Latur: ಲಾತೂರ್ ನಗರದಲ್ಲಿ ಭೂಮಿಯಿಂದ ನಿಗೂಢ ಶಬ್ದ, ಭೂಕಂಪದ ಮುನ್ಸೂಚನೆಯಾ? - Vistara News

ದೇಶ

Latur: ಲಾತೂರ್ ನಗರದಲ್ಲಿ ಭೂಮಿಯಿಂದ ನಿಗೂಢ ಶಬ್ದ, ಭೂಕಂಪದ ಮುನ್ಸೂಚನೆಯಾ?

ಮಹಾರಾಷ್ಟ್ರದ ಲಾತೂರ್ (Latur) ನಗರದಲ್ಲಿ ಭೂಮಿಯ ಒಳಗಡೆಯಿಂದ ನಿಗೂಢ ಶಬ್ದ ಕೇಳಿ ಬಂದಿದ್ದು, ಜನರು ಆತಂಕಗೊಂಡಿದ್ದಾರೆ. ಭೂಕಂಪವೇ (Earthquake) ಸಂಭವಿಸಿತು ಎಂದು ಭಾವಿಸಿ, ಜನರು ಭಯಭೀತಗೊಂಡಿದ್ದರು.

VISTARANEWS.COM


on

Earthquake in Delhi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಾತೂರ್, ಮಹಾರಾಷ್ಟ್ರ: ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದ ಲಾತೂರ್ (Latur) ನಗರದಲ್ಲಿ ಕೇಳಿ ಬರುತ್ತಿರುವ ಭೂಗತ ನಿಗೂಢ ಶಬ್ದವು ಆತಂಕಕ್ಕೆ ಕಾರಣವಾಗಿದೆ. ಇದು ಭೂಕಂಪದ (Earthquake) ಮುನ್ಸೂಚನೆ ಎಂದು ಭಾವಿಸಿರುವ ಜನರು ಹೆಚ್ಚು ಭಯಭೀತರಾಗಿದ್ದಾರೆ. ಬುಧವಾರ ಬೆಳಗ್ಗೆ 10.30ರಿಂದ 10.45ರ ನಡುವೆ ನಗರದ ವಿವೇಕಾನಂದ ಚೌಕ ಪ್ರದೇಶದಲ್ಲಿ ಭೂಗತವಾಗಿ ಭಾರೀ ಶಬ್ದ ಕೇಳಿದೆ. ಇದರಿಂದ ಭೂಕಂಪ ಸಂಭವಿಸಿದೆ ಎಂದು ಗಾಳಿ ಸುದ್ದಿ ಹಬ್ಬಿದ್ದರಿಂದ ಜನರು ಆತಂಕಗೊಂಡಿದ್ದರು. ಆದರೆ, ಯಾವುದೇ ಭೂಕಂಪವಾಗಿಲ್ಲ ಎಂಬುದು ಆ ಮೇಲೆ ಖಚಿತಪಟ್ಟಿದೆ.

ಕೆಲವು ಜನರು ಸ್ಥಳೀಯ ಆಡಳಿತವನ್ನು ಎಚ್ಚರಿಸಿದ ನಂತರ ಜಿಲ್ಲಾ ವಿಪತ್ತು ನಿರ್ವಹಣಾ ಇಲಾಖೆಯು ಲಾತೂರ್ ನಗರದ ಭೂಕಂಪದ ಮಾಪನ ಕೇಂದ್ರಗಳು ಮತ್ತು ಜಿಲ್ಲೆಯ ಔರಾದ್ ಶಹಾಜ್ನಿ ಮತ್ತು ಆಶಿವ್‌ನಿಂದ ಮಾಹಿತಿಯನ್ನು ಪಡೆದುಕೊಂಡಿತು. ಆದರೆ, ಯಾವುದೇ ಭೂಕಂಪದ ತೀವ್ರತೆ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1993ರಲ್ಲಿ ಲಾತೂರ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಸುಮಾರು 10 ಸಾವಿರ ಜನರು ಮೃತಪಟ್ಟಿದ್ದರು.

ಇದನ್ನೂ ಓದಿ: Farmers Suicide | ಕಳೆದ ವರ್ಷ ಮಹಾರಾಷ್ಟ್ರದ ಮರಾಠವಾಡದಲ್ಲಿ 1023 ರೈತರ ಆತ್ಮಹತ್ಯೆ!

ಮಹಾರಾಷ್ಟ್ರದ ಮರಾಠವಾಡ ಪ್ರದೇಶ ವ್ಯಾಪ್ತಿಯಲ್ಲಿ ಈ ರೀತಿಯ ಶಬ್ದವು ಆಗಾಗ ಕೇಳಿಸುತ್ತದೆ. 2022 ಸೆಪ್ಟೆಂಬರ್‌ನಲ್ಲಿ ಈ ರೀತಿಯ ಶಬ್ದ ಮೂರು ಬಾರಿ, ಹಸೋರಿ, ಕಿಲ್ಲಾರಿ ಸೇರಿದಂತೆ ಲಾತೂರ್ ಜಿಲ್ಲೆಯ ಇತರ ಭಾಗಗಳಲ್ಲಿ ಕೇಳಿಸಿತ್ತು. ಇದೇ ವರ್ಷ ಫೆಬ್ರವರಿ 4ರಂದು ಇದೇ ರೀತಿಯ ಶಬ್ದ ಕೇಳಿ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

AP Election results 2024 live: ಆಂಧ್ರ ಪ್ರದೇಶ ವಿಧಾನಸಭೆ: ಭರ್ಜರಿ ಗೆಲುವಿನತ್ತ ಟಿಡಿಪಿ

AP Election results 2024 live: ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆಯ ಬಹುತೇಕ ಚಿತ್ರಣ ಲಭಿಸಿದೆ. ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷ (YSRCP), ಕಾಂಗ್ರೆಸ್ ನೇತೃತ್ವದ ʼಇಂಡಿಯಾʼ ಒಕ್ಕೂಟ ಮತ್ತು ಬಿಜೆಪಿ, ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (TDP) ಮತ್ತು ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ (JSP) ಒಳಗೊಂಡ ಎನ್‌ಡಿಎ (NDA) ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಸದ್ಯ ಟಿಡಿಪಿ ಮುನ್ನಡೆ ಕಾಯ್ದುಕೊಂಡಿದೆ.

VISTARANEWS.COM


on

AP Election results 2024 live
Koo

ಹೈದರಾಬಾದ್‌: ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆಯ ಬಹುತೇಕ ಚಿತ್ರಣ ಲಭಿಸಿದೆ. ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷ (YSRCP), ಕಾಂಗ್ರೆಸ್ ನೇತೃತ್ವದ ʼಇಂಡಿಯಾʼ ಒಕ್ಕೂಟ ಮತ್ತು ಬಿಜೆಪಿ, ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (TDP) ಮತ್ತು ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ (JSP) ಒಳಗೊಂಡ ಎನ್‌ಡಿಎ (NDA) ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಸದ್ಯ ಟಿಡಿಪಿ ಮುನ್ನಡೆ ಕಾಯ್ದುಕೊಂಡಿದೆ (AP Election results 2024 live).

ಟಿಡಿಪಿ 125 ಕ್ಷೇತ್ರಗಳಲ್ಲಿ ಮುಂದಿದ್ದು, ವೈಎಸ್‌ಆರ್‌ಸಿ 20, ಜೆಎಸ್‌ಪಿ 17 ಮತ್ತು ಬಿಜೆಪಿ 7 ಕಡೆಗಳಲ್ಲಿ ಮುನ್ನಡೆ ಸಾಧಿಸಿದೆ. ಒಟ್ಟಿನಲ್ಲಿ ಎನ್‌ಡಿಯ 149 ಕಡೆ ಮುನ್ನಡೆ ಕಾಯ್ದುಕೊಂಡಿದೆ. ಆಂಧ್ರಪ್ರದೇಶದಲ್ಲಿ 175 ವಿಧಾನಸಭಾ ಸ್ಥಾನಗಳಿದ್ದು, ಬಹುಮತ ಪಡೆಯಲು 88 ಕ್ಷೇತ್ರಗಳಲ್ಲಿ ಜಯ ಗಳಿಸುವುದು ಅಗತ್ಯ.

ಪವನ್‌ ಕಲ್ಯಾಣ್‌ ಮುನ್ನಡೆ

ಆಂಧ್ರಪ್ರದೇಶದ ಪಿತಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ನಟ ಮತ್ತು ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್ ಅವರು ಪ್ರಬಲ ಮುನ್ನಡೆಯೊಂದಿಗೆ ತಮ್ಮ ಮೊದಲ ಗೆಲುವಿನತ್ತ ಸಾಗುತ್ತಿದ್ದಾರೆ. ಪವನ್‌ ಕಲ್ಯಾಣ್ ವಿರುದ್ಧ ಜಗನ್ ಮೋಹನ್ ರೆಡ್ಡಿ ಅವರ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್ಆರ್‌ಪಿ) ವಂಗಾ ಗೀತಾ ವಿಶ್ವನಾಥಂ ಸ್ಪರ್ಧಿಸುತ್ತಿದ್ದಾರೆ.

ಪವನ್ ಕಲ್ಯಾಣ್ ಈ ಬಾರಿ ಲೋಕಸಭಾ ಮತ್ತು ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಎನ್‌ಡಿಎ ಜತೆಗಿನ ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ, ಟಿಡಿಪಿಗೆ 144 ವಿಧಾನಸಭಾ ಮತ್ತು 17 ಲೋಕಸಭಾ ಕ್ಷೇತ್ರಗಳನ್ನು ನೀಡಲಾಗಿತ್ತು. ಬಿಜೆಪಿ 6 ಲೋಕಸಭಾ ಮತ್ತು 10 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಒಪ್ಪಂದದ ಪ್ರಕಾರ, ಜನಸೇನಾ 2 ಲೋಕಸಭಾ ಮತ್ತು 21 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿದೆ.

ವೈಎಸ್ಆರ್‌ಪಿಗೆ ತೀವ್ರ ಮುಖಭಂಗ

2019ರ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ 151 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಆಗ ಆಡಳಿತದಲ್ಲಿದ್ದ ಟಿಡಿಪಿ ಕೇವಲ 23 ಸ್ಥಾನಗಳನ್ನು ಗೆದ್ದು ಮುಖಭಂಗ ಅನುಭವಿಸಿತ್ತು. ಪವನ್‌ ಕಲ್ಯಾಣ್‌ ನೇತೃತ್ವದ ಜೆಎಸ್‌ಪಿ ಒಂದೇ ಒಂದು ಸ್ಥಾನವನ್ನು ಗೆದ್ದಿದ್ದರೆ, ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಖಾತೆ ತೆರೆದಿರಲಿಲ್ಲ. ಈ ಬಾರಿ ಚಿತ್ರಣ ಸಂಪೂರ್ಣ ಬದಲಾಗಿದೆ. ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರಿಗೆ ತೀವ್ರ ಹಿನ್ನಡೆಯಾಗಿದೆ.

ಪ್ರಮುಖ ಅಭ್ಯರ್ಥಿಗಳು

ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ (ವೈಎಸ್‌ಆರ್‌ಸಿಪಿ), ಎನ್. ಚಂದ್ರಬಾಬು ನಾಯ್ಡು (ಟಿಡಿಪಿ), ಪವನ್ ಕಲ್ಯಾಣ್ (ಜೆಎಸ್‌ಪಿ), ಕಿಲ್ಲಿ ಕೃಪಾರಾಣಿ (ಕಾಂಗ್ರೆಸ್), ಧರ್ಮನಾ ಪ್ರಸಾದ ರಾವ್ (ವೈಎಸ್‌ಆರ್‌ಸಿಪಿ), ಧರ್ಮನಾ ಕೃಷ್ಣ ದಾಸ್ (ವೈಎಸ್‌ಆರ್‌ಸಿಪಿ), ಪಾಮುಲಾ ಪುಷ್ಪ ಶ್ರೀವಾಣಿ ( ವೈಎಸ್‌ಆರ್‌ಸಿಪಿ), ನಲ್ಲಮಿಲ್ಲಿ ರಾಮಕೃಷ್ಣ ರೆಡ್ಡಿ (ಬಿಜೆಪಿ), ರಘು ರಾಮ ಕೃಷ್ಣರಾಜು (ಟಿಡಿಪಿ), ಚಿಂತಾಮನೇನಿ ಪ್ರಭಾಕರ್ (ಟಿಡಿಪಿ), ವೈಎಸ್ ಚೌಧರಿ (ಬಿಜೆಪಿ), ನಾದೆಂಡ್ಲ ಮನೋಹರ್ (ಜೆಎಸ್‌ಪಿ), ಕನ್ನಾ ಲಕ್ಷ್ಮೀನಾರಾಯಣ (ಟಿಡಿಪಿ), ಅದಾಲ ಪ್ರಭಾಕರ ರೆಡ್ಡಿ (ವೈಎಸ್‌ಆರ್‌ಸಿಪಿ), ಅಮ್ಜತ್ ಬಾಷಾ ಶೇಕ್ ಬೇಪಾರಿ (ವೈಎಸ್‌ಆರ್‌ಸಿಪಿ), ನಂದಮೂರಿ ಬಾಲಕೃಷ್ಣ (ಟಿಡಿಪಿ), ನಲ್ಲಾರಿ ಕಿಶೋರ್ ಕುಮಾರ್ ರೆಡ್ಡಿ (ಟಿಡಿಪಿ), ನಾರಾ ಲೋಕೇಶ್ (ಟಿಡಿಪಿ) ಮತ್ತಿತರರು ಆಂಧ್ರಪ್ರದೇಶದ ವಿಧಾನಸಭಾ ಕಣದಲ್ಲಿರುವ ಕೆಲವು ಪ್ರಮುಖ ಅಭ್ಯರ್ಥಿಗಳು.

ಇದನ್ನೂ ಓದಿ: Odisha Assembly Result 2024: ಅಸೆಂಬ್ಲಿ ಎಲೆಕ್ಷನ್‌; ಮತ ಎಣಿಕೆ ಶುರು-ಒಡಿಶಾದಲ್ಲಿ ಮತ್ತೆ ಗದ್ದುಗೆ ಏರುತ್ತಾ ಬಿಜೆಡಿ?

Continue Reading

ದೇಶ

Election Results 2024: 5 ಲಕ್ಷ ಮತಗಳಿಂದ ಗೆದ್ದು ಬೀಗಿದ ಅಮಿತ್‌ ಶಾ; ಬಿಜೆಪಿಗೆ ಮೊದಲ ಗೆಲುವು

Election Results 2024: ದೇಶಕ್ಕೆ ದೇಶವೇ ಕುತೂಹಲದಿಂದ ಕಾಯುತ್ತಿರುವ ಲೋಕಸಭೆ ಚುನಾವಣೆಯ ಮತಎಣಿಕೆ ಆರಂಭವಾಗಿದ್ದು, ಎನ್‌ಡಿಎ ಮೈತ್ರಿಕೂಟವು ಆರಂಭದಲ್ಲಿಯೇ ಭರ್ಜರಿ ಮುನ್ನಡೆ ಸಾಧಿಸಿದೆ. ಎನ್‌ಡಿಎಯು 294ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಮುನ್ನಡೆಯಲ್ಲಿಯೇ ಮ್ಯಾಜಿಕ್‌ ನಂಬರ್‌ (272) ದಾಟಿದೆ. ಅತ್ತ, ಇಂಡಿಯಾ ಒಕ್ಕೂಟವೂ ಎನ್‌ಡಿಎಗೆ ಸ್ಪರ್ಧೆಯೊಡ್ಡುತ್ತಿದ್ದು, 230ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದರ ಮಧ್ಯೆಯೇ ಅಮಿತ್ ಶಾ ಅವರು ಬಿಜೆಪಿಗೆ ಮೊದಲ ಗೆಲುವು ತಂದುಕೊಟ್ಟಿದ್ದಾರೆ.

VISTARANEWS.COM


on

Election Results 2024
Koo

ನವದೆಹಲಿ: ಲೋಕಸಭೆ ಚುನಾವಣೆಯ ಮತಎಣಿಕೆ ಕಾರ್ಯವು ಭರದಿಂದ ಸಾಗುತ್ತಿದ್ದು, ಅಭ್ಯರ್ಥಿಗಳ ಮುನ್ನಡೆ ಹಾಗೂ ಹಿನ್ನಡೆ ಕುರಿತು ಚರ್ಚಿಸಲಾಗುತ್ತಿದೆ. ಒಟ್ಟು 543 ಕ್ಷೇತ್ರಗಳ ಪೈಕಿ ಎನ್‌ಡಿಎ ಮೈತ್ರಿಕೂಟವು (NDA) 294 ಕ್ಷೇತ್ರಗಳಲ್ಲಿ ಮುನ್ನಡೆ (Election Results 2024) ಸಾಧಿಸಿದೆ. ಅತ್ತ, ಇಂಡಿಯಾ ಒಕ್ಕೂಟವೂ (India Bloc) ತೀವ್ರ ಪೈಪೋಟಿ ನೀಡುತ್ತಿದ್ದು, 230 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದರ ಮಧ್ಯೆಯೇ, ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರು ಬಿಜೆಪಿಗೆ ಮೊದಲ ಗೆಲುವು ತಂದುಕೊಟ್ಟಿದ್ದಾರೆ.

ಹೌದು, ಅಮಿತ್‌ ಶಾ ಅವರು ಗುಜರಾತ್‌ನ ಗಾಂಧಿನಗರ ಲೋಕಸಭೆ ಕ್ಷೇತ್ರದಲ್ಲಿ 5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಕುರಿತು ಚುನಾವಣೆ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಕಾಂಗ್ರೆಸ್‌ನ ಸೋನಲ್‌ ರಮಣ್‌ಭಾಯಿ ಪಟೇಲ್‌ ವಿರುದ್ಧ ಅಮಿತ್‌ ಶಾ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. 2019ರಲ್ಲಿಯೂ ಅಮಿತ್‌ ಶಾ ಅವರು ಗಾಂಧಿನಗರದಲ್ಲಿ 5.57 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈಗಲೂ ಅವರು ಇಷ್ಟೇ ಮತಗಳ ಅಂತರದಿಂದ ಗೆದ್ದಿದ್ದಾರೆ.

ಬಿಜೆಪಿಗೆ ಭದ್ರಕೋಟೆಗಳಲ್ಲೇ ಹಿನ್ನಡೆ

ಬಿಜೆಪಿಯ ಭದ್ರಕೋಟೆಯಾಗಿರುವ ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ್, ರಾಜಸ್ಥಾನ್​​​ ರಾಜ್ಯಗಳಲ್ಲಿ ಹಿನ್ನಡೆ ಉಂಟಾಗಿರುವುದು. ಜತೆಗೆ ಹರಿಯಾಣ ಹಾಗೂ ಪಂಜಾಬ್​ನಲ್ಲೂ ಬಿಜೆಪಿಗೆ ಯಾವುದೇ ರೀತಿಯಲ್ಲಿ ಲಾಭವಾಗಿಲ್ಲ. 2019ರಲ್ಲಿ ಗುಜರಾತ್​ನಲ್ಲಿ ಬಿಜೆಪಿ 26ಕ್ಕೆ 26 ಕ್ಷೇತ್ರಗಳನ್ನೂ ಗೆದ್ದಿತ್ತು. ಆದರೆ, ಈ ಬಾರಿ ಸುಮಾರು 4 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಉತ್ತರ ಪ್ರದೇಶದಲ್ಲಿ 2019ರಲ್ಲಿ 62 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 43 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಪಡೆದುಕೊಂಡಿದೆ. ಉಳಿದ ಸ್ಥಾನಗಳನ್ನು ಎಸ್​ಪಿಗೆ ಸಿಗಲಿದೆ.

ಮಹಾರಾಷ್ಟ್ರದಲ್ಲಿ ಎನ್​ಡಿಎ 22 ಸ್ಥಾನಗಳನ್ನು ಮಾತ್ರ ಪಡೆದುಕೊಂಡಿದೆ. ಒಟ್ಟು 48ರಲ್ಲಿ 41 ಸ್ಥಾನಗಳನ್ನು 2019ರಲ್ಲಿ ಗೆದ್ದುಕೊಂಡಿತ್ತು. ಪಂಜಾಬ್​ನಲ್ಲಿಯೂ 13 ಸ್ಥಾನಗಳಲ್ಲಿ ಕಾಂಗ್ರೆಸ್​​ 6, ಆಪ್​ 3 ಹಾಗೂ ಎಸ್​ಡಿಎಮ್​ ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಹಿಂದೆ ಇಲ್ಲೂ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು. ರಾಜಸ್ಥಾನದಲ್ಲಿ ಬಿಜೆಪಿ 14 ಸ್ಥಾನಗಳನ್ನು ಮಾತ್ರ ಪಡೆದುಕೊಂಡಿದ್ದು ಕಾಂಗ್ರೆಸ್ 8 ಹಾಗೂ ಇತರರು 3 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. 2019ರಲ್ಲಿ ಅಲ್ಲಿ 25 ಕ್ಷೇತ್ರಗಳನ್ನೂ ಬಿಜೆಪಿ ಗೆದ್ದುಕೊಂಡಿತ್ತು. ಇಲ್ಲೂ ಸಾಕಷ್ಟು ನಷ್ಟವಾಗಿದೆ. ಆದರೆ ಮಧ್ಯಪ್ರದೇಶಲ್ಲಿ ಬಿಜೆಪಿಗೆ ಭರ್ಜರಿ ಲಾಭವಾಗಿದೆ.

ಹರಿಯಾಣದಲ್ಲಿ ಕಾಂಗ್ರೆಸ್​ ಪಕ್ಷವೇ 8 ಸ್ಥಾನ ಮುನ್ನಡೆ ಪಡೆದುಕೊಂಡಿದ್ದು, ಬಿಜೆಪಿ ಕೈಯಲ್ಲಿ ಒಂದು ಸ್ಥಾನ ಮಾತ್ರ ಇದೆ. ಆದರೆ, 2019ರಲ್ಲಿ ಇಲ್ಲಿ ಬಿಜೆಪಿ ಎಲ್ಲ 10 ಸೀಟುಗಳನ್ನು ಗೆದ್ದುಕೊಂಡಿತ್ತು.

ಇದನ್ನೂ ಓದಿ: Election Results 2024: ಅಸಾದುದ್ದೀನ್‌ ಓವೈಸಿ ವಿರುದ್ಧ ಹಿಂದು ಫೈರ್‌ ಬ್ರ್ಯಾಂಡ್‌ ಮಾಧವಿ ಲತಾಗೆ ಭಾರಿ ಮುನ್ನಡೆ

Continue Reading

ಪ್ರಮುಖ ಸುದ್ದಿ

Kolar Election Result 2024 : ಕೋಲಾರದಲ್ಲಿ ಜೆಡಿಎಸ್​​, ಬಿಜೆಪಿ ಮೈತ್ರಿ ಅಭ್ಯರ್ಥಿ ಮಲ್ಲೇಶ್​ ಬಾಬುಗೆ ಗೆಲುವು

Kolar Election Result 2024: 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಎಸ್ .ಮುನಿಸ್ವಾಮಿ ಅವರು ಕಾಂಗ್ರೆಸ್​​ನ ಕೆ.ಎಚ್.ಮುನಿಯಪ್ಪ ಅವರನ್ನು 2,10,021 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ ಶೇ.56.32ರಷ್ಟು ಮತಗಳನ್ನು ಪಡೆದಿತ್ತು.

VISTARANEWS.COM


on

Kolar Election Result 2024
Koo

ಬೆಂಗಳೂರು: ಕೋಲಾರ ಲೋಕ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್​ ಪಕ್ಷದ ಅಭ್ಯರ್ಥಿ ಮಲ್ಲೇಶ್​ ಬಾಬು ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್​ ಪಕ್ಷದ ಗೌತಮ್​ ವಿರುದ್ಧ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದು ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್​ ಮೈತ್ರಿ ಅಭ್ಯರ್ಥಿಯ ಮೊದಲ ಗೆಲುವಾಗಿದೆ. ಮೀಸಲು ಕ್ಷೇತ್ರವಾಗಿದ್ದ ಕೊಲಾರದಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ನಾಯಕರ ನಡುವಿನ ಜಿದ್ದಿನ ಬಳಿಕ ಈ ಫಲಿತಾಂಶ ಪ್ರಕಟಗೊಂಡಿದೆ. 2024 ರ ಲೋಕಸಭಾ ಚುನಾವಣೆಯ 2 ನೇ ಹಂತದಲ್ಲಿ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26, 2024 ರಂದು ಮತದಾನ ನಡೆದಿತ್ತು.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಎಸ್ .ಮುನಿಸ್ವಾಮಿ ಅವರು ಕಾಂಗ್ರೆಸ್​​ನ ಕೆ.ಎಚ್.ಮುನಿಯಪ್ಪ ಅವರನ್ನು 2,10,021 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ ಶೇ.56.32ರಷ್ಟು ಮತಗಳನ್ನು ಪಡೆದಿತ್ತು.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಅವರು ಜೆಡಿಎಸ್ ನ ಕೋಲಾರ ಕೇಶವ ಅವರನ್ನು 47,850 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಕಾಂಗ್ರೆಸ್ 37.16% ಮತಗಳನ್ನು ಗಳಿಸಿದೆ.

2009ರ ಸಾರ್ವತ್ರಿಕ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಅವರು ಬಿಜೆಪಿಯ ಡಿ.ಎಸ್.ವೀರಯ್ಯ ಅವರನ್ನು 23,006 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ 37.17% ಮತಗಳನ್ನು ಪಡೆದಿತ್ತು.

ಕ್ಷೇತ್ರದ ವಿಶೇಷತೆ

ಕರ್ನಾಟಕದ ಕೋಲಾರ ಪ್ರದೇಶವು ಖನಿಜ ಸಂಪತ್ತಿನ ಮೂಲಕ ಪ್ರಖ್ಯಾತಿ. ಕೆಜಿಎಫ್​​ ಚಿನ್ನ ಗಣಿ ಇಲ್ಲಿದೆ. ಈ ಪ್ರದೇಶವು ಹಾಲು ಉತ್ಪಾದನೆಯಲ್ಲಿಯೂ ದಾಖಲೆಯನ್ನು ನಿರ್ಮಿಸಿದೆ. ರಾಜಧಾನಿ ಬೆಂಗಳೂರಿನಿಂದ 65 ಕಿಲೋಮೀಟರ್​ ದೂರದಲ್ಲಿರುವ ಈ ನಗರವು ದೇವಾಲಯಗಳು ಮತ್ತು ಪ್ರಾಚೀನ ಇತಿಹಾಸಕ್ಕೆ ಹೆಸರುವಾಸಿಯಾಗಿದೆ. ಕೋಲಾರ ಲೋಕಸಭಾ ಕ್ಷೇತ್ರವು (Kolar lok sabha constituency) ಪರಿಶಿಷ್ಟ ಜಾತಿಗೆ ಮೀಸಲಾಗಿರುವ ರಾಜ್ಯದ ಐದು ಲೋಕಸಭಾ ಕ್ಷೇತ್ರಗಳಲ್ಲಿ ಒಂದು . ಇದರ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಸ್ವಾತಂತ್ರ್ಯದ ನಂತರ ನಡೆದ ಒಟ್ಟು 16 ಚುನಾವಣೆಗಳಲ್ಲಿ 15 ರಲ್ಲಿ ಕಾಂಗ್ರೆಸ್​ ಗೆದ್ದಿದ್ದು, ಈ ಪಕ್ಷದಭದ್ರಕೋಟೆ ಎಂದು ಕರೆಯಬಹುದು. 1984ರಲ್ಲಿ ಜನತಾ ಪಕ್ಷದ ವಿ.ವೆಂಕಟೇಶ್ ಗೆಲುವು ಸಾಧಿಸಿದಾಗ ಕಾಂಗ್ರೆಸ್ ಪಕ್ಷ ಈ ಸ್ಥಾನವನ್ನು ಕಳೆದುಕೊಂಡಿತ್ತು. 2019ರಲ್ಲಿ ಬಿಜೆಪಿಯ ಎಸ್​, ಮುನಿಸ್ವಾಮಿ ಗೆಲುವು ಸಾಧಿಸಿದ್ದರು.

ಜೂನ್ 4, 2024 ರಂದು ಮತ ಎಣಿಕೆ ನಡೆಯಲಿದೆ.ಈ ಬಾರಿ ಕಾಂಗ್ರೆಸ್ ನ ಕೆ.ವಿ.ಗೌತಮ್ ಅವರು ಜೆಡಿಎಸ್ ನ ಮಲ್ಲೇಶ್ ಬಾಬು ವಿರುದ್ಧ ಕಣದಲ್ಲಿದ್ದಾರೆ.

ಕೋಲಾರ ಲೋಕಸಭಾ ಕ್ಷೇತ್ರವು ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು, ಕೋಲಾರ ಗೋಲ್ಡ್ ಫೀಲ್ಡ್ಸ್, ಬಂಗಾರಪೇಟೆ, ಕೋಲಾರ ಮತ್ತು ಮಾಲೂರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಾಂಪ್ರದಾಯಿಕವಾಗಿ ಪ್ರಬಲವಾಗಿವೆ.

ದಶಕಗಳಿಂದ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು 2019 ರಲ್ಲಿ ಬಿಜೆಪಿ ಕಸಿದುಕೊಂಡಿತ್ತು. ಬಿಜೆಪಿಯ ಎಸ್.ಮುನಿಸ್ವಾಮಿ ಅವರು ನಾಲ್ಕು ಬಾರಿ ಕಾಂಗ್ರೆಸ್ ಸಂಸದ ಕೆ.ಎಚ್.ಮುನಿಯಪ್ಪ ವಿರುದ್ಧ ಗೆಲುವು ಸಾಧಿಸಿದ್ದರು.

Continue Reading

ದೇಶ

Election Results 2024: ಮಹಾರಾಷ್ಟ್ರದ 27 ಕ್ಷೇತ್ರದಲ್ಲಿ ಇಂಡಿಯಾಗೆ ಮುನ್ನಡೆ, ಎನ್‌ಡಿಎಗೆ 20 ಕ್ಷೇತ್ರದಲ್ಲಿ ಹಿನ್ನಡೆ

Election Results 2024:ಒಟ್ಟು 48 ಕ್ಷೇತ್ರಗಳಲ್ಲಿ ಬರೋಬ್ಬರಿ ಐದು ಹಂತಗಳಲ್ಲಿ ಮತದಾನ ನಡೆದಿತ್ತು. ಇದೀಗ ಮತ ಎಣಿಕೆ ನಡೆಯುತ್ತಿದ್ದು, ಆರಂಭಿಕ ಹಂತದಲ್ಲೇ ಇಂಡಿಯಾ ಒಕ್ಕೂಟ ಮುನ್ನಡೆ ಸಾಧಿಸಿದ್ದು, 29 ಕ್ಷೇತ್ರಗಳಲ್ಲಿ ಗೆಲುವಿನ ಹಾದಿಯಲ್ಲಿದೆ. ಶಿವಸೇನಾ UBT 11, ಕಾಂಗ್ರೆಸ್‌ 10, ಎನ್‌ಸಿಪಿ ಎಸ್‌ಪಿ 8 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಇಂಡಿಯಾ ಒಕ್ಕೂಟ ಕೇವಲ 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸದ್ಯ ಬಿಜೆಪಿ 11, ಎನ್‌ಸಿಪಿ 1, ಶಿವಸೇನಾ 6 ಕ್ಷೇತ್ರಗಳಲ್ಲಿ ಗೆಲುವಿನ ಹಾದಿಯಲ್ಲಿದೆ.

VISTARANEWS.COM


on

Election Results 2024.
Koo

ಮುಂಬೈ: ಮಹಾರಾಷ್ಟ್ರದಲ್ಲಿ ಈ ಬಾರಿ ಶಿವಸೇನೆ(ShivSena) ಮತ್ತು ಎನ್‌ಸಿಪಿ(NCP) ಇಬ್ಬಾಗಗೊಂಡ ಬಳಿಕ ಎದುರಿಸುತ್ತಿರುವ ಮೊದಲ ಲೋಕಸಭೆ ಚುನಾವಣೆ ಇದಾಗಿದ್ದು, ಇದೀಗ ಫಲಿತಾಂಶ(Election Results 2024)ದತ್ತ ಇಡೀ ದೇಶದ ಗಮನ ಸೆಳೆದಿದೆ. ಮತ ಎಣಿಕೆ ಈಗಾಗಲೇ ಬಿರುಸಿನಿಂದ ಸಾಗಿದ್ದು, ಬಿಜೆಪಿ(BJP) ನೇತೃತ್ವ ಎನ್‌ಡಿಎ(ಬಿಜೆಪಿ, ಏಕನಾಥ್‌ ಶಿಂಧೆಯವರ ಶಿವಸೇನಾ, ಅಜಿತ್‌ ಪವಾರ್‌ ಅವರ ಎನ್‌ಸಿಪಿ) ಮತ್ತು ಇಂಡಿಯಾ(ಕಾಂಗ್ರೆಸ್‌, ಶರದ್‌ ಪವಾರ್‌ ಅವರ ಎನ್‌ಸಿಪಿ ಎಸ್‌ಪಿ, ಉದ್ಧವ್‌ ಠಾಕ್ರೆಯವರ ಶಿವಸೇನಾ UBT) ನಡುವೆ ನೆಕ್‌ ಟು ನೆಕ್‌ ಫೈಟ್‌ ಇತ್ತು.

ಒಟ್ಟು 48 ಕ್ಷೇತ್ರಗಳಲ್ಲಿ ಬರೋಬ್ಬರಿ ಐದು ಹಂತಗಳಲ್ಲಿ ಮತದಾನ ನಡೆದಿತ್ತು. ಇದೀಗ ಮತ ಎಣಿಕೆ ನಡೆಯುತ್ತಿದ್ದು, ಆರಂಭಿಕ ಹಂತದಲ್ಲೇ ಇಂಡಿಯಾ ಒಕ್ಕೂಟ ಮುನ್ನಡೆ ಸಾಧಿಸಿದ್ದು, 29 ಕ್ಷೇತ್ರಗಳಲ್ಲಿ ಗೆಲುವಿನ ಹಾದಿಯಲ್ಲಿದೆ. ಶಿವಸೇನಾ UBT 11, ಕಾಂಗ್ರೆಸ್‌ 10, ಎನ್‌ಸಿಪಿ ಎಸ್‌ಪಿ 8 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಇಂಡಿಯಾ ಒಕ್ಕೂಟ ಕೇವಲ 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸದ್ಯ ಬಿಜೆಪಿ 11, ಎನ್‌ಸಿಪಿ 1, ಶಿವಸೇನಾ 6 ಕ್ಷೇತ್ರಗಳಲ್ಲಿ ಗೆಲುವಿನ ಹಾದಿಯಲ್ಲಿದೆ.

ಬಿಜೆಪಿ 28, ಶಿವಸೇನೆ 15, ಎನ್‌ಸಿಪಿ 4 ಮತ್ತು ಆರ್‌ಎಸ್‌ಪಿ 1 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ವಿರೋಧ ಪಕ್ಷದ ಮೈತ್ರಿಯಲ್ಲಿ ಶಿವಸೇನೆ ಯುಬಿಟಿ 21 ಸ್ಥಾನಗಳಲ್ಲಿ, ಕಾಂಗ್ರೆಸ್ 17 ಮತ್ತು ಎನ್‌ಸಿಪಿ ಎಸ್‌ಪಿ 10 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ಸುಪ್ರಿಯಾ ಸುಳೆ ಅವರಂತಹ ಕೆಲವು ಎತ್ತರದ ನಾಯಕರು ಆರಂಭಿಕ ಮುನ್ನಡೆ ಸಾಧಿಸಿದ್ದಾರೆ.

ಕಣದಲ್ಲಿರುವ ಪ್ರಮುಖರು:

ಪಿಯೂಷ್ ಗೋಯಲ್ (ಬಿಜೆಪಿ, ಮುಂಬೈ-ಉತ್ತರ), ನಿತಿನ್ ಗಡ್ಕರಿ (ಬಿಜೆಪಿ, ನಾಗ್ಪುರ), ಸುಪ್ರಿಯಾ ಸುಳೆ (ಎನ್‌ಸಿಪಿ (ಶರದ್ ಪವಾರ್), ಬಾರಾಮತಿ), ಅರವಿಂದ್ ಸಾವಂತ್ (ಶಿವಸೇನೆ (ಯುಬಿಟಿ) ಸೇರಿದ್ದಾರೆ. ಮುಂಬೈ-ದಕ್ಷಿಣ), ವರ್ಷಾ ಗಾಯಕ್ವಾಡ್ (ಕಾಂಗ್ರೆಸ್, ಮುಂಬೈ ಉತ್ತರ ಕೇಂದ್ರ), ಉಜ್ವಲ್ ನಿಕಮ್ (ಬಿಜೆಪಿ, ಮುಂಬೈ ಉತ್ತರ ಕೇಂದ್ರ), ಕಪಿಲ್ ಪಾಟೀಲ್ (ಬಿಜೆಪಿ, ಭಿವಂಡಿ), ರಾಜನ್ ಬಾಬುರಾವ್ ವಿಚಾರೆ (ಶಿವಸೇನೆ (ಯುಬಿಟಿ), ಥಾಣೆ), ಶ್ರೀಕಾಂತ್ ಶಿಂಧೆ (ಶಿವ ಸೇನಾ, ಕಲ್ಯಾಣ್), ದನ್ವೆ ರಾವ್ಸಾಹೇಬ್ ದಾದಾರಾವ್ (ಬಿಜೆಪಿ, ಜಲ್ನಾ), ಪಂಕಜಾ ಮುಂಡೆ (ಬಿಜೆಪಿ, ಬೀಡ್). ಇತರ ಪ್ರಮುಖ ಅಭ್ಯರ್ಥಿಗಳು ನವನೀತ್ ಕೌರ್ ರಾಣಾ (ಬಿಜೆಪಿ, ಅಮರಾವತಿ), ಅನುಪ್ ಧೋತ್ರೆ (ಬಿಜೆಪಿ, ಅಕೋಲಾ) ಈ ಭಾರಿ ಕಣದಲ್ಲಿದ್ದಾರೆ.

ಇದನ್ನೂ ಓದಿ:Odisha Assembly Result 2024: ಅಸೆಂಬ್ಲಿ ಎಲೆಕ್ಷನ್‌; ಮತ ಎಣಿಕೆ ಶುರು-ಒಡಿಶಾದಲ್ಲಿ ಮತ್ತೆ ಗದ್ದುಗೆ ಏರುತ್ತಾ ಬಿಜೆಡಿ?

Continue Reading
Advertisement
Kani Kusruti she doesn't want to be in Bollywood, overcoming financial crunch
ಸಿನಿಮಾ53 seconds ago

Kani Kusruti: ಹಿಂದಿ ಕಲಿಯುವಷ್ಟು ದೊಡ್ಡ ನಟಿ ನಾನಲ್ಲ ಎಂದ ಕಾನ್‌ ಪ್ರಶಸ್ತಿ ವಿಜೇತೆ!

Tushar Girinath
Lok Sabha Election 20248 mins ago

Tushar Girinath : ಬ್ಯಾರಿಕೇಡ್ ತೆಗೆಯದ್ದಕ್ಕೆ ತುಷಾರ್‌ ಗಿರಿನಾಥ್‌ ಗರಂ; ಕಾರಿನಿಂದ ಇಳಿದು ಪೊಲೀಸರಿಗೆ ʻಹುಚ್ಚ ನೀನುʼ ಎಂದು ಅವಾಜ್‌

AP Election results 2024 live
ದೇಶ14 mins ago

AP Election results 2024 live: ಆಂಧ್ರ ಪ್ರದೇಶ ವಿಧಾನಸಭೆ: ಭರ್ಜರಿ ಗೆಲುವಿನತ್ತ ಟಿಡಿಪಿ

Election Results 2024
ದೇಶ26 mins ago

Election Results 2024: 5 ಲಕ್ಷ ಮತಗಳಿಂದ ಗೆದ್ದು ಬೀಗಿದ ಅಮಿತ್‌ ಶಾ; ಬಿಜೆಪಿಗೆ ಮೊದಲ ಗೆಲುವು

Kolar Election Result 2024
ಪ್ರಮುಖ ಸುದ್ದಿ31 mins ago

Kolar Election Result 2024 : ಕೋಲಾರದಲ್ಲಿ ಜೆಡಿಎಸ್​​, ಬಿಜೆಪಿ ಮೈತ್ರಿ ಅಭ್ಯರ್ಥಿ ಮಲ್ಲೇಶ್​ ಬಾಬುಗೆ ಗೆಲುವು

gold rate today
ಕರ್ನಾಟಕ36 mins ago

Gold Rate Today: ಚಿನ್ನದ ಮಾರುಕಟ್ಟೆಗೂ ಮತ ಎಣಿಕೆ ಎಫೆಕ್ಟ್;‌ ಬಂಗಾರದ ದರ ಏರಿಕೆ

Election Results 2024.
ದೇಶ39 mins ago

Election Results 2024: ಮಹಾರಾಷ್ಟ್ರದ 27 ಕ್ಷೇತ್ರದಲ್ಲಿ ಇಂಡಿಯಾಗೆ ಮುನ್ನಡೆ, ಎನ್‌ಡಿಎಗೆ 20 ಕ್ಷೇತ್ರದಲ್ಲಿ ಹಿನ್ನಡೆ

T20 World Cup 2024
ಕ್ರೀಡೆ44 mins ago

T20 World Cup 2024: ಟಿ20 ವಿಶ್ವಕಪ್​ನಲ್ಲಿ ನೂತನ ದಾಖಲೆ ಸೃಷ್ಟಿಸಿದ ಲಂಕಾ-ದಕ್ಷಿಣ ಆಫ್ರಿಕಾ ಪಂದ್ಯ

2024 election results
ಪ್ರಮುಖ ಸುದ್ದಿ45 mins ago

2024 election results : ತಮಿಳುನಾಡಿನಲ್ಲಿ ಮತ್ತೆ ಡಿಎಂಕೆ ಪಾರಮ್ಯ; ಅಣ್ಣಾ ಮಲೈಗೆ ಹಿನ್ನಡೆ

Upcoming Vehicles
ಆಟೋಮೊಬೈಲ್47 mins ago

Upcoming Vehicles: ಈ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿರುವ ಹೊಸ ಕಾರು, ಬೈಕ್‌ಗಳಿವು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ6 hours ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ21 hours ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ21 hours ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು3 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ5 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ7 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌