Vistara Editorial : Voter luring activities need to be curbedವಿಸ್ತಾರ ಸಂಪಾದಕೀಯ: ಮತದಾರರಿಗೆ ಆಮಿಷವೊಡ್ಡುವ ಚಟುವಟಿಕೆಗಳಿಗೆ ಕಡಿವಾಣ ಅಗತ್ಯ - Vistara News

ಪ್ರವಾಸ

ವಿಸ್ತಾರ ಸಂಪಾದಕೀಯ: ಮತದಾರರಿಗೆ ಆಮಿಷವೊಡ್ಡುವ ಚಟುವಟಿಕೆಗಳಿಗೆ ಕಡಿವಾಣ ಅಗತ್ಯ

ರಾಜ್ಯದಲ್ಲಿ ಮತದಾರರಿಗೆ ಗಿಫ್ಟ್ ಹಂಚುವ ಚಟುವಟಿಕೆಗಳು ಜೋರಾಗಿ ನಡೆಯುತ್ತಿವೆ. ಪ್ರಜಾಪ್ರಭುತ್ವಕ್ಕೆ ಇದು ಭೂಷಣವಲ್ಲ. ಇಂತಹ ಆಮಿಷಗಳನ್ನು ಜನರೇ ತಿರಸ್ಕರಿಸಬೇಕು. ಚುನಾವಣೆ ಆಯೋಗ ಇದನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು.

VISTARANEWS.COM


on

Vistara Editorial : Voter luring activities need to be curbed
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Election 2023) ಇನ್ನೂ ದಿನಾಂಕ ಪ್ರಕಟವಾಗಿಲ್ಲ. ಹಾಗಾಗಿ, ನೀತಿ ಸಂಹಿತೆ ಜಾರಿಯಾಗಿಲ್ಲ. ಆದರೆ, ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಡೆಸುತ್ತಿರುವ ಕಸರತ್ತು ಜೋರಾಗಿದೆ. ಕುಕ್ಕರ್, ಸೀರೆ, ಪಂಚೆ, ಸ್ಕೂಲ್ ಬ್ಯಾಗ್, ಬಳೆ, ಬಾಡೂಟ, ಮದ್ಯ, ನಗದು ವಿತರಣೆ ಸೇರಿದಂತೆ ನಾನಾ ರೂಪದಲ್ಲಿ ಮತದಾರರನ್ನೂ ಭ್ರಷ್ಟರನ್ನಾಗಿಸುವ ಅಕ್ರಮ ಚಟುವಟಿಕೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಈ ಅಕ್ರಮವನ್ನು ತಡೆಗಟ್ಟಲು ಚುನಾವಣಾ ಆಯೋಗವು, ವಿವಿಧ ಇಲಾಖೆಗಳ ಸಹಾಯದೊಂದಿಗೆ ದಾಳಿಗಳನ್ನು ನಡೆಸುತ್ತಿದೆ. ಈವರೆಗೆ, ವಿಶೇಷ ಕಾರ್ಯಾಚರಣೆ ಮೂಲಕ ಕಳೆದ 3 ದಿನಗಳಲ್ಲಿ 5.4 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ವಾರ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ರಾಜ್ಯಕ್ಕೆ ಭೇಟಿ ನೀಡಿ, ಚುನಾವಣಾ ಅಕ್ರಮ ತಡೆಯಲು ಸೂಚನೆ ನೀಡಿದ್ದರು. ಬಳಿಕ, ಅಧಿಕಾರಿಗಳು ದಾಳಿಗಳನ್ನು ಚುರುಕುಗೊಳಿಸಿದ್ದಾರೆ. ಚುನಾವಣೆಯನ್ನು ಗೆಲ್ಲಲೇಬೇಕು ಎಂಬ ಲಕ್ಷ್ಯದೊಂದಿಗೆ ಅಭ್ಯರ್ಥಿಗಳು ನೀಡುವ ಆಮಿಷಗಳಿಗೆ ಮತದಾರರು ಸೊಪ್ಪ ಹಾಕಬಾರದು. ತಾತ್ಕಾಲಿಕ ಲಾಭಕ್ಕಾಗಿ ಮತವನ್ನು ಮಾರಿಕೊಳ್ಳುವುದನ್ನು ಜನರು ತಿರಸ್ಕರಿಸಬೇಕು.

ಚುನಾವಣಾ ಸ್ಪರ್ಧೆಗೆ ಮುಂದಾಗಿರುವ ರಾಜಕಾರಣಿಯೊಬ್ಬರ ಮನೆ ಮೇಲೆ ಇತ್ತೀಚೆಗೆ ದಾಳಿ ನಡೆಸಿದ ಕಂದಾಯ ಅಧಿಕಾರಿಗಳು, ಭಾರೀ ಸಂಖ್ಯೆಯಲ್ಲಿ ಸಂಗ್ರಹಿಸಲಾಗಿದ್ದ ಫುಡ್‌ಕಿಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇವರು ಈ ಹಿಂದೆಯೂ ಕುಕ್ಕರ್, ಸೀರೆ ಹಂಚಿ ಸುದ್ದಿಗೆ ಗ್ರಾಸವಾಗಿದ್ದರು. ಮತ್ತೊಂದೆಡೆ, ರಾಮನಗರ ತಾಲೂಕಿನಲ್ಲಿ, ಮತದಾರರಿಗೆ ಹಂಚಲು ಸಿದ್ಧವಾಗಿದ್ದ 2,900 ಕುಕ್ಕರ್‌ಗಳನ್ನು ತಹಸೀಲ್ದಾರ್ ಜಪ್ತಿ ಮಾಡಿದ್ದಾರೆ. ಐದು ದಿನಗಳ ಹಿಂದೆ, ಪರಿಷತ್ ಸದಸ್ಯರೊಬ್ಬರ ಹಾವೇರಿ ನಿವಾಸದ ಮೇಲೆ ವಾಣಿಜ್ಯ ಅಧಿಕಾರಿಗಳು ದಾಳಿ ನಡೆಸಿ, 6000ಕ್ಕೂ ಅಧಿಕ ಸೀರೆ, 9000ಕ್ಕೂ ಅಧಿಕ ಸ್ಕೂಲ್ ಬ್ಯಾಗ್‌ಗಳು, ತಟ್ಟೆ-ಲೋಟಗಳು ಸೇರಿದಂತೆ ಒಟ್ಟಾರೆ 8 ಕೋಟಿ ರೂ. ಮೌಲ್ಯದ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಇವು ಕೆಲವು ಉದಾಹರಣೆಗಳಷ್ಟೇ. ಇದು ಯಾವುದೋ ಒಂದು ಕ್ಷೇತ್ರಕ್ಕೆ ಅಥವಾ ಯಾವುದೋ ಒಂದೇ ಪಕ್ಷಕ್ಕೆ ಮಾತ್ರ ಸಿಮೀತವಾಗಿಲ್ಲ.

ಈ ಹಿಂದೆ ಮತದಾರರಿಗೆ ಆಮಿಷವೊಡ್ಡುವ ಚಟುವಟಿಕೆಗಳು ಒಂದಿಷ್ಟು ಕ್ಷೇತ್ರಗಳಲ್ಲಿ ಮಾತ್ರ ನಡೆಯುತ್ತಿದ್ದವು. ಆದರೆ, ಈಗ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಈ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ.

ಚುನಾವಣೆ ಸಂದರ್ಭದಲ್ಲಿ ಅಕ್ರಮಗಳನ್ನು ತಡೆಯದಿದ್ದರೆ ಪ್ರಜಾಪ್ರಭುತ್ವ ಸಶಕ್ತವಾಗಿ ಉಳಿಯಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಮತದಾರರು ಈ ವಿಷಯದಲ್ಲಿ ಜಾಗೃತರಾಗಬೇಕು. ಜನ ಜಾಗೃತರಾಗದೆ ಕಾನೂನು ಎಷ್ಟೇ ಬಿಗಿಗೊಳಿಸಿದರೂ ಪರಿಣಾಮ ಬೀರುವುದಿಲ್ಲ. ಯಾಕೆಂದರೆ, ಐನೂರು, ಸಾವಿರ ರೂಪಾಯಿಗೆ ಮತಗಳನ್ನು ಮಾರಿಕೊಂಡರೆ, ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕನ್ನು ಮತದಾರರು ಕಳೆದುಕೊಳ್ಳುತ್ತಾರೆ. ಹಣ, ಹೆಂಡ ಹಂಚಿ ಗೆದ್ದುಬರುವ ಅಭ್ಯರ್ಥಿ, ಚುನಾವಣಾ ವೆಚ್ಚವನ್ನು ಸರಿದೂಗಿಸಲು ಭ್ರಷ್ಟಾಚಾರಕ್ಕೆ ಇಳಿಯುತ್ತಾನೆ. ಅಂತಿಮವಾಗಿ ಅದರ ಹೊರೆ ಜನಸಾಮಾನ್ಯರ ಮೇಲೆಯೇ ಬೀಳುತ್ತದೆ. ಇದೊಂದು ವಿಷ ವರ್ತುಲ. ಚುನಾವಣೆಯಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೇ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ, ಅದರ ಒಳ್ಳೆಯ ಲಾಭ ಜನರಿಗೇ ಆಗುತ್ತದೆ. ಆಮಿಷಕ್ಕೆ ಬಿದ್ದು ಅರ್ಹನಲ್ಲದ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ, ಅದರಿಂದಾಗುವ ದುಷ್ಪರಿಣಾಮವನ್ನು ತಾವೇ ಅನುಭವಿಸಬೇಕಾಗುತ್ತದೆ ಎಂಬುದನ್ನು ಜನ ಅರಿತುಕೊಳ್ಳಬೇಕು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್ ಪಾಲ್ ಬೇಟೆ, ಮತ್ತಷ್ಟು ಕಠಿಣ ಕ್ರಮ ಅಗತ್ಯ

ಈಗಿನ ಚುನಾವಣೆ ನಡೆಯುವ ರೀತಿ ನೋಡಿದರೆ, ಸಭ್ಯರು ಎಲೆಕ್ಷನ್ ಗೆಲ್ಲುವುದೇ ಅಸಾಧ್ಯ. ಹಣವಂತರು ಮಾತ್ರವೇ ಚುನಾವಣೆ ಗೆಲ್ಲಲು ಸಾಧ್ಯ ಎಂಬ ಸನ್ನಿವೇಶ ನಿರ್ಮಾಣವಾಗಿದೆ. ಈ ಕಳಂಕವನ್ನು ನಿವಾರಿಸಬೇಕಾದ ಮಹತ್ತರ ಜವಾಬ್ದಾರಿ ಮತದಾರರ ಮೇಲಿದೆ. ಚುನಾವಣೆ ಆಯೋಗದ ಜವಾಬ್ದಾರಿಯೂ ಇಲ್ಲಿ ದೊಡ್ಡದಿದೆ. ಆಮಿಷ ಮುಕ್ತ ಮತ್ತು ಅಕ್ರಮ ಮುಕ್ತ ಚುನಾವಣೆ ನಡೆಸಲು ಕಾಯಿದೆ ಕಾನೂನು ರೂಪಿಸಿದರೆ ಸಾಲದು. ಇದರ ಕಠಿಣ ಅನುಷ್ಠಾನವೂ ಮುಖ್ಯ. ಆಡಳಿತ ಪಕ್ಷ, ಪ್ರತಿಪಕ್ಷ ಎಂಬ ಭೇದಭಾವ ಮಾಡದೆ ಚುನಾವಣೆ ಆಯೋಗವು ನಿಷ್ಪಕ್ಷಪಾತವಾಗಿ ಇಂಥ ಅಕ್ರಮಗಳಿಗೆ ತಡೆ ಹಾಕಬೇಕು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Konark Tourist Destination: ರಜೆಯಲ್ಲಿ ಕೋನಾರ್ಕ್‌ಗೆ ಹೋದಾಗ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಲು ಮರೆಯಬೇಡಿ

ರಜಾ ದಿನಗಳಲ್ಲಿ ಪ್ರವಾಸ ಮಾಡಲು ಕೋನಾರ್ಕ್ ಸೂಕ್ತ ಸ್ಥಳ. ಒಡಿಶಾ ರಾಜ್ಯದ ಪುರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾದ ಕೋನಾರ್ಕ್ ನಲ್ಲಿ ನಿಮಗೆ ನೋಡಲು ಹಲವು ಸ್ಥಳಗಳಿವೆ. ಅಲ್ಲಿ ನೀವು ನೋಡಲೇ ಬೇಕಾದ ಆಕರ್ಷಕ ಸ್ಥಳಗಳು ಯಾವವು? ಪ್ರಮುಖ ಸ್ಥಳಗಳ ಪಟ್ಟಿ ಮತ್ತು ಅವುಗಳ ಕಿರು (Konark tourist destination) ಪರಿಚಯ ಇಲ್ಲಿದೆ.

VISTARANEWS.COM


on

Konark Tourist Destination
Koo

ರಜಾ ದಿನಗಳಲ್ಲಿ ಪ್ರವಾಸ ಮಾಡಲು ಕೋನಾರ್ಕ್ ಸೂಕ್ತ ಸ್ಥಳ. ಒಡಿಶಾ ರಾಜ್ಯದ ಪುರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾದ ಕೋನಾರ್ಕ್ ನಲ್ಲಿ ನಿಮಗೆ ನೋಡಲು ಹಲವು ಸ್ಥಳಗಳಿವೆ. ಅಲ್ಲಿ ನೀವು ನೋಡಲೇ ಬೇಕಾದ ಆಕರ್ಷಕ ಸ್ಥಳಗಳ (Konark tourist destination) ಪಟ್ಟಿ ಇಲ್ಲಿದೆ.

Konark Sun Temple

ಕೋನಾರ್ಕ್ ಸೂರ್ಯ ದೇವಾಲಯ

ಇದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಇದನ್ನು 13ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಈ ದೇವಾಲಯವನ್ನು ಕುದುರೆಗಳಿಂದ ಎಳೆಯಲ್ಪಟ್ಟ ದೈತ್ಯ ರಥದ ರೂಪದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಗಂಗಾ ರಾಜವಂಶದ ವಾಸ್ತುಶಿಲ್ಪ ಕಲೆಯು ಕಲ್ಲಿನ ಪ್ರತಿ ಇಂಚಿನಲ್ಲೂ ಕಂಡುಬರುತ್ತದೆ. ರಾಶಿಚಕ್ರಗಳ ಮೂಲಕ ಸೂರ್ಯನ ಚಲನೆಯನ್ನು ಸಂಕೇತಿಸುವ ದೈತ್ಯ ಚಕ್ರಗಳ ಜೋಡಿಗಳನ್ನು ಕೆತ್ತಲಾಗಿದೆ. ಇಲ್ಲಿ ಎತ್ತರದ ಕಲ್ಲಿನ ಕಂಬಗಳು ಮತ್ತು ಭವ್ಯವಾದ ವೇದಿಕೆಯ ವ್ಯವಸ್ಥೆ ಇದೆ. ಇಲ್ಲಿ ಕಾಸ್ಮಿಕ ಆಚರಣೆಗಳನ್ನು ನಡೆಸಲಾಗುತ್ತಿತ್ತು. ಇದು ಇಂದಿಗೂ ಪ್ರವಾಸಿಗರನ್ನು ಆಕರ್ಷಿಸುತ್ತದೆ.

Konark Beach

ಕೋನಾರ್ಕ್ ಬೀಚ್

ಬಂಗಾಳ ಕೊಲ್ಲಿಯ ಸಮುದ್ರ ಮತ್ತು ಕೋನಾರ್ಕ್ ದೇವಾಲಯದ ಆವರಣದ ಸುತ್ತಲೂ ಆವರಿಸಿರುವ ಸುಂದರ ರಮಣೀಯವಾದ ಬೀಚ್ ಇದಾಗಿದೆ. ಇದರ ಶಾಂತವಾದ ನೀಲಿ ಬಣ್ಣದ ನೀರು ಮತ್ತು ದಡದಲ್ಲಿರುವ ಕ್ಯಾಸುರಿನಾಸ್ ಮರಗಳಿಂದ ಕೂಡಿದ ಚಿನ್ನದಂತೆ ಹೊಳೆಯುವ ಮರಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ನಗರ ಜೀವನದಿಂದ ಬೇಸತ್ತ ಜನರು ನಿಮ್ಮ ಮನಸ್ಸಿನ ಬೇಸರ ಕಳೆಯಲು ಇಲ್ಲಿಗೆ ಬರಬಹುದು.

Konark Dance Festival

ಕೋನಾರ್ಕ್ ನೃತ್ಯ ಉತ್ಸವ

ಕೋನಾರ್ಕ್ ನ ಭವ್ಯವಾದ ಸೂರ್ಯ ದೇವಾಲಯದ ಎದುರು ಇರುವಂತಹ ತೆರೆದ ಸಭಾಂಗಣಗಳಲ್ಲಿ ಶಾಸ್ತ್ರೀಯ ನೃತ್ಯ ಉತ್ಸವವನ್ನು ನಡೆಸಲಾಗುತ್ತದೆ. ಇದನ್ನು ಒಡಿಶಾ ಪ್ರವಾಸೋದ್ಯಮವು ಪ್ರತಿವರ್ಷ ಡಿಸೆಂಬರ್ ನ ಆರಂಭದಲ್ಲಿ ಆಯೋಜಿಸುತ್ತದೆ. ದೇಶದ ವೈವಿಧ್ಯಮಯ ಪ್ರದರ್ಶನ ಕಲೆಗಳ ಪರಂಪರೆಯನ್ನು ತಿಳಿಸುವ ಪ್ರಖ್ಯಾತ ವ್ಯಕ್ತಿಗಳಿಂದ ಅಸಾಧಾರಣ ಪ್ರದರ್ಶನಗಳನ್ನು ಇಲ್ಲಿ ಪ್ರದರ್ಶಿಸಿಲಾಗುತ್ತದೆ.

Ramachandi Temple Konark

ರಾಮಚಂಡಿ ದೇವಸ್ಥಾನ

ಇದು ದಂತಕಥೆಗಳನ್ನು ಸಾರುವ ಕುಶ ಭದ್ರಾ ನದಿಯ ಸೊಂಪಾದ ದಡದಲ್ಲಿ ನೆಲೆಸಿರುವ ಪುರಾತನ ದೇವಾಯವಾಗಿದೆ.ಪುರಾಣಗಳ ಪ್ರಕಾರಣ ಇಲ್ಲಿನ ದೇವತೆ ರಾಮಚಂಡಿ ಭೂಮಿಯಲ್ಲಿ ದುಷ್ಟತನದಿಂದ ಮರೆದ ರಾಕ್ಷಸರನ್ನು ಸಂಹರಿಸಿ ಇಲ್ಲಿ ನೆಲೆಸಿದಳು ಎಂಬ ನಂಬಿಕೆ ಇದೆ. ದೇವಾಲಯ ಮುಂಭಾಗದಲ್ಲಿ ಸುಂದರವಾದ ಕೆಂಪು ಮತ್ತು ಬಿಳಿ ಸ್ತಂಭಗಳಿದ್ದು, ಇದನ್ನು ಶತಮಾನಗಳ ಹಿಂದೆ ನಿರ್ಮಿಸಲಾಗಿದೆ ಎನ್ನಲಾಗಿದೆ. ಇಲ್ಲಿ ಪ್ರತಿದಿನ ಭಕ್ತರು ಮಣ್ಣಿನ ದೀಪಗಳನ್ನು ಬೆಳಗಿಸುತ್ತಾರಂತೆ.

Chandrabhaga Beach Konark

ಚಂದ್ರಭಾಗ ಬೀಚ್

ಪುರಿ ಕೋನಾರ್ಕ್ ಮೆರೈನ್ ಡ್ರೈವ್ ರಸ್ತೆಯಲ್ಲಿರುವ ಕೋನಾರ್ಕ್ ಸೂರ್ಯದೇವಾಲಯದಿಂದ ಕೇವಲ 3 ಕಿಮೀ ದೂರದಲ್ಲಿರುವ ಚಂದ್ರಭಾಗ ಬೀಚ್ ನಿಮ್ಮ ರಜಾದಿನಗಳನ್ನು ಕಳೆಯಲು ಹೆಚ್ಚು ಪ್ರಶಸ್ತವಾದ ಸ್ಥಳವಾಗಿದೆ. ಇಲ್ಲಿ ಮಾಘ ಸಪ್ತಮಿ ಆಚರಣೆಗಳು, ಅದ್ಭುತವಾದ ಸೂರ್ಯೋದಯವನ್ನು ವೀಕ್ಷಿಸಬಹುದು.

Archaeological Museum Konark

ಆರ್ಕಿಯಾಲಾಜಿಕಲ್ ಮ್ಯೂಸಿಯಂ ಕೋನಾರ್ಕ್

ಸೂರ್ಯದೇವಾಲಯದಿಂದ 2 ಕಿಮೀ ದೂರದಲ್ಲಿರುವ ಈ ಪುಟ್ಟ ಮ್ಯೂಸಿಯಂ ನಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ಕುತೂಹಲಕಾರಿ ವಸ್ತುಗಳಿವೆ. ಇಲ್ಲಿ ಪ್ರಾಚೀನ ಕಲ್ಲಿನ ಕಲಾಕೃತಿಗಳು , ದೇವಾಲಯದ ತುಣುಕುಗಳು ಮತ್ತು ಸುತ್ತಮುತ್ತಲಿನ ಸ್ಥಳಗಳಿಂದ ದೊರೆತ ವಸ್ತುಗಳಿಂದ ತಯಾರಿಸಿದ ಪ್ರತಿಮೆಗಳು ಕಂಡುಬರುತ್ತದೆ.

Kuruma Village Konark

ಕುರುಮಾ ಗ್ರಾಮ

ಚೌರಾಸಿ ದೇವಸ್ಥಾನದಿಂದ ಕೋನಾರ್ಕ್ ನ ಪಶ್ಚಿಮಕ್ಕೆ ಕೇವಲ 3 ಕಿ.ಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಹಸಿರು ಭತ್ತದ ಗದ್ದೆಗಳು ಮತ್ತು ಗ್ರಾಮೀಣ ಪರಿಸರ ಕಂಡುಬರುತ್ತದೆ. ಇಲ್ಲಿ ಬೆನಿಗ್ನ್ ಭೌಮಕರ ಆಳ್ವಿಕೆಯಲ್ಲಿ ನಿರ್ಮಿಸಲಾದ 8ನೇ ಶತಮಾನದ ಪ್ರಾಚೀನ ಬೌದ್ಧ ಸಾಂಸ್ಕೃತಿಕ ಕೇಂದ್ರದ ಅವಶೇಷಗಳು ಕಂಡುಬರುತ್ತದೆ. ಈ ಅವಶೇಷಗಳ ಮೂಲಕ ಇಟ್ಟಿಗೆ ಸ್ತೂಪಗಳು, ನಿವಾಸಿ ವಿಹಾರಗಳು ಮತ್ತು ಅಲಂಕಾರಿಕ ಬಾಗಿಲು ಜಾಮ್ ಗಳಂತಹ ರಚನೆಗಳನ್ನು ಒಳಗೊಂಡಿರುವುದು ತಿಳಿಯುತ್ತದೆ.

ಕೋನಾರ್ಕ್ ಖಗೋಳ ವೀಕ್ಷಣಾಲಯ

ಇದು ಪುರಾತನ ಗ್ರಂಥಗಳು, ಕೋನಾರ್ಕ್ ದೇವಾಲಯದ ನಿರ್ಮಾತೃಗಳು ಕ್ರಿಯಾ ವಿಧಿಗಳನ್ನು ಯೋಜಿಸಲು, ಪ್ರಗತಿಯನ್ನು ನ್ಯಾವಿಗೆಟ್ ಮಾಡಲು ರಚಿಸಿರುವ ವಿಸ್ತಾರವಾದ ಖಗೋಳ ವಿದ್ಯಮಾನಗಳನ್ನು ದಾಖಲಿಸುತ್ತದೆ. ಇಲ್ಲಿ ಇಂದಿಗೂ ಖಗೋಳಶಾಸ್ತ್ರಜ್ಞರನ್ನು ಆಕರ್ಷಿಸುವಂತಹ ಕಾಸ್ಮಿಕ್ ಮಾರ್ಗಗಳು ಮತ್ತು ಗ್ರಹಗಳ ಸ್ಥಾನಗಳನ್ನು ಅರ್ಥೈಸಲು ಪುರೋಹಿತರು ಬಳಸುವ ಸನ್ಡಿಯಲ್ ಗಳು, ಸಮಭಾಜಕ ಉಂಗುರುಗಳು ಮತ್ತು ಕಮಾನಿನ ಮೆರಿಡಿಯನ್ ಗಳಂತಹ ಕಲ್ಲಿನ ಉಪಹರಣಗಳಿವೆ.

ಇದನ್ನೂ ಓದಿ: Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

ಮೆರೈನ್ ಡ್ರೈವ್ ಇಕೋ ರಿಟ್ರೀಟ್ ಕೋನಾರ್ಕ್

ಕೋನಾರ್ಕ್ ಮೆರೈನ್ ಡ್ರೈವ್ ಉದ್ದಕ್ಕೂ ಬೀಚ್ ವಿಲೇಜ್ ಪ್ರಕೃತಿ ರೆಸಾರ್ಟ್ ಅನ್ನು ಪರಿಶೀಲಿಸುವ ಮೂಲಕ ಬಂಗಾಳಕೊಲ್ಲಿಯ ನೀಲಿ ನೀರು ಮತ್ತು ಕ್ಯಾಸುರಿನಾ ಮರಗಳೊಳಗೆ ಸುಸ್ಥಿರ ಐಷರಾಮಿಗಳನ್ನು ನೀವು ಆರಿಸಬಹುದು. ಪರಿಸರ ಸ್ನೇಹಿ ಕುಟೀರಗಳು, ಬಿದಿರಿನ ಗುಡಿಸಲುಗಳು ಅಥವಾ ಟೆಂಟ್ ಹೌಸ್ ಗಳಲ್ಲಿ ನೀವು ಪಕ್ಷಿ ವೀಕ್ಷಣೆಯನ್ನು ಮಾಡಬಹುದು.

Continue Reading

ಪ್ರವಾಸ

Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

ಆಧ್ಯಾತ್ಮದಲ್ಲಿ ಆಸಕ್ತಿ ಇರುವ, ದೇವಸ್ಥಾನಗಳ ಭೇಟಿಯಿಂದ ಶಾಂತಿ ನೆಮ್ಮದಿ ಕಂಡುಕೊಳ್ಳುವ ಯಾರೇ ಆದರೂ, ತಮಿಳುನಾಡಿನ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ಕೊಡಲು ಬಯಸುತ್ತಾರೆ. ಬೃಹತ್‌ ದೇವಸ್ಥಾನಗಳು, ಪುರಾತನ ಐತಿಹಾಸಿಕ ದೇವಸ್ಥಾನಗಳ ದರ್ಶನ ಮಾಡಿಕೊಂಡು ಪುನೀತರಾಗುವ ಇಚ್ಛೆ ಇರುವ ಮಂದಿ ತಮಿಳುನಾಡಿನ ಈ ಪ್ರಮುಖ ದೇವಸ್ಥಾನಗಳಿಗೆ ಜೀವಿತಾವಧಿಯಲ್ಲಿ ಒಮ್ಮೆಯಾದರೂ (Best Tourist Places In Tamilnadu) ಹೋಗಿ ಬರಬೇಕು.

VISTARANEWS.COM


on

Best Tourist Places In Tamilnadu
Koo

ತಮಿಳುನಾಡು ಎಂದ ತಕ್ಷಣ ನೆನಪಾಗುವುದು ಸುಂದರ ದೇವಸ್ಥಾನಗಳು, ಈ ದೇವಸ್ಥಾನಗಳಲ್ಲಿ ಸಿಗುವ ರುಚಿಯಾದ ಪ್ರಸಾದ, ಸಾಂಪ್ರದಾಯಿಕ ಉಡುಗೆ ತೊಡುಗೆಗಳು, ಹೊಟ್ಟೆ ತುಂಬಿಸುವ ಸೊಗಸಾದ ಊಟ. ಆಧ್ಯಾತ್ಮದಲ್ಲಿ ಆಸಕ್ತಿ ಇರುವ, ದೇವಸ್ಥಾನಗಳ ಭೇಟಿಯಿಂದ ಶಾಂತಿ ನೆಮ್ಮದಿ ಕಂಡುಕೊಳ್ಳುವ ಯಾರೇ ಆದರೂ, ತಮಿಳುನಾಡಿನ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ಕೊಡಲು ಬಯಸುತ್ತಾರೆ. ಬೃಹತ್‌ ದೇವಸ್ಥಾನಗಳು, ಪುರಾತನ ಐತಿಹಾಸಿಕ ದೇವಸ್ಥಾನಗಳ ದರ್ಶನ ಮಾಡಿಕೊಂಡು ಪುನೀತರಾಗುವ ಇಚ್ಛೆ ಇರುವ ಮಂದಿ ತಮಿಳುನಾಡಿನ ಈ ಪ್ರಮುಖ ದೇವಸ್ಥಾನಗಳಿಗೆ ಜೀವಿತಾವಧಿಯಲ್ಲಿ ಒಮ್ಮೆಯಾದರೂ (Best Tourist Places In Tamilnadu) ಹೋಗಿ ಬರಬೇಕು.

Meenakshi Temple, Madurai

ಮೀನಾಕ್ಷಿ ದೇವಸ್ಥಾನ, ಮಧುರೈ

ತಮಿಳುನಾಡಿನ ಅತ್ಯಂತ ಪ್ರಸಿದ್ಧವಾದ ದೇವಸ್ಥಾನಗಳ ಪೈಕಿ ಮಧುರೈನ ಮೀನಾಕ್ಷಿ ದೇವಾಲಯ ಪ್ರಮುಖವಾದುದು. ಇಲ್ಲಿ ಶಿವನನ್ನು ಸುಂದರೇಶ್ವರನ ಹೆಸರಿನಲ್ಲೂ, ಪಾರ್ವತಿಯನ್ನು ಮೀನಾಕ್ಷಿಯ ಹೆಸರಿನಲ್ಲೂ ಪೂಜಿಸಲಾಗುತ್ತದೆ. ಬೃಹತ್‌ ದೇವಾಲಯ ಸಮುಚ್ಛಯವಾಗಿರುವ ಇದಕ್ಕೆ ಒಮ್ಮೆ ಒಳಗೆ ಹೊಕ್ಕರೆ, ಹೊರಬರಲು ಕೆಲವು ಗಂಟೆಗಳು ಬೇಕು. ಸುಮಾರು 16ನೇ ಶತಮಾನದ್ದೆಂದು ಹೇಳಲಾಗುವ ಈ ದೇವಾಲಯಕ್ಕೆ ನಿತ್ಯವೂ ಲಕ್ಷಗಟ್ಟಲೆ ಭಕ್ತರು ದೂರದೂರುಗಳಿಂದ ಬಂದು ದರ್ಶನ ಪಡೆಯುತ್ತಾರೆ. ಮಧುರೈಗೆ ಹೋದರೆ, ಇಲ್ಲಿನ ಸಾಂಪ್ರದಾಯಿಕ ಊಟ, ಜಿಗರ್‌ಥಂಡಾ, ದೋಸೆ, ಇಡ್ಲಿಗಳ ರುಚಿಯನ್ನು ಸವಿಯಲು ಮರೆಯಬೇಡಿ.

Kumari Amman Kovil, Kanyakumari

ಕುಮಾರಿ ಅಮ್ಮನ್‌ ಕೋಯಿಲ್‌, ಕನ್ಯಾಕುಮಾರಿ

51 ಶಕ್ತಿ ಪೀಠಗಳಲ್ಲಿ ಒಂದಾದ ಈ ದೇವಸ್ಥಾನದಲ್ಲಿ ದೇವಿಯು ಬಾಣಾಸುರನ ವಧೆಗಾಗಿ ಅವತರಿಸಿದ ಪುಟ್ಟ ಹುಡುಗಿಯ ರೂಪವನ್ನೇ ಇಲ್ಲಿ ಪೂಜಿಸಲಾಗುತ್ತದೆ. ಬಹಳ ಪ್ರಸಿದ್ಧವಾದ ಈ ದೇವಾಲಯವನ್ನು ನೋಡಲು ಹೋದರೆ, ಭಾರತದ ಕೆಳತುದಿಯಾದ ಕನ್ಯಾಕುಮಾರಿಯ ಹಲವು ಜಾಗಗಳಲ್ಲಿ ಸುತ್ತಾಡಿ ಬರಬಹುದು.

Nataraja Temple, Chidambaram

ನಟರಾಜ ದೇವಾಲಯ, ಚಿದಂಬರಂ

ಚಿದಂಬರಂನ ನಟರಾಜ ದೇವಸ್ಥಾನ ಕೂಡಾ ತಮಿಳುನಾಡಿನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಇಲ್ಲಿ ಗೋವಿಂದರಾಜ ಪೆರುಮಾಳ್‌ ಹಾಗೂ ನಟರಾಜನಾದ ಶಿವ ಇಬ್ಬರನ್ನೂ ಪ್ರಮುಖವಾಗಿ ಪೂಜಿಸಲಾಗುತ್ತದೆ. ಹಾಗಾಗಿ, ಶೈವ ಪಂಥ ಹಾಗೂ ವೈಷ್ಣವ ಪಂಥವನ್ನು ಅನುಸರಿಸುವ ಮಂದಿ ಇಲ್ಲಿಗೆ ದರ್ಶನ ನೀಡುತ್ತಾರೆ. ಹಾಗಾಗಿ ಎರಡೂ ಪಂಥದ ಮಂದಿಯನ್ನು ಸೆಳೆಯುವ ಅಪರೂಪದ ದೇವಸ್ಥಾನವಿದು.

Arunachaleshwar Temple, Thiruvannamalai

ಅರುಣಾಚಲೇಶ್ವರ ದೇವಸ್ಥಾನ, ತಿರುವಣ್ಣಾಮಲೈ

ಒಂಭತ್ತನೇ ಶತಮಾನದಲ್ಲಿ ಚೋಳರು ಕಟ್ಟಿಸಿದರೆನ್ನಲಾಗುವ ಈ ದೇವಸ್ಥಾನ ಅತ್ಯಂತ ಪ್ರಸಿದ್ಧವಾದ ಶಿವ ದೇವಸ್ಥಾನ. ಅಣ್ಣಾಮಲೈ ಬೆಟ್ಟದ ಬುಡದಲ್ಲಿರುವ ಈ ದೇವಾಲಯದ ಪ್ರಸಿದ್ಧ ಆಚರಣೆಗಳ ಪೈಕಿ ಗಿರಿವಲಂ ಕೂಡಾ ಒಂದು. ಸಾವಿರಾರು ಭಕ್ತರು ಪ್ರತಿ ಹುಣ್ಣಿಮೆಯ ದಿನ ಅಣ್ಣಾಮಲೈ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ರಾತ್ರಿಯಿಡೀ ಪ್ರದಕ್ಷಿಣೆ ಬಂದು ಅರುಣಾಚಲನ ದರ್ಶನ ಮಾಡುತ್ತಾರೆ.

ರಾಮನಾಥಸ್ವಾಮಿ ದೇವಸ್ಥಾನ, ರಾಮೇಶ್ವರಂ

ರಾಮೇಶ್ವರಂನಲ್ಲಿರುವ ಈ ಶಿವನ ದೇವಾಲಯ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿದೆ. ಸಮುದ್ರ ತೀರದಲ್ಲಿರುವ ಈ ದೇವಸ್ಥಾನದ ಲಿಂಗವನ್ನು ಸ್ವತಃ ಶ್ರೀರಾಮನೇ ಸೀತೆಯ ಹುಡುಕಾಟದಲ್ಲಿ ಇಲ್ಲಿಗೆ ಬಂದಾಗ ಪ್ರತಿಷ್ಠಾತಿಸಿ ಪೂಜಿಸಿದ ಎಂಬ ಸ್ಥಳಪುರಾಣವಿದೆ. 12ನೇ ಶತಮಾನದಲ್ಲಿ ಪಾಂಡ್ಯರಾಜರು ಈ ದೇವಾಲಯವನ್ನು ವಿಸ್ತರಿಸಿ ಪುನರುಜ್ಜೀವನಗೊಳಿಸಿದರು ಎಂದು ಇತಿಹಾಸ ಹೇಳುತ್ತದೆ.

Sri Ranganathaswamy Temple, Srirangam, Tiruchirappalli

ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಂ, ತಿರುಚಿರಾಪಳ್ಳಿ

ತ್ರಿಚಿ ಅಥವಾ ತಿರುಚಿರಾಪಳ್ಳಿಯ ರಂಗನಾಥ ಸ್ವಾಮಿ ದೇವಾಲಯ ಈಗಲೂ ಪೂಜೆ ನಡೆಯುವ ದೇವಸ್ಥಾನಗಳ ಪೈಕಿ ಅತ್ಯಂತ ವಿಸ್ತಾರವಾದ ದೇವಾಲಯ. ವೈಷ್ಣವ ಪಂಥದ ಮಂದಿಯ ಪ್ರಮುಖ ದೇವಾಲಯವಾದ ಇಲ್ಲಿ ಶ್ರೀಹರಿಯು ಗರ್ಭಗುಡಿಯಲ್ಲಿ ಶೇಷಶಯನದ ರೀತಿಯಲ್ಲಿ ಪವಡಿಸಿರುವುದು ವಿಶೇಷ.

Brihadeeswara Temple, Thanjavur

ಬೃಹದೀಶ್ವರ ದೇವಸ್ಥಾನ, ತಂಜಾವೂರು

11ನೇ ಶತಮಾನದಲ್ಲಿ ಚೋಳರ ಕಾಲದಲ್ಲಿ ಕಟ್ಟಲಾದ ಈ ದೇವಸ್ಥಾನ ಭಾರತದ ಪ್ರಮುಖ ಶಿವ ದೇವಾಲಯಗಳಲ್ಲಿ ಒಂದು. ನಿತ್ಯವೂ ಸಾವಿರಾರು ಭಕ್ತರು ಭೇಟಿಕೊಡುವ ಈ ದೇವಸ್ಥಾನ. ಇದು ತನ್ನ ಅತ್ಯಪೂರ್ವ ವಾಸ್ತುಶಿಲ್ಪ, ಕೆತ್ತನೆಗಳಿಂದಷ್ಟೇ ಅಲ್ಲ, ತನ್ನ ಹಲವು ವಿಸ್ಮಯಗಳಿಂದಲೂ ಬಲು ಪ್ರಸಿದ್ಧಿ. ಅದಕ್ಕಾಗಿಯೇ ನಿತ್ಯವೂ ಇಲ್ಲಿ ಭಕ್ತರಷ್ಟೇ ಅಲ್ಲ, ದೇಶವಿದೇಶಗಳಿಂದ ಪ್ರವಾಸಿಗರೂ ಅಚ್ಚರಿಯಿಂದ ಭೇಟಿ ನೀಡುತ್ತಾರೆ

Kapaleeswara Temple, Mylapore, Chennai

ಕಪಾಲೀಶ್ವರ ದೇವಸ್ಥಾನ, ಮೈಲಾಪುರ, ಚೆನ್ನೈ

ಪಲ್ಲವರ ಕಾಲದಲ್ಲಿ ಏಳನೇ ಶತಮಾನದಲ್ಲಿ ಕಟ್ಟಲಾದ ಈ ದೇವಸ್ಥಾನ, ಚೆನ್ನೈನ ಪ್ರಸಿದ್ಧ ದೇವಸ್ಥಾನಗಳ ಪೈಕಿ ಒಂದು. ಶಿವನನ್ನು ಇಲ್ಲಿ ಕಪಾಲೀಶ್ವರನ ಹೆಸರಿನಲ್ಲಿ ಪೂಜಿಸುತ್ತಾರೆ. ಚೆನ್ನೈಯಲ್ಲೇ ಇರುವ ಇದಕ್ಕೆ ನಿತ್ಯವೂ ಸಾವಿರಾರು ಭಕ್ತರು ನೆರೆಯುತ್ತಾರೆ.

ಇದನ್ನೂ ಓದಿ: South Indian Monsoon Destinations: ದಕ್ಷಿಣ ಭಾರತದ ಈ 6 ಸ್ಥಳಗಳಲ್ಲಿ ಮಳೆಗಾಲದಲ್ಲಿ ಚಾರಣ ಮಾಡಲೇಬೇಕು!

Continue Reading

ಪ್ರವಾಸ

South Indian Monsoon Destinations: ದಕ್ಷಿಣ ಭಾರತದ ಈ 6 ಸ್ಥಳಗಳಲ್ಲಿ ಮಳೆಗಾಲದಲ್ಲಿ ಚಾರಣ ಮಾಡಲೇಬೇಕು!

ಹಿಮಾಲಯದ ಚಾರಣ ಕನಸಾದರೂ, ಹತ್ತಿರದಲ್ಲೇ ಸಿಗುವ ಕಡಿಮೆ ಅವಧಿಯಲ್ಲಿ ಮಾಡಿ ಬರಬಹುದಾದ ಚಾರಣಗಳು ಇಂತಹ ಸಂದರ್ಭ ನೆಮ್ಮದಿಯ ಅನುಭವ ನೀಡುತ್ತವೆ. ಬನ್ನಿ, ದಕ್ಷಿಣ ಭಾರತದಲ್ಲಿ ಮಳೆಗಾಲ ಸಮೀಪಿಸುತ್ತಿದ್ದಂತೆ ಮಾಡಬಹುದಾದ ಚಾರಣಗಳು (South Indian monsoon destinations) ಇಲ್ಲಿವೆ.

VISTARANEWS.COM


on

South Indian Monsoon Destinations
Koo

ಚಾರಣ ಪ್ರಿಯರಿಗೆ ಮಳೆಗಾಲ ಹತ್ತಿರ ಬರುತ್ತಿದ್ದಂತೆ ಸುಗ್ಗಿ. ಒಂದೆರಡು ಮಳೆ ಬರುತ್ತಿದ್ದಂತೆ ಚಿಗುರುವ ಬೆಟ್ಟಗಳು ಹಸಿರಾಗಿ ನಳನಳಿಸಲು ಆರಂಭಿಸುತ್ತವೆ. ಹಸಿರ ಸ್ವರ್ಗದಲ್ಲಿ ನಡೆಯುತ್ತಾ ನೆಲಕ್ಕೆ ಮುತ್ತಿಕ್ಕುವ ಮಂಜಿನ ಹನಿಗಳು, ಮೋಡಗಳ ಜೊತೆ ಹೆಜ್ಜೆ ಹಾಕುತ್ತಾ ಸಾಗುವುದು ಪ್ರಕೃತಿ ಪ್ರಿಯರಿಗೆ ದೈವಿಕ ಅನುಭೂತಿ ನೀಡುವ ಕ್ಷಣಗಳಲ್ಲಿ ಒಂದು. ಅದಕ್ಕಾಗಿಯೇ, ಮಳೆಗಾಲ ಹತ್ತಿರ ಬರುತ್ತಿದ್ದಂತೆ ಈ ಚಾರಣಿಗರೆಲ್ಲ ತಮ್ಮ ಅನುಕೂಲಕ್ಕೆ ತಕ್ಕಂತೆ ಯೋಜನೆ ರೂಪಿಸಿಕೊಂಡು ಒಂದಲ್ಲ ಒಂದು ಚಾರಣಕ್ಕೆ ತಯಾರಾಗುತ್ತಾರೆ. ಹಿಮಾಲಯದ ಚಾರಣ ಕನಸಾದರೂ, ಹತ್ತಿರದಲ್ಲೇ ಸಿಗುವ ಕಡಿಮೆ ಅವಧಿಯಲ್ಲಿ ಮಾಡಿ ಬರಬಹುದಾದ ಚಾರಣಗಳು ಇಂತಹ ಸಂದರ್ಭ ನೆಮ್ಮದಿಯ ಅನುಭವ ನೀಡುತ್ತವೆ. ಬನ್ನಿ, ದಕ್ಷಿಣ ಭಾರತದಲ್ಲಿ ಮಳೆಗಾಲ ಸಮೀಪಿಸುತ್ತಿದ್ದಂತೆ ಮಾಡಬಹುದಾದ ಚಾರಣಗಳು (South Indian monsoon destinations) ಇಲ್ಲಿವೆ.

Meesapulimala trek, Kerala

ಮೀಸಪುಲಿಮಲ ಚಾರಣ, ಕೇರಳ

ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಈ ಚಾರಣ ಅತ್ಯಂತ ಸುಂದರ ಚಾರಣಗಳಲ್ಲಿ ಒಂದು. ದಕ್ಷಿಣ ಭಾರತದಲ್ಲಿ ರೋಡೋಡೆಂಡ್ರಾನ್‌ ಅರಳಿರುವುದನ್ನು ನೋಡಬೇಕಾದರೆ ಈ ಚಾರಣ ಮಾಡಬೇಕು. ಅಣ್ಣಾಮಲೈ ಹಾಗೂ ಪಳನಿ ಪರ್ವತ ಪ್ರದೇಶಗಳ ನಡುವೆ ಇರುವ ಈ ಪ್ರದೇಶದಲ್ಲಿ ಮೋಡಗಳನ್ನು ನೀವು ಮುಟ್ಟಬಹುದು. ಅತ್ಯಂತ ಚಂದದ ಹುಲ್ಲುಗಾವಲ ಮಧ್ಯದಲ್ಲಿ ಮಾಡುವ ಈ ಚಾರಣ ಸುಮಾರು ೧೮ ಕಿಮೀಗಳ ಅತ್ಯಂತ ಸುಮಧುರ ಅನುಭವ ನೀಡಬಹುದಾದದ್ದೇ ಆಗಿದೆ.

kudremukh

ಕುದುರೆಮುಖ ಚಾರಣ

ಕುದುರೇಮುಖ ಬೆಟ್ಟಗಳ ಚಾರಣಕ್ಕೆ ಇಂಥದ್ದೇ ಎಂಬ ಸಮಯ ಇಲ್ಲದಿದ್ದರೂ ಮಳೆಗಾಲ ಅತ್ಯಂತ ಸೂಕ್ತ. ಮಳೆಗಾಲದಲ್ಲಿ ಈ ಬೆಟ್ಟದ ಸಾಲುಗಳು ಈಗಷ್ಟೇ ಮಿಂದೆದ್ದು ಹಸಿರು ಸೀರೆಯುಟ್ಟ ನವತರುಣಿಯಂತೆ ಶೋಭಿಸುತ್ತದೆ. ಸುಮಾರು ೨೦ ಕಿಮೀ ಅಂತರದ ಈ ಚಾರಣ ಶೋಲಾ ಕಾಡುಗಳ ಮದ್ಯದಿಂದ ಹಾದುಹೋಗಬೇಕಾಗುತ್ತದೆ. ಮಂಜು ಕವಿದ, ಮೋಡಗಳು ದಿನವಿಡೀ ಬೆಟ್ಟ ಚುಂಬಿಸುವ ಈ ಚಾರಣದ ಹಾದಿಯೇ ಒಂದು ಸುಮಧುರ ಅನುಭೂತಿ. ಚಾಋಣ ಪ್ರಿಯರಾರೂ ಈ ಚಾರಣವನ್ನು ಮಿಸ್‌ ಮಾಡಲು ಬಯಸುವುದಿಲ್ಲ.

Nagalapuram trek, Andhra Pradesh

ನಾಗಲಾಪುರಂ ಚಾರಣ, ಆಂಧ್ರಪ್ರದೇಶ

ಚಿತ್ತೂರು ಜಿಲ್ಲೆಯಲ್ಲಿರುವ ನಾಗಲಾಪುರಂ ಅತ್ಯಂತ ಸುಂದರ ತಾಣ. ಈ ಜಾಗ ಜಲಪಾತಗಳದದ್ದೇ ಕಾರುಬಾರು. ಚಾರಣದುದ್ದಕ್ಕೂ ಸಿಗುವ ಬಗೆಬಗೆಯ ಜಲಪಾತಗಳು ಚಾರಣಿಗರ ಮನೋಲ್ಲಾಸ ಹೆಚ್ಚಿಸುತ್ತದೆ. ದಣಿವು ಆರಿಸುತ್ತದೆ. 12 ಕಿಮೀ ದೂರದ ಈ ಚಾರಣ ಮಳೆಗಾಲದಲ್ಲಷ್ಟೇ ಅತ್ಯಂತ ಸೊಗಸಾದ ಅನುಭವ ನೀಡುತ್ತದೆ.

Kodachadri trek

ಕೊಡಚಾದ್ರಿ ಚಾರಣ

ಚಾರಣದ ಹುಚ್ಚು ಹತ್ತಿಸಿಕೊಂಡ ಮಂದಿ ಆರಂಭದ ದಿನಗಳಲ್ಲಿ ಮಾಡಬಹುದಾದ, ಮತ್ತಷ್ಟು ಚಾರಣದ ಹುಚ್ಚನ್ನು ಹತ್ತಿಸಿಕೊಳ್ಳಬಹುದಾದ ಎಲ್ಲ ಲಕ್ಷಣಗಳ್ನೂ ಹೊಂದಿದ ತಾಣ. ಮಳೆಗಾಲದಲ್ಲಿ ಈ ಜಾಗದ ಸೌಂದರ್ಯ ಸವಿಯಲು ಎರಡು ಕಣ್ಣು ಸಾಲದು. ಕೊಲ್ಲೂರಿನ ಮೂಕಾಂಬಿಕಾ ಸನ್ನಿಧಿಯಿಂದ ಮಾಡಬಹುದಾದ ಈ ಚಾರಣ ಮೂಕಾಂಬಿಕಾ ರಕ್ಷಿತಾರಣ್ಯದ ಒಳಗೆಯೇ ಇದೆ. ಆದಿ ಶಂಕರರು ಧ್ಯಾನ ಮಾಡಿದ ಸ್ಥಳದವರೆಗೆ ಚಾರಣ ಮಾಡಿ ಧ್ಯಾನವನ್ನೂ ಮಾಡಿ, ಮೋಡಗಳನ್ನು ಬೊಗಸೆ ತುಂಬಾ ಹಿಡಿದು ಮರಳಬಹುದು.

Chembara Peak Trek, Wayanad

ಚೆಂಬಾರ ಪೀಕ್‌ ಚಾರಣ, ವಯನಾಡು

ವಯನಾಡಿನ ಚೆಂಬಾರ ಪೀಕ್‌ ಚಾರಣ ಕೂಡಾ ಮಳೆಗಾಲದ ಅದ್ಭುತಗಳಲ್ಲಿ ಒಂದು. ದಟ್ಟಾರಣ್ಯದ ಮಧ್ಯದಲ್ಲಿರುವ ಈ ಚಾರಣಕ್ಕೆ ಅರಣ್ಯಾಧಿಕಾರಿಗಳ ಅನುಮತಿ ಬೇಕು. ಸರಳವಾದ, ಆದರೆ ಮನಮೋಹಕ ದೃಶ್ಯಗಳನ್ನು ಅನುಭವಗಳನ್ನು ಕಣ್ತುಂಬಿಕೊಳ್ಳಬಹುದಾದ ನಾಲ್ಕೈದು ಗಂಟೆಗಳಲ್ಲಿ ಮುಗಿಸಬಹುದಾದ ಚಾರಣವಿದು. ಆರಂಭಿಕ ಚಾರಣಿಗರಿಗೆ ಬೆಸ್ಟ್‌.

Ombattu gudda trek

ಒಂಭತ್ತು ಗುಡ್ಡ ಚಾರಣ

ಏಳೆಂಟು ಗಂಟೆಗಳ ಈ ಚಾರಣ ಸ್ವಲ್ಪ ಸವಾಲೇ ಆದರೂ, ಅತ್ಯಂತ ಸುಂದರ ಚಾಋಣಗಳಲ್ಲಿ ಒಂದು. ಹಾಸನ ಹಾಗೂ ಚಿಕ್ಕಮಗಳೂರಿನ ಸರಹದ್ದಿನಲ್ಲಿ ಬರುವ ಈ ಸ್ಥಳದಲ್ಲಿ ಬಗೆಬಗೆಯ ಸಸ್ಯವೈವಿಧ್ಯವನ್ನೂ ಕಣ್ತುಂಬಿಕೊಳ್ಳಬಹುದು. ರೋಮಾಂಚಕ ಹಾಗೂ ನಿಗೂಢವಾದ ಅನುಭವಗಳನ್ನು ನೀಡಬಲ್ಲ ಈ ಚಾರಣದಲ್ಲಿ ಈ ಅನುಭವಗಳನ್ನು ಪಡೆಯಲು ಮಳೆಗಾಲದಲ್ಲೇ ಚಾರಣ ಮಾಡಬೇಕು.

Continue Reading

ಪ್ರವಾಸ

Travel Tips: ಪ್ರವಾಸಪ್ರಿಯರೇ, ನಿಮ್ಮ ವಿಮಾನ ಪ್ರಯಾಣ ಆರಾಮದಾಯಕವಾಗಬೇಕಿದ್ದರೆ ಈ ಟಿಪ್ಸ್‌‌ ಪಾಲಿಸಿ!

ಪ್ರವಾಸವೆಂಬ ಒಂದು ಸಣ್ಣ ಬದಲಾವಣೆ ಬದುಕಿನಲ್ಲಿ ಭಾರೀ ಬದಲಾವಣೆಯನ್ನೇ ತರಬಹುದು. ಆದರೆ, ಅನೇಕರಿಗೆ ಪ್ರವಾಸ ಇಷ್ಟವಾದರೂ, ಪ್ರವಾಸದ ಹಾದಿ ತ್ರಾಸದಾಯಕ. ಗಂಟೆಗಟ್ಟಲೆ ಪ್ರಯಾಣ ಮಾಡುವುದು ದೇಹಕ್ಕೆ ಒಗ್ಗದು. ಇನ್ನೂ ಕೆಲವರಿಗೆ ಪ್ರವಾಸದ ಮುಖ್ಯ ಭಾಗವಾದ ಪ್ರಯಾಣವೇ ಒಂದು ದಿವ್ಯ ಅನುಭೂತಿ. ವಿಮಾನ ಪ್ರಯಾಣ ಕುರಿತಂತೆ ಉಪಯುಕ್ತ (travel tips) ಸಲಹೆ ಇಲ್ಲಿದೆ.

VISTARANEWS.COM


on

Travel Tips
Koo

ಪ್ರವಾಸ ಮಾಡುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬಹುತೇಕರಿಗೆ ಪ್ರವಾಸ ಎಂದರೆ ಅದೊಂದು ಖುಷಿ, ಉಲ್ಲಾಸ, ಜಗತ್ತು ಮರೆಯುವಷ್ಟು ಸಂತಸ. ಹೊಸ ಜಾಗ, ಹೊಸ ಆಹಾರ, ಹೊಸ ಹೊಸ ಜನರು, ಏಕಾತನತೆಯ ಬದುಕಿಗೊಂದು ಹೊಸ ಉಲ್ಲಾಸದ ತಂಗಾಳಿಯ ಅನುಭವ ನೀಡುವುದು ಸುಳ್ಳಲ್ಲ. ಪ್ರವಾಸವೆಂಬ ಒಂದು ಸಣ್ಣ ಬದಲಾವಣೆ ಬದುಕಿನಲ್ಲಿ ಭಾರೀ ಬದಲಾವಣೆಯನ್ನೇ ತರಬಹುದು. ಆದರೆ, ಅನೇಕರಿಗೆ ಪ್ರವಾಸ ಇಷ್ಟವಾದರೂ, ಪ್ರವಾಸದ ಹಾದಿ ತ್ರಾಸದಾಯಕ. ಗಂಟೆಗಟ್ಟಲೆ ಪ್ರಯಾಣ ಮಾಡುವುದು ದೇಹಕ್ಕೆ ಒಗ್ಗದು. ಇನ್ನೂ ಕೆಲವರಿಗೆ ಪ್ರವಾಸದ ಮುಖ್ಯ ಭಾಗವಾದ ಪ್ರಯಾಣವೇ ಒಂದು ದಿವ್ಯ ಅನುಭೂತಿ. ಈಗೆಲ್ಲ ಪ್ರವಾಸ ಹಿಂದೆಂದಿಗಿಂತಲೂ ಅನುಕೂಲಕರವಾಗಿದೆ. ಕಚೇರಿಯ ಕೆಲಸವಿರಬಹುದು, ತಮ್ಮ ಪ್ರೀತಿ ಪಾತ್ರರ ಭೇಟಿಗೆ ಇರಬಹುದು ಅಥವಾ, ಹೊಸ ಸ್ಥಳವನ್ನು ಕಣ್ತುಂಬಿಕೊಂಡು ಬರಲಿರಬಹುದು, ಗೆಳೆಯರ ಜೊತೆ ಕೇವಲ ಒಂದು ಪಾರ್ಟಿಯಲ್ಲಿ ಭಾಗವಹಿಸಿ ಬರುವುದರಿಬಹುದು ಅಥವಾ ಕಚೇರಿಯ ಬಹುಮುಖ್ಯವಾದ ಮೀಟಿಂಗ್‌ಗೆ ಇರಬಹುದು, ಅಂದುಕೊಂಡ ತಕ್ಷಣ ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಹೊರಟು ನಿಲ್ಲಬಹುದು. ಟಿಕೆಟ್‌ ಕಾದಿರಿಸಿ ವಿಮಾನ ಹತ್ತುವ ಕೆಲಸ ಇಂದು ಬಹಳ ಮಂದಿಯ ಜೀವನದಲ್ಲಿ ನಿತ್ಯದ ಕೆಲಸವೇ ಆಗಿದೆ. ಮಧ್ಯಮವರ್ಗದ ಸಾಮಾನ್ಯರೂ ಕೂಡಾ ವಿಮಾನ ಪ್ರಯಾಣವನ್ನು ಆಯ್ಕೆ ಮಾಡಲಾರಂಭಿಸಿದ್ದಾರೆ. ವಿಮಾನ ಪ್ರಯಾಣ ಸುಖದಾಯಕ ಎಂಬ ಭ್ರಮೆ ಬಹಳಷ್ಟು ಮಂದಿಯಲ್ಲಿದೆ. ಆಗಸದಲ್ಲಿ ಹಾರಿ ಹೋಗಿ ಸಾವಿರಾರು ಕಿಮೀ ದೂರದ ಮತ್ತೊಂದು ಜಾಗದಲ್ಲಿ ಕೆಲವೇ ಗಂಟೆಗಳಲ್ಲಿ ತಲುಪಬಹುದಾದ ಈ ಸೇವೆ ನಿಜಕ್ಕೂ ಅದ್ಭುತವೇ ಆದರೂ, ಈ ಪ್ರಯಾಣ ಅಂದುಕೊಂಡ ಹಾಗೆ ಸುಖದಾಯಕವೇನೂ ಇಲ್ಲ. ಬಹಳ ಮಂದಿಗೆ ವಿಮಾನ ಪ್ರಯಾಣವೆಂದರೆ ಭಯ, ಇನ್ನೂ ಹಲವರಿಗೆ ಅದೊಂದು ಕಷ್ಟದಾಯಕವಾದ ಕೆಲಸ. ಯಾಕೆಂದರೆ ಸಮುದ್ರ ಮಟ್ಟದಿಂದ ಬಹಳಷ್ಟು ಮೇಲೆ ಸಂಚರಿಸುವ ವಿಮಾನ ಪ್ರಯಾಣದಲ್ಲೂ ಹಲವು ಅನನುಕೂಲತೆಗಳಿವೆ. ಬನ್ನಿ ವಿಮಾನ ಪ್ರಮಾಣ ಸುಖಕರವಾಗಿರಬೇಕಿದ್ದರೆ ಈ ಕೆಲವು ಟಿಪ್ಸ್‌ (travel tips) ನೆನಪಿನಲ್ಲಿಟ್ಟುಕೊಳ್ಳಿ

Charming Kid Traveling by an Airplane.

ಚೆನ್ನಾಗಿ ನೀರು ಕುಡಿಯಿರಿ

ಯಾವುದೇ ಪ್ರಯಾಣದ ಸಂದರ್ಭ ಚೆನ್ನಾಗಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಯಾಕೆಂದರೆ, ವಿಮಾನ ಪ್ರಯಾಣ ಮಾಡುವ ಸಂದರ್ಭ ನಿರ್ಜಲೀಕರಣ ಸಮಸ್ಯೆ ಬರುವ ಸಂಭವ ಹೆಚ್ಚು ಇರುತ್ತದೆ. ಹಾಗಂತ ಹೆಚ್ಚು ನೀರು ಕುಡಿಯುತ್ತಲೇ ಇರಬೇಕಾಗಿಲ್ಲ. ಸ್ವಲ್ಪ ಸ್ವಲ್ಪ ನೀರನ್ನು ಆಗಾಗ ಹೀರುತ್ತಿದ್ದರೆ ಪ್ರಯಾಣ ಸುಲಲಿತವಾಗಿರುತ್ತದೆ. ಬಹಳಷ್ಟು ಮಂದಿಗೆ ನಿರ್ಜಲೀಕರಣದ ಸಮಸ್ಯೆಯಿಂದಾಗಿ ರಕ್ತ ಹೆಪ್ಪುಗಟ್ಟುವಿಕೆ ಇತ್ಯಾದಿ ಸಮಸ್ಯೆಗಳೂ ಉಂಟಾಗಬಹುದು. ಹೀಗಾಗಿ ಸ್ವಲ್ಪ ಸ್ವಲ್ಪ ನೀರು ಹೀರುತ್ತಿರಬಹುದು.

ಕಂಫರ್ಟ್‌ ಇರಲಿ

ಪ್ರಯಾಣದ ಸಂದರ್ಭ ಲಗೇಜ್‌ ಸಾಮಾನ್ಯ. ಅದನ್ನು ಎಳೆದು ಸಾಗಿಸುವ ವ್ಯವಸ್ಥೆ ಇದ್ದರೂ ಲಗೇಜುಗಳನ್ನು ಹಿಡಿದುಕೊಂಡು ಓಡಾಡುವುದರಿಂದ ಸಾಕಷ್ಟು ಸಮಸ್ಯೆಗಳು ಬರುತ್ತವೆ. ಕೆಲವರಿಗೆ ಭುಜ, ಕುತ್ತಿಗೆಯ ಸಮಸ್ಯೆಗಳೂ ಆಗುವುದುಂಟು. ಒಂದೇ ಭಂಗಿಯಲ್ಲಿ ಗಂಟೆಗಟ್ಟಲೆ ಕೂರುವ, ಕೈಕಾಲು ಅಲ್ಲಾಡಿಸಲು ಸಾಕಷ್ಟು ಸ್ಥಳಾವಕಾಶ ಇಲ್ಲದಿರುವುದು ಇತ್ಯಾದಿ ಸಮಸ್ಯೆಗಳಿಂದ ಪ್ರಯಾಣ ಕಷ್ಟವಾಗಬಹುದು. ಅದಕ್ಕಾಗಿ ಕಂಫರ್ಟ್‌ ಮುಖ್ಯ ಎಂಬುದು ನೆನಪಿಡಿ. ವಿಮಾನದಲ್ಲಿ ಕೂತಾಗ ಕುತ್ತಿಗೆಯ ದಿಂಬು (ನೆಕ್‌ ಪಿಲ್ಲೋ) ಇತ್ಯಾದಿಗಳ ಸಹಾಯ ಪಡೆಯಬಹುದು. ಜೊತೆಗೆ ಕೈಕಾಲುಗಳನ್ನು ಕೂತಲ್ಲಿಯೇ ಅಲ್ಲಾಡಿಸುವ ಸಣ್ಣ ಪುಟ್ಟ ವ್ಯಾಯಾಮಗಳನ್ನೂ ಮಾಡಿ.

coffe and alcohol wrong

ಹೆಚ್ಚು ಕಾಫಿ, ಆಲ್ಕೋಹಾಲ್‌ ಸೇವನೆ ಬೇಡ

ವಿಮಾನ ಪ್ರಯಾಣವಿದ್ದಾಗ ಕೆಫೀನ್‌ ಅಂಶದ ಆಹಾರಗಳನ್ನು ಕಡಿಮೆ ಸೇವಿಸಿ. ಕಾಫಿ, ಚಹಾ ಇತ್ಯಾದಿಗಳು, ಆಲ್ಕೋಹಾಲ್‌ ಸೇವನೆ ಇತ್ಯಾದಿ ಮಾಡಬೇಡಿ. ದ್ರವಾಹಾರ ಒಳ್ಳೆಯದು ಎಂದಾಕ್ಷಣ ಇಂತಹ ಪೇಯಗಳೂ ಒಳ್ಳೆಯದು ಎಂಬ ಭ್ರಮೆ ಬೇಡ. ಹೆಚ್ಚು ಸಕ್ಕರೆ ಇರುವಂಥಹ ಜ್ಯೂಸ್‌, ಶೇಕ್‌ಗಳೂ ಬೇಡ.

ಚರ್ಮವನ್ನು ಕಾಳಜಿ ಮಾಡಿ

ವಿಮಾನದೊಳಗೆ ಒಣ ಹವೆ ಇರುವುದರಿಂದ ಅನೇಕರಿಗೆ ಚರ್ಮ ಒಣಕಲಾಗುತ್ತದೆ. ಹಾಗಾಗಿ ವಿಮಾನ ಪ್ರಯಾಣಕ್ಕೂ ಮೊದಲು ಚರ್ಮದ ಕಾಳಜಿ ಮಾಡಿ. ಮಾಯ್‌ಶ್ಚರೈಸರ್‌ ಹಾಗೂ ಲಿಪ್‌ ಬಾಮ್‌ನ ಸಣ್ಣ ಡಬ್ಬವನ್ನು ಜೊತೆಗೆ ಇಟ್ಟುಕೊಳ್ಳಬಹುದು.

ಇದನ್ನೂ ಓದಿ: Summer Tour: ಬೇಸಿಗೆಯಲ್ಲಿ ಈ 8 ತಂಪು ಹಳ್ಳಿಗಳಿಗೆ ಪ್ರವಾಸ ಹೋಗಿ ಕೂಲ್ ಆಗಿ!

ಕಿವಿ ನೋವಿಗೆ ಕಾಳಜಿ ಮಾಡಿ

ವಿಮಾನ ಪ್ರಯಾಣದ ಸಂದರ್ಭ ಬಹಳಷ್ಟು ಮಂದಿಯ ದೊಡ್ಡ ಸಮಸ್ಯೆ ಎಂದರೆ ಕಿವಿ ನೋವು. ವಿಮಾನ ರನ್‌ ವೇ ಮೇಲೆ ಓಡಿ ಟೇಕ್‌ ಆಫ್‌ ಆದ ತಕ್ಷಣ ಗುಂಯ್‌ಗುಡಲ್ಪಡುವ ಅನುಭವ. ಇದು ನೋವಿಗೂ ತಿರುಗುತ್ತದೆ. ಪ್ರಯಾಣವಿಡೀ ಕಿವಿಯೊಳಗೆ ಗಾಳಿ ತುಂಬಿಕೊಂಡಂತೆ ಅತೀವ ಹಿಂಸೆಯೆನಿಸುತ್ತದೆ. ಇದು ಯಾಕೆಂದರೆ ವಿಮಾನ ಮೇಲೇರಿದಾಗ ಕ್ಯಾಬಿನ್‌ ಒಳಗೆ ಉತ್ಪತ್ತಿಯಾಗುವ ಗಾಳಿಯ ಒತ್ತಡ. ಇದಕ್ಕಿರುವ ಒಂದೇ ಉಪಾಯವೆಂದರೆ ಚೂಯಿಂಗ್‌ ಗಮ್‌ ಜಗಿಯುವುದು. ಇದರಿಂದ ಕಿವಿಯ ಮೇಲೆ ಬೀಳುವ ಒತ್ತಡ ಕೊಂಚ ಹತೋಟಿಗೆ ಬರುತ್ತದೆ. ಯಾವುದಾದರೂ ಕ್ಯಾಂಡಿ, ಮಿಠಾಯಿಯನ್ನೂ ಇಟ್ಟುಕೊಳ್ಳಬಹುದು. ಏನೂ ಇಲ್ಲದಿದ್ದರೆ ಜಗಿಯುವಂಥ ಮುಖಭಾವ ಮಾಡಿಕೊಂಡರೆ ಇದರಿಂದ ಕೊಂಚ ನೆಮ್ಮದಿ ಸಿಗುತ್ತದೆ.

Continue Reading
Advertisement
Hardik Pandya
ಕ್ರೀಡೆ2 mins ago

Hardik Pandya: ಬ್ರೇಕ್ ಅಪ್ ಕುರಿತು ರಹಸ್ಯ ಪೋಸ್ಟ್​ ಮಾಡಿದ ಹಾರ್ದಿಕ್ ಪಾಂಡ್ಯ ಪತ್ನಿ

Fire Accident
ದೇಶ32 mins ago

Fire Accident: ಗುಜರಾತ್‌ ಅಗ್ನಿ ದುರಂತ; ಸಾವಿನ ಸಂಖ್ಯೆ 32ಕ್ಕೆ ಏರಿಕೆ; SIT ತನಿಖೆಗೆ ಆದೇಶ

Psycho Killer Girish throws a stone on the head of the sleeping person and kills
ಕ್ರೈಂ37 mins ago

Psycho Killer: ಕುಡಿದು ಬರ್ತಾನೆ, ಮಲಗಿದ್ದವರ ತಲೆ ಮೇಲೆ ಕಲ್ಲು ಎಸೆದು ಸಾಯಿಸ್ತಾನೆ! ಕಿಲ್ಲರ್‌ ಅಂದರ್‌!

Malaysia Masters final
ಕ್ರೀಡೆ41 mins ago

Malaysia Masters final: ಪ್ರಶಸ್ತಿ ಬರ ನೀಗಿಸುವ ನಿರೀಕ್ಷೆಯಲ್ಲಿ ಪಿ.ವಿ.ಸಿಂಧು; ಇಂದು ಫೈನಲ್​

Accident
ದೇಶ58 mins ago

Accident: ಭೀಕರ ಅಪಘಾತ; ದೇವಸ್ಥಾನಕ್ಕೆ ತೆರಳುತ್ತಿದ್ದ 11 ಜನ ಸ್ಥಳದಲ್ಲೇ ದುರ್ಮರಣ

Actor  Ravichandran Talks About Kannada Movie Industry Problems yash darshan
ಸ್ಯಾಂಡಲ್ ವುಡ್1 hour ago

Actor  Ravichandran: ಯಶ್, ದರ್ಶನ್ ವರ್ಷಕ್ಕೆ 3 ಸಿನಿಮಾ ಮಾಡಿಬಿಟ್ರೆ ಕಥೆ ಅಷ್ಟೇ ಎಂದ ರವಿಚಂದ್ರನ್‌!

KKR vs SRH IPL Final
ಕ್ರೀಡೆ1 hour ago

KKR vs SRH IPL Final: ಫೈನಲ್​ ಪಂದ್ಯಕ್ಕೆ ಕ್ಷಣಗಣನೆ; ಇತ್ತಂಡಗಳ ದಾಖಲೆ ಹೇಗಿದೆ?

Fire accident
ದೇಶ2 hours ago

Fire Accident: ಬೆಚ್ಚಿ ಬೀಳಿಸಿದ ಮತ್ತೊಂದು ಅಗ್ನಿ ಅವಘಡ; ಆಸ್ಪತ್ರೆಯಲ್ಲಿ ಭಾರೀ ದುರಂತ- 7 ನವಜಾತ ಶಿಶುಗಳು ಸಜೀವ ದಹನ

KKR vs SRH IPL Final
ಕ್ರೀಡೆ2 hours ago

KKR vs SRH IPL Final: ರೀಮಲ್‌ ಚಂಡಮಾರುತ; ಫೈನಲ್​ ಪಂದ್ಯಕ್ಕೆ ಮಳೆ ಭೀತಿ ಇದೆಯೇ?

Hassan Accident Terrible accident Five died on the spot
ಹಾಸನ2 hours ago

Hassan Accident: ಹಾಸನದಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಐವರ ದುರ್ಮರಣ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ18 hours ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ3 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ7 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ7 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ7 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ಟ್ರೆಂಡಿಂಗ್‌