯ ಲಭ್ಯವಿದೆ.

VISTARANEWS.COM


on

Nissan India
Koo

ಬೆಂಗಳೂರು: ನಿಸ್ಸಾನ್ ಮೋಟಾರ್ ಇಂಡಿಯಾ (Nissan India) ದೇಶಾದ್ಯಂತ ಇರುವ ತನ್ನ ಗ್ರಾಹಕರಿಗೆ ಎರಡು ತಿಂಗಳ ಕಾಲ ಉಚಿತ ಏಸಿ ತಪಾಸಣಾ ಕಾರ್ಯಾಗಾರ ಆಯೋಜಿಸಿದೆ. ಆ ಮೂಲಕ ಗ್ರಾಹಕ ತೃಪ್ತಿಯನ್ನು ಬಯಸು ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ನಿಸ್ಸಾನ್ ಉಚಿತ ಏಸಿ ತಪಾಸಣಾ ಕಾರ್ಯಾಗಾರ ಏಪ್ರಿಲ್ 15ರಿಂದಲೇ ಆರಂಭಗೊಂಡಿದ್ದು ಜೂನ್ 15ರವರೆಗೆ ನಡೆಯಲಿದೆ. ನಿಸ್ಸಾನ್ ಗ್ರಾಹಕರು ವಿವಿಧ ಶ್ರೇಣಿಗಳ ಸರ್ವೀಸ್ ಗಳು ಮತ್ತು ರಿಯಾಯಿತಿ ಪಡೆಯುವ ಭಾರತದಾದ್ಯಂತ ಇರುವ ಎಲ್ಲಾ ನಿಸ್ಸಾನ್ ಅಧಿಕೃತ ಸರ್ವೀಸ್ ವರ್ಕ್ ಶಾಪ್ ಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ನಿಸ್ಸಾನ್‌ನ ನುರಿತ ಮತ್ತು ತರಬೇತಿ ಪಡೆದ ಸರ್ವೀಸ್ ಉದ್ಯೋಗಿಗಳು ನಿಸ್ಸಾನ್ ನಿಜವಾದ ಬಿಡಿಭಾಗಗಳನ್ನು ಬಳಸಿಕೊಂಡು ಏಸಿ ತಪಾಸಣೆ ಶಿಬಿರವನ್ನು ನಡೆಸಿಕೊಡುತ್ತಾರೆ.

ಎಲ್ಲಾ ನಿಸ್ಸಾನ್ ಮತ್ತು ಡಾಟ್ಸನ್ ವಾಹನ ಮಾಲೀಕರು ನಿಸ್ಸಾನ್ ಒನ್ ಆ್ಯಪ್ ಅಥವಾ ನಿಸ್ಸಾನ್ ಮೋಟಾರ್ ಇಂಡಿಯಾ ವೆಬ್‌ಸೈಟ್ (www.nissan.in) ಮೂಲಕ ತಪಾಸಣೆ ಪಡೆಯಲು ಸರ್ವೀಸ್ ಅಪಾಯಿಂಟ್‌ಮೆಂಟ್ ಅನ್ನು ಪಡೆಯಬಹುದು. ಇದರಿಂದಾಗಿ ಗ್ರಾಹಕರು ಯಾವುದೇ ತೊಂದರೆ ಇಲ್ಲದೆ ನಿಸ್ಸಾನ್ ಮಾಲೀಕತ್ವವನ್ನು ಅನುಭವಿಸುವ ಸೌಕರ್ಯ ಪಡೆಯುವುದಲ್ಲದೆ, ಈ ಉಪಕ್ರಮವು ಬ್ರಾಂಡ್ ಮೇಲೆ ಗ್ರಾಹಕರು ಇಟ್ಟಿರುವ ವಿಶ್ವಾಸಕ್ಕೆ ಸಣ್ಣ ಪ್ರಮಾಣದ ಕೊಡುಗೆಯೂ ಆಗಿದೆ. ಈ ಸರ್ವೀಸ್ ಶಿಬಿರಗಳು ಎಲ್ಲಾ ನಿಸ್ಸಾನ್ ಮತ್ತು ಡಾಟ್ಸನ್ ಬ್ರಾಂಡ್ ವಾಹನಗಳಿಗೆ ಸರ್ವೀಸ್ ಒದಗಿಸುವ ಕಂಪನಿಯ ವ್ಯಾಪಕವಾದ 120 ಸರ್ವೀಸ್ ವರ್ಕ್ ಶಾಪ್ ಗಳಲ್ಲಿಯೂ ನಡೆಯಲಿದೆ.

ಇದನ್ನೂ ಓದಿ: Air Purifier: ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌ ಏಕೆ ಅಗತ್ಯ ಗೊತ್ತೆ?

ಶಿಬಿರವು ಉಚಿತ ಕಾರ್ ಟಾಪ್ ವಾಶ್ ಅನ್ನು ಕೂಡ ಒಳಗೊಂಡಿದೆ. ಜೊತೆಗೆ ಸಮಗ್ರ 20-ಪಾಯಿಂಟ್ ತಪಾಸಣೆಯನ್ನು ಮಾಡಲಾಗುತ್ತದೆ. ಪಿಎಂಎಸ್ (ಪೀರಿಯಾಡಿಕಲ್ ಮೇಂಟನೆನ್ಸ್ ಸರ್ವೀಸ್) ಆಯ್ಕೆ ಮಾಡುವ ಗ್ರಾಹಕರಿಗೆ ಉಚಿತ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯ ಕೂಡ ನೀಡಲಾಗುತ್ತದೆ. ಹೆಚ್ಚುವರಿಯಾಗಿ, ಗ್ರಾಹಕರು ಶೇ.20ರವರೆಗೆ ಭಾಗಗಳು/ಪರಿಕರಗಳ ಮೇಲೆ ರಿಯಾಯಿತಿ (ಡೀಲರ್ ತೀರ್ಮಾನದ ಪ್ರಕಾರ) ಪಡೆಯಬಹುದು. ಕಾರ್ಮಿಕ ಶುಲ್ಕಗಳ ಮೇಲೆ 20% ವರೆಗೆ ಮತ್ತು ಮೌಲ್ಯವರ್ಧಿತ ಸೇವೆಗಳ ಮೇಲೆ (ವಿಎಎಸ್) 10% ವರೆಗೆ ರಿಯಾಯಿತಿ ಪಡೆಯಬಹುದು. ಕಂಪನಿಯು ಎಲ್ಲಾ ನಿಸ್ಸಾನ್ ಮತ್ತು ಡಾಟ್ಸನ್ ವಾಹನಗಳು ಈ ವಿಶೇಷ ಕೊಡುಗೆಗಳ ಲಾಭವನ್ನು ಪಡೆಯಬೇಕು ಮತ್ತು ಅದರಿಂದ ವಾಹನಗಳ ಕಾರ್ಯಕ್ಷಮತೆ ಉತ್ತಗೊಳಿಸಬೇಕು, ವಾಹನಗಳು ಆಯುಷ್ಯ ಹೆಚ್ಚಿಸಬೇಕು ಎಂದು ಹೇಳಿದೆ.

Continue Reading

ಆಟೋಮೊಬೈಲ್

Air Purifier: ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌ ಏಕೆ ಅಗತ್ಯ ಗೊತ್ತೆ?

ಕಾರಿನಲ್ಲಿರುವ ಏರ್ ಪ್ಯೂರಿಫೈಯರ್ ಗಾಳಿಯ ಗುಣಮಟ್ಟವನ್ನು ಸುಧಾರಿಸುವಲ್ಲಿ ಮತ್ತು ಆರೋಗ್ಯವನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌ಗಳು (Air Purifier) ಅಗತ್ಯವಾಗಿರುವುದಕ್ಕೆ ಕೆಲವು ಪ್ರಮುಖ ಕಾರಣಗಳೂ ಇವೆ. ಕಾರಿನಲ್ಲಿ ಓಡಾಡುವವರಿಗೆ ಏರ್‌ ಪ್ಯೂರಿಫೈಯರ್‌ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

By

Air Purifier
Koo

ವಾಯು ಮಾಲಿನ್ಯವು (Air pollution) ಈಗ ಜಾಗತಿಕವಾಗಿ ಒಂದು ಸಮಸ್ಯೆಯಾಗಿದೆ. ಹೊರಾಂಗಣ ಪರಿಸರವನ್ನು ಮಾತ್ರವಲ್ಲದೆ ಇದು ನಮ್ಮ ಮನೆ (home) ಮತ್ತು ವಾಹನಗಳ (vehicles) ಒಳಗಿನ ಗಾಳಿಯ ಮೇಲೂ ಪರಿಣಾಮ ಬೀರುತ್ತಿದೆ. ಒಳಾಂಗಣ ವಾಯು ಮಾಲಿನ್ಯವನ್ನು ಎದುರಿಸಲು ಅನೇಕ ಜನರು ತಮ್ಮ ಮನೆಗಳಲ್ಲಿ ಏರ್ ಪ್ಯೂರಿಫೈಯರ್‌ಗಳನ್ನು (Air Purifier) ಬಳಸಲು ಪ್ರಾರಂಭಿಸಿದ್ದಾರೆ. ಆದರೆ ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌ಗಳ ಅಗತ್ಯವನ್ನು ಸಾಮಾನ್ಯವಾಗಿ ಹೆಚ್ಚಿನವರು ಕಡೆಗಣಿಸುತ್ತಾರೆ.

ಕಲುಷಿತ ಗಾಳಿಯು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದ್ದು, ವಾಹನಗಳಲ್ಲಿ ಏರ್ ಪ್ಯೂರಿಫೈಯರ್ ಗಳ ಪ್ರಾಮುಖ್ಯತೆಯು ಎಲ್ಲರ ಗಮನ ಸೆಳೆಯುತ್ತಿದೆ. ಸ್ವಂತ ವಾಹನ ಚಾಲನೆ ಮಾಡುವಾಗ ವಿಶೇಷವಾಗಿ ಭಾರೀ ವಾಹನ ದಟ್ಟಣೆಯ ಪ್ರದೇಶಗಳಲ್ಲಿ ಸುತ್ತಮುತ್ತ ನಿರಂತರವಾಗಿ ಹಾನಿಕಾರಕ ಅನಿಲಗಳು ಮತ್ತು ಕಣಗಳು ಹೊರಸೂಸುತ್ತಿರುತ್ತದೆ. ಈ ಮಾಲಿನ್ಯಕಾರಕಗಳು ಕಾರಿನ ಕ್ಯಾಬಿನ್ ಅನ್ನು ಪ್ರವೇಶಿಸಬಹುದು. ಇದು ಒಳಗೆ ಕಲುಷಿತ ಗಾಳಿಯ ಸಂಗ್ರಹಕ್ಕೆ ಕಾರಣವಾಗುತ್ತದೆ. ಪರಿಸರದಲ್ಲಿರುವ ಧೂಳು, ಹೊಗೆ, ಬ್ಯಾಕ್ಟೀರಿಯಾ, ವೈರಸ್‌ಗಳು ಮತ್ತು ಅಲರ್ಜಿನ್‌ಗಳಂತಹ ಅಂಶಗಳಿಂದ ಇದು ಮತ್ತಷ್ಟು ಹದಗೆಡುತ್ತದೆ.
ಕಾರಿನಲ್ಲಿರುವ ಏರ್ ಪ್ಯೂರಿಫೈಯರ್ ಗಾಳಿಯ ಗುಣಮಟ್ಟವನ್ನು ಸುಧಾರಿಸುವಲ್ಲಿ ಮತ್ತು ಆರೋಗ್ಯವನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌ಗಳು ಅಗತ್ಯವಾಗಿರುವುದಕ್ಕೆ ಕೆಲವು ಪ್ರಮುಖ ಕಾರಣಗಳೂ ಇವೆ.


1. ಮಾಲಿನ್ಯಕಾರಕಗಳನ್ನು ಕಡಿಮೆ ಮಾಡುತ್ತದೆ

ಗಾಳಿಯ ಶುದ್ಧೀಕರಣವು ಕಾರಿನೊಳಗಿನ ಗಾಳಿಯಿಂದ ಧೂಳು, ಹೊಗೆ, ಪರಾಗ, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಂತಹ ಮಾಲಿನ್ಯಕಾರಕಗಳನ್ನು ಪರಿಣಾಮಕಾರಿಯಾಗಿ ಫಿಲ್ಟರ್ ಮಾಡುತ್ತದೆ. ಚಾಲನೆ ಮಾಡುವಾಗ ನೀವು ಉಸಿರಾಡುವ ಹಾನಿಕಾರಕ ಕಣಗಳ ಸಾಂದ್ರತೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

2. ಅಲರ್ಜಿಕಾರಕಗಳನ್ನು ತೆಗೆದು ಹಾಕುತ್ತದೆ

ಅಲರ್ಜಿ ಅಥವಾ ಆಸ್ತಮಾದಂತಹ ಉಸಿರಾಟದ ತೊಂದರೆ ಹೊಂದಿರುವ ವ್ಯಕ್ತಿಗಳಿಗೆ ಕಲುಷಿತ ಗಾಳಿಯು ಅಸ್ವಸ್ಥತೆ ಮತ್ತು ಆರೋಗ್ಯ ಸಮಸ್ಯೆಗಳನ್ನು ಪ್ರಚೋದಿಸುತ್ತದೆ. ಏರ್ ಪ್ಯೂರಿಫೈಯರ್ ಗಾಳಿಯಿಂದ ಅಲರ್ಜಿಯನ್ನು ತೆಗೆದುಹಾಕುತ್ತದೆ. ಸೂಕ್ಷ್ಮ ವ್ಯಕ್ತಿಗಳಿಗೆ ಸ್ವಚ್ಛ ಮತ್ತು ಸುರಕ್ಷಿತ ವಾತಾವರಣವನ್ನು ಸೃಷ್ಟಿಸುತ್ತದೆ.

3. ವಾಸನೆ ತೊಡೆದು ಹಾಕುವುದು

ಮಾಲಿನ್ಯಕಾರಕಗಳ ಜೊತೆಗೆ ಏರ್ ಪ್ಯೂರಿಫೈಯರ್‌ಗಳು ಕಾರಿನೊಳಗಿನ ಅಹಿತಕರ ವಾಸನೆಯನ್ನು ತೆಗೆದು ಹಾಕುತ್ತದೆ. ಅದು ಹೊಗೆ, ಆಹಾರ ಅಥವಾ ಇತರ ವಾಸನೆಯ ಪದಾರ್ಥಗಳು ತೊಡೆದು ಹಾಕಿ ಗಾಳಿ ಶುದ್ಧೀಕರಣ ಮಾಡಿ ಸುವಾಸನೆಯನ್ನು ಬೀರುತ್ತದೆ. ವಾಹನ ಚಾಲನೆಯ ಅನುಭವವನ್ನು ಹೆಚ್ಚಿಸುತ್ತದೆ.

4. ಆರೋಗ್ಯದ ಅಪಾಯಗಳ ವಿರುದ್ಧ ರಕ್ಷಣೆ

ಕಲುಷಿತ ಗಾಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಉಸಿರಾಟದ ಸಮಸ್ಯೆಗಳು, ಅಲರ್ಜಿಗಳು, ಆಸ್ತಮಾ ಮತ್ತು ಹೃದಯರಕ್ತನಾಳದ ಕಾಯಿಲೆಗಳು ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಕಾರಿನೊಳಗಿನ ಗಾಳಿಯನ್ನು ಶುದ್ಧೀಕರಿಸುವ ಮೂಲಕ ಈ ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ಚಾಲನಾ ವಾತಾವರಣವನ್ನು ಉತ್ತೇಜಿಸಲು ಏರ್ ಪ್ಯೂರಿಫೈಯರ್ ಸಹಾಯ ಮಾಡುತ್ತದೆ.

5. ಚಾಲನಾ ಸೌಕರ್ಯವನ್ನು ಹೆಚ್ಚಿಸುವುದು

ಕಾರಿನೊಳಗೆ ಶುದ್ಧ ಮತ್ತು ತಾಜಾ ಗಾಳಿಯು ಹೆಚ್ಚು ಆರಾಮದಾಯಕ ಮತ್ತು ಆನಂದದಾಯಕ ಚಾಲನಾ ಅನುಭವಕ್ಕೆ ಕೊಡುಗೆ ನೀಡುತ್ತದೆ. ವಿಶೇಷವಾಗಿ ದೀರ್ಘ ಪ್ರಯಾಣದ ಸಮಯದಲ್ಲಿ ಅಥವಾ ಸವಾಲಿನ ಚಾಲನಾ ಪರಿಸ್ಥಿತಿಗಳಲ್ಲಿ ಇದು ಗಮನ ಮತ್ತು ಜಾಗರೂಕತೆಯನ್ನು ಸುಧಾರಿಸುತ್ತದೆ.

ಇದನ್ನೂ ಓದಿ: Xiaomi EV: ತಿಂಗಳಲ್ಲಿ 75 ಸಾವಿರ ಆರ್ಡರ್ ಸ್ವೀಕರಿಸಿದ ಕ್ಸಿಯೋಮಿ ಎಸ್‌ಯು 7 ಎಲೆಕ್ಟ್ರಿಕ್‌ ಕಾರು; ಟೆಸ್ಲಾಗಿಂತ ಅಗ್ಗ!

6. ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌

ಕಾರು ತಯಾರಕರು ಈಗ ತಮ್ಮ ವಾಹನದ ವೈಶಿಷ್ಟ್ಯಗಳ ಭಾಗವಾಗಿ ಇನ್‌ಬಿಲ್ಟ್‌ ಆಗಿ ಏರ್ ಪ್ಯೂರಿಫೈಯರ್‌ಗಳನ್ನು ನೀಡುತ್ತಿದ್ದಾರೆ. ಹೆಚ್ಚುವರಿಯಾಗಿ ಕಾರುಗಳಲ್ಲಿ ಬಳಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಪೋರ್ಟಬಲ್ ಮತ್ತು ಕಾಂಪ್ಯಾಕ್ಟ್ ಏರ್ ಪ್ಯೂರಿಫೈಯರ್‌ಗಳು ಇವೆ. ಚಾಲಕರು ತಮ್ಮ ವಾಹನದ ಮಾದರಿಯನ್ನು ಲೆಕ್ಕಿಸದೆಯೇ ಶುದ್ಧ ಗಾಳಿಯನ್ನು ಆನಂದಿಸಲು ಇದು ಅನುವು ಮಾಡಿಕೊಡುತ್ತದೆ.

Continue Reading
Advertisement
Akshaya Tritiya Fashion
ಫ್ಯಾಷನ್20 mins ago

Akshaya Tritiya Fashion: ಅಕ್ಷಯ ತೃತೀಯಕ್ಕೆ ಬಂತು ಬಂಗಾರದ ಕಾಸಗಲದ ಆಕರ್ಷಕ ಮೂಗಿನ ಸ್ಟಡ್ಸ್

SSLC Result 2024
ಶಿಕ್ಷಣ27 mins ago

SSLC Result 2024: ಎಸ್‌ಎಸ್‌ಎಲ್‌ಸಿ ‌ಉತ್ತರ ಪತ್ರಿಕೆ ಮರು ಮೌಲ್ಯಮಾಪನ, ಮರುಎಣಿಕೆಗೆ ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಷ್ಟೆ ಅವಕಾಶ

MS Dhoni
ಕ್ರೀಡೆ27 mins ago

MS Dhoni: ಧೋನಿಗೆ ವಿಶೇಷ ಉಡುಗೊರೆ ನೀಡಿದ ಅಭಿಮಾನಿ; ವಿಡಿಯೊ ವೈರಲ್​

Janhvi Kapoor Wears Cricket-Themed Dress
ಬಾಲಿವುಡ್33 mins ago

Janhvi Kapoor: ಕ್ರಿಕೆಟ್ ಥಿಮ್‌ ಡ್ರೆಸ್‌ನಲ್ಲಿ ಪೋಸ್‌ ಕೊಟ್ಟ ಜಾನ್ವಿ ಕಪೂರ್; ಚೆಂಡಿದೆ ಬೆನ್ನ ಹಿಂದೆ!

Job Alert
ಉದ್ಯೋಗ59 mins ago

Job Alert: 506 ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿಯಿಂದ ಅರ್ಜಿ ಆಹ್ವಾನ; ಮೇ 14ರೊಳಗೆ ಅಪ್ಲೈ ಮಾಡಿ

Kannada Serials TRP Puttakkana makkalu TOP one
ಕಿರುತೆರೆ1 hour ago

Kannada Serials TRP: ಟಾಪ್‌ 3ರಲ್ಲಿ ಇವೆ ಎರಡು ಧಾರಾವಾಹಿಗಳು; ʻಪುಟ್ಟಕ್ಕನ ಮಕ್ಕಳುʼ ಸೀರಿಯಲ್‌ನದ್ದೇ ಪಾರುಪತ್ಯ!

Self Harming Man commits suicide after falling from PG in Bengaluru
ಬೆಂಗಳೂರು1 hour ago

Self Harming: ಕಟ್ಟಡದ ಮೇಲಿಂದ ಬಿದ್ದು ಯುವಕ ಸೂಸೈಡ್‌

Atrocity on women
ದೇಶ1 hour ago

Atrocity on women: ಟಿಎಂಸಿ ಮುಖಂಡರ ವಿರುದ್ಧ ಅತ್ಯಾಚಾರ ಕೇಸ್‌; ಯೂ ಟರ್ನ್‌ ಹೊಡೆದ ದೂರುದಾರೆ

Money Guide
ಮನಿ-ಗೈಡ್1 hour ago

Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Virender Sehwag
ಕ್ರಿಕೆಟ್1 hour ago

Virender Sehwag: ಏಕದಿನ ವಿಶ್ವಕಪ್​ ಸೋಲಿಗೆ ಕೊಹ್ಲಿ, ರಾಹುಲ್​ ನೇರ ಕಾರಣ ಎಂದ ಮಾಜಿ ಆಟಗಾರ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

SSLC Result 2024 what is the reason for most of the students fail in SSLC
ಕರ್ನಾಟಕ4 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ4 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ4 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು5 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ5 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು6 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ2 days ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ2 days ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ2 days ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

ಟ್ರೆಂಡಿಂಗ್‌