Land For Job Case : ದಿಲ್ಲಿಯ ತೇಜಸ್ವಿ ಯಾದವ್ ಮನೆ ಶೋಧ, ಸಿಬಿಐ ವಿರುದ್ಧ ಸಹೋದರಿ ವಾಗ್ದಾಳಿ - Vistara News

ದೇಶ

Land For Job Case : ದಿಲ್ಲಿಯ ತೇಜಸ್ವಿ ಯಾದವ್ ಮನೆ ಶೋಧ, ಸಿಬಿಐ ವಿರುದ್ಧ ಸಹೋದರಿ ವಾಗ್ದಾಳಿ

Land For Job Case: ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಅವರ ದಿಲ್ಲಿ ನಿವಾಸ ಮೇಲೆ ಸಿಬಿಐ ಶುಕ್ರವಾರ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ಮಾಡಿದೆ.

VISTARANEWS.COM


on

Tejashwi Yadav's Delhi Home, Sisters' Homes Raid by CBI
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಅವರು ದಿಲ್ಲಿ ಮನೆಯಲ್ಲಿ ಶುಕ್ರವಾರ ಶೋಧ ನಡೆಸಿದೆ. ಎರಡು ದಿನಗಳ ಹಿಂದೆಯಷ್ಟೇ, ಸಿಬಿಐ ತೇಜಸ್ವಿ ಅವರ ತಂದೆ ಲಾಲು ಪ್ರಸಾದ್ ಯಾದವ್ ಮತ್ತು ತಾಯಿ ರಾಬ್ಡಿ ದೇವಿ ಅವರನ್ನು ವಿಚಾರಣೆಗೊಳಪಡಿಸಿತ್ತು(Land For Job Case).

ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬದ ಸದಸ್ಯರಿಗೆ ಸೇರಿದ ದಿಲ್ಲಿಯ 15 ಕಡೆ ಸಿಬಿಐ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದೆ. ಲಾಲು ಅವರ ಪುತ್ರಿಯರಾದ ರಾಗಿಣಿ ಯಾದವ್, ಚಂದಾ ಯಾದವ್ ಮತ್ತು ಹೇಮಾ ಯಾದವ್ ಮನೆಗಳನ್ನು ಶೋಧಿಸಲಾಗಿದೆ.

ರೋಹಿಣಿ ಆಚಾರ್ಯ ಅವರ ಟ್ವೀಟ್

ಸಿಬಿಐ ದಾಳಿ ನಡೆಸಿರುವ ಸಂದರ್ಭದ ಬಗ್ಗೆ ತೇಜಸ್ವಿ ಯಾದವ್ ಅವರು ಟೀಕಿಸಿದ್ದಾರೆಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ. ತಮ್ಮ ಪತ್ನಿ ಮಗುವಿನ ನಿರೀಕ್ಷೆಯಲ್ಲಿರುವಾಗ ಈ ರೀತಿಯ ಸೇಡಿನ ರಾಜಕೀಯವನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ತೇಜಸ್ವಿ ಹೇಳಿಕೊಂಡಿದ್ದಾರೆ. ಇದೇ ವೇಳೆ, ಲಾಲು ಅವರ ಪುತ್ರಿ ರೋಹಿಣಿ ಆಚಾರ್ಯ ಅವರು, ನಮ್ಮ ಕುಟುಂಬವು ಫ್ಯಾಸಿಸ್ಟ್‌ಗಳು ಮತ್ತು ಗಲಭೆಕೋರರ ಮುಂದೆ ಎಂದೂ ಬಗ್ಗದ ಕಾರಣ ಬೆಳಗ್ಗೆಯಿಂದಲೇ ನಮ್ಮ ಕುಟುಂಬವನ್ನು ಹಿಂಸಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Land For Job Scam: ರಾಬ್ಡಿ ದೇವಿ ಬೆನ್ನಲ್ಲೇ ಲಾಲು ಪ್ರಸಾದ್ ಯಾದವ್ ವಿಚಾರಣೆ ನಡೆಸಿದ ಸಿಬಿಐ, ಪುತ್ರಿ ಹೇಳಿದ್ದೇನು?

ನಾವು ಈ ಅನ್ಯಾಯವನ್ನು ನೆನಪಿಟ್ಟುಕೊಳ್ಳುತ್ತೇವೆ. ಎಲ್ಲವನ್ನೂ ನಾವು ನೆನಪಿಟ್ಟುಕೊಳ್ಳುತ್ತೇವೆ. ಸಹೋದರಿಯ ಚಿಕ್ಕ ಮಕ್ಕಳು ಮಾಡಿದ ಅಪರಾಧವೇನು? ಗರ್ಭಿಣಿಯಾಗಿರುವ ತೇಜಸ್ವಿ ಅವರ ಪತ್ನಿ ಏನು ಮಾಡಿದ್ದಾರೆ? ಯಾಕೆ ಎಲ್ಲರಿಗೂ ಹಿಂಸೆ ನೀಡಲಾಗುತ್ತಿದೆ? ಬೆಳಗ್ಗೆಯಿಂದ ಎಲ್ಲರಿಗೂ ಹಿಂಸೆ ನೀಡಲಾಗುತ್ತಿದೆ. ಫ್ಯಾಸಿಸ್ಟ್ ಮತ್ತು ದರೋಡೆಕೋರರ ಮುಂದೆ ಲಾಲು-ರಾಬ್ಡಿ ಕುಟುಂಬವು ಬಗ್ಗದೇ ಇರುವುದು ನಾವು ಮಾಡಿರುವ ಅಪರಾಧವಾದಂತಿದೆ. ಸಮಯ ಬಂದಾಗ ನೀವು ಈ ಅನ್ಯಾಯಕ್ಕೆ ಪ್ರತ್ಯುತ್ತರವನ್ನು ಪಡೆದುಕೊಳ್ಳುತ್ತೀರಿ ಎಂದು ರೋಹಿಣಿ ಆಚಾರ್ಯ ಅವರು ಟ್ವೀಟ್ ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Fire Accident: ಚಲಿಸುತ್ತಿದ್ದ ಬಸ್‌ನಲ್ಲಿ ಕಾಣಿಕೊಂಡ ಬೆಂಕಿ; 8 ಮಂದಿ ಭಕ್ತರ ಸಜೀವ ದಹನ

Fire Accident: ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ ವೇಯಲ್ಲಿ ಶುಕ್ರವಾರ ರಾತ್ರಿ ನಡೆದ ಭೀಕರ ರಸ್ತೆ ಅವಘಡದಲ್ಲಿ 8 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಸ್‌ಗೆ ಬೆಂಕಿ ಹತ್ತಿಕೊಂಡು ಈ ಅವಘಡ ನಡೆದಿದೆ. ಉತ್ತರ ಪ್ರದೇಶದ ಮಥುರಾ ಮತ್ತು ವೃಂದಾವನಕ್ಕೆ ತೀರ್ಥಯಾತ್ರೆಯಿಂದ ಕೈಗೊಂಡು ಹಿಂದಿರುಗುತ್ತಿದ್ದಾಗ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಭಕ್ತರು ಸುಟ್ಟು ಕರಕಲಾಗಿದ್ದಾರೆ. ಬಸ್‌ನಲ್ಲಿ ಪಂಜಾಬ್ ಮೂಲದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 60ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು.

VISTARANEWS.COM


on

Fire Accident
Koo

ಚಂಡಿಗಢ: ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ ವೇಯಲ್ಲಿ ಶುಕ್ರವಾರ ರಾತ್ರಿ ನಡೆದ ಭೀಕರ ರಸ್ತೆ ಅವಘಡದಲ್ಲಿ 8 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಸ್‌ಗೆ ಬೆಂಕಿ ಹತ್ತಿಕೊಂಡು ಈ ಅವಘಡ ನಡೆದಿದೆ. ಉತ್ತರ ಪ್ರದೇಶದ ಮಥುರಾ ಮತ್ತು ವೃಂದಾವನಕ್ಕೆ ತೀರ್ಥಯಾತ್ರೆಯಿಂದ ಕೈಗೊಂಡು ಹಿಂದಿರುಗುತ್ತಿದ್ದಾಗ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಭಕ್ತರು ಸುಟ್ಟು ಕರಕಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ (Fire Accident).

ಬಸ್‌ನಲ್ಲಿ ಪಂಜಾಬ್ ಮೂಲದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 60ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಶನಿವಾರ ಮುಂಜಾನೆ 1.30ರ ಸುಮಾರಿಗೆ ಬಸ್‌ನ ಹಿಂಭಾಗದಲ್ಲಿ ಬೆಂಕಿಯ ಕಿಡಿ ಹತ್ತಿಕೊಂಡಿರುವುದು ಗಮನಿಸಿ ಚಾಲಕನನ್ನು ಎಚ್ಚರಿಸಲು ಪ್ರಯತ್ನಿಸಿದ್ದೆವು. ಆದರೆ ಅಷ್ಟರಲ್ಲಿ ಅವಘಡ ಸಂಭವಿಸಿತು ಎಂದು ಬದುಕುಳಿದವರು ತಿಳಿಸಿದ್ದಾರೆ.

ಹೆಚ್ಚುತ್ತಿರುವ ಬೆಂಕಿಯನ್ನು ನೋಡಿದ ಬೈಕ್ ಸವಾರನೊಬ್ಬ ಬಸ್ ಅನ್ನು ಹಿಂಬಾಲಿಸಿ ನಿಲ್ಲಿಸಲು ಚಾಲಕನಿಗೆ ಎಚ್ಚರಿಕೆ ನೀಡಿದ್ದ. ಬಳಿಕ ಸ್ಥಳೀಯರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಬಸ್‌ನ ಮುಂಭಾಗದಲ್ಲಿದ್ದ ಹಲವರನ್ನು ರಕ್ಷಿಸಲಾಯಿತು. ಬೆಂಕಿ ಕಾಣಿಸಿಕೊಳ್ಳಲಿರುವ ಕಾರಣ ಇನ್ನೂ ಪತ್ತೆಯಾಗಿಲ್ಲ. ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರಕ್​ಗೆ ಬಸ್ ಡಿಕ್ಕಿ ಹೊಡೆದು ಐವರು ಸಾವು

ಜೈಪುರ: ರಾಜಸ್ಥಾನ- ಉತ್ತರ ಪ್ರದೇಶ ಮಾರ್ಗದ ಭರತ್‌ಪುರದಲ್ಲಿ ಶುಕ್ರವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಚಾಲಕನ ತಪ್ಪಿನಿಂದಾಗಿ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 12 ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಬಸ್ ಮತ್ತು ಟ್ರಕ್ ಎರಡೂ ಜೈಪುರದಿಂದ ಆಗ್ರಾಕ್ಕೆ ಹೋಗುತ್ತಿದ್ದವು. ಟ್ರಕ್​ಗೆ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿತ್ತು.

ಕೊಪ್ಪಳ ಬಳಿ ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿಯಾಗಿ ಮೂವರ ದುರ್ಮರಣ

ಕೊಪ್ಪಳ: ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೂವರು ಮೃತಪಟ್ಟು, 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿರುವ ಘಟನೆ ಕೊಪ್ಪಳ ತಾಲೂಕಿನ‌ ನಿಂಗಾಪುರದ ಬಳಿಯ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮಸ್ಥರಾದ ಬಸವರಾಜ (22), ಮುತ್ತಪ್ಪ (22), ಕೊಂಡಪ್ಪ (60) ಮೃತರು. ಹುಲಿಗೆಮ್ಮ ದೇವಸ್ಥಾನಕ್ಕೆ ಹೋಗಿ ಮರಳಿ ಊರಿಗೆ ಹೋಗುವಾಗ ದುರ್ಘಟನೆ ನಡೆದಿದೆ. ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದೆ.

ಮತ ಚಲಾಯಿಸಿ ತೆರಳುತ್ತಿದ್ದ 6 ಮಂದಿ ಸಜೀವ ದಹನ

ಅಮರಾವತಿ: ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯ ಚಿಲಕಲೂರಿಪೇಟೆಯಲ್ಲಿ ಬುಧವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬಸ್‌ ಹೊತ್ತಿ ಉರಿದು 6 ಮಂದಿ ಸಜೀವ ದಹನವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಲವು ಮಂದಿಗೆ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿರಾಲಾದಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಖಾಸಗಿ ಟ್ರಾವೆಲ್ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಅದು ಚಾಲಕನ ನಿಯಂತ್ರಣ ಕಳೆದುಕೊಂಡು ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆಯಿತು. ಬಳಿಕ ಬೆಂಕಿ ಇಡೀ ಬಸ್‌ಗೆ ವ್ಯಾಪಿಸಿದ್ದು ಸಂಪೂರ್ಣವಾಗಿ ಸುಟ್ಟು ಹೋಗಿದೆ. 

ಇದನ್ನೂ ಓದಿ: Road Accident: ಬೈಕ್‌ಗಳ ನಡುವೆ ಡಿಕ್ಕಿ; ಒಬ್ಬ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ

Continue Reading

ಕ್ರೈಂ

Crime News: ಪತ್ನಿಯನ್ನು ಕೊಂದು ಶವದ ಫೋಟೊ ಸಂಬಂಧಿಕರಿಗೆ ಕಳುಹಿಸಿ ನೇಣಿಗೆ ಶರಣಾದ ಪತಿ; ಅನಾಥವಾಯ್ತು ಹೆಣ್ಣು ಮಗು

Crime News: ಪತ್ನಿಯ ಶೀಲದ ಬಗ್ಗೆ ಸಂಶಯಗೊಂಡ ಪತಿ ಆಕೆಯನ್ನು ಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ನೇಣು ಬಿಗಿದುಕೊಳ್ಳುವ ಮುನ್ನ ಆತ ಪತ್ನಿಯ ಮೃತದೇಹದ ಫೋಟೊವನ್ನು ತನ್ನ ಸಂಬಂಧಿಕರಿಗೆ ಕಳುಹಿಸಿದ್ದ. ಸದ್ಯ ದಂಪತಿಯ ಆರು ವರ್ಷದ ಹೆಣ್ಣು ಮಗು ಅನಾಥವಾಗಿದೆ.

VISTARANEWS.COM


on

Crime News
Koo

ಲಕ್ನೋ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಶವದ ಫೋಟೊಗಳನ್ನು ತನ್ನ ಸಂಬಂಧಿಕರಿಗೆ ಕಳುಹಿಸಿ ಮತ್ತೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಆರೋಪಿಯನ್ನು 30 ವರ್ಷದ ಶ್ಯಾಮ್‌ ಗೋಸ್ವಾಮಿ ಎಂದು ಗುರುತಿಸಲಾಗಿದೆ. ಆತ ತನ್ನ ಪತ್ನಿ 28 ವರ್ಷದ ಪ್ರಿಯಾ ಅವರನ್ನು ಕೊಲೆಗೈದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ (Crime News).

ಪತ್ನಿಯ ಶೀಲದ ಬಗ್ಗೆ ಸಂಶಯಗೊಂಡ ಶ್ಯಾಮ್‌ ಗೋಸ್ವಾಮಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ʼʼಪ್ರಿಯಾ ಅವರನ್ನು ಬೆಳಗ್ಗೆ ಕತ್ತು ಹಿಸುಕಿ ಕೊಂದ ಆತ ಕೆಲವು ಗಂಟೆಗಳ ಕಾಲ ಶವದೊಂದಿಗೇ ಇದ್ದ. ಈ ವೇಳೆ ಹಲವು ಫೋಟೊಗಳನ್ನು ಕ್ಲಿಕ್ಕಿಸಿ ತನ್ನ ಪರಿಚಯಸ್ಥರಿಗೆ ಕಳುಹಿಸಿದ್ದ. ಬಳಿಕ ಮಧ್ಯಾಹ್ನ 1ರ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆʼʼ ಎಂದು ಉಪ ಪೊಲೀಸ್ ಆಯುಕ್ತ (ಗ್ರಾಮೀಣ) ವಿವೇಕ್ ಚಂದ್ರ ಯಾದವ್ ತಿಳಿಸಿದ್ದಾರೆ.

ʼʼವಾಟ್ಯಾಪ್‌ನಲ್ಲಿ ಫೋಟೊ ನೋಡಿದ ಪ್ರಿಯಾ ಅವರ ಸಹೋದರ ಗಾಬರಿಯಿಂದ ಮನೆಗೆ ಧಾವಿಸಿ ಬಂದಿದ್ದರು. ಈ ವೇಳೆ ದಂಪತಿಯ ಶವ ಕಂಡು ಬಂದಿದೆ. ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆʼʼ ಎಂದು ವಿವೇಕ್ ಚಂದ್ರ ಯಾದವ್ ಮಾಹಿತಿ ನೀಡಿದ್ದಾರೆ.

ಶ್ಯಾಮ್‌ ಗೋಸ್ವಾಮಿ ಮತ್ತು ಪ್ರಿಯಾ ದಂಪತಿ ಮೂರು ವರ್ಷಗಳಿಂದ ಅಂಕುರ್‌ ವಿಹಾರ್‌ ಲೋನಿಯ ಶಂಕರ್‌ ವಿಹಾರ್‌ ಕಾಲನಿಯ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ. ಶ್ಯಾಮ್‌ ಕಾರಿನ ಬಿಡಿ ಭಾಗಗಳ ಮಾರಾಟ ಮಾಡುವ ಅಂಗಡಿ ನಡೆಸುತ್ತಿದ್ದರೆ ಪ್ರಿಯಾ ಖಾಸಗಿ ಕಂಪೆನೊಯೊಂದರ ಉದ್ಯೋಗಿಯಾಗಿದ್ದರು. ಈ ದಂಪತಿಗೆ ಆರು ವರ್ಷದ ಹೆಣ್ಣು ಮಗುವೊಂದು ಇದ್ದು, ಆಕೆ ಇಟಾ ಜಿಲ್ಲೆಯಲ್ಲಿರುವ ಅಜ್ಜಿ ಮನೆಯಲ್ಲಿ ವಾಸಿಸುತ್ತಿದ್ದಾಳೆ.

“ಮೇಲ್ನೋಟಕ್ಕೆ ಗೋಸ್ವಾಮಿ ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎನ್ನುವ ಶಂಕೆಯಿಂದ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನುವ ಬಗ್ಗೆ ಅನುಮಾನ ಮೂಡಿದೆ. ಈ ಬಗ್ಗೆ ಪರಿಚಯಸ್ಥರಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದೇವೆʼʼ ಎಂದು ವಿವೇಕ್ ಚಂದ್ರ ಯಾದವ್ ಹೇಳಿದ್ದಾರೆ.

ಇದನ್ನೂ ಓದಿ: ವೈದ್ಯರ ಸಲಹೆಯಂತೆ 5 ದಿನದ ಹಸುಳೆಯನ್ನು ಬಿಸಿಲಿನಲ್ಲಿ ಮಲಗಿಸಿದರು; ಬೆಂದು ಕರಟಿಹೋಯ್ತು ಕಂದಮ್ಮನ ಜೀವ

ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ

ಚೆನ್ನೈ: ತಮಿಳುನಾಡಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ದೇವಸ್ಥಾನದ ಅರ್ಚಕ ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ ನಡೆಸಿದ್ದಾಗಿ ಜನಪ್ರಿಯ ಟಿವಿ ನಿರೂಪಕಿಯೊಬ್ಬರು ಆರೋಪಿಸಿದ್ದಾರೆ. ಚೆನ್ನೈಯ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್‌ ದೇಗುಲದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ ವಿರುದ್ಧ ಇದೀಗ ನಿರೂಪಕಿ ವಿರುಗಂಬಾಕ್ಕಂ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾಲಿಗ್ರಾಮ ಮೂಲದ, ಖಾಸಗಿ ವಾಹಿನಿ ನಿರೂಪಕಿ ಕಾರ್ತಿಕ್‌ ಮುನಿಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜತೆಗೆ ಪ್ರಕರಣದ ವಿವರ ನೀಡಿದ್ದಾರೆ.

Continue Reading

ದೇಶ

World Aids Vaccine Day: ಇಂದು ವಿಶ್ವ ಏಡ್ಸ್ ಲಸಿಕೆ ದಿನ; ಈ ದಿನದ ಹಿನ್ನೆಲೆ ಏನು?

ಕೆಲವೊಂದು ಕಾಯಿಲೆಗಳಿಗೆ ಔಷಧವನ್ನು ಇನ್ನೂ ಕಂಡು ಹಿಡಿಯಲಾಗಿಲ್ಲ. ಮುನ್ನೆಚ್ಚರಿಕೆಯಿಂದ ಮಾತ್ರ ಕಾಯಿಲೆ ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ತಡೆಯಬಹುದು. ಅಂತಹ ಒಂದು ಸಾಂಕ್ರಾಮಿಕ ಕಾಯಿಲೆಯಲ್ಲಿ ಹೆಚ್ ಐವಿ ಏಡ್ಸ್ ಕೂಡ (World Aids Vaccine Day) ಒಂದು. ಈ ಬಗ್ಗೆ ಪ್ರತಿಯೊಬ್ಬರೂ ಜಾಗರೂಕರಾಗಿರುವುದೇ ಇದರಿಂದ ರಕ್ಷಿಸಿಕೊಳ್ಳುವ ಒಂದು ಉತ್ತಮ ಉಪಾಯ.

VISTARANEWS.COM


on

By

World Aids Vaccine Day
Koo

ಜಗತ್ತಿನ ಬಹುತೇಕ ಕಾಯಿಲೆಗಳಿಗೆ ಈಗ ಔಷಧ ಲಭ್ಯವಿದೆ. ಆದರೆ ಎಚ್‌ಐವಿ (HIV) ಸೋಂಕಿಗೆ ಮಾತ್ರ ಇನ್ನೂ ಯಾವುದೇ ಚಿಕಿತ್ಸೆ ಕಂಡು ಹಿಡಿಯಲಾಗಿಲ್ಲ. ಹೀಗಾಗಿಯೇ ಇದರ ಬಗ್ಗೆ ಜಾಗೃತಿ ಮೂಡಿಸಲು ವಿಶ್ವದಾದ್ಯಂತ (world) ಮೇ 18 ರಂದು ವಿಶ್ವ ಏಡ್ಸ್ (AIDS) ಲಸಿಕೆ ದಿನ ಅಥವಾ ಎಚ್ಐವಿ ಲಸಿಕೆ ಜಾಗೃತಿ ದಿನವನ್ನು (World Aids Vaccine Day) ಆಚರಿಸಲಾಗುತ್ತದೆ. ಎಚ್ಐವಿ ಸೋಂಕಿಗೆ ಯಾವುದೇ ಚಿಕಿತ್ಸೆ ಇಲ್ಲ. ಇದಕ್ಕೆ ಆಂಟಿರೆಟ್ರೋವೈರಲ್ ಔಷಧಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದು ದೇಹದಲ್ಲಿ ವೈರಸ್ ಪುನರಾವರ್ತನೆಯಾಗದಂತೆ ತಡೆಯುತ್ತದೆ.

ವಿಶ್ವ ಏಡ್ಸ್ ಲಸಿಕೆ ದಿನ ಅಥವಾ ಎಚ್‌ಐವಿ ಲಸಿಕೆ ಜಾಗೃತಿ ದಿನವನ್ನು ಮೇ 18ರಂದು ಎಚ್‌ಐವಿ ಲಸಿಕೆ, ರೋಗನಿರೋಧಕ ಪ್ರಯೋಜನಗಳು ಮತ್ತು ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದ ಇತರ ವಿವರಗಳ ಬಗ್ಗೆ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ. ಎಚ್ಐವಿ ಸೋಂಕನ್ನು ತಡೆಗಟ್ಟಲು ಈ ಅರಿವು ಎಲ್ಲರಿಗೂ ಮುಖ್ಯವಾಗಿದೆ.
ಈ ದಿನವು ಲಸಿಕೆ ಸಂಶೋಧನೆಯ ಭಾಗವಾಗಿರುವ ಆರೋಗ್ಯ ವೃತ್ತಿಪರರು ಮತ್ತು ಸಹಾಯಕ ಸಿಬ್ಬಂದಿಯ ನಿರಂತರ ಕೊಡುಗೆಯನ್ನು ಸ್ಮರಿಸಲು ಆಚರಿಸಲಾಗುತ್ತದೆ.

ಎಷ್ಟು ಸೋಂಕಿತರು?

ಎಚ್ಐವಿ ಜಾಗತಿಕ ಸಾಂಕ್ರಾಮಿಕವಾಗಿದ್ದು, ಇದು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿದೆ. ಇತ್ತೀಚಿನ ಅಂದಾಜಿನ ಪ್ರಕಾರ ಸರಿಸುಮಾರು 38.4 ಮಿಲಿಯನ್ ಜನರು HIVಯೊಂದಿಗೆ ವಾಸಿಸುತ್ತಿದ್ದಾರೆ, ಅವರಲ್ಲಿ ಮೂರನೇ ಎರಡರಷ್ಟು ಜನರು WHO ಆಫ್ರಿಕನ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಪ್ರಪಂಚದಾದ್ಯಂತ ಸುಮಾರು ಏಳು ಜನರಲ್ಲಿ ಒಬ್ಬರು HIV ಯೊಂದಿಗೆ ವಾಸಿಸುತ್ತಿದ್ದಾರೆ. ಇದು ವಿಶ್ವದ ಜನಸಂಖ್ಯೆಯ 37.9 ಮಿಲಿಯನ್ ನಷ್ಟಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ 2022 ರ ಅಂತ್ಯದ ವೇಳೆಗೆ 39 ಮಿಲಿಯನ್ ಎಚ್ಐವಿ ಪಾಸಿಟಿವ್ ಜನರಿದ್ದಾರೆ. ಅದರಲ್ಲಿ 1.5 ಮಿಲಿಯನ್ 0- 14 ವರ್ಷಗಳ ನಡುವಿನ ಮಕ್ಕಳು ಇದ್ದಾರೆ.

ಹರಡಲು ಕಾರಣ ಏನು?

ಬಡ ಮತ್ತು ಅತ್ಯಂತ ಹಿಂದುಳಿದ ಸಮುದಾಯಗಳಲ್ಲಿ ವೈರಸ್ ಹೆಚ್ಚು ಹರಡುತ್ತದೆ. ಶೈಕ್ಷಣಿಕ ಮಾಹಿತಿಯ ಕೊರತೆ, ತಡೆಗಟ್ಟುವ ಕ್ರಮಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳು ಎಚ್ಐವಿ ಹರಡುವಿಕೆಗೆ ಪ್ರಮುಖ ಕಾರಣಗಳಾಗಿವೆ. ಸಾಂಕ್ರಾಮಿಕ ರೋಗವನ್ನು ಎದುರಿಸಲು ಮಾಡಿದ ಗಮನಾರ್ಹ ಪ್ರಯತ್ನಗಳ ಹೊರತಾಗಿಯೂ ಹೆಚ್ ಐವಿಯೊಂದಿಗೆ ವಾಸಿಸುವ ಜನರ ಸಂಖ್ಯೆಯು ಹೆಚ್ಚಾಗಿದೆ. ಇದರಿಂದಾಗಿ ವೈರಸ್ ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಪರಿಣಾಮಕಾರಿ ಲಸಿಕೆಗಾಗಿ ಸಂಶೋಧನೆಯನ್ನು ಮುಂದುವರಿಸುವುದು ಅತ್ಯಗತ್ಯ.


ವಿಶ್ವ ಏಡ್ಸ್ ಲಸಿಕೆ ದಿನದ ಇತಿಹಾಸ

1997ರ ಮೇ 18ರಂದು ಮೇರಿಲ್ಯಾಂಡ್‌ನ ಮೋರ್ಗಾನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಮಾಡಿದ ಭಾಷಣದಲ್ಲಿ ಆಗಿನ ಯುಎಸ್ ಅಧ್ಯಕ್ಷ ಬಿಲ್ ಕ್ಲಿಂಟನ್, ಪರಿಣಾಮಕಾರಿ ಎಚ್‌ಐವಿ ತಡೆಗಟ್ಟುವ ಲಸಿಕೆ ಮಾತ್ರ ಏಡ್ಸ್ ಬೆದರಿಕೆಯನ್ನು ನಿಯಂತ್ರಣದಲ್ಲಿ ಇರಿಸುತ್ತದೆ ಮತ್ತು ಅಂತಿಮವಾಗಿ ತೆಗೆದುಹಾಕುತ್ತದೆ ಎಂದು ಹೇಳಿದರು. ಪರಿಣಾಮಕಾರಿ ಲಸಿಕೆಯ ತುರ್ತು ಅಗತ್ಯವನ್ನು ಒತ್ತಿ ಹೇಳುವ ಕ್ಲಿಂಟನ್ ಅವರ ಭಾಷಣದ ಗೌರವಾರ್ಥವಾಗಿ ಮೇ 18 ಅನ್ನು ವಿಶ್ವ ಏಡ್ಸ್ ಲಸಿಕೆ ದಿನವೆಂದು ಘೋಷಿಸಲಾಗಿದೆ. ವಿಶ್ವ ಏಡ್ಸ್ ಲಸಿಕೆ ದಿನವನ್ನು ಮೊದಲ ಬಾರಿಗೆ 1998ರಲ್ಲಿ ಆಚರಿಸಲಾಯಿತು.

ಇದನ್ನೂ ಓದಿ: Ambulance Booking : ಬೆಂಗಳೂರಿನಲ್ಲಿ ಆ್ಯಪ್ ​ಮೂಲಕವೇ ಮಾಡಬಹುದು ಆಂಬ್ಯುಲೆನ್ಸ್​ ಬುಕಿಂಗ್

ವಿಶ್ವ ಏಡ್ಸ್ ಲಸಿಕೆ ದಿನದ ಮಹತ್ವ

ಎಚ್‌ಐವಿ ಮತ್ತು ಏಡ್ಸ್ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಲು ಈ ದಿನ ಮಹತ್ವದ್ದಾಗಿದೆ. ಸರ್ಕಾರಗಳು ಮತ್ತು ಎನ್‌ಜಿಒಗಳ ಉಪಕ್ರಮಗಳ ಬಗ್ಗೆ ಜನರಿಗೆ ತಿಳಿಸಲು ಮತ್ತು ತಡೆಗಟ್ಟುವ ಎಚ್‌ಐವಿ ಲಸಿಕೆಯ ಅಗತ್ಯತೆಯ ಕಡೆಗೆ ಗಮನ ಸೆಳೆಯಲು ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತದೆ.

Continue Reading

ದೇಶ

Kanhaiya Kumar: ಪ್ರಚಾರದ ವೇಳೆ ಕಾಂಗ್ರೆಸ್‌ ಅಭ್ಯರ್ಥಿ ಕನ್ಹಯ್ಯ ಕುಮಾರ್‌ ಮೇಲೆ ಹಲ್ಲೆ; ವಿಡಿಯೊ ಇಲ್ಲಿದೆ

Kanhaiya Kumar: ದೆಹಲಿಯ ಕರ್ತಾರ್‌ ನಗರದಲ್ಲಿರುವ ಪಕ್ಷದ ಕಚೇರಿಯಿಂದ ಕನ್ಹಯ್ಯ ಕುಮಾರ್‌ ಅವರು ಹೊರಗೆ ಹೋಗುತ್ತಿದ್ದರು. ಇದೇ ವೇಳೆ ಏಳೆಂಟು ಜನ ಹಾರ ಹಿಡಿದುಕೊಂಡು ಬಂದರು. ಹಾರ ಹಾಕುವ ನೆಪದಲ್ಲಿ ಅವರು ಕನ್ಹಯ್ಯ ಕುಮಾರ್‌ ಮೇಲೆ ಹಲ್ಲೆ ನಡೆಸಿದರು. ಅವರ ಮೇಲೆ ಮಸಿ ಎರಚುವ ಜತೆಗೆ ತಳ್ಳಿದರು. ಘಟನೆಯಲ್ಲಿ ನಾಲ್ವರು ಮಹಿಳೆಯರಿಗೆ ಗಾಯಗಳಾಗಿವೆ. ಪತ್ರಕರ್ತರೊಬ್ಬರು ಬಿದ್ದು ಗಾಯ ಮಾಡಿಕೊಂಡಿದ್ದಾರೆ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

VISTARANEWS.COM


on

Kanhaiya Kumar
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಈಶಾನ್ಯ ದೆಹಲಿ ಕಾಂಗ್ರೆಸ್‌ ಅಭ್ಯರ್ಥಿ ಕನ್ಹಯ್ಯ ಕುಮಾರ್‌ (Kanhaiya Kumar) ಅವರು ಪ್ರಚಾರ ಮಾಡುವ ವೇಳೆ ಅವರ ಮೇಲೆ ಕೆಲ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಪೂರ್ವ ದೆಹಲಿಯ ನ್ಯೂ ಉಸ್ಮಾನ್‌ಪುರ ಪ್ರದೇಶದಲ್ಲಿ ಕನ್ಹಯ್ಯ ಕುಮಾರ್‌ ಅವರು ಚುನಾವಣೆ ಪ್ರಚಾರ ನಡೆಸುತ್ತಿದ್ದರು. ಇದೇ ವೇಳೆ, ಏಳೆಂಟು ಜನ ಅವರಿಗೆ ಹಾರ ಹಾಕಲು ಬಂದಿದ್ದು, ಹಾರ ಹಾಕಿದ ಕೂಡಲೇ ಕಾಂಗ್ರೆಸ್‌ ಅಭ್ಯರ್ಥಿ ಮೇಲೆ ಹಲ್ಲೆ ನಡೆಸಿದ್ದಾರೆ. ಕೆಲವು ಜನ ಅವರ ಮೇಲೆ ಮಸಿ ಎರಚಿದ್ದಾರೆ.

ಕನ್ಹಯ್ಯ ಕುಮಾರ್‌ ಅವರ ಮೇಲೆ ಹಲ್ಲೆ ನಡೆದ ಬಳಿಕ ಬ್ರಹ್ಮಪುರಿಯ ಆಪ್‌ ಕೌನ್ಸಿಲರ್‌ ಛಾಯಾ ಗೌರವ್‌ ಶರ್ಮಾ ಅವರು ದೂರು ದಾಖಲಿಸಿದ್ದಾರೆ. “ಕರ್ತಾರ್‌ ನಗರದಲ್ಲಿರುವ ಪಕ್ಷದ ಕಚೇರಿಯಿಂದ ಕನ್ಹಯ್ಯ ಕುಮಾರ್‌ ಅವರು ಹೊರಗೆ ಹೋಗುತ್ತಿದ್ದರು. ಇದೇ ವೇಳೆ ಏಳೆಂಟು ಜನ ಹಾರ ಹಿಡಿದುಕೊಂಡು ಬಂದರು. ಹಾರ ಹಾಕುವ ನೆಪದಲ್ಲಿ ಅವರು ಕನ್ಹಯ್ಯ ಕುಮಾರ್‌ ಮೇಲೆ ಹಲ್ಲೆ ನಡೆಸಿದರು. ಅವರ ಮೇಲೆ ಮಸಿ ಎರಚುವ ಜತೆಗೆ ತಳ್ಳಿದರು. ಘಟನೆಯಲ್ಲಿ ನಾಲ್ವರು ಮಹಿಳೆಯರಿಗೆ ಗಾಯಗಳಾಗಿವೆ. ಪತ್ರಕರ್ತರೊಬ್ಬರು ಬಿದ್ದು ಗಾಯ ಮಾಡಿಕೊಂಡಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕನ್ಹಯ್ಯ ಕುಮಾರ್‌ ಮೇಲೆ ದಾಳಿ ನಡೆಸಿದ ಏಳೆಂಟು ಜನರಲ್ಲಿ ಇಬ್ಬರು ವಿಡಿಯೊ ಬಿಡುಗಡೆ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ ಕನ್ಹಯ್ಯ ಕುಮಾರ್‌ ದೇಶ ಒಡೆಯುವ (ಟುಕ್ಡೆ ಗ್ಯಾಂಗ್‌ ಎಂದೇ ಖ್ಯಾತಿ) ಹೇಳಿಕೆ ನೀಡಿದ್ದು, ಸೇನೆಯ ವಿರುದ್ಧ ಮಾತನಾಡಿದ ಹಿನ್ನೆಲೆಯಲ್ಲಿ ಅವರು ಕನ್ಹಯ್ಯ ಕುಮಾರ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬದಾಗಿ ಹೇಳಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ದಾಳಿಗೆ ನಿಖರ ಕಾರಣ ಗೊತ್ತಾಗಿಲ್ಲ.

ಕನ್ಹಯ್ಯ ಸ್ಪರ್ಧೆಗೆ ಪಕ್ಷದಲ್ಲೇ ವಿರೋಧ

ಕನ್ಹಯ್ಯ ಕುಮಾರ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿರುವುದಕ್ಕೆ ಕೆಲ ದಿನಗಳ ಹಿಂದೆ ಕಾಂಗ್ರೆಸ್‌ನಲ್ಲಿಯೇ ವಿರೋಧ ವ್ಯಕ್ತವಾಗಿತ್ತು. ಪಕ್ಷದ ಪ್ರಧಾನ ಕಚೇರಿ ಎದುರು ಜಮಾನಿಸಿದ ನೂರಾರು ಕಾಂಗ್ರೆಸ್‌ ಕಾಂಗ್ರೆಸಿಗರು ಹೊರಗಿನವರು ಬೇಡ, ಸ್ಥಳೀಯರನ್ನೇ ಕಣಕ್ಕಿಳಿಸಿ ಎಂದು ಒತ್ತಾಯಿಸಿದ್ದರು. ಮೌಜ್‌ಪುರ ಮೆಟ್ರೋ ಸ್ಟೇಷನ್ ಬಳಿ ಪ್ರತಿಭಟನೆ ನಡೆದಿದ್ದು, ನಮಗೆ ಸ್ಥಳೀಯ ನಾಯಕರೇ ಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು.‌

ಈಶಾನ್ಯ ದೆಹಲಿಯಿಂದ ಕನ್ಹಯ್ಯ ಕುಮಾರ್ ಸ್ಪರ್ಧಿಸುತ್ತಿದ್ದು, ಬಿಜೆಪಿಯ ಮನೋಜ್ ತಿವಾರಿ ವಿರುದ್ಧ ಕಣಕ್ಕೆ ಇಳಿದಿದ್ದಾರೆ. 37 ವರ್ಷದ ಕುಮಾರ್ ಎರಡನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. 2019ರಲ್ಲಿ, ಅವರು ಬಿಹಾರದ ಬೆಗುಸರಾಯ್​ನಿಂದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅಲ್ಲಿ ಅವರು ಕೇಂದ್ರ ಸಚಿವ ಮತ್ತು ಭಾರತೀಯ ಜನತಾ ಪಕ್ಷದ ನಾಯಕ ಗಿರಿರಾಜ್ ಸಿಂಗ್ ವಿರುದ್ಧ ಸೋತಿದ್ದರು. ಅವರು 2021ರಲ್ಲಿ ಕಾಂಗ್ರೆಸ್ ಸೇರಿದ್ದರು.

ಇದನ್ನೂ ಓದಿ: Amit Shah: ಪ್ರಚಾರದ ವೇಳೆ ಕೇಜ್ರಿವಾಲ್‌ ನೀಡಿದ ಹೇಳಿಕೆಯಿಂದ ನ್ಯಾಯಾಂಗ ನಿಂದನೆ; ಅಮಿತ್‌ ಶಾ ವಾಗ್ದಾಳಿ

Continue Reading
Advertisement
Fire Accident
ದೇಶ4 mins ago

Fire Accident: ಚಲಿಸುತ್ತಿದ್ದ ಬಸ್‌ನಲ್ಲಿ ಕಾಣಿಕೊಂಡ ಬೆಂಕಿ; 8 ಮಂದಿ ಭಕ್ತರ ಸಜೀವ ದಹನ

SSLC exam
ಪ್ರಮುಖ ಸುದ್ದಿ7 mins ago

SSLC Exam- 2: ಜೂ.14ರಿಂದ 2ನೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ

t20 world cup
ಕ್ರಿಕೆಟ್9 mins ago

T20 World Cup : ಭಾರತ- ಪಾಕಿಸ್ತಾನ ಟಿ20 ವಿಶ್ವ ಕಪ್​ ಪಂದ್ಯದ ಟಿಕೆಟ್ ಬೆಲೆ 1.8 ಕೋಟಿ ರೂಪಾಯಿ!

drowned 4 death in kolhapur
ಕ್ರೈಂ33 mins ago

Drowned: ಬಟ್ಟೆ ತೊಳೆಯಲು ಹೋಗಿ ನಾಲ್ವರು ಜಲ ಸಮಾಧಿ

Virat kohli
ಪ್ರಮುಖ ಸುದ್ದಿ39 mins ago

Virat kohli : ಆರ್​ಸಿಬಿ ಆಟಗಾರರಿಗೆ ಬ್ಯಾಟಿಂಗ್ ಅಭ್ಯಾಸ ನಡೆಸಲು ನೆರವಾದ ಕೊಹ್ಲಿ; ಇಲ್ಲಿದೆ ವಿಡಿಯೊ

Crime News
ಕ್ರೈಂ49 mins ago

Crime News: ಪತ್ನಿಯನ್ನು ಕೊಂದು ಶವದ ಫೋಟೊ ಸಂಬಂಧಿಕರಿಗೆ ಕಳುಹಿಸಿ ನೇಣಿಗೆ ಶರಣಾದ ಪತಿ; ಅನಾಥವಾಯ್ತು ಹೆಣ್ಣು ಮಗು

RCB vs CSK
ಕ್ರೀಡೆ54 mins ago

RCB vs CSK: ವಾಹನ ಸವಾರರೇ ಗಮನಿಸಿ, ಇಂದು ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ

sarjapura boy murder case
ಕ್ರೈಂ1 hour ago

Murder Case: ಬಾಲಕನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್‌, ಮೊಬೈಲ್‌ ಗೀಳಿಗಾಗಿ ಅಣ್ಣನೇ ಕೊಂದ

Skin Care Tips
ಆರೋಗ್ಯ2 hours ago

Skin Care Tips: ಬಿಸಿಲಿನಿಂದ ಚರ್ಮ ಕಪ್ಪಾಗಿದೆಯಾ? ಇಲ್ಲಿದೆ ಸರಳ ಮನೆಮದ್ದು

karnataka Weather Forecast
ಮಳೆ2 hours ago

Karnataka Weather : ಈ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ಬಿರುಗಾಳಿ ಸಹಿತ ಭಾರಿ ಮಳೆ ಎಚ್ಚರಿಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ12 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌