Made In China Film | ಕನ್ನಡದ ಮೊದಲ ವರ್ಚುವಲ್‌ ಕತೆಯ ಸಿನಿಮಾ ಜೂನ್‌ 17ಕ್ಕೆ ತೆರೆಗೆ - Vistara News

ಸಿನಿಮಾ

Made In China Film | ಕನ್ನಡದ ಮೊದಲ ವರ್ಚುವಲ್‌ ಕತೆಯ ಸಿನಿಮಾ ಜೂನ್‌ 17ಕ್ಕೆ ತೆರೆಗೆ

Made in China ಕನ್ನಡದಲ್ಲಿಯೇ ಮೊದಲ ವರ್ಚುವಲ್‌ ಕತೆಯ ಸಿನಿಮಾ ಆಗಿದ್ದು, ಈಗಾಗಲೇ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದೆ. ಕೋವಿಡ್‌ ಸಂದರ್ಭದಲ್ಲಿ ಆಗುವ ಸನ್ನಿವೇಶದ ಕಥಾ ಹಂದರ ಹೊಂದಿದೆ.

VISTARANEWS.COM


on

ವರ್ಚುವಲ್‌ ಸಿನಿಮಾ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಕನ್ನಡ ಚಿತ್ರರಂಗ ಪ್ರಯೋಗಾತ್ಮಕ ಸಿನಿಮಾಗಳಿಗೆ ಸಾಕ್ಷಿಯಾಗುತ್ತಿದೆ. ಅದೇ ರೀತಿ ಇದೇ ಮೊದಲ ಬಾರಿಗೆ ತಯಾರಾಗಿರುವ ವರ್ಚುವಲ್‌ ಸಿನಿಮಾ ‘ಮೇಡ್‌ ಇನ್‌ ಚೈನಾ’ ಜೂನ್‌ 17ರಂದು ಕೇವಲ ಮಲ್ಟಿಪ್ಲೆಕ್ಸ್‌ಗಳಲ್ಲಷ್ಟೇ ಬಿಡುಗಡೆಯಾಗಲಿದೆ.

ನಾಗಭೂಷಣ್‌ ಹಾಗೂ ಪ್ರಿಯಾಂಕಾ ತಿಮ್ಮೇಶ್‌ ಜೋಡಿಯಾಗಿ ನಟಿಸಿರುವ ಈ ಚಿತ್ರ ಆರಂಭದಿಂದ ಹಿಡಿದು ಕೊನೆವರೆಗೂ ವಿಡಿಯೋ ಕಾಲ್‌ ಮೂಲಕವೇ ನಡೆಯಲಿದೆ. ಈ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದ್ದು, ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ.

ಸಾಫ್ಟ್‌ವೇರ್‌ ಉದ್ಯೋಗಿಯೊಬ್ಬ ಚೀನಾಗೆ ಹೋದ ಸಂದರ್ಭದಲ್ಲಿ ಲಾಕ್‌ಡೌನ್‌ ಘೋಷಣೆಯಾಗುತ್ತದೆ. ಆತ ಕೋವಿಡ್‌ ಸೋಂಕಿತನ ಸಂಪರ್ಕಕ್ಕೆ ಬಂದಿರುವ ಕಾರಣ, ಆತನ ಮನೆಯನ್ನು ಸೀಲ್‌ಡೌನ್‌ ಮಾಡಲಾಗುತ್ತದೆ. ಇತ್ತ ಭಾರತದಲ್ಲಿ ಆತನ ಪತ್ನಿ ತುಂಬು ಗರ್ಭಿಣಿ. ಇಂಥ ಸನ್ನಿವೇಶದಲ್ಲಿ ಆತ ಅನುಭವಿಸುವ ತೊಳಲಾಟ, ದುಗುಡ, ದುಃಖದ ಕಂಟೆಂಟ್‌ ಟ್ರೇಲರ್‌ನಲ್ಲಿ ಕಟ್ಟಿಕೊಡಲಾಗಿದೆ.

ಇದನ್ನೂ ಓದಿ | ದಿಶಾ ಸಿನಿಮಾ ಹೆಸರಲ್ಲಿ ವಂಚನೆ; ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ವಿರುದ್ಧ ಕೇಸ್‌

ಅಯೋಗ್ಯ, ಚಮಕ್, ರತ್ನಮಂಜರಿ ಸಿನಿಮಾಗಳಿಗೆ ಛಾಯಾಗ್ರಾಹಕ ಕೆಲಸ ಮಾಡಿದ್ದ ಪ್ರೀತಮ್ ತೆಗ್ಗಿನಮನೆ ಸ್ವತಂತ್ರ ನಿರ್ದೇಶಕರಾಗಿ ಮೇಡ್ ಇನ್ ಚೈನಾ ಮೂಲಕ ಬಡ್ತಿ ಪಡೆದಿದ್ದು, ನಿರ್ದೇಶನದ ಜತೆಗೆ ಗ್ರಾಫಿಕ್, ಸಂಕಲನ ಹಾಗೂ ಛಾಯಾಗ್ರಹಣದ ಜವಾಬ್ದಾರಿಯನ್ನೂ ಪ್ರೀತಮ್‌ ನಿಭಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಪ್ರೀತಮ್‌, “ಮಲಯಾಳಂನಲ್ಲಿ ‘ಸೀ ಯೂ ಸೂನ್‌’ ಹಾಗೂ ಬಾಲಿವುಡ್‌ನಲ್ಲಿ ‘ಸರ್ಚಿಂಗ್‌’ ಎನ್ನುವ ವರ್ಚುವಲ್‌ ಸಿನಿಮಾಗಳು ಬಂದಿದ್ದವು. ಇವರೆಡೂ ಸಿನಿಮಾಗಳು ಸಸ್ಪೆನ್ಸ್‌ ಥ್ರಿಲ್ಲರ್‌ ಜಾನರ್‌ನ ಸಿನಿಮಾಗಳಾಗಿದ್ದವು. ಇಂಥ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಮಾಡಲು ಸೂಕ್ತವಾದುವು. ಆದರೆ ಚಿತ್ರಮಂದಿರಗಳಲ್ಲೂ ಇಂಥ ಸಿನಿಮಾವನ್ನು ಜನರು ವೀಕ್ಷಿಸಬೇಕು ಎನ್ನುವುದು ನಮ್ಮ ಆಸೆ. ಹೀಗಾಗಿ ನಮ್ಮ ಸಿನಿಮಾವನ್ನು ಕೇವಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಇದು ಫ್ಯಾಮಿಲಿ ಡ್ರಾಮಾ ಆಗಿದೆ. ನೈಜ ಘಟನೆಗಳನ್ನು ಆಧರಿಸಿ ಕಥೆ ಹೆಣೆಯಲಾಗಿದೆ’ʼ ಎಂದರು.

ಟಿ.ಎಸ್.ಚಂದ್ರಶೇಖರ್‌, ಕ್ರಿಸ್ಟಲ್‌ ಪಾರ್ಕ್‌ ಸಂಸ್ಥೆ ಹೊಸ ಹೊಸ ತಂತ್ರಜ್ಞರಿಗೆ ಅವಕಾಶ ನೀಡುತ್ತಾ ಬಂದಿದೆ. ಅದರ ಮುಂದುವರಿದ ಭಾಗವಾಗಿ ಮೇಡ್‌ ಇನ್‌ ಚೈನಾ ಆಗಿದೆ. ಇದೊಂದು ಪ್ರಯೋಗಾತ್ಮಕ ಸಿನಿಮಾ. ಇದು ಪ್ರಥಮ ಬಾರಿ ವರ್ಚುವಲ್‌ ಆಗಿ ತಯಾರಾಗಿರುವ ಕನ್ನಡದ ಮೊದಲ ಚಿತ್ರ. ಪ್ರೀತಮ್ ಸ್ವತಂತ್ರವಾಗಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹಲವಾರು ಪ್ರಥಮಗಳಿಗೆ ಈ ಸಿನಿಮಾ ಸಾಕ್ಷಿಯಾಗಿದೆ. ಹಾಲಿವುಡ್‌ ಹಾಗೂ ಮಾಲಿವುಡ್‌ನಲ್ಲಿ ವರ್ಚುವಲ್‌ ಸಿನಿಮಾ ಯಶಸ್ವಿಯಾಗಿದ್ದು, ಕನ್ನಡದಲ್ಲಿ ಯಶಸ್ವಿಯಾಗುವ ನಿರೀಕ್ಷೆ ಇದೆ. ಇದೇ ತಿಂಗಳ 17ಕ್ಕೆ ರಾಜ್ಯಾದ್ಯಂತ ಕೇವಲ ಮಲ್ಟಿಪ್ಲೆಕ್ಸ್‌ನಲ್ಲಷ್ಟೇ ಸಿನಿಮಾ ರಿಲೀಸ್ ಆಗುತ್ತಿದೆ ಎಂದು ತಿಳಿಸಿದರು.

ಮೇಡ್‌ ಇನ್‌ ಚೈನಾ ಚಿತ್ರದಲ್ಲಿ ಗೌರವ್ ಶೆಟ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಅರುಣ ಬಾಲರಾಜ್, ರವಿ ಭಟ್ ಕೂಡ ನಟಿಸಿದ್ದಾರೆ. ನಿಶ್ಚಲ್ ವಿ ಹಾಗೂ ಪ್ರೀತಮ್ ತೆಗ್ಗಿನಮನೆ ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ. ವಿವಾನ್ ರಾಧಾಕೃಷ್ಣ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಎನ್.ಕೆ. ಸ್ಟುಡಿಯೋಸ್ ಬ್ಯಾನರ್‌ನಡಿ ನಂದಕಿಶೋರ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಕ್ರಿಸ್ಟಲ್ ಪಾರ್ಕ್ ಬ್ಯಾನರ್ ಅಡಿ‌ ಈ ಸಿನಿಮಾವನ್ನು ನಿರ್ಮಾಪಕ ಟಿ ಆರ್ ಚಂದ್ರಶೇಖರ್ ಪ್ರಸ್ತುತಪಡಿಸುತ್ತಿದ್ದಾರೆ.

ಇದನ್ನೂ ಓದಿ | Director ಉಪೇಂದ್ರ Returns: ಪಾನ್‌ ಇಂಡಿಯಾ ಸಿನಿಮಾಕ್ಕೆ ಜೂ.3ರಂದು ಮುಹೂರ್ತ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Kannada New Movie: ಸಿನಿಮಾ ಆಗುತ್ತಿದೆ ʼಪೆನ್‌ಡ್ರೈವ್ʼ! ಕುತೂಹಲಭರಿತ ಪೋಸ್ಟರ್

Kannada New Movie: ಪ್ರಚಲಿತ ವಿದ್ಯಮಾನದಲ್ಲಿ ’ಪೆನ್‌ಡ್ರೈವ್’ ಸಾಕಷ್ಟು ಸದ್ದು ಮಾಡುತ್ತಿದೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರುತ್ತಿದ್ದು, ’ದೊಡ್ಡವರಲ್ಲ ಜಾಣರಲ್ಲ’ ಎಂಬ ಅಡಿಬರಹವಿದ್ದು, ಈ ಹಿಂದೆ ’ಪಾತರಗಿತ್ತಿ’ಎನ್ನುವ ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಮಾಡಿದ್ದ ಕೆರ್ನಳ್ಳಿ ಈಶ್ವರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

VISTARANEWS.COM


on

Kannada New Movie The movie is becoming a pendrive
Koo

ಬೆಂಗಳೂರು: ’ಪೆನ್‌ಡ್ರೈವ್’ (Pendrive) ಪ್ರಚಲಿತ ವಿದ್ಯಮಾನದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಅದರಲ್ಲೂ ರಾಜಕೀಯದಲ್ಲಿ ಹೆಚ್ಚೇ ಎಂದು ಹೇಳಬಹುದು. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು (Kannada New Movie) ಸೆಟ್ಟೇರುತ್ತಿದ್ದು, ’ದೊಡ್ಡವರೆಲ್ಲ ಜಾಣರಲ್ಲ’ ಎಂಬ ಅಡಿಬರಹವಿದೆ. ಈ ಹಿಂದೆ ’ಪಾತರಗಿತ್ತಿ’ ಎನ್ನುವ ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಮಾಡಿದ್ದ ಕೆರ್ನಳ್ಳಿ ಈಶ್ವರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ನಿರೀಕ್ಷೆ ಹೆಚ್ಚಿಸಿದ ಪೋಸ್ಟರ್‌

ಮನುಷ್ಯನೊಬ್ಬ ಮುಖವಾಡ ಹಾಕಿಕೊಂಡು ಪೆನ್‌ಡ್ರೈವ್ ಹಿಡಿದುಕೊಂಡಿರುವುದು, ಮರದ ಬಳ್ಳಿಯಲ್ಲಿ ಎಲೆಗಳ ಬದಲು ಪೆನ್‌ಡ್ರೈವ್‌ಗಳು ಇರುವ ಪೋಸ್ಟರ್ ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿದೆ. ಸೂಪರ್ ಮೂವೀಸ್ ಮೇಕರ‍್ಸ್ ಅಡಿಯಲ್ಲಿ ಲೋಕೇಶ್ ಆರ್. ಬಂಡವಾಳ ಹೂಡುತ್ತಿದ್ದಾರೆ. ಮಂಜುನಾಥ ಎಂ.ಸಿ. ಮತ್ತು ಬದ್ರುದ್ದೀನ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: makemytrip : ರೈಲು ಪ್ರಯಾಣದ ವೇಳೆ ಹೊಸತನ ತರಲು ವೈಶಿಷ್ಟ್ಯಗಳನ್ನು ಪರಿಚಯಿಸಿದ ಮೇಕ್‌ಮೈಟ್ರಿಪ್‌

ಶೀರ್ಷಿಕೆಗೂ ಕಥೆಗೂ ಏನು ಸಂಬಂಧ. ಯಾರ‍್ಯಾರು ತಗಲಿಕೊಳ್ತಾರೆ. ಇದೇ ಟೈಟಲ್ ನೀಡಲು ಯಾರಿಂದ ಉತ್ತೇಜನ ಸಿಕ್ಕಿತು. ಏನೆಲ್ಲಾ ಅಂಶಗಳು ಇರಲಿದೆ. ಚಿತ್ರದಲ್ಲಿ ಪೊಲೀಸ್, ಕೋರ್ಟು, ವಕೀಲರು, ದಸ್ತಗಿರಿ ಹೀಗೆಲ್ಲ ಇರುತ್ತಾ ಎಂಬುದಕ್ಕೆ ನಿರ್ದೇಶಕರು ದಸ್ತಗಿರಿನೂ ಆಗುತ್ತೆ. ಜೈಲು ಊಟಾನೂ ಇರುತ್ತೆ. ಅದು ಸಿನಿಮಾದ ಮೂಲಕಥೆ. ಒಟ್ಟಿನಲ್ಲಿ ಎಲ್ಲರೂ ಊಹಿಸುವಂತಹ ಪಾತ್ರಗಳು ಬರುತ್ತದೆ ಎಂದಷ್ಟೇ ಹೇಳಿ ಉತ್ತರ ಕೊಡದೆ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದಾರೆ.

ಸದ್ಯ ರಾಜಕೀಯ ವಲಯ, ಹಲವರ ವೈಯಕ್ತಿಕ ಬದುಕಿನಲ್ಲಿ ಪೆನ್‌ಡ್ರೈವ್ ಸಂಚಲನವನ್ನು ಹುಟ್ಟಿಸುತ್ತಾ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಟೈಟಲ್ ಕೇಳಿದ ತಕ್ಷಣ ಕೇವಲ ಒಂದೇ ಕೋನದಿಂದ ಯಾಕೆ ಯೋಚನೆ ಮಾಡುತ್ತೀರಾ. ಅದರೊಳಗಡೆ ಏನನ್ನಾದರೂ ತುಂಬಿಸಬಹುದು. ಆದರೆ ಅದರ ಒಳಗಡೆ ಜನರು ನಿರೀಕ್ಷೆ ಮಾಡುವುದಕ್ಕಿಂತ ಹೆಚ್ಚಾಗಿ ವಿಷಯಗಳು ಇರುತ್ತವೆ. ಅದು ದೊಡ್ಡವರು ಅಥವಾ ಚಿಕ್ಕವರು ಇರಬಹುದು. ಸಮಾಜದ ಎಲ್ಲಾ ಮುಖಗಳು ಸಿಗುತ್ತದೆ. ಇದನ್ನು ಸಕರಾತ್ಮಕವಾಗಿ ನೋಡಿದರೆ ಆಗುವುದಾದರೂ ಏನು? ಒಟ್ಟಿನಲ್ಲಿ ಯಾರಿಗೂ ಅನ್ವಯವಾಗುವಂತ ಸನ್ನಿವೇಶಗಳು ಇರುವುದಿಲ್ಲ. ದೃಶ್ಯಗಳು ಸತ್ಯವೋ, ಮಿಥ್ಯವೋ ಎಂಬುದು ತೆರೆಕಂಡ ನಂತರ ತಿಳಿಯಲಿದೆ. ಅದ್ದೂರಿ ತಾರಾಗಣ ಇರುತ್ತದೆ. ಎಲ್ಲವನ್ನು ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎನ್ನುತ್ತಾರೆ ಈಶ್ವರ್.

ಇದನ್ನೂ ಓದಿ: Indian 2: ಜು.12ಕ್ಕೆ ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 2’ ಚಿತ್ರ ರಿಲೀಸ್‌

ಬೆಂಗಳೂರು, ಬಳ್ಳಾರಿ, ಹಾಸನ, ಸಕಲೇಶಪುರ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಸಂಗೀತ ಹಂಸರಾಗ, ಛಾಯಾಗ್ರಹಣ ವಿಜಯ್ ರಾಘವ್, ಸಂಭಾಷಣೆ ಶ್ರೀಹರ್ಷ ಚಿತ್ರದುರ್ಗ, ಜೀವನ್‌ರಾಂ ಸಂಕಲನ ಇರಲಿದೆ.

Continue Reading

ಸಿನಿಮಾ

Crew on OTT: ಈ 5 ಕಾರಣಕ್ಕಾಗಿ ಟಬು, ಕರೀನಾ ನಟಿಸಿರುವ ʼಕ್ರ್ಯೂʼ ಸಿನಿಮಾ ನೋಡಬಹುದು

ಮಾರ್ಚ್ 29 ರಂದು ಬಿಡುಗಡೆಯಾದ ಕಾಮಿಡಿ ಚಿತ್ರ ‘ಕ್ರ್ಯೂ’ ಈಗ ಒಟಿಟಿಯಲ್ಲಿ (Crew on OTT) ಬಿಡುಗಡೆಯಾಗಿದೆ. ಒಂಬತ್ತು ದಿನಗಳಲ್ಲಿ ಜಾಗತಿಕವಾಗಿ 100 ಕೋಟಿ ರೂ. ಆದಾಯ ಗಳಿಸಿರುವ ಈ ಚಿತ್ರ ಪರಿಪೂರ್ಣ ಮನರಂಜನೆಯನ್ನು ಪ್ರೇಕ್ಷಕರಿಗೆ ಒದಗಿಸಲು ಸಫಲವಾಗಿದೆ.

VISTARANEWS.COM


on

By

Crew on OTT
Koo

ಟಬು (Tabu), ಕರೀನಾ ಕಪೂರ್ ಖಾನ್ (Kareena Kapoor Khan) ಮತ್ತು ಕೃತಿ ಸನೋನ್ (Kriti Sanon) ನಟಿಸಿರುವ ‘ಕ್ರ್ಯೂ’ ಚಿತ್ರ ಒಟಿಟಿಯಲ್ಲಿ (Crew on OTT) ಮೇ 24ರಂದು ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ಬಳಿಕ ಅತ್ಯುತ್ತಮ ಕಾಮಿಡಿ ಚಲನಚಿತ್ರವಾದ ಕ್ರ್ಯೂ ನೆಟ್‌ಫ್ಲಿಕ್ಸ್‌ನಲ್ಲಿ (Netflix) ಬಿಡುಗಡೆಯಾಗಿದೆ. ರಾಜೇಶ್ ಎ. ಕೃಷ್ಣನ್ ನಿರ್ದೇಶನದ ‘ಕ್ರ್ಯೂ’ ಈಗ ವಿಶ್ವದ 190 ದೇಶಗಳಲ್ಲಿ ಪ್ರದರ್ಶನ ಕಾಣಲಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಚಿತ್ರದ ಪ್ರಥಮ ಪ್ರದರ್ಶನದ ಕುರಿತು ಮಾತನಾಡಿದ ನಿರ್ಮಾಪಕರಾದ ರಿಯಾ ಕಪೂರ್ ಮತ್ತು ಏಕ್ತಾ ಆರ್ ಕಪೂರ್ , ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ಬಳಿಕ ಕ್ರ್ಯೂ ಅನ್ನು ನೆಟ್‌ಫ್ಲಿಕ್ಸ್‌ ಗೆ ತರಲು ನಾವು ರೋಮಾಂಚನಗೊಂಡಿದ್ದೇವೆ. ಈ ಚಿತ್ರವು ಸ್ನೇಹ, ವಂಚನೆ ಮತ್ತು ದೃಢತೆಯನ್ನು ಹಾಸ್ಯದ ಮೂಲಕ ಹೇಳಲು ಪ್ರಯತ್ನಿಸುತ್ತದೆ ಎಂದು ತಿಳಿಸಿದ್ದಾರೆ.

ಪ್ರಪಂಚದಾದ್ಯಂತ ಪ್ರೇಕ್ಷಕರು ನೆಟ್‌ಫ್ಲಿಕ್ಸ್‌ನಲ್ಲಿ ಪ್ರತ್ಯೇಕವಾಗಿ ಸಸ್ಪೆನ್ಸ್, ಹಾಸ್ಯ ಮತ್ತು ನಾಟಕದ ಅನುಭವವನ್ನು ಪಡೆಯಲು ಕಾಯುವುದು ಸಾಧ್ಯವಿಲ್ಲ. ಇದು ಪ್ರೇಕ್ಷಕರನ್ನು ಆಸನದ ತುದಿಯಲ್ಲಿ ಕುರಿಸುವಂತೆ ಮಾಡುವ ಕಥೆಯಾಗಿದೆ ಎಂದು ಹೇಳಿದ್ದಾರೆ.

ಬಹುತೇಕ ದಿವಾಳಿಯಾದ ಏರ್‌ಲೈನ್‌ನ ಹಿನ್ನೆಲೆ ಕಥೆಯನ್ನು ಒಳಗೊಂಡಿರುವ ‘ಕ್ರ್ಯೂ’, ತಮ್ಮ ಜೀವನ ನಿರ್ವಹಣೆಗೆ ಪ್ರಯತ್ನಿಸುತ್ತಿರುವ ಮೂವರು ಮಹಿಳೆಯರು ಸುಳ್ಳಿನ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುವ ಕಥೆಯ ಸುತ್ತ ಸುತ್ತುತ್ತದೆ.

ಮಾರ್ಚ್ 29ರಂದು ಬಿಡುಗಡೆಯಾದ ಕಾಮಿಡಿ ಚಿತ್ರ ‘ಕ್ರ್ಯೂ’ ಬಿಡುಗಡೆಯಾದ ಒಂಬತ್ತು ದಿನಗಳಲ್ಲಿ ಜಾಗತಿಕವಾಗಿ 100 ಕೋಟಿ ರೂ. ಆದಾಯ ಗಳಿಸಿದೆ. ಇದರಲ್ಲಿ ದಿಲ್ಜಿತ್ ದೋಸಾಂಜ್, ಕಪಿಲ್ ಶರ್ಮಾ, ಶಾಶ್ವತ ಚಟರ್ಜಿ, ರಾಜೇಶ್ ಶರ್ಮಾ, ಕುಲಭೂಷಣ್ ಖರ್ಬಂದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ನ ಹಾಸ್ಯ ಚಿತ್ರವಾದ ಕ್ರ್ಯೂ ಪರಿಪೂರ್ಣ ಮನರಂಜನೆಯನ್ನು ಒದಗಿಸುವುದರಲ್ಲಿ ಸಂದೇಹವಿಲ್ಲ ಎಂದು ಅವರು ವಿವರಿಸಿದ್ದಾರೆ.

ಈ ಐದು ಕಾರಣಕ್ಕಾಗಿ ಈ ಚಿತ್ರವನ್ನು ಪ್ರತಿಯೊಬ್ಬರೂ ವೀಕ್ಷಿಸಬಹುದು.

ಇದನ್ನೂ ಓದಿ: Chow Chow Bath : ‘ಚೌ ಚೌ ಬಾತ್’ ಸಿನಿಬಜಾರ್​​ ಡಿಜಿಟಲ್ ಥಿಯೇಟರ್​​ನಲ್ಲಿ ಬಿಡುಗಡೆ

1. ಎಲ್ಲರನ್ನೂ ಮೋಡಿ ಮಾಡಲಿದೆ

‘ಕ್ರ್ಯೂ’ ಚಿತ್ರ ವೀಕ್ಷಿಸುತ್ತಾ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಾಸ್ಯದ ಸಂಪೂರ್ಣ ಮನೋರಂಜನೆಯನ್ನು ಸವಿಯಬಹುದು. ಖಂಡಿತ ಈ ಚಿತ್ರ ಯಾರನ್ನೂ ನಿರಾಶೆಗೊಳಿಸುವುದಿಲ್ಲ. ಆರ್ಥಿಕ ಬಿಕ್ಕಟ್ಟಿನ ನಡುವೆ ತಮ್ಮ ಜೀವನವನ್ನು ಸುಗಮವಾಗಿ ಸಾಗುವಂತೆ ಮಾಡಲು ಪ್ರಯತ್ನಿಸುತ್ತಿರುವ ಮೂವರು ಗಗನಸಖಿಯರ ಮೇಲೆ ಚಲನಚಿತ್ರವು ಕೇಂದ್ರೀಕೃತವಾಗಿದೆ. ‘ಕ್ರ್ಯೂ’ ವಾಸ್ತವವಾಗಿ ಸಿನಿ ಪ್ರಿಯರನನ್ನು ನಗೆಗಡಲಿನಲ್ಲಿ ತೇಲಿಸಿ ಮೋಡಿ ಮಾಡುತ್ತದೆ.

2. ಸಸ್ಪೆನ್ಸ್‌

ಹಾಸ್ಯಮಯ ಚಿತ್ರವಾದರೂ ಸಸ್ಪೆನ್ಸ್‌ಗೆ ಬಂದಾಗ ಚಿತ್ರ ಸೂಪರ್ ಎನ್ನುವಂತೆ ಮಾಡುತ್ತದೆ. ಚಿತ್ರದಲ್ಲಿ ಯಾವುದೇ ಕ್ಷಣವೂ ಬೇಸರ ತರಿಸುವುದಿಲ್ಲ. ಕರೀನಾ ಮತ್ತು ಟಬು ತಮ್ಮ ಅಭಿನಯದಿಂದ ಎಲ್ಲರ ಮನಗೆದ್ದಿದ್ದಾರೆ.

3. ಅಪರೂಪದ ಕಥೆ

ಮೂವರು ನಟಿಯರನ್ನೇ ಮುಖ್ಯ ಭೂಮಿಕೆಯಲ್ಲಿ ಇರಿಸಿರುವ ಈ ಚಿತ್ರ ಬಾಲಿವುಡ್ ಚಲನಚಿತ್ರಗಳಲ್ಲಿ ಅಪರೂಪದ ಚಿತ್ರವಾಗಿದೆ. ಚಲನಚಿತ್ರವು ಸ್ತ್ರೀ ಸ್ನೇಹದ ವಿವಿಧ ಪದರಗಳನ್ನು ಪರಿಶೋಧಿಸುತ್ತದೆ.


4. ಹೃದಯ ಗೆಲ್ಲುವ ಅಭಿನಯ

ಚಿತ್ರದಲ್ಲಿ ಎದ್ದುಕಾಣುವ ಒಂದು ವಿಷಯವೆಂದರೆ ಮುಖ್ಯ ಪಾತ್ರ ಮತ್ತು ಪೋಷಕ ಪಾತ್ರಗಳ ಪ್ರಭಾವಶಾಲಿ ಅಭಿನಯ. ಟಬು, ಕೃತಿ ಸನೋನ್ ಮತ್ತು ಕರೀನಾ ಕಪೂರ್ ಖಾನ್ ಅವರು ತೆರೆಯ ಮೇಲೆ ಅದ್ಭುತವಾದ ಒಡನಾಟವನ್ನು ಹಂಚಿಕೊಂಡಿದ್ದಾರೆ. ಏತನ್ಮಧ್ಯೆ, ಕಪಿಲ್ ಶರ್ಮಾ ಮತ್ತು ದಿಲ್ಜಿತ್ ದೋಸಾಂಜ್ ಅವರು ಸಣ್ಣ ಅವಧಿಗೆ ಬಂದುಹೋದರೂ ಪ್ರೇಕ್ಷಕರ ಹೃದಯ ಗೆಲ್ಲುತ್ತಾರೆ.

5. ಹಾಸ್ಯ ಚಿತ್ರ

ಮಹಿಳೆಯರು ಹಾಸ್ಯ ಚಿತ್ರಗಳನ್ನು ಚೆನ್ನಾಗಿ ಮಾಡಬಲ್ಲರು ಎಂಬುದನ್ನು ಈ ಚಿತ್ರ ಪ್ರತಿಪಾದಿಸುತ್ತದೆ. ಹಾಸ್ಯ ಚಿತ್ರಗಳನ್ನು ಮಹಿಳಾ ನಟಿಯರು ಉತ್ತಮವಾಗಿ ಮಾಡಬಹುದು ಎಂಬುದನ್ನು ‘ಕ್ರ್ಯೂ’ ಸಾಬೀತುಪಡಿಸುತ್ತದೆ.

Continue Reading

ಬೆಂಗಳೂರು

Soundarya Jagadish : ಪಾರ್ಟ್ನರ್ಸ್ ದೋಖಾಕ್ಕೆ 60 ಕೋಟಿ ರೂ. ನಷ್ಟ ; ಸೌಂದರ್ಯ ಜಗದೀಶ್‌ ಡೆತ್‌ನೋಟ್‌ನಲ್ಲಿ ಬಯಲಾಯ್ತು ಸತ್ಯ

Soundarya Jagadish : ಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ (Self Harming) ಕೇಸ್‌ಗೆ ಟ್ವಿಸ್ಟ್‌ ಸಿಕ್ಕಿದ್ದು, ಒಂದು ತಿಂಗಳ ನಂತರ ಅವರು ಬರೆದಿಟ್ಟ ಡೆತ್‌ನೋಟ್‌ (Death Note) ಸಿಕ್ಕಿದೆ. ಸೌಂದರ್ಯ ಜಗದೀಶ್‌ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಂತೆ ಮೂವರು ಬ್ಯುಸಿನೆಸ್ ‌ಪಾರ್ಟ್ನರ್ಸ್ (Business Partners ) ವಿರುದ್ಧ ದೂರು ದಾಖಲಾಗಿದೆ.

VISTARANEWS.COM


on

By

Soundarya Jagadish Cheating by soundarya Constructions Business Partners
ಸೌಂದರ್ಯ ಜಗದೀಶ್‌ರೊಂದಿಗೆ ಇರುವ ವೈಟ್ ಶರ್ಟ್ ಧರಿಸುವವರು ಸುರೇಶ್ ಹಾಗೂ ಚೆಕ್ಸ್ ಶರ್ಟ್ ಹೊಂಬಣ್ಣ
Koo

ಬೆಂಗಳೂರು: ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadish) ಕಳೆದ ಏಪ್ರಿಲ್‌ 14ರಂದು ಮಹಾಲಕ್ಷ್ಮಿ ಲೇಔಟ್‌ನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಆತ್ಮಹತ್ಯೆ ಕೇಸ್‌ಗೆ ಸ್ಫೋಟಕ ತಿರುವು ಸಿಕ್ಕಿದ್ದು, ಬ್ಯುಸಿನೆಸ್‌ ಪಾರ್ಟ್ನರ್ಸ್ ದೋಖಾ ಬಯಲಾಗಿದೆ.

ಬ್ಯುಸಿನೆಸ್ ಪಾರ್ಟನರ್ಸ್ ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಸೌಂದರ್ಯ ಜಗದೀಶ್‌ ಮೃತಪಟ್ಟ ಒಂದು ತಿಂಗಳ ನಂತರ ಅವರ ರೂಮಿನಲ್ಲಿ ಡೆತ್‌ನೋಟ್‌ ಪತ್ತೆಯಾಗಿದೆ. ಸೌಂದರ್ಯ ಜಗದೀಶ್‌ ಬರೆದ ಡೆತ್‌ನೋಟ್‌ನಲ್ಲಿ ಸೌಂದರ್ಯ ಕನ್‌ಸ್ಟ್ರಕ್ಷನ್ಸ್‌ನ ಸಹ ಪಾಲುದಾರರಿಂದ ಸುಮಾರು 60 ಕೋಟಿ ರೂ. ಹಣ ನಷ್ಟವಾಗಿದ್ದು, ಮೋಸ ಮಾಡಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

ಹೀಗಾಗಿ ಸೌಂದರ್ಯ ಜಗದೀಶ್‌ ಪತ್ನಿ ಶಶಿರೇಖಾ ಡೆತ್‌ನೋಟ್‌ ಪತ್ತೆ ಆಗುತ್ತಿದ್ದಂತೆ ಪಾಲುದಾರರ ವಿರುದ್ಧ ದೂರು ದಾಖಲಿಸಿದ್ದಾರೆ. ಸುರೇಶ್‌ ಹಾಗೂ ಹೊಂಬಣ್ಣ ಸೇರಿ ಸೌಂದರ್ಯ ಜಗದೀಶ್‌ ಆತ್ಮಹತ್ಯೆ ಮಾಡಿಕೊಳ್ಳಲು ನೇರವಾಗಿ ಕಾರಣಕರ್ತರಾಗಿದ್ದಾರೆ. ಇವರಿಬ್ಬರು ಜಗದೀಶ್‌ ಅವರೊಂದಿಗೆ ಸೇರಿಕೊಂಡು ಸೌಂದರ್ಯ ಕನ್‌ಸ್ಟ್ರಕ್ಷನ್ಸ್‌ ಕಂಪೆನಿಯನ್ನು ನಡೆಸಿಕೊಂಡು ಹೋಗುತ್ತಿದ್ದರು. ಈ ವೇಳೆ ಜಗದೀಶ್‌ ಅವರಿಂದ ಹಣವನ್ನು ಹೂಡಿಕೆ ಮಾಡಿಸಿ ಕಂಪನಿಯು ಲಾಭದಲ್ಲಿದ್ದರು ನಷ್ಟದಲ್ಲಿದೆ ಎಂದು ಸುಳ್ಳು ಹೇಳಿದ್ದರು. ಮಾತ್ರವಲ್ಲದೇ ಸುಳ್ಳು ಹೇಳಿ ಕುಟುಂಬದ ಆಸ್ತಿಗಳನ್ನು ಬ್ಯಾಂಕ್‌ನಲ್ಲಿ ಅಡಮಾನ ಇರಿಸಿದ್ದಾರೆ. ಅದರ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ.

ಇದನ್ನೂ ಓದಿ: Bank fraud: ಕಾರವಾರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ‌ ಹಗರಣ! 54 ಕೋಟಿ ರೂ. ಗುಳುಂ; ಮ್ಯಾನೇಜರ್ ಸಾವಿಂದ ಹೊರಬಂತು ಅವ್ಯವಹಾರ!

ನಂತರ ಇಲ್ಲ-ಸಲ್ಲದ ಸಬೂಬು ಹೇಳಿ ಖಾಲಿ ಚೆಕ್‌ ಹಾಗೂ ಖಾಲಿ ಹಾಳೆಗಳ ಮೇಲೆ ಜಗದೀಶ್‌ ಅವರ ಸಹಿಯನ್ನು ನಕಲು ಮಾಡಿಕೊಂಡು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದರೆ ಜಗದೀಶ್‌ ಅವರಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಯಾವುದೋ ವಿಷಯಕ್ಕೆ ಜಗದೀಶ್‌ ಅವರನ್ನು ಬ್ಲಾಕ್‌ಮೇಲ್‌ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಕಂಪನಿಯು ನಷ್ಟದಲ್ಲಿದೆ ಎಂದು ಹೇಳಿ ಹಣವನ್ನು ಕೊಡದೆ ಮೋಸ ಮಾಡಿದ್ದಾರೆ ಎಂದು ಶಶಿರೇಖಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪತಿ ಸೌಂದರ್ಯ ಜಗದೀಶ್‌ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಒಂದು ವಾರದ ಹಿಂದೆ ಸುರೇಶ್‌ ಹಾಗೂ ಹೊಂಬಣ್ಣ ನಿರಂತರವಾಗಿ ಫೋನ್‌ ಮಾಡಿದ್ದರು. ಇವರ ಕರೆ ಬಂದಾಗ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದು, ಇದರಿಂದ ಮನನೊಂದು ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜಗದೀಶ್‌ ಪತ್ನಿ ಶಶಿರೇಖಾ ಆರೋಪಿಸಿದ್ದಾರೆ.

ಬ್ಯುಸಿನೆಸ್‌ ಪಾರ್ಟ್ನಸ್‌ಗಳಿಂದ ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಪತಿ ಸೌಂದರ್ಯ ಜಗದೀಶ್‌ ಸಾವಿಗೆ ಸುರೇಶ್‌, ಹೊಂಬಣ್ಣ ಹಾಗೂ ಸೌಂದರ್ಯ ಕನ್‌ಸ್ಟ್ರಕ್ಷನ್ಸ್‌ ಕಂಪೆನಿಯ ಮ್ಯಾನೇಜರ್‌ ಸುದೀಂದ್ರ ಕಾರಣ ಎಂದು ಪತ್ನಿ ಶಶಿರೇಖಾ ದೂರು ನೀಡಿದ್ದಾರೆ. ಸದ್ಯ ಈ ಡೆತ್‌ನೋಟ್ ಆಧರಿಸಿ ಪತ್ನಿ ಶಶಿರೇಖಾ ಮಹಾಲಕ್ಷ್ಮಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Indian 2: ಜು.12ಕ್ಕೆ ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 2’ ಚಿತ್ರ ರಿಲೀಸ್‌

Indian 2: ಬಹುಭಾಷಾ ನಟ ಕಮಲ್ ಹಾಸನ್ ನಾಯಕರಾಗಿ ನಟಿಸಿರುವ, ಆರ್. ಶಂಕರ್ ನಿರ್ದೇಶನದ ಬಹು ನಿರೀಕ್ಷಿತ “ಇಂಡಿಯನ್ 2” ಚಿತ್ರ ಜು.12ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ ಈ ಚಿತ್ರವು ಪ್ರತಿಷ್ಠಿತ ರೋಮಿಯೋ ಪಿಕ್ಚರ್ಸ್‌ (ROMEO PICTURES) ಮೂಲಕ ಬಿಡುಗಡೆಯಾಗಲಿದೆ.

VISTARANEWS.COM


on

kamal haasan starrer Indian 2 movie released worldwide on July 12
Koo

ಬೆಂಗಳೂರು: ಬಹುಭಾಷಾ ನಟ ಕಮಲ್ ಹಾಸನ್ ನಾಯಕರಾಗಿ ನಟಿಸಿರುವ, ಆರ್. ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ʼಇಂಡಿಯನ್ 2ʼ (Indian 2) ಚಿತ್ರ ಜು.12ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಕರ್ನಾಟಕದಲ್ಲಿ ಈ ಚಿತ್ರವು ಪ್ರತಿಷ್ಠಿತ ROMEO PICTURES ನ ಮೂಲಕ ಬಿಡುಗಡೆಯಾಗಲಿದೆ. ಹೆಸರಾಂತ ROMEO PICTURES ಅವರು “ಇಂಡಿಯನ್ 2” ಚಿತ್ರದ ಕರ್ನಾಟಕದ ವಿತರಣೆಯ ಹಕ್ಕನ್ನು ಪಡೆದುಕೊಂಡಿದ್ದಾರೆ.

ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಕಮಲ್ ಹಾಸನ್ ಅಭಿನಯದ “ಇಂಡಿಯನ್ 2” ಚಿತ್ರವನ್ನು ಕರ್ನಾಟಕದಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡುವುದಾಗಿ ROMEO PICTURES ನ ರಾಹುಲ್ ತಿಳಿಸಿದ್ದಾರೆ. ಪ್ರಖ್ಯಾತ ವಿತರಣಾ ಸಂಸ್ಥೆಯಾದ ROMEO PICTURES ಅಜಿತ್ ಕುಮಾರ್ ಅವರ “ನೆರ್ಕೊಂಡ ಪಾರವೈ”, “ಥುನಿವು”, ಉದಯನಿಧಿ ಸ್ಟಾಲಿನ್ ಅವರ “ನೆಂಜುಕು ನೀಧಿ” ಮುಂತಾದ ಜನಪ್ರಿಯ ಚಿತ್ರಗಳನ್ನು ವಿತರಣೆ ಮಾಡಿದೆ.

ಇದನ್ನೂ ಓದಿ: Sandalwood Movie : ಸಿಂಹಗುಹೆಯಲ್ಲಿ ವಿಡಿಯೋ ಪೆನ್ ಡ್ರೈವ್ ಸದ್ದು!

ಸುಭಾಸ್ಕರನ್ ಅವರ ಲೈಕಾ ಪ್ರೊಡಕ್ಷನ್ಸ್ ಹಾಗೂ ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ಈ ಚಿತ್ರವನ್ನು ನಿರ್ಮಿಸಿದೆ. ಕಮಲ್ ಹಾಸನ್, ಸಿದ್ಧಾರ್ಥ್, ಕಾಜಲ್ ಅಗರವಾಲ್, ರಕುಲ್ ಪ್ರೀತ್ ಸಿಂಗ್, ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೊವರ್, ವಿವೇಕ್, ಸಮುದ್ರಕನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು “ಇಂಡಿಯನ್ 2” ಚಿತ್ರದ ತಾರಾಬಳಗದಲ್ಲಿದ್ದಾರೆ.

Continue Reading
Advertisement
Phalodi Satta Bazar
ದೇಶ7 mins ago

Phalodi Satta Bazar: ಚುನಾವಣೆಯಲ್ಲಿ ಮೋದಿ ಹ್ಯಾಟ್ರಿಕ್ ಖಚಿತ; ಸಟ್ಟಾ ಬಜಾರ್‌ ಸಮೀಕ್ಷಾ ವರದಿ ಇಲ್ಲಿದೆ

Sara Tendulkar
ಕ್ರಿಕೆಟ್14 mins ago

Sara Tendulkar: ಲಂಡನ್​ ಯೂನಿವರ್ಸಿಟಿಯಿಂದ ಪದವಿ ಪಡೆದ ಸಾರಾ ತೆಂಡೂಲ್ಕರ್​; ಮಗಳ ಸಾಧನೆ ಕೊಂಡಾಡಿದ ಸಚಿನ್​

Liquor ban
ಕರ್ನಾಟಕ39 mins ago

Liquor ban: ಜೂ. 1ರಿಂದ ಐದು ದಿನ ಮದ್ಯ ಮಾರಾಟ ನಿಷೇಧ; ಖರೀದಿಗೆ ಮುಗಿಬಿದ್ದ ಎಣ್ಣೆ ಪ್ರಿಯರು!

Narendra Modi
ದೇಶ41 mins ago

Narendra Modi: 2047ರವರೆಗೆ ದೇಶಕ್ಕಾಗಿ ನನ್ನ ಸೇವೆ; ಇದು ದೇವರ ಆದೇಶ ಎಂದ ಮೋದಿ

HD Kumaraswamy slams CM Siddaramaiah about devegowda statement
ರಾಜಕೀಯ47 mins ago

HD Kumaraswamy: ರಾಕೇಶ್‌ನನ್ನು ವಿದೇಶಿ ಪಾರ್ಟಿಗೆ ನೀವೇ ಕಳಿಸಿ ಸಾವಿಗೆ ಕಾರಣರಾದಿರಿ ಎಂದರೆ ಹೇಗೆ? ಸಿದ್ದರಾಮಯ್ಯಗೆ ಎಚ್‌ಡಿಕೆ ಪ್ರಶ್ನೆ

Former DGP Arrested
ಕ್ರೈಂ1 hour ago

Former DGP Arrested: ವಿಚ್ಛೇದಿತ ಪತ್ನಿಯ ದೂರು; ಮಾಜಿ ಡಿಜಿಪಿ ಜೈಲು ಪಾಲು

ಕ್ರೈಂ1 hour ago

Rameshwaram Cafe Blast: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದ 5ನೇ ಆರೋಪಿಗೆ ಲಷ್ಕರ್–ಎ–ತಯ್ಬಾ ಜತೆ ಲಿಂಕ್‌!

CSK vs RC
ಕ್ರೀಡೆ1 hour ago

CSK vs RCB: ಮತ್ತೆ ಆರ್​ಸಿಬಿ, ಕೊಹ್ಲಿಯ ಬಗ್ಗೆ ಕಿಡಿಕಾರಿದ ಚೆನ್ನೈ ತಂಡದ ಮಾಜಿ ಆಟಗಾರ

BSNL network problem in Hosanagara The lawyer decided to climb the tower and protest
ಕರ್ನಾಟಕ1 hour ago

Hosanagara News: ಹೊಸನಗರದಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸಮಸ್ಯೆ; ಟವರ್‌ ಏರಿ ಪ್ರತಿಭಟನೆಗೆ ಮುಂದಾದ ವಕೀಲ!

union minister pralhad joshi spoke in North East Graduate Constituency Electoral Convention at ballari
ಕರ್ನಾಟಕ1 hour ago

MLC Election: ಜಗತ್ತು ತೆವಳುತ್ತಿದ್ದರೆ ಮೋದಿ ಭಾರತ ಓಡುತ್ತಿದೆ; ಸಚಿವ ಪ್ರಲ್ಹಾದ್‌ ಜೋಶಿ ವ್ಯಾಖ್ಯಾನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ1 week ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌