ವಿಸ್ತಾರ ಸಂಪಾದಕೀಯ: ಶ್ರೀಲಂಕಾಗೆ ಭಾರತವೇ ಪರಮಾಪ್ತ ಎನ್ನುವುದು ಮತ್ತೊಮ್ಮೆ ಸಾಬೀತು - Vistara News

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಶ್ರೀಲಂಕಾಗೆ ಭಾರತವೇ ಪರಮಾಪ್ತ ಎನ್ನುವುದು ಮತ್ತೊಮ್ಮೆ ಸಾಬೀತು

ಶ್ರೀಲಂಕಾ ಕುಸಿದಾಗ (Economic Crisis) ಎಲ್ಲಕ್ಕಿಂತ ಮೊದಲು ನೆರವಿಗೆ ಧಾವಿಸಿದ್ದು ಭಾರತ. ಅಂತಾರಾಷ್ಟ್ರೀಯ ಹಣಕಾಸು ನಿಧಿಗಿಂತಲೂ ಮುನ್ನವೇ ಶ್ರೀಲಂಕೆಗೆ ಭಾರತ 31,800 ಕೋಟಿ ರೂ.ಗಳನ್ನು ನೀಡಿತ್ತು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಮ್ಮ ಅಕ್ಕಪಕ್ಕದ ಎರಡು ದೇಶಗಳು ತಮ್ಮ ತಪ್ಪು ನಿರ್ಧಾರಗಳು, ದುಡುಕಿನ ನೀತಿಗಳಿಂದಾಗಿ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸಿಕೊಂಡು ದಿವಾಳಿಯಾಗಿವೆ (Economic Crisis). ಇದರಲ್ಲಿ ಶ್ರೀಲಂಕಾ ಕಳೆದ ವರ್ಷ ಸಂಪೂರ್ಣ ಕುಸಿದುಹೋಗಿ, ಆಹಾರಕ್ಕಾಗಿ ಅಲ್ಲಿನ ಜನ ಪರದಾಡಿದ್ದರು. ಪೆಟ್ರೋಲ್​, ಡೀಸೆಲ್​ ಲಭ್ಯವಿಲ್ಲದೆ ದೇಶದ ಸಾರಿಗೆ ವ್ಯವಸ್ಥೆ ಕಂಗೆಟ್ಟಿತ್ತು. ಜನ ದೊಂಬಿಯೆದ್ದು, ಅಧ್ಯಕ್ಷರೇ ದೇಶ ಬಿಟ್ಟು ಪರಾರಿಯಾಗಿದ್ದೂ ಆಗಿತ್ತು. ಇದೀಗ ಆ ದೇಶ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ತಮ್ಮ ಚೇತರಿಕೆಗೆ ಕಾರಣ ಭಾರತದ ಸಹಾಯಹಸ್ತ ಎಂದು ಆ ದೇಶ ಮನದುಂಬಿ ಶ್ಲಾಘಿಸಿದೆ. ನಾವು ಆರ್ಥಿಕವಾಗಿ ಸುಧಾರಿಸಿಕೊಳ್ಳುವುದರ ಹಿಂದೆ ಭಾರತದ ದೊಡ್ಡ ಪಾತ್ರವಿದೆ. ಉಳಿದ ಎಲ್ಲ ದೇಶಗಳು ಕೊಟ್ಟಿರುವ ನೆರವಿಗಿಂತ ಅಧಿಕ ಭಾರತವೊಂದೇ ಸಹಾಯ ಮಾಡಿದೆ. 31,800 ಕೋಟಿ ರೂಪಾಯಿ ಧನ ಸಹಾಯ ನೀಡುವ ಮೂಲಕ ನಮ್ಮ ಹೋರಾಟದಲ್ಲಿ ಕೈ ಜೋಡಿಸಿದೆ ಎಂದು ಶ್ರೀಲಂಕೆಯ ವಿದೇಶಾಂಗ ಸಚಿವ ಎಮ್​ಯುಎಮ್​ ಅಲಿ ಸಬ್ರೆ ಹೇಳಿಕೊಂಡಿದ್ದು, ಭಾರತ ಶ್ರೇಷ್ಠ ದೇಶ ಎಂದು ಕೊಂಡಾಡಿದ್ದಾರೆ. ಅಲ್ಲಿನ ಪ್ರತಿಪಕ್ಷ ಮುಖಂಡರು, ಐಎಂಎಫ್‌ನ ಮುಖ್ಯಸ್ಥರು ಕೂಡ ಭಾರತದ ನೆರವನ್ನು ಸ್ಮರಿಸಿದ್ದಾರೆ.

ದೊಡ್ಡ ಮೊತ್ತದ ಹಣಸಹಾಯವೊಂದು ಕುಸಿದ ದೇಶವನ್ನು ಚೇತರಿಸಿಕೊಳ್ಳುವಂತೆ ಮಾಡಬಲ್ಲುದು. ಆದರೆ ಅದು ಸಕಾಲಕ್ಕೆ ಸಿಗಬೇಕಾದುದು ಅಗತ್ಯ. ಚೀನಾ ಕೂಡ ದೊಡ್ಡ ದೇಶ; ಶ್ರೀಲಂಕೆಗೆ ಅದು ಬೇಕಾದಷ್ಟು ಹಣವನ್ನು ಸಾಲದ ರೂಪದಲ್ಲಿ ನೀಡಿದೆ. ಆದರೆ ಚೀನಾದ ಉದ್ದೇಶ ಬೇರೆಯದೇ ಆಗಿದ್ದು, ದ್ವೀಪರಾಷ್ಟ್ರದಲ್ಲಿ ತನ್ನದೊಂದು ವಸಾಹತುವನ್ನು ಸ್ಥಾಪಿಸುವುದೇ ಅದರ ಗುರಿ. ಶ್ರೀಲಂಕೆಯನ್ನು ಆಳುತ್ತಿರುವ ರಾಜಪಕ್ಸ ಕುಟುಂಬ ಕಳೆದ ಐದಾರು ವರ್ಷಗಳಲ್ಲಿ ಚೀನಾವನ್ನು ಸಾಕಷ್ಟು ಬಳಲಿಸಿದ್ದಾರೆ. ಅಲ್ಲಿನ ಹಂಬನ್‌ಟೋಟ ಬಂದರನ್ನು ಪೂರ್ತಿಯಾಗಿ ಚೀನಾದ ವಶಕ್ಕೆ ಬಿಟ್ಟುಕೊಟ್ಟಿದ್ದಾರೆ. ಚೀನಾ ಅಲ್ಲಿ ತನ್ನ ನಿಗಾ ನೌಕೆಗಳನ್ನು ಇಡತೊಡಗಿದೆ. ಶ್ರೀಲಂಕಾದ ಸಮುದ್ರ ತೀರದ ಸಮೀಪಕ್ಕೆ ಚೀನಾದ ಯುದ್ಧನೌಕೆಗಳು ಬರಲಾರಂಭಿಸಿವೆ. ಇದು ಭಾರತಕ್ಕೆ ಆತಂತ ತರುವ ವಿಷಯ. ಇದೆಲ್ಲವೂ ಸಾಧ್ಯವಾಗಿರುವುದು ಚೀನಾಗೆ ಶ್ರೀಲಂಕಾ ನೀಡಿರುವ ಪ್ರಾಮುಖ್ಯತೆಯಿಂದಾಗಿ. ಚೀನಾ ನೀಡಿದ ಭಾರಿ ಬಡ್ಡಿದರದ ಸಾಲದ ಹಣಕ್ಕೆ ಬಾಯಿ ಬಿಟ್ಟ ಪರಿಣಾಮವೇ ಆ ದೇಶಕ್ಕೆ ಈ ದುಃಸ್ಥಿತಿ. ಚೀನಾ ಎಂದೂ ಉದಾತ್ತ ಉದ್ದೇಶದಿಂದ ಧನಸಹಾಯ ಮಾಡುವುದಿಲ್ಲ. ಆದರೆ ಶ್ರೀಲಂಕೆಯ ಕಷ್ಟದಲ್ಲಿ ಚೀನಾ ಬರಲಿಲ್ಲ; ಸಂಕಷ್ಟದಲ್ಲಿ ಕೈ ಹಿಡಿಯಲು ಭಾರತವೇ ಬರಬೇಕಾಯಿತು.

ಶ್ರೀಲಂಕಾ ಕುಸಿದಾಗ ಎಲ್ಲಕ್ಕಿಂತ ಮೊದಲು ನೆರವಿಗೆ ಧಾವಿಸಿದ್ದು ಭಾರತ. ಅಂತಾರಾಷ್ಟ್ರೀಯ ಹಣಕಾಸು ನಿಧಿಗಿಂತಲೂ ಮುನ್ನವೇ ಶ್ರೀಲಂಕೆಗೆ ಭಾರತ 31,800 ಕೋಟಿ ರೂ.ಗಳನ್ನು ನೀಡಿತ್ತು. ತನ್ನ ಪಕ್ಕದ ದೇಶದ ಸ್ಥಿತಿಗತಿ ಸುಧಾರಿಸುವಂತೆ ತಾನು ಇನ್ನಷ್ಟು ಹಣಕಾಸು ನೀಡಲು ಸಿದ್ಧ; ಬಡ್ಡಿದರಗಳನ್ನು ಮನ್ನಾ ಮಾಡಲೂ ಸಿದ್ಧ ಎಂದು ಐಎಂಎಫ್‌ಗೆ ಭಾರತ ತಿಳಿಸಿದೆ. ಆಹಾರ, ವೈದ್ಯಕೀಯ ಸಾಮಗ್ರಿಗಳು, ರಸಗೊಬ್ಬರ, ರಫ್ತು ಹಾಗೂ ಆಮದಿನಲ್ಲಿ ಸಡಿಲಿಕೆ, ಇಂಧನಗಳ ಮೂಲಕ ನಾವು ಆ ದೇಶಕ್ಕೆ ನೆರವಾಗಿದ್ದೇವೆ. ಇದ್ಯಾವುದನ್ನೂ ನಾವು ಚೀನಾದಂತೆ ದುರುದ್ದೇಶವಿಟ್ಟುಕೊಂಡು ಮಾಡಿಲ್ಲ. ʼʼನೇಬರ್‌ಹುಡ್‌ ಫಸ್ಟ್‌ʼ (ನೆರೆಹೊರೆಯವರೇ ಪ್ರಥಮ) ಎಂಬುದು ಭಾರತದ ವಿದೇಶಾಂಗ ನೀತಿಯಾಗಿದೆ. ಇದಕ್ಕಾಗಿಯೇ ಮಲೇಷಿಯಾ ಮತ್ತಿತರ ದೇಶಗಳನ್ನೂ ಸೇರಿಸಿಕೊಂಡು ಆಗ್ನೇಯ ಈಷ್ಯಾದ ಹಲವು ಸಣ್ಣಪುಟ್ಟ ದ್ವೀಪದೇಶಗಳು ಭಾರತದ ಮೈತ್ರಿಯ ಮಹತ್ವವನ್ನು ಕಂಡುಕೊಂಡಿವೆ. ಇಂದಿಗೂ ಭಾರತದ ಜತೆಗೇ ನಿಂತಿವೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಭ್ರಷ್ಟಾಚಾರದ ಕ್ಯಾನ್ಸರ್‌ಗೆ ದುರಾಸೆಯೇ ಮೂಲ

ಇದು ಮಾನವೀಯ ನೆರವು ಮಾತ್ರವಲ್ಲ; ಇದರಲ್ಲಿ ಭಾರತದ ಮುತ್ಸದ್ದಿತನ ಕೂಡ ಇದೆ. ಇಂದು ಶ್ರೀಲಂಕಾ ಸಂಕಷ್ಟದಲ್ಲಿರಬಹುದು; ಆದರೆ ಎಂದಿಗೂ ಅದು ನಮ್ಮ ನೆರೆದೇಶ ಎಂಬುದನ್ನು ಮರೆಯುವಂತಿಲ್ಲ. ಚೀನಾದ ಮೇಲೆ ಅದು ಹೊಂದಿರುವ ಭರವಸೆ ಸುಳ್ಳು ಎಂಬುದು ಮನದಟ್ಟಾಗಿ, ಭಾರತವೇ ತನ್ನ ಪರಮಾಪ್ತ ಎಂಬುದು ಅದಕ್ಕೆ ಸಾಬೀತಾಗಿದೆ. ಹೀಗೇ ಚೀನಾದ ಹಿಡಿತದಲ್ಲಿರುವ ಇತರ ದೇಶಗಳಿಗೂ ಆಗಬೇಕಾಗಿದೆ. ಭಾರತದ ಇನ್ನೊಂದು ನೆರೆರಾಷ್ಟ್ರ ನೇಪಾಳ ಕೂಡ ಇದುವರೆಗೆ ಭಾರತದ ಜತೆ ತಾನು ಹೊಂದಿದ್ದ ಆತ್ಮೀಯ ಸಂಬಂಧವನ್ನು ಮರೆತು ಚೀನಾದ ಜತೆಗೆ ಲಲ್ಲೆ ಹೊಡೆಯತೊಡಗಿದೆ. ಆದರೆ ಚೀನಾದ ಆಕ್ರಮಣಕಾರಿ ಮಿಲಿಟರಿ ವ್ಯಕ್ತಿತ್ವ ಅದಕ್ಕೂ ಬಿಸಿ ಮುಟ್ಟಿಸಿದೆ. ತನ್ನ ಹುಟ್ಟಿನಿಂದಲೇ ಭಾರತದ ಜತೆ ಸದಾಕಾಲ ದ್ವೇಷದ ವರವನ್ನೇ ಪಡೆದುಕೊಂಡು ಬಂದಿರುವ ಪಾಕಿಸ್ತಾನ ತನ್ನ ದ್ವೇಷವನ್ನು ಮರೆತು ಯಾವಾಗ ಭಾರತದ ಜತೆ ಸೌಹಾರ್ದ ಸಂಬಂಧ ಕಲ್ಪಿಸಿಕೊಳ್ಳುತ್ತದೋ ತಿಳಿಯದು. ಸದ್ಯ ಆ ದೇಶ ದಿವಾಳಿಯಾಗಿದೆ. ಶ್ರೀಲಂಕಾ ಕಲಿತ ಪಾಠದಲ್ಲಿ ಪಾಕಿಸ್ತಾನಕ್ಕೂ ಸಂದೇಶವಿದೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Prajwal Revanna Case: ವಿದೇಶದಲ್ಲಿರುವ ಸಂಸದ ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಮರಳುವ ಬಗ್ಗೆ ವಿಸ್ತಾರ ನ್ಯೂಸ್‌ಗೆ ಖಚಿತ ಮಾಹಿತಿ ಲಭ್ಯವಾಗಿದೆ.‌ ಎಲ್ಲಿಂದ, ಯಾವಾಗ ಸಂಸದ ಆಗಮಿಸಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Prajwal Revanna Case
Koo
VISTARA-EXCLUSIVE

ಬೆಂಗಳೂರು: ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ (Prajwal Revanna Case) ಎಸ್‌ಐಟಿ ಮೋಸ್ಟ್ ವಾಂಟೆಡ್‌ ಲಿಸ್ಟ್‌ನಲ್ಲಿರುವ ಸಂಸದ ಪ್ರಜ್ವಲ್‌ ರೇವಣ್ಣ, ಇಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಎಸ್‌ಐಟಿ ಅಧಿಕಾರಿಗಳು ಅಲರ್ಟ್‌ ಆಗಿದ್ದಾರೆ. ಈ ನಡುವೆ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಬಂಧನವಾಗಿದ್ದ ಎಚ್‌.ಡಿ.ರೇವಣ್ಣ ಅವರಿಗೆ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಪ್ರಜ್ವಲ್‌ ನ್ಯಾಯಾಲಯಕ್ಕೆ ಶರಣಾಗಲಿದ್ದಾರೆ ಎನ್ನಲಾಗುತ್ತಿತ್ತು. ಇದೀಗ ಪ್ರಜ್ವಲ್‌ ರೇವಣ್ಣ ವಿದೇಶದಿಂದ ಇಂದೇ ವಾಪಸ್‌ ಬರಲಿದ್ದಾರೆ ಎಂಬ ಮಹತ್ವದ ಮಾಹಿತಿ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ.

ಹೌದು, ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಮರಳುವ ಬಗ್ಗೆ ವಿಸ್ತಾರ ನ್ಯೂಸ್‌ಗೆ ಖಚಿತ ಮಾಹಿತಿ (Vistara Exclusive) ಲಭ್ಯವಾಗಿದೆ.‌ ಜರ್ಮನಿಯಲ್ಲಿರುವ ಪ್ರಜ್ವಲ್‌, ಲುಫ್ತಾನ್ಸಾ ಏರ್‌ಲೈನ್ಸ್‌ ಮೂಲಕ ಪ್ರಜ್ವಲ್‌ ಭಾರತಕ್ಕೆ ಹಿಂತಿರುಗಲಿದ್ದಾರೆ. ಜರ್ಮನಿಯಲ್ಲಿ ನಾಳೆ (ಮೇ 15) ಬೆಳಗ್ಗೆ 11.20 ರಿಂದ 11.50ರೊಳಗೆ ಬೋರ್ಡಿಂಗ್‌ ಆಗಲಿದ್ದು, ಅವರಿಗಾಗಿ ಸೀಟ್‌ ನಂಬರ್‌ 6ಜಿ ಬುಕ್‌ ಮಾಡಲಾಗಿದೆ. LH0764 ವಿಮಾನದಲ್ಲಿ ಸಂಸದ ಆಗಮಿಸಲಿದ್ದಾರೆ.

ಹರಿಯಾಣದ ಅಕಲ್‌ ಟ್ರಾವೆಲ್ಸ್‌ನಿಂದ ಪ್ರಜ್ವಲ್‌ಗೆ ಟಿಕೆಟ್‌ ಬುಕ್‌ ಮಾಡಲಾಗಿದೆ. ಜರ್ಮನಿಯ ಮ್ಯೂನಿಚ್‌ನಲ್ಲಿ ಇಂದು ಬೆಳಗ್ಗೆ 12.05ಕ್ಕೆ ಫ್ಲೈಟ್‌ ಟೇಕಾಫ್‌ ಆಗಲಿದ್ದು, ರಾತ್ರಿ 12.30ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಬಂದ ಕೂಡಲೇ ಅವರನ್ನು ವಶಕ್ಕೆ ಪಡೆಯಲು ಎಸ್‌ಐಟಿ ಸಜ್ಜಾಗಿದ್ದು, ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ | HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್‌ಗೆ ಲುಕ್‌ ಔಟ್‌ ನೋಟಿಸ್‌ ಹಾಗೂ ಬ್ಲೂ ಕಾರ್ನರ್‌ ನೋಟಿಸ್‌ ಜಾರಿ ಮಾಡಲಾಗಿತ್ತು. ತಂದೆಗೆ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣ ನ್ಯಾಯಾಲಯದ ಮುಂದೆ ಶರಣಾಗುವ ಸಾಧ್ಯತೆ ಇದ್ದು, ಬಹುತೇಕ ಈ ವಾರದಲ್ಲೇ ವಿದೇಶದಿಂದ ಆಗಮಿಸಬಹುದು ಎನ್ನಲಾಗಿತ್ತು. ಇದೀಗ ಅವರು ಇಂದೇ ದೇಶಕ್ಕೆ ಆಗಮಿಸುವ ಮಾಹಿತಿ ಲಭ್ಯವಾಗಿದೆ.

ಎಸ್ಐಟಿ ಮುಂದೆ ಬುಧವಾರ ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದ್ದು, ಪ್ರಜ್ವಲ್‌ ರೇವಣ್ಣ ಬುಧವಾರ ಸಂಜೆ ಬೆಂಗಳೂರಿಗೆ ಬಂದು ಗುರುವಾರ ನ್ಯಾಯಾಲಯದ ಮುಂದೆ ಹಾಜರಾಗುವ ಸಾಧ್ಯತೆ ಇದೆ. ರೇವಣ್ಣಗೆ ಜಾಮೀನು ಸಿಕ್ಕ ಬಳಿಕ ನ್ಯಾಯಲಯದ ಮುಂದೆ ಹಾಜರಾಗುವಂತೆ ರೇವಣ್ಣ ಕುಟುಂಬದ ವಕೀಲರು ಸಲಹೆ ನೀಡಿದ್ದರಿಂದ ಪ್ರಜ್ವಲ್‌ ರೇವಣ್ಣ ವಿದೇಶದಿಂದ ಬರುತ್ತಿದ್ದಾರೆ ಎನ್ನಲಾಗಿದೆ.

ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

HD Revanna Released first reaction after release will be acquitted of all charges

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆ.ಆರ್.‌ ನಗರದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪದಡಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆ ಆಗಿರುವ ಮಾಜಿ ಸಚಿವ, ಹಾಲಿ ಶಾಸಕ ಎಚ್.ಡಿ. ರೇವಣ್ಣ (HD Revanna Released) ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಡಿ. ರೇವಣ್ಣ, ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಇದೆ. ದೇವರಲ್ಲಿ ಅದನ್ನೇ ಪ್ರಾರ್ಥನೆ ಮಾಡಿಕೊಂಡಿದ್ದೇನೆ. ನಾನು ಹೆಚ್ಚಿಗೆ ಏನು ಮಾತನಾಡಲ್ಲ. ಕಳೆದ 11 ದಿನಗಳಿಂದ ನ್ಯಾಯಾಲಯದ ಕಾನೂನನ್ನು ಪಾಲಿಸಿದೇನೆ. ಈ ಆಪಾದನೆಯಿಂದ ಹೊರಗೆ ಬರುತ್ತೇನೆ ಎಂಬ ನಂಬಿಕೆ ಇದೆ ಎಂದು ಹೇಳಿದರು.

ಇದನ್ನೂ ಓದಿ | HD Revanna Released: ತಬ್ಬಿಕೊಂಡ ಎಚ್‌ಡಿಕೆ; ಕುಟುಂಬಸ್ಥರ ಕಂಡು ಕಣ್ಣೀರಿಟ್ಟ ರೇವಣ್ಣ, ಇಷ್ಟಾದರೂ ಬಾರದ ಭವಾನಿ!

Continue Reading

ಪ್ರಮುಖ ಸುದ್ದಿ

M‌ine Lift Collapse: ತಾಮ್ರದ ಗಣಿಯೊಳಗೆ ಲಿಫ್ಟ್‌ ಕುಸಿದು 14 ಮಂದಿ ಪಾತಾಳದಲ್ಲಿ ಟ್ರ್ಯಾಪ್

M‌ine Lift Collapse: ಜಿಲ್ಲೆಯ ಕೋಲಿಹಾನ್ ಗಣಿಯಲ್ಲಿ ಸಿಬ್ಬಂದಿಯನ್ನು ಸಾಗಿಸಲು ಬಳಸಲಾಗುವ ಲಂಬವಾದ ಶಾಫ್ಟ್ ಕುಸಿದಿದೆ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಶಾಫ್ಟ್ ಕುಸಿದಿದ್ದು, ಸ್ವಲ್ಪ ಸಮಯದ ನಂತರ ಆಂಬ್ಯುಲೆನ್ಸ್ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ತುರ್ತು ಪರಿಸ್ಥಿತಿಗೆ ಸಿದ್ಧವಾಗಿವೆ. ಹಿಂದೂಸ್ತಾನ್ ಕಾಪರ್‌ ಅಧಿಕಾರಿಗಳು ನೂರಾರು ಮೀಟರ್ ಆಳದಲ್ಲಿ ಸಿಲುಕಿಕೊಂಡಿದ್ದಾರೆ.

VISTARANEWS.COM


on

copper mine lift collapse
Koo

ಜೈಪುರ: ರಾಜಸ್ಥಾನದ ನೀಮ್ ಕಾ ಥಾನಾ ಜಿಲ್ಲೆಯ ಕೋಲಿಹಾನ್ ತಾಮ್ರದ ಗಣಿಯಲ್ಲಿ (copper mine) ಲಿಫ್ಟ್ ಕುಸಿದು (M‌ine Lift Collapse) 14 ಮಂದಿ ಸಿಕ್ಕಿಬಿದ್ದಿದ್ದಾರೆ. ಇವರು ಪಿಎಸ್‌ಯು ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ನ (Hindustan copper Ltd) 14 ಅಧಿಕಾರಿಗಳು ಹಾಗೂ ವಿಜಿಲೆನ್ಸ್ ತಂಡದ ಸದಸ್ಯರಾಗಿದ್ದಾರೆ. ಮಂಗಳವಾರ ರಾತ್ರಿ ರಕ್ಷಣಾ ಕಾರ್ಯಾಚರಣೆ (rescue Operation) ಆರಂಭವಾಗಿದ್ದು, ಘಟನೆಯಲ್ಲಿ (Mine tragedy) ಕೆಲ ಅಧಿಕಾರಿಗಳು ಗಾಯಗೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಸ್ಥಳಕ್ಕೆ ರಕ್ಷಣಾ ತಂಡ ತಲುಪಿದೆ ಎಂದು ನೀಮ್ ಕಾ ಥಾನಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ನಾಯಕ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಇಲ್ಲಿಯವರೆಗೆ, ಗಣಿ ಲಿಫ್ಟ್ ಕುಸಿತದಿಂದ ಯಾವುದೇ ಸಾವುಗಳು ವರದಿಯಾಗಿಲ್ಲ.

ಜಿಲ್ಲೆಯ ಕೋಲಿಹಾನ್ ಗಣಿಯಲ್ಲಿ ಸಿಬ್ಬಂದಿಯನ್ನು ಸಾಗಿಸಲು ಬಳಸಲಾಗುವ ಲಂಬವಾದ ಶಾಫ್ಟ್ ಕುಸಿದಿದೆ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಶಾಫ್ಟ್ ಕುಸಿದಿದ್ದು, ಸ್ವಲ್ಪ ಸಮಯದ ನಂತರ ಆಂಬ್ಯುಲೆನ್ಸ್ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ತುರ್ತು ಪರಿಸ್ಥಿತಿಗೆ ಸಿದ್ಧವಾಗಿವೆ. ಹಿಂದೂಸ್ತಾನ್ ಕಾಪರ್‌ ಅಧಿಕಾರಿಗಳು ನೂರಾರು ಮೀಟರ್ ಆಳದಲ್ಲಿ ಸಿಲುಕಿಕೊಂಡಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಘಟನೆ ವರದಿಯಾದ ಕೂಡಲೇ ಬಿಜೆಪಿ ಶಾಸಕ ಧರ್ಮಪಾಲ್ ಗುರ್ಜರ್ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. “ರಕ್ಷಣಾ ತಂಡವು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. 6-7 ಆಂಬ್ಯುಲೆನ್ಸ್‌ಗಳು ಸಿದ್ಧವಾಗಿವೆ. ಇಡೀ ಆಡಳಿತ ಅಲರ್ಟ್ ಆಗಿದೆ. ಇಲ್ಲಿಯವರೆಗೆ ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ. ಖಂಡಿತವಾಗಿಯೂ ಎಲ್ಲರೂ ಸುರಕ್ಷಿತವಾಗಿ ಹೊರಬರುತ್ತಾರೆ” ಎಂದು ಧರ್ಮಪಾಲ್ ಗುರ್ಜರ್ ಹೇಳಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಸರ್ಕಾರಿ ಸ್ವಾಮ್ಯದ ಈ ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ವಿಜಿಲೆನ್ಸ್ ತಂಡವು ಪರಿಶೀಲನೆಗಾಗಿ ಗಣಿ ಒಳಗೆ ಹೋದಾಗ ಈ ಘಟನೆ ಸಂಭವಿಸಿದೆ. ಅವರು ಮೇಲಕ್ಕೆ ಬರಲು ಮುಂದಾದಾಗ, ಶಾಫ್ಟ್ ಅಥವಾ ʼಪಂಜರ’ದ ಹಗ್ಗ ಮುರಿದು ಸುಮಾರು 14 ಜನರು ಕೆಳಗೆ ಸಿಲುಕಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ಲಿಫ್ಟ್ ಅನ್ನು ಹಸ್ತಚಾಲಿತವಾಗಿ ಚಲಿಸಲು ಮತ್ತು ಸಿಕ್ಕಿಬಿದ್ದ ಸಿಬ್ಬಂದಿಯನ್ನು ಹೊರತೆಗೆಯಲು ಪ್ರಯತ್ನಿಸಲಾಗುತ್ತಿದೆ.

ಇದನ್ನೂ ಓದಿ: Job Alert: ಹಟ್ಟಿ ಚಿನ್ನದ ಗಣಿ ಕಂಪೆನಿಯಲ್ಲಿದೆ ಸುವರ್ಣಾವಕಾಶ; 168 ಹುದ್ದೆಗಳಿಗೆ ಐಟಿಐ, ಡಿಪ್ಲೋಮಾ ಪಾಸಾದವರು ಅಪ್ಲೈ ಮಾಡಿ

Continue Reading

ಭವಿಷ್ಯ

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷದ ಅಷ್ಟಮಿ ಅಹೋರಾತ್ರಿ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಸಿಂಹ ರಾಶಿಯಿಂದ ಬುಧವಾರ ಸಂಜೆ 05:32ಕ್ಕೆ ಕನ್ಯಾರಾಶಿಗೆ ಪ್ರವೇಶಿಸುತ್ತಾನೆ. ಇದರಿಂದಾಗಿ ಮಿಥುನ, ಸಿಂಹ, ತುಲಾ, ವೃಶ್ಚಿಕ, ಕುಂಭ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ಮೇಷ ರಾಶಿಯವರು ಇಂದು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆ ಇದೆ. ಮಾನಸಿಕವಾಗಿ ನೆಮ್ಮದಿ ಇರಲಿದೆ. ಅಗತ್ಯ ವಸ್ತುಗಳ ಖರೀದಿಗಾಗಿ ಖರ್ಚು ಮಾಡುವಿರಿ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ದಿನದ ಕೊನೆಯಲ್ಲಿ ಸಂಗಾತಿಯೊಂದಿಗೆ ಮನಸ್ತಾಪ ಇರಲಿದೆ. ಕಟಕ ರಾಶಿಯವರು ಯಾವುದೇ ಆಪ್ತ ಸಂಬಂಧಿಕರ ಬೆಂಬಲದಿಂದ ನೀವು ನಿಮ್ಮ ವ್ಯಾಪಾರದಲ್ಲಿ ಉತ್ತಮವಾಗಿ ಮಾಡಬಹುದು. ಇದು ನಿಮಗೆ ಆರ್ಥಿಕ ಲಾಭವನ್ನು ನೀಡುತ್ತದೆ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (15-05-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ
ತಿಥಿ: ಅಷ್ಟಮಿ ಅಹೋರಾತ್ರಿ ವಾರ: ಬುಧವಾರ
ನಕ್ಷತ್ರ: ಆಶ್ಲೇಷಾ 15:24 ಯೋಗ: ವೃದ್ಧಿ 07:39
ಕರಣ: ವಿಷ್ಟಿ (ಭದ್ರ) 17:16 ಅಮೃತ ಕಾಲ: ಮಧ್ಯಾಹ್ನ 01:40ರಿಂದ 03:25

ಸೂರ್ಯೋದಯ : 05:54   ಸೂರ್ಯಾಸ್ತ : 06:38

ರಾಹುಕಾಲ : ಮಧ್ಯಾಹ್ನ 12.00 ರಿಂದ 1.30
ಗುಳಿಕಕಾಲ: ಬೆಳಗ್ಗೆ 10.30 ರಿಂದ 12.00
ಯಮಗಂಡಕಾಲ: ಬೆಳಗ್ಗೆ 7.30 ರಿಂದ 9.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ:ಇಂದು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆ ಇದೆ. ಮಾನಸಿಕವಾಗಿ ನೆಮ್ಮದಿ ಇರಲಿದೆ. ಅಗತ್ಯ ವಸ್ತುಗಳ ಖರೀದಿಗಾಗಿ ಖರ್ಚು ಮಾಡುವಿರಿ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ದಿನದ ಕೊನೆಯಲ್ಲಿ ಸಂಗಾತಿಯೊಂದಿಗೆ ಮನಸ್ತಾಪ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 3

Horoscope Today

ವೃಷಭ:ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ. ಅಧಿಕ ರಕ್ತದ ಒತ್ತಡ ಇರುವವರು ಯಾವುದೇ ಕಾರಣಕ್ಕೂ ತಾತ್ಸಾರ ಮಾಡುವುದು ಬೇಡ. ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಸಿಗಲಿದೆ. ಆರ್ಥಿಕ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ. ಅದೃಷ್ಟ ಸಂಖ್ಯೆ: 2

Horoscope Today

ಮಿಥುನ:ಆಧ್ಯಾತ್ಮಿಕ ವಿಚಾರಗಳಿಂದ, ಹಿರಿಯರಿಂದ ಮಾರ್ಗದರ್ಶನ ಪಡೆಯುವಿರಿ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ಅನಿವಾರ್ಯ ಕಾರಣಗಳಿಂದ ಉದ್ಯೋಗಿಗಳಿಗೆ ಒತ್ತಡ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 9

Horoscope Today

ಕಟಕ:ಯಾವುದೇ ಆಪ್ತ ಸಂಬಂಧಿಕರ ಬೆಂಬಲದಿಂದ ನೀವು ನಿಮ್ಮ ವ್ಯಾಪಾರದಲ್ಲಿ ಉತ್ತಮವಾಗಿ ಮಾಡಬಹುದು. ಇದು ನಿಮಗೆ ಆರ್ಥಿಕ ಲಾಭವನ್ನು ನೀಡುತ್ತದೆ. ಆರೋಗ್ಯ ಮಧ್ಯಮವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ಸಿಂಹ: ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ. ಅನಾವಶ್ಯಕ ಕಾರಣಗಳಿಂದ ಖರ್ಚು ಇರಲಿದೆ. ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುವಿರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಉತ್ಸಾಹದ ದಿನವಿದು. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 2

Horoscope Today

ಕನ್ಯಾ: ಆರೋಗ್ಯ ಪರಿಪೂರ್ಣವಾಗಿರಲಿದೆ. ಅನಗತ್ಯ ಖರ್ಚುಗಳ ಮೇಲೆ ನಿಯಂತ್ರಣ ಸಾಧಿಸುವಿರಿ. ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಒತ್ತಡದಿಂದಾಗಿ ಕಿರಿಕಿರಿ ಸಾಧ್ಯತೆ ಇದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಉದ್ಯೋಗದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಹೆಚ್ಚಿನ ಒತ್ತಡ, ಮನೆಯಲ್ಲಿನ ಭಿನ್ನಾಭಿಪ್ರಾಯಗಳು ನಿಮ್ಮ ಏಕಾಗ್ರತೆಗೆ ದಕ್ಕೆ ತರುವ ಸಾಧ್ಯತೆ ಇದೆ. ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ಹಿರಿಯರಿಂದ ಮಾರ್ಗದರ್ಶನ ಸಿಗಲಿದೆ. ದೈಹಿಕ ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 3

Horoscope Today

ವೃಶ್ಚಿಕ: ಆತುರದಲ್ಲಿ ಯಾವುದೇ ತೀರ್ಮಾನಗಳನ್ನು ಕೈಗೊಳ್ಳುವುದು ಬೇಡ, ದಿನದ ಮಟ್ಟಿಗೆ ಯಾವುದೇ ಹೂಡಿಕೆ ವ್ಯವಹಾರದಲ್ಲಿ ತೊಡಗುವುದರಿಂದ ನಷ್ಟವಾಗುವ ಸಾಧ್ಯತೆ ಇದೆ. ಕೆಲವು ರಹಸ್ಯ ಸುದ್ದಿಗಳಿಂದ ನಿಮಗೆ ಅಚ್ಚರಿಯಾಗಲಿದೆ. ನಿಮ್ಮ ಅಚ್ಚು ಕಟ್ಟು ಕೆಲಸದಿಂದ ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ಸಿಗಲಿದೆ. ಆರ್ಥಿಕ ಪ್ರಗತಿ ಉತ್ತಮವಾಗಿರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ಆರ್ಥಿಕ ಪ್ರಗತಿ ಸಾಧಾರಣವಾಗಿರುವುದರಿಂದ ಒತ್ತಡ ಹೆಚ್ಚಲಿದೆ. ಪ್ರಮುಖ ಕೆಲಸ ಕಾರ್ಯಗಳು ನಿಧಾನವಾಗಿ ಸಾಗಲಿದೆ. ಸ್ನೇಹಿತರೊಂದಿಗೆ ಕಾಲ ಕಳೆಯುವಿರಿ. ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತುಕತೆಯಲ್ಲಿ ತೊಡಗುವಿರಿ. ಉದ್ಯೋಗಿಗಳಿಗೆ ಶುಭ ಫಲ. ದೈಹಿಕ ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 1

Horoscope Today

ಮಕರ: ಅನೇಕ ಕಾರಣಾಂತರಗಳಿಂದ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಪ್ರಗತಿ ಕಂಡರು, ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆಪ್ತರೊಂದಿಗೆ ಮಾತುಕತೆ ಇರಲಿದೆ. ವ್ಯಾಪಾರದ ಉದ್ದೇಶದಿಂದಾಗಿ ಕೈಕೊಂಡ ಪ್ರವಾಸದಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯ ಕೊಂಚಮಟ್ಟಿಗೆ ಹದಗೆಡುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕುಂಭ: ಮನರಂಜನೆಗಾಗಿ ಸಮಯವನ್ನು ಕಳೆಯುವಿರಿ. ಸೃಜನಶೀಲ ಕಾರ್ಯಗಳಿಂದಾಗಿ ವ್ಯಕ್ತಿತ್ವ ಪ್ರಕಾಶಿಸುವ ಸಾಧ್ಯತೆ ಇದೆ. ನಿಮ್ಮ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳುವಿರಿ. ಆಧ್ಯಾತ್ಮಿಕ ಗುರುಗಳ ಮಾರ್ಗದರ್ಶನ ಪಡೆಯುವ ಸಾಧ್ಯತೆ ಇದೆ. ಆರ್ಥಿಕ ಪ್ರಗತಿ ಉತ್ತಮವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಮೀನ: ಆಹಾರದ ವ್ಯತ್ಯಾಸದ ಕ್ರಮದಿಂದಾಗಿ ಆರೋಗ್ಯದಲ್ಲಿ ಕೊಂಚ ಏರುಪೇರಾಗಲಿದೆ, ಕಾಳಜಿ ವಹಿಸುವುದು ಸೂಕ್ತ. ಹೂಡಿಕೆ ಕುರಿತಾಗಿ ಆಲೋಚನೆ ಮಾಡುವಿರಿ. ಅನಿವಾರ್ಯ ಕಾರಣಗಳಿಂದ ಖರ್ಚು ಇರಲಿದೆ. ಆಪ್ತರೊಂದಿಗೆ ಮಾತುಕತೆಯಲ್ಲಿ ತೊಡಗುವಿರಿ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 6

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ರಾಜ್ಯ ಪ್ರಾಥಮಿಕ- ಪ್ರೌಢಶಾಲಾ ಶಿಕ್ಷಣದ ಪರಿಸ್ಥಿತಿ ಸರಿಹೋಗುವುದೆಂದು?

SSLC Result: ಶಾಲೆಗಳನ್ನು ಪ್ರಯೋಗಶಾಲೆಗಳಂತೆ ನೋಡುವ ಮನಸ್ಥಿತಿ ಪ್ರತಿಯೊಂದು ಸರಕಾರದ್ದಾಗಿದೆ. ಇದಕ್ಕೆ ಇತ್ತೀಚೆಗೆ ಪದವಿ ಶಿಕ್ಷಣದಲ್ಲಿ ಮಾಡುತ್ತಿರುವ ಬದಲಾವಣೆಯೇ ದೃಷ್ಟಾಂತ. ನಾಲ್ಕು ವರ್ಷಗಳ ಪದವಿಯನ್ನು ಮತ್ತೆ ಮೂರು ವರ್ಷಕ್ಕೆ ಇಳಿಸಿರುವ ಈ ಕ್ರಮದಿಂದಾಗಿ, ರಾಜ್ಯ ಶಿಕ್ಷಣ ವ್ಯವಸ್ಥೆಯು ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಪ್ರತ್ಯೇಕತೆ ಕಾಪಾಡಿಕೊಂಡು, ಎನ್‌ಇಪಿಯಿಂದ ದೊರೆಯಬಹುದಾದ ಲಾಭಗಳಿಂದ ವಂಚಿತವಾಗಲಿದೆ.

VISTARANEWS.COM


on

SSLC Result
Koo

ಈ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದ ಬಳಿಕ, ಊಹಿಸಿದಂತೆಯೇ ಆಗಿದೆ. ಕರ್ನಾಟಕದಲ್ಲಿ ಶಾಲಾ ಶಿಕ್ಷಣದ ಗುಣಮಟ್ಟದ ಬಗ್ಗೆ ಚರ್ಚೆ ಎದ್ದಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಪ್ರಸ್ತುತ ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲಿ ಕಲಿಕೆಯ ಗುಣಮಟ್ಟ ಕುಸಿದಿದೆ (SSLC Result) ಎಂದು ಖಾಸಗಿ ಶಾಲಾ ಒಕ್ಕೂಟ (ಕ್ಯಾಮ್ಸ್) ಅಸಮಾಧಾನ ಹೊರಹಾಕಿದೆ. ಸರ್ಕಾರಿ ಶಾಲಾ ಶಿಕ್ಷಣದ ಬಗ್ಗೆ ಹೆತ್ತವರು ಯಾವ ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನು ಸಂಕಲಿಸಿದರೆ ದಾರುಣ ಚಿತ್ರ ಸಿಗಬಹುದು; ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಹೆತ್ತವರು ಕೆಳಮಧ್ಯಮ ವರ್ಗದ, ಕೆಳವರ್ಗದವರಾದುದರಿಂದ ಅವರಿಗೆ ಬೇರೆ ದಾರಿಯಿಲ್ಲ. ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಿರುವವರು, ಅಲ್ಲಿಗೆ ಕಳಿಸುತ್ತಿರುವುದೇಕೆ ಎಂದು ಕೇಳಿದರೆ ಸರ್ಕಾರಿ ಶಿಕ್ಷಣದ ಕಳಪೆ ಗುಣಮಟ್ಟದತ್ತ ಬೆಟ್ಟು ಮಾಡುತ್ತಾರೆ. ಆದರೆ ಇದೂ ಪೂರ್ತಿ ಸತ್ಯವಲ್ಲ. ಯಾಕೆಂದರೆ ಹಲವಾರು ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಇದು ಒಟ್ಟಾರೆಯಾಗಿ ರಾಜ್ಯ ಶೈಕ್ಷಣಿಕ ಪಠ್ಯದ ಸಮಸ್ಯೆಗಳತ್ತ ಬೆಟ್ಟು ಮಾಡುತ್ತದೆ. ಒಟ್ಟಾರೆಯಾಗಿ ಪಠ್ಯದ ಸಮಸ್ಯೆ ಹಾಗೂ ಕಲಿಕೆಯ ಸಮಸ್ಯೆಗಳು ಒಗ್ಗೂಡಿ ಇಂದಿನ ಈ ಸ್ಥಿತಿಗೆ ತಂದಿವೆ.

ಸರ್ಕಾರ ಶಾಲಾ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಸರ್ಕಾರ ಯಾವುದೇ ಪರಿಣಾಮಕಾರಿ ರೂಪುರೇಷೆಗಳನ್ನು ರೂಪಿಸುತ್ತಿಲ್ಲ. ಬದಲಿಗೆ ಶಿಕ್ಷಣ ಇಲಾಖೆ ದಿನಕ್ಕೊಂದು ನಿಯಮಗಳನ್ನು ಮಾಡುತ್ತಿದೆ. ಆದರೆ ತಾವೇ ನಡೆಸುವ ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನ ಮಾಡದೇ, ಕೇವಲ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ನಿಯಮ ಎಂಬಂತೆ ವರ್ತಿಸುತ್ತಿದೆ ಎಂದು ಶಾಲಾ ಒಕ್ಕೂಟ ಆಕ್ರೋಶ ಹೊರಹಾಕಿದೆ. ಇದೂ ನಿಜ. ಶಾಲೆಗಳನ್ನು ಪ್ರಯೋಗಶಾಲೆಗಳಂತೆ ನೋಡುವ ಮನಸ್ಥಿತಿ ಪ್ರತಿಯೊಂದು ಸರಕಾರದ್ದಾಗಿದೆ. ಇದಕ್ಕೆ ಇತ್ತೀಚೆಗೆ ಪದವಿ ಶಿಕ್ಷಣದಲ್ಲಿ ಮಾಡುತ್ತಿರುವ ಬದಲಾವಣೆಯೇ ದೃಷ್ಟಾಂತ. ನಾಲ್ಕು ವರ್ಷಗಳ ಪದವಿಯನ್ನು ಮತ್ತೆ ಮೂರು ವರ್ಷಕ್ಕೆ ಇಳಿಸಿರುವ ಈ ಕ್ರಮದಿಂದಾಗಿ, ರಾಜ್ಯ ಶಿಕ್ಷಣ ವ್ಯವಸ್ಥೆಯು ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಪ್ರತ್ಯೇಕತೆ ಕಾಪಾಡಿಕೊಂಡು, ಎನ್‌ಇಪಿಯಿಂದ ದೊರೆಯಬಹುದಾದ ಲಾಭಗಳಿಂದ ವಂಚಿತವಾಗಲಿದೆ.

ರಾಜ್ಯದಲ್ಲಿ ಪ್ರಾಥಮಿಕ ಹಂತದಲ್ಲೆ ಶಿಕ್ಷಣದ ಗುಣಮಟ್ಟ ಕಾಪಾಡದೇ ಇರುವುದರಿಂದಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಕುಸಿತ ಉಂಟಾಗಿದೆ. 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ನಿರಾಶದಾಯವಾಗಿದೆ. ಸಿಸಿಟಿವಿ ಹಾಕಿದ್ದಕ್ಕೆ ಫಲಿತಾಂಶ ಕಡಿಮೆ ಬಂದಿದೆ ಎಂದು ಶಾಲಾ ಶಿಕ್ಷಣ ಇಲಾಖೆಯೇ ಒಪ್ಪಿಕೊಂಡಿದೆ. ಅಧಿಕಾರಿಗಳ ಬಳಿ ಚರ್ಚೆ ಮಾಡಿದಾಗ, ಮಕ್ಕಳು ತುಂಬಾ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಅವರನ್ನು ಪಾಸ್ ಮಾಡಬೇಕು ಎನ್ನುತ್ತಾರೆ. ಹೀಗಾಗಿ ಗ್ರೇಸ್‌ ಅಂಕ ಕೊಡಲಾಗಿದೆ. ಹತ್ತು ವರ್ಷಗಳಿಂದ ಶಾಲೆಯಲ್ಲಿ ಕಲಿತರೂ 10ನೇ ತರಗತಿಗೆ ಬಂದಾಗ ಕನಿಷ್ಠ 25 ಅಂಕ ಗಳಿಸಲೂ ಆಗದ ಮಕ್ಕಳ ಸಂಖ್ಯೆ ಹೆಚ್ಚು ಇದೆ ಎಂದರೆ ಏನರ್ಥ? ಇದು ಶಿಕ್ಷಣವೇ? ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಬದಲು ಮಕ್ಕಳ ಹಿತದೃಷ್ಟಿಯ ಹೆಸರಲ್ಲಿ ಗ್ರೇಸ್‌ ಅಂಕದ ಪ್ರಮಾಣ ಹೆಚ್ಚಿಸುತ್ತಿರುವುದು ಸರಿಯಲ್ಲ. ಇದು ಕ್ರಿಕೆಟ್‌ನಲ್ಲಿ ಬೌಂಡರಿಗೆ ಬಾಲ್‌ ಹೋಗುತ್ತಿಲ್ಲ ಎಂದು ಬೌಂಡರಿ ವ್ಯಾಪ್ತಿಯನ್ನೇ ಕುಗ್ಗಿಸಿದಂತೆ! ಇದರಿಂದ ಆಟಗಾರರ ಪ್ರತಿಭೆಯೇನೂ ಹೆಚ್ಚುವುದಿಲ್ಲ!

ಇದನ್ನೂ ಓದಿ:ವಿಸ್ತಾರ ಸಂಪಾದಕೀಯ: ಹೋರ್ಡಿಂಗ್ ಕುಸಿತ ಬೆಂಗಳೂರಿಗರಿಗೂ ಎಚ್ಚರಿಕೆಯ ಗಂಟೆ

ಪ್ರತಿ ಸಲ ಸರ್ಕಾರ ಬಂದಾಗಲೂ ರಾಜಕೀಯ ಸಿದ್ಧಾಂತದ ಹಿನ್ನೆಲೆಯಲ್ಲಿ ಪಠ್ಯಕ್ರಮ ಪರಿಷ್ಕರಣೆ ಆಗುತ್ತಿದೆ. ಕಳೆದ ಹತ್ತಾರು ವರ್ಷಗಳಿಂದ ಇದೇ ರೀತಿ ನಡೆದುಕೊಂಡು ಬರುತ್ತಿದೆ. ಶಿಕ್ಷಣ ಇಲಾಖೆಯಿಂದ ಗುಣಮಟ್ಟದ ಪಠ್ಯ ಪುಸ್ತಕ ರಚನೆ ಆಗದೇ ಇದ್ದಲ್ಲಿ ಇದರ ಅಡ್ಡಪರಿಣಾಮವನ್ನು ಮುಂದೆ ಅನುಭವಿಸಬೇಕಾಗುತ್ತದೆ. ಮಕ್ಕಳಿಗೆ ಬೇಕಾದಂತಹ ಸಂಯೋಜಿತ ಪಠ್ಯ ರಚನೆಯಾಗದೆ ಇದ್ದರೆ, ಪೋಷಕರು ಅನಿವಾರ್ಯವಾಗಿ CBSE-ICSE ಕಡೆ ಹೋಗಬೇಕಾಗುತ್ತದೆ. ರಾಜ್ಯದ ವಿದ್ಯಾರ್ಥಿಗಳು ನೆರೆಹೊರೆ ರಾಜ್ಯಗಳ ಪಠ್ಯಕ್ಕೆ ಹಾಗೂ ರಾಷ್ಟ್ರಮಟ್ಟದ ಶಿಕ್ಷಣಕ್ಕೆ ಸ್ಪರ್ಧಾತ್ಮಕವಾಗಿ ಸಿದ್ಧ ಮಾಡುವುದು ಸರ್ಕಾರದ ಆದ್ಯ ಜವಾಬ್ದಾರಿ. ಆದರೆ ಈ ವಿಚಾರದಲ್ಲಿ ಸದಾ ರಾಜಕೀಯ. ವಿದ್ಯಾರ್ಥಿಗಳ ಹಿತದೃಷ್ಟಿಗಿಂತ ತಮ್ಮ ಸಿದ್ಧಾಂತಗಳನ್ನು ಹೇರುವುದೇ ಪಕ್ಷಗಳ ಆದ್ಯತೆಯಾಗಿದೆ. ಶಿಕ್ಷಣ ತಜ್ಞರನ್ನು ಮುಂದಿಟ್ಟುಕೊಂಡು ಪಠ್ಯಕ್ರಮ ರಚಿಸುವುದಕ್ಕಿಂತಲೂ ರಾಜಕೀಯ ಚಿಂತನೆಯ ತಜ್ಞರನ್ನು ಸಮಿತಿಯಲ್ಲಿ ನೇಮಿಸಿಕೊಂಡು ಪಠ್ಯ ರಚಿಸಲಾಗುತ್ತಿದೆ. ಇದು ಮಕ್ಕಳ ಬಾಳಿನಲ್ಲಿ ಆಡುವ ಚೆಲ್ಲಾಟ. ಇದು ನಿಲ್ಲಬೇಕು. ಇಲ್ಲವಾದರೆ ಈ ಫಲಿತಾಂಶ ಕುಸಿತ ಹಾಗೂ ಅವಮಾನ ಮುಂದುವರಿಯಲಿದೆ.

Continue Reading
Advertisement
viral video garbage bengaluru roads
ವೈರಲ್ ನ್ಯೂಸ್27 seconds ago

Viral video: ʼಅಸಹ್ಯಕರ!ʼ ಬೆಂಗಳೂರಿನ ರಸ್ತೆಗಳ ಕಸದ ವಿಡಿಯೋ ಪೋಸ್ಟ್‌ ಮಾಡಿದ ಕಿರಣ್ ಮಜುಂದಾರ್ ಶಾ

Stone pelting
ದೇಶ3 mins ago

Stone Pelting: ಉತ್ತರಪ್ರದೇಶದಲ್ಲಿ ಗುಂಪು ಘರ್ಷಣೆ; ಕಲ್ಲು ತೂರಾಟ, ಕೇಳಿಬಂತು ಗುಂಡಿನ ಸಪ್ಪಳ

Crowd Funding
ದೇಶ5 mins ago

Crowd Funding: ಕಂದಮ್ಮನ ಚಿಕಿತ್ಸೆಗೆ ಹರಿದು ಬಂದ ನೆರವು; 3 ತಿಂಗಳಲ್ಲಿ 9 ಕೋಟಿ ರೂ. ಸಂಗ್ರಹ

Prajwal Revanna Case
ಕರ್ನಾಟಕ26 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

copper mine lift collapse
ಪ್ರಮುಖ ಸುದ್ದಿ52 mins ago

M‌ine Lift Collapse: ತಾಮ್ರದ ಗಣಿಯೊಳಗೆ ಲಿಫ್ಟ್‌ ಕುಸಿದು 14 ಮಂದಿ ಪಾತಾಳದಲ್ಲಿ ಟ್ರ್ಯಾಪ್

Health Tips in Kannada
ಆರೋಗ್ಯ58 mins ago

Health Tips in Kannada: ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ? ಈ ಸಂಗತಿ ತಿಳಿದುಕೊಂಡಿರಿ

Mango Juice Benefits
ಆರೋಗ್ಯ2 hours ago

Mango Juice Benefits: ತಾಜಾ ಮಾವಿನ ರಸ ಕುಡಿಯುವುದರಿಂದ ಎಷ್ಟೊಂದು ಪ್ರಯೋಜನ ಇದೆ ನೋಡಿ…

Karnataka Weather Forecast
ಉಡುಪಿ2 hours ago

Karnataka Weather : ಮೇ 18ರವರೆಗೆ ಮಳೆ ಅಬ್ಬರ; 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Dina Bhavishya
ಭವಿಷ್ಯ3 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

SSLC Result
ಪ್ರಮುಖ ಸುದ್ದಿ8 hours ago

ವಿಸ್ತಾರ ಸಂಪಾದಕೀಯ: ರಾಜ್ಯ ಪ್ರಾಥಮಿಕ- ಪ್ರೌಢಶಾಲಾ ಶಿಕ್ಷಣದ ಪರಿಸ್ಥಿತಿ ಸರಿಹೋಗುವುದೆಂದು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ26 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ13 hours ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 202415 hours ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 202419 hours ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ19 hours ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು20 hours ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ1 day ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌