Explainer: Johnny Depp Amber Heard- ಹಾಲಿವುಡ್‌ನ ಮುದ್ದಾದ ಜೋಡಿ ಅತಿದೊಡ್ಡ ವೈರಿಗಳಾದ ಕತೆ - Vistara News

ಪ್ರಮುಖ ಸುದ್ದಿ

Explainer: Johnny Depp Amber Heard- ಹಾಲಿವುಡ್‌ನ ಮುದ್ದಾದ ಜೋಡಿ ಅತಿದೊಡ್ಡ ವೈರಿಗಳಾದ ಕತೆ

ಚಿತ್ರರಸಿಕರ ಮನ ಗೆದ್ದ ಜಾನಿ ಡೆಪ್‌ ಮತ್ತು ಬೆಳದಿಂಗಳಿನ ಹಾಗಿರುವ ಆಂಬರ್‌ ಹರ್ಡ್‌ ಎಂಬ ಚೆಲುವೆ ನಡುವಿನ ರೊಮ್ಯಾನ್ಸ್‌, ಬಡಿದಾಟ, ಮಾನನಷ್ಟ ಇತ್ಯಾದಿ ಹಾಲಿವುಡ್‌ ಸಿನೆಮಾಗೆ ಕಡಿಮೆಯಿಲ್ಲ.

VISTARANEWS.COM


on

Johnny Depp Amber Heard
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಖ್ಯಾತ ಹಾಲಿವುಡ್‌ ನಟ ಜಾನಿ ಡೆಪ್‌ ಮತ್ತು ಅವರ ಮಾಜಿ ಪತ್ನಿ ಆ್ಯಂಬರ್‌ ಹರ್ಡ್‌ ನಡುವಿನ ಬಹು ಚರ್ಚಿತ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಡೆಪ್‌ ಅವರಿಗೆ ಗೆಲುವಾಗಿದೆ. ತಾನೂ ಕೌಟುಂಬಿಕ ದೌರ್ಜನ್ಯ ಅನುಭವಿಸಿದ್ದಾಗಿ ಆ್ಯಂಬರ್‌ ಹರ್ಡ್‌ ಅವರು ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯಲ್ಲಿ 2018ರಲ್ಲಿ ಬರೆದ ಲೇಖನದಿಂದ ಹುಟ್ಟಿದ ವಿವಾದ ಇದೀಗ ನಾಲ್ಕು ವರ್ಷಗಳ ಬಳಿಕ ಇತ್ಯರ್ಥ ಕಂಡಿದೆ. ವರ್ಜೀನಿಯಾದ ಫೈರ್‌ಫಾಕ್ಸ್‌ನಲ್ಲಿರುವ ನ್ಯಾಯಾಲಯ ಜಾನಿ ಡೆಪ್‌ಅವರಿಗೆ 15 ಮಿಲಿಯನ್‌ ಅಮೆರಿಕನ್‌ ಡಾಲರ್‌(ಸುಮಾರು 116 ಕೋಟಿ ರೂ.) ಪರಿಹಾರ ಧನ ನೀಡುವಂತೆ ಹರ್ಡ್‌ ಅವರಿಗೆ ಸೂಚಿಸಿದೆ. ಇದೇ ವೇಳೆ, ಪತ್ರಿಕೆಯಲ್ಲಿ ಬರೆದಿರುವ ವಿಚಾರಗಳೆಲ್ಲ ಸುಳ್ಳು ಎಂದು ಪ್ರತಿವಾದ ಮಾಡಿದ್ದನ್ನು ಪ್ರಶ್ನಿಸಿ ಆ್ಯಂಬರ್‌ ಹರ್ಡ್‌ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಹರ್ಡ್‌ಅವರಿಗೂ ಗೆಲುವಾಗಿದೆ. ಡೆಪ್‌ ಅವರು 2 ಮಿಲಿಯನ್‌ಅಮೆರಿಕನ್‌(15 ಕೋಟಿ ರೂ.) ಡಾಲರ್‌ ಪರಿಹಾರವನ್ನು ಹರ್ಡ್‌ಗೆ ನೀಡಬೇಕು ಎಂದು ಕೋರ್ಟ್‌ ಆದೇಶಿಸಿದೆ.

ಇವರ ನಡುವಿನ ಈ ವ್ಯಾಜ್ಯ ಹೇಗೆ ಆರಂಭವಾಯ್ತು? ಅದಕ್ಕೂ ಮೊದಲು, ಇವರು ಭೇಟಿಯಾದದ್ದು ಯಾವಾಗ, ಮದುವೆಯಾದದ್ದು ಎಂದು, ಬೇರೆಯಾದದ್ದು ಯಾಕೆ? ಅವರ ನಡುವೆ ಯಾಕೆ ಜಗಳ ನಡೀತಿತ್ತು?

ಯಾರು ಈ ಜಾನಿ ಡೆಪ್‌?

ಹಾಲಿವುಡ್‌ ನಟ ಜಾನ್‌ ಕ್ರಿಸ್ಟೋಫರ್‌ ಡೆಪ್‌ಗೆ ಈಗ 59 ವರ್ಷ. ಡೆಪ್‌ ನಟ ಮಾತ್ರವಲ್ಲ, ನಿರ್ಮಾಪಕ ಮತ್ತು ಸಂಗೀತ ನಿರ್ದೇಶಕರೂ ಹೌದು. ʼನೈಟ್‌ಮೇರ್‌ ಆನ್‌ ಎಲ್ಮ್‌ ಸ್ಟ್ರೀಟ್‌ʼ ಎಂಬ ಹಾರರ್‌ ಸಿನಿಮಾದೊಂದಿಗೆ 1984ರಲ್ಲಿ ಅವರು ಚಿತ್ರರಂಗ ಪ್ರವೇಶಿಸಿದರು. 2012ರ ಹೊತ್ತಿಗೆ ಜಗತ್ತಿನ ಅತಿ ದೊಡ್ಡ ಸಿನಿಮಾ ತಾರೆಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂದು ಅವರನ್ನು ಗಿನ್ನೆಸ್‌ ದಾಖಲೆ ಗುರುತಿಸಿತ್ತು. ಒಟ್ಟಾರೆ 36 ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇವರು ನಟಿಸಿರುವ ʼಪೈರೇಟ್ಸ್‌ ಆಫ್‌ ದಿ ಕೆರಿಬಿಯನ್‌ʼ ಸೀರೀಸ್‌ ಜಗದ್ವಿಖ್ಯಾತವಾಗಿದೆ. ಬಾಕ್ಸಾಫೀಸ್‌ನಲ್ಲಿ ಸಾಕಷ್ಟು ಗಳಿಕೆ ಮಾಡಿದೆ. ಇದರಲ್ಲಿ ಡೆಪ್‌ ಮಾಡಿದ ಕಡಲುಗಳ್ಳ ಭೂತದ ಪಾತ್ರ ಮಕ್ಕಳಿಗೂ ಚಿರಪರಿಚಿತ.

ಯಾರೀಕೆ ಆಂಬರ್‌ ಹರ್ಡ್‌?

ಆ್ಯಂಬರ್‌ ಹರ್ಡ್‌ ಕೂಡಾ ಉತ್ತಮ ನಟಿ. ಈಕೆ ‘ಜಸ್ಟಿಸ್‌ ಲೀಗ್‌ʼ ಮತ್ತು ʼಗೋನ್‌ ಗರ್ಲ್‌ʼ ಫಿಲಂನ ಲೀಡ್‌ ಕ್ಯಾರೆಕ್ಟರ್‌ ಆಗಿ ಹೆಸರು ಮಾಡಿದವಳು. ರನ್‌ ಡೈರಿ, ಪೈನಾಪಲ್‌ ಎಕ್ಸ್‌ಪ್ರೆಸ್‌, ಝೋಂಬಿಲ್ಯಾಂಡ್‌, ಆಕ್ವಾಮ್ಯಾನ್ ಮೊದಲಾದ ಫಿಲಂಗಳಲ್ಲಿ ನಟಿಸಿದ್ದಾಳೆ. ಮಹಿಳೆಯರ ಹಾಗೂ ಮಕ್ಕಳ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಇತಿಹಾಸವನ್ನೂ ಹೊಂದಿದ್ದಾಳೆ. ಸಿರಿಯಾದ ನಿರಾಶ್ರಿತರ ಪರವಾಗಿ ಕೆಲಸ ಮಾಡಿದ್ದಾಳೆ, ಮಾನವ ಹಕ್ಕುಗಳ ಸಂಘಟನೆಗಳಲ್ಲಿ ಸಕ್ರಿಯಳಾಗಿದ್ದಾಳೆ. ನಂತರ ಒಂದು ಹೆಣ್ಣು ಮಗುವನ್ನೂ ಸರೊಗಸಿ ಮೂಲಕ ಪಡೆದಿದ್ದಾಳೆ.

ಇವರಿಬ್ಬರೂ ಜೋಡಿ ಆಗೋಕೆ ಮುನ್ನವೇ ಹಲವಾರು ಡೇಟಿಂಗ್‌, ಪ್ರೇಮ ಪ್ರಕರಣಗಳು ಇವರ ಬದುಕಿನಲ್ಲಿ ನಡೆದಿದ್ದವು. ಲಾರಿ ಆನ್‌ ಅಲಿಸನ್‌ ಎಂಬ ಮೇಕ ಪ್‌ಕಲಾವಿದೆಯನ್ನು ಜಾನಿ ಡೆಪ್‌ ಮದುವೆಯಾಗಿ ಎರಡು ವರ್ಷದ ಬಳಿಕ ವಿಚ್ಛೇದನ ಪಡೆದಿದ್ದ. ನಂತರ ಮೂರ್ನಾಲ್ಕು ನಟಿಯರ ಜೊತೆ ಡೇಟಿಂಗ್‌, ಪ್ರಣಯ ಇತ್ಯಾದಿಗಳನ್ನು ನಡೆಸಿ ವೆನೆಸ್ಸಾ ಪ್ಯಾರಾಡಿಸ್‌ ಎಂಬ ನಟಿಯನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಪಡೆದ. 2012ರಲ್ಲಿ ಈಕೆಯಿಂದ ಡೈವೋರ್ಸ್‌ ಪಡೆದ. ಆ ಹೊತ್ತಿಗಾಗಲೇ ಅವನ ಬದುಕಿನಲ್ಲಿ ಆಂಬರ್‌ ಹರ್ಡ್‌ ಪ್ರವೇಶಿಸಿದ್ದಳು.

ಆ ನಟಿಗೆ ಹುಡುಗಿಯರ ಸಹವಾಸವೂ ಇತ್ತು!

ಅತ್ತ ಆಂಬರ್‌ ಹರ್ಡ್‌ಗೂ ಜಾನಿ ಡೆಪ್‌ ಮೊದಲ ಸಂಗಾತಿಯೇನಲ್ಲ. ಇಲ್ಲಿ ತಿಳಿಯಲೇಬೇಕಾದ ವಿಚಾರ ಅಂದರೆ, ಆಂಬರ್‌ ಹರ್ಡ್‌ ಬೈಸೆಕ್ಷುವಲ್‌ ವ್ಯಕ್ತಿ. ಅಂದರೆ ಗಂಡಿನ ಜೊತೆಗೂ ಹೆಣ್ಣಿನ ಜೊತೆಗೂ ಸಮಾನವಾಗಿ ದೈಹಿಕ ಸಂಬಂಧ ಹೊಂದುವ ವ್ಯಕ್ತಿಗಳು. ಆಂಬರ್‌ ಹರ್ಡ್‌, ತಾಸ್ಯಾ ವಾನ್‌ರೀ ಎಂಬ ಛಾಯಾಗ್ರಾಹಕಿಯ ಜೊತೆಗೆ ನಾಲ್ಕು ವರ್ಷ ಸಂಬಂಧ ಹೊಂದಿದ್ದಳು. ಡೆಪ್‌ ಜೊತೆಗೆ ವಿವಾಹ ವಿಚ್ಛೇದನ ಪಡೆದ ನಂತರವೂ ಕಾರಾ ಡೆಲೆವಿನೆ ಎಂಬ ನಟಿ ಹಾಗೂ ಮಾಡೆಲ್‌ ಜೊತೆಗೂ ದೈಹಿಕ ಸಂಬಂಧ ಹೊಂದಿದ್ದಳು. ಇವರಿಬ್ಬರ ನಡುವೆ ಆಕೆ ದಾಂಪತ್ಯ ನಡೆಸಿದ್ದು ಜಾನಿ ಡೆಪ್‌ನ ಜಿೊತೆಗೆ.

ಜಾನಿ ಡೆಪ್- ‌ಹರ್ಡ್‌ ಜೋಡಿಯಾದುದು ಹೇಗೆ?

ಜಾನಿ ಡೆಪ್‌ ಮತ್ತು ಆಂಬರ್‌ ಹರ್ಡ್‌ರ ರೊಮ್ಯಾನ್ಸ್‌ ಶುರುವಾದುದು 2009ರಲ್ಲಿ. ʼದಿ ರನ್‌ ಡೈರಿʼ ಇವರಿಬ್ಬರೂ ಜೊತೆಯಾಗಿ ನಟಿಸಿದರು. ಡೆಪ್‌ ನಾಯಕ, ಹರ್ಡ್‌ ನಾಯಕಿಯಾಗಿ ನಟಿಸಿದ ಈ ಫಿಲಂ ಶೂಟಿಂಗ್‌ ಸೆಟ್‌ನಿಂದಲೇ ಇವರ ರೊಮ್ಯಾನ್ಸ್‌ ಶುರುವಾಯಿತು. ಶವರ್‌ನಲ್ಲಿ ನಿಂತುಕೊಂಡು ಕಿಸ್‌ ಮಾಡುವ ಸೀನ್‌ ಅದರಲ್ಲಿತ್ತು. ಆಗಲೇ ಅವರಿಬ್ಬರಿಗೂ ಓಹೋ ನಮ್ಮಿಬ್ಬರ ನಡುವೆ ಏನೋ ಇದೆ ಅನ್ನಿಸಲು ಶುರುವಾದದ್ದು. ʼʼಹರ್ಡ್‌ ನನ್ನ ಬಗ್ಗೆ ಕಾಳಜಿ ವಹಿಸುತ್ತಾಳೆ, ಪ್ರೀತಿಸುತ್ತಾಳೆ. ಅವಳು ಸ್ಮಾರ್ಟ್‌, ಫನ್ನಿ, ಅರ್ಥ ಮಾಡಿಕೊಳ್ಳುತ್ತಾಳೆ. ನಮ್ಮಿಬ್ಬರ ನಡುವೆ ತುಂಬಾ ಸಂಗತಿಗಳು ಕಾಮನ್‌ ಆಗಿವೆ..ʼʼ ಎಂದೆಲ್ಲ ಆಕೆಯ ಬಗೆಗೆ ಡೆಪ್‌ ಮಾತನಾಡಿದರು. ಎರಡು ವರ್ಷ ಇವರ ನಡುವೆ ಡೇಟಿಂಗ್‌ ನಡೆಯಿತು. ಈ ನಡುವೆ ತಮ್ಮ ಹಳೆಯ ಸಂಗಾತಿಗಳಿಂದ ಅವರು ಡೈವೋರ್ಸ್‌ ಪಡೆದರು. 2014ರಲ್ಲಿ ಡೆಪ್-‌ಹರ್ಡ್‌ ಮದುವೆಯಾದರು. ಲಾಸ್‌ಏಂಜಲೀಸ್‌ನಲ್ಲಿ ಹಾಗೂ ನಂತರ ಜಾನಿ ಡೆಪ್‌ನ ಖಾಸಗಿ ದ್ವೀಪವೊಂದರಲ್ಲಿ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮಗಳು ನಡೆದವು.

ಹಳಸಲು ಶುರುವಾದ ದಾಂಪತ್ಯ

ಆದರೆ ಆರಂಭದಿಂದಲೇ ಈ ದಾಂಪತ್ಯದಲ್ಲಿ ಅಪಶ್ರುತಿ ಆರಂಭವಾಗಿತ್ತು. ಮದುವೆಯಾದ ಮೊದಲ ದಿನದಿಂದಲೇ ಇದು ಅರವಿಗೆ ಬಂದಿತ್ತು. ಮದುವೆಯಾದ ಕೆಲವೇ ಗಂಟೆಗಳ ಬಳಿಕ ʼʼನಾನೀಗ ಆಕೆಗೆ ಮನಸ್ಸಿಗೆ ಬಂದಂತೆ ಹೊಡೆಯಬಹುದುʼʼ ಎಂದು ತನ್ನ ಆಪ್ತನೊಬ್ಬನ ಬಳಿ ಡೆಪ್‌ ಹೇಳಿದ್ದು ದಾಖಲಾಗಿತ್ತು.

ಮದುವೆ ಆಗಿ ಕೆಲವೇ ವಾರಗಳಲ್ಲಿ ಒಂದು ದಿನ, ಡೆಪ್‌ಕೈಯಲ್ಲಿದ್ದ ಒಂದು ಟ್ಯಾಟೂ ಬಗ್ಗೆ ಹರ್ಡ್‌ ಕ್ಯಾಶುಯಲ್ಲಾಗಿ ಪ್ರಶ್ನಿಸಿದಳು. ಆಗ ಕೋಪಗೊಂಡ ಡೆಪ್‌ ಮೊದಲ ಬಾರಿಗೆ ಆಕೆಯ ಕಪಾಲಕ್ಕೆ ಬಾರಿಸಿದ. ಹರ್ಡ್‌ಶಾಕ್‌ಗೆ ಒಳಗಾದಳು. ಅಂದಿನಿಂದಲೇ ಅವರಿಬ್ಬರ ಬದುಕಿನ ರೈಲಿನ ಹಳಿ ತಪ್ಪಿತು. 2016ರ ಮೇ ತಿಂಗಳಲ್ಲಿ ಹರ್ಡ್‌ ಪೊಲೀಸ್‌ ಠಾಣೆಗೆ ಧಾವಿಸಿ, ಡೆಪ್‌ ತನ್ನ ಮುಖಕ್ಕೆ ಫೋನ್‌ ಅನ್ನು ಎಸೆದದ್ದರಿಂದ ಉಂಟಾದ ಕಲೆಯನ್ನು ತೋರಿಸಿ, ಡೆಪ್‌ ವಿರುದ್ಧ ನಿರ್ಬಂಧ ಆರ್ಡರ್‌ ತೆಗೆದುಕೊಂಡಳು. ಇಬ್ಬರೂ ರಾಜಿ ಆಗೋಕೆ ಪ್ರಯತ್ನ ಮಾಡಿದರು. ಆದರೆ ಅವರ ಸಂಬಂಧ ಆಮೇಲೆ ಸರಿಯಾಗಲೇ ಇಲ್ಲ.

ಇನ್ನು ಮುಂದೆ ತಮ್ಮಿಂದ ಜೊತೆಯಾಗಿ ಬಾಳೋಕೆ ಸಾಧ್ಯವಿಲ್ಲ ಎಂದು 2017ರಲ್ಲಿ ಇಬ್ಬರೂ ಡೈವೋರ್ಸ್‌ ಫೈಲ್‌ ಮಾಡಿದರು. ಆಗಲೇ, ಇವರಿಬ್ಬರ ದಾಂಪತ್ಯದಲ್ಲಿ ನಡೆದ ಹೀನಾತಿಹೀನ ಜಗಳಗಳ ವಿವರಗಳು ಹೊರಬಿದ್ದದ್ದು. ಇಬ್ಬರೂ ಆಲ್ಕೋಹಾಲ್‌ ಸೇವಿಸಿ, ಡ್ರಗ್ಸ್‌ ಸೇವಿಸಿ ಮೈಮರೆತು ಬಂದು ಕಿತ್ತಾಡಿಕೊಳ್ಳುತ್ತಿದ್ದರು. ನನ್ನ ಕೆರಿಯರ್‌ ನಾಶ ಮಾಡಿದೆ ನೀನು ಎಂದು ಪರಸ್ಪರ ತಲೆಕೂದಲು ಹಿಡಿದು ಬಡಿದಾಡಿಕೊಳ್ಳುತ್ತಿದ್ದರು. ಜಾನಿ ಡೆಪ್‌ ಬಿಯರ್‌ ಬಾಟಲ್‌ಗಳಿಂದ ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದ. ನಿನಗೆ ಇನ್ಯಾರ ಜೊತೆಗೋ ಸಂಬಂಧ ಇದೆ ಎಂದು ಸಂಶಯಿಸಿ ಆಕೆಯ ತಲೆಕೂದಲು ಹಿಡಿದು ಕೀಳುತ್ತಿದ್ದ. ಮುಖಮೈಥುನ ಮಾಡುವಂತೆ ಬಲಾತ್ಕರಿಸುತ್ತಿದ್ದ. ಕುಡಿದು ಚಿತ್‌ ಆದಾಗ, ಕೊಕೇನ್‌ ಸೇವಿಸಿ ಹೈ ಆದಾಗ, ಮನೆಯ ಸಾಮಗ್ರಿಗಳನ್ನು ಮುರಿದುಹಾಕುತ್ತಿದ್ದ.

ಇದು ಹೇಸಿಗೆ ಹಾಸಿಗೆ ಜಗಳ!

ಹರ್ಡ್‌ ಕೂಡಾ ಸುಮ್ಮನಿರ್ತಾ ಇರಲಿಲ್ಲ. ಡೆಪ್‌ನ ಹಿಂಸೆ ತಾಳಿಕೊಳ್ಳಲಾಗದೆ ಹೋದಾಗ ಪ್ರತಿದಾಳಿ ನಡೆಸುತ್ತಾ ಇದ್ದಳು. ಡೆಪ್‌ ಮಲಗುವ ಹಾಸಿಗೆಯಲ್ಲಿ ಹರ್ಡ್‌ ಮಲ ವಿಸರ್ಜನೆ ಮಾಡಿದ್ದೂ ಇತ್ತು! ಅಂದರೆ ಇವರಿಬ್ಬರ ನಡುವೆ ಯಾವ ಪರಿ ದ್ವೇಷ ಇತ್ತು ಎಂದು ನೀವು ಊಹಿಸಬಹುದು. ಇಬ್ಬರೂ ಡ್ರಗ್ಸ್‌ ಸೇವಿಸಿದಾಗ ಮನುಷ್ಯರಂತೆ ವರ್ತಿಸುತ್ತಲೇ ಇರಲಿಲ್ಲ. ಬದಲಾಗಿ ಮೃಗಗಳಂತೆ ಕಿತ್ತಾಡಿಕೊಳ್ಳುತ್ತಿದ್ದರು. ಕೊನೆಗೂ ಎಂಟು ದಶಲಕ್ಷ ಡಾಲರ್‌ ಕೊಟ್ಟು ಡೆಪ್‌, ಹರ್ಡ್‌ಗೆ ಡೈವೋರ್ಸ್‌ ನೀಡಿ ಸೆಟಲ್‌ ಮಾಡಿಕೊಂಡ.

ಮತ್ತೆ ಕಿತ್ತಾಟ ಶುರುವಾದದ್ದು ಹೇಗೆ?

ಇಲ್ಲಿಗೆ ಒಂದು ಹಂತದ ಜಗಳ ಮುಗಿದಿತ್ತು. ಆದರೆ 2018ರಲ್ಲಿ ಆಂಬರ್‌ ಹರ್ಡ್‌ ʼವಾಷಿಂಗ್ಟನ್‌ಪೋಸ್ಟ್‌ʼ ಪತ್ರಿಕೆಯಲ್ಲಿ ಒಂದು ಲೇಖನ ಬರೆದಳು. ಅದರಲ್ಲಿ ʼʼನಾನು ಮನೆಯೊಳಗಿನ ಹಿಂಸೆಯ ಸಂತ್ರಸ್ತೆʼʼ ಎಂದು ಬರೆದುಕೊಂಡಳು. ತಾನು ಕೌಟುಂಬಿಕ ದೌರ್ಜನ್ಯಕ್ಕೊಳಗಾದವರನ್ನು ಪ್ರತಿನಿಧಿಸುವ ವ್ಯಕ್ತಿ ಎಂಬಂತೆ ಬಿಂಬಿಸಿದ್ದಳು. ಆದರೆ, ಜಾನಿ ಡೆಪ್ ಹೆಸರನ್ನು ಅವಳು ಆ ಲೇಖನದಲ್ಲಿ ಎಲ್ಲಿಯೂ ಪ್ರಸ್ತಾಪಿಸಿರಲಿಲ್ಲ. ಆದರೆ, ಅದು ಜಾನಿ ಡೆಪ್ ವಿರುದ್ಧ ಆ್ಯಂಬರ್‌ ಹರ್ಡ್ ಮಾಡಿದ ಆರೋಪ ಎಂದು ಯಾರಿಗಾದರೂ ಅರ್ಥವಾಗುವಂತಿತ್ತು. ಈ ಲೇಖನದಿಂದ ರೊಚ್ಚಿಗೆದ್ದ ಜಾನಿ ಡೆಪ್ ತನ್ನ ಮಾಜಿ ಪತ್ನಿ ವಿರುದ್ಧ 50 ಮಿಲಿಯನ್ ಯುಎಸ್ ಡಾಲರ್ (ಸುಮಾರು 388 ಕೋಟಿ ರೂ) ಮಾನನಷ್ಟ ಮೊಕದ್ದಮೆ ಹಾಕಿದರು. ಇದಕ್ಕೆ ಬದಲಾಗಿ ಆಂಬರ್ ಹರ್ಡ್ ಕೂಡ 100 ಮಿಲಿಯನ್ ಡಾಲರ್ (ಸುಮಾರು 775 ಕೋಟಿ ರೂ) ಮಾನನಷ್ಟ ಕೇಸ್ ಹೂಡಿದಳು. ತಾನು ಮಾಡಿದ ಆರೋಪ ಸುಳ್ಳು ಎಂದು ಜಾನಿ ಡೆಪ್ ವಕೀಲರು ಹೇಳಿದ್ದರಿಂದ ತನ್ನ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಹೇಳಿ ಆಕೆ ಈ ಮಾನನಷ್ಟಕ್ಕೆ ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿದ್ದಳು.

ಆ್ಯಂಬರ್‌ ಹರ್ಡ್‌ ಅವರು ಲೇಖನದಲ್ಲಿ ಜಾನಿ ಡೆಪ್‌ ಅವರ ಹೆಸರನ್ನು ಉಲ್ಲೇಖಿಸಿಲ್ಲವಾದರೂ ನಂತರ ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ತಾನು ಮದುವೆಗೆ ಮೊದಲು ಮತ್ತು ನಂತರ ಅನುಭವಿಸಿದ ಎಲ್ಲ ಸಂಕಟಗಳನ್ನು, ಆಗಿರುವ ಗಾಯಗಳನ್ನು ತೋರಿಸಿದ್ದರು. ಇದೆಲ್ಲವೂ ಫೇರ್‌ಫಾಕ್ಸ್‌ ನ್ಯಾಯಾಲಯದಲ್ಲಿ ನಡೆದ ಆರು ವಾರಗಳ ವಿಚಾರಣೆ ಲೈವ್‌ ಆಗಿ ಜನರ ಮುಂದೆ ಬಂದಿತ್ತು. ಇವರಿಬ್ಬರ ವಿಚಾರಣೆಯ ಸಂದರ್ಭದಲ್ಲಿ ಹೊರಬಂದ ಒಂದೊಂದು ಹಿಂಸೆ, ಕಿತ್ತಾಟದ ವಿವರಗಳೂ ಭೀಭತ್ಸವಾಗಿವೆ. ಆದರೆ, ನಿಜವಾಗಿ ಹಿಂಸೆ ನೀಡಿದ್ದು ಅವಳೇ, ಈಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾಳೆ ಎಂದು ಡೆಪ್‌ ವಾದಿಸಿದ್ದರು.

ಪ್ರಕರಣದ ಪರಿಣಾಮ ಏನಾಯ್ತು?

ಈ ಪ್ರಕರಣದಲ್ಲಿ ಇಬ್ಬರಿಗೂ ಮಾನನಷ್ಟ ಆಗಿದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಆದರೆ ಅಂತಿಮವಾಗಿ ಜಾನಿ ಡೆಪ್‌ಗೆ ಹೆಚ್ಚು ಪರಿಹಾರವನ್ನು ನೀಡಿದೆ. ಜಾನಿ ಡೆಪ್‌ ಕೋರ್ಟ್‌ನ ತೀರ್ಪನ್ನು ಸ್ವಾಗತಿಸಿದ್ದಾರೆ. ನ್ಯಾಯಾಧೀಶರು ಆರು ವರ್ಷಗಳ ಬಳಿಕ ನನಗೆ ಮರು ಹುಟ್ಟು ನೀಡಿದ್ದಾರೆ ಎಂದು ಹೇಳಿದ್ದಾರೆ. ʻಮಾಧ್ಯಮದ ಮೂಲಕ ನನ್ನ ವಿರುದ್ಧ ಕ್ರಿಮಿನಲ್‌ ಆಪಾದನೆಗಳನ್ನು ಮಾಡಲಾಗಿತ್ತು. ತೀವ್ರತರವಾದ ನೋವು ತಂದ ಈ ಆರೋಪಗಳನ್ನು ನಾನು ಪ್ರಶ್ನೆ ಮಾಡಲೇಬೇಕಾಗಿತ್ತು. ಯಾಕೆಂದರೆ, ಇದು ನನ್ನ ಮೇಲೆ, ನನ್ನ ಮಕ್ಕಳ ಮೇಲೆ, ನನ್ನ ಬದುಕಿನ ಮೇಲೆ ದೊಡ್ಡ ಪರಿಣಾಮವನ್ನು ಬೀರಿತ್ತು. ಇದೀಗ ಪ್ರಕರಣದಲ್ಲಿ ಗೆಲುವು ಸಿಕ್ಕಿದ್ದು ನನಗೆ ನಿರಾಳತೆ ನೀಡಿದೆ,ʼʼ ಎಂದಿದ್ದಾರೆ.

ಇತ್ತ ಆ್ಯಂಬರ್‌ ಹರ್ಡ್‌ ಅವರು ತೀರ್ಪಿನ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದಾರೆ. ʻʻಶಬ್ದಗಳಲ್ಲಿ ವಿವರಿಸಲಾಗದಷ್ಟು ನಿರಾಸೆಯನ್ನು ಅನುಭವಿಸಿದ್ದೇನೆ. ನಾನು ನೀಡಿದ ಪರ್ವತದಷ್ಟು ದಾಖಲೆಗಳು ನನ್ನ ಗಂಡನ ಅಧಿಕಾರದ ದುರುಪಯೋಗ, ಪ್ರಭಾವದ ಮುಂದೆ ನಿಲ್ಲಲಿಲ್ಲ,ʼʼ ಎಂದಿದ್ದಾರೆ.

“ಈ ತೀರ್ಪು ಬೇರೆ ಮಹಿಳೆಯರಿಗೆ ಎಂಥ ಸಂದೇಶ ನೀಡುತ್ತದೆ ಎಂಬುದು ನೆನೆದು ಇನ್ನೂ ನಿರಾಶೆಯಾಗಿದೆ. ಇದು ಹಿನ್ನಡೆಯೇ. ಮಹಿಳೆ ವಿರುದ್ಧದ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಬೇಕೋ ಬೇಡವೋ ಎಂಬ ಸಂದಿಗ್ಧತೆ ಎದುರಾಗಿದೆ” ಎಂದಿದ್ದಾರೆ 36 ವರ್ಷದ ಆಂಬರ್‌ಹರ್ಡ್.

ಎಲಾ! ಎಲಾನ್‌ ಮಸ್ಕ್‌ ಇಲ್ಲೂ ಇದ್ದಾನಲ್ಲ?

ಈ ನಡುವೆ ಇನ್ನೊಂದು ಅಸಹ್ಯಕರ ಸಂಗತಿ ಹೊರಬಿತ್ತು. ನಮ್ಮ ದಾಂಪತ್ಯ ನಡೆದಿದ್ದಾಗಲೇ ಕಾರಾ ಡೆವಿಯನೆ ಎಂಬ ಇನ್ನೊಬ್ಬ ನಟಿಯ ಜೊತೆಗೆ ಹಾಗೂ ಉದ್ಯಮಿ ಎಲಾನ್‌ ಮಸ್ಕ್‌ ಜೊತೆಗೆ ಆಂಬರ್‌ ಹರ್ಡ್‌ ತ್ರೀಸಮ್‌(ಅಂದರೆ ತ್ರಿಕೋನ ದೈಹಿಕ ಸಂಬಂಧ) ನಡೆಸಿದ್ದಳು ಎಂದು ಜಾನಿ ಡೆಪ್‌ ಆರೋಪಿಸಿದ್ದ. ಆದರೆ ಎಲಾನ್‌ ಮಸ್ಕ್‌ ಇದನ್ನು ಅಲ್ಲಗಳೆದಿದ್ದಾರೆ. ಜಾನಿ ಡೆಪ್‌ ಮತ್ತು ಆಂಬರ್‌ ಹರ್ಡ್ ನಡುವೆ ಡೈವೋರ್ಸ್‌‌ ಆದ ಬಳಿಕವೇ ನಾನು ಹರ್ಡ್‌ ಜೊತೆ ಸಾಂಗತ್ಯ ಬೆಳೆಸಿದ್ದೆ. ಆದ್ದರಿಂದ ಇವರ ದಾಂಪತ್ಯ ವಿಚ್ಛೇದನಕ್ಕೂ ನನಗೂ ಸಂಬಂಧವಿಲ್ಲ. ಇನ್ನು ಕಾರಾ ಡೇವಿಯನೆ ನನಗೆ ಗೆಳತಿ ಮಾತ್ರ, ಆಕೆಯ ಜೊತೆಗೆ ದೈಹಿಕ ಸಂಬಂಧ ನನಗಿಲ್ಲ ಎಂದು ಎಲಾನ್‌ ಮಸ್ಕ್‌ ಸ್ಪಷ್ಟನೆ ನೀಡಿದರು. ಅಂತೂ ಇವರಿಬ್ಬರ ನಡುವಿನ ಕಲಹದಲ್ಲಿ ಇನ್ನೂ ಹಲವರು ಬೆತ್ತಲಾಗಿದ್ದು ಸತ್ಯ.

ಇವರಿಬ್ಬರ ಮಾನನಷ್ಟ ಮೊಕದ್ದಮೆ ಪ್ರಕರಣದಿಂದಾಗಿ ಇಬ್ಬರೂ ತಮ್ಮ ಕೆರಿಯರ್‌ನಲ್ಲಿ ಸಾಕಷ್ಟು ಅವಕಾಶಗಳನ್ನು ಕಳೆದುಕೊಂಡಿದ್ದಾರೆ. ದೊಡ್ಡ ಪ್ರಾಜೆಕ್ಟ್‌ಗಳು ಡೆಪ್‌ ಹಾಗೂ ಹರ್ಡ್‌ ಅವರ ಕೈತಪ್ಪಿವೆ. ಇವರು ಪರಸ್ಪರರನ್ನು ದೌರ್ಜನ್ಯ ಮಾಡಿಕೊಂಡ ಪರಿ ಲೋಕಕ್ಕೆ ತಿಳಿಯಿತು. ಇನ್ನೂ ಹಲವಾರು ಸೆಲೆಬ್ರಿಟಿ ದಾಂಪತ್ಯಗಳೂ ಹೀಗೇ ಇರಬಹುದು ಅಂತ ಊಹಿಸಿಕೊಳ್ಳುವುದಕ್ಕೂ ಇದು ಕಾರಣವಾಗಿದೆ. ಕೈಯಲ್ಲಿ ನಿಭಾಯಿಸಲಿಕ್ಕಾಗದಂಥ ಜನಪ್ರಿಯತೆ, ಹಣ, ಡ್ರಗ್ಸ್‌, ಆಲ್ಕೋಹಾಲ್‌, ಸ್ವೇಚ್ಛಾಚಾರದ ಸಂಬಂಧಗಳು- ಎಲ್ಲವೂ ಸೇರಿದಾಗ ಸೃಷ್ಟಿಯಾಗೋದೇ ಜಾನಿ ಡೆಪ್-‌ಆಂಬರ್‌ ಹರ್ಡ್‌ ಪ್ರಕರಣ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Satyendar Jain : ಆಪ್​ಗೆ ಇನ್ನಷ್ಟು ಸಂಕಷ್ಟ; ಸತ್ಯೇಂದರ್​ ಜೈನ್ ವಿರುದ್ಧ ಸಿಬಿಐ ತನಿಖೆಗೆ ಆದೇಶ

Satyendar Jain: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಸತ್ಯೇಂದರ್ ಜೈನ್ ಅವರನ್ನು 2022 ರ ಮೇ ತಿಂಗಳಲ್ಲಿ ಬಂಧಿಸಲಾಯಿತು. ಅವರ ಕೊನೆಯ ಜಾಮೀನು ಅರ್ಜಿಯನ್ನು ಈ ವರ್ಷದ ಮಾರ್ಚ್​ನಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶರಣಾಗುವಂತೆ ಉನ್ನತ ನ್ಯಾಯಾಲಯವು ಅವರಿಗೆ ಸೂಚಿಸಿತು.

VISTARANEWS.COM


on

Satyendar Jain
Koo

ನವದೆಹಲಿ: ವಂಚಕ ಸುಕೇಶ್ ಚಂದ್ರಶೇಖರ್ ನಿಂದ 10 ಕೋಟಿ ರೂ.ಗಳನ್ನು ಸುಲಿಗೆ ಮಾಡಿದ ಆರೋಪದ ಮೇಲೆ ಜೈಲಿನಲ್ಲಿರುವ ಎಎಪಿ ನಾಯಕ ಸತ್ಯೇಂದರ್ ಜೈನ್ (Satyendar Jain) ವಿರುದ್ಧ ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆ. ಜೈನ್ ಮತ್ತು ತಿಹಾರ್ ಜೈಲಿನ ಮಾಜಿ ಡಿಜಿ ಸಂದೀಪ್ ಗೋಯೆಲ್ ಅವರು ತಿಹಾರ್ ನಿಂದ ಸುಲಿಗೆ ದಂಧೆ ನಡೆಸುತ್ತಿದ್ದರು ಮತ್ತು ಉನ್ನತ ಮಟ್ಟದ ಕೈದಿಗಳಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಜಾರಿ ನಿರ್ದೇಶನಾಲಯದ ವಶದಲ್ಲಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಹೀಗಾಗಿ ಆಡಳಿತಾರೂಢ ಅಪ್​ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಈ ವರ್ಷದ ಆರಂಭದಲ್ಲಿ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಸತ್ಯೇಂದರ್ ಜೈನ್ ವಿರುದ್ಧದ ಸುಲಿಗೆ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ಅನುಮತಿ ನೀಡಿದ್ದರು. ಸುಲಿಗೆ ಆರೋಪಗಳ ಬಗ್ಗೆ ತನಿಖೆ ನಡೆಸಲು ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿ ಕೋರಿ ಬರೆದ ಪತ್ರದಲ್ಲಿ, ಜೈನ್ ಅವರು ತಿಹಾರ್ ಜೈಲಿನಿಂದ ಉನ್ನತ ಮಟ್ಟದ ಸುಲಿಗೆ ದಂಧೆಯನ್ನು ನಡೆಸುತ್ತಿದ್ದಾರೆ. ಜೈಲಿನಲ್ಲಿ ಐಷಾರಾಮಿಯಾಗಿ ಬದುಕು ನಡೆಸಲು ಸುಕೇಶ್​ ಚಂದ್ರಶೇಖರ್ ನಿಂದ 10 ಕೋಟಿ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಸಿಬಿಐ ಕಳೆದ ವರ್ಷ ನವೆಂಬರ್​ನಲ್ಲಿ ಬರೆದಿತ್ತು.

ದೆಹಲಿಯ ವಿವಿಧ ಜೈಲುಗಳಾದ ತಿಹಾರ್, ರೋಹಿಣಿ ಮತ್ತು ಮಂಡೋಲಿಯಲ್ಲಿ ಆರಾಮವಾಗಿ ವಾಸಿಸಲು ಅನುಕೂಲವಾಗುವಂತೆ ಜೈನ್ ಗೆ ವೈಯಕ್ತಿಕವಾಗಿ ಅಥವಾ ತನ್ನ ಸಹಚರರ ಮೂಲಕ 2018-21ರ ಅವಧಿಯಲ್ಲಿ ವಿವಿಧ ಕಂತುಗಳಲ್ಲಿ ಹಣವನ್ನು ನೀಡಿದ್ದೇನೆ ಎಂದು ಸುಕೇಶ್ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: Blast in Bangalore : ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತರ ಸುಳಿವು ಕೊಟ್ಟರೆ 10 ಲಕ್ಷ ರೂ. ಇನಾಮು; ಇಲ್ಲಿದೆ ಉಗ್ರರ ಪೋಟೊ ಸಮೇತ ವಿವರ

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಸತ್ಯೇಂದರ್ ಜೈನ್ ಅವರನ್ನು 2022 ರ ಮೇ ತಿಂಗಳಲ್ಲಿ ಬಂಧಿಸಲಾಯಿತು. ಅವರ ಕೊನೆಯ ಜಾಮೀನು ಅರ್ಜಿಯನ್ನು ಈ ವರ್ಷದ ಮಾರ್ಚ್​ನಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶರಣಾಗುವಂತೆ ಉನ್ನತ ನ್ಯಾಯಾಲಯವು ಅವರಿಗೆ ಸೂಚಿಸಿತು. ಜೈಲಿನ ಸ್ನಾನಗೃಹದಲ್ಲಿ ಬಿದ್ದ ನಂತರ ಅವರಿಗೆ ಮೇ 26, 2023 ರಂದು ಮಧ್ಯಂತರ ವೈದ್ಯಕೀಯ ಜಾಮೀನು ನೀಡಲಾಯಿತು. ಜಾಮೀನು ಅವಧಿಯಲ್ಲಿ, ಅವರು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

Continue Reading

ಪ್ರಮುಖ ಸುದ್ದಿ

Blast in Bangalore : ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತರ ಸುಳಿವು ಕೊಟ್ಟರೆ 10 ಲಕ್ಷ ರೂ. ಇನಾಮು; ಇಲ್ಲಿದೆ ಉಗ್ರರ ಪೋಟೊ ಸಮೇತ ವಿವರ

Blast in Bangalore: ಸ್ಫೋಟ ನಡೆಸಿದ ಪ್ರಮುಖ ಆರೋಪಿಯನ್ನು ಮುಸ್ಸಾವಿರ್ ಶಾಜಿಬ್ ಹುಸೇನ್ ಎಂದು ತನಿಖಾ ಸಂಸ್ಥೆ ಗುರುತಿಸಿದ್ದು, ರಾಮೇಶ್ವರಂ ಕೆಫೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಎನ್ಐಎ ಪ್ರಕಾರ, ಆತ ಸುಮಾರು 6 ಅಡಿ 2 ಇಂಚು ಎತ್ತರವಿರುವ 30 ವರ್ಷದ ವ್ಯಕ್ತಿ. ಬಾಲಕರ ಹಾಸ್ಟೆಲ್, ಪಿಜಿ ಅಥವಾ ಯಾವುದೇ ಕಡಿಮೆ ಬಜೆಟ್ ಹೋಟೆಲ್​ಗಳಲ್ಲಿ ವಾಸಿಸುತ್ತಿದ್ದು, ಮೊಹಮ್ಮದ್ ಜುನೇದ್ ಸಯೀದ್ ಹೆಸರಿನಲ್ಲಿ ನಕಲಿ ಚಾಲನಾ ಪರವಾನಗಿ ಬಳಸುತ್ತಿದ್ದಾನೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಆರೋಪಿ ತನ್ನ ಮೂಲ ಗುರುತನ್ನು ಮರೆಮಾಚಲು ಮುಖಗವಸು, ನಕಲಿ ಗಡ್ಡ ಅಥವಾ ವಿಗ್ ಧರಿಸುತ್ತಾನೆ ಎಂದು ಹೇಳಿದೆ.

VISTARANEWS.COM


on

Mussavir Hussain
Koo

ಬೆಂಗಳೂರು : ನಗರದ ರಾಮೇಶ್ವರಂ ಕೆಫೆ ಸ್ಫೋಟ (Blast in Bangalore) ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸಿದ ಬಳಿಕ, ತಲೆಮರೆಸಿಕೊಂಡಿರುವ ಇತರ ಇಬ್ಬರು ಆರೋಪಿಗಳ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡುವವರಿಗೆ 10 ಲಕ್ಷ ರೂ.ಗಳ ನಗದು ಬಹುಮಾನವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಶುಕ್ರವಾರ ಘೋಷಿಸಿದೆ. ಪತ್ತೆ ಮಾಡುವ ಉದ್ದೇಶಕ್ಕಾಗಿ ಎನ್​ಐಎ ಇಬ್ಬರೂ ಶಂಕಿತರ ಮೂಲ ವಿವರಗಳನ್ನು ನೀಡಿದೆ ಮತ್ತು ಆರೋಪಿಗಳನ್ನು ಬಂಧಿಸಲು ಸಾರ್ವಜನಿಕರ ನೆರವು ಕೋರಿದೆ.

ಸ್ಫೋಟ ನಡೆಸಿದ ಪ್ರಮುಖ ಆರೋಪಿಯನ್ನು ಮುಸ್ಸಾವಿರ್ ಶಾಜಿಬ್ ಹುಸೇನ್ ಎಂದು ತನಿಖಾ ಸಂಸ್ಥೆ ಗುರುತಿಸಿದ್ದು, ಆತನ ಚಲನವಲನಗಳು ರಾಮೇಶ್ವರಂ ಕೆಫೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಎನ್ಐಎ ಪ್ರಕಾರ, ಆತ ಸುಮಾರು 6 ಅಡಿ 2 ಇಂಚು ಎತ್ತರವಿರುವ 30 ವರ್ಷದ ವ್ಯಕ್ತಿ. ಬಾಲಕರ ಹಾಸ್ಟೆಲ್, ಪಿಜಿ ಅಥವಾ ಯಾವುದೇ ಕಡಿಮೆ ಬಜೆಟ್ ಹೋಟೆಲ್​ಗಳಲ್ಲಿ ವಾಸಿಸುತ್ತಿದ್ದಾನೆ. ಮೊಹಮ್ಮದ್ ಜುನೇದ್ ಸಯೀದ್ ಹೆಸರಿನಲ್ಲಿ ನಕಲಿ ಚಾಲನಾ ಪರವಾನಗಿ ಬಳಸುತ್ತಿದ್ದಾನೆ ಎಂದೂ ತನಿಖಾಧಿಕಾರಿಗಳು ಹೇಳಿದ್ದಾರೆ. ಆರೋಪಿ ತನ್ನ ಮೂಲ ಗುರುತನ್ನು ಮರೆಮಾಚಲು ಮುಖಗವಸು, ನಕಲಿ ಗಡ್ಡ ಅಥವಾ ವಿಗ್ ಧರಿಸುತ್ತಾನೆ ಎಂದು ಹೇಳಿದೆ.

ಇದನ್ನೂ ಓದಿ: Juice Jacking: ಸಾರ್ವಜನಿಕ ಸ್ಥಳಗಳ ಮೊಬೈಲ್​ ಚಾರ್ಜರ್​ ಬಳಸುವಾಗ ಎಚ್ಚರಿಕೆ; ಸೈಬರ್ ಕಳ್ಳರಿದ್ದಾರೆ!

ಸ್ಫೋಟದ ಇನ್ನೋರ್ವ ಆರೋಪಿ ಅಬ್ದುಲ್ ಮತೀನ್ ಅಹ್ಮದ್ ತಾಹಾ, ಸ್ಫೋಟ ನಡೆಸಲು ಮುಸ್ಸಾವಿರ್​ಗೆ ಸಹಾಯ ಮಾಡಿದ್ದನೆಂದು ಹೇಳಲಾಗಿದ್ದು, ಆತನಿಗೂ ಹುಡುಕಾಟ ನಡೆಯುತ್ತಿದೆ. ಈತ ತನ್ನ ಮೂಲ ಗುರುತನ್ನು ಮರೆಮಾಚಲು ವಿಘ್ನೇಶ್ ಡಿ ಮತ್ತು ಸುಮಿತ್ ಎಂಬ ಹಿಂದೂ ಹೆಸರನ್ನೂ ಬಳಸುತ್ತಿದ್ದಾನೆ ಎಂದು ಎನ್​​ಐಎ ಹೇಳಿದೆ. ಆತ ಬಹುಶಃ ಹುಡುಗರ ಹಾಸ್ಟೆಲ್ ಗಳು, ಪಿಜಿಗಳು ಅಥವಾ ಯಾವುದೇ ಕಡಿಮೆ ಬಜೆಟ್ ಹೋಟೆಲ್ ಗಳಲ್ಲಿ ವಾಸಿಸುತ್ತಿದ್ದಾನೆ ಎಂದು ಹೇಳಿದ್ದಾರೆ. ಇಬ್ಬರೂ ಆರೋಪಿಗಳು ತೀರ್ಥಹಳ್ಳಿ ಮೂಲದವರು.

ಪ್ರಕರಣದ ಆರೋಪಿಗಳ ಬಗ್ಗೆ ವಿವರಗಳನ್ನು ನೀಡುವವರಿಗೆ ಎನ್ಐಎ ಈ ಹಿಂದೆಯೂ 10 ಲಕ್ಷ ರೂ.ಗಳ ಬಹುಮಾನ ಘೋಷಿಸಿತ್ತು. ಶಂಕಿತರ ರೇಖಾಚಿತ್ರಗಳನ್ನು ಈ ಹಿಂದೆ ಬಿಡುಗಡೆ ಮಾಡಿತ್ತು. ಮಾರ್ಚ್ 1 ರಂದು ರೆಸ್ಟೋರೆಂಟ್​ನಲ್ಲಿ ಸಂಭವಿಸಿದ ಐಇಡಿ ಸ್ಫೋಟದ ಸಹ ಸಂಚುಕೋರ ಮುಜಮ್ಮಿಲ್ ಶರೀಪ್​ನನ್ನು ಎನ್ಐಎ ಗುರುವಾರ ಬಂಧಿಸಿದೆ. ಸ್ಫೋಟ ಸಂಭವಿಸಿದ ನಂತರ ಕಳೆದ ತಿಂಗಳಲ್ಲಿ ಎನ್ಐಎ ನಡೆಸಿದ ಮೊದಲ ಬಂಧನ ಇದಾಗಿದೆ.

Continue Reading

ಕರ್ನಾಟಕ

Lok Sabha Election 2024: ಜೆಡಿಎಸ್ ಪಟ್ಟಿ ಬಿಡುಗಡೆ; ಮಂಡ್ಯದಿಂದ ಎಚ್‌ಡಿಕೆ, ಕೋಲಾರ, ಹಾಸನಕ್ಕೆ ಯಾರು?

Lok Sabha Election 2024: ರಾಜ್ಯ ಜೆಡಿಎಸ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ನಿರೀಕ್ಷೆಯಂತೆ ಹಾಸನದಿಂದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದು, ಹಾಸನದಲ್ಲಿ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣಗೆ ಟಿಕೆಟ್‌ ನೀಡಲಾಗಿದೆ. ಇನ್ನು ಕೋಲಾರದಲ್ಲಿ ಮಲ್ಲೇಶ್‌ ಬಾಬುಗೆ ಟಿಕೆಟ್‌ ನೀಡಿರುವುದು ಕಂಡುಬಂದಿದೆ.

VISTARANEWS.COM


on

Lok Sabha Election 2024
Koo

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನಿಂದ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು (JDS candidates list) ಅಂತಿಮಗೊಂಡಿದ್ದು, ಅಭ್ಯರ್ಥಿಗಳ ಅಧಿಕೃತ ಪಟ್ಟಿ ಶುಕ್ರವಾರ ಬಿಡುಗಡೆಯಾಗಿದೆ. ಮಂಡ್ಯದಿಂದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಕೋಲಾರ ಕ್ಷೇತ್ರದಿಂದ ಮಲ್ಲೇಶ್ ಬಾಬು ಹಾಗೂ ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಲಿದ್ದಾರೆ.

ರಾಜ್ಯ ಜೆಡಿಎಸ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ನಡೆದ ಜೆಡಿಎಸ್‌ ಕೋರ್‌ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳನ್ನು ಅಂತಿಮ ಮಾಡಲಾಗಿದೆ. ಆದರೆ, ಕಾರಣಾಂತರಗಳಿಂದ ಪಟ್ಟಿ ಘೋಷಣೆ ಮುಂದೂಡಿಕೆಯಾಗಿತ್ತು. ಇದೀಗ ಮಾಜಿ ಸಿಎಂ ಎಚ್‌ಡಿಕೆ ಅವರು, ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಕಾರ್ಯಕರ್ತರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

Lok Sabha Election 2024

ನಿರೀಕ್ಷೆಯಂತೆ ಹಾಸನದಿಂದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದು, ಹಾಸನದಲ್ಲಿ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣಗೆ ಟಿಕೆಟ್‌ ನೀಡಲಾಗಿದೆ. ಇನ್ನು ಕೋಲಾರದಲ್ಲಿ ಮಲ್ಲೇಶ್‌ ಬಾಬುಗೆ ಟಿಕೆಟ್‌ ನೀಡಿರುವುದು ಕಂಡುಬಂದಿದೆ.

ಕೋಲಾರ ಕ್ಷೇತ್ರದಲ್ಲಿ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ, ಬಂಗಾರಪೇಟೆ ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿ ಮಲ್ಲೇಶ್ ಬಾಬು, ದೇವನಹಳ್ಳಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಪ್ರಬಲ ಆಕಾಂಕ್ಷಿಗಳಾಗಿದ್ದರು. ಈ ಪೈಕಿ ಸಮೃದ್ಧಿ ಮಂಜುನಾಥ್ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಅಂತಿಮವಾಗಿ ಮಲ್ಲೇಶ್ ಬಾಬು ಅವರಿಗೆ ಪಕ್ಷ ಮಣೆ ಹಾಕಿದೆ.

ಇದನ್ನೂ ಓದಿ | Lok Sabha Election 2024: ಅನುಮಾನ ಬೇಡ, ಮೋದಿ ಮತ್ತೊಮ್ಮೆ ಪ್ರಧಾನಿಯಾಗ್ತಾರೆ: ಸಾಹಿತಿ ಎಸ್.ಎಲ್. ಭೈರಪ್ಪ

ಪಕ್ಷದ ಉಳಿವಿಗಾಗಿ ನನ್ನ ತೀರ್ಮಾನ: ಎಚ್‌.ಡಿ. ಕುಮಾರಸ್ವಾಮಿ

ಇತ್ತೀಚೆಗೆ ಜೆಡಿಎಸ್‌ ಕೋರ್‌ ಕಮಿಟಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಎಚ್.ಡಿ. ಕುಮಾರಸ್ವಾಮಿ, ನಾನು ಮಂಡ್ಯದಿಂದ ಅನಿವಾರ್ಯವಾಗಿ ಕಣಕ್ಕಿಳಿಯುವ ಬಗ್ಗೆ ಚನ್ನಪಟ್ಟಣ ಜನತೆಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಇದಕ್ಕೆ ಚನ್ನಪಟ್ಟಣ ಮುಖಂಡರು ಸಹಮತವನ್ನು ವ್ಯಕ್ತಪಡಿಸಿದ್ದಾರೆ. ನಾವು ಇವತ್ತು ನೆಲ‌ಕಚ್ಚಿದ್ದೇವೆ, ಮತ್ತೆ ಪುಟಿದೇಳಬೇಕು. ನಮ್ಮಲ್ಲಿ ಲೋಪದೋಷಗಳಿದ್ದು, ಅದನ್ನು ಸರಿಪಡಿಸಿಕೊಳ್ಳುತ್ತೇವೆ. ನನ್ನ ಪಕ್ಷದ ಭವಿಷ್ಯ, ಪಕ್ಷದ ಹೃದಯ ಭಾಗ ಮಂಡ್ಯದ ಜನರ ಅಪೇಕ್ಷೆಯಂತೆ ಪಕ್ಷವನ್ನು ಗಟ್ಟಿಗೊಳಿಸಲು ಮಂಡ್ಯದಿಂದ ಸ್ಪರ್ಧಿಸುವ ತೀರ್ಮಾನ ಮಾಡಿದ್ದೇನೆ ಎಂದು ಹೇಳಿದ್ದರು.

ಕರ್ನಾಟಕ ಲೋಕಸಭಾ ಕ್ಷೇತ್ರಗಳಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರಬೇಕು ಎಂಬ ಗುರಿಯನ್ನು ಹಾಕಿಕೊಂಡಿದ್ದೇವೆ. ಮಂಡ್ಯ ಜಿಲ್ಲೆಯ ಕಾರ್ಯಕರ್ತರ ತೀರ್ಮಾನಕ್ಕೆ ಗೌರವ ಕೊಡುವುದು ನಮ್ಮ ಕರ್ತವ್ಯವಾಗಿದೆ. ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಾಯ ಮಾಡಲಾಗಿತ್ತು. ಆದರೆ, ಅವರು ಸ್ಪರ್ಧೆಗೆ ನಿರಾಕರಿಸಿದ್ದಾರೆ. ನಾನು ಈಗಾಗಲೇ ನೋವು ತಿಂದಿದ್ದೇನೆ. ಹೀಗಾಗಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ನನಗೆ ಸಿ.ಎಸ್. ಪುಟ್ಟರಾಜು ಅಥವಾ ನಿಖಿಲ್‌ರನ್ನು ಕಣಕ್ಕಿಳಿಸಬೇಕು ಎಂಬ ಆಸೆ ಇತ್ತು. ಆದರೆ, ಅವರು ಅವರು ಸ್ಪರ್ಧೆ ಸಾಧ್ಯವಿಲ್ಲ ಎಂದು ಕಠಿಣ ನಿರ್ಣಯ ಮಾಡಿಕೊಂಡಿದ್ದಾರೆ. ಆ ಜಿಲ್ಲೆಯ ಜನರ ಋಣವನ್ನು ತೀರಿಸಬೇಕು. ಇಡೀ ನಾಡೇ ನನ್ನ ಕರ್ಮ ಭೂಮಿಯಾಗಿದೆ. ಹಾಗಂತ ರಾಮನಗರ ಬಿಟ್ಟು ನಾನು ಹೋಗುವುದಿಲ್ಲ. ಈ ಪಕ್ಷದ ಉಳಿವಿಗಾಗಿ ಒಂದು ತೀರ್ಮಾನವನ್ನು ಕೈಗೊಳ್ಳಬೇಕಾಗಿತ್ತು ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದರು.

Continue Reading

Lok Sabha Election 2024

Lok Sabha Election 2024: ಮಹಿಳೆಯರು ಅಡುಗೆ ಮಾಡಲು ಲಾಯಕ್ಕು ಎಂದ ಶಾಮನೂರು; ಆಕಾಶದಲ್ಲಿ ಹಾರಾಡೋಕೂ ಗೊತ್ತೆಂದ ಗಾಯತ್ರಿ

Lok Sabha Election 2024: ಲೋಕಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ನಾಯಕ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆ ಕೋಲಾಹಲವನ್ನೇ ಸೃಷ್ಟಿಸಿದೆ. ಮಹಿಳೆಯರ ವಿರುದ್ಧ ಅವರು ಲಘುವಾಗಿ ಮಾತನಾಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಗಾಯತ್ರಿ ಸಿದ್ದೇಶ್ವರ್‌ ಬಗ್ಗೆ ಮಾತನಾಡುವಾಗ, ಅವರು ಅಡುಗೆ ಮಾಡಲು ಲಾಯಕ್ಕು ಎಂದು ಹೇಳಿದ್ದರು. ಇದಕ್ಕೆ ಈಗ ಗಾಯತ್ರಿ ಸಹಿತ ಬಿಜೆಪಿ ನಾಯಕರು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಬಹಿರಂಗ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಗಾಯತ್ರಿ ಸಿದ್ದೇಶ್ವರ್‌ ಸಹ ಶಾಮನೂರಿಗೆ ತಿರುಗೇಟು ನೀಡಿದ್ದು, ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲಿಯೂ ಇದ್ದಾರೆ. ನಮಗೆ ಅಡುಗೆ ಮಾಡುವುದೂ ಗೊತ್ತಿದೆ. ಆಕಾಶದಲ್ಲಿ ಹಾರಾಟ ನಡೆಸಲೂ ಗೊತ್ತಿದೆ ಎಂದು ಹೇಳಿದ್ದಾರೆ.

VISTARANEWS.COM


on

Lok Sabha Election 2024 Women are only for cook says Shamanur Shivashankarappa and Gayatri says women knows how to fly in the sky
Koo

ದಾವಣಗೆರೆ: ಲೋಕಸಭಾ ಚುನಾವಣೆ (Lok Sabha Election 2024) ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳ ನಾಯಕರ ಮಾತುಗಳು ಎಲ್ಲೆ ಮೀರುತ್ತಿವೆ. ಮಾತನಾಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಲು ಶುರು ಮಾಡಿದ್ದಾರೆ. ಈಗ ಈ ಸಾಲಿಗೆ ಮಾಜಿ ಸಚಿವ, ಹಿರಿಯ ರಾಜಕಾರಣಿ, ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರೂ ಸೇರಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದ (Davangere Lok Sabha constituency) ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ (Gayatri Siddeshwar) ವಿರುದ್ಧ ಮಾತನಾಡುವಾಗ, “ಮಹಿಳೆಯರು ಅಡುಗೆ ಮಾಡಲು ಲಾಯಕ್ಕು” ಎಂಬಂತೆ ಹೇಳಿದ್ದಾರೆ. ಇದೀಗ ವ್ಯಾಪಕ ಆಕ್ರೋಶ ಹಾಗೂ ಟೀಕೆಗೆ ಗುರಿಯಾಗಿದೆ. ಇದಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್‌ (Malavika Avinash) ಸಹ ಕಿಡಿಕಾರಿದ್ದು, ನಿಮ್ಮ ಮನೆಯ ಸೊಸೆಯನ್ನೂ ಕಣಕ್ಕಿಳಿಸಿದ್ದನ್ನು ಮರೆತಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಸ್ವತಃ ಗಾಯತ್ರಿ ಸಿದ್ದೇಶ್ವರ್‌ ಮಾತನಾಡಿ, ಮಹಿಳೆಯರಿಗೆ ಅಡುಗೆ ಮಾಡೋಕೂ ಗೊತ್ತು, ಆಕಾಶದಲ್ಲಿ ಹಾರಾಡೋಕೂ ಗೊತ್ತು ಎಂದು ತಿರುಗೇಟು ನೀಡಿದ್ದಾರೆ.

ದಾವಣಗೆರೆ ಬಂಟರ ಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕಾಂಗ್ರೆಸ್‌ ಜನಪ್ರತಿನಿಧಿಗಳು, ಮುಖಂಡರ ಸಭೆಯಲ್ಲಿ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಗಾಯತ್ರಿ ಸಿದ್ದೇಶ್ವರ್‌ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾತನಾಡಲು ಬಾರದ ಗಾಯತ್ರಿ ಸಿದ್ದೇಶ್ವರ್‌ ಅವರು ಅಡುಗೆ ಮಾಡುವುದಕ್ಕೆ ಲಾಯಕ್ಕು. ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವ ಶಕ್ತಿ ಅವರಿಗಿಲ್ಲ. ಹೀಗಾಗಿ ನಮ್ಮ ಕಾಂಗ್ರೆಸ್ಸಿಗರ ‘ಕೈ’ ಮೇಲಿದೆ ಎಂಬುದನ್ನು ನಾವು ತೋರಿಸಬೇಕು ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ: Lok Sabha Election 2024: ಸಿದ್ದರಾಮಯ್ಯ ಗೂಂಡಾ ಗುರು; ಯತೀಂದ್ರ ಜೈಲಿಗೆ ಹೋಗ್ತಾರೆ: ಆರ್.‌ ಅಶೋಕ್‌ ಕೆಂಡ

ಈ ಹಿಂದೆ ಗೆದ್ದಾಗ ಮೋದಿಗೆ ಹೂ ಕೊಟ್ಟಿದ್ರಾ?

ಗಾಯತ್ರಿ ಸಿದ್ದೇಶ್ವರ್‌ ಅವರು ತಾವು ದಾವಣಗೆರೆಯಿಂದ ಗೆದ್ದು ನರೇಂದ್ರ ಮೋದಿ ಅವರಿಗೆ ಕಮಲದ ಹೂವನ್ನು ಅರ್ಪಿಸುತ್ತೇನೆ ಎಂದು ಹೇಳುತ್ತಾರೆ. ಹಾಗಾದರೆ, ಈ ಹಿಂದೆ ಗೆದ್ದಿದ್ದು ನೀವೇ (ಬಿಜೆಪಿಯವರೇ) ಅಲ್ಲವೇ? ಆಗ ಏನು ನೀವು ಕಮಲದ ಹೂವನು ಕೊಟ್ಟಿದ್ದಿರಾ? ಎಂದು ಶಾಮನೂರು ಶಿವಶಂಕರಪ್ಪ ಪ್ರಶ್ನೆ ಮಾಡಿದ್ದಾರೆ.

ವಿರೋಧ ಪಕ್ಷದವರು ಮೋದಿ.. ಮೋದಿ ಅಂತಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಏನು ಕೊಡುಗೆಯನ್ನು ಕೊಟ್ಟಿದ್ದಾರೆ? ನಮ್ಮ ರಾಜ್ಯಕ್ಕೆ ಬರಬೇಕಾದ ಹಣವನ್ನು ನೀಡದೆ ಅನ್ಯಾಯ ಮಾಡಿದ್ದಾರೆ ಎಂದು ಶಾಮನೂರು ಶಿವಶಂಕರಪ್ಪ ಕಿಡಿಕಾರಿದ್ದಾರೆ.

ಗಾಯತ್ರಿ ಸಿದ್ದೇಶ್ವರ್‌ ಕೆಂಡಾಮಂಡಲ

ಶಾಮನೂರು ಶಿವಶಂಕರಪ್ಪ ಅವರ ಈ ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಮುನ್ನುಗ್ಗುತ್ತಿದ್ದಾರೆ. ಆಗಸದಲ್ಲಿ ಹಾರುವ ಹಂತವನ್ನು ತಲುಪಿದ್ದಾರೆ. ಎಲ್ಲ ಕ್ಷೇತ್ರದಲ್ಲಿ ಅವರ ಕೊಡುಗೆ ಇದೆ. ಈ ವಿಚಾರ ಅಜ್ಜನಿಗೆ ಗೊತ್ತಿಲ್ಲವೆಂದು ಅನ್ನಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ತಾಯಿಯಾದವಳು ಅಡುಗೆ ಮಾಡಿ, ಕೈ ತುತ್ತು ಕೊಡುವ ಪ್ರೀತಿ ಅವರಿಗೆ ಗೊತ್ತಿಲ್ಲ. ಹಾಗಾದರೆ ಮಹಿಳೆಯರು ಅಡುಗೆ ಮಾಡೋಕೆ ಮಾತ್ರ ಸೀಮಿತವೇ? ಮಹಿಳೆ ಅಡುಗೆಯನ್ನೂ ಮಾಡುತ್ತಾಳೆ, ಆಕಾಶದಲ್ಲೂ ಹಾರಾಡುತ್ತಾಳೆ. ಇಂಥ ಹೇಳಿಕೆ ನೀಡುವ ಮೂಲಕ ಶಾಮನೂರು ಶಿವಶಂಕರಪ್ಪ ಅವರು ಮಹಿಳೆಯರಿಗೆ ಅಗೌರವ ತೋರಿದ್ದಾರೆ ಎಂದು ಗಾಯತ್ರಿ ಸಿದ್ದೇಶ್ವರ್‌ ಆಕ್ರೋಶವನ್ನು ಹೊರಹಾಕಿದರು.

ನಿಮ್ಮ ಸೊಸೆಯನ್ನೂ ಕಣಕ್ಕಿಳಿಸಿಲ್ಲವೇ? ಶಾಮನೂರುಗೆ ಮಾಳವಿಕಾ ಪ್ರಶ್ನೆ

ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಇದೊಂದು ಕೆಟ್ಟ ಹೇಳಿಕೆ ಎಂದಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಹಿರಿಯ ರಾಜಕಾರಣಿಯಾಗಿದ್ದಾರೆ. ಅವರಿಗೆ ಬುದ್ಧಿ ಹೇಳುವ ವಯಸ್ಸು ನನ್ನದಲ್ಲ. ಆದರೆ, ಅವರ ಮಾತಿಗೆ ವಿರೋಧ ವ್ಯಕ್ತಪಡಿಸುತ್ತೇನೆ. ನಮ್ಮ‌ ಪಕ್ಷದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರ ಬಗ್ಗೆ ಕೆಟ್ಟ ಹೇಳಿಕೆ ನೀಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ತಮ್ಮ ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಕಣಕ್ಕಿಳಿಸಿದ್ದಾರೆ. ಅಂಥದರಲ್ಲಿ ಈ ರೀತಿ ಹೇಳಿಕೆ ಸರಿಯಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Lok Sabha Election 2024: ಅಮಿತ್‌ ಶಾ ರೌಡಿ ಎಂದಿದ್ದ ಯತೀಂದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ನಮ್ಮ ದೇಶದಲ್ಲಿ ಎಲ್ಲ ಕೆಲಸ ಮಾಡುವ ಮಹಿಳೆಯರಿದ್ದಾರೆ. ಅವರು ಮನೆಯಲ್ಲಿರಲು ಲಾಯಕ್ಕು ಅಂತ ಹೇಳಿರುವುದು ಸರಿಯಲ್ಲ. ಅವರ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಆಗಿದ್ದರು. ಅವರ ಪಕ್ಷದಿಂದ ಮಹಿಳೆಯೊಬ್ಬರು ಪ್ರಧಾನಿ ಕೂಡ ಆಗಿದ್ದರು. ಅಂಥದ್ದರಲ್ಲಿ ಈ ರೀತಿ ಹೇಳಿಕೆ ಸರಿಯಲ್ಲ. ಗಾಯತ್ರಿ ಸಿದ್ದೇಶ್ವರ್ ಅವರು ಹೇಳಿದ ಒಂದು ಮಾತನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಇಲ್ಲಿಯವರೆಗೂ ಮನೆ ಜವಾಬ್ದಾರಿ ನೋಡಿಕೊಳ್ಳುತ್ತಿದೆ. ಇನ್ನು ಮುಂದೆ ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾಋೆ. ಕ್ಷೇತ್ರದ ಜನತೆ ಅವರನ್ನು ಗೆಲ್ಲಿಸಿ ಕಳಿಸುವ ನಿರ್ಧಾರ ಮಾಡಿದ್ದಾರೆ ಎಂದು ಮಾಳವಿಕಾ ಅವಿನಾಶ್‌ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ‌ ಅವರು ಮಹಿಳಾ ಪರ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಯೋಜನೆಗಳನ್ನು ತಂದಿದ್ದಾರೆ. ಮಹಿಳೆಯರಿಗಾಗಿ ನಾರಿ ಶಕ್ತಿ ವಂದನ್ ಕಾರ್ಯಕ್ರಮವನ್ನು ಯೋಜಿಸಿದ್ದಾರೆ. ರಾಜಕೀಯ ಮೀಸಲಾತಿಯನ್ನು ಕೂಡ ತಂದಿದ್ದಾರೆ. ಮಹಿಳೆಯರ ಬಗ್ಗೆ ಮಾತನಾಡುವ ಕೆಟ್ಟ ಚಾಳಿ ಕಾಂಗ್ರೆಸ್‌ಗಿದೆ. ಸೋಲುವ ಹತಾಶೆಯಿಂದ ಈ ರೀತಿ ಹೇಳಿಕೆ ನೀಡಿದ್ದಾರೆ. ಕೂಡಲೇ ಶಾಮನೂರು ಶಿವಶಂಕರಪ್ಪ ಅವರು ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

Continue Reading
Advertisement
Satyendar Jain
ಪ್ರಮುಖ ಸುದ್ದಿ2 mins ago

Satyendar Jain : ಆಪ್​ಗೆ ಇನ್ನಷ್ಟು ಸಂಕಷ್ಟ; ಸತ್ಯೇಂದರ್​ ಜೈನ್ ವಿರುದ್ಧ ಸಿಬಿಐ ತನಿಖೆಗೆ ಆದೇಶ

Karnataka Weather
ಮಳೆ15 mins ago

Karnataka Weather : ಮುಂದಿನ 3 ದಿನ ಏರುತ್ತೆ ಟೆಂಪ್ರೇಚರು

Mussavir Hussain
ಪ್ರಮುಖ ಸುದ್ದಿ18 mins ago

Blast in Bangalore : ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತರ ಸುಳಿವು ಕೊಟ್ಟರೆ 10 ಲಕ್ಷ ರೂ. ಇನಾಮು; ಇಲ್ಲಿದೆ ಉಗ್ರರ ಪೋಟೊ ಸಮೇತ ವಿವರ

Provide infrastructure in polling booths says ZP Deputy Secretary Mallikarjuna thodalabagi
ಕೊಪ್ಪಳ19 mins ago

Koppala News: ಮತಗಟ್ಟೆಗಳಲ್ಲಿ ಮೂಲಸೌಕರ್ಯ ಕಲ್ಪಿಸಿ; ಜಿ.ಪಂ‌ ಉಪಕಾರ್ಯದರ್ಶಿ

18th CII ITC Sustainable Award Ceremony
ಬೆಂಗಳೂರು21 mins ago

Bengaluru News: ಸಿಎಸ್‌ಆರ್‌ ಮಹತ್ವದ ಸಾಧನೆಗಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ಗೆ ಪ್ರಶಂಸೆ

Car collided with electric pole The photographer died on the spot
ಕ್ರೈಂ24 mins ago

Road Accident: ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ; ಫೋಟೋಗ್ರಾಫರ್‌ ಸ್ಥಳದಲ್ಲೇ ಸಾವು

Ash Gourd Juice Benefits
ಆರೋಗ್ಯ25 mins ago

Ash Gourd Juice Benefits: ಬೂದುಕುಂಬಳಕಾಯಿ ಜ್ಯೂಸ್‌ ಕುಡಿಯುವುದರಿಂದ ಆಗುವ 10 ಪ್ರಯೋಜನಗಳಿವು

Lok Sabha Election 2024
ಕರ್ನಾಟಕ26 mins ago

Lok Sabha Election 2024: ಜೆಡಿಎಸ್ ಪಟ್ಟಿ ಬಿಡುಗಡೆ; ಮಂಡ್ಯದಿಂದ ಎಚ್‌ಡಿಕೆ, ಕೋಲಾರ, ಹಾಸನಕ್ಕೆ ಯಾರು?

Lok Sabha Election 2024 Women are only for cook says Shamanur Shivashankarappa and Gayatri says women knows how to fly in the sky
Lok Sabha Election 202427 mins ago

Lok Sabha Election 2024: ಮಹಿಳೆಯರು ಅಡುಗೆ ಮಾಡಲು ಲಾಯಕ್ಕು ಎಂದ ಶಾಮನೂರು; ಆಕಾಶದಲ್ಲಿ ಹಾರಾಡೋಕೂ ಗೊತ್ತೆಂದ ಗಾಯತ್ರಿ

Juce Jacking
ಪ್ರಮುಖ ಸುದ್ದಿ41 mins ago

Juice Jacking: ಸಾರ್ವಜನಿಕ ಸ್ಥಳಗಳ ಮೊಬೈಲ್​ ಚಾರ್ಜರ್​ ಬಳಸುವಾಗ ಎಚ್ಚರಿಕೆ; ಸೈಬರ್ ಕಳ್ಳರಿದ್ದಾರೆ!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ14 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 day ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ3 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ4 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌