ಮೂಸೆವಾಲಾ ಹತ್ಯೆ ಮಾಸ್ಟರ್‌ಮೈಂಡ್‌ ಲಾರೆನ್ಸ್‌ ಬಿಷ್ಣೋಯಿ: ಪೊಲೀಸ್ - Vistara News

ಕ್ರೈಂ

ಮೂಸೆವಾಲಾ ಹತ್ಯೆ ಮಾಸ್ಟರ್‌ಮೈಂಡ್‌ ಲಾರೆನ್ಸ್‌ ಬಿಷ್ಣೋಯಿ: ಪೊಲೀಸ್

ಪಂಜಾಬಿನ ಗಾಯಕ- ರಾಜಕಾರಣಿ ಸಿಧು ಮೂಸೆವಾಲಾ ಹತ್ಯೆಯಲ್ಲಿ ತನ್ನ ಪಾತ್ರವನ್ನು ಲಾರೆನ್ಸ್‌ ಬಿಷ್ಣೋಯಿ ಒಪ್ಪಿಕೊಂಡಿದ್ದಾನೆ. ಇನ್ನೊಬ್ಬ ಆರೋಪಿ ಗೋಲ್ಡಿ ಬ್ರಾರ್‌ಗಾಗಿ ಹುಡುಕಾಟ ನಡೆದಿದೆ.

VISTARANEWS.COM


on

sidhu moose wala
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಗಾಯಕ- ರಾಜಕಾರಣಿ ಸಿಧು ಮೂಸೆವಾಲಾ ಅವರ ಹತ್ಯೆಯ ಹಿಂದಿನ ಮಾಸ್ಟರ್‌ಮೈಂಡ್‌ ಲಾರೆನ್ಸ್ ಬಿಷ್ಣೋಯಿ ಎಂದು ದೆಹಲಿ ಪೊಲೀಸರು ಬುಧವಾರ ಹೇಳಿದ್ದಾರೆ.

ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಈಗ ಜೈಲಿನಲ್ಲಿದ್ದಾನೆ. ಇವನ ಜೊತೆಗೆ ಐವರು ಹತ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಮಹಾಕಾಲ ಎಂಬ ಆರೋಪಿಯನ್ನು ಮಹಾರಾಷ್ಟ್ರ ಪೊಲೀಸರಿಗೆ 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅವನು ಶೂಟರ್‌ಗಳಲ್ಲಿ ಒಬ್ಬನ ನಿಕಟ ಸಹಚರನಾಗಿದ್ದಾನೆ. ಆದರೆ ಹತ್ಯೆಯಲ್ಲಿ ಭಾಗಿಯಾಗಿಲ್ಲ. ಹತ್ಯೆಯಲ್ಲಿ ಕನಿಷ್ಠ ಐದು ಮಂದಿ ಭಾಗಿಯಾಗಿದ್ದಾರೆ. ನಿಜವಾದ ಶೂಟರ್‌ಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ದೆಹಲಿ ವಿಶೇಷ ಪೊಲೀಸ್‌ ಕಮಿಷನರ್‌ ಎಚ್‌ಜಿಎಸ್ ಧಲಿವಾಲ್ ತಿಳಿಸಿದ್ದಾರೆ.

ಈ ಮಧ್ಯೆ ಬಿಷ್ಣೋಯ್ ಗ್ಯಾಂಗ್‌ನ ಸಕ್ರಿಯ ಸದಸ್ಯನಾಗಿರುವ, ಕೆನಡಾ ಮೂಲದ ಗೋಲ್ಡಿ ಬ್ರಾರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಕೋರಲಾಗಿದೆ. ಈಗಾಗಲೇ ಈ ಕುರಿತು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ. ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಈ ನೋಟಿಸ್‌ ದಾರಿ ಮಾಡಿಕೊಡುತ್ತದೆ.

ಪರಾರಿಯಾಗಿರುವ ಬ್ರಾರ್, ಮೂಸೆವಾಲಾ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾನೆ. ಕಳೆದ ವರ್ಷ ನಡೆದ ಯುವ ಅಕಾಲಿ ನಾಯಕ ವಿಕ್ಕಿ ಮಿದ್ದುಖೇರಾ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ. ಸತೀಂದರ್ಜಿತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಪಂಜಾಬ್‌ನ ಶ್ರೀ ಮುಕ್ತಸರ್ ಸಾಹಿಬ್ ಮೂಲದವನು. 2017ರಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಕೆನಡಾಕ್ಕೆ ಹೋಗಿದ್ದ.

ಪಂಜಾಬ್ ಸರ್ಕಾರದ ನೀಡಿರುವ ಮಾಹಿತಿ ಪ್ರಕಾರ, ದರೋಡೆಕೋರ- ಭಯೋತ್ಪಾದಕ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂದಾ ವಿರುದ್ಧವೂ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಕೋರಲಾಗಿದೆ.

ಪಂಜಾಬ್ ಸರ್ಕಾರ ಮೂಸೆವಾಲಾ ಅವರ ಭದ್ರತೆಯನ್ನು ಮೊಟಕುಗೊಳಿಸಿದ ಒಂದು ದಿನದ ನಂತರ, ಮೇ 29ರಂದು ಪಂಜಾಬ್‌ನ ಮಾನ್ಸಾದಲ್ಲಿ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಅವರೊಂದಿಗೆ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಸೋದರ ಸಂಬಂಧಿ ಮತ್ತು ಸ್ನೇಹಿತ ಕೂಡ ಗಾಯಗೊಂಡಿದ್ದಾರೆ.

ಹತ್ಯೆಯ ನಂತರ ಸಿಕ್ಕಿದ ಸಿಸಿಟಿವಿ ಫೂಟೇಜ್ ಆಧರಿಸಿ ತನಿಖೆ ನಡೆಸಲಾಗಿತ್ತು. ಎಜಿಟಿಎಫ್ ಮುಖ್ಯಸ್ಥರ ಮೇಲ್ವಿಚಾರಣೆಯಲ್ಲಿ ಪಂಜಾಬ್ ಪೊಲೀಸರು ಕೊಲೆ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಿದ್ದರು. ಇದು ಎರಡು ಗುಂಪುಗಳ ನಡುವಿನ ಗ್ಯಾಂಗ್‌ವಾರ್‌ ಎಂದು ರಾಜ್ಯ ಪೊಲೀಸರು ಬಣ್ಣಿಸಿದ್ದು, ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಕೈವಾಡವನ್ನು ಮೊದಲೇ ಶಂಕಿಸಿದ್ದರು.

ಲಾರೆನ್ಸ್ ಬಿಷ್ಣೋಯಿ ಮತ್ತು ಮೂಸೆವಾಲಾ ನಡುವೆ ಹಗೆತನವಿತ್ತು. ಬ್ರಾರ್ ಮತ್ತು ಬಿಷ್ಣೋಯಿ ಸಂಚು ರೂಪಿಸಿ ಮೂಸೆವಾಲಾರನ್ನು ಕೊಂದಿದ್ದಾರೆ. ಕಳೆದ ವರ್ಷ ಆಗಸ್ಟ್ 7ರಂದು ಅಕಾಲಿ ದಳದ ಯುವ ನಾಯಕ ವಿಕ್ರಮಜಿತ್ ಸಿಂಗ್ ಅಲಿಯಾಸ್ ವಿಕ್ಕಿ ಮಿದ್ದುಖೇರಾ ಹತ್ಯೆಯಲ್ಲಿ ಮೂಸೆವಾಲಾ ಭಾಗಿಯಾಗಿದ್ದರು. ಇದು ಬಿಷ್ಣೋಯಿ ಪ್ರತೀಕಾರಕ್ಕೆ ಕಾರಣವಾಗಿದೆ.

ಇನ್ನಷ್ಟು ಓದಿಗಾಗಿ: Moose wala murder ಹಿಂದಿರುವ ಬಿಷ್ಣೋಯಿ, ಗೋಲ್ಡಿ ಬ್ರಾರ್‌ ಯಾರು? ಸಿಧು ಮೇಲೇಕೆ ಅವರಿಗೆ ಸಿಟ್ಟು?

ಬಿಷ್ಣೋಯ್ ತನಿಖೆಗೆ ತುಂಬಾ ಅಸಹಕಾರ ತೋರಿದ್ದಾನೆ. ಆದರೆ ವಿಚಾರಣೆಯ ಸಮಯದಲ್ಲಿ ತಮ್ಮ ಗ್ಯಾಂಗ್ ಸದಸ್ಯರು ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಸಂಚು ರೂಪಿಸಿದವರಲ್ಲಿ ಗೋಲ್ಡಿ ಬ್ರಾರ್ ಒಬ್ಬರು ಎಂದು ಬಹಿರಂಗಪಡಿಸಿದ್ದಾನೆ. ಆದರೆ ಕೊಲೆ ಮಾಡಿದವರ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅರ್ಶ್‌ದೀಪ್‌ ಪಾತ್ರ?

ಈ ನಡುವೆ, ಕೊಲೆಯಲ್ಲಿ ಖಲಿಸ್ತಾನಿ ಕಾರ್ಯಕರ್ತ ಅರ್ಶ್‌ದೀಪ್ ಸಿಂಗ್ ಅಲಿಯಾಸ್ ಅರ್ಶ್ ಪಾತ್ರವನ್ನೂ ತನಿಖೆ ನಡೆಸಲಾಗುತ್ತಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಯ ಕೋರಿಕೆಯ ಮೇರೆಗೆ ಇಂಟರ್‌ಪೋಲ್ ಇತ್ತೀಚೆಗೆ ಅರ್ಶ್‌ದೀಪ್ ಸಿಂಗ್ ಅಲಿಯಾಸ್ ಅರ್ಶ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ. ಕೆನಡಾ ಮೂಲದ ಈತ ಖಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್‌ ಎಂಬಾತನ ಸಹಚರ.

ಕಾನೂನುಬಾಹಿರ ಚಟುವಟಿಕೆ, ಮಾದಕ ದ್ರವ್ಯ ಪೂರೈಕೆ, ಶಸ್ತ್ರಾಸ್ತ್ರಗಳ ಕಾಯಿದೆಯ ಅಡಿಯಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದಾನೆ. ಅರ್ಷದೀಪ್, ನಿಜ್ಜರ್ ಮತ್ತು ಇತರ ಐವರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. ಪಂಜಾಬ್‌ನಲ್ಲಿ ಕೋಮು ಸೌಹಾರ್ದತೆಯನ್ನು ಕದಡಲು ಇತರ ಧರ್ಮದ ವ್ಯಕ್ತಿಗಳನ್ನು ಅಪಹರಿಸಿ ನಂತರ ಕೊಲ್ಲುವ ನಿಜ್ಜರ್‌ನ ಯೋಜಿತ ಭಯೋತ್ಪಾದಕ ಸಂಚಿನ ಭಾಗವಾಗಿದ್ದಾರೆ ಅರ್ಶ್‌ದೀಪ್ ಮತ್ತು ಇತರರು.

ಎಂಟು ಮಂದಿಯ ಬಂಧನ

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಎಂಟು ಮಂದಿಯನ್ನು ಬಂಧಿಸಿರುವುದಾಗಿ ಪಂಜಾಬ್ ಪೊಲೀಸರು ತಿಳಿಸಿದ್ದಾರೆ. ಅಪರಾಧದಲ್ಲಿ ಭಾಗಿಯಾಗಿರುವ ನಾಲ್ವರು ಶೂಟರ್‌ಗಳನ್ನು ಗುರುತಿಸಲಾಗಿದೆ. ಬಂಧಿತರನ್ನು ಸಂದೀಪ್ ಸಿಂಗ್ ಅಲಿಯಾಸ್ ಕೆಕ್ಡಾ, ಮನ್‌ಪ್ರೀತ್ ಸಿಂಗ್ ಅಲಿಯಾಸ್ ಮನ್ನಾ, ತಲ್ವಾಂಡಿ ಸಾಬೋ, ಮನ್‌ಪ್ರೀತ್ ಭಾವು, ಸರಾಜ್ ಮಿಂಟು, ಪ್ರಭದೀಪ್ ಸಿಧು, ಮೋನು ದಾಗರ್, ಪವನ್ ಬಿಷ್ಣೋಯ್ ಮತ್ತು ನಸೀಬ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಬಳಸಿದ AN-94 ರೈಫಲ್‌, AK-47ಕ್ಕಿಂತ ಅಪಾಯಕಾರಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತುಮಕೂರು

Cylinder Blast: ಗ್ಯಾಸ್‌ ಸಿಲಿಂಡರ್ ಸ್ಫೋಟ; ಮನೆಯ ಮೂವರಲ್ಲದೆ, ಪಕ್ಕದ ಮನೆಯ ಮೂವರಿಗೂ ಗಂಭೀರ ಗಾಯ

Cylinder Blast: ಅಡುಗೆ ಮಾಡುವ ಸಂದರ್ಭದಲ್ಲಿ ಗ್ಯಾಸ್‌ ಸಿಲಿಂಡರ್ ಸ್ಫೋಟಗೊಂಡು ಆರು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಪಟ್ಟಣದ ಸಂತೆಬೀದಿಯಲ್ಲಿ ನಡೆದಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳ ಬಗ್ಗೆ ಮಾಹಿತಿ ತಿಳಿದು ಕುಣಿಗಲ್ ಶಾಸಕ ಡಾ. ರಂಗನಾಥ್ ಶುಕ್ರವಾರ ರಾತ್ರಿ ಗಾಯಗೊಂಡವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ, ಬಳಿಕ ವೈದ್ಯರಿಂದ ಮಾಹಿತಿ ಪಡೆದು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.

VISTARANEWS.COM


on

cylinder explosion in Kunigal 6 people seriously injured, Kunigal MLA Dr Ranganath visit victoria Hospital in bengaluru
Koo

ಕುಣಿಗಲ್: ಅಡುಗೆ ಮಾಡುವ ಸಂದರ್ಭದಲ್ಲಿ ಗ್ಯಾಸ್‌ ಸಿಲಿಂಡರ್ ಸ್ಫೋಟಗೊಂಡು (Gas Cylinder Blast) ಆರು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಪಟ್ಟಣದ ಸಂತೆಬೀದಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಪಟ್ಟಣದ ಸಂತೆಬೀದಿಯಲ್ಲಿರುವ ರವಿಕುಮಾರ್ ಎಂಬುವವರ ಮನೆಯಲ್ಲಿ ಅಡುಗೆ ಮಾಡುವ ವೇಳೆ ಸಿಲಿಂಡರ್ ಸ್ಫೋಟಿಸಿದ್ದು, ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ದಿನಸಿ ಸಾಮಗ್ರಿ ಹಾಗೂ ಕಿಟಕಿ ಬಾಗಿಲುಗಳು ಛಿದ್ರಗೊಂಡಿವೆ. ಗೊಡೆಗಳು ಬಿರುಕು ಬಿಟ್ಟಿವೆ.

ಇದನ್ನೂ ಓದಿ: Gas Cylinder Blast: ಲೈಟ್ ಆನ್ ಮಾಡುತ್ತಿದ್ದಂತೆ ಸಿಲಿಂಡರ್‌ ಸ್ಫೋಟ; ಪತಿ- ಪತ್ನಿ ಗಂಭೀರ

ಘಟನೆಯಲ್ಲಿ ಮನೆಯಲ್ಲಿದ್ದ ರವಿಕುಮಾರ್ ಪತ್ನಿ ಶೃತಿ (45) ಮಕ್ಕಳಾದ ಕುಶಾಲ್ (11) ಹೇಮಲತಾ (16) ಅವರಿಗೆ ಗಂಭೀರ ಗಾಯಗಳಾಗಿವೆ. ಇನ್ನು ಸಿಲಿಂಡರ್ ಸ್ಪೋಟದ ಶಬ್ದ ಕೇಳಿ ಮನೆಯೊಳಗೆ ಬಂದ ಪಕ್ಕದ ಮನೆಯ ಮಂಜಮ್ಮ(42) ಶಿವಣ್ಣ(45), ಸಮೀನಾ (46) ಎಂಬುವವರಿಗೂ ಬೆಂಕಿ ತಗುಲಿ ಗಂಭೀರ ಗಾಯಗಳಾಗಿದ್ದು ಗಾಯಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಘಟನೆ ಸಂಬಂಧ ಸ್ಥಳಕ್ಕೆ ಕುಣಿಗಲ್ ಉಪ ವಿಭಾಗದ ಡಿವೈಎಸ್ಪಿ ಓಂ ಪ್ರಕಾಶ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಗ್ನಿಶಾಮಕ ಅಧಿಕಾರಿಗಳಾದ ಕೆಂಪರಾಜು, ಭೀಮನಗೌಡ, ಚೇತನ್, ಮಂಜುನಾಥ್, ರಾಜೇಶೇಖರ್ ಹಾಜರಿದ್ದರು. ಈ ಕುರಿತು ಕುಣಿಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Koppal Tragedy : ಶೌಚಾಲಯದ ಗೋಡೆ ಕುಸಿದು ಮಹಿಳೆಯರಿಬ್ಬರು ಸಾವು; ಈಜಲು ಹೋದ ಯುವಕ ನೀರುಪಾಲು

ತಡರಾತ್ರಿ ಆಸ್ಪತ್ರೆಗೆ ಶಾಸಕ ಡಾ. ರಂಗನಾಥ್ ಭೇಟಿ

ಸಿಲಿಂಡರ್ ಸ್ಫೋಟಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳ ಬಗ್ಗೆ ಮಾಹಿತಿ ತಿಳಿದು ಕುಣಿಗಲ್ ಶಾಸಕ ಡಾ. ರಂಗನಾಥ್ ಶುಕ್ರವಾರ ತಡರಾತ್ರಿ ಗಾಯಗೊಂಡವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ವೈದ್ಯರಿಂದ ಮಾಹಿತಿ ಪಡೆದು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.

Continue Reading

ಪ್ರಮುಖ ಸುದ್ದಿ

Prajwal Revanna Case: ಪ್ರಜ್ವಲ್ ರೇವಣ್ಣಗೆ ಸಂಕಷ್ಟ; ಅರೆಸ್ಟ್ ವಾರಂಟ್ ನೀಡಿದ ಕೋರ್ಟ್‌

ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್‌, ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್‌ ವಾರಂಟ್‌ ಜಾರಿ ಮಾಡಿದೆ. ಜತೆಗೆ ಪಾಸ್‌ಪೋರ್ಟ್ ಕ್ಯಾನ್ಸಲ್ ಮಾಡಲು ಅನುಮತಿ ನೀಡಲಾಗಿದೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಪ್ರಜ್ವಲ್ ರೇವಣ್ಣಗೆ ಅಸಲಿ ಸಂಕಷ್ಟ ಶುರುವಾಗಿದೆ. ವಿದೇಶದಲ್ಲಿರುವ ಪ್ರಜ್ವಲ್‌ ಸೆರೆಗೆ ಎಸ್‌ಐಟಿ ಸರ್ಜಿಕಲ್ ಸ್ಟ್ರೈಕ್‌ ಆರಂಭಿಸಿದ್ದು, ಇದೀಗ ಹೊಳೆನರಸೀಪುರ ಕೇಸ್‌ನಲ್ಲಿ (Prajwal Revanna Case) ಪ್ರಜ್ವಲ್‌ ಬಂಧನಕ್ಕೆ ಅರೆಸ್ಟ್ ವಾರಂಟ್ ಪಡೆದಿದೆ. ಜತೆಗೆ ಪಾಸ್‌ಪೋರ್ಟ್ ಕ್ಯಾನ್ಸಲ್ ಮಾಡಲು ಕೂಡ ಕೋರ್ಟ್ ಅನುಮತಿ ನೀಡಿದೆ.

ನಗರದ 42ನೇ ಎಸಿಎಂಎಂ ಕೋರ್ಟ್‌, ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್‌ ವಾರಂಟ್‌ ಜಾರಿ ಮಾಡಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಹೊರಡಿಸಿದ್ದ ನೋಟಿಸ್‌ಗಳ ಬಗ್ಗೆ ಕೋರ್ಟ್‌ ಮಾಹಿತಿ ಕೇಳಿತ್ತು. ಈ ವೇಳೆ ಲುಕ್‌ ಔಟ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದ ಎಸ್‌ಐಟಿ, ಬಂಧನಕ್ಕೆ ಚಾರ್ಜ್ ಶೀಟ್ ಅವಶ್ಯಕತೆ ಇಲ್ಲ ಎಂದು ಕೋರ್ಟ್‌ಗೆ ಮನವರಿಕೆ ಮಾಡಿತ್ತು. ಹೀಗಾಗಿ ಕೋರ್ಟ್‌ ಅರೆಸ್ಟ್‌ ವಾರಂಟ್‌ ಜಾರಿ ಮಾಡಿದೆ.

ಸಿಬಿಐ ಮೂಲಕ ರೆಡ್ ಕಾರ್ನರ್ ನೋಟಿಸ್

ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣಗೆ ವಿಚಾರಣೆಗೆ ಹಾಜರಾಗಲು ಈಗಾಗಲೇ ಎಸ್‌ಐಟಿ ಲುಕ್‌ ಔಟ್‌ ನೋಟಿಸ್‌ ಹಾಗೂ ಬ್ಲೂ ಕಾರ್ನರ್‌ ನೋಟಿಸ್‌ ನೀಡಿತ್ತು. ಇದೀಗ ಅರೆಸ್ಟ್‌ ವಾರಂಟ್‌ ಲಭಿಸಿರುವುದರಿಂದ ಸಿಬಿಐ ಮೂಲಕ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಎಸ್‌ಐಟಿ ಸಿದ್ಧತೆ ನಡೆಸುತ್ತಿದೆ. ರೆಡ್‌ ಕಾರ್ನರ್‌ ನೋಟಿಸ್‌ ಬಳಿಕ ಪ್ರಜ್ವಲ್‌ ಪಾಸ್‌ಪೋರ್ಟ್‌ ರದ್ದು ಆಗಲಿದ್ದು, ಇದರಿಂದ ಬಂಧನಕ್ಕೆ ಸಹಕಾರಿಯಾಗಲಿದೆ.

ರೆಡ್ ಕಾರ್ನರ್ ನೋಟಿಸ್ ಎನ್ನುವುದು ಹಸ್ತಾಂತರ, ಶರಣಾಗತಿ ಅಥವಾ ಅಂತಹುದ್ದೇ ಕಾನೂನು ಕ್ರಮಕ್ಕೆ ಬಾಕಿ ಇರುವ ವ್ಯಕ್ತಿಯನ್ನು ಪತ್ತೆಹಚ್ಚಲು ಮತ್ತು ತಾತ್ಕಾಲಿಕವಾಗಿ ಬಂಧಿಸುವುದಕ್ಕೆ ವಿಶ್ವಾದ್ಯಂತ ಕಾನೂನು ಜಾರಿಗೊಳಿಸಲು ಮಾಡುವ ವಿನಂತಿಯಾಗಿದೆ.

ಅಶ್ಲೀಲ ವಿಡಿಯೊ ವೈರಲ್ ಕೇಸ್‌; ವಕೀಲ ದೇವರಾಜೇಗೌಡ ಎಸ್‌ಐಟಿ ಕಸ್ಟಡಿ ಅವಧಿ 2 ವಿಸ್ತರಣೆ

Prajwal Revanna Case obscene video goes viral Advocate Devarajegowda SIT custody extended by 2 days

ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ವೈರಲ್ ಪ್ರಕರಣದಲ್ಲಿ (Prajwal Revanna Case) ಎಂಟನೇ ಆರೋಪಿಯಾಗಿರುವ ವಕೀಲ ದೇವರಾಜೇಗೌಡ (Devarajegowda) ಅವರನ್ನೂ ಮತ್ತೂ ಎರಡು ದಿನ ಪೊಲೀಸ್‌ ಕಸ್ಟಡಿಗೆ ನೀಡಿ 5ನೇ ಅಧಿಕ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಆದೇಶಿಸಿದೆ.

ಏಪ್ರಿಲ್ 23 ರಂದು ಹಾಸನ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ 8ನೇ ಆರೋಪಿಯಾಗಿ ದೇವರಾಜೇಗೌಡ ಅವರ ಹೆಸರು ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದೇವರಾಜೇಗೌಡ ಅವರನ್ನು ವಿಚಾರಣೆಗಾಗಿ ಶುಕ್ರವಾರ ಒಂದು ದಿನದ ಮಟ್ಟಿಗೆ ಎಸ್‌ಐಟಿ ವಶಕ್ಕೆ ಪಡೆಯಲಾಗಿತ್ತು.

ದೇವರಾಜೇಗೌಡ ಅವರ ಕಸ್ಟಡಿ ಅವಧಿ ಮುಕ್ತಾಯವಾಗಿದ್ದರಿಂದ ಪುನಃ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಎಸ್‌ಐಟಿ ಅಧಿಕಾರಿಗಳು ಮತ್ತೆ ಎರಡು ದಿನ ಕಸ್ಟಡಿಗೆ ಕೇಳಿದ್ದರು. ಹೀಗಾಗಿ ಮೇ 20ರ ಸಂಜೆ ಐದು ಗಂಟೆಗೆ ಕೋರ್ಟ್ ಮುಂದೆ ಹಾಜರು ಪಡಿಸುವಂತೆ ನ್ಯಾಯಾಲಯ ಸೂಚಿಸಿ, ಎರಡು ದಿನ ಕಸ್ಟಡಿಯನ್ನು ಮುಂದುವರಿಸಿ ಆದೇಶಿಸಿದೆ.
ಎರಡೆರಡು ಕೇಸ್‌

ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ (physical Abuse) ಕೇಸ್‌ ಆರೋಪಿ ವಕೀಲ ದೇವರಾಜೇಗೌಡ (Devarajegowda) ಅವರ ಪೊಲೀಸ್ ಕಸ್ಟಡಿ ಅಂತ್ಯವಾಗಿದ್ದರಿಂದ ಅವರನ್ನು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಮೇ 14 ರಂದು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದ ಹೊಳೆನರಸೀಪುರ ನಗರ ಪೊಲೀಸರು, ಗುರುವಾರವೂ ಒಂದು ದಿನ ಕಸ್ಟಡಿಗೆ ಪಡೆದುಕೊಂಡಿದ್ದರು. ಶುಕ್ರವಾರ ಕೋರ್ಟ್‌ ಮುಂದೆ ಹಾಜರುಪಡಿಸಿದ ಹಿನ್ನೆಲೆಯಲ್ಲಿ ಅವರಿಗೆ ನ್ಯಾಯಾಂಗ ಬಂಧನವಿರಿಸಿ ಆದೇಶಿಸಲಾಗಿತ್ತು. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದ ವಕೀಲರನ್ನು ಪೆನ್‌ಡ್ರೈವ್‌ ಪ್ರಕರಣದಲ್ಲಿ ಶುಕ್ರವಾರ ಎಸ್‌ಐಟಿ ಕಸ್ಟಡಿಗೆ ಪಡೆದುಕೊಂಡಿತ್ತು. ಈಗ ಮತ್ತೆ ಎರಡು ದಿನ ಕಸ್ಟಡಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಸಾಕ್ಷ್ಯ ಬಿಡುಗಡೆಗೆ ಮುಂದಾಗಿದ್ದ ದೇವರಾಜೇಗೌಡ ಅವರು ಬೇರೆ ಕೇಸ್‌ನಲ್ಲಿ ಬಂಧನವಾಗಿದ್ದಾರೆ. ಒಟ್ಟು ನಾಲ್ಕು ದಿನ ಪೊಲೀಸ್ ಕಸ್ಟಡಿಯಲ್ಲಿದ್ದ ದೇವರಾಜೇಗೌಡ ಅವರನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.

ದೇವರಾಜೇಗೌಡ ಮೇ 11ರಂದು ಬಂಧನಕ್ಕೆ ಒಳಗಾಗಿದ್ದರು. ಇವರ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ಆರೋಪಗಳನ್ನು ಹೊರಿಸಲಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಅವರನ್ನು ಕಸ್ಟಡಿಗೆ ಪಡೆದುಕೊಂಡಿದ್ದರು. ಹೊಳೆನರಸೀಪುರ, ಹಾಸನ ಸೇರಿ ಇತರ ಅಗತ್ಯ ಸ್ಥಳಗಳಿಗೆ ಕರೆದೊಯ್ದು ವಿಚಾರಣೆಯನ್ನು ಕೈಗೊಂಡಿದ್ದರು.
ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದ ದೇವರಾಜೇಗೌಡ

ವಕೀಲ ದೇವರಾಜೇಗೌಡ ಬಂಧನವಾಗಿರುವುದು ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಾದರೂ ಹಾಸನ ಪೆನ್ ಡ್ರೈವ್ ಪ್ರಕರಣಕ್ಕೇ ತಳುಕು ಹಾಕಿಕೊಂಡಿದೆ. ಈಗಾಗಲೇ ಮಾಜಿ ಸಂಸದ ಶಿವರಾಮೇಗೌಡ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಲ್ಲದೆ, ಅವರ ಜತೆಗಿನ ಮಾತುಕತೆ ಎನ್ನಲಾದ ಆಡಿಯೊವನ್ನು ಬಿಡುಗಡೆ ಮಾಡಿದ್ದರು. ಇದಲ್ಲದೆ, ಸಾಕಷ್ಟು ವಿಡಿಯೊಗಳು, ಸಾಕ್ಷಿಗಳು ಸಹ ತಮ್ಮ ಬಳಿ ಇದೆ ಎಂದು ಹೇಳಿಕೊಂಡಿದ್ದರು. ಸಾಕ್ಷ್ಯಗಳನ್ನು ಮುಂದಿನ ದಿನಗಳಲ್ಲಿ ಸಿಬಿಐ ಮುಂದೆ ಇಡುತ್ತೇನೆ ಎಂದು ಸಹ ಸುದ್ದಿಗೋಷ್ಠಿ ನಡೆಸಿ ನೇರವಾಗಿ ರಾಜ್ಯ ಸರ್ಕಾರದ ವಿರುದ್ಧ ಸವಾಲು ಹಾಕಿದ್ದರು. ಆದರೆ, ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಅವರನ್ನು ಬಂಧಿಸಲಾಗಿದೆ.

Continue Reading

ಕರ್ನಾಟಕ

Anjali Murder Case: ನನ್ನ ಮಗ ಮಾಡಿದ್ದು ತಪ್ಪು, ಕೋರ್ಟ್ ಅವನಿಗೆ ಯಾವ ಶಿಕ್ಷೆಯಾದ್ರೂ ಕೊಡಲಿ: ಆರೋಪಿ ಗಿರೀಶ್ ತಾಯಿ

Anjali Murder Case: ಈ ಹಿಂದೆ ಕಳ್ಳತನ ಮಾಡಿದಾಗ ಬುದ್ಧಿವಾದ ಹೇಳಿದ್ದೆ. ಈಗ ಇಂತಹ ಕೆಲಸ ಮಾಡುತ್ತಾನೆ ಎಂದು ಊಹಿಸಿರಲಿಲ್ಲ ಎಂದು ಅಂಜಲಿ ಕೊಲೆ ಪ್ರಕರಣದ ಬಗ್ಗೆ ಆರೋಪಿ ಗಿರೀಶ್‌ ತಾಯಿ ಸವಿತಾ ಸಾವಂತ್ ಹೇಳಿದ್ದಾರೆ.

VISTARANEWS.COM


on

Girish's mother
Koo

ಹುಬ್ಬಳ್ಳಿ: ನನ್ನ ಮಗ ಗಿರೀಶ್ ಮಾಡಿದ್ದು ತಪ್ಪು, ಆತನಿಗೆ ಕೋರ್ಟ್ ಏನು ಶಿಕ್ಷೆ ಕೊಡುತ್ತೆ ಕೊಡಲಿ. ಅಂಜಲಿ (Anjali Murder Case) ನನ್ನನ್ನು ಮಮ್ಮಿ ಅಂತ ಕರೆಯುತ್ತಿದ್ದಳು, ಅಂಜಲಿ ಮತ್ತು ಗಿರೀಶ್ ಪರಸ್ಪರ ಪ್ರೀತಿಸುತ್ತಿದ್ದರು. ನನ್ನ ಮಗ ಅಂಜಲಿ ಜತೆ ಮದುವೆಯಾಗುತ್ತೇನೆ ಅಂದಿದ್ದ. ಆದರೆ, ಇತ್ತೀಚೆಗೆ ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಅವನು ಈ ಹಂತಕ್ಕೆ ಹೋಗುತ್ತಾನೆ ಅಂತ ಗೊತ್ತಿರಲಿಲ್ಲ ಎಂದು ಆರೋಪಿ ಗಿರೀಶ್ ತಾಯಿ ಸವಿತಾ ಸಾವಂತ್ ಹೇಳಿದ್ದಾರೆ.

ಅಂಜಲಿ ಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇಬ್ಬರೂ ಹೇಗಾದರೂ ಚೆನ್ನಾಗಿರಿ ಅಂತ ಹೇಳಿದ್ದೆ. ಕಳೆದ ಆರು ತಿಂಗಳಿಂದ ಮಗ ಮನೆಗೆ ಬಂದಿಲ್ಲ. ಅಂಜಲಿ ಫೋನ್‌ನಲ್ಲಿ ಬೇರೆಯವರ ಜತೆ ಮಾತನಾಡುತ್ತಾಳೆ ಮಮ್ಮಿ ಅಂತ ಹೇಳಿದ್ದ. ಆಕೆಗೆ ಇಷ್ಟ ಇಲ್ಲದಿದ್ದರೆ ಬಿಟ್ಟು ಬಿಡು ಅಂದಿದ್ದೆ. ಆದರೆ ಈ ರೀತಿ ಮಾಡುತ್ತಾನೆ ಅಂತ ಗೊತ್ತಿರಲಿಲ್ಲ ಎಂದರು ತಿಳಿಸಿದ್ದಾರೆ.

ಇದನ್ನೂ ಓದಿ | Anjali Murder Case: ರೈಲಿನಲ್ಲಿ ಮತ್ತೊಬ್ಬ ಮಹಿಳೆ ಕೊಲೆಗೆ ಯತ್ನಿಸಿದ ಅಂಜಲಿ ಹಂತಕ!

ಅವನು ನನಗೆ ಒಂದು ಪೈಸೆಯೂ ಮನೆ ಖರ್ಚಿಗೆ ಕೊಡುತ್ತಿರಲಿಲ್ಲ. ಈ ಹಿಂದೆ ಕಳ್ಳತನ ಮಾಡಿದಾಗ ಬುದ್ಧಿವಾದ ಹೇಳಿದ್ದೆ. ನನಗೆ ಯಾರೂ ಇಲ್ಲ, ನಾನು ಕೆಲಸ ಮಾಡದೆ ಮನೆ ನಡೆಯಲ್ಲ. ಬಾಡಿಗೆ ಮನೆಯವರು ಮನೆ ಖಾಲಿ ಮಾಡು ಅಂತಿದ್ದಾರೆ. ಯಾವ ಸಂಬಂಧಿಕರೂ ನನ್ನ ಸಹಾಯಕ್ಕೆ ಬಂದಿಲ್ಲ. ನಾನು ಮಗನನ್ನ ನೋಡಲು ಕಿಮ್ಸ್‌ಗೆ ಹೋಗಲ್ಲ. ಅವನಿಗೆ ಬೇಲ್ ಸೇರಿದಂತೆ, ಯಾವುದೇ ಸಹಾಯವನ್ನು ಮಾಡಲ್ಲ. ನ್ಯಾಯಾಲಯ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ತೆಗೆದುಕೊಳ್ಳಲಿ ಎಂದು ಹೇಳಿದ್ದಾರೆ.

ಅಂಜಲಿ ಕೊಂದವನ ಎನ್‌ಕೌಂಟರ್ ಮಾಡಿ: ಸಹೋದರಿ ಪೂಜಾ ಆಗ್ರಹ

Anjali Murder Case

ಧಾರವಾಡ: ಅಂಜಲಿ ಹತ್ಯೆ ಪ್ರಕರಣದ (Anjali Murder Case) ಆರೋಪಿ ಗಿರೀಶ್‌ನನ್ನು ಎನ್‌ಕೌಂಟರ್ ಮಾಡಬೇಕು. ಯಾವುದೇ ಕಾರಣಕ್ಕೂ ಆರೋಪಿಗೆ ಚಿಕಿತ್ಸೆ ಕೊಡಬಾರದು, ಅವನನ್ನು ಆದಷ್ಟು ಬೇಗ ಎನ್ ಕೌಂಟರ್ ಮಾಡಬೇಕು. ನಮ್ಮ ಅಕ್ಕ ಹೇಗೆ ರಕ್ತ ಸುರಿದು ಪ್ರಾಣ ಬಿಟ್ಟಳೋ ಅದೇ ರೀತಿ ಅವನು ಸಾಯಬೇಕು ಎಂದು ಅಂಜಲಿ ಸಹೋದರಿ ಪೂಜಾ ಆಗ್ರಹಿಸಿದ್ದಾರೆ.

ವಿಸ್ತಾರ ನ್ಯೂಸ್‌ ಜತೆ ಶುಕ್ರವಾರ ಮಾತನಾಡಿರುವ ಅಂಜಲಿ ಸಹೋದರಿ ಪೂಜಾ, ನಮ್ಮ ಅಕ್ಕನಿಗೂ ಅವನಿಗೂ ಯಾವುದೇ ಸಂಬಂಧ ಇಲ್ಲ. ಏನೇನೋ ಹೇಳಿ ದಿಕ್ಕು ತಪ್ಪಿಸುತ್ತಿದ್ದಾರೆ. ಪೊಲೀಸರು ಹೇಗೆ ಬೇಕೋ ಹಾಗೆ ಮಾಡುವ ವಿಚಾರದಲ್ಲಿದ್ದಾರೆ. ಇದನ್ನು ಆದಷ್ಟು ಬೇಗ ತನಿಖೆ ಮಾಡಬೇಕು. ಬೆಳಗ್ಗೆ ಮಾತನಾಡಲು ಬಂದವನು ಚಾಕು ಹಾಕಿದ. ನಾವು ನಮ್ಮ ಅಕ್ಕನ ಜತೆ ಮಾತನಾಡಲು ಸಹ ಆಗಲಿಲ್ಲ. ಕೊನೆ ಗಳಿಗೆಯಲ್ಲಿ ಪೊಲೀಸರು ಬಂದು ಡಾಕ್ಟರ್ ಸಹ ಕರೆಯಲಿಲ್ಲ. ಕೇವಲ ಪೋಟೋ ತೆಗೆದುಕೊಂಡು ಹೋದರು. ಅವನಿಗೆ ಅದೇ ರೀತಿ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

ನಮ್ಮ ಅಕ್ಕನ ಜತೆಗೆ ಏನೇನೋ ಸಂಬಂಧ ಕಲ್ಪಿಸುತ್ತಿದ್ದಾರೆ. ಹಾಗಾದರೆ ನೆನ್ನೆಯೂ ಸಹ ಅವನು ಯಾರದೋ ಜೊತೆ ಜಗಳ ಮಾಡಿದ್ದ. ಅವರಿಗೂ ಸಂಬಂಧ ಇದೆಯಾ ಎಂದು ಸಹೋದರಿ ಪ್ರಶ್ನೆ ಮಾಡಿದ್ದಾರೆ.

ಹಲ್ಲೇ ಮಾಡಿ ಓಡಿ ಹೋದ

ದಾವಣಗೆರೆ: ಮಹಿಳೆಗೆ ಅಂಜಲಿ ಹಂತಕನಿಂದ ಚಾಕು ಇರಿತ ಪ್ರಕರಣದ ಬಗ್ಗೆ ಗಾಯಾಳು ಮಹಿಳೆಯ ಪತಿ ಪ್ರತಿಕ್ರಿಯಿಸಿದ್ದಾರೆ. ನಾವು ಟ್ರೈನ್‌ನಲ್ಲಿ ಇರುವಾಗ ಅರೋಪಿ ಗಿರೀಶ್ ಹಿಂದೆ ಹಿಂದೆಯೇ ಬರುತ್ತಿದ್ದ. ರೆಸ್ಟ್ ರೂಂನ ಡೋರ್ ಓಪನ್ ಮಾಡಿ ಒಳ ನುಗ್ಗಲು ಯತ್ನಿಸಿದ. ಹೊಟ್ಟೆಗೆ ಚಾಕು ಚುಚ್ಚಲು ಮುಂದಾದಾಗ ನಾನು ಕೈ ಅಡ್ಡ ಹಿಡಿದೆ. ಕೈಗೆ ಗಾಯವಾಗುತ್ತಿದ್ದಂತೆ ಕೂಗಿಕೊಂಡೆ, ಆತ ಓಡಿಹೋದ ಎಂದು ಗದಗ ಮೂಲದ ಲಕ್ಷ್ಮೀ ಪತಿ ಮಹಾಂತೇಶ್ ತಿಳಿಸಿದ್ದಾರೆ. ಸದ್ಯ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ.

5 ಸಾವಿರ ಅಡ್ವಾನ್ಸ್ ತೆಗೆದುಕೊಂಡು ಹೋದವನು ಮತ್ತೆ ಬಂದಿಲ್ಲ

ಅಂಜಲಿ ಹತ್ಯೆ ಕೊಲೆ ಪ್ರಕರಣದ ಆರೋಪಿ ಗಿರೀಶ್ ಕಳೆದ ನಾಲ್ಕು ತಿಂಗಳಿನಿಂದ ಮೈಸೂರಿನ ಮಹಾರಾಜ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂಬುವುದು ತಿಳಿದುಬಂದಿದೆ. ಈ ಬಗ್ಗೆ ಮಹಾರಾಜ ಹೋಟೆಲ್ ಮಾಲೀಕ ಗೋವರ್ಧನ್ ಪ್ರತಿಕ್ರಿಯಿಸಿ, ವಿನಾಯಕ ನರ್ಸಿಂಗ್ ಕೇರ್ ಏಜೆನ್ಸಿ ಮೂಲಕ ನಮ್ಮ ತಂದೆ ನೋಡಿಕೊಳ್ಳಲು ಆರೋಪಿ ಗಿರೀಶ್‌ ಬಂದಿದ್ದ. ರೂಂ ಬಾಯ್, ಸಪ್ಲೈಯರ್ ಆಗಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Prajwal Revanna Case: ದೇವರಾಜೇಗೌಡರಿಗೆ ಮೆಂಟಲ್‌ ಟ್ರೀಟ್ಮೆಂಟ್‌ ಕೊಡಿಸಬೇಕಿದೆ: ಕಾಂಗ್ರೆಸ್‌ ವ್ಯಂಗ್ಯ

ಗಿರೀಶ್ ಸರಿಯಾಗಿ ಕೆಲಸಕ್ಕೆ ಬರುತ್ತಿರಲಿಲ್ಲ. ಒಮ್ಮೆ 10 ದಿನ, 5‌ ದಿನ ಹೀಗೆ ರಜಾ ತೆಗೆದುಕೊಳ್ಳುತ್ತಿದ್ದ. ಏಜೆನ್ಸಿ ಮೂಲಕ ಬಂದ ಕಾರಣ ಹೆಚ್ಚು ರಜಾ ತೆಗೆದುಕೊಂಡರೂ ನಾನು ಅವನ ಬಗ್ಗೆ ಕೇಳುತ್ತಿರಲಿಲ್ಲ. ಮಂಗಳವಾರ ಸಂಜೆ 5 ಸಾವಿರ ರೂ. ಹಣ ಅಡ್ವಾನ್ಸ್ ತೆಗೆದುಕೊಂಡು ಹೋದವನು ಮತ್ತೆ ವಾಪಸ್ ಬಂದಿಲ್ಲ ಎಂದು ಹೇಳಿದ್ದಾರೆ.

ಮರುದಿನ ಪೊಲೀಸರು ನನಗೆ ಕರೆ ಮಾಡಿದಾಗಲೇ ಗಿರೀಶ್‌ ಕೊಲೆ ಮಾಡಿದ್ದಾನೆ ಎಂಬುದು ತಿಳಿಯಿತು. ನಮ್ಮ ಹೋಟೆಲ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ, ಮೊಬೈಲ್‌ನಲ್ಲಿ ಹೆಚ್ಚು ಮಾತನಾಡುತ್ತಿದ್ದ ಎಂದು ಅವನ ಬಗ್ಗೆ ಹೇಳಿದ್ದರು. ಜತೆಗೆ ಕಂಪನಿಯ ಫೋನ್‌ನಿಂದ ಹೆಚ್ಚು ದಿನ ಮಾತನಾಡಿದ್ದಾನೆ. ಘಟನೆ ನಡೆಯುವ ಹಿಂದಿನ ದಿನ ಜೋರಾಗಿ ಕೂಗಾಡಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದನಂತೆ. ನಮ್ಮ ಹೋಟೆಲ್‌ಗೆ ಏಳು ಪೊಲೀಸರು ಬಂದಿದ್ದರು. ನೆನ್ನೆ ರಾತ್ರಿಯವರೆಗೂ ಪೊಲೀಸರಿ ನಮ್ಮ ಹೋಟೆಲ್‌ನಲ್ಲಿ ಇದ್ದರು. ಆತ ದಾವಣಗೆರೆಯಲ್ಲಿ ಸಿಕ್ಕ ಬಳಿಕ ಮಧ್ಯರಾತ್ರಿ ಪೊಲೀಸರು ಇಲ್ಲಿಂದ ತೆರಳಿದರು ಎಂದು ತಿಳಿಸಿದ್ದಾರೆ.

Continue Reading

ಹಾಸನ

Prajwal Revanna Case: ಅಶ್ಲೀಲ ವಿಡಿಯೊ ವೈರಲ್ ಕೇಸ್‌; ವಕೀಲ ದೇವರಾಜೇಗೌಡ ಎಸ್‌ಐಟಿ ಕಸ್ಟಡಿ ಅವಧಿ 2 ವಿಸ್ತರಣೆ

Prajwal Revanna Case: ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊಗಳುಳ್ಳ ಪೆನ್‌ಡ್ರೈವ್‌ ವೈರಲ್‌ ಕೇಸ್‌ಗೆ ಸಂಬಂಧಪಟ್ಟಂತೆ ದೇವರಾಜೇಗೌಡ ಅವರ ಕಸ್ಟಡಿ ಅವಧಿ ಮುಕ್ತಾಯವಾಗಿತ್ತು. ಹೀಗಾಗಿ ಅವರನ್ನು ಇಂದು ಪುನಃ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಎಸ್‌ಐಟಿ ಅಧಿಕಾರಿಗಳು ಮತ್ತೆ ಎರಡು ದಿನ ಕಸ್ಟಡಿಗೆ ಕೇಳಿದ್ದರು. ಹೀಗಾಗಿ ಮೇ 20ರ ಸಂಜೆ ಐದು ಗಂಟೆಗೆ ಕೋರ್ಟ್ ಮುಂದೆ ಹಾಜರು ಪಡಿಸುವಂತೆ ನ್ಯಾಯಾಲಯ ಸೂಚಿಸಿ, ಎರಡು ದಿನ ಕಸ್ಟಡಿಯನ್ನು ಮುಂದುವರಿಸಿ ಆದೇಶಿಸಿದೆ.

VISTARANEWS.COM


on

Prajwal Revanna Case obscene video goes viral Advocate Devarajegowda SIT custody extended by 2 days
Koo

ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ವೈರಲ್ ಪ್ರಕರಣದಲ್ಲಿ (Prajwal Revanna Case) ಎಂಟನೇ ಆರೋಪಿಯಾಗಿರುವ ವಕೀಲ ದೇವರಾಜೇಗೌಡ (Devarajegowda) ಅವರನ್ನೂ ಮತ್ತೂ ಎರಡು ದಿನ ಪೊಲೀಸ್‌ ಕಸ್ಟಡಿಗೆ ನೀಡಿ 5ನೇ ಅಧಿಕ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಆದೇಶಿಸಿದೆ.

ಏಪ್ರಿಲ್ 23 ರಂದು ಹಾಸನ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ 8ನೇ ಆರೋಪಿಯಾಗಿ ದೇವರಾಜೇಗೌಡ ಅವರ ಹೆಸರು ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದೇವರಾಜೇಗೌಡ ಅವರನ್ನು ವಿಚಾರಣೆಗಾಗಿ ಶುಕ್ರವಾರ ಒಂದು ದಿನದ ಮಟ್ಟಿಗೆ ಎಸ್‌ಐಟಿ ವಶಕ್ಕೆ ಪಡೆಯಲಾಗಿತ್ತು.

ದೇವರಾಜೇಗೌಡ ಅವರ ಕಸ್ಟಡಿ ಅವಧಿ ಮುಕ್ತಾಯವಾಗಿದ್ದರಿಂದ ಪುನಃ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಎಸ್‌ಐಟಿ ಅಧಿಕಾರಿಗಳು ಮತ್ತೆ ಎರಡು ದಿನ ಕಸ್ಟಡಿಗೆ ಕೇಳಿದ್ದರು. ಹೀಗಾಗಿ ಮೇ 20ರ ಸಂಜೆ ಐದು ಗಂಟೆಗೆ ಕೋರ್ಟ್ ಮುಂದೆ ಹಾಜರು ಪಡಿಸುವಂತೆ ನ್ಯಾಯಾಲಯ ಸೂಚಿಸಿ, ಎರಡು ದಿನ ಕಸ್ಟಡಿಯನ್ನು ಮುಂದುವರಿಸಿ ಆದೇಶಿಸಿದೆ.

ಎರಡೆರಡು ಕೇಸ್‌

ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ (physical Abuse) ಕೇಸ್‌ ಆರೋಪಿ ವಕೀಲ ದೇವರಾಜೇಗೌಡ (Devarajegowda) ಅವರ ಪೊಲೀಸ್ ಕಸ್ಟಡಿ ಅಂತ್ಯವಾಗಿದ್ದರಿಂದ ಅವರನ್ನು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಮೇ 14 ರಂದು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದ ಹೊಳೆನರಸೀಪುರ ನಗರ ಪೊಲೀಸರು, ಗುರುವಾರವೂ ಒಂದು ದಿನ ಕಸ್ಟಡಿಗೆ ಪಡೆದುಕೊಂಡಿದ್ದರು. ಶುಕ್ರವಾರ ಕೋರ್ಟ್‌ ಮುಂದೆ ಹಾಜರುಪಡಿಸಿದ ಹಿನ್ನೆಲೆಯಲ್ಲಿ ಅವರಿಗೆ ನ್ಯಾಯಾಂಗ ಬಂಧನವಿರಿಸಿ ಆದೇಶಿಸಲಾಗಿತ್ತು. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದ ವಕೀಲರನ್ನು ಪೆನ್‌ಡ್ರೈವ್‌ ಪ್ರಕರಣದಲ್ಲಿ ಶುಕ್ರವಾರ ಎಸ್‌ಐಟಿ ಕಸ್ಟಡಿಗೆ ಪಡೆದುಕೊಂಡಿತ್ತು. ಈಗ ಮತ್ತೆ ಎರಡು ದಿನ ಕಸ್ಟಡಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಸಾಕ್ಷ್ಯ ಬಿಡುಗಡೆಗೆ ಮುಂದಾಗಿದ್ದ ದೇವರಾಜೇಗೌಡ ಅವರು ಬೇರೆ ಕೇಸ್‌ನಲ್ಲಿ ಬಂಧನವಾಗಿದ್ದಾರೆ. ಒಟ್ಟು ನಾಲ್ಕು ದಿನ ಪೊಲೀಸ್ ಕಸ್ಟಡಿಯಲ್ಲಿದ್ದ ದೇವರಾಜೇಗೌಡ ಅವರನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.

ದೇವರಾಜೇಗೌಡ ಮೇ 11ರಂದು ಬಂಧನಕ್ಕೆ ಒಳಗಾಗಿದ್ದರು. ಇವರ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ಆರೋಪಗಳನ್ನು ಹೊರಿಸಲಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಅವರನ್ನು ಕಸ್ಟಡಿಗೆ ಪಡೆದುಕೊಂಡಿದ್ದರು. ಹೊಳೆನರಸೀಪುರ, ಹಾಸನ ಸೇರಿ ಇತರ ಅಗತ್ಯ ಸ್ಥಳಗಳಿಗೆ ಕರೆದೊಯ್ದು ವಿಚಾರಣೆಯನ್ನು ಕೈಗೊಂಡಿದ್ದರು.

ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದ ದೇವರಾಜೇಗೌಡ

ವಕೀಲ ದೇವರಾಜೇಗೌಡ ಬಂಧನವಾಗಿರುವುದು ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಾದರೂ ಹಾಸನ ಪೆನ್ ಡ್ರೈವ್ ಪ್ರಕರಣಕ್ಕೇ ತಳುಕು ಹಾಕಿಕೊಂಡಿದೆ. ಈಗಾಗಲೇ ಮಾಜಿ ಸಂಸದ ಶಿವರಾಮೇಗೌಡ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಲ್ಲದೆ, ಅವರ ಜತೆಗಿನ ಮಾತುಕತೆ ಎನ್ನಲಾದ ಆಡಿಯೊವನ್ನು ಬಿಡುಗಡೆ ಮಾಡಿದ್ದರು. ಇದಲ್ಲದೆ, ಸಾಕಷ್ಟು ವಿಡಿಯೊಗಳು, ಸಾಕ್ಷಿಗಳು ಸಹ ತಮ್ಮ ಬಳಿ ಇದೆ ಎಂದು ಹೇಳಿಕೊಂಡಿದ್ದರು. ಸಾಕ್ಷ್ಯಗಳನ್ನು ಮುಂದಿನ ದಿನಗಳಲ್ಲಿ ಸಿಬಿಐ ಮುಂದೆ ಇಡುತ್ತೇನೆ ಎಂದು ಸಹ ಸುದ್ದಿಗೋಷ್ಠಿ ನಡೆಸಿ ನೇರವಾಗಿ ರಾಜ್ಯ ಸರ್ಕಾರದ ವಿರುದ್ಧ ಸವಾಲು ಹಾಕಿದ್ದರು. ಆದರೆ, ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಅವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: DK Shivakumar: ದೇವರಾಜೇಗೌಡ ಮೆಂಟಲ್‌ ಕೇಸ್‌; 100 ಕೋಟಿ ರೂ. ಆಫರ್‌ ಮಾಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಲಿ ಎಂದ ಡಿಕೆಶಿ

ಪತಿಯು ಮಾಲೀಕತ್ವದ ಸೈಟ್ ವಿಚಾರವಾಗಿ ದೇವರಾಜೇಗೌಡ ಅವರನ್ನು ಮಹಿಳೆಯೊಬ್ಬರು ಭೇಟಿಯಾಗಿದ್ದರು. ಆ ಪರಿಚಯವನ್ನು ದುರ್ಬಳಕೆ ಮಾಡಿಕೊಂಡು ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪ ದೇವರಾಜೇಗೌಡ ವಿರುದ್ಧ ಕೇಳಿ ಬಂದಿದೆ.

Continue Reading
Advertisement
Voter Turnout
ದೇಶ4 mins ago

Voter Turnout: 4ನೇ ಹಂತದಲ್ಲಿ ಹೆಚ್ಚಿದ ಮತದಾನ; ಪುರುಷರಿಗಿಂತ ಸ್ತ್ರೀಯರಿಂದಲೇ ಹೆಚ್ಚು ಮತ ಚಲಾವಣೆ; ಹೀಗಿದೆ ಆಯೋಗದ ಮಾಹಿತಿ

Uttara Kannada News Take precautionary measures to prevent the spread of infectious diseases in the district says DC Gangubai manakar
ಉತ್ತರ ಕನ್ನಡ7 mins ago

Uttara Kannada News: ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರ ವಹಿಸಿ: ಡಿಸಿ ಮಾನಕರ್‌

BJP State President B Y Vijayendra latest statement in bengaluru
ಕರ್ನಾಟಕ9 mins ago

BY Vijayendra: ವಿಧಾನಪರಿಷತ್ ವಿವಿಧ ಕ್ಷೇತ್ರಗಳ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ; ಬಿ.ವೈ.ವಿಜಯೇಂದ್ರ

Shed houses electric poles damaged due to heavy rain and wind in Karatagi
ಕೊಪ್ಪಳ12 mins ago

Heavy Rain: ಕಾರಟಗಿಯಲ್ಲಿ ಭಾರೀ ಮಳೆ ಗಾಳಿಗೆ ಅಪಾರ ಹಾನಿ; ಸಚಿವ ಶಿವರಾಜ ತಂಗಡಗಿ ಪರಿಶೀಲನೆ

cylinder explosion in Kunigal 6 people seriously injured, Kunigal MLA Dr Ranganath visit victoria Hospital in bengaluru
ತುಮಕೂರು14 mins ago

Cylinder Blast: ಗ್ಯಾಸ್‌ ಸಿಲಿಂಡರ್ ಸ್ಫೋಟ; ಮನೆಯ ಮೂವರಲ್ಲದೆ, ಪಕ್ಕದ ಮನೆಯ ಮೂವರಿಗೂ ಗಂಭೀರ ಗಾಯ

RCB vs CSK
ಕ್ರೀಡೆ26 mins ago

RCB vs CSK: ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಚೆನ್ನೈ ಸೂಪರ್​ ಕಿಂಗ್ಸ್​

Prajwal Revanna Case
ಪ್ರಮುಖ ಸುದ್ದಿ38 mins ago

Prajwal Revanna Case: ಪ್ರಜ್ವಲ್ ರೇವಣ್ಣಗೆ ಸಂಕಷ್ಟ; ಅರೆಸ್ಟ್ ವಾರಂಟ್ ನೀಡಿದ ಕೋರ್ಟ್‌

Virat Kohli
ಕ್ರೀಡೆ1 hour ago

Virat Kohli: ಚೆನ್ನೈ ವಿರುದ್ಧದ ಪಂದ್ಯಕ್ಕೂ ಮುನ್ನ ಐಪಿಎಲ್​ ನಿಯಮದ ಬಗ್ಗೆ ಅಸಮಾಧಾನ ಹೊರಹಾಕಿದ ಕೊಹ್ಲಿ

Girish's mother
ಕರ್ನಾಟಕ1 hour ago

Anjali Murder Case: ನನ್ನ ಮಗ ಮಾಡಿದ್ದು ತಪ್ಪು, ಕೋರ್ಟ್ ಅವನಿಗೆ ಯಾವ ಶಿಕ್ಷೆಯಾದ್ರೂ ಕೊಡಲಿ: ಆರೋಪಿ ಗಿರೀಶ್ ತಾಯಿ

HD Deve Gowda
ಕರ್ನಾಟಕ1 hour ago

ಮೋದಿಯವರೇ, 3ನೇ ಬಾರಿ ಪ್ರಧಾನಿಯಾಗಿ ದೇಶ ಮುನ್ನಡೆಸಿ; ಜನುಮ ದಿನದ ಶುಭಾಶಯ ಕೋರಿದ ಪ್ರಧಾನಿಗೆ ದೇವೇಗೌಡರ ಕೃತಜ್ಞತೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ23 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ2 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ4 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌