WPL 2023 : ಉದ್ಘಾಟನಾ ಪಂದ್ಯದಲ್ಲಿ ಮುಂಬಯಿ ತಂಡಕ್ಕೆ 143 ರನ್​ ಭರ್ಜರಿ ವಿಜಯ - Vistara News

ಕ್ರಿಕೆಟ್

WPL 2023 : ಉದ್ಘಾಟನಾ ಪಂದ್ಯದಲ್ಲಿ ಮುಂಬಯಿ ತಂಡಕ್ಕೆ 143 ರನ್​ ಭರ್ಜರಿ ವಿಜಯ

ಅರ್ಧ ಶತಕ ಬಾರಿಸಿದ ಹರ್ಮನ್​ಪ್ರೀತ್ ಕೌರ್ ಹಾಗೂ 4 ವಿಕೆಟ್ ಪಡೆದ ಸೈಕಾ ಇಶಾಖ್​ ಗೆಲುವಿನ ರೂವಾರಿಗಳೆನಿಸಿಕೊಂಡರು.

VISTARANEWS.COM


on

In the opening match, Mumbai won by 143 runs
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಸ್ಫೋಟಕ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಮುಂಬಯಿ ಇಂಡಿಯನ್ಸ್​ ತಂಡ ಮಹಿಳೆಯರ ಪ್ರಿಮಿಯರ್​ ಲೀಗ್​ನ (WPL 2023) ಉದ್ಘಾಟನಾ ಪಂದ್ಯದಲ್ಲಿ ಗುಜರಾತ್​ ಜಯಂಟ್ಸ್​ ವಿರುದ್ಧ 143 ರನ್​ಗಳ ಭರ್ಜರಿ ವಿಜಯ ದಾಖಲಿಸಿದೆ. ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಮುಂಬಯಿ ತಂಡ 207 ರನ್​ ಪೇರಿಸಿದರೆ ಗುರಿ ಬೆನ್ನಟ್ಟಿದ ಗುಜರಾತ್​ ಟೈಟನ್ಸ್​ 15.1 ಓವರ್​ಗಳಲ್ಲಿ 64 ರನ್​ಗಳಿಗೆ 9 ವಿಕೆಟ್​ ಕಳೆದುಕೊಂಡಿತು. ಗುಜರಾತ್​ ನಾಯಕಿ ಬೆತ್​ಮೂನಿ ಗಾಯದಿಂದಾಗಿ ಬ್ಯಾಟಿಂಗ್​ ಮುಂದುವರಿಸಲಿಲ್ಲ. ಈ ಮೂಲಕ ಮೊದಲ ಪಂದ್ಯದಲ್ಲಿಯೇ ಮುಂಬಯಿ ತಂಡ ದಾಖಲೆಯ ವಿಜಯ ತನ್ನದಾಗಿಸಿಕೊಂಡಿತು.

ಟಾಸ್​ ಸೋತು ಬ್ಯಾಟಿಂಗ್​ಗೆ ಆಹ್ವಾನ ಪಡೆದರೂ ಸ್ಥಳೀಯ ಅಭಿಮಾನಿಗಳ ಬೆಂಬಲದೊಂದಿಗೆ ಆಡಿದ ಮುಂಬಯಿ ಇಂಡಿಯನ್ಸ್ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿತು. ನಾಯಕಿ ಹರ್ಮನ್​ಪ್ರೀತ್​ ಕೌರ್​ (66 ರನ್​, 30 ಎಸೆತ, 14 ಫೋರ್​) ಅವರ ಸ್ಫೋಟಕ ಅರ್ಧ ಶತಕ ಹಾಗೂ ಆರಂಭಿಕ ಬ್ಯಾಟರ್​ ಹೇಲಿ ಮ್ಯಾಥ್ಯೂಸ್​ (47) ಹಾಗೂ ಅಮೇಲಿಯಾ ಕೆರ್​ (45) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಎದುರಾಳಿ ತಂಡಕ್ಕೆ 208 ರನ್​ಗಳ ಗುರಿಯನ್ನು ಒಡ್ಡಿತು.

ಮಹಿಳೆಯ ಪ್ರೀಮಿಯರ್​ ಲೀಗ್​ ಟ್ವೀಟ್​ ಇಲ್ಲಿದೆ

ದೊಡ್ಡ ಮೊತ್ತದ ರನ್​ ಪೇರಿಸಿದ ವಿಶ್ವಾಸದಲ್ಲಿ ಬೌಲಿಂಗ್ ಮಾಡಿದ ಮುಂಬಯಿ ಇಂಡಿಯನ್ಸ್​ ಗುಜರಾತ್​ ಜಯಂಟ್ಸ್ ತಂಡದ ವಿಕೆಟ್​ಗಳನ್ನು ಸತತವಾಗಿ ಉರುಳಿಸಿದರು. 12 ರನ್​ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಗುಜರಾತ್​, 49 ರನ್​ಗಳಿಗೆ 8 ವಿಕೆಟ್​ ನಷ್ಟ ಮಾಡಿಕೊಂಡಿತು. ದಯಾಲನ್​ ಹೇಮಲತಾ (29) ಏಕಾಂಗಿ ಹೋರಾಟ ನಡೆಸಿದರು.

ಮುಂಬಯಿ ಬೌಲರ್​ ಸೈಕಾ ಇಶಾಖ್​ (4 ವಿಕೆಟ್​), ನ್ಯಾಟ್​ ಸ್ಕೀವರ್​ (2 ವಿಕೆಟ್​) ಅಮೇಲಿಯಾ ಕೆರ್​ (2 ವಿಕೆಟ್​) ಎದುರಾಳಿ ಬ್ಯಾಟರ್​ಗಳನ್ನು ಸತತವಾಗಿ ಪೆವಿಲಿಯನ್​ಗೆ ಅಟ್ಟಿ ತಂಡಕ್ಕೆ ದೊಡ್ಡ ಮೊತ್ತದ ಜಯ ತಂದುಕೊಡುವಲ್ಲಿ ಪ್ರಧಾನ ಪಾತ್ರ ವಹಿಸಿದರು.

ಮುಂಬಯಿ ಬ್ಯಾಟರ್​ಗಳ ಅಬ್ಬರದ ಆಟ

ಟಾಸ್​ ಗೆದ್ದ ಗುಜರಾತ್ ತಂಡದ ನಾಯಕಿ ಬೆತ್​ ಮೂನಿ ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವ ಯೋಜನೆ ರೂಪಿಸಿದ್ದರೂ ಅದು ಯಶಸ್ಸು ಕಾಣಲಿಲ್ಲ. ಆರಂಭಿಕ ಬ್ಯಾಟರ್​ ಹೇಲಿ ಮ್ಯಾಥ್ಯೂಸ್​ ಭರ್ಜರಿ ಆರಂಭ ತಂದುಕೊಟ್ಟರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಲು ಇಳಿದ ನ್ಯಾಟ್​ ಸ್ಕೀವರ್​ ಬ್ರಂಟ್​ (23) ರನ್​ ಗಳಿಕೆಯನ್ನು ಮುಂದುವರಿಸಿದರು. ಏತನ್ಮಧ್ಯೆ, ಆರಂಭಿಕ ಬ್ಯಾಟರ್​ ಯಸ್ತಿಕಾ ಭಾಟಿಯಾ 1 ರನ್​ಗೆ ಔಟಾಗಿ ನಿರಾಸೆ ಮೂಡಿಸಿದರು.

ಇದನ್ನೂ ಓದಿ : WPL 2023 : ಹರ್ಮನ್​ಪ್ರೀತ್​ ಕೌರ್​ ಸ್ಫೋಟಕ ಅರ್ಧ ಶತಕ, ಗುಜರಾತ್​ ತಂಡಕ್ಕೆ 208 ರನ್​ ಗೆಲುವಿನ ಗುರಿ

ಮೂರು ವಿಕೆಟ್ ಉರುಳಿದ ಬಳಿಕ ಮುಂಬಯಿ ತಂಡ ಬ್ಯಾಟಿಂಗ್​ನಲ್ಲಿ ಅಬ್ಬರಿಸಿತು. ಹರ್ಮನ್​ಪ್ರಿತ್ ಕೌರ್​ ಹಾಗೂ ಅಮೇಲಿಯಾ ಕೆರ್​ವಿಸ್ಫೋಟಕ ಬ್ಯಾಟಿಂಗ್ ನಡೆಸಿದರು. ಈ ಜೋಡಿ ನಾಲ್ಕನೇ ವಿಕೆಟ್​ಗೆ 89 ರನ್​ ಬಾರಿಸಿತು. ಅದರಲ್ಲೂ ಹರ್ಮನ್​ಪ್ರೀತ್​ ಕೌರ್​ ಅಬ್ಬರಿಸಿದರು. ಅವರು ಸತತ ಏಳು ಸೇರಿದಂತೆ ಒಟ್ಟು 14 ಫೋರ್​ ಬಾರಿಸಿ ಎದುರಾಳಿ ತಂಡಕ್ಕೆ ಆಘಾತ ಉಂಟು ಮಾಡಿದರು. ಕೊನೆಯಲ್ಲಿ ಪೂಜಾ ವಸ್ತ್ತಾಕರ್​ 15 ರನ್​ಗಳ ಕೊಡುಗೆ ಕೊಟ್ಟರು.

ಗುಜರಾತ್​ ತಂಡದ ಪರ ಸ್ನೇಹಾ ರಾಣಾ 2 ವಿಕೆಟ್ ಪಡೆದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

Nataša Stanković: ಹಾರ್ದಿಕ್ ಪಾಂಡ್ಯ ಜತೆ ವಿಚ್ಛೇದನ?; ಅನುಮಾನಕ್ಕೆ ತೆರೆ ಎಳೆದ ಪತ್ನಿ ನತಾಶಾ

Nataša Stanković: ನತಾಶಾ ಅವರು ಪಾಂಡ್ಯ ಜತೆಗಿನ ಮದುವೆಯ ಹಲವು ಸುಂದರ ಫೋಟೊಗಳನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡು ನಮ್ಮ ಮಧ್ಯೆ ಯಾವುದೇ ಮನಸ್ತಾಪವಿಲ್ಲ ಎನ್ನುವಂತೆ ಎಲ್ಲ ಅನುಮಾನಕ್ಕೆ ತೆರೆ ಎಳೆದಿದ್ದಾರೆ.

VISTARANEWS.COM


on

Nataša Stanković
Koo

ಮುಂಬಯಿ: ಹಾರ್ದಿಕ್ ಪಾಂಡ್ಯ(Hardik Pandya) ಮತ್ತು ನತಾಶಾ ಸ್ಟಾನ್‌ಕೋವಿಕ್‌(Nataša Stanković) ಅವರ ವಿವಾಹ ಮುರಿದು ಬಿದ್ದಿದೆಯೇ?, ಈ ಜೋಡಿ ವಿಚ್ಛೇದನಕ್ಕೆ ಪಡೆಯಲಿದೆಯೇ? ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳ ಹಿಂದೆ ಭಾರಿ ಚರ್ಚೆಯಾಗುತ್ತಿತ್ತು. ಇದರ ಮಧ್ಯ ಈ ಜೋಡಿಯ ಸಾಮಾಜಿಕ ಜಾಲತಾಣಗಳ ಒಂದೊಂದು ಪೋಸ್ಟ್​ಗಳು ಕೂಡ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಆದರೆ, ಇದೀಗ ಈ ಜೋಡಿಯ ಮಧ್ಯೆ ಯಾವುದೇ ಬಿರುಕು ಮೂಡಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ವಿಚ್ಛೇದನದ ಸುದ್ದಿಯ ನಡುವೆ, ನತಾಶಾ ಮೊದಲ ಬಾರಿಗೆ ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದರು. ಬಾಲಿವುಡ್ ಉದಯೋನ್ಮುಖ ನಟಿ ದಿಶಾ ಪಟಾನಿ ಅವರ ಬಾಯ್​ಫ್ರೆಂಡ್​ ಎಂದು ಹೇಳಿಕೊಳ್ಳಲಾಗುತ್ತಿರುವ ವ್ಯಕ್ತಿಯ ಜತೆ ಕಾಣಿಸಿಕೊಂಡಿದ್ದರು. ಈ ವೇಳೆ ನತಾಶಗೆ ಪಾಪರಾಜಿಗಳು ಪಾಂಡ್ಯ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ನತಾಶ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದರು.

ಇದಾಗ ಬಳಿಕ ನತಾಶಾ ಸ್ಟಾನ್‌ಕೋವಿಕ್‌ ಅವರು ಯೇಸುವಿನ ಚಿತ್ರವನ್ನು ಹಂಚಿಕೊಂಡಿದ್ದರು. ಯೇಸು ತನ್ನ ಜಾಡನ್ನು ಹಿಂಬಾಲಿಸಿದಾಗ ಕುರಿಮರಿ ಮುಂದಾಳತ್ವ ವಹಿಸುತ್ತಿರುವ ಫೋಟೊ ಇದಾಗಿತ್ತು. ಈ ಫೋಟೊವನ್ನು ಕಂಡಾಗ ಈ ಜೋಡಿ ಶೀಘ್ರದಲ್ಲೇ ದೂರವಾಗುವುದು ಖಚಿತ ಎನ್ನುವಂತಿತ್ತು. ಅಲ್ಲದೆ ವಿಚ್ಛೇದನದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯಲ್ಲಿ ಶೇ. 70 ಪ್ರತಿಶತವನ್ನು ನತಾಶಾಗೆ ನೀಡಬೇಕಾಗಬಹುದು ಎಂದು ವರದಿಯಾಗಿತ್ತು. ಈ ಎಲ್ಲ ಅನುಮಾನಗಳಿಗೆ ಇದೀಗ ತೆರೆಬಿದ್ದಂತಿದೆ. ಹೌದು, ನತಾಶಾ ಅವರು ಪಾಂಡ್ಯ ಜತೆಗಿನ ಮದುವೆಯ ಹಲವು ಸುಂದರ ಫೋಟೊಗಳನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡು ನಮ್ಮ ಮಧ್ಯೆ ಯಾವುದೇ ಮನಸ್ತಾಪವಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ Hardik Pandya: ಕೌಟುಂಬಿಕ ಸಮಸ್ಯೆ ಬದಿಗೊತ್ತಿ ಭಾರತ ತಂಡದ ಯಶಸ್ಸಿಗಾಗಿ ಕ್ರಿಕೆಟ್​ ಅಭ್ಯಾಸ ಆರಂಭಿಸಿದ ಹಾರ್ದಿಕ್​ ಪಾಂಡ್ಯ

ಪ್ರಚಾರಕ್ಕಾಗಿ ಮಾಡಿದ್ದೇ?


ಕೆಲ ಮೂಲಗಳ ಪ್ರಕಾರ ವಿಚ್ಚೇದನದ ಸುದ್ದಿ ಪಿಆರ್‌ ತಂಡ ಮಾಡಿದ ಪಬ್ಲಿಕ್‌ ಸ್ಟಂಟ್‌ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ನತಾಶ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪಾಂಡ್ಯ ಜತೆಗಿನ ಫೋಟೊಗಳನ್ನು ಡಿಲೀಟ್​ ಮಾಡಿ ಈಗ ಹಳೆಯ ಫೋಟೋಗಳನ್ನು ರೀಸ್ಟೋರ್‌ ಮಾಡುತ್ತಿರುವುದಾಗಿ ತಿಳಿದುಬಂದಿದೆ.

ಹಾರ್ದಿಕ್‌ ಮತ್ತು ನತಾಶಾ ಕಳೆದ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು. ಮದುವೆಗೂ ಮುನ್ನವೇ ನತಾಶಾ ಅವರು ಗರ್ಭಿಣಿ ಆಗಿದ್ದರು. ಈ ಜೋಡಿಗೆ ಒಬ್ಬ ಪುತ್ರನಿದ್ದಾನೆ. ಈತನ ಹೆಸರು ಅಗಸ್ತ್ಯ. ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇವರ ವಿವಾಹ ಸಮಾರಂಭದಲ್ಲಿ ಕೊಹ್ಲಿ-ಅನುಷ್ಕಾ, ರಾಹುಲ್‌-ಅಥಿಯಾ, ರಾಕಿಣಗ್​ ಸ್ಟಾರ್ ಯಶ್​ ಸೇರಿ ಹಲವು ಗಣ್ಯರೂ ಭಾಗಿಯಾಗಿದ್ದರು. ಪುನರ್‌ ವಿವಾಹವಾಗಿದ್ದ ಫೋಟೊವನ್ನೇ ಈಗ ನತಾಶ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವುದು.

Continue Reading

ಪ್ರಮುಖ ಸುದ್ದಿ

Team India : ಈ ಕೆಲಸ ಇಷ್ಟವಿದೆ; ಟೀಮ್ ಇಂಡಿಯಾ ಕೋಚ್​ ಹುದ್ದೆಯ ಬಗ್ಗೆ ಮೊದಲ ಹೇಳಿಕೆ ನೀಡಿದ ಗೌತಮ್ ಗಂಭೀರ್​

Team India: ಅಬುಧಾಬಿಯ ಮೆಡಿಯೋರ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಂಭೀರ್, ಇತ್ತೀಚೆಗೆ ಕೆಕೆಆರ್​ ತಂಡಕ್ಕೆ ಮೂರನೇ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಮಾರ್ಗದರ್ಶನ ನೀಡಿದ ಬಗ್ಗೆ ಮಾತನಾಡಿದರು. ಅವರು ಯುವ ಕ್ರೀಡಾ ಉತ್ಸಾಹಿಗಳೊಂದಿಗೆ ಮಾತುಕತೆ ನಡೆಸಿದರು. ಭಾರತೀಯ ಕ್ರಿಕೆಟ್ ಬಗ್ಗೆ ತಮ್ಮ ಆಕಾಂಕ್ಷೆಗಳು ಮತ್ತು ದೃಷ್ಟಿಕೋನವನ್ನು ಹಂಚಿಕೊಂಡರು. ಈ ವೇಳೆ ಅವರು ಭಾರತ ತಂಡದ ಕೋಚ್ ಆಗುವ ಬಗ್ಗೆಯೂ ಮಾತನಾಡಿದ್ದಾರೆ.

VISTARANEWS.COM


on

Team India
Koo

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಮುಂದಿನ ಕೋಚ್ ಯಾರು ಆಗುತ್ತಾರೆ ಎಂಬ ಕೌತುಕದ ನಡುವೆಯೂ ಗೌತಮ್ ಗಂಭೀರ್ ಅವರ ಹೆಸರು ಮೊದಲಾಗಿ ಕೇಳಿ ಬರುತ್ತಿದೆ. ಆದರೆ, ಅವರಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಹಲವಾರು ದಿನಗಳಿಂದ ಇದೇ ಊಹಾಪೋಹ ನಡೆಯುತ್ತಿದೆ. ಏತನ್ಮಧ್ಯೆ, ಭಾರತದ ಮಾಜಿ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಅವರು ಭಾರತೀಯ ರಾಷ್ಟ್ರೀಯ ಪುರುಷರ ಕ್ರಿಕೆಟ್ ತಂಡಕ್ಕೆ ತರಬೇತುದಾರರಾಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ, ನನ್ನ ವೃತ್ತಿಜೀವನದ ಅತ್ಯುನ್ನತ ಗೌರವ ಎಂಬದಾಗಿಯೂ ಹೇಳಿದ್ದಾರೆ.

ಅಬುಧಾಬಿಯ ಮೆಡಿಯೋರ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಂಭೀರ್, ಇತ್ತೀಚೆಗೆ ಕೆಕೆಆರ್​ ತಂಡಕ್ಕೆ ಮೂರನೇ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಮಾರ್ಗದರ್ಶನ ನೀಡಿದ ಬಗ್ಗೆ ಮಾತನಾಡಿದರು. ಅವರು ಯುವ ಕ್ರೀಡಾ ಉತ್ಸಾಹಿಗಳೊಂದಿಗೆ ಮಾತುಕತೆ ನಡೆಸಿದರು. ಭಾರತೀಯ ಕ್ರಿಕೆಟ್ ಬಗ್ಗೆ ತಮ್ಮ ಆಕಾಂಕ್ಷೆಗಳು ಮತ್ತು ದೃಷ್ಟಿಕೋನವನ್ನು ಹಂಚಿಕೊಂಡರು. ಈ ವೇಳೆ ಅವರು ಭಾರತ ತಂಡದ ಕೋಚ್ ಆಗುವ ಬಗ್ಗೆಯೂ ಮಾತನಾಡಿದ್ದಾರೆ.

ಭಾರತ ಹಿರಿಯರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಬದಲಿಗೆ ಗಂಭೀರ್ ಅವರನ್ನು ನೇಮಕ ಮಾಡಲಾಗುತ್ತಿದೆ ಎಂಬ ಸುದ್ದಿಗಳಿವೆ. ಐಪಿಎಲ್ ಫ್ರಾಂಚೈಸಿ ನೈಟ್ ರೈಡರ್ಸ್​ಗೆ ಇತ್ತೀಚಿನ ಬದ್ಧತೆಯ ಹೊರತಾಗಿಯೂ ವಿಶ್ವಕಪ್ ವಿಜೇತ ಮಾಜಿ ಆರಂಭಿಕ ಆಟಗಾರ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆ. ದ್ರಾವಿಡ್ ಅವರ ಅಧಿಕಾರಾವಧಿ ಜೂನ್ ನಲ್ಲಿ ಕೊನೆಗೊಳ್ಳಲಿರುವುದರಿಂದ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಉನ್ನತ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನವಾಗಿತ್ತು.

ನಾನು ಭಾರತ ತಂಡಕ್ಕೆ ತರಬೇತುದಾರನಾಗಲು ಇಷ್ಟಪಡುತ್ತೇನೆ. ನಿಮ್ಮ ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುವುದಕ್ಕಿಂತ ದೊಡ್ಡ ಗೌರವ ಇನ್ನೊಂದಿಲ್ಲ. ನೀವು ವಿಶ್ವದಾದ್ಯಂತ 140 ಕೋಟಿ ಭಾರತೀಯರನ್ನು ಪ್ರತಿನಿಧಿಸುತ್ತಿದ್ದೀರಿ ಮತ್ತು ನೀವು ಭಾರತವನ್ನು ಪ್ರತಿನಿಧಿಸಿದಾಗ ಅದಕ್ಕಿಂತ ಗೌರವ ಇನ್ನೇನು?” ಎಂದು ಗಂಭೀರ್ ಎನ್​ಐ ಜತೆ ಮಾತನಾಡುತ್ತಾ ಹೇಳಿದ್ದಾರೆ.

ವಿಶ್ವ ಕಪ್​​ನಲ್ಲಿ ಯಶಸ್ಸನ್ನು ಸಾಧಿಸಲು ಸಾಮೂಹಿಕ ಪ್ರಯತ್ನವನ್ನು ಗಂಭೀರ್ ಒತ್ತಿಹೇಳಿದರು. ವಿಶೇಷವಾಗಿ ಅಪೇಕ್ಷಿತ ಕ್ರಿಕೆಟ್ ವಿಶ್ವಕಪ್ ಅನ್ನು ಉಲ್ಲೇಖಿಸಿದರು.”ಭಾರತ ವಿಶ್ವಕಪ್ ಗೆಲ್ಲಲು ಸಹಾಯ ಮಾಡುವುದು ನಾನಲ್ಲ. 140 ಕೋಟಿ ಭಾರತೀಯರು ಭಾರತಕ್ಕೆ ವಿಶ್ವಕಪ್ ಗೆಲ್ಲಲು ಸಹಾಯ ಮಾಡುತ್ತಾರೆ. ಪ್ರತಿಯೊಬ್ಬರೂ ನಮಗಾಗಿ ಪ್ರಾರ್ಥಿಸಲು ಪ್ರಾರಂಭಿಸಿದರೆ ಮತ್ತು ನಾವು ಆಡಲು ಮತ್ತು ಪ್ರತಿನಿಧಿಸಲು ಪ್ರಾರಂಭಿಸಿದರೆ, ಭಾರತವು ವಿಶ್ವಕಪ್ ಗೆಲ್ಲುತ್ತದೆ, “ಎಂದು ಅವರು ಹೇಳಿದರು.

ಇದನ್ನೂ ಓದಿ: T20 World Cup 2024 : ಒಮಾನ್ ವಿರುದ್ಧ ಹೊಸ ದಾಖಲೆ ಬರೆದ ನಮೀಬಿಯಾ ತಂಡದ ರುಬೆನ್ ಟ್ರಂಪೆಲ್ಮನ್

ಮಾಜಿ ಆರಂಭಿಕ ಬ್ಯಾಟ್ಸ್ಮನ್ ಆಟವನ್ನು ಆಡುವ ತಮ್ಮ ಯೋಚನೆಗಳನ್ನು ಹಂಚಿಕೊಂಡರು. ನಿರ್ಭೀತ ವಿಧಾನದ ಮಹತ್ವ ಒತ್ತಿ ಹೇಳಿದರು. ಅತ್ಯಂತ ಮುಖ್ಯವಾದ ವಿಷಯವೆಂದರೆ ನಿರ್ಭೀತರಾಗಿರುವುದು ಎಂದು ಗಂಭೀರ್ ಪ್ರತಿಪಾದಿಸಿದರು. ಗರಿಷ್ಠ ಗುರಿಯಾಗಿಸಿಕೊಂಡಿರುವ ಯಾವುದೇ ತಂಡಕ್ಕೆ ಧೈರ್ಯ ಮತ್ತು ಆತ್ಮವಿಶ್ವಾಸವು ನಿರ್ಣಾಯಕ ಅಂಶಗಳಾಗಿವೆ ಎಂದು ಸೂಚಿಸಿದರು.

ವಿಶ್ವ ಕಪ್​ ಗೆಲುವುಗಳಲ್ಲಿ ಗಂಭೀರ್​ ಪ್ರಯತ್ನ ಸ್ಮರಣೀಯ

2007ರ ಐಸಿಸಿ ಟಿ20 ವಿಶ್ವಕಪ್ ಹಾಗೂ 2011ರ ಐಸಿಸಿ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಗಂಭೀರ್ ಪ್ರಮುಖ ಪಾತ್ರ ವಹಿಸಿದ್ದರು. ಅವರ ದೃಢತೆ ಮತ್ತು ತಂತ್ರಗಾರಿಕೆಗೆ ಹೆಸರುವಾಸಿಯಾದ ಅವರು ಕೋಚಿಂಗ್ ಪಾತ್ರದಲ್ಲಿ ಸಂಭಾವ್ಯ ಪಾಲ್ಗೊಳ್ಳುವಿಕೆಯು ಪ್ರಸ್ತುತ ತಂಡಕ್ಕೆ ಅನುಭವ ಮತ್ತು ಒಳನೋಟದ ಸಂಪತ್ತನ್ನು ತರಬಹುದು.

ಗಂಭೀರ್ 2022 ರಲ್ಲಿ ಲಕ್ನೋ ಐಪಿಎಲ್ ಫ್ರಾಂಚೈಸಿಯೊಂದಿಗೆ ತಮ್ಮ ಮಾರ್ಗದರ್ಶಕ ವೃತ್ತಿಜೀವನವನ್ನು ಅತ್ಯುನ್ನತ ಮಟ್ಟದಲ್ಲಿ ಪ್ರಾರಂಭಿಸಿದರು. ಅವರ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ, ಆಂಡಿ ಫ್ಲವರ್ ತರಬೇತುದಾರರಾಗಿದ್ದ ಲಕ್ನೊ ಸೂಪರ್ ಜೈಂಟ್ಸ್ ತಂಡವು ಪ್ಲೇಆಫ್ ತಲುಪಿತ್ತು 2024ರಲ್ಲಿ ಗಂಭೀರ್ ಕೆಕೆಆರ್​ಗೆ ಮರಳಿದ್ದರು. ಅಲ್ಲಿ ಅವರು ತಮ್ಮ ಮೂರನೇ ಐಪಿಎಲ್ ಚಾಂಪಿಯನ್​ಶಿಪ್​ ಗೆಲ್ಲಲು ನೆರವಾದರು.

Continue Reading

ಪ್ರಮುಖ ಸುದ್ದಿ

T20 World Cup 2024 : ಒಮಾನ್ ವಿರುದ್ಧ ಹೊಸ ದಾಖಲೆ ಬರೆದ ನಮೀಬಿಯಾ ತಂಡದ ರುಬೆನ್ ಟ್ರಂಪೆಲ್ಮನ್

T20 World Cup 2024 : ಬಾರ್ಬಡೋಸ್​​ನ ಕೆನ್ಸಿಂಗ್ಟನ್ ಓವಲ್​​ನಲ್ಲಿ ನಡೆದ ಗ್ರೂಪ್ ಬಿ ಪಂದ್ಯದಲ್ಲಿ ಒಮಾನ್ ಬ್ಯಾಟಿಂಗ್ ಘಟಕವನ್ನು ಛಿದ್ರಗೊಳಿಸುವ ಮೂಲಕ 26 ವರ್ಷದ ಎಡಗೈ ವೇಗಿ ಟಿ 20 ಐ ಪಂದ್ಯದ ಮೊದಲ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

VISTARANEWS.COM


on

T20 World Cup 2024
Koo

ನ್ಯೂಯಾರ್ಕ್​: ಸೋಮವಾರ (ಜೂನ್ 3 ರಂದು) ನಡೆದ ಟಿ20 ವಿಶ್ವಕಪ್ 2024ರ ಮೊದಲ ಪಂದ್ಯದಲ್ಲಿ ಒಮಾನ್ ತಂಡದ ವಿರುದ್ಧ ನಮೀಬಿಯಾ ತಂಡದ ರೂಬೆನ್ ಟ್ರಂಪೆಲ್ಮನ್ ಹೊಸ ಟಿ20 ದಾಖಲೆ ಬರೆದಿದ್ದಾರೆ. ಬಾರ್ಬಡೋಸ್​​ನ ಕೆನ್ಸಿಂಗ್ಟನ್ ಓವಲ್​​ನಲ್ಲಿ ನಡೆದ ಗ್ರೂಪ್ ಬಿ ಪಂದ್ಯದಲ್ಲಿ ಒಮಾನ್ ಬ್ಯಾಟಿಂಗ್ ಘಟಕವನ್ನು ಛಿದ್ರಗೊಳಿಸುವ ಮೂಲಕ 26 ವರ್ಷದ ಎಡಗೈ ವೇಗಿ ಟಿ 20 ಐ ಪಂದ್ಯದ ಮೊದಲ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಾಯಕ ಗೆರ್ಹಾರ್ಡ್ ಎರಾಸ್ಮಸ್ ಟಾಸ್ ಗೆದ್ದ ನಂತರ ರೂಬೆನ್ ಟ್ರಂಪೆಲ್ಮನ್ ಮಾರಕ ಬೌಲಿಂಗ್ ದಾಳಿ ಮಾಡಿದರು. ಬೌಲರ್​ಗಳಿಗೆ ಸಾಕಷ್ಟು ಮಾಡುವ ಪಿಚ್​ನಲ್ಲಿ ಭರ್ಜರಿ ಬೌಲಿಂಗ್​ ಮಾಡಲು ಮುಂದಾದರು. ಪಂದ್ಯದ ಮೊದಲ ಎರಡು ಎಸೆತಗಳಲ್ಲಿ ಆರಂಭಿಕ ಆಟಗಾರ ಕಶ್ಯಪ್ ಪ್ರಜಾಪತಿ ಮತ್ತು ನಾಯಕ ಅಕಿಬ್ ಇಲ್ಯಾಸ್ ಅವರ ದೊಡ್ಡ ವಿಕೆಟ್​​ಗಳನ್ಉ ಉರುಳಿಸುದರ. ಹೀಗಾಗಿ ನಮೀಬಿಯಾ ಉತ್ತಮ ಆರಂಭ ಪಡೆಯಿತು. ಇದು ಟ್ರಂಪೆಲ್ಮನ್ ಅವರ ಎಡಗೈ ಸ್ವಿಂಗ್ ಬೌಲಿಂಗ್ ಮಾಸ್ಟರ್ ಕ್ಲಾಸ್ ಪ್ರದರ್ಶನವಾಗಿದೆ. ಪ್ರಜಾಪತಿಯನ್ನು ಲೆಂತ್ ಎಸೆತದ ಮೂಲಕ ಹಿಮ್ಮೆಟ್ಟಿಸಿದರೆ ಇಲ್ಯಾಸ್ ಗೆ ಆಡಲು ಸಾಧ್ಯವೇ ಇಲ್ಲದ ಸ್ವಿಂಗ್ ಯಾರ್ಕರ್ ಹಾಕಿದರು. ಆದಾಗ್ಯೂ, ಟ್ರಂಪೆಲ್ಮನ್ ಹ್ಯಾಟ್ರಿಕ್ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಅವರು ತಮ್ಮ ಎರಡನೇ ಓವರ್​ನಲ್ಲಿ ವಿಕೆಟ್ ಕೀಪರ್ ನಸೀಮ್ ಅವರನ್ನು 6 ರನ್​ಗಳಿಗೆ ಔಟ್ ಮಾಡಿದರು. ಪಂದ್ಯದ ಮೂರನೇ ಓವರ್​ನಲ್ಲಿ ನಮೀಬಿಯಾ 3 ವಿಕೆಟ್ ನಷ್ಟಕ್ಕೆ 10 ರನ್ ಗಳಿಸಿತ್ತು.

ಇನ್ನಿಂಗ್ಸ್ ನ 19 ನೇ ಓವರ್ ನಲ್ಲಿ ಟೇಲ್ ಎಂಡರ್ ಕಲೀಮುಲ್ಲಾ ಅವರನ್ನು ಔಟ್ ಮಾಡುವ ಮೂಲಕ ಟ್ರಂಪೆಲ್ಮನ್ ಸೋಮವಾರ ತಮ್ಮ ಖಾತೆಗೆ ಮತ್ತೊಂದು ವಿಕೆಟ್ ಸೇರಿಸಿದರು. ಟ್ರಂಪೆಲ್ಮನ್ 21 ರನ್ಗಳಿಗೆ 4 ವಿಕೆಟ್​​ ಪಡೆದರು. ಇದು ಟಿ 20 ಐ ಕ್ರಿಕೆಟ್​​ನಲ್ಲಿ ಅವರ ವೃತ್ತಿಜೀವನದ ಅತ್ಯುತ್ತಮ ಸಾಧನೆ.

ಇದನ್ನೂ ಓದಿ: T20 World Cup 2024 : ಉಗ್ರರ ಬೆದರಿಕೆ ನಡುವೆಯೂ ನ್ಯೂಯಾರ್ಕ್​ನಲ್ಲಿ ಭಾರತ ತಂಡದ ಆಟಗಾರರ ಬಿಂದಾಸ್​ ತಿರುಗಾಟ!

ಟಿ 20 ವಿಶ್ವಕಪ್ ಪಂದ್ಯದಲ್ಲಿ ಟ್ರಂಪೆಲ್ಮನ್ ಅವರ 21 ರನ್​ಗಳಿಗೆ 4 ವಿಕೆಟ್​ ಸಾಧನೆಯೊಂದಿಗೆ ನಮೀಬಿಯಾ ತಂಡವು ಒಮಾನ್ ತಂಡವನ್ನು 19.4 ಓವರ್​​ಗಳಲ್ಲಿ 109 ರನ್​ಗಳಿಗೆ ಆಲೌಟ್ ಮಾಡಿತು.

ಬಾರ್ಬಡೋಸ್ ನಲ್ಲಿ ಒಮಾನ್ ಹೋರಾಟ

ಒಮಾನ್ ತಂಡ ತನ್ನ ಇನಿಂಗ್ಸ್​ನಲ್ಲಿ ಉತ್ತಮವಾಗಿ ಆಡಲಿಲ್ಲ. ಅವರು ನಿಯಮಿತವಾಗಿ ವಿಕೆಟ್​ಗಳನ್ನು ಕಳೆದುಕೊಳ್ಳುತ್ತಲೇ ಸಾಗಿದರು. ಅನುಭವಿ ಆಲ್ರೌಂಡರ್ ಝೀಶಾನ್ ಮಕ್ಸೂದ್ ಮಾತ್ರ ಅಗ್ರ ಕ್ರಮಾಂಕದಲ್ಲಿ 100 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್​​ನಲ್ಲಿ ಸ್ಕೋರ್ ಮಾಡಿದ್ದಾರೆ. ಮಕ್ಸೂದ್ 20 ಎಸೆತಗಳಲ್ಲಿ 22 ರನ್ ಗಳಿಸಿ ಔಟಾದರು,. ಪವರ್ ಪ್ಲೇ ನಂತರ ಒಮಾನ್ 4 ವಿಕೆಟ್ ನಷ್ಟಕ್ಕೆ 37 ರನ್ ಗಳಿಗೆ ಕುಸಿಯಿತು.

ಖಾಲಿದ್ ಕೈಲ್ ಮತ್ತು ಅಯಾನ್ ಖಾನ್ 31 ರನ್​ಗಳ ಜೊತೆಯಾಟ ನೀಡಿದರು. ಆದರೆ ಒಮಾನ್ ನಮೀಬಿಯಾದ ಬೌಲಿಂಗ್ ದಾಳಿಯ ವೈವಿಧ್ಯತೆ ಮತ್ತು ಗುಣಮಟ್ಟವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಅನುಭವಿ ಡೇವಿಡ್ ವೈಸ್ ಮೂರು ವಿಕೆಟ್ ಪಡೆದರೆ, ನಾಯಕ ಗೆರ್ಹಾರ್ಡ್ ಎರಾಸ್ಮಸ್​ ನಾಲ್ಕು ಓವರ್​ಗಳಲ್ಲಿ ಕೇವಲ 20 ರನ್ ನೀಡಿ ಎರಡು ವಿಕೆಟ್ ಪಡೆದರು. ಬಳಿಕ ಬ್ಯಾಟ್ ಮಾಡಿದ ನಮೀಬಿಯಾ ತಂಡವೂ 106 ರನ್​ ಗಳಿಸಿತು. ಪಂದ್ಯ ಟೈ ಆದ ಕಾರಣ ಸೂಪರ್ ಓವರ್​ ನಡೆಸಲಾಯಿತು. ಅಲ್ಲಿ ನಮೀಬಿಯಾ ಗೆಲುವು ಸಾಧಿಸಿತು.

Continue Reading

ಕ್ರೀಡೆ

T20 World Cup 2024 : ಉಗ್ರರ ಬೆದರಿಕೆ ನಡುವೆಯೂ ನ್ಯೂಯಾರ್ಕ್​ನಲ್ಲಿ ಭಾರತ ತಂಡದ ಆಟಗಾರರ ಬಿಂದಾಸ್​ ತಿರುಗಾಟ!

T20 World Cup 2024 : ವರದಿಯ ಪ್ರಕಾರ ಹಲವಾರು ಭಾರತೀಯ ಆಟಗಾರರು ನ್ಯೂಯಾರ್ಕ್ ಸುತ್ತಲೂ ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ಅವರಲ್ಲಿ ಕೆಲವರು ಅಪ್ರತಿಮ ಟೈಮ್ಸ್​ ಸ್ಕ್ವೇರ್​​ಗೆ ಭೇಟಿ ನೀಡಿದ್ದರು. ಇತರರು ದೀರ್ಘ ನಡಿಗೆ ಮತ್ತು ಹೊರ ಪ್ರದೇಶಕ್ಕೆ ಊಟಕ್ಕೆ ಹೋಗಿದ್ದರು. ಶನಿವಾರ (ಜೂನ್ 1) ಬಾಂಗ್ಲಾದೇಶ ವಿರುದ್ಧದ ಭಾರತದ ಏಕೈಕ ಟಿ 20 ವಿಶ್ವಕಪ್ ಅಭ್ಯಾಸ ಪಂದ್ಯದ ಸಮಯದಲ್ಲಿ ನ್ಯೂಯಾರ್ಕ್​​ನಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು.

VISTARANEWS.COM


on

T20 World Cup 2024
Koo

ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಟಿ 20 ವಿಶ್ವಕಪ್ 2024 ರ (T20 World Cup 2024) ಪಂದ್ಯಕ್ಕೆ ಮುಂಚಿತವಾಗಿ ಐಸಿಸ್ ಬೆದರಿಕೆ ಹಾಕಿದ್ದಾರೆ. ಕಾಯುತ್ತಿದ್ದೇವೆ ನಿಮಗಾಗಿ ಎಂಬ ಬೆದರಿಕೆಯ ಪೋಸ್ಟ್​ಗಳು ಹರಿದಾಡಿದ್ದವು. ಇದು ವರದಿಯಾದ ನಂತರ ಆಟಗಾರರಿಗೆ ಭದ್ರತೆ ಬಿಗಿಗೊಳಿಸಲಾಗಿದೆ. ಆದಾಗ್ಯೂ, ಇದು ಯುನೈಟೆಡ್ ಸ್ಟೇಟ್ಸ್ ಮತ್ತು ಸುತ್ತಮುತ್ತಲಿನ ಭಾರತೀಯ ಕ್ರಿಕೆಟಿಗರ ಓಡಾಟದ ಮೇಲೆ ಪರಿಣಾಮ ಬೀರಿಲ್ಲ.

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕ್​ ಜೂನ್ 9 ರಂದು ಅಮೆರಿಕದ ನ್ಯೂಯಾರ್ಕ್​​ನ ಹೊರವಲಯದಲ್ಲಿರುವ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದ್ದಾರೆ. ಈ ಕುರಿತು ಮಾತನಾಡಿದ ಟೀಮ್ ಇಂಡಿಯಾ ಮೂಲಗಳು ಆಟಗಾರರಿಗೆ ಯಾವುದೇ ನಿರ್ದೇಶನ ನೀಡಲಾಗಿಲ್ಲ ಮತ್ತು ಅವರು ಸಾಮಾನ್ಯವಾಗಿ ನ್ಯೂಯಾರ್ಕ್​ನಲ್ಲಿ ತಿರುಗಾಡಬಹುದು. ತಂಡವು ಅಮೆರಿಕದಲ್ಲಿ ಇಳಿದ ನಂತರದಿಂದ ಭದ್ರತೆ ಚೆನ್ನಾಘಿ ನೀಡಿದ್ದೇವೆ. ಅಭ್ಯಾಸ ಪಂದ್ಯದ ವೇಳೆಯೂ ಅತ್ಯುತ್ತಮವಾಗಿತ್ತು ಅವರು ಹೇಳಿದ್ದಾರೆ.

ಇದನ್ನೂ ಓದಿ: T20 World Cup 2024 : ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?

ವರದಿಯ ಪ್ರಕಾರ ಹಲವಾರು ಭಾರತೀಯ ಆಟಗಾರರು ನ್ಯೂಯಾರ್ಕ್ ಸುತ್ತಲೂ ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ಅವರಲ್ಲಿ ಕೆಲವರು ಅಪ್ರತಿಮ ಟೈಮ್ಸ್​ ಸ್ಕ್ವೇರ್​​ಗೆ ಭೇಟಿ ನೀಡಿದ್ದರು. ಇತರರು ದೀರ್ಘ ನಡಿಗೆ ಮತ್ತು ಹೊರ ಪ್ರದೇಶಕ್ಕೆ ಊಟಕ್ಕೆ ಹೋಗಿದ್ದರು. ಶನಿವಾರ (ಜೂನ್ 1) ಬಾಂಗ್ಲಾದೇಶ ವಿರುದ್ಧದ ಭಾರತದ ಏಕೈಕ ಟಿ 20 ವಿಶ್ವಕಪ್ ಅಭ್ಯಾಸ ಪಂದ್ಯದ ಸಮಯದಲ್ಲಿ ನ್ಯೂಯಾರ್ಕ್​​ನಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು.

ಭದ್ರತೆ ಉಲ್ಲಂಘಿಸಿದ

ಅಭ್ಯಾಸ ಪಂದ್ಯದಲ್ಲಿ ಭದ್ರತೆಯನ್ನು ಉಲ್ಲಂಘಿಸಿ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ್ದ. ಆಟದ ಅಖಾಡಕ್ಕೆ ಪ್ರವೇಶಿಸಿದ್ದ. ಭದ್ರತಾ ಸಿಬ್ಬಂದಿ ಮೈದಾನಕ್ಕೆ ಬರುವ ಮೊದಲು ಅವರು ಭಾರತದ ನಾಯಕ ರೋಹಿತ್ ಅವರನ್ನು ತಬ್ಬಿಕೊಂಡಿದ್ದ. ಇತರ ಸ್ಥಳಗಳಿಗಿಂತ ಭಿನ್ನವಾಗಿ ಆತ ನೆಲಕ್ಕೆ ಬಿದ್ದು ಸಿಬ್ಬಂದಿಗೆ ಆತನನ್ನು ಹೊರಕ್ಕೆ ಕಳಹಿಸಲು ಕಷ್ಟವಾಯಿತು.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕ್ಲಿಪ್​ನಲ್ಲಿ ರೋಹಿತ್ ಪೊಲೀಸ್ ಅಧಿಕಾರಿಗಳಿಗೆ ಅಭಿಮಾನಿಗೆ ಹೊಡೆಯಬೇಡಿ ಮತ್ತು ಆತನಿಗೆ ನೋವುಂಟು ಮಾಡಬೇಡಿ ಎಂದು ಹೇಳುತ್ತಿರುವುದು ಕಂಡುಬರುತ್ತದೆ.

ಟಿ 20 ವಿಶ್ವಕಪ್ 2024 ರಲ್ಲಿ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಾಗಿ ನ್ಯೂಯಾರ್ಕ್ ನಗರ ಪೊಲೀಸ್ ಇಲಾಖೆ ನಸ್ಸಾವು ಕೌಂಟಿಯಲ್ಲಿ ‘ಬಿಗಿ ಭದ್ರತೆ’ ಪ್ರಾರಂಭಿಸಿದೆ. ಬಹುನಿರೀಕ್ಷಿತ ಮುಖಾಮುಖಿಯ ಈ ಭದ್ರತಾ ಪರಿಸ್ಥಿತಿಯನ್ನು ಕಳೆದ ಬುಧವಾರ (ಮೇ 29) ನಸ್ಸಾವು ಕೌಂಟಿಯ ಪೊಲೀಸ್ ಆಯುಕ್ತ ಪ್ಯಾಟ್ರಿಕ್ ರೈಡರ್ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ.

ನೀವು ಇಷ್ಟು ದೊಡ್ಡ ಪಂದ್ಯ ಮತ್ತು ಅಪಾಯ ಸಂಖ್ಯೆಯ ಪ್ರೇಕ್ಷಕರನ್ನು ಹೊಂದಿರುವಾಗ ಎಲ್ಲವೂ ನಾವಯ ವಿಶ್ವಾಸಾರ್ಹ ಭದ್ರತೆ ನೀಡುತ್ತೇವೆ. ನಸ್ಸಾವು ಕೌಂಟಿಯ ನಿವಾಸಿಗಳ ಭದ್ರತೆ ಮತ್ತು ಸುರಕ್ಷತೆಯ ವಿಷಯಕ್ಕೆ ಬಂದಾಗ ನಾವು ಪ್ರತಿಯೊಂದು ವಿವರಗಳನ್ನು ಪರಿಶೀಲಿಸುತ್ತೇವೆ. ಈ ಕೌಂಟಿಯ ಇತಿಹಾಸದಲ್ಲಿ ನಾವು ಮಾಡಬೇಕಾದ ಅತಿದೊಡ್ಡ ಭದ್ರತೆ ಇದು ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ ಎಂದು ಹೇಳಿದ್ದರು.

ಐಸಿಸಿ ಪುರುಷರ ಟಿ 20 ವಿಶ್ವಕಪ್ 2024 ರ ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ ಮತ್ತು ಯುಎಸ್ಎ ಸ್ಥಾನ ಪಡೆದಿವೆ. ಮೆನ್ ಇನ್ ಬ್ಲೂ ತಂಡ ಜೂನ್ 5ರಂದು ನ್ಯೂಯಾರ್ಕ್ ನಲ್ಲಿ ಐರ್ಲೆಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.

Continue Reading
Advertisement
World Bicycle Day
ಆರೋಗ್ಯ1 min ago

World Bicycle Day: ಸೈಕಲ್‌ ಹೊಡೆಯುವುದರ ಲಾಭಗಳು ನಾವಂದುಕೊಂಡಿದ್ದಕ್ಕಿಂತ ಹೆಚ್ಚು!

Battery Life Tips
ಗ್ಯಾಜೆಟ್ಸ್3 mins ago

Battery Life Tips: ಈ 5 ಸಲಹೆ ಪಾಲಿಸಿ; ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಸಾಮರ್ಥ್ಯ ಹೆಚ್ಚಿಸಿ!

MP Renukacharya
ಕ್ರೈಂ10 mins ago

MP Renukacharya : ಎಂ.ಪಿ ರೇಣುಕಾಚಾರ್ಯ, ಪುತ್ರನಿಗೆ ಫೋನ್‌ನಲ್ಲಿ ಕೊಲೆ ಬೆದರಿಕೆ

Nataša Stanković
ಕ್ರೀಡೆ19 mins ago

Nataša Stanković: ಹಾರ್ದಿಕ್ ಪಾಂಡ್ಯ ಜತೆ ವಿಚ್ಛೇದನ?; ಅನುಮಾನಕ್ಕೆ ತೆರೆ ಎಳೆದ ಪತ್ನಿ ನತಾಶಾ

Drowns in Lake
ಕರ್ನಾಟಕ28 mins ago

Drowns in Lake: ಕೆರೆಯಲ್ಲಿ ಮುಳುಗಿ ಯುವಕ ಸಾವು; ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

Vijayanagara SP Shriharibabu drives to blood donation camp in Hosapete
ಆರೋಗ್ಯ29 mins ago

Vijayanagara News: ಹೊಸಪೇಟೆಯಲ್ಲಿ ರಕ್ತದಾನ ಶಿಬಿರಕ್ಕೆ ಎಸ್ಪಿ ಶ್ರೀಹರಿಬಾಬು ಚಾಲನೆ

Mantralaya Sri Subudhendra Theertha Swamiji ashirvachan
ಮೈಸೂರು30 mins ago

Mysore News: ಶಾಸ್ತ್ರ ಜ್ಞಾನಕ್ಕೆ ಪ್ರಪಂಚದ ಎಲ್ಲೆಡೆ ಮಾನ್ಯತೆ: ಮಂತ್ರಾಲಯ ಶ್ರೀ

Tumkur Lok Sabha Constituency
ಪ್ರಮುಖ ಸುದ್ದಿ45 mins ago

Tumkur Lok Sabha Constituency: ತುಮಕೂರಿನ ಅದೃಷ್ಟ ಪರೀಕ್ಷೆಯಲ್ಲಿ ಗೆಲ್ಲುವರೇ ವಿ. ಸೋಮಣ್ಣ?

Prajwal Revanna Case
ಕರ್ನಾಟಕ57 mins ago

Prajwal Revanna Case: ಹೈಕೋರ್ಟ್‌ಗೆ ಮತ್ತೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ಭವಾನಿ ರೇವಣ್ಣ

Road Accident
ಶಿವಮೊಗ್ಗ58 mins ago

Road Accident : ಎದುರಿಗೆ ಬಂದ ಬೈಕ್‌ ತಪ್ಪಿಸಲು ಹೋಗಿ ಮಹಿಳೆಗೆ ಗುದ್ದಿದ ಕಾರು; ಎಗರಿ ಬಿದ್ದವಳು ಸ್ಥಳದಲ್ಲೇ ಸಾವು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ7 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌