Post office savings schemes : ಬಡ್ಡಿ ದರ ಏರಿಕೆ, ಬ್ಯಾಂಕ್‌ ಎಫ್‌ಡಿಗಳ ಜತೆ ಅಂಚೆ ಉಳಿತಾಯ ಠೇವಣಿ ಯೋಜನೆಯ ಪೈಪೋಟಿ - Vistara News

ಪ್ರಮುಖ ಸುದ್ದಿ

Post office savings schemes : ಬಡ್ಡಿ ದರ ಏರಿಕೆ, ಬ್ಯಾಂಕ್‌ ಎಫ್‌ಡಿಗಳ ಜತೆ ಅಂಚೆ ಉಳಿತಾಯ ಠೇವಣಿ ಯೋಜನೆಯ ಪೈಪೋಟಿ

ಆರ್‌ ಬಿಐ ರೆಪೊ ದರ ಏರಿಕೆಯ ಬಳಿಕ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕೂಡ ಏರಿಕೆಯಾಗಿದೆ. ಇದರ ಪರಿಣಾಮ ಬ್ಯಾಂಕ್‌ (Post office savings schemes) ಎಫ್‌ಡಿಗೆ ಸಮವಾಗಿ ಬಡ್ಡಿ ದರವನ್ನು ಅಂಚೆ ಉಳಿತಾಯ ಯೋಜನೆಗಳೂ ನೀಡುತ್ತಿವೆ. ವಿವರ ಇಲ್ಲಿದೆ.

VISTARANEWS.COM


on

post officVistara explainer, Lok Sabha gives nod to 2023 post office bill
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತೀರಾ ಇತ್ತೀಚಿನವರೆಗೂ ಅಂಚೆ ಇಲಾಖೆಯ ಟರ್ಮ್‌ ಡೆಪಾಸಿಟ್‌ಗಳು (post office term deposit) ಬ್ಯಾಂಕ್‌ಗಳ ಎಫ್‌ಡಿಗಿಂತ (fixed deposit) ಕಡಿಮೆ ಬಡ್ಡಿ ದರವನ್ನು ನೀಡುತ್ತಿದ್ದವು. ಆದರೆ ಇದೀಗ ಮತ್ತೆ ಪೈಪೋಟಿ ನೀಡಲು ಆರಂಭಿಸಿವೆ. ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಸತತ ಎರಡನೇ ಬಾರಿಗೆ ಪರಿಷ್ಕರಿಸಿ ಏರಿಸಿರುವುದು ಇದಕ್ಕೆ ಕಾರಣವಾಗಿದೆ.

ಉದಾಹರಣೆಗೆ ಎರಡು ವರ್ಷ ಅವಧಿಯ ಅಂಚೆ ಕಚೇರಿಯ ಟರ್ಮ್‌ ಡೆಪಾಸಿಟ್‌ ಈಗ 6.5% ಬಡ್ಡಿ ನೀಡುತ್ತಿವೆ. ಇದು ಬಹುತೇಕ ಬ್ಯಾಂಕ್‌ಗಳ ಎಫ್‌ಡಿ ಬಡ್ಡಿಗೆ ಸಮವಾಗಿದೆ. 2022ರ ಮೇ ಬಳಿಕ ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಸರಣಿ ರೂಪದಲ್ಲಿ ರೆಪೊ ದರವನ್ನು ಏರಿಸಿತ್ತು. ಇದರ ಪರಿಣಾಮ ನಿಶ್ಚಿತ ಠೇವಣಿಗಳ ಬಡ್ಡ ದರ ಏರಿಕೆಯಾಗಿದೆ.

2022ರ ಮೇಯಿಂದ 2023ರ ಫೆಬ್ರವರಿ ನಡುವೆ ಹೊಸ ಠೇವಣಿಗಳಿಗೆ weighted average domestic term deposit rate (ರಿಟೇಲ್‌ ಮತ್ತು ಸಗಟು) 2.22%ರಷ್ಟು ಏರಿಕೆಯಾಗಿದೆ. ಸರ್ಕಾರವು ಸಣ್ಣ ಉಳಿತಾಯ ಯೋಜನೆಗೆ ಸಂಬಂಧಿಸಿ 2022-23ರ ಅಕ್ಟೋಬರ್-ಡಿಸೆಂಬರ್‌ ತ್ರೈಮಾಸಿಕಕ್ಕೆ 0.30% ತನಕ, 2022-23ರ ಜನವರಿ-ಮಾರ್ಚ್‌ ಅವಧಿಗೆ 1.10% ತನಕ ಏರಿಸಿದೆ.

post office
post office

ಈ ಏರಿಕೆಯ ಪರಿಣಾಮ ಇದೀಗ ಅಂಚೆ ಇಲಾಖೆಯ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಬ್ಯಾಂಕ್‌ ಎಫ್‌ಡಿಗಳ ಜತೆಗೆ ಪೈಪೋಟಿ ನೀಡುತ್ತಿವೆ. ಅಂಚೆ ಇಲಾಖೆಯಲ್ಲಿ 2 ವರ್ಷ ಅವಧಿಯ ಟರ್ಮ್‌ ಡೆಪಾಸಿಟ್‌ ಬಡ್ಡಿ ದರ 5.5%ರಿಂದ 7%ಕ್ಕೆ ಏರಿಕೆಯಾಗಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಎಸ್‌ಬಿಐನಲ್ಲಿ ‌2-3 ವರ್ಷದ ಠೇವಣಿಗೆ 7% ಬಡ್ಡಿ ಸಿಗುತ್ತದೆ. ಅಂದರೆ ಎರಡೂ ಕಡೆ ಸಮವಾಗಿದೆ.

ರೆಪೊ ದರ ಏರಿಕೆ ಪರಿಣಾಮ ಠೇವಣಿ ಬಡ್ಡಿ ಏರಿದ್ದರೂ, ಸಾಲದ ಬಡ್ಡಿ ದರ ಕೂಡ ಏರಿಕೆಯಾಗಿ ಸಾಲಗಾರರಿಗೆ ಹೊರೆಯಾಗಿರುವುದು ವಾಸ್ತವ. ಹೀಗಿದ್ದರೂ ಸಾಲದ ವಿತರಣೆ ಕೂಡ ಏರಿಕೆಯಾಗಿರುವುದು ಗಮನಾರ್ಹ.

ಅಂಚೆ ಇಲಾಖೆಯ ಉಳಿತಾಯ ಯೋಜನೆಗಳ ಪಟ್ಟಿ ಇಂತಿದೆ:

ಅಂಚೆ ಇಲಾಖೆಯ ಉಳಿತಾಯ ಖಾತೆ : ಬಡ್ಡಿ 4%

ನ್ಯಾಶನಲ್‌ ಸೇವಿಂಗ್ಸ್‌ ರಿಕರಿಂಗ್‌ ಡೆಪಾಸಿಟ್‌ (RD): 5 ವರ್ಷಕ್ಕೆ ಬಡ್ಡಿ 6.2%

ನ್ಯಾಶನಲ್‌ ಸೇವಿಂಗ್ಸ್‌ ಟೈಮ್‌ ಡಿಪಾಸಿಟ್‌ ಅಕೌಂಟ್‌: 7.7% ಬಡ್ಡಿ

ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್ಸ್‌ ಸ್ಕೀಮ್‌ ಅಕೌಂಟ್‌ : ತ್ರೈಮಾಸಿಕ ಬಡ್ಡಿ 8.2% ಬಡ್ಡಿ

ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ : 7.1% ಬಡ್ಡಿ

ಸುಕನ್ಯಾ ಸಮೃದ್ಧಿ ಖಾತೆ: 8.0% ಬಡ್ಡಿ

ನ್ಯಾಶನಲ್‌ ಸೇವಿಂಗ್ಸ್‌ ಸರ್ಟಿಫಿಕೇಟ್‌ : 7.7% ಬಡ್ಡಿ

ಕಿಸಾನ್‌ ವಿಕಾಸ ಪತ್ರ : 7.5% ಬಡ್ಡಿ

ಮಹಿಳಾ ಸಮ್ಮಾನ್‌ ಸೇವಿಂಗ್ಸ್‌ ಸರ್ಟಿಫಿಕೇಟ್‌ : 7.5% ಬಡ್ಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Reserve Bank of India : ಭಾರತದ ಬ್ಯಾಂಕ್​ಗಳಲ್ಲಿವೆ ವಾರಸುದಾರರಿಲ್ಲದ 78,213 ಕೋಟಿ ರೂಪಾಯಿ!

Reserve Bank of India : ಸಹಕಾರಿ ಬ್ಯಾಂಕುಗಳು ಸೇರಿದಂತೆ ಬ್ಯಾಂಕುಗಳು ತಮ್ಮ ಖಾತೆಗಳಲ್ಲಿ 10 ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳವರೆಗೆ ಯಾರೂ ಕ್ಲೇಮ್ ಮಾಡದೇ ಇರುವ ಖಾತೆಯಲ್ಲಿನ ದುಡ್ಡನ್ನು ಆರ್​ಬಿಯ ಠೇವಣಿ ಶಿಕ್ಷಣ ಮತ್ತು ಜಾಗೃತಿ (ಡಿಇಎ) ನಿಧಿಗೆ ವರ್ಗಾಯಿಸುತ್ತವೆ.

VISTARANEWS.COM


on

Reserve Bank of India
Koo

ನವದೆಹಲಿ: ಬ್ಯಾಂಕುಗಳಲ್ಲಿ ಯಾರೂ ಕ್ಲೈಮ್ ಮಾಡದ (ವಾಪಸ್ ಪಡೆಯದ) ಠೇವಣಿಗಳು ವರ್ಷದಿಂದ ವರ್ಷಕ್ಕೆ ಶೇಕಡಾ 26ರಷ್ಟು ಏರಿಕೆ ಕಂಡು 2024 ರ ಮಾರ್ಚ್ ಅಂತ್ಯದ ವೇಳೆಗೆ 78,213 ಕೋಟಿ ರೂ.ಗೆ ತಲುಪಿದೆ ಎಂದು ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾ (Reserve Bank of India) ವಾರ್ಷಿಕ ವರದಿ ತಿಳಿಸಿದೆ. ಅದೇ ರೀತಿ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಯು ಮಾರ್ಚ್ 2023 ರ ಅಂತ್ಯದ ವೇಳೆಗೆ 62,225 ಕೋಟಿ ರೂಪಾಯಿಗೆ ಏರಿದೆ ಎಂದು ಅದು ಹೇಳಿದೆ.

ಸಹಕಾರಿ ಬ್ಯಾಂಕುಗಳು ಸೇರಿದಂತೆ ಬ್ಯಾಂಕುಗಳು ತಮ್ಮ ಖಾತೆಗಳಲ್ಲಿ 10 ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳವರೆಗೆ ಯಾರೂ ಕ್ಲೇಮ್ ಮಾಡದೇ ಇರುವ ಖಾತೆಯಲ್ಲಿನ ದುಡ್ಡನ್ನು ಆರ್​ಬಿಯ ಠೇವಣಿ ಶಿಕ್ಷಣ ಮತ್ತು ಜಾಗೃತಿ (ಡಿಇಎ) ನಿಧಿಗೆ ವರ್ಗಾಯಿಸುತ್ತವೆ.

ಖಾತೆದಾರರಿಗೆ ಸಹಾಯ ಮಾಡುವ ಕ್ರಮವಾಗಿ ಮತ್ತು ನಿಷ್ಕ್ರಿಯ ಖಾತೆಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಈ ವರ್ಷದ ಆರಂಭದಲ್ಲಿ ಖಾತೆಗಳು ಮತ್ತು ಠೇವಣಿಗಳನ್ನು ನಿಷ್ಕ್ರಿಯ ಖಾತೆಗಳು ಮತ್ತು ಕ್ಲೈಮ್ ಮಾಡದ ಠೇವಣಿಗಳು ಎಂದು ವರ್ಗೀಕರಿಸಲು ಬ್ಯಾಂಕುಗಳು ಜಾರಿಗೆ ತರಬೇಕಾದ ಕ್ರಮಗಳ ಬಗ್ಗೆ ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದನ್ನು ಸಂದರ್ಭಕ್ಕೆ ತಕ್ಕಂತೆ ಅನುಸರಿಬಹುದಾಗಿದೆ.

ಇದನ್ನೂ ಓದಿ: Radhika Merchant : ಅನಂತ್​​ ಅಂಬಾನಿ- ರಾಧಿಕಾ ಮರ್ಚೆಂಟ್​ ವಿವಾಹದ ಸ್ಥಳ ಬಹಿರಂಗ; ಇಲ್ಲಿದೆ ವಿವರ

ಖಾತೆಗಳ ನಿಯಮಿತ ಪರಿಶೀಲನೆ, ಅಂಥ ಖಾತೆಗಳ ಮೂಲಕ ವಂಚನೆ ತಡೆಗಟ್ಟುವ ಕ್ರಮಗಳು, ದೂರುಗಳನ್ನು ತ್ವರಿತವಾಗಿ ಪರಿಹರಿಸಲು ಕುಂದುಕೊರತೆ ಪರಿಹಾರ ಕಾರ್ಯವಿಧಾನ, ಖಾತೆಗಳನ್ನು ಮರು ಸಕ್ರಿಯಗೊಳಿಸಲು ಅವರ ನಾಮನಿರ್ದೇಶಿತರು ಅಥವಾ ಕಾನೂನುಬದ್ಧ ವಾರಸುದಾರರು ಸೇರಿದಂತೆ ನಿಷ್ಕ್ರಿಯ ಖಾತೆಗಳು ಅಥವಾ ಕ್ಲೈಮ್ ಮಾಡದ ಠೇವಣಿಗಳ ಗ್ರಾಹಕರನ್ನು ಪತ್ತೆಹಚ್ಚಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸೂಚಿಸಲಾಗಿತ್ತು. ಕ್ಲೇಮ್​ಗಳ ಇತ್ಯರ್ಥ ಅಥವಾ ಖಾತೆ ಮುಚ್ಚಲು ಅನುಸರಿಸಬೇಕಾದ ಪ್ರಕ್ರಿಯೆಗಳಿಗೆ ಆರ್​ಸಿಬಿ ಬ್ಯಾಂಕುಗಳಿಗೆ ಸಲಹೆ ನೀಡಿದೆ.

ಈ ಸೂಚನೆಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕ್ಲೈಮ್ ಮಾಡದ ಠೇವಣಿಗಳ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಅಂತಹ ಠೇವಣಿಗಳನ್ನು ಅವುಗಳ ನಿಜವಾದ ಮಾಲೀಕರು / ಹಕ್ಕುದಾರರಿಗೆ ಹಿಂದಿರುಗಿಸಲು ಬ್ಯಾಂಕುಗಳು ಮತ್ತು ರಿಸರ್ವ್ ಬ್ಯಾಂಕ್ ಕೈಗೊಂಡ ಪ್ರಯತ್ನಗಳು ಮತ್ತು ಉಪಕ್ರಮಗಳಿಗೆ ಪೂರಕವಾಗಿತ್ತು. ಪರಿಷ್ಕೃತ ಸೂಚನೆಗಳು ಎಲ್ಲಾ ವಾಣಿಜ್ಯ ಬ್ಯಾಂಕುಗಳು (ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಸೇರಿದಂತೆ) ಮತ್ತು ಎಲ್ಲಾ ಸಹಕಾರಿ ಬ್ಯಾಂಕುಗಳಿಗೆ ಅನ್ವಯಿಸುತ್ತವೆ ಮತ್ತು ಏಪ್ರಿಲ್ 1, 2024 ರಿಂದ ಜಾರಿಗೆ ಬಂದಿವೆ.

Continue Reading

ದೇಶ

Modi Meditation: ಧ್ಯಾನ ಮಾಡುವ 45 ಗಂಟೆಯೂ ಆಹಾರ ಸೇವಿಸಲ್ಲ ಮೋದಿ; 2 ದಿನ ಪಾನೀಯವೇ ಆಹಾರ!

Modi Meditation: ನರೇಂದ್ರ ಮೋದಿ ಅವರು ಕೇರಳ ರಾಜಧಾನಿ ತಿರುವನಂತಪುರಂನಿಂದ ಕನ್ಯಾಕುಮಾರಿಗೆ ಆಗಮಿಸಿದರು. ಧ್ಯಾನ ಆರಂಭಿಸುವ ಮೊದಲು ಅವರು ಭಗವತಿ ಅಮ್ಮನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇದಾದ ಬಳಿಕ ಮೋದಿ ಅವರು ಧ್ಯಾನ ಆರಂಭಿಸಿದರು. ಸುಮಾರು 45 ಗಂಟೆಗಳವರೆಗೆ ಮೋದಿ ಧ್ಯಾನ ಮಾಡಲಿದ್ದಾರೆ. ಇದೇ ವೇಳೆ ಅವರು ಎರಡು ದಿನವೂ ಆಹಾರ ಸೇವಿಸುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

VISTARANEWS.COM


on

Modi Meditation
Koo

ಕನ್ಯಾಕುಮಾರಿ: ಲೋಕಸಭೆ ಚುನಾವಣೆ (Lok Sabha Election 2024) ಕೊನೆಯ ಹಂತ ತಲುಪಿದ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಶಿಲೆ ಸ್ಮಾರಕದಲ್ಲಿ (Vivekananda Rock Memorial) 45 ಗಂಟೆಗಳ ಧ್ಯಾನ ಕೈಗೊಳ್ಳುತ್ತಿದ್ದಾರೆ. ಸುಮಾರು 131 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಧ್ಯಾನ ಮಂಟಪದಲ್ಲಿ ಮೋದಿ ಧ್ಯಾನದಲ್ಲಿ (Modi Meditation) ತೊಡಗಿಕೊಂಡಿದ್ದಾರೆ. ಇನ್ನು ಮೋದಿ ಅವರು ಧ್ಯಾನ ಮಾಡುವ 45 ಗಂಟೆಯೂ ಆಹಾರ ಸೇವಿಸುವುದಿಲ್ಲ ಎಂದು ತಿಳಿದುಬಂದಿದೆ.

ಹೌದು, ನರೇಂದ್ರ ಮೋದಿ ಅವರು ಧ್ಯಾನ ಮಾಡುವ 45 ಗಂಟೆಯೂ ಆಹಾರ ಸೇವಿಸುವುದಿಲ್ಲ. ಹಣ್ಣುಗಳನ್ನು ಕೂಡ ಅವರು ಸೇವಿಸುವುದಿಲ್ಲ. ಎರಡು ದಿನವೂ ಅವರು ಪಾನೀಯ ಮಾತ್ರ ಸೇವಿಸಲಿದ್ದಾರೆ. ಜ್ಯೂಸ್‌, ಹಾಲಿನಲ್ಲಿಯೇ ಎರಡು ದಿನ ಕಳೆಯಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಜನವರಿಯಲ್ಲಿ ರಾಮಮಂದಿರದ ಲೋಕಾರ್ಪಣೆ ಹಿನ್ನೆಲೆಯಲ್ಲಿಯೂ ನರೇಂದ್ರ ಮೋದಿ ಅವರು 11 ದಿನಗಳ ಉಪವಾಸ ಕೈಗೊಂಡಿದ್ದರು. ಹಾಸಿಗೆಯ ಮೇಲೆ ಮಲಗುವುದನ್ನು ನಿಲ್ಲಿಸಿದ್ದರು. ನೆಲದ ಮೇಲೆ ಬಟ್ಟೆ ಹಾಸಿಕೊಂಡು ನಿದ್ದೆ ಮಾಡಿದ್ದರು. ಈ ಅವಧಿಯಲ್ಲಿ ಅವರು ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸಿದ್ದರು. ಹಣ್ಣುಗಳನ್ನು ಮಾತ್ರ ಸೇವಿಸಿದ್ದರು.

ಭಗವತಿ ಅಮ್ಮನ್‌ ದೇವಾಲಯಕ್ಕೆ ಭೇಟಿ

ನರೇಂದ್ರ ಮೋದಿ ಅವರು ಕೇರಳ ರಾಜಧಾನಿ ತಿರುವನಂತಪುರಂನಿಂದ ಕನ್ಯಾಕುಮಾರಿಗೆ ಆಗಮಿಸಿದರು. ಧ್ಯಾನ ಆರಂಭಿಸುವ ಮೊದಲು ಅವರು ಭಗವತಿ ಅಮ್ಮನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇದಾದ ಬಳಿಕ ಮೋದಿ ಅವರು ಧ್ಯಾನ ಆರಂಭಿಸಿದರು. ಮೋದಿ ಅವರು ಎರಡು ದಿನ ಧ್ಯಾನ ಮಾಡುವ ಹಿನ್ನೆಲೆಯಲ್ಲಿ ಸ್ಮಾರಕದ ಸುತ್ತಲೂ 2 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮೋದಿ ಈ ಸ್ಥಳ ಆಯ್ಕೆ ಮಾಡಿದ್ದು ಯಾಕೆ?

ಪ್ರಧಾನಿ ನರೇಂದ್ರ ಮೋದಿ ಅವರು ವಿವೇಕಾನಂದ ಅವರನ್ನು ತಮ್ಮ ಜೀವನಕ್ಕೆ ಆದರ್ಶ ಎಂದು ಪರಿಗಣಿಸುತ್ತಾರೆ. ಸ್ವಾಮಿ ವಿವೇಕಾನಂದರು ಸ್ಥಾಪಿಸಿರುವ ರಾಮಕೃಷ್ಣ ಮಿಷನ್‌ನ ಸದಸ್ಯರೂ ಆಗಿದ್ದಾರೆ. ಕಳೆದ ವರ್ಷ ರಾಮಕೃಷ್ಣ ಮಿಷನ್‌ನ 125 ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮೋದಿ, ಸ್ವಾಮಿ ವಿವೇಕಾನಂದರು ಭಾರತದ ಬಗ್ಗೆ ಕಂಡಿರುವ ಕನಸನ್ನು ನನಸು ಮಾಡಲು ಭಾರತವು ಕೆಲಸ ಮಾಡುವುದನ್ನು ಅವರು ಹೆಮ್ಮೆಯಿಂದ ನೋಡುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದ್ದರು. ಇದೇ ಕಾರಣಕ್ಕಾಗಿ ವಿವೇಕಾನಂದ ರಾಕ್‌ ಮೆಮೋರಿಯಲ್‌ನಲ್ಲಿ ಮೋದಿ ಅವರು ಧ್ಯಾನ ಮಾಡಲು ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Mumbai Satta Bazar: ಮೋದಿ ಹ್ಯಾಟ್ರಿಕ್‌ ಗ್ಯಾರಂಟಿ ಎಂದ ಮುಂಬೈ ಸಟ್ಟಾ ಬಜಾರ್;‌ ಕಾಂಗ್ರೆಸ್‌ಗೆ ಎಷ್ಟು ಕ್ಷೇತ್ರ?

Continue Reading

ಕ್ರಿಕೆಟ್

Virat Kohli : ವಿರಾಟ್​ ಕೊಹ್ಲಿ ಟೀಕಿಸಿದ ನ್ಯೂಜಿಲ್ಯಾಂಡ್​ ಮಾಜಿ ಆಟಗಾರನಿಗೆ ಕೊಲೆ ಬೆದರಿಕೆ!

Virat Kohli : ಕ್ರಿಕೆಟ್​ಬಜ್​ನಲ್ಲಿ ದಿನೇಶ್ ಕಾರ್ತಿಕ್ ಅವರೊಂದಿಗಿನ ಇತ್ತೀಚಿನ ಮಾತುಕತೆ ವೇಳೆ ಡೌಲ್ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಬಲಗೈ ಬ್ಯಾಟರ್ ಕೊಹ್ಲಿ ಬಗ್ಗೆ ಹಲವಾರು ಒಳ್ಳೆಯ ವಿಷಯಗಳನ್ನು ಹೇಳಿದ್ದರೂ, ಅವರ ಒಂದು ನಕಾರಾತ್ಮಕ ಹೇಳಿಕೆಯ ಪರಿಣಾಮವಾಗಿ ತಮ್ಮ ಜೀವಕ್ಕೆ ಬೆದರಿಕೆ ಬಂದಿತ್ತು ಎಂದು ಬಹಿರಂಗಪಡಿಸಿದರು.

VISTARANEWS.COM


on

Virat kohli
Koo

ಬೆಂಗಳೂರು: ವಿರಾಟ್ ಕೊಹ್ಲಿ (Virat Kohli) ವಿಶ್ವದ ಅತ್ಯಂತ ಪ್ರಸಿದ್ಧ ಕ್ರಿಕೆಟಿಗರಲ್ಲಿ ಒಬ್ಬರು. ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿಯ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡುವಾಗ ಎಚ್ಚರಿಕೆಯಿಂದ ಇರುವುದು ಮುಖ್ಯವಾಗುತ್ತದೆ. ಆದಾಗ್ಯೂ ಅವರನ್ನು ಹೊಗಳಿದರೆ ಸಿಕ್ಕಾಪಟ್ಟೆ ಪ್ರೀತಿ ಸಿಗುವುದು ಖಾತರಿ. ಹಲವಾರು ಬಾರಿ ನೋಡಿದಂತೆ ವಿರಾಟ್​ ಕೊಹ್ಲಿಯ ಅಭಿಮಾನಿ ಬಳಗವು ಆಗಾಗ್ಗೆ ಅವರನ್ನು ಟೀಕಿಸಿರುವರ ನಿದ್ದೆಗೆಡಿಸಿದ್ದಾರೆ. ಇದೀಗ ಕೊಹ್ಲಿಯ ಅಭಿಮಾನಿಗಳಿಗೆ ಹೆದರಿದವರು ನ್ಯೂಜಿಲ್ಯಾಂಡ್​ ಮಾಜಿ ಆಟಗಾರ ಸೈಮನ್ ಡೌಲ್ಐ. ಪಿಎಲ್ 2024 ರ ಋತುವಿನಲ್ಲಿ ವಿರಾಟ್ ಕೊಹ್ಲಿ ಅವರ ಸ್ಟ್ರೈಕ್ ರೇಟ್ ಬಗ್ಗೆ ಅವರು ಹೇಳಿಕೆ ನೀಡಿದ್ದರು. ಅಲ್ಲಿಂದ ಅವರಿಗೆ ಕೊಹ್ಲಿ ಅಭಿಮಾನಿಗಳು ಸರಿಯಾಗಿ ನಿದ್ದೆ ಮಾಡಲೂ ಬಿಟ್ಟಿಲ್ಲ. ನ್ಯೂಜಿಲೆಂಡ್​​ನ ಮಾಜಿ ಕ್ರಿಕೆಟಿಗನಿಗೆ ಕೊಲೆ ಬೆದರಿಕೆಗಳನ್ನೂ ಹಾಕಿದ್ದಾರೆ.

ಕ್ರಿಕೆಟ್​ಬಜ್​ನಲ್ಲಿ ದಿನೇಶ್ ಕಾರ್ತಿಕ್ ಅವರೊಂದಿಗಿನ ಇತ್ತೀಚಿನ ಮಾತುಕತೆ ವೇಳೆ ಡೌಲ್ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಬಲಗೈ ಬ್ಯಾಟರ್ ಕೊಹ್ಲಿ ಬಗ್ಗೆ ಹಲವಾರು ಒಳ್ಳೆಯ ವಿಷಯಗಳನ್ನು ಹೇಳಿದ್ದರೂ, ಅವರ ಒಂದು ನಕಾರಾತ್ಮಕ ಹೇಳಿಕೆಯ ಪರಿಣಾಮವಾಗಿ ತಮ್ಮ ಜೀವಕ್ಕೆ ಬೆದರಿಕೆ ಬಂದಿತ್ತು ಎಂದು ಬಹಿರಂಗಪಡಿಸಿದರು.

ಇದನ್ನೂ ಓದಿ: IPL 2024 : ಜಿಯೋಸಿನಿಮಾದಲ್ಲಿ ದಾಖಲೆಯ 62 ಕೋಟಿಗೂ ಅಧಿಕ ವೀಕ್ಷಣೆ ಕಂಡ ಐಪಿಎಲ್​

ವಿರಾಟ್​ ಕೊಹ್ಲಿ ತುಂಬಾ ಒಳ್ಳೆಯ ಆಟಗಾರ. ಅದು ಯಾವಾಗಲೂ ಅವರ ಸ್ಟ್ರೈಕ್​ರೇಟ್​ ಸುತ್ತ ನನ್ನ ವಿಚಾರಗಳು ಇದ್ದವು. ನಾನು ವಿರಾಟ್ ಕೊಹ್ಲಿ ಬಗ್ಗೆ ಸಾವಿರ ಉತ್ತಮ ವಿಷಯಗಳನ್ನು ಹೇಳಿದ್ದೇನೆ. ಆದರೆ ನಾನು ಸ್ಟ್ರೈಕ್​ ರೇಟ್​ ಬಗ್ಗೆ ಮಾತನಾಡಿದೆ. ಅದು ಸ್ವಲ್ಪ ನಕಾರಾತ್ಮಕವಾಗಿರಬಹುದು ಅಥವಾ ನಕಾರಾತ್ಮಕವಾಗಿದ್ದವು. ಅದಕ್ಕಾಗಿ ನನಗೆ ಕೊಲೆ ಬೆದರಿಕೆಗಳು ಬಂದವು ಎಂದು ಹೇಳಿದ್ದಾರೆ.

ವಿದೇಶಿ ಆಟಗಾರರ ಟೀಕೆ

ಕೊಹ್ಲಿಯ ಸ್ಟ್ರೈಕ್​ ರೇಟ್​ ಬಗ್ಗೆ ಟೀಕೆ ಸೈಮನ್ ಡೌಲ್​ ಅವರದ್ದೇ ಮೊದಲಲ್ಲ. ಹಲವಾರು ಭಾರತೀಯ ಕ್ರಿಕೆಟ್​ ದೈತ್ಯದು ಅವರ ಸ್ಟ್ರೈಕ್ ರೇಟ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ. ಪಂದ್ಯದ ನಂತರದ ಸಂದರ್ಶನದಲ್ಲಿ, ವಿರಾಟ್ ಕೊಹ್ಲಿ ತಮ್ಮ ಟೀಕೆಗಳಿಗೆ ಉತ್ತರಿಸಿದ್ದರು. ಅದು ತಮ್ಮ ಆದ್ಯತೆ ಎಂದು ಹೇಳಿದ್ದರು.

“ಎಲ್ಲರೂ ನನ್ನ ಸ್ಟ್ರೈಕ್ ರೇಟ್ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ನಾನು ಸ್ಪಿನ್ ಬೌಲಿಂಗ್​ಗೆ ಸರಿಯಾಗಿ ಆಡದಿರುವ ಬಗ್ಗೆ (ಅಂಕಿಅಂಶಗಳು) ಮಾತನಾಡುತ್ತಾರೆ. ಆದರೆ ನನಗೆ ನನ್ನ ಕೆಲಸವನ್ನು ಮಾಡುವ ಬಗ್ಗೆ ಮಾತ್ರ ಯೋಚನೆಯಿದೆ. ಅವರು ಏನು ಬೇಕಾದರೂ ಮಾತನಾಡಬಹುದು. ಇದು ಈಗ ನನಗೆ ಒಂದು ರೀತಿಯ ಸ್ಮರಣೆಯಾಗಿದೆ ಎಂದು ಹೇಳಿದ್ದರು.

ಕೊಹ್ಲಿ ಈ ಋತುವಿನಲ್ಲಿ 15 ಇನಿಂಗ್ಸ್​ಗಳಿಂದ 154.70 ಸ್ಟ್ರೈಕ್ ರೇಟ್​​ನಲ್ಲಿ 741 ರನ್ ಗಳಿಸಿದ್ದದ್ದರು. ಅದಕ್ಕಾಗಿ ಅವರು ಆರೆಂಜ್ ಕ್ಯಾಪ್ ಪಡೆದಿದ್ದರು. ಪಂದ್ಯಾವಳಿಯ ಅವಧಿಯಲ್ಲಿ ಅವರು ಐದು ಅರ್ಧಶತಕಗಳೊಂದಿಗೆ 1 ಶತಕವನ್ನು ಬಾರಿಸಿದ್ದರು.

Continue Reading

ಪ್ರಮುಖ ಸುದ್ದಿ

Muslim Personal Law : ಹಿಂದೂ- ಮುಸ್ಲಿಂ ಜೋಡಿಯ ಮದುವೆಗೆ ವೈಯಕ್ತಿಕ ಕಾನೂನಿನ ಮಾನ್ಯತೆ ಇಲ್ಲ ಎಂದ ಕೋರ್ಟ್​, ವಿವರಣೆ ಹೀಗಿದೆ

Muslim Personal Law: ವಿಶೇಷ ವಿವಾಹ ಕಾಯ್ದೆಯಡಿ ತಮ್ಮ ಮದುವೆಯ ನೋಂದಣಿಗೆ ನಿಗದಿಪಡಿಸಿದ ದಿನಾಂಕದಂದು ವಿವಾಹ ಅಧಿಕಾರಿಯ ಮುಂದೆ ಹಾಜರಾಗಲು ಅವರು ಇತರ ಪರಿಹಾರಗಳನ್ನು ನೀಡುವಂತೆ ಜೋಡಿ ರಕ್ಷಣೆ ಕೋರಿತ್ತು. ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಹಿಂದೂ ಮಹಿಳೆ ಮತ್ತು ಮುಸ್ಲಿಂ ಪುರುಷನ ನಡುವಿನ ವಿವಾಹವು ವೈಯಕ್ತಿಕ ಕಾನೂನಿನ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹೇಳಿ ನ್ಯಾಯಾಲಯವು ರಕ್ಷಣೆ ನಿರಾಕರಿಸಿತ್ತು.

VISTARANEWS.COM


on

Muslim Personal Law
Koo

ಭೋಪಾಲ್​: ಮುಸ್ಲಿಂ ಪುರುಷ ಮತ್ತು ಹಿಂದೂ ಮಹಿಳೆಯ ನಡುವಿನ ವಿವಾಹವು ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ (Muslim Personal Law) ಅಮಾನ್ಯ ಎಂದು ಮಧ್ಯಪ್ರದೇಶ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಅಂತರ್ ಧರ್ಮೀಯ ದಂಪತಿಗೆ ರಕ್ಷಣೆ ನೀಡಲು ನಿರಾಕರಿಸಿತು. ಅರ್ಜಿದಾರರು ಪರಸ್ಪರ ಪ್ರೀತಿಸುತ್ತಿದ್ದರು. ಹೀಗಾಗಿ ವಿಶೇಷ ವಿವಾಹ ಕಾಯ್ದೆಯಡಿ ವಿವಾಹ ನೋಂದಣಾಧಿಕಾರಿಯನ್ನು ಸಂಪರ್ಕಿಸಿದ್ದರು. ಆದರೆ ಕುಟುಂಬದ ಆಕ್ಷೇಪಣೆಗಳಿಂದಾಗಿ, ಅವರು ವಿವಾಹ ಅಧಿಕಾರಿಯ ಮುಂದೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಪರಿಣಾಮವಾಗಿ ಅವರ ಮದುವೆಯನ್ನು ನೋಂದಾಯಿಸಲಾಗಿಲ್ಲ.

ವಿಶೇಷ ವಿವಾಹ ಕಾಯ್ದೆಯಡಿ ತಮ್ಮ ಮದುವೆಯ ನೋಂದಣಿಗೆ ನಿಗದಿಪಡಿಸಿದ ದಿನಾಂಕದಂದು ವಿವಾಹ ಅಧಿಕಾರಿಯ ಮುಂದೆ ಹಾಜರಾಗಲು ಅವರು ಇತರ ಪರಿಹಾರಗಳನ್ನು ನೀಡುವಂತೆ ಜೋಡಿ ರಕ್ಷಣೆ ಕೋರಿತ್ತು. ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಹಿಂದೂ ಮಹಿಳೆ ಮತ್ತು ಮುಸ್ಲಿಂ ಪುರುಷನ ನಡುವಿನ ವಿವಾಹವು ವೈಯಕ್ತಿಕ ಕಾನೂನಿನ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹೇಳಿ ನ್ಯಾಯಾಲಯವು ರಕ್ಷಣೆ ನಿರಾಕರಿಸಿತ್ತು.

“ಮಹಮ್ಮದೀಯ ಕಾನೂನಿನ ಪ್ರಕಾರ, ಮುಸ್ಲಿಂ ಹುಡುಗನು ವಿಗ್ರಹಾರಾಧಕ ಅಥವಾ ಅಗ್ನಿ ಆರಾಧಕಳಾಗಿರುವ ಹುಡುಗಿಯನ್ನು ಮದುವೆಯಾಗುವುದು ಮಾನ್ಯ ವಿವಾಹವಲ್ಲ. ಮದುವೆಯನ್ನು ವಿಶೇಷ ವಿವಾಹ ಕಾಯ್ದೆಯಡಿ ನೋಂದಾಯಿಸಿದರೂ ಮಾನ್ಯ ವಿವಾಹವಾಗುವುದಿಲ್ಲ. ಅದು ಫಾಸಿದ್ ವಿವಾಹವಾಗಿರುತ್ತದೆ.

ಇದನ್ನೂ ಓದಿ: Radhika Merchant : ಅನಂತ್​​ ಅಂಬಾನಿ- ರಾಧಿಕಾ ಮರ್ಚೆಂಟ್​ ವಿವಾಹದ ಸ್ಥಳ ಬಹಿರಂಗ; ಇಲ್ಲಿದೆ ವಿವರ

ಮುಸ್ಲಿಂ ಹುಡುಗನೊಬ್ಬ ಹಿಂದೂ ಹುಡುಗಿಯನ್ನು ಮದುವೆಯಾಗುವುದು ಮಾನ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಯನ್ನು ನ್ಯಾಯಾಲಯ ಪರಿಗಣಿಸಿದೆ. “ವೈಯಕ್ತಿಕ ಕಾನೂನಿನ ಪ್ರಕಾರ, ಮದುವೆಯ ಆಚರಣೆಗೆ ಕೆಲವು ಆಚರಣೆಗಳನ್ನು ನಿರ್ವಹಿಸುವುದು ಅವಶ್ಯಕ. ವಿಶೇಷ ವಿವಾಹ ಕಾಯ್ದೆಯಡಿ ಮದುವೆಯನ್ನು ನಡೆಸಿದರೆ, ಅಂತಹ ಕಡ್ಡಾಯ ಆಚರಣೆಗಳನ್ನು ನಿರ್ವಹಿಸದ ಕಾರಣ ಅಂತಹ ಮದುವೆಯನ್ನು ಪ್ರಶ್ನಿಸಲಾಗುವುದಿಲ್ಲ. ವಿಶೇಷ ವಿವಾಹ ಕಾಯ್ದೆಯಡಿ ವಿವಾಹವು ವೈಯಕ್ತಿಕ ಕಾನೂನಿನಡಿಯಲ್ಲಿ ನಿಷೇಧಿಸಲಾದ ಮದುವೆಯನ್ನು ಕಾನೂನುಬದ್ಧಗೊಳಿಸುವುದಿಲ್ಲ.

Continue Reading
Advertisement
Reserve Bank of India
ದೇಶ29 mins ago

Reserve Bank of India : ಭಾರತದ ಬ್ಯಾಂಕ್​ಗಳಲ್ಲಿವೆ ವಾರಸುದಾರರಿಲ್ಲದ 78,213 ಕೋಟಿ ರೂಪಾಯಿ!

Modi Meditation
ದೇಶ38 mins ago

Modi Meditation: ಧ್ಯಾನ ಮಾಡುವ 45 ಗಂಟೆಯೂ ಆಹಾರ ಸೇವಿಸಲ್ಲ ಮೋದಿ; 2 ದಿನ ಪಾನೀಯವೇ ಆಹಾರ!

Virat kohli
ಕ್ರಿಕೆಟ್1 hour ago

Virat Kohli : ವಿರಾಟ್​ ಕೊಹ್ಲಿ ಟೀಕಿಸಿದ ನ್ಯೂಜಿಲ್ಯಾಂಡ್​ ಮಾಜಿ ಆಟಗಾರನಿಗೆ ಕೊಲೆ ಬೆದರಿಕೆ!

Hindu Janajagruthi Samithi demands declaration of Zakir Naik as international terrorist
ಬೆಂಗಳೂರು2 hours ago

Zakir Naik: ಜಾಕೀರ್ ನಾಯಕ್‌ನನ್ನು ಭಯೋತ್ಪಾದಕನೆಂದು ಘೋಷಿಸಿ; ಹಿಂದೂ ಜನಜಾಗೃತಿ ಸಮಿತಿ ಆಗ್ರಹ

Necessary Preparation for North East Graduate Constituency Election Voting says DC M S Diwakar
ವಿಜಯನಗರ2 hours ago

MLC Election: ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆಯ ಮತದಾನಕ್ಕೆ ಸಿದ್ಧತೆ: ಡಿಸಿ ಎಂ.ಎಸ್. ದಿವಾಕರ್‌

Viral Video
ವೈರಲ್ ನ್ಯೂಸ್2 hours ago

Viral Video: ಮುಂಬಯಿ ವಿಮಾನ ನಿಲ್ದಾಣದಲ್ಲಿ ಯುವತಿಯ ರೀಲ್ಸ್ ಹುಚ್ಚಾಟ; ಸಿಡಿದೆದ್ದ ನೆಟ್ಟಿಗರು

Muslim Personal Law
ಪ್ರಮುಖ ಸುದ್ದಿ2 hours ago

Muslim Personal Law : ಹಿಂದೂ- ಮುಸ್ಲಿಂ ಜೋಡಿಯ ಮದುವೆಗೆ ವೈಯಕ್ತಿಕ ಕಾನೂನಿನ ಮಾನ್ಯತೆ ಇಲ್ಲ ಎಂದ ಕೋರ್ಟ್​, ವಿವರಣೆ ಹೀಗಿದೆ

Prajwal Revanna Case
ಕರ್ನಾಟಕ2 hours ago

ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಬರುವ ಮೊದಲೇ ಎಚ್‌ಡಿಕೆ ಅಂತರ; ಕಬಿನಿಯಲ್ಲಿ ಪತ್ನಿ ಜತೆ ಬೋಟಿಂಗ್!

Viral Video
ವೈರಲ್ ನ್ಯೂಸ್2 hours ago

Viral Video: ಪ್ರಜ್ಞೆ ಕಳೆದುಕೊಂಡು ಬಿದ್ದ ಕೋತಿಗೆ ಮರುಜೀವ ನೀಡಿದ ಪೊಲೀಸ್ ಅಧಿಕಾರಿ; ಮನ ಮಿಡಿಯೋ ವಿಡಿಯೊ ಇಲ್ಲಿದೆ

Cow Smugling
ಪ್ರಮುಖ ಸುದ್ದಿ2 hours ago

Cow Smugling : ಅಕ್ರಮ ಗೋ ಸಾಗಾಟದ ವಾಹನ ಬೆನ್ನಟ್ಟಿ ಹಿಡಿದ ಭಜರಂಗದಳದ ಕಾರ್ಯಕರ್ತರು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ9 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌