A M Ahmadi: ಸುಪ್ರೀಂಕೋರ್ಟ್​ ಮಾಜಿ ಮುಖ್ಯ ನ್ಯಾಯಮೂರ್ತಿ ಎ.ಎಂ.ಅಹ್ಮದಿ ನಿಧನ - Vistara News

ದೇಶ

A M Ahmadi: ಸುಪ್ರೀಂಕೋರ್ಟ್​ ಮಾಜಿ ಮುಖ್ಯ ನ್ಯಾಯಮೂರ್ತಿ ಎ.ಎಂ.ಅಹ್ಮದಿ ನಿಧನ

ಎ.ಎಂ.ಅಹ್ಮದಿ ಅವರು 1932ರ ಮಾರ್ಚ್​ 25ರಂದು ಸೂರತ್​​ನಲ್ಲಿ ಜನಿಸಿದ್ದರು. 1964ರಲ್ಲಿ ಅಹ್ಮದಾಬಾದ್​​ನ ಸಿವಿಲ್​ ಮತ್ತು ಸೆಷನ್ಸ್​ ನ್ಯಾಯಾಧೀಶನಾಗಿ ನೇಮಕಗೊಂಡರು. 1994-1997ರವರೆಗೆ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಯಾಗಿದ್ದರು.

VISTARANEWS.COM


on

Supreme Court Former CJI A M Ahmadi Dies
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಎ.ಎಂ.ಅಹ್ಮದಿ (A M Ahmadi) ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಎ.ಎಂ.ಅಹ್ಮದಿ ಅವರಿಗೆ ಹುಝೆಫಾ ಅಹ್ಮದಿ ಮತ್ತು ತಸ್ನೀಮ್ ಅಹ್ಮದಿ ಎಂಬ ಇಬ್ಬರು ಮಕ್ಕಳಿದ್ದು, ಇಬ್ಬರೂ ವಕೀಲರೇ ಆಗಿದ್ದಾರೆ.

ಎ.ಎಂ.ಅಹ್ಮದಿ ಅವರು 1932ರ ಮಾರ್ಚ್​ 25ರಂದು ಸೂರತ್​​ನಲ್ಲಿ ಜನಿಸಿದ್ದರು. 1964ರಲ್ಲಿ ಅಹ್ಮದಾಬಾದ್​​ನ ಸಿವಿಲ್​ ಮತ್ತು ಸೆಷನ್ಸ್​ ನ್ಯಾಯಾಧೀಶನಾಗಿ ನೇಮಕಗೊಂಡರು. ಬಳಿಕ ಗುಜರಾತ್​ ಕಾನೂನು ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. 1976ರಲ್ಲಿ ಗುಜರಾತ್​​ ಹೈಕೋರ್ಟ್​​ನ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 1988ರಲ್ಲಿ ಸುಪ್ರೀಂಕೋರ್ಟ್​ ನ್ಯಾಯಾಧೀಶರಾದ ಇವರು 1994ರಿಂದ 1997ರವರೆಗೆ, ಸುಪ್ರೀಂಕೋರ್ಟ್​ನ 26ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದರು. 10 ವರ್ಷಗಳ ಕಾಲ ಸುಪ್ರೀಂಕೋರ್ಟ್​​ನಲ್ಲಿ ಕಾರ್ಯನಿರ್ವಹಿಸಿದರು.

ಇದನ್ನೂ ಓದಿ: Ex-CJI UU Lalit | ನಿವೃತ್ತ ಮುಖ್ಯ ನ್ಯಾಯಮೂರ್ತಿ ಉದಯ್‌ ಉಮೇಶ್‌ ಲಲಿತ್‌ಗೆ ಈಗಲೂ 28 ಸಹಾಯಕ ಸಿಬ್ಬಂದಿ

ಸುಪ್ರೀಂಕೋರ್ಟ್​​ನ 10 ವರ್ಷಗಳ ಅವಧಿಯಲ್ಲಿ ಅಹ್ಮದಿ ಅವರು ಹಲವು ಪ್ರಮುಖ ತೀರ್ಪುಗಳನ್ನು ನೀಡಿದ್ದಾರೆ. ಸುಪ್ರೀಂಕೋರ್ಟ್​ ಜಡ್ಜ್​​ಗಳ ನೇಮಕಕ್ಕೆ ಕೊಲಿಜಿಯಂ ರಚನೆ ಬಗ್ಗೆ ಅವರ ವಿರೋಧ ವ್ಯಕ್ಷಪಡಿಸಿದ್ದರು. ಕೊಲಿಜಿಯಂ ವ್ಯವಸ್ಥೆ ಕುರಿತಂತೆ 1993ರಲ್ಲಿ 9 ನ್ಯಾಯಾಧೀಶರ ಪೀಠ ತಮ್ಮ ಅನಿಸಿಕೆ ಹೊರಹಾಕಿದಾಗ, ಅಹ್ಮದಿ ಅವರು ಕೊಲಿಜಿಯಂ ಬೇಡವೆಂದು ತಮ್ಮ ಅಭಿಪ್ರಾಯ ಬರೆದಿದ್ದರು. 1994ರಲ್ಲಿ ಸುಪ್ರೀಂಕೋರ್ಟ್​ನ ಐವರು ಜಡ್ಜ್​ಗಳ ಪೀಠ ಕೇಸ್​ವೊಂದರಲ್ಲಿ ತೀರ್ಪು ನೀಡಿ ‘ಮುಸ್ಲಿಮರಿಗೆ ನಮಾಜ್​ ಮಾಡಲು ಮಸೀದಿಯೇ ಬೇಕು ಎಂದೇನೂ ಇಲ್ಲ. ಅವರು ಹೊರಾಂಗಣದಲ್ಲೂ ನಮಾಜ್ ಮಾಡಬಹುದು’ ಎಂದಿತ್ತು. ಆ ಪೀಠದಲ್ಲಿದ್ದ ಎ.ಎಂ.ಅಹ್ಮದಿ ಭಿನ್ನ ತೀರ್ಪು ಬರೆದಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Amit Shah: 2029ರ ಚುನಾವಣೆಯಲ್ಲೂ ಬಿಜೆಪಿಗೆ ಗೆಲುವು, ಕಾಂಗ್ರೆಸ್‌ ಪ್ರತಿಪಕ್ಷದಲ್ಲೇ; ಅಮಿತ್‌ ಶಾ ಭವಿಷ್ಯ

Amit Shah: ಎನ್‌ಡಿಎ ಸರ್ಕಾರವು ಅಧಿಕಾರ ಪೂರ್ಣಗೊಳಿಸುವುದಿಲ್ಲ, ಅಸ್ಥಿರತೆ ಇದೆ ಎಂಬುದಾಗಿ ಪದೇಪದೆ ಹೇಳುತ್ತಿದ್ದಾರೆ. ಆದರೆ, ಅಂತಹ ವಂದತಿ ಹಬ್ಬಿಸುವವರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಈ ಸರ್ಕಾರ ಅಧಿಕಾರ ಪೂರ್ಣಗೊಳಿಸುವ ಜತೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದರು.

VISTARANEWS.COM


on

Amith Shah
Koo

ನವದೆಹಲಿ: ಕೆಲ ತಿಂಗಳ ಹಿಂದಷ್ಟೇ ಲೋಕಸಭೆ ಚುನಾವಣೆ (Lok Sabha Election 2024) ಮುಗಿದಿದೆ. ಬಿಜೆಪಿಯು 240 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಎನ್‌ಡಿಎ ಒಕ್ಕೂಟದ ಮಿತ್ರಪಕ್ಷಗಳ ಬಲದೊಂದಿಗೆ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರು 2029ರ ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಭವಿಷ್ಯ ನುಡಿದಿದ್ದಾರೆ. “2029ರಲ್ಲೂ ಬಿಜೆಪಿಯೇ ಗೆಲುವು ಸಾಧಿಸಲಿದೆ. ಕಾಂಗ್ರೆಸ್‌ ಪ್ರತಿಪಕ್ಷದಲ್ಲೇ ಉಳಿಯಲಿದೆ” ಎಂದು ಅವರು ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಪ್ರತಿಪಕ್ಷಗಳು ಏನು ಮಾಡುತ್ತಾರೋ, ಏನು ಮಾಡಬೇಕು ಎಂದಿದ್ದಾರೋ ಮಾಡಲಿ. ಆದರೆ, ನಾನು ನಿಮಗೊಂದು ಭರವಸೆ ನೀಡುತ್ತೇನೆ. 2029ರ ಲೋಕಸಭೆ ಚುನಾವಣೆಯಲ್ಲೂ ಎನ್‌ಡಿಎ ಅಧಿಕಾರಕ್ಕೆ ಬರಲಿದ್ದಾರೆ, ಮೋದಿ ಅವರೇ ಪ್ರಧಾನಿಯಾಗಲಿದ್ದಾರೆ. ಕಳೆದ ಮೂರು ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆದ್ದಿದ್ದಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಈ ಬಾರಿಯ ಒಂದೇ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ” ಎಂಬುದಾಗಿ ಹೇಳಿದರು.

“ಎನ್‌ಡಿಎ ಸರ್ಕಾರವು ಅಧಿಕಾರ ಪೂರ್ಣಗೊಳಿಸುವುದಿಲ್ಲ, ಅಸ್ಥಿರತೆ ಇದೆ ಎಂಬುದಾಗಿ ಪದೇಪದೆ ಹೇಳುತ್ತಿದ್ದಾರೆ. ಆದರೆ, ಅಂತಹ ವಂದತಿ ಹಬ್ಬಿಸುವವರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಈ ಸರ್ಕಾರ ಅಧಿಕಾರ ಪೂರ್ಣಗೊಳಿಸುವ ಜತೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಎನ್‌ಡಿಎ ಅಧಿಕಾರಕ್ಕೆ ಬರಲಿದೆ. ಹಾಗಾಗಿ, ಈಗಿರುವ ಪ್ರತಿಪಕ್ಷಗಳು ಮುಂದೆಯೂ ಪ್ರತಿಪಕ್ಷದಲ್ಲಿಯೇ ಕೂರಲಿವೆ” ಎಂದು ತಿಳಿಸಿದರು.

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 303 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಕ್ಷೇತ್ರಗಳು 240ಕ್ಕೆ ಇಳಿಕೆಯಾದವು. ಆದರೂ, ಬಿಜೆಪಿಯು ಟಿಡಿಪಿ ಹಾಗೂ ಜೆಡಿಯು ಬೆಂಬಲದಿಂದ ಅಧಿಕಾರ ಹಿಡಿದಿದೆ. ಕಾಂಗ್ರೆಸ್‌ ಈ ಬಾರಿ ತನ್ನ ಕ್ಷೇತ್ರಗಳನ್ನು 99ಕ್ಕೆ ಏರಿಕೆ ಮಾಡಿಕೊಂಡಿದೆ. ಇದರಿಂದಾಗಿ ಇಂಡಿಯಾ ಒಕ್ಕೂಟದ ಬಲ ಹೆಚ್ಚಾಗಲಿದೆ.

ಇದನ್ನೂ ಓದಿ: Amit Shah: ಕಾಶ್ಮೀರದಲ್ಲಿ ಒಬ್ಬನೇ ಒಬ್ಬ ಉಗ್ರ ಉಳಿಯಬಾರದು; ಖಡಕ್‌ ಆದೇಶ ಕೊಟ್ಟ ಅಮಿತ್‌ ಶಾ

Continue Reading

ದೇಶ

HD Deve Gowda: ದೆಹಲಿ ಮೆಟ್ರೋದಲ್ಲಿ ಸಂಚರಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

HD Deve Gowda: ಮಾಜಿ ಪ್ರಧಾನಿ, ಜೆಡಿಎಸ್‌ ನಾಯಕ ಎಚ್‌.ಡಿ.ದೇವೇಗೌಡ ಅವರು ಭಾನುವಾರ ದೆಹಲಿ ಮೆಟ್ರೋ ದಲ್ಲಿ ಸಂಚರಿಸಿದರು. ಈ ವೇಳೆ ಮೆಟ್ರೋದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಮಾಹಿತಿ ನೀಡಿದರು. ಸಂಸತ್‌ ಅಧಿವೇಶನದ ಹಿನ್ನಲೆಯಲ್ಲಿ ದೆಹಲಿಯಲ್ಲಿರುವ ದೇವೇಗೌಡ ಅವರು ಶನಿವಾರ ಪ್ರಧಾನಮಂತ್ರಿಗಳ ವಸ್ತು ಸಂಗ್ರಹಾಲಕ್ಕೆ ಭೇಟಿ ನೀಡಿ ಮೆಚ್ಚುಗೆ ಸೂಚಿಸಿದ್ದರು. ಪಿಎಂ ಸಂಗ್ರಹಾಲಯವನ್ನು ಇಷ್ಟು ಸುಸಜ್ಜಿತವಾಗಿ ಮಾಡಿದ್ದಕ್ಕಾಗಿ ಅವರು ನರೇಂದ್ರ ಮೋದಿ ಅವರಿಗೆ ಅಭಿನಂದನೆ ತಿಳಿಸಿದ್ದರು.

VISTARANEWS.COM


on

HD Deve Gowda
Koo

ನವದೆಹಲಿ: ಮಾಜಿ ಪ್ರಧಾನಿ, ಜೆಡಿಎಸ್‌ ನಾಯಕ ಎಚ್‌.ಡಿ.ದೇವೇಗೌಡ (HD Deve Gowda) ಅವರು ಭಾನುವಾರ (ಆಗಸ್ಟ್‌ 4) ದೆಹಲಿ ಮೆಟ್ರೋ (Delhi Metro)ದಲ್ಲಿ ಸಂಚರಿಸಿದರು. ಈ ವೇಳೆ ಮೆಟ್ರೋದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಮಾಹಿತಿ ನೀಡಿದರು. ದೆಹಲಿಯ ಲೋಕ ಕಲ್ಯಾಣ ಮಾರ್ಗದಿಂದ ಎಚ್.ಡಿ.ದೇವೇಗೌಡ ಅವರು ತಮ್ಮ ಪ್ರಯಾಣ ಆರಂಭಿಸಿದರು. ಈ ವೇಳೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ದೆಹಲಿ ಮೆಟ್ರೋ ಸೇವೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಸಂಸತ್‌ ಅಧಿವೇಶನದ ಹಿನ್ನಲೆಯಲ್ಲಿ ದೆಹಲಿಯಲ್ಲಿರುವ ದೇವೇಗೌಡ ಅವರು ಶನಿವಾರ ಪ್ರಧಾನಮಂತ್ರಿಗಳ ವಸ್ತು ಸಂಗ್ರಹಾಲಕ್ಕೆ ಭೇಟಿ ನೀಡಿ ಮೆಚ್ಚುಗೆ ಸೂಚಿಸಿದ್ದರು. ಪಿಎಂ ಸಂಗ್ರಹಾಲಯವನ್ನು ಇಷ್ಟು ಸುಸಜ್ಜಿತವಾಗಿ ಮಾಡಿದ್ದಕ್ಕಾಗಿ ಅವರು ನರೇಂದ್ರ ಮೋದಿ ಅವರಿಗೆ ಅಭಿನಂದನೆ ತಿಳಿಸಿದ್ದರು.

ʼʼನಾನು ದೆಹಲಿಯಲ್ಲಿರುವ ಪ್ರಧಾನಿಮಂತ್ರಿಗಳ ಮ್ಯೂಸಿಯಂ ʼಪಿಎಂ ಸಂಗ್ರಹಾಲಯʼಕ್ಕೆ ಭೇಟಿ ನೀಡಿದೆ. ಇದೊಂದು ಅದ್ಭುತ ಅನುಭವ ನೀಡಿತು. ಇಂತಹದ್ದೊಂದು ಐತಿಹಾಸಿಕ ವಸ್ತು ಸಂಗ್ರಹಾಲಯ ನಿರ್ಮಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅಭಿನಂದನಾರ್ಹರು. ಇದುವರೆಗಿನ ಎಲ್ಲ ಪ್ರಧಾನಿಗಳ ವಿವರ, ಅವರು ಸಲ್ಲಿಸಿರು ಸೇವೆ, ದೇಶಕ್ಕಾಗಿ ಅವರ ಕೊಡುಗೆ ಮುಂತಾದ ವಿವರಗಳು ಇಲ್ಲಿ ಸಿಗುತ್ತದೆʼʼ ಎಂದು ದೇವೇಗೌಡ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಜತೆಗೆ ತಮ್ಮನ್ನು ಮ್ಯೂಸಿಯಂಗೆ ಸ್ವಾಗತಿಸಿದ ಶ್ರೀ ರಾಮ ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಅವರಿಗೂ ಮಾಜಿ ಪ್ರಧಾನಿ ದೇವೇಗೌಡ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ʼʼಮ್ಯೂಸಿಯಂಗೆ ನನ್ನನ್ನು ಸ್ವಾಗತಿಸಿದ ನೃಪೇಂದ್ರ ಮಿಶ್ರಾ ಅವರಿಗೆ ಧನ್ಯವಾದಗಳು. PMOIndia ಯೋಜನೆಯ ಸಾಕಾರಕ್ಕೆ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಅದೇ ರೀತಿ ಮ್ಯೂಸಿಮಂನಲ್ಲಿ ಪ್ರತಿಯೊಂದೂ ವಿವರಗಳನ್ನು, ಮಾಹಿತಿಗಳನ್ನು ನೀಡಿದ ಡಾ. ಎ.ಸೂರ್ಯ ಪ್ರಕಾಶ್‌ ಅವರಿಗೂ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತಿದ್ದೇನೆʼʼ ಎಂದು ಹೇಳಿದ್ದಾರೆ.

ʼʼಮ್ಯೂಸಿಯಂಗೆ ಭೇಟಿ ನೀಡಿದ್ದು ನನಗೆ ನಿಜಕ್ಕೂ ತುಂಬ ಖುಷಿಯ ಅನುಭವ ನೀಡಿತು. ಕರ್ನಾಟಕದ ಕುಗ್ರಾಮವೊಂದರ ಬಡ ಕುಟುಂಬದಲ್ಲಿ ಜನಿಸಿದ ನಾನು ಇಂತಹ ಅದ್ಭುತ ದೇಶವೊಂದಕ್ಕೆ ಪ್ರಧಾನಿಯಾಗಿದ್ದು ಬಹಳ ಹೆಮ್ಮೆಯ ವಿಷಯ. ಇಂತಹ ಅದ್ಭುತ ಮ್ಯೂಸಿಯಂನ ಭಾಗವಾಗುತ್ತೇನೆ ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಪ್ರಜಾಪ್ರಭುತ್ವದ ಶಕ್ತಿಯೇ ಅಂತಹದ್ದು. ಜನರ ಆಶೀರ್ವಾದದಿಂದ ಈ ಕನಸು ನನಸಾಗಿದೆ. ನಾನು ಪ್ರಧಾನಿಯಾಗಿದ್ದಾಗ ದೇಶಕ್ಕಾಗಿ ಶಕ್ತಿಮೀರಿ ಕೆಲಸ ಮಾಡಿದ್ದೇನೆ ಎನ್ನುವ ಬಗ್ಗೆ ತೃಪ್ತಿ ಇದೆ. ಎಲ್ಲರಿಗೂ ಧನ್ಯವಾದಗಳು ಮತ್ತು ಅಭಿನಂದನೆಗಳುʼʼ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇವೇಗೌಡ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಪಿಎಂ ಸಂಗ್ರಹಾಲಯಕ್ಕೆ ಆಗಮಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ʼʼಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಮ್ಯೂಸಿಯಂಗೆ ಭೇಟಿ ನೀಡಿದ್ದಾರೆ ಎನ್ನುವ ವಿಚಾರ ತಿಳಿದು ಬಹಳಷ್ಟು ಸಂತಸವಾಯ್ತುʼʼ ಎಂದು ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿ: HD Devegowda: ಮೋದಿ ಬಜೆಟ್‌ಗೆ ಎಚ್‌.ಡಿ.ದೇವೇಗೌಡರ ಮೆಚ್ಚುಗೆ; ಬೆಂಗಳೂರು ನೀರಿನ ಸಮಸ್ಯೆ ಬಗೆಹರಿಸಲು ಮನವಿ

ಕೆಲವು ದಿನಗಳ ಹಿಂದೆ ವ್ಹೀಲ್‌ ಚೇರ್‌ನಲ್ಲಿಯೇ ತೆರಳಿದ ದೇವೇಗೌಡ ಅವರು ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ದೇವೇಗೌಡರು ತೆರಳಿ ಮೋದಿ ಜತೆ ಮಾತುಕತೆ ನಡೆಸಿದ್ದರು. ದೇವೇಗೌಡ ಅವರನ್ನು ಭೇಟಿಯಾಗಿರುವ ಫೋಟೊಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

Continue Reading

ದೇಶ

Wayanad Landslide: ವಯನಾಡಿಗಾಗಿ ಮಿಡಿಯಿತು ವಿದೇಶಿಗರ ಮನ; ಸಂತ್ರಸ್ತರ ನೆರವಿಗೆ ಧಾವಿಸಿದ ಇಂಗ್ಲೆಂಡ್‌ನ ವಿದ್ಯಾರ್ಥಿನಿಯರು

Wayanad Landslide: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ ಮೃತರ ಸಂಖ್ಯೆ 350 ದಾಟಿದ್ದು, ಇನ್ನೂ ನೂರಾರು ಮಂದಿ ಪತ್ತೆಯಾಗಬೇಕಿದೆ. ಅವರಿಗಾಗಿ ಸತತ 6ನೇ ದಿನ ಹುಡುಕಾಟ ಮುಂದುವರಿದಿದೆ. ಈ ಮಧ್ಯೆ ವಿದೇಶಿ ವಿದ್ಯಾರ್ಥಿಗಳ ಮನಸ್ಸು ವಯನಾಡಿಗಾಗಿ ಮಿಡಿದಿದ್ದು, ಧಾವಿಸಿ ಬಂದಿದ್ದಾರೆ. ಸದಾ ರಕ್ಷಣಾ ಕಾರ್ಯಾಚರಣೆಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ. ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರಾದ ಅಮೇಲಿಯಾ ರೋಕ್‌, ಶಲೆಟ್‌ ಸತರ್ಲಾಂಟ್‌ , ಮಿಲಿಸೆಂಟ್‌ ಕ್ರೂ ವಯನಾಡಿನ ದುರಂತಕ್ಕಾಗಿ ಮಿಡಿದ್ದಾರೆ. ತಮ್ಮಿಂದಾದ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

VISTARANEWS.COM


on

Wayanad Landslide
Koo

ತಿರುವನಂತಪುರಂ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ ಮೃತರ ಸಂಖ್ಯೆ 350 ದಾಟಿದ್ದು, ಇನ್ನೂ ನೂರಾರು ಮಂದಿ ಪತ್ತೆಯಾಗಬೇಕಿದೆ (Wayanad Landslide). ಅವರಿಗಾಗಿ ಸತತ 6ನೇ ದಿನ ಹುಡುಕಾಟ ಮುಂದುವರಿದಿದೆ. ಭೀಕರ ಪ್ರವಾಹಕ್ಕೆ ಎರಡು-ಮೂರು ಗ್ರಾಮಗಳ ಕೊಚ್ಚಿ ಹೋಗಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ಈ ಮಧ್ಯೆ ಇಡೀ ದೇಶದವೇ ವಯನಾಡಿನ ಸಹಾಯಕ್ಕೆ ಧಾವಿಸಿದೆ. ವಿವಿಧ ಭಾಗಗಳ ಜನರು ಸಹಾಯಹಸ್ತ ಚಾಚುತ್ತಿದ್ದಾರೆ. ಈ ಮಧ್ಯೆ ವಿದೇಶಿ ವಿದ್ಯಾರ್ಥಿಗಳ ಮನಸ್ಸು ವಯನಾಡಿಗಾಗಿ ಮಿಡಿದಿದ್ದು, ಧಾವಿಸಿ ಬಂದಿದ್ದಾರೆ. ಸದಾ ರಕ್ಷಣಾ ಕಾರ್ಯಾಚರಣೆಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.

ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರಾದ ಅಮೇಲಿಯಾ ರೋಕ್‌, ಶಲೆಟ್‌ ಸತರ್ಲಾಂಟ್‌ , ಮಿಲಿಸೆಂಟ್‌ ಕ್ರೂ ವಯನಾಡಿನ ದುರಂತಕ್ಕಾಗಿ ಮಿಡಿದ್ದಾರೆ. ತಮ್ಮಿಂದಾದ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ ಇವರು ಇಂಟರ್ನ್‌ಶಿಪ್‌ ಮಾಡಲು ಒಂದು ತಿಂಗಳ ಹಿಂದೆ ಕೇರಳಕ್ಕೆ ಆಗಮಿಸಿದ್ದರು. ಇವರು ಸದ್ಯ ತ್ರಿಶೂರ್‌ನ ಮಿನಲೂರಿನಲ್ಲಿ ಉಳಿದುಕೊಂಡಿದ್ದಾರೆ. ಕೇರಳಕ್ಕೆ ಆಗಮಿಸಿ ಕೆಲವೇ ದಿನಗಳಾಗಿದ್ದರೂ ಇಲ್ಲಿನ ಪ್ರಕೃತಿ, ಜನರು, ಸಂಸ್ಕೃತಿಯನ್ನು ಇಷ್ಟಪಟ್ಟಿರುವುದಾಗಿ ತಿಳಿಸಿರುವ ಇವರು ಇದೀಗ ಇಲ್ಲಿನ ದುಸ್ಥಿತಿ ನೋಡಿ ಮನಸ್ಸು ಒದ್ದಾಡುತ್ತಿದೆ. ಹೀಗಾಗಿ ತಮ್ಮಿಂದಾದ ದಹಾಯ ಮಾಡುವುದಾಗಿ ತಿಳಿಸಿದ್ದಾರೆ.

ʼʼನಾವು ಈ ರಾಜ್ಯವನ್ನು ಪ್ರೀತಿಸುತ್ತೇವೆ. ಇಲ್ಲಿನ ಜೀವನ ರೀತಿಯನ್ನು, ಶಿಕ್ಷಣವನ್ನು, ಸ್ತ್ರೀ ಸಬಲೀಕರಣವನ್ನು, ಪ್ರಕೃತಿಯನ್ನು ಇಷ್ಟಪಡುತ್ತೇವೆ. ಆದ್ದರಿಂದ ವಯನಾಡಿನ ದುಃಖ ನಮ್ಮದೂ ಹೌದುʼʼ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ಇದೀಗ ಈ ವಿದೇಶಿ ವಿದ್ಯಾರ್ಥಿನಿಯರು ಕೇರಳಕ್ಕಾಗಿ, ವಯನಾಡಿಗಾಗಿ ಸ್ಪಂದಿಸುತ್ತಿರುವ ರೀತಿಯನ್ನು ಗಮನಿಸಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರೂ ಈ ನಡೆಯನ್ನು ಶ್ಲಾಘಿಸಿದ್ದಾರೆ. ಈ ಮಾಸಾಂತ್ಯಕ್ಕೆ ಇಂಗ್ಲೆಂಡ್‌ಗೆ ಮರಳಲಿರುವ ಅವರು ಅದುವರೆಗೆ ವಯನಾಡಿನಲ್ಲಿ ಸೇವೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ವಯನಾಡು ಈ ದುರಂತದಿಂದ ಚೇತರಿಸಿಕೊಂಡ ಬಳಿಕ ಮತ್ತೊಮ್ಮೆ ಭೇಟಿ ನೀಡುವುದಾಗಿಯೂ ಅವರು ತಿಳಿಸಿದ್ದಾರೆ.

ಸಂತ್ರಸ್ತರಿಗೆ ತಾತ್ಕಾಲಿಕ ಮನೆ ಒದಗಿಸಲು ಆನ್‌ಲೈನ್‌ ಪೋರ್ಟಲ್‌

ವಯನಾಡು ದುರಂತದಿಂದ ಮನೆ-ಮಠ ಕಳೆದುಕೊಂಡ ಸಂತ್ರಸ್ತರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಒದಗಿಸಲು ವಿದೇಶಗಳಲ್ಲಿ ಇರುವ ಮಲೆಯಾಳಿಗಳು ಮುಂದಾಗಿದ್ದಾರೆ. ಇದಕ್ಕಾಗಿ ಆನ್‌ಲೈನ್‌ ಪೋರ್ಟಲ್‌ ಒಂದನ್ನು ಆರಂಭಿಸಿದ್ದಾರೆ. ʼsupportwayanad.com’ ಹೆಸರಿನ ಈ ಫ್ಲಾಟ್‌ಫಾರಂನಲ್ಲಿ ಮನೆ ಅಗತ್ಯ ಇರುವವರು ಮತ್ತು ಮನೆ ಒದಗಿಸಲು ತಯಾರಿರುವ ದಾನಿಗಳು ಹೆಸರು ನೋಂದಾಯಿಸಬಗುದು ಎಂದು ಮೂಲಗಳು ತಿಳಿಸಿವೆ.

ವಿದೇಶಗಳಲ್ಲಿ ನೆಲೆಸಿರುವ ಸದ್ಯ ಖಾಲಿ ಇರುವ ಮನೆಗಳನ್ನು ಗುರುತಿಸುವ ಉದ್ದೇಶದಿಂದ ಈ ಫ್ಲಾಟ್‌ಫಾರಂ ಆರಂಭಿಸಲಾಯಿತಾದರೂ ಈಗ ತಮ್ಮ ಮನೆಯಲ್ಲಿ ಆಶ್ರಯ ನೀಡಲು ತಯಾರಿರುವವರೂ ಇದನ್ನು ಬಳಸಬಹುದಾಗಿದೆ. ಕ್ರಮೇಣ ಸರ್ಕಾರದ ಸೌಲಭ್ಯಗಳನ್ನೂ ಇದರಲ್ಲಿ ಸೇರಿಸಲು ಉದ್ದೇಶಿಸಲಾಗಿದೆ. ʼʼಈ ಪೋರ್ಟಲ್‌ ಮೂಲಕ ಖಾಲಿ ಮನೆಗಳನ್ನು ನೋಂದಾಯಿಸಬಹುದು. ಈ ಮೂಲಕ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಬಹುದುʼʼ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Wayanad Landslide: ವಯನಾಡು ಸಂತ್ರಸ್ತರಿಗೆ ಮಿಡಿದ ಕರುನಾಡು; ಸರ್ಕಾರದ ಜತೆಗೆ ಜನರಿಂದಲೂ ನೆರವು!

Continue Reading

ವೈರಲ್ ನ್ಯೂಸ್

Abu Salem: ಮುಂಬೈ ಸ್ಫೋಟದ ಪ್ರಮುಖ ಆರೋಪಿ, ಭೂಗತ ಪಾತಕಿ ಅಬು ಸಲೇಂನನ್ನು ಮನ್ಮಾಡ್‌ಗೆ ರೈಲಿನಲ್ಲಿ ಕರೆತಂದ ಪೊಲೀಸರು

Abu Salem: 1993ರ ಮುಂಬೈ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ಭೂಗತ ಪಾತಕಿ ಅಬು ಸಲೇಂ ನನ್ನು ಶನಿವಾರ ದೆಹಲಿಯಿಂದ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮನ್ಮಾಡ್‌ಗೆ ರೈಲಿನಲ್ಲಿ ಬಿಗಿ ಭದ್ರತೆಯಲ್ಲಿ ಕರೆತರಲಾಯಿತು. ಬಳಿಕ ಪೊಲೀಸ್ ವ್ಯಾನ್‌ನಲ್ಲಿ ಆತನನ್ನು ನಾಸಿಕ್ ರಸ್ತೆಯ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಮನ್ಮಾಡ್ ರೈಲ್ವೆ ನಿಲ್ದಾಣಕ್ಕೆ ಅಬು ಸಲೇಂನನ್ನು ಕರೆದುಕೊಂಡು ಬರುವ ವಿಚಾರವನ್ನು ಅತ್ಯಂತ ಗೌಪ್ಯವಾಗಿ ಇಡಲಾಗಿತ್ತು.

VISTARANEWS.COM


on

Abu Salem
Koo

ಮುಂಬೈ: 1993ರ ಮುಂಬೈ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ಭೂಗತ ಪಾತಕಿ ಅಬು ಸಲೇಂ (Abu Salem)ನನ್ನು ಶನಿವಾರ ದೆಹಲಿಯಿಂದ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮನ್ಮಾಡ್‌ (Manmad)ಗೆ ರೈಲಿನಲ್ಲಿ ಬಿಗಿ ಭದ್ರತೆಯಲ್ಲಿ ಕರೆತರಲಾಯಿತು. ಬಳಿಕ ಪೊಲೀಸ್ ವ್ಯಾನ್‌ನಲ್ಲಿ ಆತನನ್ನು ನಾಸಿಕ್ ರಸ್ತೆಯ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯದಲ್ಲಿ ವೈರಲ್‌ ಆಗಿದೆ (Viral Video).

ಮನ್ಮಾಡ್ ರೈಲ್ವೆ ನಿಲ್ದಾಣಕ್ಕೆ ಅಬು ಸಲೇಂನನ್ನು ಕರೆದುಕೊಂಡು ಬರುವ ವಿಚಾರವನ್ನು ಅತ್ಯಂತ ಗೌಪ್ಯವಾಗಿ ಇಡಲಾಗಿತ್ತು. ಆದರೆ ನವದೆಹಲಿ-ಬೆಂಗಳೂರು-ಕರ್ನಾಟಕ ಎಕ್ಸ್‌ಪ್ರೆಸ್ ರೈಲಿನಿಂದ ಮನ್ಮಾಡ್‌ಗೆ ಸ್ಟೇಷನ್‌ನಲ್ಲಿ ಅಬು ಸಲೇಂ ಇಳಿದಾಗ ಜನ ಸಮೂಹವೇ ನೆರೆದಿತ್ತು.

ಬಾಂಬ್ ಸ್ಫೋಟದಲ್ಲಿ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಸಲೇಂ ಕಳೆದ ತಿಂಗಳು ‘ಸುರಕ್ಷತಾ ಕಾರಣಗಳನ್ನು’ ಉಲ್ಲೇಖಿಸಿ ತಲೋಜಾ ಕೇಂದ್ರ ಕಾರಾಗೃಹದಿಂದ ನಾಸಿಕ್ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸುವುದನ್ನು ತಡೆಯಲು ಪ್ರಯತ್ನಿಸಿದ್ದ. ಈ ಬಗ್ಗೆ ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಆರಂಭಿಕ ಮೇಲ್ಮನವಿಯನ್ನು ಸೆಷನ್ಸ್ ನ್ಯಾಯಾಲಯವು ಜೂನ್ 25ರಂದು ನಿರಾಕರಿಸಿತ್ತು. ಆದರೆ ನ್ಯಾಯಾಲಯವು ಜುಲೈ 3ರವರೆಗೆ ವರ್ಗಾವಣೆಯನ್ನು ವಿಳಂಬಗೊಳಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿತ್ತು.

ಪೋರ್ಚುಗಲ್‌ನಲ್ಲಿ ಆಶ್ರಯ ಪಡೆದಿದ್ದ ಪಾತಕಿ

ಮುಂಬೈ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿರುವ ಗ್ಯಾಂಗ್‌ಸ್ಟರ್‌ ಅಬು ಸಲೇಂ ಪೋರ್ಚುಗಲ್‌ನಲ್ಲಿ ಆಶ್ರಯ ಪಡೆದಿದ್ದ. ಆತನನ್ನು ಅಲ್ಲಿಂದ ಗಡಿಪಾರು ಮಾಡಿ ತರಲು ಕೇಂದ್ರ ಸರ್ಕಾರ ಹರಸಾಹಸವನ್ನೇ ನಡೆಸಿತ್ತು. ಕೊನೆಗೆ ಪೋರ್ಚುಗಲ್‌ ಸರ್ಕಾರದೊಂದಿಗಿನ ಸಂಧಾನದಲ್ಲಿ ಆರೋಪಿಗೆ 25 ವರ್ಷಕ್ಕಿಂತ ಹೆಚ್ಚು ಅವಧಿಯ ಶಿಕ್ಷೆ ವಿಧಿಸುವುದಿಲ್ಲ, 25 ವರ್ಷದ ಶಿಕ್ಷೆಯ ಬಳಿಕ ಬಂಧಮುಕ್ತಗೊಳಿಸಲಾಗುವುದು ಎಂದು ವಾಗ್ದಾನ ನೀಡಲಾಗಿತ್ತು. ಜತೆಗೆ ಆತನಿಗೆ ಮರಣದಂಡನೆ ಶಿಕ್ಷೆ ನೀಡುವುದಿಲ್ಲ ಎಂದು ಭರವಸೆ ನೀಡಲಾಗಿತ್ತು. ಹೀಗಾಗಿ 2005ರ ನವೆಂಬರ್‌ 5ರಂದು ಅಬು ಸಲೇಂನನ್ನು ಭಾರತಕ್ಕೆ ಕರೆ ತರಲಾಗಿತ್ತು. ಈ ವಾಗ್ದಾನದ ಅವಧಿ 2030ರವರೆಗೆ ಜಾರಿಯಲ್ಲಿರುತ್ತದೆ.

ಈ ನಡುವೆ 1995ರಲ್ಲಿ ನಡೆದ ಮುಂಬೈ ಮೂಲದ ಬಿಲ್ಡರ್‌ ಪ್ರದೀಪ್‌ ಜೈನ್‌ ಅವರ ಕೊಲೆಗೆ ಸಂಬಂಧಿಸಿ ಟಾಡಾ ಕೋರ್ಟ್‌ 2005ರ ಫೆಬ್ರವರಿ 25ರಂದು ತೀರ್ಪು ನೀಡಿದೆ. ಇದರಲ್ಲಿ ಸಲೇಂ ಮತ್ತು ಆತನ ಚಾಲಕ ಮೆಹದಿ ಹಸನ್‌ಗೆ ಜೀವನಪೂರ್ತಿ ಜೈಲು ಶಿಕ್ಷೆ ವಿಧಿಸಲಾಗಿದೆ.

ಇದನ್ನೂ ಓದಿ: ಅಬು ಸಲೇಂನನ್ನು ಜೀವನಪೂರ್ತಿ ಜೈಲಲ್ಲಿ ಇರಿಸುವಂತಿಲ್ಲ, 25 ವರ್ಷದ ಬಳಿಕ ಬಿಡುಗಡೆ ಮಾಡಲೇಬೇಕೆಂದ ಸುಪ್ರೀಂ

ಇದನ್ನು ಪ್ರಶ್ನಿಸಿ ಅಬು ಸಲೇಂ ಎರಡು ವರ್ಷಗಳ ಹಿಂದೆ ಸುಪ್ರೀಂಕೋರ್ಟ್‌ ಮೊರೆ ಹೊಕ್ಕಿದ್ದ. ಇದನ್ನು ಪರಿಗಣಿಸಿದ ಕೋರ್ಟ್‌ ಮಹತ್ವದ ತೀರ್ಪನ್ನು ನೀಡಿ, ಕೇಂದ್ರ ಸರಕಾರವು ಪೋರ್ಚುಗಲ್‌ ಸರಕಾರಕ್ಕೆ ನೀಡಿರುವ ವಾಗ್ದಾನವನ್ನು ಮುರಿಯುವಂತಿಲ್ಲ. ಶಿಕ್ಷೆಯ ಅವಧಿ ಪೂರ್ಣಗೊಳ್ಳುತ್ತಿದ್ದಂತೆಯೇ ಬಿಡುಗಡೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಕೈಗೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ವಚನ ಬದ್ಧತೆ ಮತ್ತು ಸಂವಿಧಾನದ 72ನೇ ವಿಧಿಯ ಅಡಿ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಸರಕಾರ ರಾಷ್ಟ್ರಪತಿಗಳ ಸಲಹೆಯನ್ನು ಕೋರಬಹುದು ಎಂದು ನ್ಯಾಯಮೂರ್ತಿಗಳಾದ ಎಸ್‌.ಕೆ.ಕೌಲ್‌ ಮತ್ತು ಎಂ.ಎಂ.ಸುಂದರೇಶ್‌ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿತ್ತು.

Continue Reading
Advertisement
Filmfare South 2024 mollywood tollywood 69th Filmfare Awards
South Cinema20 mins ago

Filmfare South 2024: ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್; ತೆಲುಗು, ತಮಿಳು ಹಾಗೂ ಮಲಯಾಳಂ ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ

Amith Shah
ದೇಶ27 mins ago

Amit Shah: 2029ರ ಚುನಾವಣೆಯಲ್ಲೂ ಬಿಜೆಪಿಗೆ ಗೆಲುವು, ಕಾಂಗ್ರೆಸ್‌ ಪ್ರತಿಪಕ್ಷದಲ್ಲೇ; ಅಮಿತ್‌ ಶಾ ಭವಿಷ್ಯ

HD Deve Gowda
ದೇಶ28 mins ago

HD Deve Gowda: ದೆಹಲಿ ಮೆಟ್ರೋದಲ್ಲಿ ಸಂಚರಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

ಕ್ರೀಡೆ32 mins ago

Paris Olympics: ಶೂಟೌಟ್​ನಲ್ಲಿ ಗೆದ್ದು ಸೆಮಿಗೆ ಲಗ್ಗೆಯಿಟ್ಟ ಭಾರತ; ಒಲಿಂಪಿಕ್ಸ್​ನಿಂದ ಗ್ರೇಟ್​ ಬ್ರಿಟನ್ ಕಿಕ್​ ಔಟ್​

ಕರ್ನಾಟಕ58 mins ago

Officer Dismissed: ಸುಳ್ಳು ದಾಖಲೆ ನೀಡಿ ನೇಮಕ; ಸಹಾಯಕ ತೋಟಗಾರಿಕೆ ಅಧಿಕಾರಿ ವಜಾ

Dhruva Sarja martin trailer Out
ಸ್ಯಾಂಡಲ್ ವುಡ್60 mins ago

Dhruva Sarja : ʻಮಾರ್ಟಿನ್’ ಟ್ರೈಲರ್ ಬಿಡುಗಡೆ: ಧ್ರುವ ಸರ್ಜಾ ಅಭಿಮಾನಿಗಳ ಅಬ್ಬರ ಬಲು ಜೋರು!

Drowned in water
ಬೆಳಗಾವಿ1 hour ago

Drowned in water : ಮಾರ್ಕಂಡೇಯ ನದಿಗೆ ಆಯತಪ್ಪಿ ಬಿದ್ದು ಕಣ್ಮರೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

PSI Parashuram Case
ಕರ್ನಾಟಕ2 hours ago

PSI Parashuram Case: ಸರ್ಕಾರಿ ಯೋಜನೆ ಹಣ ಬಿಡುಗಡೆಗೂ ಕಮಿಷನ್‌ಗೆ ಬೇಡಿಕೆ; ಎ2 ಪಂಪನಗೌಡ ವಿರುದ್ಧ ಮತ್ತೊಂದು ಆರೋಪ

Wayanad Landslide
ದೇಶ2 hours ago

Wayanad Landslide: ವಯನಾಡಿಗಾಗಿ ಮಿಡಿಯಿತು ವಿದೇಶಿಗರ ಮನ; ಸಂತ್ರಸ್ತರ ನೆರವಿಗೆ ಧಾವಿಸಿದ ಇಂಗ್ಲೆಂಡ್‌ನ ವಿದ್ಯಾರ್ಥಿನಿಯರು

Vastu Tips
ಧಾರ್ಮಿಕ2 hours ago

Vastu Tips: ಮನೆ ಸಂತೋಷದ ತಾಣವಾಗಬೇಕೆಂದರೆ ಮಲಗುವ ಕೋಣೆ ಹೀಗಿರಲಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ2 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 day ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ5 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ5 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ6 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ6 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌