Year Ender | ಫಿಫಾ ವಿಶ್ವ ಕಪ್ ಗೆದ್ದ ಅರ್ಜೆಂಟೀನಾ, ಟೆನಿಸ್​ಗೆ ಗುಡ್​ ಬೈ ಹೇಳಿದ ಫೆಡರರ್ ಸೇರಿದಂತೆ 2022ರ ಅತ್ಯುತ್ತಮ ಕ್ರೀಡಾ ಕ್ಷಣಗಳು! - Vistara News

New year 2023

Year Ender | ಫಿಫಾ ವಿಶ್ವ ಕಪ್ ಗೆದ್ದ ಅರ್ಜೆಂಟೀನಾ, ಟೆನಿಸ್​ಗೆ ಗುಡ್​ ಬೈ ಹೇಳಿದ ಫೆಡರರ್ ಸೇರಿದಂತೆ 2022ರ ಅತ್ಯುತ್ತಮ ಕ್ರೀಡಾ ಕ್ಷಣಗಳು!

2022ರಲ್ಲಿ (Year Ender) ಕ್ರೀಡಾ ಕ್ಷೇತ್ರದಲ್ಲಿ ದಾಖಲಾದ ಕೆಲವೊಂದು ಸ್ಮರಣೀಯ ಫಲಿತಾಂಶ ಮತ್ತು ಘಟನೆಗಳ ವಿವರ ಇಲ್ಲಿದೆ…

VISTARANEWS.COM


on

lionel messi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕತಾರ್​ ಫಿಫಾ ಫುಟ್ಬಾಲ್​ ವಿಶ್ವ ಕಪ್​ನಲ್ಲಿ ಅರ್ಜೆಂಟೀನಾ ತಂಡ ಫ್ರಾನ್ಸ್ ತಂಡವನ್ನು ಸೋಲಿಸಿದ್ದು ಈ ವರ್ಷದ ಕ್ರೀಡಾ ಕ್ಯಾಲೆಂಡರ್‌ನ ಮುಕ್ತಾಯದ ಕೊನೆಯ(Year Ender) ಸ್ಮರಣೀಯ ಕ್ಷಣವಾಗಿದೆ. ಲಿಯೋನೆಲ್ ಮೆಸ್ಸಿಯ ಬಹುಕಾಲದ ವಿಶ್ವ ಕಪ್​ ಆಸೆ ಈ ಬಾರಿ ಕತಾರ್​ನಲ್ಲಿ ಕೈಗೂಡಿತು. ಈ ಕ್ಷಣಕ್ಕಾಗಿ ಇಡೀ ವಿಶ್ವವೇ ಕಾದಿದ್ದು ವಿಶೇಷ. ಅದರಂತೆ ಈ ಸ್ಮರಣೀಯ ಗೆಲುವಿನಿಂದ ಹಿಡಿದು ಟೆನಿಸ್ ದಂತಕಥೆ ರೋಜರ್ ಫೆಡರರ್ ನಿವೃತ್ತಿ ಘೋಷಿಸುವವರೆಗೆ, 2022 ಕ್ರೀಡಾ ಜಗತ್ತಿನಲ್ಲಿ ನಡೆದ ಹಲವಾರು ಗಮನಾರ್ಹ ಕ್ಷಣಗಳ ಸಂಪೂರ್ಣ ಮೆಲುಕು ಈ ಕೆಳಗಿನಂತಿದೆ.

ಈಡೇರಿದ ಲಿಯೋನೆಲ್​ ಮೆಸ್ಸಿಯ ಫಿಫಾ ವಿಶ್ವ ಕಪ್​ ಕನಸು

37 ಕ್ಲಬ್‌ ಟ್ರೋಫಿಗಳು, 7 ಬ್ಯಾಲನ್‌ ಡಿ ಓರ್‌ ಪ್ರಶಸ್ತಿ, 6 ಯುರೋಪಿಯನ್‌ ಗೋಲ್ಡನ್‌ ಬೂಟ್ಸ್‌, ಒಂದು ಕೊಪಾ ಅಮೆರಿಕ ಚಾಂಪಿಯನ್‌ ಪಟ್ಟ, ಒಂದು ಒಲಿಂಪಿಕ್‌ ಚಿನ್ನದ ಪದಕ 18 ವರ್ಷಗಳ ಈ ಸುದೀರ್ಘ‌ ಫುಟ್ಬಾಲ್​ ಬಾಳ್ವೆಯಲ್ಲಿ ಇಷ್ಟೆಲ್ಲ ಪ್ರಶಸ್ತಿ ಪಡೆದರೂ ಮೆಸ್ಸಿ ಪಾಲಿಗೆ ವಿಶ್ವಕಪ್‌ ಎಂಬುದು ಮರೀಚಿಕೆಯೇ ಆಗಿ ಉಳಿದಿತ್ತು. ಈ ಕೊರಗು ಮೆಸ್ಸಿಯನ್ನು ಪ್ರತಿ ವಿಶ್ವ ಕಪ್​ ಟೂರ್ನಿ ಆಡುವಾಗಲೂ ಕಾಡುತ್ತಲೇ ಇತ್ತು. ಆದರೆ ಇದೀಗ ಈ ಕೊರಗು ನೀಗಿದೆ. ಹೌದು ಕತಾರ್​ ಫಿಫಾ ವಿಶ್ವಕಪ್​ನಲ್ಲಿ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ಕಪ್​ ಎತ್ತಿ ಮೆರದಾಟಿತು. ಈ ಮೂಲಕ ಅರ್ಜೆಂಟೀನಾ 36 ವರ್ಷದ ಬಳಿಕ ಚಾಂಪಿಯನ್​ ಪಟ್ಟ ಅಲಂಕರಿಸಿತು. ಜತೆಗೆ ಮೆಸ್ಸಿಯ ಬಹುಕಾಲದ ಆಸೆಯೂ ಈಡೇರಿತು. ಜತೆಗೆ ಮೆಸ್ಸಿ ಫುಟ್ಬಾಲ್​ನ ಶ್ರೇಷ್ಠರಲ್ಲಿ ಒಬ್ಬರು ಎಂಬುದನ್ನು ಸಾಬೀತುಪಡಿಸಿದರು. ಕೂಟದಲ್ಲಿ ಮೆಸ್ಸಿ ಒಟ್ಟು ಏಳು ಗೋಲುಗಳನ್ನು ದಾಖಲಿಸಿ. ಅತ್ಯುತ್ತಮ ಆಟಗಾರನಾಗಿ ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಗೆದ್ದರು.

ಚೊಚ್ಚಲ ಪ್ರಯತ್ನದಲ್ಲೇ ಟಿ20 ವಿಶ್ವ ಕಪ್ ಗೆದ್ದ ಜಾಸ್​ ಬಟ್ಲರ್​

ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ ಪುರುಷರ ಟಿ20 ವಿಶ್ವ ಕಪ್ 2022ರ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದ ಜೋಸ್ ಬಟ್ಲರ್ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ತಂಡವನ್ನು ಚಾಂಪಿಯನ್​ ಆಗಿ ಹೊರಹೊಮ್ಮಿಸಿದರು. ಇದರೊಂದಿಗೆ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಬಳಿಕ ಈ ಸಾಧನೆ ಮಾಡಿದ ಕೀರ್ತಿ ಬಟ್ಲರ್​ ಪಾಲಾಯಿತು. ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಇಂಗ್ಲೆಂಡ್ ತನ್ನ ಎರಡನೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಸೆಮಿಫೈನಲ್‌ನಲ್ಲಿ ಟೀಮ್​ ಇಂಡಿಯಾವನ್ನು 10 ವಿಕೆಟ್​ಗಳಿಂದ ಸೋಲಿಸಿ ಇಂಗ್ಲೆಂಡ್ ಫೈನಲ್‌ ಪ್ರವೇಶಿಸಿತ್ತು.

ಟೆನಿಸ್​ಗೆ ವಿದಾಯ ಹೇಳಿದ ರೋಜರ್ ಫೆಡರರ್

ಟೆನಿಸ್​ ಲೋಕದ ದಿಗ್ಗಜರಲ್ಲಿ ಒಬ್ಬರಾದ ರೋಜರ್ ಫೆಡರರ್ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಘೋಷಿಸಿದ್ದು 2022ರ ಪ್ರಮುಖ ಕ್ರೀಡಾ ಕ್ಷಣಗಳಲ್ಲಿ ಒಂದಾಗಿದೆ. ಗಾಯದಿಂದ ಚೇತರಿಕೆ ಕಂಡು ವಿಂಬಲ್ಡನ್ 2021ರಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಾಗ, ಅವರು 2022ರಲ್ಲಿಯೂ ಮತ್ತೆ ಟೆನಿಸ್​ ಅಂಗಳಕ್ಕೆ ಮರಳುವ ನಿರೀಕ್ಷೆ ಇತ್ತು. ಆದರೆ ಮತ್ತೆ ಗಾಯದ ಸಮಸ್ಯೆ ಕಾಡಿದ ಕಾರಣ ಅಂತಿಮವಾಗಿ ಅವರು ಟೆನಿಸ್​ಗೆ ವಿದಾಯ ಘೋಷಿಸಿದರು. 20 ಬಾರಿಯ ಗ್ರ್ಯಾನ್‌ ಸ್ಲಾಮ್‌ ಚಾಂಪಿಯನ್ ಫೆಡರರ್, ಲೇವರ್ ಕಪ್ 2022ರಲ್ಲಿ ಆಡುವ ಮೂಲಕ ವೃತ್ತಿಪರ ಟೆನಿಸ್‌ಗೆ ನಿವೃತ್ತಿ ಘೋಷಿಸಿದರು.

ಕಾರ್ಲೋಸ್ ಅಲ್ಕರಾಜ್‌ಗೆ ಕನಸಿನ ವರ್ಷ

2022ರ ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸ್ಪೇನ್‌ನ 19ರ ಹರೆಯದ ಯುವಕ ಕಾರ್ಲೋಸ್ ಅಲ್ಕರಾಜ್‌ ಚೊಚ್ಚಲ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಟೆನಿಸ್‌ನಲ್ಲಿ ಸೆನ್ಸೇಷನ್ ಸೃಷ್ಟಿಸಿದ ಅಲ್ಕರಾಜ್, ಪ್ರತಿಷ್ಠಿತ ಟ್ರೋಫಿ ಗೆದ್ದು ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಏರಿದರು. ಕೇವಲ 19 ವರ್ಷ ಮತ್ತು ನಾಲ್ಕು ತಿಂಗಳ ವಯಸ್ಸಿನಲ್ಲಿ ಈ ಮಹೋನ್ನತ ಸಾಧನೆ ಮಾಡಿದ ಅಲ್ಕರಾಜ್‌, ಎಟಿಪಿ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ. ಈ ಎಲ್ಲ ಸಾಧನೆ ಮಾಡಿದ ಕಾರಣ ಅಲ್ಕರಾಜ್‌ಗೆ 2022 ಕನಸಿನ ವರ್ಷವಾಗಿ ನೆನಪುಳಿಯಲಿದೆ.

ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದ ಭಾರತ ಪುರುಷರ ಹಾಕಿ ತಂಡ

ಭಾರತ ಪುರುಷರ ಹಾಕಿ ತಂಡವು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ 2022ರ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಬೆಳ್ಳಿ ಪದಕಕ್ಕೆ ಜಯಿಸಿತ್ತು. ಟೋಕಿಯೊ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ಸಾಧನೆಯ ಬಳಿಕ ಭಾರತೀಯ ಪುರುಷರ ತಂಡ ಸಾಧಿಸಿದ ಎರಡನೇ ಮೈಲಿಗಲ್ಲಿನ ಪ್ರದರ್ಶನ ಇದಾಗಿದೆ. ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಸೋಲು ಕಂಡಿತ್ತು.

ಇದನ್ನೂ ಓದಿ | Year Ender | ಹೊಸ ಪದಕಗಳು, ವಿಶ್ವ ದಾಖಲೆಗಳು; ಭಾರತದ ಕ್ರೀಡಾ ಕ್ಷೇತ್ರಕ್ಕೆ ಚೈತನ್ಯ ತಂದ 2022

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

New year 2023

Bharat Jodo Yatra | ರಾಹುಲ್ ಗಾಂಧಿಯನ್ನು ಹೊಗಳಿದ ರಾಮಮಂದಿರ ಟ್ರಸ್ಟ್​ ಪ್ರಮುಖರು; ಆಶೀರ್ವದಿಸಿ ಪತ್ರ ಬರೆದ ಮುಖ್ಯ ಅರ್ಚಕ

ಉತ್ತರ ಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆ ಮೂರು ದಿನ ಸಂಚರಿಸಲಿದೆ. ಜನವರಿ 6ರಂದು ಹರ್ಯಾಣಕ್ಕೆ ಕಾಲಿಡಲಿದೆ. ಜನವರಿ 20ಕ್ಕೆ ಜಮ್ಮು-ಕಾಶ್ಮೀರಕ್ಕೆ ಪ್ರವೇಶಿಸಿ, ಜನವರಿ 30ರಂದು ಕೊನೆಗೊಳ್ಳಲಿದೆ.

VISTARANEWS.COM


on

Congress Leader Rahul Gandhi to address British Parliament
ರಾಹುಲ್ ಗಾಂಧಿ
Koo

ಅಯೋಧ್ಯೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯನ್ನು ಅಯೋಧ್ಯಾ ರಾಮಮಂದಿರ ಟ್ರಸ್ಟ್ ನ ಕಾರ್ಯದರ್ಶಿ ಚಂಪತ್ ರಾಯ್ ಶ್ಲಾಘಿಸಿದ್ದಾರೆ. ಇಂಥ ಪಾದಯಾತ್ರೆಗಳನ್ನು ನಡೆಸುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.

ಭಾರತ್ ಜೋಡೋ ಯಾತ್ರೆ ಮಂಗಳವಾರ ಉತ್ತರ ಪ್ರದೇಶವನ್ನು ಪ್ರವೇಶಿಸಿದೆ. ಸಹಚರರೊಂದಿಗೆ ಉತ್ತರ ಪ್ರದೇಶಕ್ಕೆ ಕಾಲಿಟ್ಟ ರಾಹುಲ್ ಗಾಂಧಿಯವರಿಗೆ ಅಯೋಧ್ಯಾ ರಾಮ ಜನ್ಮಭೂಮಿ ದೇಗುಲದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಅವರು ಆಶೀರ್ವಾದಪೂರ್ವಕ ಪತ್ರವನ್ನು ಬರೆದು ತಲುಪಿಸಿದ್ದಾರೆ. ಅದರ ಬೆನ್ನಲ್ಲೇ ಚಂಪತ್ ರಾಯ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಇಡೀ ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತುತ್ತಿರುವ ರಾಹುಲ್ ಗಾಂಧಿ ಅವರನ್ನು ನಾನು ಶ್ಲಾಘಿಸುತ್ತೇನೆ. ನಾನೊಬ್ಬ ಆರ್ ಎಸ್ ಎಸ್ ಕಾರ್ಯಕರ್ತ. ಆರ್ ಎಸ್ ಎಸ್ ಯಾವತ್ತೂ ಭಾರತ್ ಜೋಡೋ ಯಾತ್ರೆಯನ್ನು ವಿರೋಧಿಸಿಲ್ಲ. ರಾಹುಲ್ ಗಾಂಧಿ ನಡೆಸುತ್ತಿರುವ ಪಾದಯಾತ್ರೆಯಲ್ಲಿ ನನಗೆ ತಪ್ಪೇನೂ ಕಾಣುತ್ತಿಲ್ಲ. ಇಷ್ಟು ಕೆಟ್ಟ ಚಳಿ ಮಧ್ಯೆ ರಾಹುಲ್ ಗಾಂಧಿ ಯಾತ್ರೆ ನಡೆಸುತ್ತಿದ್ದಾರೆ. ಅವರಂತೆ ಪ್ರತಿಯೊಬ್ಬರೂ ದೇಶಕ್ಕಾಗಿ ಯಾತ್ರೆ ಮಾಡಬೇಕು ಎಂದು ಹೇಳಿದ್ದಾರೆ.

ಹಾಗೇ, ರಾಮಮಂದಿರ ಟ್ರಸ್ಟ್ ನ ಹಿರಿಯ ಟ್ರಸ್ಟಿ ಗೋವಿಂದ ದೇವ ಗಿರಿ ಅವರೂ ರಾಹುಲ್ ಗಾಂಧಿಯವರನ್ನು ಹರಿಸಿದ್ದಾರೆ. ಈ ದೇಶ ಒಗ್ಗಟ್ಟಾಗಿರಬೇಕು, ಸಾಮರಸ್ಯದಿಂದ ಇರಬೇಕು ಮತ್ತು ಇನ್ನಷ್ಟು ಬಲಶಾಲಿಯಾಗಬೇಕು ಎಂದು ಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿಗೆ ಶ್ರೀರಾಮ ಆಶೀರ್ವಾದಿಸಲಿ ಎಂದಿದ್ದಾರೆ. ಹಾಗೇ, ಭಾರತ್ ಜೋಡೋ ಎಂಬ ಹೆಸರೇ ಚೆನ್ನಾಗಿದೆ. ಭಾರತ ಒಂದಾಗಬೇಕು ಎಂದೂ ಹೇಳಿದ್ದಾರೆ.

ಮುಖ್ಯ ಅರ್ಚಕ ಬರೆದ ಪತ್ರದಲ್ಲಿ ಏನಿದೆ?
ಮಂಗಳವಾರ ಭಾರತ್​ ಜೋಡೋ ಯಾತ್ರೆ ಉತ್ತರ ಪ್ರದೇಶಕ್ಕೆ ಕಾಲಿಟ್ಟ ಬೆನ್ನಲ್ಲೇ ಅಯೋಧ್ಯಾ ರಾಮ ದೇಗುಲದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್​ ಅವರಿಗೆ ಆಶೀರ್ವಾದ ಪೂರ್ವಕ ಪತ್ರ ಬರೆದಿದ್ದರು. ‘ನೀವು ಸರ್ವಜನ ಹಿತ ಮತ್ತು ಸುಖಕ್ಕಾಗಿ ಒಂದೊಳ್ಳೆ ಕೆಲಸವನ್ನು ಮಾಡುತ್ತಿದ್ದೀರಿ. ನಿಮಗೆ ಶ್ರೀರಾಮ ಒಳ್ಳೆಯದು ಮಾಡಲಿ’ ಎಂದು ರಾಹುಲ್​ ಗಾಂಧಿಯವರಿಗೆ ಹಾರೈಸಿದ್ದರು. ‘ಯಾತ್ರೆಗೆ ಶುಭವಾಗಲಿ, ನಿಮ್ಮ ಆರೋಗ್ಯ ಚೆನ್ನಾಗಿರಲಿ’ ಎಂದೂ ಹೇಳಿದ್ದರು.

ಇದನ್ನೂ ಓದಿ: ಭಾರತ್​ ಜೋಡೋ ಯಾತ್ರೆ ದೆಹಲಿಗೆ ಕಾಲಿಟ್ಟಾಗಿನಿಂದಲೂ ರಾಹುಲ್​ ಗಾಂಧಿ ಭದ್ರತೆಯಲ್ಲಿ ವೈಫಲ್ಯ; ಅಮಿತ್​ ಶಾಗೆ ಕಾಂಗ್ರೆಸ್​ ಪತ್ರ

Continue Reading

New year 2023

BMTC Income | ಆರ್ಥಿಕವಾಗಿ ಕುಗ್ಗಿದ್ದ ಬಿಎಂಟಿಸಿಗೆ ವರ್ಷಾರಂಭದಲ್ಲಿ ಹರ್ಷ!

ಹೊಸ ವರ್ಷ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ ನಡೆಸಿದ್ದ ಬಿಎಂಟಿಸಿಗೆ ಮೊದಲ ದಿನವೇ ಭರ್ಜರಿ (BMTC Income) ಆದಾಯ ಗಳಿಸಿದೆ. ನಷ್ಟದ ಸುಳಿಯಲಿ ಸಿಲುಕಿ ನರಳಾಡುತ್ತಿದ್ದ ಬಿಎಂಟಿಸಿಗೆ ಕೊಂಚ ಹರ್ಷ ತಂದಿದೆ.

VISTARANEWS.COM


on

By

Demand for implementation of 6th Pay Commission Transport employees call for protest from March 1
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿದ್ದ ಬಿಎಂಟಿಸಿ ನಿಗಮಕ್ಕೆ ಈ ಹೊಸ ವರ್ಷ ಕೊಂಚ ಹರ್ಷ ತಂದಿದೆ. ವರ್ಷದ ಮೊದಲ ದಿನ ಬಿಎಂಟಿಸಿಗೆ ಬಂಪರ್ ಆದಾಯ (BMTC Income) ಗಳಿಸಿದೆ. ಹೊಸ ವರ್ಷಕ್ಕೆಂದು ಸುಮಾರು 87 ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ನಡೆಸಿತ್ತು. ಮೊದಲೇ ಆರ್ಥಿಕವಾಗಿ ಕುಗ್ಗಿದ್ದ ಬಿಎಂಟಿಸಿಗೆ ವರ್ಷದ ಮೊದಲ ದಿನವೇ ಬಂದ ಆದಾಯದ ಕಿಕ್ ಹೆಚ್ಚಿಸಿದೆ.

ಒಂದೇ ದಿನ ಬಿಎಂಟಿಸಿ ಹೆಚ್ಚುವರಿ ಬಸ್ ಕಾರ್ಯಾಚರಣೆಯಿಂದ ₹1,99,983 ಹೆಚ್ಚಿನ ಆದಾಯ ಬಂದಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಡಿ.31 ಹಾಗೂ ಜ.1ರ ಮಧ್ಯರಾತ್ರಿವರೆಗೂ ಹೆಚ್ಚುವರಿ ಬಸ್‌ಗಳನ್ನು ರಸ್ತೆಗಿಳಿಸಿತ್ತು. ಹೆಚ್ಚುವರಿ ಬಸ್‌ಗಳು ಸುಮಾರು 4443.9 ಕಿ.ಮೀ ನಷ್ಟು ಸಂಚಾರ ಮಾಡಿವೆ. ವರ್ಷದ ಮೊದಲ ದಿನ ಹೆಚ್ಚುವರಿ ಕಾರ್ಯಾಚರಣೆ ಮಾಡಿದ ಬಸ್‌ಗಳಲ್ಲಿ ಸುಮಾರು 13,332 ಮಂದಿ ಪ್ರಯಾಣಿಸಿರುವುದಾಗಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಬ್ಬಂದಿ ಮುಷ್ಕರ-ಕೋವಿಡ್‌ನಿಂದ ಕುಗ್ಗಿದ್ದ ಬಿಎಂಟಿಸಿ
ಮೊದಲೇ ಮುಳುಗುವ ಹಡುಗು ಆಗಿದ್ದ ಬಿಎಂಟಿಸಿ ನಿಗಮಕ್ಕೆ ನೌಕರರ ಸಾಲು ಸಾಲು ಮುಷ್ಕರ ಹಾಗೂ ಸಾಂಕ್ರಾಮಿಕ ಕೊರೊನಾ ಹೊಡೆತದಿಂದಾಗಿ ಬಸ್‌ ಓಡಾಟ ಇಲ್ಲದೆ ನಷ್ಟನ ಸುಳಿಯಲ್ಲಿ ಸಿಲುಕಿತು. ಜತೆಗೆ ತೈಲ ಬೆಲೆ ಏರಿಕೆಯಿಂದಾಗಿ ಬಸ್‌ ಓಡಿಸಿದರೂ ಕಷ್ಟ, ಸುಮ್ಮನೆ ನಿಲ್ಲಿಸಿದರೂ ನಷ್ಟ ಎಂಬ ಪರಿಸ್ಥಿತಿ ಉದ್ಭವಿಸಿತ್ತು. ಸಿಬ್ಬಂದಿಯ ಸಂಬಳವನ್ನು ನೀಡಲು ಆಗದೆ ನಿಗಮವು ಸರ್ಕಾರದ ಸಹಾಯಹಸ್ತ ಚಾಚಿತ್ತು. ಹಾಗೆ ನೌಕರರ ಪಿಎಫ್‌ ಹಣವನ್ನು ಬಳಸಿಕೊಳ್ಳುತ್ತಿದೆ ಎಂಬ ಆರೋಪವನ್ನು ಹೊತ್ತಿತ್ತು. ಇವೆಲ್ಲದರ ನಡುವೆ ಇದೀಗ ನಿಧಾನವಾಗಿ ಆರ್ಥಿಕ ಚೇತರಿಕೆಯನ್ನು ಕಂಡುಕೊಳ್ಳುತ್ತಿದೆ.

ಇದನ್ನೂ ಓದಿ | Siddheshwar Swamiji | ಸಿದ್ದೇಶ್ವರ ಶ್ರೀಗಳ ಮಣ್ಣಿನ ಮೂರ್ತಿ; ಕಲಾವಿದನಿಂದ ವಿಶೇಷ ಗೌರವ

Continue Reading

New year 2023

Swiggy Order | ಹೊಸ ವರ್ಷದ ಪಾರ್ಟಿಗೆ ಸ್ವಿಗ್ಗಿಯಲ್ಲಿ 3.5 ಲಕ್ಷ ಬಿರ್ಯಾನಿ, 1.76 ಲಕ್ಷ ಚಿಪ್ಸ್‌ ಪ್ಯಾಕೆಟ್‌ ಆರ್ಡರ್!

ಹೊಸ ವರ್ಷದ ಪಾರ್ಟಿ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ಆಹಾರ, ಚಿಪ್ಸ್‌ ಪ್ಯಾಕೆಟ್‌ಗಳನ್ನು ಆರ್ಡರ್‌ (Swiggy Order) ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಸ್ವಿಗ್ಗಿ ತಿಳಿಸಿದೆ.

VISTARANEWS.COM


on

Swiggy Order On New Years Eve
Koo

ನವದೆಹಲಿ: ಹೊಸ ವರ್ಷದ ಹಿನ್ನೆಲೆಯಲ್ಲಿ ಶನಿವಾರವೇ ದೇಶಾದ್ಯಂತ ಸಂಭ್ರಮ ಮನೆಮಾಡಿತ್ತು. ಪಾರ್ಟಿ ಆಯೋಜನೆ, ಪಾರ್ಟಿ ಸಿದ್ಧತೆ, ಕೇಕ್‌ ಕತ್ತರಿಸುವುದು ಸೇರಿ ಹಲವು ರೀತಿಯಲ್ಲಿ ಜನ ಸಂಭ್ರಮಾಚರಣೆ ಮಾಡಿದರು. ಅದರಲ್ಲೂ, ಪಾರ್ಟಿಗಾಗಿ ಆನ್‌ಲೈನ್‌ ಮೂಲಕ ಕೋಟ್ಯಂತರ ಜನ ಫುಡ್‌ ಆರ್ಡರ್‌ (Swiggy Order) ಮಾಡಿದ್ದು, ಇಲ್ಲೂ ಬಿರ್ಯಾನಿಯೇ ಅಗ್ರ ಸ್ಥಾನ ಪಡೆದಿದೆ. ಮದ್ಯಪಾನದ ಪಾರ್ಟಿಗಾಗಿ ಲಕ್ಷಾಂತರ ಚಿಪ್ಸ್‌ ಪ್ಯಾಕೆಟ್‌ಗಳನ್ನೂ ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಲಾಗಿದೆ.

ಹೌದು, ಹೊಸ ವರ್ಷದ ಹಿಂದಿನ ದಿನವಾದ ಶನಿವಾರ ರಾತ್ರಿ 10.45ರ ವೇಳೆಗೆ ಸ್ವಿಗ್ಗಿಯಲ್ಲಿ 3.5 ಲಕ್ಷಕ್ಕೂ ಅಧಿಕ ಬಿರ್ಯಾನಿಗಳನ್ನು ಆರ್ಡರ್‌ ಮಾಡಲಾಗಿದೆ. ಹಾಗೆಯೇ, ನಂತರದ ಬೇಡಿಕೆಗೆ ಪಿಜ್ಜಾಗೆ ಇದ್ದು, 61 ಸಾವಿರ ಪಿಜ್ಜಾ ಆರ್ಡರ್‌ ಮಾಡಲಾಗಿದೆ ಎಂದು ಸ್ವಿಗ್ಗಿ ಕಂಪನಿ ತಿಳಿಸಿದೆ.

ಸ್ವಿಗ್ಗಿ ಈ ಕುರಿತು ಸಮೀಕ್ಷೆಯನ್ನೂ ನಡೆಸಿದ್ದು, ಶೇ.75.4ರಷ್ಟು ಜನ ಹೈದರಾಬಾದ್‌ ಬಿರ್ಯಾನಿ, ಶೇ.14.2ರಷ್ಟು ಮಂದಿ ಲಖನೌವಿ ಬಿರ್ಯಾನಿ ಹಾಗೂ ಶೇ.10.4ರಷ್ಟು ಜನ ಕೋಲ್ಕೊತಾ ಬಿರ್ಯಾನಿ ಆರ್ಡರ್‌ ಮಾಡಿದ್ದಾರೆ ಎಂದು ಮಾಹಿತಿ ನೀಡಿದೆ. ಹಾಗೆಯೇ, ಸ್ವಿಗ್ಗಿಯ ಇನ್‌ಸ್ಟಾಮಾರ್ಟ್‌ನಲ್ಲಿ ಸಂಜೆ 7 ಗಂಟೆ ವೇಳೆಗೆ 1.76 ಚಿಪ್ಸ್‌ ಪ್ಯಾಕೆಟ್‌, 2,757 ಪ್ಯಾಕೆಟ್‌ ಡ್ಯುರೆಕ್ಸ್‌ ಕಾಂಡೋಮ್‌ಗಳನ್ನು ಆರ್ಡರ್‌ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ | New Year 2023 | ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಭ್ರಮದ ಹೊಸ ವರ್ಷಾಚರಣೆ

Continue Reading

New year 2023

Ras Al Khaimah | 673 ಡ್ರೋನ್‌, 4.7 ಕಿ.ಮೀವರೆಗೆ ಆಗಸದಲ್ಲಿ ಪಟಾಕಿ, ಬೆಳಕಿನ ಚಿತ್ತಾರ, 2 ಗಿನ್ನೆಸ್‌ ದಾಖಲೆ ಬರೆದ ರಸ್‌ ಅಲ್‌ ಖೈಮಾ

ಹೊಸ ವರ್ಷಾಚರಣೆಗೆ ಹೇಳಿ ಮಾಡಿಸಿದಂತಿರುವ ರಸ್‌ ಅಲ್‌ ಖೈಮಾ (Ras Al Khaimah) ನಗರವು ಈ ಬಾರಿಯೂ ಅದ್ಧೂರಿ ಆಚರಣೆ ಮೂಲಕ ಎರಡು ಗಿನ್ನೆಸ್‌ ದಾಖಲೆ ಬರೆದಿದೆ.

VISTARANEWS.COM


on

Ras Al Khaimah New Year Celebration
Koo

ಅಬುಧಾಬಿ: ಭಾರತ ಸೇರಿ ಜಗತ್ತಿನಾದ್ಯಂತ ಸಂಭ್ರಮ-ಸಡಗರದಿಂದ ಹೊಸ ವರ್ಷ ಆಚರಣೆ ಮಾಡಲಾಗಿದೆ. ಪಟಾಕಿ ಸಿಡಿಸಿ, ಹಾಡಿ, ಕುಣಿದು, ನಲಿದು ಹೊಸ ಸಂವತ್ಸರವನ್ನು ಸ್ವಾಗತಿಸಲಾಗಿದೆ. ಹೀಗೆ, ಅದ್ಧೂರಿಯಾಗಿ ಹೊಸ ವರ್ಷಾವನ್ನು ಸ್ವಾಗತಿಸುವ ಮೂಲಕ ಯುಎಇಯ ರಸ್‌ ಅಲ್‌ ಖೈಮಾ (Ras Al Khaimah) ನಗರವು ಎರಡು ಗಿನ್ನೆಸ್‌ ದಾಖಲೆ ಬರೆದಿದೆ. ಹೊಸ ವರ್ಷಾಚರಣೆಗೆ ತಾನೇ ಅಧಿಪತಿ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ.

ಹೌದು, ರಸ್‌ ಅಲ್‌ ಖೈಮಾದಲ್ಲಿ ಶನಿವಾರ ರಾತ್ರಿ 673 ಡ್ರೋನ್‌ಗಳನ್ನು ಬಳಸಿ ಸುಮಾರು 4.7 ಕಿ.ಮೀ ವ್ಯಾಪ್ತಿಯಲ್ಲಿ ಪಟಾಕಿ ಸಿಡಿಸಿ, ಬೆಳಕಿನ ಚಿತ್ತಾರ ಮೂಡಿಸಿ, ಕೊನೆಗೆ ಆಗಸದಲ್ಲಿಯೇ ‘ಹ್ಯಾಪಿ ನ್ಯೂ ಇಯರ್‌ 2023’ (Happy New Year 2023) ಎಂಬ ಅಕ್ಷರಗಳು ಮೂಡುವ ಮೂಲಕ ಶುಭಕೋರಲಾಗಿದೆ. ಹಾಗಾಗಿ, ರಸ್‌ ಅಲ್‌ ಖೈಮಾದಲ್ಲಿ ಪಟಾಕಿ ಹಾಗೂ ದೀಪಗಳ ಚಿತ್ತಾರ ಮೂಡಿಸಿದ್ದು ಎರಡು ಗಿನ್ನೆಸ್‌ ದಾಖಲೆ ಬರೆದಿದೆ. ಸುಮಾರು 1,100 ಮೀಟರ್‌ ಎತ್ತರದಲ್ಲಿ ಪಟಾಕಿ ಸಿಡಿಸಿ, ವಿದ್ಯುತ್‌ ದೀಪಗಳನ್ನು ಬೆಳಗಲಾಗಿದೆ. ಹೀಗೆ, ಆಗಸದಲ್ಲಿ ಬೆಳಕಿನ ರಂಗಿನಾಟವಿರುವ 12 ನಿಮಿಷದ ವಿಡಿಯೊವನ್ನು ರಸ್‌ ಅಲ್‌ ಖೈಮಾದ ಆಡಳಿತವು ಶೇರ್‌ ಮಾಡಿದೆ.

ಇದಕ್ಕೂ ಮೊದಲು ಸುಮಾರು 458 ಡ್ರೋನ್‌ಗಳನ್ನು ಬಳಸಿ, ಪಟಾಕಿ ಸಿಡಿಸಿ, ಬೆಳಕಿನ ಚಿತ್ತಾರ ಮೂಡಿಸಿದ್ದು ಗಿನ್ನೆಸ್‌ ದಾಖಲೆ ಆಗಿತ್ತು. ಈಗ ಈ ದಾಖಲೆಯನ್ನು ರಸ್‌ ಅಲ್‌ ಖೈಮಾ ಮುರಿದಿದೆ. ಹೊಸ ವರ್ಷಾಚರಣೆಗೆ ರಸ್‌ ಅಲ್‌ ಖೈಮಾ ಖ್ಯಾತಿ ಗಳಿಸಿದ್ದು, ಈ ಬಾರಿ 30 ಸಾವಿರಕ್ಕೂ ಅಧಿಕ ಜನ ಹೊಸ ವರ್ಷ ಆಚರಿಸಲು ನಗರಕ್ಕೆ ಆಗಮಿಸಿದ್ದರು ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | New Year 2023 | ಜಗತ್ತಿನಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದ್ದು ಹೇಗೆ? ಇಲ್ಲಿವೆ ಫೋಟೊಗಳು

Continue Reading
Advertisement
Amit Shah
ದೇಶ4 mins ago

Amit Shah: ಪ್ರಚಾರದ ವೇಳೆ ಕೇಜ್ರಿವಾಲ್‌ ನೀಡಿದ ಹೇಳಿಕೆಯಿಂದ ನ್ಯಾಯಾಂಗ ನಿಂದನೆ; ಅಮಿತ್‌ ಶಾ ವಾಗ್ದಾಳಿ

PBKS vs RR
ಕ್ರೀಡೆ9 mins ago

PBKS vs RR: ಸ್ಯಾಮ್‌ ಕರನ್‌ ಏಕಾಂಗಿ ಬ್ಯಾಟಿಂಗ್​ ಹೋರಾಟಕ್ಕೆ ತಲೆ ಬಾಗಿದ ರಾಜಸ್ಥಾನ್​

Anjali Murder Case
ಕ್ರೈಂ27 mins ago

Anjali Murder Case: ಅಂಜಲಿ‌ ಕೊಲೆ‌ ಪ್ರಕರಣದಲ್ಲಿ ಕರ್ತವ್ಯ ಲೋಪ; ಇನ್ಸ್‌ಪೆಕ್ಟರ್, ಮಹಿಳಾ ಪೇದೆ ಅಮಾನತು

Participation of young women in science technology information and communication fields should be increased says Isha Ambani
ದೇಶ38 mins ago

Isha Ambani: ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಶ್ಲಾಘಿಸಿದ ಇಶಾ ಅಂಬಾನಿ

Retired Teacher G T Bhatt Bommanahalli 80th celebration programme on May 19
ಉತ್ತರ ಕನ್ನಡ45 mins ago

Uttara Kannada News: ಮೇ 19ರಂದು ನಿವೃತ್ತ ಶಿಕ್ಷಕ ಜಿ. ಟಿ. ಭಟ್ ಬೊಮ್ಮನಹಳ್ಳಿ 80ರ ಸಂಭ್ರಮ

Dalita Sangharsha samiti demands that Minister HK Patil should be dismissed from the Cabinet
ರಾಯಚೂರು49 mins ago

Raichur News: 371 ಜೆ ಮೀಸಲಾತಿ ಮುಂದುವರಿಸದಂತೆ ಸಿಎಂಗೆ ಪತ್ರ ಬರೆದ ಎಚ್.ಕೆ. ಪಾಟೀಲ್ ವಜಾಗೆ ದಸಂಸ ಆಗ್ರಹ

Sandeep Lamichhane
ಕ್ರೀಡೆ1 hour ago

Sandeep Lamichhane: ಅತ್ಯಾಚಾರ ಆರೋಪದಲ್ಲಿ 8 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕ್ರಿಕೆಟಿಗ ಲಮಿಚಾನೆಗೆ ರಿಲೀಫ್; ನಿರಪರಾಧಿ ಎಂದ ಕೋರ್ಟ್​

Shyam Rangeela
ದೇಶ1 hour ago

Shyam Rangeela: ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿದ ಕಲಾವಿದನ ನಾಮಪತ್ರ ತಿರಸ್ಕಾರ!

Terrorist Arrested
ಕರ್ನಾಟಕ2 hours ago

Terrorist Arrested: ಬೆಂಗಳೂರಿನ ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಶಂಕಿತ ಉಗ್ರನ ಬಂಧನ

Monsoon 2024
ದೇಶ2 hours ago

Monsoon 2024: ರೈತರಿಗೆ ಗುಡ್‌ ನ್ಯೂಸ್;‌ ಮುಂಗಾರು ಮಳೆ ಆಗಮನಕ್ಕೆ ಫಿಕ್ಸ್‌ ಆಯ್ತು ದಿನಾಂಕ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ16 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ18 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ1 day ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20241 day ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20241 day ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ1 day ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು1 day ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌