Taj Mahal | ಈ ಬಾರಿ ಸೋತ ಪ್ರೇಮ ಸ್ಮಾರಕ: ಅತಿ ಹೆಚ್ಚು ವಿದೇಶೀಯರನ್ನು ಸೆಳೆದ ಭಾರತದ ತಾಣ ಮಹಾಬಲಿಪುರಂ! - Vistara News

ದೇಶ

Taj Mahal | ಈ ಬಾರಿ ಸೋತ ಪ್ರೇಮ ಸ್ಮಾರಕ: ಅತಿ ಹೆಚ್ಚು ವಿದೇಶೀಯರನ್ನು ಸೆಳೆದ ಭಾರತದ ತಾಣ ಮಹಾಬಲಿಪುರಂ!

ಭಾರತದಲ್ಲಿ ಯಾವಾಗಲೂ ಅತೀ ಹೆಚ್ಚು ವಿದೇಶಿ ಪ್ರವಾಸಿಗರನ್ನು ಸೆಳೆಯುವ ತಾಣ ನಿಸ್ಸಂಶಯವಾಗಿ ತಾಜ್‌ಮಹಲ್‌. ಆದರೆ 2022 ಮಾತ್ರ ಇಷ್ಟರವರೆಗಿದ್ದ ಈ ದಾಖಲೆಯನ್ನು ಮುರಿದಿದೆ.

VISTARANEWS.COM


on

mahabalipuram
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಶ್ವದಾದ್ಯಂತ ಪ್ರವಾಸಿಗರನ್ನು ಸೆಳೆಯುವ, ಪ್ರಪಂಚದ ಏಳು ಅದ್ಭುತಗಳ ಪಟ್ಟಿಯಲ್ಲಿರುವ ತಾಜ್‌ಮಹಲ್‌ ೨೦೨೨ರಲ್ಲಿ ಭಾರತದಲ್ಲಿ ಅತೀ ಹೆಚ್ಚು ವಿದೇಶೀಯರನ್ನು ಸೆಳೆದ ತಾಣಗಳ ಪೈಕಿ ಎರಡನೇ ಸ್ಥಾನದಲ್ಲಿದೆ ಎಂದರೆ ನಂಬುತ್ತೀರಾ?

ಹೌದು ನಂಬಲೇಬೇಕು. ಭಾರತದಲ್ಲಿ ಯಾವಾಗಲೂ ಅತೀ ಹೆಚ್ಚು ವಿದೇಶಿ ಪ್ರವಾಸಿಗರನ್ನು ಸೆಳೆಯುವ ತಾಣ ನಿಸ್ಸಂಶಯವಾಗಿ ತಾಜ್‌ಮಹಲ್‌. ಭಾರತದಕ್ಕೆ ಬಂದ ಪ್ರವಾಸಿಗರ್ಯಾರೂ ತಾಜ್‌ಮಹಲನ್ನು ನೋಡದೆ ಮರಳುವುದು ಕಡಿಮೆ. ಪ್ರತಿಯೊಬ್ಬರೂ ವಿಶ್ವದ ಏಳು ಅದ್ಭುತಗಳಲ್ಲೊಂದಾದ ತಾಜ್‌ಮಹಲನ್ನು ನೋಡಿಯೇ ತಮ್ಮ ದೇಶಗಳಿಗೆ ಮರಳುತ್ತಾರೆ. ಆದರೆ ೨೦೨೨ ಮಾತ್ರ ಇಷ್ಟರವರೆಗಿದ್ದ ಈ ದಾಖಲೆಯನ್ನು ಮುರಿದಿದೆ. ಭಾರತದಲ್ಲಿ ಅತೀ ಹೆಚ್ಚು ವಿದೇಶೀಯರನ್ನು ಆಕರ್ಷಿಸಿದ ತಾಣವಾಗಿ ಮೊದಲ ಸ್ಥಾನದಲ್ಲಿ ತಮಿಳುನಾಡಿನ ಮಹಾಬಲಿಪುರಂ ಹೊರಹೊಮ್ಮಿರುವುದು ವಿಶೇಷವಾಗಿದೆ. ತಾಜ್‌ಮಹಲ್‌ ಎರಡನೇ ಸ್ಥಾನಕ್ಕೆ ಇಳಿದಿದೆ.

ಪ್ರವಾಸೋದ್ಯಮ ಇಲಾಖೆ ಬಿಡುಗಡೆ ಮಾಡಿದ, ೨೦೨೨ರ ಭಾರತದ ಪ್ರವಾಸಿ ಅಂಕಿಅಂಶಗಳ ಆಧಾರದ ಮೇಲೆ ಅತೀ ಹೆಚ್ಚು ವಿದೇಶೀ ಪ್ರವಾಸಿಗರನ್ನು ಕಂಡ ಭಾರತದ ಪ್ರವಾಸೀ ತಾಣ ಈ ಬಾರಿ ಚೆನ್ನೈನಿಂದ ಸುಮಾರು ೬೦ ಕಿಮೀ ದೂರದಲ್ಲಿರುವ ಮಹಾಬಲಿಪುರಂ ಆಗಿದೆ. ಇದು ತಾಜ್‌ ಮಹಲನ್ನು ಹಿಂದಿಕ್ಕಿದ್ದು ವಿಶೇಷ. ೨೦೨೨ರಲ್ಲಿ ಇದು ೧,೪೪,೯೮೪ ವಿದೇಶಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದು ಮೊದಲ ಸ್ಥಾನದಲ್ಲಿದೆ. ತಾಜ್‌ ಮಹಲ್‌ ಎರಡನೇ ಸ್ಥಾನದಲ್ಲಿದ್ದು ೩೮,೯೨೨ ಪ್ರವಾಸಿಗರನ್ನು ಕಂಡಿದೆ.

ತಮಿಳುನಾಡಿನಲ್ಲಿ ಮಾಮಲ್ಲಪುರಂ ಎಂದು ಕರೆಯಲ್ಪಡುವ ಮಹಾಬಲಿಪುರಂ ಏಳನೇ ಶತಮಾನದಲ್ಲಿ ಪಲ್ಲವ ರಾಜವಂಶ ನಿರ್ಮಿಸಿದ ಐತಿಹಾಸಿಕ ಸ್ಥಳ. ಮಾಮಲ್ಲ ಎಂದರೆ, ಕುಸ್ತಿಪಟು ಎಂಬರ್ಥವಾಗಿದ್ದು, ಪಲ್ಲವ ರಾಜ ನರಸಿಂಹವರ್ಮನ್‌ ಕುಸ್ತಿಪಟುವೂ ಆಗಿದ್ದರಿಂದ ಇದಕ್ಕೆ ಮಾಮಲ್ಲಪುರಂ ಎಂಬ ಹೆಸರೂ ಬಂತು ಎನ್ನಲಾಗಿದೆ. ೧೯೮೪ರಲ್ಲಿ ಇದು ವಿಶ್ವಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿದ್ದು, ಏಕಮಾತ್ರ ಶಿಲಾದೇವಾಲಯಗಳೂ ಇಲ್ಲಿವೆ. ಪೂರ್ವ ಕರಾವಳಿಯಲ್ಲಿರುವ ಈ ದೇವಾಲಯಗಳು ಸಮುದ್ರತೀರದಲ್ಲಿ ತನ್ನ ಅಪ್ರತಿಮ ಶಿಲ್ಪಕಲಾವೈಭವದಿಂದ ವಿದೇಶೀ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಮುಖ್ಯವಾಗಿದೆ.

ಮಹಾಬಲಿಪುರಂನಲ್ಲಿ ಕೊನೇರಿಮಂಟಪ, ಮಹಿಷಾಸುರಮರ್ಧಿನಿ ಗುಹೆ, ವರಾಹಮಂಟಪ, ಮಹಿಷಮರ್ಧಿನಿ, ಭುವಾರಹ, ಗಜಲಕ್ಷ್ಮಿ, ತ್ರಿವಿಕ್ರಮ ಹಾಗೂ ದುರ್ಗಾ ದೇವರುಗಳ ಗುಹಾಂತರ್ದೇವಾಲಯಗಳಿವೆ. ಇದಲ್ಲವೆ, ಇಲ್ಲಿ ಏಕಶಿಲಾ ದೇವಾಲಯಗಳು ಪ್ರಮುಖ ಆಕರ್ಷಣೆ. ರಥದ ಆಕಾರದಲ್ಲಿರುವ ದೇವಾಲಯಗಳು ಏಕಶಿಲೆಯಿಂದ ಕೆತ್ತಲ್ಪಟ್ಟಿದ್ದು, ಐದು ಏಕಶಿಲಾ ದೇವಾಲಯಗಳು ಇಲ್ಲಿನ ಐತಿಹಾಸಿಕ ಮಹತ್ವವನ್ನು ವಿಶ್ವಕ್ಕೇ ಸಾರುತ್ತವೆ. ಪಂಚ ಪಾಂಡವರ ಹಾಗೂ ಅವರ ಹೆಂಡತಿಯ ಹೆಸರಿನಲ್ಲಿ ಈ ದೇವಾಲಯಗಳಿದ್ದು, ದ್ರೌಪದಿ ರಥ, ಭೀಮ ರಥ, ಧರ್ಮರಾಜ ರಥ, ಅರ್ಜುನ ರಥ, ನಕುಲ ಹಾಗೂ ಸಹದೇವ ರಥ ಎಂಬ ಐದು ರಥದಂಥ ದೇವಾಲಯಗಳು ಪ್ರಮುಖವಾದವು. ಇವಿಷ್ಟೇ ಅಲ್ಲದೆ, ಬಂಡೆಕಲ್ಲ ಮೇಲೆ ಕೆತ್ತಿದ ಉಬ್ಬು ಶಿಲ್ಪಗಳು ಇಲ್ಲಿನ ಪ್ರಮುಖವಾದ ಆಕರ್ಷಣೆಗಳಲ್ಲೊಂದು.‌

ಇದನ್ನೂ ಓದಿ | Travel Guide | ಹೆಚ್ಚಿನ ಜನರಿಗೆ ತಿಳಿಯದ ಭಾರತದ 10 ಪ್ರವಾಸಿ ತಾಣಗಳು

ಇವಿಷ್ಟೇ ಅಲ್ಲದೆ, ಸಮುದ್ರ ತೀರದಲ್ಲಿರುವ ಶೋರ್‌ ಟೆಂಪಲ್‌ ಎಂದೇ ಪ್ರಖ್ಯಾತಿ ಪಡೆದ ದೇವಾಲಯ ಮಹಾಬಲಿಪುರಂನ ಮತ್ತೊಂದು ಸೆಳೆತ. ಪಲ್ಲವ ದೊರೆ ರಾಜಸಿಂಹ ಎಂಬಾತ ಕಟ್ಟಿಸಿದನೆಂದು ಹೇಳಲಾದ ಶೋರ್‌ ಟೆಂಪಲ್‌ ಪ್ರಾಚೀನ ಮುಕುಂದನಾರಾಯಣ ದೇವಸ್ಥಾನವಾಗಿದ್ದು ಅತ್ಯಂತ ಸುಂದರವಾದ ದೇವಾಲಯ.

ಮಹಾಬಲಿಪುರಂ ಎಂಬ ಸಮುದ್ರ ತೀರದ ಪುಟ್ಟ ಪಟ್ಟಣ ವಿಶ್ವವಿಖ್ಯಾತ ತಾಜ್‌ಮಹಲ್‌ನನ್ನು ಹೇಗೆ ಹಿಂದಿಕ್ಕಿ ತಾನು ಮೊದಲ ಸ್ಥಾನದಲ್ಲಿ ನಿಲ್ಲಲು ಸಾಧ್ಯವಾಯಿತು ಎಂಬುದನ್ನು ಲೆಕ್ಕಾಚಾರ ಹಾಖುವುದು ಅಥವಾ ಆ ಸತ್ಯವನ್ನು ಒಪ್ಪಿಕೊಳ್ಳುವುದು ಕಷ್ಟವಾದರೂ, ಅಂಕಿ ಅಂಶಗಳು ಇವೇ ಸತ್ಯ ಎನ್ನುತ್ತಿದೆ. ವಿಶೇಷವೆಂದರೆ, ಇದು ಇಂದಿನ ಬದಲಾಗುತ್ತಿರುವ ಪ್ರವಾಸೋದ್ಯಮ ಹಾಗೂ ಪ್ರವಾಸಿಗರ ಆಯ್ಕೆ ಎಂಬುದು ವೇದ್ಯವಾಗುತ್ತದೆ, ಇಂದಿನ ಪ್ರವಾಸಿಗರು, ಮುಖ್ಯವಾಗಿ ವಿದೇಶೀಯರು ಭಾರತದಲ್ಲಿ ನಿಜವಾಗಿ ಅಡಗಿ ಕುಳಿತಿರುವ, ಹೆಚ್ಚು ಬೆಳಕಿಗೆ ಬಾರದ ಐತಿಹಾಸಿಕ ಸ್ಮಾರಕಗಳತ್ತ ಆಕರ್ಷಿತರಾಗಿ ತಾಜ್‌ ಮಹಲ್‌ ಹೊರತುಪಡಿಸಿ ಬೇರೆ ಆಯ್ಕೆಗಳತ್ತ ಹೊರಳುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ.

ಇದನ್ನೂ ಓದಿ | Taj Mahal | ಹಾಗೇ ಉಳಿಯಲಿದೆ ತಾಜ್​ಮಹಲ್​ 22 ಕೋಣೆಗಳ ರಹಸ್ಯ; ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Aditya L1: ಲ್ಯಾಗ್ರೇಂಜ್‌ ಪಾಯಿಂಟ್‌ನ ಮೊದಲ ಸುತ್ತು ಪೂರ್ಣಗೊಳಿಸಿದ ಆದಿತ್ಯ ಎಲ್‌ 1; ಇಸ್ರೋಗೆ ಭಾರಿ ಮುನ್ನಡೆ

Aditya L1: ಕಕ್ಷೆಯ ಮೊದಲ ಸುತ್ತು ಪೂರ್ಣಗೊಳಿಸಿರುವ ಕುರಿತು ಇಸ್ರೋ ಮಾಹಿತಿ ನೀಡಿದೆ. “ಆದಿತ್ಯ ಎಲ್‌ 1 ಮಿಷನ್‌ ಎಲ್‌ ಪಾಯಿಂಟ್‌ನ ಮೊದಲ ಸುತ್ತು ಪೂರ್ಣಗೊಳಿಸಿದೆ. ಜನವರಿ 6ರಂದು ಕಕ್ಷೆ ಸೇರಿದ ಇದು 178 ದಿನಗಳ ಬಳಿಕ ಮೊದಲ ಸುತ್ತು ಪೂರ್ಣಗೊಳಿಸಿದೆ.

VISTARANEWS.COM


on

Aditya L1
Koo

ನವದೆಹಲಿ: ಭಾರತದ ಚೊಚ್ಚಲ ಬಾಹ್ಯಾಕಾಶ ಆಧಾರಿತ ಸೌರ ಮಿಷನ್ ಆಗಿರುವ ಆದಿತ್ಯ ಎಲ್‌1 (Aditya L1) ಬಾಹ್ಯಾಕಾಶ ನೌಕೆಯು ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಸೂರ್ಯ ಮತ್ತು ಭೂಮಿ ನಡುವಿನ ಗುರುತ್ವಾಕರ್ಷಣೆ ನಿಷ್ಕ್ರಿಯವಾಗುವ ‘ಲ್ಯಾಗ್ರೇಂಜ್‌ ಪಾಯಿಂಟ್‌’ನ (L1) ಪ್ರಭಾವಲಯದ (Halo) ಮೊದಲ ಸುತ್ತು ಪೂರ್ಣಗೊಳಿಸಿದೆ. ಇದರೊಂದಿಗೆ ಕಕ್ಷೆ ಸೇರಿದ (ಇದೇ ವರ್ಷದ ಜನವರಿ 6ರಂದು ಕಕ್ಷೆ ಸೇರಿದೆ) 178 ದಿನಗಳ ಬಳಿಕ ಲ್ಯಾಗ್ರೇಂಜ್‌ ಪಾಯಿಂಟ್‌ನ ಮೊದಲ ಸುತ್ತು ಪೂರ್ಣಗೊಳಿಸಿದಂತಾಗಿದೆ.

ಕಕ್ಷೆಯ ಮೊದಲ ಸುತ್ತು ಪೂರ್ಣಗೊಳಿಸಿರುವ ಕುರಿತು ಇಸ್ರೋ ಮಾಹಿತಿ ನೀಡಿದೆ. “ಆದಿತ್ಯ ಎಲ್‌ 1 ಮಿಷನ್‌ ಎಲ್‌ ಪಾಯಿಂಟ್‌ನ ಮೊದಲ ಸುತ್ತು ಪೂರ್ಣಗೊಳಿಸಿದೆ. ಜನವರಿ 6ರಂದು ಕಕ್ಷೆ ಸೇರಿದ ಇದು 178 ದಿನಗಳ ಬಳಿಕ ಮೊದಲ ಸುತ್ತು ಪೂರ್ಣಗೊಳಿಸಿದೆ. ಇದರೊಂದಿಗೆ ಎರಡನೇ ಸುತ್ತಿನತ್ತ ಆದಿತ್ಯ ಎಲ್‌ 1 ಮಿಷನ್‌ ದಾಪುಗಾಲು ಇಟ್ಟಿದೆ” ಎಂಬುದಾಗಿ ಇಸ್ರೋ ತಿಳಿಸಿದೆ. ಇದು ಸೂರ್ಯನ ಕುರಿತು ಅಧ್ಯಯನ ಮಾಡುವಲ್ಲಿ ಇಸ್ರೋಗೆ ಸಿಕ್ಕ ಮಹತ್ವದ ಮುನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ.

ಸೆಪ್ಟೆಂಬರ್‌ 2ರಂದು ಆದಿತ್ಯ ಎಲ್‌ 1 ಮಿಷನ್‌ ಉಡಾವಣೆಯಾಗಿದ್ದು, ಸೆಪ್ಟೆಂಬರ್‌ 3ರಂದು ಮೊದಲ ಕಕ್ಷೆ ಬದಲಾವಣೆಯನ್ನು ಯಶಸ್ವಿಯಾಗಿ ಪೂರೈಸಿತು. ಸೆಪ್ಟೆಂಬರ್‌ 5ರಂದು ಎರಡನೇ ಬಾರಿ ಕಕ್ಷೆ ಬದಲಾವಣೆ ಮಾಡಿಕೊಂಡಿತು. ಒಟ್ಟು ಐದು ಬಾರಿ ಕಕ್ಷೆ ಬದಲಾವಣೆ ಮಾಡಿಕೊಂಡ ನಂತರ ಅಧ್ಯಯನ ನಡೆಸಲು ಉದ್ದೇಶಿಸಿರುವ ಲ್ಯಾಂಗ್ರೇಜ್‌ ಪಾಯಿಂಟ್‌ನತ್ತ (L1 Point) ಆದಿತ್ಯ ಎಲ್‌ 1 ಮಿಷನ್‌ ಸಾಗಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಮಿಷನ್‌ ಹೊತ್ತುಕೊಂಡು ಪಿಎಸ್‌ಎಲ್‌ವಿ-ಸಿ 57 (PSLV-C57 ) ರಾಕೆಟ್‌ 2023ರ ಸೆಪ್ಟೆಂಬರ್‌ 2ರಂದು ನಭಕ್ಕೆ ಹಾರಿದೆ. ನಭಕ್ಕೆ ನೆಗೆದ ಕೆಲವೇ ನಿಮಿಷಗಳಲ್ಲಿ ರಾಕೆಟ್‌ನಿಂದ ಆದಿತ್ಯ ಎಲ್‌ 1 ಮಿಷನ್‌ ಬೇರ್ಪಟ್ಟಿದೆ. ಸೂರ್ಯನ ಮೇಲ್ಮೈನಲ್ಲಿ ಮಾತ್ರ ಆದಿತ್ಯ ಎಲ್‌ 1 ಮಿಷನ್‌ ಅಧ್ಯಯನ ನಡೆಸುತ್ತಿದೆ. ಭೂಮಿಯಿಂದ ಸೂರ್ಯನ ದಿಕ್ಕಿನಲ್ಲಿ 15 ಲಕ್ಷ ಕಿಲೋಮೀಟರ್‌ ಸಂಚರಿಸಿ ಅಧ್ಯಯನ ನಡೆಸುತ್ತಿದೆ. ಭೂಮಿಯಿಂದ 15 ಲಕ್ಷ ಕಿಲೊಮೀಟರ್‌ ಅಂದರೆ, ಭೂಮಿಯಿಂದ ಸೂರ್ಯನಿಗಿರುವ ದೂರದಲ್ಲಿ ಶೇ.1ರಷ್ಟು ಮಾತ್ರ ಕ್ರಮಿಸಿದಂತೆ.

ಇದನ್ನೂ ಓದಿ: Pushpak Launch: ‘ಪುಷ್ಪಕ್‌’ ರಾಕೆಟ್ ಹ್ಯಾಟ್ರಿಕ್‌ ಉಡಾವಣೆ ಯಶಸ್ವಿ-ಇಸ್ರೋದಿಂದ ಮಹತ್ವದ ಮೈಲಿಗಲ್ಲು

Continue Reading

ದೇಶ

Sudha Murty: ಕರ್ನಾಟಕ ಸೇರಿ ದೇಶದ ಪ್ರವಾಸೋದ್ಯಮಕ್ಕೆ ಒತ್ತು ನೀಡಿ; ರಾಜ್ಯಸಭೆಯಲ್ಲಿ ಸುಧಾಮೂರ್ತಿ ಮೊದಲ ಭಾಷಣ!

Sudha Murty: ಭಾರತದಲ್ಲಿ ಪ್ರವಾಸೋದ್ಯಮಕ್ಕೆ‌ ಇನ್ನಷ್ಟು ಆದ್ಯತೆ ನೀಡಬೇಕು. ದೇಶದಲ್ಲಿ ಅಜಂತಾ, ಎಲ್ಲೋರ, ಬೃಹದೀಶ್ವರ, ತಾಜ್‌ಮಹಲ್‌ ನೋಡಬೇಕು ಎಂಬ ಮಾತಿದೆ. ಆದರೆ, ಭಾರತದಲ್ಲಿ 42 ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿವೆ. ಇನ್ನೂ 57 ತಾಣಗಳು ಪೆಂಡಿಂಗ್‌ ಲಿಸ್ಟ್‌ನಲ್ಲಿವೆ. ಇವುಗಳ ಕುರಿತು ಹೆಚ್ಚಿನ ಆದ್ಯತೆ ನೀಡಬೇಕು ಎಂದು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದರು.

VISTARANEWS.COM


on

Sudha Murty
Koo

ನವದೆಹಲಿ: ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಇನ್ಫೋಸಿಸ್‌ ಪ್ರತಿಷ್ಠಾನದ ಸಂಸ್ಥಾಪಕಿ ಸುಧಾ ಮೂರ್ತಿ (Sudha Murty) ಅವರು ಇದೇ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಭಾಷಣ ಮಾಡಿದರು. “ನಾನು ರಾಜಕಾರಣಿ ಅಲ್ಲ. ನನಗೆ ಹೆಚ್ಚು ಮಾತನಾಡಲು ಬರುವುದಿಲ್ಲ” ಎನ್ನುತ್ತಲೇ ಭಾಷಣ ಆರಂಭಿಸಿದ ಅವರು ಗರ್ಭಕಂಠ ಕ್ಯಾನ್ಸರ್‌ಗೆ (Cervical Cancer) ಲಸಿಕೆ ಹಾಗೂ ಕರ್ನಾಟಕ (Karnataka) ಸೇರಿ ದೇಶದ ಪ್ರವಾಸೋದ್ಯಮದ ಏಳಿಗೆಯ ಕುರಿತು ಸದನದ ಗಮನಕ್ಕೆ ತಂದರು. ಕರ್ನಾಟಕ ಪ್ರವಾಸೋದ್ಯಮದ ಕುರಿತೂ ಅವರು ಹೆಚ್ಚು ಗಮನ ಸೆಳೆದರು.

“ಗರ್ಭಕಂಠದ ಕ್ಯಾನ್ಸರ್‌ ಈಗ ಮಾರಣಾಂತಿಕವಾಗಿದೆ. ಒಬ್ಬ ತಾಯಿ ಮೃತಪಟ್ಟರೆ ಮಕ್ಕಳು ಅನಾಥರಾಗುತ್ತಾರೆ. ಒಬ್ಬ ವ್ಯಕ್ತಿಗೆ ಹೆಂಡತಿ ತೀರಿಕೊಂಡರೆ ಮತ್ತೊಬ್ಬ ಪತ್ನಿ ಸಿಗುತ್ತಾಳೆ. ಆದರೆ, ಮಕ್ಕಳಿಗೆ ತಾಯಿ ತೀರಿಕೊಂಡರೆ, ಜೀವನಪೂರ್ತಿ ಅವರು ಅನಾಥರಾಗುತ್ತಾರೆ. ಹಾಗಾಗಿ, ಗರ್ಭಕಂಠದ ಕ್ಯಾನ್ಸರ್‌ಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕು. ಈಗ ಲಸಿಕೆಗೆ 1,300-1,400 ರೂ. ಆಗುತ್ತದೆ. ಸರ್ಕಾರ ಮಧ್ಯಪ್ರವೇಶಿಸಿದರೆ ಅದನ್ನು 800 ರೂಪಾಯಿಗೆ ಹೆಣ್ಣುಮಕ್ಕಳಿಗೆ ಲಸಿಕೆ ಕೊಡಿಸಬಹುದು” ಎಂದರು. ಆಗ ಸಭಾಧ್ಯಕ್ಷರು, “ಈ ಕುರಿತು ಕೇಂದ್ರ ಆರೋಗ್ಯ ಸಚಿವರಾದ ಜೆ.ಪಿ ನಡ್ಡಾ ಅವರ ಗಮನಕ್ಕೆ ತನ್ನಿ” ಎಂದರು.

ಪ್ರವಾಸೋದ್ಯಮದ ಕುರಿತು ಹೇಳಿದ್ದಿಷ್ಟು…

“ಭಾರತದಲ್ಲಿ ಪ್ರವಾಸೋದ್ಯಮಕ್ಕೆ‌ ಇನ್ನಷ್ಟು ಆದ್ಯತೆ ನೀಡಬೇಕು. ದೇಶದಲ್ಲಿ ಅಜಂತಾ, ಎಲ್ಲೋರ, ಬೃಹದೀಶ್ವರ, ತಾಜ್‌ಮಹಲ್‌ ನೋಡಬೇಕು ಎಂಬ ಮಾತಿದೆ. ಆದರೆ, ಭಾರತದಲ್ಲಿ 42 ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿವೆ. ಇನ್ನೂ 57 ತಾಣಗಳು ಪೆಂಡಿಂಗ್‌ ಲಿಸ್ಟ್‌ನಲ್ಲಿವೆ. ಇವುಗಳ ಕುರಿತು ಹೆಚ್ಚಿನ ಆದ್ಯತೆ ನೀಡಬೇಕು. ಕರ್ನಾಟಕದ ಶ್ರವಣಬೆಳಗೋಳದಲ್ಲಿರುವ ಬಾಹುಬಲಿಯ ಮೂರ್ತಿ, ಮಧ್ಯಪ್ರದೇಶದ ಮಾಂಡು, ದೇಶದ ಗುಹೆಗಳು, ಬಾದಾಮಿ, ಐಹೊಳೆ, ಲಿಂಗರಾಜ ದೇವಾಲಯಗಳು ದೇಶದ ಸಂಸ್ಕೃತಿಯ ತಾಣಗಳಾಗಿವೆ. ಇವುಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕು” ಎಂದರು.

“ತ್ರಿಪುರದಲ್ಲಿರುವ ಉನಾಕೋಟಿ, ಮಿಜೋರಾಂನಲ್ಲಿ ನೈಸರ್ಗಿಕ ಸೇತುವೆಗಳಿವೆ. ಇವುಗಳನ್ನು ನೋಡಲು ವಿದೇಶಕ್ಕೆ ಹೋಗುವವರಿದ್ದಾರೆ. ತಂಜಾವೂರಿನ ಬೃಹದೇಶ್ವರ ದೇವಾಲಯ, ಶ್ರೀರಂಗಂ, ಕಾಶ್ಮೀರದಲ್ಲಿರುವ ಮೊಘಲ್‌ ಗಾರ್ಡನ್‌ಗಳು ಜಗತ್ತಿನ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಇಲ್ಲ. ಇವುಗಳನ್ನು ಪಟ್ಟಿಗೆ ಸೇರಿಸುವುದರಿಂದ ಆ ಸ್ಥಳಗಳಿಗೆ ಜನರನ್ನು ಸೆಳೆಯಲು ಪ್ಯಾಕೇಜ್‌ಗಳನ್ನು ಘೋಷಿಸಲಾಗುತ್ತದೆ. ಇದರಿಂದ ಪ್ರವಾಸೋದ್ಯಮದ ಆದಾಯ ಹೆಚ್ಚಾಗುತ್ತದೆ. ಹತ್ತಾರು ಅವಕಾಶಗಳು ಸೃಷ್ಟಿಯಾಗುತವೆ” ಎಂದು ಹೇಳಿದರು.

ಇದನ್ನೂ ಓದಿ: Narendra Modi: ನನ್ನ ದನಿಯೂ ಗಟ್ಟಿಯಿದೆ, ಸಂಕಲ್ಪವೂ; ಈ ಮೋದಿ ಯಾರಿಗೂ ಹೆದರಲ್ಲ, ಬಗ್ಗಲ್ಲ: ಸಂಸತ್‌ನಲ್ಲಿ ಪ್ರಧಾನಿ ಅಬ್ಬರ

Continue Reading

ಪ್ರಮುಖ ಸುದ್ದಿ

Mahua Moitra: ಸುಮ್ನೆ ಕೂತ್ಕೊಳ್ಳಿ ರಾಹುಲ್‌ ಗಾಂಧಿ; ಸಂಸತ್ತಲ್ಲೇ ಮಹುವಾ ಮೊಯಿತ್ರಾ ಹೀಗೆ ಸಿಟ್ಟಾಗಿದ್ದೇಕೆ?

Mahua Moitra: “ಸ್ಪೀಕರ್‌ ಸರ್‌, ನೀವು ಚುನಾವಣೆ ಪ್ರಚಾರ ಮಾಡುವಾಗ ನೀವು ಎರಡು ಬಾರಿ ನನ್ನ ಕ್ಷೇತ್ರಕ್ಕೆ ಬಂದಿದ್ರಿ. ನನ್ನ ಮಾತು ಕೇಳಿಸಿಕೊಳ್ಳಿ” ಎಂದು ಮಹುವಾ ಮೊಯಿತ್ರಾ ಮಾತನಾಡುತ್ತಿದ್ದರು. ಇದೇ ವೇಳೆ ರಾಹುಲ್‌ ಗಾಂಧಿ ಅವರು ಮಾತನಾಡಲು ಎದ್ದು ನಿಂತರು. ಆಗ, ಮೊಹಿತ್ರಾ ಅವರು, “ರಾಹುಲ್‌, ಕುಳಿತುಕೊಳ್ಳಿ” ಎಂದು ಸೂಚಿಸಿದರು. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Mahua Moitra
Koo

ನವದೆಹಲಿ: ಸಂಸತ್‌ನ ವಿಶೇಷ ಅಧಿವೇಶನದಲ್ಲಿ (Parliament Session 2024) ಪ್ರತಿಪಕ್ಷಗಳು ನೀಟ್‌ ಅಕ್ರಮ, ಮಣಿಪುರ ಹಿಂಸಾಚಾರ ಸೇರಿ ಹಲವು ವಿಷಯಗಳ ಕುರಿತು ಚರ್ಚೆ, ಗಲಾಟೆ, ವಾಗ್ವಾದ, ಆರೋಪ ಮಾಡಿವೆ. ಯಾವುದೇ ಆಡಳಿತ ಪಕ್ಷದ ವಿರುದ್ಧ ಪ್ರತಿಪಕ್ಷವು ಆರೋಪ, ಗಲಾಟೆ, ಪ್ರತಿಭಟನೆ ಮಾಡುವುದು ಸಹಜ. ಇನ್ನು ಸೋಮವಾರ (ಜುಲೈ 1) ಸಂಸತ್‌ನಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (Mahua Moitra) ಅವರು ಮಾತನಾಡುವಾಗ, ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರಿಗೇ ಕುಳಿತುಕೊಳ್ಳಿ ಎಂಬುದಾಗಿ ಸೂಚಿಸಿದ್ದಾರೆ.

“ಸ್ಪೀಕರ್‌ ಸರ್‌, ನೀವು ಚುನಾವಣೆ ಪ್ರಚಾರ ಮಾಡುವಾಗ ನೀವು ಎರಡು ಬಾರಿ ನನ್ನ ಕ್ಷೇತ್ರಕ್ಕೆ ಬಂದಿದ್ರಿ. ನನ್ನ ಮಾತು ಕೇಳಿಸಿಕೊಳ್ಳಿ” ಎಂದು ಮಹುವಾ ಮೊಯಿತ್ರಾ ಮಾತನಾಡುತ್ತಿದ್ದರು. ಇದೇ ವೇಳೆ ರಾಹುಲ್‌ ಗಾಂಧಿ ಅವರು ಮಾತನಾಡಲು ಎದ್ದು ನಿಂತರು. ಆಗ, ಮೊಹಿತ್ರಾ ಅವರು, “ರಾಹುಲ್‌, ಕುಳಿತುಕೊಳ್ಳಿ” ಎಂದು ಸೂಚಿಸಿದರು. ಆಗ ಆಡಳಿತ ಪಕ್ಷದ ಸದಸ್ಯರು ಗೇಲಿ ಮಾಡಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಮಹುವಾ ಮೊಯಿತ್ರಾ, “ಅವರು ನಮ್ಮ ಪ್ರತಿಪಕ್ಷ ನಾಯಕರಾಗಿದ್ದಾರೆ. ಅವರು ಅರ್ಥ ಮಾಡಿಕೊಳ್ಳುತ್ತಾರೆ” ಎಂದು ತಿರುಗೇಟು ನೀಡಿದರು.

ಇದೇ ವೇಳೆ ಆಡಳಿತ ಪಕ್ಷದ ವಿರುದ್ಧ ಟಿಎಂಸಿ ಸಂಸದೆ ಹರಿಹಾಯ್ದರು. “ಸಂಸತ್‌ನಲ್ಲಿ ನಾನು ಪ್ರಶ್ನೆ ಕೇಳಲು, ಮಾತನಾಡಲು ಬಿಡಲಿಲ್ಲ. ನಾನು ಸಂಸತ್‌ನಲ್ಲಿ ಮಾತನಾಡಲು ಎದ್ದು ನಿಂತಾಗ, ನನ್ನ ಧ್ವನಿಯನ್ನು ಹುದುಗಿಸಲಾಯಿತು. ಆದರೆ, ಚುನಾವಣೆ ವೇಳೆ ಏನಾಯಿತು? ಆಡಳಿತ ಪಕ್ಷದ ಸದಸ್ಯ ಬಲವು 303ರಿಂದ 240ಕ್ಕೆ ಇಳಿಸಲಾಯಿತು. ಟಿಎಂಸಿ ಸಂಸದೆಯಾದ ನನ್ನನ್ನು ಕುಳಿತುಕೊಳ್ಳುವಂತೆ ಮಾಡಿದರು. ಆದರೆ, ಬಿಜೆಪಿಯ 63 ಸಂಸದರನ್ನು ಮನೆಯಲ್ಲಿಯೇ ಕುಳಿತುಕೊಳ್ಳುವಂತೆ ದೇಶದ ಜನ ಮಾಡಿದರು” ಎಂಬುದಾಗಿ ಹೇಳಿದರು.

ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ

ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದ ಮೋದಿ, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು “ನಾನು ಕಾಂಗ್ರೆಸ್‌ನವರಿಗೆ ಜಾಣತನ ಕೊಡಲಿ ಎಂಬುದಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಬಾಲಬುದ್ಧಿಯ ನಾಯಕನಿಗೂ ಬುದ್ಧಿ ಕೊಡಲಿ. ರಾಷ್ಟ್ರಪತಿಯವರ ಭಾಷಣಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಹಾಗೆಯೇ, ಇಷ್ಟು ಹೊತ್ತು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿಯೂ ಧನ್ಯವಾದ ತಿಳಿಸುತ್ತೇನೆ. ಯಾರು ಎಷ್ಟೇ ಗಲಾಟೆ ಮಾಡಿದರೂ ನನ್ನ ಧ್ವನಿಯನ್ನು, ಸತ್ಯದ ಧ್ವನಿಯನ್ನು ಅಡಗಿಸಲು ಆಗುವುದಿಲ್ಲ. ನಾನು ಇದುವರೆಗೆ ಸತ್ಯದ ಅನುಭವವನ್ನು ಅನುಭವಿಸಿದ್ದೇನೆ” ಎಂದು ಹೇಳಿದರು.

ಇದನ್ನೂ ಓದಿ: Narendra Modi: ನೀಟ್‌ ಅಕ್ರಮ ಕುರಿತು ಸಂಸತ್‌ನಲ್ಲಿ ಮೋದಿ ಪ್ರಸ್ತಾಪ; ವಿದ್ಯಾರ್ಥಿಗಳಿಗೆ ಅವರು ಹೇಳಿದ್ದಿಷ್ಟು

Continue Reading

ದೇಶ

Hathras Stampede: ಹತ್ರಾಸ್‌ನಲ್ಲಿ ಕಾಲ್ತುಳಿತ ಹೇಗಾಯ್ತು? ಸತ್ಸಂಗ ನಡೆಸಿದ ಭೋಲೆ ಬಾಬಾ ಯಾರು? ಇಲ್ಲಿದೆ ಮಾಹಿತಿ

Hathras Stampede: ಭೋಲೆ ಬಾಬಾ ಅವರಿಗೆ ಭಾರತದಾದ್ಯಂತ ಅನುಯಾಯಿಗಳು ಇದ್ದಾರೆ. ಅದರಲ್ಲೂ, ಉತ್ತರ ಪ್ರದೇಶದ ಪಶ್ಚಿಮ ಭಾಗ, ಉತ್ತರಾಖಂಡ, ಹರಿಯಾಣ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ಹೆಚ್ಚು ಅನುಯಾಯಿಗಳು ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿರದಿದ್ದರೂ ಇವರ ಧಾರ್ಮಿಕ ಕಾರ್ಯಕ್ರಮವನ್ನು ಭಕ್ತರು ತಪ್ಪಿಸಿಕೊಳ್ಳುವುದಿಲ್ಲ.

VISTARANEWS.COM


on

Hathras Stampede
Koo

ಲಖನೌ: ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಎಂಬ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ (Hathras Stampede) ಸಂಭವಿಸಿದ್ದು, 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ನಾರಾಯಣ ಸಕಾರ್‌ ಹರಿ (Narayan Sakaar Hari) ಅಥವಾ ಸಕಾರ್‌ ವಿಶ್ವ ಹರಿ ಅಥವಾ ಭೋಲೆ ಬಾಬಾ (Bhole Baba) ಅವರು ಸತ್ಸಂಗ ನೆರವೇರಿಸಿದ ಬಳಿಕ ಉಂಟಾದ ಕಾಲ್ತುಳಿತವು ನೂರಾರು ಜನರ ಸಾವಿಗೆ ಕಾರಣವಾಗಿದೆ. ಇನ್ನು, ದುರಂತದ ಕುರಿತು ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಘೋಷಣೆ ಮಾಡಿದ್ದಾರೆ. ಇನ್ನು ಕಾಲ್ತುಳಿತ ಹೇಗಾಯಿತು? ನೂರಾರು ಜನರ ಸಾವಿಗೆ ಕಾರಣವೇನು? ಪ್ರತ್ಯಕ್ಷದರ್ಶಿಗಳು ಹೇಳುವುದು ಏನು ಎಂಬುದರ ಮಾಹಿತಿ ಇಲ್ಲಿದೆ.

ಪ್ರತ್ಯಕ್ಷದರ್ಶಿಗಳು ಹೇಳುವುದಿಷ್ಟು…

ಸತ್ಸಂಗ ಮುಗಿದ ಬಳಿಕ ನೂರಾರು ಜನ ಹೊರಗೆ ಬಂದಿದ್ದಾರೆ. ಎತ್ತರದ ಚರಂಡಿ ಮೇಲೆ ನಿರ್ಮಿಸಿದ ರಸ್ತೆ ಮೇಲೆ ಸಾವಿರಾರು ಜನ ನಿಂತಿದ್ದಾರೆ. ಆಗ ರಸ್ತೆಯ ಒಂದು ಭಾಗ ಚರಂಡಿಯೊಳಗೆ ಕುಸಿದಿದೆ. ಕೂಡಲೇ ಹತ್ತಾರು ಜನ ಚರಂಡಿಯೊಳಗೆ ಬಿದ್ದಿದ್ದು, ಒಬ್ಬರ ಮೇಲೆ ಒಬ್ಬರು ಬಿದ್ದ ಕಾರಣ ಹೆಚ್ಚಿನ ಜನ ಸಾವಿಗೀಡಾಗಿದ್ದಾರೆ. ಇನ್ನು ಚರಂಡಿ ಮೇಲಿನ ರಸ್ತೆ ಕುಸಿದ ಸುದ್ದಿ ಹರಿದಾಡುತ್ತಲೇ ಎಲ್ಲರೂ ಓಡಲು ಶುರು ಮಾಡಿದರು. ಆಗಲೂ ಒಬ್ಬರ ಮೇಲೆ ಒಬ್ಬರು ಬಿದ್ದು, ತುಳಿದಾಡಿದ ಕಾರಣ ಸಾವಿನ ಸಂಖ್ಯೆ ಜಾಸ್ತಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ಘಟನೆ ಕುರಿತು ವಿವರ ನೀಡಿದ್ದಾರೆ.

ಇನ್ನೊಂದಿಷ್ಟು ಮೂಲಗಳ ಪ್ರಕಾರ, ಸಣ್ಣದೊಂದು ಹಾಲ್‌ನಲ್ಲಿ ಸತ್ಸಂಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೊರಗಡೆ ಚರಂಡಿ ಮೇಲಿನ ಸ್ಲ್ಯಾಬ್‌ ಕುಸಿದಿದೆ ಎಂಬ ಸುದ್ದಿ ಕೇಳಿ ಎಲ್ಲರೂ ಓಡಲು ಶುರು ಮಾಡಿದರು. ಹೊರಗೆ ಹೋಗುವ ಗೇಟ್‌ ಚಿಕ್ಕದಿದ್ದ ಕಾರಣ ಎಲ್ಲರೂ ನುಗ್ಗಿದಾಗ ಕಾಲ್ತುಳಿತ ಸಂಭವಿಸಿದೆ. ಹೆಣ್ಣುಮಕ್ಕಳು ಓಡಲೂ ಆಗದೆ, ನೂಕುತ್ತಿದ್ದ ಪುರುಷರನ್ನು ಹಿಮ್ಮೆಟ್ಟಿಸಲೂ ಆಗದೆ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಯಾರಿವರು ಭೋಲೆ ಬಾಬಾ?

ಭೋಲೆ ಬಾಬಾ ಅವರು ಉತ್ತರ ಪ್ರದೇಶದ ಎತಾಹ್‌ ಜಿಲ್ಲೆಯ ಬಹದ್ದೂರ್‌ ಗ್ರಾಮದವರಾಗಿದ್ದಾರೆ. ಇವರು ಈಗ ಪ್ರಮುಖ ಧಾರ್ಮಿಕ ಮುಖಂಡರೆನಿಸಿದ್ದು, ಇವರ ಭಾಷಣ, ಬೋಧನೆಗಳನ್ನು ಕೇಳಲು ಸಾವಿರಾರು ಜನ ಆಗಮಿಸುತ್ತಾರೆ. ಇವರು ದೇಶದ ಗುಪ್ತಚರ ಇಲಾಖೆಯಲ್ಲಿ (IB) ಕಾರ್ಯನಿರ್ವಹಿಸಿದ್ದು, 26 ವರ್ಷಗಳ ಹಿಂದೆಯೇ ಸರ್ಕಾರಿ ನೌಕರಿ ತೊರೆದು, ಸ್ವಯಂಘೋಷಿತ ದೇವಮಾನವರಾಗಿದ್ದಾರೆ.

ಭೋಲೆ ಬಾಬಾ ಅವರಿಗೆ ಭಾರತದಾದ್ಯಂತ ಅನುಯಾಯಿಗಳು ಇದ್ದಾರೆ. ಅದರಲ್ಲೂ, ಉತ್ತರ ಪ್ರದೇಶದ ಪಶ್ಚಿಮ ಭಾಗ, ಉತ್ತರಾಖಂಡ, ಹರಿಯಾಣ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ಹೆಚ್ಚು ಅನುಯಾಯಿಗಳು ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿರದಿದ್ದರೂ ಇವರ ಧಾರ್ಮಿಕ ಕಾರ್ಯಕ್ರಮವನ್ನು ಭಕ್ತರು ತಪ್ಪಿಸಿಕೊಳ್ಳುವುದಿಲ್ಲ. ಪ್ರತಿ ಮಂಗಳವಾರ ಅಲಿಗಢದಲ್ಲಿ ಅವರ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿಯೂ ಸಾವಿರಾರು ಜನ ಸೇರುತ್ತಾರೆ. ಕೊರೊನಾ ನಿರ್ಬಂಧದ ಮಧ್ಯೆಯೂ ಸಾವಿರಾರು ಜನರನ್ನು ಸೇರಿಸಿ, ಸತ್ಸಂಗ ಆಯೋಜಿಸಿದ್ದು ವಿವಾದಕ್ಕೂ ಕಾರಣವಾಗಿತ್ತು.

ಇದನ್ನೂ ಓದಿ: Uttar Pradesh stampede: ಹತ್ರಾಸ್‌ ಕಾಲ್ತುಳಿತ ದುರ್ಘಟನೆ; ಸಾವಿನ ಸಂಖ್ಯೆ 60ಕ್ಕೆ ಏರಿಕೆ

Continue Reading
Advertisement
Sour Curd
ಆರೋಗ್ಯ44 mins ago

Sour Curd: ಹುಳಿ ಬಂದ ಮೊಸರಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ?

Dina Bhavishya
ಭವಿಷ್ಯ44 mins ago

Dina Bhavishya : ಒತ್ತಡಗಳು ದೂರವಾಗಿ ಹರ್ಷದಿಂದ ಕಾಲ ಕಳೆಯುವಿರಿ

ಆಟೋಮೊಬೈಲ್4 hours ago

Mahindra Scorpio N : ಮಹೀಂದ್ರಾ ತನ್ನ ಸ್ಕಾರ್ಪಿಯೋ-ಎನ್ Z8 ವೇರಿಯೆಂಟ್​ನಲ್ಲಿ ನೀಡಿದ ಹಲವು ಫೀಚರ್​ಗಳು

suicide news
ಕರ್ನಾಟಕ5 hours ago

Suicide News : ಮಗನ ಕುಡಿತದ ಚಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಅಪ್ಪ, ಅಮ್ಮ

Aditya L1
ದೇಶ6 hours ago

Aditya L1: ಲ್ಯಾಗ್ರೇಂಜ್‌ ಪಾಯಿಂಟ್‌ನ ಮೊದಲ ಸುತ್ತು ಪೂರ್ಣಗೊಳಿಸಿದ ಆದಿತ್ಯ ಎಲ್‌ 1; ಇಸ್ರೋಗೆ ಭಾರಿ ಮುನ್ನಡೆ

David Miller :
ಪ್ರಮುಖ ಸುದ್ದಿ6 hours ago

David Miller : ಸೋಲಿನ ಬೇಸರದಲ್ಲಿ ವಿದಾಯ ಹೇಳಿದರೇ ಮಿಲ್ಲರ್​​; ದಕ್ಷಿಣ ಆಫ್ರಿಕಾ ಆಟಗಾರನ ಪ್ರತಿಕ್ರಿಯೆ ಏನು?

Sudha Murty
ದೇಶ6 hours ago

Sudha Murty: ಕರ್ನಾಟಕ ಸೇರಿ ದೇಶದ ಪ್ರವಾಸೋದ್ಯಮಕ್ಕೆ ಒತ್ತು ನೀಡಿ; ರಾಜ್ಯಸಭೆಯಲ್ಲಿ ಸುಧಾಮೂರ್ತಿ ಮೊದಲ ಭಾಷಣ!

Physical Abuse
ಕರ್ನಾಟಕ7 hours ago

Physical Abuse : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

Mahua Moitra
ಪ್ರಮುಖ ಸುದ್ದಿ8 hours ago

Mahua Moitra: ಸುಮ್ನೆ ಕೂತ್ಕೊಳ್ಳಿ ರಾಹುಲ್‌ ಗಾಂಧಿ; ಸಂಸತ್ತಲ್ಲೇ ಮಹುವಾ ಮೊಯಿತ್ರಾ ಹೀಗೆ ಸಿಟ್ಟಾಗಿದ್ದೇಕೆ?

Viral Video
Latest8 hours ago

Viral Video: ಲೈವ್‌ ವರದಿ ಮಾಡುತ್ತಿದ್ದಾಗ ಪಾಕ್ ಟಿವಿ ವರದಿಗಾರ್ತಿ ಮೇಲೆ ಗೂಳಿ ದಾಳಿ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ11 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ1 day ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌