ಮೇಲೆ ಬೆಂಕಿ ಬಿಸಿಲು, ಒಳಗೆ ಮಸಾಲೆಯ ಭುಗಿಲು- ಬೇಸಿಗೆಯಲ್ಲಿ ಇದು ಬೇಡ - Vistara News

ಆಹಾರ/ಅಡುಗೆ

ಮೇಲೆ ಬೆಂಕಿ ಬಿಸಿಲು, ಒಳಗೆ ಮಸಾಲೆಯ ಭುಗಿಲು- ಬೇಸಿಗೆಯಲ್ಲಿ ಇದು ಬೇಡ

ಗರಂ ಮಸಾಲೆ ಹೆಚ್ಚು ಇರುವ ಆಹಾರ ಬಾಯಿಗೆ ರುಚಿ. ಆದರೆ ಬೇಸಿಗೆಯಲ್ಲಿ, ಹೆಚ್ಚು ಬಾಯಾರುವಾಗ ಈ ಬಗೆಯ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದ್ಯಾವುದು ಇಲ್ಲಿ ನೋಡಿ.

VISTARANEWS.COM


on

garam masala
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಾವು ಭಾರತೀಯರಿಗೆ ಮಸಾಲೆಯಿಲ್ಲದ ಅಡುಗೆಯನ್ನು ಊಹನೆ ಮಾಡಲೂ ಸಾಧ್ಯವಿಲ್ಲ. ಸರಿಯಾದ ಸಂಪರ್ಕ, ಸಂವಹನ ಸಾಧನಗಳಿಲ್ಲದ ಕಾಲದಲ್ಲೇ, ಮಸಾಲೆ ಪದಾರ್ಥದ ಮೂಲಕವೇ ಇಡೀ ಪ್ರಪಂಚವನ್ನು ಭಾರತ ತನ್ನೆಡೆಗೆ ಆಕರ್ಷಿಸಿದ್ದು ಈಗ ಇತಿಹಾಸ. ಇಂತಹ ಮಸಾಲೆ ಪದಾರ್ಥಗಳು ಭಾರತದ ಪ್ರತಿ ರಾಜ್ಯದಲ್ಲೂ ಒಂದಿಲ್ಲೊಂದು ರೀತಿಯಲ್ಲಿ, ನಾನಾ ಅಡುಗೆಗಳ ರೂಪದಲ್ಲಿ ಜನಮಾನಸವನ್ನು ತನ್ನ ಬಿಗಿಮುಷ್ಟಿಯಲ್ಲಿ ಇಟ್ಟಿರುವುದೂ ಸುಳ್ಳಲ್ಲ. ಮಸಾಲೆ ಪದಾರ್ಥಗಳೆಡೆಗಿನ ಭಾರತೀಯರ ಮೋಹವೇ ಅಂತಹದ್ದು. ಅದಿಲ್ಲದೆ ಅಸ್ತಿತ್ವವೇ ಇಲ್ಲ ಎಂಬಷ್ಟು ಪ್ರತಿ ಅಡುಗೆಯಲ್ಲೂ ಮಸಾಲೆ ಪದಾರ್ಥಗಳು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ.

ಆಹಾರದ ರುಚಿಯನ್ನು ಇನ್ನಷ್ಟು ಮತ್ತಷ್ಟು ಉತ್ತಮಗೊಳಿಸುವಲ್ಲಿ ಮಸಾಲೆ ಪದಾರ್ಥಗಳ ಪಾತ್ರ ದೊಡ್ಡದು. ಆದರೆ, ಭಾರತದಲ್ಲಿ ಬೇಸಗೆಯ ಧಗೆ ಬಹುತೇಕ ರಾಜ್ಯಗಳಲ್ಲಿ ತೀವ್ರ ಸ್ವರೂಪನ್ನೇ ಪಡೆದಿರುತ್ತದೆ. ಹಾಗಾಗಿ ಇಂಥ ಮಸಾಲೆಗಳ ಅತಿಯಾದ ಬಳಕೆ ಬೇಸಗೆಯಲ್ಲಿ ಮಾತ್ರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಬಹುದು.

ಕೆಂಪು ಮೆಣಸು: ಖಾರ ಎಂಬ ರುಚಿಯ ಅಮಲನ್ನು ಒಮ್ಮೆ ಹತ್ತಿಸಿಕೊಂಡರೆ ಬಹುತೇಕರು, ಮತ್ತೆ ಸಪ್ಪೆಯ ರುಚಿಯನ್ನು ಅಪ್ಪಿಕೊಳ್ಳುವುದಿಲ್ಲ. ಖಾರವಿಲ್ಲದ ಅಡುಗೆಯನ್ನು ಕನಸಿನಲ್ಲೂ ಯೋಚಿಸಲಾರರು. ರುಚಿಯೇ ಇಲ್ಲದ, ಪೇಲವ ಆಹಾರವೆಂಬಂತೆ ಖಾರವಿಲ್ಲದ ಅಡುಗೆಯನ್ನು ಮೂದಲಿಸಿಯಾರು. ಆದರೆ, ವಿಪರೀತ ಖಾರದಡುಗೆ ಖಂಡಿತ ದೇಹಕ್ಕೆ ಒಳ್ಳೆಯದಲ್ಲ. ಎಷ್ಟೇ ಅಭ್ಯಾಸಬಾದರೂ, ಬೇಸಗೆಯಲ್ಲಿ ಖಾರದಿಂದ ಸ್ವಲ್ಪ ದೂರ ಉಳಿಯುವುದೇ ಒಳ್ಳೆಯದು. ಮೂಗು ಬಾಯಿ, ಮೈಯಿಡೀ, ನೀರಿಳಿಸಿಕೊಂಡು ಧಗಧಗ ಉರಿವ ಬಿಸಿಲಲ್ಲಿ ಖಾರವಾದ ಅಡುಗೆ ಉಂಡರೆ ಹೊಟ್ಟೆ ಹೇಗೆ ತಂಪಾಗಿದ್ದೀತು? ಹೊಟ್ಟೆ ಹಾಗೂ ಎದೆಯುರಿಯನ್ನು ಇದು ಖಂಡಿತಾ ತಂದೊಡ್ಡಬಹುದು. ಹಾಗಾಗಿ, ಖಾರವನ್ನು ಬೇಸಿಗೆಯಲ್ಲಾದರೂ ಕಡಿಮೆ ಮಾಡಿ.

ಶುಂಠಿ: ಶುಂಠಿ ಕೂಡಾ ಖಾರವೇ! ಶುಂಠಿ ಹೇರಳವಾಗಿ ಉಪಯೋಗವಾಗುವುದು ಚಹಾದಲ್ಲಿ. ಪ್ರತಿದಿನ ಎದ್ದು ಚಹಾವೊಂದನ್ನು ಹೀರುತ್ತಾ ಪತ್ರಿಕೆ ಕೈಲಿ ಹಿಡಿಯದಿದ್ದರೆ ಬಹುತೇಕರಿಗೆ ಇಂದೂ ಬೆಳಗು ಬೆಳಗೆನಿಕೊಳ್ಳುವುದಿಲ್ಲ. ಶುಂಠಿ ಹಾಕಿದ ಚಹಾದ ಸ್ವಾದವೇ ಬೇರೆ. ಅದರಲ್ಲೂ ಧೋ ಎಂದು ಸುರಿವ ಮಳೆಯ ಹಿನ್ನೆಲೆಯಿದ್ದರೆ ಮುಗೀತು, ಶುಂಠಿ ಚಹಾದ ಸ್ಥಾನ ಯಾರಿಗೂ ಕದಿಯಲು ಸಾಧ್ಯವಿಲ್ಲ. ಒಮ್ಮೆ ಶುಂಠಿಯ ಹಾಕಿದ ಚಹಾ ಮೋಡಿ ಮಾಡಿದರೆ, ಆಗಾಗ ಇದೇ ಚಹಾ ಬೇಕೆನಿಸುವುದು ಸಹಜ. ಉತ್ತರ ಭಾರತದೆಲ್ಲೆಡೆ, ಶುಂಠಿ ಹಾಕಿದ ಚಹಾವೇ ಹೆಚ್ಚು ಜನಪ್ರಿಯವಾದರೂ ಅವರು ಬೇಸಗೆಯಲ್ಲಿ ಚಹಾಕ್ಕೆ ಶುಂಠಿ ಬಳಕೆ ನಿಲ್ಲಿಸಿಬಿಡುತ್ತಾರೆ. ಇದಲ್ಲದೆ, ಹಲವು ದಿನನಿತ್ಯದ ಆಹಾರಗಳಿಗೆ ನಾವು ಶುಂಠಿ ಬಳಸುತ್ತೇವೆ. ಆದರೆ, ಬೇಸಿಗೆಯಲ್ಲಿ ಅತಿಯಾದ ಶುಂಠಿ ಬಳಕೆ, ಎದೆಯುರಿ, ಹೊಟ್ಟೆನೋವು, ಬೇಧಿಯನ್ನು ತರಬಹುದು ಎಂದು ನೆನಪಿರಲಿ.

ಇದನ್ನೂ ಓದಿ: ಪ್ರಾಚೀನ ಭಾರತದ ಈ 5 ಆಹಾರಗಳನ್ನು ಜನರು ಈಗಲೂ ಸೇವಿಸುತ್ತಾರೆ

ಬೆಳ್ಳುಳ್ಳಿ: ಬೆಳ್ಳುಳ್ಳಿ ಬಹುತೇಕ ಭಾರತೀಯರ ಅಡುಗೆಯಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಆರೋಗ್ಯಕ್ಕೆ ಒಳ್ಳೆಯದು ಕೂಡಾ. ಆದರೆ ಉಷ್ಣಗುಣವನ್ನು ಹೊಂದಿದ ಇದು ಬೇಸೆಗೆಗೆ ಮಾತ್ರ ತಾಳೆಯಾಗುವುದಿಲ್ಲ. ಇದನ್ನು ಬೇಸಿಗೆಯಲ್ಲಿ ಮಿತಿಗಿಂತ ಹೆಚ್ಚು ಸೇವಿಸಿದರೆ ದೇಹದ ಉ಼ಷ್ಣ ಪ್ರಕೃತಿ ಹೆಚ್ಚಾಗಿ, ದೇಹದಲ್ಲಿ ಆಮ್ಲೀಯತೆಯನ್ನು ಸೃಷ್ಟಿಸಿ ರಕ್ತಸ್ರಾವ, ಹೊಟ್ಟೆನೋವನ್ನು ತರಬಹುದು. ಇದನ್ನು ಹೆಚ್ಚು ತಿಂದರೆ ವಾಸನೆಯುಕ್ತ ಬೆವರು, ಬಾಯಿಯ ಕೆಟ್ಟವಾಸನೆಯ ಸಮಸ್ಯೆಯನ್ನಂತೂ ಪ್ರತ್ಯೇಕ ಹೇಳಬೇಕಾಗಿಲ್ಲ.

ಗರಂ ಮಸಾಲೆ: ಕೆಲವು ದಿಢೀರ್‌ ಅಡುಗೆಗಳ ಸ್ವಾದವನ್ನು ದಿಢೀರ್‌ ಹೆಚ್ಚಿಸುವಲ್ಲಿ ಗರಂ ಮಸಾಲೆಯ ಪಾತ್ರ ದೊಡ್ಡದು. ವಿವಿಧ ಮಸಾಲೆಗಳನ್ನು ಪುಡಿ ಮಾಡಿ ಮಾಡುವ ಈ ಗರಂ ಮಸಾಲೆ ಎಂಬ ಮಿಶ್ರಣವನ್ನು ಆದಷ್ಟು ಕಡಿಮೆ ಬಳಸಿದರೆ, ಬೇಸಗೆಯಲ್ಲಿ ಆರೋಗ್ಯವೇ ಭಾಗ್ಯವಾಗಬಹುದು. ಇಲ್ಲವಾದಲ್ಲಿ ಪದೇ ಪದೆ ಎದೆಯುರಿ ಕಟ್ಟಿಟ್ಟ ಬುತ್ತಿ. ಹಾಗಾಗಿ ಆದಷ್ಟೂ ಮಸಾಲೆಯುಕ್ತ ಆಹಾರ ಸೇವನೆ ಬೇಸಗೆಯಲ್ಲಿ ಕಡಿಮೆ ಮಾಡಿ, ತಂಪಾದ ಹಿತಮಿತ ಆಹಾರ ಸೇವನೆ ಜೊತೆಗೆ ದೇಹಕ್ಕೆ ತಂಪೆರೆಯುವ ಪ್ರಕೃತಿದತ್ತ ಪಾನೀಯಗಳನ್ನು ಇವುಗಳ ಸ್ಥಾನದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.

ಇದನ್ನೂ ಓದಿ: World Food Safety Day: ನಿಮ್ಮ ಆಹಾರ ಆರೋಗ್ಯಕರ ಎನಿಸಬೇಕಾದರೆ…

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Shawarma: ನಾನ್‌ವೆಜ್ ಪ್ರಿಯರಿಗೆ ಬ್ಯಾಡ್‌ ನ್ಯೂಸ್‌; ಶೀಘ್ರದಲ್ಲೇ ರಾಜ್ಯದಲ್ಲಿ ಶವರ್ಮಾ ಬ್ಯಾನ್ ?

Shawarma: ಗೋಬಿ ಮಂಚೂರಿ ಹಾಗೂ ಕಬಾಬ್ ಬಳಿಕ ಇದೀಗ ರಾಜ್ಯದಲ್ಲಿ ಶವರ್ಮಾ ಬ್ಯಾನ್‌ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಚಿಕನ್‌ ಶವರ್ಮಾಗಳಲ್ಲಿ ಬ್ಯಾಕ್ಟೀರಿಯಾ ಹಾಗೂ ಈಸ್ಟ್ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಕೇರಳದಲ್ಲಿ ಈಗಾಗಲೇ ಶವರ್ಮಾ ತಿಂದು ಸಾಕಷ್ಟು ಜನ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ‌ ರಾಜ್ಯದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

VISTARANEWS.COM


on

Shawarma
Koo

ಬೆಂಗಳೂರು: ಗೋಬಿ ಮಂಚೂರಿ ಹಾಗೂ ಕಬಾಬ್ ಬಳಿಕ ಇದೀಗ ರಾಜ್ಯದಲ್ಲಿ ಶವರ್ಮಾ (Shawarma) ಬ್ಯಾನ್‌ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಚಿಕನ್‌ ಶವರ್ಮಾಗಳಲ್ಲಿ ಬ್ಯಾಕ್ಟೀರಿಯಾ ಹಾಗೂ ಈಸ್ಟ್ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಕೇರಳದಲ್ಲಿ ಈಗಾಗಲೇ ಶವರ್ಮಾ ತಿಂದು ಸಾಕಷ್ಟು ಜನ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ‌ ರಾಜ್ಯದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

ಬೆಂಗಳೂರಿನಲ್ಲಿ ಶವರ್ಮಾ ಗುಣಮಟ್ಟ ಪರಿಶೀಲನೆ ನಡೆಸಿದ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಗೆ ಬೆಚ್ಚಿ ಬೀಳಿಸುವ ಅಂಶ ಕಂಡು ಬಂದು ಬಂದಿದೆ. ಶವರ್ಮಾಗಳಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ, ಈಸ್ಟ್ ಪತ್ತೆಯಾಗಿದೆ. ಬೆಂಗಳೂರು ಮಾತ್ರವಲ್ಲ ಹುಬ್ಬಳ್ಳಿ, ಮೈಸೂರು, ತುಮಕೂರು, ಮಂಗಳೂರು, ಬಳ್ಳಾರಿ ಸೇರಿದಂತೆ ಹಲವೆಡೆ ಪರೀಕ್ಷೆ ನಡೆಸಲಾಗಿದೆ.

ಶವರ್ಮಾ ತಯಾರಿಕೆಯಲ್ಲಿ ನೈಮರ್ಲ್ಯದ ಕೊರತೆ ಕಂಡು ಬರುತ್ತಿದೆ. ಅಲ್ಲದೆ ಧೀರ್ಘ ಕಾಲದವರೆಗೂ ಶೇಖರಣೆ ಮಾಡುವುದರಿಂದ ಇದರಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ, ಈಸ್ಟ್ ಉತ್ಪತ್ತಿಯಾಗಿ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಶವರ್ಮಾ ತಿನ್ನುವುದರಿಂದ ಆರೋಗ್ಯದಲ್ಲಿ ಭಾರೀ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹೇಳಿದ್ದೇನು?

ಮಾಧ್ಯಮಗಳಲ್ಲಿ ಶವರ್ಮಾ ಸೇವಿಸಿ ಫುಡ್‌ ಪಾಯ್ಸನ್‌ ಆಗಿರುವ ಕುರಿತು ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ವಲಯ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೈಸೂರು, ತುಮಕೂರು, ಧಾರವಾಡ, ಮಂಗಳೂರು, ಬಳ್ಳಾರಿ ಮತ್ತು ಬೆಳಗಾವಿ ಜಿಲ್ಲೆಗಳ ಕಾರ್ಪೋರೇಷನ್‌ ವ್ಯಾಪ್ತಿಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಶವರ್ಮಾದ ಆಹಾರ ಮಾದರಿಗಳನ್ನ್ ವಿಶ್ಲೇಷಣೆಗೊಳಪಡಿಸಲಾಗಿದೆ. ಒಟ್ಟು 17 ಮಾದರಿಗಳಲ್ಲಿ 9 ಮಾದರಿಗಳು ಸುರಕ್ಷಿತವಾಗಿದ್ದರೆ 8 ಮಾದರಿಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಈಸ್ಟ್‌ ಕಂಡು ಬಂದಿರುವುದರಿಂದ ಅಸುರಕ್ಷಿತ ಎಂದು ನಿರ್ಧರಿಸಲಾಗಿದೆ. ಅಸುರಕ್ಷಿತ ಎಂದು ವರದಿಯಾಗಿರುವ ಆಹಾರ ಮಾದರಿಗಳ ತಯಾರಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

ಎಲ್ಲ ಶವರ್ಮಾ ತಯಾರಕರು ಆಹಾರ ತಯಾರಿಕೆ, ಸಂಗ್ರಹಣೆ ಮತ್ತು ವಿತರಣೆಯ ಸಂದರ್ಭದಲ್ಲಿ ಸಂಪೂರ್ಣ ನೈರ್ಮಲ್ಯತೆ ಮತ್ತು ಗುಣಮಟ್ಟವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ 2006ರ ಶೆಡ್ಯೂಲ್‌ 4ರ ಅನುಸಾರ ಕಾಪಾಡಲು ಸೂಚಿಸಲಾಗಿದೆ. ಜತೆಗೆ ಶವರ್ಮಾವನ್ನು ಪ್ರತಿ ದಿನ ಹೊಸದಾಗಿ ತಯಾರಿಸಿ ತಾಜಾ ಸ್ಥಿತಿಯಲ್ಲಿ ಮಾರಾಟ ಮಾಡಲು ಸೂಚಿಸಲಾಗಿದೆ. ಅಲ್ಲದೆ ಎಲ್ಲ ಶವರ್ಮಾ ಆಹಾರ ತಯಾರಕರು ತಮ್ಮ ಉದ್ದಿಮೆಗೆ ಎಫ್‌ಎಸ್‌ಎಸ್‌ಎಐ ನೋಂದಣಿ / ಪರವಾನಿಗೆಯನ್ನು ಪಡೆದುಕೊಳ್ಳುವುದಲ್ಲದೇ ಅದನ್ನು ತಮ್ಮ ವ್ಯಾಪಾರದ ಸ್ಥಳದಲ್ಲಿ ಪ್ರದರ್ಶಿಸಲು ಸೂಚಿಸಿದೆ.

ಜತೆಗೆ ಸಾರ್ವಜನಿಕರು ನೋಂದಣಿ / ಪರವಾನಿಗೆಯನ್ನು ಪಡೆದುಕೊಂಡ ಮಾರಾಟಗಾರರಿಂದಲೇ ಶವರ್ಮಾವನ್ನು ಖದೀದಿಸಲು ಸೂಚಿಸಲಾಗಿದೆ. ಮುಂದಿನ ಪರಿಶೀಲನೆ ವೇಳೆ ಆಹಾರ ತಯಾರಕರು ಲೋಪದೋಷಗಳನ್ನು ಸರಿಪಡಿಸಿಕೊಳ್ಳದೇ ಇದ್ದಲ್ಲಿ ನಿಯಮಾನುಸಾರ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Chemicals in Food: ಗೋಬಿ- ಕಬಾಬ್‌ ಆಯ್ತು‌, ಈಗ ಪಾನಿಪುರಿಯಲ್ಲೂ ಕ್ಯಾನ್ಸರ್‌ಕಾರಿ ವಿಷ ಪತ್ತೆ; ಸದ್ಯದಲ್ಲೇ ಬ್ಯಾನ್?

Continue Reading

ಆಹಾರ/ಅಡುಗೆ

Weight Loss Tips: ಕಪ್ಪು ಬಣ್ಣದ ಆಹಾರಗಳಿಂದ ತೂಕ ಇಳಿಸಿ!

Weight Loss Tips: ಕಪ್ಪು ಬಣ್ಣದ ಆಹಾರಗಳೆಂದರೆ ಸೀದು ಕಪ್ಪಾಗಿ ಕೂತವಲ್ಲ. ನೈಸರ್ಗಿಕವಾಗಿ ಕಡು ಬಣ್ಣದ, ಅದರಲ್ಲೂ ಕಪ್ಪು ಬಣ್ಣದ ಆಹಾರಗಳು. ಇವುಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಅಗತ್ಯ ಸತ್ವಗಳು ಅಧಿಕವಾಗಿರುತ್ತವೆ. ಇವುಗಳಿಂದ ತೂಕ ಇಳಿಸಬಹುದೇ? ಇಲ್ಲಿದೆ ಉತ್ತರ.

VISTARANEWS.COM


on

Weight Loss Tips
Koo

ಕಪ್ಪು ಬಣ್ಣ ಎಂದರೆ ಹಲವರು ಮೂಗು ಮುರಿಯುತ್ತಾರೆ. ಅದೇನೋ ಅಶುಭ, ಅಪಶಕುನ ಎಂದೆಲ್ಲಾ ಭಾವಿಸಿ ದೂರ ಸರಿಯುತ್ತಾರೆ. ಆದರೆ ತೂಕ ಇಳಿಸುವ ಉದ್ದೇಶವಿದ್ದವರಿಗೆ ಕಪ್ಪು ಬಣ್ಣ ಹೇಗೆ ಅನುಕೂಲ ಎಂಬುದು ತಿಳಿದಿದ್ದರೆ ಅನುಕೂಲ. ಅಂದರೆ ಕಪ್ಪು ಬಟ್ಟೆ ಹಾಕಿದರೆ ತೂಕ ಇಳಿಯುತ್ತದೆಂದೋ ಅಥವಾ ಕಪ್ಪು ಹರಳು ಧರಿಸಿದರೆ ತೆಳ್ಳಗಾಗುವರೆಂದೋ ಭ್ರಮಿಸಬೇಕಿಲ್ಲ. ನಾವಿಲ್ಲಿ ಹೇಳುತ್ತಿರುವುದು ಕಪ್ಪು ಬಣ್ಣದ ಆಹಾರಗಳ ಬಗ್ಗೆ. ಹೌದು, ವಿಚಿತ್ರ ಎನಿಸಿದರೂ, ಕಪ್ಪು ಬಣ್ಣದ ಆಹಾರಗಳಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಾಂದ್ರವಾಗಿದ್ದು, ಕೊಬ್ಬು ಕತ್ತರಿಸುವಲ್ಲಿ ನೆರವಾಗುತ್ತವೆ. ಇಲ್ಲಿದೆ (Weight Loss Tips) ವಿವರಗಳು.

Black foods

ಏನಿವು?

ಕಪ್ಪು ಬಣ್ಣದ ಆಹಾರಗಳೆಂದರೆ ಸೀದು ಕಪ್ಪಾಗಿ ಕೂತವಲ್ಲ. ನೈಸರ್ಗಿಕವಾಗಿ ಕಡು ಬಣ್ಣದ, ಅದರಲ್ಲೂ ಕಪ್ಪು ಬಣ್ಣದ ಆಹಾರಗಳು. ಇವುಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಅಗತ್ಯ ಸತ್ವಗಳು ಅಧಿಕವಾಗಿರುತ್ತವೆ. ಜೊತೆಗೆ ಬೇಗನೇ ಹೊಟ್ಟೆ ತುಂಬಿದ ಅನುಭವ ನೀಡಿ, ದೀರ್ಘ ಕಾಲದವರೆಗೆ ಹಸಿವನ್ನು ಮುಂದೂಡಿ, ದೇಹದ ಚಯಾಪಚಯವನ್ನು ಹೆಚ್ಚಿಸುತ್ತವೆ. ಅಂದರೆ ಶರೀರವನ್ನು ಬಳಲಿಸದೆಯೆ, ಶಕ್ತಿಯನ್ನು ಕುಂದಿಸದೆಯೆ ತೂಕವನ್ನು ಇಳಿಸಿಕೊಳ್ಳಲು ನೆರವಾಗುತ್ತವೆ. ಯಾವ ಆಹಾರಗಳು ಎಂಬುದನ್ನು ಈಗ ತಿಳಿಯೋಣ. ಅದಕ್ಕೂ ಮುನ್ನ, ಅವುಗಳಲ್ಲಿ ಇರುವುದೇನು ಎಂದು ನೋಡಿದರೆ- ಕಡು ಬಣ್ಣದ ಆಹಾರಗಳಲ್ಲಿ ಆಂಥೋಸಯನಿನ್‌ ಎಂಬ ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿರುತ್ತವೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ಸ್ಥಿರವಾಗಿ ಇರಿಸುವುದಕ್ಕೆ ಇದು ನೆರವಾಗುತ್ತದೆ. ರಕ್ತದಲ್ಲಿನ ಸಕ್ಕರೆಯಂಶ ಸ್ಥಿರವಾಗಿ ಇದ್ದಷ್ಟೂ ತಿನ್ನಬೇಕೆಂಬ ಬಯಕೆ ಬರುವುದನ್ನು ತಡೆಯಬಹುದು. ಏರಿಳಿತ ಹೆಚ್ಚಾದರೆ ತಿನ್ನುವುದೂ ಹೆಚ್ಚಬಹುದು. ಜೊತೆಗೆ, ಈ ಕಪ್ಪು ಆಹಾರಗಳಲ್ಲಿ ನಾರಿನಂಶವೂ ಅಧಿಕ. ಹಾಗಾಗಿ ಕಳ್ಳ ಹಸಿವನ್ನು ತಡೆಯುವ ಮೂಲಕ ಇದೂ ತೂಕ ಇಳಿಕೆಗೆ ಅನುಕೂಲ ಒದಗಿಸುತ್ತದೆ.

ಯಾವುವು?

ಕಪ್ಪು ಬಣ್ಣದ ಆಹಾರಗಳೆಂದರೆ ಯಾವುದು? ಪ್ರಯತ್ನಿಸಿದರೂ ಅಂಥವು ನೆನಪಾಗುತ್ತಿಲ್ಲವೇ? ಚಿಂತೆಯಿಲ್ಲ, ಪಟ್ಟಿ ಇಲ್ಲಿದೆ-

Black beans

ಕಪ್ಪು ಬೀನ್ಸ್‌

ಕಡು ಕಪ್ಪು ಬಣ್ಣದ ಈ ಕಾಳುಗಳಲ್ಲಿ ಪ್ರೊಟೀನ್‌ ಹೇರಳವಾಗಿದೆ. ಜೊತೆಗೆ, ನಾರು ಹಾಗೂ ಉತ್ಕರ್ಷಣ ನಿರೋಧಕಗಳು ಸಹ ತುಂಬಿಕೊಂಡಿವೆ. ಸಾಮಾನ್ಯವಾಗಿ ಯಾರೆಲ್ಲ ಕಾಳುಗಳನ್ನು ಹೊಂದಿದ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಾರೊ ಅವರಿಗೆ ಕೊಬ್ಬು ಶೇಖರವಾಗುವುದು, ಅದರಲ್ಲೂ ಹೊಟ್ಟೆ ಮತ್ತು ಸುತ್ತಲಿನ ಭಾಗಗಳಲ್ಲಿ ಕೊಬ್ಬು ಜಮೆಯಾಗುವುದು ಕಡಿಮೆ ಎನ್ನುತ್ತವೆ ಅಧ್ಯಯನಗಳು

black rice

ಕಪ್ಪು ಅಕ್ಕಿ

ಇದೂ ಸಹ ಆಂಥೋಸಯನಿನ್‌ಗಳು ವಿಫಲವಾಗಿರುವಂಥ ಆಹಾರ. ಬಿಳಿ ಅಕ್ಕಿಗೆ ಹೋಲಿಸಿದಲ್ಲಿ ಇದರ ಗ್ಲೈಸೆಮಿಕ್‌ ಸೂಚಿ ಕಡಿಮೆ. ಹಾಗಾಗಿ ಮಧುಮೇಹಿಗಳಿಗೆ ಬಿಳಿಯಕ್ಕಿಗಿಂತ ಇದು ಉತ್ತಮವಾದ ಆಹಾರ. ದೇಹದಲ್ಲಿ ಉರಿಯೂತವನ್ನು ಶಮನ ಮಾಡಿ, ತೂಕ ಇಳಿಸಲು ನೆರವಾಗುತ್ತದೆ ಈ ಆಹಾರ.

Blackberry

ಬ್ಲ್ಯಾಕ್‌ಬೆರ್ರಿ

ಆಂಥೋಸಯನಿನ್‌ಗಳು ತೀರಾ ಸಾಂದ್ರವಾಗಿರುವ ಆಹಾರಗಳ ಪೈಕಿ ಇದು ಮುಂಚೂಣಿಯಲ್ಲಿದೆ. ಇದರಲ್ಲಿ ನೀರಿನ ಪ್ರಮಾಣ ಅಧಿಕವಾಗಿರುವುದರಿಂದ ಕ್ಯಾಲರಿ ಹೆಚ್ಚಿಸದೆಯೇ ಹೊಟ್ಟೆ ತುಂಬಿಸುತ್ತದೆ. ಈ ಎಲ್ಲ ಕಾರಣಗಳಿಗಾಗಿ ಈ ಹಣ್ಣು ಅತ್ಯಂತ ಆರೋಗ್ಯಕರ ಎನಿಸಿದ್ದು, ತೂಕ ಇಳಿಸುವವರಿಗೆ ಇದು ಸಹಕಾರಿ.

Black Chia Seed

ಕಪ್ಪು ಚಿಯಾ ಬೀಜ

ಯಾವುದೇ ಬೀಜಗಳು ದೇಹಕ್ಕೆ ಆರೋಗ್ಯಕರ ಕೊಬ್ಬನ್ನು ನೀಡಿ, ಪ್ರೊಟೀನ್‌ ಮತ್ತು ನಾರನ್ನು ಹೇರಳವಾಗಿ ಒದಗಿಸುತ್ತವೆ. ಅವುಗಳಲ್ಲಿ ಚಿಯಾ ಬೀಜವೂ ಒಂದು. ಇದರಲ್ಲಿ ಕಪ್ಪು ಬಣ್ಣದ ಬೀಜಗಳಲ್ಲಿ ಉತ್ಕರ್ಷಣ ನಿರೋಧಕಗಳು ಇನ್ನಷ್ಟು ಅಧಿಕವಾಗಿರುತ್ತವೆ. ದೇಹಕ್ಕೆ ಬೇಕಾದ ಪೋಷಣೆಯನ್ನು ನೀಡಿ, ತೂಕ ಇಳಿಸಲು ಪೂರಕವಾಗಿವೆ.

black Sesame

ಕರಿ ಎಳ್ಳು

ಎಳ್ಳಿನಲ್ಲಿರುವ ತೈಲದಂಶ ದೇಹಕ್ಕೆ ಹಿತವಾಗುವಂಥದ್ದು. ಅದರಲ್ಲೂ ಸ್ನಾಯುಗಳನ್ನು ಬೆಳೆಸುವಂಥ ಯಾವುದೇ ಆಹಾರಗಳು ದೇಹದ ಚಯಾಪಚಯವನ್ನು ಹೆಚ್ಚಿಸುವಂಥವು. ಕರಿ ಎಳ್ಳಿನಲ್ಲಿರುವ ಕೊಬ್ಬಿನಂಶವು ಹೆಚ್ಚು ಕಾಲದವರೆಗೆ ಹಸಿವಾಗದಂತೆ ತಡೆಯಬಲ್ಲದು. ಈ ಮೂಲಕ ತೂಕ ಇಳಿಕೆಗೂ ಉಪಯುಕ್ತ ಆಗಬಲ್ಲದು.

ಇದನ್ನೂ ಓದಿ: Foods For Glowing Skin: ಚರ್ಮದ ಕಾಂತಿ ಹೆಚ್ಚಿಸುವ ಕೊಲಾಜೆನ್ ಸಪ್ಲಿಮೆಂಟ್‌ಗಳೇಕೆ? ಈ ಆಹಾರಗಳ ಮೂಲಕವೇ ಕೊಲಾಜೆನ್‌ ಪಡೆಯಿರಿ!

Continue Reading

ಆಹಾರ/ಅಡುಗೆ

Mango Storage: ಮಾವಿನ ಹಣ್ಣಿನ ಸೀಸನ್‌ ಮುಗಿದರೇನಂತೆ? ತಿಂಗಳ ಕಾಲ ಇದನ್ನು ಶೇಖರಿಸಿ ಇಡುವ ವಿಧಾನ ಇಲ್ಲಿದೆ

Mango storage: ಮಾವಿನ ಹಣ್ಣಿನ ಸೀಸನ್‌ ಮುಗಿದರೇನಂತೆ, ಈ ಹಣ್ಣನ್ನು ನಮಗಿಷ್ಟ ಬಂದಂತೆ ನಾನಾ ವಿಧಗಳಿಂದ ಇನ್ನೂ ಕೆಲ ಕಾಲ ಸ್ಟೋರ್‌ ಮಾಡಿ ಇಡಬಹುದು. ಬಗೆಬಗೆಯ ವಿಧಾನಗಳಿಂದ ಮಾವಿನಹಣ್ಣಿನ ರುಚಿಯನ್ನು ತಿಂಗಳುಗಟ್ಟಲೆ ಕಾಲ ಕಾಪಿಟ್ಟುಕೊಳ್ಳುವ ಅನೇಕ ಬಗೆಯನ್ನು ನಮ್ಮ ಹಿರಿಯರು ನಮಗೆ ದಾಟಿಸಿದ್ದಾರೆ. ಇತ್ತೀಚೆಗೆ ಬಂದ ಸೌಲಭ್ಯಗಳಿಂದ ನಾವು ಇನ್ನೂ ಒಂದಷ್ಟು ಬಗೆಗಳನ್ನು ಹುಡುಕಿಕೊಂಡು ಈ ಸಾಧ್ಯತೆಗಳನ್ನು ಇನ್ನಷ್ಟು ವಿಸ್ತರಿಸಿಕೊಂಡಿದ್ದೇವೆ. ಈ ಕುರಿತ ಮಾಹಿತಿ ಇಲ್ಲಿ ಕೊಡಲಾಗಿದೆ.

VISTARANEWS.COM


on

Mango Storage
Koo

ಮಳೆಗಾಲ ಆರಂಭವಾಗಿದೆ. ಬೇಸಿಗೆಯ ಮಾವಿನಹಣ್ಣು (Mango storage) ಇನ್ನೇನು ಮುಗಿಯುವ ಕಾಲ ಸನ್ನಿಹಿತವಾಗಿದೆ. ತಿಂಗಳ ಹಿಂದೆ ಚಪ್ಪರಿಸಿ ತಿನ್ನುತ್ತಿದ್ದ ಮಾವಿನಹಣ್ಣಿಗೆ ಟಾಟಾ ಬೈಬೈ ಹೇಳಿ ಇನ್ನು ಎಂಟು ಹತ್ತು ತಿಂಗಳ ಕಾಲ ಕಾಯಬೇಕು. ಮಾವಿನ ಹಣ್ಣಿಗಾದರೂ ಬೇಸಿಗೆ ಬರಲಿ ಎಂದು ಕಾಯುವ ಮಾವುಪ್ರಿಯರು ಪ್ರತಿ ಮನೆಯಲ್ಲೂ ಇದ್ದಾರು. ಮಾವಿನಹಣ್ಣು ಇಷ್ಟವಿಲ್ಲ ಎಂದು ಹೇಳುವ ಮಂದಿಯನ್ನು ನಮ್ಮ ನಡುವೆ ಹುಡುಕುವುದು ಕಷ್ಟ. ಅದಕ್ಕಾಗಿಯೇ ಮಾವು ಹಣ್ಣುಗಳ ರಾಜ. ಆದರೆ ಮಾವಿನ ಹಣ್ಣು ಮುಗಿದರೇನಂತೆ, ಮಾವಿನ ಹಣ್ಣನ್ನು ನಮಗಿಷ್ಟ ಬಂದಂತೆ ನಾನಾ ವಿಧಗಳಿಂದ ಇನ್ನೂ ಕೆಲ ಕಾಲ ಸ್ಟೋರ್‌ ಮಾಡಿ ಇಡಬಹುದು. ಬಗೆಬಗೆಯ ವಿಧಾನಗಳಿಂದ ಮಾವಿನಹಣ್ಣಿನ ರುಚಿಯನ್ನು ತಿಂಗಳುಗಟ್ಟಲೆ ಕಾಲ ಕಾಪಿಟ್ಟುಕೊಳ್ಳುವ ಅನೇಕ ಬಗೆಯನ್ನು ನಮ್ಮ ಹಿರಿಯರು ನಮಗೆ ದಾಟಿಸಿದ್ದಾರೆ. ಇತ್ತೀಚೆಗೆ ಬಂದ ಸೌಲಭ್ಯಗಳಿಂದ ನಾವು ಇನ್ನೂ ಒಂದಷ್ಟು ಬಗೆಗಳನ್ನು ಹುಡುಕಿಕೊಂಡು ಈ ಸಾಧ್ಯತೆಗಳನ್ನು ಇನ್ನಷ್ಟು ವಿಸ್ತರಿಸಿಕೊಂಡಿದ್ದೇವೆ. ಸುಮಭದಲ್ಲಿ ಮಾಡಬಹುದಾದ ಮಾವಿನಹಣ್ಣಿನ ಹಪ್ಪಳ, ಮಾವಿನಹಣ್ಣಿನ ಜ್ಯಾಮ್ ಇತ್ಯಾದಿಗಳನ್ನು ಮಾಡಿ ಶೇಖರಿಸಿಡುವ ಮೂಲಕ ಇನ್ನೂ ಮೂರ್ನಾಲ್ಕು ತಿಂಗಳು, ನೀವು ಬಯಸಿದರೆ ಮುಂದಿನ ಮಾವಿನ ಹಣ್ಣಿನ ಸೀಸನ್‌ವರೆಗೆ ಮಾವಿನ ಹಣ್ಣನ್ನು ಅನುಭವಿಸಬಹುದು. ಅಯ್ಯೋ ಇವೆಲ್ಲ ಯಾರು ಮಾಡುವುದು ಎನ್ನುತ್ತೀರಾ? ಕೇವಲ ಮೂರೇ ಮೂರು ಬಗೆಯ ಪದಾರ್ಥಗಳನ್ನು ಬಳಸಿಕೊಂಡು ಸುಲಭವಾಗಿ ಮಾವಿನ ಹಣ್ಣಿನ ಜ್ಯಾಮ್‌ ನಿಮಿಷಗಳಲ್ಲಿ ಮಾಡಬಹುದು. ನೈಸರ್ಗಿಕವಾದ ಪದಾರ್ಥಗಳೇ ಇರುವ ಮಾವಿನ ಹಣ್ಣಿನ ಈ ಜ್ಯಾಮ್‌ನಲ್ಲಿ ಯಾವುದೇ ಪ್ರಿಸರ್ವೇಟಿವ್‌ಗಳಿಲ್ಲ, ಕೃತಕ ಬಣ್ಣಗಳಿಲ್ಲ. ಹೀಗಾಗಿ ಭಯವಿಲ್ಲದೆ, ನೀವು, ನಿಮ್ಮ ಮಕ್ಕಳು ಬೇಕಾದಾಗಲೆಲ್ಲ ಚಪ್ಪರಿಸಿ ತಿನ್ನಬಹುದು. ಮಾವಿನಹಣ್ಣಿನಲಿರುವ ಎಲ್ಲ ಬಗೆಯ ಪೋಷಕಾಂಶಗಳನ್ನೂ ನೀವು ಈ ಮೂಲಕ ಆಮೇಲೂ ಪಡೆಯಬಹುದು.

History of the Mango
  • ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಎರಡು ಮೂರು ಬಗೆಯ ಮಾವಿನಹಣ್ಣನ್ನು ತೆಗೆದುಕೊಳ್ಳಿ. ಚೆನ್ನಾಗಿ ತೊಳೆದುಕೊಳ್ಳಿ. ನಂತರ ಸಿಪ್ಪೆಯನ್ನು ತೆಗೆಯಿರಿ.
  • ಮಾವಿನಹಣ್ಣನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ. ಮಿಕ್ಸಿಯಲ್ಲಿ ಹಾಕಿ ನಯವಾದ ಪೇಸ್ಟ್‌ ಮಾಡಿ. ನೀರು ಸೇರಿಸಲೇಬೇಡಿ.
  • ಎರಡು ಚಮಚ ಅಥವಾ ನಿಮ್ಮ ಮಾವಿನಹಣ್ಣಿನ ಸಿಹಿರುಚಿಯ ಅಂದಾಜಿನಲ್ಲಿ ಸಕ್ಕರೆಯನ್ನು ಸೇರಿಸಿ ಮತ್ತೆ ಮಿಕ್ಸಿಯಲ್ಲಿ ಒಮ್ಮೆ ತಿರುಗಿಸಿ ಪೇಸ್ಟ್‌ನನ್ನು ಒಂದು ಬಾಣಲೆಗೆ ಸುರಿಯಿರಿ.
  • ಒಂದರ್ಧ ನಿಂಬೆಹಣ್ಣಿನ ರಸವನ್ನ ಇದಕ್ಕೆ ಹಿಂಡಿ. ಸುಮಾರು 15ರಿಂದ 20 ನಿಮಿಷಗಳ ಕಾಲ ಮಂದ ಉರಿಯಲ್ಲಿ ಇದನ್ನು ಕುದಿಸಿ. ಜ್ಯಾಮ್‌ನಂತಹ ಪಾಕ ಸಿದ್ಧವಾದರೆ ಉರಿ ಬಂದ್‌ ಮಾಡಿ. ಇನ್ನೂ ಕಾಯಿಸಬೇಕು ಅನಿಸಿದರೆ ಕೆಲ ನಿಮಿಷಗಳ ಕಾಲ ಮತ್ತೆ ಕುದಿಸಿ.

ಇದನ್ನೂ ಓದಿ: Weight Loss Tips: ದಕ್ಷಿಣ ಭಾರತೀಯ ಶೈಲಿಯ ಬೆಳಗಿನ ತಿಂಡಿಯಲ್ಲೂ ನೀವು ತೂಕ ಇಳಿಸಬಹುದು!

ತಣಿಯಲು ಬಿಡಿ. ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟು ಫ್ರಿಡ್ಜ್‌ನಲ್ಲಿಡಿ. ಬೇಕಾದಾಗಲೆಲ್ಲ, ಟೋಸ್ಟ್‌ಗೆ, ದೋಸೆಗೆ, ಚಪಾತಿಗೆ ಹಾಕಿಕೊಂಡು ತಿನ್ನಿ, ನಿಮ್ಮ ಮಕ್ಕಳೂ ಕೂಡಾ ಬಾಯಿ ಚಪ್ಪರಿಸಿಕೊಂಡು ಮನೆಯಲ್ಲೇ ಮಾಡಿದ ಈ ಜ್ಯಾಮ್‌ ತಿನ್ನುತ್ತಾರೆ ಎಂಬುದೇ ನಿಮಗೆ ಖುಷಿಯ ವಿಚಾರವಲ್ಲವೇ. ಮಾವಿನ ಹಣ್ಣಿನ ಜ್ಯಾಮ್‌, ಒಣಗಿಸಿದ ಹಪ್ಪಳ ಯಾರೂ ತಿನ್ನುವುದಿಲ್ಲ ಎನ್ನುತ್ತೀರಾ? ಹಾಗಾದರೆ, ಮಾವಿನಹಣ್ಣನ್ನು ಶೇಖರಿಸಿಡುವ ಇನ್ನೂ ಒಂದು ವಿಧಾನವಿದೆ. ಮಾವಿನಹಣ್ಣಿನ ಸಿಪ್ಪೆ ತೆಗೆದು ಹಣ್ಣಿನ ಸಣ್ಣ ತುಂಡುಗಳನ್ನಾಗಿ ಮಾಡಿ, ಮಿಕ್ಸಿಯಲ್ಲಿ ತಿರುಗಿಸಿ, ಅದನ್ನು ಹಾಗೆಯೇ ನೀರು ಸೇರಿಸದೆ, ಗಾಳಿಯಾಡದ ಡಬ್ಬದಲ್ಲಿ ತುಂಬಿಸಿ ಫ್ರೀಜರ್‌ನಲ್ಲಿಡಿ. ಕರೆಂಟು ಹೋಗುವ ಭಯವಿಲ್ಲದಿದ್ದರೆ, ಮನೆಯಲ್ಲಿ ಫ್ರಿಡ್ಜ್‌ ಸದಾ ಚಾಲ್ತಿಯಲ್ಲಿರುತ್ತದೆ ಎಂದಾದರೆ ಇದು ಬೆಸ್ಟ್‌ ಉಪಾಯ. ಮಕ್ಕಳಿಗೆ, ನಿಮಗೆ ಮಾವಿನ ಹಣ್ಣಿನ ಮಿಲ್ಕ್‌ ಶೇಕ್‌, ಲಸ್ಸಿ ಕುಡಿಯಬೇಕೆಂದಾದಾಗ, ಫ್ರೀಜರ್‌ನಿಂದ ಡಬ್ಬ ತೆಗೆದು ಅದರಿಂದ ಸ್ವಲ್ಪ ಹಣ್ಣಿನ ಪ್ಯೂರಿಯನ್ನು ತೆಗೆದು ಹಾಲು ಸಕ್ಕರೆ ಹಾಕಿ ಮಿಕ್ಸಿಯಲ್ಲಿ ಹಾಕಿದರೆ ಆಯಿತು. ಥೇಟ್‌ ಬೇಸಗೆಯ ಅದೇ ಮಾವಿನಹಣ್ಣಿನ ರುಚಿಯ ಮಿಲ್ಕ್‌ಶೇಕ್‌, ಲಸ್ಸಿ ಸಿದ್ಧ!

Continue Reading

ಆರೋಗ್ಯ

Seeds For Weight Loss: ತೂಕ ಇಳಿಸಿಕೊಳ್ಳಬೇಕೆ? ಈ 7 ಬೀಜಗಳನ್ನು ನಿಯಮಿತವಾಗಿ ಸೇವಿಸಿ

seeds for weight loss: ಬೀಜಗಳ ಸೇವನೆಯಿಂದಲೂ ತೂಕ ಇಳಿಸಬಹುದು. ಆದರೆ, ಯಾವ ಬೀಜಗಳನ್ನು ತಿನ್ನುವುದರಿಂದ ತೂಕವನ್ನು ನಿಮ್ಮ ಹತೋಟಿಗೆ ತರಲು ಪ್ರಯತ್ನಿಸಬಹುದು ಎಂಬುದು ಮಾತ್ರ ತಿಳಿದಿರಬೇಕು. ಅಷ್ಟೇ ಅಲ್ಲ, ಈ ಬೀಜಗಳಲ್ಲಿರುವ ಎಲ್ಲ ಬಗೆಯ ಪೋಷಕಾಂಶಗಳಿಂದ ಆರೋಗ್ಯಕರ ವಿಧಾನದಲ್ಲಿಯೇ ತೂಕ ಇಳಿಸುವುದು ಬಹಳ ಮುಖ್ಯವಾದದ್ದು. ಯಾವ ಬೀಜಗಳ ಸೇವನೆಯಿಂದ ನಿಮ್ಮ ತೂಕ ಆರೋಗ್ಯಕರವಾಗಿಯೇ ಇಳಿಯುತ್ತದೆ ಎಂಬುದನ್ನು ನೋಡೋಣ.

VISTARANEWS.COM


on

Seeds For Weight Loss
Koo

ತೂಕ ಇಳಿಸುವುದು ಎಂಬುದು ಅತ್ಯಂತ ಶಿಸ್ತು ಬೇಡುವ ಪಯಣ. ಎಷ್ಟೇ ಶಿಸ್ತಿನಿಂದ ಇದ್ದರೂ ನಾಲಿಗೆ ರುಚಿಯನ್ನು ಬೇಡುತ್ತದೆ. ರುಚಿಯ ಜೊತೆಗೂ ದೇಹವನ್ನು ಆರೋಗ್ಯವಾಗಿಡಬಹುದು ಹಾಗೂ ದೇಹದ ತೂಕವನ್ನು ಹತೋಟಿಗೆ ತರಬಹುದು ಎಂದರೆ ಆಗ ನೆನಪಾಗುವುದು ಈ ಬೀಜಗಳು. ಹೌದು ಬೀಜಗಳ ಸೇವನೆಯಿಂದಲೂ ತೂಕ ಇಳಿಸಬಹುದು (seeds for weight loss). ಆದರೆ, ಯಾವ ಬೀಜಗಳನ್ನು ತಿನ್ನುವುದರಿಂದ ತೂಕವನ್ನು ನಿಮ್ಮ ಹತೋಟಿಗೆ ತರಲು ಪ್ರಯತ್ನಿಸಬಹುದು ಎಂಬುದು ಮಾತ್ರ ತಿಳಿದಿರಬೇಕು. ಅಷ್ಟೇ ಅಲ್ಲ, ಈ ಬೀಜಗಳಲ್ಲಿರುವ ಎಲ್ಲ ಬಗೆಯ ಪೋಷಕಾಂಶಗಳಿಂದ ಆರೋಗ್ಯಕರ ವಿಧಾನದಲ್ಲಿಯೇ ತೂಕ ಇಳಿಸುವುದು ಬಹಳ ಮುಖ್ಯವಾದದ್ದು. ಬನ್ನಿ, ಯಾವ ಬೀಜಗಳ ಸೇವನೆಯಿಂದ ನಿಮ್ಮ ತೂಕ ಆರೋಗ್ಯಕರವಾಗಿಯೇ ಇಳಿಯುತ್ತದೆ ಎಂಬುದನ್ನು ನೋಡೋಣ.

Chia Seeds Black Foods

ಚಿಯಾ ಬೀಜಗಳು

ಚಿಯಾ ಬೀಜಗಳು ಪೋಷಕಾಂಶಗಳ ಪವರ್‌ ಹೌಸ್‌ ಇದ್ದ ಹಾಗೆ. ಇವುಗಳಲ್ಲಿ ಬಹುತೇಕ ಎಲ್ಲ ಪೋಷಕಾಂಶಗಳೂ ಇದ್ದು, ನಾರಿನಂಶವೂ ಇರುವುದರಿಂದ ತೂಕ ಇಳಿಕೆಗೆ ನೆರವಾಗುತ್ತದೆ, ನೀರಿನಲ್ಲಿ ನೆನೆ ಹಾಕಿದಾಗ ಚಿಯಾ ಬೀಜಗಳು ಉಬ್ಬಿಕೊಂಡು ಜೆಲ್‌ನಂತ ಕವಚವನ್ನು ಪಡೆದುಕೊಳ್ಳುತ್ತದೆ. ಹಾಗೆಯೇ ತಿಂದರೂ ದೇಹದಲ್ಲಿರುವ ನೀರಿನಂಶವನ್ನು ಪಡೆದುಕೊಂಡು ಉಬ್ಬುತ್ತದೆ. ಹಾಗಾಗಿ ಇದು ಹೊಟ್ಟೆ ತುಂಬಿದ ಭಾವವನ್ನು ನೀಡುತ್ತದೆ. ಇದರಲ್ಲಿರುವ ಕರಗಬಲ್ಲ ನಾರಿನಂಶವು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.

Flaxseed Different Types of Seeds with Health Benefits

ಅಗಸೆ ಬೀಜಗಳು

ಅಗಸೆ ಬೀಜ ಅಥವಾ ಫ್ಲ್ಯಾಕ್‌ಸೀಡ್‌ಗಳಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್‌ಗಳಿದ್ದು, ಜೊತೆಗೆ ಕರಗಬಲ್ಲ ನಾರಿನಂಶವೂ ಇದೆ. ಇದು ತೂಕ ಇಳಿಕೆಗೆ ಪೂರಕ. ಒಮೆಗಾ ೩ ಫ್ಯಾಟಿ ಆಸಿಡ್‌ಗಳು ದೇಹದ ಉರಿಯೂತವನ್ನೂ ಕಡಿಮೆಕೊಳಿಸಿದರೆ, ಕರಗಬಲ್ಲ ನಾರಿನಂಶವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಹೀಗಾಗಿ ಹಸಿವು ನಿಯಂತ್ರಣದಲ್ಲಿದ್ದು ಅತಿಯಾಗಿ ತಿನ್ನುವುದು ಹತೋಟಿಗೆ ಬರುತ್ತದೆ.

Hemp seed Different Types of Seeds with Health Benefits

ಹೆಂಪ್‌ ಬೀಜಗಳು

ಹೆಂಪ್‌ ಬೀಜಗಳಲ್ಲಿ ಸಾಕಷ್ಟು ಪ್ರೊಟೀನ್‌ ಇರುವುದರಿಂದ ತೂಕ ಇಳಿಸುವ ಮಂದಿಗೆ ಇದು ಪೂರಕ. ಪ್ರೊಟೀನ್‌ ಕರಗಲು ಹೆಚ್ಚು ಶಕ್ತಿ ಬೇಕು. ಹೀಗಾಗಿ ನಿಮ್ಮ ಕ್ಯಾಲರಿ ಇಲ್ಲಿ ಹೆಚ್ಚು ಬಳಸಲ್ಪಡುತ್ತದೆ. ಪ್ರೊಟೀನ್‌ನಿಂದ ಮಾಂಸಖಂಡಗಳು ಬಲವರ್ಧನೆಗೊಳ್ಳುವ ಜೊತೆಗೆ, ಈ ಬೀಜಗಳಲ್ಲಿರುವ ಫ್ಯಾಟಿ ಆಸಿಡ್‌ನ ಪರಿಣಾಮ ಹಸಿವೂ ಕೂಡಾ ನಿಯಂತ್ರಣದಲ್ಲಿರುತ್ತದೆ.

Pumpkin seeds in white bowl Pumpkin Seeds Benefits

ಕುಂಬಳಕಾಯಿ ಬೀಜ

ಕುಂಬಳಕಾಯಿ ಬೀಜದಲ್ಲಿ ಪ್ರೊಟೀನ್‌, ನಾರಿನಂಶ ಹಾಗೂ ಆರೋಗ್ಯಕರ ಕೊಬ್ಬು ಶ್ರೀಮಂತವಾಗಿದೆ. ಇದರಿಂದ ಹೊಟ್ಟೆ ತುಂಬಿದ ಅನುಭವವಾಗಿ ಹಸಿವು ನಿಯಂತ್ರಣದಲ್ಲಿರುತ್ತದೆ. ಪರಿಣಾಮ ಅತಿಯಾಗಿ ತಿನ್ನುವುದಕ್ಕೆ ಬ್ರೇಕ್‌ ಬಿದ್ದು ತೂಕ ಇಳಿಯುತ್ತದೆ. ಇದರಲ್ಲಿ ಮೆಗ್ನೀಶಿಯಂ ಕೂಡಾ ಇದ್ದು, ಇದರಿಂದ ಇನ್ಸುಲಿನ್‌ ಮಟ್ಟವು ಸಮತೋಲನದಲ್ಲಿರುತ್ತದೆ.

Sunflower seed Zinc Foods It also provides protein, minerals and antioxidants along with zinc

ಸೂರ್ಯಕಾಂತಿ ಬೀಜ

ಸೂರ್ಯಕಾಂತಿ ಬೀಜಗಳಲ್ಲಿ ಪ್ರೊಟೀನ್‌, ನಾರಿನಂಶ, ಖನಿಜಾಂಶಗಳ ಜೊತೆಗೆ ಎಲ್ಲ ಬಗೆಯ ಪೋಷಕಾಂಶಗಳೂ ಇವೆ. ಇದರಲ್ಲಿರುವ ಪ್ರೊಟೀನ್‌ ಹಾಗೂ ನಾರಿನಂಶ ಹೆಚ್ಚು ಹಸಿವಾಗದಂತೆ ತಡೆಯುವುದರಿಂದ ತೂಕ ಇಳಿಯುತ್ತದೆ. ಇದರಲ್ಲಿರುವ ವಿಟಮಿನ್‌ ಇ ಹಾಗೂ ಸೆಲೆನಿಯಂ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಚಯಾಪಚಯ ಕ್ರಿಯೆ ಸರಾಗವಾಗಿ ಆಗುತ್ತದೆ.

Imager Of Sesame Benefits

ಎಳ್ಳು

ಎಳ್ಳಿನಲ್ಲಿ ಲಿಗ್ನೆನ್‌ ಎಂಬ ಸಸ್ಯಾಧಾರಿತ ಕಾಂಪೌಂಡ್‌ ಇದ್ದು ಇದು ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ಎಳ್ಳಿನಲ್ಲಿ ಕ್ಯಾಲ್ಶಿಯಂ ಹಾಗೂ ಪ್ರೊಟೀನ್‌ ಹೇರಳವಾಗಿದೆ. ಒಳ್ಳೆಯ ಕೊಬ್ಬು ಕೂಡಾ ಇದ್ದು, ಇದರಿಂದ ಹೊಟ್ಟೆ ತುಂಬಿದ ಭಾವ ನೀಡುತ್ತದೆ.

Parasite Removal Papaya Seeds Benefits

ಪಪ್ಪಾಯಿ ಬೀಜ

ಪಪ್ಪಾಯಿ ಬೀಗಳಲ್ಲಿ ಜೀರ್ಣಕಾರಿ ಕಿಣ್ವಗಳು ಹೇರಳವಾಗಿದ್ದು, ಇದು ತೂಕ ಇಳಿಕೆಗೆ ಸಾಕಷ್ಟು ಸಹಾಯ ಮಾಡುತ್ತದೆ. ಈ ಕಿಣ್ವಗಳು ದೇಹದಲ್ಲಿರುವ ಪ್ರೊಟೀನ್‌ ಅನ್ನು ಕರಗಿಸಲು ಸಹಾಯ ಮಾಡುವ ಮೂಲಕ ಆರೋಗ್ಯಕಾರಿ ಜೀರ್ಣಕ್ರಿಯೆಗೆ ಸಹಕಾರ ನೀಡುತ್ತದೆ. ಹೊಟ್ಟೆಯುಬ್ಬರವನ್ನೂ ಇದು ಕಡಿಮೆ ಮಾಡುತ್ತದೆ. ಕಡಿಮೆ ಕ್ಯಾಲರಿಯ ಪಪ್ಪಾಯ ಬೀಜಗಳು ತೂಕ ಇಳಿಕೆಗೆ ತಮ್ಮದೇ ಆದ ಕಾಣಿಕೆ ನೀಡುತ್ತವೆ.

ಇದನ್ನೂ ಓದಿ: Oats For Weight Loss: ಓಟ್ಸ್‌ ತಿನ್ನುವುದರಿಂದ ತೂಕ ಇಳಿಯುತ್ತದೆಯೇ? ಉತ್ತರ ಇಲ್ಲಿದೆ

Continue Reading
Advertisement
Road Accident
ಮೈಸೂರು4 mins ago

Road Accident : ತಿರುವಿನಲ್ಲಿ ಕಂದಕಕ್ಕೆ ಉರುಳಿದ ಬಸ್‌; ಚಾಲಕ ಸೇರಿ ಮೂವರು ಗಂಭೀರ

KPCC President
ಪ್ರಮುಖ ಸುದ್ದಿ12 mins ago

KPCC President: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸುಳಿವು; ಲಿಂಗಾಯತರಿಗೆ ಅವಕಾಶ ನೀಡಲು ಒತ್ತಾಯ

Jayam Ravi married to superstar rajinikanth daughter
ಕಾಲಿವುಡ್16 mins ago

Jayam Ravi: ರಜನಿಕಾಂತ್‌ ಮಗಳ ಜತೆ ಜಯಂ ರವಿ ಮದುವೆ?

T20 World Cup 2024
ಕ್ರೀಡೆ25 mins ago

T20 World Cup 2024: ಸಂಭ್ರಮಾಚರಣೆ ವೇಳೆ ದುರಂತ: ಧ್ವಜ ಹಾರಿಸಲು ಹೋಗಿ ಬಿದ್ದ ಅಭಿಮಾನಿ; ವೈರಲ್‌ ವಿಡಿಯೊ ಇಲ್ಲಿದೆ

ಕ್ರೀಡೆ45 mins ago

Rohit Sharma: ವಿಶ್ವಕಪ್​ ಗೆದ್ದ ನಾಯಕ ರೋಹಿತ್​ಗೆ ಆಶೀರ್ವಾದ ಮಾಡಿದ ಕಾಂತಾರದ ‘ಪಂಜುರ್ಲಿ’ ದೈವ!

Actor Darshan
ಬೆಂಗಳೂರು48 mins ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

CM Siddaramaiah To Inaugurate Film Producers Association Building says build film city
ಸ್ಯಾಂಡಲ್ ವುಡ್52 mins ago

CM Siddaramaiah: ಡಾ.ರಾಜ್‍ಕುಮಾರ್ ಕನಸಿನಂತೆ ಫಿಲ್ಮ್ ಸಿಟಿ ನಿರ್ಮಾಣ ಮಾಡ್ತೇವೆ ಎಂದ ಸಿದ್ದರಾಮಯ್ಯ

Gold Rate Today
ಚಿನ್ನದ ದರ1 hour ago

Gold Rate Today: ಆಭರಣ ಖರೀದಿಗೆ ಇದು ಸೂಕ್ತ ಸಮಯ; ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

Mann Ki Baat
ದೇಶ1 hour ago

Mann Ki Baat: ʼಸಂವಿಧಾನದ ಬಗ್ಗೆ ಅಚಲ ನಂಬಿಕೆ ಇರಿಸಿದ್ದಕ್ಕೆ ಧನ್ಯವಾದʼ-ಮೋದಿ ಮನ್‌ ಕೀ ಬಾತ್‌ ಹೈಲೈಟ್ಸ್‌ ಹೀಗಿದೆ ನೋಡಿ

Road Accident
ಬೆಂಗಳೂರು1 hour ago

Road Accident : ಬೆಂಗಳೂರಲ್ಲಿ ಬೈಕ್‌ ಸವಾರರಿಬ್ಬರ ಪ್ರಾಣ ಕಸಿದ ಹೈ ಸ್ಪೀಡ್‌

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಬೆಂಗಳೂರು48 mins ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ21 hours ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ1 day ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ2 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು3 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ3 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ6 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

ಟ್ರೆಂಡಿಂಗ್‌